lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Thursday, 05 September 2019
ಅಪರಾಧ ಘಟನೆಗಳು 05-09-19

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 79/2019 ಕಲಂ: 279,337 ಐ.ಪಿ.ಸಿ

ದಿನಾಂಕ:04/09/2019 ರಂದು ಸಂಜೆ 6-15  ರಿಂದ  6-45 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಮಹೇಶ್ ನಾಯಕ ಬಿನ್ ಸೋಮ್ಲಾನಾಯಕ, 50 ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ, ಎಂ.ಹೆಚ್ ಕಾವಲ್, ಕಂದಿಕೆರೆ ಹೋಬಳಿ, ತಿಪಟೂರು ತಾಲ್ಲೋಕ್ ರವರಿಂದ ಪಡೆದ ಹೇಳಿಕೆಯ ಅಂಶವೇನೆಂದರೆ, ಈ ದಿನ ದಿನಾಂಕ: 04/09/2019 ರಂದು ಮಧ್ಯಾಹ್ನ 4-00 ಗಂಟೆಯ ಸಮಯದಲ್ಲಿ ನನ್ನ ಬಾಬ್ತು KA-44 L-7638 TVS XL ನಲ್ಲಿ ಹಿಂಬದಿಯಲ್ಲಿ ನನ್ನ ಜೊತೆ ಕೆಲಸ ಮಾಡುವ ಸಲೀಂ ರವರನ್ನು ಕುಳ್ಳಿರಿಸಿಕೊಂಡು ಹುಚ್ಚನಹಟ್ಟಿಯಿಂದ ತಿಪಟೂರಿಗೆ ಹೋಗಲು ತಿಪಟೂರು-ಕಲ್ಕೆರೆ ರಸ್ತೆಯಲ್ಲಿ ಆದಿಲಕ್ಷ್ಮೀನಗರದ ರಂಗಸ್ವಾಮಿಯವರ ಹೋಟೆಲ್ ಮುಂಭಾದ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ತಿಪಟೂರು ಕಡೆಯಿಂದ ಒಂದು ಹೊಸ ಆಫೆ ಲಗೇಜ್ ಆಟೋ ಚಾಲಕ ತನ್ನ ಅಟೋವನ್ನು ಅತಿವೇಗವಾಗಿ  ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ  TVS XL ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾವು ಬೈಕಿನ ಸಮೇತ ಕೆಳಗೆ ಬಿದ್ದೆವು. ನನಗೆ ಬಲಗೈಗೆ ಮತ್ತು ಬಲ ಮಂಡಿಯ ಹತ್ತಿರ ರಕ್ತಗಾಯವಾಗಿರುತ್ತೆ. ನನ್ನ ಹಿಂಭಾಗ ಕುಳಿತಿದ್ದ ಸಲೀಂ ರವರಿಗೆ ತರಚಿದ ಗಾಯವಾಗಿರುತ್ತದೆ. ಲಗೇಜ್ ಆಟೋ ಪಲ್ಟಿಯಾಗಿದ್ದು, ಆಟೋದ ಹಿಂಭಾಗದಲ್ಲಿ ಕುಳಿತಿದ್ದ ಕಮಲಮ್ಮ ನವರಿಗೆ ತಲೆಗೆ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತೆ. ಲಗೇಜ್ ಆಟೋ ಚಾಲನೆ ಮಾಡುತ್ತಿದ್ದ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ. ಆಟೋದ  ಚಾರ್ಸಿ ನಂ-MBX0003ABXE855947  ಇಂಜಿನ್ ನಂ-  S9E8992655 ಆಗಿರುತ್ತೆ. ಗಾಯಗೊಂಡಿದ್ದ ನಮ್ಮಗಳನ್ನು ಯಾವುದೋ ವಾಹನದಲ್ಲಿ ಸಲೀಂರವರು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾಗಿರುವ ಮೇಲ್ಕಂಡ ಲಗೇಜ್ ಆಫೆ ಆಟೋ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ಹೇಳಿಕೆಯನ್ನು ಪಡೆದು ಠಾಣೆಗೆ ಬಂದು ಸಂಜೆ 6-55 ಗಂಟೆಗೆ ಠಾಣಾ ಮೊ.ನಂ 79/2019 ಕಲಂ: 279,337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-142/2019 ಕಲಂ 379 ಐಪಿಸಿ

ದಿನಾಂಕ-04/09/2019 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿಯಾದ ಮರಿಗಂಗಯ್ಯ ಬಿನ್ ಲೇಟ್ ಮಡೇಹನುಮಯ್ಯ, 49 ವರ್ಷ, ಬೊಮ್ಮನಹಳ್ಳಿ ಕ್ರಾಸ್ ತೋಟದ ಮನೆ, ಮಸ್ಕಲ್ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ-03/09/2019 ರಂದು  ದಿನನಿತ್ಯದಂತೆ ನಾನು ನನ್ನ ಜಮೀನಿನಲ್ಲಿ ವ್ಯವಸಾಯದ ಕೆಲಸಗಳನ್ನು ಮುಗಿಸಿ ನನ್ನ ವಾಹನಗಳಾದ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನವಾದ ಕೆಎ-06-ಇಎಕ್ಸ್-7744 ಹೊಂಡಾ ಶೈನ್ ವಾಹನವನ್ನು ರಾತ್ರಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ನಂತರ ಬೆಳಿಗ್ಗೆ ದಿನಾಂಕ-04/09/2019 ರಂದು ಬೆಳಗಿನ ಜಾವ 5-00 ಗಂಟೆಗೆ ಎದ್ದು ಆಚೆ ಬಂದು ನೋಡಲಾಗಿ ನನ್ನ ಬಾಬ್ತು ಬೈಕ್ ಇರಲಿಲ್ಲ ನಂತರ ಸುತ್ತ-ಮುತ್ತ  ಎಲ್ಲ ಕಡೆಗಳಲ್ಲಿ ಹುಡುಕಲಾಗಿ ಎಲ್ಲಯೂ ಪತ್ತೆಯಾಗಿರುವುದಿಲ್ಲ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಆದ್ದರಿಂದ ನನ್ನ ಬಾಬ್ತು  ಕಳುವಾಗಿರುವ ಕೆಎ-06-ಇಎಕ್ಸ್-7744 ಹೊಂಡಾ ಶೈನ್ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಇದರ ಅಂದಾಜು ಬೆಲೆ ಸುಮಾರು 44,000/- ರೂ ಗಳು ಆಗಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-142/2019 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಗುಬ್ಬಿ ಪೊಲೀಸ್ ಠಾಣಾ ಮೊ.ನಂ- 197/2019 ಕಲಂ- 279 337 304[ಎ] ಐಪಿಸಿ

ದಿ-04-09-2019 ರಂದು ಬೆಳೆಗ್ಗೆ 11.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಇದೇ ದಿನ ಬೆಳೆಗ್ಗೆ 06.30 ಗಂಟೆಯಲ್ಲಿ ಪಿರ್ಯಾದಿ  ತಮ್ಮ ಈಶ್ವರಯ್ಯ ಮತ್ತು ಅವರ ಹೆಂಡತಿ ಗಾಯತ್ರಿ ಹಾಗೂ ಮಗು ಕೀರ್ತಿ  ಮೂವರು ಕೆಎ-04-ಜೆಎಫ್-5804ನೇ ದ್ವೀಚಕ್ರ ವಾಹನದಲ್ಲಿ ಗುಬ್ಬಿ ತಾಲ್ಲೂಕ್ ಎಂ.ಹೆಚ್.ಪಟ್ಟಣ ಸಮೀಪ ಇರುವ ಪೆಟ್ರೋಲ್ ಬಂಕ್ ಬಳಿ ಎನ್.ಹೆಚ್-206 ರಸ್ತೆಯಲ್ಲಿ ಬೆಂಗಳೂರು ಕಡೆಗೆ ಹೋಗುವಾಗ ಎದರಿಗೆ ತುಮಕೂರು ಕಡೆಯಿಂದ ಬಂದ ಕೆಎ-13-ಎಫ್-2179ನೇ ಕೆಎಸ್.ಆರ್.ಟಿಸಿ ಬಸ್ಸು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ದ್ವೀಚಕ್ರ ವಾಹನದಲ್ಲಿದ್ದ  ಈಶ್ವರಯ್ಯ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಗಾಯತ್ರಿ ಮತ್ತು ಕೀರ್ತಿ ಇಬ್ಬರಿಗೆ ತೀವ್ರ ತರಹದ ಪೆಟ್ಟುಗಳು ಬಿದ್ದಿರುತ್ತೆಂತ ಪ್ರತ್ಯಕ್ಷವಾಗಿ ಕಂಡ ನಟರಾಜು ಅರಸು ರವರು ಪೋನಿನಲ್ಲಿ ತಿಳಿಸಿದ ಮೇರೆಗೆ ಪಿರ್ಯಾದಿ  ಮನೆಯಿಂದ ಹೊರಟು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ಈಶ್ವರಯ್ಯ ಮತ್ತು ಗಾಯತ್ರಿ ಇಬ್ಬರು ಮೃತಪಟ್ಟಿದ್ದು ಕೀರ್ತಿ ರವರಿಗೆ ಪೆಟ್ಟುಗಳಾಗಿರುತ್ತವೆ. ನಂತರ ಮೃತದೇಹಗಳನ್ನು ನೋಡಿ ಖಚಿತಪಡಿಸಿಕೊಂಡು ಈ ಅಪಘಾತಕ್ಕೆ ಕಾರಣನಾದ ಕೆಎ-13-ಎಫ್-2179ನೇ ಕೆಎಸ್.ಆರ್.ಟಿಸಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂತ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಸಿ,ಎಸ್.ಪುರ  ಠಾಣಾ ಮೊ.ನಂ:55/2019.  ಕಲಂ:306 ರೆ/ವಿ 34 ಐಪಿಸಿ

ಫಿರ್ಯಾದಿಯಾದ ಮಂಜುನಾಥ   ಬಿನ್  ಲೇಟ್  ಶ್ರೀನಿವಾಸ, 38 ವರ್ಷ, ಯಳವ ಜನಾಂಗ, ಲಿಂಗಮ್ಮನಹಳ್ಳಿ  ಗ್ರಾಮ, ಕಡಬಾ  ಹೋಬಳಿ, ಗುಬ್ಬಿ  ತಾಲ್ಲೂಕುರವರು  ಠಾಣೆಗೆ   ಹಾಜರಾಗಿ ನೀಡಿದ  ದೂರಿನ ಸಾರಾಂಶವೆಂಧರೆ, ನನ್ನ ಮಗಳಾದ  ಚಂದನರವರಿಗೆ 17 ವರ್ಷ ವಯಸ್ಸಾಗಿದ್ದ  ಸಮಯದಲ್ಲಿ ಗುಬ್ಬಿಯ ಶ್ರೀನಿವಾಸ ಕಾಲೇಜಿಗೆ  ಹೋಗುತಿದ್ದ  ಸಮಯದಲ್ಲಿ  ನೇರಳೆ ಕಟ್ಟೆ ಪಾಳ್ಯದ  ವಾಸಿ ಶಿವರಾಜುರವರ   ಮಗನಾದ  ರವಿರವರು  ನನ್ನ ಮಗಳನ್ನು ಪೀಡಿಸಿ  ನಮ್ಮ ಮನೆಯಿಂದ  ಕರೆದುಕೊಂಡು ಹೋದ ಬಗ್ಗೆ  ಠಾಣೆಯಲ್ಲಿ ಈ ಬಗ್ಗೆ ಪೋಕ್ಸೋ  ಪ್ರಕರಣ  ದಾಖಲಾಗಿದ್ದು,  ಈ ಬಗ್ಗೆ   ನ್ಯಾಯಾಲಯದಲ್ಲಿ  ವಿಚಾರಣೆ ನಡೆಯುತ್ತಿರುತ್ತದೆ, ಈಗಿರುವಾಗ  ನನ್ನ ಮಗಳಿಗೆ 18 ವರ್ಷ ವಯಸ್ಸಾಗಿದ್ದು, ನೇರಳೆ ಕಟ್ಟೆ ಪಾಳ್ಯದ  ಶಿವಣ್ಣನವರ ಮಗನಾದ  ಶಶಿ ಎಂಬಾತನೊಂದಿಗೆ  ಮದುವೆ  ನಿಶ್ಚಯ ಮಾಡಿದ್ದು, ಇದಕ್ಕೆ ನಮ್ಮ  ಮಗಳು ಸಹ ಒಪ್ಪಿದ್ದಳು, ಈಗಿರುವಾಗ  ಶಿವರಾಜು ಮಗನಾದ  ರವಿ ಎಂಬಾತನು , ನಾನು ಮದುವೆ ನಿಶ್ಚಯ ಮಾಡಿದ್ದ ಶಶಿ ಎಂಬಾತನ ಮೊಬೈಲ್ ನಂ. 7022565939 ಗೆ ಪೋನ್ ಮಾಡಿ ನೀನು ಮದುವೆಯಾಗುತ್ತೀಯಲ್ಲಾ ಆ ಹುಡುಗಿಯನ್ನು ಹೇಗೆ ಮದುವೆಯಾಗುತ್ತೀಯಾ  ನೋಡುತ್ತೇನೆ, ಅವಳು ನನ್ನನ್ನು ಮದುವೆಯಾಗ ಬೇಕು  ಹೋರತು , ನಿನ್ನನ್ನು  ಮದುವೆಯಾಗಲು  ಬಿಡುವುದಿಲ್ಲಾ ಎಂದು ಹೆದರಿಸಿದನು, ಹಾಗೇನಾದರೂ ಮದುವೆಯಾದಲ್ಲಿ  ಅವಳು ಸಹ ಸಾಯುವಂತೆ ಮಾಡುತ್ತೇನೆ ಎಂದು ಬೆದರಿಕೆ  ಹಾಕಿದನು, ನಂತರ ಈ ವಿಚಾರವನ್ನು ಶಶಿ ನಮ್ಮ ಮನೆಯ ಬಳಿ ಬಂದು ವಿಚಾರ ತಿಳಿಸಿದಾಗ, ನಾನು ಮತ್ತೆ  ರವಿರವರಿಗೆ ಪೋನ್ ಮಾಡಲು  ತಿಳಿಸಿದ್ದು,  ನನ್ನ ಮಗಳ ಮುಂದೆಯೇ ಶಶಿಯು ಲೌಡ್ ಸ್ಪೀಕರ್  ಇಟ್ಟು ರವಿಗೆ ಪೋನ್ ಮಾಡಿದ್ದು, ಮೇಲ್ಕಂಡ ವಿಚಾರವನ್ನೇ ಪುನಹ ನುಡಿದಿರುತ್ತಾರೆ, ಈ ವಿಚಾರದಲ್ಲಿ  ನನ್ನ ಮಗಳಾದ  ಚಂದನರವರು ಬೇರೆಯಾರೊಂದಿಗೂ ಮದುವೆಯಾಗಲು ಬಿಡುವುದಿಲ್ಲಾ ಎಂಧು ಮನನೊಂದು ಮನಸ್ಸಿಗೆ ಬೇಜಾರುಮಾಡಿಕೊಂಡು,ದಿನಾಂಕ:27.08.2019 ರಂಧು ರಾತ್ರಿ ಯಾವುದೋ ಸಮಯದಲ್ಲಿ ಯಾವುದೋ ಮಾತ್ರೆಗಳನ್ನು ನುಂಗಿದ್ದು, ದಿನಾಂಕ:28.08.2019 ರಂಧು ಬೆಳಗ್ಗೆ 7.00 ಗಂಟೆ ಸಮಯದಲ್ಲಿ  ನನ್ನ ಮಗಳನ್ನು ನೋಡಿದಾಗ ಪ್ರಜ್ಞೆ ತಪ್ಪಿ  ಬಿದ್ದಿದ್ದು, ಪಕ್ಕದಲ್ಲೆ  ಯಾವುದೋ ಮಾತ್ರೆಗಳ ಶೀಟುಗಳು ಬಿದ್ದಿದ್ದವು, ತಕ್ಷಣ ನಾನು ನನ್ನ ಮಗಳು ಚಂದನರವರನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಒಳರೋಗಿಯಾಗಿ ಚಿಕತ್ಸೆ ಕೊಡಿಸುತಿದ್ದು,ಚಿಕಿತ್ಸೆ ಫಲಕಾರಿಯಾಗದೇ  ನನ್ನ ಮಗಳು ಚಂದನರವರು ದಿನಾಂಕ:03.09.2019 ರಂಧು ರಾತ್ರಿ 9.45 ಗಂಟೆಗೆ ಮೃತಪಟ್ಟಿದ್ದು,  ನನ್ನ  ಮಗಳ ಸಾವಿಗೆ ರವಿ ಹಾಗೂ ಇವರ ತಂದೆ ಶಿವರಾಜುರವರರೇ ಕಾರಣ ಎಂದು ನೀಡಿದ ದೂರನ್ನು ಪಡೆದು  ಪ್ರಕರಣ  ದಾಖಲಿಸಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 139/2019 ಕಲಂ 456, 380 ಐಪಿಸಿ

ದಿನಾಂಕ: 04-09-2019 ರಂದು ಬೆಳಿಗ್ಗೆ 09-30 ಗಂಟೆಗೆ ಉಷಾರಾಣಿ ಕೋಂ ಸುರೇಶ್ ಕುಮಾರ್, 31 ವರ್ಷ, ಲಿಂಗಾಯ್ತರು, ಗೃಹಿಣಿ, ಸ್ವಂತ ಊರು-ಮದ್ದನಹಳ್ಳಿ ಗ್ರಾಮ, ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲ್ಲೂಕು, ಹಾಲಿ ವಾಸ:ಸುರೇಶ್ ರವರ ಮನೆಯಲ್ಲಿ, ಬೈಚಾಪುರ ರಸ್ತೆ, ಚನ್ನಪ್ಪ ಬಡಾವಣೆ, ಮಾಗಡಿ ಟೌನ್, ರಾಮನಗರ ಜಿಲ್ಲೆ, ಪೋನ್ ನಂ 9964589902 ರವರು ನೀಡಿದ ದೂರಿನ ಅಂಶವೇನೆಂದರೆ, "ನನಗೆ ಈಗ್ಗೆ ಸುಮಾರು 08 ವರ್ಷಗಳ ಹಿಂದೆ ತುರುವೇಕೆರೆ ತಾಲ್ಲೂಕು ಮದ್ದನಹಳ್ಳಿ ಗ್ರಾಮದ ನಂಜಪ್ಪ ಎಂ.ಬಿ ರವರ ಹಿರಿಯ ಮಗನಾದ ಸುರೇಶ್ ಕುಮಾರ್ ಎಂಬುವವರೊಂದಿಗೆ ಕೊಟ್ಟು ಮದುವೆ ಮಾಡಿಸಿದ್ದು ನನ್ನ ತಂದೆಯವರ ಗ್ರಾಮವಾದ ಡಿ.ಕೊರಟಗೆರೆ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ, ಇಲ್ಲಿಗೆ ಗೌರಿಗಣೇಶ ಹಬ್ಬಕ್ಕೆ ತಾಯಿ ತಂದೆ ಮನೆಗೆ ದಿನಾಂಕ:-31-08-2019 ರಂದು ನಾನು ಮತ್ತು ನನ್ನ ಮಗಳು ಬಂದಿದ್ದು ನನ್ನ ತಂದೆಯವರಿಗೆ ಪಾರ್ಶ್ವವಾಯು ಆಗಿದ್ದು ಅವರು ನಿತ್ಯಕರ್ಮಗಳಿಗೆ ಮನೆಯಿಂದ ಆಗಾಗ್ಗೆ ಹೊರಗಡೆ ಹೋಗಿ ಬರುವವರಾಗಿದ್ದು ದಿನಾಂಕ:-03-09-2019 ರಂದು ರಾತ್ರಿ ಸಹ ಎಂದಿನಂತೆ ನಮ್ಮ ತಂದೆಯವರು ನಮ್ಮ ಮನೆಯ ಹಾಲ್ ನಲ್ಲಿ ಮಲಗಿದ್ದು ರಾತ್ರಿ ನನ್ನ ತಂದೆಯವರು ನಿತ್ಯಕರ್ಮಕ್ಕೆ ಹೊರಗಡೆ ಹೋಗಿದ್ದು ನಮ್ಮ ತಂದೆಯವರು ಹೊರಗಡೆ ಹೋಗಿರುವುದನ್ನು ಯಾರೋ ಕಳ್ಳರು ಗಮನಿಸಿ ನಾವು ಮಲಗಿದ್ದ ಸಮಯದಲ್ಲಿ ಮನೆಯ ಒಳಗಡೆ ಬಂದು ರಾತ್ರಿ ಸುಮಾರು 02-45 ಗಂಟೆಯಲ್ಲಿ ನಾನು ಮಲಗಿರುವುದನ್ನು ನೋಡಿ ನನ್ನ ಕೊರಳಲ್ಲಿ ಇದ್ದ ಎರಡು ಎಳೆಯ ಮಾಂಗಲ್ಯ ಸರವನ್ನು ಹಾಗೂ ಮತ್ತೊಂದು ಬಂಗಾರದ ಸರವನ್ನು ಹಾಕಿಕೊಂಡಿರುವುದನ್ನು ನೋಡಿ ಕಿತ್ತುಕೊಂಡಾಗ ನಾನು ಎಚ್ಚರಗೊಂಡು ಆತನ ಕೈ ಹಿಡಿದುಕೊಳ್ಳುವಷ್ಟರಲ್ಲಿ ನನ್ನ ಕೊರಳಲ್ಲಿದ್ದ ಮಾಂಗಲ್ಯದ ಸರದ ಪೈಕಿ ಒಂದು ಎಳೆ ಮಾಂಗಲ್ಯ ಸರ ಹಾಗೂ ಎರಡು ತಾಳಿ ಹಾಗೂ ಒಂದು ಗುಂಡು ಹಾಗೂ ಒಂದು ಬಂಗಾರದ ಸರವನ್ನು ಕಿತ್ತುಕೊಂಡು ಓಡಿ ಹೋದನು. ಆ ಸಮಯದಲ್ಲಿ ನನ್ನ ಮಾಂಗಲ್ಯ ಸರದ ಒಂದು ಎಳೆ ಸರವು ಕತ್ತಿನಲ್ಲಿ ಉಳಿದುಕೊಂಡಿರುತ್ತೆ. ಕಳ್ಳತನ ಮಾಡಿಕೊಂಡು ಹೋಗಿರುವ ವಡವೆಗಳ ಪೈಕಿ 01 ಗ್ರಾಂ ನ ಒಂದು ಬಂಗಾರದ ಗುಂಡು, 05 ಗ್ರಾಂ ತೂಕದ ಎರಡು ಬಂಗಾರದ ತಾಳಿಗಳು, ಮಾಂಗಲ್ಯ ಸರದ ಒಂದು ಎಳೆಯ ತೂಕ 24 ಗ್ರಾಂ ಹಾಗೂ ಮತ್ತೊಂದು ಅಂಜಲಿ ಕಟಿಂಗ್ ನ ಕೊರಳ ಚೈನು ತೂಕ 10 ಗ್ರಾಂ, ಇವುಗಳ ಒಟ್ಟು ತೂಕ 40 ಗ್ರಾಂ, ಬೆಲೆ ಸುಮಾರು 1,25,000/- ರೂ ಆಗಬಹುದು, ಆದ್ದರಿಂದ ಕಳ್ಳತನ ಮಾಡಿಕೊಂಡು ಹೋಗಿರುವ ಅಸಾಮಿಯನ್ನು ಪತ್ತೆ ಮಾಡಿ ಕಳುವಾಗಿರುವ ಬಂಗಾರದ ವಡವೆಗಳನ್ನು ಪತ್ತೆ ಮಾಡಿಕೊಡಲು" ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 139/2019 ಕಲಂ 456, 380 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 98/2019 ಕಲಂ 427, 447 ಐಪಿಸಿ

ದಿನಾಂಕ: 04/09/2019 ರಂದು ಮದ್ಯಾಹ್ನ 1-30 ಗಂಟೆಗೆ ತುಮಕೂರು, ಗೆದ್ದಲಹಳ್ಳಿ, ರಿಂಗ್ ರಸ್ತೆ, ಸೇಕ್ರೆಡ್‍ ಹಾರ್ಟ್‍ ಶಾಲೆ, ಸುಜಯ್‍ ಪಾಯ್ಸ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 03/09/2019 ರಂದು ಸೇಕ್ರೇಡ್ ಹಾರ್ಟ್‍ ಶಾಲೆ ರಿಂಗ್ ರಸ್ತೆಯಲ್ಲಿರುವ ಶಾಲೆಯ ಕಾಂಪೌಂಡ್‍ ನ್ನು ರಾತ್ರಿ ಹೊತ್ತು ನಮಗೆ ತಿಳಿಯದೆ ಕೆಡವಿ ಹಾಕಿದ್ದಾರೆ.  ಈ ಜಾಗವು ಸರ್ವೇ ನಂ. 48/3 ರಲ್ಲಿ ಇದ್ದು, ಈ ಸ್ವತ್ತನ್ನು ಭದ್ರಾವತಿಯ ಗೌಸ್‍ಕಾದರಿ ಯವರಿಂದ ಶುದ್ದ ಕ್ರಯಕ್ಕೆ ಹೊಂದಿದ್ದು, ತದನಂತರ ಅಲಿನೇಷನ್ ಮಾಡುವಾಗಲೂ ಸರ್ವೆ ಮಾಡಿದ್ದು, ತದನಂತರ ಈ ನಾಲ್ಕು ಸ್ವತ್ತು ಟೂಡಾ ಏಕ ನಿವೇಶನ ಆಗಿರುತ್ತದೆ.  ಇದಕ್ಕೆ ಹೊಂದಿಕೊಂಡಂತೆ ಪೂರ್ವ ಭಾಗದಲ್ಲಿ ಮೂರು ಗುಂಟೆ ಜಮೀನನನ್ನು ಅಳತೆ ಮಾಡಿ ಗೌಸ್ ಮೊಹಿದ್ದೀನ್‍ ರವರಿಂದ ಕ್ರಯಕ್ಕತೆ ಪಡೆದಿರುತ್ತೇವೆ.  ತದನಂತರ ನಗರ ಸಭೆಯಿಂದ ಕಾಂಪೌಂಡ್‍ ಕಟ್ಟಲು ಲೈಸೆನ್ಸ್‍ ಪಡೆದಿದ್ದು, ಹಾಲೋಬ್ರಿಕ್ಸ್‍ ನಿಂದ ಕಾಂಪೌಂಡ್ ಕಟ್ಟಿರುತ್ತೇವೆ.        ದಿನಾಂಕ: 03/09/2019 ರಂದು ರಾತ್ರಿ ಕಾಂಪೌಂಡ್ ಹೊಡೆದು ಹಾಕಿ ಗೌಸ್ ಮೊಹದ್ದೀನ್ ಮತ್ತು ಮಕ್ಕಳಾದ ದಸ್ತಗೀರ್‍, ಅಫ್‍ಸರ್ ಪಾಷ್ ಮತ್ತು, ಕೌಸರ್ ಪಾಷ ಅಕ್ರಮವಾಗಿ ಪ್ರವೇಶ ಮಾಡಿರುತ್ತಾರೆ.  ಕಾಂಪೌಂಡ್ ಗೋಡೆ ಕೆಡವಿ ಹಾಕಿರುವುದರಿಂದ ಉಂಟಾಗಿರುವ ನಷ್ಟವನ್ನು ನಂತರ ವಿವರವಾಗಿ ತಿಳಿಸುತ್ತೇನೆ.     ಆದ್ದರಿಂದ ಈ ಕಾಂಪೌಂಡ್‍ ನ್ನು ಮತ್ತೆ ಕಟ್ಟಲು, ಶಾಲಾ ಮಕ್ಕಳಿಗೆ ಸೂಕ್ತ ಭದ್ರತೆಯನ್ನು ಕೊಡಬೇಕೆಂದು, ಈ ಕಾಂಪೌಂಡ್‍ ಕೆಡವಿ ಹಾಕಿದವರಿಗೆ ಸೂಕ್ತ ಕ್ರಿಮಿನಲ್ ಮೊಕ್ಕದ್ದಮೆಯನ್ನು ಹಾಕಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 616854
Hackguard Security Enabled