lowborn ಪತ್ರಿಕಾ ಪ್ರಕಟಣೆ ದಿ:14-02-18. | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:14-02-18.

ಪತ್ರಿಕಾ ಪ್ರಕಟಣೆ ದಿನಾಂಕ:14-02-2018.

: : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :

2017 ನೇ ಸಾಲಿನಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಬಿ. ಎಂ,. ಬ್ಯಾಂಕ್ ನಲ್ಲಿ 2 ಬಾರಿ ಗೋಡೆ ಕೊರೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು  ಸ್ಥಳದಲ್ಲಿ ದೊರೆತ ಸುಳಿವಿನ ಮೇರೆಗೆ ಹಾಗೂ ಸ್ಥಳೀಯ ಬಾತ್ಮೇದಾರರಿಂದ ದೊರೆತ ಮಾಹಿತಿ ಮೇರೆಗೆ  ಈ ಕೆಳಕಂಡ  ಇಬ್ಬರು  ಬ್ಯಾಂಕ್  ಕಳ್ಳರನ್ನು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ:13-02-2018 ರಂದು ಬೆಳಿಗ್ಗೆ  ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಮೊನಂ.315/2017 ಕಲಂ. 457-380 ಐ,.ಪಿ.ಸಿ. ಕೇಸಿನಲ್ಲಿ ಬಂಧಿಸಿದ್ದು, ಇವರುಗಳಿಂದ   ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಮೊ.ನಂ. 26/2018 ಕಲಂ: 394, 457-511 ಐ.ಪಿ.ಸಿ. ಹಾಗೂ ನೆಲಮಂಗಲ ಬಳಿಯಿರುವ ಕುಲುವನಹಳ್ಳಿ ಕೆನರಾ ಬ್ಯಾಂಕ್ ನಲ್ಲಿ,  ಚಿಕ್ಕಮಗಳೂರು ಜಿಲ್ಲೆ ಕೆ.ಬಿ.ಹಾಳ್ ಕೆನರಾ ಬ್ಯಾಂಕ್ ನಲ್ಲಿ , ಕೋರಾ ಬಳಿ ವಸಂತನರಸಾಪುರದಲ್ಲಿ, ಎಸ್.ಬಿ.ಐ. ಬ್ಯಾಂಕ್  ಗಳಲ್ಲಿ ಆರೋಪಿಗಳು ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನಿಸಿರುವ ಪ್ರಕರಣಗಳಲ್ಲಿ ಕೃತ್ಯವೆಸಗಿರುವುದಾಗಿ ಬೆಳಕಿಗೆ ಬಂದಿರುತ್ತೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದೋಚಿದ್ದ ಓಟ್ಟು 16,11,950=00 /- ರೂ ನಗದು ಹಣವನ್ನು ಹಾಗೂ ಕಳ್ಳತನದ ಹಣದಲ್ಲಿ ಖರೀದಿಸಿದ್ದ 4,00,000=00/- ರೂ ಬೆಲೆಯ KA51-MB-8481  ನೇ ನಂಬರಿನ ಶಿಫ್ಟ್ ಕಾರನ್ನು ಮತ್ತು  ಕೃತ್ಯಕ್ಕೆ ಬಳಸಿದ್ದ   KA18-M-6934  ನೇ ನಂಬರಿನ ಒಂದು ಆಲ್ಟೋ ಕಾರನ್ನು   ಉಪಕರಣಗಳನ್ನು  ವಶಪಡಿಸಿಕೊಳ್ಳಲಾಗಿರುತ್ತೆ.

ಆರೋಪಿಗಳ ಹೆಸರು ವಿಳಾಸ

1]ಮಧುಕುಮಾರ್ @ ಮಧು ಬಿನ್ ರಘು , 32 ವರ್ಷ, ವಕ್ಕಲಿಗರು, ತರಕಾರಿ ವ್ಯಾಪಾರ, ವಾಸ: 1 ನೇ ಮೈನ್ ರಸ್ತೆ, ವೆಂಕಟೇಶಪ್ಪ ಬಿಲ್ಡಿಂಗ್, ಟಿ. ದಾಸರಹಳ್ಳಿ, ಬೆಂಗಳೂರು, ಸ್ವಂತ ಊರು, ಸರ್ಕಾರಿ ಸ್ಕೂಲ್ ಹತ್ತಿರ, ಬಿಜವಳ್ಳಿ ಗ್ರಾಮ , ಮೂಡಿಗೆರೆ ಟೌನ್, ಚಿಕ್ಕಮಗಳೂರು ಜಿಲ್ಲೆ

2]  ವಿ. ಬಾಬು ಬಿನ್ ಲೇಟ್ ವೆಂಕಟಾಚಲಂ. 34 ವರ್ಷ, ವಕ್ಕಲಿಗರು, ಕಾರು ಚಾಲಕ, ವಾಸ ಲಲ್ಲಿ ಬಿಡ್ಡಿಂಗ್ , ವಿಜಯಾ ಆಸ್ಪತ್ರೆ ಎದುರು, ಎಂ.ಟಿ.ಎಸ್. ಕಾಲೋನಿ, 6 ನೇ ಕ್ರಾಸ್, ಟಿ.ದಾಸರಹಳ್ಳಿ ಸ್ವಂತ ಊರು, ತಿರುಚಾರಪಳ್ಳಿ, ತಮಿಳುನಾಡು ರಾಜ್ಯ,

ಮೇಲ್ಕಂಡ ಆರೋಪಿಗಳನ್ನು  ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ ವಿ ಗೋಪಿನಾಥ್, ಐ.ಪಿ.ಎಸ್. ರವರ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ|| ಶೋಭಾ ರಾಣಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ , ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಕೆ.ಎಸ್. ನಾಗರಾಜ್, ಕೆ.ಎಸ್.ಪಿ.ಎಸ್. ರವರ ಹಾಗೂ ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀ ಸಿ.ಹೆಚ್. ರಾಮಕೃಷ್ಣಯ್ಯ ರವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಠಾಣೆಯ ಪಿ.ಎಸ್.ಐ. ಶ್ರೀ ಡಿ.ಎಲ್. ರಾಜು ಮತ್ತು ಠಾಣೆಯ ಸಿಬ್ಬಂದಿಯವರುಗಳಾದ  ಆರ್.ಎಸ್. ಸಿದ್ದಪ್ಪ ಎ.ಎಸ್.ಐ.  ಮೋಹನ್ ಕುಮಾರ್, ಹೆಚ್.ಸಿ. 8, ಕೆ.ರಮೇಶ್ ಪಿ.ಸಿ. 966 ಸೈಯದ್ ರಿಫತ್ ಅಲಿ ಪಿ.ಸಿ. 980 ರವರುಗಳು ಪತ್ತೆಗೆ ಶ್ರಮಿಸಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.

 

 

ಪತ್ರಿಕಾ ಪ್ರಕಟಣೆ

ದಿನಾಂಕ 14-020-18

ತುಮಕೂರು  ನಗರ ಠಾಣೆ ಮೊ.ನಂ. 29/2018 ಕಲಂ 302 ಐಪಿಸಿ

ತುಮಕೂರು ನಗರದ ಜಿಸಿಆರ್ ಕಾಲೋನಿ 2 ನೇ ಕ್ರಾಸ್ನ ನದೀಂಪಾಷ ಎಂಬುವರು ಆಟೋ ಚಾಲಕನಾಗಿದ್ದು ದಿನಾಂಕ. 04.02.2018 ರಂದು ಪ್ರತಿನಿತ್ಯದಂತೆ ಬಾಡಿಗೆಗೆ ಆಟೋವನ್ನು ತೆಗೆದುಕೊಂಡು ಹೋಗಿದ್ದು ಮಧ್ಯರಾತ್ರಿ ಸುಮಾರು 12-45 ಗಂಟೆಗೆ ಆಟೋ ಸಮೇತ ಮನೆಯ ಹತ್ತಿರ ಬಂದು ಕಿರುಚಾಡಿರುತ್ತಾರೆ. ತಕ್ಷಣ ಆತನ ಪತ್ನಿ ಅಪ್ಸರಿ ಬೇಗಂ ಮತ್ತು ತಾಯಿ ಪವರ್ಿನ್ ಹಾಗೂ ತಮ್ಮ ಇಮ್ರಾನ್ ಪಾಷಾ ರವರುಗಳು ಹೊರಗೆ ಬಂದು ನೋಡಿದಾಗ ನದೀಂಪಾಷಾ ರಕ್ತದ ಮಡುವಿನಲ್ಲಿ ಮನೆಯ ಮುಂದೆ ಒದ್ದಾಡುತ್ತಿದ್ದು ತಕ್ಷಣ ಅದೇ ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಆಂಬ್ಯುಲೆನ್ಸ್ನಲ್ಲಿ ಹಾಕಿಕೊಂಡು  ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ನದೀಂಪಾಷಾ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ನಂತರ ಗಲಾಟೆಯ ಬಗ್ಗೆ ವಿಚಾರ ತಿಳಿಯಲಾಗಿ ಸಾಕ್ಷಿಗಳ ವಿಚಾರಣೆಯಿಂದ ಜಂಗ್ಲಿ @ ಪ್ರವೀಣ ಎಂಬುವನು ಆತನ ಕೈಯಲ್ಲಿದ್ದ ಚಾಕುವಿನಿಂದ ನದೀಂಪಾಷಾನ ಎಡಕಂಕುಳಿನ ಹತ್ತಿರ ಮತ್ತು ಎಡಪಕ್ಕೆಯ ಹತ್ತಿರ ಹಾಗೂ ದೇಹದ ಬೇರೆ ಕಡೆಗಳಲ್ಲಿ ಚಾಕುವಿನಿಂದ ತಿವಿದನು. ತಕ್ಷಣ ನಾವು ಗಲಾಟೆ ಬಿಡಿಸಲು ಹೋಗಿದ್ದನ್ನು ಕಂಡು ಜಂಗ್ಲಿ @ ಪ್ರವೀಣ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರೂ ಒಟ್ಟು ಮೂರು ಜನ ಅಲ್ಲಿಂದ ಓಡಿಹೋದರು ಎಂದು ಇತ್ಯಾದಿಯಾಗಿ ಮೃತನ ಪತ್ನಿ ಅಪ್ಸರಿಬೇಗಂ ರವರು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ: 29/2018 ಕಲಂ 302 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಘಟನೆ ನಡೆದ ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಎಎಸ್ ಐ ರವೀಶ್  ಮತ್ತು ಸಿಬ್ಬಂದಿಯವರಾದ ಪಿಸಿ 126 ಏಜಾಜ್ ರವರುಗಳು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ಕದಡದಂತೆ ಕ್ರಮ ವಹಿಸಿದ್ದು ನಗರ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ತನಿಖಾ ಕಾಲದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ ವಿ ಗೋಪಿನಾಥ್, ಐ.ಪಿ.ಎಸ್. ರವರ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ|| ಶೋಭಾ ರಾಣಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ , ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಕೆ.ಎಸ್. ನಾಗರಾಜ್, ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಈ ಪ್ರರಕಣದ ಆರೋಪಿ ಪ್ರವೀಣ್ @ ಜಂಗ್ಲಿ ಬಿನ್ ಲೇಟ್ ಪುಟ್ಟರಾಜು, 26 ವರ್ಷ, ಲಿಂಗಾಯ್ತರು, ವಾಸ ಮಂಡಿಪೇಟೆ ಮುಖ್ಯ ರಸ್ತೆ, ತುಮಕೂರು ರವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಚಾಕುವನ್ನ ಅಮಾನತ್ತು ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರ್ ಪಡಿಸಿದ್ದು ಈಗ ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಆರೋಪಿತನು ಈ ಹಿಂದೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 57/2017 ಕಲಂ 399, 400, 120(ಬಿ) ಹಾಗೂ   Arms Act  ಪ್ರಕರಣದಲ್ಲಿ 6 ವರ್ಷ ಶಿಕ್ಷೆಗೆ ಒಳಗಾದ ಆರೋಪಿಯಾಗಿರುತ್ತಾನೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 37 guests online
Content View Hits : 259693