lowborn ಅಪರಾಧ ಘಟನೆಗಳು 03-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 03-02-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 24/2018 ಕಲಂ 279,337 ಐಪಿಸಿ

ದಿನಾಂಕ:02-02-2018 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿಯಾದ ಗಂಗೇಶ್‌ ಬಿನ್ ಕರಿಯಣ್ಣ, 20 ವರ್ಷ, ಒಕ್ಕಲಿಗರು, ಬ್ಯಾಂಕ್‌ ಉದ್ಯೋಗಿ, ಸೈಕಲ್‌ ಸ್ಟಾಂಡ್‌ ಫ್ಯಾಕ್ಟರಿ ಹತ್ತಿರ, 5 ನೇ ಕ್ರಾಸ್‌, ಉಪ್ಪಾರ ಹಳ್ಳಿ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂಧರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ: 25-01-2018 ರಂದು ನನ್ನ ದೊಡ್ಡಪ್ಪ ವೆಂಕಟೇಗೌಡ ರವರು ತಮ್ಮ ಬಾಬ್ತು ಕೆಎ-06-ಇ.ಇ-8480 ನೇ ದ್ವಿಚಕ್ರ ವಾಹನದಲ್ಲಿ ನನ್ನ ದೊಡ್ಡಮ್ಮ ಆರ್‌,ಕಮಲ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ತುಮಕೂರಿನಿಂದ ರಾಮನಗರಕ್ಕೆ ದೇವಸ್ಥಾನಕ್ಕೆಂದು ಹೋಗಿದ್ದು, ನಂತರ ಅದೇ ದಿವಸ ವಾಪಸ್‌ ರಾಮನಗರದಿಂದ ತುಮಕೂರಿಗೆ ವಾಪಸ್ ಬರಲೆಂದು ರಾತ್ರಿ ಸುಮಾರು 07-45 ಗಂಟೆ ಸಮಯದಲ್ಲಿ ಬಳ್ಳಗೆರೆ ಗ್ರಾಮದಲ್ಲಿನ ತುಮಕೂರು-ಕುಣಿಗಲ್‌ ಟಾರ್ ರಸ್ತೆಯಲ್ಲಿರುವ ಹಂಪ್‌ನ ಬಳಿ ವೆಂಕಟೇಗೌಡ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಹಂಪ್‌ ಅನ್ನು ಹಾರಿಸಿದ್ದರಿಂದ ದ್ವಿಚಕ್ರ ವಾಹನದ ಸಮೇತ ದೊಡ್ಡಮ್ಮ ಆರ್,ಕಮಲ ಹಾಗೂ ದೊಡ್ಡಪ್ಪ ವೆಂಕಟೇಗೌಡ ರವರು ಬಿದ್ದಿದ್ದು, ಆರ್,ಕಮಲ ರವರಿಗೆ ಎರಡೂ ಕಾಲುಗಳಿಗೆ ಏಟು ಬಿದ್ದಿರುತ್ತೆ. ವೆಂಕಟೇಗೌಡ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತೆ. ಸದರಿ ಅಪಘಾತದ ವಿಚಾರವನ್ನು ತುಮಕೂರಿನ ವಾಸಿಯಾದ ಧನುಷ್ ಬಿನ್ ಈಶ್ವರಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದರು. ನಂತರ ನಾನು ತಕ್ಷಣ ತುಮಕೂರಿನಿಂದ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ಗಾಯಗೊಂಡಿದ್ದ ಆರ್‌,ಕಮಲ ಹಾಗೂ ವೆಂಕಟೇಗೌಡ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ನಲ್ಲಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆರ್,ಕಮಲ ರವರನ್ನು ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದೆವು. ವೆಂಕಟೇಗೌಡ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಯಾವುದೇ ಚಿಕಿತ್ಸೆಯನ್ನು ಪಡೆಯಲಿಲ್ಲ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಪಘಾತಕ್ಕೀಡಾದ ದ್ವಿಚಕ್ರ ವಾಹನವು ಬಳ್ಳಗೆರೆ ಗ್ರಾಮದ ರಾಜಶೇಖರ್‌ ರವರ ಮನೆಯ ಬಳಿ ಇರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಚೇಳೂರು   ಪೊಲೀಸ್  ಠಾಣಾ  ಮೊ. ನಂ 28/2018 ಕಲಮ 279.304( ಎ) ಐ.ಪಿ.ಸಿ

ದಿನಾಂಕ;02/02/2018  ರಂದು   ಪಿರ್ಯಾದಿ ದೊಡ್ಡಸಿದ್ದಯ್ಯನವರು   ಠಾಣೆಗೆ ಹಾಜರಾಗಿ  ನೀಡಿದ ಪಿರ್ಯಾದು ಅಮಶವೇನಂದರೆ,  ದಿನಾಂಕ; 01/02/2018  ರಂದು  ನಾನು  ಅಪ್ಪಣ್ಣನ ಹಳ್ಳಿ  ಗ್ರಾಮದ  ಬಸ್  ನಿಲ್ದಾಣದ  ಹತ್ತಿರ   ರಾತ್ರಿ 9-00  ಗಂಟೆ   ಸಮಯದಲ್ಲಿ  ನಿಂತಿದ್ದಾಗ,  ಅದೇ  ಸಮಯಕ್ಕೆ   ನಿಟ್ಟೂರು  ಕಡೆಯಿಂದ  ಕೆಎ-06- ಎಫ್ 816 ನೇ  ಕೆ.ಎಸ್.ಆರ್.ಟಿ.ಸಿ  ಬಸ್  ಬಂದು,  ಪ್ರಯಾಣಿಕರನ್ನು  ಇಳಿಸಿದ್ದು, ಅದರಲ್ಲಿ  ನನ್ನ  ತಮ್ಮ ನಾದ  ಸಿದ್ದರಾಮಯ್ಯ  ಸುಮಾರು  ವಯಸ್ಸು 45  ವರ್ಷ  ರವರು   ಸಹ  ಬಸ್ಸಿನಿಂದ  ಇಳಿದು    ನಮ್ಮ ಮನೆಯ  ಕಡೆಗೆ  ಅಪ್ಪಣ್ಣನಹಳ್ಳಿ  -  ಕೈಮರ  ರಸ್ತೆಯ ಎಡ  ಬದಿಯಲ್ಲಿ  ಅಂದರೆ ಹೊನ್ನಪ್ಪ ಮತ್ತು ಮುದ್ದುರಾಜು  ರವರ  ಮನೆಯ  ನೇರದಲ್ಲಿ    ನಡೆದುಕೊಂಡು  ಹೋಗುತ್ತಿರುವಾಗ್ಗೆ,  ಅದೇ  ಕೆಎ-06- ಎಫ್ 816  ಕೆ .ಎಸ್.ಆರ್.ಟಿ.ಸಿ  ಬಸ್ ಅನ್ನು ಅದರ    ಚಾಲಕ  ಅತೀವೇಗ  ಮತ್ತು  ಅಜಾಗರೂ  ಕತೆಯಿಂದ  ಚಾಲನೆ  ಮಾಡಿಕೊಂಡು  ಹೋಗಿ  ರಸ್ತೆಯ  ಎಡ  ಬದಿಯಲ್ಲಿ  ಹೋಗುತ್ತಿದ್ದ  ನನ್ನ  ತಮ್ಮನಿಗೆ ಹಿಂದಿನಿಂದ  ಡಿಕ್ಕಿ  ಓಡೆದು  ಅಪಘಾತ  ಪಡಿಸಿದನು.  ಆಗ ನಾನು  ಮತ್ತು  ಅಲ್ಲಿಯೇ  ಇದ್ದ  ನಮ್ಮ  ಗ್ರಾಮದ  ಮೋಹನ್  ಕುಮಾರ್  ಬಿನ್  ಸಿದ್ದರಾಮಯ್ಯ, ಮತ್ತು ಶಿವಣ್ಣ  ಬಿನ್  ಲೇ  ಸಿದ್ದರಾಮಯ್ಯ, ಹಾಗೂ ಶೇಖರ್  ಬಿನ್  ರಾಮಯ್ಯ  ಇತರರು  ಓಡಿ  ಹೋಗಿ  ನೋಡಲಾಗಿ  ನನ್ನ ತಮ್ಮನ  ತಲೆಗೆ , ಮತ್ತು  ಮೈ ಕೈಗೆ  ರಕ್ತಗಾಯಗಳಾಗಿ  ಮೂಗಿನಿಂದ,   ಕಿವಿಯಿಂದ, ಹಾಗೂ  ಬಾಯಿಯಿಂದ  ರಕ್ತ  ಬಂದು  ಸ್ಥಳದಲ್ಲಿಯೇ  ಮೃತಪಟ್ಟನು.   ಅಪಘಾತಪಡಿಸಿದ   ಬಸ್ ಅನ್ನು  ಅದರ  ಚಾಲಕ  ಅಪಘಾತವಾದ  ಸ್ಥಳದಲ್ಲಿಯೇ    ನಿಲ್ಲಿಸಿದನು. ನಂತರ    ಸ್ಥಳಕ್ಕೆ  ಬಂದ ಪೊಲೀಸರು, ಮೃತ ದೇಹವನ್ನು  ಗುಬ್ಬಿ  ಸರ್ಕಾರಿ  ಆಸ್ಪತ್ರೆಯ  ಶವಾಗಾರಕ್ಕೆ  ಕಳುಹಿಸಿಕೊಟ್ಟರು.   ಈ  ವಿಚಾರವನ್ನು  ನನ್ನ ತಮ್ಮನ  ಹೆಂಡತಿ,  ಮಕ್ಕಳಿಗೆ  ಹಾಗೂ  ಸಂಬಂದಿಕರಿಗೆ  ತಿಳಿಸಿ  ಈ  ದಿನ  ತಡವಾಗಿ  ಬಂದು   ದೂರು  ನೀಡಿರುತ್ತೇನೆ.  ಆದ್ದರಿಂದ   ಅಪಘಾತಪಡಿಸಿದ  ಕೆಎ-06- ಎಫ್ 816  ಕೆ.ಎಸ್.ಆರ್.ಟಿ.ಸಿ  ಬಸ್     ಚಾಲಕನ    ಮೇಲೆ  ಕಾನೂನು  ಕ್ರಮ ಜರುಗಿಸಲು  ಕೋರಿರುತ್ತೇನೆ. ಬಸ್ ಚಾಲಕನ ಹೆಸರು  ನನಗೆ  ತಿಳಿದಿರುವುದಿಲ್ಲ.  ಇತ್ಯಾದಿಯಾದ  ಪಿರ್ಯಾದು ಅಂಶ.

ಚೇಳೂರು   ಪೊಲೀಸ್  ಠಾಣಾ  ಯು.ಡಿ.ಆರ್ ನಂ 05/2018 ಕಲಂ 174  ಸಿ.ಆರ್. ಪಿ.ಸಿ

ದಿನಾಂಕ02/02/2018  ರಂದು  ಮದ್ಯಾಹ್ನ 1-30 ಗಂಟೆಗೆ  ಪಿರ್ಯಾದಿ   ಸಣ್ಣಕರಿಯಪ್ಪ ನವರು   ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು  ಅಂಶವೇನಂದರೆ,   ನನಗೆ  ರಂಗಸ್ವಾಮಯ್ಯ  ಎಂಬ  ಸುಮಾರು 45 ವರ್ಷದ  ಗಂಡು  ಮಗ  ಇರುತ್ತಾನೆ  ಸುಮಾರು 25 ವರ್ಷಗಳಿಂದ  ಹಿಂದೆ  ಮದುವೆ  ಮಾಡಿದ್ದು,  ಇವರಿಗೆ  ಒಂದು  ಹೆಣ್ಣು  ಮಗು  ಮತ್ತು  ಗಂಡು  ಮಗು  ಇರುತ್ತಾರೆ.  ಈತನು  ಹೆಂಡತಿ  ಮಕ್ಕಳೊಂದಿಗೆ  ಬೆಂಗಳೂರಿನಲ್ಲಿ  ವಾಸವಾಗಿದ್ದನು.  ಈಗ್ಗೆ  ಸುಮಾರು 02  ತಿಂಗಳ  ಹಿಂದೆ  ಖಾಯಿಲೆಯಿಂದ  ನರಳಿ  ಮನೋರೋಗಿಯಾಗಿದ್ದನು.  ಈತನು  ಗುಡ್ಡೇನಹಳ್ಳಿಗೆ  ಬಂದು  ನನ್ನ  ಗುಡಿಸಲಿನಲ್ಲಿ  ವಾಸವಾಗಿದ್ದನು.  ಇವನು    ಯಾವಾಗಲೂ  ಮಲಗಿರುತ್ತಿದ್ದ  ನಾನು  ಅಡುಗೆ  ಮಾಡಿ  ಊಟ  ಹಾಕುತ್ತಿದ್ದೆನು.  ಈ  ಮದ್ಯೆ   ಆತನ  ಹೆಂಡತಿಯಾದ  ಸುಲೋಚನಮ್ಮ   ಬೆಂಗಳೂರಿನಿಂದ  ಬಂದು  ಇತನನ್ನು ನೊಡಿಕೊಂಡು  ಹೋಗಿದ್ದರು.  ಆಸ್ಪತ್ರೆಗಳಲ್ಲಿ  ಚಿಕಿತ್ಸೆ  ಕೊಡಿಸಿದ್ದರು.  ಗುಣ  ಮುಖನಾಗಿರಲಿಲ್ಲ.  ದಿನಾಂಕ 02/02/2018  ರಂದು  ಬೆಳಗ್ಗೆ ಊಟ ಮಾಡಿಕೊಟ್ಟು  ನನ್ನ  ಮಗನಿಗೆ  ಕಾಲುಗಳಲ್ಲಿ  ಗಾಯಗಳಾಗಿದ್ದರಿಂದ  ಹಾಗಲವಾಡಿಗೆ  ಜೌಷಧಿ  ತರಲು  ಬೆಳಗ್ಗೆ 11-00  ಗಂಟೆಗೆ  ಹೋದೆನು.   ಆತನಿಗೆ  ಜೌಷದಿ  ತೆಗೆದುಕೊಂಡು    ವಾಪಸ್ಸು  ಸುಮಾರು  01-00  ಗಂಟೆ  ಸಮಯಕ್ಕೆ  ಬಸ್ಸಿನಲ್ಲಿ  ಇಳಿದಾಗ  ನನ್ನ  ಗುಡಿಸಲು  ಮನೆ  ಹತ್ತಿಕೊಂಡು  ಉರಿಯುತಿದ್ದು,  ಊರಿನ  ಜನರು  ಬೆಂಕಿ  ಹಾರಿಸುತ್ತಿದ್ದರು.  ಗುಡಿಸಲಿನಲ್ಲಿ  ಮಲಗಿದ್ದ  ನನ್ನ  ಮಗ  ರಂಗಸ್ವಾಮಯ್ಯ  ಬೆಂಕಿ  ಜ್ವಾಲೆಯಿಂದ  ಸುಟ್ಟು  ಹೋಗಿರುತ್ತಾನೆ.  ತಲೆ  ಮತ್ತು   ಎದೆಯ  ಭಾಗ  ಕಾಣುತ್ತಿರುತ್ತೆ.  ಉಳಿದ  ಎಲ್ಲಾ  ಭಾಗಗಳು  ಸಂಪೂರ್ಣವಾಗಿ  ಸುಟ್ಟು  ಮೃತಪಟ್ಟಿರುತ್ತಾನೆ.  ಈತನು  ಗುಡಿಸಲಿನಲ್ಲಿ  ಮಲಗಿದ್ದಾಗ  ಒಲೆಯ ಕೆಂಡ ಹಾರಿ  ಆಕಸ್ಮಿಕವಾಗಿ  ಗುಡಿಸಲು  ಹತ್ತಿಕೊಂಡು  ಖಾಯಿಲೆ  ಇದ್ದ  ನನ್ನ  ಮಗ  ಮೇಲೆ  ಎದ್ದು  ಹೊರಗೆ  ಬರಲಾಗದೇ  ಬೆಂಕಿ  ಜ್ವಾಲೆಗೆ  ಸುಟ್ಟು   ಮೃತಪಟ್ಟಿರುತ್ತಾನೆ.   ಈತನ  ಸಾವಿಗೆ  ಯಾರೂ  ಕಾರಣರಲ್ಲಿ   ಮತ್ತು  ಮನೆಯ  ಗುಡಿಸಲಿನಲ್ಲಿ  ಇದ್ದ  ಬಟ್ಟೆ  ಬರೆ  ದಿನಸಿ   ಸಾಮಗ್ರಿಗಳು   ನನ್ನ  ಹೆಂಡತಿ  ಮೃತಪಟ್ಟಿದ್ದು,  ಆಕೆಯ  ಮಾಂಗಲ್ಯ  ಓಲೆ  02  ಚಿನ್ನದ  ಗುಂಡುಗಳು  02  ಬೇಸರಿ (  ಮೂಗುತ್ತಿ)  ಈ  ಚಿನ್ನದ  ವಡವೆಗಳು  ಸುಟ್ಟು  ಹೋಗಿರುತ್ತವೆ.  ದಿನಸಿ  ಪದಾರ್ಥಗಳು  ವಡವೆಗಳು  ಎಲ್ಲಾ  ಸೇರಿ  ಸುಮಾರು   25.000 ರೂ   ನಷ್ಟ ಟಾಗಿರುತ್ತೆ.  ಆದ್ದರಿಂದ  ಮುಂದಿನ  ಕ್ರಮ  ಜರುಗಿಸಿಕೊಡಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ಸಿ.ಎಸ್.ಪುರ ಠಾಣಾ ಮೊ.ನಂ:15/2018. ಕಲಂ:279. 304(ಎ) ಹಾಗೂ 134 (ಎ&ಬಿ) 187  ಐ.ಎಂ.ವಿ ಆಕ್ಟ್  ಐಪಿಸಿ

ದಿನಾಂಕ:02.02.2018 ರಂಧು ಈ ಕೇಸಿನ ಫಿರ್ಯಾದಿಯಾದ ದೇವರಾಜ್ ಕಾಳೆ ಬಿನ್ ಶಂಭೋಜಿ ರಾವ್, 56 ವರ್ಷ, ಮರಾಠಿಗರು, ಮರಾಠಿ ಪಾಳ್ಯ, ಗುಬ್ಬಿ  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆಂದರೆ,  ದಿನಾಂಕ:27.01.2018  ರಂಧು ರಾತ್ರಿ ಸುಮಾರು 9.30 ರ ಸುಮಾರಿಗೆ ಗಿರೀಶ್  ಬಿನ್  ಲೇಟ್ ಗಂಗಣ್ಣ, ನೇರಳೆ ಕಟ್ಟೆ ಪಾಳ್ಯ , ಕುಮಾರ್ ಬಿನ್ ನಂಜಪ್ಪ, ಕೋಡಿಹಳ್ಳಿ ಇವರು ನನ್ನ  ಮೊಬೈಲ್ ಗೆ ಕರೆ ಮಾಡಿ ನಿನ್ನ ತಮ್ಮನಾದ ಯಶವಂತ ಕುಮಾರ್ ಕೆ.ಜಿ ಟೆಂಪಲ್ ಕಡೆಯಿಂದ ಕೆ.ಎ-06-ಎಕ್ಸ್-4962 ನೇ ಸ್ಪ್ಲೆಂಡರ್  ಪ್ಲಸ್ ದ್ವಿ ಚಕ್ರವಾಹನದಲ್ಲಿ ಮರಾಠಿ ಪಾಳ್ಯ ಗೇಟ್ ಹತ್ತಿರ ಮರಾಠಿ ಪಾಳ್ಯಕ್ಕೆ ಹೋಗಲು ಬಲಭಾಗದ ಇಂಡಿಕೇಟರ್  ಹಾಕಿಕೊಂಡು  ಬಲಕ್ಕೆ ತಿರುಗಿಸಿಕೊಳ್ಳುತ್ತಿದ್ದಾಗ,  ಅದೇ ಸಮಯಕ್ಕೆ ಕೆ.ಜಿ ಟೆಂಪಲ್ ಕಡೆಯಿಂದ ಗುಬ್ಬಿ ಕಡೆಗೆ ಹೋಗಲು ಒಂದು ಟಿ.ವಿ .ಎಸ್ ಅಪಾಚಿ ವಾಹನವನ್ನು ಅದರ ಚಾಲಕ ವಾಹನವನ್ನು  ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು  ಬಂದು ರಸ್ತೆಯ ಎಡಭಾಗಕ್ಕೆ ತಿರುಗಿಸಿಕೊಳ್ಳುತಿದ್ದ ನಿನ್ನ ತಮ್ಮನ ಕೆ.ಎ-06ಎಕ್ಸ್-4962 ನೇ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವಾಹನಕ್ಕೆ  ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ   ಎಂಧು ತಿಳಿಸಿದರು, ನಂತರ  ನಾನು & ನನ್ನ ತಮ್ಮ ಮಧು ಅಪಘಾತದ ಸ್ಥಳಕ್ಕೆ  ಹೋಗಿ  ನೋಡಲಾಗಿ ಯಶವಂತ ಕುಮಾರನಿಗೆ  ತಲೆಗೆ, ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ನಂತರ ಅಲ್ಲಿಯೇ  ಬಿದ್ದಿದ್ದ  ಟಿ.ವಿ.ಎಸ್. ಅಪಾಚಿ ದ್ವಿ ಚಕ್ರವಾಹನದ ನಂಬರ್ ನೋಡಲಾಗಿ ಕೆ.ಎ-06-ಇಜೆಡ್-3768 ಆಗಿದ್ದು, ನಂತರ ನಾನು & ಮಧು ಯಾವುದೋ  ಒಂದು ಆಟೋದಲ್ಲಿ ಗಾಯಾಳುವನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿನ  ವೈದ್ಯರ ಸಲಹೆ ಮೇರೆಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ  ಸೇರಿಸಿ, ನಂತರ ಅದೇ ದಿನ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ನಾನು & ಮಧು ಅಲ್ಲಿಯೇ  ಇದ್ದು, ಗಾಯಾಳುವಿನ ಆಗುಹೋಗುಗಳನ್ನು ನೋಡಿಕೊಂಡು ಇದ್ದೆವು, ದಿನಾಂಕ:02.02.2018 ರಂಧು ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಯಶವಂತ ಕುಮಾರನಿಗೆ ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿರುತ್ತಾರೆ. ನಾನು & ಮಧು ಅವರ ಆಗುಹೋಗುಗಳನ್ನು ನೋಡಿಕೊಂಡಿದ್ದು, ಇದಕ್ಕೂ ಮುಂಚೆ ದೂರು ನೀಡಲು ಸಾಧ್ಯವಾಗಿರುವುದಿಲ್ಲಾ. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ನಂತರ ವಿಚಾರ ತಿಳಿಯಲಾಗಿ  ಕೆ.ಎ-06ಇಜೆಡ್-3768 ಟಿವಿಎಸ್ ಅಪಾಚಿ ವಾಹನದ ಚಾಲಕ ಅರುಣ್ ಕುಮಾರ್ ಸಿ.ಆರ್  ಬಿನ್ ರಾಜಣ್ಣ,. ಚಿಂದಯ್ಯನ ಪಾಳ್ಯ ಎಂದು ತಿಳಿಯಿತು, ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ  ದಾಖಲಿಸಿರುತ್ತೆ.

ಚೇಳೂರು ಪೊಲೀಸ್ ಠಾಣಾ  ಮೊ.ನಂ.28/2018, ಕಲಂ 279,  304 (ಎ) ಐ.ಪಿ.ಸಿ

ದಿನಾಂಕ;02/02/2018  ರಂದು   ಪಿರ್ಯಾದಿ ದೊಡ್ಡಸಿದ್ದಯ್ಯನವರು   ಠಾಣೆಗೆ ಹಾಜರಾಗಿ  ನೀಡಿದ ಪಿರ್ಯಾದು ಅಮಶವೇನಂದರೆ,  ದಿನಾಂಕ; 01/02/2018  ರಂದು  ನಾನು  ಅಪ್ಪಣ್ಣನ ಹಳ್ಳಿ  ಗ್ರಾಮದ  ಬಸ್  ನಿಲ್ದಾಣದ  ಹತ್ತಿರ   ರಾತ್ರಿ 9-00  ಗಂಟೆ   ಸಮಯದಲ್ಲಿ  ನಿಂತಿದ್ದಾಗ,  ಅದೇ  ಸಮಯಕ್ಕೆ   ನಿಟ್ಟೂರು  ಕಡೆಯಿಂದ  ಕೆಎ-06- ಎಫ್ 816 ನೇ  ಕೆ.ಎಸ್.ಆರ್.ಟಿ.ಸಿ  ಬಸ್  ಬಂದು,  ಪ್ರಯಾಣಿಕರನ್ನು  ಇಳಿಸಿದ್ದು, ಅದರಲ್ಲಿ  ನನ್ನ  ತಮ್ಮ ನಾದ  ಸಿದ್ದರಾಮಯ್ಯ  ಸುಮಾರು  ವಯಸ್ಸು 45  ವರ್ಷ  ರವರು   ಸಹ  ಬಸ್ಸಿನಿಂದ  ಇಳಿದು    ನಮ್ಮ ಮನೆಯ  ಕಡೆಗೆ  ಅಪ್ಪಣ್ಣನಹಳ್ಳಿ  -  ಕೈಮರ  ರಸ್ತೆಯ ಎಡ  ಬದಿಯಲ್ಲಿ  ಅಂದರೆ ಹೊನ್ನಪ್ಪ ಮತ್ತು ಮುದ್ದುರಾಜು  ರವರ  ಮನೆಯ  ನೇರದಲ್ಲಿ    ನಡೆದುಕೊಂಡು  ಹೋಗುತ್ತಿರುವಾಗ್ಗೆ,  ಅದೇ  ಕೆಎ-06- ಎಫ್ 816  ಕೆ .ಎಸ್.ಆರ್.ಟಿ.ಸಿ  ಬಸ್ ಅನ್ನು ಅದರ    ಚಾಲಕ  ಅತೀವೇಗ  ಮತ್ತು  ಅಜಾಗರೂ  ಕತೆಯಿಂದ  ಚಾಲನೆ  ಮಾಡಿಕೊಂಡು  ಹೋಗಿ  ರಸ್ತೆಯ  ಎಡ  ಬದಿಯಲ್ಲಿ  ಹೋಗುತ್ತಿದ್ದ  ನನ್ನ  ತಮ್ಮನಿಗೆ ಹಿಂದಿನಿಂದ  ಡಿಕ್ಕಿ  ಓಡೆದು  ಅಪಘಾತ  ಪಡಿಸಿದನು.  ಆಗ ನಾನು  ಮತ್ತು  ಅಲ್ಲಿಯೇ  ಇದ್ದ  ನಮ್ಮ  ಗ್ರಾಮದ  ಮೋಹನ್  ಕುಮಾರ್  ಬಿನ್  ಸಿದ್ದರಾಮಯ್ಯ, ಮತ್ತು ಶಿವಣ್ಣ  ಬಿನ್  ಲೇ  ಸಿದ್ದರಾಮಯ್ಯ, ಹಾಗೂ ಶೇಖರ್  ಬಿನ್  ರಾಮಯ್ಯ  ಇತರರು  ಓಡಿ  ಹೋಗಿ  ನೋಡಲಾಗಿ  ನನ್ನ ತಮ್ಮನ  ತಲೆಗೆ , ಮತ್ತು  ಮೈ ಕೈಗೆ  ರಕ್ತಗಾಯಗಳಾಗಿ  ಮೂಗಿನಿಂದ,   ಕಿವಿಯಿಂದ, ಹಾಗೂ  ಬಾಯಿಯಿಂದ  ರಕ್ತ  ಬಂದು  ಸ್ಥಳದಲ್ಲಿಯೇ  ಮೃತಪಟ್ಟನು.   ಅಪಘಾತಪಡಿಸಿದ   ಬಸ್ ಅನ್ನು  ಅದರ  ಚಾಲಕ  ಅಪಘಾತವಾದ  ಸ್ಥಳದಲ್ಲಿಯೇ    ನಿಲ್ಲಿಸಿದನು. ನಂತರ    ಸ್ಥಳಕ್ಕೆ  ಬಂದ ಪೊಲೀಸರು, ಮೃತ ದೇಹವನ್ನು  ಗುಬ್ಬಿ  ಸರ್ಕಾರಿ  ಆಸ್ಪತ್ರೆಯ  ಶವಾಗಾರಕ್ಕೆ  ಕಳುಹಿಸಿಕೊಟ್ಟರು.   ಈ  ವಿಚಾರವನ್ನು  ನನ್ನ ತಮ್ಮನ  ಹೆಂಡತಿ,  ಮಕ್ಕಳಿಗೆ  ಹಾಗೂ  ಸಂಬಂದಿಕರಿಗೆ  ತಿಳಿಸಿ  ಈ  ದಿನ  ತಡವಾಗಿ  ಬಂದು   ದೂರು  ನೀಡಿರುತ್ತೇನೆ.  ಆದ್ದರಿಂದ   ಅಪಘಾತಪಡಿಸಿದ  ಕೆಎ-06- ಎಫ್ 816  ಕೆ.ಎಸ್.ಆರ್.ಟಿ.ಸಿ  ಬಸ್     ಚಾಲಕನ    ಮೇಲೆ  ಕಾನೂನು  ಕ್ರಮ ಜರುಗಿಸಲು  ಕೋರಿರುತ್ತೇನೆ. ಬಸ್ ಚಾಲಕನ ಹೆಸರು  ನನಗೆ  ತಿಳಿದಿರುವುದಿಲ್ಲ.  ಇತ್ಯಾದಿಯಾದ  ಪಿರ್ಯಾದು  ಮೇರೆಗೆ  ಪ್ರಕರಣ  ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 46 guests online
Content View Hits : 288230