lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< February 2018 >
Mo Tu We Th Fr Sa Su
      1 2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28        
February 2018

Wednesday, 28 February 2018

ಪತ್ರಿಕಾ ಪ್ರಕಟಣೆ ದಿ 27-02-18

ಪತ್ರಿಕಾ ಪ್ರಕಟಣೆ

ದಿನಾಕ : 27/02/2018

ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ  ಆರೋಪಿಗಳ ಬಂಧನ.

 

ದಿನಾಂಕ: 05-02-2018 ರಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತುಮಕೂರು ಟೌನ್ ಮಂಜುನಾಥನಗರ 2 ನೇ ಕ್ರಾಸ್‌‌, 3 ನೇ ಅಡ್ಡರಸ್ತೆಯಲ್ಲಿ ಬಾಡಿಗೆಗೆ ಮನೆಯೊಂದರಲ್ಲಿ ವಾಸವಾಗಿದ್ದ ಗೌರೀಶ ಬಿನ್. ಲೇ|| ಮೈಕಲ್‌‌ ಡಿಸೋಜಾ ಎಂಬುವರ ಮನೆಗೆ ನುಗ್ಗಿ ಹಣಕ್ಕಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದ ಆರೋಪಿಗಳ ಬಂಧನ.

ಈ  ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ. 27/2018 ಕಲಂ 394 ರೆ/ವಿ 34 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.           ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ದಿವ್ಯ ವಿ. ಗೋಪಿನಾಥ್‌‌‌‌ ಐ.ಪಿ.ಎಸ್. ರವರು  ತಿಲಕ್‌‌ಪಾರ್ಕ್‌ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಕ ಮಾಡಿದ್ದು, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು  ಹಾಗೂ ತುಮಕೂರು ನಗರ ಉಪ-ವಿಭಾಗದ ಡಿ.ವೈ.ಎಸ್.ಪಿ. ರವರ ನಿರ್ದೇಶನದಂತೆ ದಿನಾಂಕ: 26-02-2018 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ಈ ಕೆಳಕಂಡ ಆರೋಪಿಗಳಾದ 1) ಉಮೇಶ್‌ ಕೆ.ವಿ @ ಆದಿ @ ಜಂಗ್ಲಿ ಬಿನ್ ವೆಂಕಟೇಶ್, 22   ವರ್ಷ  2) ಸುಧಾಕರ ಕೆ.ಎಮ್ ಬಿನ್ ಲೇಟ್ ಮಾಯಣ್ಣ, 23 ವರ್ಷ, 3) ಮೋಹನ್ ಕೆ ಬಿನ ದಾಸಶೆಟ್ಟಿ, 29 ವರ್ಷ 4) ಹರೀಶ ಕೆ.ಎನ್‌ ಬಿನ್ ನಾರಾಯಣಪ್ಪ, 27 ವರ್ಷ ರವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದು, ವಿಚಾರಣಾ ಕಾಲದಲ್ಲಿ 1 ನೇ ಆರೋಪಿಯ ವಿರುದ್ದ 2 ಕೊಲೆ ಕೇಸು ಹಾಗೂ ಡಕಾಯಿತಿಗೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, 2 ನೇ ಆರೋಪಿಯು ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದು,   3 ನೇ ಆರೋಪಿಯು ಒಂದು ಕೊಲೆ ಹಾಗೂ ಒಂದು ಡಕಾಯಿತಿ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿರುತ್ತಾನೆ. ಈ ಮೇಲ್ಕಂಡ ಆರೋಪಿಗಳೆಲ್ಲರೂ ಬೆಂಗಳೂರಿನಲ್ಲಿ ಬಾರ್‌‌ & ರೆಸ್ಟೋರೆಂಟ್‌‌ನಲ್ಲಿ ಸಪ್ಲೆಯರ್‌ ಕೆಲಸ ಹಾಗೂ ಆಟೋ ಡ್ರೈವರ್‌‌ ಕೆಲಸ ಮಾಡಿಕೊಂಡಿದ್ದು, ಇವರುಗಳ ಸ್ವಂತ ಊರು ಕುಪ್ಪೆಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ಆಗಿರುತ್ತೆ.  ಈ  ಆರೋಪಿಗಳ ಕಡೆಯಿಂದ ಕೃತ್ಯಕ್ಕೆ ಸಂಬಂಧಿಸಿದ KA-02-JF-6019 ನೇ Bajaj Pulsar ದ್ವಿ ಚಕ್ರ ವಾಹನ ಹಾಗೂ ಒಂದು ಸ್ಟೈನ್‌‌ಲೆಸ್‌ ಸ್ಟೀಲ್‌ ಚಾಕುವನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.Tuesday, 27 February 2018

ಅಪರಾಧ ಘಟನೆಗಳು 27-02-18

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 42/2018 U/S 379 IPC

ದಿನಾಂಕ:-26/02/2018 ರಂದು ಮದ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಕುಮಾರ್ ,ಜಿ,ಆರ್. ಬಿನ್ ಶಿವಣ್ಣ, ವಾಸ :- ಸೌಗಂಧಿಕ ನಿಲಯ, ( ಜಯರಾಮ್ ಹೌಸ್ ) ಗುರು ಲೇಔಟ್, 1ನೇ ಕ್ರಾಸ್, ಗುರು ಲೇಔಟ್, ಕುವೆಂಪುನಗರ, ತುಮಕೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ: 18/02/2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಪಿರ್ಯಾದಿಯು ಸುಮಾರು 47,000/-ರೂ ಬೆಲೆ ಬಾಳುವ  KA06EV7434 ವಾಹನವನ್ನು ಮನೆಯ ಮುಂಭಾಗ ನಿಲ್ಲಿಸಿ ದಿ: 19/02/2018 ರಂದು ಬೆಳಗ್ಗೆ ಎದ್ದು ನೋಡಲಾಗಿ ಸದರಿ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಕ್ರಮ ಕೋರಿ ನೀಡಿದ ದೂರುMonday, 26 February 2018

ಅಪರಾಧ ಘಟನೆಗಳು 26-02-18

ಚಿಕ್ಕನಾಯಕನಹಳ್ಳಿ  ಪೊಲೀಸ್ ಠಾಣೆ ಯು.ಡಿ.ಆರ್.ನಂ. 04/2018 ಕಲಂ : 174 ಸಿ.ಆರ್.ಪಿ.ಸಿ.

ಅಣೆಕಟ್ಟೆ ಗ್ರಾಮದ ವಾಸಿ ಮೃತ ಡಿ.ಪ್ರಸಾದ್, ಕೃಷಿಕರಾಗಿದ್ದು, ಕೃಷಿಯಿಂದ ಜೀವನ ಸಾಗಿಸುತ್ತಿದ್ದು, ಸಣ್ಣ ಹಿಡುವಳಿದಾರರಾಗಿರುತ್ತಾರೆ.  ಆವರ ಬಾಬ್ತು ತೋಟದಲ್ಲಿರುವ ಹುಣಸೆ ಮರದ ಹಣ್ಣನ್ನು ದಿನಾಂಕ:- 25-02-2018 ರಂದು ಬಡಿಯಲು ಹೋಗಿದ್ದು, ಮಧ್ಯಾಹ್ನ 12-00 ಗಂಟೆಯಲ್ಲಿ ಹುಣಸೆ ಮರವನ್ನು ಹತ್ತಿ ಹುಣಸೆ ಹಣ್ಣನ್ನು  ಬಡಿಯುತ್ತಿರುವಾಗ ಹುಣಸೆ ಮರದ ರಂಬೆ ಸಿಗಿದು ಮರ ಬಡಿಯುತ್ತಿದ್ದ ಡಿ.ಪ್ರಸಾದ್ ಮರದಿಂದ ನೆಲಕ್ಕೆ ಬಿದ್ದು, ಸ್ಥಳದಲ್ಲಿ ಮೃತರಾಗಿರುತ್ತಾರೆ. ಖಾವಂದವರು  ಮೃತ ದೇಹವನ್ನು ಶವಪರೀಕ್ಷೆ ಮಾಡಿ, ಕಾನೂನು ಕ್ರಮ ಜರುಗಿಸಿ ,ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕೆಂದು ಪಿರ್ಯಾದಿ ಮಗಳು ಮೇಘನಾರವರು ಠಾಣೆಗೆ ಹಾಜರಾಗಿ ದೂರು ನೀಡಿರುತ್ತಾರೆ. ನನ್ನ ತಾಯಿ ನನ್ನ ತಂದೆಯ ಸಾವಿನ ಸುದ್ದಿಯಿಂದ ಆಘಾತಕ್ಕೆ ಒಳಗಾಗಿದ್ದು, ನಾನು ಅರ್ಜಿ ನೀಡಿರುತ್ತೇನೆಂತ ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ UDR.ನಂ. 04/2018, ಕಲಂ: 174 CRPC

ದಿನಾಂಕ: 25-02-2018 ರಂದು ಮದ್ಯಾಹ್ನ 01-30 ಗಂಟೆಗೆ ಪ್ರೇಮ ಕೋಂ ಶ್ರೀನಿವಾಸ್ ಕೆ ಎಂ, 44 ವರ್ಷ, ಪ.ಜನಾಂಗ, ಮನೆಗೆಲಸ, ಕದರಾಪುರ, ಕಸಬಾ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯು ತುಳಸಮ್ಮ ರವರ ಮಗಳಾದ ವಸಂತ ರವರ ಬೀಗರ ಊಟ ಕಾರ್ಯವಿದ್ದು ದಿನಾಂಕ: 25-02-2018 ರಂದು ಪಿರ್ಯಾದಿಯು ಅವರ ತಾಯಿ ಊರಾದ ಹಿತ್ತಲಹಳ್ಳಿ ಕಾಲೋನಿಗೆ ಹೋಗಿದ್ದರು. ಈ ಕಾರ್ಯಕ್ಕೆ ಪಿರ್ಯಾದಿಯ ಸಂಬಂಧಿಕರೆಲ್ಲಾ ಬಂದಿದ್ದು, ಪಿರ್ಯಾದಿಯ ತಾಯಿ ಹೊಂಬಮ್ಮ ರವರ ತಮ್ಮ ಲೇಟ್ ದೊಡ್ಡಯ್ಯ ರವರ ಮಗನಾದ ಮುನೇಶ, ಆತನ ಸ್ನೇಹಿತ ರಂಗಸ್ವಾಮಿ, ಗಿಡದಪಾಳ್ಯದ ಕಾಲೋನಿಯಿಂದ ಬಂದಿದ್ದರು. ಇವರು ಬೀಗರ ಊಟಕ್ಕೆ ಮರಿಗಳನ್ನು, ಕೋಳಿಯನ್ನು ಕಟ್ಟುಮಾಡಿಕೊಟ್ಟು ನಂತರ ಬೆಳಿಗ್ಗೆ 11.00 ಗಂಟೆಗೆ ಮುನೇಶ, ರಂಗಸ್ವಾಮಿ, ಅಭಿಷೇಕ್, ರಮೇಶ, ಎಲ್ಲರೂ ಪಿರ್ಯಾದಿಯ ತಾಯಿಯ ಮನೆಯಲ್ಲಿದ್ದ ದನಗಳನ್ನು ಮೈ ತೊಳೆಯಲು ಕದರಾಪುರದ ಕೆರೆಗೆ ಹೊಡೆದುಕೊಂಡು ಹೋದರು. ಅಭಿಷೇಕನು ಮಧ್ಯಾಹ್ನ 12-00 ಗಂಟೆ ಸಮಯಕ್ಕೆ ಪಿರ್ಯಾದಿಯವರ ತಾಯಿಯ ಹತ್ತಿರ ಬಂದು ಮುನೇಶ ಮತ್ತು ರಂಗಸ್ವಾಮಿ ಇಬ್ಬರೂ ಬೆಳಿಗ್ಗೆ 11-50 ಗಂಟೆಯಲ್ಲಿ ದನಗಳ ಮೈ ತೊಳೆಯುತ್ತಿದ್ದಾಗ ಕೆರೆಯ ನೀರಿನಲ್ಲಿ ಕಾಲು ಜಾರಿ ಇಬ್ಬರೂ ಮುಳುಗಿ ಹೋಗಿದ್ದು ಎಷ್ಟೊತ್ತಾದರೂ ನೀರಿನಿಂದ ಮೇಲಕ್ಕೆ ಬರಲಿಲ್ಲ. ಗಾಬರಿಯಾಗಿ ಓಡಿ ಬಂದೆನು ಎಂತ ತಿಳಿಸಿದನು. ಆಗ ಪಿರ್ಯಾದಿ, ಅವರ ಯಜಮಾನ ಶ್ರೀನಿವಾಸ, ಮತ್ತು ಅವರ ಸಂಬಂಧಿಕರೆಲ್ಲಾ ಕದರಾಪುರದ ಕೆರೆಯ ಹತ್ತಿರಕ್ಕೆ ಹೋಗಿ ನೋಡಲಾಗಿ ಮುನೇಶ ಮತ್ತು ರಂಗಸ್ವಾಮಿ ಇರಲಿಲ್ಲ. ನಂತರ ಪಿರ್ಯಾದಿಯ ಮೈದುನ ನರಸಿಂಹಮೂರ್ತಿ ರವರು ಕುಣಿಗಲ್ ಅಗ್ನಿಶಾಮಕ ದಳದವರಿಗೆ ಪೋನ್ ಮಾಡಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಮುನೇಶ ಮತ್ತು ರಂಗಸ್ವಾಮಿ ರವರನ್ನು ನೀರಿನಿಂದ ಮೇಲಕ್ಕೆ ತಂದು ಮಲಗಿಸಿದರು. ಇಬ್ಬರೂ ಸಹ ಮೃತಪಟ್ಟಿದ್ದರು. ಇವರು ದನಗಳನ್ನು ಮೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನೊಳಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಇವರ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಮೃತದೇಹಗಳು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತವೆ. ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಸಿ.ಎಸ್ ಪುರ  ಪೊಲೀಸ್ ಠಾಣಾ ಎಪ್.ಎ.ಆರ್. ನಂ:01/2018 ಆಕಸ್ಮಿಕ ಬೆಂಕಿ

ದಿನಾಂಕ:25.02.2018 ರಂದು ಅರ್ಜಿದಾರರಾದ ಹೆಚ್.ದೇವರಾಜು  ಬಿನ್  ಲೇಟ್ ಹನುಮಂತರಾವ್, 55 ವರ್ಷ, ಮರಾಠಿಗರು, ಮರಾಠಿ ಪಾಳ್ಯ. ಕಸಬಾ ಹೋಬಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ಅರ್ಜಿದಾರರ ಬಾಬ್ತು ಸುರುಗೆನಹಳ್ಳಿ ಕಾವಲ್  ಸರ್ವೆ ನಂ.2/1 ರಲ್ಲಿ ಒಂದು ಎಕರೆ 4 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ  ತೆಂಗಿನ ಮರ, ಬಾಳೆಯನ್ನು ಬೆಳೆದಿದ್ದು, ದಿನಾಂಕ:23.02.2018 ರಂದು  ಮಧ್ಯಾಹ್ನ 1.00 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು, ಜಮೀನಿನಲ್ಲಿ ಬೆಳೆದಿದ್ದಂತಹ  ಬಾಳೆ. ತೆಂಗಿನಮರ ಹಾಗೂ ನೀರು ಬಿಡಲು ಹಾಕಿದ್ದ ಡ್ರಿಪ್ ಪೈಪುಗಳು ಸುಟ್ಟುಹೋಗಿರುತ್ತವೆ, ಇದರಿಂದ ಅರ್ಜಿದಾರರಿಗೆ ಸುಮಾರು 2 ರಿಂದ 3 ಲಕ್ಷ  ರೂಗಳು ನಷ್ಟ ಉಂಟಾಗಿರುತ್ತೆ ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂತ ನೀಡಿದ ದೂರಿನ ಮೇರೆಗೆ ದಾಖಲಿಸಿಕೊಂಡಿರುತ್ತೆ.Sunday, 25 February 2018

ಅಪರಾಧ ಘಟನೆಗಳು 25-02-18

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 20/2018 ಕಲಂ 279,337,304(ಎ) ಐಪಿಸಿ ಮತ್ತು  187 ಐ ಎಂ ವಿ ಆಕ್ಟ್

ದಿನಾಂಕ:24-02-18 ರಂದು ಬೆಳಿಗ್ಗೆ 11:00ಗಂಟೆಗೆ ಪಿರ್ಯಾದಿ ಸುಧಾಕರ  ಬಿನ್ ಗೋವಿಂದಪ್ಪ,ಸುಮಾರು 35ವರ್ಷ, ಗೊಲ್ಲರು,ಕೂಲಿಕೆಲಸ, ಗುಡಿಬಂಡೆ ಗ್ರಾಮ, ಮಡಕಶಿರಾ ತಾಲ್ಲೂಕ್, ಆಂಧ್ರಪ್ರದೇಶ ರಾಜ್ಯ.  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಸುಧಾಕರ ರವರು  ಶಿರಾ ತಾಲ್ಲೋಕ್ ಕರೆತಿಮ್ಮನಹಳ್ಳಿ  ಗ್ರಾಮದ  ಬಳಿ ಹುಣಸೆ  ಮರವನ್ನು ಖರೀದಿಸಿದ್ದು, ಹುಣಸೆ ಹಣ್ಣನ್ನು ಬಡಿಯಲು  ಕೂಲಿಗಾಗಿ ಪಿರ್ಯಾದಿ ಸುಧಾಕರ, ಪಿರ್ಯಾದಿ ಹೆಂಡತಿ ಉಮಾಕ್ಕ  ಹಾಗೂ ಪಿರ್ಯಾದಿ ಗ್ರಾಮದ ಹನುಮೇಶ್ ರವರೊಂದಿಗೆ ಈ ದಿನ ದಿನಾಂಕ:24-02-2018 ರಂದು ಬೆಳಿಗ್ಗೆ 09:00 ಗಂಟೆ ಸಮಯದಲ್ಲಿ ಗುಡಿಬಂಡೆಯಿಂದ ಕೆಎ-06-ಎ-5444 ನೇ ಲಗೇಜ್ ಆಟೋದಲ್ಲಿ ಹೋಗುತ್ತಿರುವಾಗ  ಇದೇ ದಿನ ಬೆಳಿಗ್ಗೆ 09:30 ಗಂಟೆ ಸಮಯದಲ್ಲಿ  ಕರೆತಿಮ್ಮನಹಳ್ಳಿ ಗ್ರಾಮದ ಬಳಿ ಬರುತ್ತಿರುವಾಗ  ರಸ್ತೆಯ  ತಿರುವು ಇದ್ದು, ಆಟೋ ಚಾಲಕ ತನ್ನ  ಆಟೋವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ   ಓಡಿಸಿಕೊಂಡು ಬಂದು  ರಸ್ತೆಯ ಪಕ್ಕ  ಇದ್ದ ಸೀಮೆ ಜಾಲಿ ಮರಕ್ಕೆ ಗುದ್ದಿ ಆಟೋವನ್ನು  ಗುದ್ದಿ  ಆಟೋವನ್ನು  ಉರುಳಿಸಿ ಬಿಳಿಸಿದ್ದರಿಂದ ಲಗೇಜ್ ಆಟೋದ ಹಿಂಭಾಗ ನಿಂತಿದ್ದ ಪಿರ್ಯಾದಿ ಹೆಂಡತಿ ಉಮಾಕ್ಕ ರವರಿಗೆ  ತಲೆಗೆ,ಎದೆಗೆ, ಮತ್ತು ಕತ್ತಿನ ಹಿಂಭಾಗಕ್ಕೆ ಪೆಟ್ಟುಗಳು ಬಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದು,  ಆಟೋದಲ್ಲಿದ್ದ ಪಿರ್ಯಾದಿ ಸುಧಾಕರ ರವರಿಗೆ ಎಡ ತಲೆಗೆ ಮತ್ತು  ಜೊತೆಯಲ್ಲಿದ್ದ ಹನೇಮೇಶ ರವರಿಗೆ ತಲೆಗೆ, ಎದೆಗೆ ಮತ್ತು ಮೊಣಕಾಲಿಗೆ ಪೆಟ್ಟುಗಳು ಬಿದ್ದಿದ್ದು, ಗಾಯಾಳುವಾದ ನಮ್ಮನ್ನು  ಗ್ರಾಮದವರು ಉಪಚರಿಸಿದ್ದು,, ಅಪಘಾತಪಡಿಸಿದ ಲಗೇಜ್ ಆಟೋ ಚಾಲಕ  ಗಾಯಾಳುಗಳಿಗೆ  ಚಿಕಿತ್ಸೆ ಕೊಡಿಸದೆ, ಪೊಲೀಸರಿಗೆ ಮಾಹಿತಿಯನ್ನು  ತಿಳಿಸದೆ  ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು ಅಪಘಾತಪಡಿಸಿದ  ಮೇಲ್ಕಂಡ ಆಟೋ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 17/2018, ಕಲಂ 279, 337 IPC.

ದಿನಾಂಕ:24/02/2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಹುಳಿಯಾರು ಹೋಬಳಿ, ಗುರುವಾಪುರ ಗ್ರಾಮದ ವಾಸಿ ಜಿ.ಎಸ್ ರಾಜಣ್ಣ ಬಿನ್ ಶಿವಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಗಳಾದ ಲತಾ ರವರನ್ನು ಬುಕ್ಕಾಸಾಗರದ ವಾಸಿ ಕಾಂತರಾಜು ರವರಿಗೆ ಈಗ್ಗೆ 08 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ನನ್ನ ಅಳಿಯ ಕಾಂತರಾಜು ರವರು ಹುಳಿಯಾರು ಹೋಬಳಿ ನಂದೀಹಳ್ಳಿ ಸರ್ಕಾರಿ ಪ್ರೌಡಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ದಿನಾಂಕ:22/02/2018 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ನನಗೆ ನಮ್ಮ ಊರಿನ ಕಾಂತರಾಜು ಬಿನ್ ಜೋಗಪ್ಪರವರು ಫೋನ್ ಮಾಡಿ ನಿಮ್ಮ ಅಳಿಯ ಕಾಂತರಾಜು ಹಿರೋ ಹೊಂಡಾ ಬೈಕ್ ನಂ. ಕೆ.ಎ 16 ಎಸ್ 5318 ರಲ್ಲಿ ಅವರ ಊರಿನ ಕುಶಾಲಪ್ಪ ಬಿನ್ ಸಣ್ಣತಿಮ್ಮಪ್ಪರವರನ್ನು ಕೂರಿಸಿಕೊಂಡು ಶಾಲೆಗೆ ಹೋಗುತ್ತಿರುವಾಗ ನಾನು ನನ್ನ ಬೈಕಿನಲ್ಲಿ ಅವರ ಹಿಂದೆಯೇ ಹೋಗುತ್ತಿದ್ದೆ ಆಗ ಯಳನಡು ಬಸ್‌‌ಸ್ಟ್ಯಾಂಡ್ ಹತ್ತಿರ ನಿಮ್ಮ ಅಳಿಯ ಕಾಂತರಾಜು ರವರ ಬೈಕಿನ ಮುಂದೆ ಹೋಗುತ್ತಿದ್ದ ಲಾರಿ ನಂ. ಕೆ.ಎಲ್ 07 ಎ.ವೈ 7854 ರ ಲಾರಿ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಓಡಿಸಿ ಯಾವುದೇ ಮುನ್ಸೂಚನೆ ನೀಡದೆ ವೇಗವಾಗಿ ಬಲಕ್ಕೆ ಲಾರಿಯನ್ನು ತಿರುಗಿಸಿ ಲಾರಿ ಹಿಂದೆ ಬರುತ್ತಿದ್ದ ಕಾಂತರಾಜು ರವರ ಬೈಕಿಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಅಳಿಯ ಮತ್ತು ಬೈಕಿನ ಹಿಂದೆ ಕುಳಿತಿದ್ದ ಕುಶಾಲಪ್ಪನಿಗೆ ಅಪಘಾತಾಗಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಗ್ರಾಮಸ್ಥರ ಸಹಾಯದಿಂದ 108 ಆಂಬ್ಯೂಲೆನ್ಸ್ ನಲ್ಲಿ ಹುಳಿಯಾರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ನಾನು ತಕ್ಷಣ ಹುಳಿಯಾರು ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಅಳಿಯ ಕಾಂತರಾಜುಗೆ ಹೊಟ್ಟೆ, ತುಟಿ, ಎದೆ ಹಾಗೂ ಬಲಗೈ ಕೈಬೆರಳಿಗೆ ಮತ್ತು ಕುಶಾಲಪ್ಪನಿಗೆ ತಲೆಗೆ, ಹಣೆಗೆ ಮತ್ತು ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ವೈದ್ಯರ ಸಲಹೆ ಮೇರೆಗೆ ಗಾಯಾಳುಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ನನ್ನ ಅಳಿಯನಿಗೆ ತುಮಕೂರು ಟಿ.ಹೆಚ್.ಎಸ್ ಮತ್ತು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಶಾಲಪ್ಪನಿಗೆ ತಿಪಟೂರಿನಿಂದ ಶಿವಮೊಗ್ಗ ಆಸ್ಪತ್ರೆಗೆ ಮತ್ತು ಅಲ್ಲಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾನು ನನ್ನ ಅಳಿಯ ಕಾಂತರಾಜುಗೆ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ. ನನ್ನ ಅಳಿಯ ಕಾಂತರಾಜು ಮತ್ತು ಕುಶಾಲಪ್ಪ ರವರಿಗೆ ಲಾರಿ ನಂ ಕೆ.ಎಲ್ 07 ಎ.ವೈ 7854 ರ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಅಪಘಾತ ಉಂಟಾಗಿದ್ದು, ಸದರಿ ಲಾರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆSaturday, 24 February 2018

Press Note 24-02-18

: ಪತ್ರಿಕಾ ಪ್ರಕಟಣೆ :

: ದಿನಾಂಕ: 24-02-2018 :

 

 

ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ ಎನ್ ಕೆ ಎಸ್ ಆರ್ ಟಿ ಸಿ ವಿಭಾಗ ತುಮಕೂರು ರವರು  ವಾಹನ ಸಂಖ್ಯೆ ಕೆ ಎ 06-ಎಪ್-720  ಮಾರ್ಗ ಸಂಖ್ಯೆ  202/11 ಬಿ ಗೆ ನಿರ್ವಾಕಿಯಾಗಿದ್ದು ಸಾಯಾಂಕಾಲ 05-45 ಗಂಟೆಯಲ್ಲಿ ಅಂತರಸನಹಳ್ಳಿ ನಿಲ್ದಾಣದ ಬಳಿ ಬಸ್ ಅನ್ನು ನಿಲ್ಲಿಸಿದಾಗ ಯಲ್ಲಾಪುರದ ಕಡೆಗೆ ಮನು ಸತ್ಯನ್ ಬಿನ್ ಸತ್ಯ ಪ್ರಕಾಶ್ ಅಂತರಸನಹಳ್ಳಿ ರವರು ಬಸ್ಸಿನ ಹಿಂಬದಿಯ ಬಾಗಿಲಿನಲ್ಲಿ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದಾಗ ಬಸ್ಸಿನಲ್ಲಿ ಜಾಗವಿದ್ದರು ಸಹ ನೇತಾಡುತ್ತಿದ್ಧಾಗ ಬಸ್ಸಿನ ನಿರ್ವಾಹಕರು ಒಳಕ್ಕೆ ಬರುವಂತೆ ಮನು ಸತ್ಯನ್ ರವರಿಗೆ ಸೂಚಿಸಿದಾಗ ಬಸ್ಸಿನ ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯ ನಿರ್ವಾಹಣೆಗೆ ಅಡ್ಡಿ ಪಡಿಸಿರುವ ಬಗ್ಗೆ ಮನು ಸತ್ಯನ್ ರವರ ಮೇಲೆ ಕಾನೂನು ಪ್ರಕರಣ ದಾಖಲಾಗಿರುತ್ತೆ.

ತನಿಖಾ ಕಾಲದಲ್ಲಿ ಮನು ಸತ್ಯನ್ ರವರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳ ಪಡಿಸಿದಾಗ ಆರೋಪಿ ಮನು ಸತ್ಯನ್ ರವರು ಕೆ.ಎ.06.ವಿ.6678 ನೇ ಹಿರೋ ಹೊಂಡಾ ಪ್ಯಾಷನ್ ಪ್ಲಸ್  ಬೈಕ್ ಅನ್ನು ಎಸ್ ಎಸ್ ಪುರಂ ನ ಹೆಚ್  ಕೆ ಬಿ ಎನ್ ಮೋಟಾರ್ಸ್  ಗ್ಯಾರೇಜ್  ಹತ್ತಿರ ಮತ್ತು ಕೆಎ.08.ಜೆ.4830 ನೇ ನಂಬರಿನ ಎಲ್ ಎಂ ಎಲ್ , ದ್ವಿ ಚಕ್ರ ವಾಹನವನ್ನು  ಸುರುಬಿ ಪಿ ಜಿ ಹಾಸ್ಟಲ್  ಎಸ್ ಎಸ್ ಪುರಂ  ಮತ್ತು ಒಂದು ಸುಜುಕಿ ಸಮುರಾಯಿ ದ್ವಿಚಕ್ರ ವಾಹನವನ್ನು ವಿಜಯ ಪದವಿ ಪೂರ್ವ ಕಾಲೇಜ್  ಎಸ್ ಎಸ್ ಪುರಂ ಬಳಿ ನಾನು ಮತ್ತು ನನ್ನ ಸ್ನೇಹಿತ ಜಯಚಂದ್ರ @ ಕಪ್ಪೆ  ಅಂತರಸನಹಳ್ಳಿ ರವರು ಸೇರಿ ಈಗ್ಗೆ ಸುಮಾರು 20 ದಿನಗಳ ಹಿಂದೆ ಕಳ್ಳತನ ಮಾಡಿ ಮಧುಗಿರಿ ತಾಲ್ಲೋಕ್  ಸೋಂಪುರ ಗ್ರಾಮದ ಅಂಜಿಪ್ಪ ರವರ ಮಗ ಮಲ್ಲೇಶ್ ಎಂಬುವರಿಗೆ ಮಾರಾಟ ಮಾಡಿರುತ್ತೇವೆಂದು ತಿಳಿಸಿರುತ್ತಾನೆ. ಮತ್ತು ಸುಜುಕಿ ಸಮುರಾಯಿ ದ್ಚಿ ಚಕ್ರ ವಾಹನವನ್ನು ಕಳ್ಳತನ ಮಾಡಿ ಯಲ್ಲಾಫುರ ಗ್ರಾಮದ ಶಿವರಾಜು ಎಂಬುವರಿಗೆ ಮಾರಾಟ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಆರೋಪಿ ಜಯಚಂದ್ರ @ ಕಪ್ಪೆ ಅಂತರಸನಹಳ್ಳಿ ರವರನ್ನು ಮತ್ತು ಕಳ್ಳತನದ ಬೈಕುಗಳನ್ನು ಸ್ವೀಕಾರ ಮಾಡಿದ್ದ ಆರೋಪಿ ಮಹೇಶ ಎಂಬುವರನ್ನು ದಸ್ತಗಿರಿ ಮಾಡಿ  ಅವರಿಂದ 1)  ಕೆ.ಎ.06.ವಿ.6678 ನೇ ಹಿರೋ ಹೊಂಡಾ ಪ್ಯಾಷನ್ ಪ್ಲಸ್  ಮತ್ತು 2)  ಕೆಎ.08.ಜೆ.4830 ನೇ ನಂಬರಿನ ಎಲ್ ಎಂ ಎಲ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತೆ.

ಈ ಆರೋಪಿಗಳನ್ನು ಪತ್ತೆ ಮಾಡಿ ಕಳ್ಳತನವಾಗಿದ್ದ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಿಎಸ್‌ಐ ಶ್ರೀ ಯೋಗಾನಂದ ಸೋನಾರ್‌, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಅಪರಾದ ಪತ್ತೆ ದಳದ ಸಿಬ್ಬಂದಿಯವರಾದ ಉಮೇಶ್, ನಯಾಜ್ ಪಾಷಾ, ಶಾಂತಪ್ಪ ರವರು  ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, ತುಮಕೂರು ನಗರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರು, ಮತ್ತು ಸಿಪಿಐ ಎ.ಕೆ. ತಿಮ್ಮಯ್ಯ, ತುಮಕೂರು ಗ್ರಾಮಾಂತರ ವೃತ್ತ, ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಕೈಗೊಂಡಿರುತ್ತಾರೆ.

ಪೊಲೀಸ್ ಅಧೀಕ್ಷಕರ ಕಛೇರಿ,

ತುಮಕೂರು ಜಿಲ್ಲೆ.


ಅಪರಾಧ ಘಟನೆಗಳು 24-02-18

ಸಂಚಾರ ಪಶ್ಚಿಮ ಪೊಲೀಸ್ ಠಾಣಾ ಮೊ.ನಂ: 44/2018 ಕಲಂ 279,304(ಎ) ಐಪಿಸಿ

ದಿನಾಂಕ 23.02.2018 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ಫಾರೂಕ್ ಪಾಷ ಬಿನ್ ಫಯಾಸ್ ಪಾಷ, 23ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಹೆಗ್ಗೇರೆ, ತುಮಕೂರು ತಾ,,   ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ   ದಿನಾಂಕ 23.02.2018 ರಂದು ರಾತ್ರಿ 7-40 ಗಂಟೆ ಸಮಯದಲ್ಲಿ   ನನ್ನ ಅಣ್ಣ ಮೊಹಿದ್ದೀನ್ ಪಾಷ ಬಿನ್ ಫಯಾಸ್ ಪಾಷ, 29ವರ್ಷ, ಮುಸ್ಲಿಂ, ಬಾರ್ ಬೆಡಿಂಗ್ ಕೆಲಸ, ಹೆಗ್ಗೇರೆ, ತುಮಕೂರು ತಾ,, ಈತನು  ಬೀಮಸಂದ್ರ ಕಡೆಯಿಂದ ತುಮಕೂರು ಕಡೆಗೆ ಕೆಎ.06..ಇಬಿ.4926 ನೇ ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು    ಗುಬ್ಬಿಗೇಟ್ ಕುಂಟಮ್ಮನ ತೋಟದ ಹತ್ತಿರ ಎನ್.ಹೆಚ್.206 ರಸ್ತೆಯಲ್ಲಿ ಸಡನ್ ಆಗಿ ಬ್ರೇಕ್ ಹಾಕಿ ಸ್ಕೀಡ್ ಆಗಿ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು  ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದಾಗ ರಾತ್ರಿ 8-45 ಗಂಟೆ ಸಮಯದಲ್ಲಿ   ಮೃತಪಟ್ಟಿರುತ್ತಾರೆಂತ ದೂರಿನ ಅಂಶ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ 26/2018 ಕಲಂ: 279,337 ಐಪಿಸಿ

ದಿನಾಂಕ: 23/02/2018 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಟಿ.ಜಿ ಶಿವಶಂಕರ ಬಿನ್ ಲೇಟ್ ಟಿ.ಡಿ ಗಂಗಾಧರಪ್ಪ, ಕೋಟೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ: 21/02/2018 ರಂದು ನನ್ನ ಬಾಬ್ತು ಕೆ.ಎ-44 ಕೆ- 7442 ನೇ ಟಿ.ವಿ.ಎಸ್ ಎಕ್ಸ್ ಎಲ್  ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ನನ್ನ ಪತ್ನಿ ಉಮಾದೇವಿಯವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಬಂಡಿಹಳ್ಳಿ ಗೇಟ್ ಗೆ ಹೋಗಲು ಸಂಜೆ 6-45 ಗಂಟೆಯ ಸಮಯದಲ್ಲಿ ಬಂಡಿಹಳ್ಳಿ ಗೇಟ್ ನಿಂದ ಸ್ವಲ್ಪ ಹಿಂದೆ ಎನ್.ಹೆಚ್-206 ರಸ್ತೆಯ ಎಡಪಕ್ಕದಲ್ಲಿ ವಾಹನವನ್ನು ನಿಲ್ಲಿಸಿ ನಾನು ನನ್ನ ಪತ್ನಿ ರಸ್ತೆಯ ಎಡ ಹಂಚಿನಲ್ಲಿ ನಿಂತಿದ್ದಾಗ ಇದೇ ಸಮಯಕ್ಕೆ ಬೆಂಗಳೂರು ಕಡೆಯಿಂದ ಕೆ.ಎ-02 ಎ.ಡಿ- 9627 ನೇ ತವೇರಾ ಕಾರಿನ ಚಾಲಕ ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಟಿ.ಎಸ್.ಎಸ್ ಪಕ್ಕ ನಿಂತಿದ್ದ ನನ್ನ ಪತ್ನಿ ಉಮಾದೇವಿರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಎರಡೂ ಕಾಲುಗಳಿಗೆ, ಮೈಕೈಗೆ ಪೆಟ್ಟಾಗಿ ರಕ್ತ ಗಾಯಗಳಾದವು. ಕೂಡಲೇ ಸ್ಥಳದಲ್ಲಿದ್ದ ಬಂಡಿಹಳ್ಳಿಯ ಅರುಣ್, ಹಾಗೂ ನನ್ನ ಮಗಳು ಕೋಮಲ ಸಹಾಯದಿಂದ ನನ್ನ ಪತ್ನಿಯನ್ನು ಉಪಚರಿಸಿ ಅಪಘಾತ ಮಾಡಿದ ಕಾರಿನಲ್ಲೇ ಚಿಕಿತ್ಸೆಗಾಗಿ ಮೊದಲು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮುದ್ರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಈ ಅಪಘಾತ ಉಂಟು ಮಾಡಿದ ಕಾರಿನ ಚಾಲಕನ  ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ:40/2018. ಕಲಂ:279. 337 ಐಪಿಸಿ ಮತ್ತು  134 (ಎ&ಬಿ) ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:23.02.2018 ರಂದು ಈ ಕೇಸಿನ ಫಿರ್ಯಾದಿಯಾದ  ಗಿರೀಶ ಬಿನ್  ವೆಂಕಟೇಶ, 19 ವರ್ಷ,  ವಕ್ಕಲಿಗರು, ಕೆಂಫಯ್ಯನ ಪಾಳ್ಯ, ಸುಗ್ಗನಹಳ್ಳಿ  ಮಜರೆ, ಸಿ.ಎಸ್.ಪುರ ಹೋಬಳಿ,  ಗುಬ್ಬಿ  ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:21.02.2018 ರಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಟಿ.ವಿ.ಎಸ್.ಎಕ್ಸ್ಎಲ್  ನಂ.ಕೆ.ಎ-05-ಹೆಚ್-3829 ನಂಬರಿನ ದ್ವಿ ಚಕ್ರವಾಹನದಲ್ಲಿ ಪಿರ್ಯಾದುದಾರರ ತಂದೆ ವೆಂಕಟೇಶ & ತಾಯಿ ಕೆಂಪಮ್ಮರವರುಗಳು ಕೆಲಸದ ನಿಮಿತ್ತ ಸಿ.ಎಸ್.ಪುರಕ್ಕೆ  ಬಂದು,ಕೆಲಸ ಮುಗಿಸಿಕೊಂಡು  ವಾಪಸ್ಸು ಊರಿಗೆ ಬರುವಾಗ ಮಾರ್ಗ ಮಧ್ಯೆದಲ್ಲಿ  ಅಂದರೆ, ಸಿ,.ಕೊಡಗೆಹಳ್ಳಿ ರಸ್ತೆಯ ಹೊನ್ನಮ್ಮನ ಗುಡಿ ದೇವಸ್ಥಾನದ  ಸಮೀಪದ ಕೆ.ಇ.ಬಿ ಕಂಟ್ರಾಕ್ಟರ್ ಮುನಿಸ್ವಾಮಯ್ಯರವರ  ತೆಂಗಿನ ತೋಟದ  ನೇರದಲ್ಲಿ ಬರುತ್ತಿರಬೇಕಾದರೆ, ಸಿ.ಎಸ್.ಪುರ ಕಡೆಯಿಂದ ಒಬ್ಬ ಆಸಾಮಿಯು  ಅವನ ಬಾಬ್ತು ಕೆ.ಎ-22ಇಹೆಚ್-2792 ಬಜಾಜ್ ಪಲ್ಸರ್  ದ್ವಿ ಚಕ್ರವಾಹನವನ್ನು  ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು ಹಿಂದುಗಡೆಯಿಂದ ಬಂದು, ಫಿರ್ಯಾದುದಾರರ  ತಂದೆ ವೆಂಕಟೇಶ್ ರವರು ಓಡಿಸುತಿದ್ದ  ಟಿ.ವಿ.ಎಸ್ ದ್ವಿ ಚಕ್ರವಾಹನಕ್ಕೆ ಡಿಕ್ಕಿ  ಹೊಡೆದ ಪರಿಣಾಮ, ಟಿ.ವಿಎಸ್ ನಲ್ಲಿದ್ದ ಫಿರ್ಯಾದಿ ತಂದೆ ವೆಂಕಟೇಶ & ತಾಯಿ ಕೆಂಪಮ್ಮರವರು ಕೆಳಗೆ  ಬಿದ್ದು, ವೆಂಕಟೇಶರವರ ಬಲಗಾಲು & ಬಲಮೊಣಕೈಗೆ ತರಚುಗಾಯಗಳಾಗಿದ್ದು, ಇವರ ತಾಯಿ ಕೆಂಫಮ್ಮರವರಿಗೆ  ತಲೆಗೆ ಮತ್ತು ಬಲಭುಜಕ್ಕೆ  ಮತ್ತು ಬಲಪಕ್ಕೆಗೆ  ಏಟು ಬಿದ್ದು ರಕ್ತಗಾಯವಾಗಿರುತ್ತೆ, ನಂತರ ಅಲ್ಲೆ ಇದ್ದ ಸುಗ್ಗನಹಳ್ಳಿ ಗ್ರಾಮದ  ರಾಜಣ್ಣ & ಬೆಟ್ಟೇಗೌಡ ಗಾಯಾಳುಗಳನ್ನು ಉಪಚಿರಿಸಿ ಸಿ.ಎಸ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ ಎಂದು  ಇತ್ಯಾದಿಯಾಗಿ ನೀಡಿದ  ದೂರನ್ನು  ಸ್ವೀಕರಿಸಿ ಪ್ರಕರಣ  ದಾಖಲಿಸಿರುತ್ತೆ.Friday, 23 February 2018

ಅಪರಾಧ ಘಟನೆಗಳು 23-02-18

ಅಮೃತೂರು ಪೊಲೀಸ್ ಠಾಣೆಯ ಮೊನಂ-57/2018 ಕಲಂ-279, 337 ಐಪಿಸಿ.

ದಿನಾಂಕ: 22-02-2018 ರಂದು 19-20 ಗಂಟೆಯಲ್ಲಿ ಪಿರ್ಯಾದಿ  ನಾರಾಯಣ್ ಲಾಲ್ ಚೌಧರಿ ಬಿನ್ ಸೋನಾರಾಮ್ ಜಿ, 30 ವರ್ಷ, ಚೌಧರಿ ಜನಾಂಗ, ಹಾರ್ಡ್ ವೇರ್ ಅಂಗಡಿ, ಸಿ.ಎಸ್ ಪುರ, ಗುಬ್ಬಿ ತಾಲೋಕ್, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 21-02-2018 ರಂದು ನಾನು ಮತ್ತು ನನ್ನ ಸ್ನೇಹಿತರಾದ ಕಾಲುರಾಮ್ ಬಿನ್ ಮೋತಿರಾಂ ಜಿ ನಾವಿಬ್ಬರೂ ಕಾಲುರಾಮ್ ರವರ ಬಾಬ್ತು ಕೆಎ-06, ಎನ್-1164 ನೇ ರಿಜಿಸ್ಟರ್ ನಂಬರಿನ ಮಾರುತಿ ಒಮ್ನಿ ಕಾರಿನಲ್ಲಿ ಶಿರಾ ಟೌನ್ ನಿಂದ ಹೊರಟು ಎಡೆಯೂರು ಗ್ರಾಮಕ್ಕೆ ಹೋಗಲು ರಾಜ್ಯ ಹೆದ್ದಾರಿ 84 ರಲ್ಲಿ ಚಿಕ್ಕಮಧುರೆ-ಹುಚ್ಚಯ್ಯನಕಟ್ಟೆ ಗ್ರಾಮದ ನಡುವೆ ಮದ್ಯಾಹ್ನ 3-00 ಗಂಟೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಕಾರನ್ನು ಚಲಾಯಿಸುತ್ತಿದ್ದ ಕಾಲುರಾಮ್ ರವರು ಕಾರನ್ನು ಅತಿವೇಗವಾಗಿ ಚಲಾಯಿಸಿದ್ದರಿಂದ ಕಾರನ್ನು ನಿಯಂತ್ರಿಸಲಾಗದೇ ರಸ್ತೆಯ ಎಡ ಭಾಗದ ತಡೆಗೋಡೆಗೆ ಡಿಕ್ಕಿ ಹೊಡೆಸಿದರು. ಈ ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ನನಗೇನೂ ಗಾಯಗಳಾಗಲಿಲ್ಲ. ಆದರೆ ಕಾರನ್ನು ಚಲಾಯಿಸುತ್ತಿದ್ದ ಕಾಲುರಾಮ್ ರವರಿಗೆ ಬಲಭಾಗದ ಕಿವಿಗೆ ಮತ್ತು ಬಲಭಾಗದ ತಲೆಗೆ ರಕ್ತಗಾಯವಾಗಿತ್ತು. ತಕ್ಷಣ ನಾನು ಯಾವುದೋ ಒಂದು ಆಟೋದಲ್ಲಿ ಕಾಲುರಾಮ್ ರವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತೋರಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ. 01/2018 ಕಲಂ 174 ಸಿಆರ್‌ಪಿಸಿ

ದಿನಾಂಕ: 22-02-2018 ರಂದು ಬೆಳಿಗ್ಗೆ 10-30 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ, ಹೆಚ್‌.ಸಿ ಗೌರಮ್ಮ ಕೋಂ ಲೇಟ್ ಗಂಗರಾಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ,  ನಮಗೆ 1 ನೇ ರಮಾಮಣಿ ಜಿ. 2 ನೇ ರೂಪ ಟಿ.ಜಿ.  3 ನೇ ರೇಖಾ ಟಿ.ಜಿ. ಹಾಗೂ 4 ನೇ ನವೀನ ಟಿ.ಜಿ. ಎಂಬ ಮೂರು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬನೇ ಗಂಡು ಮಗನಿರುತ್ತಾನೆ.  ನಮ್ಮ ಯಜಮಾನರಾದ ಲೇ|| ಗಂಗರಾಮಯ್ಯ ರವರು ಈಗ್ಗೆ ಸುಮಾರು 8-9 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಮ್ಮ ಯಜಮಾನರು ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರು ಮೃತಪಟ್ಟ ಮೇಲೆ ಅನುಕಂಪ ಆಧಾರದ ಮೇಲೆ ನಮ್ಮ ಮಗ ನವೀನ್‌ ಟಿ.ಜಿ.ಗೆ ಬೆಂಗಳೂರಿನಲ್ಲಿ ಔಷದ ನಿಯಂತ್ರಣ ಮಂಡಳಿಯಲ್ಲಿ ದ್ವಿ ತೀಯ ಧರ್ಜೆ ಸಹಾಯಕರ ಕೆಲಸವನ್ನು ಕೊಟ್ಟಿದ್ದು, ನನ್ನ ಮಗ ಪ್ರತಿ ದಿನ ತುಮಕೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದನು.  ಮಾಮೂಲಿನಂತೆ ದಿನಾಂಕ: 21-02-2018 ರಂದು ಬೆಳಿಗ್ಗೆ 7-00 ಗಂಟೆಗೆ ಮನೆಯಿಂದ ಹೊರಟು  ಬೆಂಗಳೂರಿಗೆ ರೈಲಿನಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರೈಲಿನಲ್ಲಿಯೇ ವಾಪಾಸ್ಸು ರಾತ್ರಿ ಸುಮಾರು 9-00 ಗಂಟೆಗೆ ಮನೆಗೆ ಬಂದು ಮನೆಯಲ್ಲಿ ಊಟ ಮಾಡಿ ಸ್ವಲ್ಪ ಹೊತ್ತು ಟಿ.ವಿ. ನೋಡಿ ನಂತರ ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ಮನೆಯಲ್ಲಿ ಆತನ ರೂಮಿಗೆ ಹೋಗಿ, ರೂಮಿನ ಬಾಗಿಲನ್ನು ಒಳಗಿನಿಂದ ಬೋಲ್ಟ್‌‌ ಹಾಕಿ ಮಲಗಿಕೊಂಡಿದ್ದನು.   ನಾನು ನಮ್ಮ ರೂಮಿನಲ್ಲಿ ಮಲಗಿದ್ದೆನು.   ಈ ದಿನ ಬೆಳಿಗ್ಗೆ 7-00 ಗಂಟೆಯಾದರೂ ಸಹಾ ಮಲಗಿದ್ದರಿಂದ ನಾನು ನನ್ನ ಮಗ ನವೀನನ್ನು ಎಬ್ಬಿಸಲು ರೂಮಿನ ಬಾಗಿಲನ್ನು ಸುಮಾರು ಭಾರಿ ಬಡಿದರೂ ಸಹಾ ನನ್ನ ಮಗ ಎದ್ದೇಳಲಿಲ್ಲ.   ನಂತರ ರೂಮಿನ ಕಿಟಕಿಯ ಬಳಿಗೆ ಹೋಗಿ ಕಿಟಕಿಯಿಂದ ನೋಡಿದಾಗ ನನ್ನ ಮಗ ನೆಲದ ಮೇಲೆ ಮಲಗಿದ್ದನು.   ಆತನು ಮಲಗಿದ್ದ ರೂಮಿನಿಂದ ಘಾಟು ವಾಸನೆ ಬರುತ್ತಿತ್ತು.    ಎಷ್ಟು ಕೂಗಿದರೂ ಸಹಾ ನನ್ನ ಮಗ ಎದ್ದೇಳದ ಕಾರಣ ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ನಾನು ಮನೆಯಲ್ಲಿರುವ ಕಾಯಿಸುಲಿಯುವ ಮಚ್ಚಿನಿಂದ ರೂಮಿನ ಬಾಗಿಲನ್ನು ಮೀಟಿದ್ದು, ಬಾಗಿಲ ಬೋಲ್ಟ್‌‌ ಕಿತ್ತುಹೋಗಿ ರೂಮಿನ ಬಾಗಿಲು ತೆರೆದುಕೊಂಡಿತು.  ನನ್ನ ಮಗ ನೆಲದ ಮೇಲೆ ಮಲಗಿದ್ದನು.   ಆತನ ಬಳಿ ಘಾಟು ವಾಸನೆ ಬರುತ್ತಿತ್ತು.  ನನ್ನ ಮಗನನ್ನು ಅಲುಗಾಡಿಸಿ ಎಷ್ಟು ಎಬ್ಬಿಸಲು ಪ್ರಯತ್ತಿಸಿದರೂ ಸಹಾ ನನ್ನ ಮಗ ಮೇಲಕ್ಕೆ ಏಳಲಿಲ್ಲ.  ನಂತರ ನನಗೆ ಗಾಬರಿಯಾಗಿ ಮನೆಯಿಂದ ಹೊರಗೆ ಕೂಗಾಡಿಕೊಂಡು ಬಂದಾಗ ನಮ್ಮ ಪಕ್ಕದ ಮನೆಯ ವಾಸಿಗಳಾದ ಚಂದನ ಹಾಗೂ ಸತೀಶ ಎಂಬುವರು ಬಂದು ವಿಚಾರಿಸಿ, ಮನೆಯೊಳಗೆ ಬಂದು ನೋಡಲಾಗಿ ನನ್ನ ಮಗ ಮೃತಪಟ್ಟಿರುವುದು ಗೊತ್ತಾಯಿತು.   ನಂತರ ನಾನು ನಮ್ಮಮನೆಯ ಬಳಿಗೆ ಬಂದಿದ್ದ ಚಂದನ ಹಾಗೂ ಸತೀಶ್‌‌ ರವರ ಸಹಾಯದಿಂದ ನನ್ನ ಮಗನ ಶವವನ್ನು ಮನೆಯ ಹೊರಗೆ ತಂದು ಮರದ ದಿವಾನ್‌‌ಕಾಟ್‌‌‌ ಮೇಲೆ ಮಲಗಿಸಿರುತ್ತೇವೆ.   ನಂತರ ರೂಮಿನಲ್ಲೆಲ್ಲಾ ಚೆಕ್‌‌ ಮಾಡಲಾಗಿ, ರೂಮಿನ ಕಿಟಕಿಯ ಪಕ್ಕ ನಮ್ಮ ಮನೆಯ ಹೊರಗಡೆ ಯಾವುದೋ ವಿಷದ ಬಾಟಲ್‌‌ ಬಿದ್ದಿರುತ್ತೆ.   ನನ್ನ ಮಗನು ಯಾವುದೋ ವಿಚಾರಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಯಾವುದೋ ವಿಷದ ಔಷದಿಯನ್ನು ಕುಡಿದು ಮೃತಪಟ್ಟಿರುವಂತೆ  ಕಂಡು ಬಂದಿರುತ್ತೆ.  ನಂತರ ನಾನು ನಮ್ಮ ಮಗ ಮೃತಪಟ್ಟಿರುವ ವಿಚಾರವನ್ನು ನನ್ನ ಹೆಣ್ಣು ಮಕ್ಕಳು ಹಾಗೂ ಸಂಬಂಧಿಕರಿಗೆಲ್ಲಾ ತಿಳಿಸಿ, ಅವರನ್ನು ನಮ್ಮ ಮನೆಯ ಬಳಿಗೆ ಕರೆಸಿಕೊಂಡು ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ನಮ್ಮ ಮನೆಯ ಬಳಿಗೆ ಬಂದು ಮುಂದಿನ ಕ್ರಮ ಜರುಗಿಸಿ ನನ್ನ ಮಗನ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 39/2018 U/S 457, 454, 380  IPC

ದಿನಾಂಕ 22.02.2018 ರಂದು  ಸಂಜೆ 6-30 ಗಂಟೆಗೆ ಪಿರ್ಯಾದಿ  ಶ್ರೀಮತಿ ಗಂಗಮ್ಮ ಕೋಂ ಮಂಜುನಾಥ್, 32 ವರ್ಷ, ಲಿಂಗಾಯಿತ ಜನಾಂಗ, ವಾಸ 7ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಎಸ್.ಎಸ್. ಪುರಂ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ: 21/02/2018 ರಂದು ಪಿರ್ಯಾದಿಯು ತಮ್ಮ ಅತ್ತೆರವರಿಗೆ ಹುಷಾರಿಲ್ಲದ ಕಾರಣ ನೋಡಿಕೊಂಡು ಬರುವ ಸಲುವಾಗಿ ಸಂಜೆ 6-00 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ರಂಗಾಪುರಕ್ಕೆ ಹೋಗಿ ಈ ದಿವಸ ಸಂಜೆ 4-30 ಗಂಟೆ ಸಮಯದಲ್ಲಿ ಬಂದು ನೋಡಲಾಗಿ ಮನೆ ಯ ಹೆಂಚನ್ನು ಯಾವುದೋ ಸಮಯದಲ್ಲಿ ಯಾರೋ ಕಳ್ಳರು ತೆಗೆದು ಮನೆಯ ಒಳಗೆ ಹೋಗಿ ಹಾಸಿಗೆ ಕೆಳಗೆ ಇದ್ದ ಬೀರುವಿನ ಕೀ ತೆಗೆದುಕೊಂಡು ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಬೆಲೆಯನ್ನು ನಂತರ ತಿಳಿಸುತ್ತೇನೆ ಇತ್ಯಾದಿ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆThursday, 22 February 2018

ಅಪರಾಧ ಘಟನೆಗಳು 22-02-18

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 38/2018 ಕಲಂ-279,337 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ:21/02/2018 ರಂದು ಬೆಳಗ್ಗೆ 9-00 ಗಂಟೆಗೆ ಪಿರ್ಯಾದಿ ಹಸದ್ ಖಾನ್ ಬಿನ್ ಲೇಟ್ ಅಮಾನುಲ್ಲಾ ಖಾನ್, 28 ವರ್ಷ, ಮುಸ್ಲಿಂ, ಗಡವಿನ್ ಮೊಹಲ್ಲಾ, ಶಿರಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಈಗ್ಗೆ 10-00 ವರ್ಷಗಳ ಹಿಂದೆ ಶಿರಾ  ಟೌನ್ ಗೌಳಿಗರ ಹಟ್ಟಿ ವಾಸಿ ಆದಮ್ ಸಾಬ್ ರವರ ಎರಡನೇ ಮಗಳಾದ ಶಕೀಲಾಬಾನು ರವರನ್ನು ಮದುವೆಯಾಗಿದ್ದು ನಮ್ಮ ಮಾವ ಆದಮ್ ಸಾಬ್ ರವರಿಗೆ ಆರೋಗ್ಯ ಸರಿಇಲ್ಲದ ಕಾರಣ ದಿ:20/02/18 ರಂದು ರಾತ್ರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದೆವು. ನಮ್ಮ ಮಾವನವರಿಗೆ ಬಿ.ಪಿ ಜಾಸ್ತಿಯಾಗಿದ್ದರಿಂದ ವೈದ್ಯರು ತುಮಕೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಮ್ಮ ಮಾವ ಆದಮ್ ಸಾಬ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ 108 ಆಂಬುಲೆನ್ಸ್ ನಲ್ಲಿ ನನ್ನ ಬಾಮೈದ ದಾದಾಪೀರ್ ನನ್ನ ಹೆಂಡತಿಯ ಅಕ್ಕ ಶಬಾನಾಬಾನು ರವರ ಜೊತೆ ರಾತ್ರಿ 11-00 ಗಂಟೆಗೆ ಕಳುಹಿಸಿ ನಾನು ಖರ್ಚಿಗೆ ಹಣವನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಮನೆಗೆ ಬಂದೆನು. ಈ ದಿನ ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ನಾನು ಮನೆ ಬಳಿ ಇದ್ದಾಗ ನನ್ನ ಬಾಮೈದ ದಾದಾಪೀರ್ ಪೋನ್ ಮಾಡಿ ನಾವು ಅಪ್ಪನನ್ನು ಕರೆದುಕೊಂಡು ಹೋಗುತ್ತಿದ್ದ 108 ಆಂಬುಲೆನ್ಸ್ ಅನ್ನು ಅದರ ಚಾಲಕ ಶಿರಾ-ತುಮಕೂರು ಎನ್.ಹೆಚ್ 48 ರಸ್ತೆಯಲ್ಲಿ ಜೋಗಿಹಳ್ಳಿ ಬಿಟ್ಟು ಸೀಬಿ ಫಾರೆಸ್ಟ್ ಹತ್ತಿರ ಕಂಟ್ರಿ ಕ್ಲಬ್ ಗೆ ಹೋಗುವ  ರಸ್ತೆಯ ಬಳಿ ಆಂಬುಲೆನ್ಸ್ ನ್ನು ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಮುಂದೆ ಹೋಗುತ್ತಿದ್ದ ಯಾವುದೋ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ ವಾಹನವನ್ನು ಬಿಟ್ಟು ಹೊರಟು ಹೋದನು ಅಪಘಾತದಲ್ಲಿ ನನಗೆ ಎಡಕೈ, ಎಡಕಾಲು, ಸೊಂಟ, ಮುಖಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಯಿತು, ಅಕ್ಕ ಶಬಾನಾ ಬಾನುರವರಿಗೆ ತಲೆಗೆ ಕೈಕಾಲಿಗೆ ಸೊಂಟಕ್ಕೆ ಪೆಟ್ಟುಗಳಾದವು, ಅಪ್ಪ ಆದಮ್ ಸಾಬ್ ರವರಿಗೆ ತಲೆಗೆ ಕೈಕಾಲುಗಳಿಗೆ ಪೆಟ್ಟುಗಳಾದವು, ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿ ರಾಧಮ್ಮರವರಿಗೆ ತಲೆಗೆ, ಮುಖಕ್ಕೆ ಸೊಂಟಕ್ಕೆ ಪೆಟ್ಟು ಬಿದ್ದು ರಕ್ತಗಾಯಗಳಾದವು. ನಂತರ ನಾನು ಕೆಳಗೆ ಇಳಿಯುವಷ್ಟರಲ್ಲಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ನಿಲ್ಲಿಸದೇ ತೆಗೆದುಕೊಂಡು ಹೋಗಿದ್ದರಿಂದ ಸದರಿ ಲಾರಿಯ ನಂಬರ್ ನೋಡಲಾಗಲಿಲ್ಲ. ನಾವು ಬರುತ್ತಿದ್ದ ಆಂಬುಲೆನ್ಸ್ ಮುಂಭಾಗ ಸಂಪೂರ್ಣ ಜಖಂ ಆಗಿದ್ದು ಅದರ ನಂಬರ್ ನೋಡಲಾಗಿ ಕೆಎ-06-ಜಿ-854 ಆಗಿತ್ತು ನಂತರ ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಬಂದ NHAI ಆಂಬುಲೆನ್ಸ್ ನಲ್ಲಿ ಅಪ್ಪ ಆದಮ್ ಸಾಬ್, ಅಕ್ಕ ಶಬಾನಾಬಾನು , ನರ್ಸ್ ರಾಧಮ್ಮರವರನ್ನು ತುಮಕೂರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ್ಗೆ ರಾತ್ರಿ ಸುಮಾರು 12-15 ಗಂಟೆಯಲ್ಲಿ ಮಾರ್ಗ ಮಧ್ಯೆ ಶ್ರೀದೇವಿ ಕಾಲೇಜು ಬಳಿ ತಲೆಗೆ ತೀವ್ರ ಪೆಟ್ಟಾಗಿದ್ದ ನಮ್ಮ ತಂದೆ ಮೃತಪಟ್ಟಿರುತ್ತಾರೆ. ನಂತರ ನಾವು ಅಪ್ಪ ಆದಮ್ ಸಾಬ್ ರವರ ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಟ್ಟು , ನಾವು ಒಳರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿದ್ದೇವೆಂದು ತಿಳಿಸಿ ಬೇಗ ನೀವು ಬನ್ನಿ ಎಂದು ತಿಳಿಸಿದರು. ನಾನು ಕೂಡಲೇ ಶಿರಾ ದಿಂದ ತುಮಕೂರಿಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ಈ ಅಫಘಾತದಲ್ಲಿ ಗಾಯಗೊಂಡಿದ್ದ ನನ್ನ ಬಾಮೈದ ದಾದಾಪೀರ್, ಶಬಾನಾಬಾನು, ನರ್ಸ್ ರಾಧಮ್ಮ ನವರು ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ಮಾವ ಆದಮ್ ಸಾಬ್ ರವರ ಶವ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿತ್ತು. ಈ ಅಪಘಾತಕ್ಕೆ ಕಾರಣನಾದ ಕೆಎ-06-ಜಿ-854 ನೇ 108 ಆಂಬುಲೆನ್ಸ್ ಚಾಲಕನ ಮೇಲೆ ಕ್ರಮ ಜರುಗಿಸಿ ಎಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 39/2018, u/s 323,324,307,504,506 IPC

ಪಿರ್ಯಾದಿ ದೀಪಕ್ ಬಿನ್ ಚಂದ್ರಪ್ಪ, 24 ವರ್ಷ, ಬೂರ್ಕನಹಟ್ಟಿ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಸುಮಾರು 1 ತಿಂಗಳ ಹಿಂದೆ ಧನುಷ್ ರವರು ಪಿರ್ಯಾದಿ ಹತ್ತಿರ ಬಂದು ನನ್ನ ಬೈಕ್ ಅನ್ನು ಅಡವಿಟ್ಟಿರುತ್ತೇನೆ, ಸದರಿ ಬೈಕ್ ಅನ್ನು ಬಿಡಿಸಿಕೊಳ್ಳಬೇಕು ಅದಕ್ಕಾಗಿ 10,000/- ರೂ ದುಡ್ಡು ಕೊಡು ಎಂತಾ ಕೇಳಿದ್ದು, ಪಿರ್ಯಾದಿಯು ನನ್ನ ಬಳಿ ಹಣವಿರುವುದಿಲ್ಲವೆಂತಾ ಹೇಳಿದರೂ ಸಹ 20 ದಿನಗಳಲ್ಲಿ ವಾಪಸ್ ಕೊಡುತ್ತೇನೆಂತಾ 10,000/- ರೂ ಗಳನ್ನು ಪಡೆದುಕೊಂಡಿರುತ್ತಾನೆ. ಆದಾದ ನಂತರ ಹಲವು ಬಾರಿ ಪಿಯಾದಿಯು ದುಡ್ಡನ್ನು ವಾಪಸ್ ಕೊಡು ಎಂತಾ ಕೇಳಿದ್ದಕ್ಕೆ , ಧನುಷ್ ರವರು ಈಗ ಕೊಡುತ್ತೇನೆ, ನಾಳೆ ಕೊಡುತ್ತೇನೆಂತಾ ಸಬೂಬು ಹೇಳುತ್ತಿದ್ದು, ಈಗಿರುವಾಗ್ಗೆ ದಿನಾಂಕ: 20-02-2018 ರಂದು ರಾತ್ರಿ ಸುಮಾರು 10.00 ಗಂಟೆಯ ಸಮಯದಲ್ಲಿ ಪಿರ್ಯಾದಿ ಮತ್ತು ಕೆ.ಆರ್ ಬಡಾವಣೆ ವಾಸಿ ಗೌತಮ ರವರು ಹೊಟೇಲ್ ನಲ್ಲಿ ಊಟ ಮಾಡಿಕೊಂಡು ಸಂಗೀತಾ ಮೊಬೈಲ್ ಅಂಗಡಿ ಮುಂಬಾಗ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಮನೆಗೆ ಹೋಗಲು ಬರುತ್ತಿದ್ದಾಗ, ಅದೇ ರಸ್ತೆಯಲ್ಲಿ ಆಟೋ ನಿಲ್ಲುವ ಜಾಗದಲ್ಲಿ ಧನುಷ್ ರವರ ತಾಯಿ ಗಂಗಾಂಭಿಕೆರವರು ನಿಂತಿದ್ದರು. ಆಗ ಪಿರ್ಯಾದಿಯು ಧನುಷ್ ರವರ ತಾಯಿಯನ್ನು ಮಾತನಾಡಿಸಿ, ಅಕ್ಕ ನಿನ್ನ ಮಗ ದುಡ್ಡು ಕೊಡಲಿಲ್ಲವೆಂತಾ ಕೇಳಿರುತ್ತಾರೆ. ಅದಕ್ಕೆ ಅವರ ತಾಯಿ ಇನ್ನು ಎರಡು-ಮೂರು ದಿನ ಟೈಂ ಕೊಡು ದುಡ್ಡನ್ನು ವಾಪಸ್ ಕೊಡುತ್ತೇನೆಂತಾ ಹೇಳಿದರು. ಇದೇ ರೀತಿ ಹಲವು ಬಾರಿ ಹೇಳಿದ್ದೀರಿ, ನಾನು ಇನ್ನು ಎಷ್ಟು ದಿನ ಕಾಯುವುದು, ಎಂತಾ ಹೇಳಿದೆನು. ಅಷ್ಟೋತ್ತಿಗೆ ಅಲ್ಲಿಗೆ ಬಂದು ಧನುಷ್ ನು ಪಿರ್ಯಾದಿಯನ್ನು ಏನೋ ಭೋಳಿಮಗನೇ, ಸೂಳೆ ಮಗನೇ, ನಿನಗೆ ಎಷ್ಟು ದುಡ್ಡು ಕೊಡಬೇಕೋ, ಎಂತಾ ಏಕಾಏಕಿ ಜಗಳ ತೆಗೆದು ಪಿರ್ಯಾದಿಗೆ ಕೈಗಳಿಂದ ನೂಕಾಡಿ, ಅಲ್ಲಿಯೇ ಬಿದ್ದಿದ್ದ ಹಿಡಿಗಿಂತ ದಪ್ಪನೆಯ ಕಲ್ಲಿನಿಂದ ಪಿರ್ಯಾದಿಯ ತಲೆಯ ಹಿಂಬಾಗಕ್ಕೆ ಸಾಯಿಸಬೇಕೆಂಬ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದಿರುತ್ತಾನೆ. ಆಗ ಪಿರ್ಯಾದಿಯು ಅಲ್ಲಿಯೇ ಕುಸಿದು ಬಿದ್ದಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಗೋವರ್ಧನ ಹಾಗೂ ಗೌತಮನು ಪಿರ್ಯಾದಿಯನ್ನು ಬಿಡಿಸಿಕೊಂಡಿರುತ್ತಾರೆ. ಧನುಷ್ ನು ಅಷ್ಟಕ್ಕೆ ಸುಮ್ಮನಾಗದೆ ಈ ದಿನ ನೀನು ಬದುಕಿಕೊಂಡು ಮುಂದೊಂದು ದಿನ ನಿನಗೆ ಒಂದು ಗತಿ ಕಾಣಿಸುತ್ತೇನೆಂತಾ ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ.  ನಂತರ ಗೌತಮ್ ಹಾಗೂ ಗೋವರ್ಧನರು ಯಾವುದೋ ವಾಹನದಲ್ಲಿ ಪಿರ್ಯಾದಿಯನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ.

ಪಿರ್ಯಾದಿಯು ಈ ವಿಚಾರವನ್ನು ಪೊಷಕರಿಗೆ ತಿಳಿಸಿ, ಈ ದಿನ ತಡವಾಗಿ ಠಾಣೆಗೆ ಬಂದು, ತನ್ನನ್ನು ಸಾಯಿಸಲು ಯತ್ನಿಸಿ, ಮಾರಣಾಂತಿಕ ಹಲ್ಲೆ ಮಾಡಿ, ಅವಾಚ್ಯವಾಗಿ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವ  ಧನುಷ್@ಬುಜ್ಜಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ CR : 40/2018, u/s 323,324 IPC

ಪಿರ್ಯಾದಿ ಗಂಗಾಂಬಿಕೆ ಕೋಂ ಬಾಲಾಜಿ, 45 ವರ್ಷ, ಬೂರ್ಕನಹಟ್ಟಿ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 20-02-2018 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿಯ ಮಗ ಧನುಷ್@ಬುಜ್ಜಿ ಹಾಗೂ ಆತನ ಸ್ನೇಹಿತ ದೀಪು ರವರು ಹಣಕಾಸಿನ ವಿಚಾರವನ್ನು ಪರಸ್ಪರ ಮಾತನಾಡುತ್ತಿದ್ದರು. ಆ ವೇಳೆಯಲ್ಲಿ ಪಿರ್ಯಾದಿಯು ಹೋಗಿ ಏನು ತಪ್ಪು ಮಾಡಿದ್ದಾನೆ ಎಂದು ಕೇಳಿದಾಗ ದೀಪು  ತನ್ನ ಕೈಗಳಿಂದ ಪಿರ್ಯಾದಿಯ ಮಗನ ಮುಖಕ್ಕೆ ಹೊಡೆದು ತುಟಿಯಲ್ಲಿ ಗಾಯ ಹಾಗೂ ಮೂಗಿನಲ್ಲಿ ರಕ್ತ ಬರುವಂತೆ ಹಾಗೆ ಹೊಡೆದಿರುತ್ತಾನೆ. ನಂತರ ಪಿರ್ಯಾದಿಯು ಬಿಡಿಸಲು ಹೋದಾಗ, ಪಿರ್ಯಾದಿಗೂ ಸಹ ಮೈಕೈಗೆ ನೋವುಂಟು ಮಾಡಿರುತ್ತಾನೆ. ನಂತರ ಪಿರ್ಯಾದಿಯ ಯಜಮಾನರು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Wednesday, 21 February 2018

ಅಪರಾಧ ಘಟನೆಗಳು 21-02-18

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್. ನಂ- 6/2018 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ:20-02-2018 ರಂದು ಪಿರ್ಯಾದಿ ನಿತಿನ್ ರವರು ಠಾಣೆಗೆ ರಾತ್ರಿ 11-15 ಗಂಟೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾಧಿ ನಿತಿನ್ ರವರು ವ್ಯಾಪಾರಕ್ಕೆ ಹೋಗಿ ರಾತ್ರಿ 10-00 ಗಂಟೆಗೆ ಮನೆಗೆ ಬಂದು ನೋಡಿದಾಗ ತನ್ನ ಅತ್ತಿಗೆ  ಪ್ರಿಯಾಂಕ ರೂಂ ನ ಬಾಗಿಲು ತೆಗೆಯದೇ ಇದ್ದು ಗಾಬರಿಯಿಂದ  ಅಣ್ಣ ಸುನಿಲ್ ಜೈನ್ ರವರಿಗೆ ವಿಚಾರ ತಿಳಿಸಿ ಇಬ್ಬರು ರೂಂ ನ ಬಾಗಿಲಿನ ಹಿಂಭಾಗದ ಲಾಕ್ ನ್ನು ಮುರಿದು ಒಳಗಡೆ ನೋಡಿದಾಗ ಪ್ರಿಯಾಂಕ ರವರು ರೂಂ ನಲ್ಲಿದ್ದ ಫ್ಯಾನಿಗೆ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ 23/2018 ಕಲಂ: 279, 337 ಐಪಿಸಿ ರೆ/ವಿ 134 (ಎ) & (ಬಿ) ಐಎಂವಿ ಆಕ್ಟ್

ದಿನಾಂಕ:20-02-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಸಂಬಂಧಿ ಶ್ರೀಕಂಠ ರವರು ಕೆಎ16ಡಬ್ಲೂ5468 ನೇ ಬಜಾಜ್ ಡಿಸ್ಕವರಿ ವಾಹನದಲ್ಲಿ ಪೆಟ್ರೋಲ್ ಹಾಕಿಸಲು ತಿಪಟೂರು ಹಾಲ್ಕುರಿಕೆ ರಸ್ತೆಯಲ್ಲಿ ಹೋಗುತ್ತಿದ್ದಾಗ ದಿನಾಂಕ:20-02-2018 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ತಿಪಟೂರು ಐ ಬಿ ಸರ್ಕಲ್ ಕಡೆಯಿಂದ 10 ಚಕ್ರದ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಹಿಂಬದಿಯಿಂದ ಡಿಸ್ಕವರಿ ವಾಹನಕ್ಕೆ ಢಿಕ್ಕಿ ಹೊಡೆಸಿದ್ದರಿಂದ ಶ್ರೀಕಂಠ ರವರಿಗೆ ಪೆಟ್ಟು ಮುಖಕ್ಕೆ, ಬಾಯಿಗೆ, ಬಲರಟ್ಟೆಗೆ ಬಿದ್ದು ಗಾಯವಾಗಿರುತ್ತದೆ ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 70/2018, ಕಲಂ:  379  ಐಪಿಸಿ

ದಿನಾಂಕ: 20-02-2018 ರಂದು ಮಧ್ಯಾಹ್ನ 01-00 ಗಂಟೆಗೆ ಕೆ ವಿ ಗೋಪಾಲ್ ಬಿನ್ ಲೇಟ್ ವೆಂಕಟರಮಣಯ್ಯ, 65 ವರ್ಷ, ಈಡಿಗರು, ಗೋಕುಲ ನಿಲಯ, ಕೆ ಆರ್ ಎಸ್ ಅಗ್ರಹಾರ, ಕುಣಿಗಲ್ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಕೆಎ06-ಎಸ್-5353 ನೇ ಹೀರೋ ಹೊಂಡಾ ವಾಹನವು ಪಿರ್ಯಾದಿಯ ಮಗನಾದ ಸತೀಶ ರವರ ಹೆಸರಿನಲ್ಲಿದ್ದು ದಿನಾಂಕ: 07-12-2017 ರಂದು ರಾತ್ರಿ ಸುಮಾರು 09-00 ಗಂಟೆಯಲ್ಲಿ ಪಿರ್ಯಾದಿಯ ಮಗ ಮನೆಯಲ್ಲಿ ಮಂಚದ ಮೇಲೆ ಮಲಗಿದ್ದಾಗ ಕೆಳಕ್ಕೆ ಬಿದ್ದಿದ್ದು ಆಗ ತಕ್ಷಣ ಅವನನ್ನು ಎಂ ಎಂ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 09-12-2017 ರಂದು ಸತೀಶನು ಮರಣ ಹೊಂದಿರುತ್ತಾನೆ. ಈತನ ಚಿಕಿತ್ಸೆ ಖರ್ಚಿಗಾಗಿ ಸಂತೆಮಾವತ್ತೂರಿನ ಎಸ್.ವಿ ಶಿವಶಂಕರ್ ಬಿನ್ ಲೇಟ್ ಎಸ್ ಜಿ ವೆಂಕಟರಾಮಯ್ಯ ರವರ ಮನೆಗೆ ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಬಂದು ಅವರ ಬಳಿ ಹಣ ಪಡೆದು ವಾಹನವನ್ನು ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ನಂತರ ಅವರ ಕಾರಿನಲ್ಲೇ ಬೆಂಗಳೂರಿಗೆ ಹೋಗಿದ್ದು, ನಂತರ ಗಲಾಟೆಯಲ್ಲಿ ಸದರಿ ದ್ವಿಚಕ್ರ ವಾಹನವನ್ನು ಪಿರ್ಯಾದಿಯು ತೆಗೆದುಕೊಂಡು ಹೋಗಿರುವುದಿಲ್ಲ.  ಸದರಿ ಕೆಎ06-ಎಸ್-5353 ನೇ ಹೀರೋ ಹೊಂಡಾ ದ್ವಿಚಕ್ರ ವಾಹನವನ್ನು ದಿನಾಂಕ: 15-02-2018 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲ. ಸದರಿ ದ್ವಿಚಕ್ರ ವಾಹನವು  15,000   ರೂ ಬೆಲೆ ವುಳ್ಳದ್ದಾಗಿರುತ್ತೆ. ಕಳುವಾಗಿರುವ ಪಿರ್ಯಾದಿಯ ಬಾಬ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್  ಠಾಣಾ ಮೊ.ಸಂ.24/2018,  ಕಲಂ:279, 304(ಎ) ಐಪಿಸಿ ರೆ/ವಿ 134(ಎ&ಬಿ),187 ಐಎಂವಿ ಆಕ್ಟ್.

ದಿನಾಂಕ:20/02/2018 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿ ಲಕ್ಷ್ಮಮ್ಮ ಕೋಂ ಗೋವಿಂದಯ್ಯ, 55 ವರ್ಷ, ವಕ್ಕಲಿಗ  ಜನಾಂಗ, ಚಂದ್ರಬಾವಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ನಾನು ನನ್ನ ಗಂಡ ಗೋವಿಂದಯ್ಯ ಬಿನ್ ಲೇ||ಉಗ್ರಪ್ಪ, 65 ವರ್ಷ ರವರೊಂದಿಗೆ ಚಂದ್ರಬಾವಿ ಗಾಮದಲ್ಲಿ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತೇವೆ. ನಮಗೆ ಒಬ್ಬ ಗಂಡು, ಒಂದು ಹೆಣ್ಣು ಮಗಳಿದ್ದು ಇಬ್ಬರಿಗೂ ಮದುವೆ ಮಾಡಿದ್ದು ಅವರುಗಳು ತಮ್ಮತಮ್ಮ ಸಂಸಾರದೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ನಮ್ಮ ಬಾಬ್ತು ಕೆಎ-01-ಇ.ಎನ್-7025 ನೇ ಟಿವಿಎಸ್ ದ್ವಿ ಚಕ್ರ ವಾಹನವಿದ್ದು, ನಮ್ಮ ಮನೆಯ ಬಳಿ ಟಿವಿಎಸ್ ನಿಲ್ಲಿಸಲು ಜಾಗವಿಲ್ಲದ ಕಾರಣ ಪ್ರತಿ ದಿನ ರಾತ್ರಿ ನಮ್ಮ ಟಿವಿಎಸ್ ದ್ವಿ ಚಕ್ರ ವಾಹನವನ್ನು ನಮ್ಮ ಮನೆಯ ಹತ್ತಿರವಿರುವ ಮದಲೇಟಪ್ಪ ರವರ ಮನೆಯ ಬಳಿ ನಿಲ್ಲಿಸಿ ಬೆಳಿಗ್ಗೆ ಸಮಯದಲ್ಲಿ ಟಿವಿಎಸ್ ನ್ನು ನಮ್ಮ ಗಂಡನಾದ ಗೋವಿಂದರಯ್ಯ ರವರಿಗೆ ದ್ವಿ ಚಕ್ರ ವಾಹನ ಓಡಿಸಲು ಬರದೇ ಇದುದ್ದರಿಂದ ಟಿವಿಎಸ್ ನ್ನು ತಳ್ಳಿಕೊಂಡು ಬಂದು ನಮ್ಮ ಮನೆಯ ಬಳಿ ತಂದು ನಿಲ್ಲಿಸಿಕೊಳ್ಳುತ್ತಿದ್ದರು. ಅದರಂತೆ ದಿನಾಂಕ:20/02/2018 ರಂದು ಬೆಳಿಗ್ಗೆ ನನ್ನ ಗಂಡನಾದ ಗೋವಿಂದಯ್ಯ ರವರು ಮದಲೇಟಪ್ಪ ರವರ ಮನೆಯ ಬಳಿ ಹೋಗಿ ನೆನ್ನೆ ರಾತ್ರಿ ನಿಲ್ಲಿಸಿದ್ದ ನಮ್ಮ ಬಾಬ್ತು ಮೇಲ್ಕಂಡ ದ್ವಿ ಚಕ್ರ ವಾಹನವನ್ನು ತಳ್ಳಿಕೊಂಡು ಬಂದು ಇದೇ ದಿನ ಬೆಳಿಗ್ಗೆ ಸುಮಾರು 06:30 ಗಂಟೆಯ ಸಮಯದಲ್ಲಿ ನಮ್ಮ ಮನೆಯ ಬಳಿಗೆ ತಳ್ಳಿಕೊಂಡು ಬಂದು ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಎಡ ಬದಿಯಲ್ಲಿ ನಮ್ಮ ಬಾಬ್ತು ದ್ವಿ ಚಕ್ರ ವಾಹನವನ್ನು ನಿಲ್ಲಿಸುತ್ತಿದ್ದಾಗ,  ಅದೇ ಸಮಯಕ್ಕೆ  ಅದೇ ರಸ್ತೆಯಲ್ಲಿ ಪಾವಗಡ ಕಡೆಯಿಂದ ಬಂದು ಎಪಿ-02-ಟಿಬಿ-0459 ನೇ ಲಾರಿಯ ಚಾಲಕ ಲಾರಿಯನ್ನು ತುಂಬಾ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಟಿವಿಎಸ್ ನಿಲ್ಲಿಸುತ್ತಿದ್ದ ನನ್ನ ಗಂಡ ಗೋವಿಂದಯ್ಯ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದರಿಂದ ಸದರಿ ಲಾರಿಯ ಕೆಳಕ್ಕೆ ನನ್ನ ಗಂಡ ಮತ್ತು ಟಿವಿಎಸ್ ಸಿಕ್ಕಿಹಾಕಿಕೊಂಡು ರಸ್ತೆಯ ಮೇಲೆ ಸ್ವಲ್ಪ ದೂರದವರೆಗೆ ನನ್ನ ಗಂಡ ಗೊಂವಿದಯ್ಯ ಮತ್ತು ಟಿವಿಎಸ್ ಉಜ್ಜಿಕೊಂಡು ಹೋಗಿ, ನಂತರ ಅಪಘಾತಪಡಿಸಿದ ಮೇಲ್ಕಂಡ ಲಾರಿಯ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ಹೋದನು. ಆಗ ನಮ್ಮ ಮನೆಯ ಮುಂದೆ ಮುಖ ತೊಳೆದುಕೊಳ್ಳುತ್ತಿದ್ದ ನಾನು ಮತ್ತು ಅಲ್ಲೇ ರಸ್ತೆಯ ಬದಿಯಲ್ಲಿ ನಿಂತಿದ್ದ ಮದಲೇಟಪ್ಪ ಇಬ್ಬರು ಲಾರಿಯ ಮುಂದಿನ ಎರಡು ಚಕ್ರಗಳ ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನನ್ನ ಗಂಡ ಗೋವಿಂದಯ್ಯನನ್ನು ನೋಡಲಾಗಿ ನನ್ನ ಗಂಡನ ಮೈಕೈಗೆ ಹಾಗೂ ತಲೆಗೆ ತೀರ್ವ ತರವಾದ ಗಾಯಗಳಾಗಿ ಮೂಗು, ಕಿವಿಗಳಲ್ಲಿ ಹಾಗೂ ತಲೆಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು, ಟಿವಿಎಸ್ ದ್ವಿ ಚಕ್ರ ವಾಹನ ಜಖಂ ಆಗಿತ್ತು. ನಂತರ ನನ್ನ ಗಂಡ ಗೋವಿಂದಯ್ಯನ ಶವವನ್ನು ಆಂಬುಲೆನ್ಸ್ ನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟು ನಂತರ ವಿಚಾರವನ್ನು ನಮ್ಮ ಸಂಬಂಧಿಕರುಗಳಿಗೆ ತಿಳಿಸಿ ನಂತರ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ದಿನ ಬೆಳಿಗ್ಗೆ 06:30 ಗಂಟೆಯಲ್ಲಿ ನನ್ನ ಗಂಡ ಗೋವಿಂದಯ್ಯನಿಗೆ ಅಪಘಾತಪಡಿಸಿ ಅವರ ಸಾವಿಗೆ ಕಾರಣನಾದ ಎಪಿ-02-ಟಿಬಿ-0459 ನೇ ಲಾರಿ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.Tuesday, 20 February 2018

ಅಪರಾಧ ಘಟನೆಗಳು 20-02-18

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 07-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:19-01-18 ರಂದು  ಬೆಳಿಗ್ಗೆ 07:15 ಗಂಟೆಗೆ  ಪಿರ್ಯಾದಿ ವಿಮಲಾಕ್ಷಿ ಕೊಂ ಮಹಾಲಿಂಗಪ್ಪ, ತಡಕಲೂರು ದಿಬ್ಬದಹಟ್ಟಿ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ  ವಿಮಲಾ ಕ್ಷಿ ರವರಿಗೆ 1 ಗಂಡು , 4 ಜನ ಹೆಣ್ಣು ಮಕ್ಕಳಿದ್ದು, ಈ ಪೈಇ 5 ನೇ ಮಗಳಾದ ಜ್ಯೋತಿ  ಬೆಂಗಳೂರಿನ  ರಾಜಾಜಿನರದಲ್ಲಿರುವ  ಇ.ಎಸ್.ಐ  ಮೆಡಿಕಲ್  ಕಾಲೇಜಿನಲ್ಲಿ 2 ನೇ  ವರ್ಷದ  ಎಂ.ಬಿ.ಬಿ.ಎಸ್   ವ್ಯಾಸಂಗ  ಮಾಡುತ್ತಿದ್ದು, ದಿನಾಂಕ:19-02-18 ರಂದು  ಬರಗೂರಿನ ವೀರಮ್ಮಜ್ಜಿ  ದೇವಸ್ಥಾನದಲ್ಲಿ ಪೂಜೆ  ಇದ್ದುದ್ದರಿಂದ ದಿನಾಂಕ:18-02-18 ರಂದು ಪಿರ್ಯಾದಿ ಮಗಳು  ಜ್ಯೋತಿ  ಗ್ರಾಮಕ್ಕೆ ಬಂದಿದ್ದು, ದಿನಾಂಕ:18-02-18 ರಂದು ಸಾಯಂಕಾಲ 06:00 ಗಂಟೆ ಸಮಯದಲ್ಲಿ  ರೇಷ್ಮೆ ಸಾಕಾಣಿಕೆ ಮಾಡುವ ಕೊಠಡಿಯ ಮೇಲ್ಛಾವಣಿಕ ಕಬ್ಬಿಣದ ಗೊಣಚಲಿಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದು,  ಪಿರ್ಯಾದಿ ರವರಿಗೆ ಏನೊ ಶಬ್ದ ಆದಂತೆ ಕೇಳಿಸಿತು, ತಕ್ಷಣ ಪಿರ್ಯಾದಿ ಹೋಗಿ ನೋಡಲಾಗಿ ಪಿರ್ಯಾದಿ ಮಗಳು  ಜ್ಯೋತಿ ನೇಣು ಹಾಕಿಕೊಂಡಿರುವುದು  ಕಂಡು ಬಂದಿತು. ಪಿರ್ಯಾದಿ ಕೂಗಾಡಿದಾಗ ಅಕ್ಕಪಕ್ಕದವರ ಸಹಾಯದಿಂದ  ಜೀವ  ಇರಬಹುದೆಂದು   ಕೆಳಗೆ ಇಳಿಸಿ  ನೋಡಲಾಗಿ ಮೃತಪಟ್ಟಿದ್ದಳು.  ಜ್ಯೋತಿ ರವರು ಆಗಾಗ್ಗ ಪಿರ್ಯಾದಿ ಬಳಿ ಎಷ್ಠು ಓದಿದರು  ತಲೆಗೆ ಹತ್ತುತ್ತಿಲ್ಲ , ಸರಿಯಾಗಿ ನಿದ್ದೆ ಬರುತ್ತಿಲ್ಲ  ತಿಳಿಸುತ್ತಿದ್ದು. ಪಿರ್ಯಾದಿ ವಿಮಲಾಕ್ಷಿ ರವರು ಜ್ಯೋತಿ ರವರಿಗೆ ಧೈರ್ಯ ಹೇಳುತ್ತಿದ್ದರು. ಆದರು ಸಹ ಪಿರ್ಯಾದಿ ಮಗಳು ಜ್ಯೋತಿ ಯಾವಗಲು ಚಿಂತೆ ಮಾಡುತ್ತಿದ್ದಳು ಈ ಕಾರಣದಿಂದ ಮತ್ತು ಮನೆಯ ಕುಟುಂಬದ ಬಗ್ಗೆ ವಿದ್ಯಾಭ್ಯಾಸದ ಬಗ್ಗೆ ಯೋಚಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಮೃತಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ  ಇರುವುದಿಲ್ಲ ಮುಂದಿನ ಕ್ರಮ ಕೈಗೊಳ್ಳಲು  ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 34/2018 ಕಲಂ 279,337,304(ಎ)  ಐಪಿಸಿ

ದಿನಾಂಕ:-18/19.02.2018 ರಂದು ಮಧ್ಯ ರಾತ್ರಿ 12.30 ಗಂಟೆಗೆ ಪಿರ್ಯಾದು ಪ್ರಶಾಂತ್ ಕೆ.ಕೆ ಬಿನ್ ಕೃಷ್ಣಪ್ಪ, 27 ವರ್ಷ, BMTC ಬಸ್ ಡ್ರೈವರ್ ಕೆಲಸ, ವಕ್ಕಲಿಗರು, ಕುಣಿಕೇನಹಳ್ಳಿಗ್ರಾಮ, ಕಸಬಾ ಹೋಬಳಿ, ತುರುವೆಕೆರೆ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಬೆಂಗಳೂರಿನಲ್ಲಿ BMTC ಬಸ್ ಡ್ರೈವರ್ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ:-18.02.2018 ರಂದು ನಮ್ಮ ಸಂಬಂದಿಕರ ಮನೆಯಲ್ಲಿ ಆರಾಧನೆ ಕಾರ್ಯಕ್ರಮ ಇದ್ದುದರಿಂದ ಕೆಲಸಕ್ಕೆ ರಜೆ ಹಾಕಿಕೊಂಡು ಊರಿಗೆ ಬಂದಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಗ್ರಾಮದ ನವೀನ್ ರವರನ್ನು ಕರೆದುಕೊಂಡು ಬರಬೇಕಾಗಿರುತ್ತೆ. ನವೀನನು ಕೆ.ಬಿ.ಕ್ರಾಸ್ ನಲ್ಲಿದ್ದು, ಆತನನ್ನು ಕರೆದುಕೊಂಡು ಬರೋಣ ಬಾ ನನ್ನ ಸ್ನೇಹಿತ ನಮ್ಮ ಗ್ರಾಮದ ಮಂಜುನಾಥ್ ರವರು ನನಗೆ ತಿಳಿಸಿದ್ದು, ಇಬ್ಬರೂ ನನ್ನ ಬಾಬ್ತು ಕೆ.ಎ-44 ಎಸ್-6265 ನೇ ಅಪಾಚೇ ಬೈಕಿನಲ್ಲಿ ಮಂಜುನಾಥ್ ರವರ ಚಾಲನೆಯಲ್ಲಿ ಕೆ.ಬಿ.ಕ್ರಾಸ್ ಹತ್ತಿರ ಬೀರಸಂದ್ರಪಾಳ್ಯ ಗೇಟ್ ಬಳಿ NH-150(ಎ) ರಸ್ತೆಯಲ್ಲಿ  ಸಂಜೆ ಸುಮಾರು 06.30 ಗಂಟೆಯಲ್ಲಿ ಮಂಜುನಾಥನು ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬರುತ್ತಿರುವಾಗ್ಗೆ ವಾಹನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದ್ದರಿಂದ ನಾವಿಬ್ಬರು ಟಾರ್ ರಸ್ತೆಯ ಮೇಲೆ ಬಿದ್ದಿರುತ್ತೇವೆ. ಇದರಿಂದ ಮಂಜುನಾಥನ ಎಡಕತ್ತಿನ ಮತ್ತು ಕಿವಿಯಲ್ಲಿ ತೀವ್ರ ರಕ್ತಸ್ರಾವವಾಗಿರುತ್ತೆ. ಹಾಗೂ ನನಗೆ ಎಡಕೈಗೆ ಮತ್ತು ತಲೆ ಪೆಟ್ಟಾಗಿ ರಕ್ತಗಾಯಾಗಳಾಗಿರುತ್ತವೆ. ನಂತರ ಅಲ್ಲಿಗೆ ಬಂದ ಕುಂದೂರಿನ ಗ್ರಾಮಸ್ಥರು ಮತ್ತು ನಮ್ಮ ಹಿಂದೆ ಬರುತ್ತಿದ್ದ ನಮ್ಮೂರಿನ ಗ್ರಾಮಸ್ಥರು ತಕ್ಷಣ ನಮ್ಮಿಬ್ಬರನ್ನು ಯಾವುದೋ ಒಂದು ಆಟೋದಲ್ಲಿ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ನಾವು ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈಧ್ಯರು ನಮ್ಮನ್ನು ಪರೀಕ್ಷಿಸಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಆಂಬುಲೆನ್ಸ್ ನಲ್ಲಿ ಕಳುಹಿಸಿರುತ್ತಾರೆ. ನಂತರ ನಾವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತೇವೆ. ಅಲ್ಲಿನ ವೈಧ್ಯರು ಪರೀಕ್ಷಿಸಿ ಮಂಜುನಾಥನು ಮಾರ್ಗ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ಮಂಜುನಾಥನ ಶವವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿ, ಈ ಅಪಘಾತದ ಬಗ್ಗೆ ನಮ್ಮ ಸಂಬಂಧಿಕರಿಗೆ ತಿಳಿಸಿ ನನಗೆ ಚಿಕ್ಕ-ಪುಟ್ಟ ಗಾಯಾಗಳಾಗಿದ್ದರಿಂದ ನಾನೇ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಅಪಘಾತದ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ಎಂದು ನೀಡಿದ ಪಿರ್ಯಾದು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 61 guests online
Content View Hits : 288237