lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
           
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Sunday, 01 September 2019
ಅಪರಾಧ ಘಟನೆಗಳು 01-09-19

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 11/2019 ಕಲಂ 174 ಸಿ ಆರ್ ಪಿಸಿ

ದಿನಾಂಕ:-31/08/2019 ರಂದು ಮದ್ಯಾಹ್ನ 02-00ಗಂಟೆಗೆ ಮಮತಾ .ಜಿ. ಕೊಂ ಕೆ.ಟಿ ಕುಮಾರ್ , ಸುಮಾರು 28ವರ್ಷ, ವಕ್ಕಲಿಗರು, ಮನೆಕೆಲಸ, ಕ್ಯಾದಿಗುಂಟೆ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮಮತಾ ರವರು  ಈಗ್ಗೆ ಸುಮಾರು 12ವರ್ಷಗಳ ಹಿಂದೆ  ಕ್ಯಾದಿಗುಂಟೆ  ಗ್ರಾಮದ  ತಿಮ್ಮಣ್ಣ ರವರ ಮಗನಾದ  ಕೆ.ಟಿ ಕುಮಾರ್   ರವರನ್ನು ವಿವಾಹವಾಗಿದ್ದು,  ಇವರಿಗೆ 2  ಧನಲಕ್ಷ್ಮಿ .ಕೆ.  ಸುಮಾರು 11 ವರ್ಷ ಮತ್ತು ಸುಮಾರು  7 ವರ್ಷದ ಸ್ವೇಹ ಕುಮಾರಿ .ಕೆ.  ಎಂಬ  ಇಬ್ಬರು  ಹೆಣ್ಣು ಮಕ್ಕಳು ಇದ್ದು  ಸಂಸಾರ ಮಾಡಿಕೊಂಡು ವಾಸವಾಗಿದ್ದು, ಪಿರ್ಯಾದಿ  ಯಜಮಾನರಾದ ಕುಮಾರ್ .ಕೆ.ಟಿ  ರವರು ಬಿ ಎಂ ಟಿ ಸಿಯಲ್ಲಿ  ಸುಮಾರು 17 ವರ್ಷ, ಕೆಲಸ  ಮಾಡಿದ್ದು,  ಈಗ್ಗೆಸುಮಾರು 3-4 ವರ್ಷಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ, ಜೀವನೋಪಾಯಕ್ಕಾಗಿ  ಪಿರ್ಯಾದಿ ರವರು ಜೀವನೋಯಕ್ಕಾಗಿ  ಬೆಂಗಳೂರನ್ನು ಬಿಟ್ಟು ಕ್ಯಾದಿಗುಂಟೆ ಗ್ರಾಮದಲ್ಲಿ ವಾಸವಾಗಿ, ಬೇಸಾಯ ಕೆಲಸ ಮಾಡಿಕೊಂಡಿದ್ದು, ಇಲ್ಲಿಯ ತನಕ ಸರಿಯಾಗಿ  ಮಳೆ ಬಾರದೆ ಬೆಳೆ ನಷ್ಟ  ಉಂಟಾಗಿದ್ದು, ಪಿರ್ಯಾದಿ ಯಜಮಾನರು ಬಿ.ಎಂ.ಟಿ.ಸಿ ಯಲ್ಲಿ ಕೆಲಸ ಬಿಟ್ಟಿದ್ದರಿಂದಲೊ, ಮಳೆ ಬಾರದೆ  ಬೆಳೆ ಕೈಗೆ ಸಿಗದೆ  ಜೀವನ ನಡೆಸಲು ಕಷ್ಠವಾಗುತ್ತಿದ್ದು, ಪಿರ್ಯಾದಿ  ಯಜಮಾರಾದ ಕೆ.ಟಿ ಕುಮಾರ್ ರವರು ದಿನಾಂಕ:31-08-2019 ರಂದು ಬೆಳಿಗ್ಗೆ ಸುಮಾರು 06-00 ಗಂಟೆ ಸಮಯದಲ್ಲಿತಮ್ಮ  ಜಮೀನಾದ ಸರ್ವೆ ನಂ 60/1 ರಲ್ಲಿರುವ ತುದ್ದಲಿ ಮರಕ್ಕೆ ತನ್ಮೂಲಕ  ತಾನೇ ನೇಣು ಬಿಗಿದುಕೊಂಡು  ಮೃತಪಟ್ಟಿದ್ದು ಸಾವಿನಲ್ಲಿ  ಯಾವುದೇ ರೀತಿಯ ಅನುಮಾನ ಇರುವುದಿಲ್ಲ.  ಈ ವಿಷಯವನ್ನು ಪಿರ್ಯಾದಿರವರು   ತುರುವೇಕೆರೆಯಲ್ಲಿ  ವಾಸವಾಗಿರುವ ಚಿಕ್ಕಮ್ಮರವರಾದ ರತ್ನಮ್ಮ ರವರ ಮನೆಯಲ್ಲಿದ್ದಾ ಪಿರ್ಯಾದಿ ತಮ್ಮ ತಿಮ್ಮರಾಜು ರವರು ಪೋನಿನ ಮುಖಾಂತರ ತಿಳಿಸಿದ್ದು  ಸ್ಥಳಕ್ಕೆ ಬಂದು ನೋಡಲಾಗಿ  ಮೇಲ್ಕಂಡ ವಿಷಯ ನಿಜವಾಗಿರುತ್ತೆ ಆದ್ದರಿಂದ  ತಾವುಗಳು ಸ್ಥಳಕ್ಕೆ ಬಂದು  ಮುಂದಿನ ಕ್ರಮ ಕೈಗೊಳ್ಳಬೇಕೆಂತ  ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಚಿನಾಹಳ್ಳಿ ಪೊಲೀಸ್ ಮೊ.ನಂ. 115/2019 ಕಲಂ 323, 324, 448,  504, 506 ರೆ/ವಿ 34 ಐ.ಪಿ.ಸಿ.

ದಿನಾಂಕ: 31-08-2019 ರಂದು ಮಧ್ಯಾಹ್ನ 03.30 ಗಂಟೆಗೆ ಠಾಣೆಗೆ ಬಂದು ಅರ್ಜಿದಾರರಾದ ಯಶಸ್ವಿನಿ ಟಿ. ಆರ್. ಕೋಂ ಶಶಿಧರ, ಸುಮಾರು 35 ವರ್ಷ, ಕೂಲಿಕೆಲಸ, ಮಾಕುವಳ್ಳಿ, ಶೆಟ್ಟಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು   ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆ, ತಾಯಿಯವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು. ಒಟ್ಟು 03 ಜನ ಮಕ್ಕಳು. ನಾವು ಮೂರು ಜನ ಮದುವೆಯಾಗಿದ್ದು, ನನ್ನ ಅಕ್ಕ ವೀಣಾ ಟಿ.ಆರ್ ಇವರು ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಈಗ ನನ್ನ ಅಣ್ಣ ಬಸವರಾಜು ಮತ್ತು ನಾನು ಇಬ್ಬರು ಇರುತ್ತೇವೆ. ನನ್ನನ್ನು ಮಾಕುವಳ್ಳಿ ಗ್ರಾಮದ ವಾಸಿಯಾದ ಶಶಿಧರರವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ತಾಯಿ ಮತ್ತು ನನ್ನ ತಂದೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದವರಾಗಿದ್ದು, ಇವರು ಸುಮಾರು 03 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಇವರು ಇರುವವರೆವಿಗೂ ನನ್ನನ್ನು ತವರು ಮನೆಗೆ ಕರೆದು ಕಳುಹಿಸುತ್ತಿದ್ದರು ಮತ್ತು ಹರಿಸಿನ ಕುಂಕುಮ ನೀಡುತ್ತಿದ್ದರು. ನನ್ನ ತಂದೆ, ತಾಯಿ ತೀರಿಕೊಂಡಾಗಿನಿಂದ ನನ್ನ ಅಣ್ಣ ಬಸವರಾಜು ನನ್ನನ್ನು ಕರೆದು ಕಳುಹಿಸುವುದನ್ನೇ ಬಿಟ್ಟನು. ಅದರಿಂದ ನಾನು ನನ್ನ ತಂದೆ, ತಾಯಿ ಆಸ್ತಿ ಪಡೆಯಲು ಗುಬ್ಬಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಿದೆನು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದು ಸರಿಯಷ್ಟೆ. ದಿನಾಂಕ: 25/08/2019 ರಂದು ನನ್ನ ಅಣ್ಣ ಬಸವರಾಜು ಬಿನ್ ರೇಣುಕಪ್ಪ ಇವನು ಮಾಕುವಳ್ಳಿಗೆ ಬಂದು ನೀನು ಕೋರ್ಟಿನಲ್ಲಿರುವ ಕೇಸನ್ನು ವಾಪಸ್ ಪಡೆಯಬೇಕು ಎಂದು ಬೆದರಿಕೆ ಹಾಕಿ ಹೋದನು. ದಿನಾಂಕ: 26/08/2019 ರಂದು ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ನನ್ನ ಅಣ್ಣ ಬಸವರಾಜು ಮತ್ತು ಇವನ ಜೊತೆಯಲ್ಲಿ ಶೆಟ್ಟಿಕೆರೆ ಹೋಬಳಿ ನ್ಯಾಕೋನಹಳ್ಳಿ ಗ್ರಾಮದ ವಾಸಿಯಾದ ಈರಣ್ಣ ಎಂಬುವವನನ್ನು ಕರೆದುಕೊಂಡು ಬಂದು ಏಕಾಏಕಿ ನನ್ನ ಮನೆಯ ಒಳಗೆ ನುಗ್ಗಿ ಅಡುಗೆ ಮಾಡುವ ತಯಾರಿಯಲ್ಲಿದ್ದ ನನ್ನನ್ನು ಬಾಯಿಗೆ ಬಂದಂತೆ ಬೈದು, ನೀನು ತಕ್ಷಣ ಕೋರ್ಟಿನಲ್ಲಿರುವ ಕೇಸು ಪಡೆದುಕೊಳ್ಳಬೇಕು ಎಂದು ನನ್ನನ್ನು ಕೈಗಳಿಂದ ರಪರಪನೆ ಹೊಡೆದನು. ಅಷ್ಟರಲ್ಲಿ ನನ್ನ ಗಂಡ ಶಶಿಧರ ಬಿಡಿಸಲು ಬಂದರು. ಅವರನ್ನು ಸಹ ಟ್ರ್ಯಾಕ್ಟರ್ ಗೆ ಹಾಕುವ ಗುಜ್ಸಿನಿಂದ ಹೊಡೆದು ಮೈಕೈ ನೋವುಂಟು ಮಾಡಿದರು. ನೀನು ಕೇಸು ವಾಪಸ್ ಪಡೆಯದೇ ಇದ್ದಲ್ಲಿ ನಿನ್ನ ಊರಿನಲ್ಲೇ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದನು. ಅಷ್ಟರಲ್ಲಿ ನನ್ನ ಗ್ರಾಮದ ಜನರು ಗಲಾಟೆ ಕೇಳಿ ನನ್ನ ಮನೆಯ ಹತ್ತಿರ ಬರುತ್ತಿದ್ದಂತೆ ಸುಮ್ಮನಾದರು. ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದರು. ಅದರಿಂದ ತಾವುಗಳು ಇವರನ್ನು ಕರೆಯಿಸಿ ಕಾನೂನು ಕ್ರಮ ಜರುಗಿಸಿ ಬಂದೋಬಸ್ತ್ ಮಾಡಿಸಿ ಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಮತ್ತು ನಾನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುತ್ತೇನೆ  ಎಂದು ನೀಡಿದ ದೂರನ್ನು ಪಡೆದು ಮಧ್ಯಾಹ್ನ 03.30 ಗಂಟೆಗೆ ಠಾಣಾ ಮೊ.ನಂ. 115/2019 ಕಲಂ 323, 324, 448,  504, 506 ರೆ/ವಿ 34 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 68 guests online
Content View Hits : 399740