lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2019 >
Mo Tu We Th Fr Sa Su
  1 2 3 4 5 6
7 8 10 11 12 13
14 15 16 17 18 19 20
21 22 23 24 25 26 27
28 29 30 31      
Wednesday, 09 October 2019
ಅಪರಾಧ ಘಟನೆಗಳು 09-10-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 152/2019 u/s 457,380 IPC

ದಿನಾಂಕ:08/10/2019 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಶಾಹೀನ ಕೋಂ ಸೈಯದ್ ಶಬ್ಬೀರ್, 42ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ವಾಸ ಎಂ.ಆರ್.ರಾಮಣ್ಣ ಲೇಔಟ್, ಗಾಂದೀನಗರ , ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 07/10/2019 ರಂದು ನನ್ನ ಗಂಡ ಮತ್ತು ಮಗ ಸಂಬಂದಿಕರ ಊರಾದ ಹೊನ್ನವಳ್ಳಿಗೆ ಹೋಗಿ ಅಲ್ಲೆ ಉಳಿದುಕೊಂಡಿದ್ದು, ನಾನು ಮನೆಯಲ್ಲಿ ಒಬ್ಬಳೆ ಮಲಗಲು ಭಯ ಆಗಿದ್ದರಿಂದ 10-30 ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ನಮ್ಮ ನಾದಿನಿ ಮನೆಗೆ ಹೋಗಿ ಮಲಗಿದ್ದು, ಈ ದಿನ ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಮನೆ ಬಳಿ ಬಂದಾಗ ಮನೆ ಬಾಗಿಲು ತೆಗೆದಿದ್ದು, ಗಾಬರಿಯಾಗಿ ಒಳಗೆ ಹೋಗಿ ನೋಡಿದಾಗ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಪ್ರವೇಶ ಮಾಡಿ ಬೀರುವಿಗೆ ಬೀಗ ಹಾಕಿರಲಿಲ್ಲ. ಬೀರುವಿನಲ್ಲಿದ್ದ 8 ಗ್ರಾಂ ಚಿನ್ನದ ರಿಂಗ್, 3 ಗ್ರಾಂ ಚಿನ್ನದ ಓಲೆ, 3 ಗ್ರಾಂ 2 ಚಿನ್ನದ ಉಂಗುರ ಹಾಗೂ 2 ಗ್ರಾಂ ಚಿನ್ನದ 2 ಉಂಗುರ, 9000 ಸಾವಿರ ಮೌಲ್ಯದ ಒಂದು ಚಿನ್ನದ ಸರ ಇದ್ದು, ಇವುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಗೆ ನುಗ್ಗಿ ಕಳವು ಮಾಡಿಕೊಂಡು   ಹೋಗಿರುತ್ತಾರೆ. ಈ ಒಡವೆಗಳನ್ನು ಈ ಹಿಂದೆ ಮಾಡಿಸಿದ್ದು, ಬೆಲೆಯನ್ನು  ತಿಳಿದು ನಂತರ ತಿಳಿಸಲಾಗುವುದು ಈ ಮೇಲ್ಕಂಡ 16 ಗ್ರಾಂ ಚಿನ್ನದ ಒಡವೆಗಳು ಹಾಗೂ ಚಿನ್ನದ ಸರದ ಅಂದಾಜು ಬೆಲೆ ಸುಮಾರು 24000/- ರೂ ಆಗಬಹುದು.  ಒಡವೆಗಳನ್ನು ಕಳವು ಮಾಡಿರುವ  ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ. 152/2019 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ  ಯು.ಡಿ.ಆರ್ ನಂ. 41/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ: 08/10/2019 ರಂದು ಬೆಳಿಗ್ಗೆ 11-45 ಗಂಟೆಯಲ್ಲಿ ತುಮಕೂರು ಟೌನ್‍, ಮಾರುತಿನಗರ ವಾಸಿ ರಾಮಕೃಷ್ಣ ಬಿನ್ ವಡ್ಡೆಹನುಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ತುಮಕೂರಿನಲ್ಲಿ ನೀರಿನ ಪೈಪ್‍ ಲೈನ್ ತೆಗೆಯುವ ಕೂಲಿ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು ಒಂದೂವರೆ ತಿಂಗಳಿನಿಂದ ಮಾರುತಿನಗರ ಕೊನೆಯಲ್ಲಿ ಶೆಡ್‍ ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದು, ದಿನಾಂಕ: 28/09/2019 ರಂದು ನಮ್ಮ ತಂದೆ ವಡ್ಡೆಹನುಮಪ್ಪ ರವರು ನಮ್ಮನ್ನು ನೋಡಿಕೊಂಡು ಹೋಗಲೆಂದು ಮಾರುತಿನಗರದಲ್ಲಿರುವ ಶೆಡ್ಡಿಗೆ ಬಂದಿದ್ದರು.  ದಿನಾಂಕ: 03/10/2019 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸಣ್ಣನಾಗಮ್ಮ ಕೂಲಿಕೆಲಸಕ್ಕೆ ಹೋಗಿದ್ದಾಗ ವಡ್ಡೆಹನುಮಪ್ಪ ರವರು ನಮ್ಮ ಶೆಡ್ ನಲ್ಲಿಯೇ ಉಳಿದುಕೊಂಡಿದ್ದರು.  ಮದ್ಯಾಹ್ನ 2-00 ಗಂಟೆಯಲ್ಲಿ ಪಕ್ಕದ ಶೆಡ್ಡಿನಲ್ಲಿ ವಾಸವಾಗಿರುವ ಕೃಷ್ಣಪ್ಪ ಪೋನ್ ಮಾಡಿ ಶೆಡ್‍ ಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುತ್ತೆ ತಿಳಿಸಿದ್ದು, ತಕ್ಷಣ ನಾವಿಬ್ಬರೂ ಬಂದು ನೋಡಿದಾಗ ಶೆಡ್ ಅರ್ಧ ಬರ್ಧ ಸುಟ್ಟು ಹೋಗಿದ್ದು, ನಮ್ಮ ತಂದೆಗೆ ಸುಟ್ಟಗಾಯಗಳಾಗಿದ್ದವು.  ಹಾಗೂ ಪಕ್ಕದ ಶೆಡ್ ನಲ್ಲಿದ್ದ ನಮ್ಮ ಸಂಬಂಧಿ ಇಂದಮ್ಮ @ ಇಂದು ಗೆ ಸುಟ್ಟಗಾಯಗಳಾಗಿದ್ದು, ಇಬ್ಬರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಘಟನೆ ಬಗ್ಗೆ ನಮ್ಮ ತಂದೆಯವರನ್ನು ವಿಚಾರಿಸಿದಾಗ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನಾನು ಮತ್ತು ಇಂದಮ್ಮ ಶೆಡ್‍ ನಲ್ಲಿ ಅಡುಗೆ ಮಾಡಿಕೊಳ್ಳೋಣವೆಂದು ಸ್ಟೋವ್ ನ್ನು ಹಚ್ಚಲು ಹೋದಾಗ ಹೇಗೋ ಆಕಸ್ಮಿಕವಾಗಿ ಗ್ಯಾಸ್ ಸ್ಟೋವ್ ಹತ್ತಿಕೊಂಡು ನಮ್ಮಿಬ್ಬರ ಬಟ್ಟೆಗೆ ತಗುಲಿ ಶೆಡ್ ಹೊತ್ತಿಕೊಂಡು ಉರಿಯುತ್ತಿದ್ದಾಗ ಅಕ್ಕಪಕ್ಕದವರು ಬೆಂಕಿ ಹಾರಿಸಿರುತ್ತಾರೆಂತ ತಿಳಿಸಿದರು.  ನಮ್ಮ ತಂದೆ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 08/10/2019 ರಂದು ಬೆಳಿಗ್ಗೆ ಸುಮಾರು 6-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.  ತಂದೆಯವರ ಸಾವಿನಲ್ಲಿ ಅನುಮಾನ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ  ಯುಡಿಆರ್ ನಂ 17/2019 ಕಲಂ 174(ಸಿ)    ಸಿ ಆರ್ ಪಿಸಿ

ದಿನಾಂಕ: 08-10-2019 ರಂದು ಮಧ್ಯಾಹ್ನ 01-30 ಗಂಟೆಗೆ ಗಂಗಾಧರಯ್ಯ ಬಿನ್ ಲೇಟ್ ಬಸವಯ್ಯ, 50 ವರ್ಷ, ಒಕ್ಕಲಿಗರು, ಜಿರಾಯ್ತಿ ಕೆಲಸ, ಮುದುಗೆರೆಪಾಳ್ಯ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ, “ನನಗೆ ಸಂಸಾರದಲ್ಲಿ ಶ್ರೀರಂಗಮ್ಮ ಮತ್ತು ಪುಟ್ಟಲಕ್ಷ್ಮಮ್ಮ ಎಂಬುವ ಇಬ್ಬರು ಹೆಂಡತಿಯರಿದ್ದು ಶ್ರೀರಂಗಮ್ಮ ರವರು ಈಗ್ಗೆ ಸುಮಾರು 25 ವರ್ಷಗಳ ಹಿಂದೆ ಮೃತಪಟ್ಟಿದ್ದು ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು ನಂತರ ಪುಟ್ಟಲಕ್ಷ್ಮಮ್ಮ ರವರಿಗೆ ಮದುವೆಯಾಗಿದ್ದು ಇವರಿಗೆ ಒಂದು ಗಂಡು ಮಗು ಇದ್ದು ನಾನು ಎಲ್ಲರಿಗೂ ಅನ್ಯೂನ್ಯವಾಗಿ ನೋಡಿಕೊಳ್ಳುತ್ತಿದ್ದು 2ನೇ ಹೆಂಡತಿ ಪುಟ್ಟಲಕ್ಷ್ಮಮ್ಮ ರವರ ಮಗನಾದ ಯಶ್ವಂತ್ ಬಿನ್ ಗಂಗಾಧರಯ್ಯ, 21 ವರ್ಷ, ವಿದ್ಯಾರ್ಥಿ, ಒಕ್ಕಲಿಗರು, ಮುದುಗೆರೆಪಾಳ್ಯ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ  ರವರು ಪ್ರತಿದಿನ ಕಾಲೇಜಿಗೆ ನಮ್ಮ ಗ್ರಾಮದಿಂದ ತುಮಕೂರಿಗೆ ಹೋಗಿ ಬರುತ್ತಿದ್ದು ಈ ಅವಧಿಯಲ್ಲಿ ಈತನ ಸ್ನೇಹಿತನಾದ ಭೈಚೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರ ಜೊತೆ ಯಾವಾಗಲೂ ಮೊಬೈಲ್ ನಲ್ಲಿ ಮಾತನಾಡುವುದು ಹಾಗೂ ನನ್ನ ಮೊದಲನೇ ಹೆಂಡತಿ ಮಗಳಾದ ಶಕುಂತಲ ಎಂಬುವವರನ್ನು ಭೈಚೇನಹಳ್ಳಿ ಗ್ರಾಮದ ಚಿಕ್ಕಣ್ಣ ರವರ ಮಗನಾದ ನಾಗರಾಜು ಎಂಬುವವರಿಗೆ ಕೊಟ್ಟು ಮದುವೆ ಮಾಡಿಸಿದ್ದು ಅವರ ಮನೆಗೆ ಹೋಗುವಾಗಲೂ ಸಹ ಯಾವಾಗಲೂ ಸ್ವಾಮಿ ಎಂಬುವವರ ಜೊತೆಯೇ ಇರುತ್ತಿದ್ದು ದಿನಾಂಕ:07-10-2019 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಿಂದ 11-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದಿಂದ ಫಯಾಜ್ ಎಂಬುವವರ ಆಟೋದಲ್ಲಿ ನಾಗವಲ್ಲಿಗೆ ಬರುವಾಗ ಫಯಾಜ್ ರವರ ಬಳಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದು ನಂತರ ಅದೇ ದಿನ ಸಾಯಂಕಾಲ ಸುಮಾರು 05-00 ಗಂಟೆ ಸಮಯದಲ್ಲಿ ಭೈಚೇನಹಳ್ಳಿ ಗ್ರಾಮದ ಗಂಗಚಿಕ್ಕಯ್ಯ ರವರಿಗೆ ಸೇರಿದ ಕರಲುಬಾರೆ ಬಳಿ ಇರುವ ಜಮೀನಿನಲ್ಲಿರುವ ನೀರಿನ ಹೊಂಡದ ಬಳಿ ಬಟ್ಟೆ, ಬ್ಯಾಗು, ಮೊಬೈಲ್, ಚಪ್ಪಲಿ, ಪುಸ್ತಕಗಳು, ಇವುಗಳು ದಡದಲ್ಲಿ ಇದ್ದುದ್ದನ್ನು ಹಾಲು ತೆಗೆದುಕೊಂಡು ಬರುವಾಗ ನೋಡಿದ ದಾಸೇಗೌಡ ರವರು ಗುರ್ತಿಸಿ ನನ್ನ ಅಳಿಯನಾದ ನಾಗರಾಜು ರವರಿಗೆ ತಿಳಿಸಿದಾಗ ನಾಗರಾಜು ರವರು ನನಗೆ ಪೋನ್ ಮಾಡಿ ವಿಚಾರ ತಿಳಿಸಿದಾಗ ನಾನು ಸಾಯಂಕಾಲ ಸುಮಾರು 06-30 ಗಂಟೆಗೆ ಕರಲುಬಾರೆ ಬಳಿ ಇರುವ ನೀರಿನ ಹೊಂಡದ ಬಳಿ ಹೋಗಿ ನೋಡಲಾಗಿ ದಡದಲ್ಲಿದ್ದ ಬಟ್ಟೆ, ಬ್ಯಾಗು, ಮೊಬೈಲ್, ಚಪ್ಪಲಿ, ಪುಸ್ತಕಗಳು ನನ್ನ ಮಗ ಯಶ್ವಂತ್ ರವರದ್ದಾಗಿದ್ದು ನನ್ನ ಮಗನಿಗೆ ಭೈಚೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರು ಕರೆಸಿಕೊಂಡು ಯಾವುದೋ ಉದ್ದೇಶದಿಂದ ಈಜಾಡಲು ತಿಳಿಸಿದಾಗಲೋ ಅಥವಾ ನೂಕಿದಾಗಲೋ ಅಥವಾ ಸ್ವತಃ ತಾನೇ ಹೊಂಡದ ನೀರಿಗೆ ಬಿದ್ದು ಮೃತಪಟ್ಟಿದ್ದು ಈ ದಿನ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಡಲಾಗಿ ನನ್ನ ಮಗ ಕರಲುಬಾರೆ ಬಳಿಯ ಗಂಗಚಿಕ್ಕಯ್ಯ ರವರ ಜಮೀನಿನಲ್ಲಿರುವ ನೀರಿನ ಹೊಂಡದಲ್ಲಿ ಮೃತದೇಹ ಸಿಕ್ಕಿದ್ದು ಮೃತದೇಹವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲು ಕಳುಹಿಸಿಕೊಟ್ಟಿದ್ದು ನನ್ನ ಮಗನ ಸಾವಿನಲ್ಲಿ ಸ್ವಾಮಿ ರವರ ಮೇಲೆ ಅನುಮಾನ ಇದ್ದು ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಿಕೊಡಲು” ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಸಿ.ಎಸ್.ಪುರ   ಠಾಣಾ  ಯು,ಡಿ.ಆರ್  ನಂ; 08/2019. ಕಲಂ:174 ಸಿ.ಆರ್.ಪಿ.ಸಿ

ದಿನಾಂಕ: 08.10.2019 ರಂದು ಈ ಕೇಸಿನ ಫಿರ್ಯಾದಿಯಾದ ರಂಗಸ್ವಾಮಿ  ಬಿನ್ ಲೇಟ್ ಚಿಕ್ಕರಂಗಯ್ಯ, 48 ವರ್ಷ, ಆದಿ ಕರ್ನಾಟಕ  ಜನಾಂಗ,ಎಂ.ಎನ್. ಕೋಟೆ,ನಿಟ್ಟೂರು   ಹೋಬಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ  ಸಾರಾಂಶವೆಂದರೆ,  ನನ್ನ  ತಂಗಿ ಗಂಡನಾದ  ಕೃಷ್ಣಮೂರ್ತಿರವರು ಕೃಷಿಕನಾಗಿ ಕೆಲಸಮಾಡಿಕೊಂಡಿದ್ದು,ಪ್ರತಿ ದಿನ ಹೊಲಕ್ಕೆ  ಹೋಗಿ ಕೃಷಿ ಕೆಲಸ ಮುಗಿಸಿಕೊಂಡು  ವಾಪಸ್ಸು ಬರುತ್ತಿದ್ದರು, ಮನೆಯಲ್ಲಿ ಎರಡು ಹಸುವಿನ ಕರುಗಳಿದ್ದು ಮೇವು ಸಹ ತರುತ್ತಿದ್ದರು, ಪ್ರತಿ ದಿನದಂತೆ ದಿನಾಂಕ: 08.10.2019 ರಂಧು ಜಮೀನಿನಲ್ಲಿ  ಕೃಷಿ ಕೆಲಸ ಮುಗಿಸಕೊಂಡು ಹುಲ್ಲನ್ನು  ತೆಗೆದುಕೊಂಡು ಬರುತ್ತಿರುವಾಗ್ಗೆ, ಇದೇ ದಿನ ಮದ್ಯಾಹ್ನ 3 ರಿಂಧ 3.30 ಗಂಟೆ ಸುಮಾರಿನಲ್ಲಿ  ಎಸ್,ಕೊಡಗೇಹಳ್ಳಿ ವಾಸಿ ನಾರಾಯಣಪ್ಪರವರ  ಜಮೀನಿನ ಹತ್ತಿರ ಬರುವಾಗ್ಗೆ, ವಿದ್ಯುತ್  ಲೈನ್ ತುಂಡಾಗಿ ಬಿದ್ದಿದ್ದನ್ನು  ನೋಡದೇ, ವಿದ್ಯುತ್ ಲೈನ್ ತಗಲಿ ಹುಲ್ಲು ಹೊರೆ ಕೆಳಕ್ಕೆ ಬಿದ್ದಾಗ, ವಿದ್ಯುತ್ ಸಂಪರ್ಕವಾಗಿ  ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮರಣಹೊಂದಿರುತ್ತಾರೆ ಅಂತ ಮೃತ ಕೃಷ್ಣಮೂರ್ತಿರವರ  ಸಂಬಂದಿಕರು ನನಗೆ ಪೋನ್ ಮಾಡಿ ತಿಳಿಸಿದ್ದು, ಆಗ ನಾನು , ನನ್ನ ತಾಯಿ ದೊಡ್ಡಮ್ಮ , ನನ್ನ ಹೆಂಡತಿ ಮಂಜಮ್ಮ  ನಾವು ಮೂವರು ಸ್ಥಳಕ್ಕೆ  ಬಂದು ನೋಡಲಾಗಿ, ವಿದ್ಯುತ್  ಲೈನ್ ತುಂಡಾಗಿ ಬಿದ್ದಿದ್ದು ಕೃಷ್ಣಮೂರ್ತಿರವರು  ಮರಣಹೊಂದಿರುವುದು  ಸತ್ಯವಾಗಿತ್ತು, ಮೃತ ಕೃಷ್ಣಮೂರ್ತಿರವರು ವಿದ್ಯುತ್ ಶಾಕ್ ನಿಂದ ಆಕಸ್ಮಿಕವಾಗಿ ಮರಣಹೊಂದಿರುತ್ತಾರೆ ವಿನಹ ಬೇರೆ ಯಾವುದೇ ಅನುಮಾನ ಇರುವುದಿಲ್ಲಾ  ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು  ಪ್ರಕರಣ  ದಾಖಲಿಸಿರುತ್ತೆ.

 

 


ಅಪರಾಧ ಘಟನೆಗಳು 06-10-19

ಮಿಡಿಗೇಶಿ  ಪೊಲೀಸ್ ಠಾಣಾ ಸಿ.ಆರ್. ನಂ:86/2019 ಕಲಂ:279,304(ಎ) IPC 134(A) 187 IMV Act

ದಿನಾಂಕ:05/10/2019 ರಂದು ಸಂಜೆ 06-15 ಗಂಟೆಗೆ ಪಿರ್ಯಾದಿ ಈರಕ್ಯಾತಪ್ಪ ಬಿನ್ ಲೇ|| ಸಣ್ಣಲಿಂಗಪ್ಪ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ತಾಯಿಯ ತಮ್ಮ ರಾಮಪ್ಪನವರು ಪಾಪಸನಪಲ್ಲಿಯಲ್ಲಿ ವಾಸವಾಗಿದ್ದು. ಅಲ್ಲಿ ಅವರು ಚಿಲ್ಲರೆ ಅಂಗಡಿ ಇಟ್ಟುಕೊಂಡಿರುತ್ತಾರೆ. ಈ ದಿನ ದಿನಾಂಕ:05/10/2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ರಾಮಪ್ಪನ ಹೆಂಡತಿ ನನ್ನ ಅಕ್ಕ ನಾಗಮ್ಮನವರು ನನಗೆ ಫೋನ್ ಮಾಡಿ ನನ್ನ ಗಂಡ ರಾಮಪ್ಪನಿಗೆ ಚಂದ್ರಭಾವಿ ಹತ್ತಿರ ಲಾರಿ ಗುದ್ದಿ ಅಕ್ಸಿಡೆಂಟ್ ಆಗಿದೆ. ಈಗ ಮಡಕಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸುತ್ತಿರುತ್ತೇನೆಂತಾ ತಿಳಿಸಿದರು. ಆಗ ನಾನು ನನ್ನ ಬೈಕಿನಲ್ಲಿ ಮಡಕಶಿರಾದ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದೆ ನಮ್ಮ ಮಾವ ರಾಮಪ್ಪನವರಿಗೆ ಎಡಕಾಲಿಗೆ, ಮುಖಕ್ಕೆ, ಕೈಗೆ ಏಟು ಬಿದ್ದಿತ್ತು. ನಾನು ನಮ್ಮ ಮಾವ ರಾಮಪ್ಪರವರನ್ನು ಆಕ್ಸಿಡೆಂಟ್ ಆದ ಬಗ್ಗೆ ವಿಚಾರ ತಿಳಿಯಲಾಗಿ ನಾನು ಬೆಳಿಗ್ಗೆ ಅಂಗಡಿಗೆ ಸಾಮಾನು ತರಲು  ಮಿಡಿಗೇಶಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ನನ್ನ ಬಾಬ್ತು ಕೆಎ-06-ಎಸ್-8795 ನೇ ಟಿ.ವಿ.ಎಸ್. ನಲ್ಲಿ ಊರಿನಿಂದ ಹೊರಟು ಚಂದ್ರಭಾವಿಗೆ ಬೆಳಿಗ್ಗೆ 09-30 ಗಂಟೆಗೆ ಬಂದು ಮಿಡಿಗೇಶಿ ಕಡೆಗೆ ಹೋಗಲು ಚಂದ್ರಭಾವಿ ಗ್ರಾಮದ ಅಂಗಡಿಯ ಮುಂಭಾಗ ಟಿ.ವಿ.ಎಸ್.ನ್ನು ನಿಲ್ಲಿಸಿಕೊಂಡಿದ್ದೆನು. ಅದೇ6 ವೇಳೆಗೆ ಪಾವಗಡ ಕಡೆಯಿಂದ ಬಂದ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಟಿ.ವಿ.ಎಸ್. ನ್ನು ನಿಲ್ಲಿಸಿಕೊಂಡು ನಿಂತಿದ್ದ ನನಗೆ ಮತ್ತು ಟಿ.ವಿ.ಎಸ್. ನ ಹಿಂಭಾಗಕ್ಕೆ ಗುದ್ದಿಸಿದ ಪರಿಣಾಮ ನನ್ನ ಎಡಕಾಲಿಗೆ, ಮುಖಕ್ಕೆ, ಕೈಗೆ, ಪೆಟ್ಟು ಬಿದ್ದಿದ್ದು ಅಪಘಾತಪಡಿಸಿದ ಲಾರಿಯ ಚಾಲಕ ತನ್ನ ಲಾರಿಯನ್ನು ಮುಂದೆ ಹೋಗಿ ನಿಲ್ಲಿಸಿದ ಅದರ ನಂಬರ್ ನೋಡಲಾಗಿ ಕೆಎಲ್-73-ಎ-4839 ನೇ ಲಾರಿಯಾಗಿದ್ದು ಅಪಘಾತವಾದ ವಿಚಾರವನ್ನ ಚಂದ್ರಭಾವಿಯಿಂದ ಯಾರೋ ಫೋನ್ ಮಾಡಿ ನನ್ನ ಹೆಂಡತಿಗೆ ತಿಳಿಸಿದರು. ಚಂದ್ರಭಾವಿ ಗ್ರಾಮಸ್ಥರು ನನ್ನನ್ನು ಅಂಬುಲೇನ್ಸ್ ನಲ್ಲಿ ಮಡಕಶಿರಾ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿರುತ್ತಾರೆಂತಾ ಮತ್ತು ಅಪಘಾತಪಡಿಸಿದ ಲಾರಿಯ ಚಾಲಕ ಲಾರಿಯನ್ನು ಸ್ವಲ್ಪ ಹೊತ್ತು ನಿಲ್ಲಿಸಿ ಲಾರಿಯನ್ನು ನನ್ನನ್ನು ಉಪಚರಿಸದೇ ಮಧುಗಿರಿ ಕಡೆಗೆ ಹೊರಟು ಹೋದ ಎಂತಾ ನಮ್ಮ ಮಾವ ರಾಮಪ್ಪ ತಿಳಿಸಿದರು. ನಂತರ ನಾನು ಮತ್ತು ನಮ್ಮ ಅಕ್ಕ ಇಬ್ಬರೂ ನಮ್ಮ ಮಾವನನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಹಿಂದೂಪುರದ  ಬಾಲಾಜಿ ಖಾಸಗೀ ಆಸ್ಪತ್ರೆ ಚಿಕಿತ್ಸೆಗೆ ಸೇರಿಸಿ ನಾನು ಈಗ ತಡವಾಗಿ ಬಂದು ದೂರು ನೀಡಿರುತ್ತೇನೆ. ನಮ್ಮ ಮಾವ ರಾಮಪ್ಪನವರಿಗೆ ಅಪಘಾತಪಡಿಸಿರುವ ಕೆಎಲ್-73-ಎ-4839 ನೇ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

ಸಿ.ಎಸ್.ಪುರ ಠಾಣಾ ಮೊ.ನಂ: 64/2019. ಕಲಂ:498() ಐಪಿಸಿ, 323. 504 ರೆ/ವಿ 149 ಐಪಿಸಿ

ದಿನಾಂಕ:05.10.2019 ರಂದು ಈ ಕೇಸಿನ ಫಿರ್ಯಾದಿಯಾದ ಮಹಾಲಕ್ಷ್ಮಿ ಕೊಂ ಸಣ್ಣ ಕರಿಯಪ್ಪ,23 ವರ್, ಗೃಹಿಣಿ, ಕಾಡುಗೊಲ್ಲರು, ಕರಿಯಣ್ಣ ಪಾಳ್ಯ,ಸಿ.ಎಸ್.ಪುರ ಹೋಬಳಿ,  ಗುಬ್ಬಿ ತಾಲ್ಲೂಕುರವರು ಠಾಣೆಗೆ  ಹಾಜರಾಗಿ ನೀಡಿದ  ದೂರಿನ ಸಾರಾಂಶವೆಂದರೆ,  ನನ್ನ ಗಂಡನಾದ ಸಣ್ಣಕರಿಯಪ್ಪನು  ಕೂಲಿ ಕೆಲಸ & ಅಂಗವಿಕ ಪಿಂಚಣಿ ಹಣವನ್ನು ನಮ್ಮ ಸಂಸಾರಕ್ಕೆ ಕೊಡೆದೇ  ಅವರ ತಂದೆಗೆ ಕೊಡುತ್ತಾರೆ, ನನ್ನ ಗಂಡನು ನನ್ನ ಅತ್ತೆ & ಮಾವನ ಮಾತು ಕೇಳಿಕೊಂಡು  ನೀನು ನಿನ್ನ ಅಪ್ಪನ  ಮನೆಗೆ ಹೋಗು ಇಲ್ಲಿ ಬೇಡ  ಅಂತ  ದಿನಾಂಕ:02.10.2019 ರಂದು  ಸಂಜೆ 6.00 ಗಂಟೆ ಸಮಯದಲ್ಲಿ ನನಗೆ ಕೈಗಳಿಂದ  ಮೈಕೈಗೆ  ಹೊಡೆದನು,  ನನ್ನ ಮಾವನ  ತಮ್ಮನಾದ  ಕರಿಯಪ್ಪನ ಹಿರಿಯ ಮಗನಾದ ಮಹಾಲಿಂಗಹಯ್ಯನು ಹಿಂದಿನ ಯಾವುದೋ ದ್ವೇಶದಿಂದ ಬಾಯಿಗೆ ಬಂದಂತೆ  ಬೈದು ಗಲಾಟೆ ಮಾಡಿದನು,  ಇದೇ ದಿನ ಜಮೀನಿನಲ್ಲಿ  ನೀರು ಹಿಡಿಯಲು  ಹೋದಾಗ ಜಮೀನಿನಲ್ಲಿ  ಇದ್ದ  ಮಹಾಲಿಂಗಯ್ಯನ ಹೆಂಡತಿ  ನಾಗಮಣಿ & ಇವಳ ನಾದಿನಿ ಯಶೋಧ , ಇವಳ ತಾಯಿ ಗಂಗಮ್ಮ  ಇವರುಗಳು ನೀನು ನೀರು ಹಿಡಿಯಬಾರದು ನಮ್ಮ  ಮನೆಯ  ಮುಂದೆ  ಓಡಾಡಬಾರದು ಅಂತ  ಅವಾಚ್ಯ ಶಬ್ದಗಳಿಂದ  ಬೈದು  ಗಲಾಟೆ ಮಾಡಿರುತ್ತಾರೆ. ನನಗೆ ನಮ್ಮ  ಮಾವನ ಕಿರಿಯ ಹೆಂಡತಿಯ ಮಗನಾದ  ಚಿಕ್ಕಣ್ಣನು  ಸಹ ಮತ್ತು ಅತ್ತೆ ಮಾವ ಇವರೆಲ್ಲರೂ ನನಗೆ ಮಾನಸಿಕವಾಗಿ & ದೈಹಿಕವಾಗಿ  ಹಿಂಸೆ ಕೊಡುತ್ತಿರುತ್ತಾರೆ. ಅದೇ ದಿನ ನನ್ನ  ತಂದೆ ಸಣ್ಣಪ್ಪನು ಬಂದು  ಬುದ್ದಿ ಹೇಳಿ  ಗಲಾಟೆಬಿಡಿಸಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು  ಪಡೆದು  ಪ್ರಕರಣ ದಾಖಲಿಸಿಕೊಂಡಿರುತ್ತೆ.


ಅಪರಾಧ ಘಟನೆಗಳು 05-10-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 150/2019 ಕಲಂ : 454,   511   IPC

ದಿನಾಂಕ:04-10-19 ರಂದು ಮದ್ಯಾಹ್ನ 2-30 ಗಂಟೆಗೆ  ಪಿರ್ಯಾದಿ ಮೊಹಮ್ಮದ್ ನಹೀಂ ಮಮಿನ್, ಪೌರಾಯುಕ್ತರು, ನಗರಸಭೆ, ತಿಪಟೂರು ರವರು ತಮ್ಮ ಸಿಬ್ಬಂದಿ ಲೋಕೇಶ್ ರವರ ಮೂಲಕ ಠಾಣೆಗೆ ನೀಡಿದ ದೂರಿನ ಅಂಶವೇನೆಂದರೆ ದಿ:04-10-19 ರ ಮುಂಜಾನೆ 6-40 ಸಮಯದಲ್ಲಿ ತಿಪಟೂರು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಆದ ನಾಗೇಶ್.ಎನ್. ರವರು  ತಿಪಟೂರು ನ್ಯಾಯಾಲಯದ ಸಂಕೀರ್ಣದ ಮುಂದೆ ವಾಯು ವಿಹಾರ ಮಾಡುತ್ತಿದ್ದಾಗ ನ್ಯಾಯಾಲಯದ ಸಂಕೀರ್ಣದ ವಾಯುವ್ಯ ಮೂಲೆಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ಬಾಗಿಲನ್ನು ಶ್ರೀ ಜಿ.ಪಿ. ವರುಣ ಬಿನ್ ಆರ್. ಗುರುಪ್ರಸಾದ, ಕೆಂಗೇರಿ, ಬೆಂಗಳೂರು, ಶ್ರೀ ಎನ್.ಆರ್. ರಾಮಚಂದ್ರ ಬಿನ್ ಲೇಟ್ ಕೃಷ್ಣಮೂರ್ತಿ, ಹೊಸದುರ್ಗ, ಶ್ರೀ ಜಿ. ಶೇಖರಪ್ಪ ಬಿನ್ ಗಂಗಪ್ಪ, ಮಾಡಹಟ್ಟಿ, ಚಿತ್ರದುರ್ಗ ಜಿಲ್ಲೆ ರವರುಗಳು  ನಗರಸಭೆಯಿಂದ 2014-15 ನೇ ಸಾಲಿನ ಎಸ್.ಎಫ್.ಸಿ ನಿಧಿಯಿಂದ ನ್ಯಾಯಾಲಯದ ಸಾರ್ವಜನಿಕರ ಉಪಯೋಗಕ್ಕಾಗಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಹಿಂದೆ ಮುಂದೆ ಸುಮಾರು 12.00 ಲಕ್ಷ ಅಂದಾಜು ಮೊತ್ತದಲ್ಲಿ ಎರಡು ಶುದ್ದ ನೀರು ಕುಡಿಯುವ ಘಟಕ ನಿರ್ಮಿಸಿದ್ದು,  ಅದರಲ್ಲಿ ವಕೀಲರ ಸಂಘದ ಮುಂದೆ ನಿರ್ಮಿಸಿರುವ  ಶುದ್ದ ನೀರಿನ ಘಟಕದ ಸಾಮಗ್ರಿಗಳನ್ನು ಬಿಚ್ಚಿ ಕಳವು ಮಾಡುತ್ತಿರುವುದು ಕಂಡು ಬಂದು ಸನಿಹದಲ್ಲಿ ಕೆ.ಎ.16-ಡಿ-4110 ನೊಂದಾಯಿತ ಸಾಗಣೆ ವಾಹನ ಇದ್ದು,  ಈ ವಾಹನಕ್ಕೆ ಘಟಕದ ಸಾಮಗ್ರಿಗಳನ್ನು ತುಂಬಿ ಕಳವು  ಮಾಡಿರುವುದು ಕಂಡುಬಂದಿದ್ದು, ನಾಗೇಶ್ ರವರು ಮೂವರು ಆರೋಪಿಗಳನ್ನು ಸ್ಥಳದಲ್ಲಿ ಪ್ರತಿಭಂದಿಸಿ ಮುಂದಿನ ಕ್ರಮಕ್ಕಾಗಿ ಪೌರಾಯುಕ್ತರು ತಿಪಟೂರು ರವರಿಗೆ ವರದಿ ಸಲ್ಲಿಸಿದ್ದು,  ಸದರಿ ಮೂವರು ಆರೋಪಿಗಳ ವಿರುದ್ದ ಕಳವು ಪ್ರಕರಣ ದಾಖಲಿಸಲು  ಪೌರಾಯುಕ್ತರು ತಿಪಟೂರು ರವರು  ನೀಡಿದ ದೂರನ್ನು  ಪಡೆದು ಠಾಣಾ ಮೊ.ನಂ 150/2019 ಕಲಂ 454, 511 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದೆ.

ಹೆಬ್ಬೂರು  ಪೊಲೀಸ್ ಠಾಣಾ  ಯು ಡಿ ಆರ್ ನಂ-16/2019 ಕಲಂ 174 ಸಿಆರ್‌ಪಿಸಿ

ದಿನಾಂಕ-04/10/2019 ರಂದು ಮಧ್ಯಾಹ್ನ 02-30 ಗಂಟೆಗೆ ಪಿರ್ಯದಿಯಾದ ನರಸಿಂಹಮೂರ್ತಿ ಕೆ ಬಿನ್ ಕೆಂಪಯ್ಯ, 35 ವರ್ಷ, ಕುರುಬ ಜನಾಂಗ, ಬೆಂಗಳೂರಿನಲ್ಲಿ ಡ್ರೈವರ್ ಕೆಲಸ, ಹಾಲಿ ವಾಸ: ನಂ 253, 1ನೇ ಮೈನ್, ಜೆಸಿ ನಗರ, ಗೆಳೆಯರ ಬಳಗ, ರಾಜಾಜಿನಗರ, ಬೆಂಗಳೂರು, ಸ್ವಂತ ಊರು: ಚಿಕ್ಕಪ್ಪಯ್ಯನಪಾಳ್ಯ, ತಿಪ್ಪಸಂದ್ರ  ಹೋಬಳಿ, ಮಾಗಡಿ ತಾಲ್ಲೂಕು, ರಾಮಗನರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಮ್ಮ ತಂದೆ ಕೆಂಪಯ್ಯ ಹಾಗೂ ನನ್ನ ತಾಯಿ ಲಕ್ಷ್ಮಮ್ಮ ರವರಿಗೆ 03 ಜನ ಮಕ್ಕಳಿದ್ದು 1 ನೇಯವನು ನಾನಾಗಿದ್ದು, 2ನೇ ಯವರು ಚಿಕ್ಕಸ್ವಾಮಿ ಆಗಿದ್ದು, 3 ನೇಯವರು ಭಾಗ್ಯಮ್ಮ ರವರರಾಗಿದ್ದು, ಇವರು ಗಂಡನ ಮನೆಯಲ್ಲಿರುತ್ತಾರೆ. ನಾನು ಸಂಸಾರ ಸಮೇತ ಬೆಂಗಳೂರಿನಲ್ಲಿ ವಾಸವಾಗಿರುತ್ತೇನೆ. ನನ್ನ ತಮ್ಮ ಚಿಕ್ಕಸ್ವಾಮಿಗೂ ಸಹ ಮದುವೆಯಾಗಿದ್ದು ಈತನು ಪ್ಲಂಬರ್ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದು, ಈತನ ಹೆಂಡತಿ ಮಂಜುಳ ನನ್ನ ತಂದೆ ತಾಯಿಯೊಂದಿಗೆ ನಮ್ಮ ಸ್ವಂತ ಊರಾದ ಚಿಕ್ಕಪ್ಪಯ್ಯನಪಾಳ್ಯ ಗ್ರಾಮದಲ್ಲಿ ವಾಸವಿರುತ್ತಾರೆ. ಇವರ ಜೊತೆಯಲ್ಲಿ ನನ್ನ ಚಿಕ್ಕಮ್ಮನ ಮಗ 12 ವರ್ಷದ ದರ್ಶನ್ ರವರು ಸಹ ವಾಸವಾಗಿರುತ್ತಾನೆ. ಈಗ್ಗೆ ಸುಮಾರು 08 ವರ್ಷಗಳ ಹಿಂದೆ ನನ್ನ ತಂದೆ ಕೆಂಪಯ್ಯ ಸುಮಾರು 55 ವರ್ಷದವರು ಮೇಕೆಗಳಿಗೆ ಸೊಪ್ಪು ಕಡಿಯಲು ಹೋಗಿ ಮರದ ಮೇಲಿಂದ ಕೆಳಕ್ಕೆ ಬಿದ್ದು ಅವರ ಎಡಕಾಲಿಗೆ ಪೆಟ್ಟು ಬಿದ್ದು ಮಂಡಿಯ ಕೆಳಬಾಗ ಮುರಿದು ಹೋಗಿದ್ದು ಇವರಿಗೆ ಪ್ಲಾಸ್ಟಿಕ್ ಕಾಲನ್ನು ಹಾಕಿಸಿದ್ದೆವು. ನನ್ನ ತಂದೆ ಕೆಂಪಯ್ಯ ರವರಿಗೆ ವಿಪರೀತ ಮದ್ಯಪಾನ ಮಾಡುವ ಚಟವಿದ್ದು ಆಗಾಗ್ಗೆ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ಮನೆಯಿಂದ ಒಂದೆರಡು ದಿನಗಳ ಕಾಲ ಮನೆಯನ್ನು ಬಿಟ್ಟು ಹೋಗಿ ಮತ್ತೆ ಮನೆಗೆ ವಾಪಸ್ ಅವರೇ ಬರುತ್ತಿದ್ದರು. ಹೀಗಿರುವಾಗ್ಗೆ, ದಿನಾಂಕ: 01-10-2019 ರಂದು ಬೆಳಿಗ್ಗೆ 08-00 ಗಂಟೆ ಸಮಯದಲ್ಲಿ ನನ್ನ ತಂದೆ ಕೆಂಪಯ್ಯ ರವರು ವಿಪರೀತ ಮದ್ಯಪಾನ ಮಾಡಿಕೊಂಡು ನನ್ನ ತಾಯಿ ಲಕ್ಷ್ಮಮ್ಮ ಹಾಗೂ ನನ್ನ ನಾದಿನಿ ಮಂಜುಳ ರವರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಟು ಹೋದರೆಂತಾ ನನ್ನ ನಾದಿನಿ ಮಂಜಳ ರವರು ನನಗೆ ಫೋನ್ ಮಾಡಿ ಬೆಳಗ್ಗೆ 08-30 ಗಂಟೆಗೆ ಫೋನ್ ಮಾಡಿ ತಿಳಿಸಿದರು. ನಾನು ನನ್ನ ತಂದೆ ಯಾವಗಲೂ ಇದೇ ರೀತಿ ಮನೆಯವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದರಿಂದ ಅವರೆ ಮನೆಗೆ ವಾಪಸ್ ಬರುತ್ತಾರೆಂತಾ ಸುಮ್ಮನಿದ್ದೆನು. ಈ ದಿನ ದಿನಾಂಕ:04-10-2019 ರಂದು ಬೆಳಿಗ್ಗೆ 08-30 ಗಂಟೆಗೆ ನನಗೆ ಪರಿಚಯಸ್ಥರಾದ ಬನ್ನಿಮರದ ಕಟ್ಟೆ ವಾಸಿಯಾದ ರಾಜಣ್ಣ ರವರು ನನಗೆ ಪೋನ್ ಮಾಡಿ ನಿಮ್ಮ ತಂದೆ ಕೆಂಪಯ್ಯರವರು ತುಮಕೂರು ತಾಲ್ಲೂಕಿನ ಹೆಬ್ಬೂರು ಬಳಿ ಕಲ್ಕೆರೆ ಗ್ರಾಮದ ಬಸವರಾಜು ರವರ ಮಾವಿನ ತೋಪಿನಲ್ಲಿ ಮೃತಪಟ್ಟಿರುತ್ತಾರೆಂತ ಪೋನ್ ಮಾಡಿ ತಿಳಿಸಿದ್ದು ನಂತರ ನಾನು ಸ್ಥಳಕ್ಕೆ ಮಧ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಹೋಗಿ ನೋಡಲಾಗಿ ನನ್ನ ತಂದೆ ಕೆಂಪಯ್ಯ ರವರು ಮೃತಪಟ್ಟಿರುವುದು ನಿಜವಾಗಿದ್ದು, ನನ್ನ ತಂದೆ ಕೆಂಪಯ್ಯ ರವರ ಮೃತದೇಹದ ಪಕ್ಕ ಒಂದು ಮದ್ಯದ ಬಾಟಲ್ ಹಾಗೂ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಇಲಿಪಾಷಣದ ಔಷಧಿ ಇದ್ದು ನನ್ನ ತಂದೆ ಕೆಂಪಯ್ಯ ರವರು ಸಂಸಾರದ ವಿಚಾರವಾಗಿ ಮನಸ್ಸಿಗೆ ಬೇಜಾರು ಮಾಡಿಕೊಂಡು ವಿಪರೀತ ಮದ್ಯಪಾನ ಮಾಡಿ ಊಟ ತಿಂಡಿ ಮಾಡದೆ ಇಲಿಪಾಷಾಣ ಸೇವನೆ ಮಾಡಿ ದಿನಾಂಕ: 01-10-2019 ರಂದು ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ:04-10-2019 ರಂದು ಬೆಳಗ್ಗೆ 08-30 ಗಂಟೆಯವರೆಗೆ ಯಾವುದೋ ವೇಳೆಯಲ್ಲಿ ಮೃತಪಟ್ಟಿರುತ್ತಾರೆ. ನನ್ನ ತಂದೆಯ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ನಾನು ನನ್ನ ತಂದೆಯ ಮೃತದೇಹವನ್ನು ಯಾವುದೋ ಒಂದು ಖಾಸಗಿ ಆಂಬ್ಯುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು ನನ್ನ ತಂದೆಯ ಮೃತದೇಹವು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತೆ. ಆದ್ದರಿಂದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಯು ಡಿ ಆರ್ ನಂ-16/2019 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 10/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ04/10/2019 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ ಫಿರ್ಯಾದಿ ಸಜ್ಜೆಹೊಸಹಳ್ಳಿ ವಾಸಿ ವನಜಾಕ್ಷಮ್ಮ ಕೋಂ ಗೋವಿಂದಪ್ಪ ರವರು ಠಾಣೆಗೆ ಹಾಜರಾಗಿ, ನನಗೆ ಇಬ್ಬರು ಮಕ್ಕಳಿದ್ದು ಮೊದಲನೆ ಮಗನಾದ ಜಿ.ರಂಗನಾಥ ಎಂಬಾತನಿಗೆ 26 ವರ್ಷ ವಯಸ್ಸಾಗಿದ್ದು ದಿನಾಂಕ:03/10/2109 ರಂದು ನಮ್ಮ ಜಮೀನಿನಲ್ಲಿ ರಾಗಿ ಬೆಳೆ ಇಟ್ಟಿದ್ದು ಸದರಿ ಬೆಳೆಯನ್ನು ಜಿಂಕೆಗಳು ಮೇಯಲು ಬರುತ್ತೇವೆಂದು ನೋಡಿಕೊಳ್ಳುವ ಉದ್ದೇಶದಿಂದ ರಾತ್ರಿ ಆತನು ನಮ್ಮ ಜಮೀನಿನಲ್ಲೆಇದ್ದ ಮೇಲ್ಕಂಡ ನಾನು ನನ್ನ ಮಗಳಿಗೆ ಆರೊಗ್ಯ ತೊಂದರೆ ಇದ್ದುದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದೆ ರಾತ್ರಿ 09-00 ಗಂಟೆ ಸುಮಾರಿನಲ್ಲಿ ಬಂದೆ ನನ್ನ ಮಗನಾದ ಜಿ.ರಂಗನಾಥನು ಪ್ರತಿ ದಿನದಂತೆ ಜಮೀನಿನ ಹತ್ತಿರ ಹೊಗಿದ್ದ ಬರುತ್ತಾನೆಂದು ತಿಳಿದುಕೊಂಡೆವು. ಆದರೆ ಆತನು ರಾತ್ರಿ ಬರಲಿಲ್ಲ ನಾನು ಗಾಬರಿಗೊಂಡು ಬೆಳಿಗ್ಗೆ 06-00 ಗಂಟೆಗೆ ಎದ್ದು ಜಮೀನಿನ ಹತ್ತಿರ ಹೊಗಿ ನೋಡಲಾಗಿ ನನ್ನ ಮಗನಾದ ಜಿ.ರಂಗನಾಥನು ಮರಣ ಹೊಂದಿದ್ದ. ಬಲಗೈನ ಬೆರಳಿನ ಮೇಲೆ ಗಾಯಾದ ಗುರುತು ಕಂಡು ಬಂದಿರುತ್ತದ್ದೆ. ನಮಗೆ ವಿಷಪೂರಿತ ಹಾವು ಕಚ್ಚಿರಬಹುದೆಂದು ಅನುಮಾನ ನಮಗಿರುತ್ತದ್ದೆ.ಆದ್ದರಿಂದ ತಾವಂದಿರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂಬುದು ದೂರಿನ ಸಾರಾಂಶವಾಗಿರುತ್ತದ್ದೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 26 guests online
Content View Hits : 562686
Hackguard Security Enabled