lowborn ಅಪರಾಧ ಘಟನೆಗಳು 16-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 16-01-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ;  ಯು,ಡಿ,ಆರ್ ನಂ: 02/2018.   ಕಲಂ:  174 CRPC

ದಿನಾಂಕ: 15-01-2018 ರಂದು ಮಧ್ಯಾನ 010-30 ಗಂಟೆಗೆ ಶ್ರೀಮತಿ ಗಂಗಮ್ಮ  ಕೋಂ ನಂಜುಂಡಯ್ಯ,  ಸುಮಾರು 40 ವರ್ಷ, ವಕ್ಕಲಿಗರು, ಮನೆಕೆಲಸ, ಸಿದ್ದಯ್ಯನಕೆರೆಪಾಳ್ಯ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಈಗ್ಗೆ 02 ವರ್ಷಗಳ ಹಿಂದೆ ಸಿಂಗೋನಹಳ್ಳಿ ಗ್ರಾಮದ ನಿಂಗಯ್ಯನ ಮಗಳಾದ ನನ್ನನ್ನು ಸಿದ್ದಯ್ಯನಕೆರೆಪಾಳ್ಯ ಗ್ರಾಮದ ನಂಜುಂಡಯ್ಯನಿಗೆ ಕೊಟ್ಟು ಮದುವೆ ಮಾಡಿದರು ನನಗೆ ಒಂದು ಗಂಡು ಮಗನಾದ ಅರುಣ (16 ವರ್ಷ) ಮತ್ತು ಒಬ್ಬಳು ಮಗಳು ಅರ್ಪಿತ (12 ವರ್ಷ) ಎಬ ಹೆಣ್ಣು ಮಗಳಿದ್ದು ನಾನು ಮತ್ತು ನನ್ನ ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡು ಸಿದ್ದಯ್ಯನಕೆರೆ ಪಾಳ್ಯದಲ್ಲಿ ವಾಸವಿದ್ದೆವು, ದಿನಾಂಕ;-15/01/2018 ರ ಸೋಮವಾರದಂದು ಸುಮಾರು 08-00 ಗಂಟೆಗೆ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಇಂದು ಮಕರ ಸಂಕ್ರಾಂತಿ ಹಬ್ಬವಾದ್ದರಿಂದ ಜಮೀನಿನಿಂದ ಹಾಗೆ ಬರುವಾಗ ದನ ಕರುಗಳನ್ನು ನಮ್ಮ ಗ್ರಾಮದಲ್ಲೆ ಇರುವ ಕೆರೆಯಲ್ಲಿ ಮೈ ತೊಳೆದುಕೊಂಡು ಬರುತ್ತೇವೆಂದು ತಿಳಿಸಿ ನನ್ನ ಗಂಡನಾದ ಸುಮಾರು 45 ವರ್ಷ ನಂಜುಂಡಯ್ಯ ಹಾಗೂ 07 ನೇ ತರಗತಿ ವಿಧ್ಯಾಬ್ಯಾಸ ಮಾಡುತ್ತಿದ್ದ 12 ವರ್ಷದ ಹರ್ಪಿತ ಜಮೀನಿನ ಕಡೆ ಹೋದರು, ಹಬ್ಬವಾದ್ದರಿಂದ ನಾನು ಮನೆಯಲ್ಲೆ ಮನೆ ಕೆಲಸ ಮಾಡಿಕೊಂಡು ಇದ್ದಾಗ ಸುಮಾರು 12-30 ರ ಗಂಟೆಗೆ ನನ್ನ ಮೈದುನನಾದ ನಾಗರಾಜು ಓಡಿಬಂದು ದನಗಳನ್ನು ಮೈ ತೊಳೆಯುವ ವೇಳೆ ಕಾಲು ಜಾರಿ ನನ್ನ ಅಣ್ಣ ನಂಜುಂಡಯ್ಯ ಹಾಗೂ ಹರ್ಪಿತ ಇಬ್ಬರೂ ಕೆರೆಯೊಳಗೆ ಬಿದ್ದು ಮುಳುಗಿ ಸತ್ತು ಹೋಗಿರುತ್ತಾರೆ ಎಂದು ವಿಚಾರವನ್ನು ತಿಳಿಸಿದನು, ತಕ್ಷಣ ನಾನು ನಮ್ಮ ಗ್ರಾಮದ ಜಗದೀಶ ಓಡಿಹೋಗಿ ಕೆರೆಯ ಹತ್ತಿರ ನೋಡಿದಾಗ ನನ್ನ ಗಂಡ ನಂಜುಂಡಯ್ಯ ಹಾಗೂ ಹರ್ಪಿತ ನೀರಿನಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಯಿತು, ನನ್ನ ಗಂಡ ನಂಜುಂಡಯ್ಯ ಇಬ್ಬರೂ ಜಮೀನಿನಿಂದ ಬರುವಾಗ ಕೆರೆಯಲ್ಲಿ ದನಗಳನ್ನು ಮೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಕೆರೆಗೆ ಕಾಳು ಜಾರಿ ಬಿದ್ದು ಮೃತಪಟ್ಟಿರುತ್ತಾರೆ ವಿನಾ ಇವರ ಸಾವಿನ ಬಗ್ಗೆ ಬೇರೆ ಯಾವುದೇ ರೀತಿಯ ಅನುಮಾನಗಳು ಇರುವುದಿಲ್ಲ, ಮೃತ ದೇಹವು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇದ್ದು ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ,

ಮಿಡಿಗೇಶಿ ಪೊಲೀಸ್  ಠಾಣಾ ಮೊ.ಸಂ.06/2018, ಕಲಂ: 279, 304(ಎ) ಐ.ಪಿ.ಸಿ.

ದಿನಾಂಕ:15/01/2018 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ಶಾರದಮ್ಮ ಕೋಂ ಚಂದ್ರಪ್ಪ, 60 ವರ್ಷ, ಲಿಂಗಾಯ್ತರು, ವ್ಯವಸಾಯ, ಮಿಡಿಗೇಶಿ ಮಜರೆ ಜಂಗಮಯ್ಯನಪಾಳ್ಯ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೇ, ನಾನು ಕುಟುಂಬದೊಂದಿಗೆ ಜಂಗಮಯ್ಯನಪಾಳ್ಯದಲ್ಲಿ ವಾಸವಾಗಿದ್ದು ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ಮನೆಯಲ್ಲಿ ಜೀವನೋಪಾಯಕ್ಕಾಗಿ ಸೀಮೆ ಹಸುಗಳನ್ನು ಸಾಕಿಕೊಂಡಿದ್ದು, ನನ್ನ ಗಂಡನಾದ ಚಂದ್ರಪ್ಪ ಬಿನ್ ಲೇ||ವೀರಭದ್ರಯ್ಯ, ಸುಮಾರು 65 ವರ್ಷ ರವರು ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸೀಮೆ ಹಸುಗಳಲ್ಲಿ ಹಾಲನ್ನು ಕರೆದುಕೊಂಡು ನಮ್ಮ ಗ್ರಾಮದಿಂದ ನಮ್ಮ ಬಾಬ್ತು ಕೆಎ-06-ಇಬಿ-13 ನೇ ಟಿವಿಎಸ್ ನಲ್ಲಿ ತೆಗೆದುಕೊಂಡು ಹೋಗಿ ಮಿಡಿಗೇಶಿ ಗ್ರಾಮದಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಹಾಕಿ ಬರುತ್ತಿದ್ದರು. ಅದರಂತೆ ಈ ದಿನ ಅಂದರೆ ದಿನಾಂಕ:15/01/2018 ರಂದು ಬೆಳಿಗ್ಗೆ ಹಸುಗಳಲ್ಲಿ ಹಾಲನ್ನು ಕರೆದುಕೊಂಡು ಮಿಡಿಗೇಶಿ ಗ್ರಾಮದಲ್ಲಿರುವ ಡೈರಿಗೆ ಹೋಗಿ ಬರುತ್ತೇನೆಂತ ಹಾಲಿನ ಕ್ಯಾನುಗಳನ್ನು ತೆಗೆದುಕೊಂಡು ಬೆಳಿಗ್ಗೆ ಸುಮಾರು 07:15 ಗಂಟೆಗೆ ಮನೆಯಿಂದ ನಮ್ಮ ಬಾಬ್ತು ಕೆಎ-06-ಇಬಿ-13 ನೇ ಟಿವಿಎಸ್ ನಲ್ಲಿ ಹೊರಟು ಬಂದರು. ನನ್ನ ಗಂಡ ಚಂದ್ರಪ್ಪರವರು ನಮ್ಮ ಮನೆಯಿಂದ ಹೊರಟು ಬಂದ ಸುಮಾರು 15-20 ನಿಮಿಷಗಳ ನಂತರ ಮಿಡಿಗೇಶಿ ಗ್ರಾಮದ ನರಸಿಂಹಮೂರ್ತಿ ಎಂಬುವರು ನನ್ನ ಮಗ ವೀರಭದ್ರಯ್ಯನಿಗೆ ಪೋನ್ ಮಾಡಿ ನಾನು ಈ ದಿನ ಬೆಳಿಗ್ಗೆ ಮಿಡಿಗೇಶಿ ಗ್ರಾಮದಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಹಾಕಿ, ನಂತರ ಮನೆಗೆ ಹೋಗಲು ಸುಮಾರು 07:30 ಗಂಟೆಯ ಸಮಯದಲ್ಲಿ ನಾನು ಮತ್ತು ನಿಮ್ಮ ಊರಿನ ರಾಜೇಶ ಇಬ್ಬರು ಹಾಲಿನ ಡೈರಿ ಮುಂದೆ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದಾಗ, ಅದೇ ಸಮಯಕ್ಕೆ ಹಾಲನ್ನು ಡೈರಿಗೆ ಹಾಕಲು ಅದೇ ರಸ್ತೆಯಲ್ಲಿ ಮಿಡಿಗೇಶಿ ಬಸ್ಸ್ ಸ್ಟ್ಯಾಂಡ್ ಕಡೆಯಿಂದ ಕೆಎ-06-ಇಬಿ-13 ನೇ ಟಿವಿಎಸ್ ನಲ್ಲಿ ಹಾಲಿನ ಡೈರಿಕಡೆ ಬರುತ್ತಿದ್ದ ನಿಮ್ಮ ತಂದೆ ಚಂದ್ರಪ್ಪನಿಗೆ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಎದುರಿಗೆ ಬಂದ ಕೆಎ-06-ಎಫ್-1214 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕನು ಬಸ್ಸನ್ನು ತುಂಬಾ ಸ್ಪೀಡಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮಿಡಿಗೇಶಿ ಗ್ರಾಮದ ಹಾಲಿನ ಡೈರಿಯ ಹತ್ತಿರ ಟಿವಿಎಸ್ ನಲ್ಲಿ ಬರುತ್ತಿದ್ದ ನಿಮ್ಮ ತಂದೆ ಚಂದ್ರಪ್ಪನಿಗೆ ಡಿಕ್ಕಿ ಹೊಡೆಸಿದನು. ಆಗ ನಿಮ್ಮ ತಂದೆ ಬರುತ್ತಿದ್ದ ಟಿವಿಎಸ್ ಜಖಂಗೊಂಡು ನಿಮ್ಮ ತಂದೆ ರಸ್ತೆಯ ಮೇಲೆ ಬಿದ್ದರು. ತಕ್ಷಣ ಅಲ್ಲಿಯೇ ಇದ್ದ ನಾನು ಮತ್ತು ರಾಜೇಶ ಹಾಗೂ ಅಪಘಾತಪಡಿಸಿದ ಬಸ್ಸಿನ ಚಾಲಕ ಸೇರಿಕೊಂಡು ರಸ್ತೆಯ ಮೇಲೆ ಬಿದಿದ್ದ ನಿಮ್ಮ  ತಂದೆ ಹತ್ತಿರ ಹೋಗಿ ನೋಡಿದಾಗ ಅಪಘಾತದಲ್ಲಿ ನಿಮ್ಮ ತಂದೆ ಚಂದ್ರಪ್ಪನ ತಲೆಗೆ, ಮೈ,ಕೈಗಳಿಗೆ ಹಾಗೂ ಕಾಲುಗಳಿಗೆ ತೀರ್ವ ತರವಾದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಮೂಗು ಬಾಯಿಯಲ್ಲಿ ರಕ್ತ ಬರುತ್ತಿದೆ,  ನೀವು ಬೇಗ ಮಿಡಿಗೇಶಿಗೆ ಬನ್ನಿ ಎಂತ ತಿಳಿಸಿದರು. ವಿಷಯ ತಿಳಿದ ನನ್ನ ಮಗ ಮತ್ತು ನಾನು ಇಬ್ಬರು ಮಿಡಿಗೇಶಿ ಹಾಲಿನ ಡೈರಿ ಹತ್ತಿರ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಗಂಡ ಚಂದ್ರಪ್ಪನನ್ನು ಯಾವುದೋ ಖಾಸಗಿ ಆಂಬುಲೆನ್ಸ್ ನಲ್ಲಿ  ಚಿಕಿತ್ಸೆಗಾಗಿ ನನ್ನ ಮಗ ವೀರಭದ್ರಯ್ಯನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ದಾಬಸ್ ಪೇಟೆ ಹತ್ತಿರ ಇದೇ ದಿನ ಬೆಳಿಗ್ಗೆ ಸುಮಾರು 09:30 ಗಂಟೆಯಲ್ಲಿ ನನ್ನ ಗಂಡ ಚಂದ್ರಪ್ಪ ರವರು ಮೃತಪಟ್ಟಿದ್ದು ಅವರ ಶವವನ್ನು ತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಇಟ್ಟಿರುವುದಾಗಿ ನನ್ನ ಮಗ ಪೋನ್ ಮೂಲಕ ತಿಳಿಸಿದನು. ಆದ್ದರಿಂದ ನನ್ನ ಗಂಡ ಚಂದ್ರಪ್ಪನಿಗೆ ಅಪಘಾತಪಡಿಸಿ ಅವರ ಸಾವಿಗೆ ಕಾರಣನಾದ ಕೆಎ-06-ಎಫ್-1214 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 09/2018 ಕಲಂ 454, 457, 380 ಐಪಿಸಿ

ದಿನಾಂಕ: 15-01-2018 ರಂದು ಬೆಳಿಗ್ಗೆ 10-15 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ 2 ನೇ ಹಂತ, ವೀರಭದ್ರಸ್ವಾಮಿ ನಿಲಯದಲ್ಲಿ ವಾಸವಾಗಿರುವ ಕೆ.ವಿ.ಎಸ್‌ ಒಡೆಯರ್ ಬಿನ್ ವೀರಭದ್ರಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಕೊರಟಗೆರೆ ತಾಲ್ಲೂಕು ಘಡ್ಲಗೊಲ್ಲಹಳ್ಳಿ ಹೆಚ್.ಪಿ.ಎಸ್.ಶಾಲೆಯಲ್ಲಿ ಸಹಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ನನ್ನ ಸಂಸಾರದೊಂದಿಗೆ ಗೋಕುಲ ಬಡಾವಣೆ  2 ನೇ ಹಂತ 6 ನೇ ಕ್ರಾಸ್‌‌‌ನಲ್ಲಿರುವ ನಮ್ಮ ಸ್ವಂತ ಮನೆಯಾದ ಶ್ರೀ ವೀರಭದ್ರಸಾಮಿ ನಿಲಯದಲ್ಲಿ ಈಗ್ಗೆ ಸುಮಾರು 10 ವರ್ಷಗಳಿಂದ ನನ್ನ ಹೆಂಡತಿ ಮಗ ವಿನಯ್‌‌ಕುಮಾರ್‌ ಹಾಗೂ ಸೊಸೆ ನಾಗರತ್ನ ರವರೊಂದಿಗೆ ವಾಸವಾಗಿರುತ್ತೇನೆ.  ನಿನ್ನೆ ದಿನ ದಿನಾಂಕ: 14-01-2018 ರಂದು ಸಾಯಂಕಾಲ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಾಗಿರುವ ನಮ್ಮ ಮಗಳು ದಿವ್ಯ ರವರ ಗಂಡು ಮಗನಾದ ಆರ್ಯನ್‌‌ ( ಮೊಮ್ಮಗ) ನ 4 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ಇದ್ದರಿಂದ  ನಿನ್ನೆ ಬೆಳಿಗ್ಗೆ ಸುಮಾರು 6-00 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ನಮ್ಮ ಸಂಸಾರ ಸಮೇತ ಹೋಗಿದ್ದೆವು.  ಅಲ್ಲಿ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ಅಲ್ಲಿಯೇ ನಮ್ಮ ಮಗಳ ಮನೆಯಲ್ಲಿದ್ದು, ಈ ದಿನ ದಿನಾಂಕ: 15-01-2018 ರಂದು ಬೆಳಿಗ್ಗೆ ಸುಮಾರು 5-30 ಕ್ಕೆ ಬೆಂಗಳೂರನ್ನು ಬಿಟ್ಟು ಬೆಳಿಗ್ಗೆ ಸುಮಾರು 7-00 ಗಂಟೆಯ ಸಮಯಕ್ಕೆ ತುಮಕೂರಿನ ಗೋಕುಲ ಬಡಾವಣೆ 6 ನೇ ಕ್ರಾಸ್‌‌ನಲ್ಲಿರುವ ನಮ್ಮ ವಾಸದ ಮನೆಯ ಬಳಿಗೆ ಬಂದು ನೋಡಲಾಗಿ ಮನೆಯ ಮುಂಭಾಗ ಕಾಂಪೌಂಡ್‌‌‌ ಗೇಟಿಗೆ ಬೀಗ ಹಾಕಿದ್ದು, ಹಾಗೆಯೇ ಇದ್ದು, ಆದರೆ ಮನೆಯ ಮುಂಭಾಗಿಲಿನ ಮುಂದೆ ಇದ್ದ ಕಬ್ಬಿಣದ ಕೊಲ್ಯಾಪ್ಸಬಲ್‌‌ ಡೋರ್‌‌ಗೆ  ( ಸೇಪ್ಟಿ ಡೋರ್‌ ) ಹಾಕಿದ್ದ ಡೋರ್‌‌‌ಲಾಕ್‌‌ ಅನ್ನು ಯಾರೋ ಯಾವುದೋ ಆಯುಧದಿಂದ ಮೀಟಿ ತೆಗೆದಿದ್ದು, ಡೋರ್‌‌ಲಾಕ್‌‌‌‌ ಅದರಲ್ಲಿಯೇ ಬೆಂಡಾಗಿ ಡೋರ್‌‌‌‌ ತೆಗೆದಿತ್ತು ಇದರ ಹಿಂದೆಯೇ ಇದ್ದ ಮರದ ಬಾಗಿಲೂ ಸಹಾ ಅರೆತೆರೆದಿದ್ದು, ಈ ಮರದ ಬಾಗಿಲಿಗೆ ಹಾಕಿದ್ದ ಡೋರ್‌‌ಲಾಕನ್ನೂ ಸಹಾ ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದಿರುವುದು ಕಂಡು ಬಂದಿದ್ದು, ಡೋರ್‌ಲಾಕ್‌‌‌ ಹಾಕುವ ಸ್ಥಳದಲ್ಲಿ ಮರದ ವಾಸ್‌ಕಾಲ್‌‌‌( ಮರದ ನಿಲುವು) ಸ್ವಲ್ಪ ಕಿತ್ತುಹೋಗಿ ಡೋರ್‌‌ಲಾಕ್‌‌ನ ಪಾಟ್‌‌ಲಾಕ್‌‌‌ ಚೂರಾಗಿ ನೆಲದ ಮೇಲೆ ಬಿದ್ದಿತ್ತು.  ನಂತರ ನಾವು ಗಾಬರಿಯಲ್ಲಿ ಮನೆಯ ಒಳಗೆ ಹೋಗಿ ನೋಡಲಾಗಿ ರೂಮಿನಲ್ಲಿರುವ ಕಬ್ಬಿಣದ ಗಾಡ್ರೇಜ್‌‌ ಬೀರು ಸಹಾ ಓಪನ್‌‌ ಇದ್ದು, ಬೀರುವಿನಲ್ಲಿದ್ದ ಬಟ್ಟೆ-ಬರೆ ಇತರೇ ವಸ್ತುಗಳೆಲ್ಲಾ ಬೀರುವಿನ ಮುಂದೆ ಇದ್ದ ಮಂಚದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.   ನಾವು ಬೀರುವನ್ನು ಪರಿಶೀಲಿಸಲಾಗಿ, ಬೀರುವಿನ ಸೇಫ್‌‌ ಲಾಕರ್‌‌ನಲ್ಲಿಟ್ಟಿದ್ದ 3 ಲಕ್ಷ ರೂ ನಗದು ಹಣ  ( ನನ್ನ ಮಗ ವಿನಯ್‌‌ಕುಮಾರ್‌‌‌ ಆತನ ಹೆಂಡತಿ ಜೊತೆ ವಿವಾಹ ವಿಚ್ಚೇಧನೆ ಆಗಿದ್ದು, ನ್ಯಾಯಾಲಯಕ್ಕೆ  3 ಲಕ್ಷ ಹಣ ಕಟ್ಟಬೇಕಾಗಿದ್ದರಿಂದ ಹಣವನ್ನು ಬೀರುವಿನಲ್ಲಿ ಇಟ್ಟಿದ್ದೆವು)  ಇದರ ಜೊತೆಗೆ ಚಿನ್ನದ ವಡವೆಗಳಾದ 1) ಒಂದು ಚಿನ್ನದ ಕೈ ಕಡಗ  ಸುಮಾರು 20 ಗ್ರಾಂ ತೂಕ  2) ಒಂದು ಚಿನ್ನದ ಸರ ಸುಮಾರು 20 ಗ್ರಾಂ ತೂಕ  3)  ಒಂದು ಜೊತೆ ಮುತ್ತಿನ ಓಲೆ-ಜುಂಕಿ  ಸುಮಾರು 8 ಗ್ರಾಂ,  4) 4 ಜೊತೆ ಚಿನ್ನದ ಓಲೆಗಳು ಸುಮಾರು 25 ಗ್ರಾಂ  5) ಎರಡು ಚಿನ್ನದ ಉಂಗುರ ಸುಮಾರು 16 ಗ್ರಾಂ  6) ಒಂದು ಜೊತೆ ಚಿನ್ನದ ಚುಂಕಿ  ಸುಮಾರು 12 ಗ್ರಾಂ,  7) ಒಂದು ಜೊತೆ ಚಿನ್ನದ ಹ್ಯಾಂಗೀಸ್‌‌‌ ಸುಮಾರು 10 ಗ್ರಾಂ  8) ಒಂದು ಬಿಳಿಯ ಕಲ್ಲಿನ ಚಿನ್ನದ ಉಂಗುರ ತೂಕ ಸುಮಾರು 8 ಗ್ರಾಂ, ಎಲ್ಲಾ ಸೇರಿ ಸುಮಾರು 120 ಗ್ರಾಂ ಹಾಗೂ ಸುಮಾರು 250 ಗ್ರಾಂ ತೂಕದ ಒಂದು ಬೆಳ್ಳಿಯ ತಟ್ಟೆ ಇವುಗಳನ್ನು ಇಟ್ಟಿದ್ದು, ಕಳುವಾಗಿರುವ ಚಿನ್ನದ ವಡವೆಗಳ ಬೆಲೆ ಸುಮಾರು 3 ಲಕ್ಷ ರೂಪಾಯಿ ಹಾಗೂ ಬೆಳ್ಳಿಯ ತಟ್ಟೆಯ ಬೆಲೆ ಸುಮಾರು 10 ಸಾವಿರ  ಆಗುತ್ತದೆ. ಯಾರೋ ಕಳ್ಳರು ನಿನ್ನೆ ದಿನ ದಿನಾಂಕ: 14-01-2018 ಬೆಳಿಗ್ಗೆ 6-00 ಗಂಟೆಯ ನಂತರದಿಂದ ದಿನಾಂಕ: 15-01-2018 ರ ಬೆಳಿಗ್ಗೆ 7-00 ಗಂಟೆಯ ನಡುವೆ ಯಾವಾಗಲೋ ನಮ್ಮ ಮನೆಯ ಬಾಗಿಲುಗಳಿಗೆ ಹಾಕಿದ್ದ ಡೋರ್‌‌ಲಾಕ್‌‌‌ಗಳನ್ನು  ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ ಮೇಲ್ಕಂಡ ಹಣ, ಚಿನ್ನದ ವಡವೆಗಳು ಹಾಗೂ ಬೆಳ್ಳಿಯ ತಟ್ಟೆಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಆದ್ದರಿಂದ ತಾವು ದಯಮಾಡಿ ಆರೋಪಿಗಳು ಯಾರೆಂದು ಪತ್ತೆ ಮಾಡಿ, ಕಳವು ಮಾಡಿಕೊಂಡು ಹೋಗಿರುವ ನಮ್ಮ ಹಣ, ಚಿನ್ನದ ವಡವೆಗಳು ಹಾಗೂ ಬೆಳ್ಳಿಯ ತಟ್ಟೆಯನ್ನು ಕೊಡಿಸಿಕೊಟ್ಟು, ಕಳವು ಮಾಡಿರುವ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 05/2018 ಕಲಂ: 457,380 IPC

ದಿನಾಂಕ:15-01-2018 ರಂದು ಪಿರ್ಯಾದಿ ಕೆ.ಎನ್‌ ನಾಗರಾಜು ಬಿನ್ ಲೇಟ್ ನಂಜುಮಡಪ್ಪ, 65 ವರ್ಷ, 1ನೇ ಕ್ರಾಸ್, ಶಂಕರಪ್ಪ ಲೇಔಟ್, ತಿಪಟೂರು ಟೌನ್ ರವರು ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಕೆ.ಎನ್‌ ನಾಗರಾಜು ರವರು ತನ್ನ ಮಗ ಕೆ.ಎನ್‌ ತ್ರಿಲೋಕ್‌ ರವರು ಮೂಡಬಿದರೆಯ ಆಳ್ವಾಸ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಆತನನ್ನು ನೋಡಿಕೊಂಡು ಬರಲು ತನ್ನ ಹೆಂಡತಿಯೊಂದಿಗೆ ದಿನಾಂಕ:12-01-2018 ರಂದು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ:14-01-2018 ರಂದು ಬೆಳಗ್ಗೆ 9-30 ಗಂಟೆ ಸಮಯದಲ್ಲಿ ಪಕ್ಕದ ಮನೆಯ ಸವಿನಯ ರವರು ಪೋನ್‌ ಮಾಡಿ ದಿನಾಂಕ:13-01-2018 ರಂದು ರಾತ್ರಿ ಯಾರೋ ಕಳ್ಳರು ನನ್ನ ಮನೆಯ ಡೋರ್‌ಲಾಕ್‌ನ್ನು ಯಾವುದೋ ಆಯುಧದಿಂದ ಮೀಟಿದ್ದು ಕಳ್ಳತನ ಮಾಡಿಕೊಂಡು ಹೋಗಿರಬಹುದು ಎಂತ ಹೇಳಿದ್ದು, ಪಿರ್ಯಾದು ದಿನಾಂಕ:14-01-2018 ರಂದು ಮದ್ಯಾಹ್ನ 4-00 ಗಂಟೆ ಮನೆಗೆ ಬಂದು ಒಳಗೆ ಹೋಗಿ ನೋಡಿದಾಗ ಡೊರ್‌ಲಾಕ್‌ನ್ನು ಯಾವುದೋ ಆಯುಧದಿಂದ ಮೀಟಿ ರೂಮ್‌ನಲ್ಲಿದ್ದ ಗಾಡ್ರೆಜ್‌ ಬೀರುವನ್ನು ಮುರಿದು ಸಿಕ್ರಿಟ್‌ ಲಾಕ್‌ನಲ್ಲಿದ್ದ  10,000 ರೂ ಬೆಲೆಯ 300 ಗ್ರಾಂ ಬೆಳ್ಳಿಯ ವಡವೆಗಳು ಮತ್ತು 6000 ರೂ ಬೆಲೆಯ 3 ಗ್ರಾಂ ಚಿನ್ನದ ಓಲೆ, 8000 ನಗದು ಹಣವನ್ನು ದಿನಾಂಕ:13-01-2018 ರಂದು ರಾತ್ರಿ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 95 guests online
Content View Hits : 288262