lowborn ಅಪರಾಧ ಘಟನೆಗಳು 07-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 07-02-18

ಚೇಳೂರು ಪೊಲೀಸ್ ಠಾಣಾ  ಮೊ.ನಂ.30/2018, ಕಲಂ 392  ಐ.ಪಿ.ಸಿ

ದಿನಾಂಕ;06/02/2018 ರಂದು   ಸಂಜೆ 6-30  ಗಂಟೆಗೆ  ಪಿರ್ಯಾದಿ   ಶ್ರೀ.ನಿತಿನ್  ಬಿನ್  ಗುರುಪಾದಪ್ಪ, 23 ವರ್ಷ,  ಲಿಂಗಾಯ್ತರು,  ಪೆಟ್ರೋಲ್  ಬಂಕ್  ನಲ್ಲಿ  ಕೆಲಸ, ಎನ್   ಹೊಸಹಳ್ಳಿ  ಗ್ರಾಮ,  ನಿಟ್ಟೂರು  ಹೋ,  ಗುಬ್ಬಿ  ತಾಲ್ಲೋಕ್  ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ಈಗ್ಗೆ 04 ವರ್ಷಗಳಿಂದ  ಕೊಂಡ್ಲಿ ಕ್ರಾಸ್  ನಲ್ಲಿರುವ  ಅರುಣ್  ಟ್ರಾನ್ಸ್  ಪೋರ್ಟ್  ಗೆ  ಸೇರಿದ   IOC  ಪೆಟ್ರೋಲ್  ಬಂಕ್  ನಲ್ಲಿ  ಪೆಟ್ರೋಲ್ ಡಿಜಲ್  ಹಾಕುವ ಕೆಲಸ  ಮಾಡಿಕೊಂಡಿರುತ್ತೇನೆ  ಈ  ದಿನ 06/02/2018  ರಂದು  ಸಂಜೆ 4-30  ಗಂಟೆ  ಸಮಯದಲ್ಲಿ  ನಾನು ಮೇನೇಜರ್  ಪ್ರಸನ್ನ  ಲಾರಿ ಚಾಲಕ  ಲತೇಶ್  ರವರು  ಪೆಟ್ರೋಲ್  ಬಂಕ್  ನಲ್ಲಿ  ಇರುವಾಗ್ಗೆ  ಇಬ್ಬರು ವ್ಯಕ್ತಿಗಳು   ನನ್ನ  ಬಳಿ  ಬಂದು  ಹೊರ ದೇಶದ  ಹಣವನ್ನು  ತೆಗೆದುಕೊಂಡು  ತೋರಿಸಿ ಎಕ್ಸ್ ಚೇಂಜ್  ಎಕ್ಸ್ ಚೇಂಜ್  ಎಂದು  ಹೇಳಿದರು  ನಾನು  ಅದಕ್ಕೆ  40 ಕೀ. ಮೀ.ಟರ್  ಮುಂದಕ್ಕೆ  ಹೋಗಿ  ಎಂದು  ಹೇಳಿದೆ  ಅದಕ್ಕೆ  ಒಬ್ಬ  ವ್ಯಕ್ತಿ  ನನ್ನ  ಜೇಬಿನಲ್ಲಿ  ಇದ್ದ  ಬಾರತ  ದೇಶದ  200  ರೂ  ನೋಟುನ್ನು  ತೋರಿಸಿ  ಇಟ್ ಇಸ್ ಟು ಥೌಸೆಂಡ್   ಎಂದು  ಕೇಳಿದ  ನಾನು  ನೋ  ಎಂದು  ಹೇಳಿ  ನನ್ನ  ಕೈಯಲ್ಲಿ  ಇದ್ದ  ಬಂಡಲ್ ನಿಂದ 2000  ರೂ  ನೋಟನ್ನು  ತೋರಿಸಿದೆ.  ದಿಸೀಜ್  ಟು  ಥೌಸೆಂಡ್    ಎಂದು  ಹೇಳಿದೆ  ನಂತರ  ಪೆಟ್ರೋಲ್  ಹಾಕಲು  ಮುಂದಕ್ಕೆ  ಹೋದೆ ಅಷ್ಟು  ಹೊತ್ತಿಗೆ ಒಬ್ಬ  ವ್ಯಕ್ತಿ  ನನ್ನ  ಕೈಯಲ್ಲಿ  ಇದ್ದ  ಹಣದ  ಬಂಡಲ್  ಅನ್ನು  ಕಿತ್ತುಕೊಂಡನು.  ಗಟ್ಟಿಗಾಗಿ  ಹಿಡಿದುಕೊಂಡೆ ಬಂಡಲ್ ನಲ್ಲಿದ್ದ  ಸ್ವಲ್ಪ  ಭಾಗ ಹಣವನ್ನು  ಕಿತ್ತುಕೊಂಡು  ರಸ್ತೆಯ  ಕಡೆಗೆ  ಓಡಿ  ಹೋದ.  ಆ  ವೇಳೆಗೆ   ನಾನು ಅಯೋ ಕಿತ್ತುಕೊಂಡ ಜೋರಾಗಿ ಕಿರುಚಿಕೊಂಡೆ ಆಗ  ನಾನು  ಲಾರಿ  ಚಾಲಕ  ಲತೇಶ್ ಮೇನೇಜರ್  ಪ್ರಸನ್ನ  ಅವರ  ಹಿಂದೆ  ಓಡಿದೆವು.  ನಾವು ಅವರ  ಕಡೆ ಓಡಿದ  ತಕ್ಷಣ  ಕಾರ್  ನಂಬರ್   GA-07-F-675  ಸಿಲ್ವರ್  ಅಸೆಂಟಾ  ಕಾರಿನಲ್ಲಿ  ಕುಳಿತುಕೊಂಡು  ಜೋರಾಗಿ   ಕಾರು  ಚಾಲನೆ  ಮಾಡಿಕೊಂಡು   ತುಮಕೂರು  ಕಡೆ  ಹೋದರು.  ಈ ವಿಷಯವನ್ನು   ದೊಡ್ಡಗುಣಿ  ಗ್ರಾಮದ  ನನ್ನ  ಸ್ನೇಹಿತರಾದ   ಸಂದೀಪ ರವರಿಗೆ  ಹೇಳಿದೆ ಅವರು  ಸಹ  ರಸ್ತೆಯಲ್ಲಿ  ಕಾದು  ನೋಡಿ  ಈ  ಕಡೆಗೆ  ಕಾರು  ಬಂದಿಲ್ಲ  ಎಂದು  ತಿಳಿಸಿದರು.  ಈ  ಕಾರಿನಲ್ಲಿ  ಒಟ್ಟು 04  ಜನರು  ಇದ್ದು,  ನನ್ನ  ಬಳಿ  80.000  ರೂಗಳ  ಪೈಕಿ 20.000 ರೂ ಗಳನ್ನು  ಕಿತ್ತುಕೊಂಡು  ಹೋಗಿರುತ್ತಾರೆ.  ನಾನು  ಅವರುಗಳನ್ನು  ನೋಡಿರುತ್ತೇನೆ. ಅವರನ್ನು  ಮತ್ತೆ   ನೋಡಿದರೆ  ಗುರ್ತಿಸುತ್ತೇನೆ.  ಆದ್ದರಿಂದ  ಮೇಲ್ಕಂಡ 04  ಜನರ  ಮೇಲೆ  ಕಾನೂನು   ರೀತ್ಯ  ಕ್ರಮ  ಜರುಗಿಸಲು   ಕೋರಿ ಇತ್ಯಾದಿಯಾದ  ಪಿರ್ಯಾದು  ಮೇರೆಗೆ ಪ್ರಕರಣ ದಾಖಲಿಸಿದೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ನಂ.25/2018 U/S 363 ಐಪಿಸಿ

ದಿನಾಂಕ : 06/02/2018 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀಮತಿ ಲಲಿತಮ್ಮ ಕೋಂ ಲೇಟ್ ಲಕ್ಷ್ಮಿ ನರಸಿಂಹಯ್ಯ (35) ವಾಸ ನಂ 60, ಕೆಪಿಟಿಸಿಎಲ್ ಕ್ವಾಟ್ರಾಸ್ ಕೋತಿತೋಪು, ತುಮಕೂರು ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ  ಮಗನಾದ ಸುಮಾರು 16 ವರ್ಷದ ಪುನೀತ್ ಎಂಬುವರು ಹೊರಪೇಟೆ ಲೂರ್ದುಮಾತಾ ಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು ಶಾಲೆಗೆ ಸರಿಯಾಗಿ ಹೋಗದೆ ತಪ್ಪಿಸಿಕೊಂಡು ಹೋಗುವುದು, ಮಾಡುತ್ತಿದ್ದು ದಿನಾಂಕ : 31/01/2018 ರಂದು ಸಹಾ ಶಾಲೆಗೆ ಹೋಗದೆ ಓಡಾಡಿಕೊಂಡು ಮನೆಗೆ ಬಂದ ವಿಚಾರ ತಿಳಿದು ಪಿರ್ಯಾದಿಯು ಶಾಲೆಗೆ ಹೋಗುವಂತೆ ಪುನೀತ್ ರವರಿಗೆ ಬೈಯ್ದು, ಹೊಡೆದಿದ್ದರಿಂದ ಪುನೀತ್ ರವರು ದಿನಾಂಕ : 01/02/2018 ರಂದು ಬೆಳಗ್ಗೆ 6-00 ಗಂಟೆಯಲ್ಲಿ ದೋಬಿಘಾಟ್ ರಸ್ತೆಯಲ್ಲಿನ ವಿದ್ಯಾಶಂಕರ್ ರವರ ಮನೆಗೆ ಟ್ಯೂಷನ್‌ಗೆಂದು ಹೋಗಿ ವಾಪಸ್ ಸ್ನೇಹಿತನಾದ ದರ್ಶನ್ ರವರ ಜೊತೆ ಭದ್ರಮ್ಮ ವೃತ್ತದ ವರೆಗೆ ಬಂದು ಆತನಿಗೆ ಮನೆಗೆ ಹೋಗುವುದಾಗಿ ತಿಳಿಸಿ ಮನೆಗೂ ಬರದೆ ಎಲ್ಲಿಯೋ ಕಾಣೆಯಾಗಿದ್ದು ಇದುವರೆಗೂ ಸಹಾ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆತನನ್ನು ಯಾರೋ ಅಪಹರಣ ಮಾಡಿರಬಹುದಾದ ಸಾದ್ಯತೆ ಇದ್ದು ಪುನೀತ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 42 guests online
Content View Hits : 243268