lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2019 >
Mo Tu We Th Fr Sa Su
  2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Tuesday, 01 October 2019
ಪತ್ರಿಕಾ ಪ್ರಕಟಣೆ. ದಿ:01-10-2019

ಪತ್ರಿಕಾ ಪ್ರಕಟಣೆ.

ದಿನಾಂಕ. 01-10-2019.

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಧಾಳಿ

ದಿನಾಂಕ-16-09-2019 ರಂದು ತುಮಕೂರು ತಾಲ್ಲೂಕು ಗೇರಹಳ್ಳಿ ಗ್ರಾಮದ ಬಳಿ ಇರುವ ಒಂದು ಗೋಡನ್ ನಲ್ಲಿ ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಮಧುಸೂಧನ, ಜಿ.ಕೆ ರವರು ಗೇರಹಳ್ಳಿ  ಬಳಿ ಒಂದು ಗೋಡೌನ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 227 ಕ್ವಿಂಟಾಲ್‌ 54 ಕೆಜಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು   ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ  ಮೊ.ನಂ-114/2019 ಕಲಂ 3 & 7 ಇ.ಸಿ. ಆಕ್ಟ್-1955. ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಆರೋಪಿತರುಗಳಾದ ಬೆಂಗಳೂರಿನ ಶ್ರೀನಿವಾಸ  ಕೆ.ಎನ್‌ ಮತ್ತು ಅನ್ಬು ರವರನ್ನು ದಸ್ತಗಿರಿ ಮಾಡಿರುತ್ತೆ. ಆರೋಪಿ ಶ್ರೀನಿವಾಸ್‌ರವರು  ಚಿಕ್ಕಗುಂಡಗಲ್‌ ಗ್ರಾಮದ ಬಳಿ ಇರುವ ಕುಮಾರಸ್ವಾಮಿ ಎಂಬುವವರಿಗೆ ಸೇರಿದ ಶ್ರೀ ಕೇಸರಿ ನಂದನ್‌ ರೈಸ್‌ಮಿಲ್‌ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 212 ಕ್ವಿಂಟಾಲ್‌, 79 ಕೆಜಿ, ಒಟ್ಟು-440 ಕ್ವಿಂಟಾಲ್‌ 33 ಕೆಜಿ ( 44 ಟನ್‌, 33 ಕೆಜಿ ) ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಮಾನತ್ತುಪಡಿಸಿಕೊಂಡಿರುತ್ತೆ.

 

ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಟಿ.ಜೆ. ಉದೇಶ್‌ ಹಾಗೂ ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಹೆಚ್.ಜೆ.ತಿಪ್ಪೇಸ್ವಾಮಿ ರವರ ಮಾರ್ಗದರ್ಶನದಂತೆ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರವರಾದ ಮಧುಸೂಧನ ಜಿ.ಕೆ ಕೋರ ಪೊಲೀಸ್‌ ಠಾಣಾ ಪಿ.ಎಸ್.ಐ ರವರಾದ ಪಿಎನ್‌. ಶೇಷಾದ್ರಿ ಹಾಗೂ ಸಿಬ್ಬಂದಿಯವರಾದ ಎ.ಎಸ್‌.ಐ ಬಾಲಕುಮಾರ, ಸಿ,ಎಸ್, ಪ್ರಸನ್ನಕುಮಾರ್‌, ಶಾಂತಕುಮಾರ್‌, ತಿಪ್ಪೇಸ್ವಾಮಿ ಮತ್ತು ರವಿಕುಮಾರ, ಟಿ ರವರುಗಳು ಈ ಪ್ರಕರಣದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿರುತ್ತಾರೆ. ಇವರುಗಳ ಕಾರ್ಯದಕ್ಷತೆಯನ್ನು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಕೆ. ವಂಸಿಕೃಷ್ಣ, ಐ.ಪಿ.ಎಸ್. ರವರು ಶ್ಲಾಘಿಸಿ ಅಭಿನಂಧಿಸಿರುತ್ತಾರೆ.


ಅಪರಾಧ ಘಟನೆಗಳು 01-10-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 149/2019 ಕಲಂ : 279,337 IPC

ದಿನಾಂಕ 30-09-2019 ರಂದು ರಾತ್ರಿ 07-45 ಗಂಟೆಗೆ ಪಿರ್ಯಾದಿ ರಾಜು ಬಿನ್ ವೆಂಕಟಸ್ವಾಮಿ, 23 ವರ್ಷ, ನಾಯಕ ಜನಾಂಗ, ವ್ಯಾಪಾರ, ಗೊರಗೊಂಡನಹಳ್ಳಿ,  ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 25-09-2019 ರಂದು ನಮ್ಮ ತಂದೆ ವೆಂಕಟಸ್ವಾಮಿ ರವರು ಸೊಪ್ಪಿನ ವ್ಯಾಪಾರ ಮುಗಿಸಿಕೊಂಡು ರಾತ್ರಿ 08-00 ಗಂಟೆ ಸಮಯದಲ್ಲಿ ನಟರಾಜು ರವರ ಅಂಗಡಿ ಮುಂಭಾಗ ಮನೆಗೆ  ಹೋಗಲು ವೈ.ಟಿ ರಸ್ತೆಯನ್ನು ದಾಟುವಾಗ ಯಾರೋ ಒಬ್ಬ ಬೈಕ್ ಚಾಲಕ ತಿಪಟೂರು ಟೌನ್ ಕಡೆಯಿಂದ ಜೋರಾಗಿ ಮತ್ತು ನಿರ್ಲಕ್ಷವಾಗಿ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಮ್ಮ ತಂದೆಯವರಿಗೆ ಡಿಕ್ಕಿ ಹೊಡೆಸಿದ್ದರಿಂದ ರಸ್ತೆ ಮೇಲೆ ಬಿದ್ದ ನಮ್ಮ ತಂದೆಯವರಿಗೆ ತಲೆಯ ಬಲಭಾಗ ಮತ್ತು ಬಲ ಕೈಗೆ ಪೆಟ್ಟು ಬಿದ್ದು ಗಾಯಗೊಂಡವರನ್ನು ಅಲ್ಲಿಯೇ ಇದ್ದ ಗೌತಮ್ ಮತ್ತು ನಂದನ್ ರವರು ನಮ್ಮ ತಂದೆಯವರನ್ನು ಉಪಚರಿಸಿ, ಗೌತಮ್ ರವರು ನನಗೆ ಕರೆ ಮಾಡಿ ತಿಳಿಸಿದ್ದರಿಂದ ನಾನು ತಕ್ಷಣ ಆಕ್ಸಿಡೆಂಟ್ ಆದ ಸ್ದಳಕ್ಕೆ ಬಂದು ಸ್ದಳದಲ್ಲಿದ್ದ ಬೈಕ್ ನಂಬರ್ ‍ನೋಡಲಾಗಿ ಕೆಎ-44-ಆರ್-9180 ನೇ ನಂಬರ್ ನ ಪಲ್ಸರ್ ಬೈಕ್ ಆಗಿರುತ್ತದೆ. ಪೆಟ್ಟು ಬಿದ್ದ ನಮ್ಮ ತಂದೆಯವರನ್ನು ಯಾವುದೋ ಒಂದು ಆಟೋದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ದಿನಾಂಕ 26-09-2019 ರಂದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆ ಕೊಡಿಸಿಕೊಂಡು ಅಲ್ಲಿನ ವೈದ್ಯರ ಸಲಹೆ ಮೇರೆಗೆ ನಮ್ಮ ತಂದೆಯವರನ್ನು ದಿನಾಂಕ 28-09-2019 ರಂದು ವಾಪಸ್ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ಚಿಕಿತ್ಸೆ ಕೊಡಿಸುತ್ತಿರುತ್ತೇವೆ. ನಮ್ಮ ತಂದೆಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನಮ್ಮ ತಂದೆಯವರಿಗೆ ಅಪಘಾತಪಡಿಸಿದ ಕೆಎ-44-ಆರ್-9180 ನೇ ಬೈಕ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ  ಮೊ.ನಂ: 155/2019 ಕಲಂ 379 ಐಪಿಸಿ

ದಿನಾಂಕ: 30-09-2019 ರಂದು ಬೆಳಿಗ್ಗೆ 10-30 ಗಂಟೆಗೆ ಚಂದ್ರಶೇಖರ್ ಕೆ.ಎಸ್ ಬಿನ್ ಶಿವಣ್ಣ, 33 ವರ್ಷ, ಒಕ್ಕಲಿಗರು, ಬೆಂಗಳೂರಿನಲ್ಲಿ ಪ್ರೈವೇಟ್ ಕಂಪನಿಯಲ್ಲಿ ಕೆಲಸ, ಸ್ವಂತ ಊರು-ಕರಿಯಣ್ಣನಪಾಳ್ಯ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, “ನಾನು ಹಾಲಿ ಈಗ್ಗೆ ಸುಮಾರು 10 ವರ್ಷಗಳಿಂದ ಬೆಂಗಳೂರಿನ ತಿಗಳರಪಾಳ್ಯದಲ್ಲಿರುವ ಎಸ್ ಆರ್ ಹೈಡ್ರಾಲಿಕ್ ಸಿಸ್ಟಮ್ ಪ್ರೈವೇಟ್ ಕಂಪನಿಯಲ್ಲಿ ವರ್ಕ್ ಇನ್ ಚಾರ್ಜ್ ಕೆಲಸ ಮಾಡಿಕೊಂಡು ಬೆಂಗಳೂರು ಹೆಗ್ಗನಹಳ್ಳಿಯಲ್ಲಿರುವ ಪುಟ್ಟಮ್ಮ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದು ನಾನು ನನ್ನ ತಂದೆತಾಯಿಯವರಿಗೆ ನೋಡಿಕೊಂಡು ಹೋಗಲು ದಿನಾಂಕ:10-09-2019 ರಂದು ನನ್ನ ಬಾಬ್ತು ಕೆಎ41-ಎಕ್ಸ್-8171 ನೇ ಹೊಂಡಾ ಸಿಬಿ ಶೈನ್ ನಲ್ಲಿ ಬಂದು ನನ್ನ ಕೆಲಸದ ನಿಮಿತ್ತ ದಿನಾಂಕ:14-09-2019 ರಂದು ಬೆಳಿಗ್ಗೆ 08-00 ಗಂಟೆಗೆ ನಮ್ಮ ಗ್ರಾಮವಾದ ಕರಿಯಣ್ಣನಪಾಳ್ಯದಿಂದ ಹೆಬ್ಬೂರು ಗ್ರಾಮಕ್ಕೆ ಬಂದು ನನ್ನ ವಾಹನವನ್ನು ಹೆಬ್ಬೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆವರಣದಲ್ಲಿ ಇರುವ ಮೊಬೈಲ್ ಅಂಗಡಿಯ ಎದುರಿಗೆ ನಿಲ್ಲಿಸಿ ತುಮಕೂರು ಪ್ರಗತಿ ಆಸ್ಪತ್ರೆಗೆ ನನ್ನ ತಂಗಿ ಸುಮಾರವರಿಗೆ ಹೆರಿಗೆ ಆಗಿದ್ದರಿಂದ ನೋಡಿಕೊಂಡು ಬರಲು ಹೋಗಿದ್ದು, ನಂತರ ಇದೇ ದಿನ ಸಂಜೆ 6-00 ಗಂಟೆಗೆ ತುಮಕೂರಿನಿಂದ ವಾಪಸ್ ಹೆಬ್ಬೂರಿಗೆ ಬಂದು ನೋಡಲಾಗಿ ನನ್ನ ಬಾಬ್ತು ದ್ವಿಚಕ್ರ ವಾಹನ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು ನಾನು ಎಲ್ಲಾ ಕಡೆ ವಿಚಾರ ಮಾಡಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಳುವಾಗಿರುವ ನನ್ನಬಾಬ್ತು ಸುಮಾರು 22,000/- ರೂ ಬೆಲೆ ಬಾಳುವ ಕೆಎ41-ಎಕ್ಸ್-8171 ನೇ ಹೊಂಡಾ ಸಿಬಿ ಶೈನ್ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ” ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-156/2019 ಕಲಂ 279,304(ಎ), ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-30/09/2019 ರಂದು ಮಧ್ಯಾಹ್ನ 12-30 ಗಂಟಗೆ ಪಿರ್ಯಾದಿಯಾದ ನರಸಮ್ಮ ಕೋಂ ಗಂಗಯ್ಯ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಬಳ್ಳಗೆರೆ ಕಾಲೋನಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ಯಜಮಾನರಾದ ಗಂಗಯ್ಯ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಕುಣಿಗಲ್ ಗೆ ಕೂಲಿಕೆಲಸಕ್ಕೆ ಹೋಗಿ ವಾಪಸ್ ನಮ್ಮ ಗ್ರಾಮಕ್ಕೆ ಬಂದು ನಿನ್ನೆ ದಿನ ಬಳ್ಳಗೆರೆ ಕಾಲೋನಿಯ ಎದುರಿಗೆ ಇರುವ ಸಣ್ಣಪ್ಪ ಎಂಬುವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ಪೂರಿ ತೆಗೆದುಕೊಂಡು ರಾತ್ರಿ ಸುಮಾರು 7-45 ಗಂಟೆ ಸಮಯದಲ್ಲಿ ಸಣ್ಣಪ್ಪ ರವರ ಅಂಗಡಿ ಕಡೆಯಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದಾಗ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಯಾವುದೋ ಒಂದು ದ್ವಿಚಕ್ರ ವಾಹನದ ಚಾಲಕ ಜೋರಾಗಿ ಓಡಿಸಿಕೊಂಡು ಬಂದು ಅಪಘಾತಪಡಿಸಿಕೊಂಡು ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು. ರಸ್ತೆಯ ಪಕ್ಕದಲ್ಲಿ ಇರುವ ಆಂಜಿನಪ್ಪ ಎಂಬುವರ ಗುಡಿಸಲು ಮನೆಯ ಬಳಿ ಮಾತನಾಡಿಕೊಂಡು ನಿಂತಿದ್ದ ನನ್ನ ಚಿಕ್ಕಪ್ಪನ ಮಗನಾದ ನವೀನ್ ಎಂಬುವರು ನನ್ನ ಯಜಮಾನರನ್ನು ನೋಡಿ ಉಪಚರಿಸಿ ನನಗೆ ವಿಚಾರ ತಿಳಿಸಿದಾಗ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಯಜಮಾನರಿಗೆ ತಲೆಗೆ ರಕ್ತಗಾಯವಾಗಿ ಮೂಗಿನಲ್ಲಿ ಬಾಯಲ್ಲಿ ರಕ್ತಬರುತ್ತಿದ್ದು ಕೈ ಕಾಲುಗಳು, ಎದೆಗೆ ತರಚಿಕೊಂಡು ರಕ್ತಗಾಯಗಳಾಗಿದ್ದು ನವೀನ್ ರವರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಾವು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿ:29-09-2019 ರಂದು ಮಧ್ಯರಾತ್ರಿ ಸುಮಾರು 12-30 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು ನನ್ನ ಯಜಮಾನರಾದ ಗಂಗಯ್ಯ ಬಿನ್ ಲೇಟ್ ಮುತ್ತುರಾಯಿ, 55 ವರ್ಷ, ಎ,ಕೆ ಜನಾಂಗ, ಬಳ್ಳಗೆರೆ ಕಾಲೋನಿ ರವರ ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮೃತಪಟ್ಟಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ಈ ದಿನ ಠಾಣೆಗೆ ಬಂದು ಅಪಘಾತಪಡಿಸಿದ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಹಾಗೂ ತಾವು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಿಕೊಡಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ.156/2019 ಕಲಂ. 279,304(ಎ) ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-30/09/2019 ರಂದು ಮಧ್ಯಾಹ್ನ 12-30 ಗಂಟಗೆ ಪಿರ್ಯಾದಿಯಾದ ನರಸಮ್ಮ ಕೋಂ ಗಂಗಯ್ಯ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಬಳ್ಳಗೆರೆ ಕಾಲೋನಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ಯಜಮಾನರಾದ ಗಂಗಯ್ಯ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಕುಣಿಗಲ್ ಗೆ ಕೂಲಿಕೆಲಸಕ್ಕೆ ಹೋಗಿ ವಾಪಸ್ ನಮ್ಮ ಗ್ರಾಮಕ್ಕೆ ಬಂದು ನಿನ್ನೆ ದಿನ ಬಳ್ಳಗೆರೆ ಕಾಲೋನಿಯ ಎದುರಿಗೆ ಇರುವ ಸಣ್ಣಪ್ಪ ಎಂಬುವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ಪೂರಿ ತೆಗೆದುಕೊಂಡು ರಾತ್ರಿ ಸುಮಾರು 7-45 ಗಂಟೆ ಸಮಯದಲ್ಲಿ ಸಣ್ಣಪ್ಪ ರವರ ಅಂಗಡಿ ಕಡೆಯಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದಾಗ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಯಾವುದೋ ಒಂದು ದ್ವಿಚಕ್ರ ವಾಹನದ ಚಾಲಕ ಜೋರಾಗಿ ಓಡಿಸಿಕೊಂಡು ಬಂದು ಅಪಘಾತಪಡಿಸಿಕೊಂಡು ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು. ರಸ್ತೆಯ ಪಕ್ಕದಲ್ಲಿ ಇರುವ ಆಂಜಿನಪ್ಪ ಎಂಬುವರ ಗುಡಿಸಲು ಮನೆಯ ಬಳಿ ಮಾತನಾಡಿಕೊಂಡು ನಿಂತಿದ್ದ ನನ್ನ ಚಿಕ್ಕಪ್ಪನ ಮಗನಾದ ನವೀನ್ ಎಂಬುವರು ನನ್ನ ಯಜಮಾನರನ್ನು ನೋಡಿ ಉಪಚರಿಸಿ ನನಗೆ ವಿಚಾರ ತಿಳಿಸಿದಾಗ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಯಜಮಾನರಿಗೆ ತಲೆಗೆ ರಕ್ತಗಾಯವಾಗಿ ಮೂಗಿನಲ್ಲಿ ಬಾಯಲ್ಲಿ ರಕ್ತಬರುತ್ತಿದ್ದು ಕೈ ಕಾಲುಗಳು, ಎದೆಗೆ ತರಚಿಕೊಂಡು ರಕ್ತಗಾಯಗಳಾಗಿದ್ದು ನವೀನ್ ರವರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಾವು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿ:29-09-2019 ರಂದು ಮಧ್ಯರಾತ್ರಿ ಸುಮಾರು 12-30 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು ನನ್ನ ಯಜಮಾನರಾದ ಗಂಗಯ್ಯ ಬಿನ್ ಲೇಟ್ ಮುತ್ತುರಾಯಿ, 55 ವರ್ಷ, ಎ,ಕೆ ಜನಾಂಗ, ಬಳ್ಳಗೆರೆ ಕಾಲೋನಿ ರವರ ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮೃತಪಟ್ಟಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ಈ ದಿನ ಠಾಣೆಗೆ ಬಂದು ಅಪಘಾತಪಡಿಸಿದ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಹಾಗೂ ತಾವು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಿಕೊಡಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 21/2019 ಕಲಂ: 174 CL (3)&(4)CRPC

ದಿನಾಂಕ 30-09-2019 ರಂಧು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಗೀತಾ ಕೋಂ ರಮೇಶ್, 40ವರ್ಷ, ಕೂಲಿ ಕೆಲಸ, ನಾಯಕ ಜನಾಂಗ, ದಬ್ಬೆಘಟ್ಟ, ದೊಡ್ಡೆರಿ ಹೋಬಳಿ, ಮಧುಗಿರಿ ತಾ||ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂಧರೆ ಪಿರ್ಯಾದಿಯ ಗಂಡ ರಮೇಶ್ ರವರು ಒಂದು ವರ್ಷದಿಂದ ಡ್ರೈವರ್ ಕೆಲಸ ಮಾಡುತ್ತಿದ್ದು, ಇತ್ತಿಚಿಗೆ ಡ್ರೈವರ್ ಕೆಲಸ ಬಿಟ್ಟು ಮನೆಯ ಹತ್ತಿರ ಒಡಾಡಿಕೊಂಡು ಇದ್ದರು, ದಿನಾಂಕ 29-09-2019 ರಂದು ಬೆಳಿಗ್ಗೆ 11-00 ಗಂಟೆ ಮನೆಯಲ್ಲಿ ಊಟ ಮಾಡಿಕೊಂಡು ಮನೆ ಬಿಟ್ಟು  ಹೋದವರು ವಾಪಸ್ ನೆನ್ನೆ ದಿನ ಮನೆಗೆ ಬಂದಿರುವುದಿಲ್ಲ, ದಿನಾಂಕ 30-09-2019 ರಂದು ಬೆಳಿಗ್ಗೆ ಕಂಬದಹಳ್ಳಿ ಸಮೀಪವಿರುವ ಅಂಜನೇಯ ಸ್ವಾಮಿ ದೇವಾಸ್ಥನದ ಮುಂಬಾಗ ಪಿರ್ಯಾದಿಯ ಗಂಡನಾದ ಮೃತ ಪಟ್ಟಿದ್ದು ವಿಷಯ ತಿಳಿದು ಪಿರ್ಯಾದುದಾರರು ಬಂದು ನೋಡಲಾಗಿ ರಮೇಶ ರವರ ಮೃತ ದೇಹವು ಆಂಜನೇಯ ಸ್ವಾಮಿ ದೇವಾಸ್ಥನದ ಮುಂದಿರುವ ಆಲದ ಮರದ ಕೆಳಗೆ ಇರುವ ಬೆಂಚ್ ಕಲ್ಲಿನ ಮೇಲೆ ಮೃತಪಟ್ಟು ಮಲಗಿರುವ ಸ್ಥಿತಿಯಲ್ಲಿದ್ದು ನಂತರ ತಿಳಿಯಲಾಗಿ ದಿನಾಂಕ 29-09-2019 ರಂದು ಮದ್ಯಾನ್ಹ 2-00 ಗಂಟೆ ಸಮಯದಲ್ಲೂ ಇಲ್ಲಿ ಮಲಗಿರುತ್ತಾರೆಂದು ತಿಳಿದು ಬಂದಿದ್ದು, ಪಿರ್ಯಾದಿಯ ಗಂಡನ ಸಾವಿಗೆ ಕಾರಣವೇನೆಂಬುದು ಗೊತ್ತಿರುವುದಿಲ್ಲ, ಪಿರ್ಯಾದಿ ಗಂಡ ರಮೇಶ್ ರವರ ಸಾವಿನ ಬಗ್ಗೆ ಅನುಮಾನವಿದ್ದು ಆದ್ದರಿಂದ ಈ ಬಗ್ಗೆ ಸ್ಥಳ ಪರಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 93/2019 ಕಲಂ 32,34 ಕೆ.ಇ ಆಕ್ಟ್

ದಿ:30/09/2019 ರಂದು ಬೆಳಿಗ್ಗೆ 10-00 ಗಂಟೆಗೆ ಪಿ.ಐ ರವರು ವಾಪಾಸ್ ಠಾಣೆಗೆ ಬಂದು ಬೆಳಿಗ್ಗೆ 08-30 ಗಂಟೆಗೆ ಸಿಬ್ಬಂದಿಯವರೊಂದಿಗೆ ಠಾಣೆಯನ್ನು ಬಿಟ್ಟು ಚಂದ್ರಗಿರಿ, ಗುಟ್ಟೆ, ಸೊದೇನಹಳ್ಳಿ, ಚಂಬೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮುಂದಿನ ಗ್ರಾಮಗಳ ಕಡೆ ರೌಂಡ್ಸ್ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 09-00 ಗಂಟೆಯಲ್ಲಿ ಬೊಮ್ಮರಸನಹಳ್ಳಿ ಗೇಟ್ ಆಲದಮರದ ಬಳಿ ಬಂದಾಗ ಒಬ್ಬ ಗಂಡಸು ಜೀಪ್ ಬರುವುದನ್ನು ನೋಡಿ ಏನೋ ತುಂಬಿದಂತಹ ಒಂದು ಪ್ಲಾಸ್ಟಿಕ್ ಚೀಲವನ್ನು ನೆಲದಲ್ಲಿ ಬಿಟ್ಟು ಓಡಿ ಪೆಟ್ಟಿಗೆ ಅಂಗಡಿ ಮರೆಯಲ್ಲಿ ತಪ್ಪಿಸಿಕೊಂಡು ಓಡಿ ಹೋದನು. ಸದರಿ ಪ್ಲಾಸ್ಟಿಕ್ ಚೀಲವನ್ನು ಹತ್ತಿರ ಹೋಗಿ ಪರಿಶೀಲಿಸಿದಾಗ ಅದರಲ್ಲಿ 1]180 ML ನ 04 MC DOWELLS ನ ಗಾಜಿನ ಬಾಟೆಲ್ ಗಳು, 2] 180 ML ನ 2 IMPERIAL BLUE ನ ಗಾಜಿನ ಬಾಟಲ್ ಗಳು, 3] 180 ML ನ 19 BAG PIPER ಟೆಟ್ರಾ ಪಾಕೇಟ್ ಗಳು, 4] 180 ML ನ 10 OLD TOVERN ಟೆಟ್ರಾ ಪಾಕೆಟ್, 5] 90 ML ನ 84 ORIGINEL CHOICE ಟೆಟ್ರಾ ಪಾಕೆಟ್ ಗಳಿದ್ದವು. ಮದ್ಯದ ಪಾಕೇಟ್‌ ಗಳಿರುವ ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ತೆಗೆದುಕೊಂಡು ಓಡಿ ಹೋದ ಅಸಾಮಿಯ ಬಗ್ಗೆ ವಿಚಾರ ಮಾಡಲಾಗಿ ಸಜ್ಜೆಹೊಸನಹಳ್ಳಿ ಗ್ರಾಮದ ಚಿಕ್ಕಪ್ಪಯ್ಯ ಎಂದು ಸಜ್ಜೆಹೋಸನಹಳ್ಳಿ ಗ್ರಾಮದ ಮುದ್ದರಾಜು ರವರು ತಿಳಿಸಿದ್ದರ ಮೇರೆಗೆ ಬೆಳಿಗ್ಗೆ 10-00 ಗಂಟೆಗೆ  ವಾಪಾಸ್ ಠಾಣೆಗೆ ಬಂದು ಸ್ಥಳದಿಂದ ತಂದಿದ್ದ ಮಾಲುಗಳನ್ನು ಠಾಣಾಧಿಕಾರಿಗಳಿಗೆ ನೀಡಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದ ಅಸಾಮಿ ಚಿಕ್ಕಪ್ಪಯ್ಯ ಸಜ್ಜೆಹೋನಹಳ್ಳಿ  ಗ್ರಾಮ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸೂಚಿಸಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 64 guests online
Content View Hits : 562794
Hackguard Security Enabled