lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28        
Thursday, 01 February 2018
ಅಪರಾಧ ಘಟನೆಗಳು 01-02-18

ತುಮಕೂರು ನಗರ ಠಾಣೆ ಪೊಲೀಸ್ ಠಾಣೆ ಮೊ.ಸಂ  18 /18 ಕಲಂ 353, 504 506 ಐಪಿಸಿ

ಪಿರ್ಯಾದಿ ವಿಜಯಕುಮಾರ್ ಪಿಸಿ ಟ್ರಾಫೀಕ್  ಪೊಲೀಸ್ ಠಾಣೆ ತುಮಕೂರು ರವರು  ದಿನಾಂಕ 31-01-2018 ರಂದು ನಾನು ಬೆಳಗ್ಗೆ 8-30 ಗಂಟೆಯಿಂದ 11-00 ಗಂಟೆ ವರೆಗೆ ಸಂಚಾರಿ  ನಿಯಂತ್ರಣ ಕರ್ತವ್ಯಕ್ಕೆ ಹೋಗಿ ಪಾಯಿಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ಬೆಳಗ್ಗೆ 09-45 ಗಂಟೆ ಸಮಯದಲ್ಲಿ ಬಿಜಿಎಸ್ ಸರ್ಕಲ್ ನಲ್ಲಿ ಠಾಣಾ ಎಎಸ್ಐ ಗಿರಿಯಪ್ಪ ರವರು ಸಂಚಾರ ನಿಯಂತ್ರಣ  ಉಲ್ಲಂಘನೆ ಮಾಡಿಕೊಂಡು ಬರುತ್ತಿದ್ದವರ ವಿರುದ್ದ ಐಎಂವಿ ಲಘು ಪ್ರಕರಣವನ್ನು ದಾಖಲು ಮಾಡುತ್ತಿದ್ದರು. ಎಎಸ್ಐ ಗಿರಿಯಪ್ಪ ರವರು ಐಎಂವಿ ಪ್ರಕಣಗಳನ್ನು ದಾಖಲು ಮಾಡಲು ಸಹಕರಿಸುವಂತೆ ನನಗೆ ತಿಳಿಸಿದ್ದು ಅದರಂತೆ ಸಂಚಾರ ನಿಯಂತ್ರಣ ಉಲ್ಲಂಘನೆ ಮಾಡಿಕೊಂಡು ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸುತ್ತಿರುವ ಸಮಯದಲ್ಲಿ ಲಕ್ಕಪ್ಪ ಸರ್ಕಲ್ ಕಡೆಯಿಂದ ಭದ್ರಮ್ಮ ವೃತ್ತದ ಕಡೆಗೆ ಬಂದ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿಕೊಂಡು ಬರುತ್ತಿದ್ದವನನ್ನು ನಾನು ನಿಲ್ಲಿಸುವಂತೆ ಸೂಚಿಸಿದಾಗ ಸದರಿ ವಾಹನವನ್ನು ನಿಲ್ಲಿಸಿ ವಾಹನ ಸವಾರ ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ನನಗೆ ಅವ್ಯಾಚ್ಯ ಶಬ್ದಗಳಿಂದ ಬೈದು ನನ್ನ ಕೊರಳ ಪಟ್ಟಿ ಹಿಡಿದು ಎಳೆದಾಡಿ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿ ಇತ್ಯಾದಿ

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ 10/2018 ಕಲಂ 32 ಕ್ಲಾಸ್ 3 ಕೆ.ಇ ಆಕ್ಟ್

ದಿ:31/01/2018 ರಂದು ಮದ್ಯಾಹ್ನ 1-10 ಗಂಟೆಗೆ ಹೆಚ್‌ ಸಿ 158 ಶ್ರೀರಂಗಯ್ಯ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಅಂಶವೇನೆಂದರೆ, ಈ ದಿನ ನಾನು ಪಿಸಿ ರಂಗನಾಥ ಮತ್ತು ಮಪಿಸಿ 747 ಸೌಮ್ಯ ರವರೊಂದಿಗೆ ಸಿಡಿದರಗಲ್ಲು ಗ್ರಾಮಕ್ಕೆ ಮಾಹಿತಿ ಸಂಗ್ರಹಿಸಲು 12-45 ಗಂಟೆಗೆ  ಹೋದಾಗ ಸಿಡಿದರಗಲ್ಲು ಗ್ರಾಮದಲ್ಲಿ ಅಂಗಡಿ ವ್ಯಾಪಾರ ನಡೆಸುವ ಹನುಮಂತರಾಯ ಬಿನ್ ರಂಗಶಾಮಣ್ಣ , 40 ವರ್ಷ ಆದಿ ಕರ್ನಾಟಕ ಜನಾಂಗ ರವರು ತಮ್ಮ ಅಂಗಡಿ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಜನರು ಮದ್ಯಪಾನ ಮಾಡುತ್ತಿದ್ದರು ನಂತರ ಅದೇ ಗ್ರಾಮದ ರಂಗಮ್ಮ ಕೊಂ ಜಂಗಮಯ್ಯ ರವರ ಅಂಗಡಿಗೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ರಂಗಮ್ಮ ರವರು ಅವರ ಅಂಗಡಿ ಮುಂಭಾಗದಲ್ಲಿ ಜನರು ಮದ್ಯಪಾನ ಮಾಡುತ್ತಿದ್ದು ಇದಕ್ಕೆ ರಂಗಮ್ಮ ರವರು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಪಿಸಿ 949 ರಂಗನಾಥ ಮತ್ತು ಮಪಿಸಿ 747 ಸೌಮ್ಯ ರವರನ್ನು ನಿಗಾವಣೆಗೆ ಬಿಟ್ಟು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಆರೋಪಿತರ ಮೇಲೆ ಕ್ರಮ ಜರುಗಿಸಲು ನೀಡಿದ ದೂರಿನ ಅಂಶವಾಗಿರುತ್ತೆ.

 

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 19/2018.ಕಲಂ-279, 337, 304(ಎ) ಐಪಿಸಿ ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:31/01/2018 ರಂದು ರಾತ್ರಿ 11-30 ಗಂಟೆಗೆ ಈ ಕೇಸಿನ ಪಿರ್ಯಾದಿ ಸುಶ್ಮಿತಾ ಯು.ಎಂ ಬಿನ್ ಎ.ಉಮೇಶ್, ಭೂಪಸಂದ್ರ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:31/01/2018 ರಂದು ಸಂಜೆ ಸುಮಾರು 7-15 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿಯಿದ್ದಾಗ ನಮ್ಮ ಗ್ರಾಮದ ವಾಸಿ ಬಿ.ಎಲ್.ಜಗದೀಶ ಗೌಡ ರವರು ನಮಗೆ ಫೋನ್ ಮಾಡಿ ನಿಮ್ಮ ತಂದೆ ಮೇಶ್ ರವರಿಗೆ ಮರುಳಪ್ಪನಹಳ್ಳಿ ಬಳಿ ಅಪಘಾವಾಗಿರುತ್ತೆ ಎಂದು ತಿಳಿಸಿದರು, ನಾನು ಈದಿನ ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಮರುಳಪ್ಪನಹಳ್ಳಿ ಬಳಿ ಶಿವಣ್ಣನವರ ಜಮೀನಿನ ಹತ್ತಿರ ರಸ್ತೆಯ ಎಡಬದಿಯಲ್ಲಿ ನಮ್ಮ ಮೋಟಾರ್ ಸೈಕಲ್ ಗಳಲ್ಲಿ ಬರುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಕಳ್ಳಂಬೆಳ್ಳ ಬಂಗ್ಲೆ ಕಡೆಯಿಂದ ಬಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮುಂದೆ ದಾಸೇಗೌಡರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ನಿಮ್ಮ ತಂದೆ ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಇಬ್ಬರು ರಸ್ತೆಯ ಮೇಲೆ ಬಿದ್ದಾಗ ನಿಮ್ಮ ತಂದೆ ಉಮೇಶ್ ರವರಿಗೆ  ತಲೆಗೆ ಬಲವಾದ ಪೆಟ್ಟು ಬಿದ್ದು ಹಾಗೂ ಕೈ-ಕಾಳುಗಳಿಗೆ ಸಹ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟರು, ದಾಸೇಗೌಡ ರವರಿಗೆ ಕಾಲಿಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ನಿಮ್ಮ ತಂದೆ ಹಾಗೂ ದಾಸೇಗೌಡ ರವರು ಹೋಗುತ್ತಿದ್ದ ಮೋಟಾರ್ ಸೈಕಲ್ ಸಹ ಜಖಂಗೊಂಡಿದ್ದು, ಮೋಟಾರ್ ಸೈಕಲ್ ನಂಬರ್ ನೋಡಲಾಗಿ KA-05 H.B-0174 ಎಂದು ಇತ್ತು, ಅಪಘಾತ ಪಡಿಸಿದ ಲಾರಿಚಾಲಕ ಸ್ವಲ್ಪ ಸಮಯದ ಲಾರಿಯನ್ನು ಸ್ಥಳದಲ್ಲೇ ನಿಲ್ಲಿಸಿದ್ದು ಲಾರಿ ನಂಬರ್ ನೋಡಲಾಗಿ KA-02 C-5911 ಎಂದು ಇದ್ದು, ಲಾರಿ ಚಾಲಕನನ್ನು ಸಹ ನೋಡಿರುತ್ತೇನೆ, ನಂತರ ನಾನು ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮೂರ ವಾಸಿ ಕೃಷ್ಣಮೂರ್ತಿ ಬಿನ್ ವೀರದಾಸಪ್ಪ ರವರ ಸಹಾಯದಿಂದ ಗಾಯಾಳು ದಾಸೇಗೌಡ ರವರನ್ನು ಉಪಚರಿಸಿ ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಕಳ್ಳಂಬೆಳ್ಳ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಿಮಗೆ ವಿಚಾರ ತಿಳಿಸಿರುತ್ತೇನೆ, ನಿಮ್ಮ ತಂದೆ ಉಮೇಶ್ ಅಪಘಾತದಲ್ಲಿ ಮೃತ ಪಟ್ಟಿದ್ದರಿಂದ ನಿಮ್ಮ ತಂದೆಯ ಮೃತ ದೇಹವನ್ನು ಸ್ಥಳೀಯರ ಸಹಾಯದಿಂದ ಯಾವುದೋ ಒಂದು ವಾಹನದಲ್ಲಿ ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟಿರುತ್ತೇವೆ ಹಾಗೂ ಅಪಘಾತದಲ್ಲಿ ಗಾಯಗೊಂಡಿದ್ದ ದಾಸೇಗೌಡರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಿಕೊಟ್ಟಿರುತ್ತೇವೆಂದು ವಿಚಾರ ತಿಳಿಸಿದರು, ನಂತರ ನಾನು ಈ ಅಪಘಾತದ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣವಾದ  KA-02 C-5911 ನೇ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 35 guests online
Content View Hits : 288227