lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2019 >
Mo Tu We Th Fr Sa Su
  1 2 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Thursday, 03 October 2019
ಅಪರಾಧ ಘಟನೆಗಳು 03-10-19

ಹೆಬ್ಬೂರು  ಪೊಲೀಸ್ ಠಾಣಾ  ಮೊ ನಂ-161/2019 ಕಲಂ 87 ಕೆ.ಪಿ.ಆಕ್ಟ್

ದಿನಾಂಕ 02-10-2019 ರಂದು ಹೆಬ್ಬೂರು ಪೊಲೀಸ್ ಠಾಣೆಯ ಪಿ,ಎಸ್,ಐ ಸುಂದರ ರವರು ಮದ್ಯಾಹ್ನ 3-30 ಗಂಟೆಗೆ  ಠಾಣಾ ಸಿ.ಪಿಸಿ-1038 ನಸರುದ್ದೀನ್ ಸಾಸನೂರ್ ರವರ ಮೂಲಕ ಕಳುಹಿಸಿಕೊಟ್ಟ ವರದಿ ಅಂಶವೇನೆಂದರೆ, ದಿನಾಂಕ 02-10-2019 ರಂದು ನಾನು ಹಾಗೂ ಸಿಬ್ಬಂದಿಗಳು ಠಾಣಾ ಸರಹದ್ದಿನ ಚೋಳಂಬಳ್ಳಿ, ಕಾಳಿಂಗಯ್ಯನಪಾಳ್ಯ, ಅರೇಹಳ್ಳಿ, ಬಸವೇಗೌಡನಪಾಳ್ಯ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಾಸಲು ಕಡೆಗೆ ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ, ನನಗೆ ಬಂದ ಖಚಿತ ಮಾಹಿತಿ ಏನೆಂದರೆ, ಸಾಸಲು ಗ್ರಾಮದ ಕೆರೆಪಕ್ಕ ಇರುವ ಫಾರೆಸ್ಟ್‌ ನಲ್ಲಿ ಯಾರೋ ಸುಮಾರು 10 ರಿಂದ 15 ಜನ ಆಸಾಮಿಗಳು ಗುಂಪು ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿ ಕಟ್ಟುಕೊಂಡು ಅಂದರ್ ಬಾಹರ್ ಎಂಬಾ ಇಸ್ಪೀಟು ಜೂಜಾಟವಾಡುತ್ತಿರುತ್ತಾರೆಂತಾ ಬಂದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪು ಕಟ್ಟಿಕೊಂಡು ಪಕ್ಕದಲ್ಲಿ ದ್ವಿಚಕ್ರ ವಾಹನಗಳನ್ನು ಹಾಗೂ ಆಟೋವನ್ನು ನಿಲ್ಲಿಸಿಕೊಂಡು ಜೂಜಾಟವಾಡುತ್ತಿರುವುದು ನಿಜವಾಗಿದ್ದು, ನೀವು ಎನ್.ಸಿ.ಆರ್.ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ಚಿಕ್ಕನಾಯಕನಹಳ್ಳಿ ಪೊಲೀಸ್ ಮೊ.ನಂ. 122/2019 ಕಲಂ 279, 337 ಐಪಿಸಿ.

ದಿನಾಂಕ: 02-10-2019 ರಂದು ಬೆಳಿಗ್ಗೆ 06.30 ಗಂಟೆಗೆ ಪಿರ್ಯಾದಿ ಅಂಜಿಲಯ್ಯ ಬಿನ್ ಲೇಟ್ ರಾಮಯ್ಯ, 41 ವರ್ಷ, ಪರಿಶಿಷ್ಟ ಜಾತಿ, ಸಹಶಿಕ್ಷಕರು, ಜೆಡ್.ಪಿ.ಹೆಚ್.ಎಸ್. ಧರೂರು, ಜೋಗಲಾಂಭ, ಗದ್ವಾಲ್ ಜಿಲ್ಲೆ, ತೆಲಂಗಾಣ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು 7 ವರ್ಷಗಳಿಂದ ತೆಲಂಗಾಣ ರಾಜ್ಯದ ಜಿಲ್ಲಾ ಪಂಚಾಯತ್ ಹೈಸ್ಕೂಲ್ ಧರೂರಿ ನಲ್ಲಿ ಕೆಲಸ ಮಾಡಿಕೊಂಡಿದ್ದು, ನಮ್ಮ ಶಾಲೆಯಿಂದ ಕರ್ನಾಟಕದ ಕಡೆ ಶೈಕ್ಷಣಿಕ ಪ್ರವಾಸ ಹೋಗಲು ದಿನಾಂಕ: 25/09/2019 ರಂದು ಕೆಎ01, ಎಎ9635 ಮತ್ತು ಕೆಎ01, ಎಎಫ್ 2425 ನಂಬರಿನ 02 ಖಾಸಗಿ ಬಸ್ಸುಗಳನ್ನು ಮಾಡಿಕೊಂಡು ಮಕ್ಕಳು ಮತ್ತು 11 ಜನ ಶಿಕ್ಷಕರು ಸೇರಿ 100 ಜನ ದಿನಾಂಕ: 25/09/2019 ರಂದು ರಾತ್ರಿ ಧರೂರು ಬಿಟ್ಟು ಕರ್ನಾಟಕದ ಪ್ರವಾಸಿ ಸ್ಥಳಗಳನ್ನು ನೋಡಿಕೊಂಡು ದಿನಾಂಕ: 01/10/2019 ರಂದು ಮೈಸೂರಿಗೆ ಬಂದು ಮೈಸೂರು ನೋಡಿಕೊಂಡು ಕೆ.ಆರ್.ಎಸ್. ನಿಂದ ರಾತ್ರಿ 11.30 ಕ್ಕೆ ಬಿಟ್ಟು ವಾಪಸ್ಸು ಹೋಗಲು ಎನ್.ಹೆಚ್. 150ಎ ರಸ್ತೆ ಮೂಲಕ ನಾಗಮಂಗಲ, ತುರುವೇಕೆರೆ ಮಾರ್ಗವಾಗಿ ಕೆಬಿಕ್ರಾಸ್-ಚಿಕ್ಕನಾಯಕನಹಳ್ಳಿ ಮಧ್ಯೆ ದಬ್ಬೇಘಟ್ಟ ಕ್ರಾಸ್ ಬಳಿ ನಾನು ಇದ್ದ ಕೆಎ01, ಎಎಫ್ 2425 ಬೆಳಗಿನ ಜಾವ ಸುಮಾರು 02.30 ಗಂಟೆಯ ಸಮಯದಲ್ಲಿ (ದಿನಾಂಕ: 02/10/2019 ರಂದು) ಬಸ್ಸಿನ ಚಾಲಕ ಬಸ್ಸನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ರಸ್ತೆ ಕಾಮಗಾರಿ ಸಂಬಂಧ ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಮುಚ್ಚಿ ಬಲಭಾಗಕ್ಕೆ ಹೋಗಲು ಮಾರ್ಗಸೂಚಿ ಸೂಚನೆಯ ಫಲಕ ಇದ್ದರೂ ಇದನ್ನು ನೋಡದ ಚಾಲಕ ಅಜಾಗರೂಕತೆಯಿಂದ ಬಸ್ಸನ್ನು ಬಲಭಾಗಕ್ಕೆ ತಿರುಗಿಸಿರುವುದರಿಂದ ಬಸ್ಸು ಟಾರು ರಸ್ತೆ ಮತ್ತು ಮಣ್ಣಿನ ರಸ್ತೆ ಮಧ್ಯ ಕಂದಕಕ್ಕೆ ಹೋಗಿ ಎಡ ಮಗ್ಗುಲಾಗಿ ವಾಲಿ ಅಪಘಾತವಾಗಿರುತ್ತದೆ. ಈ ಅಪಘಾತದಲ್ಲಿ ಇದೇ ಬಸ್ಸಿನಲ್ಲಿದ್ದ ನನಗೆ ಎಡ ಕಿವಿಗೆ ರಕ್ತಗಾಯವಾಗಿರುತ್ತದೆ ಹಾಗೂ ಬಸ್ಸಿನಲ್ಲಿದ್ದ ಸಹಶಿಕ್ಷಕಿಯಾದ ಅನೂಷ ಕೋಂ ವೆಂಕಟೇಶ, 36 ವರ್ಷ ಇವರಿಗೆ ತಲೆಯ ಎಡಭಾಗಕ್ಕೆ ರಕ್ತಗಾಯವಾಗಿರುತ್ತದೆ. ಬಸ್ಸಿನಲ್ಲಿದ್ದ ಪ್ರವೀಣಕುಮಾರ ಹೀರಾಲಾಲ್ ಇವರಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಮತ್ತು ಬಸ್ಸಿನಲ್ಲಿದ್ದ ಸುಮಾರು 40 ಮಕ್ಕಳ ಪೈಕಿ ಶಿಲ್ಪ ಬಿನ್ ನರಸಿಂಹಲು, 16 ವರ್ಷ, ಸುಮಿತ್ರ ಬಿನ್ ಗೋವಿಂದು, 15 ವರ್ಷ ಮತ್ತು ಅನುಷ ಬಿನ್ ನಾಗೇಂದ್ರ, 16 ವರ್ಷ ಎಂಬ ಮೂವರು ವಿದ್ಯಾರ್ಥಿನಿಯರಿಗೆ ಸಹ ಗಾಯಗಳಾಗಿರುತ್ತವೆ. ತಕ್ಷಣ ಅಪಘಾತ ವಿಚಾರವನ್ನು ನಮ್ಮ ಮುಂದೆ ಹೋಗುತ್ತಿದ್ದ ಕೆಎ01, ಎಎ 9635 ಬಸ್ಸಿನಲ್ಲಿದ್ದ ಮುಖ್ಯ ಶಿಕ್ಷಕರಾದ ಪ್ರತಾಪ ರೆಡ್ಡಿ ಇವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದು, ಅವರು ಬಂದು ಇತರೆಯವರೊಂದಿಗೆ ಸೇರಿ ನಮ್ಮನ್ನು ಬಸ್ಸಿನಿಂದ ಕೆಳಗೆ ಕರೆದುಕೊಂಡು ಬಂದು ಮುಂದಿನ ಬಸ್ಸಿನಲ್ಲಿ ಚಿನಾಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು. ಈ ಅಪಘಾತದಿಂದ ಬಸ್ಸು ಸಹ ಜಖಂ ಆಗಿರುತ್ತದೆ. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಬಸ್ಸಿನ ಚಾಲಕ ಶಾಲಂ ಖಾನ್ ಬಿನ್ ಲೇಟ್ ಮಹಮದ್ ಖಾನ್, 50 ವರ್ಷ, ಮುಸ್ಲಿಂ ಜನಾಂಗ, ಕೋರ್ಟ್ ತಲ್ಲಾರ್, ರಾಯಚೂರು ಟೌನ್ ಇವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಮತ್ತು ಚಿಕಿತ್ಸೆ ಪಡೆದುಕೊಂಡು ಬಂದು ತಡವಾಗಿ ದೂರು ನೀಡಿರುತ್ತೇನೆ ಎಂದು ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಮೊ.ನಂ.122/2019 ಕಲಂ : 279,337 ಐ.ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ  ಮೊ.ನಂ: 160/2019 ಕಲಂ 323 324 504 506 ರೆ/ವಿ 34  ಐಪಿಸಿ

ದಿನಾಂಕ: 02-10-2019 ರಂದು ಸಂಜೆ 05-00 ಗಂಟೆಗೆ ಜಯಲಕ್ಷ್ಮೀ ಕೋಂ ರಾಜಣ್ಣ, 39 ವರ್ಷ, ಕುರುಬ ಜನಾಂಗ, ಮನೆಕೆಲಸ, ಎಸ್,ಎನ್ ಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕ್ & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ "ನನಗೆ ಮದುವೆಗೆ ಮುಂಚೆಯೇ ಎಸ್,ಎನ್‌ ಪಾಳ್ಯ ಗ್ರಾಮದಲ್ಲಿರುವ ಸರ್ವೇ ನಂಬರ್ 45/1 ಹಾಗೂ 45/2 ರಲ್ಲಿ ತಾಯಿಯಾದ ಲಕ್ಷ್ಮೀದೇವಮ್ಮ ರವರ ಹೆಸರಿನಲ್ಲಿರುವ ಶೀಟಿನ ಮನೆಯಿದ್ದು, ಅದರಲ್ಲಿ ನನಗೆ ಸರ್ವೇ ನಂಬರ್ 45/2 ರಲ್ಲಿರುವ ಮನೆಯನ್ನು ಗ್ರಾಮದ ಪ್ರಮುಖರು ಮತ್ತು ಉಪತಹಸೀಲ್ದಾರ್‌ ರವರು ಸೇರಿ 2017 ನೇ ಇಸವಿಯಲ್ಲಿ ನನಗೆ ಭಾಗ ನೀಡಿದ್ದರು. ನಂತರ ನನಗೆ 2017 ನೇ ಇಸವಿಯಲ್ಲಿ ಜೂನ್‌ ತಿಂಗಳಿನಲ್ಲಿ ನನಗೆ ಸಿದ್ದಣ್ಣನಪಾಳ್ಯ ಗ್ರಾಮದ ವಾಸಿ ಚಿಕ್ಕಯ್ಯ ರವರ ಮಗನಾದ ರಾಜಣ್ಣ ಎಂಬುವರೊಂದಿಗೆ ಮದುವೆಯಾಗಿದ್ದು, ಮದುವೆಯಾದ 03 ತಿಂಗಳ ನಂತರ ನಾನು ಗರ್ಭಿಣಿಯಾಗಿದ್ದು, ನನ್ನ ಗಂಡ ನನ್ನ ಮೇಲೆ ಅನುಮಾನಪಟ್ಟು ನೀನು ಗರ್ಭಿಣಿಯಾಗಿರುವ ಮಗು ನನ್ನದಲ್ಲ ಎಂದು ನನ್ನನ್ನು ಬಿಟ್ಟು ಹೋಗಿರುತ್ತಾನೆ. ಈ ವಿಚಾರವಾಗಿ ನಾನು ನನ್ನ ಗಂಡನ ಮೇಲೆ ನ್ಯಾಯಾಲಯದಲ್ಲಿ ಕೇಸು ಹಾಕಿಕೊಂಡಿರುತ್ತೇನೆ. ಅಂದಿನಿಂದ ನಾನು ತುಮಕೂರಿನ ಹಾಸ್ಟಲ್‌ ನಲ್ಲಿ ವಾಸವಾಗಿದ್ದು, 2018 ನೇ ಸಾಲಿನ ಏಪ್ರಿಲ್ ತಿಂಗಳಿನಲ್ಲಿ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೇನೆ. ನಂತರ 2019 ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ನಾನು ನನಗೆ ಭಾಗ ಬಂದಿದ್ದ ಮನೆಗೆ ಬಂದು ವಾಸವಾಗಿದ್ದೆನು.  ಅಂದಿನಿಂದ ನನ್ನ ತಂದೆ ರಾಜಣ್ಣ ಮತ್ತು ನನ್ನ ತಮ್ಮ ರಮೇಶ ರವರು ನಿನ್ನ ಗಂಡನ ಮನೆಗೆ ಹೋಗು, ನಿನಗೆ ನಮ್ಮ ಆಸ್ತಿಯಲ್ಲಿ ಯಾವುದೇ ಭಾಗ ನೀಡುವುದಿಲ್ಲ ಎಂದು ತೊಂದರೆ ನೀಡುತ್ತಿದ್ದರು. ಅದರಂತೆ ದಿನಾಂಕ 01-10-2019 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿ ಇರುವಾಗ್ಗೆ, ನನ್ನ ತಂದೆ ರಾಜಣ್ಣ ರವರು ಕುಡಿದು ಬಂದು ನನ್ನ ಮಗುವನ್ನು ಎತ್ತಿಕೊಂಡು ನನಗೆ ಹೊಡೆಯಲು ಪ್ರಯತ್ನಿಸಿ ಗಲಾಟೆ ಮಾಡಿರುತ್ತಾರೆ. ಹಾಗೂ ನಾನಿರುವ ವಾಸದ ಮನೆಗೆ ಬೀಗ ಹಾಕಿ, ಮನೆಯಿಂದ ಆಚೆ ಹಾಕಿ ನನ್ನ ತಂದೆ ರಾಜಣ್ಣ, ನನ್ನ ತಮ್ಮ ರಮೇಶ, ನನ್ನ ಅತ್ತಿಗೆ ಅಶ್ವಿನಿ ಮತ್ತು ಅಶ್ವಿನಿ ರವರ ತಾಯಿ ಮಂಜುಳ ಎಲ್ಲರು ಸೇರಿ ನನಗೆ ಸೂಳೆ ಮುಂಡೆ, ಹಾದರಗಿತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ನಂತರ ಈ ದಿನ ದಿನಾಂಕ 02-10-2019 ರಂದು ಸಾಯಂಕಾಲ ಸುಮಾರು 04-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯನ್ನು ಸ್ವಚ್ಚ ಮಾಡುತ್ತಿರುವಾಗ್ಗೆ, ನನ್ನ ತಂದೆ ರಾಜಣ್ಣ ರವರು ಬೆನ್ನಿಗೆ ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಏಕಾಏಕಿ ಒಂದು ಹುಲ್ಲು ಕೀಳುವ ಕುಡುಗೋಲಿನಿಂದ ನನ್ನ ಬಲಕೈಗೆ ಹೊಡೆದು ನೋವು ಮಾಡಿ, ನನ್ನ ಬೆನ್ನಿಗೆ ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಆದ್ದರಿಂದ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಕೊಲೆ ಬೆದರಿಕೆ ಹಾಕಿರುವ ನನ್ನ ತಂದೆ ರಾಜಣ್ಣ, ರಮೇಶ, ಅಶ್ವಿನಿ ಮತ್ತು ಮಂಜುಳ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ತಿರುಮಣಿ ಪೊಲೀಸ್ ಠಾಣೆಯ  ಠಾಣಾ ಮೊ.ನಂ-49/2019, ಕಲಂ-32(3) ಕೆ..ಆಕ್ಟ್

ತಿರುಮಣಿ ಪೊಲೀಸ್ ಠಾಣೆಯ ಪಿ.ಎಸ್.ಐ-ರಾಮಕೃಷ್ಣಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ರಿಪೋರ್ಟ್ ಏನೆಂದರೆ, ನನಗೆ ದಿನಾಂಕ:02.10.2019 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ್ಗೆ ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ, ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಸುಬ್ಬರಾಯುಡು ಬಿನ್ ಲೇಟ್ ಚೌಡಪ್ಪ ಎಂಬುವರು ಸಾರ್ವಜನಿಕ ಸ್ಥಳವಾದ ಆತನ ಪೆಟ್ಟಿಗೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ  ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆಂತ  ಮಾಹಿತಿ ಮೇರೆಗೆ ಬೆಳಗ್ಗೆ 9:00 ಗಂಟೆಯಲ್ಲಿ ಪಂಚರೊಂದಿಗೆ ನಾನು ಇಲಾಖಾ ಜೀಪ್ ಸಂಖ್ಯೆ:-KA-06-G-383  ರಲ್ಲಿ ಸಿಬ್ಬಂಧಿಗಳಾದ  ಪಿ.ಸಿ-526 ಗಂಗಾಧರ್ ಜಿನ್ನಾಪುರ , ಮುತ್ತಪ್ಪ ಸೂನ್ನದ-ಪಿ.ಸಿ-698, ಕೃಷ್ಣಕುಮಾರ್ ಬಿ- ಪಿಸಿ-562 ರವರೊಂದಿಗೆ ಹೋಗಿ ವೆಂಕಟಮ್ಮನಹಳ್ಳಿ ಗ್ರಾಮದ ವಾಸಿಯಾದ ಸುಬ್ಬರಾಯುಡು ಎಂಬುವರ ಪೆಟ್ಟಿಗೆ ಅಂಗಡಿ  ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ  ನಾಲ್ಕಾರು  ಜನರು ಮದ್ಯ ಸೇವನೆ ಮಾಡುತ್ತಾ  ಕುಳಿತಿದ್ದು, ಪೊಲೀಸ್ ಜೀಪ್ ಬಂದಿದ್ದನ್ನು ನೋಡಿ ಮದ್ಯದ  ಪ್ಯಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದರು. ನಂತರ ಮದ್ಯಸೇವನೆ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟ ಸುಬ್ಬರಾಯುಡುರವರನ್ನು  ಈ ಬಗ್ಗೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಡಲು  ಪರವಾನಗಿ/ಅನುಮತಿ  ಇದೆಯೇ ಎಂದು  ಕೇಳಲಾಗಿ ಯಾವುದೂ ಇಲ್ಲವೆಂದು ತಿಳಿಸಿದ ನಂತರ  ಆಸಾಮಿಯ ಪೂರ್ಣ ವಿಳಾಸ ಕೇಳಲಾಗಿ ಸುಬ್ಬರಾಯುಡು ಬಿನ್ ಲೇಟ್ ಚೌಡಪ್ಪ,35 ವರ್ಷ, ಹರಿಜನರು,ಅಂಗಡಿ ವ್ಯಾಪಾರ,ವೆಂಕಟಮ್ಮನಹಳ್ಳಿ ಗ್ರಾಮ, ನಾಗಲಮಡಿಕೆ ಹೋಬಳಿ, ಪಾವಗಡ ತಾಲ್ಲೂಕು ಎಂದು ತಿಳಿಸಿದ್ದು,ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ಗೊತ್ತಿರುವುದಿಲ್ಲ ಅಂತ ತಿಳಿಸಿರುತ್ತಾನೆ.ನಂತರ ಆತನನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ  ಮದ್ಯದ  ಪಾಕೆಟ್  ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ 180 ಎಂ.ಎಲ್ ನ ಮೂರು OLD TAVERN WHISKY ಪಾಕೆಟ್ ಗಳಾಗಿದ್ದು, ಇವುಗಳ ಬೆಲೆ ತಲಾ ರೂ.74.13 ಪೈಸೆ ಆಗಿರುತ್ತೆ. ಮೂರಕ್ಕೆ ಒಟ್ಟು 219 ರೂ.39 ಪೈಸೆ ಆಗಿರುತ್ತೆ. ಮತ್ತು ಮೂರು ಪ್ಲಾಸ್ಟಿಕ್ ಲೋಟಗಳಿದ್ದು, ಇವುಗಳೆಲ್ಲವನ್ನೂ ಪಂಚರ ಸಮಕ್ಷಮ ಪಂಚನಾಮೆ ಮುಖೇನ ಅಮಾನತ್ತುಪಡಿಸಿಕೊಂಡಿರುತ್ತೆ. ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ಮಾಲು ಹಾಗೂ ಪಂಚನಾಮೆಯೊಂದಿಗೆ ವಾಪಸ್ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ವರದಿ ಪಡೆದು ಠಾಣಾ ಮೊ.ನಂ-49/2019, ಕಲಂ-32(3) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ತುಮಕೂರು ಗ್ರಾಮಾಂತರ ಠಾಣೆ  213/2019 457 ,380 ಐಪಿಸಿ

ದಿನಾಂಕ:02-10-2019 ರಂದು ಸಂಜೆ 6-30 ಗಂಟೆಗೆ ನೂರುಲ್ಲಾ ಬಿನ್ ಲೇಟ್ ಸೈಯದ್ ಮೊಹೀದ್ದೀನ್ , 35 ವರ್ಷ, ಮುಸ್ಲಿಂ ಜನಾಂಗ, ಬಟ್ಟೆ ವ್ಯಾಪಾರ, ಶಾಂತೇಶ್ವರ ದೇವಸ್ಥಾನದ ಹತ್ತಿರ, ಉರ್ದುಸ್ಕೂಲ್ ರಸ್ತೆ , ಗೂಳೂರು, ತುಮಕೂರು ತಾಲ್ಲೂಕು ರವರು ನೀಡಿದ  ದೂರಿನ ಅಂಶವೇನೆಂದರೆ ದಿನಾಂಕ 01/10/2019 ರಂದು ಬೆಂಗಳೂರಿನಲ್ಲಿರುವ  ನನ್ನ ಚಿಕ್ಕಪ್ಪ ಅಬ್ದುಲ್ ಮಜೀದ್ ರವರಿಗೆ ಉಷಾರಿಲ್ಲದ ಕಾರಣ ನೋಡಿಕೊಂಡು ಬರಲು ನಾನು ಮತ್ತು ನಮ್ಮ ಕುಟುಂಬದವರು ಮದ್ಯಾಹ್ನ 12-00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೆವು, ನಂತರ ದಿನಾಂಕ 02/10/2019 ರಂದು ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನನ್ನ ಅಣ್ಣನ ಮಗಳಾದ ತಂಜಿಯ ರವರು ನನಗೆ ಪೋನ್ ಮಾಡಿ ನಿಮ್ಮ ಮನೆಯ ಕಿಟಕಿ ಕಂಬಿಯನ್ನು ಯಾವುದೋ ಆಯುಧದಿಂದ ಬೆಂಡ್ ಮಾಡಿ ತೆಗೆದು ಹಾಕಿ ಯಾರೋ ಕಳ್ಳರು ಮನೆಯೊಳಗೆ ಹೋಗಿ ಮನೆಯಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ವಿಚಾರ ತಿಳಿಸಿದರು ಕೂಡಲೆ ನಾವುಗಳು ಬೆಂಗಳೂರಿನಿಂದ ಹೊರಟು ಗೂಳೂರಿನ ನಮ್ಮ ಮನೆಗೆ ಸುಮಾರು 3-30 ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಸಂದಿಯಲ್ಲಿರುವ ಹಾಲ್ ನ ಕಿಟಕಿಯ ಕಂಬಿಗಳನ್ನು ಯಾರೋ ಕಳ್ಳರು ಬೆಂಡ್ ಮಾಡಿ  ಯಾರೋ ಕಳ್ಳರು ನಮ್ಮ ಮನೆಯೊಳಗೆ ಹೋಗಿ ನಮ್ಮ ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿ ಹಾಗೂ ಮನೆಯಲ್ಲಿದ್ದ ಬೀರುಗಳ ಮೇಲೆ ಇಟ್ಟಿದ್ದ  ಬೀಗದ ಕೀಗಳನ್ನು ತೆಗೆದುಕೊಂಡು ಬೀಗ  ತೆಗೆದು ಬೀರುಗಳ ಲಾಕರ್ ನ್ನು ಮೀಟಿ ತೆಗೆದು ಬೀರುಗಳಲ್ಲಿಟ್ಟಿದ್ದ 1] ಚಿನ್ನದ  ರಾಜ್ ಕೋಟ್ ರಿಂಗ್ ಸುಮಾರು 2 ½ ಗ್ರಾಂ ,2] ಚಿನ್ನದ  ಪ್ಯಾನ್ಸಿ ಲಚ್ಚಾ  ಸುಮಾರು 25  ½ ಗ್ರಾಂ, 3] ಚಿನ್ನದ ಉಂಗುರ ಸುಮಾರು 6 ಗ್ರಾಂ, 4] ಚಿನ್ನದ ಹಾರ ಸುಮಾರು 46 ಗ್ರಾಂ, 5]ಚಿನ್ನ ಕೊರಳ ಚೈನ್ ಸುಮಾರು 8 ½ ಗ್ರಾಂ, ಮತ್ತು 6] ಚಿನ್ನದ ಸಾದಾ ಉಂಗುರ ಸುಮಾರು 2 ½ ಗ್ರಾಂ  ನ ಚಿನ್ನದ ವಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಚಿನ್ನದ ವಡವೆಗಳು ಯಾವುದೂ ಸಹ 916 ಆಗಿರುವುದಿಲ್ಲ. ಇವುಗಳ  ಅಂದಾಜು ಬೆಲೆ 1,20,000 ರೂ ಆಗಿರುತ್ತೆ.. ಇವುಗಳನ್ನು ಯಾರೋ ಕಳ್ಳರು ದಿನಾಂಕ 01/10/2019 ರಂದು ರಾತ್ರಿ ದಿನಾಂಕ 02/10/2019 ರಂದು ಬೆಳಗಿನ ಜಾವದವರೆಗಿನ ರಾತ್ರಿ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ 213/2019 ಕಲಂ 457,380 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 56 guests online
Content View Hits : 562733
Hackguard Security Enabled