lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 7 8
9 10 11 12 13 14 15
16 17 18 19 20 21 22
23 24 25 26 27 28 29
30            
Friday, 06 September 2019
ಅಪರಾಧ ಘಟನೆಗಳು 06-09-19

ವೈಎನ್‍ ಹೊಸಕೋಟೆ ಪೊಲೀಸ್‍ ಠಾಣಾ ಮೊ.ನಂ:62/2019 ಕಲಂ:353.332 ಐ.ಪಿ.ಸಿ

ದಿನಾಂಕ:05/09/2019 ರಂದು ಮದ್ಯಾಹ್ನ 3:30 ಗಂಟೆಯಲ್ಲಿ ಪಿರ್ಯಾದಿ ಟಿ.ವಿ.ವೆಂಕಟೇಶ ಬಿನ್ ಲೇಟ್ ವೆಂಕಟರಾಮು,48 ವರ್ಷ, ಅಮೀನರು, ಹಿರಿಯ ಸಿವಿಲ್ ನ್ಯಾಯಾಲಯ, ಪಾವಗಡ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ:05/09/2019 ರಂದು ಪಾವಗಡ ಅಧಿಕ ಗೌರವಾನ್ವಿತ ನ್ಯಾಯಾಲಯದ ನ್ಯಾಯಾದೀಶರ ಆಧೇಶದ ಮೇರೆಗೆ ಎಕ್ಸಿಕ್ಯೂಷನ್ ನಂ:51/2015ರಲ್ಲಿನ ನಮ್ಮ ನ್ಯಾಯಾಲಯದ XXVI ನಂ2090/2019 ಮಾರ್ಗದರ್ಶನದಂತೆ ಪಾವಗಡ ತಾಲ್ಲೊಕಿನ ವೈ.ಎನ್ ಹೊಸಕೋಟೆ  ಗ್ರಾಮದ ಸದರಿ ಪ್ರಕರಣದಲ್ಲಿನ 2ನೇ ಜೆ.ಡಿ.ಆರ್ ಆದ ಅಂಜಿನಪ್ಪ ಬಿನ್  ಹನುಮಂತಪ್ಪ, 62 ವರ್ಷ, ಕೆ.ಇ.ಬಿ ಕಛೇರಿ ಹತ್ತಿರ  ವೈ.ಎನ್ ಹೊಸಕೋಟೆ ಗ್ರಾಮರವರ ಮೇಲೆ ದಸ್ತಗಿರಿ ವಾರಂಟ್ ನ ಕ್ರಮ ಕೈಗೊಳ್ಳಲು  ಈ ದಿನ ಮದ್ಯಾಹ್ನ 2-30 ಗಂಟೆಗೆ ವೈ.ಎನ್ ಹೊಸಕೋಟೆ ಗ್ರಾಮದ ಬೆಸ್ಕಂ ಕಛೇರಿ ಯ ಪಕ್ಕದಲ್ಲಿನ ಅಂಜಿನಪ್ಪರವರ ಬಡಗಿ ಕೆಲಸ ಮಾಡುವ ಜಾಗದ ಬಳಿ ಹೋಗಿ ಸದರಿ ವಾರಂಟ್ ಬಗ್ಗೆ ವಿಚಾರಿಸಲಾಗಿ ಸದರಿ ಅಂಜಿನಪ್ಪರವರು ವಾರಂಟ್ ನಲ್ಲಿರುವ ವ್ಯಕ್ತಿ ನಾನಲ್ಲ ಎಂತ ಉದ್ಘಟತನದಿಂದ  ಮಾತನಾಡಿ ನಿನ್ಯಾವನೇ ನನಗೆ  ವಾರಂಟ್ ತರೋದಕ್ಕೆ  ಎಂತ ಆತನು ಕೈಯಿಂದ ನನ್ನ ಎಡ ಕೆನ್ನೆಗೆ ಹೊಡೆದು ನೋವುಂಟು ಮಾಡಿದ್ದಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ನ್ಯಾಯಾಲಯದ ಸಿಬ್ಬಂದಿಯಾದ ಶ್ರೀಮತಿ ಸುಜಾತರವರು ಜಗಳ ಬಿಡಿಸಿ ಸಮಾದಾನ ಪಡಿಸಿದರು. ನಾನು ಈ ವಿಚಾರವನ್ನು ನನ್ನ ಮೇಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿರುತ್ತೇನೆ. ಆದ್ದರಿಂದ ಅಂಜಿನಪ್ಪ ಬಿನ್ ಹನುಮಂತಪ್ಪ, 62 ವರ್ಷ,  ಕೆ.ಇ.ಬಿ  ಕಛೇರಿ ಹತ್ತಿರ,  ವೈ.ಎನ್ ಹೊಸಕೋಟೆ ಗ್ರಾಮ ಇವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂತ  ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ:62/2019 ಕಲಂ:353.332 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-144/2019 ಕಲಂ 279,337 ಐಪಿಸಿ

ದಿನಾಂಕ-06/09/2019 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯದಿಯಾದ ರಮೇಶ್ ಬಿನ್ ಮೂಡಲಗಿರಿಯಪ್ಪ, 34 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯವಸಾಯ, ನರುಗನಹಳ್ಳಿ ಗ್ರಾಮ. ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ದೊಡ್ಡಪ್ಪನವರಾದ ಗೋವಿಂದಯ್ಯ ರವರಿಗೆ ಉಬ್ಬಸದ ಕಾಯಿಲೆ ಇರುವುದರಿಂದ ನನ್ನ ದೊಡ್ಡಪ್ಪನವರ ಮಗನಾದ ಜಯರಾಮಯ್ಯ ಬಿನ್ ಗೋವಿಂದಯ್ಯ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಹಾಲಿ ಬೆಂಗಳೂರು   ಚನ್ನನಾಯಕನಪಾಳ್ಯ ಕಾಲೋನಿಯಲ್ಲಿ ಗೋವಿಂದರಾಜು ರವರ ಮನೆಯಲ್ಲಿ ಬಾಡಿಗೆಗೆ ವಾಸ ರವರು ದಿನಾಂಕ:-04-09-2019 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಅವರ ತಂದೆಯವರಿಗೆ ನೋಡಿಕೊಂಡು ಹೋಗಲು ಬಂದು ನಂತರ ಸಾಯಂಕಾಲ ವಾಪಸ್ಸು ಬೆಂಗಳೂರಿಗೆ ಹೋಗಲು ನಮ್ಮ ಗ್ರಾಮದಿಂದ ನಡೆದುಕೊಂಡು ನರುಗನಹಳ್ಳಿ ಗ್ರಾಮದ ಗೇಟ್ ಕಡೆಗೆ ಲೇಟ್ ಮರಿಯಣ್ಣ ರವರ ಜಮೀನಿನ ಬಳಿ ರಾತ್ರಿ ಸುಮಾರು 7-15 ಗಂಟೆಗೆ ಹೋಗುತ್ತಿದ್ದಾಗ ಹಿಂದಿನಿಂದ ಒಂದು ದ್ವಿಚಕ್ರ ವಾಹನದ ಚಾಲಕ ವಾಹನವನ್ನು ಜೋರಾಗಿ ಓಡಿಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ನನ್ನ ದೊಡ್ಡಪ್ಪನ ಮಗನಾದ ಜಯರಾಮಯ್ಯ ರವರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಹ ರಸ್ತೆಯ ಪಕ್ಕ ಬಿದ್ದಿದ್ದು ಹಿಂದಿನಿಂದ ಬೈಕಿನಲ್ಲಿ ಹೋಗುತ್ತಿದ್ದ ನಾನು ನೋಡಿ ಇಬ್ಬರಿಗೂ ಉಪಚರಿಸಿ ನೋಡಲಾಗಿ ಜಯರಾಮಯ್ಯ ರವರಿಗೆ ಹಣೆಗೆ ಪೂರಾ ರಕ್ತಗಾಯವಾಗಿ ಮೂಗಿಗೂ ಸಹ ರಕ್ತಗಾಯವಾಗಿ ಬಲಎದೆಗೆ ಒತ್ತಿದ ಗಾಯವಾಗಿದ್ದು ಬೈಕ್ ಚಾಲಕನಿಗೆ ನೋಡಲಾಗಿ ಎಡಗಡೆಯ ಕಣ್ಣಿನ ಉಬ್ಬಿನ ಮೇಲೆ ಬಲ ಕೆನ್ನೆಯ ಮೇಲೆ ಹಾಗೂ ಕೈ ಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು ಅಪಘಾತಪಡಿಸಿದ ದ್ವಿಚಕ್ರ ವಾಹನದ ನಂಬರ್ ನೋಡಲಾಗಿ ಕೆಎ51-ಇ.ಡಿ-3661 ಯೂನಿಕಾರ್ನ್ ಬೈಕ್ ಆಗಿದ್ದು ಚಾಲಕನ ಹೆಸರು ತಿಳಿಯಲಾಗಿ ದುರ್ವೇಶ್ ಸೈಯದ್ ಹಯಾತ್, ಬಡೇಸಾಬರಪಾಳ್ಯ ಎಂತ ತಿಳಿಯಿತು. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬಂದ ಯಾವುದೋ ಒಂದು ಆಟೋದಲ್ಲಿ ನಾನು ಮತ್ತು ಗಿರೀಶ ಬಿನ್ ಲೇಟ್ ಮುನಿಯಪ್ಪ, ನರುಗನಹಳ್ಳಿ ಗ್ರಾಮ ರವರು ಸೇರಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬೈಕ್ ಚಾಲಕ  ದುರ್ವೇಶ್ ಸೈಯದ್ ಹಯಾತ್  ರವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಲಿಸಿ ಜಯರಾಮಯ್ಯ ರವರಿಗೆ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆ ದಿನ ರಾತ್ರಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರು ರಾಮಯ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಜಯರಾಮಯ್ಯ ರವರಿಗೆ ಆಸ್ಪತ್ರೆಯ ಬಳಿ ಅವರ ಮಗ ಬಂದಾಗ ಅವರನ್ನು ಬಿಟ್ಟು ಈ ದಿನ ತಡವಾಗಿ ಠಾಣೆಗೆ ಬಂದು ಜಯರಾಮಯ್ಯ ರವರಿಗೆ ಅಪಘಾತಪಡಿಸಿದ ಕೆಎ51-ಇ.ಡಿ-3661 ಯೂನಿಕಾರ್ನ್ ಬೈಕ್ ಚಾಲಕನಾದ ದುರ್ವೇಶ್ ಸೈಯದ್ ಹಯಾತ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ದೂರನ್ನು ನೀಡಿರುತ್ತೇನೆ. ಅಪಘಾತಪಡಿಸಿದ ಬೈಕ್ ಆ ದಿನ ಸ್ಥಳದಲ್ಲಿಯೇ ಇತ್ತು ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-144/2019 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 50 guests online
Content View Hits : 399757