lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 6 8
9 10 11 12 13 14 15
16 17 18 19 20 21 22
23 24 25 26 27 28 29
30            
Saturday, 07 September 2019
ಪತ್ರಿಕಾ ಪ್ರಕಟಣೆ ದಿ:07-09-19.

ಪತ್ರಿಕಾ ಪ್ರಕಟಣೆ

ದಿನಾಂಕ. 07-09-2019.

ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ ತಿದ್ದುಪಡಿಯನ್ನು ಮಾಡಿ ಸಂಚಾರ ನಿಯಮಗಳ ಉಲ್ಲಂಘನೆಗೆ ಹಾಲಿ ಇದ್ದ ದರಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿರುತ್ತದೆ. ಈ ಆದೇಶದ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ. 03-09-2019 ರಂದು ಸಾರಿಗೆ ಇಲಾಖೆಯ ನೋಟಿಫಿಕೇಶನ್ ಸಂಖ್ಯೆ ಟಿ.ಡಿ 250 ಟಿ.ಡಿ.ಓ. 2019 ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಕಾಯ್ದೆಯ ತಿದ್ದುಪಡಿ ಹಾಗೂ ಅಧಿಸೂಚನೆಯ ಪ್ರಕಾರ ಪರಿಷ್ಕೃತ ದಂಡದ ವಿವರ ಈ ಕೆಳಕಂಡಂತೆ ಇರುತ್ತದೆ.

  1. ಸಂಬಂಧಪಟ್ಟ ಅಧಿಕಾರಿಗಳು ನೀಡಿದ ಸೂಚನೆಯನ್ನು ಪಾಲಿಸದೆ ಇರುವುದು ಸಂಚಾರಕ್ಕೆ

ಅಡ್ಡಿಪಡಿಸುವುದು ಮತ್ತು ಮಾಹಿತಿಯನ್ನು ನೀಡಲು ನಿರಾಕರಿಸುವುದು.       2000/- ರೂ

2.     ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ        5,000/- ರೂ

3.     ಅಪ್ರಾಪ್ತರಿಂದ ವಾಹನ ಚಾಲನೆ        5,000/- ರೂ

4.     ಚಾಲನಾ ಪರವಾನಗಿ ಅಮಾನತ್ತಿನಲ್ಲಿರುವ ಸಮಯದಲ್ಲಿ ವಾಹನ ಚಾಲನೆ   10,000/- ರೂ

5.     ವಾಹನದ ಸ್ಥಿತಿಯನ್ನು ಬದಲಾವಣೆ ಮಾಡುವುದು (Alteration of motor vehicles)     1,00,000/- ರೂ

6.     ಅತಿ ಹೆಚ್ಚು ಗಾತ್ರದ ವಾಹನಗಳ ಚಾಲನೆ (Over sized  motor vehicles Driving)    10,000/- ರೂ

7.     ಅತಿವೇಗದ ವಾಹನ ಚಾಲನೆ  1, 000/- ರೂ

8.     ಅಜಾಗರೂಕತೆಯ ಚಾಲನೆ ( ಮೊಬೈಲ್ ಫೋನ್ ಬಳಕೆ )    ಮೊದಲನೇ ಅಪರಾಧಕ್ಕೆ 5,000/- ರೂ ನಂತರದ ಅಪರಾಧಗಳಿಗೆ 10,000/- ರೂ.

9.     ಬುದ್ದಿಮಾಂದ್ಯರಿಂದ ವಾಹನ ಚಾಲನೆ ಮೊದಲನೇ ಅಪರಾಧಕ್ಕೆ 1,000/- ರೂ ನಂತರದ ಅಪರಾಧಗಳಿಗೆ 2,000/- ರೂ.

10.    ರೇಸಿಂಗ್ ಮತ್ತು ವೇಗವನ್ನು ಚೆಕ್ ಮಾಡುವುದು      ಮೊದಲನೇ ಅಪರಾಧಕ್ಕೆ 5,000/- ರೂ ನಂತರದ ಅಪರಾಧಗಳಿಗೆ 10,000/- ರೂ.

11.     ಸುರಕ್ಷತವಲ್ಲದ ವಾಹನಗಳ ಚಾಲನೆ  ಮೊದಲನೇ ಅಪರಾಧಕ್ಕೆ 5,000/- ರೂ ನಂತರದ ಅಪರಾಧಗಳಿಗೆ 10,000/- ರೂ.

12.    ಫರ್ಮಿಟ್ ಉಲ್ಲಂಘನೆ ಮೊದಲನೇ ಅಪರಾಧಕ್ಕೆ 5,000/- ರೂ ನಂತರದ ಅಪರಾಧಗಳಿಗೆ 10,000/- ರೂ.

13.    ನೊಂದಣಿ ಮಾಡಿಸದ ವಾಹನಗಳ ಚಾಲನೆ   ಮೊದಲನೇ ಅಪರಾಧಕ್ಕೆ 5,000/- ರೂ ನಂತರದ ಅಪರಾಧಗಳಿಗೆ 10,000/- ರೂ.

14.    ಅತಿ ಭಾರ     ಕನಿಷ್ಟ 20,000/- ನಂತರ 1 ಟನ್ ಗೆ 2,000/- ರೂ

15.    ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವುದು    ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ 200/- ರೂ

16.    ಸೀಟ್ ಬೆಲ್ಟ್ ಧರಿಸದೆ ಚಾಲನೆ        1,000/- ರೂ

17.    ಹೆಲ್ಮೆಟ್ ಧರಿಸದೆ ವಾಹನ ಚಾಲನೆ ( Rider )       1,000/- ರೂ

18.    ಹೆಲ್ಮೆಟ್ ಧರಿಸದೆ ವಾಹನ ಚಾಲನೆ (Pillion Rider )       1,000/- ರೂ

19.    ತುತರ್ು ವಾಹನಗಳಿಗೆ ದಾರಿ ಬಿಡದೆ ಇರುವುದು.   10,000/- ರೂಗಳು

20.   ನಿಷೇಧಿತ ಪ್ರದೇಶದಲ್ಲಿ ಹಾರನ್ ಬಳಕೆ        ಮೊದಲನೇ ಅಪರಾಧಕ್ಕೆ 1,000/- ರೂ ನಂತರದ ಅಪರಾಧಗಳಿಗೆ 2,000/- ರೂ.

21.    ವಿಮೆ ಇಲ್ಲದ ವಾಹನಗಳ ಚಾಲನೆ     ಮೊದಲನೇ ಅಪರಾಧಕ್ಕೆ 2,000/- ರೂ ನಂತರದ ಅಪರಾಧಗಳಿಗೆ 4,000/- ರೂ.

22.   ಇತರೆ ಸಾಮಾನ್ಯ ಸಂಚಾರಿ ನಿಯಮಗಳ ಉಲ್ಲಂಘನೆ        ಮೊದಲನೇ ಅಪರಾಧಕ್ಕೆ 500/- ರೂ ನಂತರದ ಅಪರಾಧಗಳಿಗೆ 1,500/- ರೂ.

ಮೇಲ್ಕಂಡ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಗಟ್ಟಿ ಮಾನವರ ಅಮೂಲ್ಯ ಪ್ರಾಣ ರಕ್ಷಣೆಗೆ ಸಹಕಾರ ನೀಡಿ ಸಾವು ನೋವುಗಳನ್ನು ತಡೆಗಟ್ಟಲು ಸಹಕರಿಸುವುದು. ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದ ದಂಡವನ್ನು ಕಟ್ಟುವ ಮೂಲಕ ತಮ್ಮ ಹಣವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ತಪ್ಪದೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ತುಮಕೂರು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ಕೆ. ವಂಸಿಕೃಷ್ಣ, ಐ.ಪಿ.ಎಸ್. ರವರು ಸಾರ್ವಜನಿಕರ ಸಹಕಾರವನ್ನು ಕೋರಿರುತ್ತಾರೆ.

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು ಜಿಲ್ಲೆ, ತುಮಕೂರು.


ಅಪರಾಧ ಘಟನೆಗಳು 07-09-19

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.107/2019, ಕಲಂ 279, 304(A) ಐಪಿಸಿ.

ದಿನಾಂಕ:06.09.2019 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ಕರಿಯಣ್ಣ ಬಿನ್ ಗುಮ್ಮಣ್ಣ, 30 ವರ್ಷ, ಗೊಲ್ಲರ ಜನಾಂಗ, ವ್ಯವಸಾಯ, ಕರೇಬಾಲಪ್ಪನಹಟ್ಟಿ, ಮರೆನಡು ಮಜುರೆ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ತಾಯಿಗೆ 4 ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳು ಇದ್ದು,  ಮೊದಲನೆಯವನು ನಾನು, 2 ನೇಯವನು ಚಂದ್ರಣ್ಣ, 3 ನೇಯವನು ಚಿತ್ತಯ್ಯ, 4 ನೇಯವನು ಜಯಣ್ಣ, 5 ನೇಯವಳು ಸರೋಜಮ್ಮ  ಆಗಿದ್ದು ಜಯಣ್ಣರವರನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಮದುವೆಯಾಗಿರುತ್ತೆ. ಚಂದ್ರಣ್ಣ ಮದುವೆಯಾಗಿ ಬೇರೆ ಇದ್ದು ಉಳಿದ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾವು ಎಲ್ಲರೂ ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ದಿನಾಂಕ:06.09.2019 ರಂದು ಬೆಳಗ್ಗೆ ಸುಮಾರು 08:30 ಗಂಟೆಗೆ ನನ್ನ ತಮ್ಮ ಜಯಣ್ಣ, 22 ವರ್ಷ ವಯಸ್ಸಾಗಿದ್ದು ಇವನು ಸ್ವಂತ ಕೆಲಸಕ್ಕಾಗಿ ಚಿಕ್ಕನಾಯಕನಹಳ್ಳಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ನನ್ನ ತಂಗಿಯ ಮನೆಯ ಬೈಕ್ ನಂ. ಕೆಎ 44 ಯು 7356 ರ ಬೈಕ್ ಅನ್ನು ತೆಗೆದುಕೊಂಡು ಹೋದನು. ಇದೇ ದಿನ ದಿನಾಂಕ:06.09.2019 ರಂದು ಬೆಳಗ್ಗೆ ಸುಮಾರು 10:15 ಗಂಟೆ ಸಮಯದಲ್ಲಿ ನಮ್ಮ ಪರಿಚಯಸ್ಥರಾದ ದೊಡ್ಡನಹಟ್ಟಿ ಗ್ರಾಮದ ರಾಮಣ್ಣ ರವರು ನನಗೆ ಪೋನ್ ಮಾಡಿ ನಿಮ್ಮ ತಮ್ಮ ಜಯಣ್ಣ ತನ್ನ ಕೆಎ 44 ಯು 7356 ರ ಬೈಕ್ ನಲ್ಲಿ ಹುಳಿಯಾರು ಟೌನ್ ನ ಎಸ್.ಎಲ್ ಆರ್ ಪೆಟ್ರೋಲ್ ಬಂಕ್ ಸಮೀಪ ಇರುವ ಚನ್ನಬಸವಯ್ಯ ರವರ ಟೀ ಅಂಗಡಿ ಮುಂಭಾಗ ಹುಳಿಯಾರು- ಚಿಕ್ಕನಾಯಕನಹಳ್ಳಿ ರಸ್ತೆಯ ಎಡಬದಿಯಲ್ಲಿ ಬೆಳಗ್ಗೆ 09:45 ಗಂಟೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಚಿಕ್ಕನಾಯಕನಹಳ್ಳಿ ಕಡೆಯಿಂದ ಬಂದ ಕೆ.ಎಲ್ 08. ಬಿ.ಎಸ್. 6903 ನೇ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೆ ಜಯಣ್ಣ ರವರ ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದು, ಬೈಕ್ ಮುಂಭಾಗ ಜಜ್ಜಿ ಹೋಗಿ ಜಯಣ್ಣನಿಗೆ ತಲೆಗೆ, ಎದೆಗೆ, ಕಾಲುಗಳಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಈತನ ಶವವನ್ನು ಯಾವುದೋ ವಾಹನದಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಹಾಕಿರುತ್ತೇವೆ ಎಂದು ತಿಳಿಸಿದರು. ತಕ್ಷಣ ನಾನು ಮನೆಯವರಿಗೆ ವಿಚಾರ ತಿಳಿಸಿ ಹುಳಿಯಾರಿನ ಶವಾಗಾರಕ್ಕೆ ಬಂದು ನೋಡಲಾಗಿ ನನ್ನ ತಮ್ಮ ಜಯಣ್ಣ ಮೃತಪಟ್ಟಿರುವುದು ಕಂಡು ಬಂದಿತು. ಆದ್ದರಿಂದ ನನ್ನ ತಮ್ಮನಿಗೆ ಅಪಘಾತ ಪಡಿಸಿದ  ಕೆ.ಎಲ್ 08. ಬಿ.ಎಸ್. 6903ನೇ ಲಾರಿ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ. ನಂ. 107/2019 ಕಲಂ 279, 304(ಎ) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 135/2019 ಕಲಂ : 279, 304(ಎ) ಐ.ಪಿ.ಸಿ.

ದಿನಾಂಕ:06-09-19  ರಂದು ಬೆಳಗ್ಗೆ 10-00 ಗಂಟೆಗೆ ಪಿರ್ಯಾದಿ ಓಂಕಾರಮೂರ್ತಿ.ಟಿ.ಹೆಚ್. ಬಿನ್ ಹೊಳೆ ಬಸಪ್ಪ ಹೆಚ್.ಟಿ. 49 ವರ್ಷ, ಲಿಂಗಾಯ್ತರು, ಜಿರಾಯ್ತಿ,  , ತಂಡಗ, ಶ್ರೀರಾಂಪುರ, ಹೋಬಳಿ, ಹೊಸದುರ್ಗ ತಾ. ಚಿತ್ರದುರ್ಗ ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ಪಿರ್ಯಾದಿಯ  ತಂದೆಯವರಿಗೆ  ಮೂರು ಜನ ಮಕ್ಕಳಿದ್ದು, ದೊಡ್ಡ ಅಕ್ಕನಾದ ನಾಗರತ್ನರವರನ್ನು ಕುಮ್ಮನಘಟ್ಟ ವಾಸಿ ನಾಗರಾಜುರವರೊಂದಿಗೆ 22ವರ್ಷಗಳ ಹಿಂದೆ  ಮದುವೆ ಮಾಡಿ ಕೊಟ್ಟಿದ್ದು, ಸುಮಾರು 20 ವರ್ಷದಿಂದ ಈಚನೂರು ಗ್ರಾಮದಲ್ಲಿ ವಾಸವಾಗಿರುತ್ತಾರೆ. ದಿ:06-09-2019 ರಂದು ಬೆಳಗ್ಗೆ 6-20 ಗಂಟೆ ಸಮಯದಲ್ಲಿ ಕೆ.ಎ.44-ಕ್ಯೂ-8242 ನೇ ಸ್ಕೂಟಿಯನ್ನು ನಾಗರಾಜು ರವರು ತಮ್ಮ ಪತ್ನಿಯೊಂದಿಗೆ ತಿಪಟೂರು ಬಸ್ ನಿಲ್ದಾಣಕ್ಕೆ ಬರುವಾಗ ಎನ್.ಹೆಚ್. 206 ರಸ್ತೆಯ ತಿಪಟೂರು ಟೌನ್ ಸಂಗೀತ ಮೊಬೈಲ್ ಮುಂಭಾಗ ಮೋಟಾರ್ ಸೈಕಲ್ ಗೆ ನಾಯಿ ಅಡ್ಡ ಬಂದಿದ್ದರಿಂದ ನಾಗರಾಜುರವರು ಸಡನ್ ಆಗಿ ಬ್ರೇಕ್ ಹಾಕಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದು, ವಾಹನದಲ್ಲಿದ್ದ ನಾಗರಾಜು ಮತ್ತು ಅವರ ಪತ್ನ ನಾಗರತ್ನರವರಿಗೆ ಪೆಟ್ಟುಬಿದ್ದು ಗಾಯಗಳಾಗಿ ನಾಗರತ್ನರವರಿಗೆ ತಲೆಗೆ ಹೆಚ್ಚು ಪೆಟ್ಟು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದು, ಈ ಅಪಘಾತಕ್ಕೆ ಮೃತೆ ನಾಗರತ್ನರವರ ಗಂಡ ಕೆ.ಎ.44-ಕ್ಯೂ-8242 ನೇ ಮೋಟಾರ್ ಸೈಕಲ್ ಸವಾರ ನಾಗರಾಜು ರವರು ಕಾರಣರಾಗಿರುತ್ತಾರೆ. ಎಂತ ಇತ್ಯಾದಿ ದೂರಿನ ಮೇರೆಗೆ ಠಾಣಾ ಮೊ.ನಂ 135/2019 ಕಲಂ  279, 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ  .

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-144/2019 ಕಲಂ 279,337 ಐಪಿಸಿ

ದಿನಾಂಕ-06/09/2019 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯದಿಯಾದ ರಮೇಶ್ ಬಿನ್ ಮೂಡಲಗಿರಿಯಪ್ಪ, 34 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯವಸಾಯ, ನರುಗನಹಳ್ಳಿ ಗ್ರಾಮ. ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ದೊಡ್ಡಪ್ಪನವರಾದ ಗೋವಿಂದಯ್ಯ ರವರಿಗೆ ಉಬ್ಬಸದ ಕಾಯಿಲೆ ಇರುವುದರಿಂದ ನನ್ನ ದೊಡ್ಡಪ್ಪನವರ ಮಗನಾದ ಜಯರಾಮಯ್ಯ ಬಿನ್ ಗೋವಿಂದಯ್ಯ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಹಾಲಿ ಬೆಂಗಳೂರು   ಚನ್ನನಾಯಕನಪಾಳ್ಯ ಕಾಲೋನಿಯಲ್ಲಿ ಗೋವಿಂದರಾಜು ರವರ ಮನೆಯಲ್ಲಿ ಬಾಡಿಗೆಗೆ ವಾಸ ರವರು ದಿನಾಂಕ:-04-09-2019 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಅವರ ತಂದೆಯವರಿಗೆ ನೋಡಿಕೊಂಡು ಹೋಗಲು ಬಂದು ನಂತರ ಸಾಯಂಕಾಲ ವಾಪಸ್ಸು ಬೆಂಗಳೂರಿಗೆ ಹೋಗಲು ನಮ್ಮ ಗ್ರಾಮದಿಂದ ನಡೆದುಕೊಂಡು ನರುಗನಹಳ್ಳಿ ಗ್ರಾಮದ ಗೇಟ್ ಕಡೆಗೆ ಲೇಟ್ ಮರಿಯಣ್ಣ ರವರ ಜಮೀನಿನ ಬಳಿ ರಾತ್ರಿ ಸುಮಾರು 7-15 ಗಂಟೆಗೆ ಹೋಗುತ್ತಿದ್ದಾಗ ಹಿಂದಿನಿಂದ ಒಂದು ದ್ವಿಚಕ್ರ ವಾಹನದ ಚಾಲಕ ವಾಹನವನ್ನು ಜೋರಾಗಿ ಓಡಿಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ನನ್ನ ದೊಡ್ಡಪ್ಪನ ಮಗನಾದ ಜಯರಾಮಯ್ಯ ರವರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಹ ರಸ್ತೆಯ ಪಕ್ಕ ಬಿದ್ದಿದ್ದು ಹಿಂದಿನಿಂದ ಬೈಕಿನಲ್ಲಿ ಹೋಗುತ್ತಿದ್ದ ನಾನು ನೋಡಿ ಇಬ್ಬರಿಗೂ ಉಪಚರಿಸಿ ನೋಡಲಾಗಿ ಜಯರಾಮಯ್ಯ ರವರಿಗೆ ಹಣೆಗೆ ಪೂರಾ ರಕ್ತಗಾಯವಾಗಿ ಮೂಗಿಗೂ ಸಹ ರಕ್ತಗಾಯವಾಗಿ ಬಲಎದೆಗೆ ಒತ್ತಿದ ಗಾಯವಾಗಿದ್ದು ಬೈಕ್ ಚಾಲಕನಿಗೆ ನೋಡಲಾಗಿ ಎಡಗಡೆಯ ಕಣ್ಣಿನ ಉಬ್ಬಿನ ಮೇಲೆ ಬಲ ಕೆನ್ನೆಯ ಮೇಲೆ ಹಾಗೂ ಕೈ ಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು ಅಪಘಾತಪಡಿಸಿದ ದ್ವಿಚಕ್ರ ವಾಹನದ ನಂಬರ್ ನೋಡಲಾಗಿ ಕೆಎ51-ಇ.ಡಿ-3661 ಯೂನಿಕಾರ್ನ್ ಬೈಕ್ ಆಗಿದ್ದು ಚಾಲಕನ ಹೆಸರು ತಿಳಿಯಲಾಗಿ ದುರ್ವೇಶ್ ಸೈಯದ್ ಹಯಾತ್, ಬಡೇಸಾಬರಪಾಳ್ಯ ಎಂತ ತಿಳಿಯಿತು. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬಂದ ಯಾವುದೋ ಒಂದು ಆಟೋದಲ್ಲಿ ನಾನು ಮತ್ತು ಗಿರೀಶ ಬಿನ್ ಲೇಟ್ ಮುನಿಯಪ್ಪ, ನರುಗನಹಳ್ಳಿ ಗ್ರಾಮ ರವರು ಸೇರಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬೈಕ್ ಚಾಲಕ  ದುರ್ವೇಶ್ ಸೈಯದ್ ಹಯಾತ್  ರವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಲಿಸಿ ಜಯರಾಮಯ್ಯ ರವರಿಗೆ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆ ದಿನ ರಾತ್ರಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರು ರಾಮಯ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಜಯರಾಮಯ್ಯ ರವರಿಗೆ ಆಸ್ಪತ್ರೆಯ ಬಳಿ ಅವರ ಮಗ ಬಂದಾಗ ಅವರನ್ನು ಬಿಟ್ಟು ಈ ದಿನ ತಡವಾಗಿ ಠಾಣೆಗೆ ಬಂದು ಜಯರಾಮಯ್ಯ ರವರಿಗೆ ಅಪಘಾತಪಡಿಸಿದ ಕೆಎ51-ಇ.ಡಿ-3661 ಯೂನಿಕಾರ್ನ್ ಬೈಕ್ ಚಾಲಕನಾದ ದುರ್ವೇಶ್ ಸೈಯದ್ ಹಯಾತ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ದೂರನ್ನು ನೀಡಿರುತ್ತೇನೆ. ಅಪಘಾತಪಡಿಸಿದ ಬೈಕ್ ಆ ದಿನ ಸ್ಥಳದಲ್ಲಿಯೇ ಇತ್ತು ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-144/2019 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-145/2019 ಕಲಂ 279,337 ಐಪಿಸಿ

ದಿನಾಂಕ-06/09/2019 ರಂದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಎಂ.ಎನ್. ಗುರುರಾಜ್ ಬಿನ್ ಲೇಟ್ ನರಸಿಂಹಮೂರ್ತಿ, 62 ವರ್ಷ, ಬ್ರಾಹ್ಮಣ ಜನಾಂಗ, ಕೂಲಿಕೆಲಸ, ವಾಸ ಹೆಬ್ಬೂರು ತುಮೂಕೂರು ತಾಲ್ಲೂಕು & ಜಿಲ್ಲೆ ರವರು ವೈಧ್ಯರ ಸಮಕ್ಷಮ ನೀಡಿದ ಹೇಳಿಕೆ ಏನೆಂದರೆ ನಾನು ಮೇಲೆ ಹೇಳಿ ಬರೆಯಿಸಿದ ವಿಳಾಸದಲ್ಲಿ ವಾಸವಾಗಿದ್ದು ಸುಮಾರು 20 ವರ್ಷಗಳಿಂದ ಹೆಬ್ಬೂರು ಬಸ್ ನಿಲ್ದಾಣದ ಮೂಟೆ ಹೋರುವ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ-05/09/2019 ರಂದು ಎಂದಿನಂತೆ ಬೆಳಿಗ್ಗೆ 9-30 ಗಂಟೆಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಹೆಬ್ಬೂರು ಬಸ್ ನಿಲ್ದಾಣದಲ್ಲಿ ತುಮಕೂರು-ಕುಣಿಗಲ್ ಟಾರ್ ರಸ್ತೆಯನ್ನು ಬೃಂದಾವನ ಹೋಟೆಲ್ ಕಡೆಯಿಂದ ಸಿಎಸ್ ಪುರಕ್ಕೆ ಹೋಗುವ ರಸ್ತೆ ಕಡೆ ದಾಟುತ್ತಿರುವಾಗ್ಗೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಓಡಿಸಿಕೊಂಡು ಬಂದು ರಸ್ತೆದಾಟುತ್ತಿದ್ದ ನನ್ನ ಎಡಗಾಲಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದು ಕೂಡಲೆ ನಾನು ರಸ್ತೆಯ ಮೇಲೆ ಬಿದ್ದೆ, ಎದ್ದು ನೋಡಲಾಗಿ ನನ್ನ ಎಡಗಾಲಿಗೆ ರಕ್ತಗಾಯವಾಗಿ ಬೆನ್ನಿಗೆ ಮತ್ತು ತಲೆಗೆ ಮೂಗೇಟು ಬಿದ್ದು ಕೂಡಲೆ ಅಲ್ಲೆ ಇದ್ದ ಸಾರ್ವಜನಿಕರು ನನಗೆ ಉಪಚರಿಸಿದರು ಅಪಘಾತ ಪಡಿಸಿದ ಲಾರಿಯು ಸ್ಥಳದಲ್ಲೇ ನಿಲ್ಲಿಸಿದ್ದ ಅದರ ನಂಬರ್ ನೋಡಲಾಗಿ ಆರ್‌ಜೆ-32-ಜಿಬಿ-8793 ಆಗಿದ್ದು ಚಾಲಕ ಯಾರು ಎಂತಾ ಗೊತ್ತಾಗಲಿಲ್ಲ ಚಿಕಿತ್ಸೆಗಾಗಿ ನನ್ನನ್ನು ಟೀ ಹೋಟೆಲ್ ರಂಗಪ್ಪ ಮತ್ತು ಮನೋಹರಶೆಟ್ಟಿರವರು ಕೂಡಲೆ 108 ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ನನ್ನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು, ನಾನು ತುಮಕೂರು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ, ನನಗೆ ಅಪಘಾತ ಮಾಡಿ ಕಾಲಿಗೆ ರಕ್ತಗಾಯ ಪಡಿಸಿರುವ ಮೇಲ್ಕಂಡ ಲಾರಿಯ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯನ್ನು ಠಾಣಾ ಎ ಎಸ್‌ಐ ನರಸಿಂಹರಾಜು ರವರು ಈ ದಿನ ಸಂಜೆ 5-00 ಗಂಟೆಯಿಂದ 5-30 ಗಂಟೆ ವರೆಗೆ ಪಡೆದಕೊಂಡು ವಾಪಸ್ ಠಾಣೆಗೆ ಸಂಜೆ 7-00 ಗಂಟೆಗೆ ಬಂದು ನೀಡಿದ ಗಾಯಾಳು ಹೇಳಿಕೆಯನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 161/2019 ಕಲಂ:379 IPC

ಈ ಕೇಸಿನ ಫಿರ್ಯಾದಿ  ಈರಹರಿಯಪ್ಪ ಬಿನ್ ಲೇ ಈರಪ್ಪ 51 ವರ್ಷ ವಿನಾಯಕ ನಗರ, ಲಿಂಗೇನ ಹಳ್ಳಿ, ಮಧುಗಿರಿ ಟೌನ್ ರವರು ದಿನಾಂಕ 06-09-2019 ರಂದು ಮಧ್ಯಾಹ್ನ 3=00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯು ದಿನಾಂಕ-02-09-2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಮಧುಗಿರಿ ಟೌನ್ ರಾಘವೇಂದ್ರ ಕಾಲೋನಿ ಶಂಕರಮಠದ ಹತ್ತಿರ ತನ್ನ ಬಾಬ್ತು KA-06-EN-5074 ನೇ ದ್ವಿಚಕ್ರವಾಹನವನ್ನು ನಿಲ್ಲಿಸಿ ಫಿರ್ಯಾದಿಯವರ ಮಾವನವರಾದ  ಕೃಷ್ಣ ಮೂರ್ತಿ ರವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ದ್ವಿಚಕ್ರವಾಹನ ನಿಲ್ಲಿಸಿದ ಜಾಗದಲ್ಲಿ ಹೋಗಿ ನೋಡಲಾಗಿ KA-06-EN-5074 ನೇ ದ್ವಿಚಕ್ರವಾಹನವು ಕಳವು ಆಗಿರುವುದು ಕಂಡು ಬಂದಿದ್ದು ಸದರಿ ದ್ವಿಚಕ್ರ ವಾಹನದ ಬೆಲೆ 21,000-00 ರೂ ಗಳಾಗಿರುತ್ತೆ ಸದರಿ ದ್ವಿಚಕ್ರ ವಾಹನವನ್ನು  ಎಲ್ಲಾ ಕಡೆಗಳಲ್ಲಿ ಇಲ್ಲಿಯವರಗೂ ಹುಡಕಲಾಗಿ ಸಿಗದೇ ಇರುವುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳತನವಾಗಿರುವ ದ್ವಿಚಕ್ರವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ. 99/2019 ಕಲಂ 3, 7, 25 (1) (A), 35 Arms Act R/W 37, 511 IPC

ದಿನಾಂಕ: 06/09/2019 ರಂದು ಬೆಳಗಿನ ಜಾವ 5-30 ಗಂಟೆಗೆ ಠಾಣಾ ಪಿಎಸ್‍ಐ (ಕಾ & ಸು), ಹೆಚ್.ಎಸ್ ನವೀನ್ ರವರು ಠಾಣಾ ಪಿಸಿ 614 ಲೋಕೇಶ‍್‍ ಕೆ.ಎಸ್‍ ರವರ ಮೂಲಕ ಕಳುಹಿಸಿಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ನಿನ್ನೆ ದಿನ ದಿನಾಂಕ: 05-09-2019 ರಂದು ರಾತ್ರಿ 10-30 ಗಂಟೆಗೆ ನಾನು ನಮ್ಮ ಠಾಣಾ ಪಿ.ಸಿ. 134 ತಿಪ್ಪೇಸ್ವಾಮಿ ರವರ ಜೊತೆಯಲ್ಲಿ ಇಲಾಖಾ ವಾಹನ ನಂಬರ್‌‌ ಕೆ.ಎ-06-ಜಿ-461 ರಲ್ಲಿ  ಚಾಲಕ ಎ.ಹೆಚ್.ಸಿ. 88 ಸತೀಶ್‌‌‌ ರವರೊಂದಿಗೆ  ಠಾಣಾ ಸರಹದ್ದಿನಲ್ಲಿ  ರಾತ್ರಿ ವಿಶೇಷ ಗಸ್ತು ಪ್ರಾರಂಭಿಸಿ, ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಾ, ಅನುಮಾನಾಸ್ಪದ ವಾಹನಗಳನ್ನು ಚೆಕ್‌‌ ಮಾಡುತ್ತಾ,  ಈ ದಿನ ದಿನಾಂಕ: 06-09-2019 ರಂದು ಬೆಳಗಿನ ಜಾವ 4-30 ಗಂಟೆ ಸಮಯದಲ್ಲಿ ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿ ಗಸ್ತು ಮಾಡುತ್ತಾ, ಹೋದಾಗ  ಸೇಕ್ರೇಡ್‌‌ಹಾರ್ಟ್‌ ಸ್ಕೂಲ್‌‌ ಮುಂಭಾಗ  ರಸ್ತೆಯಲ್ಲಿ ಉಪ್ಪಾರಹಳ್ಳಿ ಪ್ಲೇ ಓವರ್‌‌‌ ಕಡೆಯಿಂದ ಗೆದ್ದಲಹಳ್ಳಿ ಕಡೆಗೆ ಹೋಗಲು ಬಂದ ಒಂದು ಮಾರುತಿ ಓಮಿನಿ ವಾಹನ ಬಂದಿದ್ದು, ಸದರಿ ವಾಹನವನ್ನು ಚೆಕ್‌‌ ಮಾಡಲಾಗಿ, ಅದರಲ್ಲಿ ಒಟ್ಟು 5 ಜನ ವ್ಯಕ್ತಿಗಳಿದ್ದು, ಅವರನ್ನು ನೀವೆಲ್ಲಾ ಯಾರು ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುತ್ತಿರುವಿರಿ ಎಂತಾ ಹೇಳಲಾಗಿ, ವಾಹನವನ್ನು  ಚಲಾಯಿಸುತ್ತಿದ್ದವನು ತನ್ನ ಹೆಸರು ನವೀನ್‌‌ ಆರ್ ಎಂತ ನಾವೆಲ್ಲಾ ಗುಬ್ಬಿ ಪಟ್ಟಣದವರು ಎಂತಾ ತಿಳಿಸಿದ್ದು, ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂತಾ ಕೇಳಿದ್ದಕ್ಕೆ ಒಂದು ಸಾರಿ ಬೆಂಗಳೂರಿಗೆ ಹೋಗಿದ್ದೆವು ಅಲ್ಲಿಂದ ಗುಬ್ಬಿಗೆ ಹೋಗಲು ಹೋಗುತ್ತಿದ್ದೇವೆಂತಲೂ, ಮತ್ತೊಂದು ಭಾರಿ ತುಮಕೂರಿನಲ್ಲಿ ವಿಜಯನಗರದಲ್ಲಿ ಕೆಲಸ ಇದ್ದುದ್ದರಿಂದ ಬಂದಿದ್ದು ವಾಪಾಸ್ಸು ಗುಬ್ಬಿಗೆ ಹೋಗುತ್ತಿದ್ದೇವೆಂತಾ ವಿಧವಿಧವಾಗಿ ನುಡಿದಿದ್ದರಿಂದ ನಮಗೆ ಅನುಮಾನ ಬಂದು ಸದರಿ ವಾಹನವನ್ನು ಚೆಕ್‌‌ ಮಾಡಲಾಗಿ, ವಾಹನದಲ್ಲಿ ಒಂದು ಬಂದೂಕ ( ಗನ್‌ ) ‌ ಹಾಗೂ ಒಂದು ಬಾಕ್ಸ್‌‌ನಲ್ಲಿ ಸದರಿ ಗನ್‌‌ಗೆ ಸಂಬಂಧಿಸಿದ ಗುಂಡುಗಳು ದೊರೆತಿದ್ದು, ಆಗ ಸಮೀಪದಲ್ಲಿಯೇ ಗಸ್ತಿನಲ್ಲಿದ್ದ ನಮ್ಮ ಠಾಣಾ ಹೆಚ್.ಸಿ. 44 ರಪೀಕ್‌‌‌ ಹಾಗೂ ಪಿ.ಸಿ 614 ಲೋಕೇಶ ರವರನ್ನೂ ಸ್ಥಳಕ್ಕೆ ಕರೆಸಿಕೊಂಡು,  ಒಮಿನಿ ವಾಹನದಲ್ಲಿದ್ದವರಿಗೆ ಗನ್‌ ಬಗ್ಗೆ ಹಾಗೂ ಅದರ ಗುಂಡುಗಳ ಬಗ್ಗೆ ವಿಚಾರ ಮಾಡಲಾಗಿ, ಒಂದು ಸಾರಿ ನಾವೆಲ್ಲಾ ಜಮೀನಿನ ಬಳಿ ಹಕ್ಕಿ ಪಕ್ಷಿಗಳನ್ನು ಹೊಡೆಯಲು ಇಟ್ಟುಕೊಂಡಿರುವುದಾಗಿ ಮತ್ತೊಂದು ಸಾರಿ ಶೆಟ್ಟಿಹಳ್ಳಿ, ಪಾಲಸಂದ್ರ ಕಡೆ ನವಿಲುಗಳನ್ನು ಹೊಡೆಯಲು ಹಾಗೂ ಕಾಡು ಹಂದಿಗಳನ್ನು ಭೇಟೆಯಾಡಲು ನಾವೆಲ್ಲಾ ಹೋಗುತ್ತಿರುವುದಾಗಿ  ತಿಳಿಸಿದ್ದು, ಸದರಿ ಗನ್‌‌ ಅನ್ನು ತಮ್ಮ ಬಳಿ ಇಟ್ಟುಕೊಳ್ಳಲು ಹಾಗೂ ಸಾಗಾಟ ಮಾಡಲು ಪರವಾನಗೆ ಇದೆಯೇ ಎಂತಾ ಕೇಳಲಾಗಿ, ತನ್ನ ಬಳಿ ಯಾವುದೇ ಪರವಾನಗೆ ಇಲ್ಲವೆಂತಾ ತಿಳಿಸಿರುತ್ತಾರೆ.  ನಂತರ ಒಮಿನಿ ಕಾರನ್ನು ಪರಿಶೀಲಿಸಲಾಗಿ ವಾಹನದ ಹಿಂದೆ-ಮುಂದೆ KA-06-M-7214 ಎಂತಾ ರಿಜಿಸ್ಟ್ರೇಷನ್‌‌ ನಂಬರ್‌‌‌ ಬರೆದಿದ್ದು, ಸದರಿ ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಕೇಳಲಾಗಿ ದಾಖಲಾತಿಗಳನ್ನು ಸಹಾ ಹಾಜರ್ಪಡಿಸಿರುವುದಿಲ್ಲ. ಈ ವಾಹನದ ಮದ್ಯಭಾಗದಲ್ಲಿ ಹಾಗೂ ಹಿಂಭಾಗ ಡಿಕ್ಕಿಯಲ್ಲಿ ರಕ್ತ ಚೆಲ್ಲಾಡಿರುವ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿರುತ್ತೆ.   ವಾಹನದಲ್ಲಿ ಒಟ್ಟು 5 ಜನರಿದ್ದು, ಅವರುಗಳ ಹೆಸರು ವಿಳಾಸ ಕೇಳಲಾಗಿ ಕಾರನ್ನು ಚಾಲನೆ ಮಾಡುತ್ತಿದ್ದವನು ತನ್ನ ಹೆಸರು ನವೀನ್‌‌ ಎಂತಾ ಮತ್ತೊಂದು ಸಾರಿ ನವೀನ್‌ಕುಮಾರ್  ಬಿನ್. ಲೇ|| ರಾಮದಾಸ್‌‌ ಹೆಚ್. 25 ವರ್ಷ, ತಿಗಳ ಜನಾಂಗ, ಮಾರುತಿ ಕಂಪರ್ಟ್‌ ಹೋಟಲ್‌‌‌‌, ವಾಸ ಸುಭಾಷ್‌‌ನಗರ, ಗುಬ್ಬಿ ಟೌನ್  ಎಂತಲೂ, ಕಾರಿನಲ್ಲಿ ಕುಳಿತಿದ್ದವರಲ್ಲಿ ಒಬ್ಬರು 2) ದೇವರಾಜು ಎಂತಾ ಮತ್ತೊಂದು ಸಾರಿ ದೇವ  ಬಿನ್. ಸಿದ್ದಯ್ಯ, 38 ವರ್ಷ, ತಿಗಳರು, ವ್ಯವಸಾಯ, ವಾಸ 2 ನೇ ಕ್ರಾಸ್, ಸುಭಾಷ್‌‌ನಗರ, ಗುಬ್ಬಿ ಟೌನ್  3) ನಟರಾಜು  @ ನಟ ಬಿನ್. ಗಂಗಹನುಮಯ್ಯ, 38 ವರ್ಷ, ತಿಗಳರು, ವ್ಯವಸಾಯ, ವಾಸ 2 ನೇ ಕ್ರಾಸ್, ಸುಭಾಷ್‌‌ನಗರ, ಗುಬ್ಬಿ ಟೌನ್  4) ರಯಾನ್‌‌ ಬಿನ್. ಸಾಧಿಕ್‌‌, 25 ವರ್ಷ, ಮುಸ್ಲಿಂ, ಮಾವಿನಕಾಯಿ ವ್ಯಾಪಾರ, ವಾಸ 1 ನೇ ಕ್ರಾಸ್, ಕಾಯಿಪೇಟೆ, ಗುಬ್ಬಿ ಟೌನ್  ಹಾಗೂ 5) ಸುಹೇಲ್‌‌ ಬಿನ್. ಬಷೀರ್‌‌, 25 ವರ್ಷ, ಮುಸ್ಲಿಂ, ವಿದ್ಯಾರ್ಥಿ, ವಾಸ 1 ನೇ ಕ್ರಾಸ್, ಜ್ಯೋತಿನಗರ, ರೈಲ್ವೆ ಸ್ಟೇಷನ್‌‌‌ ಎದುರು, ಗುಬ್ಬಿ ಟೌನ್ ಎಂತಾ ತಿಳಿಸಿರುತ್ತಾರೆ. ವಾಹನದಲ್ಲಿರುವ ರಕ್ತದ ಕಲೆಯ ಬಗ್ಗೆ ವಿಚಾರ ಮಾಡಲಾಗಿ, ಯಾವುದೇ ಸಮಂಜಸವಾದ ಮಾಹಿತಿ ನೀಡಿರುವುದಿಲ್ಲ. ಸದರಿ ಆಸಾಮಿಗಳ ಬಳಿ ಇರುವ ಗನ್‌‌‌ ಪರಿಶೀಲಿಸಲಾಗಿ, ಗನ್ ಕಪ್ಪು ಬಣ್ಣದ ಗನ್‌‌ ಆಗಿದ್ದು ಸದರಿ ಗನ್‌ ಮೇಲೆ FX Air Guns ( FX Impact X) Serial Number FX 190200  Made in Sweden Patent Pending Smooth Twist X ಎಂತಾ ಅಂಗ್ಲ ಭಾಷೆಯಲ್ಲಿ ಇದ್ದು, ನೋಡಲು ಅಪಾಯಕಾರಿಯಾಗಿ ಕಂಡು ಬಂದಿರುತ್ತೆ.  ಸದರಿ ಗನ್‌‌‌ ಬಗ್ಗೆ ಹಾಗೂ ರಕ್ತದ ಕಲೆಯ ಬಗ್ಗೆ ಕಾರಿನಲ್ಲಿದ್ದವರು ಯಾವುದೇ ಸಮಂಜಸ ಮಾಹಿತಿ ನೀಡದೇ ಇದ್ದರಿಂದ ಮೇಲ್ಕಂಡ ಆಸಾಮಿಗಳೆಲ್ಲರೂ ಸೇರಿ ಯಾವುದೋ ದುಷ್ಕೃತ್ಯ ಮಾಡಿಯೋ ಅಥವಾ  ಮಾಡಲೋ ಹೋಗುತ್ತಿರುವುದಾಗಿ ಅನುಮಾನ ಬಂದಿರುತ್ತೆ. ಮುಂದಿನ ತನಿಖಾ ಕ್ರಮ ಜರುಗಿಸಬೇಕಾಗಿರುವುದರಿಂದ ನಾವೆಲ್ಲಾ ಸ್ಥಳದಲ್ಲಿಯೇ ಇರುತ್ತೇವೆ. ಆದ್ದರಿಂದ ಸ್ಥಳದಲ್ಲಿಯೇ ವರದಿಯನ್ನು ತಯಾರು ಮಾಡಿ ಪಿ.ಸಿ. 614 ಲೋಕೇಶ ಕೆ.ಎಸ್. ರವರ ಮೂಲಕ ವರದಿಯನ್ನು ಕಳುಹಿಸಿಕೊಡುತ್ತಿದ್ದು, ನೀವು ಮೇಲ್ಕಂಡ ಆರೋಪಿಗಳ ವಿರುದ್ದ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ಪ್ರ.ವ.ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ವರದಿ ಮಾಡಲು ಸೂಚಿಸಿರುವ ವರದಿ ಅಂಶವಾಗಿರುತ್ತೆ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 35 guests online
Content View Hits : 399773