ಪತ್ರಿಕಾ ಪ್ರಕಟಣೆ ದಿ 7-03-18
ಪತ್ರಿಕಾ ಪ್ರಕಟಣೆ.
ದಿನಾಂಕ. 07.03.2018.
ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ ಗ್ರಾಮದ ಗೋವಿಂದರಾಜುರವರ ಮನೆಯಲ್ಲಿ ದಿನಾಂಕ. 22.02.2018 ರಿಂದ 24.02.2018 ರ ಮಧ್ಯೆ ಒಟ್ಟು 81 ಗ್ರಾಂ ತೂಕದ ಚಿನ್ನಭಾರಣಗಳು ಹಾಗೂ 28,000 ರೂ ನಗದು ಹಣವನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ ಮೊನಂ 36/2018 ಕಲಂ 454-457-380 ಐಫಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಕೇವಲ 10 ದಿನದಲ್ಲಿ ಪ್ರಕರಣದ ಅರೋಪಿತರುಗಳಾದ ಅಂಜನೇಯಲು ಬಿನ್ ಲೇ:ನಾರಯಣಪ್ಪ 47 ವರ್ಷ ಸಿಳ್ಳೆಕ್ಯಾತ ಜನಾಂಗ ಜಿರಾಯ್ತಿ ಜಾಜುರಾಯನಹಳ್ಳಿ, ಪಾವಗಡ ತಾಲ್ಲೂಕು ಮತ್ತು ರಾಮದಾಸ್ ಬಿನ್ ಲೇ;ಮಾರಪ್ಪ 35 ವರ್ಷ ಸಿಳ್ಳೆಕ್ಯಾತ ಜನಾಂಗ ಜಿರಾಯ್ತಿ ಪಳ್ಳವಳ್ಳಿ ಗ್ರಾಮ ಪಾವಗಡ ತಾಲ್ಲೂಕು ರವರುಗಳನ್ನು ಪತ್ತೆ ಮಾಡಿ ಇವರುಗಳಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟ 81 ಗ್ರಾಂ ಚಿನ್ನಾಭರಣ ಹಾಗೂ ಇದೇ ಆರೋಪಿಗಳು ಭಾಗಿಯಾಗಿರುವ
1] ಬಡವನಹಳ್ಳಿ ಠಾಣಾ ಮೊನಂ 29/2018 ಕಲಂ 457-380 ಐಪಿಸಿ
2] ಮಿಡಿಗೇಶಿ ಪೊಲೀಸ್ ಠಾಣಾ ಮೊನಂ 20/2018 ಕಲಂ 457-380 ಐಪಿಸಿ
3] ಗೌರಿಬಿದನೂರು ಪೊಲೀಸ್ ಠಾಣಾ ಮೊನಂ 183/2017 ಕಲಂ 379 ಐಪಿಸಿ
ಪ್ರಕರಣಗಳನ್ನು ಭೇದಿಸಿ ಈ ನಾಲ್ಕು ಪ್ರಕರಣಗಳಿಗೆ ಸಂಬಂದಪಟ್ಟಂತೆ ಆರೋಪಿಗಳಿಂದ ಒಟ್ಟು 149 ಗ್ರಾಂ ತೂಕದ ಚಿನ್ನಭಾರಣಗಳು, 100 ಗ್ರಾಂ ತೂಕದ ಬೆಳ್ಳಿಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದಂತಹ 2 ಹಿರೋಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರವಾಹನಗಳನ್ನು ಹಾಗೂ ನ್ಯೂನೋಸ್ಕೈ ಕಂಪನಿಯ ಒಂದು ಸ್ಕ್ರೀನ್ ಟಚ್ ಮೊಬೈಲ್ ಒಟ್ಟು 6 ಲಕ್ಷ ರೂ ಬೆಲೆಯ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಮಧುಗಿರಿ ಉಪವಿಭಾಗದ ಡಿಎಸ್ಪಿ ಶ್ರೀ ಕಲ್ಲೇಶಪ್ಪರವರ ನೇತೃತ್ವದಲ್ಲಿ ಮಧುಗಿರಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀ. ಅಂಬರೀಶ್, ಬಡವನಹಳ್ಳಿ ಠಾಣಾ ಇನ್ಸ್ಪೆಕ್ಟರ್ ಶ್ರೀ ಗಂಗಾಧರ, ಕೊಡಿಗೇನಹಳ್ಳಿ ಠಾಣೆ ಪಿ ಎಸ್ ಐ ಮೋಹನ್ ಕುಮಾರ್ ಹಾಗೂ ಮಧುಗಿರಿ ಪೊಲೀಸ್ ಠಾಣೆಯ ಪಿ ಎಸ್ ಐ ಎಸ್.ಎಲ್.ಆರ್. ರೆಡ್ಡಿ ಹಾಗೂ ಸಿಬ್ಬಂದಿಗಳಾದ ನಟರಾಜು, ರಂಗನಾಥ, ಜಯಪ್ರಕಾಶ್ ರಂಗಧಾಮಯ್ಯ, ಹಾಗೂ ನರಸಿಂಹರಾಜು, ಸುರೇಶ್ ನಾಯ್ಕ, ರಮೇಶ್ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.
ಪತ್ರಿಕಾ ಪ್ರಕಟಣೆ
ದಿನಾಂಕ 04.03.2018 ರಂದು ರಾತ್ರಿ 09.00 ಗಂಟೆ ವೇಳೆಯಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣಾ ಸರಹದ್ದು ಎಸ್.ಐ.ಟಿ ಬಡಾವಣೆ 6 ನೇ ಕ್ರಾಸ್ ನಲ್ಲಿ ನವೀನ್ ಕುಮಾರ್ ಮತ್ತು ಸಂದರ್ಶ ಎಂಬ ಹುಡುಗರಿಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಹೊಸ ಬಡಾವಣೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.
ಘಟನೆ ಹಿನ್ನಲೆ. :
ದಿನಾಂಕ 04.03.2018 ರಂದು ರಾತ್ರಿ 09.00 ಗಂಟೆ ವೇಳೆಯಲ್ಲಿ ಎಸ್.ಐ.ಟಿ ಬಡಾವಣೆ 6 ನೇ ಕ್ರಾಸ್ ನ ವಾಸಿಗಳಾದ ನವೀನಕುಮಾರ ಮತ್ತು ಸಂದರ್ಶ ಎಂಬ ಹುಡುಗರ ಮೇಲೆ 1) ಪುನೀತ ಬಿನ್ ರಾಜಣ್ಣ. 19 ವರ್ಷ ಪಿಯುಸಿ ವಿದ್ಯಾಥರ್ಿ 4 ನೇ ಕ್ರಾಸ್ ಗೋಕುಲ ಹೆಚ್.ಎಂ.ಟಿ. ಹಿಂಬಾಗ ಕ್ಯಾತ್ಸಂದ್ರ. ತುಮಕೂರು 2) ರಂಜನ್ ಕುಮಾರ್ ಬಿನ್ ರಂಗನಾಥ. 19 ವರ್ಷ ಬಿ.ಸಿ.ಎ. ವಿದ್ಯಾಥರ್ಿ 6 ನೇ ಕ್ರಾಸ್ ಎಸ್.ಐ.ಟಿ ಬಡಾವಣೆ ತುಮಕೂರು. ಸ್ವಂತ ಸ್ಥಳ : ಶಿರಾ ನಗರ 3) ನವೀನ್.ಟಿ. ಬಿನ್ ರಾಮಮೋಹನರೆಡ್ಡಿ. 20 ವರ್ಷ ರೆಡ್ಡಿ ಜನಾಂಗ ಬಿ.ಸಿ.ಎ. ವಿದ್ಯಾಥರ್ಿ ಕುವೆಂಪುನಗರ ತುಮಕೂರು ಮತ್ತು 4) ಮಹೇಶ್ ಕುಮಾರ್ ಬಿನ್ ಶಿವಕುಮಾರ್ 19 ವರ್ಷ ಪಿಯುಸಿ ವಿದ್ಯಾಥರ್ಿ ಆರ್.ವಿ. ಕಾಲೋನಿ ತುಮಕೂರು ರವರುಗಳು ಗಲಾಟೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ನವೀನಕುಮಾರ ಮತ್ತು ಸಂದರ್ಶ ರವರಿಗೆ ಹಲ್ಲೆ ಮಾಡಿದ್ದು ಈ ಸಂಬಂದ ಹೊಸ ಬಡಾವಣೆ ಠಾಣೆಯಲ್ಲಿ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು.
ಮಾನ್ಯ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ. ತುಮಕೂರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ. ತುಮಕೂರು. ಪೊಲೀಸ್ ಉಪಾಧೀಕ್ಷಕರು ತುಮಕೂರು ನಗರ ಉಪ ವಿಭಾಗ ತುಮಕೂರು ಹಾಗು ವೃತ್ತ ನಿರೀಕ್ಷಕರು ತಿಲಕ್ಪಾಕರ್್ ವೃತ್ತ ಇವರ ಮಾರ್ಗದರ್ಶನದಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣೆಯ 1. ಕಾಂತರಾಜು. ಎ.ಎಸ್.ಐ. 2) ಮಧುಸೂದನ್. ಎ.ಎಸ್.ಐ 3) ಮಂಜುನಾಥ. ಆರ್, 4) ಮಂಜುನಾಥ. ಟಿ.ಎಸ್. ಹಾಗು 5) ಅನಿಲ್ ಕುಮಾರ್ ಎಂ.ಜೆ ರವರುಗಳು ಎರಡು ತಂಡಗಳಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ದಿನಾಂಕ 06.03.2018 ರಂದು ಮೇಲ್ಕಂಡ ನಾಲ್ಕು ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ಈ ದಿನ ನ್ಯಾಯಾಂಗ ಬಂದನಕ್ಕೆ ಬಿಡಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿದ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ ತುಮಕೂರು ರವರು ಅಭಿನಂದಿಸಿರುತ್ತಾರೆ.
ತುರ್ತು ಸಹಾಯವಾಣಿ
![]() 100 |
![]() 0816-2278000 |
![]() 108 |
![]() 101 |
![]() 1912 |
![]() 1090 |
![]() 1091 |
![]() 1098 |
![]() 0816-2275451 |
![]() 0816-2274130 |
![]() 0816-2272480 |
![]() 0816-2278377 |
![]() 0816-2278473 |
![]() |
ವಿಪಿನ್ ರಾಯ್ ಪ್ರಜ್ವಲ್ ಗುಂಡಪ್ಪ ತಿಲಕ್ ನಂದೀಶ್ ಪಾಷ ಹೈದರ್
|