lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | Tumkur District Police | Karnataka State Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< November 2020 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
OUR MISSION
We aspire to be a world class Police service working in partnership with citizens and communities to prevent crime and road trauma, enhance public safety and maintain law and order.
We will be proactive in our efforts, professional in our demeanour, always being conscious not to infringe on the rights guaranteed to all citizens by constitution.
We are dedicated to protecting life, property and ensuring fair and equal treatment to everyone.
We will always remember that we are the guardian of our community and we are committed to public service excellence by providing safe and secure environment.
We strive towards boosting the morale and keeping the motivation and enthusiasm of our manpower at the highest possible levels.
Our members are dedicated to the service they provide and their actions reflect pride In the department and community.
OUR VISION
We strive to protect our diverse and dynamic community with fairness, integrity and respect for the rights of the individual.
We resolve to develop a creative, forward looking workforce, dedicated to raising our level of excellence to meet the challenges of tomorrow.

 

Locked House Monitoring System

ಜಿಲ್ಲಾ ಪೊಲೀಸ್ ಕಚೇರಿ ಹತ್ತಿರ  ದಿನಾಂಕ:08.06.2020 ರಂದು ಬೆಳಿಗ್ಗೆ 10.00 ಗಂಟೆಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿ ರವರು  ಸ್ಮಾರ್ಟ್ ಸಿಟಿ ತುಮಕೂರು ವತಿಯಿಂದ “ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್ ಸೆಂಟರ್ “ ಕಟ್ಟಡದ ಶಂಕುಸ್ಥಾಪನೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಸಂಭವನೀಯ  ಕಳ್ಳತನ ಮತ್ತು ಕಳ್ಳತನ ತಡೆಗಟ್ಟುವಿಕೆಗಾಗಿ ತುಮಕೂರಿನಲ್ಲಿ ಬೀಗ ಹಾಕಿದ ಮನೆಗಳ  ಮೇಲೆ  ನಿಗಾ ಇಡುವ ವ್ಯವಸ್ಥೆ (Locked House Monitoring System)  ತಂತ್ರಾಂಶದ ಅಡಿಯಲ್ಲಿ ಸ್ಮಾರ್ಟ್ ಸಿಟಿ ತುಮಕೂರು ವತಿಯಿಂದ ಕ್ಯಾಮೆರಾ ಗಳನ್ನು ನೀಡುವ ಮೂಲಕ ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಶರತ್ ಚಂದ್ರ  ಐಪಿಎಸ್ ಐಜಿಪಿ ಕೇಂದ್ರ ವಲಯ, ಶ್ರೀ ಜ್ಯೋತಿ ಗಣೇಶ್ ಶಾಸಕರು ತುಮಕೂರು ನಗರ,  ಶ್ರೀ ರಾಕೇಶ್ ಕುಮಾರ್ ಜಿಲ್ಲಾಧಿಕಾರಿ ತುಮಕೂರು, ಶ್ರೀ ಭೂಬಾಲನ್ ಆಯುಕ್ತರು ಮಹಾನಗರ ಪಾಲಿಕೆ ರವರು ಉಪಸ್ಥಿತರಿದ್ದರು.

 

 

 

ಪತ್ರಿಕಾ ಪ್ರಕಟಣೆ ದಿ:07/09/20

: : ಪತ್ರಿಕಾ ಪ್ರಕಟಣೆ ::

ದಿನಾಂಕ: 07/09/2020

ಆಫೀಮು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ದಿನಾಂಕ:07/09/2020 ರಂದು ತುಮಕೂರು ನಗರ ಪೊಲೀಸ್‌‌‌‌ ವೃತ್ತ ನಿರೀಕ್ಷಕರಾದ ನವೀನ್.ಬಿ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮದ್ಯಾಹ್ನ 11:30 ಗಂಟೆಯಲ್ಲಿ ತುಮಕೂರು ಟೌನ್ ಬಿ.ಜಿ.ಪಾಳ್ಯ ವೃತ್ತ-ಸಂತೆಪೇಟೆ ಮಾರ್ಗದ ರಸ್ತೆಯಲ್ಲಿನ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಹನುಮಂತರಾಯಪ್ಪ ಎಂಬುವವರ ಮಾಲೀಕತ್ವದ ಮನೆಗೆ ಮೇಲಾಧಿಕಾರಿಗಳ ಅನುಮತಿ ಮೇರೆಗೆ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ ಮತ್ತು ಸರ್ಕಾರಿ ಪಂಚರುಗಳ ಸಮಕ್ಷಮದಲ್ಲಿ ನಿಯಮಾನುಸಾರ ದಾಳಿ ಮಾಡಿ ಕೆಳಕಂಡ ಆರೋಪಿಗಳನ್ನು‌ ವಶಕ್ಕೆ ಪಡೆದು, ಮಾದಕ ವಸ್ತುವಾದ ಅಫೀಮನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಎರಡು ಪ್ಲಾಸ್ಟಿಕ್‌‌‌‌ ಕವರ್ ಮತ್ತು ಪೇಪರ್ ನಲ್ಲಿ ಸುತ್ತಿ ಇಟ್ಟಿದ್ದ 1 ಕೆಜಿ. 511 ಗ್ರಾಂ ತೂಕದ ಒಟ್ಟು ಬೆಲೆ ಸುಮಾರು 3,00,000/-ರೂ [ಮೂರು ಲಕ್ಷ ] ಅಫೀಮ್ ಅನ್ನು ಆರೋಪಿಗಳ ಕಡೆಯಿಂದ ಅಮಾನತ್ತುಪಡಿಸಿಕೊಂಡು ಆಸಾಮಿಗಳ ವಿರುದ್ದ ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ. 121/2020 ಕಲಂ 17(ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ರೀತ್ಯಾ ಪ್ರಕರಣ ದಾಖಲಿಸಿ  ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

ಆರೋಪಿಗಳ ವಿವರ

1) ರಾಜು ರಾಮ್ ಬಿನ್ ಮಾನಕ್‌ ರಾಮ್, 32 ವರ್ಷ, ವ್ಯವಸಾಯ, ವಾಸ ಮೂಲರಾಜ್ ಗ್ರಾಮ, ಲೋಹವಟ್‌‌ ತಾಲ್ಲೂಕ್, ಜೋದ್‌ಪುರ್ ಜಿಲ್ಲೆ ರಾಜಸ್ಥಾನ.

2) ನರಸಿರಾಮ್ ಬಿನ್ ಭೀಮ್‌ ರಾಮ್, 34 ವರ್ಷ, ರೈಲಿಂಗ್ಸ್‌ ವ್ಯಾಪಾರ, ಹಾಲಿ ವಾಸ ಭಗವತಿ ಲೇಔಟ್, ಶಿರಾಗೇಟ್‌, ತುಮಕೂರು ಸ್ವಂತ ಊರು ಡಬಲ್‌ ಗ್ರಾಮ, ಸಾಂಚೋ ತಾಲ್ಲೂಕ್, ಜಾಲೂರು ಜಿಲ್ಲೆ ರಾಜಾಸ್ಥಾನ.

ಸದರಿ ಪ್ರಕರಣದ ಆರೋಪಿಗಳು ಮತ್ತು ಅಫೀಮ್‌‌ ಅನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ,  ಪ್ರೋಬೇಶನರಿ ಐ.ಪಿ.ಎಸ್ ಅಧಿಕಾರಿಯಾದ ಶ್ರೀಮತಿ ಕನ್ನಿಕಾ ಅಗರ್‌ವಾಲ್, ನವೀನ.ಬಿ. ಸಿ.ಪಿ.ಐ. ತುಮಕೂರು ನಗರ ವೃತ್ತ ರವರುಗಳ ನೇತೃತ್ವದಲ್ಲಿ ಪಿ.ಎಸ್.ಐ. ಮಂಜುನಾಥ ಬಿ.ಸಿ, ಎ.ಎಸ್‌.ಐ ರಮೇಶ್‌, ಮತ್ತು ಸಿಬ್ಬಂದಿಗಳಾದ ಈರಣ್ಣ, ಏಜಾಜ್, ನಾಗರಾಜು, ಜಗದೀಶ್‌, ರಾಜಣ್ಣ, ಜೈಪ್ರಕಾಶ್, ನವೀನ್‌ಕುಮಾರ್, ರಾಮಚಂದ್ರಯ್ಯ, ಮತ್ತು ಶಿವಶಂಕರ್ ರವರುಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.


ಮಾದಕ ವಸ್ತು ಗಾಂಜಾ ಸೊಪ್ಪು ಸಾಗಾಣೆ ಮಾಡುತ್ತಿದ್ದ ನಾಲ್ವರ ಬಂಧನ.

 

ದಿನಾಂಕ:07/09/2020 ರಂದು  ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸ್ ಮಾರುತಿ ಡಾಬಾ ಮುಂಭಾಗ  ಮತ್ತು ಕೋರಾ ಠಾಣೆ ಸರಹದ್ದಿನ ಹನುಮಂತಗಿರಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ತಿಗಳರ ಸಮುದಾಯ ಭವನದ ಮುಂಭಾಗದ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಣಿಕೆ ಮಾಡುತ್ತಿದ್ದ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು,  ಸದರಿಯವರಿಂದ  2 ½ ಕೆಜಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಸಿಇಎನ್ ಪೊಲೀಸ್ ಠಾಣೆ ಮತ್ತು ಕೋರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ. ಬಂಧಿತರಲ್ಲಿ ರಾಮಾಂಜಿ @ ಚಿನ್ನರಾಮಾಂಜಿ ಈತನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಗಂಜಲಗುಂಟೆ ಗ್ರಾಮದ ವಾಸಿ ಮಾರಪ್ಪ ಎಂಬಾತನಿಂದ ಗಾಂಜಾ ಸೊಪ್ಪನ್ನು ಖರೀದಿಸಿ ತುಮಕೂರು, ಕೊರಟಗೆರೆ, ಶಿರಾ ಮಧುಗಿರಿ ಸುತ್ತ ಮುತ್ತ ಮಾರಾಟ ಮಾಡುತ್ತಿದ್ದಾಗಿ ತಿಳಿದು ಬಂದಿದೆ.

ಆರೋಪಿಗಳ ವಿವರ

1)      ಮಂಜುನಾಥ್ ಜಿ @ ರವಿ ಬಿನ್ ಗಂಗರಾಮಯ್ಯ, 38 ವರ್ಷ, ವ್ಯಾಪಾರ, 7ನೇ ಕ್ರಾಸ್, ಉಪ್ಪಾರಹಳ್ಳಿ, ತುಮಕೂರು

2)     ಮುನಿರಾಜು ಬಿನ್ ಕೃಷ್ಣಪ್ಪ, 20 ವರ್ಷ, ಕೂಲಿಕೆಲಸ, ಕನಕಾ ಪೇಂಟ್ಸ್ ಹಿಂಭಾಗ, ಸದಾಶಿವನಗರ, ತುಮಕೂರು ಟೌನ್

3)     ಚಿನ್ನರಾಮಾಂಜಿ ಬಿನ್ ನಾರಾಯಣಪ್ಪ, 34 ವರ್ಷ, ತೋರಣದ ವ್ಯಾಪಾರ, ಭೋವಿ ಕಾಲೋನಿ, ಕೊರಟಗೆರೆ ಟೌನ್

4)    ಸೀತಾರಾಮಯ್ಯ ಬಿನ್ ಹನುಮಂತನಾಯಕ ಲೇಟ್, 66 ವರ್ಷ, ಮಲ್ಲೇಕಾವು, ಸಿ.ಎನ್ ದುರ್ಗ ಹೋಬಳಿ, ಕೊರಟಗೆರೆ ತಾಲ್ಲೂಕು.

5)     ಮಾರಪ್ಪ (ಈತನು ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿರುತ್ತೆ)

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಸೂರ್ಯನಾರಾಯಣ್, ಡಿ.ಎಸ್.ಪಿ ಡಿ.ಸಿ.ಆರ್‌.ಬಿ. ರವರುಗಳ ಮಾರ್ಗದರ್ಶನದಲ್ಲಿ,  ಸಿಇಎನ್ ಠಾಣಾ ಇನ್ಸ್ ಪೆಕ್ಟರ್ ಎಂ.ವಿ ಶೇಷಾದ್ರಿ, ಕೋರಾ ಪಿ.ಎಸ್.ಐ ಹರೀಶ್, ಸಿಇಎನ್ ಠಾಣಾ ಪಿ.ಎಸ್.ಐ  ಶಮೀನ್ ಹಾಗೂ ಸಿಬ್ಬಂದಿಗಳಾದ ನಾಗರಾಜು.ಎಸ್, ಅಯೂಬ್ ಜಾನ್, ರಮೇಶ್, ಶಿವಶಂಕರ್, ಮಲ್ಲೇಶ್ , ರಮೇಶ್, ಶ್ರೀನಿವಾಸ್, ಕರೀಂ ಪಾಷ ರವರುಗಳ ತಂಡವನ್ನು  ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

ಪತ್ರಿಕಾ ಪ್ರಕಟಣೆ ದಿ: 04-09-20

 

ಪತ್ರಿಕಾ ಪ್ರಕಟಣೆ

ದಿನಾಂಕ 04-09-20

ಟೂಡಾ ಸೈಟ್‌ಗಳನ್ನು ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪಿಗಳ ಬಂಧನ.

 

ತುಮಕೂರು ನಗರ ಸದಾಶಿವನಗರ ವಾಸಿ ಅನ್ಸರ್‌ ಅಹಮದ್‌ ಖಾನ್‌ ಎಂಬುವವರಿಗೆ ತುಮಕೂರು ನಗರದಲ್ಲಿ ಹರಾಜಾಗುವ ಸೈಟುಗಳನ್ನು ಮುಂಚೆಯೇ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಇ.ಎಂ.ಡಿ ಹಣ ಕಟ್ಟಿಸಿಕೊಂಡು ಇವರಿಂದ ನಗದು ಹಾಗೂ 31 ವಿವಿಧ ಹೆಸರುಗಳ ಡಿಡಿಗಳು, ಟೂಡಾ ಕಮಿಷನರ್‌ ತುಮಕೂರುರವರ ಹೆಸರಿಗೆ ಸೇರಿದಂತೆ ಒಟ್ಟು 89 ಲಕ್ಷ ರೂಗಳನ್ನು ಪಡೆದು ಸೈಟುಗಳನ್ನು ಕೊಡಿಸದೆ ಡಿಡಿಗಳನ್ನು ಬೆಂಗಳೂರು ಕಾರ್ಪೋರೇಷನ್‌ ಕಛೇರಿ ಬಳಿಯಲ್ಲಿ ಡಿ.ಡಿ ಕಮೀಷನ್‌ ಪಡೆದು ಡಿಸ್ಕೌಂಟ್‌ ಮಾಡುವ ಲೋಕೇಶ್‌ ಹಾಗೂ ಆರ್‌.ಮಂಜುನಾಥ್‌ ರವರ ಮೂಲಕ ನಗದು ಮಾಡಿಕೊಂಡು ಆರೋಪಿಗಳು ಹಣವನ್ನು ಹಂಚಿಕೊಂಡಿರುತ್ತಾರೆ. ಈ ಸಂಬಂಧ ತಿಲಕ್‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಮೊನಂ-55/2020 ಕಲಂ, 406,420,467,468,470 ರೆ/ವಿ 34 ಐಪಿಸಿ, ರೀತ್ಯಾ ಪ್ರಕರಣ ದಾಖಲಾಗಿದ್ದು,  ಪ್ರಕರಣದ ತನಿಖೆ ನಡೆಸಿ ಈ ಕೆಳಕಂಡ ಅರೋಪಿಗಳನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

ಆರೋಪಿಗಳ ವಿವರ

 

1) ಮಧುಕುಮಾರ್‌.ಬಿ. @ ಮಧು ಬಿನ್‌ ಲೇಟ್‌ ಡಿ.ಭಾಸ್ಕರ್‌, 40 ವರ್ಷ, ರಿಯಲ್‌ ಎಸ್ಟೇಟ್‌ ವ್ಯಾಪಾರ, ಸ್ವಂತಸ್ಥಳ:-ಸಾಡೇಪುರ ಗ್ರಾಮ, ಡಿ.ಸಿ ಬಂಗಲೆ ಮುಂಭಾಗ, ಶಿರಾಗೇಟ್‌, ತುಮಕೂರು.

2) ಗುರುಪ್ರಸಾದ್ ಬಿನ್ ಲಕ್ಷ್ಮಿನಾರಾಯಣ ಶೆಟ್ಟಿ, 36 ವರ್ಷ, ಬ್ಯಾಂಕಿನಲ್ಲಿ ಡಿ.ಎಸ್.ಎ ಕೆಲಸ, ವಾಸ: # 202/1, ಅರಳಶೆಟ್ಟಿ ಕೆರೆ ಪಾಳ್ಯ, ವಿನಾಯಕ ಆಸ್ಪತ್ರೆಯ ಪಕ್ಕ, ಬನಶಂಕರಿ, ತುಮಕೂರು ಟೌನ್.

3) ಶ್ರೀನಿವಾಸ @ ಗುಂಡ  ಶ್ರೀನಿವಾಸ ಬಿನ್ ಲೇ|| ಈಶ್ವರಪ್ಪ, 48 ವರ್ಷ, ಕಂಡಕ್ಟರ್ ಕೆಲಸ, ವಾಸ: ಪುರುವರ ಗ್ರಾಮ, ಪುರವಾರ ಹೋಬಳಿ ಮಧುಗಿರಿ ತಾಲ್ಲೂಕ್. ಹಾಲಿ ವಾಸ: ಸುನೀತಾ ಹೋಟೆಲ್ ಪಕ್ಕ, 08 ನೇ ಕ್ರಾಸ್, ಎಸ್.ಎಸ್ ಪುರಂ ತುಮಕೂರು ಟೌನ್.

4) ಅಯಾಜ್ ಅಹಮದ್ @ ಅಯಾಜ್ ಬಿನ್ ಹೈದರಾಲಿ, 32 ವರ್ಷ, ಡ್ರೈವರ್ ಕೆಲಸ, ವಾಸ: ಮರಳೂರು ಗ್ರಾಮ ತುಮಕೂರು ಟೌನ್.

5) ಲೋಕೇಶ್ ಬಿನ್ ಲೇ|| ಸುದರ್ಶನಚಾರ್, 39 ವರ್ಷ, ಚೆಕ್ ಡಿಸ್ಕೌಂಟ್ ಕೆಲಸ, ವಾಸ: # 36, 01 ನೇ ಮುಖ್ಯ ರಸ್ತೆ, ಕಾವೇರಿ ನಗರ, ಕಣ್ಣೂರು ಹಳ್ಳಿ ಮುಖ್ಯ ರಸ್ತೆ, ಹೊಸಕೋಟೆ ತಾಲ್ಲೂಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆ.

6) ಮಂಜುನಾಥ ಬಿನ್ ಲೇ|| ರಾಮಯ್ಯ, 54 ವರ್ಷ, ಚೆಕ್ ಡಿಸ್ಕೌಂಟ್ ಕೆಲಸ, # 403, 04 ನೇ ಪ್ಲೋರ್, ಇಂಡ್ WIN REJOIE,          ಅಪಾರ್ಟ್ ಮೆಂಟ್, ಕ್ಲಾಸಿಕ್ ಲೇ ಔಟ್, ಬೇಗೂರು, ಬೆಂಗಳೂರು-68

7) ಶ್ರೀಮತಿ ಶೈಲ ಶ್ರೀ ಕೋಂ ಮಧುಕುಮಾರ್‌.ಬಿ. @ ಮಧು ಸ್ವಂತ ಸ್ಥಳ:-ಸಾಡೇಪುರ ಗ್ರಾಮ, ಡಿ.ಸಿ ಬಂಗಲೆ ಮುಂಭಾಗ, ಶಿರಾಗೇಟ್‌, ತುಮಕೂರು. (ತಲೆ ಮರೆಸಿಕೊಂಡಿರುತ್ತಾರೆ)

8) ಶ್ರೀನಿವಾಸ @ ಟೂಡಾ ಶ್ರೀನಿವಾಸ, (ತಲೆ ಮರೆಸಿಕೊಂಡಿರುತ್ತಾರೆ)

ಬಂಧಿತರಿಂದ ಸುಮಾರು 6 ಲಕ್ಷ ರೂ ಬೆಲೆ ಬಾಳುವ ಒಂದು KA-03-MT-7921 ನೇ ಇಕೋ ಸ್ಪೋರ್ಟ್ಸ್ ಕಾರು, ಮತ್ತು ಸುಮಾರು 2.15  ಲಕ್ಷ ಬೆಲೆ ಬಾಳುವ ಒಂದು KA-06-HH-8385 ನೇ ರಾಯಲ್‌ ಎನ್‌ಫೀಲ್ಡ್‌ ಬೈಕನ್ನು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತೆ.

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ,  ಹೆಚ್.ಜೆ. ತಿಪ್ಪೇಸ್ವಾಮಿ, ಕೆ.ಎಸ್.ಪಿ.ಎಸ್. ಡಿ.ಎಸ್.ಪಿ. ತುಮಕೂರು ಉಪವಿಭಾಗ ರವರ ನೇತೃತ್ವದಲ್ಲಿ,  ಸಿ.ಇ.ಎನ್‌ ಪೊಲೀಸ್ ಠಾಣಾ ನಿರೀಕ್ಷಕರಾದ ಶೇಷಾದ್ರಿ ಎಂ.ವಿ., ತಿಲಕ್‌ಪಾರ್ಕ್‌ ವೃತ್ತ ನಿರೀಕ್ಷಕರಾದ ಎಸ್‌.ಮುನಿರಾಜು, ತಿಲಕ್‌ಪಾರ್ಕ್‌ ಪಿ.ಎಸ್.ಐ ನವೀನ. ಹೆಚ್‌.ಎಸ್‌. ಸಿಬ್ಬಂದಿಯವರಾದ ಸೈಮನ್‌ ವಿಕ್ಟರ್‌, ಮುನಾವರ್‌ಪಾಷ, ಶಾಂತರಾಜು.ಪಿ. ಹನುಮರಂಗಯ್ಯ, ನರಸಿಂಹಮೂರ್ತಿ, ರಂಗಸ್ವಾಮಿ ರವರುಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 26 guests online
Content View Hits : 948959
Hackguard Security Enabled