lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Tuesday, 03 October 2017
Crime Incidents 03-10-17

ಚೇಳೂರು ಪೊಲೀಸ್ ಠಾಣಾ  ಮೊ.ನಂ. 149 /2017, ಕಲಂ 279,  304 (ಎ) ಐ.ಪಿ.ಸಿ  ಹಾಗೂ 134 (ಎ&ಬಿ) ರೆ/ವಿ 187  ಐ.ಎಂ.ವಿ.ಆಕ್ಟ್

ದಿನಾಂಕ: 01/10/2017 ರಂದು ಅರ್ಜಿದಾರರ ನಂದೀಶಪ್ಪ  ಬಿನ್  ಲೇ  ನರಸಿಂಹಯ್ಯ,29 ವರ್ಷ,  ದ್ರಾವಿಡ  ಜನಾಂಗ,  ಖಾಸಗೀ  ಕಂಪನಿಯಲ್ಲಿ  ಕೆಲಸ,  ಇರಕಸಂದ್ರ   ಗ್ರಾಮ,  ಚೇಳೂರು  ಹೋ,   ಗುಬ್ಬಿ  ತಾಲ್ಲೋಕ್  ರವರ  ಅಣ್ಣನಾದ ಶಿವಕುಮಾರ್ ಸಂಜೆ 5-00 ಗಂಟೆ ಸಮಯದಲ್ಲಿ ಅವರ ಪಕ್ಕದ ಗ್ರಾಮವಾದ ಕಾಟನಹಳ್ಳಿ  ವಾಸಿಗಳಾದ ಧನರಾಜ ಮತ್ತು ಕುಮಾರ ರವರ  ಜೊತೆಯಲ್ಲಿ ಗಂಗಯ್ಯನಪಾಳ್ಯ ಗ್ರಾಮದಲ್ಲಿ ಧನರಾಜ ರವರ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದು, ನಂತರ ರಾತ್ರಿ 9-00 ಗಂಟೆ ಸಮಯಲದಲ್ಲಿ ಧನರಾಜು ರವರು ಅರ್ಜಿದಾರರಿಗೆ ಪೋನ್ ಮಾಡಿ, ನಾನು ಮತ್ತು ನಮ್ಮ ಅಣ್ಣನಾದ ಶಿವಕುಮಾರು ಅವರ ಬಾಬ್ತು ಕೆಎ-06-ಇಇ-3365 ನೇ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಲ್ಲಿ ಗಂಗಯ್ಯನಪಾಳ್ಯದಿಂದ ಊಟ ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಅನುಪನಕುಂಟೆ ಗೇಟ್ ಸಮೀಪ ಯಾವುದೋ ವಾಹನದ ಚಾಲಕ ಸದರಿ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಮುಂದೆ ಹೋಗುತ್ತಿದ್ದ ನಿಮ್ಮ ಅಣ್ಣ ಶಿವಕುಮಾರ್ ರವರ ಕೆಎ-06-ಇಇ-3365 ನೇ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಶಿವಕುಮಾರ್ ರವರ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಅವರ ಹಿಂದೆ ಬರುತ್ತಿದ್ದ ನಾವಿಬ್ಬರು ಹೋಗಿ ನೋಡಲಾಗಿ ಶಿವಕುಮಾರ್ ರವರು ಮೃತಪಟ್ಟಿರುತ್ತಾರೆ, ಮೃತ ದೇಹವನ್ನು ಸ್ಥಳಕ್ಕೆ ಬಂದ ಪೊಲೀಸ್ ನವರು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತೆಂತ ಯಾವುದೋ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ತೆಗೆದುಕೊಂಡು ಹೋಗಿರುತ್ತಾರೆಂತ ತಿಳಿಸಿರುತ್ತಾರೆ, ನಂತರ ಅರ್ಜಿದಾರರು ಈ ವಿಚಾರವನ್ನು ಸಂಬಂಧಿಕರಿಗೆ ತಿಳಿಸಿ, ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಹೋಗಿ ಈ  ದಿನ ತಡವಾಗಿ ಬಂದು ದೂರು ನೀಡಿರುತ್ತೇನೆಂತ ಪಿರ್ಯಾದಿಯವರು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ


Crime Incidents 02-10-17

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ:485/2017, ಕಲಂ; 279 ,304(ಎ)  ಐಪಿಸಿ

ದಿನಾಂಕ: 01/10/2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಕಾಳಯ್ಯ ಕಾಳಯ್ಯ ಬಿನ್ ತಿಮ್ಮಯ್ಯ. 70 ವರ್ಷ, ವಕ್ಕಲಿಗರು, ಜಿರಾಯ್ತಿ, ಕಗ್ಗೆರೆ ಗ್ರಾಮ, ಕುಣಿಗಲ್ ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಪಿರ್ಯಾದಿ ಮಗ 25 ವರ್ಷದ ಧನಂಜಯ ರವರು ಅಂಚೇಪಾಳ್ಯದ ಬಳಿ ಇರುವ ಯು.ಕೆ.ಎಸ್ ಸ್ಟ್ರಕ್ಚರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ: 30/09/2017 ರಂದು ಸ್ವಂತ ಕೆಲಸದ ನಿಮಿತ್ತ ಕುಣಿಗಲ್ ಗೆ ಬಂದಿದ್ದು,  ಕೆಲಸ ಮುಗಿಸಿಕೊಂಡು ಹಿಂದಿರುಗಿ ಪಿರ್ಯಾದಿ ಗ್ರಾಮಕ್ಕೆ ಬರುತ್ತಿರುವಾಗ ಅವನಿಗೆ ಸೇರಿದ  ಬೈಕ್ ನಂಬರ್: ಕೆ.ಎ-16 ಕ್ಯೂ-3568 ರ ಬೈಕ್ ಅನ್ನು ಚಾಲನೆಮಾಡಿಕೊಂಡು ಎನ್ ಹೆಚ್-75 ರಸ್ತೆಯಲ್ಲಿ ಬಿಳಿದೇವಾಲಯ ಗ್ರಾಮದ  ರೇಷ್ಮೆ ಫಾರಂ ಬಳಿ ಇರುವ ಬ್ರಿಡ್ಜ್ ನ ಹತ್ತಿರ ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರಬೇಕಾದರೆ ಅದೇ ಸಮಯಕ್ಕೆ ಆಲಪ್ಪನಗುಡ್ಡೆ ಕಡೆಯಿಂದ ಕುಣಿಗಲ್ ಕಡೆಗೆ ವೇಗವಾಗಿ ಬಂದಂತಹ ಒಬ್ಬ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ತನ್ನ ವಾಹನವನ್ನು ಬಲಭಾಗಕ್ಕೆ  ತಿರುಗಿಸಿ ಎಡರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿ ಮಗನ ಬೈಕಿಗೆ ಡಿಕ್ಕಿ ಹೊಡೆಸಿರುತ್ತಾನೆ. ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿ ಮಗ ಕೆಳಗೆ ಬಿದ್ದು, ತಲೆಗೆ ಮತ್ತು ಎದೆಗೆ  ತಿವ್ರತರಹದ ಪೆಟ್ಟಾಗಿದ್ದು, ಅಲ್ಲಿಯೇ ಇದ್ದ ಸಾರ್ವಜನಿಕರು ಪಿರ್ಯಾದಿಗೆ ಪೋನ್ ಮಾಡಿ ಅಪಘಾತದ ಬಗ್ಗೆ ತಿಳಿಸಿದ್ದು, ತಕ್ಷಣ ಪಿರ್ಯಾದಿ ಮತ್ತು ಪಿರ್ಯಾದಿ ಗ್ರಾಮದವರು ಅಪಘಾತದ ಸ್ಥಳಕ್ಕೆ ಬಂದು ನೋಡಲಾಗಿ ಮತ್ತು ವಿಚಾರ ಮಾಡಲಾಗಿ ಅಪಘಾತ ಮಾಡಿದ ಆಟೋ ಸಂಖ್ಯೆ: ಕೆ.ಎ-06 ಸಿ-0041 ಎಂದು ತಿಳಿದು ಬಂದಿರುತ್ತದೆ.  ಪಿರ್ಯಾದಿ  ಸ್ಥಳಕ್ಕೆ ಬರುವ ಮೊದಲೇ ಸಾರ್ವಜನಿಕರು ಗಾಯಾಳು ಧನಂಜಯ ರವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸುತ್ತಿದ್ದರು  ಪಿರ್ಯಾದಿ ಮತ್ತು ಅವರ ಮಗ ವೆಂಕಟೇಶ್ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬಂದು  ಗಾಯಾಳು ಧನಂಜಯ ನನ್ನು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುರ್ತುವಾಹನದಲ್ಲಿ ಹಾಕಿಕೊಂಡು ನೆಲಮಂಗಲದ ಹರ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು, ಗಾಯಾಳುವಿನ ತಲೆಗೆ ತೀವ್ರತರಹದ ಏಟುಗಳಾದ ಕಾರಣ ಅಲ್ಲಿನ ವೈದ್ಯರ ಸಲಹೆಯ ಮೇರೆಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಸೇರಿಸಿದ್ದು,  ಸದರಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ: 01/10/2017 ರಂದು  ಭಾನುವಾರ  ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ದನಂಜಯ ರವರು ಮೃತಪಟ್ಟಿರುತ್ತಾರೆ.   ಮೃತ ಧನಂಜಯ ರವರ ಮೃತ ದೇಹವನ್ನು  ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ  ಇಟ್ಟಿರುತ್ತೇವೆ.  ಅಪಘಾತ ಮಾಡಿದ  ಆಟೊ ಚಾಲಕನು ಅಪಘಾತವಾದ ಸ್ವಲ್ಪ ಸಮಯದ ನಂತರ ತನ್ನ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋಗಿರುತ್ತಾನೆ ಎಂದು ತಿಳಿದುಬಂದಿರುತ್ತದೆ. ಆ ಎರಡು ವಾಹನಗಳು ಈಗಾಗಲೇ  ಪೊಲೀಸ್ ಠಾಣೆಯ ಬಳಿ ಇದೆ ಎಂದು ತಿಳಿದುಬಂದಿರುತ್ತದೆ. ಆದ್ದರಿಂದ ತಾವುಗಳು ಅಪಘಾತ  ಮಾಡಿದ  ಮೇಲ್ಕಂಡ  ಆಟೋ ಸಂಖ್ಯೆ: ಕೆ.ಎ-06 ಸಿ-0041 ನೇ ವಾಹನದ ಚಾಲಕನ ಮೇಲೆ  ಕಾನೂನು ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ: 485/2017 ಕಲಂ 279,304(ಎ) ಐ.ಪಿ.ಸಿ  ರೀತ್ಯಾ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಸಂಚಾರ ಪೊಲೀಸ್ ಠಾಣಾ ಮೊ.ನಂ: 181/2017 ಕಲಂ 279,337,304(ಎ) ಐಪಿಸಿ

ದಿನಾಂಕ 01.10.2017 ರಂದು   ಮದ್ಯಾಹ್ನ  1-30  ಗಂಟೆಗೆ  ಪಿರ್ಯಾದಿ ಶ್ರೀಮತಿ ಶಶಿರೇಖಾ ಕೋಂ ಕುಮಾರಸ್ವಾಮಿ, 30ವರ್ಷ, ಲಿಂಗಾಯಿತರು, ವಿಧ್ಯಾನಗರ, ತುಮಕೂರು      ಇವರು ವಿನಾಯಕ ಆಸ್ಪತ್ರೆಯಲ್ಲಿ  ನೀಡಿದ್ದ ದೂರಿನ ಅಂಶವೇನೆಂದರೆ,  ದಿನಾಂಕ 01.10.2017 ರಂದು    ನನ್ನ ಸಂಭಂದಿಕರ  ಮನೆಗೆ ಹೋಗಲು   ನಾನು, ನನ್ನ ಗಂಡ ಕುಮಾರಸ್ವಾಮಿ, 35ವರ್ಷ, ಶಾಲಾಶಿಕ್ಷಕರು, ನನ್ನ 3 ವರ್ಷದ ಮಗು  ಭುವನೇಶ್ 3 ಜನರು ಕೆಎ.06.ಇಕೆ.3829 ನೇ ಬೈಕಿನಲ್ಲಿ   ಬಟವಾಡಿ ಹತ್ತಿರ   ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಬಿ.ಹೆಚ್.ರಸ್ತೆಯಲ್ಲಿ ಮದ್ಯಾಹ್ನ 12-20 ಗಂಟೆ ಸಮಯದಲ್ಲಿ  ಹೋಗುತ್ತಿರುವಾಗ ಕೆಎ.09.ಬಿ.8416  ನೇ ಟ್ಯಾಂಕರ್ ಲಾರಿ   ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ಬೈಕಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ    ನನ್ನ ಹಾಗೂ ನನ್ನ ಗಂಡನ ಕಾಲುಗಳ ಮೇಲೆ ಲಾರಿಯ ಚಕ್ರ ಹರಿದು  ಇಬ್ಬರ ಕಾಲುಗಳಿಗೆ  ಪೆಟ್ಟು ಬಿದ್ದು ರಕ್ತಗಾಯಗಳಾಗಿ,  3ವರ್ಷದ ಮಗುವಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು.      ವಿನಾಯಕ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ   ಕುಮಾರಸ್ವಾಮಿ, 35ವರ್ಷ, ಶಾಲಾಶಿಕ್ಷಕರು, ವಿಧ್ಯಾನಗರ, ತುಮಕೂರು ಇವರು ಸಾಯಂಕಾಲ 5-26 ಗಂಟೆಯಲ್ಲಿ ಮೃತಪಟ್ಟಿರುತ್ತಾರೆಂತ ದೂರಿನ ಮೇರಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 81/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌

ದಿನಾಂಕ:-01/10/2017 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿ ಡಪ್ಪಿ ತಂದೆ ಲೋಹ್ರಿ , ಕುನ್ಪರ್ ಪುರ ದೊರೆರಾ ಪೋಸ್ಟ್ ಮದ್ಯಪ್ರದೇಶ  ಹಾಲಿ ವಾಸ ಅಂತರಸನಹಳ್ಳಿ, ಮಧುಗಿರಿ ರೋಡ್  ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ:29/09/2017 ರಂದು ಜವನಯ್ಯಪಾಳ್ಯದ  ವಾಸಿ ಹನುಮಂತರಾಜು ರವರ ಮನೆಯ  ಗ್ರಾನೈಟ್‌ ಹಾಕುವ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲೆಂದು  ನಾನು ನನ್ನ ಬಾಬ್ತು ಕೆಎ-64-ಇ-7403 ರ ಬೈಕ್‌ ನಲ್ಲಿ ಹಿಂದೆ ನನ್ನ ಸ್ನೇಹಿತನಾದ ರಾಮುತಾರ್‌ ಕರಣ್ ವಾಲ್‌‌ @ ಸೂರಜ್‌ ಎಂಬುವವನನ್ನು ಕೂರಿಸಿಕೊಂಡು ಹನುಮನಹಳ್ಳಿಮಾರ್ಗವಾಗಿ ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ  ಮುದ್ದಪ್ಪನಪಾಳ್ಯದ ಹತ್ತಿರ ರಸ್ತೆಯ ಎಡಬದಿಯಲ್ಲಿ  ಹೋಗುತ್ತಿರುವಾಗ ಎದುರುಗಡೆಯಿಂದ  ಕೆಎ-06-ಸಿ-4366 ನೇ ನಂಬರಿನ ಲಗೇಜ್‌ ಆಟೋವನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು, ನಮ್ಮ ಬೈಕಿಗೆ ಡಿಕ್ಕಿಹೊಡೆಸಿದ್ದರಿಂದ  ನಾನು ನನ್ನ ಸ್ನೇಹಿತ ಕೆಳಕ್ಕೆ ಬಿದ್ದೆವು. ನನ್ನ ಬಲಗೈಗೆ ಪೆಟ್ಟು ಬಿತ್ತು. ನನ್ನ ಸ್ನೇಹಿತ ರಾಮುತಾರ್ ಕರಣ್‌ ವಾಲ್‌ @ ಸೂರಜ್‌‌‌  ಎಂಬುವವರಿಗೆ  ಬಲಗಾಲಿನ ಮೂಳೆ ಮುರಿದು ದೇಹದ ಮತ್ತಿತರ ಬಾಗಗಳಿಗೆ ಗಾಯಗಳಾಗಿರುತ್ತವೆ. ಅದೇ ಸಮಯಕ್ಕೆ  ಅಕ್ಕ-ಪಕ್ಕದವರ ಸಹಾಯದಿಂದ 108 ವಾಹನದಲ್ಲಿ ತುಮಕೂರಿನಲ್ಲಿರುವ ಆದಿತ್ಯ ಕೀಲು ಮೂಳೆ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿರುತ್ತಾರೆ.  ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ  ತಡವಾಗಿ ಬಂದು ದೂರು ನೀಡುತ್ತಿದ್ದು ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ಸದರಿ  ಆಟೊ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ..

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 71 guests online
Content View Hits : 303320