lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ. -: Date: 24-10-17 :- ತಿಲಕ್‌‌ಪಾರ್ಕ್‌ ಪೊಲೀಸರ ಕಾರ್ಯಾಚರಣೆ ಸರಗಳ್ಳನ... >>     >> ಮಾನ್ಯರೆ, ದಿನಾಂಕ: 21-10-2017 ರ ಶನಿವಾರ ದಂದು ಬೆಳಗ್ಗೆ 8:00 ಗಂಟೆ ಗೆ  ಹುತಾತ್ಮ ರ ದಿನಾಚರಣೆ... >> ದಿನಾಂಕ: 16-10-2017 :: ಪತ್ರಿಕಾ ಪ್ರಕಟಣೆ. :: -: ತಿಲಕ್ ಪಾರ್ಕ್‌  ಪೊಲೀಸರ ಕಾರ್ಯಾಚರಣೆ :- ಮನೆ... >> ಪತ್ರಿಕಾ ಪ್ರಕಟಣೆ   ತಿಪಟೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಯ... >> ನಿರ್ಗಮನ ಪಥ ಸಂಚಲನ 2017 >> ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು... >>   -:  ದಿನಾಂಕ: 03/10/2017  :- ::   ಪತ್ರಿಕಾ ಪ್ರಕಟಣೆ     :: ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ... >>   : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< October 2017 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
October 2017

Monday, 23 October 2017

Press Note 24-10-17

ಪತ್ರಿಕಾ ಪ್ರಕಟಣೆ.

-: Date: 24-10-17 :-

ತಿಲಕ್‌‌ಪಾರ್ಕ್ ಪೊಲೀಸರ ಕಾರ್ಯಾಚರಣೆ

ಸರಗಳ್ಳನ ಬಂಧನ. 4,00,000/-ರೂ ಬೆಲೆ ಬಾಳುವ ಚಿನ್ನದ ಸರಗಳು ವಶ.

 

 


ತುಮಕೂರಿನ ನಗರದ ದೇವರಾಯಪಟ್ಟಣ, ಜಯನಗರ, ಮತ್ತು  ಹಿರೇಹಳ್ಳಿ,  ಹಾಗೂ ಹೆಬ್ಬೂರು ಗಳಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಯಾದ ಮೊಹಮದ್‌ ದಸ್ತಗಿರ್‌  @ ದಸ್ತು @ ಗೌಸ್ @ ಸಲೀಂ  ಬಿನ್‌ ಲೇ” ಅಮೀರ್‌ಜಾನ್‌, 41 ವರ್ಷ, ಮುಸ್ಲಿಂ, ಬಾಳೆಹಣ್ಣು ವ್ಯಾಪಾರ, ವಾಸ:- ಬಸ್‌ ನಿಲ್ದಾಣದ ಪಕ್ಕದ ರಸ್ತೆ, ಮುರುಗಮಲ್ಲ  ಗ್ರಾಮ, ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಈತನನ್ನು ದಸ್ತಗಿರಿ ಮಾಡಿ ಠಾಣಾ ಮೊನಂ-114/2017 ಕಲಂ 41 ಕ್ಲಾಸ್‌(ಡಿ) ರೆ/ವಿ 102 ಸಿಆರ್‌ಪಿಸಿ ಮತ್ತು 379  ಐಪಿಸಿ ರೀತ್ಯ ಪ್ರಕರಣ ಧಾಖಲಿಸಿಕೊಂಡು ತನಿಖೆ ಮುಂದುರೆಯಿಸಿದ್ದು,

ಈ ಸರಗಳ್ಳತನದ ಪ್ರಕರಣಗಳನ್ನು ಪತ್ತೆ ಮಾಡಲು ಆರಕ್ಷಕ ಅಧೀಕ್ಷಕರಾದ ಡಾ|| ದಿವ್ಯಾ,ವಿ,ಗೋಪಿನಾಥ್ ಐಪಿಎಸ್ ಮತ್ತು ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ರವರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ದಿನಾಂಕ:-22-10-2017 ರಂದು ಸಂಜೆ 7-00 ಗಂಟೆಯಲ್ಲಿ ಪಿಎಸ್ಐ ಲಕ್ಷ್ಮಯ್ಯ. ಎಂ.ಬಿ ಸಿಬ್ಬಂದಿಯವರಾದ ಹೆಚ್‌ಸಿ 207, ಶಾಂತರಾಜು.ಪಿ  ಹೆಚ್‌ಸಿ 104, ಎಂ.ಆರ್‌ ಸತ್ಯನಾರಾಯಣ, ಪಿಸಿ 633, ಬಸವರಾಜು.ಟಿ. ಮತ್ತು ಪಿಸಿ 593 ಹನುಮರಂಗಯ್ಯ  ರವರುಗಳು ಹಿಡಿದಿರುತ್ತಾರೆ.

ವಿಚಾರಣೆ ಕಾಲದಲ್ಲಿ ಆರೋಪಿಯಾದ ಆರೋಪಿಯಾದ ಮೊಹಮದ್‌ ದಸ್ತಗಿರ್‌  @ ದಸ್ತು @ ಗೌಸ್ @ ಸಲೀಂ  ಬಿನ್‌ ಲೇ” ಅಮೀರ್‌ಜಾನ್‌, ಈತನು ಬೆಂಗಳೂರು ನಾಯಂಡಹಳ್ಳಿಯಲ್ಲಿ ಮತ್ತು ತುಮಕೂರು ಜಿಲ್ಲೆ ಹೆಬ್ಬೂರಿನಲ್ಲಿ ಒಟ್ಟು 4 ಚಿನ್ನದ ಸರಗಳನ್ನು ಮಾರಾಟ ಮಾಡಿದ್ದು, ಒಟ್ಟು ತೂಕ 130 ಗ್ರಾಂ. ನಷ್ಟು ಚಿನ್ನದ ಸರಗಳನ್ನು  ವಶಪಡಿಸಿಕೊಳ್ಳಲಾಗಿರುತ್ತೆ.

ಈ ಪ್ರಕರಣಗಳನ್ನು ಪತ್ತೆ ಮಾಡಲು ಎಸ್ಪಿ ಡಾ|| ದಿವ್ಯಾ,ವಿ,ಗೋಪಿನಾಥ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಡಿವೈಎಸ್‌ಪಿ  ಕೆ.ಎಸ್‌ ನಾಗರಾಜು ರವರ ನೇತೃತ್ವದಲ್ಲಿ ತಿಲಕ್‌ಪಾರ್ಕ್‌  ವೃತ್ತ ನಿರೀಕ್ಷಕರಾದ ರಾಧಾಕೃಷ್ಣ.ಟಿ.ಎಸ್. ಪಿಎಸ್ಐ ಲಕ್ಷ್ಮಯ್ಯ.ಎಂ.ಬಿ., ಸಿಬ್ಬಂದಿಗಳಾದ, ಹೆಚ್‌ಸಿ 207, ಶಾಂತರಾಜು.ಪಿ  ಹೆಚ್‌ಸಿ 104, ಎಂ.ಆರ್‌ ಸತ್ಯನಾರಾಯಣ, ಪಿಸಿ 633, ಬಸವರಾಜು.ಟಿ. ಮತ್ತು ಪಿಸಿ 593 ಹನುಮರಂಗಯ್ಯ ರವರುಗಳು ಶ್ರಮಿಸಿರುತ್ತಾರೆ.


Crime Incidents 23-10-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 186/2017 ಕಲಂ 87 ಕೆ.ಪಿ.ಆಕ್ಟ್

ದಿನಾಂಕ: 22-10-2017 ರಂದು ಮದ್ಯಾಹ್ನ: 3-00 ಗಂಟೆಯಲ್ಲಿ ನಾನು ಹೆಬ್ಬೂರು ಹತ್ತಿರ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರು ನನಗೆ ಪೋನ್ ಮಾಡಿ ಹೆಬ್ಬೂರು ಠಾಣಾ ಸರಹದ್ದಿನ ಚೋಳಂಬಳ್ಳಿ ಮಜಿರೆ, ಸೂಲೆಮಾನ್ ಪಾಳ್ಯ ಗ್ರಾಮದ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸುಮಾರು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆಂದು ಖಚಿತ ಮಾಹಿತಿ ನೀಡಿರುತ್ತಾರೆ. ಆದ್ದರಿಂದ ಸದರಿ ಇಸ್ಪೀಟ್ ಜೂಜಾಟಗಾರರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಗೌರವಾನ್ವಿತ ನ್ಯಾಯಾಲಯದಲ್ಲಿ ಅನುಮತಿ ಪಡೆದು, ಅದರಂತೆ ನಾನು ಮತ್ತು ನಮ್ಮ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಚೋಳಂಬಳ್ಳಿ ಮಜಿರೆ, ಸೂಲೆಮಾನ್ ಪಾಳ್ಯ ಗ್ರಾಮದ ಆಲದ ಮರದ ಬಳಿ  ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ, ಎಲ್ಲರೂ ಕೆಳಗೆ ನಿಂತು ನೋಡಲಾಗಿ, 6 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಜೂಜಾಟ ಆಡುತ್ತಿದ್ದು, ಒಳಗೆ 50 ಹೊರಗೆ 100 ರೂಪಾಯಿ ಎಂತಾ ಕೂಗಾಡುತ್ತಿದ್ದವರನ್ನು ಸಬ್ ಇನ್ಸ್‌ಪೆಕ್ಟರ್‌ ರವರು ಹಾಗೂ ಸಿಬ್ಬಂದಿಯವರು ಸುತ್ತುವರೆದು ಯಾರೂ ಮೇಲಕ್ಕೆ ಏಳದಂತೆ ತಾಕೀತು ಮಾಡುತ್ತಿರುವಾಗ್ಗೆ 6 ಜನರ ವ್ಯಕ್ತಿಗಳು ಓಡಲು ಶುರು ಮಾಡಿದ್ದು ಅವರುಗಳನ್ನು ಸಿಬ್ಬಂದಿಗಳು ಬೆನ್ನಟ್ಟಲಾಗಿ ಇಬ್ಬರನ್ನು ಹಿಡಿದು ಇಬ್ಬರು ಆಸಾಮಿಗಳ ಪೈಕಿ ಒಬ್ಬ ಆಸಾಮಿಯ ಕೈಯಲ್ಲಿ ಇಸ್ಪೀಟು ಎಲೆಗಳಿದ್ದು, ಆತನ ಹೆಸರು ವಿಳಾಸ ಕೇಳಲಾಗಿ 1) ಅಮ್ಜಾದ್ ಖಾನ್ @ ಅಮ್ಜಾದ್ ಬಿನ್ ಗುಲಾಬ್ ಖಾನ್, 36 ವರ್ಷ, ಮುಸ್ಲಿಂ ಜನಾಂಗ, ನಾರಾಯಣ ಕ್ಲಿನಿಕ್, ಭಾರತಿ ಮೆಡಿಕಲ್, ಶಾಂತಿನಗರ, ತುಮಕೂರು 2) ಸುರೇಶ್  ಬಿನ್ ತಿಮ್ಮಯ್ಯ 42 ವರ್ಷ, ವಕ್ಕಿಲಿಗರು ಜನಾಂಗ, ಎಳನೀರು ವ್ಯಾಪಾರ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು  ಮತ್ತು ಓಡಿ ಹೋದರವನ್ನು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 3) ನಯಾಜ್, ಆಟೋ ಚಾಲಕ, ಚೋಳಂಬಳ್ಳಿ, ವಾಸ ಶಾಂತಿ ನಗರ, ತುಮಕೂರು 4) ಕೃಷ್ಣ ಬಿನ್ ಗಂಗಯ್ಯ, 35 ವರ್ಷ, ವಕ್ಕಲಿಗರು, ಆಟೋ ಚಾಲಕ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು 5) ನಾರಾಯಣ ಬಿನ್ ನರಸಿಂಹಮೂರ್ತಿ, 20 ವರ್ಷ, ವಕ್ಕಲಿಗರು ಜನಾಂಗ, ಫ್ಯಾಕ್ಟರಿ ಕೆಲಸ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು 6) ಸಲೀಂ,  ಆಟೋ ಚಾಲಕ, 5 ನೇ ಕ್ರಾಸ್, ಮರಳೂರು ದಿಣ್ಣೆ, ತುಮಕೂರು ಎಂತಾ ತಿಳಿಸಿದರು. ನಂತರ ಆಸಾಮಿಗಳು ಅಖಾಡದಲ್ಲಿ ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,700/-ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಗೋಣಿ ಚೀಲ ದೊರೆತಿದ್ದು, ನಂತರ ಸಬ್‌ ಇನ್ಸ್‌ಪೆಕ್ಟರ್‌ ರವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,700/- ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಗೋಣಿ ಚೀಲ ಅನ್ನು, ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡು, ಸದರಿ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದು ಪಂಚನಾಮೆಯೊಂದಿಗೆ ವಾಪಸ್ ಸಂಜೆ 5-30 ಗಂಟೆಗೆ ಬಂದು ಠಾಣಾ ಮೊ ನಂ 186/2017 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-187/2017 ಕಲಂ 324,504,506,143 ರೆ/ವಿ 149 ಐಪಿಸಿ

ದಿನಾಂಕ-22/10/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ಪವಿತ್ರ ಕೋಂ ಮಂಜುನಾಥ, 31 ವರ್ಷ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖೀತ ದೂರಿನ ಅಂಶವೇನೆಂಧರೆ ಈ ದಿನ ಮಧ್ಯಾಹ್ನ 2-00 ರಿಂದ 2-30 ರ ಸಮಯದಲ್ಲಿ ನಾವು ನಮ್ಮ ಜಮೀನಿನಲ್ಲಿ ಮನೆಯ ಸುತ್ತ-ಮುತ್ತ ಜೆಸಿಬಿ ಯಿಂದ ಸ್ವಚ್ಚ ಮಾಡಿಸುವಾಗ ನಮ್ಮ ಮನೆಯ ಬಾಡಿಗೆ ಮನೆಯಲ್ಲಿರುವ ಗೋವಿಂದಪ್ಪನವರು ಯಾವುದೇ ಹಕ್ಕು ಪತ್ರ ಮತ್ತು ಕ್ರಯಪತ್ರವಿಲ್ಲದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು, ನನಗೆ ಮತ್ತು ನನ್ನ ಅತ್ತೆಯಾದ ಭಾಗ್ಯಮ್ಮನವರಿಗೆ ಗೋವಿಂದಪ್ಪ ಮತ್ತು ಆತನ ಹೆಂಡತಿ ಮಮತ, ಅವರ ಮಕ್ಕಳಾದ ಗೌಮತಿ, ಗೀತಾಂಜಲಿ,ಹಾಗೂ  ತಮ್ಮಂದಿರಾದ ರವೀಂದ್ರ ಮತ್ತು ಮಹೇಂದ್ರ ಎಂಬುವವರು ನಮಗೆ ಕೆಟ್ಟ ಅವ್ಯಾಚ್ಯ ಶಬ್ದಗಳಿಂದ ಬೈದರು ಮತ್ತು ಜುಟ್ಟು ಹಿಡಿದು ನನ್ನನ್ನು ಏಳೆದಾಡಿದರೂ, ಗೋವಿಂದಪ್ಪರವರು ನನಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದರು. ಮತ್ತು ನನ್ನ ಮತ್ತು ನನ್ನ ಕುಂಟುಂಬವನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದರು. ಮತ್ತು ನಮ್ಮ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ಇರುವ ಇವರು ಅಕ್ರಮವಾಗಿ ಖಾತೆ ದಾಖಲಿಸಿಕೊಂಡಿರುತ್ತಾರೆ ಮತ್ತು ನಮಗೆ ಯಾವುದೇ ರೀತಿಯ ಬಾಡಿಗೆಯನ್ನು ಕೊಡುತ್ತಿಲ್ಲ, ಇದಕ್ಕೆ ಮಮತರವರ ತಮ್ಮ ರವೀಂದ್ರ ಮತ್ತು ಮಹೇಂದ್ರರವರ ಕುಮ್ಮಕ್ಕಿನಿಂದ ಈ ರೀತಿ ಮಾಡುತ್ತಿರುತ್ತಾರೆ, ನಮ್ಮ ಕುಟುಂಬಕ್ಕೆ ಏನಾದರೂ ತೊಂದರೆಯಾದಲ್ಲಿ ರವೀಂದ್ರ ಮತ್ತು ಮಹೇಂದ್ರ ಮತ್ತು ಗೋವಿಂದಪ್ಪ ನವರ ಕುಟುಂಬವೇ ಕಾರವಾಗಿರುತ್ತಾರೆ, ಆದ್ದರಿಂದ ನಮಗೆ ಸೂಕ್ತವಾದ ಕಾನೂನಿನ ರಕ್ಷಣೆಯನ್ನು ನೀಡಬೇಕೆಂದು ಮತ್ತು ಆಸ್ತಿಯನ್ನು ರಕ್ಷಣೆ ಮಾಡಿಕೊಡಬೇಕೆಂದು ಹಾಗೂ ಮೇಲ್ಕಂಡವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ನಮ್ಮ ಗ್ರಾಮದ ಹಿರಿಯರು ನ್ಯಾಯಪಂಚಾಯತಿ ಮಾಡುತ್ತೇವೆ ಎಂದು ಹೇಳಿದ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇವೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-187/2017 ಕಲಂ 324,504,506,143 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 187/2017 ಕಲಂ 279,337,ಐಪಿಸಿ ರೆ/ವಿ 134(ಎ&ಬಿ), 187 ಐ ಎಂ ವಿ ಆಕ್ಟ್

ದಿನಾಂಕ  22/10/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ಸಿ.ಸುರೇಶ್ ಬಿನ್ ಚಿಕ್ಕರಂಗಯ್ಯ,42 ವರ್ಷ, ಬೈಚೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ಠಾಣೆಗೆ ಹಾಜರಾಗಿ ಬರೆದುಕೊಟ್ಟ ದೂರಿನಾಂಶವೇನೆಂದರೆ ದಿನಾಂಕ 22/10/2017 ರಂದು ಬೆಳಿಗ್ಗೆ 6-30 ಗಂಟೆಗೆ ನಮ್ಮ ಗ್ರಾಮದಿಂದ ಪ್ರತಿದಿನ ಹೆಬ್ಬೂರು ಗ್ರಾಮದ ಕಾಲೇಜಿನ ಅವರಣದಲ್ಲಿ ಜಾಗಿಂಗ್ ಮಾಡಿಕೊಂಡು ನಮ್ಮ ಊರಿಗೆ ಹಿಂದಿರುಗುವ ಸಮಯದಲ್ಲಿ ಹೆಬ್ಬೂರು ಗ್ರಾಮದ ತುಮಕೂರು-ಕುಣಿಗಲ್ ರಸ್ತೆಯ ಎಡಬದಿಯಲ್ಲಿ ಪಶುವೈದ್ಯ ಆಸ್ಪತ್ರೆಯ ಮುಂಭಾಗ ನಡೆದುಕೊಂಡು ಹೋಗುತ್ತಿದಾಗ ಬೆಳಿಗ್ಗೆ 7-00 ಗಂಟೆಗೆ ಸಮಯ ಆಗಿತ್ತು. ಅದೇ ಸಮಯಕ್ಕೆ ಗುಬ್ಬಿ ತಾಲ್ಲೋಕು ಸಿ.ಎಸ್. ಪುರ ಹೋಬಳಿ ದೊಡ್ಡ ಚೆಂಗಾವಿ ಗ್ರಾಮದ ವಾಸಿ  ಸುಮಾರು 35 ವರ್ಷ ವಯಸ್ಸಿನ  ಇಸ್ಮಾಯಿಲ್ ಬಿನ್ ಗೌಸ ಮೊಹಿದ್ದೀನ್ ಎಂಬುವರು ಅವರಿಗೆ ಸೇರಿದ ಕೆಎ-06-ಡಿ-0067 ಪ್ಯಾಸೆಂಜರ್ ಅಟೋ ರಿಕ್ಷಾವನ್ನು ಸದರಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆ ಹೋಗಲು ಬಂದ ಒಂದು ಇನ್ನೋವಾ ಕಾರನ್ನು ಅದರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕರೆಯಿಂದ  ಚಾಲನೆ ಮಾಡಿಕೊಂಡು ಬಂದುವನೇ ರಭಸದಿಂದ ಸದರಿ ಆಟೋ ರಿಕ್ಷಾಗೆ ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ ಪರಿಣಾಮ  ಅಟೋ   ರಿಕ್ಷಾ ಚಾಲಕ ಸೈಯದ್  ಇಸ್ಮಾಯಿಲ್ ರವರಿಗೆ ತಲೆಗೆ, ಬಲಭುಜಕ್ಕೆ  ಬಲಕಾಲಿನ ಮಂಡಿ ಕೆಳಗೆ ತೀವ್ರ ತರಹದ ಪೆಟ್ಟು ಬಿದ್ದು ರಕ್ತ ಸಾವ್ರವಾಯಿತು, ತಕ್ಷಣ ನಾನು  ಗಾಯಾಳುವನ್ನು ಉಪಚರಿಸಿದೆ, ನಂತರ ಸೈಯದ್ ಇಸ್ಮಾಯಿಲ್‌ನಿಗೆ ಅಪಘಾತ ಪಡಿಸಿದ  ಕಾರು ನಂಬರ್ ನೋಡಲಾಗಿ ಕೆಎ-64-ಎಂ-0533 ನೇ ಇನ್ನೋವಾ ಕಾರು ಆಗಿತ್ತು. ಅಟೋ ಮತ್ತು ಕಾರು ಎರಡು ವಾಹನಗಳು ಜಖಂ ಆಗಿ ಸ್ಥಳದಲ್ಲಿಯೇ ಇದ್ದವು. ತಕ್ಷಣ ಸಾರ್ವಜನಿಕರ ಸಹಾಯಕದ 108 ಅಂಬುಲೇನ್ಸ್‌ನಲ್ಲಿ ಚಿಕಿತ್ಸೆ ತುಮಕೂರು ನಗರದ ಅದಿತ್ಯ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಈ ದಿನ ಠಾಣೆಗೆ ತಡವಾಗಿ ಬಂದು  ಅಪಘಾತ ಪಡಿಸಿದ ಕೆಎ-64-ಎಂ-0533 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.18/2017, ಕಲಂ:174 ಸಿ.ಆರ್.ಪಿ.ಸಿ.

ದಿನಾಂಕ:22/10/2017 ರಂದು ಮದ್ಯಾಹ್ನ 01:00 ಗಂಟೆಗೆ ಪಿರ್ಯಾದಿ ರಮೇಶ.ಎನ್. ಬಿನ್ ಲೇ||ನರಸಿಂಹಪ್ಪ, 30 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ತಿಪ್ಪಾಪುರ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು. ಹಾಲಿವಾಸ-ವಿನಾಯಕ ನಗರ, ನಾಗಸಂದ್ರ ಪೋಸ್ಟ್, ತುಮಕೂರು ಮೈನ್ ರೋಡ್, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಹಾಲಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳು ಹಾಗೂ ನನ್ನ ತಮ್ಮ ಸುರೇಶನೊಂದಿಗೆ ವಾಸವಾಗಿರುತ್ತೇನೆ. ನಮ್ಮ ಸ್ವಂತ ಊರಾದ ತಿಪ್ಪಾಪುರದಲ್ಲಿ ನಮ್ಮ ಬಾಬ್ತು ಹಳೆಯ ಮನೆಯಿದ್ದು, ಸದರಿ ಮನೆಯಲ್ಲಿ ನಮ್ಮ ತಂದೆಯ ತಾಯಿ ಅಂದರೆ ನಮ್ಮ ಅಜ್ಜಿ ಲಕ್ಷ್ಮಮ್ಮ ಕೋಂ ಲೇ||ಚಿಕ್ಕರಾಮಯ್ಯ, 80 ವರ್ಷರವರು ಹಾಗೂ ನಮ್ಮ ತಾಯಿ ಲಕ್ಷ್ಮಮ್ಮರವರು ವಾಸವಾಗಿದ್ದರು. ಈಗ್ಗೆ 03-04 ದಿನಗಳ ಹಿಂದೆ ನನ್ನ ತಮ್ಮನಿಗೆ ಹುಷಾರಿಲ್ಲದ ಕಾರಣ ನಮ್ಮ ತಾಯಿ ಲಕ್ಷ್ಮಮ್ಮ ತಿಪ್ಪಾಪುರದಿಂದ ಬೆಂಗಳೂರಿನ ನಮ್ಮ ಮನೆಗೆ ಬಂದಿದ್ದು, ತಿಪ್ಪಾಪುರದಲ್ಲಿ ನಮ್ಮ ಅಜ್ಜಿ ಲಕ್ಷ್ಮಮ್ಮ ಒಬ್ಬರೆ ಇದ್ದರು. ಈ ದಿನ ಅಂದರೆ ದಿನಾಂಕ:22/10/2017 ರಂದು ಬೆಳಿಗ್ಗೆ ಸುಮಾರು 10:30 ಗಂಟೆಯ ಸಮಯದಲ್ಲಿ ನಮ್ಮ ಚಿಕ್ಕಪ್ಪನಾದ ರಾಮಚಂದ್ರಯ್ಯ ಎಂಬುವರು ಪೋನ್ ಮಾಡಿ ಊರಿನಲ್ಲಿದ್ದ ನಿಮ್ಮ ಬಾಬ್ತು ಹಳೆ ಮನೆಯ ಸ್ವಲ್ಪ ಭಾಗದ ಮೇಲ್ಛಾವಣೆಯು ಇದೇ ದಿನ ಬೆಳಿಗ್ಗೆ ಸುಮಾರು 10:00 ಗಂಟೆಯ ಸಮಯದಲ್ಲಿ ಕುಸಿದು ಬಿದ್ದು ಮನೆಯ ಒಳಗಡೆ ಇದ್ದ ನಿಮ್ಮ ಅಜ್ಜಿ ಲಕ್ಷ್ಮಮ್ಮ ರವರು ಕುಸಿದು ಬಿದ್ದ ಮೇಲ್ಛಾವಣಿಯ ಮಣ್ಣಿನ ಅಡಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ನೀವು ಬೇಗ ಊರಿಗೆ ಬನ್ನಿ ಎಂತ ತಿಳಿಸಿದರು. ಕೂಡಲೇ ನಾನು ಬೆಂಗಳೂರಿನಿಂದ ಹೊರಟು ತಿಪ್ಪಾಪುರಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಮಣ್ಣಿನ ಅಡಿಯಲ್ಲಿ ಲಕ್ಷ್ಮಮ್ಮ ರವರು ಸಿಕ್ಕಿಕೊಂಡು ಮೃಪಟ್ಟಿದ್ದರು. ನಂತರ ನಾನು ಮತ್ತು ನನ್ನ ತಮ್ಮ ಸುರೇಶ ಇಬ್ಬರು ಸೇರಿ ಮಣ್ಣಿನ ಅಡಿಯಲ್ಲಿ ಸಿಕ್ಕಿಕೊಂಡಿದ್ದ ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಮೃತ ದೇಹವನ್ನು ಹೊರಗೆ ತೆಗೆದಿರುತ್ತೇವೆ. ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ, ಆದ್ದರಿಂದ ಆಕಸ್ಮಿಕವಾಗಿ ಹಳೆ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟಿರುವ ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಮೃತ ದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 08/2017 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ: 22-10-17 ರಂದು  ಬೆಳಿಗ್ಗೆ 10-00 ಗಂಟೆಗೆ ಈ ಕೇಸಿನ ಪಿರ್ಯಾದಿ  ನಾಗರಾಜು ಬಿನ್ ಶಿವಣ್ಣ, 45 ವರ್ಷ, ಕುರುಬರು ದಸರಿಘಟ್ಟ, ತಿಪಟೂರು ತಾ ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ, ನನಗೆ ಕಾವ್ಯ  ಎಂಬ 15 ವರ್ಷದ ಮಗಳಿದ್ದು  ಈ  ದಿನ ದಿ:22-10-17 ರಂದು  ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ  ನನ್ನ ಮಗಳಾದ  ಕಾವ್ಯ & ಮಗ  ವರ್ಧನ  ರವರು ಹಸುವಿನ ಕರುವಿನ ಮೈ ತೊಳೆಯಲು  ನಮ್ಮ ಮನೆ ಮುಂದೆ  ನೀರಿರುವ  ಕಟ್ಟೆಗೆ  ಹೋಗಿದ್ದು ಸ್ವಲ್ಪ ಸಮಯದ ನಂತರ  ನನ್ನ ಮಗ ಕೂಗಿಕೊಂಡಿದ್ದು  ನಾನು & ನಮ್ಮ ಗ್ರಾಮದ ಮಂಜಣ್ಣ, ತಿಮ್ಮಯ್ಯ ಹಾಗೂ  ವೆಂಕಟೇಶ್  ರವರು ಹೋಗಿ ನೋಡಲಾಗಿ  ಕರುವಿನ ಮೈ ತೊಳೆಯಲು  ಹೋದ  ನನ್ನ ಮಗಳ  ಕಾಲಿಗೆ ಕರುವಿನ ಹಗ್ಗ  ಸುತ್ತಿ ಹಾಕಿಕೊಂಡು  ಕರು ನೀರಿರುವ  ಗುಂಡಿಗೆ ಎಳೆದುಕೊಂಡು ಹೋದ ಪರಿಣಾಮ ನನ್ನ ಮಗಳು ಕಾವ್ಯ ಆಕಸ್ಮಿಕವಾಗಿ  ನೀರಿಗೆ ಬಿದ್ದು , ಮುಳುಗುತ್ತಿದ್ದು  ನಾವುಗಳು ಆಕೆಯನ್ನು ಮೇಲಕ್ಕೆ ಎತ್ತಿ  ನೋಡಲಾಗಿ   ಅಷ್ಟರಲ್ಲಿ ಆಕೆ ನೀರು ಕುಡಿದು ಉಸಿರುಕಟ್ಟಿ ಮೃತಪಟ್ಟಿದ್ದಳು.  ನನ್ನ ಮಗಳು ಕರುವಿನ  ಮೈ  ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿಗೆ  ಬಿದ್ದು ಮೃತಪಟ್ಟಿರುತ್ತಾಳೆ  ಮುಂದಿನ ಕಾನೂನು ಕ್ರಮ ಜರುಗಿಸಿ ಎಂತಾ ಪಿರ್ಯಾದಿ ನೀಡಿದ  ದೂರು ಪಡೆದು  ಠಾಣಾ ಯು.ಡಿ.ಆರ್ ನಂ 08/17 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ  ಕೇಸು ದಾಖಲಿಸಿರುತ್ತೆSunday, 22 October 2017

Crime Incidents 22-10-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 166/2017 ಕಲಂ: 379 ಐ.ಪಿ.ಸಿ

 

ದಿನಾಂಕ: 21/10/2017 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ನಿಶಾಂತ್ ಶ್ರೀವಸ್ತವ, ಸ್ಟೇಷನ್ ಮಾಸ್ಟರ್, ಬಾಣಸಂದ್ರ ರೈಲ್ವೇ ಸ್ಟೇಷನ್ ವಾಸ: ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 18/09/2017 ರಂದು ರಾತ್ರಿ ತಿಪಟೂರು ಟೌನ್ ವಿನಾಯಕನಗರದಲ್ಲಿರುವ ನಮ್ಮ ಮನೆಯ ಮುಂಭಾಗದಲ್ಲಿ  ನನ್ನ ಸಹೋದರ ವಿಕಾಸ್ ಕುಮಾರ್ ಸಿಂನ್ಹ ರವರ ಹೆಸರಿನಲ್ಲಿರುವ ಎ.ಪಿ-01 ಎ.ಡಿ-8227 ನೇ ಕೆಂಪು ಬಣ್ಣದ ಪಲ್ಸರ್-180 ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು, ದಿನಾಂಕ: 19/09/2017 ರಂದು ಬೆಳಿಗ್ಗೆ 6-00 ಗಂಟೆಗೆ ನೋಡಲಾಗಿ ಸದರಿ ವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ನಂತರ ಗಾಬರಿಯಾಗಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಇತರೆ ಕಡೆಗಳಲ್ಲಿ ಹಾಗೂ ಇದುವರೆವಿಗೂ ಎಲ್ಲಾ ಕಡೆ ಹುಡುಕಲಾಗಿ ನನ್ನ ಬಾಬ್ತು ಮೇಲ್ಕಂಡ ಎ.ಪಿ-01 ಎ.ಡಿ-8227 ನೇ ಪಲ್ಸರ್-180 ದ್ವಿಚಕ್ರ ವಾಹನವು ಪತ್ತೆಯಾಗಿರುವುದಿಲ್ಲ. ಇದರ ಅಂದಾಜು ಬೆಲೆ ಸುಮಾರು 40,000/- ರೂಗಳಾಗಿದ್ದು, ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ.  142/201 ಕಲಂ 341, 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 21-10-2017 ರಂದು ರಾತ್ರಿ 9-15 ಗಂಟೆಯಲ್ಲಿ ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಮಂಚಗೋಡನಹಳ್ಳಿ ಗ್ರಾಮದ ವಾಸಿ ನಾಗಮ್ಮ ಕೋಂ ದಾಸಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿ ಅಂಶವೇನೆಂದರೆ, ನಾವು  ನಮ್ಮೂರ ಸಮೀಪ ಇರುವ ಸಂಕಾಪುರ ವಾಸಿ ಶಿವಣ್ಣ ರವರ ಅಡಿಕೆ ತೋಟದ ನಿಗಾ ನೋಡಿಕೊಳ್ಳುತ್ತಿದ್ದು ದಿನಾಂಕ: 21-10-2017 ರಂದು ಬೆಳಿಗ್ಗೆ 6-00 ಗಂಟೆಗೆ ನಮ್ಮ ಯಜಮಾನರಾದ ದಾಸಪ್ಪ ರವರು ಶಿವಣ್ಣರವರ ತೋಟಕ್ಕೆ ಹೋಗಿ ಅಡಿಕೆ ಪಟ್ಟೆಗಳನ್ನು ಆಯ್ದುಕೊಂಡು ವಾಪಾಸ್ ಮನೆಯ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಉತ್ತರಕಟ್ಟೆ ಕೆರೆ ಕೋಡಿಯ ಬಳಿ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರುಗಳು ನನ್ನ ಗಂಡನನ್ನು ತಡೆದು ಗಲಾಟೆ ಮಾಡುತ್ತಿದ್ದು, ನಮ್ಮ ಯಜಮಾನರು ಕಿರುಚಿಕೊಳ್ಳುತ್ತಿದ್ದರಿಂದ ನಾನು ಗಾಬರಿಯಲ್ಲಿ ಅಲ್ಲಿಗೆ ಹೋಗಿ ನೋಡಲಾಗಿ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರು ನಮ್ಮ ಯಜಮಾನರನ್ನು ಅಡ್ಡಗಟ್ಟಿ ನಿಲ್ಲಿಸಿ ಶಿವಣ್ಣ ರವರ ಅಡಿಕೆ ತೋಟದಲ್ಲಿ ಏಕೆ ಅಡಿಕೆ ಪಟ್ಟೆಗಳನ್ನು ತೆಗೆದುಕೊಂಡು ಬರುತ್ತೀಯಾ ಎಂತ ಏಕಾಏಕಿ ಜಗಳ ತೆಗೆದು ಲಕ್ಷ್ಮಣ ಕುಮಾರ @ ಬಾಬು ಕೈಗಳಿಂದ ನನ್ನ ಗಂಡನ ಬೆನ್ನಿನ ಮೇಲೆಲ್ಲಾ ಹೊಡೆದು ಕೆಳಕ್ಕೆ ಬೀಳಿಸಿ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಮುಂದೆಲೆಗೆ ಗುದ್ದಿ ರಕ್ತಗಾಯಪಡಿಸಿರುತ್ತಾರೆ.  ಬಾಬು ರವರ ಹೆಂಡತಿ ಹೇಮಾ ಕಾಲಿನಿಂದ ನನ್ನ ಗಂಡನ ಎಡಗಾಲಿಗೆ ಬೆನ್ನಿಗೆ ಜಾಡಿಸಿ ಒದ್ದಳು.  ಅಷ್ಟರಲ್ಲಿ ನಾನು ನನ್ನ ಗಂಡನನ್ನು ಬಿಡಿಸಿಕೊಳ್ಳಲು ಹೋದಾಗ ಹೇಮಾ ನನ್ನ ಜುಟ್ಟನ್ನು ಹಿಡಿದು ಎಳೆದಾಡಿ ಕೈಗಳಿಂದ ಮೈಮೇಲೆಲ್ಲಾ ಹೊಡೆದಳು.  ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಅಳಿಯ ಯಶಪಾಲ್ ಜಗಳ ಬಿಡಿಸಿದ್ದು ಆದರೂ ಸಹ ಮೇಲ್ಕಂಡವರು ನನ್ನನ್ನು ಮತ್ತು ನನ್ನ ಗಂಡನನ್ನು ಕುರಿತು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ.  ಸೂಳೆ ಮಕ್ಕಳಾ, ಬೋಳಿ ಮಕ್ಕಳಾ, ಊರಿನಲ್ಲಿ ನಮ್ಮನ್ನು ಎದುರು ಹಾಕಿಕೊಂಡು ಅದೇಗೆ ಬಾಳುತ್ತೀರಾ, ಇಂದೆಲ್ಲಾ ನಾಳೆ ಕೊಲೆ ಮಾಡಿಯೇ ತೀರುತ್ತೇವೆಂತ ಕೊಲೆ ಬೆದರಿಕೆ ಹಾಕಿ ಹೊರಟು ಹೋದರು.  ರಕ್ತಗಾಯಗಳಾಗಿದ್ದ ನನ್ನ ಗಂಡ ದಾಸಪ್ಪನನ್ನು ನನ್ನ ಅಳಿಯ ಯಶಪಾಲ್ ತುಮಕೂರಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದನು.   ನನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಪೆಟ್ಟುಗಳು ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಿಲ್ಲ.  ಈ ಘಟನೆಯ ವಿಚಾರವನ್ನು ನನ್ನ ಹೆಣ್ಣುಮಕ್ಕಳು ಹಾಗೂ ಅಳಿಯಂದಿಯರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ಕೊಡುವಂತೆ ತಿಳಿಸಿದ್ದರಿಂದ ಈ ದಿನ ತಡವಾಗಿ ಬಂದು ಠಾಣೆಯಲ್ಲಿ ದೂರು ನೀಡುತ್ತಿದ್ದು, ಮೇಲ್ಕಂಡ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ಪಿರ್ಯಾದು ಅಂಶವಾಗಿರುತ್ತೆ.

 Saturday, 21 October 2017

ಹುತಾತ್ಮ ರ ದಿನಾಚರಣೆ ಯ ಛಾಯಚಿತ್ರಗಳು

 

 


Crime Incidents 21-10-17

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ- 14/2017 ಕಲಂ: 174 ಸಿ.ಆರ್.ಪಿ.ಸಿ

 

ದಿನಾಂಕ: 20/10/2017 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಉಮೇಶ್ ಬಿನ್ ರುದ್ರಪ್ಪ, 43 ವರ್ಷ, ಅಣ್ಣಾಪುರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಸುಮಾರು 50 ವರ್ಷದ ಒಬ್ಬ ಗಂಡಸು ನಮ್ಮ ಅಂಗಡಿಯ ಮುಂಭಾಗ ಹಾಗೂ ಅಕ್ಕ-ಪಕ್ಕದ ಮನೆ ಮತ್ತು ಅಂಗಡಿಗಳಲ್ಲಿ ಭಿಕ್ಷೆ ಬೇಡಿಕೊಂಡು ಅಂಗಡಿಗಳ ಮುಂಭಾಗ ಮಲಗಿಕೊಳ್ಳುತ್ತಿದ್ದನು. ಹಾಗೂ ನಾಗರಕಟ್ಟೆಯ ಮುಂಭಾಗ ಸಹ ರಾತ್ರಿ ವೇಳೆಯಲ್ಲಿ ಮಲಗಿಕೊಳ್ಳುತ್ತಿದ್ದನು. ಈತನು ದಿನಾಂಕ: 19/10/2017 ರಂದು ಆ ಅಪರಿಚಿತ ವ್ಯಕ್ತಿ ನಮ್ಮ ಅಂಗಡಿಗೆ ಬಂದು ನೀರು ಕೇಳಿದನು. ನಾನು ನಿನ್ನದು ಯಾವ ಊರು, ನಿನ್ನ ಹೆಸರು ಏನು ಎಂದು ಕೇಳಿದೆನು. ಅದಕ್ಕೆ ಆತನು ಏನು ಹೇಳದೇ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏನೋ ಹೇಳಿಕೊಳ್ಳುತ್ತಾ ಹೋದನು. ಈತನು ಈ ದಿನ ದಿನಾಂಕ: 20/10/2017 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಅರಳೀಕಟ್ಟೆಯ ಮುಂಭಾಗದಲ್ಲಿ ಅಂಗಾತನಾಗಿ ಮಲಗಿಕೊಂಡಿದ್ದನು. ನಾನು ಹತ್ತಿರ ಹೋಗಿ ನೋಡಲಾಗಿ ಆತ ಮೃತಪಟ್ಟಂತೆ ಕಂಡುಬಂದ್ದಿದ್ದು, ನಂತರ ನಾನು ನಮ್ಮ ಅಂಗಡಿ ಮಾಲೀಕರಾದ ಕುಮಾರಣ್ಣನವರಿಗೆ ಫೊನ್ ಮಾಡಿ ತಿಳಿಸಿದ್ದು, ಅವರು ತಕ್ಷಣ 108 ವಾಹನಕ್ಕೆ ಫೋನ್ ಮಾಡಿದರು. ಸಂಜೆ 7-30 ಗಂಟೆಯಲ್ಲಿ 108 ವಾಹನದವರು ಬಂದು ಆತನನ್ನು ಚೆಕ್ ಮಾಡಿ ಮೃತಪಟ್ಟಿರುತ್ತಾನೆಂದು ತಿಳಿಸಿ ಹೋಗಿರುತ್ತಾರೆ. ಮೃತಪಟ್ಟಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ. ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಯುಡಿಆರ್ ಪ್ರಕರಣ ದಾಖಲಿಸಿರುತ್ತೆ.

.ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-184/2017 ಕಲಂ 15(ಎ), 32(3) ಕೆ,ಇ ಆಕ್ಟ್‌

ಗೌರವಾನ್ವಿತ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪಿ,ಎಸ್,ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್. ಆದ ನಾನು ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:20-10-2017 ರಂದು ನಾನು ಹೆಬ್ಬೂರು ಪೊಲೀಸ್ ಠಾಣೆಯ ಸರಹದಸ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ನಾಗವಲ್ಲಿ ಗ್ರಾಮದ ಲಕ್ಕೇನಹಳ್ಳಿ ರಸ್ತೆಯ ಎಸ್ ಎಲ್ ಎನ್ ವೈನ್ಸ್ ಅಂಗಡಿಯ ಮುಂಭಾಗದಲ್ಲಿ ಮೋಹನ್ ಕುಮಾರ್ ಎಂಬುವರು ತನ್ನ ಕಬಾಬ್ ಷಡ್‌ನ ಅಂಗಡಿಯಲ್ಲಿ ಪಾಪಣ್ಣರವರ ಜಮೀನಿಗೆ  ಹೊಂದಿಕೊಂಡಂತಿರುವ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಕೆಲವು ಸಾರ್ವಜನಿಕರು ಮದ್ಯಪಾನ ಮಾಡುತ್ತಿರುತ್ತಾರೆಂತ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಹೆಚ್ ಸಿ 20 ಗಂಗಣ್ಣ ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ನಾಗವಲ್ಲಿ ಗ್ರಾಮದ ಸದರಿ ಮೋಹನ್ ಕುಮಾರ್ ಅಂಗಡಿಯ ಬಳಿ ಹೋಗಿ ನೋಡಲಾಗಿ, ಮೋಹನ್ ಕುಮಾರ್ ರವರ ಅಂಗಡಿಯಲ್ಲಿ ನಾಲ್ಕೈದು ಜನರು ಮದ್ಯಪಾನ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು. ನಂತರ ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಮೋಹನ್ ಕುಮಾರ್  ಬಿನ್ ಲೇಟ್ ಹುಲಿಯಪ್ಪ, 31 ವರ್ಷ, ತಿಗಳರು, ಕಬಾಬ್ ಅಂಗಡಿಯ ವ್ಯಾಪಾರ, ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ಮತ್ತು ಜಿಲ್ಲೆ ಎಂತಾ ತಿಳಿಸಿದ್ದು, ನಂತರ ಮೋಹನ್ ಕುಮಾರ್ ರವರನ್ನು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶವನ್ನು ಮಾಡಿಕೊಟ್ಟಿರುವ ಬಗ್ಗೆ ವಿಚಾರ ಮಾಡಿ, ಈ ರೀತಿಯಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಡಲು ನಿನಗೆ ಯಾವುದಾದರೂ ಪರವಾನಗೀ ಇದೆಯೇ ಎಂತಾ ಕೇಳಲಾಗಿ, ಮೋಹನ್ ಕುಮಾರ್ ನು ಆ ರೀತಿ ಯಾವುದೇ ಪರವಾನಗಿ ಇರುವುದಿಲ್ಲವೆಂತ ತಿಳಿಸಿರುತ್ತಾರೆ. ಸದರಿ ಅಂಗಡಿಯಲ್ಲಿ ಎರಡು ಕುಡಿದು ಖಾಲಿ ಮಾಡಿರುವ ರಾಜಾ ವಿಸ್ಕಿ ಸಾಚೆಟ್‌‌‌ಗಳು, ಮೂರು ಉಪಯೋಗಿಸಿರುವ ಪ್ಲಾಸ್ಟಿಕ್‌ ಲೋಟಗಳು ಹಾಗೂ ಒಂದು ಅರ್ಧ ಮದ್ಯ ಖಾಲಿಯಾಗಿರುವ ಟೆಟ್ರಾಪ್ಯಾಕ್‌ ಕಂಡು ಬಂದಿದ್ದು, ಸ್ಥಳದಲ್ಲಿಯೇ ಎರಡು ಕುಡಿದು ಖಾಲಿ ಮಾಡಿರುವ ರಾಜಾ ವಿಸ್ಕಿ ಸಾಚೆಟ್‌‌‌ಗಳು, ಮೂರು ಉಪಯೋಗಿಸಿರುವ ಪ್ಲಾಸ್ಟಿಕ್‌ ಲೋಟಗಳು ಹಾಗೂ ಒಂದು ಅರ್ಧ ಮದ್ಯ ಖಾಲಿಯಾಗಿರುವ ಟೆಟ್ರಾಪ್ಯಾಕ್‌ ನ್ನು ವಶಕ್ಕೆ ಪಡೆದು, ಆಸಾಮಿಯೊಂದಿಗೆ ರಾತ್ರಿ 07-30 ಗಂಟೆಗೆ ಠಾಣೆಗೆ ಬಂದು ಈತನ ವಿರುದ್ದ ಹೆಬ್ಬೂರು ಪೊಲೀಸ್ ಠಾಣಾ ಮೊ,ನಂ-184/2017 ಕಲಂ 15(ಎ) ರೆ/ವಿ 32(3) ಕೆ,ಇ ಆಕ್ಟ್‌ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್  ಠಾಣಾ ಮೊ.ಸಂ.99/2017, ಕಲಂ: 279, 337 ಐ.ಪಿ.ಸಿ.

ದಿನಾಂಕ:20/10/2017 ರಂದು ಸಾಯಂಕಾಲ 04:10 ಗಂಟೆಗೆ ಪಿರ್ಯಾದಿ ಲೋಕೇಶ್.ಎಸ್. ಬಿನ್ ಸಿದ್ದಪ್ಪ, 27 ವರ್ಷ, ಗೊಲ್ಲರು, ವ್ಯವಸಾಯ, ಚಂದ್ರಬಾವಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ನೀಡಿದ ದೂರಿನ ಅಂಶವೇನೆಂದರೇ, ನಾನು ಮೇಲ್ಕಂಡ ವಿಳಾಸದಲ್ಲಿ ನಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ನಮ್ಮ ತಾಯಿಯಾದ ಲಕ್ಷ್ಮಮ್ಮ ರವರು ಪ್ರತಿ ದಿನ ಎಮ್ಮೆ ಹೊಡೆದುಕೊಂಡು ನಮ್ಮ ಹೊಲದ ಬಳಿ ಹೊಡೆದುಕೊಂಡು ಹೋಗಿ ಎಮ್ಮೆ ಮೇಯಿಸಿಕೊಂಡು ಹಾಗೂ ವ್ಯವಸಾಯದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು. ದಿನಾಂಕ:19/10/2017 ರಂದು ರಾತ್ರಿ ಸುಮಾರು 08:30 ಗಂಟೆಯ ಸಮಯದಲ್ಲಿ ನಾನು ಮತ್ತು ನಮ್ಮ ಊರಿನ ನರಸಿಂಹಮೂರ್ತಿ ಬಿನ್ ಲೇ||ರಾಮಾಂಜಿನಪ್ಪ ಇಬ್ಬರು ನಮ್ಮ ಊರಿನ ಅಗಳಿ ರಸ್ತೆಯ ಕ್ರಾಸಿನಲ್ಲಿರುವ ಸೇತುವೆ ಮೇಲೆ ಕುಳಿತುಕೊಂಡಿದ್ದೆವು. ಅದೇ ಸಮಯಕ್ಕೆ ಎಂದಿನಂತೆ ದಿನಾಂಕ:19/10/2017 ರಂದು ಬೆಳಿಗ್ಗೆ ನಮ್ಮ ಹೊಲದ ಬಳಿ ಎಮ್ಮೆಯನ್ನ ಹೊಡೆದುಕೊಂಡು ಹೋಗಿದ್ದ ನನ್ನ ತಾಯಿ ಲಕ್ಷ್ಮಮ್ಮ ಮತ್ತು ನನ್ನ ತಂಗಿ ಪ್ರೇಮ ಇಬ್ಬರು ಹೊಲದ ಬಳಿ ಎಮ್ಮೇ ಮೇಯಿಸಿಕೊಂಡು, ವ್ಯವಸಾಯದ ಕೆಲಸಗಳನ್ನು ಮಾಡಿಕೊಂಡು ವಾಪಸ್ಸ್ ಮನೆಗೆ ಬರಲು ನಮ್ಮ ಗ್ರಾಮದಲ್ಲಿ ಹಾದು ಹೋಗಿರುವ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ನಮ್ಮ ಗ್ರಾಮದ ಕೃಷ್ಣಮೂರ್ತಿ ರವರ ಮನೆಯ ಹತ್ತಿರ ರಸ್ತೆಯ ಎಡ ಬದಿಯಲ್ಲಿ ಎಮ್ಮೆಯನ್ನು ಹೊಡೆದುಕೊಂಡು ಮನೆ ಕಡೆಗೆ ನಡೆದುಕೊಂಡು ಅದೇ ದಿನ ರಾತ್ರಿ ಸುಮಾರು 08:30 ಗಂಟೆಯ ಸಮಯದಲ್ಲಿ ಬರುತ್ತಿರುವಾಗ್ಗೆ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಮಿಡಿಗೇಶಿ ಕಡೆಯಿಂದ ಮಡಕಶಿರಾ ಕಡೆಗೆ ಹೋಗಲು ಬಂದ ಕೆಎ-52-ಎ-3415 ನೇ ಕಾರಿನ ಚಾಲಕನು, ಕಾರನ್ನು ತುಂಬಾ  ಸ್ಪೀಡಾಗಿ ಮತ್ತು ಎದ್ವಾತದ್ವವಾಗಿ ಓಡಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಎಮ್ಮೆಯನ್ನು ಹಿಡಿದುಕೊಂಡು ನನ್ನ ತಂಗಿ ಪ್ರೇಮ ಜೊತೆ ನಡೆದುಕೊಂಡು ಬರುತ್ತಿದ್ದ ನನ್ನ ತಾಯಿ ಲಕ್ಷ್ಮಮ್ಮ ರವರಿಗೆ ಮತ್ತು ನಮ್ಮ ಬಾಬ್ತು ಎಮ್ಮೆಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ನನ್ನ ತಾಯಿ ಲಕ್ಷ್ಮಮ್ಮ ರಸ್ತೆಯ ಮೇಲೆ ಬಿದ್ದರು, ಎಮ್ಮೆಯೂ ಸಹ ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿತ್ತು. ಕೂಡಲೇ ಅಲ್ಲಿಯೇ ಹತ್ತಿರದಲ್ಲೇ ಇದ್ದ ನಾನು ಮತ್ತು ನರಸಿಂಹಮೂರ್ತಿ ಇಬ್ಬರು ರಸ್ತೆಯ ಮೇಲೆ ಬಿದಿದ್ದ ನನ್ನ ತಾಯಿಯ ಬಳಿ ಹೋಗಿ ಅವರನ್ನು ಎತ್ತಿ ನೋಡಲಾಗಿ ನನ್ನ ತಾಯಿಯ ತಲೆಗೆ, ಮೈಕೈಗೆ, ಕಾಲಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು ಆಗ ನಾನು, ನರಸಿಂಹಮೂರ್ತಿ, ನನ್ನ ತಂಗಿ ಪ್ರೇಮ ಹಾಗೂ ಅಪಘಾತಪಡಿಸಿದ ಕಾರಿನ ಚಾಲಕ ಸೇರಿಕೊಂಡು ಗಾಯಗೊಂಡಿದ್ದ ನಮ್ಮ ತಾಯಿಯನ್ನು ಉಪಚರಿಸುತ್ತಿರುವಾಗ ನಮ್ಮ ಬಾಬ್ತು ಎಮ್ಮೆ ಒದ್ದಾಡಿ ಒದ್ದಾಡಿ ಸ್ಥಳದಲ್ಲಿಯೇ ಸತ್ತು ಹೋಯಿತು. ನಂತರ ಗಾಯಗೊಂಡಿದ್ದ ನಮ್ಮ ತಾಯಿ ಲಕ್ಷ್ಮಮ್ಮನನ್ನು ಯಾವುದೋ ಒಂದು ವಾಹನದಲ್ಲಿ ಮಡಕಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲುಮಾಡಿ ಯೋಗಕ್ಷೇಮ ನೋಡಿಕೊಂಡು ಈ ದಿನ ತಡವಾಗಿ ಬಂದು ನಮ್ಮ ತಾಯಿ ಲಕ್ಷ್ಮಮ್ಮನಿಗೆ ಮತ್ತು ನಮ್ಮ ಬಾಬ್ತು ಎಮ್ಮೆಗೆ ಅಪಘಾಪಡಿಸಿದ ಕೆಎ-52-ಎ-3415 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 183/2017 ಕಲಂ 324,323,504,ರೆ/ವಿ 34 ಐಪಿಸಿ

ದಿನಾಂಕ:20-10-2017 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿಯಾದ ನಂಜಮ್ಮ ಕೋಂ ಹನುಮಂತರಾಯಪ್ಪ, 50 ವರ್ಷ, ಒಕ್ಕಲಿಗರು, ಗೃಹಿಣಿ, ಮಾರುತಿ ಪ್ರಸನ್ನ, ಶೇಖರ್‌ ನಿಲಯ, ಸೋಪಿಯಾ ಸ್ಕೂಲ್‌ ರಸ್ತೆ, ಉಪ್ಪಾರಹಳ್ಳಿ, ತುಮಕೂರು ನಗರ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನ ಊರಾದ ಹುಳ್ಳೇನಹಳ್ಳಿ ಗ್ರಾಮದಲ್ಲಿ ನಮ್ಮ ಬಾಬ್ತು ತೆಂಗಿನ ತೋಟವಿದ್ದು, ಸದರಿ ತೋಟವನ್ನು ಹುಳ್ಳೇನಹಳ್ಳಿ ಗ್ರಾಮದ ವಾಸಿಯಾದ ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರಿಗೆ ಗುತ್ತಿಗೆಗೆ ನೀಡಿದ್ದು, ಸದರಿಯವರು ನಮಗೆ ಪ್ರತಿವರ್ಷ 20 ಸಾವಿರ ರೂಪಾಯಿ ನಗದು ಹಾಗೂ 300 ತೆಂಗಿನ ಕಾಯಿಗಳನ್ನು ಕೊಡುವಂತೆ ಮಾತನಾಡಿದ್ದೆವು. ಹೀಗಿರುವಾಗ್ಗೆ ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರು ನಮಗೆ ಸರಿಯಾಗಿ ಹಣವನ್ನು ಕೊಡುತ್ತಿರಲಿಲ್ಲ. ಈ ದಿವಸ ದಿನಾಂಕ:20-10-2017 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ  ನಾನು ಸದರಿ ಹಣವನ್ನು ಪಡೆದು ಬರಲೆಂದು ಹುಳ್ಳೇನಹಳ್ಳಿ ಗ್ರಾಮದ ನಮ್ಮ ಜಮೀನಿನ ಬಳಿ ನನ್ನ ಮಗನಾದ ಶೇಖರ್‌ ರವರೊಂದಿಗೆ ಹೋಗಿದ್ದು, ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರನ್ನು ಹಣ ಕೇಳಲಾಗಿ ಸದರಿ ಆಸಾಮಿಯು ಒಂದು ಗುದ್ದಲಿಯ ಕಾವಿನಿಂದ ನನಗೆ ಹೊಡೆಯಲು ಬಂದಾಗ ನನ್ನ ಮಗ ಶೇಖರ್ ರವರು ಅಡ್ಡ ಬಂದಿದ್ದು, ಪರಿಣಾಮವಾಗಿ ನನ್ನ ಮಗ ಶೇಖರ್‌ ರವರ ಎಡಗೈಗೆ ಏಟು ಬಿದ್ದಿತು. ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರ ಹೆಂಡತಿಯಾದ ನಾಗರತ್ನಮ್ಮ ರವರು ನನಗೆ ಕೈ ಮತ್ತು ಕಾಲುಗಳಿಂದ ಹೊಡೆದು ಮೈಕೈ ನೋವುಂಟು ಮಾಡಿದರು. ನಂತರ ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರು ನಮ್ಮನ್ನು ಬೋಳಿ ಮಕ್ಕಳಾ ಎಂತಾ ಅವಾಚ್ಯ ಶಬ್ದಗಳಿಂದ ಬೈದರು. ಆಗ ಅಲ್ಲಿಯೇ ಇದ್ದ ಹುಳ್ಳೇನಹಳ್ಳಿ ಗ್ರಾಮದ ವಾಸಿಗಳೇ ಆದ ಪ್ರತಿಭಾ ಕೋಂ ಚಂದ್ರಶೇಖರ್‌ ಹಾಗೂ ಲಕ್ಷ್ಮಮ್ಮ ಕೋಂ ತಿಮ್ಮಯ್ಯ ರವರುಗಳು ಹನುಮಂತರಾಯಪ್ಪ ರವರನ್ನು ಸಮಾಧಾನ ಮಾಡಿ ಕಳುಹಿಸಿದರು. ಆದ್ದರಿಂದ ನಮ್ಮ ಮೇಲೆ ಗಲಾಟೆ ಮಾಡಿ ಗುದ್ದಲಿಯಿಂದ, ಕೈ ಕಾಲುಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದ ಹನುಮಂತರಾಯಪ್ಪ ಬಿನ್ ಲೇ|| ಲಿಂಗಣ್ಣ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 


Crime Incidents 20-10-17

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 18/2017 ಕಲಂ 174 ಸಿಆರ್ಪಿಸಿ

ದಿನಾಂಕ: 19-10-2017 ರಂದು ಮದ್ಯಾಹ್ನ 3-00 ಗಂಟೆಗೆ ತುಮಕೂರು ಟೌನ್‌, ಶೆಟ್ಟಿಹಳ್ಳಿ ನಾಯಕರ ಬೀದಿ ವಾಸಿ ರಾಮಚಂದ್ರ ಬಿನ್ ರಂಗನಾಥಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,   ನಮ್ಮ ತಂದೆ ರಂಗನಾಥಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದು, ಅತಿಯಾಗಿ ಮದ್ಯಪಾನ ಮಾಡುತ್ತಿದ್ದರು.  ನಿನ್ನೆ ದಿನ ದಿನಾಂಕ: 18-10-2017 ರಂದು ಸಾಯಂಕಾಲ ಸುಮಾರು 4-00 ಗಂಟೆಯಲ್ಲಿ ನಮ್ಮ ತಂದೆ ರಂಗನಾಥಪ್ಪ ಮನೆಯಿಂದ ಹೊರಗೆ ಹೋಗಿದ್ದವರು ಮನೆಗೆ ಬಂದಿರಲಿಲ್ಲ,   ನಾವು ನಮ್ಮ ತಂದೆಯ ಹುಡುಕಾಟದಲ್ಲಿದ್ದಾಗ, ಯಾರೋ ನಿನ್ನೆ ದಿನ ಸಾಯಂಕಾಲ ಶೆಟ್ಟಿಹಳ್ಳಿ ಕೆರೆಗೆ ಒಬ್ಬ ವ್ಯಕ್ತಿ ನೀರು ಮುಟ್ಟಲೋ ಏನೋ ಹೋಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಹೋಗಿರುತ್ತಾರೆಂತಾ ವಿಚಾರ ತಿಳಿಸಿದ್ದು,  ಈ ಬಗ್ಗೆ ನಾನು ಬೆಳಿಗ್ಗೆ ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಜಯನಗರ ಪೊಲೀಸರು ಅಗ್ನಶಾಮಕ ಸಿಬ್ಬಂದಿಯವರನ್ನು ಕರೆಸಿಕೊಂಡು ಶೆಟ್ಟಿಹಳ್ಳಿ ಕೆರೆಯ ನೀರಿನಲ್ಲಿ ಮುಳುಗಿರುವ  ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾಗ ಮದ್ಯಾಹ್ನ ಸುಮಾರು 2-15 ಗಂಟೆ ಸಮಯದಲ್ಲಿ ಅಗ್ನಶಾಮಕ ಸಿಬ್ಬಂದಿಯವರು ಕೆರೆಯ ನೀರಿನಲ್ಲಿ ಮುಳುಗಿದ್ದ ಗಂಡಸಿನ ಶವವನ್ನು ಹೊರಕ್ಕೆ ತೆಗೆದಿದ್ದು,  ನಾನು ಹಾಗೂ ನಮ್ಮ ಗ್ರಾಮದ ಕೆಲವು ಜನರು ಹತ್ತಿರ ಹೋಗಿ ನೋಡಲಾಗಿ, ಸದರಿ ಶವವು ನಮ್ಮ ತಂದೆ ರಂಗನಾಥಪ್ಪ ರವರದ್ದಾಗಿರುತ್ತೆ.   ನಮ್ಮ ತಂದೆಯವರಿಗೆ ಮದ್ಯಪಾನ ಮಾಡುವ ಅಬ್ಯಾಸವಿದ್ದು, ಕುಡಿದ ಅಮಲಿನಲ್ಲಿ ಮಲವಿಸರ್ಜನೆ ಮಾಡಲು ಕೆರೆಯ ಅಂಗಳಕ್ಕೆ ಹೋಗಿ, ನಂತರ ನೀರು ಮುಟ್ಟಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿಯೋ ಏನೋ ಕೆರೆಯ ನೀರಿಗೆ ಬಿದ್ದು ಈ ರೀತಿ ಮೃತಪಟ್ಟಿರುತ್ತಾರೆ.  ನಮ್ಮ ತಂದೆಯ ಸಾವಿನಲ್ಲಿ ನಮಗೆ ಯಾವುದೇ ಅನುಮಾನ ಇರುವುದಿಲ್ಲ.  ತಾವು ಮುಂದಿನ ಕ್ರಮ ಜರುಗಿಸಿ, ನಮ್ಮ ತಂದೆಯ ಶವವನ್ನು ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ-28/2017 ಕಲಂ 174 ಸಿಆರ್ಪಿಸಿ

ದಿನಾಂಕ 19/10/2017 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾದಿಯಾದ  ಕೆ.ಗಂಗಪ್ಪ ಬಿನ್ ಲೇಟ್ ಕೆಂಪಯ್ಯ, ಸುಮಾರು 74 ವರ್ಷ, ವಕ್ಕಲಿಗರು, ವ್ಯವಸಾಯ, ನರುಗನಹಳ್ಳಿ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ತುಮಕೂರು-ಕುಣಿಗಲ್ ರಸ್ತೆಯಲ್ಲಿ  ನಮ್ಮ ತೋಟವಿದ್ದು ದಿನಾಂಕ 19/10/2017 ರಂದು  ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನಮ್ಮ ಜಮೀನು ನೋಡಿಕೊಂಡು ಬರಲು ನಮ್ಮೂರಿನಿಂದ ಹೋಗುತ್ತಿರುವಾಗ್ಗೆ ಎ.ಕೆ ಕಾವೆಲ್‌ಗೆ ಸೇರಿದ ಹನುಮಂತಪ್ಪವರ ಜಮೀನು ಬಳಿ ತುಮಕೂರು-ಕುಣಿಗಲ್ ರಸ್ತೆಯಲ್ಲಿರುವ ಪ್ರಯಾಣಿಕರ ತಂಗುತಾಣದಲ್ಲಿ ಸಾರ್ವಜನಿಕರು ನಿಂತಿದ್ದು ನಾನು ಸಹ ಅಲ್ಲಿಗೆ ಹೋಗಿ ನೋಡಲಾಗಿ ಸುಮಾರು 75 ರಿಂದ 80  ವರ್ಷ ವಯಸ್ಸಿನ ಒಬ್ಬ ಹೆಂಗಸು  ಈಗ್ಗೆ ಸುಮಾರು 2-3 ದಿವಸಗಳಿಂದ ಪ್ರಯಾಣಿಕರ ತಂಗುತಾಣದಲ್ಲಿ ಇದ್ದು ದಿನಾಂಕ 18/10/2017 ರ ರಾತ್ರಿಯಿಂದ ದಿನಾಂಕ 19/10/2017 ರ  ಮದ್ಯಾಹ್ನ ಯಾವುದೋ ವೇಳೆಯಲ್ಲಿ ಮೃತಪಟ್ಟಿದ್ದು ಮೃತಳ ಬಗ್ಗೆ ಹೆಸರು ವಿಳಾಸ ಮತ್ತು ಸಂಬಂದಿಕರನ್ನು ವಿಚಾರ ಮಾಡಲಾಗಿ ಗೊತ್ತಾಗಿರುವುದಿಲ್ಲ. ಈ ಸದರಿ ಅಪರಿಚಿತ ಹೆಂಗಸು ತನಗೆ ಇರುವ ಯಾವುದೋ ಒಂದು ಖಾಯಿಲೆಯಿಂದಲೋ ಅಥವಾ ಅನ್ನ ಆಹಾರವಿಲ್ಲದೆಯೋ ನಿತ್ರಾಣಗೊಂಡೋ ಮೃತಪಟ್ಟಿರುತ್ತಾಳೆಯೇ ವಿನಃ ಆಕೆಯ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ.ಮೃತಳ ಚಹರೆ ಸುಮಾರು 4 ½ ಅಡಿ ಎತ್ತರವಿದ್ದು, ತಲೆಯಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ  ಕೂದಲಿರುತ್ತೆ. ಕೋಲು ಮುಖ, ಎಣೆಕೆಂಪು ಬಣ್ಣ, ತೆಳ್ಳನೆಯ ಶರೀರವನ್ನು ಹೊಂದಿರುತ್ತಾಳೆ. ಮೃತಳ ಮೈಮೇಲೆ 1) ಪಿಂಕ್ ಕಲ್ಲರ್ ಜಾಕೀಟು 2) ಹಸಿರು ಬಣ್ಣದ ಸೀರೆ 3)  ಕೆಂಪು ಓಳ ಲಂಗ ಹಾಕಿದ್ದು ಬಲಗೈ ನಲ್ಲಿ ಅಚ್ಚೆ  ಇದ್ದು ಎಡ ಮುಂಗೈನಲ್ಲಿ ಹೂವಿನ ಅಚ್ಚೆ ಹಾಕಿಸಿರುತ್ತೆ  ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ

 

ಪಟ್ಟನಾಯಕನಹಳ್ಳಿ ಠಾಣಾ ಮೊ ನಂ 122/17 ಕಲಂ 279,337 ಐಪಿಸಿ ಮತ್ತು 187 ಐ ಎಂ ವಿ ಆಕ್ಟ್

ದಿನಾಂಕ:19-10-2017 ರಂದು  ಸಂಜೆ 05:30ಗಂಟೆಗೆ ಪಿರ್ಯಾದಿ ನಾಗರಾಜುಗೌಡ ಬಿನ್ ಹನುಮಂತರಾಯಪ್ಪ, ರಂಗಾಪುರ  ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ, ದಿನಾಂಕ::16-10-17 ರಂದು ಪಿರ್ಯಾದಿ ಹೆಂಡತಿಯ ಅಕ್ಕನ ಗಂಡನಾದ ನಾಗರಾಜು ಬಿನ್ ಈರಣ್ಣ  ರವರು ಸ್ವಂತ ಕೆಲಸದ ನಿಮಿತ್ತಾ  ಶಿರಾಕ್ಕೆ ಹೋಗಿ  ವಾಪಸ್ ಮದ್ದೇವಹಳ್ಳಿ ಗ್ರಾಮಕ್ಕೆ ಬರಲು ತನ್ನ ಬಾಬ್ತು  ಕೆಎ-53-ವೈ-8316 ರ ಮೋಟಾರು ಸೈಕಲ್ ನಲ್ಲಿ  ರಾತ್ರಿ 08:30 ಗಂಟೆ ಸಮಯದಲ್ಲಿ  ಶಿರಾ ಅಮರಾಪುರ ರಸ್ತೆಯ ಮುದ್ದರಂಗನಹಳ್ಳಿ ಗೇಟ್ ಸಮೀಪ ಲಕ್ಷ್ಮೀಮೂರ್ತಪ್ಪ ರವರ  ಜಮೀನಿನ ಸಮೀಪ  ಬರುತ್ತಿರುವಾಗ ಅಪಘಾತವಾಗಿರುತ್ತೆ ಎಂದು ನಾಗರಾಜು ರವರ ಹೆಂಡತಿ ಪುಶ್ವಪ ರವರು  ದೂರವಾಣಿ ಮುಖಾಂತರ ತಿಳಿಸಿದ್ದು, ಪಿರ್ಯಾದಿ ಮತ್ತು  ಅದೇ ಗ್ರಾಮದ  ಷಣ್ಮುಖ ಬಿನ್ ದೊಡ್ಡಯ್ಯ ರವರು  ಮುದ್ದರಂಗನಹಳ್ಳಿ ಗೇಟ್  ಬಳಿ  ಬಂದು ನೋಡಲಾಗಿ ಕಾರಿನ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಓಡಿಸಿಕೊಂಡು ಬಂದು ನಾಗರಾಜು ರವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರು ಸೈಕಲ್  ಜಖಂಗೊಂಡು ನಾಗರಾಜು ರವರಿಗೆ ಎಡಕಾಲಿಗೆ ಮತ್ತು ಎಡಕೈಗೆ ಪೆಟ್ಟುಗಳು ಬಿದ್ದಿದ್ದು ಗಾಯಾಳುವನ್ನು ಉಪಚರಿಸಿ ಕಾರಿನ ನಂಬರ್ ನೋಡಲಾಗಿ ಕೆಎ-17-ಬಿ-6535 ಕಾರು ಆಗಿದ್ದು ಕಾರಿನ ಚಾಲಕ ಅಪಘಾತಪಡಿಸಿ ಕಾರನ್ನು ಸ್ಥಳದಲ್ಲಿ ಬಿಟ್ಟು  ಹೋಗಿರುತ್ತಾನೆ ನಂತರ ಗಾಯಾಳು ನಾಗರಾಜು ರವರನ್ನು  ಯಾವುದೊ ವಾಹನದಲ್ಲಿ ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೇ ಮೇರೆಗೆ  ಹೆಚ್ಚಿನ  ಚಿಕಿತ್ಸೆಗಾಗಿ ತುಮಕೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ  ಠಾಣೆಗೆ ಬಂದು ಅಪಘಾತಪಡಿಸಿದ ಕೆಎ-17-ಬಿ-6535 ನೇ ನಂಬರಿನ ಕಾರಿನ ಚಾಲಕನ ಮೇಲೆ ಕಾನೂನು   ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು  ಪಡೆದು ಪ್ರಕರಣ ದಾಖಲಿಸಿರುತ್ತೆThursday, 19 October 2017

ಹುತಾತ್ಮ ರ ದಿನಾಚರಣೆ ಅಮಂತ್ರಣ ಪತ್ರಿಕೆ.

ಮಾನ್ಯರೆ,

ದಿನಾಂಕ: 21-10-2017 ರ ಶನಿವಾರ ದಂದು ಬೆಳಗ್ಗೆ 8:00 ಗಂಟೆ ಗೆ  ಹುತಾತ್ಮ ರ ದಿನಾಚರಣೆ ಕಾರ್ಯಕ್ರಮ ಕ್ಕೆ ತಮ್ಮೆಲ್ಲರಿಗೂ ಆದರದ  ಸುಸ್ವಾಗತ .


ಸ್ಥಳ : ಹುತಾತ್ಮರ ಪುತ್ತಳಿ,

ಜಿಲ್ಲಾ ಪೊಲೀಸ್ ಕಛೇರಿಯ  ಅವರಣ,

ಬಿ.ಹೆಚ್ ರಸ್ತೆ, ತುಮಕೂರು.

 

 


Crime Incidents 19-10-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 182/2017 ಕಲಂ 279,337 ಐಪಿಸಿ

ದಿನಾಂಕ:18-10-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯಾದ  ಚಂದ್ರಶೇಖರ್,ಎಸ್,ಕೆ ಬಿನ್ ಕೃಷ್ಣಪ್ಪ, 25 ವರ್ಷ, ಮಡಿವಾಳ ಜನಾಂಗ, ಇಸ್ತ್ರೀ ಅಂಗಡಿಯಲ್ಲಿ ವ್ಯಾಪಾರ, ಸಿರಿವರ ಹ್ಯಾಂಡ್‌‌ಪೋಸ್ಟ್‌, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಅಂಶವೇನೇಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಮ್ಮನಾದ ಸುಮಾರು 23 ವರ್ಷ ವಯಸ್ಸಿನ ಮಂಜುನಾಥ,ಎಸ್,ಕೆ ರವರು ನಮ್ಮ ಇಸ್ತ್ರೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ನನ್ನ ತಮ್ಮ ಮಂಜುನಾಥ,ಎಸ್,ಕೆ ರವರು ದಿನಾಂಕ:02-10-2017 ರಂದು ತನ್ನ ಸ್ವಂತ ಕೆಲಸದ ಮೇಲೆ ನಮ್ಮ ಗ್ರಾಮದಿಂದ ತುಮಕೂರಿಗೆ ಹೋಗಲೆಂದು ತನ್ನ ಸ್ನೇಹಿತನ ಬಾಬ್ತು ಕೆಎ-06-ಇ,ವಿ-9975 ನೇ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಸಾಯಂಕಾಲ ಸುಮಾರು 05-45 ಗಂಟೆಗೆ ಹೋದನು. ನಂತರ ಅದೇ ದಿವಸ ಸಾಯಂಕಾಲ ಸುಮಾರು 06-45 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದಲ್ಲಿ ಇರುವಾಗ್ಗೆ, ನಮ್ಮ ಗ್ರಾಮದ ವಾಸಿಯಾದ ಗೋವಿಂದರಾಜು ರವರು ನನಗೆ ಪೋನ್ ಮಾಡಿ ಇದೇ ದಿವಸ ಸಾಯಂಕಾಲ ಸುಮಾರು 06-30 ಗಂಟೆ ಸಮಯದಲ್ಲಿ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌‌‌ನ ಸರ್ಕಾರಿ ಹೌಸ್ಕೂಲ್‌ನಿಂದ ಹೊನ್ನುಡಿಕೆ ಹ್ಯಾಂಡ್‌ ಪೋಸ್ಟ್‌ ಮದ್ಯದ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ ನಿನ್ನ ತಮ್ಮ ಮಂಜುನಾಥ,ಎಸ್,ಕೆ ರವರು ಕೆಎ-06-ಇ,ವಿ-9975 ನೇ ದ್ವಿಚಕ್ರ ವಾಹನದಲ್ಲಿ ಕುಣಿಗಲ್‌ ಕಡೆಯಿಂದ ತುಮಕೂರು ಕಡೆಗೆ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬಾಗದ ಪುಟ್‌ಪಾತ್‌ನಲ್ಲಿ ಹಾಕಿರುವ ತಡೆಗೋಡೆಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಿನ್ನ ತಮ್ಮ ಮಂಜುನಾಥ,ಎಸ್,ಕೆ ರವರಿಗೆ ತಲೆಗೆ, ಮುಖಕ್ಕೆ, ಎಡಗೈಗೆ ಹಾಗೂ ಎಡಗಾಲಿಗೆ ಏಟು ಬಿದ್ದು ರಕ್ತಗಾಯಗಳಾಗಿರುತ್ತೆ. ಆತನನ್ನು ಸಾರ್ವಜನಿಕರು ಯಾವುದೋ ಕಾರಿನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೆಂತಾ ತಿಳಿಸಿದರು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ನನ್ನ ತಮ್ಮ ಮಂಜುನಾಥ,ಎಸ್,ಕೆ ರವರು ಅಫಘಾತದಲ್ಲಿ ಗಾಯಗೊಂಡಿರುವುದು ನಿಜವಾಗಿತ್ತು. ನನ್ನ ತಮ್ಮ ಮಂಜುನಾಥ,ಎಸ್,ಕೆ ರವರಿಗೆ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯಾದಿಕಾರಿಗಳ ಬಳಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಂಗಾದೊರೆ ಮೆಮೋರಿಯಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನನ್ನ ತಮ್ಮ ಮಂಜುನಾಥ,ಎಸ್,ಕೆ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತವಾದ ದ್ವಿಚಕ್ರ ವಾಹನ ಹೊನ್ನುಡಿಕೆ ಹ್ಯಾಂಡ್‌‌ಪೋಸ್ಟ್ ನಲ್ಲಿರುವ ಹೌಸ್ಕೂಲ್‌ನ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ.

ತಾವರೇಕೆರೆ ಪೊಲೀಸ್  ಠಾಣೆ ಮೊ.ಸಂ 149/2017 ಕಲಂ 32[3] KE ACT

ದಿನಾಂಕ-18-10-2017 ರಂದು ಮದ್ಯಾಹ್ನ 12-45 ಗಂಟೆಗೆ ಪಿಎಸ್ಐ ರವರು ಕೊಟ್ಟ ವರದಿಯ ಸಾರಾಂಶವೇನೆಂದರೆ ಹೊಸ ಬಡಾವಣೆ ಹೊಸೂರು ಬಳಿ ಯಾರೋ ಒಬ್ಬ ಅಸಾಮಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೇ ಮಾಡುತ್ತಿದ್ದಾನೆಂತ ಮಾಹಿತಿ ಆದರಿಸಿ ಸಿಬ್ಬಂದಿ & ಪಂಚರೊಂದಿಗೆ ದಾಳಿ ನಡೆಸಿ ಸಿಕ್ಕಿಬಿದ್ದ ರವಿಕುಮಾರವರನ್ನು & ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಕ್ರಮ ಜರುಗಿಸಿ ಎಂತ ವರದಿಯನ್ನು ನೀಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 140/2017 ಕಲಂ 392 ಐಪಿಸಿ

ದಿನಾಂಕ: 18-10-2017 ರಂದು ರಾತ್ರಿ 8-00 ಗಂಟೆಗೆ ತುಮಕೂರು ಟೌನ್‌, ಶ್ರೀನಿಧಿ ಬಡಾವಣೆ ವಾಸಿ ಸರೋಜಮ್ಮ ಬಿನ್. ಲೇ|| ಮಹಂತಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಮೊನ್ನೆ ದಿನ ದಿನಾಂಕ: 16-10-2017 ರಂದು ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಮುಂದೆ ನೀರು ಹಾಕಿ ರಂಗೋಲಿ ಬಿಡುತ್ತಿದ್ದಾಗ ಯಾರೋ ಇಬ್ಬರು ಆಸಾಮಿಗಳು ಒಂದು ಮೋಟಾರ್‌‌‌ ಬೈಕಿನಲ್ಲಿ ವಿಜಯನಗರ ಕಡೆಯಿಂದ ಬಂದವರೇ ನಮ್ಮ ಮನೆಯ ಸಮೀಪ ಮೋಟಾರ್‌‌ ಬೈಕನ್ನು ನಿಲ್ಲಿಸಿ, ಮೋಟಾರ್ ಬೈಕಿನಲ್ಲಿ ಹಿಂದೆ ಕುಳಿದ್ದ ಒಬ್ಬ ವ್ಯಕ್ತಿಯು ಇಳಿದು ನನ್ನ ಬಳಿ ಬಂದವನೇ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಅವರು ತಂದಿದ್ದ ಮೋಟಾರ್‌‌ ಬೈಕ್‌‌ ಹತ್ತಿಕೊಂಡು ಹೊರಟು ಹೋಗಿರುತ್ತಾರೆ.  ಗಾಬರಿಯಲ್ಲಿ ನಾನು ಮೋಟಾರ್‌‌ ಬೈಕ್‌‌‌ ನಂಬರ್‌ ನೋಡಲು ಸಾದ್ಯವಾಗಿರುವುದಿಲ್ಲ.   ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಒಂಟಿ ಎಳೆಯ ಚಿನ್ನದ ಸರವಾಗಿದ್ದು,  25 ಗ್ರಾಂ ತೂಕ ಇರುತ್ತೆ. ಅಂಜಲಿ ಕಟಿಂಗ್‌‌‌ ಡಿಸೈನಿನದ್ದಾಗಿರುತ್ತೆ. 63,000/- ರೂಪಾಯಿ ಬೆಲೆ ಬಾಳುತ್ತದೆ.  ನಾನು ನನ್ನ ಮಗಳು ತ್ರಿಪುರಾಂಭ @ ಗೀತಾ ಅಳಿಯ ಸುರೇಶ್‌ ರವರ  ಜೊತೆಯಲ್ಲಿ ಶ್ರೀನಿಧಿ ಬಡಾವಣೆಯಲ್ಲಿ ಅವರೊಂದಿಗೆ  ವಾಸವಾಗಿದ್ದು, ನನ್ನ ಮಗಳು-ಅಳಿಯ ಊರಿಗೆ ಹೋಗಿದ್ದರಿಂದ, ಅವರು ಗಾಬರಿಯಾಗುತ್ತಾರೆಂದು ನಾನು ಅವರಿಗೆ ವಿಚಾರ ತಿಳಿಸಿರಲಿಲ್ಲ.  ಈ ದಿನ ನನ್ನ ಮಗಳು ಅಳಿಯ ಮನೆಗೆ ಬಂದಿದ್ದರಿಂದ ಅವರಿಗೆ ನಡೆದ ಘಟನೆಯನ್ನು ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ಕೊಡುವಂತೆ ತಿಳಿಸಿ ಈ ದಿನ ತಡವಾಗಿ ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಈ ನನ್ನ ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ನನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ,  ಆರೋಪಿಗಳನ್ನು ಪತ್ತೆ ಮಾಡಿ ಅವರಿಂದ ನನ್ನ ಚಿನ್ನದ ಸರವನ್ನು  ಕೊಡಿಸಿಕೊಡಬೇಕೆಂದು  ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 Wednesday, 18 October 2017

Crime Incidents 18-10-17

ಬಡವನಹಳ್ಳಿ ಪೊಲೀಸ್ ಠಾಣಾ ಮೊನಂ 86/2017 ಕಲಂ.15(ಎ) 32(3) ಕೆ ಇ ಆಕ್ಟ್‌‌‌

ದಿನಾಂಕ:-17/10/2017 ರಂದು ಮದ್ಯಾಹ್ನ 1-20 ಗಂಟೆ ಸಮಯದಲ್ಲಿ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಯಾದ ಪಿಸಿ 949 ರಂಗನಾಥ ರವರು  ಠಾಣೆಗೆ ಹಾಜರಾಗಿ ನೀಡಿ ವರದಿ ಅಂಶವೇನೆಂದರೆ,  ನನಗೆ  ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು, ನಾನು ಮಾಹಿತಿ ಬಗ್ಗೆ ದಂಡಿನದಿಬ್ಬ , ಲಕ್ಷ್ಮೀಪುರ, ಸಿಡಿದರಗಲ್ಲು, ಮಾದೇನಹಳ್ಳಿ ಗ್ರಾಮಗಳಲ್ಲಿ  ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಹೊಸಪಾಳ್ಯ ಗ್ರಾಮದ ಬಾತ್ಮೀದಾರರೊಬ್ಬರು ಹೊಸಪಾಳ್ಯ ಗ್ರಾಮದ  ಸಿದ್ದಣ್ಣ ಎಂಬುವವರ ಚಿಲ್ಲರೆ ಅಂಗಡಿಯ ಪಕ್ಕದಲ್ಲಿ  ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂತಾ ನನಗೆ ಪೋನ್‌ಮಾಡಿ  ತಿಳಿಸಿದ್ದರಿಂದ ನಾನು ಮದ್ಯಾಹ್ನ 12-30 ಗಂಟೆಗೆ  ಹೊಸಪಾಳ್ಯ ಗ್ರಾಮದ  ಸಿದ್ದಣ್ಣ ಬಿನ್‌‌ ದೊಡ್ಡನಾಗಪ್ಪ ರವರ ಅಂಗಡಿ ಹತ್ತಿರ ಹೋಗಿ ನೋಡಲಾಗಿ ಅಂಗಡಿ ಮುಂಭಾಗದ ಜಾಗದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂತು,  ಮದ್ಯ ಸೇವನೆ ಮಾಡಲು ಜನರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಪರವಾನಗಿ ಇದೆಯೇ ಎಂದು ಕೇಳಿದ್ದಕ್ಕೆ ಪರವಾನಗಿ ಇಲ್ಲವೆಂದು ಸಿದ್ದಣ್ಣ  ತಿಳಿಸಿದರು, ಪರವಾನಿಗೆ ಇಲ್ಲದೆ ಜನರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಸಿದ್ದಪ್ಪ ಬಿನ್‌ ದೊಡ್ಡನಾಗಪ್ಪ , 37 ವರ್ಷ, ವಕ್ಕಲಿಗರು, ಹೊಸಪಾಳ್ಯ , ದೊಡ್ಡೇರಿ ಹೋಬಳಿ ರವರ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಅಂಶವಾಗಿರುತ್ತೆ..

 

 Tuesday, 17 October 2017

Crime Incidents 17-10-17

ಕುಣಿಗಲ್ ಪೊಲೀಸ್ ಠಾಣಾಮೊ.ನಂ;513/2017, ಕಲಂ;279, 304(ಎ) ಐ ಪಿ ಸಿ ರೆ/ವಿ  134 (ಎ)& (ಬಿ) , 187 ಐ ಎಂ ವಿ ಆಕ್ಟ್

ದಿನಾಂಕ 17-10-2017 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಶ್ರೀ , ಶಿವರಾಮಯ್ಯ ಬಿನ್ ಲೇಟ್ ಲಕ್ಷ್ಮೀನರಸಿಂಹಯ್ಯ, 35 ವರ್ಷ, ಬಸವನಮತ್ತೀಕೆರೆ ಗ್ರಾಮ, ಯೆಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕ್ ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ 16-10-2017 ರಂಧು ರಾತ್ರಿ ಸುಮಾರು 9-15 ಗಂಟೆ ಸಮಯದಲ್ಲಿ ಪೊಲೀಸರು ನನಗೆ ಫೋನ್ ಮಾಡಿ ವಸಂತಕುಮಾರ ರವರಿಗೆ  ಬಿದನಗೆರೆ ಬಳಿ ಅಪಘಾತ ಉಂಟಾಗಿದ್ದು ನೀವು ಕುಣಿಗಲ್ ಸರ್ಕಾರಿ ಆಸ್ಪತ್ರೆ ಬಳಿಗೆ ಬನ್ನಿ ಎಂತಾ ತಿಳಿಸಿದರು, ಆಗ ನಾನು ಸರ್ಕಾರಿ ಆಸ್ಪತ್ರೆ ಬಳಿ ಹೋಗಿ ನೋಡಿದಾಗ ನನ್ನ ಅಣ್ಣನಾದ ವಸಂತಕುಮಾರ್ ರವರಿಗೆ ತಲೆಗೆ ಮತ್ತು ಮುಖಕ್ಕೆ ಮ್ತತ್ತು ಕಾಲಿಗೆ ಪೆಟ್ಟು ಬಿದ್ದು ತೀರ್ವ ರಕ್ತಸ್ರಾವವಾಗಿದ್ದು ಹೆಚ್ಚಿಇನ ಚಿಕಿತ್ಸೆಗಾಗಿ ಬೆಂಗಳೂರು  ನಿಮಾನ್ಸ್ ಆಸ್ಪತ್ರೆಗೆ ವೈದ್ಯರ ಸಲಹೆ ಮೇರೆಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ ಮೇರೆಗೆ ಆಂಬುಲೆನ್ಸ್ ನಲ್ಲಿ ಗಾಯಾಳು ವಸಂತಕುಮಾರ್ ರವರನ್ನು ಕರೆದುಕೊಂಡು ಹೋಗುವಾಗ ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದರಿಂದ ವಾಪಸ್ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬಂದು ಶವವನ್ನು ಕುಣಿಗಲ್ ಶವಾಗಾರಕ್ಕೆ ಹಾಕಿದ್ದು, ಈ ಬಗ್ಗೆ ವಿಚಾರಮಾಡಲಾಗಿ ನನ್ನ ಅಣ್ಣ ದಿನಾಂಕ 16-10-17 ರಂದು ಸಂಜೆ ಸುಮಾರು 9-00 ಗಂಟೆಯಲ್ಲಿ ಕೆಎ-04-ಇಬಿ-7550 ನೇ ಟಿವಿಎಸ್ ಎಕ್ಸೆಲ್ ನಲ್ಲಿ  ಅಂಚೆಪಾಳ್ಯ ದಿಂದ ಕುಣಿಗಲ್ ಕಡೆ ಬರುತ್ತಿದ್ದಾಗ  ಬಿದನೆಗೆರೆ  ಗ್ರಾಮದ ಸಮೀಪ ಯಾವುದೋ ವಾಹನ ನನ್ನ ಅಣ್ಣ ಬರುತ್ತಿದ್ದ ಕೆಎ-04-ಇಬಿ-7550 ನೇ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೇ ವೇಗವಾಗಿ ಹೊರಟು ಹೋದ ಎಂತಾ ಸಾರ್ವಜನಿಕರು ತಿಳಿಸಿರುತ್ತಾರೆ. ಬಿದ್ದಿದ್ದ ನನ್ನ ಅಣ್ಣನನ್ನು ಪೊಲೀಸ್ ಹಾಗು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನನ್ನ ಅಣ್ಣದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಾವಿಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ,

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ: 271/2017, ಕಲಂ: 457.380. ಐಪಿಸಿ

ದಿನಾಂಕ.16/10/2017 ರಂದು ಮಧ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಚಿಕ್ಕಹನುಮಯ್ಯ ಬಿನ್ ನರಸಿಂಹಯ್ಯ 42 ವರ್ಷ. ಆದಿ ಕರ್ನಾಟಕ ಜನಾಂಗ. 2 ನೇ ಕ್ರಾಸ್. ಬಸವೇಶ್ವರ ಕ್ಯಾತ್ಸಂದ್ರ ತುಮಕೂರು. ಸ್ವಂತ ಊರು. ತೊಂಡೆಗೆರೆ ಗ್ರಾಮ ಹೆಬ್ಬೂರು ಹೋಬಳಿ ತುಮಕುರು ತಾಲ್ಲೂಕು.  ಚಿಕ್ಕಹನುಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ.15/10/2017 ರಂದು ನಾನು ನಮ್ಮ ಕುಟುಂಬ ತೊಂಡೆಗೆರೆ ಗ್ರಾಮಕ್ಕೆ ಹೋಗಲು ಮಧ್ಯಾಹ್ನ ಸುಮಾರು 3.00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ.16/10/2017. ರಂದು ಬೆಳಿಗ್ಗೆ 7.30 ಗಂಟೆಗೆ ವಾಪಸ್ ಬಂದಾಗ ನಾವು ವಾಸವಾಗಿರುವ ಮನೆಯ ಮೈನ್ ಗೇಟ್ ಗೆ ಹಾಕಿದ್ದ ಬೀಗವನ್ನು ಕಿತ್ತುಹಾಕಿರುವುದು ಕಂಡು ಬಂತ್ತು ನಾವು ಗಾಬರಿಯಿಂದ ಒಳಗೆ ಹೋದಾಗ ಮನೆಯ ಮುಖ್ಯದ್ವಾರದ ಬಾಗಿಲಿನ ಡೋರ್ ಲಾಕ್ ಅನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವುದು ಕಂಡು ಬಂದು ಓಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಮೂರು ಬೀರುಗಳ ಡೋರ್ ಗಳು ತೆಗೆದುಕೊಂಡು ಬಟ್ಟೆ ಬರೆ ಹಾಗೂ ಇತರೆ ವಸ್ತುಗಳು ಮಂಚದ ಮೇಲೆ ಹಾಗೂ ನೆಲದ ಮೇಲೆ ಚಲ್ಲಪಿಲ್ಲಿಯಾಗಿ ಬಿದ್ದಿದು ಮನೆಯ ಬೀರುವಿನ ಲಾಕರ್ ನಲ್ಲಿ ಮೂರು ಪರ್ಸ್ ಗಳಲ್ಲಿ ಇಟ್ಟಿದ್ದ 80.000 ರೂ ನಗದು ಹಣ ಮತ್ತು ಮಕ್ಕಳ 20. ಗ್ರಾಂ ತೂಕದ ಚಿನ್ನದ ಸಾದ ಓಲೆ 15 ಗ್ರಾಂ ತೂಕದ ಚಿನ್ನದ ಸರ ಹಾಗೂ ಸುಮಾರು 10 ಗ್ರಾಂ ತೂಕದ ಸಣ್ಣಪುಟ್ಟ ಹಳೆ ಚಿನ್ನದ ಓಡವೆಗಳು ಕಾಣಲಿಲ್ಲ ಬಹುಶಃ ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ವೇಳೆ ನಮ್ಮ ಮನೆ ಬೀಗ ಹೊಡೆದು ಒಳಗೆ ಪ್ರವೇಶಿಸಿ ಮೇಲ್ಕಂಡ ಹಣ ಹಾಗೂ ಚಿನ್ನದ ಓಡೆವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ಪ್ರವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 202/2017 ಕಲಂ: 15(A), 32(3) K E ACT

ದಿನಾಂಕ;-16-10-2017 ರಂದು ಸಂಜೆ 06-30 ಗಂಟೆಗೆ ಪಿರ್ಯಾದುದಾರರಾದ ಮಂಜು ಬಿ,ಪಿ ಪಿ,ಎಸ್,, ಹುಲಿಯೂರುದುರ್ಗ ಪೊಲೀಸ್ ಠಾಣೆ ರವರು ಠಾಣಾ ಪಿ,ಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿ ಕೊಟ್ಟ ದೂರಿನ ಅಂಶವೇನೆಂದರೆ ಈ ದಿವಸ ದಿನಾಂಕ;-16-10-2017 ರಂದು ಸಂಜೆ 05-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಇರುವಾಗ ಠಾಣಾ ಸರಹದ್ದು ಸಿಂಗೋನಹಳ್ಳಿ ಗ್ರಾಮ ದೇವಸ್ಥಾನದ ಪಕ್ಕದಲ್ಲಿ ಸಿಂಗೋನಹಳ್ಳಿ ಯಿಂದ ನಾಗತಿಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕುಳಿತುಕೊಂಡು ಒಬ್ಬ ಆಸಾಮಿಯು ಮಧ್ಯಪಾನ ಮಾಡುತ್ತಿದ್ದಾನೆ ಅಂತ ಆತನ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ ನೀವುಗಳು ನಮ್ಮೊಂದಿಗೆ ಪಂಚಾಯ್ತಿದಾರರಾಗಿ ಸಹಕರಿಸುವಂತೆ ಕೇಳಿಕೊಂಡಿದ್ದು ಅದಕ್ಕೆ ಅವರು ಒಪ್ಪಿದ್ದು ನಂತರ ಸಂಜೆ 05-30 ಗಂಟೆಗೆ ಠಾಣೆಯನ್ನು ಬಿಟ್ಟು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಸಂಜೆ    05-45 ಗಂಟೆಗೆ ಸಿಂಗೋನಹಳ್ಳಿ ಗ್ರಾಮ ದೇವಸ್ಥಾನದ ಪಕ್ಕದಲ್ಲಿ ಸಿಂಗೋನಹಳ್ಳಿ ಯಿಂದ ನಾಗತಿಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಸದರಿ ಅಸಾಮಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಡುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ನಂಜಪ್ಪ ಬಿನ್ ಲೇಟ್ ಚಿಕ್ಕನಿಂಗಯ್ಯ, 60 ವರ್ಷ, ವ್ಯವಸಾಯ, ವಕ್ಕಲಿಗರು, ಸಿಂಗೋನಹಳ್ಳಿ ಗ್ರಾಮ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೋಕು ಎಂತ ತಿಳಿಸಿದ್ದು ಸದರಿ ಸ್ಥಳದಲ್ಲಿ ಆತನ ಮುಂದೆ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲನೆ ಮಾಡಲಾಗಿ 90 ಎಂ,ಎಲ್ ನ ORIGINAL CHOICE ನ ಎರೆಡು ಫ್ಯಾಕೇಟ್ ಗಳು ಇದ್ದು ಅವುಗಳಲ್ಲಿ ಒಂದು ಫ್ಯಾಕೇಟ್ ಖಾಲಿಯಾಗಿದ್ದು , ಒಂದು ಪ್ಯಾಕೇಟ್ ಓಪನ್ ಆಗದೆ ಮಧ್ಯ ತುಂಬಿರುತ್ತೆ, ಮತ್ತು ಒಂದು ಪ್ಲಾಸ್ಟಿಕ್ ಲೋಟವು ಸಹ ಇರುತ್ತೆ, ಈ ಸದರಿ ಆಸಮಿಯೂ ಸಾರ್ವಜನಿಕ ಸ್ಥಳವಾದ ಸಿಂಗೋನಹಳ್ಳಿ ಗ್ರಾಮ ದೇವಸ್ಥಾನದ ಪಕ್ಕದಲ್ಲಿ ಸಿಂಗೋನಹಳ್ಳಿ ಯಿಂದ ನಾಗತಿಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಮಧ್ಯಪಾನ ಮಾಡುತ್ತಿದ್ದರಿಂದ ಈತನ ಮೇಲೆ ಕಲಂ 15 (ಎ), 32(3) ಕೆ,ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಲು ಕಳುಹಿಸಿಕೊಟ್ಟ ದೂರನ್ನು ಪಡೆದು ಠಾಣಾ ಮೊ,ನಂ 201/2017 ರಂತೆ ದೂರು ದಾಖಲಿಸಿರುತ್ತೆ,

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 129/2017, ಕಲಂ 15(ಎ), 32(3) ಕೆ.ಇ ಆಕ್ಟ್.

ದಿನಾಂಕ:16.10.2017 ರಂದು ಮದ್ಯಾಹ್ನ 01.00 ಗಂಟೆಗೆ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ.ವಿ ರವೀಂದ್ರ ಆದ ನಾನು ದಿನಾಂಕ:16.10.2017 ರಂದು ಬೆಳಗ್ಗೆ 11:00 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಪೋನ್ ಮಾಡಿ ಹುಳಿಯಾರು ಹೋಬಳಿ ಬರಕನಹಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯ್ತಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿದ್ದು ನಾನು ಮತ್ತು ಬೀಟ್ ಸಿಬ್ಬಂದಿ ಪಿ.ಸಿ 506 ನಾಗರಾಜು ರವರು ಇಲಾಖಾ ಜೀಪಿನಲ್ಲಿ ಸದರಿ ಸ್ಥಳಕ್ಕೆ ಬೆಳಗ್ಗೆ 11:20 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಬರಕನಾಹಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯ್ತಿಯ ಮುಂದೆ ಟಾರ್ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಒಂದು ಮದ್ಯದ ಪ್ಯಾಕೇಟ್ಅನ್ನು ಇಟ್ಟುಕೊಂಡು ಮತ್ತೊಂದು ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಒಂದು ಹಳೆಯ ವಾಟರ್ ಕ್ಯಾನ್ ಅನ್ನು ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದವನನ್ನು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ಯಲ್ಲಪ್ಪ ಬಿನ್ ಗುತ್ತಪ್ಪ, 53 ವರ್ಷ, ಈಡಿಗರು, ಬರಕನಹಾಳ್, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ ಸ್ಥಳದಲ್ಲಿ ಆತನ ಬಳಿ ಇದ್ದ ಒಂದು ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಎರಡು ತುಂಬಿದ ಸೀಲ್ ಓಪನ್ ಮಾಡದ ಟೆಟ್ರಾ ಪ್ಯಾಕೇಟ್ ಮತ್ತು ಮತ್ತೊಂದು ಓಪನ್ ಮಾಡಿದ್ದ ಒಂದು ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ ಇದ್ದು ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸದರಿ ಸ್ಥಳವು ಬರಕನಹಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯ್ತಿ ಕಟ್ಟಡದ ಮುಂದೆ ಹಾದು ಹೋಗಿರುವ ಟಾರ್ ರಸ್ತೆಯ ಬದಿಯ ಸಾರ್ವಜನಿಕ ಸ್ಥಳವಾಗಿರುತ್ತೆ, ಸದರಿ ಸ್ಥಳದಲ್ಲಿ ಆರೋಪಿಯಿಂದ ಮೇಲ್ಕಂಡ ಮದ್ಯದ 1) ಒಂದು ರಾಜಾ ವಿಸ್ಕಿ 90 ಎಂ.ಎಲ್ ತುಂಬಿದ ಸೀಲ್ ಓಪನ್ ಮಾಡದ ಟೆಟ್ರಾ ಪ್ಯಾಕೇಟ್ 2) ಒಂದು ರಾಜಾ ವಿಸ್ಕಿ 90 ಎಂ.ಎಲ್ ನ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಒಂದು ಹಳೆಯ ವಾಟರ್ ಕ್ಯಾನ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 12:30 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲಿಸುವಂತೆ ಸೂಚಿಸಿ ಜ್ಞಾಪನವನ್ನು ನೀಡಿರುತ್ತೇನೆ. ಎಂತ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 130/2017, ಕಲಂ 15(ಎ), 32(3) ಕೆ.ಇ ಆಕ್ಟ್.

ದಿನಾಂಕ:16.10.2017 ರಂದು ಸಂಜೆ 4.30 ಗಂಟೆಗೆ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ.ವಿ.ರವೀಂದ್ರ ಆದ ನಾನು ದಿನಾಂಕ:16.10.2017 ರಂದು ಮದ್ಯಾಹ್ನ 01:30 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಪೋನ್ ಮಾಡಿ ಹುಳಿಯಾರು ಹೋಬಳಿ ಬರಕನಾಳ್ ಗ್ರಾಮದಲ್ಲಿರುವ ಬೈರವೇಶ್ವರ ದೇವಸ್ಥಾನದ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿದ್ದು ನಾನು ಮತ್ತು ಬೀಟ್ ಸಿಬ್ಬಂದಿ ಪಿ.ಸಿ 506 ನಾಗರಾಜು.ಎಸ್ ರವರು ಇಲಾಖಾ ಜೀಪಿನಲ್ಲಿ ಸದರಿ ಸ್ಥಳಕ್ಕೆ ಮದ್ಯಾಹ್ನ 02:00 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಬರಕನಾಳ್ ಗ್ರಾಮದಲ್ಲಿರುವ ಬೈರವೇಶ್ವರ ದೇವಸ್ಥಾನದ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ 1 ಮದ್ಯದ ಪ್ಯಾಕೇಟ್ ಅನ್ನು ಇಟ್ಟುಕೊಂಡು ಮತ್ತೊಂದು ಮದ್ಯದ ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಅನ್ನ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ನಾಗರಾಜು ಬಿನ್ ಲೇಟ್ ಶಂಕರಪ್ಪ, 44 ವರ್ಷ, ಲಿಂಗಾಯತ ಜನಾಂಗ, ಹೋಟೆಲ್ ಕೆಲಸ, ಬರಕನಾಳ್, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ ಸ್ಥಳದಲ್ಲಿ ಆತನ ಬಳಿ ಇದ್ದ ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ ಮತ್ತು ಮತ್ತೊಂದು ಓಪನ್ ಮಾಡಿದ್ದ ಒಂದು ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 28.13 ಪೈಸೆ ಎಂತ ಬರೆದಿರುವ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ, ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಇದ್ದು ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸದರಿ ಸ್ಥಳವು ಬರಕನಾಳ್ ಗ್ರಾಮದಲ್ಲಿರುವ ಬೈರವೇಶ್ವರ ದೇವಸ್ಥಾನದ ಹಿಂಭಾಗ ಸಾರ್ವಜನಿಕ ಸ್ಥಳವಾಗಿದ್ದು ಮಣ್ಣಿನಿಂದ ಕೂಡಿದ ಸ್ಥಳವಾಗಿರುತ್ತೆ ಸದರಿ ಸ್ಥಳದಿಂದ ಪೂರ್ವಕ್ಕೆ ಸುಮಾರು 5 ಅಡಿ ದೂರದಲ್ಲಿ ಬೈರವೇಶ್ವರ ದೇವಸ್ಥಾನ ಇರುತ್ತೆ. ಆರೋಪಿಯಿಂದ ಮೇಲ್ಕಂಡ ಮದ್ಯದ 1) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ 2) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಒಂದು ಲೀಟರ್ ನ ಒಂದು ವಾಟರ್ ಬಾಟಲ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಮದ್ಯಾಹ್ನ 02:15 ಗಂಟೆಯಿಂದ ಮದ್ಯಾಹ್ನ 03:15 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ಜ್ಞಾಪನವನ್ನು ನೀಡಿರುತ್ತೇನೆ. ಎಂತ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 165/2017 ಕಲಂ: 15 (ಎ), 32 (3) ಕೆ.ಪಿ.ಆಕ್ಟ್.

ದಿನಾಂಕ : 16/10/2017 ರಂದು ಬೆಳಿಗ್ಗೆ 10-45 ಗಂಟೆಗೆ ಎ.ಎಸ್.ಐ, ಶಿವರುದ್ರಯ್ಯ ರವರು ಠಾಣೆಗೆ ಹಾಜರಾಗಿ ಆರೋಪಿ, ಮಾಲುಗಳು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ನೀಡಿದ ಜ್ಞಾಪನದ ಅಂಶವೇನೆಂದರೆ, ನಾನು ದಿನಾಂಕ: 16/10/2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಫೋನ್ ಮಾಡಿ ತಿಪಟೂರು ಟೌನ್ ಶಾಂತಿನಗರದಲ್ಲಿ ಒಬ್ಬ ಅಸಾಮಿಯು ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಅವುಗಳನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿದ್ದಾರೆಂತಾ ಮಾಹಿತಿ ಬಂದಿದ್ದು, ನಾನು ಠಾಣಾ ಪಿ.ಸಿ-210 ಅಶೋಕ್ ಜೊತೆ ಸದರಿ ಸ್ಥಳಕ್ಕೆ ಬೆಳಿಗ್ಗೆ 9-15 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಸಾಮಿಯು ತನ್ನ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ 3 ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಇದರಲ್ಲಿ ಒಂದು ಮದ್ಯದ ಪಾಕೇಟನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿದ್ದು, ಪಕ್ಕದಲ್ಲಿ ಒಂದು ಹಳೆಯ ಪ್ಲಾಸ್ಟಿಕ್ ಜಗ್ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು, ಸದರಿ ಅಸಾಮಿಯನ್ನು 9-20 ಗಂಟೆಗೆ ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ, ಬಂದಿಸಿದ ಅಸಾಮಿಯನ್ನು ವಿಚಾರ ಮಾಡಲಾಗಿ ಆತನ ಹೆಸರು ಕೃಷ್ಣಪ್ಪ, ಬಿನ್ ಕೊಂಡಪ್ಪ, 49 ವರ್ಷ, ಈಡಿಗರು, ವೈನ್ಸ್ ಸ್ಟೋರಿನಲ್ಲಿ ಕೆಲಸ, ಆಶ್ರಯ ಬಡಾವಣೆ 2ನೇ ಕ್ರಾಸ್, ಶಾಂತಿನಗರ, ದಸರಿಘಟ್ಟ ರಸ್ತೆ, ತಿಪಟೂರು ಟೌನ್ ಎಂತ ತಿಳಿಸಿದ್ದು, ಅಸಾಮಿಯ ಮನೆಯ ಮುಂದೆ ಇದ್ದ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ ಬೆಲೆ ಒಂದಕ್ಕೆ 28.13 ಪೈಸೆ ಎಂತ ಬರೆದಿರುವ ತುಂಬಿದ 2 ಟೆಟ್ರಾ ಪಾಕೇಟ್, ಮತ್ತು ಮೊತ್ತೊಂದು ಓಪನ್ ಮಾಡಿದ್ದ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ ಇದ್ದು, ಈ ಮೂರು ಮದ್ಯದ ಟೆಟ್ರಾ ಪಾಕೇಟ್ ಹಾಗೂ ಪ್ಲಾಸ್ಟಿಕ್ ಲೋಟ ಇದ್ದು, ಈತನು ಯಾವುದೇ ಪರವಾನಗಿ ಇಲ್ಲದೆ ಪ್ರಾಣಕ್ಕೆ ಹಾನಿ ಎಂತ ಗೊತ್ತಿದ್ದರು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ 1] 2 ಮದ್ಯ ತುಂಬಿರುವ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ 2] ಒಂದು ಖಾಲಿ ಇರುವ 90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ 3] ಒಂದು ಪ್ಲಾಸ್ಟಿಕ್ ಲೋಟ, ಹಾಗೂ 4] ಒಂದು ಹಳೆಯ ಪ್ಲಾಸ್ಟಿಕ್ ಜಗ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಬೆಳಿಗ್ಗೆ 9-30 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆಯ ಕ್ರಮ ಕೈಗೊಂಡಿರುತ್ತೆ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾಧಿಯಾಗಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣಾ ಮೊ.ನಂ.126/2017 ಕಲಂ.279,337 ಐಪಿಸಿ

ದಿನಾಂಕ:16.10.2017 ರಂದು ತಿಪಟೂರು ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಜಗದೀಶ್‌‌ಚಾರ್‌‌ ಬಿನ್‌‌‌ ಲೇಟ್‌‌‌ ಗಂಗಾಧರಾಚಾರ್‌‌‌‌‌, 60 ವರ್ಷ, ವಿಶ್ವಕರ್ಮ ಜನಾಂಗ, ಟೈಲರಿಂಗ್‌‌‌ ಕೆಲಸ, ದೊಡ್ಡಹಟ್ಟಿ ಬೀದಿ, ಹೊನ್ನವಳ್ಳಿ, ತಿಪಟೂರು ತಾ: ರವರು 8-30 ಗಂಟೆಯಿಂದ 9-00 ಗಂಟೆವರೆಗೆ ನೀಡಿದ ಹೇಳಿಕೆ ಅಂಶವೇನೆಂದರೆ ದಿನಾಂಕ:15.10.2017 ರಂದು ಸಂಜೆ ಸುಮಾರು 6-30 ಗಂಟೆಗೆ ಎಂದಿನಂತೆ ಟೈಲರಿಂಗ್‌ ಕೆಲಸ ಮುಗಿಸಿಕೊಂಡು ತಿಪಟೂರಿನ ಆಟೋ ಸ್ಟ್ಯಾಂಡ್‌‌‌‌‌ ಹತ್ತಿರ ಬಂದು ಹೊನ್ನವಳ್ಳಿ ಕಡೆ ಹೋಗುವ ಪ್ಯಾಸೆಂಜರ್‌ ಆಟೋದಲ್ಲಿ ಹೊನ್ನವಳ್ಳಿಗೆ ಹೋಗಲು ಕುಳಿತುಕೊಂಡೆ. ಆಗ ಅದೇ ಆಟೋದಲ್ಲಿ ನನಗೆ ಪರಿಚಯವಿರುವ ನಮ್ಮೂರಿನ ತಿಮ್ಮಯ್ಯ, ರಮೇಶ, ಕಂಚಿಗಾರನಹಳ್ಳಿಯ ಶಿವಣ್ಣ, ಕುಮಾರ ಹಾಗೂ ಇನ್ನೂ ಇತರೆ 3 ಜನ ಹೆಂಗಸರು, 2 ಜನ ಗಂಡಸರು, ಇದ್ದರು. ಆಟೋ ಚಾಲಕ ಆಟೋವನ್ನು ಚಾಲನೆ ಮಾಡಿಕೊಂಡು ಬಿದರೇಗುಡಿ ಬಳಿ ಬಂದಾಗ ಅಲ್ಲಿ ಒಬ್ಬರು ಹೊನ್ನವಳ್ಳಿಗೆ ಹೋಗಲು ಆಟೋ ಹತ್ತಿಕೊಂಡರು. ಆಟೋ ಚಾಲಕ ಆಟೋ ಓಡಿಸಿಕೊಂಡು ನಾಗತೀಹಳ್ಳಿ ಗೇಟ್‌ ಸಮೀಪ ಸುಮಾರು 7 ಗಂಟೆಯಲ್ಲಿ ಹೋಗುತ್ತಿರುವಾಗ ಹೊನ್ನವಳ್ಳಿ ಕಡೆಯಿಂದ ಬಿದರೇಗುಡಿ ಕಡೆಗೆ ಹೋಗುವ ಕಾರು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಕಾರನ್ನು ಓಡಿಸಿಕೊಂಡು ಎಡ ಬದಿಯ ರಸ್ತೆಯಲ್ಲಿ ಹೋಗುತ್ತಿದ್ದ ನಮ್ಮ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋ ಪಲ್ಟಿಯಾಯಿತು. ಅದರಲ್ಲಿದ್ದ ನಮ್ಮಗಳಿಗೆ ಗಾಯವಾಯಿತು. ನನಗೆ ತಲೆಗೆ ಬಲಗೈಗೆ ರಕ್ತ ಗಾಯವಾಯಿತು. ಸೊಂಟಕ್ಕೆ ಪೆಟ್ಟಾಯಿತು. ಇನ್ನು ಇತರೇ ಆಟೋದಲ್ಲಿದ್ದ ಸುಮಾರು ಜನರಿಗೆ ರಕ್ತಗಾಯ ಮತ್ತು ಪೆಟ್ಟಾಗಿರುತ್ತೆ. ಕಾರ್‌‌ನವನು ನಮಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋ ಜಖಂ ಆಗಿರುತ್ತೆ. ನಮ್ಮಗಳಿಗೆ ಡಿಕ್ಕಿ ಹೊಡೆಸಿದ ಕಾರು ಮುಂದೆ ಹೋಗಿ ಬಲಗಡೆ ಇರುವ ಮರಕ್ಕೆ ಗುದ್ದಿ ನಿಂತಿದ್ದು ಕಾರ್‌‌ನ ನಂಬರ್‌ ನೋಡಲಾಗಿ ಕೆ.ಎ.06.ಪಿ.0973 ಆಗಿದ್ದು ಕೆಂಪು ಬಣ್ಣದ್ದಾಗಿರುತ್ತೆ. ನಾವು ಹೋಗುತ್ತಿದ್ದ ಆಟೋ ನಂಬರ್‌ ನೋಡಲಾಗಿ ಹೊಸ ಆಟೋ ಆಗಿದ್ದು ನಂಬರ್‌‌‌‌ ಇರುವುದಿಲ್ಲ. ಗಾಯವಾಗಿದ್ದ ನಮಗೆ ಯಾರೋ ಪೋನ್‌‌ ಮಾಡಿ ಆಂಬುಲೆನ್ಸ್‌‌‌‌‌ ತರಿಸಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ನಾವು ಪ್ರಯಾಣ ಮಾಡುತ್ತಿದ್ದ ಆಟೋ ಮತ್ತು ಕಾರ್‌‌ ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ನನಗೆ ಮತ್ತು ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಾಯಪಡಿಸಿದ ಕಾರ್‌ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂಬುದಾಗಿ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಪ್ರಕರಣ ದಾಖಲು ಮಾಡಿರುತ್ತದೆ.


Page 1 of 3
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 96 guests online
Content View Hits : 181206