lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      1 2 3 4
5 6 7 8 9 10 11
13 14 15 16 17 18
19 20 21 22 23 24 25
26 27 28        
Monday, 12 February 2018
ಪತ್ರಿಕಾ ಪ್ರಕಟಣೆ.12-02-18

ಪತ್ರಿಕಾ ಪ್ರಕಟಣೆ.

ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಟಿ ವಿ ಎಸ್ ಮೋಟರ್ ಸೈಕಲ್ ಕಳ್ಳತನವಾಗುತ್ತಿದ್ದು ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಮೊ.ಸಂ:45/2018,46/2018,49/2018 ರಲ್ಲಿ ಕಲಂ: 379 ಐ.ಪಿ.ಸಿ ಯಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಪತ್ತೆ ಮಾಡಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಡಾ.ದಿವ್ಯ ಗೋಪಿನಾಥನ್, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಡಾ.ಶೋಭರಾಣಿ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಡಿ.ಎಸ್.ಪಿ ಚಂದ್ರಶೇಖರ್ ರವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದು, ಈ ದಿನ ದಿನಾಂಕ:12/02/2018 ರಂದು ಬೆಳಗ್ಗೆ 04-00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ಶ್ರೀ ದರ್ಮೇಗೌಡ ಮತ್ತು ಸಿಬ್ಬಂದಿ ಯವರು ರಾತ್ರಿ ಗಸ್ತಿನಲ್ಲಿದ್ದು, ಗಸ್ತಿನಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೋಡಿ ತುರುವೇಕೆರೆ ಟೌನ್ ನ ಹೊರ ವಲಯದಲ್ಲಿನ ಮುನಿಯೂರು ಕ್ರಾಸ್ ಹತ್ತಿರ ಯಾರೋ ಒಬ್ಬ ಆಸಾಮಿಯು ಒಂದು ಟಿ.ವಿ.ಎಸ್. ಸೂಪರ್ ಎಕ್ಸ್ ಎಲ್ ಅನ್ನು ಅತಿವೇಗವಾಗಿ ಓಡಿಸಿಕೊಂಡು ಹೋಗುವುದನ್ನು ಗಮನಿಸಿ ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ಮಾಡಿದಾಗ ಆತನ ಬಳಿ ದೊರೆತ ಟಿ.ವಿ.ಎಸ್.ಸೂಪರ್ ಎಕ್ಸ್ ಎಲ್ ವಾಹನವು ತುರುವೇಕೆರೆ ಪೊಲೀಸ್ ಠಾಣೆಯ ಮೊ.ನಂ:46/2018 ಕಲಂ: 379 ಐ.ಪಿ.ಸಿ ಪ್ರಕರಣದಲ್ಲಿ ಕಳವಾಗಿದ್ದ ಟಿ.ವಿ.ಎಸ್ ಆಗಿದ್ದು, ಆರೋಪಿಯ ಹೆಸರು ಶ್ರೀ ನಜೀರ್ ಸಾಬ್ @ ನಜೀರ್ ಬಿನ್ ಲೇ: ಲತೀಪ್ ಸಾಬ್, 45 ವರ್ಷ, ಮುಸ್ಲಿಂ ಜನಾಂಗ, ಕೊಂಡಜ್ಜಿ ಕ್ರಾಸ್ ತುರುವೇಕೆರೆ ತಾಲ್ಲೋಕ್ ಎಂದು ತಿಳಿಸಿದ್ದು, ಈತನನ್ನು ಹೆಚ್ಚಿನ ವಿಚಾರಣೆ ಮಾಡಲಾಗಿ ಈತನು ತುರುವೇಕೆರೆ ಟೌನ್ ನಲ್ಲಿ 07 ಟಿ.ವಿ.ಎಸ್. ಸೂಪರ್ ಎಕ್ಸ್ ಎಲ್ ವಾಹನಗಳನ್ನು ಕಳ್ಳತನ ಮಾಡಿದ್ದು ಇವುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಇವುಗಳ ಅಂದಾಜು ಬೆಲೆ ಸುಮಾರು 02 ಲಕ್ಷ ರೂಪಾಯಿಗಳು ಆಗಿರುತ್ತದೆ.

ಈ ಆರೋಪಿಯನ್ನು ತುರುವೇಕೆರೆ ಘನ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಆಧೇಶವಾಗಿರುತ್ತೆ. ಆರೋಪಿ ಪತ್ತೆ ಕಾರ್ಯದಲ್ಲಿ ತುರುವೇಕೆರೆ ವೃತ್ತ ನಿರೀಕ್ಷಕರಾದ ಶ್ರೀ.ಸಿ.ಡಿ.ಜಗದೀಶ. ತುರುವೇಕೆರೆ ಪೊಲೀಸ್ ಠಾಣೆ ಪಿ.ಎಸ್.ಐ ಶ್ರೀ. ಧರ್ಮೇಗೌಡ. ತುರುವೇಕೆರೆ ಪೊಲೀಸ್ ಠಾಣೆ. ಸಿಬ್ಬಂದಿಗಳಾದ ಶ್ರೀ. ರಮೇಶ್. ಎಂ.ಎಸ್. ಶ್ರೀ ಶಶಿಧರ ಎಸ್, ಶ್ರೀ ಮಲ್ಲಿಕಾಜರ್ುನ ವೈದ್ಯಮಠ ಹಾಗೂ ಜೀಪ್ ಚಾಲಕ ಸೋಮಶೇಖರ್ ರವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಡಾ.ದಿವ್ಯ ಗೋಪಿನಾಥನ್, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಡಾ.ಶೋಭರಾಣಿ ರವರು ಶ್ಲಾಘಿಸಿರುತ್ತಾರೆ.


ಅಪರಾಧ ಘಟನೆಗಳು 12-02-18

ಚೇಳೂರು ಪೊಲೀಸ್ ಠಾಣಾ  ಮೊ.ನಂ.48/2018, ಕಲಂ 279,  304 (ಎ) ಐ.ಪಿ.ಸಿ. ಮತ್ತು 134 (ಎ &  ಬಿ) ರೆ/ ವಿ 187  ಐ. ಎಂ. ವಿ  ಆಕ್ಟ್

ದಿನಾಂಕ12/02/2018  ರಂದು  ಬೆಳಗಿನ  ಜಾವ 12-30  ಗಂಟೆ  ಸಮಯುದಲ್ಲಿ  ಪಿರ್ಯಾದಿ  . ರಾಘವೇಂದ್ರ   ಬಿನ್  ಕೆ.ಎಸ್. ಕೃಷ್ಣ  ಮೂರ್ತಿ, 38 ವರ್ಷ,  ಬ್ರಾಹ್ಮಣರು, ವ್ಯಾಪಾರ  ಕೆಲಸ,  ಕೊಡಿಯಾಲ  ಗ್ರಾಮ,  ಚೇಳೂರು  ಹೋ,  ಗುಬ್ಬಿ ತಾಲ್ಲೋಕ್, ರವರು  ಠಾಣೆಗೆ  ಹಾಜರಾಗಿ  ನೀಡಿದ ಪಿರ್ಯಾದು ಅಂಶವೇನಂದರೆ,  ದಿನಾಂಕ11/02/2018  ರಂದು ಸಂಜೆ  ನಾನು  ಮತ್ತು ನಮ್ಮ ಗ್ರಾಮದ   ದೇವರಾಜು  ಬಿನ್ ನಾರಾಯಣಪ್ಪ  ಇಬ್ಬರೂ ಕೆಲಸದ ನಿಮಿತ್ತ   ನನ್ನ  ಬಾಬ್ತು  ದ್ವಿ- ಚಕ್ರ  ವಾಹನದಲ್ಲಿ ಚೇಳೂರಿಗೆ  ಬಂದಿದ್ದು,   ಕೆಲಸ ಮುಗಿಸಿಕೊಂಡು  ವಾಪಸ್ಸು ರಾತ್ರಿ 10-30 ನಮ್ಮ  ಗ್ರಾಮಕ್ಕೆ   ನಿಟ್ಟೂರು – ಶಿರಾ  ರಸ್ತೆಯಲ್ಲಿ  ಹೋಗುತ್ತಿರುವಾಗ  ಚೇಳೂರು  ಗ್ರಾಮದ  ಹೊರ ವಲಯದ ಹೊನ್ನಗಂಗಾ ಪೆಟ್ರೋಲ್  ಬಂಕ್  ನ  ಸಮೀಪ  ಬಸವರಾಜುರವರ  ಮಾವಿನ ಕಾಯಿ  ಮತ್ತು  ಮಾವಿನ ಗಿಡಗಳನ್ನು  ಮಾರಾಟ  ಮಾಡುವ  ಶೆಟ್    ಮುಂಭಾಗದ  ರಸ್ತೆಯ   ಪೂರ್ವದ  ಕಡೆಯ ಅಂಚಿನಲ್ಲಿ  ಅಂದರೆ  ರಸ್ತೆಯ   ಎಡ ಭಾಗ   ಯಾರೋ  ಒಬ್ಬ ಆಸಾಮಿ  ಅಪಘಾತವಾಗಿ  ರಸ್ತೆಯ  ರಸ್ತೆಯ   ಮೇಲೆ  ಬಿದ್ದಿದ್ದು,  ಆಗ  ನಾನು  ಮತ್ತು  ದೇವರಾಜು  ಇಬ್ಬರೂ   ನನ್ನ  ದ್ವಿ- ಚಕ್ರ  ವಾಹನವನ್ನು   ನಿಲ್ಲಿಸಿ  ಹತ್ತಿರಕ್ಕೆ   ಹೋಗಿ   ನೋಡಲಾಗಿ  ಸದರಿ  ಆಸಾಮಿಯು ನನ್ನ ಅಣ್ಣ ವಿಶ್ವನಾಥ ಬಿನ್ .ಎಸ್. ಕೃಷ್ಣ ಮೂರ್ತಿ, ರವರಾಗಿದ್ದು,  ಇವರ ಎಡ ಕುಂಡಿಗೆ,  ಬಲ ಕಾಲಿಗೆ,  ತಲೆಗೆ  ಪೆಟ್ಟು  ಬಿದ್ದು,   ಹಾಗೂ  ದೇಹದ  ಇತರೆ  ಭಾಗಳಲ್ಲಿ  ಉಜ್ಜಿದ   ಗಾಯಗಳಾಗಿ ಸ್ಥಳದಲ್ಲಿ  ಮೃತಪಟ್ಟಿರುತ್ತಾನೆ.  ದಿನಾಂಕ11/02/2018  ರಂದು   ರಾತ್ರಿ 10-00  ಗಂಟೆಯಿಂದ  10-30  ಗಂಟೆ  ಸಮಯದಲ್ಲಿ   ಯಾವುದೋ  ವಾಹನದ   ಚಾಲಕ  ತನ್ನ  ವಾಹನವನ್ನು  ಅತೀ  ವೇಗ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು   ಬಂದು  ರಸ್ತೆಯ  ಎಡ ಬದಿಯಲ್ಲಿ  ನಡೆದುಕೊಂಡು  ಹೋಗುತ್ತಿದ್ದ  ನನ್ನ  ಅಣ್ಣನಿಗೆ  ಡಿಕ್ಕಿ  ಹೊಡೆದು  ಅಪಘಾತ  ಮಾಡಿ   ರಸ್ತೆಯಲ್ಲಿ  ಸ್ವಲ್ಪ  ದೂರ  ಎಳೆದು ಕೊಂಡು  ಹೋಗಿರುವುದರಿಂದ  ನನ್ನ ಅಣ್ಣ  ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ. ನನ್ನ ಅಣ್ಣನಿಗೆ  ಸುಮಾರು 40 ವರ್ಷ  ವಯಸ್ಸಾಗಿರುತ್ತೆ.ಈ  ವಿಚಾರವನ್ನು  ನಮ್ಮ ಗ್ರಾಮಸ್ಥರಿಗೆ  ಹಾಗೂ ನನ್ನ ಸಂಬಂದಿಕರಿಗೆ  ವಿಚಾರ ತಿಳಿಸಿ  ದೂರು  ನಿಡಿರುತ್ತೇನೆ.  ಆದ್ದರಿಂದ  ನನ್ನ  ಅಣ್ಣನಿಗೆ  ಅಪಘಾತ  ಪಡಿಸಿರುವ   ಚಾಲಕನ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಮೇರೆಗೆ   ಪ್ರಕರಣ ದಾಖಲಿಸಿಕೊಂಡಿರುತ್ತೆ.   .

ಚಿಕ್ಕನಾಯಕನಹಲ್ಳಿ ಪೊಲೀಸ್ ಠಾಣೆ ಮೊ.ಸಂ 32/2018 U/S 279, 337 IPC.

ದಿನಾಂಕ:- 27/01/2018 ರಂದು ನಮ್ಮ ತಂದೆ ಮಲ್ಲೇಶಯ್ಯ ರವರು ಕೆಲಸದ ನಿಮಿತ್ತ ನಮ್ಮ ಬಾಬ್ತು ಕೆಎ-44 ಕೆ-2529 ಬೈಕ್ ನಲ್ಲಿ ಮಧ್ಯಾಹ್ನ ಸುಮಾರು 02.30 ಗಂಟೆಸಮಯದಲ್ಲಿ ಮನೆಯಿಂದ ಚಿಕ್ಕನಾಯಕನಹಳ್ಳಿಗೆ ಬಂದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ಬರುತ್ತಿರುವಾಗ ಸಂಜೆ ಸುಮಾರು 07.00 ಗಂಟೆಸಮಯದಲ್ಲಿ ಬ್ಯಾಡರಹಳ್ಳಿ ಗೇಟ್ ಸಮೀಪ ಎದುರುಗಡೆಯಿಂದ ಅಂದರೆ ಕೆ.ಬಿ.ಕ್ರಾಸ್ ಕಡೆಯಿಂದ ಚಿಕ್ಕನಾಯಕನಹಳ್ಳಿ ಕಡೆಗೆ ಒಬ್ಬ ಬೈಕ್ ಸವಾರ ತನ್ನ ಬೈಕನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದ ನಮ್ಮ ತಂದೆಯ ಬೈಕಿಗೆ ಎದುರುಗಡೆ ಬರುತ್ತಿದ್ದ ಬೈಕ್ ಸವಾರ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ತಂದೆಗೆ ಹಣೆಯ ಮೇಲೆ, ಎಡಗಣ್ಣಿನ ಉಬ್ಬಿನ ಮೇಲೆ, ಮೂಗಿನ ಮೇಲೆ ಹಾಗೂ ಎರಡು ಕಡೆ ದವಡೆಗೆ ಪೆಟ್ಟು ಬಿದ್ದು, ರಕ್ತ ಬಂದು ಎಡಗಾಲು ಮಂಡಿಗೆ ಪೆಟ್ಟುಬಿದ್ದು ರಕ್ತಗಾಯವಾಗಿದ್ದು, ಅಪಘಾತಕ್ಕೀಡಾದ ನಮ್ಮ ತಂದೆಯನ್ನು ನಮ್ಮೂರಿನ ನರಸಿಂಹಮೂರ್ತಿ ಬಿನ್ ಲಕ್ಷ್ಮಯ್ಯ ಹಾಗೂ ನಾನು ಯಾವುದೋ ಒಂದು ವಾಹನದಲ್ಲಿ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ನಂತರ ವೈಧ್ಯರ ಸಲಹೆಯಂತೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಅದೇ ದಿವಸ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿ ಅಲ್ಲಿನ ವೈಧ್ಯರ ಸಲಹೆಯಂತೆ ಅದೇ ದಿವಸ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಈ ರೀತಿ ಅಪಘಾತವಾಗಲು ಕೆಎ-44, ಯು-5971 ಹೋಂಡಾ ಡಿಯೋ ಚಾಲಕನ ಅತೀವೇಗ ಮತ್ತು ಅಜಾಗರೂಕತೆ ಕಾರಣವಾಗಿರುತ್ತೆ. ಆದ್ದರಿಂದ ವಾಹನದ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.18/2018, ಕಲಂ:304(ಎ) ರೆ/ವಿ 34 ಐ.ಪಿ.ಸಿ.

ದಿನಾಂಕ:11/02/2018 ರಂದು ಬೆಳಿಗ್ಗೆ 09:15 ಗಂಟೆಗೆ ಪಿರ್ಯಾದಿ ಗುರಣ್ಣ ಬಿನ್ ಷಣ್ಮುಖಪ್ಪ, 50 ವರ್ಷ, ಹಂಡೆವಜೀರ ಜನಾಂಗ, ಬ್ಯಾಕೋಡ ಗ್ರಾಮ, ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳಿದ್ದು ಅದರಲ್ಲಿ 03 ನೇ ಮಗನಾದ ಈರಣ್ಣ ಎಂಬುವನು ಈಗ್ಗೆ ಸುಮಾರು 09 ತಿಂಗಳ ಹಿಂದೆ ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಕಿರಿಯ ಮಾರ್ಗದಾಳುವಾಗಿ(ಜೂನಿಯರ್ ಲೈನ್ ಮೆನ್) ಕೆಲಸ ಮಾಡಿಕೊಂಡಿದ್ದು, ರಜೆ ದಿನಗಳಲ್ಲಿ ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದನು. ಹೀಗಿರುವಾಗ್ಗೆ ದಿನಾಂಕ:10/02/2018 ರಂದು ಸಂಜೆ 07:00 ಗಂಟೆಗೆ ನನ್ನ ಮಗ ಈರಣ್ಣನ ಜೊತೆ ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್ ಬಡಿಗೇರ್ ಎಂಬುವರು ನನಗೆ ಪೋನ್ ಮಾಡಿ ಈ ದಿನ ಅಂದರೆ ದಿ:10/02/2018 ರಂದು ನಾನು ಮತ್ತು ನಿಮ್ಮ ಮಗ ಈರಣ್ಣ ಹಾಗೂ ಆರ್.ರಂಗನಾಥ, ಗುರುರಾಜ್ ಬ್ಯಾಡಿಗಿ, ಶಿವಾನಂದ ಕಮಟರವರು ಐ.ಡಿ.ಹಳ್ಳಿ ಹೋಬಳಿ ಯರಗುಂಟೆ ಗ್ರಾಮದ ಹುಣಸೆ ತೋಪಿನಲ್ಲಿ ದೊಡ್ಡಯಲ್ಕೂರು ಗ್ರಾಮದ ನಿರಂತರ ಜೋತಿ ಮಾರ್ಗದಲ್ಲಿದ್ದ ತೊಂದರೆಯನ್ನು ದುರಸ್ಥಿ ಮಾಡುವ ಸಲುವಾಗಿ ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಯ ಶಾಖಾಧಿಕಾರಿಯವರಿಗೆ ಪೋನ್ ಮಾಡಿ ಸದರಿ ಮಾರ್ಗದ ಮಾರ್ಗ ಮುಕ್ತತೆ(ಎಲ್.ಸಿ.) ನೀಡುವಂತೆ ತಿಳಿಸಿ ನಂತರ ಅವರ ಆದೇಶದ ಮೇರೆಗೆ ನಿಮ್ಮ ಮಗ ಈರಣ್ಣ ಸದರಿ ಮಾರ್ಗದ ತೊಂದರೆಯನ್ನು ದುರಸ್ಥಿ ಮಾಡಲು ಇದೇ ದಿನ ಸಂಜೆ ಸುಮಾರು 05:45 ಗಂಟೆಯ ಸಮಯದಲ್ಲಿ ವಿದ್ಯುತ್ ಕಂಬವನ್ನು ಹತ್ತಿ ಆಂಗಲ್ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾಗ ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಯ ಎಸ್.ಓ. ಮತ್ತು ಆಪರೇಟರುಗಳು ಬೇಜವಾಬ್ದಾರಿತನದಿಂದ ಮತ್ತು ನಿರ್ಲಕ್ಷತೆಯಿಂದ ಲೈನ್ ಚಾರ್ಚ್‌ ಮಾಡಿದ್ದರಿಂದ ಕಂಬದ ಆಂಗಲ್ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ಈರಣ್ಣನಿಗೆ ಕರೆಂಟ್ ಶಾಕ್ ಹೊಡೆದು ಆಂಗಲ್ ಮೇಲೆ ಕುಸಿದು ಕಂಬಕ್ಕೆ ಒರಗಿಕೊಂಡನು, ತಕ್ಷಣ ಅಲ್ಲಿಯೇ ಇದ್ದ ನಾನು ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಗೆ ಪೋನ್ ಮಾಡಿ ಲೈನ್ ಚಾರ್ಚ್‌ ಆಗಿ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಈರಣ್ಣನಿಗೆ ಕರೆಂಟ್ ಶಾಕ್ ಹೊಡೆದಿದೆ ಲೈನ್ ಟ್ರಿಪ್ ಮಾಡಿ ಅಂತ ತಿಳಿಸಿ, ಲೈನ್ ಟ್ರಿಪ್ ಮಾಡಿದ ನಂತರ ಕಂಬದ ಆಂಗಲ್ ಮೇಲೆ ಜೋತು ಬಿದಿದ್ದ ಈರಣ್ಣನನ್ನು ನಾನು, ಆರ್.ರಂಗನಾಥ, ಗುರುರಾಜ್ ಬ್ಯಾಡಿಗಿ, ಶಿವಾನಂದ ಕಮಟ ರವರುಗಳು ಸೇರಿ ಕಂಬದಿಂದ ಕೆಳಕ್ಕೆ ಇಳಿಸಿಕೊಂಡು ನೋಡಿದಾಗ ಈರಣ್ಣನ ಕೈಗಳಿಗೆ, ಕಾಲುಗಳಿಗೆ, ಮೈಗೆ ಕರೆಂಟ್ ಶಾಕ್ ಹೊಡೆದು ಚರ್ಮ ಸುಟ್ಟಂತಾಗಿ ಈರಣ್ಣ ಪ್ರಜ್ಞೆ ತಪ್ಪಿದ್ದು ಇನ್ನೂ ಉಸಿರಾಡುತ್ತಿದ್ದರಿಂದ ಈರಣ್ಣನನ್ನು ಚಿಕಿತ್ಸೆಗಾಗಿ ಬೆಸ್ಕಾಂನ ಸರ್ವಿಸ್ ವೆಹಿಕಲ್ ನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬಿಜವಾರ ಗ್ರಾಮದ ಸಮೀಪ ಈರಣ್ಣನು ಮೃತಪಟ್ಟನು. ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಈರಣ್ಣನನ್ನು ತೆಗೆದುಕೊಂಡು ಹೋದಾಗ ವೈದ್ಯರು ಈರಣ್ಣನನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾನೆಂತ ತಿಳಿಸಿದರು. ನಂತರ ಈರಣ್ಣನ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ ನೀವು ಮಧುಗಿರಿಗೆ ಬೇಗ ಬನ್ನಿ ಎಂತ ತಿಳಿಸಿದರು. ನಮ್ಮ ಊರಿನಿಂದ ಹೊರಟು ಈ ದಿನ ಅಂದರೆ ದಿ:11/02/2018 ರಂದು ಬೆಳಿಗ್ಗೆ 06:00 ಗಂಟೆಗೆ ಮಧುಗಿರಿ ಸರ್ಕಾರಿ  ಆಸ್ಪತ್ರೆಯ ಬಳಿಗೆ ಬಂದು ಶವಾಗಾರದಲ್ಲಿದ್ದ ನನ್ನ ಮಗ ಈರಣ್ಣನ ಶವವನ್ನು ನೋಡಲಾಗಿ ವಿಚಾರ ನಿಜವಾಗಿತ್ತು. ದಿನಾಂಕ:10/02/2018 ರಂದು ಸಂಜೆ 05:45 ಗಂಟೆ ಸಮಯದಲ್ಲಿ ನನ್ನ ಮಗ ವಿದ್ಯುತ್ ಕಂಬ ಹತ್ತಿ ಲೈನ್ ದುರಸ್ಥಿ ಮಾಡುತ್ತಿದ್ದಾಗ ಲೈನ್ ಚಾರ್ಚ್‌ ಆಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದು ನನ್ನ ಮಗನ ಸಾವಿಗೆ ಐ.ಡಿ.ಹಳ್ಳಿ ಬೆಸ್ಕಾಂ ಶಾಖೆಯ ಎಸ್.ಓ. ಮತ್ತು ಆಪರೇಟರುಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತೆಯೇ ಕಾರಣವಾಗಿರುತ್ತೆ. ಆದ್ದರಿಂದ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ-03/2018 ಕಲಂ 174 ಸಿಆರ್‌ಪಿಸಿ

ದಿನಾಂಕ:11-02-2018 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿಯಾದ ವೆಂಕಟೇಶ ಬಿನ್ ಲೇ|| ವೆಂಕಟಯ್ಯ, 50 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿ ಕೆಲಸ, ಕಾಲೋನಿ, ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ನಾಗವಲ್ಲಿ ಗ್ರಾಮದಲ್ಲಿ ಸುಮಾರು 70 ವರ್ಷ ವಯಸ್ಸಿನ ಒಬ್ಬ ಗಂಡಸು ಈಗ್ಗೆ ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ನಮ್ಮ ಗ್ರಾಮದಲ್ಲಿಯೇ ಅವರಿವರು ಕೊಟ್ಟಂತಹ ಊಟ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗಿಕೊಂಡು ಇರುತ್ತಿದ್ದನು. ಈ ದಿವಸ ಅಂದರೆ ದಿನಾಂಕ: 11-02-2018 ರಂದು ನಾನು ಬೆಳಿಗ್ಗೆ ಸುಮಾರು 07-30 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಹೊಂದಿಕೊಂಡಂತೆ ಇರುವ ನಮ್ಮ ಅಂಗಡಿಗಳ ಮುಂಭಾಗದಲ್ಲಿ ಸದರಿ ಆಸಾಮಿಯು ಬಿದ್ದಿದ್ದು, ಸದರಿ ಆಸಾಮಿಯನ್ನು ನೋಡಲಾಗಿ ಮೃತಪಟ್ಟಿದ್ದನು. ಸದರಿ ಆಸಾಮಿಯು ಆರೋಗ್ಯ ಸರಿಯಿಲ್ಲದೇ ನಿತ್ರಾಣಗೊಂಡು ದಿನಾಂಕ: 10-02-2018 ರಂದು ಯಾವುದೋ ವೇಳೆಯಲ್ಲಿ ಮೃತಪಟ್ಟಿರುವಂತೆ ಕಂಡು ಬರುತ್ತೆ. ಮೃತನು ಸಾವಿನಲ್ಲಿ ಬೇರೆ ಯಾವುದೇ ಅನುಮಾನಗಳು ಕಂಡು ಬರುವುದಿಲ್ಲ. ಮೃತ ದೇಹವು ನನ್ನ ಬಾಬ್ತು ಅಂಗಡಿ ಮಳಿಗೆಯ ಮುಂಭಾಗದಲ್ಲಿರುತ್ತೆ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್. ನಂ- 03/2018 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ: 11/02/2018 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿ ಮಹದೇವಸ್ವಾಮಿ @ ಪುಟ್ಟಸ್ವಾಮಿ ಬಿನ್ ಮಾರಶೆಟ್ಟಿ, 35 ವರ್ಷ, ಮಡಿವಾಳರು, ಬೇಡರುಪುರ, ಕಸಬಾ ಹೋಬಳಿ, ಚಾಮರಾಜನಗರ ತಾಲ್ಲೋಕ್ ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾವುಗಳು 5 ಜನರು  ಕೂಲಿ ಕೆಲಸದ ಮೇಸ್ತ್ರಿಯಾಗಿ ಆಳುಗಳನ್ನು ಕರೆದುಕೊಂಡು ಈಗ್ಗೆ ಸುಮಾರು 5 ದಿನಗಳಿಂದ ತಿಪಟೂರು ನಗರದ ಕೆ.ಎಸ್.ಆರ್,.ಟಿ ಸಿ ಡಿಪೋದಲ್ಲಿ ಪ್ಲಾಟ್ ಫಾರಂ ಕಾಂಕ್ರೀಟ್ ಕೆಲಸ ಮಾಡಿಕೊಂಡಿದ್ದೆವು. ನಮ್ಮ ಅಣ್ಣ ಹೊನ್ನಪ್ಪನವರು ಸುಮಾರು 45 ವರ್ಷ ಇವರು ಸಹ ನಮ್ಮ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದರು, ದಿನಾಂಕ: 10/02/2018 ರಂದು ಕೆಲಸ ಮುಗಿದ ನಂತರ ಹೋಟೆಲ್ ನಲ್ಲಿ ಊಟ ಮಾಡಿ, ವಿಶ್ರಾಂತಿ ಗೃಹದಲ್ಲಿ ಮಲಗಿಕೊಂಡೆವು. ರಾತ್ರಿ 2-00 ಗಂಟೆಯ ಸಮಯದಲ್ಲಿ ನಮ್ಮ ಅಣ್ಣ ನನಗೆ ಎದೆ ನೋವು ಮತ್ತು ವಾಂತಿ ಬರುತ್ತಿದೆ ಎಂದು ನನ್ನ ಮೇಲೆ ವಾಂತಿ ಮಾಡಿದನು. ನನಗೆ ಭಯವಾಗಿ ಬಂದು ಆಟೋದಲ್ಲಿ ಅಲ್ಲೆ ಇದ್ದ ಗಿರೀಶ್, ನಂಜೇಗೌಡ ಹಾಗೂ ನವೀನ್ ರವರುಗಳು ಸೇರಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ವೈದ್ಯರು ಪರೀಕ್ಷಿಸಿ ನಿಮ್ಮ ಅಣ್ಣ ಹೊನ್ನಪ್ಪ ಮೃತಪಟ್ಟಿರುತ್ತಾರೆಂದು ತಿಳಿಸಿದರು. ಅವರಿಗೆ ಮದುವೆಯಾಗಿರುವುದಿಲ್ಲ. ನಮ್ಮ ತಂದೆ ತಾಯಿ ಸುಮಾರು 30 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನಾನು ಹೊನ್ನಪ್ಪ ಹಾಗೂ ಅಣ್ಣ ದಾಸಶೆಟ್ಟಿ ಒಟ್ಟಿಗೆ ವಾಸವಾಗಿದ್ದೆವು. ನಮ್ಮ ಅಣ್ಣನ ಮೃತ ದೇವಹವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಯು.ಡಿ.ಆರ್ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 39 guests online
Content View Hits : 243267