lowborn ಅಪರಾಧ ಘಟನೆಗಳು 06-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 06-02-18

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ- 24/2018 ಕಲಂ 279, 304(ಎ) ಐ.ಪಿ.ಸಿ. ರೆ/ವಿ 187 ಐಎಂವಿ ಆಕ್ಟ್

ದಿನಾಂಕ: 05/02/2018 ರಂದು ರಾತ್ರಿ 8-15 ಗಂಟೆಗೆ  ಪಿರ್ಯಾದಿ ಪ್ರಶಾಂತ್ ಕುಮಾರ್ ಎಂ. ಆರ್. ಬಿನ್ ರಂಗನಾಯ್ಕ(ಮೃತ). 22 ವರ್ಷ, ಲಂಬಾಣಿ,  ವಾಸ ಮಾಳಗೊಂಡನಹಳ್ಳಿ ಗ್ರಾಮ, ಹಿರಿಯೂರು ತಾಲ್ಲೋಕ್, ಚಿತ್ರದುರ್ಗ ಜಿಲ್ಲೆ. ಸ್ವಂತಊರು ಮಾನಂಗಿ ತಾಂಡ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಸ್ವಂತ ಗ್ರಾಮ ತುಮಕೂರು ಜಿಲ್ಲೆ, ಸಿರಾ ತಾಲ್ಲೂಕ್ ಮಾನಂಗಿ ತಾಂಡ.  ನಾವು ಜೀವನೋಪಾಯಕ್ಕಾಗಿ ಈಗ್ಗೆ ಸುಮಾರು 7-8 ವರ್ಷಗಳಿಂದ ಹಿರಿಯೂರು ತಾಲ್ಲೂಕ್ ಮಾಳಗೊಂಡನಹಳ್ಳಿ ಗ್ರಾಮದಲ್ಲಿ  ನಾನು ನನ್ನ ತಂದೆ ತಾಯಿ ರವರೊಂದಿಗೆ ವಾಸವಾಗಿರುತ್ತೇನೆ.  ಸಿರಾ ತಾಲ್ಲೂಕ್ ಎಮ್ಮೇರಹಳ್ಳಿ ತಾಂಡದಲ್ಲಿ ನಮ್ಮ ಸಂಬಂದಿಕರಾದ ರಾಜನಾಯ್ಕನ ಮನೆ ಇದ್ದು, ನನ್ನ ತಂದೆಯವರಾದ ರಂಗನಾಯ್ಕ ರವರು ಎಮ್ಮೇರಹಳ್ಳಿ ತಾಂಡದ ಸಂಬಂದಿಕರ ಮನೆಗೆ ಹೋಗಿ ಬರುತ್ತೇನೆಂದು ಈದಿನ ಬೆಳಿಗ್ಗೆ ಮನೆಯಿಂದ ಹೋಗಿದ್ದರು.  ಇದೇ ದಿನ ದಿನಾಂಕ: 05/2/2018 ರಂದು ಸಂಜೆ ಸುಮಾರು 4-30 ಗಂಟೆಗೆ ಎಮ್ಮೇರಹಳ್ಳಿ ತಾಂಡದ ನಮ್ಮ ಸಂಬಂದಿ ರಾಜನಾಯ್ಕನು  ಪೋನ್ ಕರೆ ಮಾಡಿ ನಿನ್ನ ತಂದೆಯವರಾದ ರಂಗಾನಾಯಕ್ಕನಿಗೆ ಎಮ್ಮೇರಹಳ್ಳಿ ತಾಂಡದ ಗೇಟ್ ಕಾಮತ್ ಹೋಟೆಲ್ ಮುಂಭಾಗ ಸಿರಾ ದಿಂದ ತುಮಕೂರು ಎನ್.ಹೆಚ್.48 ರಸ್ತೆ ಬಳಿ ಬಸ್ ಇಳಿದು ರಸ್ತೆಯ ಬದಿಯಲ್ಲಿ ನಿಂತಿರುವಾಗ ಸಂಜೆ 4-15 ಗಂಟೆಯಲ್ಲಿ ಸಿರಾ ಕಡೆಯಿಂದ ಒಂದು ಸ್ಕಾರ್ಪಿಯೋ ಕಾರು ನಂಬರ್ MP-13-CB-5679 ನೇ ಸ್ಕಾರ್ಪಿಯೋ ಕಾರು ಚಾಲಕ ತನ್ನ ಕಾರನ್ನು ಅತಿವೇಗವಾಗಿ ಅಜಾಗರೂಕತೆಯಲ್ಲಿ ಚಾಲನೆಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ನಿನ್ನ ತಂದೆ ರಂಗಾನಾಯ್ಕನಿಗೆ ಅಪಘಾತ ಮಾಡಿದ, ರಭಸಕ್ಕೆ ನಿನ್ನ ತಂದೆ ಕಾರಿನ ಮೇಲೆ ಎಗರಿ ರಸ್ತೆ ಮೇಲೆ ಬಿದ್ದರು.  ಇದರಿಂದ ನಿನ್ನ ತಂದೆಯ ಕಾಲು ಮತ್ತು ದೇಹದ ಇತರೆ ಭಾಗಗಳಿಗೆ ಪೆಟ್ಟುಬಿದ್ದು ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟನು.  ನಂತರ ಆಂಬ್ಯುಲೆನ್ಸ್ ನವರು ಬಂದು ನಿನ್ನ ತಂದೆಯ ಮೃತ ದೇಹವನ್ನು ಸಿರಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತಾರೆ, ಬೇಗ ಆಸ್ಪತ್ರೆಯ ಬಳಿ ಬಾ ಎಂದು ಪೋನ್ ಕರೆ ಮೂಲಕ ತಿಳಿಸಿದನು.  ನಂತರ ನಾನು ಸಿರಾ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಬಂದು ನೋಡಲಾಗಿ ನನ್ನ ತಂದೆ ಮೃತಪಟ್ಟಿದ್ದು ಮೇಲ್ಕಂಡ ಅಂಶ ಸತ್ಯವಾಗಿರುತ್ತೆ.  ಮೃತ ನನ್ನ ತಂದೆ ರಂಗಾನಾಯ್ಕನಿಗೆ ಅಪಘಾತ ಪಡಿಸಿ ನನ್ನ ತಂದೆ ಸಾವಿಗೆ ಕಾರಣನಾದ MP-13-CB-5679 ನೇ ಸ್ಕಾರ್ಪಿಯೋ  ಕಾರು ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರಿದೆ.  ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ.   ಈ ವಿಚಾರವನ್ನು ನನ್ನ ಸಂಬಂದಿಕರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.   .

ಅಮೃತೂರು ಪೊಲೀಸ್ ಠಾಣಾ ಮೊನಂ-29/2018 ಕಲಂ-323, 324, 504, 506, ರೆ/ವಿ 34 ಐಪಿಸಿ

ದಿನಾಂಕ: 05-02-2018 ರಂದು 19-10 ಗಂಟೆಗೆ ಕುಣಿಗಲ್ ತಾಲೋಕ್, ಎಡೆಯೂರು ಹೋಬಳಿ, ಕೋಡಿಪಾಳ್ಯ(ಅಮ್ಮನಹಟ್ಟಿ) ಲೇಟ್ ಪಟೇಲ್ ಕೋನೇಗೌಡರ ಮಗ ಸುಮಾರು 59 ವರ್ಷ ವಯಸ್ಸುಳ್ಳ ಕೋನೇಗೌಡ @ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 04-02-2018 ನೇ ಭಾನುವಾರ ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ನಾನು ಮಾರಿ ಹಬ್ಬದ ಪ್ರಯುಕ್ತ ಹಬ್ಬದ ಸೇವಾ ಸಲಕರಣೆ ವ್ಯವಸ್ಥೆಗೆ ಕಾರ್ಯನಿರತನಾಗಿದ್ದೆನು. ಆ ವೇಳೆ ನಮ್ಮ ಮನೆಯವರು ಕಣದ ಹತ್ತಿರ ತುಂಬಾ ಗಲಾಟೆ ನಡೆಯುತ್ತಿದೆ ಎಂದು ಗಾಬರಿ ಮಾತನಾಡಿದರು. ಆ ವೇಳೆ ತವಕದಿಂದ ನಾನು ನಮ್ಮ ಹುಲ್ಲು ಬಣವೆ ಕಣದ ಹತ್ತಿರ ಹೋಗಿ ನೋಡಲಾಗಿ ನನ್ನ ತಮ್ಮ 1)ಹಟ್ಟಿಗೌಡ ಬಿನ್ ಪಟೇಲ್ ಕೊನೇಗೌಡ, 2)ಈತನ 1ನೇ ಮಗ ತಿಮ್ಮೇಗೌಡ ಬಿನ್ ಹಟ್ಟಿಗೌಡ, 3)2ನೇ ಮಗ ಕೋನೇಗೌಡ ಬಿನ್ ಹಟ್ಟಿಗೌಡ ಇವರುಗಳು ನನ್ನ ಮಕ್ಕಳಾದ ಕೆ.ಕೆ ತಿರುಮಲೇಗೌಡ ಮತ್ತು ಕೆ.ರವೀಶ ಇವರುಗಳ ಮೇಲೆ ಕೊರಳಪಟ್ಟಿ ಮತ್ತು ಜುಟ್ಟು ಹಿಡಿದು ಕೆಳಕ್ಕೆ ಕೆಡವಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು. ಆಗ ನಾನು ನನ್ನ ಜಾಗದಲ್ಲಿ ನಾನು ಹುಲ್ಲು ಬಣವೆ ಹಾಕಿಕೊಳ್ಳಲು ನಿಮ್ಮದೇನು ತಕರಾರು ಎಂದು ಆಕ್ರೋಶದ ಮಾತನ್ನಾಡಿದೆ. ಆ ವೇಳೆ ಹಟ್ಟಿಗೌಡ ನನ್ನ ಎದೆಗೆ ಕೈ ಹಾಕಿ ತಳ್ಳಿದ ಅದೇ ವೇಳೆಗೆ ತಿಮ್ಮೇಗೌಡ ಎಂಬುವವನು ನನ್ನ ಮಗ ರವೀಶನ ಎದೆಗೆ ಬಲಗಾಲಿನಿಂದ ಒದ್ದು ಕೆಳಕ್ಕೆ ಕೆಡವಿದನು. ಸಾಮೂಹಿಕವಾಗಿ ಎರಡು ಪಕ್ಕೆ ಬಲ ಮಣಕೈಗೆ ಬೆನ್ನು ಇತರೆ ಭಾಗಗಳಿಗೆ ಹಿಗ್ಗಾಮುಗ್ಗಾ ತಳಿಸಿ ನೋವುಂಟು ಮಾಡಿದರು. ನಾನು ಶುಗರ್ ಪೇಷೆಂಟ್ ಆಗಿದ್ದರಿಂದ ನಾನು ಅಸ್ವಸ್ಥನಾಗಿದ್ದೆ. ನನ್ನ ಹಿರಿಯ ಮಗ ಕೆ.ಕೆ ತಿರುಮಲೇಗೌಡ ನನ್ನನ್ನು ಶುಶ್ರೂಷೆ ಮಾಡುತ್ತಿದ್ದಾಗ ಏಕಾಏಕಿ ಮೇಲಿನ ಆರೋಪಿಗಳು ಮೂರು ಜನರು ಅವನೇನೂ ಸತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಹೊಡೆದರು. ಆತನಿಗೆ ಮೂಗು ಕೆನ್ನೆಮೂಗು ಬಲ ಕೆನ್ನೆ ಭಾಗ, ಬಲ ಕಣ್ಣಿನ ಕೆಳಭಾಗ, ಬಲದ ಮೊಣಕೈಗಳಿಗೆ ದೊಣ್ಣೆಯಿಂದ ಹೊಡೆದರು. ತಿಮ್ಮೇಗೌಡನೆಂಬಾತ ಬೆಂಗಳೂರಿನಿಂದ ರೌಡಿಗಳನ್ನು ಕರೆಸಿ ನಿಮ್ಮನ್ನೆಲ್ಲಾ ಕೊಲೆ ಮಾಡಿಸುವುದಾಗಿ ಪ್ರಾಣ ಬೆದರಿಕೆ ಒಡ್ಡಿದ್ದಾನೆ. ನಮ್ಮ ಜಾಗದಲ್ಲಿ ಕಣ ಬಣವೆ ಮಾಡಿದ್ದರೂ ದುರುದ್ದೇಶದಿಂದ ಹಾಗೂ ನಮ್ಮ ಕುಟುಂಬದವರ ಮೇಲೆ ಇಲ್ಲ ಸಲ್ಲದ ಜಗಳವನ್ನು ತೆಗೆದು ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ. ಗಾಯಾಳುಗಳಾದ ನನ್ನ ಮಕ್ಕಳನ್ನು ಪರಿಚಿತರ ಜೊತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿ ನಾನು ಎಡೆಯೂರಿನಲ್ಲಿ ತಾತ್ಕಾಲಿಕವಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಹೋಗಿದ್ದೆ. ಪಿರ್ಯಾದನ್ನು ಕೊಡಲು ಕಾಲಾವಕಾಶ ಸಿಗಲಿಲ್ಲ. ಖಾವಂದರು ಮೇಲ್ಕಂಡ ಆರೋಪಿಗಳನ್ನು ಕರೆಸಿ ದಸ್ತಗಿರಿ ಮಾಡಿ ಸೂಕ್ತ ಕ್ರಮ ತೆಗೆದುಕೊಂದು ನಮ್ಮಗಳಿಗೆ ರಕ್ಷಣೆ ಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ ಎಂದು ಇತ್ಯಾದಿಯಾಗಿ ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 54 guests online
Content View Hits : 243274