lowborn ಅಪರಾಧ ಘಟನೆಗಳು 04-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 04-02-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.15/2018, ಕಲಂ:279,304(ಎ) ಐಪಿಸಿ ರೆ/ವಿ 134(ಎ&ಬಿ), 187 ಐ.ಎಂ.ವಿ.ಆಕ್ಟ್.

ದಿನಾಂಕ:03/02/2018 ರಂದು ರಾತ್ರಿ 09:30 ಗಂಟೆಗೆ ಶಿವಮ್ಮ ಕೋಂ ಚೆನ್ನರಾಯಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ಲಕ್ಲೀಹಟ್ಟಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು, ನನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ನಮ್ಮ ಬಾಬ್ತು ಸುಮಾರು 50 ಕುರಿಗಳು ಇರುತ್ತವೆ. ಸದರಿ ಕುರಿಗಳನ್ನು ನನ್ನ ಗಂಡ ಚೆನ್ನರಾಯಪ್ಪ, 46 ವರ್ಷ ರವರು ದಿನ ನಿತ್ಯ  ನಮ್ಮ ಜಮೀನಿನ ಬಳಿ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಸಂಜೆ ವಾಪಸ್ಸ್ ಮನೆಗೆ ಬರುತ್ತಿದ್ದರು. ನಮ್ಮ ಗ್ರಾಮದ ಚಿತ್ತಣ್ಣರವರು ಸಹ ಅವರ ಬಾಬ್ತು ಸುಮಾರು 50 ಕುರಿಗಳನ್ನು ನಮ್ಮ ಕುರಿಗಳ ಜೊತೆಯಲ್ಲಿಯೇ ಮೇಯಿಸಿಕೊಂಡು ಬರಲು ಅವರ ಮಗನಾದ ಶ್ರೀನಿವಾಸನನ್ನು ಕಳುಹಿಸುತ್ತಿದ್ದರು. ಎಂದಿನಂತೆ ಈ ದಿನ ಅಂದರೆ ದಿನಾಂಕ:03/02/2018 ರಂದು ಬೆಳಿಗ್ಗೆ ಸುಮಾರು 11:00 ಗಂಟೆಯ ಸಮಯಕ್ಕೆ ನನ್ನ ಗಂಡ ಚೆನ್ನರಾಯಪ್ಪ ಮತ್ತು ಚಿತ್ತಣ್ಣನವರ ಮಗ ಶ್ರೀನಿವಾಸ ಇಬ್ಬರು ಕುರಿಗಳನ್ನು ಮೇಯಿಸಲು ಹೋಗಿದ್ದರು. ನಂತರ  ಇದೇ ದಿನ ಸಂಜೆ ಸುಮಾರು 07:10 ಗಂಟೆಯ ಸಮಯಕ್ಕೆ ಶ್ರೀನಿವಾಸನು ನಮ್ಮ ಮನೆಗೆ ಪೋನ್ ಮಾಡಿ ನಾನು ಮತ್ತು ನಿಮ್ಮ ಗಂಡ ಚೆನ್ನರಾಯಪ್ಪ ಇಬ್ಬರು ನಿಮ್ಮ ಜಮೀನನ ಬಳಿ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸ್ ಮನೆಗೆ ಬರಲು ಇದೇ ದಿನ ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ನಲ್ಲೆಕಾಮನಹಳ್ಳಿ ಗ್ರಾಮದ ಹಳೆ ಮಾರಮ್ಮನ ದೇವಸ್ಥಾನದ ಹತ್ತಿರ ಮಧುಗಿರಿ-ಪಾವಗಡ ಮುಖ್ಯ ರಸ್ತೆಯ ಎಡ ಬದಿಯಲ್ಲಿ ಕುರಿಗಳನ್ನು ಹೊಡೆದುಕೊಂಡು ಬರುತ್ತಿರುವಾಗ್ಗೆ ನಮ್ಮ ಹಿಂದೆ ಅದೇ ರಸ್ತೆಯಲ್ಲಿ ಪಾವಗಡ ಕಡೆಯಿಂದ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತೀ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದ ನಿನ್ನ ಗಂಡ ಚೆನ್ನರಾಯಪ್ಪ ರವರಿಗೆ ಮತ್ತು ಕುರಿಗಳಿಗೆ ಡಿಕ್ಕಿ ಹೊಡೆಸಿದ್ದರಿಂದ ಸುಮಾರು 14 ಕುರಿಗಳು ಗಾಯಗೊಂಡು ಸ್ಥಳದಲ್ಲಿಯೇ ಸತ್ತು ಹೋಗಿರುತ್ತವೆ ಹಾಗೂ ನಿನ್ನ ಗಂಡ ಚೆನ್ನರಾಯಪ್ಪನ ಬಲ ಮೊಣಕಾಲಿಗೆ, ಮೈಕೈಗೆ, ತಲೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಮ್ಮ ಮುಂದೆ ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದ ನಮ್ಮ ಗ್ರಾಮದ ಕರಿಯಣ್ಣ ರವರು ಸಹ ನಮ್ಮ ಜೊತೆಯಲ್ಲಿರುತ್ತಾರೆ. ನಮಗೆ ಅಪಘಾತಪಡಿಸಿದ ಕಾರಿನ ನಂಬರನ್ನು ನೋಡಲಾಗಿ 04 Z 694 ಎಂತ ಅರ್ಧಂಬರ್ಧ ನಂಬರ್ ಕಂಡು ಬಂದಿದ್ದು, ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಮಿಡಿಗೇಶಿ ಕಡೆಗೆ ಹೊರಟು ಹೋದನು. ನೀವು ಬೇಗ ಬನ್ನಿ ಎಂತ ತಿಳಿಸಿದನು. ನಾನು ಕೂಡಲೇ ನನ್ನ ಮಗ ನಾಗೇಶನೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದಲ್ಲಿ ನನ್ನ ಗಂಡ ಚೆನ್ನರಾಯಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಹಾಗೂ ಸುಮಾರು 14 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದವು. ನಂತರ ನನ್ನ ಗಂಡ ಚೆನ್ನರಾಯಪ್ಪನ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ನಂತರ ಠಾಣೆಗೆ ಬಂದು ಈ ದಿನ ಸಂಜೆ ನನ್ನ ಗಂಡ ಚೆನ್ನರಾಯಪ್ಪನಿಗೆ ಅಪಘಾತಪಡಿಸಿ ಆವರ ಸಾವಿಗೆ ಮತ್ತು ಕುರಿಗಳ ಸಾವಿಗೆ ಕಾರಣನಾದ ಮೇಲ್ಕಂಡ ಕಾರನ್ನು ಮತ್ತು ಕಾರಿನ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 25/2018 ಕಲಂ 457, 380 ಐಪಿಸಿ

ದಿನಾಂಕ:03-02-2018 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿಯಾದ ರಾಜು ಬಿನ್ ಗೋವಿಂದಯ್ಯ, 40 ವರ್ಷ, ಒಕ್ಕಲಿಗರು, ವ್ಯವಸಾಯ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ವ್ಯವಸಾಯ ಹಾಗೂ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನ್ನ ಬಾಬ್ತು 40 ಕುರಿಗಳನ್ನು ನಮ್ಮ ಮನೆಯ ಪಕ್ಕದಲ್ಲಿಯೇ ನಿರ್ಮಿಸಿರುವ ಕುರಿ ಕೊಪ್ಪಲಿನಲ್ಲಿ ಪ್ರತಿ ದಿವಸ ಕೂಡಿ ಹಾಕಿ ಬೀಗ ಹಾಕುತ್ತಿದ್ದೆವು. ದಿನಾಂಕ: 02-02-2018 ರಂದು ಎಂದಿನಂತೆ ನಾನು ನಮ್ಮ ಬಾಬ್ತು 40 ಕುರಿಗಳನ್ನು ಮೇಯಿಸಿಕೊಂಡು ಬಂದು ನಂತರ ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಸದರಿ ಕುರಿಗಳನ್ನು ಕುರಿ ಕೊಪ್ಪಲಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದೆನು. ನಂತರ ರಾತ್ರಿ ಸುಮಾರು 03-30 ರಿಂದ 04-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಪಕ್ಕದ ಮನೆಯವರಾದ ಜಯಮ್ಮ ರವರು ಜೋರಾಗಿ ಕೂಗಾಡಿದ್ದು, ನಮ್ಮ ಮನೆಗೆ ಹೊರಗಡೆಯಿಂದ ಹಾಕಿದ್ದ ಚಿಲಕವನ್ನು ಜಯಮ್ಮ ರವರು ತೆಗೆದರು. ಸದರಿ ಶಬ್ದವನ್ನು ಕೇಳಿ ನಾನು ಹೊರಗೆ ಬರಲಾಗಿ ನಿಮ್ಮ ಬಾಬ್ತು ಕುರಿಗಳನ್ನು ಯಾರೋ ಕಳ್ಳರು ಒಂದು ಓಮ್ನಿ ವಾಹನದಲ್ಲಿ ಹಾಕಿಕೊಂಡು ಹೋದರೆಂತಾ ಜಯಮ್ಮ ರವರು ತಿಳಿಸಿದರು. ನಂತರ ನಾನು ನಮ್ಮ ಕುರಿ ಕೊಪ್ಪಲಿಗೆ ಹೋಗಿ ನೋಡಲಾಗಿ ಕುರಿ ಕೊಪ್ಪಲಿಗೆ ಹಾಕಿದ್ದ ಚಿಲಕದ ಲಿಂಕ್‌ ಅನ್ನು ಕಿತ್ತುಹಾಕಿ ಕೊಪ್ಪಲಿನಲ್ಲಿದ್ದ 40 ಕುರಿಗಳ ಪೈಕಿ 10 ಟಗರುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದರು. ಸದರಿ ಕಳ್ಳರು ಕಳವು ಮಾಡುವುದಕ್ಕೆ ಮೊದಲು ನಮ್ಮ ಹಾಗೂ ಅಕ್ಕಪಕ್ಕದ ಎರಡು ಮನೆಗಳ ಹೊರಗಿನ ಚಿಲಕವನ್ನು ಹಾಕಿ ನಂತರ ಕಳ್ಳತನ ಮಾಡಿರುವುದು ಕಂಡು ಬಂದಿರುತ್ತೆ. ಆದ್ದರಿಂದ ಕಳ್ಳತನವಾಗಿರುವ ನನ್ನ ಬಾಬ್ತು 10 ಕುರಿಗಳನ್ನು ಪತ್ತೆ ಮಾಡಿ ಆರೋಪಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಸದರಿ ಕಳವಾಗಿರುವ ಕುರಿಗಳ ಬಾಬ್ತು ಬೆಲೆಯನ್ನು ತಿಳಿಯಬೇಕಾಗಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 26/2018, ಕಲಂ:  279, 337, ಐಪಿಸಿ

ದಿನಾಂಕ: 03-02-2018 ರಂದು ಮಧ್ಯಾಹ್ನ 03-30 ಗಂಟೆಗೆ ಠಾಣಾ ಪಿ.ಸಿ 426 ರಂಗಸ್ವಾಮಿ ರವರು ಬೆಂಗಳೂರು ಅನುಪಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶಿವರಾಮಯ್ಯ ಬಿನ್ ಲೇಟ್ ಮರಿಗೌಡ, 65 ವರ್ಷ, ವಕ್ಕಲಿಗರು, ಜಿರಾಯ್ತಿ, ಕೆಂಚನಹಳ್ಳಿ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಬಂದು ಹಾಜರುಪಡಿಸಿದ್ದರ ಅಂಶವೇನೆಂದರೆ ದಿನಾಂಕ: 02-02-2018 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವರಾಮಯ್ಯರವರು ತಮ್ಮ ಪರಿಚಯಸ್ಥರ ಕೆಎ06-ಇ.ಎಕ್ಸ್-1829 ನೇ ದ್ವಿಚಕ್ರ ವಾಹನದಲ್ಲಿ ಪಿರ್ಯಾದಿಯು ವಾಹನದ ಹಿಂಬದಿಯಲ್ಲಿ ಕುಳಿತುಕೊಂಡು, ನಿಂಗಯ್ಯ ರವರು ವಾಹನವನ್ನು ಚಾಲನೆ ಮಾಡುತ್ತಿದ್ದು ಚೌಡನಕುಪ್ಪೆಯಿಂದ ಕೆಂಚನಹಳ್ಳಿಗೆ ಹೋಗಲು ದೊಡ್ಡಹುಲಿಕಟ್ಟೆ ಹತ್ತಿರ ಕೂರ್ಲಯ್ಯರ ಸೀನನ ಮನೆ ಮುಂದೆ ಬಂದಾಗ ನಿಂಗಯ್ಯನು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಅದೇ ವೇಳೆಗೆ ಕೆಂಚನಹಳ್ಳಿಯಿಂದ ಚೌಡನಕುಪ್ಪೆಗೆ ಬರುತ್ತಿದ್ದ ಪಿರ್ಯಾದಿಯ ಗ್ರಾಮದವರೇ ಆದ ಅಂಕೇಗೌಡ ಅವರ ಕೆಎ06-ಇಇ-7388 ಬೈಕಿಗೆ ನಿಂಗಯ್ಯನು ಎದುರುಗಡೆಯಿಂದ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸಮೇತ ಪಿರ್ಯಾದಿ ಮತ್ತು ನಿಂಗಯ್ಯ, ಹಾಗೂ ಅಂಕೇಗೌಡ ರವರು ಕೆಳಕ್ಕೆ ಬಿದ್ದು ಹೋಗಿದ್ದು ಪಿರ್ಯಾದಿಗೆ ಮುಖಕ್ಕೆ, ತಲೆಗೆ, ಬಲಕೈ, ಬಲಕಾಲಿಗೆ ರಕ್ತಗಾಯವಾಗಿರುತ್ತೆ. ವಾಹನ ಚಾಲನೆ ಮಾಡುತ್ತಿದ್ದ ನಿಂಗಯ್ಯನಿಗೆ ತರಚಿದ ರಕ್ತಗಾಯವಾಗಿರುತ್ತೆ ಹಾಗೂ ಎದುರುಗಡೆ ವಾಹನದ ಚಾಲಕ ಅಂಕೇಗೌಡನಿಗೆ ಮುಖಕ್ಕೆ, ತಲೆಗೆ, ಕೈಕಾಲುಗಳಿಗೆ ರಕ್ತಗಾಯಗಳಾಗಿರುತ್ತೆ. ಆಗ ತಕ್ಷಣ ಅಲ್ಲಿದ್ದ ಸಾರ್ವಜನಿಕರು ಮತ್ತು ಪಿರ್ಯಾದಿಯ ಗ್ರಾಮದ ಲೋಕೇಶ ಮತ್ತು ಶಿವಣ್ಣ ಎಂಬುವವರು ಯಾವುದೋ ಒಂದು ಕಾರಿನಲ್ಲಿ ಗಾಯಾಳುಗಳನ್ನು ಚಿಕಿತ್ಸೆಗೆ ಕುಣಿಗಲ್ ನ ಎಂ.ಎಂ. ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಪಿರ್ಯಾದಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬ್ಯಾಡರಹಳ್ಳಿಯ ಅನುಪಮ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಅಂಕೇಗೌಡನನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಅಪಘಾತಕ್ಕೆ ಕಾರಣನಾದ ಕೆಎ06-ಇ.ಎಕ್ಸ್-1829 ನೇ ದ್ವಿಚಕ್ರ ವಾಹನ ಚಾಲಕ ನಿಂಗಯ್ಯರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 47 guests online
Content View Hits : 243271