lowborn ಅಪರಾಧ ಘಟನೆಗಳು 14-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 14-01-18

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ   03/2018 ಕಲಂ  279, 304(ಎ ) ಐಪಿಸಿ  134(ಎ &ಬಿ ), 187 ಐ.ಎಂ.ವಿ ಆಕ್ಟ್

ದಿನಾಂಕ 13/01/2018 ರಂದು ರಾತ್ರಿ 10-.30 ಗಂಟೆ ಸಮಯದಲ್ಲಿ ಪಿರ್ಯಾದಿ ಫಾತಿಮಾಭೀ ಕೊಂ ಚಾಂದ್ ಪಾಷ ಟಿ.ಕೆ, 50 ವರ್ಷ, ಮುಸ್ಲಿಂ ಜನಾಂಗ, ಬಡವನಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಅಣ್ಣ ಹೊನ್ನೂರು ಪಾಷ ರವರ ಮಗ ದಾದಪೀರ್ ಬಿ ಹೆಚ್ ಎಂಬುವವರನ್ನು ನಾನು ಚಿಕ್ಕ ವಯಸ್ಸಿನಿಂದಲೇ ಸಾಕಿಕೊಂಡಿದ್ದು, ಆತ ನನ್ನ ಬಳಿಯೇ ವಾಸವಿದ್ದ. ಆತನಿಗೆ ಈಗ ಸುಮಾರು 26 ವರ್ಷ ವಯಸ್ಸಾಗಿದ್ದು, ಆತನಿಗೆ ತುಮಕೂರಿನ ಶಬಾಜ್ ಭಾನು ರವರೊಂದಿಗೆ ಮದುವೆಯಾಗಿತ್ತು. ಕೈಮರದ ಪ್ರಶಾಂತ್ ಎಂಬುವವರ ಹತ್ತಿರ ಬೈಕ್ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ. ಆತ ದಿನ ನಿತ್ಯ ನಮ್ಮ ಬಾಬ್ತು ಕೆಎ 06 ಇಎ 186 ನೇ ಬೈಕಿನಲ್ಲಿ ಕೈಮರಕ್ಕೆ ಹೋಗಿ ಬರುತ್ತಿದ್ದ. ದಿನಾಂಕ 13/01/2018 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದವನು ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಮೇಲ್ಕಂಡ ಬೈಕಿನಲ್ಲಿ ಬಡವನಹಳ್ಳಿ ಕಡೆಗೆ ಮಧುಗಿರಿ ಶಿರಾ ರಸ್ತೆಯಲ್ಲಿ ದೊಡ್ಡೇರಿ ಕೆರೆ ಸಮೀಪ ಬರುತ್ತಿದ್ದಾಗ ದೊಡ್ಡೇರಿ ಕಡೆಯಿಂದ ಬಂದ ಕಾರೊಂದನ್ನು ಅದರ ಚಾಲಕ ಅತಿವೇಗ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ದಾದಫೀರ್ ನ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ್ದು, ದಾದಪೀರ್ ಸ್ಥಳದಲ್ಲೇ ಸತ್ತುಹೋಗಿರುತ್ತಾನೆ. ಎಂಬ ವಿಚಾರವನ್ನು ನನ್ನ ಅಣ್ಣನ ಮಗ ಕೆಲಸ ಮಾಡುತ್ತಿದ್ದ ಗ್ಯಾರೇಜ್ ಮಾಲೀಕ ಪ್ರಶಾಂತ್ ಎಂಬುವರು ನಮಗೆ ಪೋನ್ ಮಾಡಿ ತಿಳಿಸಿದ್ದು ತಕ್ಷಣ ನಾನು ಮತ್ತು ಮನೆಯವರು ದೊಡ್ಡೇರಿ ಕೆರೆ ಹತ್ತಿರ ಹೋಗಿ ನೋಡಲಾಗಿ ನನ್ನ ಅಣ್ಣನ ಮಗನಾದ ದಾದಫೀರ್ ಗೆ ಅಪಘಾತ ಉಂಟಾಗಿದ್ದು, ನಿಜವಾಗಿದ್ದು ನೋಡಲಾಗಿ ನನ್ನ ಅಣ್ಣನ ಮಗನ ತಲೆಗೆ, ಮೈಕೈಗೆ ಪೆಟ್ಟು ಬಿದ್ದು, ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಬೈಕ್ ಮತ್ತು ಕಾರು ಎರಡು ಪೂರಾ ಜಖಂ ಆಗಿದ್ದು, ಕಾರ್ ನಂಬರ್ ನೋಡಲಾಗಿ ಕೆಎ 03 ಎಂಇ 7928 ಕೆಂಪು ಬಣ್ಣದ ಹುಂಡೈ ಕಂಪನಿಯ ಕಾರಾಗಿರುತ್ತೆ. ನಂತರ ನಾವು ದಾದಫೀರ್ ನ ಹೆಣವನ್ನು ಯಾವುದೇ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು,  ಈ ಅಪಘಾತಕ್ಕೆ ಕಾರಿನ ಚಾಲಕನ ಅತಿವೇಗ ಅಜಾಗರೂಕೆತೆ ಕಾರಣವಾಗಿದ್ದು, ನನ್ನ ಅಣ್ಣನ ಮಗನ ಸಾವಿಗೆ ಕಾರಣನಾದ ಮೇಲ್ಕಂಡ ಕಾರು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 05/2018 ಕಲಂ 324.326.504 ಐ,ಪಿ,ಸಿ

ದಿನಾಂಕ 13/01/2018 ರಂದು ಈ ಕೇಸಿನ ಪಿರ್ಯಾದಿ ಲೋಕೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾಧು ಅಂಶವೇನೆಂದರೆ ನಮ್ಮ ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿರುತ್ತೇವೆ. ನಾವುಗಳೆಂದರೆ 01) ಭಾಗ್ಯಮ್ಮ 02) ಭೀಮರಾಜ್ 03) ನಾನು ಇದ್ದು, ಎಲ್ಲರಿಗೂ ಮದುವೆಯಾಗಿದ್ದು, ಬೇರೆ ಬೇರೆ ಸಂಸಾರ ಮಾಡಿಕೊಂಡು ಇರುತ್ತೇವೆ, ನನ್ನ ಅಕ್ಕ ಭಾಗ್ಯಮ್ಮ ಈಕೆಯು ತನ್ನ ಗಂಡನಿಂದ ವಿಚ್ಚೇದನ ಪಡೆದು ನಮ್ಮೂರಿಗೆ ಬಂದು ವಾಸವಿರುತ್ತಾಳೆ. ಆಕೆಯ ಜೊತೆಯಲ್ಲಿ ನನ್ನ ತಂದೆ ಶಿವಣ್ಣ ತಾಯಿ ಜಯಮ್ಮ ವಾಸವಿರುತ್ತಾರೆ.

ನನ್ನ ತಂದೆ ಶಿವಣ್ಣ ಮಾರ್ತಮ್ಮನಹಳ್ಳಿ ಯಲ್ಲಿ 26 ಗುಂಟೆ ಜಮೀನನ್ನು ಖರೀದಿಸಿ ನನ್ನ ಅಕ್ಕ ಭಾಗ್ಯಮ್ಮ ರವರಿಗೆ ಕೊಟ್ಟಿದ್ದು, ಈ ವಿಚಾರದ ಬಗ್ಗೆ ನನ್ನ ಅಣ್ಣ ಭೀಮರಾಜ ನನ್ನ ತಂದೆಯ ಮೇಲೆ ಈ ಜಮೀನಿನ ವೈಷಮ್ಯದ ಹಿನ್ನೇಲೆಯಲ್ಲಿ ಆಗಾಗ್ಗೆ ಜಗಳ ತೆಗೆಯುತ್ತಿದ್ದ, ನಮ್ಮ ತೋಟದಲ್ಲಿ ಎರಡು ಭಾಗವಾಗಿ ಮನೆ ಕಟ್ಟಿಸಿದ್ದು, ಒಂದು ಭಾಗದಲ್ಲಿ ನನ್ನ ಅಣ್ಣ ಭೀಮರಾಜನ ಸಂಸಾರವಿರುತ್ತೆ. ಇನ್ನೊಂದು ಭಾಗದ ಮನೆಯನ್ನು ನನಗೆ ಬಿಟ್ಟಿದ್ದು, ನಾನು ಆ ಮನೆಯಲ್ಲಿ ವಾಸವಿಲ್ಲದೆ ಊರಿನ ಒಳಗಿನ ಮನೆಯಲ್ಲಿ ವಾಸವಿರುತ್ತೇನೆ,  ದಿನಾಂಕ 12/01/2018 ರಂದು ಸಾಯಂಕಾಲ 04-00 ಗಂಟೆಯ ಸಮಯದಲ್ಲಿ ನಮ್ಮ ತಂದೆ ಮತ್ತು ತಾಯಿ ಇಬ್ಬರೂ ತೋಟದ ನನ್ನ ಭಾಗಕ್ಕೆ ಬಂದಿರುವ ಮನೆಯ ಬಳಿ ಸೀಮೆ ಹಸುವಿಗೆ ಮತ್ತು ಎಮ್ಮೆಗೆ ಬೂಸ ಹಾಕಲು ನನ್ನ ಭಾಗಕ್ಕೆ ಬಂದಿರುವ ಮನೆಯಿಂದ ಬೂಸ ತಂದು ಹಾಕಲು ಹೋಗುತ್ತಿರುವಾಗ್ಗೆ,  ನನ್ನ ಅಣ್ಣ ಭೀಮರಾಜ ನನ್ನ ತಂದೆಯ ಮೇಲೆ ಏಕಾ ಏಕಿ ಜಗಳ  ತೆಗೆದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಒಂದು ಅಡಿಕೆ ದಬ್ಬೆಯನ್ನು ತೆಗೆದುಕೊಂಡು ನನ್ನ ತಂದೆಯ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಮತ್ತು ಎಡ ಮೊಣಕೈಗೆ ಅದೇ ದಬ್ಬೆಯಿಂದ ಹೊಡೆದ ಕಾರಣ ಎಡ ಮೊಣಕೈ ಮೂಳೆ ಮುರಿದು ಹೋಗಿರುತ್ತೆ, ಹಾಗೂ  ಎಡ ತೊಡೆಗೆ ಅದೇ ದಬ್ಬೆಯಿಂದ ಹೊಡೆದಿರುತ್ತಾನೆ, ನನ್ನ ತಾಯಿ ನನ್ನ ಅಣ್ಣನನ್ನು ತಡೆದು ಜಗಳ ಬಿಡಿಸಿಕೊಂಡು ನನ್ನ ತಾಯಿ ನನಗೆ ಫೋನ್ ಮಾಡಿದ್ದರಿಂದ ನಾನು ಮೇಲ್ಕಂಡ ಸ್ಥಳಕ್ಕೆ ಹೋಗಿ ನನ್ನ ತಾಯಿಯಿಂದ ಮೇಲ್ಕಂಡ ವಿಚಾರವನ್ನು ತಿಳಿದುಕೊಂಡು ನನ್ನ ತಂದೆಯನ್ನು ನೋಡಲಾಗಿ,  ತಲೆಯಲ್ಲಿ ಹೆಚ್ಚಿನ ರಕ್ತ ಬರುತ್ತಿದ್ದು, ಎಡ ಮೊಣಕೈ ಮುರಿದು ಹೋಗಿತ್ತು, ನನ್ನ ತಂದೆಯ ಮೇಲೆ ಹಲ್ಲೆ ನಡೆದಾಗ ಸ್ಥಳದಲ್ಲಿ ನನ್ನ ತಾಯಿಯನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಕೂಡಲೇ ಯಾವುದೋ ಒಂದು ಬಾಡಿಗೆ ಲಗೇಜ್ ಆಟೋ ಮಾಡಿಕೊಂಡು ನನ್ನ ತಂದೆಯನ್ನು ದಂಡಿನಶಿವರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಪ್ರಯುಕ್ತ ನನ್ನ ತಂದೆಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನೆನ್ನೇಯ ದಿನ ಚಿಕಿತ್ಸೆಗಾಗಿ ಸೇರಿಸಿರುತ್ತೇನೆ, ನನ್ನ ತಂದೆಯನ್ನು ನೋಡಿಕೊಳ್ಳಲು ಯಾರು ಇಲ್ಲದ ಪ್ರಯುಕ್ತ ನಾನು ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ಧೇನೆ, ನನ್ನ ತಂದೆ ಶಿವಣ್ಣ ಬಿನ್ ಲೇ. ಧರ್ಮಯ್ಯ, 65 ವರ್ಷ. ವಯಸ್ಸಾಗಿರುತ್ತೆ. ಆದ್ದರಿಂದ ನನ್ನ ತಂದೆಯ ಮೇಲೆ ಹಲ್ಲೆ ಮಾಡಿ ತೀವ್ರ ಸ್ವರೂಪದ ಗಾಯವುಂಟು ಮಾಡಿರುವ ನನ್ನ ಅಣ್ಣನಾಧ ಭೀಮರಾಜ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ  ಇತ್ಯಾದಿಯಾಗಿ ನೀಡಿದ ದೂರಿನ ದಾಖಲಿಸಿಕೊಂಡು ತನಿಖೆ  ಕೈಗೊಂಡಿರುತ್ತೆ.   

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಯು.ಡಿ.ಆರ್. ನಂ- 01/2018 ಕಲಂ:174  ಸಿ.ಆರ್.ಪಿ.ಸಿ

ದಿನಾಂಕ:13/01/2018 ರಂದು ರಾತ್ರಿ 8:00 ಗಂಟೆಗೆ ಪಾವಗಡ ತಾ|| ನಿಡಗಲ್ ಹೋ| ಕೋಟಗುಡ್ಡ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಾದ ಪಿ. ಶ್ರೀನಿವಾಸಲು ಬಿನ್ ಲೇ|| ಪಿ.ಗೋವಿಂಧಪ್ಪ ,55 ವರ್ಷ, ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು 04 ವರ್ಷದಿಂದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು ದಿನಾಂಕ:13/01/2018 ರಂದು ಬೆಳಿಗ್ಗೆ ನಾನು ಗ್ರಾಮ ಪಂಚಾಯ್ತಿ ಬಳಿ ಬಂದಾಗ ಗ್ರಾಮ ಪಂಚಾಯ್ತಿ ಸದಸ್ಯರಾದ ಪಾಂಡುರಂಗಪ್ಪ ಬಿನ್ ಮುದ್ದರಂಗಪ್ಪ ರವರು ಕಚೇರಿ ಬಳಿ ಬಂದು ಕೋಟಗುಡ್ಡ ಗ್ರಾಮದ ಚಳ್ಳಕೆರೆ ರಸ್ತೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಯಾವುದೋ ಸುಮಾರು 65- ರಿಂದ 70 ವರ್ಷ ವಯಸ್ಸಿನ ವ್ಯಕ್ತಿಯು ಸತ್ತು ಬಿದ್ದಿರುತ್ತಾನೆಂತ ತಿಳಿಸಿದ್ದು ನಾನು ಮತ್ತು ಇತರರು ಹೋಗಿ ನೋಡಲಾಗಿ ಸುಮಾರು 05 ಅಡಿ ಎತ್ತರದ ,65 ರಿಂದ-70 ವರ್ಷ ವಯಸ್ಸಿನ ಗಂಡಸು ಸತ್ತು ಹೋಗಿದ್ದು, ಬಿಳಿ ಗಡ್ಡ ಮೀಸೆ ತಲೆ ಕೂದಲು ಇದ್ದು ,ಮೈ ಮೇಲೆ ನೀಲಿ ಬಣ್ಣದ ಷರ್ಟ್, ಕಾಫಿಕಲರ್  ಕಾಚಾ ಇರುತ್ತದೆ, ಮತ್ತು ತಲೆಯ ಸಮೀಪ ಬಿಳಿ  ಹಸಿರು ಚೌಕಳಿಯ ಲುಂಗಿ ಇರುತ್ತದೆ, ಸದರಿ ವ್ಯಕ್ತಿಯು ಬುದ್ದಿಮಾಂಧ್ಯನೋ ಅಥವಾ ಭಿಕ್ಷುಕನೋ ಆಗಿದ್ದು ವಯೋಸಹಜ ಕಾಯಿಲೆ ಯಿಂದಲೋ ಅಥವಾ ಅನ್ನ ಆಹಾರ ವಿಲ್ಲದೇಯೋ ಸತ್ತು ಹೋಗಿರಬಹುದು, ಆದ್ದರಿಂದ ತಾವು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ:01/2018 ಕಲಂ:174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 63 guests online
Content View Hits : 243297