lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
September 2019

Monday, 30 September 2019

ಅಪರಾಧ ಘಟನೆಗಳು 30-09-19

ತಿಪಟೂರು ಗ್ರಾಮಾಂತರ ಪೊಲಿಸ್ ಠಾಣಾ ಯು.ಡಿ.ಆರ್ ನಂ 114/2019 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ:29-09-2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಶ್ರೀ ಮದನ್ ಗವಾಲಿ ಬಿನ್ ಲಕ್ಷ್ಮನ್ ಗವಾಲಿ, 23ವರ್ಷ,ಹಿಂದೂಗವಾಲಿ ಜನಾಂಗ, ಅಶೋಕ ಬಿಲ್ಡ್ ಕಾನ್ ನಲ್ಲಿ ಇಂಜಿನಿಯರಿಂಗ್ ಕೆಲಸ, ನಂ 160, ಪಾಟೀಲ್ ಗಲ್ಲಿ,ದುಂಡ್ಗೆ, ಗಡಿಂಗ್ಬಾಜ್ ತಾ, ಕೊಪ್ಪಾಪುರ್ ಜಿಲ್ಲೆ, ಮಹಾರಾಷ್ಟ್ರ, ಹಾಲಿವಾಸ, ಬಿಳಿಗೆರೆ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು.ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ, ನಾನು ಮೇಲೆ ಹೇಳಿದ ವಿಳಾಸದಲ್ಲಿ ವಾಸವಾಗಿದ್ದು, ನಾನು ಅಶೋಕ ಬಿಲ್ಡ್ ಕಾನ್ ನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡಿದ್ದು, ನಾನು ಬೆಂಗಳೂರು-ಹೊನ್ನಾವರ ರಸ್ತೆಯ ತಿಪಟೂರು ತಾಲ್ಲೂಕು, ಎನ್ ಹೆಚ್.206 ರಸ್ತೆಯ ಕೋಟನಾಯಕನಹಳ್ಳಿ ಬಳಿಯ ರುದ್ರಮುನಿ ಕಾಲೇಜು ಮುಂಭಾಗ ಕೋಟನಾಯಕನಹಳ್ಳಿ ಕೆರೆಯ ಕಡೆ ರಸ್ತೆಯ ವಿಸ್ತರಣೆಗಾಗಿ ಹೊಸದಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಅದರಂತೆ ಈ ದಿವಸ ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಮೇಲ್ಕಂಡ ಸ್ಥಳದಲ್ಲಿ ಕೆಲಸ ಮಾಡುತ್ತಿರುವಾಗ ಇದಕ್ಕೆ ಹೊಂದಿಕೊಂಡಂತೆ ಒಂದು ಪಾಳು ಮನೆ ಇದ್ದು, ಈ ಮನೆಯಿಂದ ಕೆಟ್ಟವಾಸನೆ ಬರುತ್ತಿದ್ದು, ಹೋಗಿ ನೊಡಲಾಗಿ ಪಾಳು ಮನೆಯ ಒಳಗೆ ಸುಮಾರು 35-40 ವರ್ಷ ವಯಸ್ಸಿನ ಗಂಡಸಿನ ಶವವಾಗಿದ್ದು, ಈ ವ್ಯಕ್ತಿ ಸುಮಾರು 2-3 ದಿನಗಳ ಹಿಂದೆಯೇ ಮೃತಪಟ್ಟಂತೆ ಕಂಡು ಬಂದಿರುತ್ತದೆ.ಈತನ ದೇಹವು ಕೃಶವಾಗಿದ್ದು ನಿಶಕ್ತಿಯಿಂದ ನರಳಿ ಮೃತಪಟ್ಟಂತೆ ಕಂಡುಬಂದಿರುತ್ತದೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.ಎಂತ ನೀಡಿದ ಪಿರ್ಯಾದು ಸ್ವೀಕರಿಸಿ ಠಾಣಾ ಯು.ಡಿ.ಆರ್ ನಂ 14/2019 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.

ಮಿಡಿಗೇಶಿ  ಪೊಲೀಸ್ ಠಾಣಾ ಸಿ.ಆರ್. ನಂ:84/2019 ಕಲಂ:279,304(ಎ) IPC

ದಿನಾಂಕ:29/09/2019 ರಂದು ರಾತ್ರಿ 11-25 ಗಂಟೆಗೆ ಪಿರ್ಯಾದಿ ಚಂದ್ರಶೇಖರ್‌ ಹೆಚ್‌.ಬಿ. ಬಿನ್ ಭೂತಯ್ಯ ಹೆಚ್‌.ಸಿ. 41 ವರ್ಷ, ಈಡಿಗರು, ಸ್ವಯಂ ಉದ್ಯೋಗ, ವಾಸ ಹೊಸಕೆರೆ ಕೆರೆಹಿಂದೆ, ಮಿಡಿಗೇಶಿ ಹೋಬಳಿ, ಮಧುಗಿರಿ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ನನ್ನ ತಂದೆ ಭೂತಯ್ಯರವರು ದಿನಾಂಕ:28/09/2019 ರಂದು ಸಂಜೆ ಸುಮಾರು 03-45 ಗಂಟೆ ಸಮಯದಲ್ಲಿ ಹೊಸಕೆರೆಗೆ ಹೋಗಿ ಬರುತ್ತೇನೆಂತಾ ಹೇಳಿ ಕೆಎ-64-ಹೆಚ್‌-0347 ನೇ ಬೈಕಿನಲ್ಲಿ ಮನೆಯಿಂದ ಹೋದರು. ನನ್ನ ತಂದೆ ಮನೆಯಿಂದ ಹೋದ ಸುಮಾರು 15 ನಿಮಿಷಗಳ ನಂತರ ಅವರಗಲ್ಲು ಗ್ರಾಮದ ಈರಣ್ಣಗೌಡ ಎಂಬುವರು ಫೋನ್ ಮಾಡಿ ನಿನ್ನ ತಂದೆ ಭೂತಯ್ಯನವರು ಕೆಎ-64-ಹೆಚ್‌-0347 ನೇ ಬೈಕಿನಲ್ಲಿ ಹೊಸಕೆರೆ ಕಡೆಯಿಂದ ನಿಮ್ಮ ಮನೆ ಕಡೆಗೆ ವಾಪಸ್ಸು ಬರಲು ಇದೇ ದಿನ ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ ಮಧುಗಿರಿ-ಪಾವಗಡ ಮುಖ್ಯರಸ್ತೆಯಲ್ಲಿ ಹೊಸಕೆರೆ ಹತ್ತಿರ ಬರುತ್ತಿರುವಾಗ್ಗೆ ನಿನ್ನ ತಂದೆ ಓಡಿಸುತ್ತಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ರಸ್ತೆ ಬದಿ ನಿಂತಿದ್ದ ಯಾವುದೋ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಪರಿಣಾಮ ನಿಮ್ಮ ತಂದೆಯ ತಲೆಗೆ, ಮೈಕೈಗೆ, ಪೆಟ್ಟುಗಳು, ಬಿದ್ದು ಕಿವಿಯಲ್ಲಿ ರಕ್ತ ಬರುತ್ತಿರುತ್ತೆ. ಎಂತಾ ತಿಳಿಸಿದ್ದರಿಂದ ನಾನು ಕೂಡಲೇ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದಲ್ಲಿ ಗಾಯಗೊಂಡಿದ್ದ ನಮ್ಮ ತಂದೆಯವರನ್ನು ಈರಣ್ಣಗೌಡರು ಉಪಚರಿಸುತ್ತಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಅಲ್ಲಿಂದ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿಕೊಂಡು ಈ ದಿನ ಮಧ್ಯಾಹ್ನ ನಮ್ಮ ತಂದೆಯವರನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದು ಮನೆಗೆ ಬಂದ ನಂತರ ನನ್ನ ತಂದೆಯವರಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಅವರನ್ನು ಪುನಃ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ಇದೇ ದಿನ ರಾತ್ರಿ ಸುಮಾರು 08-00 ಗಂಟೆ ಸಮಯಕ್ಕೆ ನಮ್ಮ ತಂದೆ ಭೂತಯ್ಯನವರು ಮೃತಪಟ್ಟಿರುತ್ತಾರೆ. ನಮ್ಮ ತಂದೆ ಅವರು ಓಡಿಸುತ್ತಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ರಸ್ತೆ ಬದಿ ನಿಂತಿದ್ದ ಯಾವುದೋ ಅಪರಿಚಿತ ಲಾರಿಗೆ ಡಿಕ್ಕಿ ಹೊಡೆಸಿ ಉಂಟಾದ ಗಾಯಗಳಿಂದ ಮೃತಪಟ್ಟಿದ್ದು ಅವರ ಸಾವಿಗೆ ಅವರೆ ಕಾರಣರಾಗಿರುತ್ತಾರೆ. ಆದ್ದರಿಂದ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನ ಮೇರೆಗೆ ಠಾಣಾ ಮೊ.ಸಂ.84/2019 ಕಲಂ: 279, 304(A) IPC ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.Sunday, 29 September 2019

ಅಪರಾಧ ಘಟನೆಗಳು 29-09-19

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 20/2019 ಕಲಂ: 174 CRPC

ಪಿರ್ಯಾದಿ ಕಾವ್ಯ ಕೋಂ ಶ್ರೀನಿವಾಸ್, 27ವರ್ಷ, ವಕ್ಕಲಿಗರು, ಗೃಹಿಣೆ, ಬಿ.ಸಿ ಪಾಳ್ಯ, ಕಸಬಾ ಹೋಬಳಿ,ಮಧುಗಿರಿ ತಾ|| ರವರು ಬೆಳಿಗ್ಗೆ 09-30 ಗಂಟೆಗೆ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ತನ್ನ ತಾಯಿಯ ತಮ್ಮ ನಾದ ಶ್ರೀನಿವಾಸ ರವರನ್ನು ಈಗ್ಗೆ 7 ವರ್ಷಗಳ ಹಿಂದೆ ಸಂಪ್ರದಾಯಕವಾಗಿ ಮಧುವೆಯಾಗಿದ್ದು, ಇವರಿಗೆ 6 ವರ್ಷದ ಲಕ್ಷತ್ ಎಂಬ  ಗಂಡು ಮಗುವಿರುತ್ತೆ, ಪಿರ್ಯಾದಿಯು ತನ್ನ ಗಂಡ  ಅತ್ತೆ ರವರೊಂದಿಗೆ ಅನ್ಯೂನ್ಯವಾಗಿ ಸಂಸಾರಮಾಡಿಕೊಂಡಿದ್ದು, ತನ್ನ ಗಂಡನಿಗೆ ಈಗ್ಗೆ ಸುಮಾರು ಒಂದು ವರ್ಷದಿಂಧ ಮೂರ್ಛೆ ರೋಗ ಬರುತ್ತಿದ್ದು, ಈ ಖಾಯಿಲೆಗೆ  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಆದರೂ ಸಹ ಮೂರ್ಛೆ ರೋಗ ಬಂದಾಗ ಬಿದ್ದು ಹೊದ್ದಾಡುತ್ತಿದ್ದರು ದಿನಾಂಕ 28-09-2019 ರಂದು ಊಟ ಮಾಡಿ ಮಲಗಿದ್ದು, ರಾತ್ರಿ ಸುಮಾರು 1-30 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಮಲಗಿದ್ದವರು ಎದ್ದು ನೀರು ಕೊಡು ಎಂದು ಕೇಳಿದರು ಆಗ  ಪಿರ್ಯಾದಿಯು ನೀರನ್ನು ಕೊಟ್ಟರು ನೀರು ಕುಡಿದು ಸ್ವಲ್ಪ ಸಮಯದ ನಂತರ ವಾಂತಿ ಮಾಡಿಕೊಂಡಿಕೊಂಡರು ತಾನು ಗಾಬರಿಯಾಗಿ ತನ್ನ ಭಾವನಾದ ಬಿ.ಸಿ ನಾರಾಯಣಪ್ಪರವರನ್ನು ಕೂಗಿ ಕರೆದರು ತಕ್ಷಣ ತನ್ನ ಭಾವ ಅಕ್ಕ ಎಲ್ಲರೂ ಸೇರಿ ಶ್ರೀನಿವಾಸ್ ರವರನ್ನು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು ನಂತರ  ವೈದ್ಯರಿಂಧ  ಪರಿಕ್ಷಿಸಿದಾಗ ಆಸ್ಪತ್ರೆಗೆ ಕರೆದುಕೊಂಡು ಬರುವ ಮುನ್ನವೇ ಮೃತ ಪಟ್ಟರುತ್ತಾರೆ ಎಂದು ತಿಳಿಸಿದರು, ಪಿರ್ಯಾದಿಯ ಗಂಡನಾದ ಶ್ರೀನಿವಾಸ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಮೃತ ದೇಹವನ್ನು ಮಧುಗಿರಿ ಸರ್ಕಾರಿ ಅಸ್ಪತ್ರೆ ಶವಗಾರದಲ್ಲಿ ಇಟ್ಟಿರುತ್ತೆ ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಚೇಳೂರು  ಪೊಲೀಸ್ ಠಾಣಾ  ಮೊ.ನಂ: 119/2019  ಕಲಂ;323.324.355 504 ಐ.ಪಿ.ಸಿ

ದಿನಾಂಕ : 28/09/2019 ರಂದು ಸಂಜೆ  5-00 ಗಂಟೆ ಸಮಯದಲ್ಲಿ ಪಿರ್ಯಾದಿ ಹಿತವಾಣಿ ಕೋಂ ಸೋಮಶೇಖರ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ ಮೇಲೆ ಇಲ್ಲಿಗೆ ಸುಮಾರು 6 ತಿಂಗಳಿಂದಲೂ ನೀರು ಸರಬರಾಜು ಸರಿಯಾಗಿ ಮಾಡಿಸುವುದಿಲ್ಲ ಹಾಗೂ ವಿದ್ಯುತ್  ದೀಪಗಳನ್ನು ಹಾಕಿಸಿರುವುದಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಮುಂದೆ ಬಂದು ನೀನು ಯಾವ ಸೀಮೆ ಮೆಂಬರ್ ಯೋಗ್ಯತೆ ಇಲ್ಲದವಳು, ಅಂತವಳು – ಇಂತವಳು  ಎಂದು ಪ್ರತಿ ದಿನ ನನ್ನನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಶ್ರೀಮತಿ ಸೌಮ್ಯ ಕೋಂ ದಯಾನಂದ ಟಿ.ಜಿ.  ತೆವಡೇಹಳ್ಳಿ  ( ಪ್ರಸ್ತುತ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಬಡಾವಣೆ, ನಿಟ್ಟೂರು ರಸ್ತೆಯಲ್ಲಿ ವಾಸ ) ರವರು  ನಮ್ಮ ನೆಮ್ಮದಿ ಆಳು ಮಾಡುತ್ತಿದ್ದರು. ಆದರೆ ದಿನಾಂಕ : 28/09/2019 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ ಅವರ ಮನೆಯ ಹತ್ತಿರ ಇರುವ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಕುರಿತು ಪರಿಶೀಲಿಸಲು ಹೋದಾಗ, ನನ್ನನ್ನು ಮುಂಡೆ, ರಂಡೆ ಎಂದು ಸಾರ್ವಜನಿಕವಾಗಿ ಹೀನಾ ಮಾನವಾಗಿ ಬೈಯ್ಯುತ್ತಾ, ನನ್ನ ಮೇಲೆ ದೈಹಿಕವಾಗಿ ಕುತ್ತಿಗೆಯ ಭಾಗದಲ್ಲಿ ಉಗುರಿನಿಂದ ಕಿತ್ತು ರಕ್ತಗಾಯ ಬರಿಸಿರುತ್ತಾರೆ ಹಾಗೂ ಕೈಗಳಿಂದ ಹಲ್ಲೆ ಮಾಡಿರುತ್ತಾರೆ. ಹಾಗೂ ನನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿ ಚಪ್ಪಲಿಯಿಂದ ಎಸೆದು ಹೊಡೆದು,  ರಕ್ತ ಬರುವಂತೆ ಹೊಡೆದು ಎಳೆದಾಡಿ ಹಲ್ಲೆ ಮಾಡಿರುತ್ತಾರೆ. ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ನನ್ನ ಮೈಕೈಗೆ ಹೊಡೆದಿರುತ್ತಾರೆ. ಇಷ್ಟೇ ಅಲ್ಲದೇ ನಮ್ಮ ಮನೆಯ ಮುಂದೆ ಬಂದು ಮತ್ತೊಮ್ಮೆ ಜಗಳವಾಡಿ ಬೈಯ್ದು ರಂಪಾಟ ಮಾಡಿ, ಸುಮಾರು ಎರಡು ಗಂಟೆಗಳಿಗೂ ಹೆಚ್ಚು  ಸಮಯ ಜಗಳವಾಡಿ ಮರ್ಯಾದೆ ಕಳೆದು ಹೋಗಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸಬೇಕೆಂದು ಕೋರಿ ನೀಡಿದ  ಪಿರ್ಯಾದು ಅಂಶವಾಗಿರುತ್ತೆ.

 

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ.178 /2019 ಕಲಂ: 279,304 (ಎ) ಐ.ಪಿ.ಸಿ ರೆ/ವಿ 134(ಎ&ಬಿ,187 ಐ.ಎಂ.ವಿ ಆಕ್ಟ್

ದಿನಾಂಕ: 28/09/2019 ರಂದು  ಬೆಳಿಗ್ಗೆ 9.30 ಗಂಟೆಗೆ  ಪಿರ್ಯಾದಿ ಎನ್,ಆರ್,ಸಂತೋಷ್ ಬಿನ್ ಲೇ||ರಾಮಾಂಜಿನಯ್ಯ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ;28/09/2019 ರಂದು ಬೆಳಗ್ಗೆ 6-45 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ   ಅಮ್ಮ ಮಂಗಳಮ್ಮ ( ಸುಮಾರು 65 ವರ್ಷ ) ತುಮಕೂರಿಗೆ ಹೋಗಲು ತುಮಕೂರು-ಬೆಂಗಳೂರು ರಸ್ತೆಯ ಪಕ್ಕ ರಸ್ತೆ ದಾಟಲು ಹೋಗುತ್ತಿರುವಾಗ್ಗೆ ನಾನು ಮುಂದೆ  ರಸ್ತೆದಾಟಿ ಮುಂದೆ ಹೋಗಿದ್ದು ನನ್ನ ಹಿಂದೆ ಬರುತ್ತಿದ್ದ ನಮ್ಮ   ಅಮ್ಮನಿಗೆ  ತುಮಕೂರು ಕಡೆಯಿಂದ  ಒಂದು ಲಾರಿ ಅದರ ಚಾಲಕ ಅತಿವೇಗ ಮತ್ತು ಆಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ನಮ್ಮ ತಾಯಿಗೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದು, ನಮ್ಮ ತಾಯಿಯು ರಸ್ತೆ  ಡಿವೈಡರ್ ಪಕ್ಕಕ್ಕೆ ಬಿದ್ದು ತಲೆ , ದೇಹ ಚಿದ್ರ ಚಿದ್ರ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತು, ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಬೆಂಗಳೂರು ಕಡೆಗೆ ಹೊರಟು ಹೋದನು, ನನಗೆ ಗಾಬರಿಯಲ್ಲಿ ಲಾರಿ ನಂಬರ್ ನೋಡಲು ಸಾದ್ಯವಾಗಲಿಲ್ಲ,  ನಮ್ಮ ತಾಯಿಗೆ ಡಿಕ್ಕಿಹೊಡೆಸಿ ನಮ್ಮ ತಾಯಿಯ ಸಾವಿಗೆ  ಕಾರಣರಾದ ಯಾವುದೋ ಲಾರಿಯನ್ನು ಮತ್ತು ಚಾಲಕನನ್ನು ಪತ್ತೆಮಾಡಿ ಈತನ  ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.Saturday, 28 September 2019

ಅಪರಾಧ ಘಟನೆಗಳು28-09-19

 

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 18/2019 ಕಲಂ: 174 CRPC

ಈ ಕೇಸಿನ ಪಿರ್ಯಾದಿ ಲಕ್ಷ್ಮಮ್ಮ ಕೋಂ ಲಕ್ಷ್ಮಣ , 34ವರ್ಷ, ಗೊಲ್ಲರು ಜನಾಂಗ, ಮಂಗಳವಾಡ, ನಿಡಗಲ್ಲು ಹೋಬಳಿ, ಪಾವಗಡ ತಾ|| ರವರು ಬೆಳಿಗ್ಗೆ 10-30 ಗಂಟೆಗೆ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡನಾದ ಲಕ್ಷ್ಮಣ ಬಿನ್  ಅವಳಪ್ಪ 37 ವರ್ಷ ರವರಿಗೆ ಸುಮಾರು 10-12 ವರ್ಷ ದಿಂದ ಕಾಲುನೋವು ಇದ್ದು ಈ ಸಂಬಂದ  ಬಲಗಾಲಿಗೆ ಆಪರೇಷನ್ ಕೂಡ ಮಾಡಿಸಿದ್ದು,ಪಿರ್ಯಾದಿಯ ಗಂಡ ಲಕ್ಷ್ಮಣರವರಿಗೆ  ಕುಡಿಯುವ ಚಟವನ್ನು ಸಹ ಇದ್ದು ದಿನಾಂಕ :24-09-2019 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ತುಮಕೂರಿಗೆ ಹೋಗಿ ಅಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದು  ವಾಪಸ್ಸ್ ಮನೆಗೆ ಬಂದಿರಲಿಲ್ಲ ನಂತರ ದಿನಾಂಕ:27-09-2019 ರಂದು ಲಕ್ಷ್ಮಣ  ರವರು ಮಧುಗಿರಿ ಬಸ್ ನಿಲ್ದಾಣದಲ್ಲಿ  ಮೃತಪಟ್ಟಿರುತ್ತಾನೆಂದು ತಿಳಿದು ನಂತರ ಪಿರ್ಯಾದಿಯು ಮಧುಗಿರಿಗೆ ಬಂದು ನೋಡಲಾಗಿ ತನ್ನ ಗಂಡನ ಶವವು ಮಧುಗಿರಿ ಸರ್ಕಾರಿ ಅಸ್ಪತ್ರೆಯಲ್ಲಿತ್ತು ನಂತರ  ತಿಳಿಯಲಾಗಿ ತನ್ನ ಗಂಡ ಲಕ್ಷ್ಮಣ ರವರು ದಿನಾಂಕ:26-09-2019 ರಂದು ರಾತ್ರಿ ವೇಳೆಯಲ್ಲಿ ತುಮಕೂರು ಕಡೆಯಿಂದ ಬಸ್ಸಿನಲ್ಲಿ ಬಂದು  ಮಧುಗಿರಿ ಬಸ್ ನಿಲ್ದಾಣದಲ್ಲಿ ಇಳಿದು ಈ ವೇಳೆಯಲ್ಲಿ ಆಸ್ವಸ್ಥರಾಗಿ ಬಸ್ ನಿಲ್ದಾಣದಲ್ಲಿ  ಮೃತಪತ್ತಿದ್ದು ನಂತರ ಈ ದಿನ ಸಾರ್ವಜನಿಕರು ನೋಡಿಕೊಂಡು ಪಿರ್ಯಾದಿಯ ಗಂಡನ ಶವವನ್ನು ಮಧುಗಿರಿ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ತಂದು ಹಾಕಿರುತ್ತಾರೆಂದು ತಿಳಿದು ತನ್ನ ಗಂಡನು ಸಹ ಖಾಯಿಲೆಯಿಂದ  ನರಳುತ್ತಿದ್ದು ಇದರಿಂದಾಗಿ ಮೃತ ಪಟ್ಟಿದ್ದಾರೆ ತನ್ನ ಗಂಡನ ಸಾವಿನಲ್ಲಿ ಬೇರೆಯಾವುದೇ  ಕಾರಣ ಇರುವುದಿಲ್ಲ ತನ್ನ ಗಂಡನ ಶವವನ್ನು ಶವ ಪರೀಕ್ಷೆ ಮಾಡುವ ಅವಶ್ಯಕತೆ ಇರುವುದಿಲ್ಲ ಅದ್ದರಿಂದ ಮಧುಗಿರಿ ಸರ್ಕಾರಿ ಅಸ್ಪತ್ರೆಯಲ್ಲಿರುವ ಶವವನ್ನು ಅಂತ್ಯಸಂಸ್ಕರ ಮಾಡಿಕೊಳ್ಳವ ಸಲುವಾಗಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ  ಧಾಖಲಿಸಿ ತನಿಖೆ ಕೈಗೊಂಡಿರುತ್ತೆ.

 Friday, 27 September 2019

ಪ್ರತ್ರಿಕಾ ಪ್ರಕಟಣೆ ದಿ:27-09-2019

ಪ್ರತ್ರಿಕಾ ಪ್ರಕಟಣೆ

ದಿನಾಂಕ 27-09-2019

 

ಕಳ್ಳತನ ಆರೋಪಿಗಳ ಬಂಧನ

 

ಶ್ರೀ ಅರುಣ್‍ಕುಮಾರ್ ಸಿಂಗ್ ಬಿನ್ ಲೇಟ್ ಅರ್ಜ್‍ನ್ ಸಿಂಗ್, ಪೋರಂ ಪ್ರವೇಶ್, ಹೌರಾ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯದವರು ದಿನಾಂಕ; 21-09-2019 ರಂದು ತುಮಕೂರು ನಗರದ ಅಗಳಕೋಟೆಯ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜ್ನಲ್ಲಿ ಮೆಡಿಕಲ್ ಸೀಟ್ಗಾಗಿ ಹಣ ಕಟ್ಟಲು ಬಂದಿದ್ದು, ಅಂದು ಮಧ್ಯಾಹ್ನ 3-00 ಗಂಟೆಯಲ್ಲಿ ಅರುಣ್ಕುಮಾರ್ ಸಿಂಗ್ ರವರು ತಂದಿದ್ದ, 10,00,000/- ರೂಪಾಯಿಗಳನ್ನು ಕೆ.ಎ-04, ಎಂ-2686 ನೇ ಮಾರುತಿ 800 ಕಾರಿನಲ್ಲಿಟ್ಟಿದ್ದು, ಸಂಜೆ 4-30 ಗಂಟೆಯಲ್ಲಿ ಊಟ ಮುಗಿಸಿಕೊಂಡು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ಕಾರನ್ನು ಮತ್ತು ಅದರಲ್ಲಿದ್ದ 10,00,000/- ರೂಪಾಯಿಗಳನ್ನು ಯಾರೋ ಕಳವು ಮಾಡಿರುತ್ತಾರೆಂದು ಶ್ರೀ ಅರುಣ್‍ಕುಮಾರ್ ಸಿಂಗ್ ರವರು ನೀಡಿರುವ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ  ಮೊಕದ್ದಮೆ ಸಂಖ್ಯೆ: 184/2019ಕಲಂ; 379 ಐ.ಪಿ.ಸಿ. ರೀತಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

 

ದಿನಾಂಕ: 26-09-2019 ರಂದು  ಆರೋಪಿಗಳಾದ ದಾದಾಪೀರ್ @ ವಸೀಂ ಬಿನ್ ಲೇಟ್ ಮಹಮದ್ ಷಬ್ಬೀರ್, 28 ವರ್ಷ, ಎಲೆಕ್ಟ್ರೀಷಿಯನ್, 2ನೇ ಕ್ರಾಸ್, ಸೂಫಿಯಾ ಶಾಲೆ ಹತ್ತಿರ, ಉಪ್ಪಾರಹಳ್ಳಿ, ತುಮಕೂರು, (2) ಸಲೀಂ ಪಾಷ ಬಿನ್ ಜಾವಿದ್ ಪಾಷ, 30 ವರ್ಷ, ಗ್ಯಾಸ್ ಕಟಿಂಗ್, ಜನರೇಟರ್ ಲೋಡಿಂಗ್ ಕೆಲಸ, ವಾಸ: ಟ್ಯಾನಿ ರಸ್ತೆ, ಡಿ.ಜೆ.ಹಳ್ಳಿ ಟ್ಯಾಂಕ್ ಮೊಹಲ್ಲಾ, ಬೆಂಗಳೂರು ನಗರ. ಹಾಲಿ ವಾಸ: ಎಸ್ಆರ್.ಎಸ್. ರಸ್ತೆ, ವೆಂಕಟೇಶ್ವರ ಬೇಕರಿ ಎದುರಿ, ಪೀಣ್ಯ, 1ನೇ ಹಂತ, ಬೆಂಗಳೂರು. (3) ತಬರೈಜ್ ಹುಸೇನಿ, @ ತಬರೈಜ್ ಬಿನ್ ಕಾಬೂಲ್; ಹುಸೇನ್, 30 ವರ್ಷ, ಜನರೇಟರ್ ರಿಪೇರಿ, ವಾಸ: ಮೆಳೆಕೋಟೆ, ಕನಕಪುರ, ಎಸ್.ಆರ್.ಎಸ್. ರಸ್ತೆ, ಕೆ.ಇ.ಬಿ. ಕಛೇರಿ ಎದುರು, 5 ನೇ ರಸ್ತೆ, ಪೀಣ್ಯ, 1 ನೇ ಹಂತ, ಬೆಂಗಳೂರು ಇವರುಗಳನ್ನು ದಸ್ತಗಿರಿ ಮಾಡಿದ್ದು, ಇವರುಗಳಿಂದ 8,42,000/- ರೂಪಾಯಿಗಳನ್ನು ಮತ್ತು ಕೆ.ಎ-04, ಎಂ-2686 ನೇ ಮಾರುತಿ 800 ಕಾರನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಸದರಿ ಪ್ರಕರಣದಲ್ಲಿನ ನಗದು ಹಣ, ಕಾರು ಮತ್ತು ಆರೋಪಿ ಪತ್ತೆಗಾಗಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿದರ್ೇಶನದಂತೆ ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ತುಮಕೂರು ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ. ಬಿ. ರವರ ಉಸ್ತುವಾರಿಯಲ್ಲಿ ಅಪರಾಧ ಪತ್ತೆ ತಂಡ ರಚಿಸಲಾಗಿದ್ದು, ಶ್ರೀಮತಿ ವಿಜಯಲಕ್ಷ್ಮಿ, ಪಿ.ಎಸ್.ಐ. ತುಮಕೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಮೇಶ್, ಮಂಜುನಾಥ, ರಾಮಚಂದ್ರಯ್ಯ, ನವೀನ್ಕುಮಾರ್ ಮತ್ತು ತುಮಕೂರು ನಗರ ವೃತ್ತ ಕಛೇರಿಯ ಸಿಬ್ಬಂದಿಗಳಾದ ಈರಣ್ಣ, ನಾಗರಾಜ್, ಸೈಯದ್ ಮುಕ್ತಿಯಾರ್, ಪ್ರಸನ್ನಕುಮಾರ್, ಜೈಪ್ರಕಾಶ್, ಸಿದ್ದೇಶ್ವರ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ರವರುಗಳು ಸದರಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತುಮಕೂರು ನಗರ ವೃತ್ತದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 27-09-19

ಚೇಳೂರು  ಪೊಲೀಸ್ ಠಾಣಾ  ಮೊ.ನಂ: 117/2019  ಕಲಂ;ಕಲಂ 279.304(ಎ) ಐ.ಪಿ.ಸಿ   ಮತ್ತು  ಕಲಂ 134 (ಎ&ಬಿ)  ರೆ/ವಿ 187  ಐ.ಎಂ.ವಿ  ಆಕ್ಟ್.

ದಿನಾಂಕ; 26/09/2019  ರಂದು  ಸಂಜೆ 4-15  ಗಂಟೆ  ಸಮಯದಲ್ಲಿ  ಪಿರ್ಯಾದಿ  ನಂದೀಶ  ರವರು   ಠಾಣೆಗೆ ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ದಿನಾಂಕ;25/09/2019  ರಂದು  ನನ್ನ ಮಗಳಾದ  ಹೆಚ್.ಎನ್  ಸಂಗೀತ  ಸುಮಾರು  ಆರು ವರ್ಷ, ಬೆಳ್ಳಾವಿ  ಕಿಡ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ  ಎಲ್.ಕೆ.ಜಿ. ವಿದ್ಯಾಭಾಸ ಮಾಡುತ್ತಿದ್ದು,  ಅಂದು ಸಂಜೆ ಶಾಲೆಯಿಂದ  ಬಂದು  ಪಕ್ಕದ  ಮನೆಯ ಸ್ನೇಹಿತರ  ಜೊತೆ ಆಟ ಆಡಲು  ಹೋಗಿದ್ದಳು.  ಸುಮಾರು ಸಂಜೆ 5-30ರ ಸಮಯದಲ್ಲಿ  ನನ್ನ  ಮಗಳನ್ನು  ಕರೆದು  ಕೊಂಡು ಬರಲು ನಾನು  ಚೇಳೂರು ರಸ್ತೆಗೆ   ಬಂದು  ನೋಡಲಾಗಿ  ನನ್ನ  ಮಗಳು  ಹೊಸಕೆರೆ ಬೆಸ್ಕಾಂ ಕಛೇರಿಯ  ಮುಂಭಾಗ  ಎಡ ಬದಿಯಲ್ಲಿ  ನಡೆದುಕೊಂಡು  ಮನೆಗೆ  ಬರುತ್ತಿರುವಾಗ್ಗೆ  ಹಾಗಲವಾಡಿ  ಕಡೆಯಿಂದ  ಚೇಳೂರು  ಕಡೆಗೆ  ಬಂದ ದ್ವಿ- ಚಕ್ರ ವಾಹನದ  ಚಾಲಕ  ಅವನ  ದ್ವಿ- ಚಕ್ರ ವಾಹನವನ್ನು  ಅತೀವೇಗವಾಗಿ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು  ಒಂದು  ನನ್ನ  ಮಗಳಿಗೆ  ಡಿಕ್ಕಿ  ಹೊಡೆಸಿದನು.  ತಕ್ಷಣ ನಾನು  ಮತ್ತು  ನನ್ನ  ಜೊತೆ  ಇದ್ದ  ಸಿದ್ದಗಂಗಯ್ಯ  ಸ್ಥಳಕ್ಕೆ  ಹೋಗಿ  ಕೆಳಗೆ  ಬಿದ್ದಿದ್ದ  ನನ್ನ  ಮಗಳನ್ನು  ಉಪಚರಿಸಿದೆವು. ನನ್ನ ಮಗಳ ತಲೆಗೆ ಹೆಚ್ಚಿನ ಪೆಟ್ಟು ಬಿದ್ದಿದ್ದು,  ನಂತರ  ಅಪಘಾಪಡಿಸಿದ ವಾಹನ  ಸಂಖ್ಯೆ ಕೆಎ-06-ಹೆಚ್.ಎ-3789  ಆಗಿದ್ದು,  ಅದರ  ಚಾಲಕನನ್ನು  ವಿಚಾರಿಸಲಾಗಿ  ರಮೇಶ ಕೆ  ಎಂದು  ತಿಳಿಸಿ  ವಾಹನವನ್ನು  ತೆಗೆದುಕೊಂಡು   ಹೋಗಿರುತ್ತೇನೆ. ನಂತರ  ಗಾಯಗೊಂಡ  ನನ್ನ  ಮಗಳನ್ನು  ಹೊಸಕೆರೆ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ  ಹೆಚ್ಚಿನ  ಚಿಕಿತ್ಸೆಗಾಗಿ  ಅಂಬುಲೆನ್ಸ್ ಇಲ್ಲದ  ಕಾರಣ  ಖಾಸಗೀ  ವಾಹನದಲ್ಲಿ  ತುಮಕೂರಿನ  ಸಿದ್ದಗಂಗಾ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ಚಿಕಿತ್ಸೆ  ಕೊಡಿಸುತ್ತಿದ್ದು, ದಿನಾಂಕ; 26/09/2019 ರಂದು  ಮಧ್ಯಾಹ್ನ 12-10 ರ ಸಮಯದಲ್ಲಿ  ಚಿಕಿತ್ಸೆ  ಫಲಕಾರಿಯಾಗದೇ  ಮರಣಹೊಂದಿರುತ್ತಾರೆ. ಎಂದು  ವೈದ್ಯರು  ತಿಳಿಸಿರುತ್ತಾರೆ.  ಆದ್ದರಿಂದ ಈದಿನ  ತಡವಾಗಿ  ಬಂದು  ದೂರನ್ನು  ನೀಡುತ್ತಿದ್ದೇನೆ. ಸದರಿ  ನನ್ನ  ಮಗಳ  ಸಾವಿಗೆ  ಕಾರಣನಾದ  ಅಪಘಾತಪಡಿಸಿದ  ವಾಹನ ಚಾಲಕನ  ವಿರುದ್ದ  ಕಾನೂನು ಕ್ರಮ ಜರುಗಿಸಬೇಕೆಂದು  ಪ್ರಾಥನೆ ಈಗ  ನನ್ನ  ಮಗಳ ಮೃತ ದೇಹವು  ಸಿದ್ದಗಂಗಾ  ಆಸ್ಪತ್ರೆಯಲ್ಲಿದ್ದು,  ಮುಂದಿನ  ಕ್ರಮ  ಜರುಗಿಸಿ ಕೊಡಬೇಕೆಂದು  ಕೇಳಿಕೊಳ್ಳುತ್ತೇನೆ. ಇತ್ಯಾದಿಯಾದ  ಪಿರ್ಯಾದು  ಅಂಶ.

 

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 92/2019 ಕಲಂ:279 337 ಐಪಿಸಿ  187 ಐಎಂವಿ ಆಕ್ಟ್.

ದಿ:26/09/19 ರಂದು ಸಂಜೆ 05-45 ಗಂಟೆಯಲ್ಲಿ ಫಿರ್ಯಾದಿ ದಂಡಿನದಿಬ್ಬ ವಾಸಿ ಯಲ್ಲಮ್ಮ ರವರು ಠಾಣೆಗೆ ಹಾಜರಾಗಿ, ದಿ:25/09/19 ರಂದು ಸಂಜೆ 06-30 ಗಂಟೆಯಲ್ಲಿ ನನ್ನ ಮಗ ರಂಗಸ್ವಾಮಿ ಬಿನ್ ಲೇಟ್ ಗಂಗಪ್ಪ ರವರು ತನ್ನ ಬಾಬ್ತು ಕೆ.ಎ-02 ಹೆಚ್.ಟಿ-7420 ನೇ ಟಿ.ವಿ.ಎಸ್ ಎಕ್ಸ್ ಎಲ್ ನಲ್ಲಿ ದಂಡಿನದಿಬ್ಬ ಸಿದ್ದಾರ್ಥ ಗ್ರಾಮಾಂತರ ಪ್ರೌಢ ಶಾಲೆ ಮುಂದೆ ಮಧುಗಿರಿ-ಸಿರಾ ಮುಖ್ಯ ರಸ್ತೆಯ ಎಡಭಾಗದಲ್ಲಿ ಬರುತ್ತಿರಬೇಕಾದರೆ ಸಿರಾ ಕಡೆಯಿಂದ ಅದೇ ಸಮಯಕ್ಕೆ ಕೆ.ಎ-50 ಎ-3699 ನೇ ಇಟಿಯೋಸ್ ಕಾರಿನ ಚಾಲಕ ತನ್ನ ಮುಂದೆ ಬರುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಆತನ ತಲೆಗೆ ಪೆಟ್ಟು ಬಿದ್ದು ಮೂಗು, ಬಾಯಿ,ಕಿವಿಯಲ್ಲಿ ರಕ್ತ ಬಂದಿದ್ದು ಕೈ ಕಾಲುಗಳಿಗೆ ಪಟ್ಟಾಗಿದ್ದು ಈತನನ್ನು ಮಧುಗಿರಿ, ತುಮಕೂರು ಸರ್ಕಾರಿ ಆಸ್ಪತ್ರೆ ನಂತರ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ತುಮಕೂರು ಸರ್ಕಾರಿ ಆಸ್ಪತ್ರೆ ಗೆ ಕರೆತಂದು ಒಳರೋಗಿಯಾಗಿ ಸೇರಿಸಿ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಚೇಳೂರು  ಪೊಲೀಸ್ ಠಾಣಾ  ಮೊ.ನಂ: 117/2019  ಕಲಂ;ಕಲಂ 279.304(ಎ) ಐ.ಪಿ.ಸಿ   ಮತ್ತು  ಕಲಂ 134 (ಎ&ಬಿ)  ರೆ/ವಿ 187  ಐ.ಎಂ.ವಿ  ಆಕ್ಟ್.

ದಿನಾಂಕ; 26/09/2019  ರಂದು  ಸಂಜೆ 4-15  ಗಂಟೆ  ಸಮಯದಲ್ಲಿ  ಪಿರ್ಯಾದಿ  ನಂದೀಶ  ರವರು   ಠಾಣೆಗೆ ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ದಿನಾಂಕ;25/09/2019  ರಂದು  ನನ್ನ ಮಗಳಾದ  ಹೆಚ್.ಎನ್  ಸಂಗೀತ  ಸುಮಾರು  ಆರು ವರ್ಷ, ಬೆಳ್ಳಾವಿ  ಕಿಡ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ  ಎಲ್.ಕೆ.ಜಿ. ವಿದ್ಯಾಭಾಸ ಮಾಡುತ್ತಿದ್ದು,  ಅಂದು ಸಂಜೆ ಶಾಲೆಯಿಂದ  ಬಂದು  ಪಕ್ಕದ  ಮನೆಯ ಸ್ನೇಹಿತರ  ಜೊತೆ ಆಟ ಆಡಲು  ಹೋಗಿದ್ದಳು.  ಸುಮಾರು ಸಂಜೆ 5-30ರ ಸಮಯದಲ್ಲಿ  ನನ್ನ  ಮಗಳನ್ನು  ಕರೆದು  ಕೊಂಡು ಬರಲು ನಾನು  ಚೇಳೂರು ರಸ್ತೆಗೆ   ಬಂದು  ನೋಡಲಾಗಿ  ನನ್ನ  ಮಗಳು  ಹೊಸಕೆರೆ ಬೆಸ್ಕಾಂ ಕಛೇರಿಯ  ಮುಂಭಾಗ  ಎಡ ಬದಿಯಲ್ಲಿ  ನಡೆದುಕೊಂಡು  ಮನೆಗೆ  ಬರುತ್ತಿರುವಾಗ್ಗೆ  ಹಾಗಲವಾಡಿ  ಕಡೆಯಿಂದ  ಚೇಳೂರು  ಕಡೆಗೆ  ಬಂದ ದ್ವಿ- ಚಕ್ರ ವಾಹನದ  ಚಾಲಕ  ಅವನ  ದ್ವಿ- ಚಕ್ರ ವಾಹನವನ್ನು  ಅತೀವೇಗವಾಗಿ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು  ಒಂದು  ನನ್ನ  ಮಗಳಿಗೆ  ಡಿಕ್ಕಿ  ಹೊಡೆಸಿದನು.  ತಕ್ಷಣ ನಾನು  ಮತ್ತು  ನನ್ನ  ಜೊತೆ  ಇದ್ದ  ಸಿದ್ದಗಂಗಯ್ಯ  ಸ್ಥಳಕ್ಕೆ  ಹೋಗಿ  ಕೆಳಗೆ  ಬಿದ್ದಿದ್ದ  ನನ್ನ  ಮಗಳನ್ನು  ಉಪಚರಿಸಿದೆವು. ನನ್ನ ಮಗಳ ತಲೆಗೆ ಹೆಚ್ಚಿನ ಪೆಟ್ಟು ಬಿದ್ದಿದ್ದು,  ನಂತರ  ಅಪಘಾಪಡಿಸಿದ ವಾಹನ  ಸಂಖ್ಯೆ ಕೆಎ-06-ಹೆಚ್.ಎ-3789  ಆಗಿದ್ದು,  ಅದರ  ಚಾಲಕನನ್ನು  ವಿಚಾರಿಸಲಾಗಿ  ರಮೇಶ ಕೆ  ಎಂದು  ತಿಳಿಸಿ  ವಾಹನವನ್ನು  ತೆಗೆದುಕೊಂಡು   ಹೋಗಿರುತ್ತೇನೆ. ನಂತರ  ಗಾಯಗೊಂಡ  ನನ್ನ  ಮಗಳನ್ನು  ಹೊಸಕೆರೆ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ  ಹೆಚ್ಚಿನ  ಚಿಕಿತ್ಸೆಗಾಗಿ  ಅಂಬುಲೆನ್ಸ್ ಇಲ್ಲದ  ಕಾರಣ  ಖಾಸಗೀ  ವಾಹನದಲ್ಲಿ  ತುಮಕೂರಿನ  ಸಿದ್ದಗಂಗಾ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ಚಿಕಿತ್ಸೆ  ಕೊಡಿಸುತ್ತಿದ್ದು, ದಿನಾಂಕ; 26/09/2019 ರಂದು  ಮಧ್ಯಾಹ್ನ 12-10 ರ ಸಮಯದಲ್ಲಿ  ಚಿಕಿತ್ಸೆ  ಫಲಕಾರಿಯಾಗದೇ  ಮರಣಹೊಂದಿರುತ್ತಾರೆ. ಎಂದು  ವೈದ್ಯರು  ತಿಳಿಸಿರುತ್ತಾರೆ.  ಆದ್ದರಿಂದ ಈದಿನ  ತಡವಾಗಿ  ಬಂದು  ದೂರನ್ನು  ನೀಡುತ್ತಿದ್ದೇನೆ. ಸದರಿ  ನನ್ನ  ಮಗಳ  ಸಾವಿಗೆ  ಕಾರಣನಾದ  ಅಪಘಾತಪಡಿಸಿದ  ವಾಹನ ಚಾಲಕನ  ವಿರುದ್ದ  ಕಾನೂನು ಕ್ರಮ ಜರುಗಿಸಬೇಕೆಂದು  ಪ್ರಾಥನೆ ಈಗ  ನನ್ನ  ಮಗಳ ಮೃತ ದೇಹವು  ಸಿದ್ದಗಂಗಾ  ಆಸ್ಪತ್ರೆಯಲ್ಲಿದ್ದು,  ಮುಂದಿನ  ಕ್ರಮ  ಜರುಗಿಸಿ ಕೊಡಬೇಕೆಂದು  ಕೇಳಿಕೊಳ್ಳುತ್ತೇನೆ. ಇತ್ಯಾದಿಯಾದ  ಪಿರ್ಯಾದು  ಅಂಶ.Wednesday, 25 September 2019

ಅಪರಾಧ ಘಟನೆಗಳು 25-09-19

ಹೆಬ್ಬೂರು  ಪೊಲೀಸ್ ಠಾಣಾ  ಮೊ ನಂ-154/2019 ಕಲಂ 279,337,304(ಎ) ಐಪಿಸಿ

ದಿನಾಂಕ-24/09/2019 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿಯಾದ ಮಂಜುಶ್ರೀ ಎಸ್ ಕೋಂ ಸುಧೀರ್ ಎಸ್.ಸಿ, 46 ವರ್ಷ, ಲಿಂಗಾಯ್ತರು, ಎಸ್.ವಿ.ಸಿ ಕೋ ಅಪರೇಟೀವ್ ಬ್ಯಾಂಕ್ ಎಂ.ಜಿ ರಸ್ತೆ ತುಮಕೂರಿನಲ್ಲಿ ಮ್ಯಾನೇಜರ್ ಕೆಲಸ, ವಾಸ: ಶಿವಶ್ರೀ ನಿಲಯ, 5ನೇ ಮುಖ್ಯರಸ್ತೆ, ವಿಜಯನಗರ, ತುಮಕೂರು ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿ:23-09-2019 ರಂದು ಮಧ್ಯಾಹ್ನ ಸುಮಾರು 1-30 ಗಂಟೆಯಲ್ಲಿ ನನ್ನ ಅಣ್ಣ ವಿನಯಾನಂದ ಎಸ್ ರವರು ಮತ್ತು ಅವರ ಸ್ನೇಹಿತನಾದ ಕೆ.ಬಿ.ಸಿದ್ದಯ್ಯ, ಸಾಹಿತಿ, ತುಮಕೂರು ಟೌನ್ ರವರೊಂದಿಗೆ ಹೊನ್ನುಡಿಕೆ ಕಡೆಗೆ ಹೋಗುತ್ತಿದ್ದಾಗ ನರುಗನಹಳ್ಳಿ ಗೇಟ್ ನ ಸ್ವಲ್ಪ ಮುಂದೆ ಒಂದು ಕಟ್ಟೆಯ ಬಳಿ ತಿರುವಿನಲ್ಲಿ ಎದುರುಗಡೆಯಿಂದ ಅಂದರೆ ಹೊನ್ನುಡಿಕೆ ಕಡೆಯಿಂದ ಒಂದು ಬುಲೆರೋ ವಾಹನದ ಚಾಲಕ ಅತಿವೇಗವಾಗಿ ಓಡಿಸಿಕೊಂಡು ಬಂದು ತಿರುವಿನಲ್ಲಿ ಹೋಗುತ್ತಿದ್ದ ನನ್ನ ಅಣ್ಣನ ಕಾರಿಗೆ KA02-MB-3516 ನೇ ನಂಬರಿನ ಮಾರುತಿ ಸುಜುಕಿ ಬುಲೆನೋ ಡಿಕ್ಕಿ ಹೊಡೆದ ಪರಿಣಾಮ ಕಾರು ಪೂರಾ ಜಖಂ ಆಗಿ ನನ್ನ ಅಣ್ಣನಿಗೆ ಎಡಕಾಲಿನ ಮೂಳೆಗೆ ಮತ್ತು ತಲೆಗೆ ಪೆಟ್ಟಾಗಿದ್ದು ಕಾರಿನಲ್ಲಿದ್ದ ಕೆ ಬಿ ಸಿದ್ದಯ್ಯ ರವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುವುದಾಗಿ ವಿಚಾರವನ್ನು ನನ್ನ ತಂದೆಯವರಿಗೆ ಯಾರೋ ಬಂದು ವಿಚಾರ ತಿಳಿಸಿದಾಗ ನಮ್ಮ ತಂದೆಯವರು ನನಗೆ ಅಪಘಾತವಾಗಿರುವ ವಿಚಾರ ತಿಳಿಸಿದಾಗ ನಾನು ಸಾಯಂಕಾಲ ಸುಮಾರು 5-15 ಗಂಟೆಯಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ಬಳಿಗೆ ಹೋಗಿ ನನ್ನ ಅಣ್ಣನ ಬಳಿ ವಿಚಾರ ಮಾಡಲಾಗಿ ಮೇಲಿನಂತೆ ತಿಳಿಸಿದ್ದು ಅಪಘಾತಪಡಿಸಿದ ಬುಲೆರೋ ವಾಹನದ ನಂಬರ್ ಕೇಳಲಾಗಿ KA06-AA-2622 ಬುಲೆರೋ ವಾಹನವಾಗಿತ್ತೆಂತ ತಿಳಿಸಿ ನನಗೂ ಹಾಗೂ ಕೆ ಬಿ ಸಿದ್ದಯ್ಯ ರವರಿಗೆ ಅಲ್ಲಿ ನೋಡಿದ ಯಾರೋ ಸಾರ್ವಜನಿಕರು ಅದೇ ರಸ್ತೆಯಲ್ಲಿ ಬಂದ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆಂತ ತಿಳಿಸಿದ್ದು ಇದೇ ದಿನ ದಿನಾಂಕ:23-09-2019 ರಂದು ಸಾಯಂಕಾಲ ಸುಮಾರು 7-55 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನನ್ನ ಅಣ್ಣ ವಿನಯಾನಂದ ಎಸ್ ರವರು ಮೃತಪಟ್ಟಿದ್ದು ನನ್ನ ಅಣ್ಣನ ಮೃತದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ನನ್ನ ಅಣ್ಣನ ಕಾರಿಗೆ ಅಪಘಾತಪಡಿಸಿ ನನ್ನ ಅಣ್ಣ ಮೃತನಾಗಲು ಕಾರಣನಾದ KA06-AA-2622 ಬುಲೆರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಿಕೊಡಲು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-154/2019 ಕಲಂ 279,337,304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಯು.ಡಿ.ಆರ್  ನಂಬರ್ 33/2019  ಕಲಂ 17ಸಿ.ಆರ್.ಪಿ.ಸಿ

ದಿನಾಂಕ: 24/09/2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವಕುಮಾರ್  ರವರು ಠಾಣೆಗೆ ಹಾಜರಾಗಿ ನೀಡಿದ ಅಂಶವೇನೆಂದರೆ, ನಮ್ಮ ತಂದೆಗೆ ಇಬ್ಬರು ಮಕ್ಕಳಿದ್ದು,  1 ನೇ  ನಾನು, 2 ನೇ ನನ್ನ ತಂಗಿ ಕರಿಯಮ್ಮ ಆಗಿದ್ದು, ಇಬ್ಬರಿಗೂ ಮದುವೆಯಾಗಿದ್ದು, ಬೇರೆ ವಾಸವಿರುತ್ತಾರೆ. ನಾನು, ನಮ್ಮ ತಂದೆ, ತಾಯಿ, ನನ್ನ ಹೆಂಡತಿ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮ ತಂದೆಯು ವ್ಯವಸಾಯ ಜೀವನ ಮಾಡಿಕೊಂಡಿರುತ್ತಾರೆ ದಿನಾಂಕ : 24/09/2019 ರಂದು ಎಂದಿನಂತೆ ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನಮ್ಮ ಬಾಬ್ತು ಮೇಕೆಗಳನ್ನು ಮೇಯಿಸಲು ಹೋಗಿದ್ದರು. ನಮ್ಮ ತಂದೆಯ ಜೊತೆ ನಾಯಕ ಜನಾಂಗಕ್ಕೆ ಸೇರಿದ ಜಯರಾಮಯ್ಯ ಸಹ ಅವರ ಬಾಬ್ತು ಮೇಕೆಗಳನ್ನು ಮೇಯಿಸಲು ಅವರ ಜೊತೆ ಹೋಗಿದ್ದರು. ಇದೇ ದಿನ ಮದ್ಯಾನ್ಹ 2-00 ಗಂಟೆ ಸಮಯದಲ್ಲಿ ನಮ್ಮ ತಂದೆಯ ಜೊತೆ ಹೋಗಿದ್ದ ಜಯರಾಮಯ್ಯ, ನಮ್ಮ ಮನೆಯ ಹತ್ತಿರ ಬಂದು ನನ್ನ ಜೊತೆ ಬಂದಿದ್ದ ನಿಮ್ಮ ತಂದೆಯವರು ಮದ್ಯಾನ್ಹ 1-45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ  ಹಾದು ಹೋಗಿರುವ ಹೇಮಾವತಿ ಚಾನೆಲ್ ದಡದಲ್ಲಿ ಮೇಕೆಗಳನ್ನು ಮೇಯಿಸುತ್ತಿರುವಾಗ ಮೇಕೆಗಳನ್ನು ಮುಂದಕ್ಕೆ ಹೊಡೆಯಲು ಹೋಗಿ, ಆಯ ತಪ್ಪಿ ಹೇಮಾವತಿ ಚಾನೆಲ್ ನೀರಿಗೆ ಬಿದ್ದರು. ಆಗ ನಾನು ನನ್ನ ಪಂಚೆಯನ್ನು ಬಿಟ್ಟು ಹಿಡಿದುಕೊಳ್ಳಲು ಹೇಳಿ ಎಸೆದಾಗ ಅವರು ನೀರಿನಲ್ಲಿ ಮುಳುಗಿದರು ಎಂದು ತಿಳಿಸಿದರು. ನಾನು ಮತ್ತು ನಮ್ಮ ಗ್ರಾಮದ ಇತರರು ಹೋಗಿ ಹೇಮಾವತಿ ಚಾನೆಲ್ ನೀರಿನಲ್ಲಿ ಹುಡುಕುತ್ತಿರುವಾಗ ಸೋಮಲಾಪುರ ಗ್ರಾಮದ ದಾಸಪ್ಪ ನವರ ತೆಂಗಿನ ತೋಟದ  ನೇರದಲ್ಲಿ ಹಾದು ಹೋಗಿರುವ ಚಾನೆಲ್ ನೀರಿನಲ್ಲಿ ಒಂದು ಮೃತ ದೇಹ ತೇಲಿಕೊಂಡು ಹೋಗುತ್ತಿರುವಾಗ  ನಾವುಗಳು ಸೇರಿಕೊಂಡು  ಚಾನೆಲ್ ಪಕ್ಕಕ್ಕೆ ಎಳೆದಿರುತ್ತೇವೆ. ನನ್ನ ತಂದೆಗೆ 78 ವರ್ಷ ವಯಸ್ಸಾಗಿದ್ದು, ನನ್ನ ತಂದೆಯ ಸಾವಿನಲ್ಲಿ ಬೇರೆ ಯಾವುದೇ ಅನುಮಾನ  ಇರುವುದಿಲ್ಲ.  ಮುಂದಿನ ಕ್ರಮ ಜರುಗಿಸಿ ಇತ್ಯಾದಿಯಾಗಿ ಪಿರ್ಯಾದು ಅಂಶ.

 Tuesday, 24 September 2019

ಅಪರಾಧ ಘಟನೆಗಳು 24-09-19

ಸಿ.ಎಸ್.ಪುರ ಪೊಲೀಸ್ ಠಾಣೆ ಮೊ.ಸಂ ಮೊ.ನಂ: 61/2019ಕಲಂ:279. 304(ಎ) ಐಪಿಸಿ ಹಾಗೂ 134 ( ಎ&ಬಿ) 187 ಐ.ಎಂ.ವಿ ಆಕ್ಟ್

ದಿನಾಂಕ: 23.09.2019 ರಂಧು ಈ ಕೇಸಿನ ಫಿರ್ಯಾದಿಯಾದ ಸಿ.ಕೆ ದಯಾಶಂಕರ್  ಬಿನ್ ಹೆಚ್.ಎಂ,  ಕಾಂತರಾಜು,38 ವರ್ಷ, ಲಿಂಗಾಯ್ತರು, ಸಿ.ಎಸ್.ಪುರ ಗ್ರಾಮ, ಗುಬ್ಬಿ  ತಾಲ್ಲೂಕುರವರು  ಠಾಣೆಗೆ   ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ನನ್ನ ಅಣ್ಣನಾದ  ಸಿ.ಕೆ  ನಾಗೇಶರವರು  ಕೆ.ಜಿ.ಟೆಂಫಲ್  ನಿಂದ ಬೆಂಗಳೂರಿಗೆ ಹೋಗುವ ಎಸ್.ಕೆ.ಟಿ. ಬಸ್ಸಿಗೆ ನಿರ್ವಾಹಕನಾಗಿದ್ದು, ಬೆಂಗಳೂರಿನಿಂದ  ಬಂದು ದಿನಾಂಕ:22.09.2019 ರಂದು ರಾತ್ರಿ ಸುಮಾರು 7.45 ರಿಂದ 8.00 ಗಂಟೆ ಒಳಗೆ ಲಿಂಗಮ್ಮನಹಳ್ಳಿ ಬಳಿ ವರ್ಕ್ ಶಾಪ್ ಇಟ್ಟುಕೊಂಡಿರುವ  ಸ್ಥಳದ ಹತ್ತಿರ ಬಸ್ಸನ್ನು  ನಿಲ್ಲಿಸಿ, ಬಸ್ಸಿನ ಹತ್ತಿರ  ನಿಂತಿರುವಾಗ್ಗೆ, ಕುನ್ನಾಲದ ಕಡೆಯಿಂಧ  ಟಿ.ವಿ.ಎಸ್. ಹೆವಿ ಡ್ಯೂಟಿಯ ಚಾಲಕನು  ಅತಿ ಜೋರಾಗಿ  ಚಾಲನೆ ಮಾಡಿಕೊಂಡು  ಬಂದು ಬಸ್ಸಿನ ಪಕ್ಕದಲ್ಲಿ  ನಿಂತಿದ್ದ  ನನ್ನ ಅಣ್ಣ ನಾಗೇಶನಿಗೆ  ಡಿಕ್ಕಿ  ಹೊಡೆದು ಅಪಘಾತಪಡಿಸಿದಾಗ  ಅಣ್ಣ  ನಾಗೇಶನು  ರಸ್ತೆಯ ಮೇಲೆ ಬಿದ್ದಾಗ ತಲೆ ಹಿಂಭಾಗ ಬಲವಾದ ಪೆಟ್ಟು ಬಿದ್ದು ರಕ್ತಗಾಯ ಬರುತಿದ್ದು,ಈ ಬಗ್ಗೆ  ಯಾರೋ ನನಗೆ ಪೋನ್ ಮಾಡಿ ವಿಚಾರ   ತಿಳಿಸಿದಾಗ  ಕೂಡಲೇ  ನಾನು & ನನ್ನ  ತಂದೆ ಇಬ್ಬರೂ  ಅಪಘಾತವಾದ ಸ್ಥಳಕ್ಕೆ  ಹೋಗಿ ನೋಡಲಾಗಿ,. ನನ್ನ ಅಣ್ಣ ರಸ್ತೆಯ ಮೇಲೆ ಬಿದ್ದಿದ್ದು, ತಲೆಯ ಹಿಂಭಾಗ  ರಕ್ತಗಾಯವಾಗಿತ್ತು,  ಅಪಘಾತಪಡಿಸಿದ  ವಾಹನವನ್ನು  ನೋಡಲಾಗಿ ಕೆ.ಎ-03-ಇಇ-2333  ನೇ  ಟಿ.ವಿ.ಎಸ್. ಹೆವಿ ಡ್ಯೂಟಿ ದ್ವಿ ಚಕ್ರವಾಹನವಾಗಿತ್ತು,. ಚಾಲಕನನ್ನು ನೋಡಲಾಗಿ  ಅಪಘಾತಪಡಿಸಿ ಸ್ಥಳದಲ್ಲಿ ಇಲ್ಲದೇ  ಓಡಿ ಹೋಗಿದ್ದು,ನಂತರ ಕೂಡಲೇ  ಯಾವುದೋ ಕಾರಿನಲ್ಲಿ ಗಾಯಾಳು  ನಾಗೇಶನನ್ನು  ಗುಬ್ಬಿಯ ಅಭಿನಂದನ್ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗೆ  ತುಮಕೂರಿನ  ಸಿದ್ದಗಂಗಾ ಆಸ್ಪತ್ರೆಗೆ  ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:23.09.2019 ರಂಧು ಸಂಜೆ 5.30 ರ ಸಮಯದಲ್ಲಿ ನಾಗೇಶರವರು ಮೃತಪಟ್ಟಿರುತ್ತಾರೆ ಎಂಧು ಇತ್ಯಾದಿಯಾಗಿ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 211/2019 ಕಲಂ 279, 304() ಐಪಿಸಿ ರೆ/ವಿ 134 (&ಬಿ ) 187 ಐ ಎಂ ವಿ ಅಕ್ಟ್

ದಿನಾಂಕ 23.09.2019 ರಂದು  ಸಂಜೆ  5-00 ಗಂಟೆಗೆ  ಪಿರ್ಯಾದಿ  ಲೋಕೇಶ್ ಕೆ  ಬಿ ಬಿನ್ ಬಸಪ್ಪ  22 ವರ್ಷ, ಲಿಂಗಾಯಿತರು  ಕೌತಮಾರನಹಳ್ಳಿ  ಗೂಳೂರು  ಹೋಬಳಿ  ತುಮಕೂರು (ತಾ)  ಇವರು ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ 23.09.2019 ರಂದು  ಸಂಜೆ 4-00 ಗಂಟೆ ಸಮಯದಲ್ಲಿ  ನನ್ನ ತಂದೆ ಬಸಪ್ಪ ಬಿನ್ ವೀರಭದ್ರಯ್ಯ , 50ವರ್ಷ, ಲಿಂಗಾಯಿತರು  ಕೌತಮಾರನಹಳ್ಳಿ  ಗೂಳೂರು  ಹೋಬಳಿ  ತುಮಕೂರು  (ತಾ ) ಇವರು ಕೆಎ.06.ಹೆಚ್. ಎಪ್  6185ನೇ ದ್ವಿಚಕ್ರ ಚಾಲನೆ ಮಾಡಿಕೊಂಡು   ತುಮಕೂರು  ಕಡೆ ಬರುತ್ತಿರುವಾಗ  ಕೆ ಎ 01 ಎ ಇ 9347 ಐಷರ್   ವಾಹನವನ್ನು  ಅದರ ಚಾಲಕ     ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಶ್ರಿರಾಜ್ ಟಾಕಿಸ್  ಎದುರು ಶಿರಾ ಕಡೆ  ಹೋಗುವ ನ್ ಹೆಚ್ 48  ರಸ್ತೆಯಲ್ಲಿ   ಪಿರ್ಯಾದಿ ತಂದೆಯ  ಹಿಂಬಾಗಕ್ಕೆ ಡಿಕ್ಕಿ   ಹೋಡೆದು ಅಪಘಾತ ಪಡಿಸಿ ತೀವ್ರಾ ಸ್ವರೂಪದ  ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಎಂದು  ದೂರು.

 

ಜಯನಗರ ಪೊಲೀಸ್ ಠಾಣಾ  ಯು.ಡಿ.ಆರ್ ನಂ. 36/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ: 23/09/2019 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣಾ ಎ.ಎಸ್‍.ಐ ಕೃಷ್ಣಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ದಿನಾಂಕ: 14/09/2019 ರಂದು ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ನಾನು ನಮ್ಮ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ತುಮಕೂರು ರಿಂಗ್ ರಸ್ತೆ, ಮರಳೂರು ಅಲಂಕಾರ್ ಬಾರ್ ಮತ್ತು ರೆಸ್ಟೋರೆಂಟ್ ಹತ್ತಿರ ಕುಣಿಗಲ್ ಜಂಕ್ಷನ್ ಸಮೀಪ ಇರುವ ಮರಳೂರು ವಾಸಿ ಲೇಟ್ ರಾಮಾಂಜಿನೇಯ ರವರ ಟೀ ಹೋಟೆಲ್ ಮುಂಭಾಗ ಯಾರೋ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರಿಂದ ನಾನು ಕುಣಿಗಲ್ ಜಂಕ್ಷನ್ ಬಳಿಗೆ ರಾತ್ರಿ ಸುಮಾರು 7-10 ಗಂಟೆ ವೇಳೆಗೆ ಹೋದಾಗ ಲೇಟ್ ರಾಮಾಂಜಿನೇಯ ರವರ ಟೀ ಹೋಟೆಲ್ ಮುಂಭಾಗ 108 ಆಂಬುಲೆನ್ಸ್ ವಾಹನ ನಿಂತಿದ್ದು, ಟೀ ಹೋಟೆಲ್ ನವರು ಹಾಗೂ ಸಾರ್ವಜನಿಕರು ಸೇರಿ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಆದಾಗಲೇ 108 ಅಂಬುಲೆನ್ಸ್‍ ವಾಹನಕ್ಕೆ ಹಾಕಿದ್ದರು.  ನಂತರ ನಾನು ಅಂಬುಲೆನ್ಸ್ ವಾಹನ ಚಾಲಕ ಹಾಗೂ ಅದರಲ್ಲಿ ಬಂದಿದ್ದ ಶುಶೃಕರಿಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಂತೆ ತಿಳಿಸಿ ಕಳುಹಿಸಿಕೊಟ್ಟಿದ್ದೆನು.  ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ: 14/09/2019 ರಿಂದ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಿಸದೇ ಈ ದಿನ ದಿನಾಂಕ: 23/09/2019 ರಂದು ಬೆಳಿಗ್ಗೆ 8-35 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಡೆತ್ ಇಂಟಿಮೇಷನ್ ಮೆಮೋ ಕಳುಹಿಸಿರುತ್ತಾರೆ.  ಆದ್ದರಿಂದ ತಾವು ಮೃತನ ವಾರಸುದಾರರನ್ನ ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂತಾ ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ  ಯುಡಿಆರ್ ನಂ: 15/2019 ಕಲಂ 174 ಸಿ ಆರ್ ಪಿ ಸಿ

ದಿನಾಂಕ:23-09-2019 ರಂದು ಬೆಳಿಗ್ಗೆ 10-30 ಗಂಟೆಗೆ ರಂಗಸ್ವಾಮಿ ಬಿನ್ ಗಂಗರಂಗಯ್ಯ, 32 ವರ್ಷ, ವಕ್ಕಲಿಗರು, ವಾಹಿನಿ ಪೈಪ್ ಪ್ಯಾಕ್ಟರಿಯಲ್ಲಿ ಆಪರೇಟಿಂಗ್ ಕೆಲಸ, ನರುಗನಹಳ್ಳಿ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  "ನನ್ನ ತಂದೆ ಗಂಗರಂಗಯ್ಯ ರವರಿಗೆ ಇಬ್ಬರು ಹೆಂಡತಿಯರಿದ್ದು 1ನೇ ಲಕ್ಷ್ಮಮ್ಮ ಆಗಿದ್ದು ಇವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು ಮಕ್ಕಳಿರುವುದಿಲ್ಲ, 2ನೇ ಜಯಮ್ಮ, ಆಗಿದ್ದು ಇವರಿಗೆ 02 ಗಂಡು ಮಕ್ಕಳು 01 ಹೆಣ್ಣು ಮಗು ಇದ್ದು, 1ನೇ ಮಂಜಮ್ಮ ಇವರಿಗೆ ಮದುವೆಯಾಗಿದ್ದು, 2ನೇ ನಾನು ರಂಗಸ್ವಾಮಿ ಆಗಿದ್ದು ನನಗೆ ಮದುವೆಯಾಗಿರುತ್ತೆ, 3ನೇ ರವಿ ಆಗಿದ್ದು ಈತನಿಗೆ ಮದುವೆಯಾಗಿರುವುದಿಲ್ಲ. ನಾವೆಲ್ಲರೂ ಜಂಟಿ ಕುಟುಂಬದಲ್ಲಿ ವಾಸವಾಗಿದ್ದು ನನ್ನ ದೊಡ್ಡಮ್ಮ ರವರಿಗೆ ಈಗ್ಗೆ ಸುಮಾರು 3-4 ತಿಂಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆ ಮುರಿದಿದ್ದು ಇವರಿಗೆ ತುಮಕೂರಿನ ಹೇಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈಗ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು ಕಾಲು ವಾಸಿಯಾಗದೇ ಇದ್ದುದ್ದರಿಂದ ಯಾವಾಗಲೂ ನಮ್ಮ ಬಳಿ ನನಗೆ ವಯಸ್ಸಾಗಿದೆ, ನನ್ನ ಕಾಲು ವಾಸಿಯಾಗಲಿಲ್ಲ, ನಾನು ಏನಾದರೂ ಮಾಡಿಕೊಂಡು ಸತ್ತು ಹೋಗುತ್ತೇನೆ ಎಂತ ಹೇಳಿಕೊಳ್ಳುತ್ತಿದ್ದು ನಾವು ಕಾಲು ವಾಸಿಯಾಗುತ್ತೆ ನಾವು ಆಸ್ಪತ್ರೆಗೆ ತೋರಿಸಿ ವಾಸಿ ಮಾಡಿಸುತ್ತೇವೆ ಎಂತ ಹೇಳಿದರೂ ಸಹ ಪದೇ ಪದೇ ಅದೇ ರೀತಿ ಹೇಳಿಕೊಳ್ಳುತ್ತಿದ್ದು  ಈ ದಿನ ದಿನಾಂಕ:23-09-2019 ರಂದು ನಮ್ಮ ಗ್ರಾಮದಲ್ಲಿ ನಮ್ಮ ಜನಾಂಗದ ಸಿದ್ದಪ್ಪ ಎಂಬುವರಿಗೆ ಆರೋಗ್ಯ ಸರಿ ಇಲ್ಲದೇ ಮೃತಪಟ್ಟಿದ್ದು ಅವರನ್ನು ನೋಡಿಕೊಂಡು ಬರಲು ಬೆಳಿಗ್ಗೆ ಸುಮಾರು 07-00 ಗಂಟೆ ಸಮಯದಲ್ಲಿ ನಾವೆಲ್ಲಾ ಹೋಗಿದ್ದಾಗ ನನ್ನ ದೊಡ್ಡಮ್ಮ ಮನೆಯ ಗೂಡಿನಲ್ಲಿ ಹೂವಿನ ಗಿಡಕ್ಕೆ ಹೊಡೆಯಲು ತಂದು ಇಟ್ಟಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿಕೊಂಡಿದ್ದು ನಾನು ಬೆಳಿಗ್ಗೆ ಸುಮಾರು 07-45 ಗಂಟೆಯಲ್ಲಿ ಮನೆಯ ಬಳಿ ಹೋದಾಗ ನನ್ನ ದೊಡ್ಡಮ್ಮ ಮನೆಯ ಮುಂದಿನ ವಪ್ಪಾರದ ಕೆಳಗೆ ಮಲಗಿದ್ದು ಬಾಯಿಯಲ್ಲಿ ನೊರೆ ಬರುತ್ತಿದ್ದು ಪಕ್ಕದಲ್ಲಿ ನೋಡಲಾಗಿ ವಿಷದ ಬಾಟಲ್ ಬಿದ್ದಿದ್ದು ಕೂಡಲೇ ಮನೆಯ ಬಳಿಗೆ ಒಂದು ಆಟೋವನ್ನು ಕರೆಸಿಕೊಂಡು ನಾನು, ನನ್ನ ಹೆಂಡತಿ ಶೃತಿ, ನನ್ನ ಚಿಕ್ಕಮ್ಮನ ಮಗ ಮಹದೇವಯ್ಯ ರವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ಬೆಳಿಗ್ಗೆ ಸುಮಾರು 08-30 ಗಂಟೆಯಲ್ಲಿ ವೈದ್ಯರಲ್ಲಿ ತೋರಿಸಲಾಗಿ ನನ್ನ ದೊಡ್ಡಮ್ಮಳಾದ ಲಕ್ಷ್ಮಮ್ಮ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ನನ್ನ ದೊಡ್ಡಮ್ಮಳಿಗೆ ಕಾಲಿನ ಚಿಕಿತ್ಸೆ ಆಗಿದ್ದು ವಾಸಿಯಾಗದೇ ಇರುವುದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ನಾವು ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಮಯದಲ್ಲಿ ಮನೆಯ ಗೂಡಿನಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಮೃತಪಟ್ಟಿರುತ್ತಾರೆಯೇ ವಿನಃ ನನ್ನ ದೊಡ್ಡಮ್ಮಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ವಿಚಾರವನ್ನು ಗ್ರಾಮದಲ್ಲಿ ತಿಳಿಸಿ ಸ್ಥಳಕ್ಕೆ ಬಂದು ಕಾನೂನು ರೀತ್ಯಾ ಕ್ರಮ ಜರುಗಿಸಿಕೊಡಲು " ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 Monday, 23 September 2019

ಅಪರಾಧ ಘಟನೆಗಳು 23-09-19

ಕೊರಟಗೆರೆ ಪೊಲಿಸ್ ಠಾಣೆ ಮೊ.ಸಂ 154/2019, ಕಲಂ.15[3],32[3] ಕೆ.ಇ ಆಕ್ಟ್

ದಿನಾಂಕ:-22.09.2019 ರಂದು ಸಂಜೆ 7.00 ಗಂಟೆಗೆ ಠಾಣಾ ಹೆಚ್.ಸಿ-156 ಲಕ್ಷ್ಮೀನಾರಾಯಣ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ದಿನಾಂಕ:-22.09.2019 ರಂದು ಠಾಣಾಧಿಕಾರಿಯವರು ಪಿಸಿ-493 ಪ್ರಶಾಂತ್ ರವರಿಗೆ 18 ನೇ ಗ್ರಾಮಗಸ್ತಿಗೆ ನೇಮಕ ಮಾಡಿದ್ದು ನೇಮಕದಂತೆ ಅವರು  ಜೆಟ್ಟಿಅಗ್ರಹಾರ ಗ್ರಾಮಕ್ಕೆ ಗಸ್ತಿಗಾಗಿ ಬಂದಾಗ ನಮ್ಮ ಬಾತ್ಮೀದಾರರಿಂದ ಜಯಮ್ಮ ಕೊಂ ಲೇಟ್ ಸಂಜೀವಪ್ಪ.60 ವರ್ಷ. ಈಡಿಗರು, ಹಾಲ್ ಡೈರಿ ಹಿಂಭಾಗ. ಜೆಟ್ಟಿಅಗ್ರಹಾರ.ಸಿ ಎನ್ ದುರ್ಗ ಹೋಬಳಿ.ಕೊರಟಗೆರೆ ತಾಲ್ಲೋಕು ರವರ ಅಂಗಡಿಯ ಮುಂದೆ ಅಕ್ರಮವಾಗಿ ಮಧ್ಯ ಸೇವನೆ ಮಾಡಲು ಸಾರ್ವಜನಿಕವಾಗಿ ಅವಕಾಶ ನೀಡಿರುತ್ತಾರೆಂತ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ದಾಳಿ ಮಾಡಿ  02 ರಾಜಾ ವಿಸ್ಕಿ ಟೆಟ್ರಾ ಪಾಕೇಟ್‌ ಹಾಗು ಖಾಲಿ ಇರುವ 03 ಹೈವಾರ್ಡ್ಸ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳು ಹಾಗೂ 04 ಮಧ್ಯೆ ಸೇವನೆ ಮಾಡಿ ಬಿಸಾಡಿದ  ಪ್ಲಾಸ್ಟಿಕ್ ಗ್ಲಾಸ್ ಗಳು ದೊರೆತ್ತಿದ್ದು, ಪಂಚನಾಮೆ ಕ್ರಮ ಜರುಗಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿರುತ್ತೆ.

ಕೊರಟಗೆರೆ ಪೊಲಿಸ್ ಠಾಣೆ ಮೊ.ಸಂ 155/2019, ಕಲಂ.15[3],32[3] ಕೆ.ಇ ಆಕ್ಟ್

ದಿನಾಂಕ:-22.09.2019 ರಂದು ರಾತ್ರಿ 08-00 ಗಂಟೆಗೆ ಠಾಣಾ ಹೆಚ್.ಸಿ-156 ಲಕ್ಷ್ಮೀನಾರಾಯಣ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ದಿನಾಂಕ:-22.09.2019 ರಂದು ಠಾಣಾಧಿಕಾರಿಯವರು ಪಿಸಿ-493 ಪ್ರಶಾಂತ್ ರವರನ್ನು 18 ನೇ ಗ್ರಾಮಗಸ್ತಿಗೆ ನೇಮಕ ಮಾಡಿದ್ದು ನೇಮಕದಂತೆ ಅವರು  ಗ್ರಾಮ ಗಸ್ತಿಗಾಗಿ ಜೆಟ್ಟಿಅಗ್ರಹಾರ ಗ್ರಾಮಕ್ಕೆ ಗಸ್ತಿಗಾಗಿ ಬಂದಾಗ ಬಾತ್ಮೀದಾರರಿಂದ ನಾಗರಾಜು ಬಿನ್ ಲೇಟ್ ಹನುಮಂತರಾಯಪ್ಪ.40 ವರ್ಷ. ಈಡಿಗರು, ಜೆಟ್ಟಿಅಗ್ರಹಾರ.ಸಿ ಎನ್ ದುರ್ಗ ಹೋಬಳಿ.ಕೊರಟಗೆರೆ ತಾಲ್ಲೋಕು ರವರ ಅಂಗಡಿಯ ಮುಂದೆ ಅಕ್ರಮವಾಗಿ ಮಧ್ಯ ಸೇವನೆ ಮಾಡಲು ಸಾರ್ವಜನಿಕ ವಾಗಿ ಅವಕಾಶ ನೀಡಿರುತ್ತಾರೆಂತ ಬಾತ್ಮೀದಾರರಿಂದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ 04 ರಾಜಾ ವಿಸ್ಕಿ ಟೆಟ್ರಾ ಪಾಕೇಟ್‌ ಹಾಗು ಖಾಲಿ ಇರುವ 03 ಹೈವಾರ್ಡ್ಸ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳು ಹಾಗೂ 06 ಮಧ್ಯೆ ಸೇವನೆ ಮಾಡಿ ಬಿಸಾಡಿದ  ಪ್ಲಾಸ್ಟಿಕ್ ಗ್ಲಾಸ್ ಗಳು ದೊರೆತ್ತಿದ್ದು, ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತು ಪಡಿಸಿಕೊಂಡಿರುತ್ತದೆ.  ಪ್ರಕರಣ ದಾಖಲಿಸಿಕೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 87/2019 ಕಲಂ; 279,337 ಐ.ಪಿ.ಸಿ ಮತ್ತು 187 ಐ.ಎಂ.ವಿ ಆಕ್ಟ್.

ದಿನಾಂಕ: 22/09/2019 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಸಂತೋಷ್ ಎಲ್.ಸಿ ಬಿನ್ ಲೇಟ್ ಚನ್ನಕೇಶವಯ್ಯ, 30 ವರ್ಷ, ಲಿಂಗಾಯಿತ ಜನಾಂಗ, ಜಿರಾಯ್ತಿ, ಕಟ್ಟಿಗೇನಹಳ್ಳಿ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 19/09/2019 ರಂದು ನಾನು ನಮ್ಮ ಗ್ರಾಮದಲ್ಲಿ ಇರುವಾಗ ಸಂಜೆ 7-00 ಗಂಟೆ ಸಮಯದಲ್ಲಿ ನನ್ನ ಸ್ನೇಹಿತನಾದ ಗೋಪಾಲನಹಳ್ಳಿಯ ಚರಣ್ ರವರು ತಿಳಿಸಿದ ವಿಚಾರವೇನೆಂದರೆ, ನಿನ್ನ ಬಾಮೈದನಾದ ಷಡಾಕ್ಷರಿಯವರು ತನ್ನ ಬಾಬ್ತು KA-44 L-8279 ನೇ ಟಿ.ವಿ.ಎಸ್ ಎಕ್ಸೆಲ್ ನಲ್ಲಿ ತಿಪಟೂರಿನಿಂದ ಬೈರಾಪುರಕ್ಕೆ ಹೋಗಲು ಸುಮಾರು ಸಂಜೆ 6-45 ಗಂಟೆಯ ಸಮಯದಲ್ಲಿ ರಂಗನಾಥಪುರ–ಕರಡಿ ಮಧ್ಯೆ ಎನ್.ಹೆಚ್-206 ರಸ್ತೆಯಲ್ಲಿ ಎಡಭಾಗದಲ್ಲಿ ಹೋಗುತ್ತಿರುವಾಗ ಯಾವುದೋ ವಾಹನ, ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಷಡಾಕ್ಷರಿಯವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ, ಸ್ಥಳದಲ್ಲಿ ನಿಲ್ಲಿಸದೇ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಈ ಅಪಘಾತದಿಂದ ಷಡಾಕ್ಷರಿಯವರಿಗೆ ತಲೆಗೆ ಮತ್ತು ಬಲಪಕ್ಕೆಗೆ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತೆ. ಅವರನ್ನು ಉಪಚರಿಸಿ 108 ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುತ್ತೇನೆಂತ ತಿಳಿಸಿದ ಮೇರೆಗೆ ನಾನು ತಕ್ಷಣ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಷಡಾಕ್ಷರಿಯವರಿಗೆ ತಲೆಗೆ ಮತ್ತು ಬಲಪಕ್ಕೆಗೆ ಪೆಟ್ಟುಬಿದ್ದಿರುವುದು ಕಂಡುಬಂದಿರುತ್ತೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾನು ಷಡಾಕ್ಷರಿಯವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ, ನಂತರ ವಿಕ್ಟೋರಿಯಾ ಆಸ್ಪತ್ರೆ ನಂತರ ಬೆಂಗಳೂರಿನ ಸಾಯಿ ಅಂಬಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಬಂದು ಷಡಾಕ್ಷರಿಯವರಿಗೆ ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಓಡಿ ಹೋಗಿರುವ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ  ಮೊ ನಂ-153/2019 ಕಲಂ 279,337 ಐಪಿಸಿ

ದಿನಾಂಕ-22/09/2019 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಕುಮಾರ.ಎಂ.ಎನ್. ಬಿನ್ ನರಸೇಗೌಡ, 27 ವರ್ಷ, ವಕ್ಕಲಿಗರು. ಕೆಎ-06-ಟಿ.ಬಿ.-2183 ನೇ ಟ್ರಾಕ್ಟರ್ ಇಂಜಿನ್ ಚಾಲಕ, ಮಾಕನಹಳ್ಳಿ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ದೂ.ನಂ.9483445558.ರವರು ಠಾನೆಗೆ ಹಾಜರಾಗಿ ನೀಡಿದ್ ಲಿಖಿತ ದೂರಿನ ಅಂಶವೇನೆಂಧರೆ ನನ್ನ ಹೆಸರಿನಲ್ಲಿ ಕೆಎ-06-ಟಿ.ಬಿ.-2183 ನೇ ಟ್ರಾಕ್ಟರ್ ಇಂಜಿನ್ ಇದ್ದು ಟ್ರೈಲರನ್ನು ಮಾರಾಟ ಮಾಡಿರುವುದರಿಂದ ನಮ್ಮ ಗ್ರಾಮದ ಲಿಂಗಾಯಿತರ ಜನಾಂಗದ ರುದ್ರಯ್ಯ ರವರ ಬಾಬ್ತು ಟ್ರೈಲರ್ ನಂಬರ್ ಕೆಎ44-ಟಿ-1371 ನ್ನು ಈಗ್ಗೆ ಸುಮಾರು 03 ದಿನಗಳ ಹಿಂದೆ ಪಡೆದು ನಾನು ದಿನಾಂಕ:-21-09-2019 ರಂದು ನನ್ನ ಸ್ವಂತ ಚಿಕ್ಕಪ್ಪ ನವರಾದ ಹೊಸಳ್ಳಿ ಗ್ರಾಮದ ಹರೀಶ್ ರವರ ಜಮೀನಿನಲ್ಲಿ ಬೆಳೆಸಿರುವ ನೀಲಗಿರಿ ಮರಗಳನ್ನು ನಾನು ಖರೀದಿ ಮಾಡಿ ಕೊಯ್ಯಿಸಿ ನನ್ನ ಟ್ರಾಕ್ಟರ್ ನಲ್ಲಿ ತುಂಬಿಸಿಕೊಂಡು ಗೂಳೂರು ಮೂಲಕ ಹೆಬ್ಬೂರಿಗೆ ತರಲು ರಾತ್ರಿ ಸುಮಾರು 9-30 ಗಂಟೆಯಲ್ಲಿ ಬಾಣಾವರ ಗೇಟ್ ಮತ್ತು ಭೈರವೇಶ್ವರ ಡಾಬಾ ಮದ್ಯೆ ಇರುವ ತುಮಕೂರು ಕುಣಿಗಲ್ ರಸ್ತೆಯ ಮದ್ಯದಲ್ಲಿ ಒಂದು ಮಾವಿನ ತೋಪಿನ ಬಳಿ ನಾನು ತುಮಕೂರು ಕಡೆಯಿಂದ ಹೆಬ್ಬೂರು ಕಡೆಗೆ ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಒಂದು ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ಜೋರಾಗಿ ಓಡಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್ ನಿಯಂತ್ರಣಕ್ಕೆ ಸಿಗದೆ ಕುಣಿಗಲ್ ತುಮಕೂರು ರಸ್ತೆಯ ಕಡೆಯ ಪುಟ್ ಪಾತ್ ಕಡೆಗೆ ಹೋಗಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಮಗುಚಿಕೊಂಡಿದ್ದು, ಟ್ರಾಕ್ಟರ್ ನಲ್ಲಿದ್ದ ಚಾಲಕನಾದ ನನಗೆ ಬಲಕಾಲಿನ ಮಂಡಿಗೆ, ಮತ್ತು ಎಡಭುಜಕ್ಕೆ, ಒತ್ತಿಕೊಂಡು ನೋವಾಯಿತು, ಟ್ರಾಕ್ಟರ್ ನಲ್ಲಿದ್ದ, ನಮ್ಮ ಗ್ರಾಮದ ಪ್ರಕಾಶನಿಗೆ ಮೇಲ್ಬಾಗದ ಹಲ್ಲಿಗೆ ತಗುಲಿ ಒಂದು ಹಲ್ಲು ಮುರಿದು ಮತ್ತೊಂದು ಹಲ್ಲು ಅರ್ದ ಮುರಿದಿರುತ್ತೆ, ಅಭಿಷೇಕ್ ರವರಿಗೆ ಎಡಹಣೆಗೆ, ತಲೆಯ ಹಿಂಭಾಗ, ರಕ್ತಗಾಯವಾಗಿ ಬೆನ್ನಿಗೆ ತರಚಿದ ರಕ್ತಗಾಯವಾಗಿತ್ತು. ನಂತರ ನಾನು ಅಪಘಾತಪಡಿಸಿದ ಬಸ್ ನಂಬರನ್ನು ನೋಡಲಾಗಿ ಕೆಎ-06-ಬಿ-6618 ನೇ ಎಸ್.ಎಸ್.ಎಂ.ಎಸ್ ಆಗಿದ್ದು ಸದರಿ ಬಸ್ಸು ಮುಂಭಾಗದಲ್ಲಿ ಜಖಂ ಆಗಿದ್ದು ಬಸ್ಸಿನಲ್ಲಿದ್ದ ಸುಮಾರು 4-5 ಜನ ಪ್ರಯಾಣಿಕರಿಗೆ ರಕ್ತಗಾಯಗಳಾಗಿತ್ತು. ನಂತರ ನಾನು, ಪ್ರಕಾಶ್, ಅಭಿಷೇಕ್ ಮೂರೂ ಜನ ರಸ್ತೆಯಲ್ಲಿ ಬಂದ ಯಾವುದೋ ಒಂದು ಖಾಸಗಿ ಬಸ್ಸಿನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಬಸ್ಸಿನಲ್ಲಿ ಇದ್ದ ಪ್ರಯಾಣಿಕರು 108 ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದರು. ಅವರ ಹೆಸರು ವಿಳಾಸ ನನಗೆ ಗೊತ್ತಿರುವುದಿಲ್ಲ. ನನಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುವಂತಹ ನೋವಾಗಿಲ್ಲದೇ ಇರುವುದರಿಂದ ಚಿಕಿತ್ಸೆ ಪಡೆದು ಬಂದಿರುತ್ತೇನೆ. ಪ್ರಕಾಶ ಮತ್ತು ಅಭಿಷೇಕ್ ಇಬ್ಬರೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅಪಘಾತಪಡಿಸಿದ ಬಸ್ಸು ಹಾಗೂ ಅಪಘಾತಕ್ಕೀಡಾಗಿರುವ ಟ್ರಾಕ್ಟರ್ ಸ್ಥಳದಲ್ಲಿಯೇ ಇದ್ದವು. ನಾನು ಈ ದಿನ ಚಿಕಿತ್ಸೆ ಪಡೆದು ತಡವಾಗಿ ಠಾಣೆಗೆ ಬಂದು ನನ್ನ ಟ್ರಾಕ್ಟರ್ ಗೆ ಅಪಘಾತಪಡಿಸಿ ಜಖಂ ಆಗುವಂತೆ ಮಾಡಿ ಟ್ರಾಕ್ಟರ್ ನಲ್ಲಿದ್ದ ನನಗೆ ಹಾಗೂ ಪ್ರಕಾಶ ಮತ್ತು ಅಭಿಷೇಕ್ ರವರಿಗೆ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ರಕ್ತಗಾಯಗಳಾಗುವಂತೆ ಮಾಡಿದ ಕೆಎ-06-ಬಿ-6618 ನೇ ಎಸ್.ಎಸ್.ಎಂ.ಎಸ್ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಗುಬ್ಬಿ ಪೊಲೀಸ್ ಠಾಣಾ ಮೊ.ನಂ- 206/2019 ಕಲಂ- 279 337 304[ಎ] ಐಪಿಸಿ 134(ಎ&ಬಿ) 187 ಐಎಂವಿ ಆಕ್ಟ್

ದಿ-22-09-2019 ರಂದು ರಾತ್ರಿ 07.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ  ಗುಬ್ಬಿ ತಾಲ್ಲೂಕ್ ಬಿಳಿಗೆರೆ ವಾಸಿ ಮಹದೇವಯ್ಯ ಬಿನ್ ಹುಚ್ಚಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ-21-09-2019 ರಂದು ಸಂಜೆ ಸುಮಾರು 05.00 ಗಂಟೆಯಲ್ಲಿ ಪಿರ್ಯಾದಿ  ಅಣ್ಣ ರಂಗಸ್ವಾಮಿ ರವರು ಗುಬ್ಬಿ ಕಡೆಯಿಂದ ಬಿಳಿಗೆರೆಗೆ  ಕೆಎ-04-ಇಕೆ-5513ನೇ ಟಿವಿಎಸ್ ವಿಕ್ಟರ್ ದ್ವೀಚಕ್ರ ವಾಹನದಲ್ಲಿ ಜಿ.ಹೊಸಹಳ್ಳಿ ಕ್ರಾಸಿನಲ್ಲಿ ಬರುವಾಗ ಹಿಂಬದಿಯಿಂದ ಬಂದ ಕೆಎ-06-ಇಜಿ-2365ನೇ ಹಿರೋ ಹೋಂಡ ಪ್ಯಾಶನ್ ದ್ವೀಚಕ್ರ ವಾಹನ ಸವಾರನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ರಂಗಸ್ವಾಮಿ ಕೆಳಗೆ ಬಿದ್ದು ತಲೆಗೆ, ಕಾಲಿಗೆ ಮತ್ತು ಮೈಕೈಗೆ ಪೆಟ್ಟು ಬಿದ್ದವರನ್ನು ಸ್ಥಳದಲ್ಲಿದ್ದ ರವೀಶ ಬಿನ್ ಗೌಡಯ್ಯ ರವರು ನೋಡಿ ಉಪಚರಿಸಿರುತ್ತಾರೆ. ಅಪಘಾತ ಪಡಿಸಿದ ದ್ವೀಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರನಿಗೂ ಸಹ ಪೆಟ್ಟು ಬಿದ್ದಿದ್ದು ಆತನನ್ನು ಅದೇ ವಾಹನದಲ್ಲಿ ಅದರ ಸವಾರನು ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದು ರಂಗಸ್ವಾಮಿಯನ್ನು ರವೀಶ ರವರು ಚಿಕಿತ್ಸೆಗೆಂದು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ನೆಡೆದ ವಿಚಾರವನ್ನು ಪೋನಿನಲ್ಲಿ ಪಿರ್ಯದಿಗೆ ತಿಳಿಸಿರುತ್ತಾರೆ. ವಿಚಾರ ತಿಳಿದುಕೊಂಡ ಪಿರ್ಯಾದಿಯವರು ಗುಬ್ಬಿ ಸರ್ಕಾರಿ  ಆಸ್ಪತ್ರೆಗೆ ಬಂದು ರಂಗಸ್ವಾಮಿಯನ್ನು ನೋಡಿ ವಿಚಾರ ತಿಳಿದುಕೊಂಡು ನಂತರ ವೈದ್ಯರ ಸಲಹೆ ಮೇರೆಗೆ ಗಾಯಾಳು ರಂಗಸ್ವಾಮಿ ರವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಈ ದಿನ ದಿ-22-09-2019 ರಂದು ಬೆಳೆಗ್ಗೆ ಸುಮಾರು 08.00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಆದ್ದರಿಂದ ಅಪಘಾತಪಡಿಸಿದ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂತ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಚೇಳೂರು  ಪೊಲೀಸ್ ಠಾಣಾ  ಮೊ.ನಂ: 115/2019 ಕಲಂ;143.324.447.427.506.ರೆ/ವಿ 149 ಐ.ಪಿ.ಸಿ.   ಮತ್ತು  ಕಲಂ 3 ಕ್ಲಾಸ್ (1) (r) (s) sc/st (POA) - amendment ACT 2015

ದಿನಾಂಕ; 22/09/2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿ ಉಮೇಶರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ : 22/09/2019 ರಂದು ಬೆಳಿಗ್ಗೆ 10-50 ಗಂಟೆ ಸಮಯದಲ್ಲಿ ನಮ್ಮ ಸ್ವತ್ತಾದ ಗಿಡದ ಹೊಲದ ಹತ್ತಿರ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದಾಗ ಇದೇ ಗ್ರಾಮದ ವಾಸಿಗಳಾದ ರಂಗಸ್ವಾಮಯ್ಯ ರವರ ಮಕ್ಕಳಾದ ನಾರಾಯಣಪ್ಪ, ಹೆಂಡತಿ ಮಹದೇವಮ್ಮ, ಮಗ ಶ್ರೀಧರ, ಸಣ್ಣರಂಗಯ್ಯ, ಹೆಂಡತಿ ದೊಡ್ಡಮ್ಮ ಮತ್ತು ಗೊಲ್ಲ ಜನಾಂಗಕ್ಕೆ ಸೇರಿದ ಈರಣ್ಣನ  ಮಗ ಮಂಜ, ಈರಣ್ಣ ವರುಗಳು ನಮ್ಮ ಹೊಲದ ಹತ್ತಿರ ಬಂದು, ನಾವುಗಳಾದ ರಂಗಯ್ಯ, ಹೆಂಡತಿ ಲಕ್ಷ್ಮಮ್ಮ, ಮಗಳು ರೂಪಾ, ಮಗ ಉಮೇಶ, ಶ್ರೀನಿವಾಸ್ ಎಂಬುವರ ಮೇಲೆ ಕಾರದ ಪುಡಿಯನ್ನು ಎರಚಿ, ದೊಣ್ಣೆಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ರಂಗಯ್ಯ ಎಂಬುವರ ಸ್ಥಿತಿ ಚಿಂತಾ ಜನಕವಾಗಿರುವುದರಿಂದ  ಇವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ. ಆದ್ದರಿಂದ ತಾವುಗಳು ಇದ ಬಗ್ಗೆ ಕೂಲಕುಂಷವಾಗಿ ಪರಿಶೀಲಿಸಿ, ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮತ್ತು ನಮ್ಮ ವಾಸದ ಗುಡಿಸಲನ್ನು ದ್ವಂಸ ಮಾಡಿರುತ್ತಾರೆ, ನಮ್ಮ ಜಮೀನನ್ನು ಟ್ರಾಕ್ಟರ್ ನಿಂದ ಉಳುಮೆ ಮಾಡಿರುತ್ತಾರೆ, ಹಾಲಿ ಹುರುಳಿ, ಜೋಳದ ಬೆಳೆಯನ್ನು ನಷ್ಟ ಮಾಡಿರುತ್ತಾರೆ.ರಂಗಯ್ಯನ ಹೆಂಡತಿ ಲಕ್ಷ್ಮೀದೇವಮ್ಮ, ಮಗಳು ರೂಪಾ ಇವರುಗಳಿಗೆ ಗಂಭೀರವಾದ ಏಟುಗಳು ಬಿದ್ದಿರುವುದರಿಂದ ಇವರುಗಳನ್ನು ಸಹ ಆಸ್ಪತ್ರೆಗೆ ದಾಖಲು ಮಾಡಿರುತ್ತೇನೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ, ನ್ಯಾಯ ದೊರಕಿಸಿಕೊಡಬೇಕೆಂದು ಬೇಡಿಕೊಳ್ಳುತ್ತೇನೆಂತ ನೀಡಿದ ಪಿರ್ಯಾದು  ಮೇರೆಗೆ ಠಾಣಾ ಮೊ.ನಂ: 115/2019  ಕಲಂ 143.324,447.427.506 ರೆ/ವಿ 149 ಐ.ಪಿ.ಸಿ ಮತ್ತು  ಕಲಂ 3 ಕ್ಲಾಸ್ (1) (r) (s) sc/st  (POA) -  amendment ACT 2015 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 Sunday, 22 September 2019

ಅಪರಾಧ ಘಟನೆಗಳು 22-09-19

ಅಮೃತೂರು ಪೊಲೀಸ್‌ ಠಾಣಾ ಮೊನಂ-135/2019, ಕಲಂ- 279, 304(ಎ) ಐಪಿಸಿ ರೆ/ವಿ-134(ಎ&ಬಿ), 187 ಐ.ಎಂ.ವಿ. ಆಕ್ಟ್

ದಿನಾಂಕ: 21-09-2019 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಟಿ.ವಿ. ರಾಜು ಬಿನ್ ವೆಂಕಟೇಶ್, 26 ವರ್ಷ, ಕೊರಮರು, ಟವರ್ ಕೆಲಸ, ಹಾಲಿ ವಾಸ: 1 ನೇ ಕ್ರಾಸ್, 1 ನೇ ಮೇನ್, ಶ್ರೀನಿವಾಸ್ ನಗರ, ಪಟ್ಟೇಗಾರ್ ಪಾಳ್ಯ ಮೇನ್ ರೋಡ್, ಬೆಂಗಳೂರು. ಸ್ವಂತ ಊರು:  ತೊರೆಹಳ್ಳಿ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 20-09-2019 ರಂದು ಸಂಜೆ ಸುಮಾರು 7-20 ಗಂಟೆ ಸಮಯದಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ನಮ್ಮೂರಿನ ಲೇಟ್ ಗುಡ್ಡ ತಿಮ್ಮೇಗೌಡರ ಮಗ ಗಂಗಣ್ಣ ರವರು ನನಗೆ ಫೋನ್ ಮಾಡಿ, ಈ ದಿನ ಯಾಚನಹಳ್ಳಿ ಗ್ರಾಮದ ಕಟ್ಟಿಂಗ್ ಕಟ್ಟೆ ಹತ್ತಿರ ಹಾದು ಹೋಗಿರುವ ಎಸ್.ಹೆಚ್-84 ರಸ್ತೆಯಲ್ಲಿ ಸಂಜೆ ಸುಮಾರು 6-50 ಗಂಟೆ ಸಮಯದಲ್ಲಿ ನಿಮ್ಮ ತಂದೆ ವೆಂಕಟೇಶ್ ರವರಿಗೆ ಯಾವುದೋ ಒಂದು ವಾಹನದಿಂದ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಿಮ್ಮ ತಂದೆಯ ಶವವನ್ನು ಈಗ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲು ತೆಗೆದುಕೊಂಡು ಹೋಗುತ್ತಿದ್ದೇವೆ ಬೇಗ ಬಾ ಎಂದು ತಿಳಿಸಿದರು. ಆಗ ನಾನು ಕೂಡಲೇ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಬಂದು ನೋಡಲಾಗಿ ಅಪಘಾತದಿಂದ ನಮ್ಮ ತಂದೆಯ ಮುಖಕ್ಕೆ, ತಲೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಮೃತಪಟ್ಟಿರುವುದು ನಿಜವಾಗಿತ್ತು. ನಂತರ ಅಲ್ಲಿಯೇ ಇದ್ದ ನಮ್ಮೂರಿನ ಗಂಗಣ್ಣರವರನ್ನು ವಿಚಾರ ಮಾಡಲಾಗಿ, ಈ ದಿನ ನಿಮ್ಮ ತಂದೆಯವರು ಸ್ವಂತ ಕೆಲಸದ ನಿಮಿತ್ತ ಕೆ.ಎ-05 ಜೆ.ಎಫ್-3955 ರ ಹೀರೋ ಸ್ಪ್ಲೆಂಡರ್ ಪ್ರೋ ಬೈಕಿನಲ್ಲಿ ಅಮೃತೂರಿಗೆ ಬರುವಾಗ ಸಂಜೆ ಸುಮಾರು 6-50 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೂಕ್, ಅಮೃತೂರು ಹೋಬಳಿ, ಯಾಚನಹಳ್ಳಿ ಗ್ರಾಮದ ಕಟ್ಟಿಂಗ್ ಕಟ್ಟೆ ಬಳಿ ಹಾದುಹೋಗಿರುವ ಎಸ್.ಹೆಚ್-84 ರ ರಸ್ತೆಯ ಎಡಪಕ್ಕದಲ್ಲಿ ಬರುತ್ತಿರುವಾಗ ಅದೇ ರಸ್ತೆಯಲ್ಲಿ ಬಂದ ಯಾವುದೋ ಒಂದು ವಾಹನದಿಂದ ಅಪಘಾತವಾಗಿ ನಿಮ್ಮ ತಂದೆಯವರ ಮುಖಕ್ಕೆ, ತಲೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಂತರ ಅಲ್ಲಿಗೆ ಬಂದ ಯಾವುದೋ ಒಂದು ವಾಹನದಲ್ಲಿ ನಿಮ್ಮ ತಂದೆಯವರ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಬಂದು ಇಟ್ಟಿರುತ್ತೇವೆಂತ ತಿಳಿಸಿದರು. ನಂತರ ನಾನು ನಮ್ಮ ಸಂಭಂದಿಕರಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನಮ್ಮ ತಂದೆಯವರಿಗೆ ಅಪಘಾತಪಡಿಸಿದ ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಠಾಣಾ ಮೊ.ನಂ-135/2019 ಕಲಂ-279, 304(ಎ) ಐ.ಪಿ.ಸಿ. ರೆ/ವಿ-134(ಎ&ಬಿ), 187 ಐ.ಎಂ.ವಿ. ಆಕ್ಟ್. ರೀತ್ಯ ಪ್ರಕರಣವನ್ನು ದಾಖಲಿಸಿ, ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು, ಸದರಿ ಪ್ರಕರಣವು ಘೋರ ಪ್ರಕರಣವಾದ್ದರಿಂದ ಪ್ರತಿಗಳನ್ನು ಈ ತುರ್ತು ವರದಿಯೊಂದಿಗೆ ಮೇಲಾಧಿಕಾರಿಗಳವರಿಗೆ ನಿವೇದಿಸಿಕೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 86/2019 ಕಲಂ: 279,304(ಎ), 201 ಐ.ಪಿ.ಸಿ.

ದಿನಾಂಕ; 21/09/2019 ರಂದು ಬೆಳಿಗ್ಗೆ 9-15 ಗಂಟೆಗೆ ಪಿರ್ಯಾದಿ ಶ್ರೀಮತಿ ಉಮಾದೇವಿ ಕೋಂ ಸುರೇಶ್, 44 ವರ್ಷ, ಮಡಿವಾಳ ಜನಾಂಗ, ಕೂಲಿ ಕೆಲಸ, ಹುಲ್ಲೇಕೆರೆ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಅಕ್ಕ ಗಂಗಮ್ಮ (55 ವರ್ಷ) ಗಂಡಸಿ ಹೋಬಳಿ ಕೆಂಕೆರೆ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಅವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ದಿನಾಂಕ; 19/09/2019 ರಂದು ದಸರೀಘಟ್ಟಕ್ಕೆ ಕೂಲಿ ಕೆಲಸಕ್ಕೆ ಬಂದು ಕೆಲಸ ಮುಗಿಸಿ ವಾಪಸ್ ಸಂಜೆ ಸುಮಾರು 5-30 ರಿಂದ 6-00 ಗಂಟೆಯ ಸಮಯದಲ್ಲಿ ಕೆಂಕೆರೆ ಗಡಿ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿರವಾಗ ಬುಧವಾರ ಸಂತೆ ಗೇಟ್ ಬಳಿ ಕೆಂಪಮ್ಮ ನವರ ಜಮೀನು ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಂಗಮ್ಮಳಿಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ದಸರೀಘಟ್ಟ ಗ್ರಾಮದ KA-44 B-0356 ರ ದ್ವಿಚಕ್ರ ವಾಹನದ ಸವಾರ ಕೇಶವಮೂರ್ತಿ ಎಂಬುವರು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಗಂಗಮ್ಮಳಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿ ಅವರು ಸಹ ರಸ್ತೆಗೆ ಬಿದ್ದು, ಸಣ್ಣಪುಟ್ಟ ಗಾಯಮಾಡಿಕೊಂಡಿರುತ್ತಾರೆ, ಗಂಗಮಮ್ಮಳಿಗೆ ತಲೆಗೆ ಹಾಗೂ ಇತರೆ ಕಡೆ ರಕ್ತಗಾಯಗಳಾಗಿ ಬಿದ್ದಿದ್ದವಳನ್ನು ಕೇಶವಮೂರ್ತಿಯವರೇ ಕೆಂಕೆರೆ ಆಸ್ಪತ್ರೆಗೆ ಕರೆದುಕೊಂಡು ಆಟೋದಲ್ಲಿ ಹೋಗಿ ಅಲ್ಲಿ ಡಾಕ್ಟರ್ ಇಲ್ಲದ ಕಾರಣ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಅದೇ ಆಟೋದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲುಮಾಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬುದಾಗಿ ಕೆಂಕೆರೆ ಗ್ರಾಮದ ವಸಂತಕುಮಾರ್ ಬಿನ್ ದೇವರಾಜಯ್ಯ ಎಂಬುವರು ನನಗೆ ಫೋನ್ ಮಾಡಿ ತಿಳಿಸಿದರು. ನಾನು ನನ್ನ ಮಗ ಮಂಜುನಾಥ್ ರವರನ್ನು ಬೆಂಗಳೂರಿಗೆ ಕಳುಹಿಸಿದೆ. ನನ್ನ ಮಗ ದಿನಾಂಕ: 20/09/2019 ರಂದು ಮಧ್ಯಾಹ್ನ 3-00 ಗಂಟೆಯ ಸಮಯಕ್ಕೆ ಫೋನ್ ಮಾಡಿ ಗಂಗಮ್ಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಕೇಶವಮೂರ್ತಿಯವರು ಆಸ್ಪತ್ರೆಯಲ್ಲಿ ಎಮ್ಮೆ ಗುದ್ದಿ ರಸ್ತೆಗೆ ಬಿದ್ದು ಗಾಯಗಳಾಗಿರುತ್ತವೆ ಎಂಬುದಾಗಿ ಬರೆಸಿರುತ್ತಾರೆ. ಅವರು ದ್ವಿಚಕ್ರ ವಾಹನದಲ್ಲಿ ಗುದ್ದಿ ಗಾಯಗೊಳಿಸಿ ಎಮ್ಮೆ ಗುದ್ದಿರುತ್ತದೆ ಎಂದು ದಾಖಲಿಸಿರುವುದು ಸುಳ್ಳಾಗಿರುತ್ತದೆ. ಗಂಗಮ್ಮಳ ಸಾವು ರಸ್ತೆ ಅಪಘಾತದಿಂದ ಆಗಿರುತ್ತದೆ ಅವಳ ಸಾವಿಗೆ ಕೇಶವಮೂರ್ತಿಯವರೇ ಕಾರಣರಾಗಿರುತ್ತಾರೆ. ಮೃತಳ ಶವವು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿರುತ್ತದೆ. ನೆನ್ನೆ ನಮ್ಮ ಅತ್ತೆಯವರು ತೀರಿಹೋಗಿದ್ದರಿಂದ ಈ ದಿನ ತಡವಾಗಿ ಬಂದಿದ್ದು, ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತೇನೆ ಎಂತಾ ಇತ್ಯಾದಿಯಾಗಿ ದೂರನ್ನು ನೀಡಿದ್ದು, ಸದರಿ ದೂರನ್ನು ಪಡೆದು ಠಾಣಾ ಮೊ.ನಂ- 86/2019 ಕಲಂ: 279,304 (ಎ) , 201 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 Saturday, 21 September 2019

ಅಪರಾಧ ಘಟನೆಗಳು 21-09-19

ಚೇಳೂರು  ಪೊಲೀಸ್ ಠಾಣಾ ಯು.ಡಿ.ಆರ್.ನಂ 32/2019 ಕಲಂ 174 (ಸಿ) ಸಿ.ಆರ್.ಪಿ.ಸಿ

ದಿನಾಂಕ:20/09/2019 ರಂದು 20-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಲ್ಲೇಶಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಅಂಶವೇನೆಂದರೆ ನನಗೆ ಮೂರು ಜನ ಮಕ್ಕಳಿದ್ದು 1 ನೇ  ಪ್ರಕೃತಿ,  2ನೇ  ಹೇಮಾ 3ನೇ ಚಂದ್ರಕಾಂತ ರವರುಗಳಾಗಿದ್ದು  ನಾನು ವ್ಯವಸಾಯ ಜೀವನ ಮಾಡಿಕೊಂಡಿರುತ್ತೇನೆ.  ನಮ್ಮ ಮನೆಯಲ್ಲಿ ನಾನು ನಮ್ಮ ತಂದೆ ಸಿದ್ದಯ್ಯ, ನನ್ನ ಹೆಂಡತಿ ರಾಜಮ್ಮ, ನನ್ನ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿರುತ್ತೇನೆ. ನನ್ನ 1 ನೇ ಮಗಳಾದ ಪ್ರಕೃತಿರವರು  ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ  2ನೇ ವರ್ಷದ  ಐಟಿಐ ಎಲೆಕ್ಟ್ರೇಷಿಯನ್ ಓದುತ್ತಿದ್ದು, ನಮ್ಮ ಮನೆಯಿಂದ ಚೇಳೂರಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ವಾಫಸ್ ಸಂಜೆ ಬರುತ್ತಿದ್ದರು.    ದಿನಾಂಕ;20/09/2019  ರಂದು   ಎಂದಿನಂತೆ ಬೆಳಿಗ್ಗೆ 7-30 ಗಂಟೆಗೆ  ನಮ್ಮ ಮನೆಯನ್ನು ಬಿಟ್ಟು ಕಾಲೇಜಿಗೆ ಹೋಗಿ  ಕಾಲೇಜನ್ನು ಮುಗಿಸಿಕೊಂಡು ಮದ್ಯಾಹ್ನ 1-30 ಗಂಟೆಗೆ ಮನೆಗೆ ಬಂದಿದ್ದು ,ನಮ್ಮ ಮನೆಯಲ್ಲಿ ನನ್ನ ತಂದೆಯಾದ ಸಿದ್ದಪ್ಪರವರು ಇದ್ದರು, ನಾನು ಮತ್ತು  ನನ್ನ ಹೆಂಡತಿ ಇಬ್ಬರೂ ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಮನೆಗೆ ಬಂದಾಗ ನಮ್ಮ ಮನೆಯ ಮುಂದೆ ನಮ್ಮ ತಂದೆಯವರು ಕುಳಿತ್ತಿದ್ದರು. ನಮ್ಮ ತಂದೆಯವರು ಪ್ರಕೃತಿರವರು ಮದ್ಯಾಹ್ನ 1-30 ಗಂಟೆಗೆ ಮನೆಗೆ ಬಂದು ಒಳಗೆ ಹೋದವಳು ವಾಪಸ್  ಬಂದಿರುವುದಿಲ್ಲ ಎಂತಾ ತಿಳಿಸಿದರು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆ ಒಳಗಡೆ ಹೋಗಿ ನೋಡಲಾಗಿ ಮನೆಯ ಕೆಳಬಾಗದಲ್ಲಿ ಇರಲಿಲ್ಲ. ಅವಳು ಓದಿಕೊಳ್ಳುತ್ತಿದ್ದ ನಮ್ಮ ಮನೆಯ ಹಟ್ಟದ ಮೇಲೆ ಹೋಗಿ ನೋಡಲಾಗಿ ನಮ್ಮ ಮನೆಯ ಹಟ್ಟದ ಮೇಲೆ  ಇರುವ ಹೆಂಚಿನ ತೀರಿಗೆ ಸೀರೆಯಿಂದ  ನೇಣು ಜೀರಿಕೊಂಡು  ನೇತಾಡುತ್ತಿದ್ದಳು.   ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಗಿಕೊಂಡಾಗ ನಮ್ಮ ಗ್ರಾಮದ  ಲೋಕೇಶ ಎಸ್.ಬಿ ಬಿನ್ ಬೋರಣ್ಣ ಮತ್ತು ಮಹಲಿಂಗಯ್ಯ ಬಿನ್ ಶಿವಣ್ಣ ರವರು ಬಂದರು. ಎಲ್ಲರೂ ಸೇರಿಕೊಂಡು ಜೀವವಿರಬಹುದೆಂತಾ ನೇಣಿನಿಂದ ಕೆಳಗೆ ಇಳಿಸಿ ನೋಡಲಾಗಿ ನನ್ನ ಮಗಳು ಪ್ರಕೃತಿ ಮೃತಪಟ್ಟಿದ್ದಳು. ನನ್ನ ಮಗಳು ಪ್ರಕೃತಿರವರು ಈಗ್ಗೆ 1 ವರೆ ವರ್ಷದಿಂದ ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ  2ನೇ ವರ್ಷದ  ಐಟಿಐ ಎಲೆಕ್ಟ್ರೇಷಿಯನ್ ಓದುತ್ತಿದ್ದು ಮನೆಯಲ್ಲಿ ನನ್ನ ಮಗಳಿಗೆ  ಯಾವುದೇ ತೊಂದರೆ ಇರುವುದಿಲ್ಲ ನಾವು  ನನ್ನ ಮಗಳಿಗೆ ಯಾವುದೇ ತೊಂದರೆ ನೀಡಿರುವುದಿಲ್ಲ  ನನ್ನ ಮಗ:ಳು ದಿನಾಂಕ:20/09/2019 ರಂದು ಕಾಲೇಜಿಗೆ ಹೋಗಿದ್ದವಳು ವಾಪಸ್ ಮನೆಗೆ ಬಂದು ನಮ್ಮ ಮನೆಯ ಹಟ್ಟದ ಮೇಲೆ  ಇರುವ ಹೆಂಚಿನ ತೀರಿಗೆ ಸೀರೆಯಿಂದ  ನೇಣು ಜೀರಿಕೊಂಡು ಮೃತಪಟ್ಟಿರುತ್ತಾಳೆ. ಇವಳ ಸಾವಿನ ಬಗ್ಗೆ ಅನುಮಾನವಿದ್ದು ದಯವಿಟ್ಟು ಕೂಲಂಕುಶವಾಗಿ ವಿಚಾರಣೆ ಮಾಡಿಕೊಡಬೇಕೆಂತಾ ಕೋರಿಕೊಳ್ಳುತ್ತೇನೆ. ನನ್ನ  ಮಗಳಿಗೆ 17 ವರ್ಷ  ವಯಸ್ಸಾಗಿರುತ್ತೆ,  ಈ  ವಿಚಾರವನ್ನು  ನಮ್ಮ  ಸಂಬಂದಿಕರಿಗೆ  ವಿಚಾರ  ತಿಳಿಸಿ  ಠಾಣೆಗೆ  ಬಂದು  ದೂರು  ನೀಡಿರುತ್ತೇನೆ.  ತಾವು  ಸ್ಥಳಕ್ಕೆ   ಬಂದು  ಮುಂದಿನ  ಕ್ರಮ  ಜರುಗಿಸಿಕೊಡಬೇಕೆಂದು ಕೇಳಿಕೊಳ್ಳುತ್ಥೇನೆಂತಾ ಇತ್ಯಾದಿ ಪಿರ್ಯಾದು  ಅಂಶ.

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಆರ್.ನಂ: 17/2019 ಕಲಂ: 174 CRPC

ಈ ಕೇಸಿನ ಪಿರ್ಯಾದಿ ಉಪೇಂದ್ರ ಗೋಪಾಲಕೃಷ್ಣ ಭಟ್ ಬಿನ್ ಗೋಪಾಲಕೃಷ್ಣ ಭಟ್, 51 ವರ್ಷ, ಬ್ರಾಹ್ಮಣ ಜನಾಂಗ, ಕುವೆಂಪುನಗರ, ತುಮಕೂರು ನಗರ ರವರು ದಿನಾಂಕ:20-09-2019 ರಂದು ಬೆಳಿಗ್ಗೆ 8-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಹೆಂಡತಿ ಮಹಾಮ್ಮಾಯಿ ರವರ ತಮ್ಮನಾದ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಅಂದರೆ ಪಿರ್ಯಾದಿಯ ಬಾಮೈದನಾದ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಬಿನ್ ಸುಬ್ಬರಾಯ ಭಂಡಾರ್ಕರ್ 41 ವರ್ಷ ರವರು ಅವರ ತಂದೆಯಾದ ಗೋಪಾಲಕೃಷ್ಣ ಭಟ್ ರವರೊಂದಿಗೆ ವಾಸವಾಗಿದ್ದರು,ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಕೆಲ ವರ್ಷಗಳಿಂದ ತುಮಕೂರು ಜಿಲ್ಲೆ  ಗುಬ್ಬಿ ಪಟ್ಟಣದಲ್ಲಿ ಗೃಹಉಪಯೋಗಿ ವಸ್ತುಗಳ ಅಂಗಡಿ ತೆರೆದು ವ್ಯಾಪಾರ ಮಾಡಿಕೊಂಡಿದ್ದನು, ಇತ್ತೀಚಿಗೆ ವ್ಯಾಪಾರದಲ್ಲಿ ಅಲ್ಪ ನಷ್ಟ ಅನುಭವಿಸಿದ ಕಾರಣದಿಂದ,ಕಳೆದ ಎರಡು ಮೂರು ತಿಂಗಳಿಂದ ಗುಬ್ಬಿಯಲ್ಲಿದ್ದ ಅಂಗಡಿಗೆ ವಾರಕ್ಕೆ ಒಂದೆರಡು ಬಾರಿ ಮಾತ್ರ ಹೋಗಿ ಬರುತ್ತಿದ್ದನು,ಕೆಲ ದಿನಗಳ ಹಿಂದಿನಿಂದ ಯಾವುದಾದರೂ ಕೆಲಸಕ್ಕೆ ಹೋಗಿ ಸೇರಿಕೊಳ್ಳಬೇಕೆಂದು ಪಿರ್ಯಾದಿಯ  ಬಾಮೈದನು ಅಂಬಲಿಸುತ್ತಿದ್ದನು,ದಿನಾಂಕ;18.09.2019 ರಂದು ಬೆಳಗ್ಗೆ 10.30 ಗಂಟೆಯ ಸಮಯದಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಬೆಂಗಳೂರಿಗೆ ಕೆಲಸದ ಸಂಬಂದ ಇಂಟರ್ವ್ಯೂ ಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದನು,ನಂತರ ಪಿರ್ಯಾದಿಯು ಆ ದಿನ ಸಂಜೆ;05.00 ಗಂಟೆಯಿಂದ ಸತತವಾಗಿ ಅತನ ಮೊಬೈಲ್ ಸಂಪರ್ಕಿಸಲು ಪ್ರಯತ್ನಸಿದ್ದು ಆದರೆ ಅತನ ಮೊಬೈಲ್ ಸ್ವಿಚ್ ಅಫ್ ಅಗಿತ್ತು, ನಂತರ ಪಿರ್ಯಾದಿಯ ಬಾಮೈದನ ಬಗ್ಗೆ ಅತನ ಪರಿಚಿತರ ಹಾಗೂ ಸಂಬಂದಿಕರನ್ನು ವಿಚಾರಿಸುತ್ತಿರುವಾಗ್ಗೆ ಮಧುಗಿರಿಯ ಮಂಜುನಾಥ ಲಾಡ್ಜ್ ನಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ತಿಳಿದು ನಂತರ  ದಿನಾಂಕ;20.09.2019 ರಂದು ಬೆಳಗ್ಗೆ ಬಂದು ನೋಡಲಾಗಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ನೇಣು ಹಾಕಿಕೊಂಡು ಮೃತಪಟ್ಟಿರುವುದು ದೃಡಪಟ್ಟಿತು,ಮಂಜುನಾಥ ಲಾಡ್ಜ್ ನಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರ ಸಾವಿನ ಬಗ್ಗೆ ತಿಳಯಲಾಗಿ ದಿನಾಂಕ;18.09.2019 ರಂದು ಮದ್ಯಾಹ್ನದ ವೇಳೆಯಲ್ಲಿ ರಾಮದಾಸು ರವರು ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದು ದಿನಾಂಕ;19.09.2019 ರಂದು ಸಂಜೆ;04.00 ಗಂಟೆಯ ಸಮಯದಲ್ಲಿ ರೂಂ ಡೋರ್ ತಟ್ಟಿದಾಗ ರೂಂ ಬಾಗಿಲು ತೆಗೆಯದ ಕಾರಣದಿಂದ ಬಲವಂತವಾಗಿ ರೂಂ ನ ಬಾಗಿಲು ತೆಗೆದು ನೋಡಿದಾಗ ಅವರು ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಂಡು ಬಂದಿತು ಎಂದು ತಿಳಿಸಿರುತ್ತಾರೆ. ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಸೂಕ್ಷ್ಮಮತಿಯಾಗಿದ್ದು ಸಣ್ಣ,ಪುಟ್ಟ ವಿಚಾರಗಳನ್ನು ತಲೆಗೆ ಹಾಕಿಕೊಂಡು ಋಣಾತ್ಮಕವಾಗಿ ಯೋಚಿಸುತ್ತಿದ್ದನು, ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಸೂಕ್ಷ್ಮಮತಿಯಾಗಿದ್ದರಿಂದ ಹಾಗು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣದಿಂದ ಜೀವನದಲ್ಲಿ ಚಿಕಿಪ್ಸೆ ಹೊಂದಿ ತನ್ನ ಮೂಲಕ ತಾನೇ ನೇಣು ಹಾಕಿಕೊಂಡು ಮೃತನಾಗಿರುತ್ತಾನೆ ವಿನಃ ಬೇರೆ ಯಾವ ಕಾರಣ ಇರುವುದಿಲ್ಲ ಅದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಸಿ.ಎಸ್.ಪುರ  ಠಾಣಾ  ಮೊ.ನಂ: 59/2019. ಕಲಂ: 323. 504. 447.506 ರೆ/ವಿ 34 ಐಪಿಸಿ

ದಿನಾಂಕ: 20.09.2019 ರಂದು ಈ ಕೇಸಿನ ಫಿರ್ಯಾದಿಯಾದ  ಲಕ್ಷ್ಮಮ್ಮ  ಕೊಂ ವೆಂಕಟೇಶಪ್ಪ, 50 ವರ್ಷ, ವಕ್ಕಲಿಗರು, ಚಿಮ್ಮನಹಳ್ಳಿ, ಸಿ.ಎಸ.ಪುರ ಹೋಬಳಿ,  ಗುಬ್ಬಿ ತಾಲ್ಲೂಕು ರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,   ನಮ್ಮ ಮಾವ ಮೂಡ್ಲಗಿರಯ್ಯರವರ  ಮನೆಯ ಪಕ್ಕ ನನ್ನ  ಹೆಸರಿಗೆ ಸರ್ವೆ ನಂ. 24/5 ರಲ್ಲಿ 0.03 ಗುಂಟೆ ಜಮೀನು ಇದ್ದು,    ದಿನಾಂಕ: 17.09.2019 ರಂಧು ಸಾಯಂಕಾಲ   ಸುಮಾರು 4.30 ಗಂಟೆ ಸಮಯದಲ್ಲಿ, ನಾನು & ನನ್ನ ಗಂಡ ಕುರಿಗಳನ್ನು ಹೊಡೆದುಕೊಂಡು ಬರುವ ಸಮಯದಲ್ಲಿ,.  ನಮ್ಮ ಜಮೀನಿನಲ್ಲಿ ಪಕ್ಕದ ಜಮೀನಿನವರಾದ  ಯಶೋಧಮ್ಮ  & ಈಖೆಯ  ಮಾವ  ತಿಮ್ಮೇಗೌಡ ರವರು  ಅಕ್ರಮವಾಗಿ  ಅತಿಕ್ರಮ ಪ್ರವೇಶ ಮಾಡಿ  ಮೇಕೆ & ಹಸುಗಳನ್ನು ಬಿಟ್ಟು ಮೇಯಿಸುತಿದ್ದು,  ನಮ್ಮ  ಜಮೀನಿನಲ್ಲಿ  ಕುರಿ,, ಹಸುಗಳನ್ನು ಬಿಟ್ಟು ಏತಕ್ಕೆ ಮೇಯಿಸುತ್ತಿದ್ದೀರಾ  ಅಂತ  ಕೇಳಿದಾಗ, ಯಶೋಧಮ್ಮ  ಏಕಾಏಕಿ  ನನ್ನ ಮೇಲೆ ಜಗಳ ತೆಗೆದು, ಬಾಯಿಗೆ ಬಂದಂತೆ   ಬೈದು,  ಅಂದರೆ ಬೇವರ್ಸಿ  ಮುಂಡೆ, ಹಲ್ಕಾ ಮುಂಡೆ ಅಂತ ಬೈದು ನನ್ನನ್ನು ಕೆಳಕ್ಕೆ  ಕೆಡವಿಕೊಂಡು, ನನ್ನ   ಕುತ್ತಿಗೆಗೆ ಕೈಹಾಕಿ  ಕರಿಮಣಿ ಸರವನ್ನು  ಕಿತ್ತು ಹಾಕಿದರು, ಬಿಡಿಸಲು ಬಂದ  ನನ್ನ ಯಜಮಾನ ವೆಂಕಟೇಶಪ್ಪನಿಗೆ ಕೈಗಳಿಂದ ಮೈಕೈಗೆ ಹೊಡೆದು  ನೋವುಂಟು  ಮಾಡಿದರು, ಅಷ್ಟಕ್ಕೂ ಬಿಡದೇ ಮೇಕೆ & ಹಸು ಬಿಡುವ ವಿಚಾರದಲ್ಲಿ  ಕೇಳಲು ಬಂದರೆ ನಿಮ್ಮನ್ನು ಪ್ರಾಣ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದು, ನನಗೆ ಯಶೋಧಮ್ಮ  ಎಡಗೈ ಹತ್ತಿರ  ಬಾಯಿಂದ ಕಚ್ಚಿದಳು ಎಂದು ಹಾಗೂ ತಿಮ್ಮಯ್ಯನು ಸಹ ನನಗೆ ಕೈಗಳಿಂದ ಮೈಕೈಗೆ ಹೊಡೆದು ನೋವುಂಟು ಮಾಡಿದನು ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು  ಸಿ ಪ್ರಕರಣ  ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 168/2019 ಕಲಂ: 323,324,506 R/w 34 IPC

ಈ ಕೇಸಿನ ಪಿರ್ಯಾದಿ ಜಯರಾಜ್ ಬಿನ್ ನರಸಿಂಹಯ್ಯ, 25 ವರ್ಷ,ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ,ಬಿಜವರ ಗ್ರಾಮ, ಕಸಬಾ ಹೋಬಳಿ, ಮಧುಗಿರಿ ತಾಲೂಕು ರವರು ಮಧುಗಿರಿ  ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 19-09-2019 ರಂದು ರಾತ್ರಿ 10-45 ಗಂಟೆ ಸಮಯದಲ್ಲಿ  ಪಿರ್ಯಾದಿಯು ತನ್ನ ಮನೆಯಲ್ಲಿರುವಾಗ್ಗೆ ಮನೆಗೆ ಬಂದ ಪಿರ್ಯಾದಿಯ ಊರಿನ ಅನಂತರಾಜು ಬಿನ್ ಲಕ್ಷ್ಮಣ ಹಾಗೂ ಅನಂತರಾಜುರವರ ಹೆಂಡತಿ ಸುಮಿತ್ರಾರವರು ಹಳೇಯ ದ್ವೇಷದಿಂದ ನೀನು ಏಕೆ ಊರಿಗೆ ಬಂದಿದ್ದೀಯಾ ಎಂದು ಜಗಳ ತೆಗೆದು ಬೋಳಿಮಗನೇ ಸೂಳೇ ಮಗನೇ ಎಂಧು ಬೈದು ನಂತರ ನಮ್ಮ ಜೊತೆ ಬಾ ನಿನ್ನೊಂದಿಗೆ ಮಾತನಾಡಬೇಕೆಂದು ಹೇಳಿ ಪಿರ್ಯಾದಿಯನ್ನು ಊರಿನ ಬೈಪಾಸ್ ರಸ್ತೆಯ ಬಳಿಗೆ ಕರೆದುಕೊಂಡು ಹೋದರು, ರಾತ್ರಿ 11-00 ಗಂಟೆ ಸುಮಾರಿನಲ್ಲಿ ಅನಂತರಾಜು ರವರು ಅತನ ಬಳಿಯಿದ್ದ ಚಾಕುವಿನಿಂದ ಪಿರ್ಯಾದಿ ಜಯರಾಜ್ ರವರ ಬಲಭಾಗದ ಬೆನ್ನಿಗೆ ಚುಚ್ಚಿದನು ನಂತರ ಕೈಗಳಿಂದ ಕೆನ್ನೆಗೆ ಹೊಡೆದು ಕಾಲುಗಳಿದ್ದ ಪಿರ್ಯಾದಿಯನ್ನು ತುಳಿದನು,ಆಗ ಪಿರ್ಯಾದಿಯು ಕಿರುಚಿಕೊಂಡಾಗ ಮಂಜುನಾಥ ಬಿ.ವಿ ಹಾಗೂ ದಿಲೀಪ್ ರವರು ಬಂದು ಜಗಳವನ್ನು ಬಿಡಿಸಿ ಗಾಯಾಳು ಪಿರ್ಯಾದಿ ಜಯರಾಜ್ ನ್ನು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಆದ್ದರಿಂಧ ಈ ಬಗ್ಗೆ ಕಾನೂನುಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ವೈದ್ಯರ ಸಮಕ್ಷಮ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಹೇಳಿಕೆಯನ್ನು ನೀಡಿದ್ದು, ಈ ಪಿರ್ಯಾದಿಯ ಹೇಳಿಕೆಯನ್ನು ಪಡೆದು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಆರ್.ನಂ: 17/2019 ಕಲಂ: 174 CRPC

ಈ ಕೇಸಿನ ಪಿರ್ಯಾದಿ ಉಪೇಂದ್ರ ಗೋಪಾಲಕೃಷ್ಣ ಭಟ್ ಬಿನ್ ಗೋಪಾಲಕೃಷ್ಣ ಭಟ್, 51 ವರ್ಷ, ಬ್ರಾಹ್ಮಣ ಜನಾಂಗ, ಕುವೆಂಪುನಗರ, ತುಮಕೂರು ನಗರ ರವರು ದಿನಾಂಕ:20-09-2019 ರಂದು ಬೆಳಿಗ್ಗೆ 8-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಹೆಂಡತಿ ಮಹಾಮ್ಮಾಯಿ ರವರ ತಮ್ಮನಾದ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಅಂದರೆ ಪಿರ್ಯಾದಿಯ ಬಾಮೈದನಾದ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಬಿನ್ ಸುಬ್ಬರಾಯ ಭಂಡಾರ್ಕರ್ 41 ವರ್ಷ ರವರು ಅವರ ತಂದೆಯಾದ ಗೋಪಾಲಕೃಷ್ಣ ಭಟ್ ರವರೊಂದಿಗೆ ವಾಸವಾಗಿದ್ದರು,ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಕೆಲ ವರ್ಷಗಳಿಂದ ತುಮಕೂರು ಜಿಲ್ಲೆ  ಗುಬ್ಬಿ ಪಟ್ಟಣದಲ್ಲಿ ಗೃಹಉಪಯೋಗಿ ವಸ್ತುಗಳ ಅಂಗಡಿ ತೆರೆದು ವ್ಯಾಪಾರ ಮಾಡಿಕೊಂಡಿದ್ದನು, ಇತ್ತೀಚಿಗೆ ವ್ಯಾಪಾರದಲ್ಲಿ ಅಲ್ಪ ನಷ್ಟ ಅನುಭವಿಸಿದ ಕಾರಣದಿಂದ,ಕಳೆದ ಎರಡು ಮೂರು ತಿಂಗಳಿಂದ ಗುಬ್ಬಿಯಲ್ಲಿದ್ದ ಅಂಗಡಿಗೆ ವಾರಕ್ಕೆ ಒಂದೆರಡು ಬಾರಿ ಮಾತ್ರ ಹೋಗಿ ಬರುತ್ತಿದ್ದನು,ಕೆಲ ದಿನಗಳ ಹಿಂದಿನಿಂದ ಯಾವುದಾದರೂ ಕೆಲಸಕ್ಕೆ ಹೋಗಿ ಸೇರಿಕೊಳ್ಳಬೇಕೆಂದು ಪಿರ್ಯಾದಿಯ  ಬಾಮೈದನು ಅಂಬಲಿಸುತ್ತಿದ್ದನು,ದಿನಾಂಕ;18.09.2019 ರಂದು ಬೆಳಗ್ಗೆ 10.30 ಗಂಟೆಯ ಸಮಯದಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ಬೆಂಗಳೂರಿಗೆ ಕೆಲಸದ ಸಂಬಂದ ಇಂಟರ್ವ್ಯೂ ಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದನು,ನಂತರ ಪಿರ್ಯಾದಿಯು ಆ ದಿನ ಸಂಜೆ;05.00 ಗಂಟೆಯಿಂದ ಸತತವಾಗಿ ಅತನ ಮೊಬೈಲ್ ಸಂಪರ್ಕಿಸಲು ಪ್ರಯತ್ನಸಿದ್ದು ಆದರೆ ಅತನ ಮೊಬೈಲ್ ಸ್ವಿಚ್ ಅಫ್ ಅಗಿತ್ತು, ನಂತರ ಪಿರ್ಯಾದಿಯ ಬಾಮೈದನ ಬಗ್ಗೆ ಅತನ ಪರಿಚಿತರ ಹಾಗೂ ಸಂಬಂದಿಕರನ್ನು ವಿಚಾರಿಸುತ್ತಿರುವಾಗ್ಗೆ ಮಧುಗಿರಿಯ ಮಂಜುನಾಥ ಲಾಡ್ಜ್ ನಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ತಿಳಿದು ನಂತರ  ದಿನಾಂಕ;20.09.2019 ರಂದು ಬೆಳಗ್ಗೆ ಬಂದು ನೋಡಲಾಗಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ನೇಣು ಹಾಕಿಕೊಂಡು ಮೃತಪಟ್ಟಿರುವುದು ದೃಡಪಟ್ಟಿತು,ಮಂಜುನಾಥ ಲಾಡ್ಜ್ ನಲ್ಲಿ ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರ ಸಾವಿನ ಬಗ್ಗೆ ತಿಳಯಲಾಗಿ ದಿನಾಂಕ;18.09.2019 ರಂದು ಮದ್ಯಾಹ್ನದ ವೇಳೆಯಲ್ಲಿ ರಾಮದಾಸು ರವರು ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದು ದಿನಾಂಕ;19.09.2019 ರಂದು ಸಂಜೆ;04.00 ಗಂಟೆಯ ಸಮಯದಲ್ಲಿ ರೂಂ ಡೋರ್ ತಟ್ಟಿದಾಗ ರೂಂ ಬಾಗಿಲು ತೆಗೆಯದ ಕಾರಣದಿಂದ ಬಲವಂತವಾಗಿ ರೂಂ ನ ಬಾಗಿಲು ತೆಗೆದು ನೋಡಿದಾಗ ಅವರು ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಂಡು ಬಂದಿತು ಎಂದು ತಿಳಿಸಿರುತ್ತಾರೆ. ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಸೂಕ್ಷ್ಮಮತಿಯಾಗಿದ್ದು ಸಣ್ಣ,ಪುಟ್ಟ ವಿಚಾರಗಳನ್ನು ತಲೆಗೆ ಹಾಕಿಕೊಂಡು ಋಣಾತ್ಮಕವಾಗಿ ಯೋಚಿಸುತ್ತಿದ್ದನು, ರಾಮದಾಸು ಸುಬ್ಬರಾಯ್ ಭಂಡಾರ್ಕರ್ ರವರು ಸೂಕ್ಷ್ಮಮತಿಯಾಗಿದ್ದರಿಂದ ಹಾಗು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣದಿಂದ ಜೀವನದಲ್ಲಿ ಚಿಕಿಪ್ಸೆ ಹೊಂದಿ ತನ್ನ ಮೂಲಕ ತಾನೇ ನೇಣು ಹಾಕಿಕೊಂಡು ಮೃತನಾಗಿರುತ್ತಾನೆ ವಿನಃ ಬೇರೆ ಯಾವ ಕಾರಣ ಇರುವುದಿಲ್ಲ ಅದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 48 guests online
Content View Hits : 562780
Hackguard Security Enabled