lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      1 2 3 4
5 6 7 8 9 11
12 13 14 15 16 17 18
19 20 21 22 23 24 25
26 27 28        
Saturday, 10 February 2018
ಅಪರಾಧ ಘಟನೆಗಳು 10-02-18

ಸಂಚಾರಿ ಪೊಲೀಸ್ ಠಾಣೆ ಮೊ.ಸಂ 30/2018 ಕಲಂ 279, 304[A] ಐಪಿಸಿ

ದಿನಾಂಕ 09-01-2018 ರಂದು   ಸಂಚಾರಿ ಠಾಣೆಯಲ್ಲಿ   ಕರ್ತವ್ಯ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಬಿನ್ ಲೇಟ್ ಈರಮರಿಯಪ್ಪ , 29 ವರ್ಷ,  ಸಿಪಿಸಿ 925 ರವರು   ಠಾಣೆಗೆ ಹಾಜರಾಗಿ ನೀಡಿದ   ದೂರೆಂದರೆ ನಾನು ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ:09-02-2018 ರಂದು ಬೆಳಿಗ್ಗೆ  ಬ್ರೀಪಿಂಗ್ ಸಭೆಯಲ್ಲಿ ಠಾಣಾಧಿಕಾರಿಯವರು ನನಗೆ ಹಾಗೂ ಸಿಪಿಸಿ 803 ರೇವಣಸಿದ್ದಪ್ಪ  ಇಬ್ಬರಿಗೂ ಸಿದ್ದಗಂಗಾ ಮಠದಲ್ಲಿ ಜಾತ್ರೆ ನಡೆಯುತ್ತಿರುವ ಕಾರಣ ಕ್ಯಾತ್ಸಂದ್ರ ಎನ್ ಹೆಚ್ 48 ಸರ್ಕಲ್  ಪಾಯಿಂಟ್ ಕರ್ತವ್ಯಕ್ಕೆ ನಿಯೋಜಿಸಿದ್ದು, ಅದರಂತೆ ನಾವಿಬ್ಬರೂ ಪಾಯಿಂಟ್ ಕರ್ತವ್ಯಕ್ಕೆ ತೆರಳಿ  ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ಇದೇ ದಿನ ಸಂಜೆ 6-45 ಗಂಟೆ ಸಮಯದಲ್ಲಿ ನಾವು ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಬೆಂಗಳೂರು ಕಡೆಯಿಂದ  ಬರುವ  ವಾಹನಗಳಿಗೆ    ನಿಲುಗಡೆಯ ಸೂಚನೆಯನ್ನು ಕೊಟ್ಟು ಪಾದಚಾರಿಗಳು ರಸ್ತೆ ದಾಟಲು ಅನುವು ಮಾಡಿಕೊಟ್ಟಿದೆವು ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಮಠದ ಕಡೆಗೆ ಹೋಗಲು  ಬೆಂಗಳೂರು   ತುಮಕೂರು ಎನ್  ಹೆಚ್ 48  ರಸ್ತೆಯ ಹಮ್ಸ್ ಬಳಿ  ರಸ್ತೆ ದಾಟುತ್ತಿದ್ದು  ಅದೇ ಸಮಯಕ್ಕೆ ಬೆಂಗಳೂರು ಕಡೆಯಿಂದ ಬಂದ ಒಂದು ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪಘಾತ ಪಡಿಸಿದನು. ಅಪಘಾತಕ್ಕೀಡಾದ ವ್ಯಕ್ತಿಯ ತಲೆಯ ಮೇಲೆ ಲಾರಿಯ ಮುಂದಿನ  ಎಡಬಾಗದ   ಚಕ್ರ ಹರಿದು ಪಾದಚಾರಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟನು. ತಕ್ಷಣ ಲಾರಿಯ ನಂಬರ್ ನೋಡಲಾಗಿ ಟಿ.ಎನ್.30.ಎ.ಎ.3555 ನೇ ಲಾರಿಯಾಗಿತ್ತು. ಮೃತ ವ್ಯಕ್ತಿಯು ಸುಮಾರು 55 ವರ್ಷ ವುಳ್ಳವನಾಗಿದ್ದು, ಕಪ್ಪುಬಿಳಿ ತಲೆಕೂದಲು ಹಾಗೂ ದಾಡಿ ಇರುತ್ತದೆ. ಮಾಸಲು ಬಣ್ಣದ ಬಟ್ಟೆಯನ್ನು ಧರಿಸಿರುತ್ತಾನೆ. ಹೆಸರು ವಿಳಾಸ ಗೊತ್ತಿರುವುದಿಲ್ಲ. ತಕ್ಷಣ ನಾನು ಅಪಘಾತದ ಬಗ್ಗೆ ಮಾಹಿತಿಯನ್ನು ಕಂಟ್ರೋಲ್ ರೂಂಗೆ ತಿಳಿಸಿ, ನಂತರ ಸುಗಮ ಸಂಚಾರಕ್ಕಾಗಿ ನಾವುಗಳು ಸಾರ್ವಜನಿಕರ ಸಹಕಾರದಿಂದ  ಅಲ್ಲಿಗೆ ಬಂದ ಯಾವುದೋ ಒಂದು ಖಾಸಗಿ ಆಂಬುಲೆನ್ಸ್ ನಲ್ಲಿ ಶವವನ್ನು  ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಾನು ಅಪಘಾತ ಪಡಿಸಿದ ಲಾರಿಯನ್ನು ಠಾಣೆ ಬಳಿ ತಂದು ಹಾಜರ್ಪಡಿಸಿ ಈ ದೂರನ್ನು ನೀಡಿರುತ್ತೇನೆ.   ಚಾಲಕನ ಹೆಸರು   ಎಂ ನಾಗರಾಜು,  ಕರಕನ ಹಳ್ಳಿ,  ಡೆಂಕಣಿ  ಕೋಟೆ,  ತಾಲ್ಲೋಕ್,  ಕೃಷ್ಣಗಿರಿ ಜಿಲ್ಲೆ,  ತಮಿಳು ನಾಡು  ಎಂದು ತಿಳಿದು ಬಂದಿರುತ್ತೆ. ಈ ಅಪಘಾತಕ್ಕೆ  ಮೇಲ್ಕಂಡ ಟಿ.ಎನ್.30.ಎ.ಎ.3555 ನೇ ಲಾರಿ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಕಾರಣವಾಗಿದ್ದು ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂತ ನೀಡಿದ  ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 13/2018, ಕಲಂ 279, 337 ಐಪಿಸಿ.

ದಿನಾಂಕ:-09/02/2018 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಶೇಖರಪ್ಪ ಬಿನ್ ತಿಮ್ಮಪ್ಪ, 48 ವರ್ಷ, ಮುತ್ತಎಣ್ಣೆಗೆರೆ, ಪಂಚನಹಳ್ಳಿ ಹೋಬಳಿ, ಕಡೂರು ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಗ ಹನುಮಂತಪ್ಪ 23 ವರ್ಷ ರವರು ಹುಳಿಯಾರಿನಲ್ಲಿರುವ ಚೈತನ್ಯ ಫೈನಾನ್ಸ್‌‌‌‌ನಲ್ಲಿ ಸಾಲಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ನಾನು ದಿನಾಂಕ 08/02/2018 ರಂದು ಬೆಳಗ್ಗೆ 11-00 ಗಂಟೆಗೆ ನಮ್ಮ ಗ್ರಾಮದಲ್ಲಿರುವಾಗ ನನಗೆ ಇದೇ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವ ವಿನಯ್ ಬಿನ್ ಮಲ್ಲೇಶಪ್ಪ, ರಂಗಯ್ಯನೂರು ಹೊಸದುರ್ಗ ತಾಲ್ಲೂಕು ರವರು ಫೋನ್ ಮಾಡಿ ನಿಮ್ಮ ಮಗ ಹನುಮಂತಪ್ಪ ರವರು ಬೆಳಗ್ಗೆ 07-00 ಗಂಟೆ ಸಮಯದಲ್ಲಿ ನಿಮ್ಮ ಬಾಬ್ತು ಬಜಾಜ್ ಪ್ಲಾಟಿನಾ  ಬೈಕಿನಲ್ಲಿ ಹುಳಿಯಾರಿನಿಂದ ಹಂದನಕೆರೆ ಗ್ರಾಮಕ್ಕೆ ಹಣ ವಸೂಲಿ ಕೆಲಸಕ್ಕೆ ಹೋಗುತ್ತಿದ್ದರು ನಾನು ಸಹ ಅದೇ ಮಾರ್ಗದಲ್ಲಿ ನನ್ನ ಬೈಕಿನಲ್ಲಿ ಹೋಗುತ್ತಿರುವಾಗ ತಿಮ್ಲಾಪುರ ಗೇಟ್ ನಿಂದ ಸ್ವಲ್ಪ ಮುಂದೆ ತಿರುವಿನಲ್ಲಿ ಹನುಮಂತಪ್ಪನು ಬೈಕನ್ನು ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗಬೇಕಾದರೆ ಎದುರಿನಿಂದ ಬಂದ ಕೆ.ಎ-44-1451 ನೇ ಸಿದ್ದೇಶ್ವರ ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೇ ಹನುಮಂತಪ್ಪನ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಹನುಮಂತಪ್ಪನು ಕೆಳಗೆ ಬಿದ್ದು ಈತನ ತಲೆ, ಕೈ, ಕಾಲು ಮತ್ತು ಮುಖಕ್ಕೆ ಪೆಟ್ಟಾಗಿ ಹಲ್ಲುಗಳು ಅಲ್ಲಾಡುತ್ತಿದ್ದವು. ನಂತರ ನಾನು ಮತ್ತು ಬಸ್ಸಿನಲ್ಲಿದ್ದ ಕೆಲವರು ಸೇರಿ ಈತನನ್ನು ನನ್ನ ಬೈಕಿನಲ್ಲಿ ಹುಳಿಯಾರು ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ಅಲ್ಲಿ ವೈದ್ಯರಿಲ್ಲದ ಕಾರಣ ಹನುಮಂತಪ್ಪನನ್ನು ಕಾರೊಂದರಲ್ಲಿ ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತೇವೆಂದು ತಿಳಿಸಿದರು. ಆಗ ನಾನು ನಮ್ಮ ಗ್ರಾಮದಿಂದ ಚಿಕ್ಕನಾಯಕನಹಳ್ಳಿಗೆ ಬಂದು ನೋಡಲಾಗಿ ನನ್ನ ಮಗನಿಗೆ ಅಪಘಾತದಿಂದ ಪೆಟ್ಟುಗಳು ಬಿದ್ದಿರುವುದು ನಿಜವಾಗಿರುತ್ತೆ. ವೈದ್ಯರು ಈತನಿಗೆ ಒಳರೋಗಿಯಾಗಿ ಚಿಕಿತ್ಸೆ ನೀಡುತ್ತಿದ್ದು, ಈತನ ಜೊತೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದೇ ಇದ್ದುದರಿಂದ ನಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣವಾದ ಕೆ.ಎ 44-1451 ನೇ ಸಿದ್ದೇಶ್ವರ ಖಾಸಗಿ ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 43 guests online
Content View Hits : 288229