lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 6 7 8
9 10 11 12 14 15
16 17 18 19 20 21 22
23 24 25 26 27 28 29
30            
Friday, 13 September 2019
ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಕುರಿತು.

ದಿನಾಂಕ : 13-09-2019

ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಕುರಿತು.


ಅಪರಾಧ ಘಟನೆಗಳು 13-09-19

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ.164/2018 ಕಲಂ 279, 337, 304 [ಎ] ಐ.ಪಿ.ಸಿ.

ದಿನಾಂಕ: 12/09/2019 ರಂದು ಮದ್ಯಾಹ್ನ 2-30 ಗಂಟೆಗೆ ಈ ಕೇಸಿನ ಪಿರ್ಯಾದಿ ನಾಗರಾಜು ಬಿನ್ ಹೇಮ್ಲಾನಾಯ್ಕ, 28 ವರ್ಷ, ಲಂಬಾಣಿ ಜನಾಂಗ, ಟೀ ವ್ಯಾಪಾರ, ಎಮ್ಮೇರಹಳ್ಳಿ, ಕಸಬಾ ಹೋಬಳಿ, ಶಿರಾ ತಾಲ್ಲೋಕು, ಸ್ವಂತ ಊರು: ಪಟ್ರಹಳ್ಳಿ, ಹಿರಿಯೂರು ತಾಲ್ಲೋಕು, ಚಿತ್ರದುರ್ಗ ಜಿಲ್ಲೆ ರವರು  ಠಾಣೆಗೆ ಹಾಜರಾಗಿ ನೀಡಿದದೂರಿನ ಅಂಶವೇನೆಂದರೆ, ನಾನು ಕಾಮತ್ ಹೋಟೆಲ್ ಹತ್ತಿರ ಟೀ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿರುತ್ತೇನೆ. ಈ ದಿನ ದಿನಾಂಕ: 12-09-2019 ರಂದು ಬೆಳಿಗ್ಗೆ ಸುಮಾರು 11-15 ಗಂಟೆಯಲ್ಲಿ ನಾನು ಮತ್ತು ನನ್ನ ಮಾವ ರಾಜ ಇಬ್ಬರೂ ಸಹ ನಮ್ಮ ಅಂಗಡಿಯ ಮುಂದೆ ನಿಂತಿರುವಾಗ್ಗೆ, ಇದೇ ವೇಳೆಯಲ್ಲಿ ಸಿರಾ-ತುಮಕೂರು ಎನ್.ಹೆಚ್. 48 ರಸ್ತೆಯಲ್ಲಿ ಸಿರಾ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಅಂಗಡಿಯ ಮುಂಭಾಗ ಸಿರಾ-ತುಮಕೂರು ಎನ್.ಹೆಚ್. 48 ರಸ್ತೆಯ ಪಕ್ಕದಲ್ಲಿದ್ದ ಚರಂಡಿಗೆ ಪಲ್ಟಿಯಾಗಿ ಬೀಳಿಸಿದನು. ಇದನ್ನು ನೋಡಿದ ನಾನು ಮತ್ತು ನನ್ನ ಮಾವ ರಾಜ ಇಬ್ಬರೂ ಸಹ ಕಾರಿನ ಹತ್ತಿರ ಹೋಗಿ ನೋಡಲಾಗಿ ಕಾರಿನಲ್ಲಿ ಗಂಡಸು ಮತ್ತು ಹೆಂಗಸು ಇದ್ದರು. ನಾನು ಮತ್ತು ರಾಜ ಇಬ್ಬರೂ ಅಲ್ಲಿಗೆ ಬಂದ ಸಾರ್ವಜನಿಕರ ಸಹಾಯದಿಂದ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಗಂಡಸು ಮತ್ತು ಹೆಂಗಸನ್ನು ಮೇಲೆಕ್ಕೆತ್ತಿ ನೋಡಲಾಗಿ ಹೆಂಗಸಿನ ಹಣೆಗೆ, ಬಲಕಣ್ಣಿನ ಕೆಳಗೆ ಮತ್ತು ಮೈಕೈಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಂತರ ಗಂಡಸನ್ನು ನೋಡಲಾಗಿ ತಲೆಗೆ, ಎಡಕೆನ್ನೆಗೆ, ಎಡಗಾಲು, ಎಡಪಕ್ಕೆಗೆ ಇತರೆ ಕಡೆ ಪೆಟ್ಟುಬಿದ್ದು ರಕ್ತಗಾಯಗಳಾಗಿದ್ದವು. ನಂತರ ಅಪಘಾತಕ್ಕೀಡಾದ ಕಾರಿನ ನಂಬರ್ ನೋಡಲಾಗಿ ಕೆಎ-34-ಎನ್-5366 ನೇ ನ್ಯಾನೋ ಕಾರಾಗಿತ್ತು. ಈ ಕಾರನ್ನು ಗಂಡಸು ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿರುತ್ತಾನೆ. ಅಪಘಾತದಲ್ಲಿ ಮೃತಪಟ್ಟ ಹೆಂಗಸನ್ನು, ಗಾಯಗೊಂಡಿದ್ದ ಗಾಯಾಳು ಗಂಡಸನ್ನು ಅಪಘಾತ ವಿಚಾರ ತಿಳಿದು ಅಲ್ಲಿಗೆ ಬಂದ 108 ಅಂಬ್ಯುಲೆನ್ಸ್ ನಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆವು. ನಂತರ ವಿಚಾರ ತಿಳಿಯಲಾಗಿ ಮೃತ ಹೆಂಗಸಿನ ಹೆಸರು ವಾಣಿವರಲಕ್ಷ್ಮೀ ಸುಮಾರು 63 ವರ್ಷ ಎಂತ ಮತ್ತು ಕೆಎ-34-ಎನ್-5366 ನೇ ನ್ಯಾನೋ ಕಾರಿನ ಚಾಲಕ ಹಾಗೂ ಗಾಯಾಳುವಾದ ಗಂಡಸಿನ ಹೆಸರು ಬಾಬೂಜಿ, ಸುಮಾರು 70 ವರ್ಷ ಅಂತ ಇವರಿಬ್ಬರು ಗಂಡ-ಹೆಂಡತಿಯರಾಗಿದ್ದು, ಸಿರಗುಪ್ಪ ಟೌನ್ ವಾಸಿಗಳು ಬಳ್ಳಾರಿ ಜಿಲ್ಲೆ ಎಂತ ತಿಳಿದುಬಂತು ಈ ಅಪಘಾತವು ಮೇಲ್ಕಂಡ ಕಾರನ್ನು ಅದರ ಚಾಲಕ ಬಾಬೂಜಿ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ್ದರಿಂದ ಸಂಭವಿಸಿದ್ದು, ಮೇಲ್ಕಂಡ ಕಾರು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಸಿ.ಎಸ್.ಪುರ  ಠಾಣಾ ಮೊ.ನಂ:56/2019.  ಕಲಂ:279. 337 ಐಪಿಸಿ

ದಿನಾಂಕ:12.09.2019 ರಂದು ಈ ಕೇಸಿನ ಗಾಯಾಳು ಪಿರ್ಯಾದಿಯಾದ ತಾಸೀನಾ ಬಾನು ಕೊಂ ಮೊಹಮದ್ ಹಶಮ್, 30 ವರ್ಷ, ಗೃಹಿಣಿ, ಚಿಕ್ಕ  ಕುನ್ನಾಲ, ಕಡಬಾ ಹೋಬಳಿ, ಗುಬ್ಬಿ  ತಾಲ್ಲೂಕುರವರು  ನೀಡಿದ ಹೇಳಿಕೆ ಸಾರಾಂಶವೆಂದರೆ, ದಿನಾಂಕ:08.09.2019 ರಂಧು ಮದ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ  ನಾನು & ನನ್ನ ಅಣ್ಣನಾದ  ಮೊಹಮದ್ ಜಬೀಉಲ್ಲಾರವರೊಂದಿಗೆ ನಮ್ಮ ಬಾಬ್ತು ಕೆ.ಎ-06-ಹೆಚ್.ಬಿ-9154 ನೇ ಪಲ್ಸರ್ ಬೈಕಿನಲ್ಲಿ ಚಿಕ್ಕ ಕುನ್ನಾಲದಿಂದ  ಲಿಂಗಮ್ಮನಹಳ್ಳಿಗೆ  ನಮ್ಮ  ತಾಯಿ ಮನೆಗೆ  ಹೋಗಲೆಂದು ಬೈಕಿನಲ್ಲಿ ಹಿಂಭಾಗದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದನು, ನನ್ನ ಅಣ್ಣನಾದ ಮೊಹಮದ್ ಜಬೀಉಲ್ಲಾ ಬೈಕು ಓಡಿಸುತಿದ್ದು, ತುಂಬಾ  ಜೋರಾಗಿ ಬೈಕನ್ನು  ಅಜಾಗರುಕತೆಯಿಂಧ ಓಡಿಸಿಕೊಂಡು ಬಂದು ಚಿಕ್ಕ ಕುನ್ನಾಲದಿಂದ ಲಿಂಗಮ್ಮನಹಳ್ಳಿಗೆ  ಹೋಗುವ ರಸ್ತೆಯಲ್ಲಿ ಚಾನೆಲ್ ಹತ್ತಿರ ರಸ್ತೆಯಲ್ಲಿ ಬೈಕ್ ಸ್ಕಿಡ್ಡಾಗಿ ಬೈಕ್ ಸಮೇತ ರಸ್ತೆಯ ಮೇಲೆ ಇಬ್ಬರು  ಬಿದ್ದೆವು, ಹಿಂದೆ ಕುಳಿತಿದ್ದ  ನನಗೆ ಎಡಗಾಲಿನ ಮಂಡಿಗೆ  & ಎಡಪಕ್ಕೆಗೆ  ಏಟು ಬಿದ್ದು ರಕ್ತಗಾಯಗಳಾದವು, ಬೈಕ್ ಓಡಿಸುತಿದ್ದ   ನನ್ನ ಅಣ್ಣನಿಗೆ ಸಣ್ಣ ಪುಟ್ಟ  ತರಚಿದ ಗಾಯಗಳಾಗಿದ್ದವು, ಚಿಕಿತ್ಸೆ ಪಡೆಯುವಂತಹ ಯಾವುದೇ  ಗಾಯಗಳು  ಆಗಿರಲಿಲ್ಲಾ, ನಂತರ ಅಲ್ಲೆ ರಸ್ತೆಯಲ್ಲಿ ಹೋಗುತಿದ್ದ  ನನ್ನ  ಸಂಬಂದಿ ಇಮ್ರಾನ್ ಪಾಷಾ & ಸಾರ್ವಜನಿಕರ ಸಹಾಯದಿಂದ  ಯಾವುದೋ  ಒಂದು ವಾಹನದಲ್ಲಿ ಗುಬ್ಬಿ  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ ನನಗೆ  ಚಿಕಿತ್ಸೆ ಕೊಡಿಸಿ, ಅಲ್ಲಿದ್ದ ವೈದ್ಯರ ಸಲಹೆ ಮೇರೆಗೆ  ತುಮಕೂರಿನ ಸರ್ವೊದಯ ಆಸ್ಪತ್ರೆಗೆ ದಿನಾಂಕ:09.09.2019 ರಂಧು ಹೋಗಿ  ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ  ಬಂದು ಸಂಜೆ 4.30 ಗಂಟೆಗೆ ಠಾಣಾ  ಮೊ.ನಂ: 56/2019. ಕಲಂ: 279. 337 ಐಪಿಸಿ ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 140/2019 ಕಲಂ : 379 IPC.

ದಿನಾಂಕ 12-09-2019 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಕಲ್ಲೇಗೌಡ ವಿ.ಎಲ್ ಬಿನ್ ಲಕ್ಕಪ್ಪ, 24 ವರ್ಷ, ಕುರುಬ ಜನಾಂಗ, ಬೆಸ್ಕಾಂ ಲೈನ್ ಮ್ಯಾನ್, ವಿರೂಪಾಕ್ಷಿಪುರ, ನೋಣವಿನಕೆರೆ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೂರು ವರ್ಷಗಳಿಂದ ತಿಪಟೂರಿನ ಬೆಸ್ಕಾಂ ಕಛೇರಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಊರಿನಿಂದ ತಿಪಟೂರಿಗೆ ನನ್ನ ಬಾಬ್ತು ಕೆಎ-44-ಎಸ್-0904 ನೇ ಬಜಾಜ್ ಪ್ಲಾಟಿನ ಬೈಕ್ ನಲ್ಲಿ ಹೋಗಿ ಬರುತ್ತಿದ್ದೆ, ಅದರಂತೆ ದಿನಾಂಕ 07-09-2019 ರಂದು ಸಂಜೆ ಸುಮಾರು 04-10 ಗಂಟೆಗೆ ನಾನು ನನ್ನ ಬಾಬ್ತು  ಕೆಎ-44-ಎಸ್-0904 ಬೈಕ್ ನ್ನು ತಿಪಟೂರು ನಗರದ ಪೈ ಸರ್ಕಲ್ ನ ಕೆನರಾ ಬ್ಯಾಂಕ್ ಮುಂಬಾಗ ನಿಲ್ಲಿಸಿದ್ದು, ನಾನು ಬೈಕ್ ನ ಕೀಯನ್ನು ಅದರಲ್ಲೇ ಬಿಟ್ಟು ಜಿಯೋ ಸಿಮ್ ಪಡೆಯಲು ಹೋಗಿ ವಾಪಸ್ 10 ನಿಮಿಷದ ನಂತರ ಬಂದು ನೋಡಲಾಗಿ ನನ್ನ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬೈಕ್ ನ ಬ್ಯಾಗಿನಲ್ಲಿ ನಾನು ಕೆಲಸ ಮಾಡುವ ಮೀಟರ್ ರೀಡಿಂಗ್ ಮಿಷನ್ ಮತ್ತು ಐ.ಡಿ ಕಾರ್ಡ್ ಇದ್ದು, ಇವುಗಳನ್ನು ಬೈಕ್ ಜೋತೆ ಕಳ್ಳತನ ಮಾಡಿರುತ್ತಾರೆ. ನನ್ನ ಬೈಕ್ ನ ಈಗಿನ ಬೆಲೆ ಸುಮಾರು 20,000 ರೂಗಳಾಗಿದೆ. ನನ್ನ ಬೈಕ್ ನ್ನು ಎಲ್ಲಾ ಕಡೆ ಹುಡುಕಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಕಳ್ಳರನ್ನು ಪತ್ತೆ ಮಾಡಿ ನನ್ನ ಕೆಎ-44-ಎಸ್-0904 ಬೈಕ್ ನ್ನು ಹಾಗೂ ಬೈಕ್ ನಲ್ಲಿದ್ದ ಮೀಟರ್ ರೀಡಿಂಗ್ ಮಿಷನ್ ಮತ್ತು ಐ.ಡಿ ಕಾರ್ಡ್ ನ್ನು ಕೊಡಿಸಿ ಕಾನೂನು ಕ್ರಮ ಕೈಗೊಳ್ಳಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 57 guests online
Content View Hits : 616888
Hackguard Security Enabled