lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 6 7 8
9 10 12 13 14 15
16 17 18 19 20 21 22
23 24 25 26 27 28 29
30 31          
Wednesday, 11 October 2017
Crime Incidents 11-10-17

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ 177/2017 ಕಲಂ 87 ಕೆ.ಪಿ ಆಕ್ಟ್

ದಿನಾಂಕ: 10-10-2017 ರಂದು ಹೆಬ್ಬೂರು ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀಕಾಂತ್,ಎಸ್‌ ಆದ ನನಗೆ ಈ ದಿನ ಮದ್ಯಾಹ್ನ: 3-30 ಗಂಟೆಯಲ್ಲಿ ನಾನು ಹೆಬ್ಬೂರು ಹತ್ತಿರ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರು ನನಗೆ ಪೋನ್ ಮಾಡಿ ಹೆಬ್ಬೂರು ಠಾಣಾ ಸರಹದ್ದಿನ ಅರೆಯೂರು ಬೋವಿಪಾಳ್ಯ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸುಮಾರು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಗೌರವಾನ್ವಿತ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪಿ,ಎಸ್,ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜೂಜಾಟ ಆಡುತ್ತಿರುತ್ತಾರೆಂದು ಖಚಿತ ಮಾಹಿತಿ ನೀಡಿರುತ್ತಾರೆ. ಆದ್ದರಿಂದ ಸದರಿ ಇಸ್ಪೀಟ್ ಜೂಜಾಟಗಾರರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಗೌರವಾನ್ವಿತ ನ್ಯಾಯಾಲಯದಲ್ಲಿ ಅನುಮತಿ ಪಡೆದು, ಅದರಂತೆ ನಾನು ಮತ್ತು ನಮ್ಮ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಇಲಾಖೆ ಜೀಪ್ ನಂ  ಕೆಎ0-06-ಜಿ-512 ನೇ ಜೀಪ್‌ನಲ್ಲಿ ಅರೆಯೂರು ಭೋವಿಪಾಳ್ಯದ  ಶಿವಣ್ಣನವರ ಜಮೀನು ಬಳಿ ಇವರು ಆಲದ ಮರದ ಕೆಳಗೆ ಇಸ್ವೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು, 4 ಜನ ಆಸಾಮಿಗಳು ಸ್ಥಳದಲ್ಲಿ ಸಿಕ್ಕಿದ್ದು,  ಉಳಿದ 5 ಜನರು ಓಡಿ ಹೋಗಿರುತ್ತಾರೆ, ಸಿಕ್ಕಿದ್ದವರ  ಹೆಸರು ವಿಳಾಸ ಕೇಳಲಾಗಿ 1) ರಂಗನಾಥ ಬಿನ್ ನಲ್ಲೂರಯ್ಯ, 38 ವರ್ಷ, ಗೊಲ್ಲರ ಜನಾಂಗ, ಚಾಲಕ ವೃತ್ತಿ, ಕಸಬಾ ಹೋಬಳಿ ಗುಬ್ಬಿ ತಾಲ್ಲೋಕು, ತುಮಕೂರು ಜಿಲ್ಲೆ  2) ಗೋವಿಂದರಾಜು ಬಿನ್ ದಾಸಪ್ಪ, 35 ವರ್ಷ, ಬೋವಿ ಜನಾಂಗ,  ಜಿರಾಯ್ತಿ, ಬೋವಿಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು  3) ಕರಿಯಪ್ಪ ಬಿನ್ ಚಿಕ್ಕಣ್ಣ, 60 ವರ್ಷ, ಆದಿ ಕರ್ನಾಟಕ ಜನಾಂಗ, ಅರೆಯೂರು ಕಾಲೋನಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು 4) ಸೀಬಯ್ಯ ಬಿನ್ ನರಸನಾಯಕ, 48 ವರ್ಷ, ನಾಯಕ ಜನಾಂಗ, ಗಾರೆ ಕೆಲಸ, ಹರಿಯೂರು ಬೋವಿಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ಮತ್ತು ಓಡಿ ಹೋದರವನ್ನು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1)ನಾರಾಯಣಪ್ಪ,35 ವರ್ಷ, ವಕ್ಕಲಿಗರು, ಮಾಕನಹಳ್ಳಿ, 2) ಹನುಮಂತ @ ಡಿ.ಸಿ ಬಿನ್ ತಿಮ್ಮಪ್ಪ, 23 ವರ್ಷ, ಬೋವಿಪಾಳ್ಯ 3) ಗಂಗಾಧರ @ ಟಿ.ಡಿ.ಜಿ. ಬಿನ್ ಶಿವರಾಜ ನಾಯಕ ಜನಾಂಗ, 25 ವರ್ಷ, ಬೋವಿಪಾಳ್ಯ, 4) ವೆಂಕಟೇಶ್ @ ಹೊಟ್ಟೆಗುಡ್ಡ ಗೊಲ್ಲರ ಜನಾಂಗ, ಬಿಳಿಗರೆ ಗೊಲ್ಲರ ಹಟ್ಟಿ ಗುಬ್ಬಿ ತಾಲ್ಲೋಕು 5) KA-06-EW-0963 ನೇ ಸವಾರ ಎಂತಾ ತಿಳಿಸಿದರು. ನಂತರ ಆಸಾಮಿಗಳು ಅಖಾಡದಲ್ಲಿ ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,100/- ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳಿದ್ದವು. ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಪಂಚರಾದ ನಮ್ಮಗಳ ಸಮಕ್ಷಮ ಪರಿಶೀಲಿಸಲಾಗಿ, 1) KA-41-R-14   Passion pro  2) KA-06-EW-0963 XL 100 TVS 3) KA-06-ET-0819 HAVY DUTY  ದ್ವಿಚಕ್ರ ವಾಹನಗಳಾಗಿರುತ್ತವೆ. ನಂತರ ಸಬ್‌ ಇನ್ಸ್‌ಪೆಕ್ಟರ್‌ ರವರು ಜೂಜಾಟವಾಡಲು ಪಣವಾಗಿಟ್ಟಿದ್ದ 2,100/- ರೂಗಳನ್ನು, ಆಟಕ್ಕೆ ಉಪಯೋಗಿಸಿದ್ದ 52 ಇಸ್ಪೀಟು ಎಲೆಗಳನ್ನು ಹಾಗೂ ಆಟಕ್ಕೆ ಉಪಯೋಗಿಸಿದ್ದ ಒಂದು  ನ್ಯೂಸ್ ಪೇಪರ್ ಅನ್ನು, ಸ್ಥಳದಲ್ಲಿ ದೊರೆತ 3 ದ್ವಿಚಕ್ರ ವಾಹನಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಮಾಡಿಕೊಂಡು ಸದರಿ 4 ಜನರನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಸಂಜೆ 6-00 ಗಂಟೆಗೆ ಬಂದು ಠಾಣಾ ಮೊ.ನಂ 177/2017 ಕಲಂ 87 ಕೆ.ಪಿ ಆಕ್ಟ್ ರೀತ್ಯಾ  ಸ್ಚಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.90/2017, ಕಲಂ:87 ಕೆ.ಪಿ.ಆಕ್ಟ್.

ದಿನಾಂಕ:10/10/2017 ರಂದು ಬೆಳಿಗ್ಗೆ 10:30 ಗಂಟೆಗೆ ಠಾಣಾ ಸರಹದ್ದು ಗಸ್ತಿನಲ್ಲಿದ್ದ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ನೇಮಿಸಿದ್ದು, ಅದರಂತೆ ನಾನು ಲಕ್ಲೀಹಟ್ಟಿ, ನಲ್ಲೆಕಾಮನಹಳ್ಳಿ, ಜಂಗಮಯ್ಯನಪಾಳ್ಯ, ಬೆನಕನಹಳ್ಳಿ, ಸತ್ತಿಗಾನಹಳ್ಳಿ, ಕಸಾಪುರ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಮಿಡಿಗೇಶಿ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬೆಳಿಗ್ಗೆ ಸುಮಾರು 09:50 ಗಂಟೆಯ ಸಮಯದಲ್ಲಿ ಮಿಡಿಗೇಶಿ ಗ್ರಾಮದ ಬಳಿ ಐ.ಡಿ.ಹಳ್ಳಿ-ಮಿಡಿಗೇಶಿ ರಸ್ತೆಯ ಪಕ್ಕದಲ್ಲಿರುವ ರಾಜಣ್ಣ ರವರ ಜಮೀನಿನ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 03-04 ಜನರು ಒಂದು ಕಡೆ ಸೇರಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತೆ ಎಂತ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 163/2017 ಕಲಂ: 323,324,354,448 ಐಪಿಸಿ  ಮತ್ತು  8,10  ಪೋಕ್ಸೋ ಆಕ್ಟ್-2012  ಮತ್ತು  3 ಕ್ಲಾಸ್ (1), (W) (X1) ಎಸ್.ಸಿ/ ಎಸ್.ಟಿ, ಪಿ. ಎ ಆಕ್ಟ್.

 

ದಿನಾಂಕ: 10/10/2017 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಹೇಮಲತಾ ಕೋಂ ಲೇಟ್ ಶ್ರೀನಿವಾಸ್, 42 ವರ್ಷ, ಆದಿ ಕರ್ನಾಟಕ ಜನಾಂಗ, 8ನೇ ಕ್ರಾಸ್, ರಂಗಾಪುರ ರಸ್ತೆ, ಅರಸುನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ ಇಬ್ಬರು ಮಕ್ಕಳಿದ್ದು ಇವರಲ್ಲಿ 21 ವರ್ಷದ ಆವೃತ, 17 ವರ್ಷದ ಸ್ವಾತಿ ಕಿರಣ ಆಗಿದ್ದು, ನನ್ನ ಗಂಡ ಶ್ರೀನಿವಾಸ ರವರು ಒಂದುವರೆ ವರ್ಷದ ಹಿಂದೆ ಮೃತಪಟ್ಟಿದ್ದು, ನಾನು ಮತ್ತು ನನ್ನ ಮಗ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು, 17 ವರ್ಷದ ನನ್ನ ಮಗಳು ಸ್ವಾತಿ ಕಿರಣ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಳು. ದಿನಾಂಕ; 10/10/2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗ ಬೇರೆ ಬೇರೆ ಕಡೆ ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ 6-00 ಗಂಟೆಯ ಸಮಯದಲ್ಲಿ ನನ್ನ ಮಗ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯಿಂದ ಕದ ತೆಗೆದುಕೊಂಡು ಅರಸುನಗರದ ರೋಷನ್ ಬಿನ್ ಪ್ಯಾರು ಎಂಬ ಹುಡುಗ ನಮ್ಮ ಮನೆಯಿಂದ ಓಡಿ ಹೋದ. ಆಗ ನಾನು ಮನೆಯೊಳಗೆ ಹೋಗಿ ಅಳುತ್ತಿದ್ದ ತನ್ನ ತಂಗಿಯನ್ನು ಕೇಳಿದಾಗ ಆಕೆ ಈ ದಿನ ನಾನು ಮನೆಯಲ್ಲಿ ಒಬ್ಬಳೆ ಇದ್ದಾಗ ಸಂಜೆ 5-30 ಗಂಟೆಯ ಸಮಯದಲ್ಲಿ ಅರಸುನಗರದ ರೋಷನ್ ಎಂಬ ಹುಡುಗ ನೀರು ಬೇಕು ಎಂದು ಮನೆಯೊಳಗೆ ಬಂದು ಕೇಳಿದಾಗ ಆಕೆ ಮನೆಯಲ್ಲಿ ಯಾರು ಇಲ್ಲವೆಂದು ಹೇಳದರೂ ಕೇಳದೇ ಬಲವಂತವಾಗಿ ಮನೆಯೊಳಗೆ ಬಂದು ಮನೆಯ ಕದವನ್ನು ಹಾಕಿ, ನನ್ನನ್ನು ಮದುವೆಯಾಗು ಎಂದು ಬಲತ್ಕಾರವಾಗಿ ಮುಟ್ಟಿ ಎಳೆದಾಡಿದ್ದ, ನಾನು ನಿರಾಕರಿಸಿ ನೂಕಿದಾಗ ಆತ ಮತ್ತೆ ಕುತ್ತಿಗೆಯನ್ನು ಹಿಡಿದುಕೊಂಡು ನನ್ನ ಬಲಕಿವಿಯ ಕೆಳಭಾಗದ ಕೆನ್ನೆಗೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿದ. ನಾನು ಕೂಗಾಡುತ್ತಾ ಕದ ತೆಗೆಯಲು ಹೋದಾಗ ಆತ ಕೈಯಿಂದ ನನಗೆ ಹೊಡೆದು ನನ್ನನ್ನು ನೂಕಿದ. ನಾನು ಜೋರಾಗಿ ಕೂಗಾಡಿದೆ. ಆಗ ಆತ ಮನೆಯ ಕದವನ್ನು ತೆರೆದು ಹೊರಗೆ ಓಡಿಹೋದ ಎಂದು ನನಗೆ ತಿಳಿಸಿದಳು. ಎಂತ ವಿಚಾರ ತಿಳಿಸಿ ಎ.ಪಿ.ಎಂ.ಸಿ ಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಮನೆಗೆ ಕರೆದುಕೊಂಡು ಬಂದನು. ನಾನು ಮನೆಗೆ ಬಂದು ನನ್ನ ಮಗಳನ್ನು ವಿಚಾರ ಮಾಡಿದಾಗ ನನ್ನ ಮಗಳು ಮೇಲ್ಕಂಡಂತೆ ನನಗೂ ಸಹ ವಿಚಾರ ತಿಳಿಸಿದಳು. ಆದ್ದರಿಂದ ಈ ದಿನ ಸಂಜೆ 5-30 ಗಂಟೆ ಸಮಯದಲ್ಲಿ ನಮ್ಮ ಮನೆಯೊಳಗೆ ಪ್ರವೇಶ ಮಾಡಿ ನನ್ನ ಮಗಳನ್ನು ಎಳೆದಾಡಿ ಹಲ್ಲಿನಿಂದ ಕಚ್ಚಿ ಗಾಯಪಡಿಸಿ ಓಡಿ ಹೋಗಿರುವ ರೋಷನ್ ರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದುರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 67 guests online
Content View Hits : 303303