lowborn ಅಪರಾಧ ಘಟನೆಗಳು 02-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 02-02-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 21/2018, ಕಲಂ: 323,354(A),498A,504,506ಐಪಿಸಿ ರೆ/ವಿ 3 & 4    ಡಿಪಿ ಆಕ್ಟ್

ದಿನಾಂಕ: 01-02-2018 ರಂದು ರಾತ್ರಿ 07-10 ಗಂಟೆಗೆ ಶ್ರೀಮತಿ ವಿನುತಾ ಕೋಂ ಪ್ರದೀಪ್ ಕುಮಾರ್, ಸುಮಾರು  20 ವರ್ಷ, ವಕ್ಕಲಿಗರು, ಬ್ಯಾಡಗೆರೆ, ಅಮೃತೂರು ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಯು ಈಗ್ಗೆ 01 ವರ್ಷದ ಹಿಂದೆ ಬ್ಯಾಡಗೆರೆಯ ನಂಜೇಗೌಡ ಮತ್ತು ನಿಂಗರಾಜಮ್ಮ ರವರ ಮಗನಾದ ಪ್ರದೀಪ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ಮದುವೆಯಾಗಿ 03 ತಿಂಗಳು ಅನೂನ್ಯವಾಗಿದ್ದರು. ನಂತರ ಪಿರ್ಯಾದಿಯ ಗಂಡ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಿರ್ಯಾದಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಆಗ ಪಿರ್ಯಾದಿಯ ತಂದೆತಾಯಿ ಸುಮಾರು 02 ಲಕ್ಷ ರೂ ಹಣವನ್ನು ಮತ್ತು 100 ಗ್ರಾ ಚಿನ್ನವನ್ನು ಕೊಟ್ಟರು. ಆದರೂ ಸಹ ಪಿರ್ಯಾದಿಯ ಗಂಡ ಪಿರ್ಯಾದಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದಲ್ಲದೆ ಪಿರ್ಯಾದಿಯ ಮೈದುನ ಪ್ರವೀಣ್ ಕುಮಾರ್ ಪಿರ್ಯಾದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಕೆಟ್ಟ ಪದಗಳಿಂದ ಮಾತನಾಡುತ್ತಾ,  ತನ್ನ ಜೊತೆ ಲೈಂಗಿಕತೆ ನಡೆಸುವಂತೆ ಪಿರ್ಯಾದಿಗೆ ಕಿರುಕುಳ ನೀಡುತ್ತಿದ್ದರು. ಹಾಗೂ “ನನ್ನ ಜೊತೆ ಲೈಂಗಿಕತೆಗೆ ಸಹಕರಿಸಿದರೆ  ನೀನು ನಮ್ಮ ಮನೆಯಲ್ಲಿ ಚೆನ್ನಾಗಿ ಇರುತ್ತೀಯಾ, ಇಲ್ಲದಿದ್ದರೆ ನಿನ್ನನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇನೆ” ಎಂತ ಜೀವ ಬೆದರಿಕೆಯನ್ನು ಹಾಕಿರುತ್ತಾನೆ. ಇವರುಗಳ ಕಿರುಕುಳ ತಾಳಲಾರದೇ ಪಿರ್ಯಾದಿಯು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪಿರ್ಯಾದಿಯ ಗಂಡ, ಅತ್ತೆ, ಮಾವ, ಹಾಗೂ ಮೈದುನನನ್ನು ಕರೆಸಿ ಇನ್ನು ಮುಂದೆ ಯಾವುದೇ ಕಿರುಕುಳ ನೀಡದೇ ಅನೂನ್ಯವಾಗಿ ನೋಡಿಕೊಳ್ಳುವಂತೆ ಹೇಳಿ ಕಳುಹಿಸಿದರು. ಆದರೆ ಪಿರ್ಯಾದಿಯ ಗಂಡ, ಅತ್ತೆ, ಮಾವ, ಹಾಗೂ ಮೈದುನರಿಂದ ಕಿರುಕುಳ ಮುಂದುವರೆದಿದ್ದು, ಆಗ ಪಿರ್ಯಾದಿ ಅವರ ತವರು ಮನೆಗೆ ಬಂದಿದ್ದು ಪೊಲೀಸರ ಆದೇಶದ ಮೇರೆಗೆ ಪಿರ್ಯಾದಿಯು ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿದ್ದು ಅಲ್ಲಿ ಪಿರ್ಯಾದಿಯ ಗಂಡ ಪಿರ್ಯಾದಿಯೊಂದಿಗೆ ಅನೂನ್ಯವಾಗಿ ಸಂಸಾರ ಮಾಡುತ್ತೇನೆಂತ ಒಪ್ಪಿಕೊಂಡು ಹೊರಗಡೆ ಬಂದಾಗ ಪಿರ್ಯಾದಿಯನ್ನು ಬಿಟ್ಟು ಹೊರಟು ಹೋಗಿರುತ್ತಾನೆ. ಪಿರ್ಯಾದಿಯು ತನ್ನ ತಾಯಿಯ ಜೊತೆ ಅವರ ಊರಿಗೆ ಹೋಗುವಾಗ ಪಿರ್ಯಾದಿಯ ಗಂಡ ಮತ್ತು ಮೈದುನ ಹಿಂಬಾಲಿಸಿಕೊಂಡು ಬಂದು ಪಿರ್ಯಾದಿಗೆ ಮತ್ತು ಅವರ ತಾಯಿಗೆ ಹಲ್ಲೆ ಮಾಡಿರುತ್ತಾರೆ. ಆಗ ಪಿರ್ಯಾದಿ ಮತ್ತು ಅವರ ತಾಯಿ ಕೂಗಿಕೊಂಡಾಗ ಅಲ್ಲಿಂದ ಓಡಿ ಹೋಗಿರುತ್ತಾರೆ. ಪಿರ್ಯಾದಿಯ ಗಂಡ ವರದಕ್ಷಿಣೆ ಕಿರುಕುಳ, ಪಿರ್ಯಾದಿಯ ಅತ್ತೆ ಮಾವ ಮಾನಸಿಕ ಕಿರುಕುಳ, ಪಿರ್ಯಾದಿಯ ಮೈದುನ ಲೈಂಗಿಕ ಕಿರುಕುಳ ನೀಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 11/2017  -  ಕಲಂ 279-337 ಐಪಿಸಿ

ಧಿನಾಂಕ:01/02/2018 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿ ಡಿ ಭೂತರಾಜು ಬಿನ್‌ ಲೇಟ್‌ ದೊಡ್ಡರಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿ:23/01/2018 ರಂದು ಬಡವನಹಳ್ಳಿಯಲ್ಲಿ ಕಟ್ಟಿರುವ ನಮ್ಮ ಹೊಸಮನೆಯ ಗೃಹ ಪ್ರವೇಶ ಕಾರ್ಯಕ್ಕೆ ನಾನು  ನನ್ನ ಬಾಬ್ತು ಕೆಎ-64-ಹೆಚ್‌-8446 ಬೈಕ್‌‌ ನಲ್ಲಿ  ಹಿಂದೆ ನನ್ನ  ಅಣ್ಣ  ಹೆಚ್‌ ಡಿ ಗೋವಿಂದರಾಜು ರವರನ್ನು ಕೂರಿಸಿಕೊಂಡು ಬಡವನಹಳ್ಳಿಗೆ ಬರಲು ಜಕ್ಕೇನಹಳ್ಳಿ ಸಮೀಪ ಹೈಸ್ಕೂಲ್‌ ಮುಂಭಾಗ ರಾತ್ರಿ 8-00 ಗಂಟೆ ಸಮಯದಲ್ಲಿ  ರಸ್ತೆಯ ಎಡಬದಿಯಲ್ಲಿ  ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಬಡವನಹಳ್ಳಿ ಕಡೆಯಿಂದ ಜಕ್ಕೇನಹಳ್ಳಿ ವಾಸಿ ರಾಜಶೇಖರ್‌ ಎಂಬುವರು  ಬಜಾಜ್‌ ಡಿಸ್ಕವರಿ ಬೈಕ್‌ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಬೈಕ್‌ ಗೆ ಡಿಕ್ಕಿ ಹೊಡೆಸಿದ್ದರಿಂದ ನಾನು ನನ್ನ ಅಣ್ಣ ಬೈಕ್‌ ಸಮೇತ ರಸ್ತೆ ಎಡಬದಿಯಲ್ಲಿ  ಬಿದ್ದೆವು. ನನಗೆ ಬಲಗೈ ಬಲಗಾಲಿಗೆ  ಪೆಟ್ಟುಗಳಾದವು. ನನ್ನ ಅಣ್ನನಿಗೆ ಬಲಗಾಲಿಗೆ ಬಲವಾದ ಪೆಟ್ಟು ಬಿದ್ದಿರುತ್ತೆ. ನಮಗೆ ಅಪಘಾತ  ಪಡಿಸಿದ ರಾಜಶೇಖರನಿಗೂ ಸಹ ಪೆಟ್ಟು ಬಿದ್ದಿರುತ್ತೆ. ತಕ್ಷಣ ನಮ್ಮನ್ನು ಅಲ್ಲೇ ಇದ್ದ ಸಾರ್ವಜನಿಕರು ಆಂಬ್ಯುಲೆನ್ಸ್‌‌ ನಲ್ಲಿ  ಆಸ್ಪತ್ರೆಗೆ ಕಳುಹಿಸಿದರು. ನಾನು ದೊಡ್ಡೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ನನ್ನ ಅಣ್ಣ ಗೋವಿಂದರಾಜು ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ನಾನು ಮತ್ತು ನನ್ನ ಅಣ್ಣು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇವೆ. ನನಗೆ ಸ್ವಲ್ಪಗಾಯಗಳಾಗಿದ್ದು, ನನ್ನ ಅಣ್ಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ , ಈ ದಿನ ತಡವಾಗಿ ಬಂದು  ನೊಂದಣಿ ಸಂಖ್ಯೆ ಇಲ್ಲದ ಬಜಾಜ್‌ ಡಿಸ್ಕವರಿ ಬೈಕ್‌ ಚಾಲಕ  ರಾಜಶೇಖರ್‌ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ. ‌

ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ 15/2018 U/S 379 IPC

ದಿನಾಂಕ:-01/02/2018 ರಂದು  ಬೆಳಿಗ್ಗೆ 11-30 ಗಂಟೆಗೆ  ಪಿರ್ಯಾದಿ  ವಿನಯ್ ಬಿನ್ ಗಂಗಸಿದ್ದಯ್ಯ, ವಾಸ :- ಸಿದ್ದೇಶ್ವರ ಸ್ವಾಮಿ ನಿಲಯ, ಮಹಾಲಿಂಗೇಶ್ವರ ದೇವಸ್ಥಾನದ  ರಸ್ತೆ, ಉಪ್ಪಾರಹಳ್ಳಿ , ತುಮಕೂರು ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಪಿರ್ಯಾದಿ ಸ್ನೇಹಿತನಾದ ಅಸಲೀಪುರ ವಾಸಿ ರುದ್ರೇಶ್ ರವರ ಹತ್ತಿರ KA 06 EZ 1947, ನೇ ನಂಬರಿನ 2017 ನೇ ಮಾಡೆಲ್ ನ  ಹೋಂಡಾ ಆಕ್ಟಿವಾ 4ಜಿ  ವಾಹನವಿದ್ದು ಈ ವಾಹನವನ್ನ ಪಿರ್ಯಾದಿ  ಮತ್ತು ರುದ್ರೇಶ್ ಇಬ್ಬರು ಉಪಯೋಗಿಸಿಕೊಂಡಿದ್ದು  ದಿನಾಂಕ:- 27/01/2018 ರಂದು ರಾತ್ರಿ ಸುಮಾರು 12-00 ಗಂಟೆಗೆ ಪ್ರೋಗ್ರಾಂ ಮುಗಿಸಿಕೊಂಡು ಮೇಲ್ಕಂಡ ವಾಹನವನ್ನು ಪಿರ್ಯಾದಿ ರೂಂ ಮುಂಭಾಗ ರಸ್ತೆಯಲ್ಲಿ ನಿಲ್ಲಿಸಿ ಮಲಗಿಕೊಂಡಿದ್ದು  ಬೆಳಿಗ್ಗೆ ಸುಮಾರು 08-00 ಗಂಟೆಗೆ ಎದ್ದು ಹೊರಗೆ ಬಂದು ನೋಡಲಾಗಿ ಮೇಲ್ಕಂಡ ವಾಹನವು ನಾಪತ್ತೆಯಾಗಿದ್ದು  ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 38 guests online
Content View Hits : 243266