lowborn ಪತ್ರಿಕಾ ಪ್ರಕಟಣೆ 16-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ 16-01-18

ಪತ್ರಿಕಾ ಪ್ರಕಟಣೆ

ದಿನಾಂಕ 16.01.2018

ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳ ಬಂಧನ.


ದಿನಾಂಕ.  17.12.2017 ರಂದು ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ 19 ವರ್ಷದ ಒಂದು ಹುಡುಗಿ, ದೆಹಲಿಯಲ್ಲಿ ವೇಶ್ಯಾವಾಟಿಕೆ ಗೃಹದಿಂದ ತಪ್ಪಿಸಿಕೊಂಡು ಬಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಆಕೆಯನ್ನು ರಕ್ಷಿಸಿ ಮಹಿಳಾ ಸ್ವೀಕಾರ ಕೇಂದ್ರಕ್ಕೆ ಬಿಟ್ಟಿರುತ್ತಾರೆ. ಆಕೆಯು ತನ್ನ ವಿಳಾಸವನ್ನು ತಿಳಿಸಿ, ತನ್ನನ್ನು ರಕ್ಷಿಸಿ ಊರಿಗೆ ಕಳುಹಿಸಿಕೊಡಬೇಕೆಂದು ಕೋರಿಕೊಂಡಿರುತ್ತಾರೆ.

ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಪೊಲೀಸ್ ಅಧೀಕ್ಷಕರು, ತುಮಕೂರು ರವರ ಮಾರ್ಗದರ್ಶನದಲ್ಲಿ, ಸಿಪಿಐ ತುಮಕೂರು ಗ್ರಾಮಾಂತರ ರವರ ನೇತೃತ್ವದ ಒಂದು ತಂಡ ದೆಹಲಿಗೆ ತೆರಳಿ ಹುಡುಗಿಯನ್ನು ರಕ್ಷಣೆ ಮಾಡಿ ವಾಪಸ್ ತುಮಕೂರಿಗೆ ಕರೆದುಕೊಂಡು ಬಂದು ಮಹಿಳಾ ಸ್ವಾದಾರ ಕೇಂದ್ರಕ್ಕೆ ಸಂರಕ್ಷಣೆಗಾಗಿ ಹಸ್ತಾಂತರಿಸಿರುತ್ತಾರೆ.

ರಕ್ಷಣೆ ಮಾಡಿದ ಹುಡುಗಿಯನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆಕೆಯನ್ನು ಲೈಂಗಿಕ ಶೋಷಣೆಗಾಗಿ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಮದ ಆರೋಪಿ ಭಾಗ್ಯಮ್ಮ ಎಂಬಾಕೆ ಹುಡುಗಿಯನ್ನು ಕೆಲಸ ಕೊಡಿಸುವ ಆಮಿಷ ಒಡ್ಡಿ, ಆಂಧ್ರಪ್ರದೇಶದ ಹಿಂದೂಪುರಕ್ಕೆ ಮತ್ತೊಬ್ಬ ಹುಡುಗಿಯೊಂದಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯನ್ನು ಇನ್ನೊಬ್ಬ ಆರೋಪಿತೆ ನೂರ್ಜಾನ್ ಎಂಬುವರಿಗೆ ಪರಿಚಯ ಮಾಡಿಸಿರುತ್ತಾರೆ. ನೂರ್ಜಾನ್ ದೆಹಲಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವ ಕೆಲವು ಆರೋಪಿತರನ್ನು ಸಂಪಕರ್ಿಸಿ ಭಾಗ್ಯಮ್ಮ ರವರ ಜೊತೆಯಲ್ಲಿ ಇಬ್ಬರು ಹುಡುಗಿಯರನ್ನು ಕಳುಹಿಸಿಕೊಟ್ಟಿರುತ್ತಾರೆ. ದೆಹಲಿಗೆ ಇಬ್ಬರು ಹುಡುಗಿಯರನ್ನು, ಆರೋಪಿ ಭಾಗ್ಯಮ್ಮ ಕರೆದುಕೊಂಡು ಹೋಗಿ ದೆಹಲಿ ರೈಲ್ವೆ ನಿಲ್ದಾಣದ ಬಳಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಒಬ್ಬ ಹೆಂಗಸಿಗೆ ಮಾರಾಟ ಮಾಡಿರುತ್ತಾಳೆ.

ಕೂಡಲೇ ಆರೋಪಿತರ ಬಂಧನಕ್ಕಾಗಿ ಮತ್ತು  ಚಿಕ್ಕಬಳ್ಳಾಪುರದ ಇನ್ನೋರ್ವ ಹುಡುಗಿಯ ರಕ್ಷಣೆಗಾಗಿ ಕೊರಟಗೆರೆ ಪಿ.ಎಸ್.ಐ ಮಂಜುನಾಥ ಬಿ.ಸಿ ರವರ ತಂಡವು ಕಾಯರ್ಾಚರಣೆ ಪ್ರಾರಂಭಿಸಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿದ ಆರೋಪಿ ಮಹಿಳೆಯಾದ ಭಾಗ್ಯಮ್ಮ ಕೋಂ ನಾಗರಾಜು. 35 ವರ್ಷ, ಗರಣಿ ಹೊಸಕೋಟೆ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕ್, ಹಾಲಿ ವಾಸ ಕೊರಟಗೆರೆ ತಾಲ್ಲೋಕ್ ತುಂಬಾಡಿ ಗ್ರಾಮ ರವರ ಪತ್ತೆ ಕಾರ್ಯ ಕೈಗೊಂಡು ಸದರಿ ಆರೋಪಿ ಭಾಗ್ಯಮ್ಮಳನ್ನು ದಿನಾಂಕ 29.12.2017 ರಂದು ಗುಲ್ಬರ್ಗ ಜಿಲ್ಲೆಯ ಅರಸೂರು ಗ್ರಾಮದಲ್ಲಿ ದಸ್ತಗಿರಿ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿತೆ ಭಾಗ್ಯ @ ಭಾಗ್ಯಮ್ಮ ಕೋಂ ಓಬಳೇಶಪ್ಪ ರವರನ್ನು ಅದೇ ದಿನಾಂಕದಂದು ಕೊರಟಗೆರೆ ಟೌನ್ನಲ್ಲಿ ದಸ್ತಗಿರಿ ಮಾಡಲಾಗಿದೆ.

ಆಂದ್ರ ಪ್ರದೇಶ ಕದಿರಿ ಗ್ರಾಮದ ಮೂರನೇ ಆರೋಪಿ ನೂರ್ ಜಾನ್ @ ಸುನೀರಾ ಕೋಂ ಜಾಕೀರ್ ರವರನ್ನು ದಿನಾಂಕ 29.12.2017  ರಂದು ಸಂಜೆ 5.45 ಗಂಟೆಗೆ ಆಂಧ್ರಪ್ರದೇಶದ ಕದಿರಿ ಗ್ರಾಮದಲ್ಲಿ ದಸ್ತಗಿರಿ ಮಾಡಲಾಗಿದೆ.

ವೇಶ್ಯಾವಾಟಿಕೆ ದಂಧೆಗೆ ಬಲಿಯಾಗಿದ್ದ ಇಬ್ಬರು ಹುಡುಗಿಯರನ್ನು ರಕ್ಷಣೆ ಮಾಡಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ, 1] ಭಾಗ್ಯಮ್ಮ ಕೋಂ ನಾಗರಾಜು, 35 ವರ್ಷ. ಬೋವಿ ಜನಾಂಗ, ಬಳೇ ವ್ಯಾಪಾರ. ಗರಣಿ ಹೊಸಕೋಟೆ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕ್ ಹಾಲಿ ವಿಳಾಸ ಕೊರಟಗೆರೆ ತಾಲ್ಲೋಕ್ ಕಸಬಾ ಹೋಬಳಿ, ತುಂಬಾಡಿ ಗ್ರಾಮ,

2] ನೂರ್ ಜಾನ್ @ ಸುನೀರಾ ಕೋಂ ಜಾಕೀರ್, 30 ವರ್ಷ. ಮುಸ್ಲಿಂ, ಗೃಹಿಣಿ, ಪುಲಗಂಪಲ್ಲಿ, ನೆಲ್ಲಮಾಡ ಮಂಡಲ್, ಕದಿರಿ ತಾಲ್ಲೋಕ್. ಅನಂತಪುರ ಜಿಲ್ಲೆ. ಆಂಧ್ರ ಪ್ರದೇಶ್.

3] ಭಾಗ್ಯ @ ಭಾಗ್ಯಮ್ಮ ಕೋಂ ಓಬಳೇಶಪ್ಪ. 45 ವರ್ಷ.ನಾಯಕರು,ಕೂಲಿಕೆಲಸ,ಗೌಡನಕೆರೆ ಹತ್ತಿರ, ಹನುಮಂತಪುರ, ಕೊರಟಗೆರೆ ಟೌನ್ ರವರುಗಳನ್ನು ದಸ್ತಗಿರಿ ಮಾಡಿದ್ದು, ಹಾಲಿ ನ್ಯಾಯಾಂಗ ಬಂದನದಲ್ಲಿರುತ್ತಾರೆ.

ಮೇಲ್ಕಂಡ ಆರೋಪಿಗಳನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ ವಿ ಗೋಪಿನಾಥ್. ಐ.ಪಿ.ಎಸ್. ರವರ ಹಾಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಶೋಭರಾಣಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ. ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಓ.ಬಿ.ಕಲ್ಲೇಶಪ್ಪ ಕೆ.ಎಸ್.ಪಿ.ಎಸ್ ರವರ ಹಾಗು ಕೊರಟಗೆರೆ ಪೊಲೀಸ್ ವೃತ್ತ ನಿರೀಕ್ಷಕರಾದ  ಎಸ್ ಮುನಿರಾಜು ರವರ  ನೇತೃತ್ವದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಬಿಸಿ ಮಂಜುನಾಥ ಮತ್ತು ಠಾಣೆಯ ಸಿಬ್ಬಂದಿಯವರುಗಳಾದ ಮಹಿಳಾ ಎ ಎಸ್ ಐ ಮಂಗಳಗೌರಮ್ಮ, . ಹೆಚ್ ಸಿ 332  ರಾಮಾಂಜಿನಯ್ಯ, ಪಿಸಿ 465 ಸೋಮನಾಥ. ಪಿಸಿ 913 ರಂಗನಾಥ. ಪಿಸಿ 130 ಸಿದ್ದಲಿಂಗಪ್ರಸನ್ನ. ಮಪಿಸಿ 45 ತ್ರಿವೇಣಿ ರವರುಗಳು ಪತ್ತೆಗೆ ಶ್ರಮಿಸಿರುತ್ತಾರೆ.

ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ ಸಾಹೇಬರವರು ಅಭಿನಂದಿಸಿರುತ್ತಾರೆ,

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 26 guests online
Content View Hits : 243256