lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21
23 24 25 26 27 28 29
30            
Sunday, 22 September 2019
ಅಪರಾಧ ಘಟನೆಗಳು 22-09-19

ಅಮೃತೂರು ಪೊಲೀಸ್‌ ಠಾಣಾ ಮೊನಂ-135/2019, ಕಲಂ- 279, 304(ಎ) ಐಪಿಸಿ ರೆ/ವಿ-134(ಎ&ಬಿ), 187 ಐ.ಎಂ.ವಿ. ಆಕ್ಟ್

ದಿನಾಂಕ: 21-09-2019 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಟಿ.ವಿ. ರಾಜು ಬಿನ್ ವೆಂಕಟೇಶ್, 26 ವರ್ಷ, ಕೊರಮರು, ಟವರ್ ಕೆಲಸ, ಹಾಲಿ ವಾಸ: 1 ನೇ ಕ್ರಾಸ್, 1 ನೇ ಮೇನ್, ಶ್ರೀನಿವಾಸ್ ನಗರ, ಪಟ್ಟೇಗಾರ್ ಪಾಳ್ಯ ಮೇನ್ ರೋಡ್, ಬೆಂಗಳೂರು. ಸ್ವಂತ ಊರು:  ತೊರೆಹಳ್ಳಿ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 20-09-2019 ರಂದು ಸಂಜೆ ಸುಮಾರು 7-20 ಗಂಟೆ ಸಮಯದಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ನಮ್ಮೂರಿನ ಲೇಟ್ ಗುಡ್ಡ ತಿಮ್ಮೇಗೌಡರ ಮಗ ಗಂಗಣ್ಣ ರವರು ನನಗೆ ಫೋನ್ ಮಾಡಿ, ಈ ದಿನ ಯಾಚನಹಳ್ಳಿ ಗ್ರಾಮದ ಕಟ್ಟಿಂಗ್ ಕಟ್ಟೆ ಹತ್ತಿರ ಹಾದು ಹೋಗಿರುವ ಎಸ್.ಹೆಚ್-84 ರಸ್ತೆಯಲ್ಲಿ ಸಂಜೆ ಸುಮಾರು 6-50 ಗಂಟೆ ಸಮಯದಲ್ಲಿ ನಿಮ್ಮ ತಂದೆ ವೆಂಕಟೇಶ್ ರವರಿಗೆ ಯಾವುದೋ ಒಂದು ವಾಹನದಿಂದ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಿಮ್ಮ ತಂದೆಯ ಶವವನ್ನು ಈಗ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲು ತೆಗೆದುಕೊಂಡು ಹೋಗುತ್ತಿದ್ದೇವೆ ಬೇಗ ಬಾ ಎಂದು ತಿಳಿಸಿದರು. ಆಗ ನಾನು ಕೂಡಲೇ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಬಂದು ನೋಡಲಾಗಿ ಅಪಘಾತದಿಂದ ನಮ್ಮ ತಂದೆಯ ಮುಖಕ್ಕೆ, ತಲೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಮೃತಪಟ್ಟಿರುವುದು ನಿಜವಾಗಿತ್ತು. ನಂತರ ಅಲ್ಲಿಯೇ ಇದ್ದ ನಮ್ಮೂರಿನ ಗಂಗಣ್ಣರವರನ್ನು ವಿಚಾರ ಮಾಡಲಾಗಿ, ಈ ದಿನ ನಿಮ್ಮ ತಂದೆಯವರು ಸ್ವಂತ ಕೆಲಸದ ನಿಮಿತ್ತ ಕೆ.ಎ-05 ಜೆ.ಎಫ್-3955 ರ ಹೀರೋ ಸ್ಪ್ಲೆಂಡರ್ ಪ್ರೋ ಬೈಕಿನಲ್ಲಿ ಅಮೃತೂರಿಗೆ ಬರುವಾಗ ಸಂಜೆ ಸುಮಾರು 6-50 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೂಕ್, ಅಮೃತೂರು ಹೋಬಳಿ, ಯಾಚನಹಳ್ಳಿ ಗ್ರಾಮದ ಕಟ್ಟಿಂಗ್ ಕಟ್ಟೆ ಬಳಿ ಹಾದುಹೋಗಿರುವ ಎಸ್.ಹೆಚ್-84 ರ ರಸ್ತೆಯ ಎಡಪಕ್ಕದಲ್ಲಿ ಬರುತ್ತಿರುವಾಗ ಅದೇ ರಸ್ತೆಯಲ್ಲಿ ಬಂದ ಯಾವುದೋ ಒಂದು ವಾಹನದಿಂದ ಅಪಘಾತವಾಗಿ ನಿಮ್ಮ ತಂದೆಯವರ ಮುಖಕ್ಕೆ, ತಲೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಂತರ ಅಲ್ಲಿಗೆ ಬಂದ ಯಾವುದೋ ಒಂದು ವಾಹನದಲ್ಲಿ ನಿಮ್ಮ ತಂದೆಯವರ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಬಂದು ಇಟ್ಟಿರುತ್ತೇವೆಂತ ತಿಳಿಸಿದರು. ನಂತರ ನಾನು ನಮ್ಮ ಸಂಭಂದಿಕರಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನಮ್ಮ ತಂದೆಯವರಿಗೆ ಅಪಘಾತಪಡಿಸಿದ ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಠಾಣಾ ಮೊ.ನಂ-135/2019 ಕಲಂ-279, 304(ಎ) ಐ.ಪಿ.ಸಿ. ರೆ/ವಿ-134(ಎ&ಬಿ), 187 ಐ.ಎಂ.ವಿ. ಆಕ್ಟ್. ರೀತ್ಯ ಪ್ರಕರಣವನ್ನು ದಾಖಲಿಸಿ, ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು, ಸದರಿ ಪ್ರಕರಣವು ಘೋರ ಪ್ರಕರಣವಾದ್ದರಿಂದ ಪ್ರತಿಗಳನ್ನು ಈ ತುರ್ತು ವರದಿಯೊಂದಿಗೆ ಮೇಲಾಧಿಕಾರಿಗಳವರಿಗೆ ನಿವೇದಿಸಿಕೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 86/2019 ಕಲಂ: 279,304(ಎ), 201 ಐ.ಪಿ.ಸಿ.

ದಿನಾಂಕ; 21/09/2019 ರಂದು ಬೆಳಿಗ್ಗೆ 9-15 ಗಂಟೆಗೆ ಪಿರ್ಯಾದಿ ಶ್ರೀಮತಿ ಉಮಾದೇವಿ ಕೋಂ ಸುರೇಶ್, 44 ವರ್ಷ, ಮಡಿವಾಳ ಜನಾಂಗ, ಕೂಲಿ ಕೆಲಸ, ಹುಲ್ಲೇಕೆರೆ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಅಕ್ಕ ಗಂಗಮ್ಮ (55 ವರ್ಷ) ಗಂಡಸಿ ಹೋಬಳಿ ಕೆಂಕೆರೆ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಅವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ದಿನಾಂಕ; 19/09/2019 ರಂದು ದಸರೀಘಟ್ಟಕ್ಕೆ ಕೂಲಿ ಕೆಲಸಕ್ಕೆ ಬಂದು ಕೆಲಸ ಮುಗಿಸಿ ವಾಪಸ್ ಸಂಜೆ ಸುಮಾರು 5-30 ರಿಂದ 6-00 ಗಂಟೆಯ ಸಮಯದಲ್ಲಿ ಕೆಂಕೆರೆ ಗಡಿ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿರವಾಗ ಬುಧವಾರ ಸಂತೆ ಗೇಟ್ ಬಳಿ ಕೆಂಪಮ್ಮ ನವರ ಜಮೀನು ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಂಗಮ್ಮಳಿಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ದಸರೀಘಟ್ಟ ಗ್ರಾಮದ KA-44 B-0356 ರ ದ್ವಿಚಕ್ರ ವಾಹನದ ಸವಾರ ಕೇಶವಮೂರ್ತಿ ಎಂಬುವರು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಗಂಗಮ್ಮಳಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿ ಅವರು ಸಹ ರಸ್ತೆಗೆ ಬಿದ್ದು, ಸಣ್ಣಪುಟ್ಟ ಗಾಯಮಾಡಿಕೊಂಡಿರುತ್ತಾರೆ, ಗಂಗಮಮ್ಮಳಿಗೆ ತಲೆಗೆ ಹಾಗೂ ಇತರೆ ಕಡೆ ರಕ್ತಗಾಯಗಳಾಗಿ ಬಿದ್ದಿದ್ದವಳನ್ನು ಕೇಶವಮೂರ್ತಿಯವರೇ ಕೆಂಕೆರೆ ಆಸ್ಪತ್ರೆಗೆ ಕರೆದುಕೊಂಡು ಆಟೋದಲ್ಲಿ ಹೋಗಿ ಅಲ್ಲಿ ಡಾಕ್ಟರ್ ಇಲ್ಲದ ಕಾರಣ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಅದೇ ಆಟೋದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲುಮಾಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬುದಾಗಿ ಕೆಂಕೆರೆ ಗ್ರಾಮದ ವಸಂತಕುಮಾರ್ ಬಿನ್ ದೇವರಾಜಯ್ಯ ಎಂಬುವರು ನನಗೆ ಫೋನ್ ಮಾಡಿ ತಿಳಿಸಿದರು. ನಾನು ನನ್ನ ಮಗ ಮಂಜುನಾಥ್ ರವರನ್ನು ಬೆಂಗಳೂರಿಗೆ ಕಳುಹಿಸಿದೆ. ನನ್ನ ಮಗ ದಿನಾಂಕ: 20/09/2019 ರಂದು ಮಧ್ಯಾಹ್ನ 3-00 ಗಂಟೆಯ ಸಮಯಕ್ಕೆ ಫೋನ್ ಮಾಡಿ ಗಂಗಮ್ಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಕೇಶವಮೂರ್ತಿಯವರು ಆಸ್ಪತ್ರೆಯಲ್ಲಿ ಎಮ್ಮೆ ಗುದ್ದಿ ರಸ್ತೆಗೆ ಬಿದ್ದು ಗಾಯಗಳಾಗಿರುತ್ತವೆ ಎಂಬುದಾಗಿ ಬರೆಸಿರುತ್ತಾರೆ. ಅವರು ದ್ವಿಚಕ್ರ ವಾಹನದಲ್ಲಿ ಗುದ್ದಿ ಗಾಯಗೊಳಿಸಿ ಎಮ್ಮೆ ಗುದ್ದಿರುತ್ತದೆ ಎಂದು ದಾಖಲಿಸಿರುವುದು ಸುಳ್ಳಾಗಿರುತ್ತದೆ. ಗಂಗಮ್ಮಳ ಸಾವು ರಸ್ತೆ ಅಪಘಾತದಿಂದ ಆಗಿರುತ್ತದೆ ಅವಳ ಸಾವಿಗೆ ಕೇಶವಮೂರ್ತಿಯವರೇ ಕಾರಣರಾಗಿರುತ್ತಾರೆ. ಮೃತಳ ಶವವು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿರುತ್ತದೆ. ನೆನ್ನೆ ನಮ್ಮ ಅತ್ತೆಯವರು ತೀರಿಹೋಗಿದ್ದರಿಂದ ಈ ದಿನ ತಡವಾಗಿ ಬಂದಿದ್ದು, ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತೇನೆ ಎಂತಾ ಇತ್ಯಾದಿಯಾಗಿ ದೂರನ್ನು ನೀಡಿದ್ದು, ಸದರಿ ದೂರನ್ನು ಪಡೆದು ಠಾಣಾ ಮೊ.ನಂ- 86/2019 ಕಲಂ: 279,304 (ಎ) , 201 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 35 guests online
Content View Hits : 616944
Hackguard Security Enabled