lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      1 2 3 4
5 6 8 9 10 11
12 13 14 15 16 17 18
19 20 21 22 23 24 25
26 27 28        
Wednesday, 07 February 2018
ಪತ್ರಿಕಾ ಪ್ರಕಟಣೆ ದಿ: 07-02-18

:  ದಿನಾಂಕ  : 07-02-2018  :

: ಪತ್ರಿಕಾ ಪ್ರಕಟಣೆ  :

ತುಮಕೂರು ತಾಲ್ಲೋಕು ಗೂಳೂರು ಹೋಬಳಿ, ದೊಡ್ಡಸಾರಂಗಿಪಾಳ್ಯ ಗ್ರಾಮದ ಗ್ರಾಮಸ್ಥರಿಗೆ ಬ್ಯಾಂಕಿನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ಆರೋಪಿಯ ಬಂದನ.

ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ತುಮಕೂರು ತಾಲ್ಲೋಕು ಗೂಳೂರು ಹೋಬಳಿ ದೊಡ್ಡಸಾರಂಗಿಪಾಳ್ಯ ಗ್ರಾಮದ ಗ್ರಾಮಸ್ಥರಿಗೆ ಪುಷ್ಪ ಕೋಂ ಮಂಜುನಾಥ, 24 ವರ್ಷ, ಗೃಹಿಣಿ ಮತ್ತು ಸಮಾಜ ಸೇವಕಿ, ತಿಗಳ ಜನಾಂಗ ಸತ್ಯಮಂಗಲ ರಸ್ತೆ, ಹೊಂಬಯ್ಯನಪಾಳ್ಯ, ಶಿರಾಗೇಟ್, ತುಮಕೂರು  ರವರು ಈ ಕೇಸಿನ ಪಿರ್ಯಾದಿ ಯಶೋಧ ರವರನ್ನು ಪರಿಚಯ ಮಾಡಿಕೊಂಡು ಬ್ಯಾಂಕಿನಲ್ಲಿ ಸಾಲ ಕೊಡಿಸುವುದಾಗಿ ಯಶೋಧ ರವರ ಮನೆಯಲ್ಲಿ ದೊಡ್ಡಸಾರಂಗಿಪಾಳ್ಯದ ಗ್ರಾಮಸ್ಥರನ್ನು ಸೇರಿಸಿ ಬ್ಯಾಂಕಿನಲ್ಲಿ ಸಾಲ ಕೊಡಿಸುವುದಾಗಿ ತಿಳಿಸಿ ಸಾಲದ ಬಗ್ಗೆ ಭಾಷಣ ಮಾಡಿ ಎಲ್ಲರನ್ನು ನಂಬಿಸಿ ಸುಮಾರು 60 ಜನರಿಂದ ತಲಾ 2000/- ರೂ. ನಂತೆ ಒಟ್ಟು 1,20,000/- ಹಣವನ್ನು, ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ ಚುನಾವಣಾ ಗುರುತಿನ ಚೀಟಿ, ಮೂರು ಪೋಟೋಗಳನ್ನು ಪಡೆದುಕೊಂಡು ನಂತರ ಸಾಲ ಬೇಡ ಎಂದ 20 ಜನರಿಗೆ 40,000/- ರೂ. ಹಣವನ್ನು ವಾಪಸ್ ನೀಡಿ ಉಳಿದ 40 ಜನರಿಗೆ ಸಾಲವನ್ನು ಕೊಡಿಸದೆ, ಅವರಿಂದ ಪಡೆದಿರುವ ಉಳಿಕೆ 80,000/- ರೂ. ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ ಅರೋಪಿ ಪುಷ್ಪ ರವರನ್ನು ಪೊಲೀಸರು  ಬಂಧಿಸಿರುತ್ತಾರೆ.

ಮುಗ್ಧ ಹೆಣ್ಣು ಮಕ್ಕಳಿಗೆ ಅನಾವಶ್ಯಕವಾಗಿ ಸಾಲ ಕೊಡಿಸುತ್ತೇನೆಂದು ಬರುವವರಿಗೆ ಕ್ಯಾನ್ಸಲ್ಡ್ ಚೆಕ್, ಆಧಾರ್ ಕಾರ್ಡ್‌ ಮತ್ತು ಇತರೆ ವೈಯಕ್ತಿಕ ಮಾಹಿತಿಗಳನ್ನು ನೀಡಬಾರದು. ಪ್ರತಿಷ್ಠಿತ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ನ ಪ್ರತಿನಿಧಿಗಳೆಂದು ಮೊಬೈಲ್ಗಳಲ್ಲಿ ಕರೆ ಮಾಡುವುದು ಹಾಗೂ ನೇರವಾಗಿ ಪರಿಚಯಿಸಿಕೊಂಡು ಬರುವ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.

ಇಂತಹವರ ಬಗ್ಗೆ  ಸ್ಥಳೀಯ ಸಂಸ್ಥೆಗಳಿಂದ ಖಚಿತಪಡಿಸಿಕೊಂಡು ವ್ಯವಹರಿಸುವುದು. ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಹಾಗೂ ಇತರೆ ವಿವಿಧ ಯೋಜನೆಗಳಲ್ಲಿ ಸಾಲಕೊಡಿಸುವುದಾಗಿ ಜನರನ್ನು ನಂಬಿಸಿ ಮೋಸ ಮಾಡುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಇಂತಹ ವ್ಯಕ್ತಿಗಳ ಜೊತೆ ವ್ಯವಹರಿಸದಿರಲು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ. ಮೇಲ್ಕಂಡಂತಹ ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಅನುಮಾನ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂ: 9480802900 ಗೆ ಮಾಹಿತಿ ನೀಡಲು ಕೋರಿದೆ.


ಪತ್ರಿಕಾ ಪ್ರಕಟಣೆ ದಿ: 07-02-18

ದಿನಾಂಕ : 07-02-2018

: ಪತ್ರಿಕಾ ಪ್ರಕಟಣೆ :

ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ ದಿನೇ ದಿನೇ ವಾಹನ  ದಟ್ಟಣೆ  ಹೆಚ್ಚಾಗುತ್ತಿದ್ದು  ವಾಹನ ಸವಾರರು/ ಚಾಲಕರುಗಳು  ಸಂಚಾರಿ ನಿಯಮ  ಉಲ್ಲಂಘಿಸಿ  ವಾಹನ  ಚಾಲನೆ/ ಸವಾರಿ ಮಾಡುತ್ತಿರುವವರಿಗೆ ಎಷ್ಟೇ ಸ್ಥಳ ದಂಡಗಳನ್ನು ವಿಧಿಸಿದರೂ ಹಾಗೂ  ಸಾರ್ವಜನಿಕರಿಗೆ   ಸಂಚಾರ  ನಿಯಮಗಳ ಬಗ್ಗೆ  ತಿಳುವಳಿಕೆ ನೀಡಿದರೂ ಸಹ ಸಂಚಾರಿ ನಿಯಮಗಳನ್ನು ಪಾಲಿಸದೆ ಪದೇ ಪದೇ ತಪ್ಪುಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದ್ದು ಅದ್ದರಿಂದ ತುಮಕೂರು ಜಿಲ್ಲಾ ಪೊಲೀಸ್ ನಿರ್ಣಯಿಸಿದ್ದು, ಸಂಚಾರ ವ್ಯವಸ್ಥೆ ಜಾರಿಗೊಳಿಸಲು ಪಣ  ತೊಟ್ಟಿರುವುದರಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ತಿರ್ಮಾಸಿದ್ದು, ಅದರಂತೆ ನಗರದ  ಪ್ರಮುಖ ರಸ್ತೆಗಳಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಚಾಲನೆ/ ಸವಾರಿ  ಮಾಡುವ ಚಾಲಕರುಗಳಿಗೆ ಐ.ಎಂ.ವಿ ಕೇಸುಗಳನ್ನು ದಾಖಲಿ ಸುತ್ತಿದ್ದರೂ ಸಹ ಸವಾರರು/ ಚಾಲಕರುಗಳು  ಎಚ್ಚೆತ್ತುಕೊಳ್ಳದೆ ಪದೇ ಪದೇ ತಪ್ಪುಗಳನ್ನು ಎಸಗುತ್ತಿರುವುದು ಕಂಡು ಬಂದಿರುವುದನ್ನು   ಮನಗೊಂಡು ವಿರುದ್ದ ದಿಕ್ಕಿನಲ್ಲಿ ವಾಹನಗಳನ್ನು ಚಾಲನೆ ಮಾಡಿಕೊಂಡು ಬರುವ ಸವಾರ/ ಚಾಲಕರುಗಳ ವಿರುದ್ದ ಎಫ್.ಐ.ಆರ್ ಗಳನ್ನು ದಾಖಲಿಸಿ ಅವರ ವಿರುದ್ದ ದೋಷಾರೋಪಣ ಪತ್ರವನ್ನು ತಯಾರು ಮಾಡಿ ನ್ಯಾಯಾಲಯದಲ್ಲಿ ದಂಡ ಪಾವತಿಸಲು ಉದ್ದೇಶಿಸಿದ್ದು, ಅದರಂತೆ  ದಿನಾಂಕ :28-01-2018 ರಂದು ಸಂಚಾರಿ  ಠಾಣೆಯಲ್ಲಿ ಮೂವರು ವಾಹನ ಸವಾರ/ ಚಾಲಕರುಗಳು ಸಂಚಾರಿ ನಿಯಮ ಉಲ್ಲಂಘಿಸಿ ವಿರುದ್ದ ದಿಕ್ಕಿನಿಂದ ಬಂದವರ ವಿರುದ್ದ ಎಫ್.ಐ.ಆರ್.ಗಳನ್ನು ದಾಖಲಿಸಿರುತ್ತದೆ.

ಆದ್ದರಿಂದ  ವಾಹನ ಸವಾರ/ ಚಾಲಕರುಗಳು   ರಸ್ತೆಗೆ  ವಿರುದ್ದ   ದಿಕ್ಕಿನಲ್ಲಿ  ಚಾಲನೆ / ಸವಾರಿ ಮಾಡದೆ  ಬೇರೆ ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಹಾಗೂ ನಿಮ್ಮಗಳ  ಸುರಕ್ಷತೆ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲಿಸಲು  ಸಾರ್ವಜನಿಕವಾಗಿ   ಸೂಚಿಸಲಾಗಿದೆ.


ಪತ್ರಿಕಾ ಪ್ರಕಟಣೆ ದಿ: 07-02-18

ಪತ್ರಿಕಾ ಪ್ರಕಟಣೆ.

ದಿನಾಂಕ : 07-02-2018

:: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್ ವಾಹನಗಳ ವಶ : :

ದಿನಾಂಕ 29/10/2017 ರಂದು ಬೆಳಗಿನ ಜಾವ ಹುಲಿಯೂರುದುರ್ಗದ ವಾಜರಪಾಳ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕೆ.ಎ-06-ಡಿ-9815 ನೇ ಮಿನಿ ಗೂಡ್ಸ್ ವಾಹನವು ಕಳ್ಳತನವಾಗಿದ್ದು, ಈ ಸಂಬಂಧ ರವಿಚಂದ್ರ ಬಿನ್ ಹುಚ್ಚಯ್ಯ, ಶೃಂಗಾರ ಸಾಗರ, ಹುಲಿಯೂರುದುರ್ಗ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಠಾಣಾ ಮೊ.ನಂ 213/2017 ಕಲಂ 379 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪಿತರ ಹೆಸರು ಮತ್ತು ವಿಳಾಸ:

1.ಚಂದ್ರನ್ @ ತಿರುಚಿ ಚಂದ್ರನ್ ಬಿನ್ ಲೇಟ್ ಪ್ರಸನ್ನರೆಡ್ಡಿ, 64 ವರ್ಷ, ರೆಡ್ಡಿ ಜನಾಂಗ, ಡ್ರೈವರ್ ಕೆಲಸ ಮತ್ತು ಮರಳು ಏಜೆಂಟ್, ಮನೆ ನಂ:116, ವಿನಾಯಕ ದೇವಸ್ಥಾನ ರಸ್ತೆ, ಮಣಚಿ ನಲ್ಲೂರು, ತಿರುಚಿ ತಾಲ್ಲೂಕ್ ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ.

2. ಗೋಪಾಲ್ ಬಿನ್ ಸ್ವಾಮಿನಾಥನ್, 39 ವರ್ಷ, ವಣ್ಣಿಯಾರ್ ಜನಾಂಗ, ಪೇಟಿಂಗ್ ಮತ್ತು ಟಿಂಕರಿಂಗ್ ಕೆಲಸ, ಎಫ್.ಸಿ ಮತ್ತು ಲಾರಿ ಡೀಲರ್ ಕೆಲಸ, ವಾಸದ ಮನೆ ನಂ:4/386, ಭಾರತಿನಗರ, ಜಾಗೀರ್ ಅಮ್ಮಪೊಳಿಯಮ್, ಸೇಲಂ ತಾಲ್ಲೂಕ್ ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ.

3. ಭಾಸ್ಕರ್ ಸಾಲಿನ್ಸ್ ಬಿನ್ ವಿಲ್ಸನ್ ಸಾಲಿನ್ಸ್, 39 ವರ್ಷ, ಕ್ರಿಶ್ಚಿಯನ್ ಜನಾಂಗ, ಪೇಟಿಂಗ್ ಕೆಲಸ, ವಾಸ: ತಿಪ್ಪಸಂದ್ರ, ಮಾಗಡಿ ತಾಲ್ಲೂಕ್, ರಾಮನಗರ ಜಿಲ್ಲೆ, ಸ್ವಂತ ಊರು: ಅಲಂಗಾರ್ ಗ್ರಾಮ, ಬೆಳ್ಳೂರು ಪೋಸ್ಟ್, ಮೂಡಬಿದರೆ ತಾಲ್ಲೂಕ್, ದಕ್ಷಿಣ ಕನ್ನಡ ಜಿಲ್ಲೆ.

4. ಹಬೀಬ್ ರೆಹಮಾನ್ @ ಹಬೀಬುಲ್ಲಾ @ ವೆಂಕಟೇಶ ಬಿನ್ ಮೊಹಿದ್ದೀನ್  ಅಬ್ಬಾ, 55 ವರ್ಷ, ಮುಸ್ಲಿಂ ಜನಾಂಗ, ಹಾಲಕ್ಕಿ ಹೌಸ್, ಅಡ್ಡೂರು ಪೋಸ್ಟ್, ದಕ್ಷಿಣ ಕನ್ನಡ ಜಿಲ್ಲೆ.

ರವರನ್ನು ಈ ನಮ್ಮ ಪ್ರಕರಣದಲ್ಲಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹುಲಿಯೂರುದುರ್ಗ, ಕಿಬ್ಬನಹಳ್ಳಿ, ರಾಮನಗರ ಗ್ರಾಮಾಂತರ ಮತ್ತು ಕುಶಾಲನಗರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಒಟ್ಟು 25 ಲಕ್ಷ ರೂಪಾಯಿ ಬೆಲೆ ಬಾಳುವ ಒಟ್ಟು 4 ಆಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ 4 ಆಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಎಸ್.ಮಣಿ ರವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು,

ಈ ಕೇಸಿನ ತನಿಖಾ ಕಾಲದಲ್ಲಿ ಈ ಕೇಸಿನ ಆರೋಪಿಗಳ ವಿರುದ್ದ ಹೊನ್ನಾಳಿ, ಹರಿಹರ, ದಾವಣಗೆರೆ ಆರ್.ಎಂ.ಸಿ ಯಾರ್ಡ್, ಶಿವಮೊಗ್ಗದ ಜಯನಗರ, ಪೇಪರ್ ಟೌನ್ ಗ್ರಾಮಾಂತರ, ಕುಶಾಲನಗರ, ಕಾರ್ಕಳ, ಬೆಂಗಳೂರು ಮುಂತಾದ ಕಡೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲುಗಳಿಂದ ಹೊರಬಂದಿರುತ್ತಾರೆ, ಈ ಆರೋಪಿಗಳು ರಾತ್ರಿ ವೇಳೆ ವಾಹನಗಳನ್ನು ಕಳವು ಮಾಡಿ ನೊಂದಣಿ ನಂಬರನ್ನು ಟ್ಯಾಂಪರಿಂಗ್ ಮಾಡಿ ನಂಬರನ್ನು ಬದಲಾಯಿಸಿ, ನಕಲು ದಾಖಲಾತಿಗಳನ್ನು ಮಾಡಿಸಿ ಮಾರಾಟ ಮಾಡುವ ದಂಧೆಯನ್ನುಂಟು ಮಾಡುತ್ತಿರುತ್ತಾರೆ.

ಈ ಕಾರ್ಯಾಚರಣೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕಿರವರಾದ ಡಾ!! ದಿವ್ಯಾ.ವಿ.ಗೋಪಿನಾಥ್, ಐಪಿಎಸ್‌, ರವರ ನಿರ್ದೇಶನದಲ್ಲಿ ಡಾ!! ಶೋಭಾರಾಣಿ, ಅಡಿಷನಲ್ ಎಸ್‌‌.ಪಿ ಮೇಡಮ್ರವರು, ಶ್ರೀ ಚಂದ್ರಶೇಖರ್‌-ಡಿವೈಎಸ್‌ಪಿ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಳೆಗೌಡ-ಸಿಪಿಐ, ಪಿ.ಎಸ್.ಐ ರವರಾದ ಶ್ರೀ ಮಂಜು.ಬಿ.ಪಿ, ಮತ್ತು ಸಿಬ್ಬಂದಿಗಳಾದ ಪುಟ್ಟರಾಮು, ಪರಮೇಶ್ವರಪ್ಪ, ರವಿ.ಕೆ.ಆರ್, ರವಿಕುಮಾರ, ವೆಂಕಟೇಶಮೂರ್ತಿ, ಮುನಿರತ್ನಂ, ರಂಗಸ್ವಾಮಿ, ಷಡಾಕ್ಷರಿ, ನರಸಿಂಹರಾಜು ರವರು ನಡೆಸಿರುತ್ತಾರೆ.


ಅಪರಾಧ ಘಟನೆಗಳು 07-02-18

ಚೇಳೂರು ಪೊಲೀಸ್ ಠಾಣಾ  ಮೊ.ನಂ.30/2018, ಕಲಂ 392  ಐ.ಪಿ.ಸಿ

ದಿನಾಂಕ;06/02/2018 ರಂದು   ಸಂಜೆ 6-30  ಗಂಟೆಗೆ  ಪಿರ್ಯಾದಿ   ಶ್ರೀ.ನಿತಿನ್  ಬಿನ್  ಗುರುಪಾದಪ್ಪ, 23 ವರ್ಷ,  ಲಿಂಗಾಯ್ತರು,  ಪೆಟ್ರೋಲ್  ಬಂಕ್  ನಲ್ಲಿ  ಕೆಲಸ, ಎನ್   ಹೊಸಹಳ್ಳಿ  ಗ್ರಾಮ,  ನಿಟ್ಟೂರು  ಹೋ,  ಗುಬ್ಬಿ  ತಾಲ್ಲೋಕ್  ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ಈಗ್ಗೆ 04 ವರ್ಷಗಳಿಂದ  ಕೊಂಡ್ಲಿ ಕ್ರಾಸ್  ನಲ್ಲಿರುವ  ಅರುಣ್  ಟ್ರಾನ್ಸ್  ಪೋರ್ಟ್  ಗೆ  ಸೇರಿದ   IOC  ಪೆಟ್ರೋಲ್  ಬಂಕ್  ನಲ್ಲಿ  ಪೆಟ್ರೋಲ್ ಡಿಜಲ್  ಹಾಕುವ ಕೆಲಸ  ಮಾಡಿಕೊಂಡಿರುತ್ತೇನೆ  ಈ  ದಿನ 06/02/2018  ರಂದು  ಸಂಜೆ 4-30  ಗಂಟೆ  ಸಮಯದಲ್ಲಿ  ನಾನು ಮೇನೇಜರ್  ಪ್ರಸನ್ನ  ಲಾರಿ ಚಾಲಕ  ಲತೇಶ್  ರವರು  ಪೆಟ್ರೋಲ್  ಬಂಕ್  ನಲ್ಲಿ  ಇರುವಾಗ್ಗೆ  ಇಬ್ಬರು ವ್ಯಕ್ತಿಗಳು   ನನ್ನ  ಬಳಿ  ಬಂದು  ಹೊರ ದೇಶದ  ಹಣವನ್ನು  ತೆಗೆದುಕೊಂಡು  ತೋರಿಸಿ ಎಕ್ಸ್ ಚೇಂಜ್  ಎಕ್ಸ್ ಚೇಂಜ್  ಎಂದು  ಹೇಳಿದರು  ನಾನು  ಅದಕ್ಕೆ  40 ಕೀ. ಮೀ.ಟರ್  ಮುಂದಕ್ಕೆ  ಹೋಗಿ  ಎಂದು  ಹೇಳಿದೆ  ಅದಕ್ಕೆ  ಒಬ್ಬ  ವ್ಯಕ್ತಿ  ನನ್ನ  ಜೇಬಿನಲ್ಲಿ  ಇದ್ದ  ಬಾರತ  ದೇಶದ  200  ರೂ  ನೋಟುನ್ನು  ತೋರಿಸಿ  ಇಟ್ ಇಸ್ ಟು ಥೌಸೆಂಡ್   ಎಂದು  ಕೇಳಿದ  ನಾನು  ನೋ  ಎಂದು  ಹೇಳಿ  ನನ್ನ  ಕೈಯಲ್ಲಿ  ಇದ್ದ  ಬಂಡಲ್ ನಿಂದ 2000  ರೂ  ನೋಟನ್ನು  ತೋರಿಸಿದೆ.  ದಿಸೀಜ್  ಟು  ಥೌಸೆಂಡ್    ಎಂದು  ಹೇಳಿದೆ  ನಂತರ  ಪೆಟ್ರೋಲ್  ಹಾಕಲು  ಮುಂದಕ್ಕೆ  ಹೋದೆ ಅಷ್ಟು  ಹೊತ್ತಿಗೆ ಒಬ್ಬ  ವ್ಯಕ್ತಿ  ನನ್ನ  ಕೈಯಲ್ಲಿ  ಇದ್ದ  ಹಣದ  ಬಂಡಲ್  ಅನ್ನು  ಕಿತ್ತುಕೊಂಡನು.  ಗಟ್ಟಿಗಾಗಿ  ಹಿಡಿದುಕೊಂಡೆ ಬಂಡಲ್ ನಲ್ಲಿದ್ದ  ಸ್ವಲ್ಪ  ಭಾಗ ಹಣವನ್ನು  ಕಿತ್ತುಕೊಂಡು  ರಸ್ತೆಯ  ಕಡೆಗೆ  ಓಡಿ  ಹೋದ.  ಆ  ವೇಳೆಗೆ   ನಾನು ಅಯೋ ಕಿತ್ತುಕೊಂಡ ಜೋರಾಗಿ ಕಿರುಚಿಕೊಂಡೆ ಆಗ  ನಾನು  ಲಾರಿ  ಚಾಲಕ  ಲತೇಶ್ ಮೇನೇಜರ್  ಪ್ರಸನ್ನ  ಅವರ  ಹಿಂದೆ  ಓಡಿದೆವು.  ನಾವು ಅವರ  ಕಡೆ ಓಡಿದ  ತಕ್ಷಣ  ಕಾರ್  ನಂಬರ್   GA-07-F-675  ಸಿಲ್ವರ್  ಅಸೆಂಟಾ  ಕಾರಿನಲ್ಲಿ  ಕುಳಿತುಕೊಂಡು  ಜೋರಾಗಿ   ಕಾರು  ಚಾಲನೆ  ಮಾಡಿಕೊಂಡು   ತುಮಕೂರು  ಕಡೆ  ಹೋದರು.  ಈ ವಿಷಯವನ್ನು   ದೊಡ್ಡಗುಣಿ  ಗ್ರಾಮದ  ನನ್ನ  ಸ್ನೇಹಿತರಾದ   ಸಂದೀಪ ರವರಿಗೆ  ಹೇಳಿದೆ ಅವರು  ಸಹ  ರಸ್ತೆಯಲ್ಲಿ  ಕಾದು  ನೋಡಿ  ಈ  ಕಡೆಗೆ  ಕಾರು  ಬಂದಿಲ್ಲ  ಎಂದು  ತಿಳಿಸಿದರು.  ಈ  ಕಾರಿನಲ್ಲಿ  ಒಟ್ಟು 04  ಜನರು  ಇದ್ದು,  ನನ್ನ  ಬಳಿ  80.000  ರೂಗಳ  ಪೈಕಿ 20.000 ರೂ ಗಳನ್ನು  ಕಿತ್ತುಕೊಂಡು  ಹೋಗಿರುತ್ತಾರೆ.  ನಾನು  ಅವರುಗಳನ್ನು  ನೋಡಿರುತ್ತೇನೆ. ಅವರನ್ನು  ಮತ್ತೆ   ನೋಡಿದರೆ  ಗುರ್ತಿಸುತ್ತೇನೆ.  ಆದ್ದರಿಂದ  ಮೇಲ್ಕಂಡ 04  ಜನರ  ಮೇಲೆ  ಕಾನೂನು   ರೀತ್ಯ  ಕ್ರಮ  ಜರುಗಿಸಲು   ಕೋರಿ ಇತ್ಯಾದಿಯಾದ  ಪಿರ್ಯಾದು  ಮೇರೆಗೆ ಪ್ರಕರಣ ದಾಖಲಿಸಿದೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ನಂ.25/2018 U/S 363 ಐಪಿಸಿ

ದಿನಾಂಕ : 06/02/2018 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀಮತಿ ಲಲಿತಮ್ಮ ಕೋಂ ಲೇಟ್ ಲಕ್ಷ್ಮಿ ನರಸಿಂಹಯ್ಯ (35) ವಾಸ ನಂ 60, ಕೆಪಿಟಿಸಿಎಲ್ ಕ್ವಾಟ್ರಾಸ್ ಕೋತಿತೋಪು, ತುಮಕೂರು ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ  ಮಗನಾದ ಸುಮಾರು 16 ವರ್ಷದ ಪುನೀತ್ ಎಂಬುವರು ಹೊರಪೇಟೆ ಲೂರ್ದುಮಾತಾ ಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು ಶಾಲೆಗೆ ಸರಿಯಾಗಿ ಹೋಗದೆ ತಪ್ಪಿಸಿಕೊಂಡು ಹೋಗುವುದು, ಮಾಡುತ್ತಿದ್ದು ದಿನಾಂಕ : 31/01/2018 ರಂದು ಸಹಾ ಶಾಲೆಗೆ ಹೋಗದೆ ಓಡಾಡಿಕೊಂಡು ಮನೆಗೆ ಬಂದ ವಿಚಾರ ತಿಳಿದು ಪಿರ್ಯಾದಿಯು ಶಾಲೆಗೆ ಹೋಗುವಂತೆ ಪುನೀತ್ ರವರಿಗೆ ಬೈಯ್ದು, ಹೊಡೆದಿದ್ದರಿಂದ ಪುನೀತ್ ರವರು ದಿನಾಂಕ : 01/02/2018 ರಂದು ಬೆಳಗ್ಗೆ 6-00 ಗಂಟೆಯಲ್ಲಿ ದೋಬಿಘಾಟ್ ರಸ್ತೆಯಲ್ಲಿನ ವಿದ್ಯಾಶಂಕರ್ ರವರ ಮನೆಗೆ ಟ್ಯೂಷನ್‌ಗೆಂದು ಹೋಗಿ ವಾಪಸ್ ಸ್ನೇಹಿತನಾದ ದರ್ಶನ್ ರವರ ಜೊತೆ ಭದ್ರಮ್ಮ ವೃತ್ತದ ವರೆಗೆ ಬಂದು ಆತನಿಗೆ ಮನೆಗೆ ಹೋಗುವುದಾಗಿ ತಿಳಿಸಿ ಮನೆಗೂ ಬರದೆ ಎಲ್ಲಿಯೋ ಕಾಣೆಯಾಗಿದ್ದು ಇದುವರೆಗೂ ಸಹಾ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆತನನ್ನು ಯಾರೋ ಅಪಹರಣ ಮಾಡಿರಬಹುದಾದ ಸಾದ್ಯತೆ ಇದ್ದು ಪುನೀತ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 52 guests online
Content View Hits : 288232