lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >> -: ಪತ್ರಿಕಾ ಪ್ರಕಟಣೆ :- ದಿನಾಂಕ : 25/10/17 ತುಮಕೂರು ಜಿಲ್ಲೆ. ಕುಣಿಗಲ್ ಪೊಲೀಸರು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< November 2017 >
Mo Tu We Th Fr Sa Su
    1 2 3 4 5
6 7 8 9 10 11 12
13 14 15 16 17 19
20 21 22 23 24 25 26
27 28 29 30      
November 2017

Saturday, 18 November 2017

Crime Incidents 18-11-17

ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ: 100/2017 ಕಲಂ: 20(b)(ii)C. NDPS Act-1985

 

ದಿನಾಂಕ: 17.11.2017 ರಂದು ಮಾನ್ಯ ಡಿ.ಎಸ್.ಪಿ ಸಾಹೇಬರವರು ತುಮಕೂರು ಗ್ರಾಮಾಂತರ ಉಪವಿಭಾಗ, ಶಿರಾ. ರವರಿಗೆ ಸಿ.ಎಸ್.ಪುರ ಪೊಲೀಸ್ ಠಾಣಾ ಸರಹದ್ದಿನ ಕಲ್ಲೂರು ಗ್ರಾಮದ ನಾಗಮ್ಮ ರವರ ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ, ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿರುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸಿ.ಎಸ್.ಪುರ ಪೊಲೀಸ್ ಠಾಣೆಗೆ ಬಂದು ನಂತರ ಪಿ.ಎಸ್.ಐ. ಹನುಮಂತರಾಯಪ್ಪ, ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಕಲ್ಲೂರು ಗ್ರಾಮದ ನಾಗಮ್ಮ ಕೋಂ ಲೇಟ್.ಬಾಲರಾಜು ರವರ ಮನೆಯಲ್ಲಿ ಇದ್ದ 7 ಕೆ.ಜಿ 250 ಗ್ರಾಂ ಗಾಂಜಾ ಸೊಪ್ಪನ್ನು ಪಂಚರ ಸಮಕ್ಷಮ ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಅದರಲ್ಲಿ 100 ಗ್ರಾಂ ಗಾಂಜಾ ಸೊಪ್ಪನ್ನು ಎಫ್.ಎಸ್.ಎಲ್ ಗೆ ಕಳುಹಿಸಲು ಪ್ರತ್ಯೇಕವಾಗಿ ತೆಗೆದು M ಎಂಬ ಸೀಲ್ ಮಾಡಿ ವಶಕ್ಕೆ ಪಡೆದು ಸಂಜೆ 06-00 ಗಂಟೆಯಿಂದ ರಾತ್ರಿ 09-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಒಟ್ಟು 7 ಕೆ.ಜಿ 250 ಗ್ರಾಂ ಗಾಂಜಾ ಸೊಪ್ಪು ಹಾಗೂ ಆರೋಪಿ ನಾಗಮ್ಮ ಕೋಂ ಲೇಟ್.ಬಾಲರಾಜು ರವರನ್ನು ಪಂಚನಾಮೆಯೊಂದಿಗೆ ಠಾಣೆಗೆ ಕರೆದುಕೊಂಡು ಬಂದು ನೀಡಿದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 97/17 ಕಲಂ 323,324,504 ರೆ/ವಿ 34 ಐಪಿಸಿ

ದಿನಾಂಕ:-17/11/2017 ರಂದು ಸಂಜೆ 5-45 ಗಂಟೆ ಸಮಯದಲ್ಲಿ ಪಿರ್ಯಾದಿ ಸುಮ ಕೋಂ ಎಸ್.ಪಿ ರಂಗನಾಥ  ಸಿಡಿದರಗಲ್ಲು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಇದೇ ದಿನ  ಬೆಳಗ್ಗೆ 10-00 ಗಂಟೆ ಸಮಯದಲ್ಲಿ  ನನ್ನ ಮಾವ ಪುಟ್ಟರಂಗಪ್ಪ ಅಂಗಡಿಗೆ ಸಾಮಾನು ತರಲು ಹೋಗಿದ್ದಾಗ, ಜಮೀನಿನ ಮತ್ತು ಮನೆಯ ಭಾಗದ ವಿಚಾರವಾಗಿ ಲಕ್ಷ್ಮಿರಂಗಪ್ಪ ಅವಾಚ್ಯ ಶಬ್ದಗಳಿಂದ ಬೈದುಕೊಳ್ಳುತ್ತಿದ್ದಾಗ ಅದನ್ನು ನನ್ನ ಮಾವ ಕೇಳಿದ್ದಕ್ಕೆ, ಲಕ್ಷ್ಮಿರಂಗಪ್ಪ ಬಿನ್ ಸಣ್ಣ ರಂಗಪ್ಪ, ಲಕ್ಷ್ಮಮ್ಮ ಕೋಂ ಸಣ್ಣರಂಗಪ್ಪ, ಮಂಜುನಾಥ ಬಿನ್ ಲಕ್ಷ್ಮಿರಂಗಪ್ಪ ಮತ್ತು ರಾಮಕುಮಾರ ಬಿನ್ ಕಾಲ್ವೆ ರಂಗಪ್ಪರವರು ನನ್ನ ಮಾವ ಮತ್ತು ನನ್ನ ಮೇಲೆ ಹಲ್ಲೆ ಮಾಡಿದ್ದು, ರಾಮಮೂರ್ತಿಯು ಕಾಲಿನಿಂದ ನನ್ನ ಮಾವನನ್ನು ಒದ್ದು, ನೆಲಕ್ಕೆ ಬೀಳಿಸಿಕೊಂಡು ಎರಡೂ ಕೈಗಳಿಂದ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ಕುತ್ತಿಗೆ ಮೇಲೆ ಕಾಲು ಇಟ್ಟು ಹಿಚುಕಿದ್ದಾನೆ, ಲಕ್ಷ್ಮಿರಂಗಪ್ಪ ಇಟ್ಟಿಗೆಯಿಂದ ನನ್ನ ಮಾವನ ತಲೆಗೆ ಹೊಡೆದಿದ್ದರಿಂದ ರಕ್ತ ಗಾಯವಾಗಿ ನೆಲದ ಮೇಲೆ ಹೊರಳಾಡುತ್ತಿದ್ದ ನನ್ನ ಮಾವನನ್ನು ಮಧುಗಿರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿರುತ್ತೆ, ತಾವುಗಳು ನಮಗೆ ನ್ಯಾಯ ದೊರಕಿಸಿಕೊಡ ಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ,

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ  ಮೊ ನಂ 129/17 ಕಲಂ 87 ಕೆ ಪಿ ಆಕ್ಟ್

 

ದಿನಾಂಕ:17-11-17 ರಂದು ಸಂಜೆ 06:15 ಗಂಟೆಗೆ ಪಿರ್ಯಾದಿ  ಚಂದ್ರಶೇಖರ್ .ಪಿ.ಎಸ್.ಐ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ಪಿರ್ಯಾದಿ ರವರು ದಿನಾಂಕ:17/11/2017 ರಂದು ಮದ್ಯಾಹ್ನ  02:00 ಗಂಟೆಗೆ  ಠಾಣೆಯ ಬಳಿ ಇದ್ದಾಗ  ಠಾಣಾ ಸರಹದ್ದು  ಬೀರನಹಳ್ಳಿ ಗ್ರಾಮದ ಅರಳಿ ಕಟ್ಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ  ಕಾನೂನು  ಬಾಹಿರವಾಗಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು  ಇಸ್ಪೀಟ್ ಜೂಜಾಟ ಆಡುತ್ತಿದ್ದರೆಂತ ಖಚಿತ  ಬಾತ್ಮೀ ಬಂದ ಮೇರೆಗೆ  ಇಸ್ಪೀಟ್ ಜೂಜಾಟದ  ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮದ್ಯಾಹ್ನ 03:30 ಗಂಟೆಗೆ  ಸಿಬ್ಬಂದಿಗಳು ಮತ್ತು ಪಂಚಾಯ್ತುದಾರರೊಂದಿಗೆ ಬೀರನಹಳ್ಳಿ ಗ್ರಾಮದ ಅರಳಿ ಕಟ್ಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸ್ವಲ್ಪ ದೂರದ  ಮರೆಯಲ್ಲಿ  ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ನೋಡಲಾಗಿ 2 ರಿಂದ 6 ಜನ ಆಸಾಮಿಗಳು ಗುಂಡಾಕರವಾಗಿ ಕುಳಿತುಕೊಂಡು ಕಾನೂನು ಬಾಹಿರ ಅಂದರ್ ಬಾಹರ್ ಇಸ್ಪೀಟ್ ಜೂಜಾಟ  ಆಡುತ್ತಿದ್ದದ್ದು  ಪಂಚರ ಸಮಕ್ಷಮ ಪಿರ್ಯಾದಿ ಮತ್ತು ಸಿಬ್ಬಂದಿಗಳು ದಾಳಿ ಮಾಡಲಾಗಿ  ಓಡಿ ಹೋದರು ಆ ಪೈಕಿ ಇಬ್ಬರನ್ನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ 1)ಜರಿಪೇಟೆ ವೆಂಕಟರಮಣ ಬಿನ್ ಲೇಟ್ ರಾಮುಡು, 56ವರ್ಷ, ಲಿಂಗಾಯ್ತರು, ವ್ಯಾಪಾರ, ಪಾತಪಲ್ಲಿ, ಸಿಂಹಾದ್ರಿಪುರಂ ಮಂಡಲ್, ಪುಲವೆಂದುಲ ತಾಲ್ಲೋಕ್, ಕಡಪ ಜಿಲ್ಲೆ, ಆಂದ್ರಪ್ರದೇಶ ಜಿಲ್ಲ 2) ಜಂಪಣ್ಣ ಬಿನ್ ಲೇಟ್ ರಂಗಪ್ಪ, 42ವರ್ಷ, ಗೊಲ್ಲರು, ಜಿರಾಯ್ತಿ, ತಾಳೆಕೆರೆ ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೋಕ್, ಆಂಧ್ರಪ್ರದೇಶ ರಾಜ್ಯ ಎಂತ ತಿಳಿಸಿದ್ದು ಜೂಜಾಟದಲ್ಲಿ ತೊಡಗಿದ್ದ ಇತರರು  ಓಡಿ ಹೋದರು.  ಆಕಾಡಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಎಲೆಗಳನ್ನು ಏಣಿಸಲಾಗಿ 52 ಇಸ್ಪೀಟ್ ಎಲೆಗಳು, ಆಕಾಡದಲ್ಲಿದ್ದ ಹಣವನ್ನು ಏಣಿಸಲಾಗಿ 2180/-ರೂ ಹಣ ಮತ್ತು ಒಂದು ಹಳೇಯ ನ್ಯೂಸ್ ಪೇಪರ್ , ಮತ್ತು ಸ್ಥಳದ ಪಕ್ಕದಲ್ಲಿಯೇ ಕೃತ್ಯಕ್ಕೆ ಬಳಸಿದ್ದ ನಾಲ್ಕು ದ್ವಿ ಚಕ್ರ ವಾಹನಗಳನ್ನು ಪರಿಶೀಲಿಸಲಾಗಿ 1)ಕೆಎ-41-ಇಜಿ-7745ರ ಹಿರೊ ಸ್ಲೆಂಡರ್ 2)ಕೆಎ-64-ಎಲ್-3114 ನೇ ಟಿ.ವಿ.ಎಸ್. ಎಕ್ಸೆಲ್ 3)ನಂಬರ್ ಇಲ್ಲದೆ ಟಿ.ವಿ.ಎಸ್ ಎಕ್ಸಲ್ ಇದ್ದು, CHASISS NO MD6210P10HID71480 ಆಗಿರುತ್ತೆ 4)ಎಪಿ-02-ಎನ್-2012ನೇ ಹಿರೊ ಹೊಂಡಾ ಸ್ಪೆಂಡರ್ ಪ್ಲಸ್  ನೋಟಾರು ಸೈಕಲ್ ಗಳನ್ನು ಸಾಯಂಕಾಲ 04:15 ಗಂಟೆಯಿಂದ 05:15 ಗಂಟೆಯ ವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಗಳೊಂದಿಗೆ  ಸಂಜೆ 06:15 ಗಂಟೆಗೆ  ವಾಪಸ್ ಠಾಣೆಗೆ ಬಂದು ಮುಂದಿನ  ಕ್ರಮ ಜರುಗಿಸಲು  ಠಾಣಾಧಿಕಾರಿ ರವರಿಗೆ ಸೂಚಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ..

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 142/2017, ಕಲಂ 78 (3) ಕೆ.ಪಿ ಆಕ್ಟ್.

ದಿನಾಂಕ 17/11/2017 ರಂದು ಸಂಜೆ 05-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:17-11-2017 ರಂದು ನಾನು ಹುಳಿಯಾರು ಪೊಲೀಸ್ ಠಾಣಾ ಸರಹದ್ದು ಗಸ್ತು ಮಾಡುತ್ತಿರುವಾಗ ಮದ್ಯಾಹ್ನ 03:00 ಗಂಟೆ ಸಮಯದಲ್ಲಿ ಗುಪ್ತ ಮಾಹಿತಿ ಸಿಬ್ಬಂದಿ ಹೆಚ್.ಸಿ 315 ಎಂ.ಆರ್ ಶಂಕರ್ ರವರು ನನಗೆ ಪೋನ್ ಮಾಡಿ ಹುಳಿಯಾರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತಾ ಖಚಿತ ವರ್ತಮಾನ ಬಂದಿರುತ್ತೆ ಎಂತ ತಿಳಿಸಿದ್ದು ನಾನು ವಾಪಸ್ ಠಾಣೆಗೆ ಬಂದು ಮಟ್ಕಾ ಜೂಜಾಟದ ಮೇಲೆ ದಾಳಿ ನಡೆಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಹೆಚ್.ಸಿ 315 ಎಂ.ಆರ್ ಶಂಕರ್ ಮತ್ತು ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಸಂಜೆ 04:40 ಗಂಟೆಗೆ ಹುಳಿಯಾರು ಬಸ್ ನಿಲ್ದಾಣದ ಸಮೀಪ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಅನ್ಸರ್ ಪಾಷ ಬಿನ್ ಲೇಟ್ ಸಾಧಿಕ್ ಸಾಬ್, 38 ವರ್ಷ, ಮುಸ್ಲೀಂ ಜನಾಂಗ, ಕಡ್ಡಿ ವ್ಯಾಪಾರ, ವಾಸ ವೈ.ಎಸ್. ಪಾಳ್ಯ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು, ಆತನ ಬಳಿ ಇದ್ದ 450/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ ಒಂದು ಮಟ್ಕಾ ಚೀಟಿ , ಒಂದು ಬಾಲ್ ಪೆನ್ ಅನ್ನು ಪಂಚರ ಸಮಕ್ಷಮ ಸಂಜೆ 04:45 ಗಂಟೆಯಿಂದ 05:15 ಗಂಟೆಯವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಆರೋಪಿ ಮತ್ತು ಒಟ್ಟು 450/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ ಒಂದು ಮಟ್ಕಾ ಚೀಟಿ, 1 ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿಯ ವಿರುದ್ಧ  ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 175/2017 ಕಲಂ: 279,337 ಐ.ಪಿ.ಸಿ

ದಿನಾಂಕ: 17/11/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಗುರುಪ್ರಸಾದ್ ಬಿನ್ ಬಸವರಾಜು, 24 ವರ್ಷ, ಲಿಂಗಾಯಿತರು, ಈಡೇನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 14/11/2017 ರಂದು ನನ್ನ ತಂದೆ ಬಸವರಾಜು ರವರು ಕೆ.ಎ-44 ಎಸ್- 1812 ನೇ ಸೂಪರ್ ಎಕ್ಸ್ ಎಲ್ -100 ದ್ವಿಚಕ್ರವಾಹನದಲ್ಲಿ ತಿಪಟೂರು ಮಾರ್ಕೇಟ್ ಗೆ ಕಾಯಿ ವ್ಯಾಪಾರಕ್ಕೆ ಬಂದು ವ್ಯಾಪಾರ ಮುಗಿಸಿಕೊಂಡು ಮಧ್ಯಾಹ್ನ 2-30 ಗಂಟೆಯ ಸಮಯದಲ್ಲಿ ವಾಪಸ್ ಊರಿಗೆ ಹೋಗಲು ಮೇಲ್ಕಂಡ ವಾಹನದಲ್ಲಿ ತಿಪಟೂರು ಕೆರೆಏರಿಯ ಮೇಲಿನ ರಸ್ತೆಯಲ್ಲಿ ಟಿ.ಹೆಚ್.ಎಸ್ ಆಸ್ಪತ್ರೆಯ ಸಮೀಪ ಕೋಡಿ ಸರ್ಕಲ್ ಕಡೆಗೆ ಹೋಗುತ್ತಿರುವಾಗ ಅದೇ ಸಮಯಕ್ಕೆ ಕೋಡಿ ಸರ್ಕಲ್ ಕಡೆಯಿಂದ ಕೆ.ಎ-44 ಆರ್- 1196 ನೇ ಬಜಾಜ್ ಪ್ಲಾಟಿನಾ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಂದೆ ಓಡಿಸಿಕೊಂಡು ನನ್ನ ತಂದೆ ಓಡಿಸುತ್ತಿದ್ದ ಟಿ.ವಿ.ಎಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಂದೆಯ ವಾಹನ ಜಖಂಗೊಂಡು ನನ್ನ ತಂದೆಗೆ ಸೊಂಟಕ್ಕೆ, ಬಲಗೈಗೆ ಹಾಗೂ ಮುಖಕ್ಕೆ ಪೆಟ್ಟಾಗಿದ್ದು ಈ ವಿಷಯವನ್ನು ಸ್ಥಳದಲ್ಲಿ ನೋಡಿದ ಪೃಥ್ವಿ ಬಿನ್ ಮಹೇಶ್ ನನಗೆ ಫೋನ್ ಮಾಡಿ ತಿಳಿಸಿದ್ದು, ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಅಪಘಾತಪಡಿಸಿದ ವಾಹನ ಚಾಲಕ ಅಲ್ಲೇ ಇದ್ದು ಕೆ.ಎ-44 ಆರ್- 1196 ನೇ ಬಜಾಜ್ ಪ್ಲಾಟಿನಾ ದ್ವಿಚಕ್ರ ವಾಹನವಾಗಿದ್ದು, ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನಂತರ ನಮ್ಮ ತಂದೆಯನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು, ಅಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸಗೆ ದಾಖಲು ಮಾಡಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ನನ್ನ  ತಂದೆಗೆ ಅಪಘಾತಪಡಿಸಿರುವ ಮೇಲ್ಕಂಡ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

 Friday, 17 November 2017

Press Note 17-11-17

ಪತ್ರಿಕಾ ಪ್ರಕಟಣೆ

ದಿನಾಂಕ:17-11-2017.

ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ ರೂ ನಗದು ಹಣ ಜಪ್ತು

 

ಕಳೆದ ಒಂದು ವರ್ಷದಿಂದ ತುಮಕೂರು ನಗರದಲ್ಲಿ, ಮಧುಗಿರಿ ಪಟ್ಟಣದಲ್ಲಿ ನಡೆದಿದ್ದ ಬ್ಯಾಂಕು ಮತ್ತು ಎ.ಟಿ.ಎಂ.ಗಳಿಂದ ಹಣ ತೆಗೆದುಕೊಂಡು ಬರುವ ಜನರಿಂದ ಗಮನವನ್ನು ಬೇರೆಡೆಗೆ ಸೆಳೆದು ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ  ಈ ಕೆಳಕಂಡ  03 ಜನ ಅಂತರ ರಾಜ್ಯ ಕಳ್ಳರನ್ನು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ:13-11-2017 ರಂದು ಸಂಜೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಮೊನಂ. 293/2017 ಕಲಂ. 401 ಐ,.ಪಿ.ಸಿ. ಕೇಸಿನಲ್ಲಿ ಬಂಧಿಸಿದ್ದು, ಇವರುಗಳಿಂದ 1] ಹೊಸಬಡಾವಣೆ ಪೊಲೀಸ್ ಠಾಣೆಯ ಮೊ.ನಂ. 23/2016 ಕಲಂ: 420 ಐ.ಪಿ.ಸಿ. 2] ಹೊಸಬಡಾವಣೆ ಪೊಲೀಸ್ ಠಾಣೆಯ ಮೊ.ನಂ. 51/2016 ಕಲಂ: 420 ಐ.ಪಿ.ಸಿ. 3] ಹೊಸಬಡಾವಣೆ ಪೊಲೀಸ್ ಠಾಣೆಯ ಮೊ.ನಂ. 67/2016 ಕಲಂ: 420 ಐ.ಪಿ.ಸಿ. 4] ಹೊಸಬಡಾವಣೆ ಪೊಲೀಸ್ ಠಾಣೆಯ ಮೊ.ನಂ. 131/2017 ಕಲಂ: 420 ಐ.ಪಿ.ಸಿ  5] ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಮೊ.ನಂ. 41/2016 ಕಲಂ: 420 ಐ.ಪಿ.ಸಿ.   6] ತುಮಕೂರು ನಗರ ಪೊಲೀಸ್ ಠಾಣೆಯ ಮೊ.ನಂ. 162/2017 ಕಲಂ: 420 ಐ.ಪಿ.ಸಿ. 7] ಮಧುಗಿರಿ ಪೊಲೀಸ್ ಠಾಣೆಯ ಮೊ.ನಂ. 139/2017 ಕಲಂ: 420 ಐ.ಪಿ.ಸಿ. ಪ್ರಕರಣಗಳಲ್ಲಿ ದೋಚಿದ್ದ ಓಟ್ಟು 8,50,000/- ರೂ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 80 ಸಾವಿರ ರೂ ಬೆಲೆಬಾಳುವ 01 ಯೂನಿಕಾರ್ನ್ ಮೋಟಾರ್ ಬೈಕನ್ನು ವಶಪಡಿಸಿಕೊಳ್ಳಲಾಗಿರುತ್ತೆ.

ಆರೋಪಿಗಳ ಹೆಸರು ವಿಳಾಸ

1] ಎ.ಕಿರಣ್ @ ಕಿರಣ್ ಕುಮಾರ್ ಬಿನ್ ಮುನಿಸ್ವಾಮಿ, 25ವರ್ಷ, ಆಕಲ ಜನಾಂಗ, ಐ.ಟಿ.ಐ. ಎಲೆಕ್ಟ್ರಿಷಿಯನ್ , ಓಜೀಕುಪ್ಪಂ ಗ್ರಾಮ, ಕಾವೇಟಿಪುರಂ ಪೋಸ್ಟ್, ನಗರಿ ಮಂಡಲ್, ನಗರಿ ಪೊಲೀಸ್ ಠಾಣೆ ಸರಹದ್ದು, ಚಿತ್ತೂರು ಜಿಲ್ಲೆ. ಆಂಧ್ರಪ್ರದೇಶ ರಾಜ್ಯ.

2] ಕಣ್ಣನ್ ಬಿನ್ ಮಾರಿಮುತ್ತು, 35ವರ್ಷ, ತೋಟ್ಯಾನಾಯ್ಕರ್ ಜನಾಂಗ, ಲಾರಿ ಕ್ಲೀನರ್ ಕೆಲಸ, ಓಜೀಕುಪ್ಪಂ ಗ್ರಾಮ, ಕಾವೇಟಿಪುರಂ ಪೋಸ್ಟ್, ನಗರಿ ಮಂಡಲ್, ನಗರಿ ಪೊಲೀಸ್ ಠಾಣೆ ಸರಹದ್ದು, ಚಿತ್ತೂರು ಜಿಲ್ಲೆ. ಆಂಧ್ರಪ್ರದೇಶ ರಾಜ್ಯ.

3] ತುಳಸಿ ಬಿನ್ ನಾಗೇಶ್ವರರಾವ್, 25ವರ್ಷ, ಗೋಗುಲ ಜನಾಂಗ, ಆಟೋ ಚಾಲಕ ವೃತ್ತಿ, ಓಜೀಕುಪ್ಪಂ ಗ್ರಾಮ, ಕಾವೇಟಿಪುರಂ ಪೋಸ್ಟ್, ನಗರಿ ಮಂಡಲ್, ನಗರಿ ಪೊಲೀಸ್ ಠಾಣೆ ಸರಹದ್ದು, ಚಿತ್ತೂರು ಜಿಲ್ಲೆ. ಆಂಧ್ರಪ್ರದೇಶ ರಾಜ್ಯ.

ಮೇಲ್ಕಂಡ ಆರೋಪಿಗಳನ್ನು  ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ ವಿ ಗೋಪಿನಾಥ್, ಐ.ಪಿ.ಎಸ್. ರವರ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ|| ಶೋಭಾ ರಾಣಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ , ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಕೆ.ಎಸ್. ನಾಗರಾಜ್, ಕೆ.ಎಸ್.ಪಿ.ಎಸ್. ರವರ ಹಾಗೂ ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀ ಸಿ.ಹೆಚ್. ರಾಮಕೃಷ್ಣಯ್ಯ ರವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಠಾಣೆಯ ಪಿ.ಎಸ್.ಐ. ಶ್ರೀ ಡಿ.ಎಲ್. ರಾಜು ಮತ್ತು ಠಾಣೆಯ ಸಿಬ್ಬಂದಿಯವರುಗಳಾದ ಮೋಹನ್ ಕುಮಾರ್, ಹೆಚ್.ಸಿ. 8, ಕೆ.ರಮೇಶ್ ಪಿ.ಸಿ. 966 ಸೈಯದ್ ರಿಫತ್ ಅಲಿ ಪಿ.ಸಿ. 980 ರವರುಗಳು ಪತ್ತೆಗೆ ಶ್ರಮಿಸಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.


Press Note 17-11-17

ದಿನಾಂಕ.17.11.2017.

ಪತ್ರಿಕಾ ಪ್ರಕಟಣೆ.

ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಇಲ್ಲದ ಹೀರೊಹೊಂಡಾ ಕಂಪನಿಯ ಸ್ಪ್ಲೆಂಡರ್ ವಾಹನ-02, ಟಿವಿಎಸ್ ಕಂಪನಿಯ ಎಕ್ಸೆಲ್ ಹೆವಿಡ್ಯೂಟಿ ವಾಹನ-02, ಯಮಹಾ ಕ್ರಕ್ಸ್ ವಾಹನ-02, ಸುಜುಕಿ ಸಮುರಾಯ್ ವಾಹನ-01, ಟಿವಿಎಸ್ ಕಂಪನಿಯ ಮ್ಯಾಕ್ಸ್-02, ಬಜಾಜ್ ಕಂಪನಿಯ ಸುಜುಕಿ - 01 ಮತ್ತು ಬಜಾಜ್ ಕಂಪನಿಯ ಸಿಟಿ. 100 ವಾಹನ-01 ಒಟ್ಟು 11 ಮೋಟಾರ್ ಸೈಕಲ್ ಗಳನ್ನು  ಅಮಾನತ್ತುಪಡಿಸಿಕೊಳ್ಳಲಾಗಿದೆ. ಈ ವಾಹನಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಸಂರ್ಪಕಿಸಬಹುದಾಗಿರುತ್ತದೆ. ವಾರಸುದಾರರು ಯಾರೂ ಬಾರದೇ ಇದ್ದಲ್ಲಿ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು

ಜಿಲ್ಲಾ ಪೊಲೀಸ್ ಕಛೇರಿ

ತುಮಕೂರು ಜಿಲ್ಲೆ, ತುಮಕೂರು


Crime Incidents 17-11-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 141/2017, ಕಲಂ 78 (3) ಕೆ.ಪಿ ಆಕ್ಟ್.

ದಿನಾಂಕ 16/11/2017 ರಂದು ಸಂಜೆ 04-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:16/11/2017 ರಂದು ಮಧ್ಯಾಹ್ನ 02:00 ಗಂಟೆ ಸಮಯದಲ್ಲಿ ನಾನು  ಠಾಣೆಯಲ್ಲಿದ್ದಾಗ ಹುಳಿಯಾರು ಟೌನ್ ನಲ್ಲಿ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತಾ ಖಚಿತ ವರ್ತಮಾನ ಬಂದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಸಿಬ್ಬಂದಿ ಮತ್ತು ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಮದ್ಯಾಹ್ನ 02:30 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಸಮೀಪ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಆಸ್ಪತ್ರೆಯ ಕಾಂಪೌಂಡ್ ಕಡೆ ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠದ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಮಹಮ್ಮದ್ ಫಿರಾಖಾನ್  ಬಿನ್ ಲೇಟ್ ಡ್ರೈವರ್ ರಹೀಂ ಸಾಬ್, 48 ವರ್ಷ, ಮುಸ್ಲೀಂ ಜನಾಂಗ, ವ್ಯಾಪಾರ, ಆಸ್ಪತ್ರೆ ಬೀದಿ, ಹುಳಿಯಾರು ಟೌನ್ ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಆತನ ಬಳಿ ಇದ್ದ 800/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿಗಳು , ಒಂದು ಬಾಲ್ ಪೆನ್ ಅನ್ನು ವಶಕ್ಕೆ ಪಡೆದು ಆರೋಪಿತನನ್ನು ವಿಚಾರ ಮಾಡಲಾಗಿ ಆರೋಪಿ ಮಹಮ್ಮದ್ ಫಿರಾಖಾನ್ ರವರು ಪ್ರತಿದಿನ ಮಟ್ಕಾ ನಂಬರ್ ಬರೆದಿರುವ ಪಟ್ಟಿಯನ್ನು ಮತ್ತು ಹಣವನ್ನು ಹುಳಿಯಾರು ಟೌನ್ ಇಂದಿರಾನಗರದ ವಾಸಿ ಪ್ರೂಟ್ ನಯಾಜ್ ರವರಿಗೆ ಹುಳಿಯಾರು ಟೌನ್ ನಲ್ಲಿರುವ ಬಾಲಾಜಿ ಟಾಕೀಸ್ ಬಳಿ ನೀಡಿ ಅವರಿಂದ 100 ರೂಗಳಿಗೆ 15 ರೂಪಾಯಿಯಂತೆ ಕಮಿಷನ್ ಪಡೆಯುತ್ತಿದ್ದೆನು ಎಂತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರ ಮೇರೆಗೆ ಪಂಚರ ಸಮಕ್ಷಮ ಮದ್ಯಾಹ್ನ 02:45 ಗಂಟೆಯಿಂದ 03:45 ಗಂಟೆಯವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಆರೋಪಿ ಮಹಮದ್ ಫಿರಾಕ್ ಮತ್ತು ಒಟ್ಟು 800/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ ಎರಡು ಮಟ್ಕಾ ಚೀಟಿ, 1 ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿ ಮಹಮದ್ ಫಿರಾಖಾನ್ ಮತ್ತು ಮಟ್ಕಾ ಚೀಟಿಯ ಪಟ್ಟಿಯನ್ನು ಪಡೆಯುತ್ತಿರುವ ಫ್ರೂಟ್ ನಯಾಜ್ ರವರ ವಿರುದ್ಧ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-205/2017 ಕಲಂ 379 ಐ,ಪಿ,ಸಿ.

ದಿನಾಂಕ:16-11-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ಮಹಲಿಂಗಪ್ಪ, ಸಬ್‌ ಡಿವಿಜನಲ್‌ ಇಂಜಿನಿಯರ್‌(ಗ್ರಾಮಾಂತರ), ಬಿ,ಎಸ್,ಎನ್‌,ಎಲ್‌, ತುಮಕೂರು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ಮಸ್ಕಲ್‌ ಗ್ರಾಮದ ಶ್ರೀ ಗಂಗರಾಜು ಬಿನ್ ಸಿದ್ದಗಂಗಯ್ಯ ರವರ ಜಮೀನಿನಲ್ಲಿರುವ ಬಿ,ಎಸ್,ಎನ್,ಎಲ್‌ ಗೆ ಸೇರಿದ ಮೊಬೈಲ್ ಟವರ್‌ ಅನ್ನು ಬಿ,ಕೆ,ಬೆಳವಾಡಿ ಏಜೆನ್ಸಿ, ಹುಬ್ಬಳ್ಳಿ ರವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಸದರಿ ಟವರ್ ಅನ್ನು ಬಿ,ಕೆ,ಬೆಳವಾಡಿ ಏಜೆನ್ಸಿ ಕಡೆಯಿಂದ ವಾಚ್‌ & ವಾರ್ಡ್ ಆಗಿ ಶ್ರೀ ಗಂಗರಾಜು ಬಿನ್ ಸಿದ್ದಗಂಗಯ್ಯ ರವರು ಕೆಲಸ ಮಾಡುತ್ತಿದ್ದರು. ದಿನಾಂಕ:02-11-2017 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ವಾಚ್‌ ಮತ್ತು ವಾರ್ಡ್ ಆದ ಶ್ರೀ ಗಂಗರಾಜು ಬಿನ್ ಸಿದ್ದಗಂಗಯ್ಯ ರವರು ನನಗೆ ಪೋನ್ ಮಾಡಿ ಇದೇ ದಿವಸ ಯಾರೋ ಆಸಾಮಿಗಳು ನಮ್ಮ ಟವರ್ ನಲ್ಲಿರುವ ಇಂಜಿನ್‌ ನ ಆಲ್ಟ್ರನೇಟರ್‌, ಸ್ಟಾರ್ಟರ್‌ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಳ್ಳತನವಾಗಿರುವುದು ನಿಜವಾಗಿತ್ತು. ನಂತರ ನಾನು ಸದರಿ ಟವರ್‌ ಅನ್ನು ನೋಡಿಕೊಳ್ಳುತ್ತಿದ್ದ ಬಿ,ಕೆ ಬೆಳವಾಡಿ ಏಜೆನ್ಸಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸದರಿ ಏಜೆನ್ಸಿಯ ಅಧಿಕಾರಿಗಳು ಗಂಗರಾಜು ಬಿನ್ ಸಿದ್ದಗಂಗಯ್ಯ ರವರನ್ನು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿನ ಗ್ರಾಮಸ್ಥರುಗಳನ್ನು ಸದರಿ ಆಲ್ಟ್ರನೇಟರ್‌, ಸ್ಟಾರ್ಟರ್‌ ಹಾಗೂ ಬ್ಯಾಟರಿಗಳ ಬಗ್ಗೆ ವಿಚಾರ ಮಾಡಲು ಸಮಯಾವಕಾಶವನ್ನು ತೆಗೆದುಕೊಂಡಿದ್ದು, ಎಲ್ಲಿಯೂ ಸಿಗಲಿಲ್ಲವೆಂತಾ ಬಿ,ಕೆ,ಬೆಳವಾಡಿ ಏಜೆನ್ಸಿಯವರು ತಿಳಿಸಿದ್ದರಿಂದ ನಾನು ಈ ದಿವಸ ತಡವಾಗಿ ಬಂದು ಸದರಿ ಮೇಲ್ಕಂಡ ಆಲ್ಟ್ರನೇಟರ್‌, ಸ್ಟಾರ್ಟರ್‌ ಹಾಗೂ ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಆಸಾಮಿಯನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-205/2017 ಕಲಂ 379 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 226/2017 ಕಲಂ: 379 ಐಪಿಸಿ ರೆ/ವಿ 21(1) ಎಂ.ಎಂ.ಆರ್.ಡಿ ಆಕ್ಟ್-1957 ರೆ/ವಿ 44(1) ಕೆ.ಎಂ.ಎಂ.ಸಿ.ಆರ್-1994

ದಿನಾಂಕ:16-11-2017 ರಂದು ಬೆಳಿಗ್ಗೆ 9-30 ಗಂಟೆಗೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಎ.ಎಸ್‌.ಐ ಸಾಹೇಬರಾದ ಶ್ರೀ ಹೆಚ್‌‌‌.ಶ್ರೀನಿವಾಸ್‌‌  ರವರು ಠಾಣಾ ಸಿಬ್ಬಂದಿಯಾದ ಶರತ್ ಪಿಸಿ-479 ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ:16-11-2017 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ  ಎಎಸ್‌‌ಐ ಸಾಹೇಬರು ಹುಲಿಯೂರುದುರ್ಗ ಪೊಲೀಸ್‌‌ ಠಾಣೆಯಲ್ಲಿರುವಾಗ ಅವರಿಗೆ ಬಂದ ಮಾಹಿತಿ ಏನೆಂದರೆ ಹುಲಿಯೂರುದುರ್ಗ ಪೊಲೀಸ್ ಠಾಣಾ ಸರಹದ್ದು ಹುಲಿಯೂರುದುರ್ಗ ಹೋಬಳಿ ಆರ್‌.ಬ್ಯಾಡರಹಳ್ಳಿ  ಗ್ರಾಮದ ಬಳಿಯಿರುವ  ಸರ್ಕಾರಿ ಕೆರೆ  ಅಂಗಳದಲ್ಲಿ ಯಾರೋ ಆಸಾಮಿಗಳು ಸರ್ಕಾರದಿಂದ ಯಾವುದೇ ಪರವಾನಗಿಯನ್ನು  ಪಡೆಯದೇ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಕೆರೆಯ ಅಂಗಳದಲ್ಲಿ ಟ್ರಾಕ್ಟರ್‌ ಮತ್ತು ಟ್ರೈಲರ್‌‌ ನಿಲ್ಲಿಸಿಕೊಂಡು  ಕಳ್ಳತನದಿಂದ ಮರಳನ್ನು ತೆಗೆದು ಟ್ರಾಕ್ಟರ್‌ಗೆ ತುಂಬಿಕೊಂಡು ಸಾಗಾಣೆ ಕೆಲಸದಲ್ಲಿ ತೊಡಗಿರುತ್ತಾರೆಂದು ಮಾಹಿತಿ ಬಂದಿದ್ದು ಅಕ್ರಮ ಮರಳು ಸಾಗಾಣೆಯಲ್ಲಿ ತೊಡಗಿರುವವರ ವಿರುದ್ದ  ಕಾನೂನು ರೀತ್ಯ ಕ್ರಮ ಜರುಗಿಸುವ ಸಲುವಾಗಿ ಠಾಣೆಗೆ ಪಂಚಾಯ್ತುದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ,  ಠಾಣಾ ಸಿಬ್ಬಂದಿಯವರಾದ ಪಿಸಿ-426 ರಂಗಸ್ವಾಮಿ, ಪಿಸಿ-479 ಶರತ್‌  ರವರೊಂದಿಗೆ  ಇಲಾಖಾ ಜೀಪ್‌ ನಂಬರ್‌ ಕೆಎ-06-ಜಿ-352  ನಲ್ಲಿ ಬೆಳಿಗ್ಗೆ 7-45 ಗಂಟೆಗೆ ಠಾಣೆಯಿಂದ ಹೊರಟು ಆರ್‌.ಬ್ಯಾಡರಹಳ್ಳಿ ಗ್ರಾಮದ ಹತ್ತಿರವಿರುವ ಸರ್ಕಾರಿ ಕೆರೆಯ ಹತ್ತಿರಕ್ಕೆ ಬೆಳಿಗ್ಗೆ 8-05 ಗಂಟೆಗೆ  ಹೋಗಿ ರಸ್ತೆಯ ಬದಿಯ ಮರೆಯಲ್ಲಿ ಜೀಪ್‌ ನಿಲ್ಲಿಸಿ  ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಸರ್ಕಾರಿ ಕೆರೆಯ  ಅಂಗಳದಲ್ಲಿ ಒಂದು ಟ್ರಾಕ್ಟರ್‌, ಟ್ರೈಲರ್‌‌ ನಿಂತಿದ್ದು ಸದರಿ ಟ್ರಾಕ್ಟರ್‌ ಟ್ರೈಲರ್‌‌ಗೆ  ಕೂಲಿ ಆಳುಗಳಿಂದ ಮರಳನ್ನು ತುಂಬುತ್ತಿರುವುದು ಕಂಡು ಬಂತು. ಕೂಡಲೇ ನಾನು ಮತ್ತು ನಮ್ಮ ಸಿಬ್ಬಂದಿಯವರು ಸೇರಿಕೊಂಡು ಮರಳು ತುಂಬುತ್ತಿದ್ದವರನ್ನು ಹಿಡಿಯಲು ಅವರನ್ನು ಸುತ್ತುವರೆದು ಹೋಗುವಷ್ಟರಲ್ಲಿ ಮರಳು ತುಂಬುತ್ತಿದ್ದವರು ಸಮವಸ್ತ್ರದಲ್ಲಿ ಪೊಲೀಸ್‌‌ರನ್ನು ನೋಡಿ ಅಲ್ಲಿಂದ ಅವರುಗಳು ತಪ್ಪಿಸಿಕೊಂಡು  ಓಡಲು ಪ್ರಯತ್ನ ಪಟ್ಟರು. ಆಗ ನಮ್ಮ ಸಿಬ್ಬಂದಿಯವರುಗಳು ಅವರನ್ನು ಹಿಡಿಯಲು ಪ್ರಯತ್ನ ಪಟ್ಟರು ಸಹ ಅವರುಗಳು ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ನಂತರ ಮರಳು ತುಂಬುತ್ತಿದ್ದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗಿ ಸ್ಥಳದಲ್ಲಿ ಒಂದು ಟ್ರಾಕ್ಟರ್‌,ಟ್ರೈಲರ್‌ ನಿಂತಿದ್ದು ಟ್ರಾಕ್ಟರ್‌‌ನ ಟ್ರೈಲರ್‌‌ನಲ್ಲಿ ಬಾಡಿ ಮಟ್ಟಕ್ಕೆ ಮರಳನ್ನು ತುಂಬಿರುತ್ತೆ. ಟ್ರಾಕ್ಟರ್‌‌  Mahindra. 475 DI ಕಂಪನಿಯದಾಗಿರುತ್ತೆ. ಟ್ರಾಕ್ಟರ್‌‌ ಮತ್ತು ಟ್ರೈಲರ್‌‌‌ಗೆ  ನೋಂದಾಣಿ ನಂಬರ್‌‌ ಇರುವುದಿಲ್ಲ. ಟ್ರಾಕ್ಟರ್‌‌ ಇಂಜಿನ್‌ ನಂಬರ್‌‌ SD20661 ಆಗಿರುತ್ತೆ.  ಮರಳು ತುಂಬಲು ಉಪಯೋಗಿಸಿದ್ದ  ಒಂದು ಗುದ್ದಲಿ, 2 ಪ್ಲಾಸ್ಟಿಕ್‌‌ ಬಾಂಡ್ಲಿಗಳು ಸ್ಥಳದಲ್ಲಿ ಇರುತ್ತವೆ. ಸ್ಥಳದಲ್ಲಿರುವ ಟ್ರಾಕ್ಟರ್‌, ಟ್ರೈಲರ್‌‌ ನ ಮಾಲೀಕ ಮತ್ತು ಚಾಲಕನು ಸೇರಿಕೊಂಡು ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಕಳ್ಳತನದಿಂದ ಮರಳನ್ನು ತೆಗೆದು  ಸಾಗಾಣೆಯಲ್ಲಿ ತೊಡಗಿರುತ್ತಾರೆ. ಆದ್ದರಿಂದ ಈ ಮೇಲ್ಕಂಡ ಟ್ರಾಕ್ಟರ್‌‌ನ ಮಾಲೀಕ ಮತ್ತು ಚಾಲಕನ  ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿ ಕಳುಹಿಸಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

 Thursday, 16 November 2017

Press Note 16-11-17

ಪತ್ರಿಕಾ ಪ್ರಕಟಣೆ.

ದಿನಾಂಕ:16-11-2017

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017 ಕಲಂ-399. 402 ಐ.ಪಿ.ಸಿ

@@@

ದಿನಾಂಕ:05-11-2017 ರಂದು ರಾತ್ರಿ ಸುಮಾರು 01-30 ಗಂಟೆ ಸಮಯದಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಊರುಕೆರೆ ಬಳಿ ಎನ್.ಹೆಚ್-48 ರಸ್ತೆಯಲ್ಲಿ ಲಾರಿ ಚಾಲಕರುಗಳು, ರಸ್ತೆಯ ಬದಿ ನಿಲ್ಲಿಸಿಕೊಂಡು ವಿಶ್ರಾಂತಿ ಮಾಡುವ ಸಂದರ್ಭ ಅವರುಗಳಿಗೆ ಬೆದರಿಸಿ ಹಣ ಮೊಬೈಲ್ ಇತ್ಯಾದಿಗಳನ್ನು ದೋಚುವ ಉದ್ದೇಶದಿಂದ ಆರೋಪಿಗಳ ತಂಡವೊಂದು ಹೊಂಚು ಹಾಕಿರುವ ಮಾಹಿತಿಯನ್ನು ತಿಳಿದು ಸಿ.ಪಿ.ಐ ತುಮಕೂರು ಗ್ರಾಮಾಂತರ ವೃತ್ತ ರವರು, ಪಿ.ಎಸ್.ಐ ರವರುಗಳಾದ ಶ್ರೀ ಯೋಗಾನಂದ ಸೋನಾರ್‌, ಶ್ರೀ ರವಿಕುಮಾರ್, ಹಾಗೂ ಕೋರ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗಳ ಹಾಗೂ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿಯವರುಗಳು ಹಾಗೂ ಪಂಚರ ಸಹಿತ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸುತ್ತಿದ್ದಂತೆ ಆರೋಪಿಗಳ ತಂಡವೊಂದು 2 ಮೋಟಾರ್ ಸೈಕಲ್‌ಗಳಲ್ಲಿ ಇದ್ದು ಎನ್.ಹೆಚ್-48 ರಸ್ತೆಯಲ್ಲಿ ಲಾರಿಯನ್ನು ನಿಲ್ಲಿಸಿಕೊಂಡು ಮಲಗಿದ್ದ ಚಾಲಕರುಗಳಿಂದ ಹಣ ಮತ್ತು ಮೊಬೈಲ್‌ಗಳನ್ನು ದೋಚಿಕೊಂಡು ಹೋಗೋಣವೆಂದು ಮಾತನಾಡಿಕೊಂಡು ಚಿಲ್ಲಿ ಪೌಡರ್ ಮತ್ತು ಮಾರಾಕಾಸ್ತ್ರಗಳೊಂದಿಗೆ ಸಜ್ಜಾಗಿದ್ದ ಆರೋಪಿಗಳ ತಂಡವನ್ನು ಸುತ್ತುವರೆದು ಹಿಡಿದು ವಿಚಾರಿಸಿದಾಗ 1) ಮಲ್ಲಪ್ಪ ಶಂಕರ ಘಾಟಗೆ @ ಮಲ್ಲಪ್ಪ @ ಮಧು @ ಡ್ಯಾನ್ಸ್‌ ಮಧು, 24 ವರ್ಷ 2) ಕಿರಣ್‌ಕುಮಾರ್ @ ಕಿರಣ್, 23 ವರ್ಷ, 3) ಸಂತೋಷ @ ಸಂತು, 23 ವರ್ಷ, 4) ಲೋಕೇಶ @ ಲೋಕಿ, 23 ವರ್ಷ, 5) ರಂಗಸ್ವಾಮಿ @ ಸ್ವಾಮಿ, 23 ವರ್ಷ, 6) ಚೇತನ @ ಚೇತು, 19 ವರ್ಷ, 7) ಭರತ್‌ @ ಕುಟ್ಟಿ, 19 ವರ್ಷ, 8) ಚನ್ನಕೇಶವಮೂರ್ತಿ, 39 ವರ್ಷ, ಈ ಎಲ್ಲಾ ಆರೋಪಿತರು ನೆಲಗೆದರಹಳ್ಳಿ ವಾಸಿ 8 ನೇ ಆರೋಪಿಯು ತನ್ನ   ಮನೆಯೊಂದರಲ್ಲಿ ಇಟ್ಟುಕೊಂಡು ತುಮಕೂರು ಜಾಸ್ ಟೋಲ್‌ ಗೇಟ್‌ನಿಂದ ಚಿತ್ರದುರ್ಗ, ಹಿರಿಯೂರು ವರೆಗಿನ ರಸ್ತೆಯಲ್ಲಿ ಸಂಚರಿಸುವ ಲಾರಿ ಚಾಲಕರಿಂದ ಹಣ ಮತ್ತು ಮೊಬೈಲ್‌ಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇವರುಗಳ ಮೇಲೆ ಈಗಾಗಲೇ ಬ್ಯಾಟರಾಯನಪುರ, ಸದಾಶಿವನಗರ, ಕೆಂಗೇರಿ, ಯಶವಂತಪುರ, ಆರ್.ಎಂ.ಸಿ ಯಾರ್ಡ್, ನೆಲಮಂಗಳ, ವಿಜಯಪುರ, ಪೊಲೀಸ್ ಠಾಣೆಗಳಲ್ಲಿ ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಿರುವ ಮೋಟಾರ್ ವಾಹನಗಳ ಕಳವು ಸೇರಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತವೆ. ಜೊತೆಗೆ ತುಮಕೂರು ನಗರ, ಬೆಂಗಳೂರು ವಿಜಯಪುರ, ಮತ್ತು ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ  ಒಂದೊಂದು ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿದವುಗಳೆಂದು ಸ್ವ-ಚ್ಚಾ ಹೇಳಿಕೆಗಳನ್ನು ನೀಡಿ, ತಮ್ಮ ವಶದಲ್ಲಿದ್ದ 03 ಮೋಟಾರ್ ಸೈಕಲ್‌ಗಳು, 9 ಮೊಬೈಲ್ ಪೋನ್ ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ 02 ಚಾಕುಗಳನ್ನು ಹಾಜರುಪಡಿಸಿದವುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಇದೇ ಆರೋಪಿಗಳು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ, ನಂ 254/2017 ಕಲಂ 394 ಐ.ಪಿ.ಸಿ ಕೇಸಿನಲ್ಲಿ ಸಹಾ ಭಾಗಿಯಾಗಿರುತ್ತಾರೆ.

ಆರೋಪಿಗಳನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ವರಿಷ್ಠಾದಿಕಾರಿಯವರಾದ ಡಾ|| ದಿವ್ಯಾ ಪಿ.ಗೋಪಿನಾಥ್. ಐ.ಪಿ.ಎಸ್ ಮತ್ತು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ|| ಶೋಭರಾಣಿ ಹಾಗೂ ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ.ಕೆ.ಎಸ್.ನಾಗರಾಜು ರವರ ಮಾರ್ಗದರ್ಶನದಂತೆ ಸಿ.ಪಿ.ಐ ತುಮಕೂರು ಗ್ರಾಮಾಂತರ ವೃತ್ತದ ಶ್ರೀ ಎ.ಕೆ.ತಿಮ್ಮಯ್ಯ ಮತ್ತು ಮೇಲ್ಕಂಡ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಯಶಸ್ವಿಗೊಳಿಸಿರುತ್ತಾರೆ.


Crime Incidents 16-11-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 140/2017, ಕಲಂ 87 ಕೆ.ಪಿ ಆಕ್ಟ್.

ದಿನಾಂಕ 16/11/2017 ರಂದು 00-05 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:-15-11-2017 ರಂದು ರಾತ್ರಿ 10.30   ಗಂಟೆಗೆ ನಾನು ಹುಳಿಯಾರು ಟೌನಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ, ಯರೇಹಳ್ಳಿ ಗ್ರಾಮದಲ್ಲಿರುವ ಕೆಂಪಮ್ಮ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ  ಮೇಲೆ   ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ರಾತ್ರಿ 10.45 ಗಂಟೆಗೆ ಹುಳಿಯಾರು ಹೋಬಳಿ, ಯರೇಹಳ್ಳಿ ಗ್ರಾಮದ ಸಮೀಪ ಸ್ವಲ್ಪ ದೂರದಲ್ಲಿ ಬೇಲಿಯ ಮರೆಯಲ್ಲಿ  ಜೀಪನ್ನು ನಿಲ್ಲಿಸಿ ನೋಡಲಾಗಿ ಯರೇಹಳ್ಳಿ ಗ್ರಾಮದಲ್ಲಿರುವ ಕೆಂಪಮ್ಮ ದೇವಸ್ಥಾನದ ಮುಂಭಾಗ ಇರುವ ಬೀದಿ ದೀಪದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 3 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಆಸಾಮಿಗಳನ್ನು ಹಿಡಿದು  ಇವರ ಹೆಸರು ವಿಳಾಸವನ್ನು ವಿಚಾರಿಸಲಾಗಿ 1) ಶಿವಣ್ಣ ಬಿನ್ ಕ್ಷೇತ್ರಪಾಲಯ್ಯ, 45 ವರ್ಷ, ವ್ಯವಸಾಯ, ಉಪ್ಪಾರರು, ಯರೇಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 180/- ರೂ ನಗದು ಹಣ ಇರುತ್ತೆ 2)ಮಲ್ಲೇಶ ಬಿನ್ ಹನುಮಂತಪ್ಪ 35 ವರ್ಷ, ವ್ಯವಸಾಯ, ಸರ್ಪ ವಕ್ಕಲಿಗರು, ದೊಡ್ಡಕಿಟ್ಟದಾಳು, ಮಾಡದಕೆರೆ ಹೋಬಳಿ, ಹೊಸದುರ್ಗ  ತಾಲ್ಲೂಕು, ಚಿತ್ರದುರ್ಗ ಜಿಲ್ಲೆ,  ಎಂತ ತಿಳಿಸಿದ್ದು ಈತನ ಮುಂಭಾಗ 120/- ರೂ ನಗದು ಹಣ ಇರುತ್ತೆ. 3) ನಿಂಗರಾಜು ಬಿನ್ ರಾಮೋಜಿರಾವ್, 28 ವರ್ಷ, ಪೇಯಿಂಟ್ ಕೆಲಸ, ಮರಾಠಿ ಜನಾಂಗ, ಯರೇಹಳ್ಳಿ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು  ಈತನ ಮುಂಭಾಗ 220/- ರೂ ನಗದು ಹಣ ಇರುತ್ತೆ.  ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 520/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ರಾತ್ರಿ 11.00 ಗಂಟೆಯಿಂದ ರಾತ್ರಿ 11.45 ಗಂಟೆಯವರೆಗೆ ವಿದ್ಯುತ್ ದೀಪದ ಕೆಳಗೆ  ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ CR :209/2017 u/s 279,337 IPC

ಈ ಪಿರ್ಯಾದಿ ಸುಬ್ಬಮ್ಮ ಕೋಂ ಗೋವಿಂದನಾಯ್ಕ, 31 ವರ್ಷ, ಕೂಲಿಕೆಲಸ, ತಿಪ್ಪಾಪುರ ತಾಂಡ್ಯ, ಐ.ಡಿ ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡ ಗೋವಿಂದನಾಯ್ಕ ರವರು ಅಡುಗೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ: 05-11-2017 ರಂದು ಬೆಳಿಗ್ಗೆ 05.00 ಗಂಟೆಗೆ KA-06-AA-0292 ನೇ ಟಾಟಾ ಎ.ಸಿ ವಾಹನದಲ್ಲಿ ತಿಪ್ಪಾಪುರ ಗ್ರಾಮದಿಂದ ಮಧುಗಿರಿಗೆ ಬರುತ್ತಿದ್ದಾಗ, ಮಧುಗಿರಿ ತಾಲ್ಲೂಕು, ತವಕದಹಳ್ಳಿ ಗ್ರಾಮದ ಟರ್ನಿಂಗ್ ನಲ್ಲಿ ಟಾಟಾ ಎ.ಸಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿದ್ದರಿಂದ ಚಾಲಕನು ವಾಹನದ ನಿಯಂತ್ರಣ ತಪ್ಪಿ, ಟಾಟಾ ಎ.ಸಿ ಪಲ್ಟಿ ಹೊಡೆದ ಪರಿಣಾಮ ವಾಹನದ ಮುಂದೆ ಕುಳಿತು ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಗಂಡ ಗೋವಿಂದನಾಯ್ಕ ರವರ ಎಡಕೈ ಬೆರಳುಗಳಿಗೆ ಹಾಗೂ ಇದೇ ವಾಹನದಲ್ಲಿ  ಪ್ರಯಾಣಿಸುತ್ತಿದ್ದ ಇತರರಿಗೂ ಸಹ ಗಾಯಗಳಾಗಿರುತ್ತದೆ. ಟಾಟಾ ಎ.ಸಿ ವಾಹನದ ಚಾಲಕ ಹಾಗೂ ಕೆಲವರು ಗಾಯಾಳುವನ್ನು ಯಾವುದೋ ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುತ್ತಾರೆ. ಪಿರ್ಯಾದಿಯ ಗಂಡ ಗೋವಿಂದನಾಯ್ಕ ರವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಪಿರ್ಯಾದಿಯು ಗಾಯಾಳುವನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತ ಮಾಡಿದ KA-06-AA-0292 ನೇ ಟಾಟಾ ಎ.ಸಿ ವಾಹನ ಹಾಗೂ ಚಾಲಕನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 174/2017 ಕಲಂ: 420 ಐ.ಪಿ.ಸಿ

ದಿನಾಂಕ : 15/11/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಭವಾನಿ ಕೋಂ ಲೇಟ್ ಗಂಗರಾಜು 3ನೇ ಕ್ರಾಸ್, ಭೋವಿ ಕಾಲೋನಿ, ಗಾಂಧಿನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ, ದಿನಾಂಕ; 02/11/2017 ರಂದು ಮಧ್ಯಾಹ್ನ 2-15 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಇರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನಮ್ಮ ಮನೆಯ ಹತ್ತಿರ ಬಂದು ನಿಮ್ಮ ತಾಯಿ ತುಂಬಾ ಚಿರಪರಿಚಿತರಿದ್ದಾರೆ, ನನ್ನ ಮೊಮ್ಮೊಗನಿಗೆ ಕೆಲಸ ಕೊಡಿಸಿ ಎಂದು ಕೇಳಿದ್ದರು. ಅದಕ್ಕೆ ನಾನು ಮನೆಯ ಹತ್ತಿರ ಬಂದೆ ಎಂತ ನನ್ನನ್ನು ಪರಿಚಯ ಮಾಡಿಕೊಂಡರು. ಈ ವೇಳೆಯಲ್ಲಿ ನಮ್ಮ ಅಮ್ಮ ಮನೆಯಲ್ಲಿ ಇರಲಿಲ್ಲ. ನಾನು ನೀವು ಯಾರೋ ನನಗೆ ಗೊತ್ತಿಲ್ಲ ಅಮ್ಮ ಬಂದ ಮೇಲೆ ಬನ್ನಿ ಎಂದು ತಿಳಿಸಿದೆ. ಅವರು ನಂಬಿಕೆ ಇಲ್ಲದಿದ್ದರೆ ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ ಎಂದು ನಂ- 9513811492 ಅನ್ನು ನೀಡಿದರು. ನಾನು ರೈಲ್ವೇ ಇಲಾಖೆಯಲ್ಲಿ ಮಾತನಾಡಿಕೊಂಡು ಬಂದಿದ್ದೇನೆ, ಅವರಿಗೆ 15.000/- ರೂ, ಹುಡುಗನ ಆಧಾರ್ ಕಾರ್ಡ್ ಮತ್ತು ನಾಲ್ಕು ಫೋಟೋ   ಕೊಟ್ಟರೆ ಕೆಲಸ ಕೊಡುತ್ತಾರೆಂತ ನನ್ನನ್ನು ನಂಬಿಸಿದರು. ನನ್ನ ಬಳಿ ಹಣ ಇಲ್ಲವೆಂದು ಹೇಳಿದ್ದಕ್ಕೆ ತಡ ಮಾಡಿದರೆ ಕೆಲಸ ಸಿಗುವುದಿಲ್ಲ. ನೀವು ದುಡ್ಡು ಇಲ್ಲದಿದ್ದರೆ, ನಿಮ್ಮ ಬಳಿ ಇರುವ ಮಾಂಗಲ್ಯ ಸರವನ್ನು ಕೊಟ್ಟರೆ ಅದನ್ನು ಅಡವಿಟ್ಟು ಹಣಪಡೆದು ರೈಲ್ವೇ ಇಲಾಖೆಗೆ ಕೊಟ್ಟರೆ ಕೆಲಸ ಕೊಡುತ್ತಾರೆ ಎಂದು ಹೇಳಿದರು. ನಾನು ಆ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ನನ್ನ ಕೊರಳಿನಲ್ಲಿದ್ದ ಸುಮಾರು 25 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ನಾನೇ ಬಿಚ್ಚಿ ಕೊಟ್ಟೆನು. ನಂತರ ಆ ವ್ಯಕ್ತಿ ಇದುವರೆವಿಗೂ ಸಹ ನನಗೆ ಫೊನ್ ಮಾಡುವುದಾಗಲೀ, ನನ್ನ ಮಗನಿಗೆ ಕೆಲಸವನ್ನಾಗಲೀ ಹಾಗೂ ಮನೆಗೆ ಬಳಿ ಬರುವುದಗಲೀ ಇಲ್ಲಿಯವರೆಗೆ ಮಾಡಿರುವುದಿಲ್ಲ. ನಾನು ಅನುಮಾನಗೊಂಡು ನನ್ನ ತಾಯಿಯನ್ನು ವಿಚಾರಿಸಲಾಗಿ ನನಗೆ ಆ ವ್ಯಕ್ತಿ ಗೊತ್ತಿಲ್ಲವೆಂದು ತಿಳಿಸಿದರು. ನಾನು ಗಾಬರಿಗೊಂಡು ಇಲ್ಲಿಯವೆರೆಗೂ ಆ ವ್ಯಕ್ತಿಯ ಬಗ್ಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗದ ಕಾರಣ ನನಗೆ ಮೋಸ ಮಾಡಿ ನನ್ನ ವಡವೆಯನ್ನು ಬಿಚ್ಚಿಸಿಕೊಂಡು ಹೋಗಿರುವ ಆ ಅಪರಿಚಿತ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 16/2017 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ : 15/11/2017 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿ ಆಸಿಯಾಭೀ ಕೋಂ ಲೇಟ್ ಜಬ್ಬರ್ ಸಾಬ್  70 ವರ್ಷ, ಮುಸ್ಲಿಂ ಜನಾಂಗ, 6ನೇ ಕ್ರಾಸ್, ಭೋವಿ ಕಾಲೋನಿ, ಗಾಂಧಿನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ, ನನಗೆ 5 ಜನ ಗಂಡು ಮಕ್ಕಳು ಹಾಗು 3 ಜನ ಹೆಣ್ಣು ಮಕ್ಕಳು ಇದ್ದು, ಎಲ್ಲಾ ಮಕ್ಕಳಿಗೆ ಮದುವೆಯಾಗಿರುತ್ತದೆ. ನನ್ನ ಕೊನೆಯ ಮಗಳು ಶಮಭಾನು (28 ವರ್ಷ) ವನ್ನು 8 ವರ್ಷಗಳ ಹಿಂದೆ ಇದೇ ಗಾಂಧಿನಗರದ ವಾಸಿ ಮೋಸಿನ್ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಅವರಿಗೆ ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗು ಇದ್ದು, ಇವರು ಭೋವಿ ಕಾಲೋನಿಯ 11 ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಈ ದಿನ ದಿನಾಂಕ: 15/11/2017 ರಂದು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ನಾನು ನನ್ನ ಮಗಳ ಮನೆಯ ಹತ್ತಿರ ಹೋಗಿದ್ದು ಅಳಿಯ ಹಾಗೂ ಮಗಳು ಇದ್ದರು. ನಂತರ ನಾನು ವಾಪಸ್ ಮನೆಗೆ ಬಂದೆನು.  ಇದಾದ ಒಂದು ಗಂಟೆಯ ನಂತರ ನನ್ನ ಅಳಿಯ ಮೋಸಿನ್ ನಮ್ಮ ಮನೆಯ ಬಳಿ ಬಂದು ಬೆಳಿಗ್ಗೆ ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ  ಹೊರಗಡೆ ಹೋಗಿದ್ದವನು ಮನೆಗೆ ಬಂದು ನೊಡಿದೆ. ನನ್ನ ಹೆಂಡತಿಯಾದ ಶಮಭಾನು ಬಾತ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಕೂಗಿದರೂ ಬಾಗಿಲು ತೆರೆಯಲಿಲ್ಲ. ಕಿಟಕಿಯ ಮೂಲಕ ನೋಡಲಾಗಿ ಶಮಭಾನು ನೇಣು ಹಾಕಿಕೊಂಡಿದ್ದಳು. ನೀವು ಬೇಗ ಬನ್ನಿ ಎಂದು ಮನೆಯ ಹತ್ತಿರ ಕರೆದುಕೊಂಡು ಹೋಗಿ ಬಾತ್ ರೂಮಿನ ಬಾಗಿಲನ್ನು ಇತರೆ ಜನಗಳ ಸಹಾಯದಿಂದ ಬಾಗಿಲನ್ನು ಹೊಡೆದು ನೋಡಲಾಗಿ ಶಮಭಾನು ಬಾತ್ ರೂಮಿನಲ್ಲಿ ಇರುವ ಕಬ್ಬಿಣದ ಮೇಲಿನ ನೀರಿನ ಪೈಪಿಗೆ ವೇಲಿನಿಂದ ನೇಣು ಹಾಕಿಕೊಂಡಿದ್ದು, ನನ್ನ ಅಳಿಯ ಹಾಗೂ ಇತರರು ನನ್ನ ಮಗಳನ್ನು ಕೆಳಗೆ ಇಳಿಸಿ ಪ್ರಾನ ಇರಬಹುದೆಂದು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ತೋರಿಸಲಾಗಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನನ್ನ ಮಗಳು ಶಮಭಾನು ಗಂಡ ಮಾಡಿಕೊಂಡಿರುವ ಸಣ್ಣಪುಟ್ಟ ಸಾಲದ ವಿಚಾರದಲ್ಲೋ ಅಥವಾ ಇನ್ನಾವುದೋ ಕಾರಣಕ್ಕೋ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ಒಬ್ಬಳೆ ಇರುವಾಗ ಬಾತ್ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು, ನನ್ನ ಮಗಳ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನನ್ನ ಮಗಳ ಶವವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು, ಈ ವಿಚಾರವನ್ನು ನನ್ನ ಮಕ್ಕಳು ಮತ್ತು ಸಂಬಂದಿಕರುಗಳಿಗೆ ತಿಳಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 139/2017, ಕಲಂ 32(3), 15 (A) ಕೆ.ಇ ಆಕ್ಟ್.

ದಿನಾಂಕ:-15-11-2017 ರಂದು ರಾತ್ರಿ 07.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ.ವಿ.ರವೀಂದ್ರ ಆದ ನಾನು ದಿನಾಂಕ:15.11.2017 ರಂದು ಸಂಜೆ  5:00 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಪೋನ್ ಮಾಡಿ ಹುಳಿಯಾರು ಹೋಬಳಿ ಕಾರೇಹಳ್ಳಿ ಗ್ರಾಮದ ಗೇಟ್ ಬಳಿ ಇರುವ ತಂಗುದಾಣದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿದ್ದು ನಾನು ಮತ್ತು ಗುಪ್ತ ಮಾಹಿತಿ ಕರ್ತವ್ಯದ ಶಂಕರ್ ಎಂ ಆರ್ ಹೆಚ್ ಸಿ-315 ರವರು ಇಲಾಖಾ ಜೀಪಿನಲ್ಲಿ ಸದರಿ ಸ್ಥಳಕ್ಕೆ ಸಂಜೆ  05:15 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಕಾರೇಹಳ್ಳಿ ಗ್ರಾಮದ ಗೇಟ್ ಬಳಿ ಇರುವ ತಂಗುದಾಣದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ 1 ಮದ್ಯದ ಪ್ಯಾಕೇಟ್ ಅನ್ನು ಇಟ್ಟುಕೊಂಡು ಮತ್ತೊಂದು ಮದ್ಯದ ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಅನ್ನ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ತೀರ್ಥ ಬಿನ್ ಮಲ್ಲಿಕಾರ್ಜುನಯ್ಯ 30 ವರ್ಷ, ಲಿಂಗಾಯ್ತರು, ಕೆಂಕೆರೆ ಗ್ರಾಮ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ ಸ್ಥಳದಲ್ಲಿ ಆತನ ಬಳಿ ಇದ್ದ ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ ಮತ್ತು ಮತ್ತೊಂದು ಓಪನ್ ಮಾಡಿದ್ದ ಒಂದು ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ, ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಇದ್ದು ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸದರಿ ಸ್ಥಳವು ಕಾರೇಹಳ್ಳಿ ಗ್ರಾಮದ ಗೇಟ್ ಬಳಿ ಇರುವ ತಂಗುದಾಣದ ಮುಂಭಾಗ ಸಾರ್ವಜನಿಕ ಸ್ಥಳವಾಗಿದ್ದು, ಸದರಿ ಸ್ಥಳದಿಂದ ದಕ್ಷಿಣಕ್ಕೆ ಹುಳಿಯಾರು-ಸಿರಾ ಮಾರ್ಗದ ಟಾರ್ ರಸ್ತೆ ಹಾದು ಹೋಗಿದ್ದು, ನಂತರ ಕಾರೆಹಳ್ಳಿ ಮಾರ್ಗದ ಟಾರ್ ರಸ್ತೆ ಇರುತ್ತೆ,   ಆರೋಪಿಯಿಂದ ಮೇಲ್ಕಂಡ ಮದ್ಯದ 1) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ 2) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಸಂಜೆ  05:30 ಗಂಟೆಯಿಂದ ಸಂಜೆ 06:30 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನದ ಮೇರೆಗೆ ಪ್ರಕರಣದ ದಾಖಲಿಸಿರುತ್ತೆ.Wednesday, 15 November 2017

Crime Incidents 15-11-17

ಮಧುಗಿರಿ ಪೊಲೀಸ್ ಠಾಣಾ CR :207/2017 u/s 87 KP ACT

ಈ ಪಿರ್ಯಾದಿ ಶ್ರೀ ಪಾಲಾಕ್ಷ ಪ್ರಭು ಕೆ.ಎನ್,ಪಿಎಸ್‌ಐ, ಮಧುಗಿರಿ ಪೊಲೀಸ್ ಠಾಣೆ ರವರು ದಿನಾಂಕ  14/11/2017 : ಮದ್ಯಾಹ್ನ 13.00 ಗಂಟೆಗೆ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿಯವರ ಮಾಹಿತಿ ಮೇರೆಗೆ ಮಧುಗಿರಿ ತಾಲ್ಲೂಕು, ಕಸಬಾ ಹೋಬಳಿ, ಚಿನಕವಜ್ರ ಗ್ರಾಮದ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು, ಹೆಸರು ವಿಳಾಸ ಪಡೆಯಲಾಗಿ 1] ನಾರಾಯಣಪ್ಪ ಬಿನ್ ಲೇ.ತಿಮ್ಮಯ್ಯ, 67 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿನಕವಜ್ರ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು, 2] ಕಾಳಯ್ಯ ಬಿನ್ ಲೇ.ದೊಡ್ಡಮಾಯಣ್ಣ, 67 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿನಕವಜ್ರ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು,3] ಗೋವಿಂದಯ್ಯ ಬಿನ್ ವೆಂಕಶಾಮಯ್ಯ, 63 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿನಕವಜ್ರ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು, 4] ಚಂದ್ರಶೇಖರ್ ಬಿನ್ ಲೇ.ಮಾಯಣ್ಣ, 54 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿನಕವಜ್ರ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ಎಂತಾ ತಿಳಿಸಿದ್ದು, ಆರೋಪಿಗಳನ್ನು ನೋಡಿಕೊಂಡು ಸಿಬ್ಬಂದಿ ನೇಮಕ ಮಾಡಿ, ನಂತರ ಕೃತ್ಯಕ್ಕೆ ಬಳಸಿದ್ದ 850/- ರೂ ನಗದು, 52 ಎಲೆ ಇಸ್ಪಿಟ್ ಎಲೆ ಹಾಗೂ ಒಂದು ನ್ಯೂಸ್ ಪೇಪರ್ ಅನ್ನು ವಶಕ್ಕೆ ಪಡೆದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನ ಸ್ವೀಕರಿಸಿ, ಸಂಜ್ಞೇಯ ಪ್ರಕರಣವಾದ್ದರಿಂದ ಎನ್.ಸಿ.ಆರ್ ದಾಖಲಿಸಿದ್ದು, ನಂತರ ಘನ ನ್ಯಾಯಾಲಯದ ಅನುಮತಿ ಪಡೆದು, ಪ್ರ.ವ.ವರದಿ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ 96/2017  ಕಲಂ:279,337, 304(ಎ) IPC

ದಿನಾಂಕ:14/11/2017 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ  ರಾಮಾಂಜಿನಪ್ಪ ಬಿನ್ ಲೇ|| ನರಸಿಂಹಪ್ಪ, 44 ವರ್ಷ, ನಾಯಕ ಜನಾಂಗ, ಜಿರಾಯ್ತಿ, ಕೆಲಸ ಬೊಮ್ಮಗಾನಹಳ್ಳಿ ಗ್ರಾಮ,ಪಾವಗಡ ತಾ|| ರವರು ನೀಡಿದ ದೂರಿನ ಅಂಶವೇನೆಂದರೆ ನಮ್ಮ ಚಿಕ್ಕಪ್ಪ ಲೇ|| ನರಸಿಂಹಪ್ಪ ನವರಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಮಗ ಶಿವಕುಮಾರ 32 ವರ್ಷ ರವರು ನಮ್ಮ ಗ್ರಾಮದಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು , ಕಿರಿಯ ಮಗ ನಾಗಭೂಷಣ ಪಾವಗಡ ದಲ್ಲಿ ಜೆ.ಸಿ.ಬಿ ಕ್ಲೀನರ್ ಕೆಲಸ ಮಾಡಿಕೊಂಡಿರುತ್ತಾನೆ,  ಶಿವಕುಮಾರನಿಗೆ ಈಗ್ಗೆ 05 ವರ್ಷಗಳ ಹಿಂದೆ ಆಂದ್ರಪ್ರದೇಶದ ಪೇರೂರು ಗ್ರಾಮದ ವಾಸಿ ಮಮತ 28 ವರ್ಷ ಎಂಬುವವರೊಂದಿಗೆ ಮದುವೆಯಾಗಿದ್ದು ಇವರಿಗೆ ಎರಡು ವರ್ಷದ ಒಂದು ಹೆಣ್ಣು ಮಗು ಇರುತ್ತದೆ ,ಶಿವಕುಮಾರ ತನ್ನ  ತಾಯಿಯೊಂದಿಗೆ ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ವಾಸವಿದ್ದು , ದಿನಾಂಕ:13/11/2017 ರಂದು ಸಂಜೆ 4:00 ಗಂಟೆ ಸಮಯದಲ್ಲಿ  ನನ್ನ ಚಿಕ್ಕಪ್ಪನ ಮಗ ಶಿವಕುಮಾರ ತನ್ನ ಹೆಂಡತಿ ಮಗುವಿನೊಂದಿಗೆ ಚಿಕ್ಕಹಳ್ಳಿ ಗ್ರಾಮದ ಅಕ್ಕಮ್ಮಗಾರ್ಲು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂತ ಮನೆಯಲ್ಲಿ ಹಾಗೂ ನನಗೆ ಹೇಳಿ ಕೆ.ಎ-16- ಆರ್-3914 ನೇ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ನಮ್ಮ ಗ್ರಾಮದಿಂದ ಹೋಗಿದ್ದನು, ದಿನಾಂಕ:13/11/2017 ರಂದು ರಾತ್ರಿ ಸುಮಾರು 7:00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇರುವಾಗ್ಗೆ ಯಾರೋ ನನಗೆ ಪೋನ್ ಮಾಡಿ ನಿಮ್ಮ ಸಂಬಂದಿಕ ಶಿವಕುಮಾರನಿಗೆ ಪಾವಗಡ - ಕಲ್ಯಾಣದುರ್ಗ ರಸ್ತೆಯಲ್ಲಿ ನೀಲಮ್ಮನಹಳ್ಳಿ ಗೇಟ್ ಹತ್ತಿರ ಬಲಜಿಗ ಜನಾಂಗಕ್ಕೆ ಸೇರಿದ ಜಯರಾಮಪ್ಪ ರವರ ಜಮೀನಿನ ಬಳಿ ರಸ್ತೆಯಲ್ಲಿ ಆಕ್ಸಿಂಡೆಂಟ್ ಆಗಿದೆ ಬೇಗ ಬನ್ನಿ ಎಂತ ತಿಳಿಸಿದರು ಆಗ ನಾನು ಮತ್ತು ನನ್ನ ತಮ್ಮ ವಾಗೀಶ್  ಸ್ಥಳಕ್ಕೆ ಹೋಗಿ ನೋಡಲಾಗಿ  ಶಿವಕುಮಾರ ಸ್ಥಳದಲ್ಲಿ ಬಿದ್ದಿದ್ದು ಬೈಕ್ ಸಹ ಸ್ಥಳದಲ್ಲಿ ಬಿದ್ದಿರುತ್ತದೆ, ಶಿವಕುಮಾರನಿಗೆ ತಲೆಗೆ ಮತ್ತು ಹೊಟ್ಟೆಗೆ ಪೆಟ್ಟು ಬಿದ್ದಿದ್ದು ದ್ವಿ ಚಕ್ರ ವಾಹನ ಸಹ ಜಖಂ ಆಗಿರುತ್ತದೆ, ಮಮತಳಿಗೆ ಸಹ ಕಾಲುಗಳಿಗೆ ಗಾಯಗಳಾಗಿರುತ್ತದೆ.ಮಗುವಿಗೆ ಯಾವುದೇ ರೀತಿ ಏಟಾಗಿರುವುದಿಲ್ಲ, ಮಮತಳನ್ನು ಕೇಳಲಾಗಿ ಚಿಕ್ಕಹಳ್ಳಿ ಗ್ರಾಮದ ದೇವಸ್ಥಾನಕ್ಕೆ ಹೋಗಿ ವಾಪಸ್ ಊರಿಗೆ ಕಲ್ಯಾಣದುರ್ಗ-ಪಾವಗಡ ರಸ್ತೆಯಲ್ಲಿ ರಾತ್ರಿ ಸುಮಾರು  6:45 ಗಂಟೆ ಸಮಯದಲ್ಲಿ ಬರುತ್ತಿರುವಾಗ್ಗೆ ತನ್ನ ಗಂಡ ಕೆ.ಎ-16 ಆರ್-3914 ನೇ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನೀಲಮ್ಮನಹಳ್ಳಿ ಗೇಟ್ ಸಮೀಪ ಜಯರಾಮಪ್ಪ ರವರ ಜಮೀನಿನ ಬಳಿ ಮುಂಭಾಗದಲ್ಲಿ ಹೋಗುತ್ತಿದ್ದ ಎತ್ತಿನ ಗಾಡಿಗೆ ಹಿಂಬದಿಯಿಂದ ಗುದ್ದಿ ಅಪಘಾತವಾಗಿರುತ್ತದೆಂತ ತಿಳಿಸಿದಳು, ಕೂಡಲೇ ನಾವು ಗಾಯಳುಗಳನ್ನು ಪಾವಗಡ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಶಿವಕುಮಾರ ದಿನಾಂಕ:14/11/2017 ರಂದು ಬೆಳಗ್ಗೆ ಸುಮಾರು 4:10 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ,  ಎತ್ತಿನಗಾಡಿಯನ್ನು ನೀಲಮ್ಮನಹಳ್ಳಿ ಗ್ರಾಮದ ನರಸಿಂಹ ಬಿನ್ ರಾಮಣ್ಣ ,ಪ.ಜಾತಿ ಎಂಬುವವರು ಓಡಿಸಿಕೊಂಡು ಹೋಗುತ್ತಿದ್ದರೆಂತ ತಿಳಿದಿರುತ್ತದೆ, ಶಿವಕುಮಾರನ ಬೈಕ್ ನ್ನು ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ತೆಗೆದುಕೊಂಡು ಇಟ್ಟಿರುತ್ತೇವೆ. ಮೃತನ ಶವ ತುಮಕೂರು ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿದ್ದು ಮುಂದಿನ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

ಜಯನಗರ ಪೊಲೀಸ್ ಠಾಣಾ ಮೊ.ನಂ. 150/2017 ಕಲಂ 3, 14(ಎ) CHILD LABOUR (PROHIBITION & REGULATION) ACT,1986.

ದಿನಾಂಕ: 14-11-2017 ರಂದು ರಾತ್ರಿ 8-00 ಗಂಟೆಯಲ್ಲಿ ತುಮಕೂರು ಟೌನ್‌, ಕಾರ್ಮಿಕ ನಿರೀಕ್ಷಕರ ಕಛೇರಿ, ಕಾರ್ಮಿಕ ನಿರೀಕ್ಷಕರಾದ ಶ್ರೀ ರಾಜಣ್ಣ ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನ್ಯೂ ಡಿಲಕ್ಸ್ ಚಿಕನ್ ಸೆಂಟರ್‌, ವಾರ್ಡ್‌ ನಂ. 17, ರವಿ ಡಿಪೋ ಹತ್ತಿರ, ಬನಶಂಕರಿ ಮುಖ್ಯ ರಸ್ತೆ, ಶಾಂತಿನಗರ, ತುಮಕೂರು ಈ ಸಂಸ್ಥೆಯನ್ನು ದಿನಾಂಕ: 14-11-2017 ರಂದು ಬೆಳಿಗ್ಗೆ 11-30  ಗಂಟೆಗೆ ಬಾಲ್ಯವಸ್ಥೆ ಮತ್ತು ಕಿಶೋರಾವ್ಯಸ್ಥೆ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿ ಈ ಕೆಳ ಸಹಿದಾರರು 1.ಮಾನ್ಯ ಕಾರ್ಮೀಕ ಅಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು 2. ಕಾರ್ಮಿಕ ನಿರೀಕ್ಷಕರು, 1 ನೇ ವೃತ್ತ, ತುಮಕೂರು 3. ಶ್ರೀ ರವಿಕುಮಾರ್‌, ನಿರ್ಧೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಇವರೊಂದಿಗೆ ಜಂಟಿ ತಪಾಸಣೆ ನಡೆಸಿದಾಗ ಸದರಿ ಸಂಸ್ಥೆಯಲ್ಲಿ 13 ವರ್ಷದ ಕು.ಶಾಹಿದ್ ಬಿನ್ ಲೇಟ್ ಅಸೀಮ್ ಸಾಬ್ ಎಂಬ ಬಾಲ ಕಾರ್ಮಿಕನು ಕೋಳಿ ಕುಯ್ದು ಚಿಕನ್ ಮಾರುವ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುವುದು ತಪಾಸಣೆ ಸಮಯದಲ್ಲಿ ಕಂಡು ಬಂದಿರುತ್ತದೆ.  ಭೇಟಿಯ ಸಮಯದಲ್ಲಿ ಸಂಸ್ಥೆಯ ಮಾಲೀಕರಾದ ಶ್ರೀ ಮೊಹಮ್ಮದ್ ಷಾಹೀರ್‌ ಬಿನ್ ಲೇಟ್ ಮೊಹಮ್ಮದ್‌ ಖಾಸೀಂ ಸಾಬ್‌ ಹಾಜರಿದ್ದು ತನಿಖಾ ಟಿಪ್ಪಣಿಗೆ ಸಹಿ ಮಾಡಿ ಸ್ವೀಕರಿಸಿರುತ್ತಾರೆ. ಬಾಲ ಕಾರ್ಮೀನ ವಯಸ್ಸಿನ ಬಗ್ಗೆ ಕಾರ್ಮೀಕರ ರಾಜ್ಯ ವಿಮಾ ಚಿಕಿತ್ಸಾಲಯ, ತುಮಕೂರು ಇಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ವೈದ್ಯರು ಸದರಿ ಬಾಲ ಕಾರ್ಮೀಕನ ವಯಸ್ಸು 13 ವಯಸ್ಸಿನವನೆಂದು ದೃಢೀಕರಣ ಪತ್ರ ನೀಡಿರುತ್ತಾರೆ. ಸದರಿ ಬಾಲ ಕಾರ್ಮೀಕನಿಗೆ ಪುನರ್ ವಸತಿ ಕಲ್ಪಿಸುವ ಸಲುವಾಗಿ ಮಕ್ಕಳ ಕಲ್ಯಾಣ ಸಮಿತಿ ತುಮಕೂರು ಇಲ್ಲಿ ಇದೇ ದಿನಾಂಕದಂದು ದಾಖಲು ಮಾಡಲಾಗಿರುತ್ತದೆ.  ಸದರಿ ಸಂಸ್ಥೆಯ ಮಾಲೀಕರಾದ ಶ್ರೀ ಮೊಹಮ್ಮದ್ ಷಾಹೀರ್ ಬಿನ್ ಲೇಟ್ ಮೊಹಮ್ಮದ್ ಖಾಸೀಂ ಸಾಬ್ ಇವರು 13 ವರ್ಷದ ಮಗವನ್ನು ಅವರ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಸದರಿ ಕಾಯ್ದೆಯ ಕಲಂ 3 ನ್ನು ಉಲ್ಲಂಘಿಸಿರುತ್ತಾರೆ.  ಇತ್ತೀಚಿನ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986 ರ ತಿದ್ದುಪಡಿ ಆದೇಶದಂತೆ ಸದರಿ ಕಾಯ್ದೆಯ ಕಲಂ 3 ಉಲ್ಲಂಘನೆಗೆ ಕಲಂ 14 ಎ ರಲ್ಲಿ “Cognizible Offence” ಎಂದು ಮಾರ್ಪಡು ಮಾಡಿರುವುದರಿಂದ ಸದರಿ ಸಂಸ್ಥೆಯ ಮಾಲೀಕರಾದ ಶ್ರೀ ಮೊಹಮ್ಮದ್ ಷಾಹೀರ್ ಬಿನ್ ಲೇಟ್ ಮೊಹಮ್ಮದ್ ಖಾಸೀಂ ಸಾಬ್ ಇವರ ವಿರುದ್ದ ಕಾಯ್ದೆಯನ್ವಯ ಸೂಕ್ತ ಕ್ರಮಕೈಗೊಳ್ಳಬೇಕೆಂದು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ 206/2017 u/s 323,324,504 r/w 34 IPC.

ಪಿರ್ಯಾದಿ ಚಿತ್ತಯ್ಯ ಬಿನ್ ಚಿಕ್ಕೀರಯ್ಯ, 30 ವರ್ಷ, ಗೊಲ್ಲರು, ಜಿರಾಯ್ತಿ, ಕಾಟನಾಗಹಟ್ಟಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಮಧುಗಿರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ದಿನಾಂಕ: 13-11-2017 ರಂದು ಸಂಜೆ ಸುಮಾರು 06.00 ಗಂಟೆ ಸಮಯದಲ್ಲಿ ಊರಿನ ರಮೇಶರವರ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ, ಅಲ್ಲಿಗೆ ಬಂದ ಚಿಕ್ಕೀರಪ್ಪ, ಚಿಕ್ಕಣ್ಣ ಹಾಗೂ ಚಿತ್ರಲಿಂಗಯ್ಯರವರು ಹಳೆ ದ್ವೇಷದಿಂದ ಬೋಳಿಮಗನೇ, ಸೂಳೆಮಗನೇ ಎಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ನಂತರ ಚಿಕ್ಕೀರಪ್ಪನು ದೊಣ್ಣೆಯಿಂದ ಪಿರ್ಯಾದಿಯ ತಲೆಗೆ ಹೊಡೆದಿದ್ದು, ನಂತರ ಚಿಕ್ಕೀರಣ್ಣರವರು ದೊಣ್ಣೆಯಿಂದ ಪಿರ್ಯಾದಿಯ ಬಲಕೈಗೆ ಹೊಡೆದಿರುತ್ತಾರೆ. ಚಿತ್ರಲಿಂಗಯ್ಯನು ಎಡಕೈಗೆ ಕಚ್ಚಿ ಗಾಯಗೊಳಿಸಿರುತ್ತಾನೆ. ನಂತರ ವಿರೇಶ, ಚಿತ್ತಯ್ಯ ಮತ್ತು ರಮೇಶರವರು ಜಗಳ ಬಿಡಿಸಿರುತ್ತಾರೆ. ನಂತರ ಪಿರ್ಯಾದಿಯು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮೇಲ್ಕಂಡರವರ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂಬಿತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Tuesday, 14 November 2017

Crime Incidents 14-11-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 204/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:13-11-2017 ರಂದು ಸಾಯಂಕಾಲ 4-00 ಗಂಟೆಗೆ ಪಿರ್ಯಾದಿಯಾದ ರಾಜಶೇಖರಯ್ಯ,ಎಸ್,ಬಿ ಬಿನ್ ಲೇ|| ಬಸಪ್ಪ, 45 ವರ್ಷ, ಲಿಂಗಾಯಿತರು, ವ್ಯವಸಾಯ, ಸಿದ್ದಪ್ಪನಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಅಕ್ಕನ ಮಗನಾದ ನಮ್ಮ ಗ್ರಾಮದಲ್ಲಿಯೇ ವಾಸವಿರುವ ವೈ,ಬಿ,ಚಂದ್ರಶೇಖರಯ್ಯ ರವರು ತಿಮ್ಮಸಂದ್ರ ಕೆ,ಇ,ಬಿ ಯಲ್ಲಿ ಕಂಟ್ರಾಕ್ಟ್ ಆಧಾರದ ಮೇಲೆ ಕೆಲಸ ಮಾಡಿಕೊಂಡಿದ್ದು, ದಿನಾಂಕ: 12-11-2017 ರಂದು ರಾತ್ರಿ ಸುಮಾರು 07-00 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದಲ್ಲಿರುವಾಗ್ಗೆ, ತಿಮ್ಮಸಂದ್ರ ಗ್ರಾಮದ ವಾಸಿಯಾದ ನನ್ನ ಪರಿಚಯಸ್ಥರಾದ ಮಂಜುನಾಥ್‌ ಬಿನ್ ಗಂಗರಂಗೇಗೌಡ ರವರು ನನಗೆ ಪೋನ್ ಮಾಡಿ ಇದೇ ದಿವಸ ನಿಮ್ಮ ಅಕ್ಕನ ಮಗನಾದ ವೈ,ಬಿ,ಚಂದ್ರಶೇಖರಯ್ಯ ರವರು ನಾಗವಲ್ಲಿ ಬಸ್‌ ನಿಲ್ದಾಣದ ಟಿ,ಪಿ ರಸ್ತೆಯ ಮುಂಭಾಗದ ಕುಣಿಗಲ್-ತುಮಕೂರು ಟಾರ್ ರಸ್ತೆಯ ಅಂಚಿನಲ್ಲಿ ಕೆಎ-06-ಇ.ಡಿ-4817 ನೇ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಸದರಿ ದ್ವಿಚಕ್ರ ವಾಹನದಿಂದ ಕೆಳಗೆ ಇಳಿಯುತ್ತಿರುವಾಗ್ಗೆ, ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-12-ಎನ್‌-5200 ನೇ ಟಾಟಾ ಸುಮೋ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಅಂಚಿನಲ್ಲಿ ಕೆಎ-06-ಇ.ಡಿ-4817 ನೇ ದ್ವಿಚಕ್ರ ವಾಹನದಿಂದ ಇಳಿಯುತ್ತಿದ್ದ ವೈ,ಬಿ,ಚಂದ್ರಶೇಖರಯ್ಯ ರವರಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ವೈ,ಬಿ,ಚಂದ್ರಶೇಖರಯ್ಯ ರವರಿಗೆ ಎಡಗಾಲಿಗೆ ಹಾಗೂ ಹಣೆಯ ಬಳಿ ರಕ್ತಗಾಯವಾಗಿರುತ್ತೆಂತಲೂ ಹಾಗೂ ಅಪಘಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಾ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ಗಾಯಗೊಂಡಿದ್ದ ವೈ,ಬಿ,ಚಂದ್ರಶೇಖರಯ್ಯ ರವರನ್ನು ನಾನು ಮತ್ತು ಮಂಜುನಾಥ್‌ ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಫಘಾತಕ್ಕೆ ಕಾರಣನಾದ ಕೆಎ-12-ಎನ್‌-5200 ನೇ ಟಾಟಾ ಸುಮೋ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ  ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಗಾಯಗೊಂಡಿದ್ದ ನನ್ನ ಅಕ್ಕನ ಮಗ ವೈ,ಬಿ,ಚಂದ್ರಶೇಖರಯ್ಯ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಪಡಿಸಿದ ಹಾಗೂ ಅಫಘಾತಕ್ಕೊಳಗಾದ ಎರಡೂ ವಾಹನಗಳು ಸ್ಥಳದಲ್ಲಿಯೇ ರಸ್ತೆಯ ಪಕ್ಕ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 20/2017 ಕಲಂ 174  ಸಿ ಆರ್‌ ಪಿ ಸಿ

ದಿನಾಂಕ:- 13/11/2017 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಲಕ್ಷ್ಮಮ್ಮ ಕೊಂ ರಂಗಪ್ಪ ಸೋದೇನಹಳ್ಳಿ  ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಈಗ್ಗೆ 8 ವರ್ಷಗಳ ಹಿಂದೆ ನಮ್ಮ ಗ್ರಾಮದ  ದೊಡ್ಡನರಸಪ್ಪ ಬಿನ್‌ ಲಕ್ಷ್ಮಿನರಸಪ್ಪ ಎಂಬುವವರಿಗೆ ನನ್ನ ಹಿರಿಯ ಮಗಳಾದ ನರಸಮ್ಮ ರವರನ್ನು ಕೊಟ್ಟು ಮದುವೆ ಮಾಡಿದ್ದೆವು. 6 ವರ್ಷದ ಒಂದು ಗಂಡು ಮಗು ಇದ್ದು, ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ದಿನಾಂಕ13/11/2017 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಕೆರೆಗೆ ಬಟ್ಟೆ ತೊಳೆಯಲು ಹೋದಾಗ ನನ್ನ ಮಗಳು ನರಸಮ್ಮ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು, ಮುಳುಗುತ್ತಿದ್ದುದ್ದನ್ನು ಕಂಡು ನಮ್ಮ ಗ್ರಾಮದ ನರಸೇಗೌಡ ಹಾಗೂ ಚಿಕ್ಕಣ್ಣ ರವರು ನನ್ನ ಮಗಳನ್ನು ಮೇಲೆತ್ತಿ ಉಪಚರಿಸಿ ಜೀವ ಇರಬಹುದೆಂದು ಶಂಕಿಸಿ ದೊಡ್ಡೇರಿ ಆಸ್ಪತ್ತೆಗೆ ಕರೆದುಕೊಂಡು ಮದ್ಯಾಹ್ನ 3-00 ಗಂಟೆಗೆ ಹೋಗಿ ವೈದ್ಯರಲ್ಲಿ ತೋರಿಸಲಾಗಿ ಜೀವ ಹೋಗಿದೆ ಎಂದು ತಿಳಿಸಿದ್ದರಿಂದ ನನಗೆ ನರಸೇಗೌಡ ಮತ್ತು ಚಿಕ್ಕಣ್ಣ ಪೋನ್ ಮಾಡಿ ವಿಚಾರ ತಿಳಿಸಿದ್ದರಿಂದ ನಾನು ಬಂದು ನೋಡಿ  ಸಾವಿನಲ್ಲಿ  ಯಾವುದೇ ಅನುಮಾನ ಇರುವುದಿಲ್ಲ ನನ್ನ ಮಗಳ ಆಕಸ್ಮಿಕವಾಗಿ ಕಾಲು ಜಾರಿ  ಕೆರೆಯ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾಳೆಂತಾ  ಮುಂದಿನ ಕ್ರಮ ಜರುಗಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 23/2017 ಕಲಂ 174 ಸಿಆರ್‌ಪಿಸಿ

ದಿನಾಂಕ: 13-11-2017 ರಂದು ಬೆಳಿಗ್ಗೆ 11-30 ಗಂಟೆಗೆ ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಹುಣಸೇಹಳ್ಳಿ ಗ್ರಾಮದ ವಾಸಿ ನಿಜಗುಣ ಹೆಚ್‌.ಎಸ್ ಬಿನ್ ಲೇಟ್ ಸಣ್ಣರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನನ್ನ ಕಿರಿಯ ಮಗಳು ಜ್ಯೋತಿ ಹೆಚ್. ಎನ್.  ತುಮಕೂರು ಪಟ್ಟಣದ ರಿಂಗ್‌‌ ರಸ್ತೆ ಸಮೀಪ ಇರುವ ವರದರಾಜ ನರ್ಸಿಂಗ್‌‌ ಕಾಲೇಜ್‌‌ನಲ್ಲಿ 3 ನೇ ವರ್ಷದ ನಸಿಂಗ್‌‌‌ ವ್ಯಾಸಂಗ ಮಾಡುತ್ತಿದ್ದು, ತುಮಕೂರು ಟೌನ್ ಭದ್ರಮ್ಮ ಕಲ್ಯಾಣ ಮಂಟಪದ ಸಮೀಪ ಇರುವ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕೀಯರ ವಿದ್ಯಾರ್ಥಿನಿಲಯ, ಎಸ್.ಎಸ್.ಪುರಂ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು.   ಈ ದಿನ ದಿನಾಂಕ: 13-11-2017 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ನನ್ನ ಮಗಳ ಜೊತೆಯಲ್ಲಿಯೇ ಅದೇ ಕಾಲೇಜಿನಲ್ಲಿ ನರ್ಸಿಂಗ್‌‌‌ ವ್ಯಾಸಂಗ ಮಾಡುತ್ತಿರುವ ನಮ್ಮ ಅಣ್ಣನ ಮಗಳು ರೇಖಾ ಹೆಚ್.ಇ. ನನಗೆ ಪೋನ್ ಮಾಡಿ, ಈ ದಿನ ಬೆಳಿಗ್ಗೆ ನಾನು ಹಾಗೂ ನಮ್ಮ ಹಾಸ್ಟಲ್‌‌ನಿಂದ ಜ್ಯೋತಿ ಹಾಗೂ 5-6 ಜನ ವಿದ್ಯಾರ್ಥಿನಿಯರು ಸಿ.ಟಿ. ಬಸ್ಸಿನಲ್ಲಿ ತುಮಕೂರು ರಿಂಗ್‌‌‌ರಸ್ತೆಯ ಬಳಿಗೆ ಹೋಗಿ, ರಿಂಗ್‌‌ರಸ್ತೆಯಲ್ಲಿ ಬಸ್‌‌ ಇಳಿದು, ಅಲ್ಲಿಂಗ ಕಾಲೇಜಿಗೆ ಹೋಗಲು ಎಲ್ಲರೂ ನಡೆದುಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 8-45 ಗಂಟೆ ಸಮಯದಲ್ಲಿ ನಮ್ಮ ಜೊತೆ ಕಾಲೇಜಿಗೆ ಬರುತ್ತಿದ್ದ ಜ್ಯೋತಿ ಹೆಚ್.ಎನ್. ಇದ್ದಕ್ಕಿದಂತೆ ಕುಸಿದು ಬಿದ್ದಿದ್ದು, ನಂತರ ತಕ್ಷಣ ನಾನು ಹಾಗೂ ನನ್ನ ಸ್ನೇಹಿತರು ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು,  ಬೆಳಿಗ್ಗೆ ಸುಮಾರು 9-15 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮಾರ್ಗಮದ್ಯದಲ್ಲಿಯೇ ತೀರಿ ಹೋಗಿರುತ್ತಾರೆಂತಾ ವಿಚಾರ ತಿಳಿಸಿರುವುದಾಗಿ ನನಗೆ ಪೋನ್ ಮಾಡಿ ವಿಚಾರ ತಿಳಿಸಿದರು.  ಆಗ ತಕ್ಷಣ ನಾನು ಹಾಗೂ ನಮ್ಮ ಕೆಲವು ಸಂಬಂಧಿಕರು ನಮ್ಮೂರಿನಿಂದ ತುಮಕೂರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿಗೆ ಬಂದು ನೋಡಲಾಗಿ, ನಮ್ಮ ಮಗಳು ಜ್ಯೋತಿಯ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದರು.   ಸ್ಥಳದಲ್ಲಿಯೇ ಇದ್ದ ನಮ್ಮ ಅಣ್ಣನ ಮಗಳು ರೇಖಾ ಹೆಚ್.ಇ. ಳನ್ನು ಕೂಲಂಕುಶವಾಗಿ ವಿಚಾರ ಮಾಡಲಾಗಿ ಮೇಲ್ಕಂಡಂತೆ ನಡೆದ ವಿಚಾರವನ್ನು ತಿಳಿಸಿರುತ್ತಾಳೆ.   ನಮ್ಮ ಮಗಳು ಜ್ಯೋತಿಗೆ ಹೃದಯದ ಖಾಯಿಲೆ ಇದ್ದು, ಈ ಬಗ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ತೋರಿಸಿ, ಚಿಕಿತ್ಸೆ ಕೊಡಿಸುತ್ತಿದ್ದೆವು.  ನಮ್ಮ ಮಗಳು ಜ್ಯೋತಿಗೆ ಈ ದಿನ ಬೆಳಿಗ್ಗೆ ಹೃದಯಾಘಾತವಾಗಿ ಮೃತಪಟ್ಟಿರುತ್ತಾಳೆ. ನನ್ನ ಮಗಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ.  ಆದ್ದರಿಂದ ತಾವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿಗೆ ಬಂದು ಶವಪರಿಶೀಲನೆ ಮಾಡಿ, ಮುಂದಿನ ಕ್ರಮ ಜರುಗಿಸಿ ಎಂತ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 223/2017   ಕಲಂ:  379 ಐಪಿಸಿ

ದಿನಾಂಕ: 13-11-2017 ರಂದು ಬೆಳಿಗ್ಗೆ 11-00 ಗಂಟೆಗೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಟೌನ್ ಹಳೇಪೇಟೆ ವಾಸಿಯಾದ ಇಮ್ರಾನ್ ಪಾಷ ಬಿನ್ ಮುಮ್ತಾಜ್ ಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 10-11-2017 ರಂದು ಶುಕ್ರವಾರ ರಾತ್ರಿ ಪಿರ್ಯಾದಿಯು ಮನೆಯ ಮುಂದೆ KA42-A-2741 ನೇ APE XTRA LD ತ್ರಿಚಕ್ರ ವಾಹನವನ್ನು ನಿಲ್ಲಿಸಿದ್ದು,  ಪಿರ್ಯಾದಿಯು ಶನಿವಾರ ಬೆಳಿಗ್ಗೆ 05-00  ಗಂಟೆಗೆ ಎದ್ದು  ನೋಡಿದಾಗ ಯಾರೋ ಕಳ್ಳರು KA42-A-2741 ನೇ APE XTRA LD ತ್ರಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿಯು ಕಳುವಾಗಿರುವ ತಮ್ಮ ವಾಹನದ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಕಳುವಾಗಿರುವ ವಾಹನದ ಬೆಲೆ ಸುಮಾರು 1,50,000=00 ರೂ ಗಳಾಗಿರುತ್ತೆ. ಕಳುವಾಗಿರುವ ವಾಹನವನ್ನು ಪತ್ತೆ ಮಾಡಿಕೊಡಬೇಕಂತ ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 93/ 2017 ಕಲಂ 323,324,328,447,504,506 ರೆ/ವಿ 149 ಐಪಿಸಿ

ದಿನಾಂಕ:13/11/2017 ರಂದು ಬೆಳಗ್ಗೆ ತುಮಕೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಜ್ರದಹಳ್ಳಿ ನಾಗೇಂದ್ರಪ್ಪ ಬಿನ್‌ ಲೇಟ್‌ ಚಿಕ್ಕಮಾಸಣ್ಣ ರವರ ಹೇಳಿಕೆಯನ್ನು ಠಾಣಾ ಹೆಚ್.ಸಿ-383 ರಾಜಣ್ಣ ರವರು ಪಡೆದು ಮದ್ಯಾಹ್ನ 1-00 ಗಂಟೆಯಲ್ಲಿ ಠಾಣೆಗೆ ವಾಪಾಸ್ಸಾಗಿ ಹಾಜರ್‌ಪಡಿಸಿದ ಹೇಳಿಕೆ ದೂರಿನ ಅಂಶವೇನೆಂದರೆ, ದಿನಾಂಕ:12/11/17 ರಂದು ನಮ್ಮ ಗ್ರಾಮದ ನಮ್ಮ ಸೈಟಿನಲ್ಲಿ ಶೀಟ್‌ ಶೆಡ್‌ ನಿರ್ಮಿಸುತ್ತಿದ್ದಾಗ ಸಂಜೆ 7-30 ಗಂಟೆ ಸಮಯದಲ್ಲಿ ಏಕಾಏಕಿ ನಮ್ಮ ಗ್ರಾಮದ ನಮ್ಮದೇ ಜನಾಂಗದವರಾದ ಜಯರಾಮಯ್ಯ ಬಿನ್‌ ಲೇಟ್‌ ಸಣ್ಣಕರಿಯಣ್ಣ , ಶಿವರಾಜ ಬಿನ್‌ ಜಯರಾಮಯ್ಯ ಇಬ್ಬರೂ ಬಂದು ಇದು ನಮ್ಮದು ಜಾಗ ನಾವು ಮೊದಲಿನಿಂದಲೂ ಇಲ್ಲಿ ಕುರಿ ರೊಪ್ಪ ಹಾಕಿಕೊಂಡಿದ್ದೆವು. ಅದನ್ನು ಕಿತ್ತುಹಾಕಿ ನೀನು ಶೆಡ್‌ ಹಾಕುತ್ತಿರುವೆಯಾ ಎಂದು ನಾನು ನಿಲ್ಲಿಸಿದ್ದ ನೀಲಗಿರಿ ಕಡ್ಡಿ ಮತ್ತು ಕಬ್ಬಿಣದ ತಗಡುಗಳನ್ನು ಕಿತ್ತುಹಾಕಿ ಸುತ್ತಲೂ ಹಾಕಿದ್ದ ಲಾರಿ ಟಾರ್ಪಲ್‌ ಕಿತ್ತು ಎಸೆದರು. ಅಡುಗೆ ಮಾಡಲು ಸಿದ್ದತೆ ಮಾಡುತ್ತಿದ್ದ ನಮ್ಮ ಹೆಂಡತಿ ಶಾಂತಮ್ಮಳಿಗೂ ಗಲಾಟೆ ಮಾಡಿ ಹೊಲೆ ಕೆಡಿಸಿ ನೀರು ಹಾಕಿದರು. ಕಟ್ಟಿ ಹಾಕಿಕೊಂಡಿದ್ದ ದನಗಳನ್ನು ಬಿಚ್ಚಿ ಹೊಡೆದರು. ಅವರ ಕುರಿಗಳನ್ನು ಕೂಡಲು ಬಂದರು. ನಾನು ಬಿಟ್ಟುಕೊಳ್ಳಲಿಲ್ಲ. ಆಗ ಜಯರಾಮಯ್ಯ ಮಚ್ಚಿನ ಹಿಂಬದಿಯಿಂದ ಎಡ ಭುಜಕ್ಕೆ ಹೊಡೆದ ನಾನು ನೂಕಿದೆ ಆಗ ತುಗ್ಗಲಿ ದೊಣ್ನೆಯಿಂದ ನನ್ನ ತಲೆಗೆ ಹಾಕಿದ ಆಗ ನನ್ನ ಹಣೆಗೆ ರಕ್ತ ಗಾಯವಾಯಿತು ನನ್ನನ್ನು ಬಿಡಿಸಿಕೊಳ್ಲಲು ಬಂದ ನನ್ನ ಹೆಂಡತಿ ಶಾಂತಮ್ಮಳಿಗೂ ಅದೇ ದೊಣ್ಣೆಯಿಂದ ತಲೆಗೆ ಹೊಡೆದರು. ಕೈಗೆ ಹೊಡೆದರು ಅವಳಿಗೂ ರಕ್ತ ಗಾಯವಾಯಿತು. ಜಯರಾಮಯ್ಯನ ಮಗ ಶಿವರಾಜ ತಗಡು ಶೀಟನ್ನು ನನ್ನ ಹೆಂಡತಿಯ ಮೇಲೆ ಹಾಕಿ ಹತ್ತಿ ತುಳಿದ ಇದೆಲ್ಲಾ ಆದ ಮೇಲೆ ಜಯರಾಮಯ್ಯನ ತಮ್ಮನಾದ ಪಾಲಣ್ಣ ಹಾಗೂ ಪಾಲಣ್ಣನ ಹೆಂಡತಿ ಲಕ್ಷ್ಮಕ್ಕ ಬಂದರು ಪಾಲಣ್ಣ ನನ್ನ ಕೆನ್ನೆಗೆ ಕೈಯಿಂದ ಹೊಡೆದ ಲಕ್ಷ್ಮಕ್ಕನೂ ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಸೂಳೆ ಮುಂಡೆ ನಿನ್ನದು ಏನಿದೆ ತತ್ತಾರೆ ಎಂದು ಬಾಯಿಗೆ ಬಂದಂತೆ ಬೈದಳು ಆಗಲೇ ಅಲ್ಲಿಗೆ ಬಂದ ಜಯರಾಮಯ್ಯನ ಹೆಂಡತಿ ಗಂಗಮ್ಮಳೂ ಸಹ ಸೇರಿಕೊಂಡು ನನ್ನ ಸೊಸೆ ಭಾಗ್ಯನ ತಾಳಿ ಕಿತ್ತು ಹಾಕಿದಳು. ಗಂಗಮ್ಮ ಲಕ್ಷ್ಮಮ್ಮ ಇಬ್ಬರೂ ಕೈಗಳಿಂದ ಶಾಂತಮ್ಮನಿಗೆ ಗುದ್ದಿ ತಲೆ ಜುಟ್ಟು ಹಿಡಿದು ಎಳೆದಾಡಿದರು ನನ್ನ ಹೆಂಡತಿಗೂ ರಕ್ತ ಬರುವಂತೆ ಹೊಡೆದರು ಈ ಜಗಳವನ್ನು ನಮ್ಮ ಪಕ್ಕದ ಮನೆಯ ಭೂತಣ್ಣ ಬಿನ್‌ ಲೇಟ್‌ ಈರಪ್ಪ ಗೊಲ್ಲರು ಹಾಗೂ ಪಾಪಣ್ಣ  ಬಿನ್‌ ಲೇಟ್‌ ಕರಿಯಣ್ನ ಬಿಡಿಸಿದರು. ಅವರಲ್ಲಿ ಒಬ್ಬರು ಆಂಬ್ಯುಲೆನ್ಸ್‌‌‌ಗೆ ಪೋನ್‌ ಮಾಡಿದರು ಆಂಬ್ಯುಲೆನ್ಸ್‌‌‌‌ ನಲ್ಲಿ ನನ್ನನ್ನು ಹಾಗೂ ನನ್ನ ಹೆಂಡತಿ ಶಾಂತಮ್ಮ ಹಾಗೂ ಸೊಸೆ ಭಾಗ್ಯಮ್ಮಳನ್ನು ಭೂತಣ್ಣ ಮತ್ತು ಪಾಪಣ್ಣ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ಬಂದೆವು. ಅಲ್ಲಿನ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಮತ್ತು ನನ್ನ ಹೆಂಡತಿ ಶಾಂತಮ್ಮಳನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು ಇಲ್ಲಿ ಬಂದು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಮ್ಮ ಮೇಲೆ ಗಲಾಟೆ ದೌರ್ಜನ್ಯವೆಸಗಿದ ಜಯರಾಮಯ್ಯ ಶಿವರಾಜ ಪಾಲಣ್ಣ ಗಂಗಮ್ಮ ಮತ್ತು ಲಕ್ಷ್ನಮ್ಮನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿಕೆ ನೀಡಿರುತ್ತೇನೆ.  ಇವರುಗಳು ನಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಸಹ ಹಾಕಿರುತ್ತಾರೆಂದು ನೀಡದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

 Monday, 13 November 2017

Crime Incidents 13-11-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 139/2017 ಕಲಂ 32, 34 ಕೆ.ಇ ಆಕ್ಟ್

ತಿಪಟೂರು  ಗ್ರಾಮಾಂತರ  ವೃತ್ತ ಸಿ.ಪಿ.ಐ ರವರು ದಿನಾಂಕ: 12/11/2017 ರಂದು ಸಾಯಂಕಾಲ    ಸಿಬ್ಬಂದಿಯವರಾದ ಎ.ಪಿ.ಸಿ. 162 ನಾಗಭೂಷಣ್ ರವರೊಂದಿಗೆ ಕೆಎ -06- ಜಿ- 421 ನೇ ಪೊಲೀಸ್ ಜೀಪಿನಲ್ಲಿ ತಿಪಟೂರು ತಾಲ್ಲೂಕು ಗಣೇಶ ಬಂದೋಬಸ್ತ್ ರೌಂಡ್ಸ್ & ಸಂಚಾರ ನಿಯಂತ್ರಣ ಮಾಡುತ್ತಾ ಸಾಯಂಕಾಲ ಸುಮಾರು 07-20 ಗಂಟೆಗೆ ಕಸಬಾ ಹೋಬಳಿ ಹುಚ್ಚನಹಟ್ಟಿ ಗ್ರಾಮದ ಬಳಿ ಬಂದಾಗ ಗ್ರಾಮದ ಪೆಟ್ಟಿಗೆ ಅಂಗಡಿ ಮುಂಬಾಗ ಕೆಲವು ಜನ ನಿಂತಿದ್ದು, ಪೊಲೀಸ್ ಜೀಪನ್ನು ಕಂಡು ಓಡಿ ಹೋದರು. ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಇದ್ದು, ಅಂಗಡಿಯ ಮುಂಬಾಗ ಮದ್ಯದ ಖಾಲಿ ಪಾಕೆಟ್ಟುಗಳು ಬಿದ್ದಿದ್ದವು. ನಾವು ಅಂಗಡಿಯನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೆಟ್ಟುಗಳು ಇರುವುದು ಕಂಡು ಬಂದವು. ಅಂಗಡಿಯಲ್ಲಿದ್ದ ಆಸಾಮಿಯನ್ನು ಮದ್ಯದ ಪಾಕೆಟ್ಟುಗಳನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಲಾಗಿ ತನಗೆ ಯಾವುದೇ ಪರವಾನಗಿ ಇರುವುದಿಲ್ಲ, ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ತಿಪಟೂರಿನಿಂದ ಮದ್ಯದ ಪಾಕೆಟ್ಟುಗಳನ್ನು ತಂದು ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ನಂತರ ಈತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶಿವಕುಮಾರ ಬಿನ್ ಕರಿಯಪ್ಪ, 30 ವರ್ಷ, ಗೊಲ್ಲರು, ಅಂಗಡಿ ವ್ಯಾಪಾರ, ವಾಸ ಹುಚ್ಚನಹಟ್ಟಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ಎಂದು ತಿಳಿಸಿದನು. ನಂತರ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ

1)      90 ML ನ HYWARDS whiskey ಟೆಟ್ರಾ ಪ್ಯಾಕೆಟ್ಟುಗಳು - 36

2)     180 ML ನ BAG PIPER DELUX WHISKEY ಟೆಟ್ರಾ ಪ್ಯಾಕೆಟ್ - 1

ದೊರೆತಿದ್ದು, ಇವುಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಈ ಮೇಲ್ಕಂಡ ಮದ್ಯದ ಒಟ್ಟು ಅಂದಾಜು ಬೆಲೆ 1095/ ರೂಗಳಾಗಿರುತ್ತೆ. ಆದ್ದರಿಂದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಹಾಜರ್ ಪಡಿಸುತ್ತಿದ್ದು, ಈತನ ವಿರುದ್ಧ ಕಲಂ 32, 34 ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿ ನೀಡಿದ  ಜ್ಞಾಪನವನ್ನು ಪಡೆದು   ಕೇಸು ದಾಖಲಿಸಿರುತ್ತೆ

ಹೆಬ್ಬೂರು ಪೊಲೀಸ್ ಠಾಣಾ ಮೊ.ಸಂ. 201/2017279, 304(ಎ) ಐ.ಪಿ.ಸಿ

ದಿನಾಂಕ:12-11-2017 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದುದಾರರಾದ ಮರಿಯಪ್ಪ ಬಿನ್ ಲೇ|| ನರಸಿಂಹಯ್ಯ, 42 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕಲ್ಯಾಣಪುರ ಕಾಲೋನಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಭಾಗ್ಯಮ್ಮ ಹಾಗೂ ಮಕ್ಕಳಾದ ಅವಿನಾಶ್‌ ಮತ್ತು ಮಂಜುನಾಥ್‌ ರವರೊಂದಿಗೆ ವಾಸವಾಗಿದ್ದು, ದಿನಾಂಕ:11/11/2017 ರಂದು ಸಾಯಂಕಾಲ ನನ್ನ ಮಗನಾದ ಮಂಜುನಾಥನು ನಮ್ಮ ಬಾಬ್ತು ಕೆಎ-52-ಇ-5958 ನೇ ಪಲ್ಸರ್ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಸಂಗಲಾಪುರ ಗ್ರಾಮಕ್ಕೆ ಆಳುಗಳನ್ನು ಕರೆದುಕೊಂಡು ಬರಲೆಂದು ಹೋಗಿದ್ದು, ನಂತರ ಅದೇ ದಿವಸ ರಾತ್ರಿ ಸುಮಾರು 07-00 ಗಂಟೆ ಸಮಯದಲ್ಲಿ ನರಸಾಪುರ ಗ್ರಾಮದ ವಾಸಿಯಾದ ತಿಮ್ಮೇಗೌಡ ರವರು ನನಗೆ ಪೋನ್‌ ಮಾಡಿ ಇದೇ ದಿವಸ ಸಾಯಂಕಾಲ ಸುಮಾರು 06-45 ಗಂಟೆ ಸಮಯದಲ್ಲಿ ನಿಮ್ಮ ಮಗನಾದ ಮಂಜುನಾಥನು ಕೆಎ-52-ಇ-5958 ನೇ ಪಲ್ಸರ್ ದ್ವಿಚಕ್ರ ವಾಹನದಲ್ಲಿ ನರಸಾಪುರ ಕಡೆಯಿಂದ ಸಂಗಲಾಪುರ ಕಡೆಗೆ ಮೊರಾರ್ಜಿ ದೇಸಾಯಿ ಶಾಲೆಯ ಬಳಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗಕ್ಕೆ ಬಿದ್ದು ಅಪಘಾತವಾಗಿರುತ್ತೇಂತಾ ಪೋನ್‌ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನನ್ನ ಮಗನಿಗೆ ತಲೆಗೆ ಹಾಗೂ ಮುಖಕ್ಕೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನಂತರ ಗಾಯಗೊಂಡಿದ್ದ ನನ್ನ ಮಗ ಮಂಜುನಾಥನನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಪರಿಶೀಲಿಸಿದ ವೈದ್ಯಾಧಿಕಾರಿಗಳು ನನ್ನ ಮಗ ಮಂಜುನಾಥನು ಮೃತಪಟ್ಟಿರುವುದಾಗಿ ತಿಳಿಸಿದರು. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಮಗ ಮಂಜುನಾಥನ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ನಾನು ನನ್ನ ಮಗ ಮಂಜುನಾಥನು ಮೃತಪಟ್ಟಿರುವ ವಿಚಾರವನ್ನು ನಮ್ಮ ಸಂಬಂಧಿಕರುಗಳಿಗೆಲ್ಲಾ ತಿಳಿಸಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತಕ್ಕೀಡಾದ ಕೆಎ-52-ಇ-5958 ನೇ ಪಲ್ಸರ್ ದ್ವಿಚಕ್ರ ವಾಹನವನ್ನು ಮೋರಾರ್ಜಿ ಶಾಲೆಯ ಹತ್ತಿರ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್  ಠಾಣಾ ಮೊ.ಸಂ.101/2017, ಕಲಂ:323.324.504.506.ರೆ/ವಿ 34 ಐಪಿಸಿ.

ದಿನಾಂಕ:12/11/2017 ರಂದು  ಮದ್ಯಾಹ್ನ 02-00 ಗಂಟೆ ಸಮಯಕ್ಕೆ ಪಿರ್ಯಾದಿ ಅಶ್ವತ್ತನಾರಾಯಣ ಬಿನ್ ಲೇ|| ವೆಂಕಟರವಣಪ್ಪ, 55 ವರ್ಷ, ಕುರುಬ ಜನಾಂಗ, ಜಿರಾಯ್ತಿ ಕೆಲಸ, ನಾಗಲಾಪುರ ಗ್ರಾಮ,, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ:12/11/2017 ರಂದು ಮದ್ಯಾಹ್ನ ಸುಮಾರು 12:00 ಗಂಟೆಯ ಸಮಯದಲ್ಲಿ ನಮ್ಮ ಅಣ್ಣ ತಮ್ಮಂದಿರಾದ ಭೂತರಾಜು ಬಿನ್ ದಾಸಣ್ಣ,  ಭೂತರಾಜನ ಭಾವನಾದ  ಶಿವಣ್ಣ ಬಿನ್ ಸಿದ್ದಪ್ಪ, ಶಿವಣ್ಣನ ಮಗನಾದ  ರಾಮಲಿಂಗ, ಶಿವಣ್ಣನ ಅಳಿಯನಾದ  ಅನಂತ, ಎಂಬುವರು  ನನ್ನ ತಮ್ಮ ಶ್ರೀನಿವಾಸನ ಬಾಬ್ತು ಜಮೀನಿನಲ್ಲಿರುವ ಜಾಲಿ ಮರವನ್ನು  ಕಡಿಯುತ್ತಿದ್ದರು. ಆಗ ಅಲ್ಲಿಯೇ ಜಮೀನಿನಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ  ನನ್ನ ತಮ್ಮ ಶ್ರೀನಿವಾಸನು ಅವರ ಬಳಿ  ಹೋಗಿ ಏಕೆ ಜಾಲಿಮರವನ್ನು ಕಡಿಯುತ್ತಿದ್ದೀರಾ ಎಂತ ಕೇಳಿದ್ದಕ್ಕೆ ಮೇಲ್ಕಂಡ ನಾಲ್ಕು ಜನರು ನನ್ನ ತಮ್ಮ ಶ್ರೀನಿವಾಸನನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಭೂತರಾಜು ಎಂಬುವನು ಏಕಾಏಕಿ ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ನನ್ನ ತಮ್ಮ ಶ್ರೀನಿವಾಸನ ತಲೆಗೆಹೊಡೆದು ರಕ್ತಗಾಯ ಪಡಿಸಿದನು. ನಂತರ ಶಿವಣ್ಣ,ರಾಮಲಿಂಗ ಹಾಗೂ ಅನಂತ  ರವರುಗಳು ಕೈಗಳಿಂದ  ಶ್ರೀನಿವಾಸನ ಮೈ ಕೈ ಗೆ ಹೊಡೆದು ಕಾಲುಗಳಿಂದ ತುಳಿದರು. ಗಲಾಟೆ ಶಬ್ದ ಕೇಳಿಸಿಕೊಂಡು ಸ್ಥಳಕ್ಕೆ ಬಂದ ನನ್ನ ತಮ್ಮ ಶ್ರೀನಿವಾಸನ ಹೆಂಡತಿ ಮಂಜಮ್ಮ ಳನ್ನು ಸಹ ಮೇಲ್ಕಂಡವರು ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ  ಮಾತುಗಳಿಂದ ಬೈದರು. ಅಷ್ಠರಲ್ಲಿ ಅಲ್ಲಿಯೇ ಇದ್ದ ನಾನು ಮತ್ತು ನಮ್ಮ ಗ್ರಾಮದ ಚಿಕ್ಕಣ್ಣ ಎಂಬುವರು ಗಲಾಟೆ ಬಿಡಿಸಿ ಸಮಾದಾನ ಪಡಿಸಿದೆವು. ಅಷ್ಟಕ್ಕೂ ಸುಮ್ಮನಾಗದ ಭೂತರಾಜು,ಶಿವಣ್ಣ,ರಾಮಲಿಂಗ,ಅನಂತ ವರುಗಳು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲಾ ನಿಮಗೊಂದು ಗತಿ ಕಾಣಿಸುತ್ತೇವೆಂತ  ಶ್ರೀನಿವಾಸ ಮತ್ತು ಆತನ ಹೆಂಡತಿ ಮಂಜಮ್ಮ ರವರಿಗೆ ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೋಗುವಾಗ ಭೂತರಾಜನು ತನ್ನ ಕೈಯಲ್ಲಿದ್ದ ದೊಣ್ಣೆಯನ್ನು  ಅಲ್ಲಿಯೇ ಎಸೆದು ಎಲ್ಲರೂ ಹೊರಟು ಹೋದರು. ನಂತರ ಗಾಯಗೊಂಡಿದ್ದ  ನನ್ನ ತಮ್ಮ ಶ್ರೀನಿವಾಸನನ್ನು ಆತನ  ಹೆಂಡತಿ ಮಂಜಮ್ಮ ಮತ್ತು ನನ್ನ ಮಗ ಸೋಮಶೇಖರ್ ರವರ  ಜೊತೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಆದ್ದರಿಂದ ನನ್ನ ತಮ್ಮ ಶ್ರೀನಿವಾಸ ಮತ್ತ ಆತನ ಹೆಂಡತಿ ಮೇಲೆ  ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಪಿರ್ಯಾದು ಅಂಶವಾಗಿರುತ್ತೆ.

ಪಟ್ಟನಾಯಕನಹಳ್ಳಿ  ಪೊಲೀಸ್ ಠಾಣಾ  ಮೊ ನಂ 127/17 ಕಲಂ 279,337 ಐಪಿಸಿ

ದಿನಾಂಕ:12-11-17 ರಂದು ಸಂಜೆ 06:15 ಗಂಟೆಗೆ  ಪಿರ್ಯಾದಿ ಕೆ ಎಸ್ ರಾಘವೇಂದ್ರ  ಬಿನ್ ಸುಬ್ಭಣ್ಣ, ಕಾಮಗೊಂಡನಹಳ್ಳಿ ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:03-11-17 ರಂದು ರಾತ್ರಿ 08:15 ಗಂಟೆ ಸಮಯದಲ್ಲಿ   ಪಿರ್ಯಾದಿ  ಮನೆಯ ಬಳಿ ಇದ್ದಾಗ  ಪಿರ್ಯಾದಿ ತಮ್ಮನಾದ ಮದುಸೂಧನ್ ಮೊಬೈಲ್ ಗೆ ಕರೆ ಮಾಡಿ ಉಗಣೆಕಟ್ಟೆ ಗೇಟ್ ಬಳಿ ಅಪಘಾತವಾಗಿದ್ದು, ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು  ಬೇಗ ಬಾ ಎಂತ ತಿಳಿಸಿದ್ದು, ಪಿರ್ಯಾದಿ ರವರು ಕೂಡಲೇ ಶಿರಾ ಸರ್ಕಾರಿ ಆಸ್ಪತ್ರೆಗೆ ಬಂದ ನೋಡಲಾಗಿ ಪಿರ್ಯಾದಿ ತಮ್ಮ  ಆಸ್ಪತ್ರೆಯಲ್ಲಿ ಚಿಕಿತ್ಸೆ   ಪಡೆಯುತ್ತಿದ್ದು,  ಈತನಿಗೆ ಬಲಭುಜಕ್ಕೆ, ಬಲಗಾಲಿಗೆ, ಮತ್ತು ತಲೆಗೆ ಏಟುಗಳು ಬಿದ್ದಿದ್ದು  ವಿಚಾರ ಮಾಡಿ  ತಿಳಿಯಲಾಗಿ ದಿ:03-11-17ರಂದು ಪಿರ್ಯಾದಿ ತಮ್ಮ ಮದುಸೂಧನ್ ಮತ್ತು ಆತನ ಸ್ನೇಹಿತ ಹರೀಶ್ ಬಿನ್ ಕರಿಯಪ್ಪ, ಕಾಮಗೊಂಡನಹಳ್ಳಿ ಗ್ರಾಮ, ಶಿರಾ ತಾಲ್ಲೋಕ್ ಇಬ್ಬರು ಶಿರಾದಲ್ಲಿ ಕೆಲಸ ಮುಗಿಸಿಕೊಂಡು  ಶಿರಾ ದಿಂದ ಪಟ್ಟನಾಯಕನಹಳ್ಳಿ ಕಡೆಗೆ ಕೆಎ-06-ಇಎ-0055 ನೇ ಮೋಟಾರು  ಸೈಕಲ್ ನಲ್ಲಿ  ಮೋಟಾರು ಸೈಕಲ್ ಅನ್ನು ಹರೀಶ್ ರವರು ಚಾಲನೆ ಮಾಡಿಕೊಂಡು  ಮದುಸೂದನ್ ಬೈಕನ್  ಹಿಂಭಾಗ ಕುಳಿತುಕೊಂಡು  ಶಿರಾ ಅಮರಾಪುರ ರಸ್ತೆಯಲ್ಲಿ ರಾತ್ರಿ 08:00 ಗಂಟೆ ಸಮಯದಲ್ಲಿ ಉಗಣೆಕಟ್ಟೆ ಗೇಟ್ ಬಳಿ ಬೈಕ್ ಚಾಲನೆ ಮಾಡುತ್ತಿದ್ದ ಹರೀಶ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲಭಾಗಕ್ಕೆ ಬಿಳಿಸಿದ್ದು  ನನಗೆ ಪೆಟ್ಟಗಳು  ಬಿದ್ದಿರುತ್ತವೆ ಎಂತ ತಿಳಿಸಿದ್ದು, ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ  ತುಮಕೂರು , ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೇ  ಮೇರೆಗೆ  ಬೆಂಗಳೂರಿ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ  ತಡವಾಗಿ ಠಾಣೆಗೆ  ಬಂದು ಅಫಘಾತಪಡಿಸಿದ ಕೆಎ-06-ಇಎ-0055 ನೇ ನಂಬರಿನ ಮೋಟಾರು ಸೈಕಲ್ ಸವಾರ ಹರೀಶ್ ರವರ ಮೇಲೆ ಕಾನೂನು ರೀತ್ಯಾ ಕ್ರಮ   ಜರುಗಿಸಲು ನೀಡಿದ  ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ  ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 22/2017 ಕಲಂ 174 ಸಿಆರ್‌ಪಿಸಿ

ದಿನಾಂಕ: 12-11-2017 ರಂದು ಮದ್ಯಾಹ್ನ 2-45 ಗಂಟೆಗೆ ಬೆಂಗಳೂರು, ಬಸಾಪುರ ವಾಸಿ ಎಂ.ಉಮೇಶ್ ಬಿನ್ ಲೇಟ್ ಮಹದೇವ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ ತಮ್ಮ ರೂಪೇಶ್‌‌ ಎಂ ರವರಿಗೆ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ಚನ್ನಪಟ್ಟಣ ವಾಸಿ ರಶ್ಮಿ ಎಂಬುವರ ಜೊತೆ ಮದುವೆ ಮಾಡಿದ್ದು  ಇವರಿಗೆ ಇನ್ನೂ ಮಕ್ಕಳಿರುವುದಿಲ್ಲ.   ನನ್ನ ತಮ್ಮ ರೂಪೇಶ್‌ ಎಂ  ಗುಬ್ಬಿ ಪಟ್ಟಣದಲ್ಲಿ ಮುತ್ತೂಟ್‌‌ ಪಿನ್‌‌ ಕಾರ್ಪ್‌ ನಲ್ಲಿ ಬ್ರಾಂಚ್‌‌‌ ಮ್ಯಾನೇಜರ್‌‌ ಆಗಿದ್ದು, ತುಮಕೂರಿನ ಬನಶಂಕರಿ 2 ನೇ ಹಂತ ಹೇಮಾವತಿ ಬಡಾವಣೆ, ರಂಗನಾಥಸ್ವಾಮಿ ನಿಲಯದಲ್ಲಿ ವಾಸವಾಗಿದ್ದುಕೊಂಡು ಪ್ರತಿದಿನ ಗುಬ್ಬಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದರು.   ಈ ದಿನ ದಿನಾಂಕ: 12-11-2017 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ನನ್ನ ತಮ್ಮ ರೂಪೇಶನ ಹೆಂಡತಿ ರಶ್ಮಿ ರವರು ನನಗೆ ಪೋನ್ ಮಾಡಿ, ಈ ದಿನ ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ನಿಮ್ಮ ತಮ್ಮ ರೂಪೇಶ್‌‌ ರವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಾತ್‌‌ರೂಮಿನಲ್ಲಿ ಕೆಳಕ್ಕೆ ಕುಸಿದುಬಿದ್ದಿದ್ದು, ತಕ್ಷಣ ನೋಡಿ ನಾನು ಹಾಗೂ ನಮ್ಮ ಮನೆಯ ಮಾಲೀಕರ ಮಗನಾದ ಪುನಿತ್‌‌ ರವರುಗಳು ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ರೂಪೇಶ್‌‌‌ನನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುತ್ತಾರೆಂತಾ ವಿಚಾರ ತಿಳಿಸಿರುತ್ತಾರೆ. ರೂಪೇಶ್‌‌ ರವರ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟಿರುತ್ತೇವೆ ಬೇಗ ಬನ್ನಿ ಎಂತಾ ಪೋನ್ ಮಾಡಿ ವಿಚಾರ ತಿಳಿಸಿದರು.  ಆಗ ನಾನು ತಕ್ಷಣ ಬೆಂಗಳೂರಿನಿಂದ ಹೊರಟು ತುಮಕೂರಿಗೆ ಆಸ್ಪತ್ರೆಯ ಬಳಿಗೆ ಬಂದು ಆಸ್ಪತ್ರೆಯ ಶವಾಗಾರದಲ್ಲಿರುವ ನನ್ನ ತಮ್ಮ ರೂಪೇಶ್‌ನ ಶವವನ್ನು ನೋಡಿ, ನಂತರ ಶವಾಗಾರದ ಬಳಿಯಲ್ಲಿಯೇ ಇದ್ದ ನನ್ನ ತಮ್ಮ ರೂಪೇಶ್‌‌ನ ಹೆಂಡತಿ ರಶ್ಮಿ ರವರನ್ನು ಕೂಲಂಕುಶವಾಗಿ ವಿಚಾರ ಮಾಡಿದ್ದು,  ನನ್ನ ತಮ್ಮನಿಗೆ ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತೆ.   ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ ತಡವಾಗಿ ಈಗ ತುಮಕೂರು ಜಯನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ತಮ್ಮ ರೂಪೇಶ್‌‌‌ ಎಂ. ಹೃದಯಾಘಾತದಿಂದ ಮೃತಪಟ್ಟಿರುತ್ತಾನೆ.  ಮೃತನ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ.   ತಾವು ದಯಮಾಡಿ ಆಸ್ಪತ್ರೆಯ ಶವಾಗಾರದ ಬಳಿಗೆ ಬಂದು ನನ್ನ ತಮ್ಮ ರೂಪೇಶ್‌‌ ಎಂ. ಶವವನ್ನು ಪರಿಶೀಲಿಸಿ ಶವಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಪಟ್ಟನಾಯಕನಹಳ್ಳಿ  ಪೊಲೀಸ್ ಠಾಣಾ  ಮೊ ನಂ 126/17 ಕಲಂ 279 ಐಪಿಸಿ ಮತ್ತು 187 ಐ ಎಂ ವಿ ಆಕ್ಟ್

ದಿನಾಂಕ:12-11-17 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾದಿ ನಾಗಭೂಷಣ ಬಿನ್ ಚಂದ್ರಪ್ಪ, ತಮ್ಮಡೆಹಳ್ಳಿ, ಮಡಕಶಿರಾ ತಾಲ್ಲೋಕ್,ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ನಾಗಭೂಷಣ ರವರು ದಿನಾಂಕ:11-11-2017 ರಂದು  ರಾತ್ರಿ 09:15 ಗಂಟೆ ಸಮಯದಲ್ಲಿ ಅಮರಾಪುರದಿಂದ ಶಿರಾಕ್ಕೆ ಹೋಗಲು ಕೆಎ-52-ಎ-2327ನೇ ಇಂಡಿಗೊECS ರ ಕಾರನ್ನು ಚಾಲನೆ ಮಾಡಿಕೊಂಡು   ಗೌಡಗೆರೆ ಹೋಬಳಿ, ಕೆರೆಯಾಗಲಹಳ್ಳಿ ಸಮೀಪ ತಿರುವಿನಲ್ಲಿ ಬರುತ್ತಿರುವಾಗ ಎದುರಿಗೆ ಬಂದ ಕೆಎ-22-ಬಿ-3822 ನೇ ನಂಬರಿನ ಬಸ್ಸಿನ ಚಾಲಕನು ತನ್ನ ಬಸ್ ಅನ್ನು  ಅತಿವೇಗ  ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆಸಿ ಬಸ್ ಅನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಅಪಘಾತದಲ್ಲಿ ಕಾರಿನ ಮುಂಭಾಗ ಮತ್ತು ಬಲಭಾಗ ಸಂಪೂರ್ಣವಾಗಿ  ಜಖಂಗೊಂಡಿದ್ದು ಯಾರಿಗು ಪೆಟ್ಟಗಳು ಆಗಿರುವುದಿಲ್ಲ, ಅಪಘಾತಪಡಿಸಿದ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 


Crime Incidents 12-11-17

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ-31/2017 ಕಲಂ 174 ಸಿಆರ್‌ಪಿಸಿ

ದಿನಾಂಕ:11-11-2017 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿಯಾದ ವನಜಾಕ್ಷಮ್ಮ ಕೋಂ ಗಂಗರಾಮಯ್ಯ, 52 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಬನದಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನಮಗೆ ಕೃಷ್ಣಯ್ಯ ಮತ್ತು ಪ್ರಸನ್ನಕುಮಾರ್ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರೂ ಸಹ ಕೆಲಸದ ನಿಮಿತ್ತ ಡಾಬಸ್ ಪೇಟೆಗೆ ಹೋಗಿ ವಾರಕ್ಕೆ ಒಂದು ಸಲ ಊರಿಗೆ ಬಂದು ಹೋಗುತ್ತಿರುತ್ತಾರೆ, ಈಗಿರುವಾಗ್ಗ ನನ್ನ ಗಂಡನಾದ ಗಂಗರಾಮಯ್ಯ ಸುಮಾರು 55 ವರ್ಷ, ಇವರಿಗೆ ಈಗ್ಗೆ ಸುಮಾರು ಎರಡು ಮೂರು ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ಗುಣಮುಖರಾಗಿರಲಿಲ್ಲ. ನನ್ನ ಯಜಮಾನರಾದ ಗಂಗರಾಮಯ್ಯ ರವರು ತಮಗೆ ಬರುತ್ತಿದ್ದ ಹೊಟ್ಟೆ ನೋವು ವಾಸಿಯಾಗಲಿಲ್ಲವೆಂತ ಯಾವಾಗಲೂ ಯೋಚಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಈಗಿರುವಾಗ್ಗೆ ದಿನಾಂಕ 07/11/2017 ರಂದು ಮಧ್ಯ ರಾತ್ರಿ ಸುಮಾರು 12-00 ಗಂಟೆಯಲ್ಲಿ ನಾನು ನಿದ್ರೆ ಮಾಡುತ್ತಿದ್ದಾಗ ನಮ್ಮ ಯಜಮಾನರು ರಾತ್ರಿ ಓಡಾಡುತ್ತಿದ್ದನ್ನು ಕಂಡು ಏಕೆ ಎಂದು ಕೇಳಿದಾಗ ನಾನು ಹೊಟ್ಟೆ ನೋವನ್ನು ತಾಳಲಾರದೆ ತೊಗರಿ ಗಿಡಕ್ಕೆ ಇಟ್ಟಿದ್ದ ಔಷಧಿಯನ್ನು ಕುಡಿದಿರುತ್ತೇನೆ ಎಂದು ತಿಳಿಸಿದರು. ನಂತರ ನಾನು ನನ್ನ ಮಗನಾದ ಕೃಷ್ಣಯ್ಯ ರವರಿಗೆ ಪೋನ್‌ ಮಾಡಿ ವಿಚಾರ ತಿಳಿಸಿದ್ದು, ನಂತರ ನಾನು ನನ್ನ ಯಜಮಾನರಾದ ಗಂಗರಾಮಯ್ಯ ರವರನ್ನು ಅಲ್ಲಿಗೆ ಬಂದ 108 ಆಂಬುಲೆನ್ಸ್ ನಲ್ಲಿ ನನ್ನ ಸಂಬಂಧಿಯಾದ ಗರುಡಪ್ಪ ಹಾಗೂ ಗ್ರಾಮದ ಇತರರ ಸಹಾಯದಿಂದ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಇದೇ ದಿವಸ ಅಂದರೆ ದಿನಾಂಕ:11-11-2017 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ನನ್ನ ಯಜಮಾನರಾದ ಗಂಗರಾಮಯ್ಯ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನನ್ನ ಯಜಮಾನರಾದ ಗಂಗರಾಮಯ್ಯ ರವರು ತಮಗೆ ಬರುತ್ತಿದ್ದ ಹೊಟ್ಟೆ ನೋವಿನ ಭಾಧೆ ತಾಳಲಾರದೇ ತಮ್ಮಷ್ಟಕ್ಕೆ ತಾವೇ ತೊಗರಿ ಗಿಡಕ್ಕೆ ಹೊಡೆಯುವ ಯಾವುದೋ ಒಂದು ಔಷಧಿಯನ್ನು ಸೇವಿಸಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಮೃತ ಗಂಗರಾಮಯ್ಯ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಯು ಡಿ ಆರ್ ನಂ-31/2017 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 


Page 1 of 3
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 61 guests online
Content View Hits : 193498
Hackguard Security Enabled