lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      1 2 3 4
5 6 7 8 10 11
12 13 14 15 16 17 18
19 20 21 22 23 24 25
26 27 28        
Friday, 09 February 2018
ಅಪರಾಧ ಘಟನೆಗಳು 09-02-18

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ 19/2018 ಕಲಂ 32 ಕ್ಲಾಸ್ 3 ಕೆ.ಇ ಆಕ್ಟ್

ದಿ:08/02/2018 ರಂದು ಸಂಜೆ 4-30 ಗಂಟೆಗೆ ಶ್ರೀ ಗಂಗಾದರ ಪಿ ಐ ರವರು ಠಾಣೆಗೆ ಬಂದು  , ಈ ದಿನ ನಾನು  ಗ್ರಾಮಗಸ್ತಿಗಾಗಿ ಪಿಸಿ 949 ರಂಗನಾಥರವರೊಂದಿಗೆ  ಚಂದ್ರಗಿರಿ ,ಗುಟ್ಟೆ, ಸೋದೇನಹಳ್ಳಿ, ಚಂಬೇನಹಳ್ಳಿ, ಗ್ರಾಮಗಳಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಬೊಮ್ಮರಸನಹಳ್ಳಿ ಗೇಟ್‌ನಲ್ಲಿ ಎರಡು ಪೆಟ್ಟಿಗೆ ಅಂಗಡಿಗಳಲ್ಲಿ ಹೋಟೆಲ್‌ ನಡೆಸುತ್ತಿದ್ದು, ಸದರಿ ಅಂಗಡಿಗಳ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂತಾ ಮಾಹಿತಿ ತಿಳಿದು ಬಂದಿದ್ದರಿಂದ  ನಾನು ಸಿಬ್ಬಂದಿಯೊಂದಿಗೆ  ಗೇಟ್‌‌ ಸಮೀಪ ಹೋದಾಗ  ಚಂದ್ರಶೇಖರ ಬಿನ್‌ ಲಿಂಗಣ್ಣ  ರವರ  ಅಂಗಡಿ ಪಕ್ಕ ಹಾಗೂ  ಚಿಕ್ಕಪ್ಪಯ್ಯ ಬಿನ್‌‌  ಚಿಕ್ಕಣ್ಣ  ರವರ  ಹೋಟೆಲ್‌ ಗಳ ಪಕ್ಕದಲ್ಲಿ 3-4 ಜನ ಸಾರ್ವಜನಿಕರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿರುವಂತೆ ಸ್ಥಳದ ನಿಗಾವಣೆಗಾಗಿ ಪಿಸಿ 949 ರಂಗನಾಥರವರನ್ನು ಬಿಟ್ಟು ನಾನು ವಾಪಾಸ್ ಠಾಣೆಗೆ ಬಂದು ಗಡಿ ಭಾಗದ ಬೊಮ್ಮರಸನಹಳ್ಳಿ ಗೇಟ್‌‌ ನಲ್ಲಿ  ಅಂಗಡಿ ಮತ್ತು ಹೋಟೆಲ್‌ ಗಳ ಪಕ್ಕದಲ್ಲಿ  ಮಾಲೀಕರು ಯಾವುದೇ ಪರವಾನಿಗೆ ಇಲ್ಲದೆ  ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವ   ಚಂದ್ರಶೇಖರ ಬಿನ್‌ ಲಿಂಗಣ್ಣ ಹಾಗೂ  ಚಿಕ್ಕಪ್ಪಯ್ಯ ಬಿನ್‌‌  ಚಿಕ್ಕಣ್ಣ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ 20/2018 ಕಲಂ 32 ಕ್ಲಾಸ್ 3 ಕೆ.ಇ ಆಕ್ಟ್

ದಿ:08/02/2018 ರಂದು ಸಂಜೆ 5-30 ಗಂಟೆ ಗಂಗಾದರ್‌ ಪಿ ಐ, ರವರು  ಠಾಣೆಗೆ ಬಂದು   ನೀಡಿದ ವರದಿ ಅಂಶವೇನೆಂದರೆ, ನಾನು ಈ ದಿನ   ಗ್ರಾಮಗಸ್ತಿಗಾಗಿ ಪಿಸಿ 949 ರಂಗನಾಥ, ಮಪಿಸಿ-15 ಶೈಲಜಾ, 747 ಸೌಮ್ಯರವರೊಂದಿಗೆ  ಜಯನಗರ, ಇಂದಿರಾಗ್ರಾಮ, ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ  5-00 ಗಂಟೆಗೆ ಕೂನ್ನಹಳ್ಳಿ ಗೇಟ್‌ ಮೂಲಕ ಮಾರಿಪಾಳ್ಯ ಕಡೆ ಹೋಗುವಾಗ  ಕೂನ್ನಹಳ್ಳಿ ಗೇಟ್‌ ನಲ್ಲಿರುವ ರಂಗಮ್ಮ ಎಂಬುವವರ  ಅಂಗಡಿ  ಮುಂಭಾಗದಲ್ಲಿ  ಇಬ್ಬರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿರುವಂತೆ ಸ್ಥಳದ ನಿಗಾವಣೆಗಾಗಿ ಮಪಿಸಿ -15 ಶೈಲಜಾ ಮತ್ತು ಮಪಿಸಿ 747 ಸೌಮ್ಯ ರವರನ್ನು ಬಿಟ್ಟು ನಾನು ವಾಪಾಸ್ ಠಾಣೆಗೆ ಬಂದು ಅಂಗಡಿ ಮುಂಭಾಗದಲ್ಲಿ  ಮಾಲೀಕರಾದ ರಂಗಮ್ಮ ರವರು  ಯಾವುದೇ ಪರವಾನಿಗೆ ಇಲ್ಲದೆ  ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವ   ರಂಗಮ್ಮ ತಂದೆ ಕರಿಯಣ್ಣ  ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಂಜೆ  5-30 ಗಂಟೆಗೆ ವಾಪಾಸ್ ಠಾಣೆಗೆ ಬಂದು  ಹಗಲು ಠಾಣಾಧಿಕಾರಿಯವರಿಗೆ ಸೂಚಿಸಿ ನೀಡಿದ ವರದಿ  ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಚಿಕ್ಕನಾಯಕನಹಳ್ಳಿ  ಪೊಲೀಸ್ ಠಾಣೆ ಮೊಸಂ 31/2018 U/S 279, 337 IPC.

ದಿನಾಂಕ:02/02/2018 ರಂದು ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆಂದು ಬಸವಯ್ಯ ಬಿನ್ ಲೇಟ್ ರಂಗಯ್ಯ, 55 ವರ್ಷ, ಎಸ್.ಟಿ ಜನಾಂಗ,  ಕ್ಯಾತನಾಯಕನಹಳ್ಳಿ, ಹಾಗೂ ನರಸಿಂಹಯ್ಯ ಬಿನ್ ಲೇಟ್ ಬೈಲಪ್ಪ ಸುಮಾರು 60 ವರ್ಷ, ಸರ್ಪವಕ್ಕಲಿಗರು, ಕ್ಯಾತನಾಯಕನಹಳ್ಳಿ, ಮಹೇಶ ಬಿನ್ ಸಿದ್ದಬಸವಯ್ಯ, 40 ವರ್ಷ, ಲಿಂಗಾಯತರು, ಜಿರಾಯ್ತಿ, ಮುದ್ದೇನಹಳ್ಳಿ, ಹಾಗೂ ಸೋಮಶೇಖರನಾಯ್ಕ ಬಿನ್ ಚಂದ್ರಾನಾಯ್ಕ.  42 ವರ್ಷ, ಲಂಬಾಣಿ ಜನಾಂಗ, ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನೀರು ವಿತರಕನಾಗಿ ಕೆಲಸ, ಇವರುಗಳು ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಮಧ್ಯಾಹ್ನ ಸುಮಾರು 12.30 ಗಂಟೆಸಮಯದಲ್ಲಿ ದೇವಸ್ಥಾನದ ಕಾಮಗಾರಿ ಕಾರ್ಯ ನಡೆಯುತ್ತಿದ್ದು, ಅದನ್ನು ನೋಡುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್ ವಾಹನ ನೊಂದಣಿ ಸಂಖ್ಯೆ ಕೆಎ-35 ಎ-8954 ನೇ ನಂಬರಿನ ಕ್ರೇನ್ ಕಲ್ಲಿನ ಕೆಲಸ ಮಾಡುತ್ತಿದ್ದು, ದೊಡ್ಡ ಕಲ್ಲುಕಂಬವನ್ನು ಕ್ರೇನ್ ಮುಖಾಂತರ ಎತ್ತಿ ಚಾಲನೆ ಮಾಡುತ್ತಿರುವಾಗ ಕ್ರೇನ್ ನ ರೂಪ್ ಹರಿದು ಅಲ್ಲಿಯೇ ನಿಂತು ವೀಕ್ಷಣೆ ಮಾಡುತ್ತಿದ್ದ ಮೇಲ್ಕಂಡ ನಾಲ್ಕು ಜನರಿಗೆ ಕ್ರೇನ್ ವಾಹನ್ ರೂಪ್ ಹರಿದು ವಾಹನ ರಭಸವಾಗಿ ಹಿಂಬದಿಗೆ ಬಂದು ವೀಕ್ಷಣೆ ಮಾಡುತ್ತಿದ್ದ ನಾಲ್ಕೂ ಜನರಿಗೆ ಕ್ರೇನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಿಂತಿದ್ದ ಮೇಲ್ಕಂಡ ನಾಲ್ಕೂ ಜನರಿಗೂ ಸೊಂಟಕ್ಕೆ ಹಾಗೂ ಕುಂಡಿಗಳಿಗೆ ಪೆಟ್ಟು ಬಿದ್ದಿರುತ್ತೆ. ಸದರಿಯವರುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಈ ರೀತಿ ಅಪಘಾತ ಉಂಟು ಮಾಡಿದ ಕೆಎ-35, ಎ-8954  ನೇ ನಂಬರಿನ ಕ್ರೇನ್ ವಾಹನ ಹಾಗೂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಳ್ಳತ್ತೇನೆ. ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ಈ ಅಪಘಾತಕ್ಕೆ ಕ್ರೇನ್ ವಾಹನದ ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಕಾರಣವಾಗಿರುತ್ತೆ, ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಠಾಣಾ ಮೊ ನಂ 31/2018 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ 15-18 ಕಲಂ 279,337 ಐಪಿಸಿ

ದಿನಾಂಕ:08-02-18 ರಂದು ಸಂಜೆ 04:30 ಗಂಟೆಗೆ  ಪಿರ್ಯಾದಿ ವಿಶ್ವೇಶ್ವರ ಬಿನ್ ಲೇಟ್ ಹನುಮಂತರಾಯಪ್ಪ , ಜ್ಯೋತಿನಗರ, ಶಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ.05/02/2018 ರಂದು ರಾತ್ರಿ ಅಮರಾಪುರ ಮಂಡಲಂ ಗೌಡನಕುಂಟೆ ಗ್ರಾಮದಲ್ಲಿ ಪಿರ್ಯಾದಿ ಮಾವನವರು ದೈವಧೀನರಾಗಿರುತ್ತಾರೆ. ಅವರ ಶವಸಂಸ್ಕಾರ ಕಾರ್ಯಕ್ರಮಕ್ಕೆ  ದಿನಾಂಕ.06/02/2018 ರಂದು ಬೆಳಿಗ್ಗೆ ಪಿರ್ಯಾದಿ ಮನೆಯಿಂದ ಪಿರ್ಯಾದಿ, ತನ್ನ ಸ್ನೇಹಿತ  ಆರ್.ಎಸ್.ಉಮಾಶಂಕರ್ ನನ್ನ  ಬಾಬ್ತು ಶಿಫ್ಟ್ ಕಾರಿನಲ್ಲಿ ಮತ್ತು  ತುಮಕೂರಿನ ಪಿರ್ಯಾದಿಯ ಸಂಬಂದಿಕರಾದ ಎಸ್.ನಾಗಣ್ಣ ಮತ್ತು ಇವರ ಹೆಂಡತಿ ಗೀತಾ ಡಿ ಹಾಗೂ ಗೀತಾ ರವರ ತಮ್ಮ ಗೋಪಿ.ಡಿ  ರವರು ಒಂದು ಕಾರಿನಲ್ಲಿ , ಶಿರಾ ನಗರದ ಜ್ಯೋತಿನಗರ ದಿಂದ ಗೌಡನಕುಂಟೆ ಗ್ರಾಮಕ್ಕೆ ಹಿಂದೆ ಮುಂದೆ ಪ್ರಯಾಣ ಮಾಡುತ್ತಿರುವಾಗ ಇದೇ ದಿನ ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ಲಕ್ಕನಹಳ್ಳಿ-ಚಿರತಹಳ್ಳಿ  ಗೇಟ್ ಮದ್ಯೆ   ಅಮರಾಪುರ – ಶಿರಾ ರಸ್ತೆಯಲ್ಲಿ ಪಿರ್ಯಾದಿಯ ಸಂಬಂದಿಕರಾದ ಎಸ್.ನಾಗಣ್ಣ ರವರ ಬಾಬ್ತು ಕೆ.ಎ.06 ಎನ್.1225 ನೇ ಮಾರುತಿ ಆಲ್ಟೋ ಕಾರಿಗೆ ಇದ್ದಕ್ಕಿದ್ದ ಹಾಗೆ ಹಂದಿ ಅಡ್ಡ ಬಂದು ಅದನ್ನು ತಪ್ಪಿಸಲು ಹೋಗಿ ಚಾಲಕ ಎಸ್.ನಾಗಣ್ಣ ಅತಿವೇಗ ಮತ್ತು ನಿರ್ಲಕ್ಷತನದಿಂದ ಬ್ರೇಕ್ ಹಾಕಿದ್ದರಿಂದ ಕಾರು ರಸ್ತೆಯ ಎಡ ಪಕ್ಕದ ಚರಂಡಿಗೆ ಕಾರು ಉರುಳಿ  ಬಿತ್ತು. ಹಿಂದೆ ಹೋಗುತ್ತಿದ್ದ ಪಿರ್ಯಾದಿ ರವರು ಕಾರನ್ನು ನಿಲ್ಲಿಸಿ ಹೋಗಿ ನೋಡಲಾಗಿ ಕಾರಿನಲ್ಲಿದ್ದ ಗೋಪಿ ಮತ್ತು ಗೀತಾ.ಡಿ ರವರಿಗೆ ಸಣ್ಣಪುಟ್ಟ ರಕ್ತ ಗಾಯಗಳಾಗಿರುತ್ತವೆ ಕಾರಿನ ಚಾಲಕ ನಾಗಣ್ಣ ರವರಿಗೆ ಮೂಗೇಟುಗಳಾಗಿರುತ್ತವೆ. ನಂತರ ಪಿರ್ಯಾದಿ  ಮತ್ತು ಪಿರ್ಯಾದಿಯ  ಕಾರಿನಲ್ಲಿದ ತನ್ನ ಸ್ನೇಹಿತ ಆರ್.ಎಸ್.ಉಮಾಶಂಕರ್ ಆದ ನಾವುಗಳು ಗಾಯಾಳುಗಳನ್ನು ಉಪಚರಿಸಿ ನಮ್ಮ ಕಾರಿನಲ್ಲಿ ಕರೆದುಕೊಂಡು ಹತ್ತಿರವಿದ್ದ ಚಿರತಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ  ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ ಕೊಡಿಸಿ  ಈ ದಿನ ಅಂದರೆ ದಿನಾಂಕ.08/02/2018 ರಂದು ತಡವಾಗಿ ಠಾಣೆಗೆ ಬಂದು  ಅಪಘಾತಪಡಿಸಿದ ಕೆ.ಎ.06 ಎನ್.1225 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ನೀಡಿದ ಪಿರ್ಯಾದನ್ನು ಪಡೆದು ದೂರನ್ನು ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ 16-18 ಕಲಂ 279 ಐಪಿಸಿ ಮತ್ತು 187 ಐ ಎಂ ವಿ ಆಕ್ಟ್

ದಿನಾಂಕ:08-02-18 ರಂದು ಸಂಜೆ 05:15 ಗಂಟೆಗೆ  ಪಿರ್ಯಾದಿ  ಕಿರಣ್ ಬಿನ್ ಕಾಂತಪ್ಪ,ಪಟ್ಟನಾಯಕನಹಳ್ಳಿ ಗ್ರಾಮ,ಸಿರಾ ತಾಲ್ಲೂಕ್  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ರವರು ಪಟ್ಟನಾಯಕನಹಳ್ಳಿ ಶಾಂತಿನಿಕೇತನ ಶಾಲಾ ವಾಹನಕ್ಕೆ ಚಾಲಕನಾಗಿ ಕೆಲಸ ಮಾಡುತ್ತಿದ್ದು ಪ್ರತಿ ದಿನದಂತೆ ದಿನಾಂಕ.05/02/2018 ರಂದು ಸಂಜೆ 04:00 ಗಂಟೆ ಸಮಯದಲ್ಲಿ  ಪಟ್ಟನಾಯಕನಹಳ್ಳಿ ಶಾಂತಿನಿಕೇತನ ಶಾಲೆಯಿಂದ ಕೆಎ-51-ಎ-7311 ಶಾಲಾವಾಹನಕ್ಕೆ ಮಕ್ಕಳನ್ನು ಹತ್ತಿಸಿಕೊಂಡು ಊರುಗಳಿಗೆ ಬಿಟ್ಟು ಬರಲು ಹೋಗಿದ್ದು ಸಂಜೆ ಸುಮಾರು 05:00 ಗಂಟೆಯಲ್ಲಿ ಚಂಗಾವರದಿಂದ ಬಡಮಂಗನಹಟ್ಟಿಗೆ  ಮಕ್ಕಳನ್ನು ಬಿಟ್ಟು ಚಂಗಾವರ-ಬಡಮಂಗನಹಟ್ಟಿ ರಸ್ತೆಯಲ್ಲಿ ಬರುತ್ತಿರುವಾಗ ಚಂಗಾವರ ಕಡೆಯಿಂದ ಬಂದ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕೆಎ-51-ಎ-7311 ಶಾಲಾವಾಹನದ ಮುಂಭಾಗಕ್ಕೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದರಿಂದ 2 ವಾಹನ ಗಳು ಮುಂಭಾಗ ಜಖಂ ಆಗಿರುತ್ತವೆ. ಕಾರಿನ ನಂಬರ್ ನೋಡಲಾಗಿ ಕೆಎ-06-ಎಂ-7342 ಸ್ವಿಪ್ಟ್ ಕಾರಾಗಿರುತ್ತದೆ.ಚಾಲಕ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿಹೊಗಿರುತ್ತಾನೆ. ಅಪಘಾತದಲ್ಲಿ ಯಾರಿಗೂ ಪೆಟ್ಟುಗಳಾಗಿರುವುದಿಲ್ಲ. ಅಪಘಾತಪಡಿಸಿದ ಕಾರಿನ ಚಾಲಕನ ಹೆಸರು,ವಿಳಾಸ ಗೊತ್ತಿರುವುದಿಲ್ಲ ಕಾರಿನ ಚಾಲಕನ ಮೆಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 41/2018 ಕಲಂ: 379 ಐ.ಪಿ.ಸಿ

ದಿನಾಂಕ 08-02-2018 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರಾದ ಶ್ರೀನಿವಾಸ ಮೂರ್ತಿ ಕೆ.ಟಿ ಬಿನ್‌ ಲೇ|| ತಿಮ್ಮಯ್ಯ, 30 ವರ್ಷ, ಒಕ್ಕಲಿಗ ಜನಾಂಗ, ವ್ಯಾಪಾರ, ಕಲ್ಲುಪಾಳ್ಯ, ಗೂಳೂರು  ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಬಾಬ್ತು ಕೆಎ-06-ಇ,ವೈ-8219 ನೇ ಬಜಾಜ್‌‌ ಪ್ಲಾಟಿನ ದ್ವಿಚಕ್ರ ವಾಹನದಲ್ಲಿ ದಿನಾಂಕ 21-01-2018 ರಂದು ಸಾಯಂಕಾಲ 05-30 ಗಂಟೆಗೆ ಹೊನ್ನುಡಿಕೆ ಗ್ರಾಮದಲ್ಲಿ ನಡೆಯುವ ತರಕಾರಿ ಸಂತೆಗೆ ಹೋಗಿದ್ದು, ನನ್ನ ದ್ವಿಚಕ್ರ ವಾಹನವನ್ನು ಹೊನ್ನುಡಿಕೆಯ ಹಳೆಯ ಪೊಲೀಸ್‌‌ ಠಾಣೆಯ ಎದುರು ತುಮಕೂರು ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನನ್ನ ಬಾಬ್ತು ದ್ವಿಚಕ್ರ ವಾಹನವನ್ನು ಹ್ಯಾಂಡಲ್‌ ಲಾಕ್‌ ಮಾಡಿಕೊಂಡು ಸಂತೆಗೆ ಹೋದೆನು. ನಂತರ ಸಂತೆಯಲ್ಲಿ ತರಕಾರಿ ಇತ್ಯಾದಿಯನ್ನು ತೆಗೆದುಕೊಂಡು ವಾಪಸ್‌ ನಾನು ನಿಲ್ಲಿಸಿರುವ ದ್ವಿಚಕ್ರ ವಾಹನದ ಬಳಿ ಸಂಜೆ 06-00 ಗಂಟೆಗೆ ಬಂದೆನು. ಆ ಸಮಯದಲ್ಲಿ ನಾನು ನಿಲ್ಲಿಸಿದ್ದ ಜಾಗದದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲಾ, ನನ್ನ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಎಲ್ಲಾ ಕಡೆ ಹುಡುಕಿ ನನ್ನ ಬಾಬ್ತು ದ್ವಿಚಕ್ರ ವಾಹನ ಪತ್ತೆಯಾಗದೆ ಇರುವ ಕಾರಣ ಈ ದಿನ ತಡವಾಗಿ ಬಂದು ಕಳ್ಳತನವಾಗಿರುವ ನನ್ನ ಬಾಬ್ತು ಕೆಎ-06-ಇ,ವೈ-8219 ನೇ ಬಜಾಜ್‌‌ ಪ್ಲಾಟಿನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-41/2018 ಕಲಂ 379 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 32/2018 ಕಲಂ 279, 337,304(ಎ) IPC.

ದಿನಾಂಕ:08.02.2018 ರಂದು ಸಂಜೆ 7-30 ಗಂಟೆ ಫಿರ್ಯಾದು ಸ್ವಾಮಿ ಬಿನ್ ಲೇಟ್ ಸಿದ್ದಪ್ಪ,19 ವರ್ಷ, ಗಾರೆ ಕೆಲಸ, ಆದಿ ಕರ್ನಾಟಕ, ಅಂಬೇಡ್ಕರ್  ನಗರ ಚಿ ನಾ ಹಳ್ಳಿ ಟೌನ್.  ರವರು  ಠಾಣೆಗೆ ಹಾಜರಾಗಿ ನಿಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ದಿನಾಂಕ:08.02.2018 ರಂದು ನನ್ನ ಬಾಬ್ತು ಕೆಎ-44 ಎಸ್-8750 ನೇ ಆಕ್ಟಿವ್ ಹೊಂಡಾ ಬೈಕಿನಲ್ಲಿ ನಮ್ಮ ಮಾವನ ಮಗನಾದ ಕೃಷ್ಣ ರವರ ಮನೆಗೆ ದೇವರ ಕಾರ್ಯದ ನಿಮಿತ್ತ ತಿಪಟೂರು ತಾಲ್ಲೋಕ್ ಕರಡಿ ಗ್ರಾಮಕ್ಕೆ ಈ ದಿನ ಮಧ್ಯಾಹ್ನ 2-00 ಗಂಟೆಗೆ ಬಂದಿದ್ದು, ನನ್ನಂತೆಯೇ ನಮ್ಮ ಅತ್ತೆಯ ಮಗನಾದ ಹಂದನಕೆರೆ, ಎ ಕೆ ಕಾಲೋನಿಯ ಚೇತನ್ ಬಿನ್ ಲೇಟ್ ಹನುಮಂತಯ್ಯ ರವರು ಈ ದಿನ ಬೆಂಗಳೂರಿನಿಂದ ಕರಡಿ ಗ್ರಾಮಕ್ಕೆ ಬಂದಿದ್ದು, ನಾವುಗಳಿಬ್ಬರೂ ಕೃಷ್ಣ ರವರ ಮನೆಯಲ್ಲಿ ದೇವರ ಕಾರ್ಯ ಮುಗಿಸಿಕೊಂಡು ಊಟ ಮುಗಿಸಿ ನಾನು ಮತ್ತು ನಮ್ಮ ಅತ್ತೆಯ ಮಗ ಚೇತನ್ ರವರು, ನಮ್ಮೂರು ಚಿ ನಾ ಹಳ್ಳಿ ಹೋಗಲು ನಾನು ನನ್ನ ಬಾಬ್ತು ಕೆಎ-44 ಎಸ್-8750 ನೇ ಆಕ್ಟಿವ್ ಹೊಂಡಾ ಬೈಕಿನಲ್ಲಿ ಹಾಗೂ ಚೇತನ್ ರವರು ಆತನ ಬಾಬ್ತು ಕೆಎ-05 ಇಯು-9493 ನೇ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕಿನಲ್ಲಿ  ಈ ದಿನ ಸಂಜೆ 5-30 ರಲ್ಲಿ ಕರಡಿ ಬಿಟ್ಟು ಎನ್ ಹೆಚ್-206 ರಸ್ತೆಯಲ್ಲಿ ಇಬ್ಬರೂ ನಮ್ಮ ಬೈಕುಗಳಲ್ಲಿ ಜಯಂತಿ ಗ್ರಾಮದ ಸಮೀಪ ಸಮಯ 5-45 ಗಂಟೆ ಸಮಯದಲ್ಲಿ ಬರುತ್ತಿರಬೇಕಾದರೆ, ಕೆ ಬಿ ಕ್ರಾಸ್  ಕಡೆಯಿಂದ ಕೆಎ-17 ಎಫ್-1703 ನೇ ಕೆ ಎಸ್ ಆರ್ ಟಿ ಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ರಸ್ತೆಯ ಬಲಭಾಗಕ್ಕೆ ಬಂದು ಚೇತನ್ ರವರು ಚಲಾಯಿಸುತ್ತಿದ್ದ ಕೆಎ-05 ಇಯು-9493 ನೇ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕಿಗೆ ಮತ್ತು ಈತನ ಹಿಂದೆ ಹೋಗುತ್ತಿದ್ದ ನನ್ನ ಬಾಬ್ತು ಕೆಎ-44 ಎಸ್-8750 ನೇ ಆಕ್ಟಿವ್ ಹೊಂಡಾ ಬೈಕುಗಳಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಚೇತನ್ ರವರು ಸ್ಥಳದಲ್ಲೇ ಮರಣ ಹೊಂದಿದ್ದು, ನನಗೆ  ಪೆಟ್ಟು ಬಿದ್ದು ಗಾಯಗಳಾಗಿರುತ್ತವೆ, ಈ ವೇಳೆಗೆ ಅಲ್ಲಿಗೆ ಬಂದ ಸಾರ್ವಜನಿಕರು 108 ಆ್ಯಂಬುಲೆನ್ಸ್ ಕರೆಸಿ ನನ್ನನ್ನು ಮತ್ತು ಚೇತನ್ ರವರ ಮೃತ ದೇಹವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ ನಾನು ತಿಪಟೂರು ಸರ್ಕಾರಿ ಆಸ್ಪತ್ರೆ ಶಾವಾಗಾರಕ್ಕೆ ಚೇತನ್ ರವರ ಶವವನ್ನು ಇರಿಸಿ, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು, ವಾಪಾಸ್ ಕೆ ಬಿ ಕ್ರಾಸ್ ಪೊಲೀಸ್ ಠಾಣೆಗೆ ಬಂದು ಈ ಅಫಘಾತಕ್ಕೆ ಕಾರಣನಾದ  ಕೆಎ-17 ಎಫ್-1703 ನೇ ಕೆ ಎಸ್ ಆರ್ ಟಿ ಸಿ ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತೇನೆ ಈ ಅಫಘಾತದಲ್ಲಿ ವಾಹನಗಳು ಕೂಡ ಜಖಂಗೊಂಡಿರುತ್ತವೆ ಇತ್ಯಾದಿ ದೂರನ್ನು ಪಡೆದು ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 39 guests online
Content View Hits : 288228