lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2019 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
October 2019

Thursday, 31 October 2019

ಪತ್ರಿಕಾ ಪ್ರಕಟಣೆ ದಿ:31-10-19

ಪತ್ರಿಕಾ ಪ್ರಕಟಣೆ.

ಮನೆ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

ದಿನಾಂಕ : 31-10-2019

ದಿನಾಂಕ : 12-06-2019 ರಂದು ತುಮಕೂರು ನಗರದ ಪ್ರಗತಿ ಬಡಾವಣೆ ವಾಸಿಯಾದ ಯಡಿಯೂರಪ್ಪ ಹಾಗೂ ಅವರ ಪತ್ನಿಯು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆಂದು ಹೋಗಿದ್ದ ಸಮಯದಲ್ಲಿ ಬೆಳಗ್ಗೆ 9-15 ಗಂಟೆಯಿಂದ ಸಂಜೆ 5-15 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಮೀಟಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಸುಮಾರು 190 ಗ್ರಾಂ ತೂಕದ ವಿವಿಧ ಬಂಗಾರ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ದಿನಾಂಕ : 09-08-2019 ರಂದು ಅಶೋಕನಗರದ 8ನೇ ಕ್ರಾಸ್ ವಾಸಿಯಾದ ಶ್ರೀಮತಿ ಜಗದಾಂಬ ರವರು ಲಕ್ಷ್ಮಿ ಪೂಜೆಯನ್ನು ಮಾಡುವ ಸಲುವಾಗಿ ಮನೆಯಲ್ಲಿ ಲಕ್ಷ್ಮಿ ಮುಖವಾಡಕ್ಕೆ ತಮ್ಮ ಸುಮಾರು 60 ಗ್ರಾಂ ತೂಕದ ಎರಡು ಎಳೆ ಬಂಗಾರದ ಸರವನ್ನು ಹಾಕಿ ಮಲಗಿಕೊಂಡಿದ್ದು ಸದರಿ ಸರವನ್ನು ಬೆಳಗಿನ ಜಾವ 1-00 ಗಂಟೆಯಿಂದ 4-30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ಮೇಲ್ಕಂಡ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಲು ಸಿ.ಪಿ.ಐ. ತಿಲಕ್ಪಾಕರ್್ ವೃತ್ತ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡವು ದಿನಾಂಕ : 30-10-2019 ರಂದು ಸಂಜೆ 4-15 ಗಂಟೆ ಸಮಯದಲ್ಲಿ ನಜರಾಬಾದ್ ರೈಲ್ವೇ ಅಂಡರ್ ಪಾಸ್ನ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಶ್ರೀ ಅಬ್ದುಲ್ ಮಲೀಕ್ @ ಮಲೀಕ್ ಬಿನ್ ಅಬ್ದುಲ್ಲಾ, 27 ವರ್ಷ, ಮುಸ್ಲಿಂ ಜನಾಂಗ, ವಾಸ ಕೌಲ್ ಬಜಾರ್, ಬಳ್ಳಾರಿ ಟೌನ್ ಈತನನ್ನು ಹಿಡಿದು ವಿಚಾರಣೆ ಮಾಡಲಾಗಿ ಸದರಿ ಆಸಾಮಿಯು ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತೆ. ನಂತರ ಸದರಿ ಆರೋಪಿತನಿಂದ ಕಳವು ಮಾಡಿದ್ದ ಮಾಲನ್ನು ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ ಮಾರಾಟ ಮಾಡಿದ್ದ  ತುಮಕೂರು ನಗರದ ಪ್ರಗತಿ ಬಡಾವಣೆ ವಾಸಿಯಾದ ಯಡಿಯೂರಪ್ಪ ರವರ ಬಾಬ್ತು ಸುಮಾರು 5,25,000/-ರೂ ಬೆಲೆ ಬಾಳುವ 150 ಗ್ರಾಂ ಚಿನ್ನದ ಗಟ್ಟಿ. ಹಾಗೂ ಅಶೋಕನಗರದ 8ನೇ ಕ್ರಾಸ್ ವಾಸಿಯಾದ ಶ್ರೀಮತಿ ಜಗದಾಂಬ ರವರ ಬಾಬ್ತು ಸುಮಾರು 58 ಗ್ರಾಂ ತೂಕದ 2,03,000/-ರೂ ಬೆಲೆ ಬಾಳುವ ಎರಡು ಎಳೆ ಬಂಗಾರದ ಸರವನ್ನು ಅಮಾನತ್ತು ಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡಿರುತ್ತೆ.

 

ಸದರಿ ಮೇಲ್ಕಂಡ ಎರಡು ಪ್ರಕರಣದ ಆರೋಪಿ ಮತ್ತು ಕಳವು ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ ಪತ್ತೆ ತಂಡವಾದ ಶ್ರೀ ಜೆ. ಉದೇಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಶ್ರೀ ಹೆಚ್.ಜೆ. ತಿಪ್ಪೇಸ್ವಾಮಿ, ಡಿ.ಎಸ್.ಪಿ. ತುಮಕೂರು ನಗರ ಉಪ ವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಎಸ್. ಪಾರ್ವತಮ್ಮ, ಸಿಪಿಐ ತಿಲಕ್ ಪಾಕರ್್ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ ನವೀನ್ ಮತ್ತು ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಮುನಾವರ್ ಪಾಷ, ಹನುಮರಂಗಯ್ಯ, ಮಂಜುನಾಥ್, ನಾಗರಾಜು ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ||. ಕೋನಂ ವಂಶಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 31-10-19

 

ಕೊರಟಗೆರೆ ಪೊಲೀಸ್ ಠಾಣೆ  ಮೊ ನಂ 177/2019 ಕಲಂ 279.337.304(ಎ) ಐಪಿಸಿ ರೆ/ವಿ 187 ಐ ಎಂ ವಿ ಆಕ್ಟ್

ದಿನಾಂಕ:-30.10.2019 ರಂದು ಬೆಳಿಗ್ಗೆ 10-30 ಗಂಟೆಯಿಂದ 11-00 ಗಂಟೆಯವರೆಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಬಾಬು ಬಿನ್ ಲೇಟ್ ಫಕ್ರುದ್ದೀನ್ ಸಾಬ್,50ವರ್ಷ, ವ್ಯಾಪಾರ, ದೇವಾಂಗ ಬೀದಿ, ಕೊರಟಗೆರೆ ಟೌನ್ ರವರು ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯ ಅಂಶವೆನೆಂದರೆ ನನಗೆ ಒಂದನೇ ಸಿಮಾ, ಎರಡನೇ ಸಮೀರ್, ಮೂರನೇ ನಗೀನಾ ಎಂಬ ಮೂರು ಜನ ಮಕ್ಕಳಿದ್ದು, ನಾನು ಮತ್ತು ನನ್ನ ಹೆಂಡತಿ ನೂಸರತ್ ಹಾಗೂ ಮಕ್ಕಳು ಒಟ್ಟಿಗೆ ಸಂಸಾರದಲ್ಲಿ ಅನ್ಯೋನ್ಯವಾಗಿದ್ದು, ದಿನಾಂಕ:-30.10.2019 ರಂದು ಬೆಳಿಗ್ಗೆ 09-05 ಗಂಟೆಗೆ ತುಮಕೂರುಗೆ ಹೋಗಿ ಸೋಫಾ ಮೆಟಿರಿಯಲ್ಸ್ ತರಲು ನಾನು ಕೊರಟಗೆರೆ ಬಸ್ ನಿಲ್ದಾಣಕ್ಕೆ ಹೋದಾಗ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಕೆಎ-54, 1849 ನೇ ವಿಜಯಲಕ್ಷ್ಮೀ ಬಸ್ ಬಂದು ನಿಲ್ಲಿಸಿದಾಗ ಸದರಿ ಬಸ್ ಗೆ ನಾನು ತುಮಕೂರುಗೆ ಹೋಗಲು ಹತ್ತಿಕೊಂಡೆನು.ನನ್ನಂತೆ ಇತರೆ ಪ್ರಯಾಣಿಕರು ತುಮಕೂರು ಗೆ ಹೋಗಲು ಬಸ್ ಗೆ ಹತ್ತಿಕೊಂಡರು. ಆಗ ಸದರಿ ಬಸ್ ಅನ್ನು ಚಾಲನೆಮಾಡಲು ನಿರ್ವಾಹಕ ಸೂಚನೆಕೊಟ್ಟಾಗ ಸದರಿ ಕೆಎ-64,1849 ನೇ ಬಸ್ ಅನ್ನು ಅದರ ಚಾಲಕ ಕೊರಟಗೆರೆ ಯಿಂದ ತುಮಕೂರು ಗೆ ಚಾಲನೆಮಾಡಿಕೊಂಡು ಜೆಟ್ಟಿಅಗ್ರಹಾರದ ಹತ್ತಿರ ಕೊರಟಗೆರೆ-ತುಮಕೂರು ರಸ್ತೆಯಲ್ಲಿ ದಿನಾಂಕ:-30.10.2019 ರಂದು ಬೆಳಿಗ್ಗೆ 09-20 ಗಂಟೆಗೆ ಹೋಗುತ್ತಿದ್ದಾಗ ಸದರಿ ಬಸ್ ಅನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ರಸ್ತೆಯ ಬಲಭಾಗಕ್ಕೆ ಹೋಗಿ ನಂತರ ರಸ್ತೆಯ ಎಡಭಾಗಕ್ಕೆ ರಭಸವಾಗಿ ತಿರುಗಿಸಿಕೊಂಡಾಗ ಚಾಲನೆಯ ನಿಯಂತ್ರಣ ತಪ್ಪಿ ಸದರಿ ಬಸ್ ಎಡಮೊಗ್ಗುಲಾಗಿ ರಸ್ತೆಯ ಮೇಲೆ ಬಿದ್ದು ಅಪಘಾತ ಉಂಟುಮಾಡಿದ ಪರಿಣಾಮ ಸದರಿ ಬಸ್ ನಲ್ಲಿದ್ದ ನಿರ್ವಾಹಕ ಬಸ್ ಕ್ಲೀನರ್ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಜೆಟ್ಟಿ ಅಗ್ರಹಾರ ಗ್ರಾಮದ ವಾಸಿ ನಂದೀಶ್, ಕೊರಟಗೆರೆ ಟೌನ್ ವಾಸಿ ವಿನಯ್ ರವರು ಬಂದು ಬಸ್ ನಲ್ಲಿದ್ದವರನ್ನು ಒಬ್ಬೊಬ್ಬರಾಗಿ  ಹೊರಗೆ ತೆಗೆದು ನೋಡಲಾಗಿ ನನಗೆ ಹಣೆಗೆ ಮತ್ತು ಮೇಲ್ಭಾಗದ ತುಟಿಗೆ ಏಟು ಬಿದ್ದು ರಕ್ತಗಾಯವಾಗಿ, ಎದೆಗೆ ಮತ್ತು ಸೊಂಟಕ್ಕೆ ಏಟು ಬಿದ್ದಿರುತ್ತೆ.1] ಇಮ್ರಾನ್ ಬಿನ್ ರಿಜ್ವಾನ್ ಪಾಷ, ಗೇರಹಳ್ಳಿ, ತುಮಕೂರು ತಾಲ್ಲೂಕು, 2] ಅಕ್ರಂಪಾಷ ಬಿನ್ ತಾಜ್ ಅಹಮದ್,ಹೊಳವನಹಳ್ಳಿ, 3] ಶಿವಕುಮಾರ್ ಬಿನ್ ತಮ್ಮಣ್ಣ, ಪುಲುಮಾಚಿ,ಮಧುಗಿರಿ ತಾಲ್ಲೂಕು, 4] ಸಾದತ್ ಬಿನ್ ರಿಜ್ವಾನ್, ಕೊರಟಗೆರೆ ಟೌನ್, 5] ಶ್ರೀನಿವಾಸ ಬಿನ್ ಸಿದ್ದಪ್ಪ, ಕೊರಟಗೆರೆ ಟೌನ್, 6] ಮಕೀನ್ ಪಾಷ ಬಿನ್ ರಿಜ್ವಾನ್ ಪಾಷ, ಹೊಳವನಹಳ್ಳಿ, 7] ನೇತ್ರ ಕೋಂ ಈಶ್ವರಪ್ಪ, ಗಂಜಲಗುಂಟೆ, ಮಧುಗಿರಿ ತಾಲ್ಲೂಕು, 8] ಭುವನೇಶ್ವರಿ ಕೋಂ ನರಸಿಂಹಮೂರ್ತಿ, ರತ್ನಗಿರಿ, ಮಡಕಶಿರಾ  ತಾಲ್ಲೂಕು, 9] ಅಬೀಬಿ ಕೋಂ ಅಕ್ಬರ್, ಮಡಕಶಿರಾ, 10] ನವೀನ್ ಕುಮಾರ್ ಬಿನ್ ನರಸಿಂಹಯ್ಯ, ಬಿದಲೋಟಿ, 11] ದಯಾನಂದ, ಆಳಾಲಸಂದ್ರ ರವರನ್ನು  ಹಾಗೂ ಇತರೆ ಪ್ರಯಾಣಿಕರನ್ನು ನೋಡಲಾಗಿ ತಲೆಗೆ ಮತ್ತು ಮೈಕೈಗಳಿಗೆ ತೀವ್ರ ಸ್ವರೂಪದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವರನ್ನು ಬಸ್ ನ ನಿರ್ವಾಹಕ, ನಂದೀಶ, ವಿನಯ್ ಹಾಗೂ ಇತರೆಯವರು ಸೇರಿ ಉಪಚರಿಸುತ್ತಿದ್ದಾಗ ಮೇಲ್ಕಂಡ ಗಾಯಾಳುಗಳಲ್ಲಿ ಇಮ್ರಾನ್, ಅಕ್ರಂಪಾಷ, ಶಿವಕುಮಾರ್, ಸಾದತ್ ಮತ್ತು ಶ್ರೀನಿವಾಸ್ ರವರು ಸ್ಥಳದಲ್ಲಿಯೇ ಮೃತಪಟ್ಟರು. ನಂತರ ಗಾಯಾಳುಗಳಲ್ಲಿ ಕೆಲವು ಗಾಯಾಳುಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ, ಉಳಿದ ಗಾಯಾಳುಗಳನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಚಿಕತ್ಸೆಗಾಗಿ ಅಂಬುಲೇನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟರು.ಈಗ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅಪಘಾತ ಉಂಟುಮಾಡಿದ ಕೆಎ-64, 1849 ನೇ ವಿಜಯಲಕ್ಷ್ಮೀ ಬಸ್ ನ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಇಮ್ರಾನ್ ಬೇಗ್ ಬಿನ್ ಮುನೀರ್ ಬೇಗ್, ಐ.ಡಿ ಹಳ್ಳಿ, ಮಧುಗಿರಿ ತಾಲ್ಲೂಕು ಎಂತ ತಿಳಿಯಿತು. ಸದರಿ ಚಾಲಕನು ಅಪಘಾತ ಉಂಟುಮಾಡಿ ಬಸ್ ಅನ್ನು ಸದರಿ ಸ್ಥಳದಲ್ಲಿ ಗಾಯಳುಗಳಿಗೆ ಉಪಚರಿಸದೇ ಹಾಗೂ ಪೊಲೀಸ್ ರವರಿಗೆ ಮಾಹಿತಿ ನೀಡದೇ ಹೊರಟು ಹೋಗಿರುತ್ತಾನೆ. ಆದ್ದರಿಂದ ಅಪಘಾತ ಉಂಟುಮಾಡಿದ ಕೆಎ-64,1849 ನೇ ಬಸ್ ನ ಚಾಲಕ ಇಮ್ರಾನ್ ಬೇಗ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂತ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಬೆಳಿಗ್ಗೆ 11-30 ಗಂಟೆಗೆ ಹೇಳಿಕೆಯೊಂದಿಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯುಡಿಆರ್. 23-2019 ಕಲಂ : 174 ಸಿ.ಆರ್.ಪಿ.ಸಿ

ದಿನಾಂಕ 30-10-2019 ರಂದು ಬೆಳಗ್ಗೆ 09-00 ಗಂಟೆಗೆ ಪಿರ್ಯಾದಿ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ನಗರ ಸಭೆಯಲ್ಲಿ ನೌಕರರ ಕೆಲಸವನ್ನು ನಿರ್ವಹಣೆ ಮಾಡುವವನಾಗಿದ್ದು, ಅದರಂತೆ ಪ್ರತಿದಿನದಂತೆ ನಾನು ಈ ದಿನ ದಿನಾಂಕ 30-10-2019 ರಂದು ಬೆಳಗ್ಗೆ 06-00 ಗಂಟೆಗೆ ಕೆ.ಆರ್ ಬಡಾವಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಗುರುಕುಲ ಮಠದ ಕಾಂಪ್ಲೆಕ್ಸ್ ನ ಪಕ್ಕದ ಎಂ.ಎಲ್.ಎ ನಾಗೇಶ್ ರವರ ಮನೆಯ ಕಡೆಗೆ ಹೋಗುವ ಸೇತುವೆಯ ಪಕ್ಕದಲ್ಲಿ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಗಂಡಸು ಮೃತನಾಗಿ ಮಲಗಿದ್ದು, ಈತನು ಯಾವುದೋ ಖಾಯಿಲೆಯಿಂದಲೂ ಅಧವಾ ಅನಾರೋಗ್ಯದಿಂದಲೂ ಮೃತಪಟ್ಟಿದ್ದು, ಈತನು ದಿನಾಂಕ 29-10-2019 ರಂದು ರಾತ್ರಿ ವೇಳೆಯಲ್ಲಿ ಮೃತಪಟ್ಟಿರುವುದು ಕಂಡು ಬಂದಿರುತ್ತೆ. ಈತನ ಚಹರೆ ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಿಮೆಂಟ್ ಕಲರ್ ಪ್ಯಾಂಟ್, ಬಿಳಿ ತಿಳಿ ನೀಲಿ ಬಣ್ಣದ ಚೌಕಾಕಾರದ ತುಂಬು ತೋಳಿನ ಶರ್ಟ್ ಹಾಕಿಕೊಂಡಿದ್ದು ಕಂಡು ಬಂದಿದ್ದು, ಮಂದಿನ ಕಾನೂನು ಕ್ರಮ ಕೈಗೊಳ್ಳಬೇಕಂತ ನೀಡಿದ ದೂರನ್ನ ಪಡೆದು ಯುಡಿಆರ್ ಪ್ರಕರಣ ದಾಖಲಿಸಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ ನಂ; 277/2019 ಕಲಂ 279, 304 () .ಪಿ.ಸಿ ರೆ/ವಿ 134 () & (ಬಿ) 187 ಐ ಎಂ ವಿ ಆಕ್ಟ್

ದಿನಾಂಕ 30/10/2019 ರಂದು ಮದ್ಯಾಹ್ನ 02-30 ಗಂಟೆಗೆ ಈ ಕೇಸಿನ ಪಿರ್ಯಾದಿ ಸೌಮ್ಯ ಸಿ.ಎನ್ ಕೋಂ ಚಲುವರಾಜು ಕೆ.ಎಲ್  25 ವರ್ಷ ಕೆಂಚನಹಳ್ಳಿ ಗ್ರಾಮ ಹುಲಿಯೂರು ದುರ್ಗ ಹೋಬಳಿ ಕುಣಿಗಲ್ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ 30-10-2019 ರ ಮಧ್ಯರಾತ್ರಿ 01-45 ರ ಸಮಯದಲ್ಲಿ ನಮ್ಮ ಬಾಬ್ತು ಕಾರು ಕೆ.ಎ-11  1961  ಕಾರಿನಲ್ಲಿ ಕುಣಿಗಲ್ ನ ಆಸ್ಪತ್ರೆಗೆಂದು ನಾನು ನನ್ನ ತಾಯಿಯಾದ ಜಯಲಕ್ಷ್ಮಮ್ಮ ನನ್ನ ಗಂಡ ಚಲುವರಾಜು ಕೆ.ಎಲ್ ಹೋಗುತ್ತಿರುವಾಗ ಹುಲಿಯೂರು ದುರ್ಗ  ಕುಣಿಗಲ್ ನ ಮುಖ್ಯ ರಸ್ತೆಯಲ್ಲಿ ಅರವಿಂದ್ ಇಂಟರ್ ನ್ಯಾಷನಲ್ ಸ್ಕೂಲ್ ಹತ್ತಿರ ಹೋಗುತ್ತಿರುವಾಗ ಕಾರು ಕೆಟ್ಟು ನಿಂತಿದ್ದು ಇದೇ ಸಮಯಕ್ಕೆ ನನ್ನ ಗಂಡ ಚಲುವರಾಜು ರಸ್ತೆಯ ಎಡಭಾಗದ ಪಕ್ಕದಲ್ಲಿ ನಿಲ್ಲಿಸಿ ತಾನು ಕಾರಿನ ಬಲಭಾಗದ ಪಕ್ಕದಲ್ಲಿ ನಿಂತಿರುವಾಗ ಇದೇ ಸಮಯದಲ್ಲಿ ನಿಲ್ಲಿಸಿ, ಇದೇ ಸಮಯಕ್ಕೆ ಹುಲಿಯೂರು ದುರ್ಗ ಕಡೆಯಿಂದ ಬಂದ ಕ್ಯಾಂಟರ್ ಚಾಲಕ ತನ್ನ ಕ್ಯಾಂಟರ್ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ  ಪರಿಣಾಮ ತನ್ನ ಗಂಡ ಕ್ಯಾಂಟರ್ ನ ಚಕ್ರಕ್ಕೆ ಸುಲುಕಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಅಪಘಾತದ ಸಂಧರ್ಭದಲ್ಲಿ ನಾವುಗಳು ಕಾರಿನ ಒಳಗಡೆ ಕುಳಿತಿದ್ದು ಕೆಳಗೆ ಇಳಿದು ನೋಡಿದಾಗ ಕ್ಯಾಂಟರ್ ಚಾಲಕ ತನ್ನ ಕ್ಯಾಂಟರ್ ನ್ನು ಮುಂದೆ ನಿಲ್ಲಿಸಿದ್ದು ನಂತರ ಕ್ಯಾಂಟರ್ ನ್ನು ಸ್ಥಳದಿಂದ ತೆಗೆದುಕೊಂಡು ಪರಾರಿಯಾಗಿರುತ್ತಾನೆ. ಆದ್ದರಿಂದ ಕ್ಯಾಂಟರ್ ನಂಬರ್ ನ್ನು ನೋಡಲು ಸಾಧ್ಯವಾಗಿರುವುದಿಲ್ಲ ಆದ್ದರಿಂದ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತಾರೆ ತಾವುಗಳು ಕಾನೂನು ರೀತ್ಯ ಕ್ರಮ ಜರುಗಿಸ ಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಠಾಣಾ ಮೊನಂ 277/2019 ಕಲಂ 279, 304 (ಎ) ಐ.ಪಿ.ಸಿ ರೆ/ವಿ 134 (ಎ) & (ಬಿ) 187 ಐ ಎಂ ವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.Wednesday, 30 October 2019

ಅಪರಾಧ ಘಟನೆಗಳು 30-10-19

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ.137/2019 ಕಲಂ 447, 379 ಐಪಿಸಿ

ದಿನಾಂಕ:-29-10-2019 ರಂದು ಸಂಜೆ 05.45 ಗಂಟೆಗೆ ಪಿರ್ಯಾದುದಾರರಾದ ಗಿರಿಯಮ್ಮ ಕೋಂ ತೋರಿಯಪ್ಪ, 65 ವರ್ಷ, ನಾಯಕ ಜನಾಂಗ, ಜಿರಾಯ್ತಿ, ಸಿಂಗದಹಳ್ಳಿ, ಕಂದಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆ ಲೇಟ್ ಗಿರಿತಿಮ್ಮಯ್ಯ ಬಿನ್ ತಿಮ್ಮಯ್ಯ ಇವರ ಹೆಸರಿನಲ್ಲಿ ಸಿಂಗದಹಳ್ಳಿ ಗ್ರಾಮದ ಸರ್ವೇ ನಂಬರು 50/03ಎ ನಲ್ಲಿ 02 ಎಕರೆ 09 ಗುಂಟೆ ಜಮೀನು ಇದ್ದು, ನನ್ನ ತಂದೆ ಗಿರಿತಿಮ್ಮಯ್ಯ ನವರು ಮತ್ತು ನನ್ನ ತಾಯಿ ಓಬಳಮ್ಮನವರು ಮರಣ ಹೊಂದಿರುತ್ತಾರೆ. ನನ್ನ ತಂದೆ ತಾಯಿಯವರಿಗೆ ನಾವು ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳು ಇರುವುದಿಲ್ಲ. ನಾವು ನನ್ನ ತಂದೆಯವರ ಜಮೀನಿನಲ್ಲಿ ಮನೆಯನ್ನು ನಿರ್ಮಿಸಿಕೊಂಡು ನಮ್ಮ ತಂದೆಯವರ ಆಸ್ತಿಯನ್ನು ಅಭಿವೃದ್ಧಿ ಪಡಿಸಿಕೊಂಡು ತೆಂಗು ಮತ್ತು ಅಡಿಕೆ ಬೆಳೆಯನ್ನು ಬೆಳೆದಿರುತ್ತೇವೆ. ಈ ಜಮೀನಿಗೆ ಕಂದಿಕೆರೆ ಹೋಬಳಿ ಸಿದ್ದನಕಟ್ಟೆ ಗ್ರಾಮದ ವಾಸಿಗಳಾದ ಶಾರದಮ್ಮ ಕೋಂ ಲೇ ಹನುಮಂತಯ್ಯ, ಪ್ರಸನ್ನ ಬಿನ್ ಲೇ ಹನುಮಂತಯ್ಯ,(ಬೆಂಗಳೂರು ಹೈಕೋರ್ಟ್ ವಕೀಲರು) ಇವರುಗಳು ದಿನಾಂಕ:28/10/2019 ರಂದು ಅಪರಾಹ್ನ ಸುಮಾರು 03 ಗಂಟೆ ಸಮಯದಲ್ಲಿ ನನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕೊಯ್ಲಿಗೆ ಬಂದಿದ್ದ ಅಡಿಕೆಗೊನೆಗಳನ್ನು ಆಳುಗಳನ್ನು ಕರೆದುಕೊಂಡು ಬಂದು ಅತಿಕ್ರಮವಾಗಿ ಅಡಿಕೆಗೊನೆಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. ಅಷ್ಟರಲ್ಲಿ ನಾನು ನನ್ನ ಜಮೀನಿನ ಕೆಳಭಾಗದಲ್ಲಿ ಕೆಲಸ ಮಾಡಿಕೊಂಡಿದ್ದಾಗ ಇವರು ಅಡಿಕೆಗೊನೆಗಳನ್ನ ಲಾಯರ್ ಮನೆಯವರು ಕೀಳುತ್ತಿದ್ದಾರೆ ಎಂದು ತಿಳಿಸಿದರು. ನಾನು ಜಮೀನಿನ ಕೆಳಭಾಗದಿಂದ ಅಡಿಕೆ ಮರಗಳು ಇದ್ದ ಜಾಗಕ್ಕೆ ಹೋಗುವಷ್ಟರಲ್ಲಿ ಅಡಿಕೆಗೊನೆಗಳನ್ನು ಕಿತ್ತು ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ನಾನು ನನ್ನ ಮಗ ಮತ್ತು ನನ್ನ ಅಳಿಯನನ್ನು ಬೈಕಿನಲ್ಲಿ ಕರೆದುಕೊಂಡು ಅವರನ್ನು ಹಿಂಬಾಲಿಸಿಕೊಂಡು ಹೋದೆವು. ಅಷ್ಟರಲ್ಲಿ ಲಾಯರ್ ಪ್ರಸನ್ನನ ಕಡೆಯವರು ನನ್ನ ಮಗನ ಮತ್ತು ಅಳಿಯನ ಬೈಕ್‌ಗಳನ್ನು ಕಿತ್ತುಕೊಂಡು ನಮ್ಮ ಮೇಲೆ ದೌರ್ಜನ್ಯ ಮಾಡಿ ನಮ್ಮ ಬೈಕ್‌ಗಳನ್ನು ಅವರ ಮನೆಯಲ್ಲೆ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ವಿನಾಕಾರಣ ನಮ್ಮ ಮೇಲೆ ದೌರ್ಜನ್ಯ ಮಾಡಿ ಅಡಿಕೆಗೊನೆಗಳನ್ನು ಕಿತ್ತುಕೊಂಡು ಹೋಗಿರುವ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ನೀಡಿದ ಲಿಖಿತ ದೂರನ್ನು ಸ್ವೀಕರಿಸಿ ಠಾಣಾ ಮೊ.ನಂ.137/2019 ಕಲಂ 447, 379 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲು ಮಾಡಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ  ಕಲಂ 232/2019 ಕಲಂ 87 ಕೆ ಪಿ ಆಕ್ಟ್

ತುಮಕೂರು  ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ. ಶ್ರೀ ಲಕ್ಷ್ಮಯ್ಯ ಎಂ.ಬಿ ರವರು ಕಳುಹಿಸಿದ ವರದಿಯ ಅಂಶವೇನೆಂದರೆ, ಈ ದಿನ ದಿನಾಂಕ:29/10/2019 ರಂದು ಸಾಯಂಕಾಲ  6-30 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವಾಗ್ಗೆ ವಡ್ಡರಹಳ್ಳಿ ಗ್ರಾಮದ  ಸಾರ್ವಜನಿಕ ಸ್ಥಳವಾದ ಕೆರೆ ಅಂಗಳದಲ್ಲಿ ಸುಮಾರು 7-8 ಜನರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಟವಾಡುತ್ತಿದ್ದರೆಂತಾ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಸಿಬ್ಬಂದಿಯವರಾದ , ಹೆಚ್‌ಸಿ 313,169 ಪಿಸಿ 183,961,166,165,533,521  ರವರೊಂದಿಗೆ ವಡ್ಡರಹಳ್ಳಿ ಗ್ರಾಮದ ಜೀಸಸ್ ಲವ್ ಸ್ಕೂಲ್ ರಸ್ತೆ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗಕ್ಕೆ ರಾತ್ರಿ ಸುಮಾರು 7-00 ಗಂಟೆಗೆ  ಹೋಗಿ ನೋಡಲಾಗಿ ಕೆರೆ ಅಂಗಳದಲ್ಲಿ ಒಂದು ಬ್ಯಾಟರಿ ಬೆಳಕಿನಲ್ಲಿ 7-8 ಜನರು ಗುಂಪಾಗಿ ಕುಳಿತುಕೊಂಡು ಒಳಗೆ ಹೋರಗೆ ಎಂದು ಕೂಗುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು  ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಟವಾಡುತ್ತಿರುವುದು ದೃಢಪಡಿಸಿಕೊಂಡಿದ್ದು, ಇವರ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ವರದಿಯನ್ನು ಸಿದ್ದಪಡಿಸಿ ನಮ್ಮ ಠಾಣಾ ಪಿಸಿ 961 ರವರ ರವರ ಮೂಲಕ ಕಳುಹಿಸಿದ ವರದಿಯನ್ನು ಪಡೆದು ಜಿಎಸ್‌ಸಿ (ಎನ್‌ಸಿಆರ್) ನಂ 402 /19 ನೊಂದಾಯಿಸಿ ದಾಳಿ ಮಾಡಿ  ಪ್ರಕರಣ ದಾಖಲಿಸಲು ಘನನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣಾ ಮೊ.ನಂ 322/2019 ಕಲಂ 87 ಕೆ.ಪಿ.ಆಕ್ಟ್  ಪ್ರಕರಣ ದಾಖಲಿಸಿದೆ.

ಮಧುಗಿರಿ ಪೊಲೀಸ್ ಠಾಣಾ ಮೊ .ನಂ: 193/19 ಕಲಂ:379 IPC

ಈ ಕೇಸಿನ ಪಿರ್ಯಾದಿ ತಿಮ್ಮೇಗೌಡ ಬಿನ್ ಮೂಡಲಗಿರಿಯಪ್ಪ, 35 ವರ್ಷ, ವಕ್ಕಲಿಗರು ಜನಾಂಗ, ಕೂಲಿ ಕೆಲಸ,ನೀರಕಲ್ಲು ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾ|| ರವರು  ದಿನಾಂಕ 29-10-2019 ರಂದು ಮದ್ಯಾಹ್ನ 12-00 ಗಂಟೆಗೆ  ಠಾಣೆಗೆ ಹಾಜರಾಗಿ ನೀಡಿದ ದೂರನ ಸಾರಂಶವೇನೆಂದರೆ ದಿನಾಂಕ 09-10-2019 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಪಿರ್ಯಾದಿ ತಿಮ್ಮೇಗೌಡ ರವರು ಸಂತೆಗಾಗಿ ಮಧುಗಿರಿ ನಗರದ ಸ್ಕಂದ  ಟಿ.ವಿ.ಎಸ್ ಶೋ ರೂಂ ಮುಂಭಾಗ ತನ್ನ ಬಾಬ್ತು KA-06-EL-7192 ದ್ವಿಚಕ್ರವಾಹನವನ್ನು ನಿಲ್ಲಿಸಿ ಸಂತೆಗೆ ಹೋಗಿ ಸಂತೆ ಮಾಡಿಕೊಂಡು ನಂತರ ವಾಪಸ್ ಬಂದು ನೋಡಲಾಗಿ ಟಿ.ವಿ.ಎಸ್ ಶೋ ರೂಂ ಮುಂಭಾಗ ನಿಲ್ಲಿಸಿದ್ದ ತನ್ನ ಬಾಬ್ತು KA-06-EL-7192 ದ್ವಿಚಕ್ರವಾಹನ ಇರುವುದಿಲ್ಲ ನಂತರ ಎಲ್ಲಾ ಕಡೆಗಳಲ್ಲಿ ಹುಡುಕಲಾಗಿ ಸಿಕ್ಕಿರುವುದಿಲ್ಲ ಪಿರ್ಯಾದಿಯು ಬಾಬ್ತು KA-06-EL-7192 Hero Splendor Plus Chassis No- MBLHA10AMCHF81433 Engine No- HA10EJCHFA1765 ಆಗಿದ್ದು ಇದರ ಬೆಲೆ ಸುಮಾರು 20,000 ರೂ ಆಗಿರುತ್ತೆ. ಆದುದರಿಂದ ಪಿರ್ಯಾದಿಯ ಬಾಬ್ತು ಕಳುವಾಗಿರುವ ದ್ವಿಚಕ್ರವಾಹನವನ್ನು ಎಲ್ಲಾ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗದೇ ಇರುವುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಕಳುವಾಗಿರುವ ಸದರಿ ದ್ವಿಚಕ್ರವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಅಪರಾಧ ಘಟನೆಗಳು 29-10-19

ಮಧುಗಿರಿ ಪೊಲೀಸ್ ಠಾಣಾ ಮೊ .ನಂ: 190/19 ಕಲಂ:279,304(A) IPC

ಪಿರ್ಯಾದಿ ಎಲ್,ಡಿ ಸತ್ಯಬಾಮ ಕೋಂ ಬಿ,ಎನ್ ಕಾವಲಪ್ಪ,74 ವರ್ಷ, ವಕ್ಕಲಿಗರು,ಗೃಹಿಣಿ,  ಯಲಹಂಕ ಉಪ ನಗರದ ನ್ಯೂ ಟೌನ್|| ಕ್ಲಬ್ ಬಳಿ ಬೆಂಗಳೂರು ರವರು ದಿನಾಂಕ 28-10-2019 ರಂದು ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡ ಬಿ,ಎನ್ ಕಾವಲ್ಲಪ್ಪ ಬಿನ್ ಲೇ|| ನರಸಪ್ಪ 82 ವರ್ಷ ರವರು ನಿವೃತ್ತ ಪ್ರೋಪೆಸರ್ ಆಗಿದ್ದು, ಕಾವಲಪ್ಪ ರವರು ಸ್ವಂತ ಊರು ಮಧುಗಿರಿ ತಾ|| ಕಸಬಾ(ಹೋ) ಭಕ್ತರಹಳ್ಳಿ ಗ್ರಾಮವಾಗಿದ್ದು,ಸುಮಾರು 30 ವರ್ಷಗಳ ಹಿಂದೆ ಇದೇ ಮಧುಗಿರಿ ತಾ|| ದೊಡ್ಡೇರಿ (ಹೋ) ಜಯನಗರದ ಬಳಿ ಜಮೀನು ಖರೀದಿಸಿದ್ದು.ಈ ಜಮೀನನ್ನು ನೋಡಿಕೊಳ್ಳಲು ಒಬ್ಬ ರೈತನನ್ನು ಇಟ್ಟಿದ್ದು, ಕಾವಲಪ್ಪರವರು  ವಾರಕ್ಕೊಮ್ಮೆ ಬೆಂಗಳೂರಿನಿಂದ ಜಮೀನು ನೋಡಿಕೊಂಡು ಬರಲು ಮಧುಗಿರಿಗೆ ಬರುತ್ತಿದ್ದರು,ದಿನಾಂಕ;27.10.2019 ರಂದು ಬೆಳಗ್ಗೆ;06.00 ಗಂಟೆಗೆ ಕಾವಲಪ್ಪ ರವರು  ಮನೆಯನ್ನು ಬಿಟ್ಟು ಮಧುಗಿರಿಗೆ ಹೋಗಿ ಬರುತ್ತೇನೆಂದು ಪಿರ್ಯಾದಿಗೆ  ಹೇಳಿ ಬಂದಿದ್ದರು,ದಿನಾಂಕ;27.10.2019 ರಂದು ಸಂಜೆ;07.15 ಗಂಟೆಯ ಸಮಯದಲ್ಲಿ ಪಿರ್ಯಾದಿಯ ಗಂಡನ ಸ್ನೆಹಿತರಾದ ಮಧುಗಿರಿಯ ಶ್ರೀರಾಮಪ್ಪ ರವರು ಪಿರ್ಯಾದಿಗೆ ಪೋನ್ ಮಾಡಿ ಕಾವಲಪ್ಪ ರವರಿಗೆ ಇದೇ ದಿನ ಸಂಜೆ;07.00 ಗಂಟೆಯ ಸಮಯದಲ್ಲಿ ಮಧುಗಿರಿ ತಾ|| ಬೆಲ್ಲದಮಡಗು ಗೇಟ್ ಸಮೀಪ ರಸ್ತೆ ಅಪಘಾತವಾಗಿ ಸ್ಥಳದಲ್ಲಿಯೇ ಮೃತರಾಗಿರುತ್ತಾರೆಂದು ತಿಳಿಸಿದ ಮೇರೆಗೆ ನಂತರ ನಾವು ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಬಂದು ನೋಡಲಾಗಿ, ಕಾವಲಪ್ಪ ರವರ ಶವವು ಮಧುಗಿರಿ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿದ್ದು, ಪಿರ್ಯಾದಿಯ ಗಂಡನಿಗೆ ರಸ್ತೆ ಅಪಘಾತದಿಂದ ತಲೆಗೆ ಬಲವಾದ ಗಾಯಗಳಾಗಿ, ಬಲಕೈಗೆ ,ಕೆನ್ನಗೆ ತರಚಿದ ಗಾಯಗಳಾಗಿದ್ದವು.ನಂತರ ಈ ಅಪಘಾತದ ಬಗ್ಗೆ ತಿಳಿಯಲಾಗಿ ದಿನಾಂಕ;27.10.2019 ರಂದು ಸಂಜೆ;07.00 ಗಂಟೆಯ ಸಮಯದಲ್ಲಿ ಮಧುಗಿರಿ ತಾ|| ಕಸಬಾ(ಹೋ) ಬೆಲ್ಲದಮಡಗು ಗೇಟ್ ಸಮೀಪ ಪಿರ್ಯಾದಿಯ ಗಂಡನಾದ ಕಾವಲಪ್ಪ ರವರು ಜಯನಗರದ ತಮ್ಮ ಜಮೀನಿನ ಕಡೆಯಿಂದ KA-14-V-2784 ನೇ ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಮಧುಗಿರಿಗೆ ಬರುತ್ತಿರುವಾಗ್ಗೆ ಮಾರ್ಗಮದ್ಯೆ;ಮಧುಗಿರಿ ತಾ|| ಕಸಬಾ(ಹೋ) ಡಿ,ವಿ ಹಳ್ಳಿ,ಬೆಲ್ಲದಮಡಗು ಗೇಟ್ ನಡುವೆ ಇರುವ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಿರಾ - ಮಧುಗಿರಿ ಮುಖ್ಯ ರಸ್ತೆಯಲ್ಲಿ ಸ್ವಯಂ ರಸ್ತೆ ಅಪಘಾತವಾಗಿ ಮೃತರಾಗಿರುತ್ತಾರೆಂದು ತಿಳಿಯಿತು,ಅದರೂ ಸಹ ಬೇರೆ ಯಾವುದಾದರೂ ವಾಹನವು ಪಿರ್ಯಾದಿಯ ಗಂಡನ ವಾಹನಕ್ಕೆ ಡಿಕ್ಕಿಹೊಡೆದಿದೆಯೇ ಎಂಬ ಬಗ್ಗೆ ತನಿಖೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ .ನಂ: 191/19 ಕಲಂ:279,337 IPC

ಈ ಕೇಸಿನ ಪಿರ್ಯಾದಿ ತಿಮ್ಮಯ್ಯ ಬಿನ್ ಲೇ|| ದಾಸಪ್ಪ,60 ವರ್ಷ, ವಕ್ಕಲಿಗರು , ದಾಸಪ್ಪನಪಾಳ್ಯ ಮಧುಗಿರಿ ತಾ||  ದಿನಾಂಕ 28-10-2019 ಸಂಜೆ 6-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೆನೆಂದರೆ ಪಿರ್ಯಾದಿಯ ಎರಡನೇ ಮಗನಾದ ಶ್ರೀನಿವಾಸ ಡಿ,ಟಿ 29 ವರ್ಷ ರವರು ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದು,ದೀಪಾವಳಿ ಹಬ್ಬದ ಸುಲುವಾಗಿ ತಮ್ಮ ಊರಿಗೆ ಬಂದಿದ್ದನು, ದಿನಾಂಕ;27.10.2019 ರಂದು ಮದ್ಯಾಹ್ನ;03.00 ಗಂಟೆಯ ಸುಮಾರಿನಲ್ಲಿ ಪಿರ್ಯಾದಿಯ ಮಗ  ಶ್ರೀನಿವಾಸ ಹಾಗೂ ತಮ್ಮ ಊರಿನ ಭೀಮರಾಜು ನೊಂದಿಗೆ, ಮನೆಗೆ ತರಕಾರಿ ತರಲು ನಮ್ಮ ಊರಿನಿಂದ ಮಧುಗಿರಿಗೆ KA-64-L-5426 ನೇ ಬೈಕ್ ನಲ್ಲಿ ಹೋಗಿದ್ದರು ನಂತರ ನೆನ್ನೆ ದಿನ ದಿನಾಂಕ;27.10.2019 ರಂದು ಮದ್ಯಾಹ್ನ;03.45 ಗಂಟೆಯ ಸಮಯದಲ್ಲಿ  ನಮ್ಮ ಊರಿನ ನಮ್ಮ ಊರಿನ ನಾಗೇಶ್ ಬಿನ್ ತಿಮ್ಮಯ್ಯ ರವರು ಪಿರ್ಯಾದಿಗೆ  ಪೋನ್ ಮಾಡಿ ನಿನ್ನ ಮಗನಿಗೆ ಮಧುಗಿರಿ ತಾ|| ಬಿಜವರ ಬಳಿ ರಸ್ತೆ ಅಪಘಾತವಾಗಿದೆ ನಾನು ಹಾಗೂ ಇತರೆಯರು ಗಾಯಾಳುಗಳನ್ನು ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು ನಂತರ ಪಿರ್ಯಾದಿಯು  ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಬಂದು ನೋಡಲಾಗಿ  ಶ್ರೀನಿವಾಸನಿಗೆ ಹಾಗೂ ತಮ್ಮ ಊರಿನ ಭೀಮರಾಜು ರವರಿಗೆ ಗಾಯಗಳಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಈ ಅಪಘಾತದ ಬಗ್ಗೆ ಪಿರ್ಯಾದಿಯು ತನ್ನ ಮಗ ಶ್ರೀನಿವಾಸನಿಂದ ತಿಳಿಯಲಾಗಿ ಇದೇ ದಿನ ನಾನು ಊರಿನಿಂದ KA-64-L-5426 ನೇ ನಂಬರಿನ ಬೈಕ್ ನಲ್ಲಿ ಮಧುಗಿರಿಗೆ ಬೀಮರಾಜು ಬಿನ್ ಕೆಂಪಯ್ಯ 27 ವರ್ಷ ನೊಂದಿಗೆ ತರಕಾರಿ ತರಲು ಮಧುಗಿರಿಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮಧುಗಿರಿ ತಾ|| ಕಸಬಾ(ಹೋ) ಬಿಜವರ ಕೆರೆ ಹಿಂಭಾಗದ ಲಕ್ಷ್ಮೀಪತಪ್ಪ ರವರ ಜಮೀನಿನ ಬಳಿ ಬಂದ್ರೇಹಳ್ಳಿ – ಬಿಜವರ ಮುಖ್ಯ ರಸ್ತೆಯಲ್ಲಿ, ಇದೇ ದಿನ ದಿನಾಂಕ;27.10.2019 ರಂದು ಮದ್ಯಾಹ್ನ;03.30 ಗಂಟೆಯ ಸುಮಾರಿನಲ್ಲಿ,ಇದೇ ವೇಳೆಗೆ ಇದೇ ರಸ್ತೆಯಲ್ಲಿ ಎದುರುಗೆ ಬಿಜವರ ಕಡೆಯಿಂದ ಬರುತ್ತಿದ್ದ ಒಂದು ಬೈಕ್ ನ ಚಾಲಕ ಅತನ ಬೈಕ್ ಅನ್ನು ಜೋರಾಗಿ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ KA-64-L-5426 ನೇ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ ವಾಹನಗಳು ಜಖಂಗೊಂಡು,ಈ ಅಪಘಾತದಿಂದ ನನ್ನ ಬಲಕಾಲಿಗೆ,ಬೀಮರಾಜನ ಬಲಕಾಲಿಗೆ ಗಾಯಗಳಾದವು,ನಂತರ ನೋಡಲಾಗಿ ಅಪಘಾತ ಮಾಡಿದ ಬೈಕ್ ಅನ್ನು ಚಾಲನೆ ಮಾಡುತ್ತಿದ್ದ ಪ್ರಸನ್ನ ಕುಮಾರ್ ನ ಕಾಲಿಗೆ ಗಾಯವಾಗಿತ್ತು,ಹಾಗು ಆ ಬೈಕ್ ನಂಬರ್ ನೋಡಲಾಗಿ KA-64-K-7947  ಅಗಿತ್ತು, ನಂತರ ಇದೇ ರಸ್ತೆಯಲ್ಲಿ ಹೋಗುತ್ತಿದ್ದ ನಮ್ಮ ಊರಿನ ನಾಗೇಶ ಹಾಗು ಇತರೆಯರು ನಮ್ಮನ್ನು ಉಪಚರಿಸಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಅಟೋದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದರೆಂದು ಪಿರ್ಯಾದಿಯ ಮಗ ಶ್ರೀನಿವಾಸನು  ತಿಳಿಸಿದನು,ಗಾಯಾಳು  ಶ್ರೀನಿವಾಸನನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು  ಅದ್ದರಿಂದ ಈ ಅಪಘಾತ ಮಾಡಿದ KA-64-K-7947 ನೇ ಬೈಕ್ ಹಾಗು ಅದರ ಚಾಲಕನಾದ ಪ್ರಸನ್ನಕುಮಾರ್ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. .

ಮಧುಗಿರಿ ಪೊಲೀಸ್ ಠಾಣಾ ಮೊ .ನಂ: 192/19 ಕಲಂ:279 IPC

ಈ ಕೇಸಿನ ಪಿರ್ಯಾದಿ ವಸಂತ ಬಿನ್ ನಾಗರಾಜು , 21 ವರ್ಷ, ಗೊಲ್ಲರು ಜನಾಂಗ, ಸೋಗೆನಹಳ್ಳಿ ಗೊಲ್ಲರಹಟ್ಟಿ ಕಸಬಾ ಹೋಬಳಿ, ಮಧುಗಿರಿ ತಾ||ರವರು ದಿನಾಂಕ 28-10-2019 ರಂದು ಸಂಜೆ 7-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು  ಮಧುಗಿರಿ ಟೌನ್|| ನಲ್ಲಿ ಅಟೋ ಚಾಲನೆಮಾಡಿಕೊಂಡು ಇದ್ದು, ಪಿರ್ಯಾದಿಗೆ ಸೇರಿದ KA-01-AF-1403 TOYOTA ETIOS GD(M) ನೇ ಕಾರನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ಬಿಟ್ಟಿದ್ದು,ಈ ಕಾರನ್ನು ಚಾಲಕನಾದ ಅರುಣ್ ಕುಮಾರ್ ಟಿ,ಜಿ ಬಿನ್ ಗೋವಿಂದಾಸ್ ವಿ 24 ವರ್ಷ ಕೆ,ಆರ್ ಬಡಾವಣೆ ಮಧುಗಿರಿ ಟೌನ್||ರವರು ದೀಪಾವಳಿ ಹಬ್ಬದ ಸಲುವಾಗಿ ನಮ್ಮ ಊರಿಗೆ ತೆಗೆದುಕೊಂಡು ಬರುತ್ತಿದ್ದಾಗ ದಿನಾಂಕ;27.10.2019 ರಂದು ಸಂಜೆ;06.00 ಗಂಟೆಯ ಸುಮಾರಿನಲ್ಲಿ ನಮ್ಮ ಊರಿನ ಪ್ರಾರಂಭದಲ್ಲಿ ಸಿಗುವ ವಾಟರ್ ಸಪ್ಲೇ ಕರೆಂಟ್ ರೂಂ (ಪಂಪ್ ಹೌಸ್ ) ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತೆ ಎಂದು ತಿಳಿದು ನಂತರ ಪಿರ್ಯಾದಿಯು ಹೋಗಿ ನೋಡಲಾಗಿ ಪಿರ್ಯಾದಿಯ  ಕಾರಿನ ಮುಂದಿನ ಭಾಗವು ವಾಟರ್ ಸಪ್ಲೆ ಕರೆಂಟ್ ರೂಂಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಮುಂದಿನ ಭಾಗವು ಸಂಪೂರ್ಣವಾಗಿ ಜಖಂಗೊಂಡಿತ್ತು, ಈ ಅಪಘಾತದ ಬಗ್ಗೆ ತಿಳಿಯಲಾಗಿ ದಿನಾಂಕ;27.10.2019 ರಂದು ಸಂಜೆ;06.00 ಗಂಟೆಯ ಸುಮಾರಿನಲ್ಲಿ ಸೋಗೇನಹಳ್ಳಿ ಕಡೆಯಿಂದ ನಮ್ಮ ಊರಿಗೆ ಕಾರನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ, ಪಿರ್ಯಾದಿಯ ಕಾರಿನ ಚಾಲಕ ಅರುಣ್ ಕುಮಾರ್ ಟಿ,ಜಿ ರವರು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಊರಿನ ಪ್ರಾರಂಭದಲ್ಲಿರುವ ವಾಟರ್ ಸಪ್ಲೆ ನ ಕರೆಂಟ್ ರೂಂ ಗೆ ಡಿಕ್ಕಿ ಹೊಡೆದ ಪರಿಣಾಮ,ಕಾರಿನ ಮುಂದಿನ ಭಾಗವು ಜಖಂಗೊಂಡಿರುತ್ತೆ ಎಂದು ಹಾಗೂ ಕಾರಿನ ಹೇರ್ ಬಲೂನ್ಸ್ ಒಪನ್ ಅಗಿದ್ದರಿಂದ ಚಾಲಕನಿಗೆ ಯಾವುದೇ ಗಾಯಗಳಾಗಲಿಲ್ಲವೆಂದು ತಿಳಿಯಿತು,ಅದ್ದರಿಂದ ಈ ಅಪಘಾತ ಮಾಡಿದ KA-01-AF-1403 ನೇ ಕಾರಿನ ಚಾಲಕನಾದ ಅರುಣ್ ಕುಮಾರ್ ಟಿ,ಜಿ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Monday, 28 October 2019

ಅಪರಾಧ ಘಟನೆಗಳು 28-10-19

ಹೆಬ್ಬೂರು  ಪೊಲೀಸ್ ಠಾಣಾ  ಮೊ ನಂ-168/2019 ಕಲಂ 279 ಐಪಿಸಿ

ದಿನಾಂಕ-28/10/2019 ರಂದು ಮಧ್ಯಾಹ್ನ 02-15 ಗಂಟೆಗೆ ಪಿರ್ಯಾದಿಯಾದ ಭರತ್ ಸಿ ಗೌಡ ಎ ಬಿನ್ ಆನಂದ್‌ ಸಿ, 24 ವರ್ಷ, ಒಕ್ಕಲಿಗ ಜನಾಂಗ, ಬೆಂಗಳೂರಿನಲ್ಲಿ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆಂಟ್‌ ಕೆಲಸ, ಹಾಲಿ ವಾಸ: # 2C/C, OMBR LAY OUT, ಪಿಳ್ಳಾರೆಡ್ಡಿನಗರ, ಬಾಣಸವಾಡಿ ಬೆಂಗಳೂರು, ಸ್ವಂತ ಊರು: ದೊಮ್ಮನಕುಪ್ಪೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕ್ & ಜಿಲ್ಲೆ ಆದ ನಾನು ಬರೆದುಕೊಟ್ಟ ದೂರು. ಮೊ,ನಂ-8970442246. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂದರೆ ದಿನಾಂಕ 27-10-2019 ರಂದು ನಾನು ಮತ್ತು ನನ್ನ ಅಣ್ಣನಾದ ವಿನೋದ್‌ ರವರು ನನ್ನ ದೊಡ್ಡಮ್ಮನ ಮಗನಾದ ಅಂದರೆ ನನ್ನ ಅಣ್ಣನಾದ ಸಂದೀಪ್‌ ರವರ ಬಾಬ್ತು ಕೆಎ-01-ಎಂಎಲ್-3906 ನೇ ಮಾರುತಿ ರಿಟ್ಜ್‌ ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಲು ಕಾರನ್ನು ನನ್ನ ಅಣ್ಣನಾದ ವಿನೋದ್‌ ರವರು ಚಾಲನೆ ಮಾಡಿಕೊಂಡು ಹೆಬ್ಬೂರು ಗ್ರಾಮವನ್ನು ಬಿಟ್ಟು ಎಸ್,ಎನ್ ಪಾಳ್ಯ ಗ್ರಾಮದಲ್ಲಿರುವ ರೇಷ್ಮೇ ಇಲಾಖೆಯ ಕ್ವಾಟ್ರಸ್ ಮುಂಭಾಗದ ತುಮಕೂರು ಕುಣಿಗಲ್ ಟಾರ್‌ ರಸ್ತೆಯಲ್ಲಿ ರಾತ್ರಿ ಸುಮಾರು 10-40 ಗಂಟೆ ಸಮಯದಲ್ಲಿ ರಸ್ತೆಯ ಎಡಭಾಗದಲ್ಲಿ ಕುಣಿಗಲ್ ಕಡೆಗೆ ಹೋಗುತ್ತಿರುವಾಗ್ಗೆ, ನಮ್ಮ ಮುಂಭಾಗದಲ್ಲಿ ಒಂದು ಲಾರಿಯ ಚಾಲಕನು ರಸ್ತೆಯ ಎಡಬದಿಯಲ್ಲಿ ಲಾರಿಯನ್ನು ನಿಲ್ಲಿಸಿದ್ದು, ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ರಸ್ತೆಗೆ ಲಾರಿಯನ್ನು ನಿರ್ಲಕ್ಷತೆಯಂದ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಆದರೆ ಕಾರಿನಲ್ಲಿದ್ದ ನನಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಹಾಗೂ ಕಾರನ್ನು ಚಾಲನೆ ಮಾಡುತ್ತಿದ್ದ ನನ್ನ ಅಣ್ಣ ವಿನೋದ್‌ ರವರಿಗೆ ಯಾವುದೇ ಗಾಯಗಳಾಗಲಿಲ್ಲ. ನಂತರ ನಾನು ಮತ್ತು ನನ್ನ ಅಣ್ಣ ವಿನೋದ್‌ ರವರು ಕಾರು ಇಳಿದು ಲಾರಿಯ ನಂಬರ್ ನೋಡಲಾಗಿ ಎಪಿ-04-ಡಬ್ಲ್ಯೂ-5603 ನೇ ಲಾರಿಯಾಗಿದ್ದು, ಲಾರಿಯ ಬಲಭಾಗದ ಮುಂದಿನ ಚಕ್ರದ ಬಳಿ ಸ್ವಲ್ಪ ಜಖಂ ಆಗಿದ್ದು, ಲಾರಿಯ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನನಗೆ  ಚಿಕಿತ್ಸೆ ಪಡೆಯುವಂತ ಗಾಯಗಳೇನೂ ಆಗದೇ ಇದ್ದರಿಂದ ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಿಲ್ಲ. ಆದ್ದರಿಂದ ತನ್ನ ಲಾರಿಯನ್ನು ನಿರ್ಲಕ್ಷತೆಯಿಂದ ರಸ್ತೆಗೆ ಚಾಲನೆ ಮಾಡಿ ನಮ್ಮ ಕಾರಿನ ಮುಂಭಾಗ ಜಖಂ ಆಗಲು ಕಾರಣನಾದ  ಎಪಿ-04-ಡಬ್ಲ್ಯೂ-5603 ನೇ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳಲು ಕೋರಿಕೊಳ್ಳುತ್ತೇನೆ. ಎರಡು ವಾಹನಗಳು ಸ್ಥಳದಲ್ಲಿಯೇ ಇರುತ್ತವೆ ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-168/2019 ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 16/19 ಕಲಂ 174 ಸಿ ಆರ್ ಪಿಸಿ

ದಿನಾಂಕ 28/10/2019 ರಂದು ಶಿರಾ ತಾಲ್ಲೂಕ್ ಹುಲಿಕುಂಟೆ ಹೋಬಳಿ ಯಲ್ಪೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ವಾಸಿ ಈರಣ್ಣ ಬಿನ್ ಲೇಟ್ ಸಣ್ಣ ಕೆಂಚಪ್ಪ, ಸುಮಾರು 46 ವರ್ಷ, ವಾಟರ್ ಮ್ಯಾನ್ ಕೆಲಸ,  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿನ ದಿನಾಂಕ 28/10/2019 ರಂದು ಬೆಳಗ್ಗೆ 7:30 ಗಂಟೆ ಸಮಯದಲ್ಲಿ ಪಿರ್ಯಾದಿ  ಮಗ ಯೋಗೀಶ್ ಸುಮಾರು 15 ವರ್ಷ, ಮತ್ತು ದೊಡ್ಡನಾಗಪ್ಪ ರವರ ಮಗನಾದ  ನನ್ನ ಅಳಿಯ ಸಿದ್ದೇಶ್ ಸುಮಾರು 11ವರ್ಷ, ರವರು ನಮ್ಮ ಗ್ರಾಮದಿಂದ ಸೀಮೆ ಹಸುವನ್ನು ತೊಳೆಯಲು ಯಲಪೇನಹಳ್ಳಿ ಗ್ರಾಮದ ಕೆರೆಗೆ ಬಂದಿದ್ದು ಸುಮಾರು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಯಲಪೇನಹಳ್ಳಿ ಕೆರೆಯ ಅಕ್ಕ ಪಕ್ಕದ ಜಮೀನಿನವರು ನೀರಿನಲ್ಲಿ ಯಾರೋ ಮುಳುಗಿ ಸತ್ತಿದ್ದಾರೆ ಎಂಬ ವಿಚಾರ ತಿಳಿದು ಗ್ರಾಮಸ್ಥರೊಂದಿಗೆ ನಾನು ಮತ್ತು ಸಿದ್ದೇಶ್ ರವರ ತಂದೆ ದೊಡ್ಡ ನಾಗಣ್ಣನವರು ಯಲಪೇನಹಳ್ಳಿ ಕೆರೆಯ ಕೋಡಿ ಹತ್ತಿರ ಬಂದು ನೋಡಲಾಗಿ ಮೃತ ದೇಹಗಳು ನನ್ನ ಮಗ ಯೋಗೇಶ್ ಮತ್ತು ನನ್ನ ಅಳಿಯ ಸಿದ್ದೇಶ್ ರವರದ್ದಾಗಿದ್ದು, ಇವರುಗಳು ಈ ದಿನ ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ಯಲಪೇನಹಳ್ಳಿ ಕೆರೆಗೆ ಸೀಮೆ ಹಸುವನ್ನು ತೊಳೆಯಲು  ಬಂದು ಆಕಸ್ಮಿಕವಾಗಿ ಕಾಲು ಜಾರಿ ಇಬ್ಬರೂ ನೀರಿನಲ್ಲಿ ಮುಳುಗಿ ಈಜು ಬಾರದೆ, ನೀರು ಕುಡಿದು ಮ್ರತ ಪಟ್ಟಿರುತ್ತಾರೆ. ಕೆರೆಯಲ್ಲಿ ಮುಳುಗಿದ್ದ ಮ್ರತ ದೇಹವನ್ನು ನಮ್ಮ ಗ್ರಾಮದ ಮಂಜುನಾಥ ಬಿನ್ ಮಾರಣ್ಣ ಮತ್ತು ನಾಗರಾಜು ಬಿನ್ ಸಿದ್ದಪ್ಪ ರವರುಗಳು ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದು ದಂಡೆಯ ಮೇಲೆ ಮಲಗಿಸಿರುತ್ತಾರೆ ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಳ್ಳಲು ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಠಾಣಾ ಯುಡಿಆರ್ ನಂ 16/2019 ಕಲಂ 174 ಸಿ ಆರ್ ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆSaturday, 26 October 2019

ಅಪರಾಧ ಘಟನೆಗಳು 26-10-19

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 108/19 ಕಲಂ 87 ಕೆ ಪಿ ಆಕ್ಟ್

ದಿನಾಂಕ:25/10/2019 ರಂದು ರಾತ್ರಿ 11-15ಗಂಟೆ ಸಮಯದಲ್ಲಿ  ಪಿರ್ಯಾದಿ ನಿರ್ಮಲ.ವಿ ಪಿ.ಎಸ್.ಐ ಆದ ನಾನು  ವಿಶ್ರಾಂತಿಯಲ್ಲಿದ್ದಾಗ ಠಾಣಾ ಸರಹದ್ದಿನ ಲಕ್ಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಂಭಾಗದ  ಸಾರ್ವಜನಿಕ ಸ್ಥಳದಲ್ಲಿ ನಾಗರಾಜ @ ಕಡ್ಡಿ ನಾಗ, ಮುದ್ದರಾಜು@ ಮುದ್ದಪ್ಪ, ಹಾಗೂ ಇತರರು ದುಂಡಾಕಾರವಾಗಿ ಕುಳಿತುಕೊಂಡು ಇಸ್ಪೀಟು ಜೂಜಾಟವಾಡುತ್ತಿರುತ್ತಾರೆಂತ  ಖಚಿತ ಬಾತ್ಮೀ ಬಂದ ಮೇರೆಗೆ ಠಾಣೆಗೆ ಬಂದು   ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಹೋಗಿ  ದಾಳಿ ಮಾಡಿ ಪ್ರಕರಣ ದಾಖಲಿಸಲು  ಅನುಮತಿ ಕೋರಿ ಘನ ನ್ಯಾಯಾಲಯದಲ್ಲಿ  ಠಾಣಾ ಎನ್ ಸಿ ಆರ್ ನಂ 252/2019 ರಲ್ಲಿ ನೊಂದಾಯಿಸಿ, ಘನ ನ್ಯಾಯಾಲಯದಿಂದ ಅನುಮತಿ ಪಡೆದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ಮೇಲ್ಕಂಡ ಸ್ಥಳದ  ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಜೀಪಿನಿಂದ  ಇಳಿದು  ನೋಡಲಾಗಿ ಸುಮಾರು 10 ಜನರು ದುಂಡಾಕಾರವಾಗಿ ಕುಳಿತು ಹಣವನ್ನು ಪಣವಾಗಿಕಟ್ಟಿಕೊಂಡು ಒಳಗೆ-ಹೊರಗೆ ಎಂದು ಕೂಗಾಡುತ್ತಾ ಕಾನೂನು ಬಾಹಿರ ಜೂಜಾಟವಾಡುತ್ತಿದ್ದರು,ನಾವು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಸಿಬ್ಬಂದಿ ಸಹಾಯದಿಂದ ಅವರುಗಳನ್ನು ಸುತ್ತುವರೆದು ಜೂಜಾಡುತ್ತಿದ್ದ ಆಸಾಮಿಗಳನ್ನು ಹಿಡಿದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ನಾಗರಾಜು @ ಕಡ್ಡಿ  ಬಿನ್ ಕೆಂಚಪ್ಪ. ಸುಮಾರು 27ವರ್ಷ, ನಾಯಕರು, ಇಟ್ಟಿಗೆ ಕೆಲಸ,  ಚಿರತಹಳ್ಳಿಗ್ರಾಮ, ಶಿರಾ ತಾಲ್ಲೂಕ್, 2) ಮುದ್ದರಾಜು @ ಮುದ್ದಪ್ಪ ಬಿನ್ ಮಹಾದೇವಪ್ಪ, ಸುಮಾರು  44 ವರ್ಷ,  ಕುಂಚಿಟಿಗರು,  ಜಿರಾಯ್ತಿ,  ಕರಿದಾಸರಹಳ್ಳಿ ಗ್ರಾಮ, ಶಿರಾ ತಾಲ್ಲೂಕ್  3) ಜಯಣ್ಣ ಬಿನ್ ಮದ್ದಣ್ಣ, ಸುಮಾರು 50ವರ್ಷ, ವಕ್ಕಲಿಗರು, ಜಿರಾಯ್ತಿ, ಕರೆತಿಮ್ಮನಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ 4)  ನಾಗರಾಜು ಬಿನ್ ತಿಮ್ಮಣ್ಣ ಸುಮಾರು 28ವರ್ಷ, ಕುರುಬರು, ಕೂಲಿಕೆಲಸ, ಯರಂಗುಂಟಹಳ್ಳಿ ಗ್ರಾಮ,ಅಮರಾಪುರ ಮಂಡಲಂ, ಮಡಕಶಿರಾ ತಾಲ್ಲೂಕ್ , ಆಂಧ್ರಪ್ರದೇಶ ರಾಜ್ಯ 5) ನಾಗರಾಜು ಬಿನ್  ಚೌಡಪ್ಪ,  ಸುಮಾರು 35ವರ್ಷ, ಉಪ್ಪಾರ ಜನಾಂಗ, ಕೂಲಿಕೆಲಸ , ಕರೆತಿಮ್ಮನಹಳ್ಳಿ ಗ್ರಾಮ, ಶಿರಾತಾಲ್ಲೂಕ್  6)ನಾಗಭೂಷಣ ಬಿನ್ ತಿಮ್ಮಣ್ಣ, ಸುಮಾರು 35ವರ್ಷ, ಕಮ್ಮರ ಜನಾಂಗ, ಕುಲ್ಮೆ ಕೆಲಸ, ಲಕ್ಕನಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ 7) ಉಮೇಶ ಬಿನ್ ಬುಜೇರಪ್ಪ,ಸುಮಾರು 50 ವರ್ಷ, ಕುಂಚಿಟಿಗರು, ಜಿರಾಯ್ತಿನಿದ್ರಗಟ್ಟೆ ಗ್ರಾಮ, ಮಡಕಶಿರಾ ತಾಲ್ಲೂಕ್  ಆಂಧ್ರಪ್ರದೇಶ ರಾಜ್ಯ 8) ರಂಗನಾಥ ಬಿನ್ ಚಿನ್ನಪ್ಪ, ಸುಮಾರು 44ವರ್ಷ, ಗೊಲ್ಲರು,ಜಿರಾಯ್ತಿ, ಯರಂಗುಂಟಹಳ್ಳಿ ಗ್ರಾಮ, ಅಮರಾಪುರ ಮಂಡಲಂ, ಮಡಕಶಿರಾ ತಾಲ್ಲೂಕ್, ಆಂಧ್ರಪ್ರದೇಶ ರಾಜ್ಯ 9)ಓಂಕಾರ ಬಿನ್ ಚಿಕ್ಕಣ್ಣ, ಸುಮಾರು 30ವರ್ಷ ,ಗೊಲ್ಲರು, ವ್ಯವಸಾಯ,ಕೊರ್ರೇವು  ಗ್ರಾಮ,  ಮಡಕಶಿರಾ ತಾಲ್ಲೂಕ್ , ಆಂಧ್ರಪ್ರದೇಶ ರಾಜ್ಯ 10)  ಗೋವಿಂದ  ಬಿನ್ ತಡಕಪ್ಪ, ಸುಮಾರು 45ವರ್ಷ, ಪರಿಶಿಷ್ಠ ಜನಾಂಗ,  ಕೂಲಿಕೆಲಸ,  ಲಕ್ಕನಹಳ್ಳಿ ಗ್ರಾಮ, ಶಿರಾ ತಾಲ್ಲೂಕ್  ಎಂತ ತಿಳಿಸಿದ್ದು   ಎಂತ ತಿಳಿಸಿದ್ದು ಅಖಾಡದಲ್ಲಿ ದೊರೆತ 1) 85,335/-ರೂ ನಗದು ಹಣ, 2)ಒಂದು ಹಳೇಯ ಟಾರ್ಪಲ್  3) 52ಇಸ್ಪೀಟ್ ಎಲೆಗಳು, 4) ಸ್ಯಾಮ್ ಸಂಗ್ ಕಂಪನಿಯ 04, ನೋಕೀಯಾ- 02 , ಎಂ.ಐ -02, ಒಪ್ಪೊ 01 ( ಒಟ್ಟು 09 )  ಮೊಬೈಲ್ ಪೂನ್ ಗಳು   ಮತ್ತು  ಅಖಾಡದ ಪಕ್ಕದಲ್ಲಿ ನಿಲ್ಲಿಸಿದ್ದ 1) KA-06-EB-8555 ನೇ ನಂಬರಿನ ದ್ವಿಚಕ್ರ ವಾಹನವನ್ನು ಮತ್ತು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ದಿನಾಂಕ26/10/2019 ರಂದು  ಮದ್ಯರಾತ್ರಿ  12:30 ಗಂಟೆಯಿಂದ 01-30 ಗಂಟೆಯ ವರೆಗೆ ಗ್ಯಾಸ್ ಲೈಟ್ ಬೆಳಕಿನಲ್ಲಿ ಪಂಚನಾಮೆ ಬರೆದು ಪಂಚನಾಮೆ ಮೂಲಕ ಆಸಾಮಿಗಳನ್ನು  ಮತ್ತು ಮಾಲಿನೊದಿಗೆ ಮದ್ಯರಾತ್ರಿ  02-00 ಗಂಟೆಗೆ ಠಾಣೆಗೆ ವಾಪಸ್ ಬಂದು  ಮುಂದಿನ  ಕ್ರಮ  ಜರುಗಿಸಲು ಸೂಚಿಸಿ ನೀಡಿದ ವರದಿಯನ್ನ ಪಡೆದು   ಠಾಣಾ ಮೊ ನಂ 108/2019 ಕಲಂ 87 ಕೆ.ಪಿ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ನಂ. 97/2019 ಕಲಂ: 279,427 IPC

ದಿನಾಂಕ:25/10/2019 ರಂದು ಸಂಜೆ 04:30 ಗಂಟೆಗೆ ಪಿರ್ಯಾದಿ ತಮ್ಮಣ್ಣ ಹೆಚ್.ಯು. ಬಿನ್ ಉಮೇಶ್. ಹೆಚ್.ಸಿ. 31 ವರ್ಷ, ವಕ್ಕಲಿಗರು, ಶಾಖಾಧಿಕಾರಿ, ಬೆಸ್ಕಾಂ ಕಛೇರಿ, ಮಿಡಿಗೇಶಿ. ಸ್ವಂತ ಊರು ಹೊಸಕೆರೆ ಗ್ರಾಮ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ಬೆಸ್ಕಾಂ ಕಛೇರಿಯಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಮ್ಮ ಬೆಸ್ಕಾಂ ಕಛೇರಿಯಲ್ಲಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಮಹಂತೇಶ್ ರುಡಗಿ ಎಂಬುವರು ದಿನಾಂಕ:24/10/2019 ರಂದು ಬೆಳಿಗ್ಗೆ ಪೋನ್ ಮಾಡಿ ಈ ದಿನ  ಅಂದರೆ ದಿನಾಂಕ:24/10/2019 ರಂದು ಬೆಳಗಿನ ಜಾವ ಸುಮಾರು 01:45 ಎ.ಎಂ. ನಲ್ಲಿ ಎಪಿ-02-ಟಿಹೆಚ್-2788 ನೇ ಲಾರಿಯ ಚಾಲಕನು ಲಾರಿಯನ್ನು ಪಾವಗಡ ಕಡೆಯಿಂದ ಮಧುಗಿರಿ-ಪಾವಗಡ ರಸ್ತೆಯಲ್ಲಿ ಅತಿ ಜೋರಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಿಡಿಗೇಶಿ ಬಸ್ ನಿಲ್ದಾಣದಲ್ಲಿರುವ ನ್ಯೂ ಎಸ್.ಎಲ್.ವಿ ಅಯ್ಯಂಗಾರ್ ಬೇಕರಿ ಮುಂಬಾಗ ದಲ್ಲಿರುವ ಎಲ್.ಟಿ. ಮಾರ್ಗದ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತವುಂಟು ಮಾಡಿರುವುದರಿಂದ ಮಾರ್ಗದ ಕಂಬ  ಮುರಿದು ಬಿದ್ದಿರುತ್ತೆ ಎಂತ ವಿಚಾರ ತಿಳಿಸಿದರು. ನಾನು ಕೂಡಲೇ ಸ್ಥಳಕ್ಕೆ  ಬಂದು  ನೋಡಲಾಗಿ ವಿಚಾರ ನಿಜವಾಗಿದ್ದು ಎಲ್.ಟಿ. ಮಾರ್ಗದ ಕಂಬವು ಮುರಿದು ಬಿದ್ದು ಕಂಬದಲ್ಲಿದ್ದ ವೈರುಗಳೆಲ್ಲಾ ಜೋತಾಡುತ್ತಿದ್ದವು. ನ್ಯೂ ಎಸ್.ಎಲ್.ವಿ ಅಯ್ಯಂಗಾರ್ ಬೇಕರಿ ಅಂಗಡಿ ಮುಂಭಾಗದ ಕಬ್ಬಿಣದ ಶೀಟಿನ ವಪ್ಪಾರ ಪೂರಾ ಜಖಂ ಆಗಿರುತ್ತೆ ಹಾಗೂ ನಮ್ಮ  ಎಲ್.ಟಿ. ಮಾರ್ಗದ ಕಂಬದ ಪಕ್ಕದಲ್ಲಿದ್ದ ಬಿ.ಎಸ್.ಎನ್.ಎಲ್. ಕಂಬ ಮತ್ತು ಕಾಪರ್ ಕೇಬಲ್ ಜಖಂ ಆಗಿರುವುದು ಕಂಡು ಬಂದಿರುತ್ತೆ. ಈ ಅಪಘಾತದಿಂದ ನಮ್ಮ ಇಲಾಖೆಗೆ ಸುಮಾರು 20,665 ರೂ ನಷ್ಠ ಉಂಟಾಗಿರುತ್ತೆ. ಈ ವಿಚಾರವನ್ನು ನಾನು ನಮ್ಮ ಮೇಲಾಧಿಕಾರಿಗಳಿಗೆ  ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣನಾದ ಎಪಿ-02-ಟಿಹೆಚ್-2788 ನೇ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ನಂ. 96/2019 ಕಲಂ: 15(A), 32(3), K.E. Act

ದಿನಾಂಕ:25/10/2019 ರಂದು ಬೆಳಿಗ್ಗೆ 11:30 ಗಂಟೆಗೆ ಠಾಣಾ ಪಿ.ಎಸ್.ಐ.  ರವರು  ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:25/10/2019 ರಂದು ಠಾಣಾ ಪಿಸಿ-223,ರೋಹಿತ್ ಕುಮಾರ್ ಮತ್ತು ಪಿಸಿ-1078 ಸುನಿಲ್ ಯಾದವ್ ರವರೊಂದಿಗೆ  ಮಿಡಿಗೇಶಿ ಠಾಣಾ ಸರಹದ್ದು ಗ್ರಾಮಗಳಾದ  ಮಿಡಿಗೇಶಿ,ಮಿಡಿಗೇಶಿ, ಹೊಸಕೆರೆ,ತಿಪ್ಪಗೊಂಡನಹಳ್ಳಿ ನೀಲಿಹಳ್ಳಿ, ,ಎಚ್ ಬಸವನಹಳ್ಳಿ,  ಗ್ರಾಮಗಳಲ್ಲಿ ಗಸ್ತು  ಮಾಡಿಕೊಂಡು ನಂತರ ಅವರಗಲ್ಲು  ಗ್ರಾಮದಲ್ಲಿ  ಬೆಳಿಗ್ಗೆ 11-00 ಗಂಟೆಯಲ್ಲಿ ಗಸ್ಸಿನಲ್ಲಿರುವಾಗ್ಗೆ ಅವರಗಲ್ಲು  ಗ್ರಾಮದ ವಾಸಿಯಾದ ಈರಣ್ಣ ಬಿನ್ ಲೇಟ್ ಓಬಳಪ್ಪ  ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು ಬಂದಿರುತ್ತೆ. ಆಧ್ದರಿಂದ ಸದರಿ ಆಸಾಮಿಯ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದ ಅಂಶವಾಗಿರುತ್ತೆFriday, 25 October 2019

ಅಪರಾಧ ಘಟನೆಗಳು 25-10-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 164/2019 ಕಲಂ : 448,341,307,436,511 ಐ.ಪಿ.ಸಿ.

ದಿನಾಂಕ: 24-10-2019 ರಂದು ರಾತ್ರಿ 09-30 ಗಂಟೆಗೆ ಪಿರ್ಯಾದಿ ಡಾ.ಪ್ರಕಾಶ್ ಎಂ.ಆರ್ ಬಿನ್ ರಾಮಣ್ಣ, 60 ವರ್ಷ, ಲಿಂಗಾಯಿತರು, ವೈದ್ಯರು, ಆದರ್ಶ ಕ್ಲಿನಿಕ್, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮತ್ತು ವೈದ್ಯೆಯಾಗಿರುವ ನನ್ನ ಪತ್ನಿ  ರಾಜೇಶ್ವರಿ ರವರು ಗುರುಕುಲ ಮಠದ ಕಾಂಪ್ಲೆಕ್ಸ್ ನಲ್ಲಿ ಆದರ್ಶ ಕ್ಲಿನಿಕ್ ಅಸ್ಪತ್ರೆಯನ್ನು ನಡೆಸುತ್ತಿದ್ದು, ನಾವು ಈಗ್ಗೆ ಸುಮಾರು 7 ವರ್ಷದ ಹಿಂದೆ ಕೋಟನಾಯಕನಹಳ್ಳಿ ಬಳಿಯಿರುವ ರುದ್ರಮುನಿ ಸ್ವಾಮಿಜಿಯವರ ಜಮೀನಿನ ಪಕ್ಕದಲ್ಲಿ ನಾನು ಮತ್ತು ನನ್ನ ಅಣ್ಣನ ಮಗ ವಿನಯ್ ಎಂ.ಪಿ ರವರು ಪ್ರತ್ಯೇಕವಾಗಿ ಜಮೀನನ್ನು ತೆಗೆದುಕೊಂಡಿದ್ದು, ವಿನಯ್ ಹಣಕಾಸಿನ ಸಮಸ್ಯೆಗೆ ಜಮೀನನ್ನು ಮಾರಿದ್ದು, ನನ್ನ ಜಮೀನು ಹಾಗೆ ಇರುತ್ತದೆ. ಈಗ್ಗೆ 6-7 ತಿಂಗಳಿಂದ ವಿನಯ್ ರವರು ನನ್ನ ಜಮೀನನ್ನು ನಮಗೆ ಬರೆದುಕೊಡಿ ಅಂತ ಕೇಳುತ್ತಿದ್ದ, ಅದಕ್ಕೆ ನಾನು ಕೊಡುವುದಿಲ್ಲ ಎಂದು ಹೇಳಿದಕ್ಕೆ ಆತ ನನಗೆ ಪದೇ ಪದೇ ಒತ್ತಾಯ ಮಾಡುತ್ತಿದ್ದ, ನಾನು ಇದಕ್ಕೆ ಒಪ್ಪದೆ ಇದ್ದುದರಿಂದ ನಮ್ಮನ್ನು ಕೊಲೆ ಮಾಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದ, ಈತ ಜಮೀನಿನ ಹಾಗೂ ಹಣಕಾಸಿನ ಹಿಂದಿನ ದ್ವೇಷದಿಂದ ದಿನಾಂಕ: 24-10-2019 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಪತ್ನಿ ರಾಜೇಶ್ವರಿ ರವರು ನಮ್ಮ ಅದರ್ಶ ಕ್ಲಿನಿಕ್ ನಲ್ಲಿ ಬಂದ ಪೇಷಂಟ್ ಗಳನ್ನು ನೋಡುತ್ತಿದ್ದಾಗ ವಿನಯ್ ರವರು ನಮ್ಮ ಕ್ಲಿನಿಕ್ ಒಳಗಡೆ ಬಂದು ನಾನು ಚಿಕಿತ್ಸೆ ಕೊಡುತ್ತಿದ್ದ ರೂಮ್ ನ ಕಡೆ ಬಂದು ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ಸೀಮೆಎಣ್ಣೆ ಅಧವಾ ಡೀಸೆಲ್ ತರದ ವಾಸನೆ ಬರುತ್ತಿದದ ನೀಲಿ ಬಣ್ಣದ ದ್ರಾವಣವನ್ನು ತುಂಬಿಕೊಂಡು ಬಂದು ಬಕೆಟ್ ನಲ್ಲಿ ಇದ್ದ ದ್ರಾವಣವನ್ನು ನನ್ನ ಮೇಲೆ ಎರಚಿ ನಿಮ್ಮನ್ನು ಕೊಲೆ ಮಾಡಿ ಸಾಯಿಸುತ್ತೇನೆ ಎಂದು ಹೇಳಿ ತಲೆಯ ಮೇಲಿಂದ ಸುರಿದ, ಅಷ್ಟರಲ್ಲಿ ಶಬ್ದಕೇಳಿ ಪಕ್ಕದ ರೂಮಿನಲ್ಲಿ ಇದ್ದ ನನ್ನ ಪತ್ನಿ ರಾಜೇಶ್ವರಿ ಅವರು ಬಿಡಿಸಲು ಬಂದಾಗ ಆತ ದು ದೊಡ್ಡ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ತಂದು ಇಟ್ಟಿದ್ದ ಸೀಮೆಎಣ್ಣೆ ತರದ ನೀಲಿ ಬಣ್ಣದ ದ್ರಾವಣವನ್ನು ತೆಗೆದುಕೊಂಡು ಮತ್ತೆ ನನ್ನ ಪತ್ನಿಯ ಮೇಲೂ ಸುರಿದು ನಂತರ ನಮ್ಮ ಕ್ಲಿನಿಕ್ ತುಂಬ ಎರಚಿ ನಿಮ್ಮಿಬ್ಬರನ್ನು ಇವತ್ತು ಉಳಿಸುವುದಿಲ್ಲ, ನಿಮ್ಮನ್ನು ಕೊಲೆ ಮಾಡಿ ಸುಟ್ಟು ಹಾಕುತ್ತೇನೆ ಎಂದು ತನ್ನ ಬಳಿ ಇದ್ದ ಬೆಂಕಿ ಪಟ್ಟಣವನ್ನು ತೆಗೆದುಕೊಂಡ ಆಗ ನಾನು ಮತ್ತು ನನ್ನ ಪತ್ನಿ ಆತನನ್ನು ಹೊರಗೆ ನೂಕಿಕೊಂಡು ಬಂದಾಗ ಆತ ತನ್ನ ಬಳಿ ಇದ್ದ ಬೆಂಕಿ ಕಡ್ಡಿಯನ್ನು ಗೀರಿದ, ಆಗ ಶಬ್ದ ಕೇಳಿ ಅಲ್ಲಿಗೆ ಬಂದ ಪಕ್ಕದಲ್ಲಿರುವ ಪಿ.ಕೆ.ಸಿ ಮೆಡಿಕಲ್ಸ್ ನ ಮಾಲೀಕರಾದ ಚಂದ್ರಮೌಳಿ ಹಾಗೂ ತಿಮ್ಲಾಪುರದ ತೇಜಮೂರ್ತಿ ಎಂಬುವರು ಆತನ ಕೈಯಲ್ಲಿದ್ದ ಬೆಂಕಿ ಕಡ್ಡಿಯನ್ನು ಗೀರದಂತೆ ಹಿಡಿದುಕೊಂಡರು. ಆಗ ವಿನಯ್ ರವರು ಕ್ಯಾನ್ ಮತ್ತು ಬಕೆಟ್ ನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಈತ ಜಮೀನು ಮತ್ತು ಹಣಕಾಸು ದ್ವೇಷದಿಂದ ನಮ್ಮನ್ನು ಸೀಮೆ ಎಣ್ಣೆ ತರಹದ ದ್ರಾವಣ ವನ್ನು ಹಾಕಿ ಬೆಂಕಿ ಇಟ್ಟು ಕೊಲೆ ಮಾಡಿ ಸಾಯಿಸಲು ಪ್ರಯತ್ನಿಸಿರುವ ವಿನಯ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-143/2019 ಕಲಂ-279, 337, 304(ಎ) ಐಪಿಸಿ

ದಿನಾಂಕ: 24-10-2019 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ ಕೆ.ಆರ್. ರಾಮಚಂದ್ರ ಬಿನ್ ರಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 22-10-2019 ರಂದು ನಮ್ಮ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಮುಳ್ಳುಕಟ್ಟಮ್ಮ ಹಬ್ಬದ ಸಲುವಾಗಿ ನಮ್ಮ ಸಂಭಂದಿಕರಾದ ಕುಣಿಗಲ್ ತಾಲ್ಲೂಕ್, ಹುತ್ರಿ ಗ್ರಾಮದ ರಂಗಸ್ವಾಮಿ ಎಂಬುವರು ನಮ್ಮ ಮನೆಗೆ ಬಂದಿದ್ದು, ದಿನಾಂಕ: 24-10-2019 ರಂದು ರಂಗಸ್ವಾಮಿ ರವರಿಗೆ ಉಷಾರಿಲ್ಲದ ಕಾರಣ ಅವರನ್ನು ಅಮೃತೂರಿನಲ್ಲಿ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಹಬ್ಬಕ್ಕೆ ಬಂದಿದ್ದ ನನ್ನ ತಮ್ಮ ಕೆ.ಆರ್. ವೆಂಕಟೇಶ, ನಮ್ಮ ಅಣ್ಣ ಕೆ.ಆರ್. ಗೋವಿಂದಯ್ಯ ಮತ್ತು ನಮ್ಮ ಸಂಭಂದಿಕರಾದ ನಮ್ಮೂರಿನ ಡಿ.ವಿ. ಜಯರಾಂ ಬಿನ್ ವೆಂಕಟೇಶಯ್ಯ, ಮೋಹನ ಬಿನ್ ಮೂಡ್ಲಗಿರಿ, ಡಿ.ಎಸ್. ಮಧು ಬಿನ್ ಸುರೇಶ ರವರುಗಳು ಕೆ.ಎ-02 ಎಂ.ಎಫ್-8404 ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ರಂಗಸ್ವಾಮಿರವರನ್ನು ಕರೆದುಕೊಂಡು ಡಿ.ವಿ. ಜಯರಾಂ ಚಾಲಕನಾಗಿ ಈ ದಿನ ಸಂಜೆ ಸುಮಾರು 5-30 ಗಂಟೆಗೆ ನಮ್ಮೂರಿನಿಂದ ಅಮೃತೂರಿಗೆ ಬಂದಿದ್ದರು. ಇದೇ ದಿನ ರಾತ್ರಿ ಸುಮಾರು 7-15 ಗಂಟೆ ಸಮಯದಲ್ಲಿ ನಮ್ಮೂರಿನ ಡಿ.ಟಿ. ರಮೇಶ ಬಿನ್ ತಿಮ್ಮಯ್ಯ ಎಂಬುವರು ನನಗೆ ಪೋನ್ ಮಾಡಿ ಈಗ ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ಹೊಸಕೆರೆ ಗ್ರಾಮದ ಮರಿಗೌಡ ರವರ ಜಮೀನಿನ ಮುಂಭಾಗದಲ್ಲಿ ಹಾದುಹೋಗಿರುವ ಎಸ್.ಹೆಚ್-84 ರ ಶಿರಾ-ನಂಜನಗೂಡು ರಸ್ತೆಯಲ್ಲಿ ನಿಮ್ಮ ಸಂಭಂದಿಕರ ಕಾರು ಒಂದು ಜಲ್ಲಿ ತುಂಬಿದ್ದ ಟ್ರಾಕ್ಟರ್-ಟ್ರೈಲರ್ ಗೆ ಅಪಘಾತವಾಗಿ ಕಾರಿನಲ್ಲಿದ್ದ ಚಾಲಕ ಮತ್ತು ನಿಮ್ಮ ಅಣ್ಣ ಗೋವಿಂದಯ್ಯ ಹಾಗೂ ಇತರೆ ಮೂರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ನಿಮ್ಮ ತಮ್ಮ ವೆಂಕಟೇಶನಿಗೆ ರಕ್ತಗಾಯವಾಗಿರುತ್ತೆ ಬೇಗ ಇಲ್ಲಿಗೆ ಬಾ ಎಂದು ತಿಳಿಸಿದರು. ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತವಾಗಿದ್ದು ನಿಜವಾಗಿತ್ತು. ಕಾರಿನಲ್ಲಿದ್ದ ಚಾಲಕ ಡಿ.ವಿ. ಜಯರಾಂ ಮತ್ತು ಕಾರಿನಲ್ಲಿದ್ದ ನಮ್ಮ ಅಣ್ಣ ಕೆ.ಆರ್. ಗೋವಿಂದಯ್ಯ, ನಮ್ಮ ಸಂಭಂದಿಕರಾದ ಮೋಹನ, ಮಧು, ರಂಗಸ್ವಾಮಿ ರವರುಗಳಿಗೆ ರಕ್ತಗಾಯಗಳಾಗಿ ಕಾರಿನಲ್ಲಿಯೆ ಮೃತಪಟ್ಟಿದ್ದರು. ನನ್ನ ತಮ್ಮ ವೆಂಕಟೇಶನಿಗೆ ರಕ್ತಗಾಯವಾಗಿರುತ್ತೆ. ನಂತರ ಟ್ರಾಕ್ಟರ್-ಟ್ರೈಲರ್ ನ ನಂಬರ್ ನೋಡಲಾಗಿ ನಂಬರ್ ಇಲ್ಲದೇ ಇದ್ದುದ್ದರಿಂದ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ಆ ಟ್ರಾಕ್ಟರ್ ಸಣಬ ಗ್ರಾಮದ ಶಿವನಂಜಯ್ಯ ರವರ ಮಹೇಂದ್ರಾ ಟ್ರಾಕ್ಟರ್-ಟ್ರೈಲರ್ ಎಂದು ತಿಳಿಯಿತು. ತಕ್ಷಣ ನಾನು ಸ್ಥಳಕ್ಕೆ ಬಂದ ನಮ್ಮ ಚಿಕ್ಕಪ್ಪನ ಮಗನ ಜೊತೆ ನನ್ನ ತಮ್ಮ ವೆಂಕಟೇಶನನ್ನು ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆನು. ನಂತರ ಮೃತಪಟ್ಟಿದ್ದ ಅಣ್ಣ ಗೋವಿಂದಯ್ಯ, ನಮ್ಮ ಸಂಭಂದಿಕರಾದ ಜಯರಾಂ, ಮೋಹನ, ಮಧು, ರಂಗಸ್ವಾಮಿರವರುಗಳ ಶವಗಳನ್ನು ನಾನು ಮತ್ತು ರಮೇಶರವರು ಅಲ್ಲಿಗೆ ಬಂದ ಆಂಬುಲೆನ್ಸ್ ಗಳಲ್ಲಿ ಸಾರ್ವಜನಿಕರ ಸಹಾಯದಿಂದ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟು, ನಂತರ ಈ ಅಪಘಾತದ ಬಗ್ಗೆ ರಮೇಶರವರನ್ನು ವಿಚಾರಮಾಡಲಾಗಿ, ಆತನು ತಿಳಿಸಿದ ವಿಚಾರವೇನೆಂದರೆ ಈ ದಿನ ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ನಾನು ಅಮೃತೂರಿನಿಂದ ನಮ್ಮೂರಿಗೆ ಬರಲು ನಾನು ನನ್ನ ಬೈಕಿನಲ್ಲಿ ಎಸ್.ಹೆಚ್-84 ಶಿರಾ-ನಂಜನಗೂಡು ರಸ್ತೆಯಲ್ಲಿ ಹೊಸಕೆರೆ ಗ್ರಾಮದ ಮರಿಗೌಡರವರ ಜಮೀನಿನ ನೇರದಲ್ಲಿ ಹೋಗುತ್ತಿರುವಾಗ್ಗೆ ನನ್ನ ಮುಂದೆ ಅದೇ ರಸ್ತೆಯಲ್ಲಿ ಅಮೃತೂರು ಕಡೆಯಿಂದ ನಮ್ಮೂರಿಗೆ ಹೋಗಲು ನಿಮ್ಮ ಸಂಭಂದಿಕರ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿ ಅವರ ಕಾರಿನ ಮುಂದೆ ಜಲ್ಲಿ ತುಂಬಿಕೊಂಡು ಹೊಗುತ್ತಿದ್ದ ಟ್ರಾಕ್ಟರ್-ಟ್ರೈಲರ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ತಕ್ಷಣ ನಾನು ನನ್ನ ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಅವರ ಬಳಿಗೆ ಹೋಗಿ ನೋಡಲಾಗಿ, ಕಾರು ಮತ್ತು ಟ್ರಾಕ್ಟರ್-ಟ್ರೈಲರ್ ಜಖಂಗೊಂಡು ಕಾರಿನಲ್ಲಿದ್ದ ಚಾಲಕ ಜಯರಾಂ, ನಿಮ್ಮ ಅಣ್ಣ ಗೋವಿಂದಯ್ಯ, ನಿಮ್ಮ ಸಂಭಂದಿಕರಾದ ಮೋಹನ, ಮಧು, ರಂಗಸ್ವಾಮಿರವರುಗಳು ಸ್ಥಳದಲ್ಲೇ ಮೃತಪಟ್ಟು ನಿಮ್ಮ ತಮ್ಮ ವೆಂಕಟೇಶನ ಮುಖಕ್ಕೆ ರಕ್ತಗಾಯವಾಗಿತ್ತು. ನಂತರ ನಾನು ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆ.ಎ-02 ಎಂ.ಎಫ್-8404 ರ ಮಾರುತಿ ಸ್ವಿಫ್ಟ್ ಕಾರ್ ಆಗಿದ್ದು, ಅಪಘಾತಕ್ಕೀಡಾದ ಟ್ರಾಕ್ಟರ್-ಟ್ರೈಲರ್ ನ ನಂಬರ್ ನೋಡಲಾಗಿ ನಂಬರ್ ಇಲ್ಲದೇ ಇದ್ದುದ್ದರಿಂದ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ಆ ಟ್ರಾಕ್ಟರ್ ಸಣಬ ಗ್ರಾಮದ ಶಿವನಂಜಯ್ಯ ರವರ ಮಹೇಂದ್ರಾ ಟ್ರಾಕ್ಟರ್-ಟ್ರೈಲರ್ ಎಂದು ತಿಳಿಯಿತು ಎಂದು ತಿಳಿಸಿದರು. ಆದ್ದರಿಂದ ಈಗ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಈ ಅಪಘಾತಕ್ಕೆ ಕಾರಣನಾದ ಕೆ.ಎ-02 ಎಂ.ಎಫ್-8404 ರ ಮಾರುತಿ ಸ್ವಿಫ್ಟ್ ಕಾರಿನ ಚಾಲಕ ಡಿ.ವಿ. ಜಯರಾಂ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿಕೊಳ್ಳುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 Thursday, 24 October 2019

ಪತ್ರಿಕಾ ಪ್ರಕಟಣೆ ದಿ.24-10-2019

ಪತ್ರಿಕಾ ಪ್ರಕಟಣೆ

ದಿನಾಂಕ. 24-10-2019


ದಿನಾಂಕ:-23.10.2019 ರಂದು ಸಂಜೆ ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಿಂಡಿಸ್ಕೆರೆ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ  1]ಗವಿರಂಗಯ್ಯ 2]ಕೃಷ್ಣಯ್ಯಶೆಟ್ಟಿ, 3]ನಾಗರಾಜು 4] ಹೊನ್ನಯ್ಯ  5]ಪರಪ್ಪ  6]ವಸಂತಕುಮಾರ್ 7]ಕಾಂತರಾಜು ರವರುಗಳನ್ನು ದಸ್ತಗಿರಿ ಮಾಡಿಕೊಂಡು ಆರೋಪಿಗಳು ಜೂಜಾಟಕ್ಕೆ ಪಣವಾಗಿಟ್ಟಿದ್ದ ಹಣ 6105/- ರೂಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುತ್ತದೆ.

ಹಾಗೂ ಇದೇ ದಿನ ದಿನಾಂಕ:-23.10.2019 ರಂದು ರಾತ್ರಿ ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ದಸರೀಘಟ್ಟ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ  1]ಸಿದ್ದೇಶ 2]ಲೋಕೇಶ, 3]ಕುಮಾರ 4]ಸುರೇಶ 5] ಪ್ರಸನ್ನಕುಮಾರ  6]ಪ್ರಸನ್ನಬಾಬು ರವರುಗಳನ್ನು ದಸ್ತಗಿರಿ ಮಾಡಿದ್ದು ಸದರಿಯವರುಗಳು ಜೂಜಾಟಕ್ಕೆ ಪಣವಾಗಿಟ್ಟಿದ್ದ ಹಣ 2310/- ರೂಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುತ್ತದೆ.

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಕೆ.ವಂಸಿಕೃಷ್ಣ  ಐ.ಪಿ.ಎಸ್. ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಉದೇಶ್ ರವರ ಮಾರ್ಗದರ್ಶನಲ್ಲಿ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀಮತಿ  ಜಯಲಕ್ಷ್ಮೀಸದಾಶಿವ್ ರವರು ಮತ್ತು ತಿಪಟೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಕೃಷ್ಣಕುಮಾರ್ ರವರುಗಳು ಠಾಣಾ ಸಿಬ್ಬಂದಿಯವರೊಂದಿಗೆ ಧಾಳಿ ನಡೆಸುವಲ್ಲಿ ಯಶಸ್ವಿಯಾಗಿರುತ್ತಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಶಿಸಿರುತ್ತಾರೆ.


ಅಪರಾಧ ಘಟನೆಗಳು 24-10-19

ಹೆಬ್ಬೂರು  ಪೊಲೀಸ್ ಠಾಣಾ  ಮೊ ನಂ-167/2019 ಕಲಂ 363 ಐಪಿಸಿ

ದಿನಾಂಕ-23/10/2019 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿಯಾದ ಹೆಚ್ ಎನ್ ಕೃಷ್ಣಪ್ಪ ಬಿನ್ ಲೇಟ್, ನಾರಾಯಣಪ್ಪ, 43 ವರ್ಷ, ಬಲಜಿಗರು, ಕಾರು ಚಾಲಕ, ಹಾಲಿ ವಾಸ ಅಂದರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ನೇ ಹಂತ, ಅಶ್ವಿನಿ ಕ್ಲಿನಿಕ್ ಎದುರು, ಮಧುಚಂದ್ರ ರವರ ಮನೆಯಲ್ಲಿ ಬಾಡಿಗೆ ವಾಸ ಬೆಂಗಳೂರು-91, ಸ್ವಂತ ಊರು: ಕಾಮಾಕ್ಷಿಮಠದ ಬಳಿ, ಹೆಬ್ಬೂರು ಟೌನ್, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಕುಣಿಗಲ್ ತಾಲ್ಲೂಕು ದೊಡ್ಡಮಳಲವಾಡಿ ವಾಸಿಯಾದ ಕೃಷ್ಣಪ್ಪ ರವರ ಮಗಳಾದ ಹೇಮಾವತಿ ಡಿ ಕೆ ರವರನ್ನು ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದು ನನಗೆ ಸಂಸಾರ ಜೀವನದಲ್ಲಿ 01 ಹೆಣ್ಣು 01 ಗಂಡು ಮಗು ಇದ್ದು ಹೆಣ್ಣು ಮಗಳಾದ ನವ್ಯಕೃಷ್ಣ ಈಕೆಯು ಅಂದರಹಳ್ಳಿಯಲ್ಲಿರುವ ಅರವಿಂದ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ಮಗನಾದ ಹೆಚ್ ಕೆ ಶ್ರೀನಿವಾಸ, 12 ವರ್ಷ ಈತನು  ವಿದ್ಯಮಾನ್ಯ ನಗರದಲ್ಲಿರುವ ಸೌಂದರ್ಯ ವಿದ್ಯಮಾನ್ಯ ವಿದ್ಯಾಕೇಂದ್ರ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ದಿನಾಂಕ; 22-10-2019 ರಂದು ಬೆಳಿಗ್ಗೆ ನನ್ನ ಮಗನಾದ ಹೆಚ್ ಕೆ ಶ್ರೀನಿವಾಸನು ಎಂದಿನಂತೆ ಶಾಲೆಗೆ ಹೋಗಿ ವಾಪಸ್ ಮನೆಗೆ ಸಂಜೆ 4-00 ಗಂಟೆಗೆ ಬಂದು  ಮತ್ತೆ ಮ್ಯಾತ್ಸ್ ಸ್ಪೆಷಲ್ ಕ್ಲಾಸ್ ಇದೆ ಎಂತ ನನ್ನ ಹೆಂಡತಿ ಬಳಿ ಹೇಳಿ ಕಾಳಿಕಾನಗರದ ತರುಣ್ ರವರ ಮನೆಯ ಬಳಿಗೆ ಬಿಡುವಂತೆ ತಿಳಿಸಿದಾಗ ನನ್ನ ಹೆಂಡತಿ ಹೇಮಾವತಿ ನಮ್ಮ ದ್ವಿಚಕ್ರ ವಾಹನದಲ್ಲಿ ತರುಣ್ ರವರ ಮನೆಯ ಬಳಿಗೆ ಬಿಡುವುದಾಗಿ ಕರೆದುಕೊಂಡು ಹೋದಾಗ ನಂತರ ಮನೆಯಿಂದ ಸ್ವಲ್ಪ ದೂರ ಹೋಗಿ ನನ್ನ ಹೆಂಡತಿಯ ಬಳಿ ನಾನೇ ಹೋಗುವುದಾಗಿ ಹೇಳಿ ಶಾಲಾ ಬ್ಯಾಗನ್ನು ಹಾಕಿಕೊಂಡು ನಡೆದುಕೊಂಡು ಹೋಗಿದ್ದು ನಂತರ ನನ್ನ ಹೆಂಡತಿ ತರುಣ್ ರವರ ತಾಯಿ ಮಧು ರವರಿಗೆ ಪೋನ್ ಮೂಲಕ ನನ್ನ ಮಗನ ವಿಚಾರ ಕೇಳಲಾಗಿ ಶ್ರೀನಿವಾಸ ಮತ್ತು ತರುಣ್ ನಮ್ಮ ಮನೆಯ ಬಳಿ ಆಟ ಆಡುತ್ತಿರುತ್ತಾರೆಂತ ತಿಳಿಸಿದ್ದು ಸಂಜೆ 7-30 ಗಂಟೆವರೆಗೆ ನನ್ನಮಗ ಮನೆಗೆ ಬಾರದೇ ಇದ್ದುದ್ದರಿಂದ ನನ್ನಹೆಂಡತಿ ತರುಣ್ ರವರ ಮನೆಯ ಬಳಿಗೆ ಹೋಗಿ ಅವರ ತಾಯಿ ಮಧು ರವರಿಗೆ ವಿಚಾರ ಮಾಡಿದಾಗ ಅವರ ಮನೆಯ ಬಳಿ ಆಡುತ್ತಿದ್ದ ನನ್ನ ಮಗ ಶ್ರೀನಿವಾಸ ಮತ್ತು ತರುಣ್ ಇಬ್ಬರೂ ಇಲ್ಲದೇ ಇದ್ದಾಗ ನನ್ನ ಹೆಂಡತಿ ಮತ್ತು ಮಧು ರವರಿಬ್ಬರೂ ಅವರು ಓದುತ್ತಿದ್ದ ಶಾಲೆಯ ಬಳಿಗೆ ಹಾಗೂ ಮಧು ರವರ ಸಂಬಂಧಿಕರ ಮನೆಗಳಿಗೆ ಹೋಗಿ ವಿಚಾರ ಮಾಡಿದರೂ ಸಹ ಪತ್ತೆಯಾಗದೇ ಇದ್ದು ನಂತರ ನನ್ನಹೆಂಡತಿ ಇದ್ದ ಸಂಗತಿಯನ್ನು ನನ್ನ ಬಳಿ ತಿಳಿಸಿದಾಗ ನಾನು ನಮ್ಮ ತಾಯಿ ಮನೆಗೆ ಹೆಬ್ಬೂರಿಗೆ ಕರೆ ಮಾಡಿ ವಿಚಾರ ತಿಳಿದುಕೊಳ್ಳಲಾಗಿ ಮನೆಗೆ ಬಂದಿರುವುದಿಲ್ಲ ಎಂತ ತಿಳಿಸಿದ್ದು ಮತ್ತೆ ಈ ದಿನ ದಿ:23-10-2019 ರಂದು ಬೆಳಿಗ್ಗೆ ನನ್ನ ದೊಡ್ಡಪ್ಪನ ಮಗನಾದ ಆನಂದ ಎಂಬುವವರಿಗೆ ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಕರೆ ಮಾಡಿ ವಿಚಾರ ತಿಳಿಯಲಾಗಿ ನನ್ನ ಮಗ ಶ್ರೀನಿವಾಸ ಮತ್ತು ತರುಣ್ ಇಬ್ಬರೂ ಹೆಬ್ಬೂರಿಗೆ ನನ್ನ ತಾಯಿಯವರ ಮನೆಗೆ ಬಂದಿರುವುದು ಗೊತ್ತಾಯಿತು. ಆಗ ನಾನು, ನನ್ನ ಹೆಂಡತಿ ಹೇಮಾವತಿ, ತರುಣ್ ರವರ ತಾಯಿ ಮಧು ರವರು ಈ ದಿನ ಮಧ್ಯಾಹ್ನ ಸುಮಾರು 1-30 ಗಂಟೆಗೆ ಹೆಬ್ಬೂರು ಗ್ರಾಮಕ್ಕೆ ಬಂದು ನನ್ನ ತಾಯಿಯವರ ಮನೆಯ ಬಳಿಗೆ ಹೋಗಿ ನೋಡಲಾಗಿ ತರುಣ್ ಮತ್ತು ಶ್ರೀನಿವಾಸ್ ಇಬ್ಬರೂ ಕಾಣದೇ ಇದ್ದು ನನ್ನ ತಾಯಿಯಾದ ಅಮ್ಮಯ್ಯಮ್ಮ ರವರಿಗೆ ವಿಚಾರ ಮಾಡಲಾಗಿ ಶ್ರೀನಿವಾಸ ಮತ್ತು ಆತನ ಜೊತೆ ಮತ್ತೊಬ್ಬ ಹುಡುಗ ಇಬ್ಬರೂ ರಾತ್ರಿ ಸುಮಾರು 9-00 ಗಂಟೆಗೆ ಮನೆಗೆ ಬಂದಿದ್ದು ಮನೆಯಲ್ಲಿಯೇ ಇದ್ದು ಬೆಳಿಗ್ಗೆ ಸುಮಾರು 8-30 ಗಂಟೆಯಲ್ಲಿ ಇಬ್ಬರೂ ಬಸ್ ನಿಲ್ದಾಣದ ಕಡೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬಂದು ಸ್ನಾನ ಮಾಡಿ ತಿಂಡಿ ತಿಂದು ಇಲ್ಲಿಯೇ ಎಲ್ಲೋ ಆಟ ಆಡುತ್ತಿರುತ್ತಾರೆಂತ ತಿಳಿಸಿದ್ದು ನಾವು ನನ್ನ ತಾಯಿಯವರ ಮನೆಯಲ್ಲಿ ಹಾಗೂ ನಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಹೆಬ್ಬೂರು ಗ್ರಾಮದಲ್ಲೆಲ್ಲಾ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನನ್ನಮಗ ಶ್ರೀನಿವಾಸ ಹಾಗೂ ಮಧು ರವರ ಮಗ ತರುಣ್ ರವರಿಗೆ ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ನಮ್ಮ ಮಕ್ಕಳನ್ನು ಪತ್ತೆ ಮಾಡಿ ಕೊಡಲು ಈ ದಿನ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-167/2019 ಕಲಂ 363 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 102/2019  ಕಲಂ78[3] ಕೆ.ಪಿ ಆಕ್ಟ್‍

ದಿನಾಂಕ:23/10/2019 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಠಾಣಾ ಪಿ.ಐ ಕೆ. ಪ್ರಭಾಕರ್‍ ರವರು ತನಗಿದ್ದ ಭಾತ್ಮೀ ಮೇರೆಗೆ ಪಿ.ಸಿ-700 ಸಿದ್ದಲಿಂಗಪ್ಪ ರವರೊಂದಿಗೆ ಚಂದ್ರಗಿರಿ ಹಾಲಿನ ಡೈರಿಯ ಮುಂಭಾಗದಲ್ಲಿ ಚಂದ್ರಗಿರಿಯ ಶಿವಣ್ಣ ಬಿನ್ ಗಂಗಣ್ಣ ಎಂಬುವವರು ಮಟ್ಕಾ ಜೂಜಾಟ ಆಡಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸ್ಥಳದಲ್ಲಿ ನಿಗಾವಣೆಗೆ ಸಿಬ್ಬಂದಿಯನ್ನು ಬಿಟ್ಟು ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ವಾಪಾಸ್ಸಾಗಿ  ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಪಡೆದು ಠಾಣಾ ಜಿ.ಎಸ್.ಸಿ/ಎನ್.ಸಿ.ಆರ್/393/19 ರಲ್ಲಿ ನಮೂದಿಸಿ ಸದರಿ ಪ್ರಕರಣವು ಅಂಸಜ್ಞೇಯ ಪ್ರಕರಣವಾದ್ದರಿಂದ ಮಧ್ಯಾಹ್ನ 02-30 ಗಂಟೆಯಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 163/2019 ಕಲಂ : 363 ಐಪಿಸಿ

ದಿನಾಂಕ 23-10-2019 ರಂದು ಮಧ್ಯಾನ್ಹ 12-30 ಗಂಟೆಗೆ ಪಿರ್ಯಾದಿ ಉಷಾ ಕೋಂ ಪರಪ್ಪ, 32 ವರ್ಷ, ದೇವಾಂಗ ಜನಾಂಗ, 2ನೇ ಕ್ರಾಸ್, ಪಂಪ್ ಹೌಸ್ ರಸ್ತೆ, ಗೋವಿನಪುರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮಗೆ 14 ವರ್ಷದ ನಂದನ್ ಎಂಬ ಗಂಡು ಮಗು ಮತ್ತು ಧನಲಕ್ಷ್ಮೀ, 6 ವರ್ಷದ ಮಗಳು ಇಬ್ಬರು ಮಕ್ಕಳಿದ್ದಾರೆ. ಮಗ ನಂದನ್ ತಿಪಟೂರು ಟೌನ್ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ 8ನೇ ತರಗತಿ ವಿಧ್ಯಾರ್ಧಿಯಾಗಿದ್ದು, ಶಾಲೆಗೆ ನಾವು ಕರೆದುಕೊಂಡು ಹೋಗಿ ಬಿಟ್ಟು ಬುರತ್ತಿದ್ದೇವು ನಂತರ ಶಾಲೆ ಬಿಟ್ಟ ನಂತರ ವಾಪಸ್ ಕರೆದುಕೊಂಡು ಬರುತ್ತಿದ್ದೇವು. ದಿನಾಂಕ 22-10-2019 ರಂದು ಎಂದಿನಂತೆ ಶಾಲೆಯಿಂದ ಬಂದು  ಸಂಜೆ 05-30 ಗಂಟೆಗೆ ಜನತಾ ಲಾರ್ಡ್ ಪಕ್ಕದಲ್ಲಿರುವ ಜಿನತ್ ಟ್ಯೂಷನ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮನೆಗೆ ವಾಪಸ್ ಬಂದಿಲ್ಲ. ಹೋಗುವಾಗ ಸಿಮೆಂಟ್ ಕಲರ್ ಟೀ ಶರ್ಟ್, ಬ್ರೌನ್ ಕಲರ್ ನೈಟ್ ಪ್ಯಾಂಟ್ ಹಾಕಿದ್ದ. ಶಾಲೆಯಲ್ಲಿ ದಿನಾಂಕ 23-10-2019 ರಂದು ಮದ್ಯಂತರ ಪರೀಕ್ಷೆಯ ಪೇರೆಂಟ್ಸ್ ಮಿಟಿಂಗ್ ಇದ್ದಿದ್ದರಿಂದ ನಾವು ಆತನಿಗೆ ಶಾಲೆಗೆ ಬರುತ್ತೇವೆ ಎಂದು ತಿಳಿಸಿದ್ದೇವು, ಇದರಿಂದ ಭಯಪಟ್ಟು ಕಡಿಮೆ ಅಂಕ ಗಳಿಸಿರಬಹುದು ಎಂದು ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಗೆ ಬರದೆ ಎಲ್ಲೋ ಹೋಗಿರಬಹುದು. ಆದ್ದರಿಂದ ಕಾಣೆಯಾಗಿರುವ ನನ್ನ ಮಗ ನಂದನ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ನಾನು ಮತ್ತು ನನ್ನ ಗಂಡ ಎಲ್ಲಾ ಕಡೆ ಹುಡುಕಾಡಿ ಸಿಗದೆ ಕಾರಣ ಈ ದಿನ ಪತ್ತೆ ಮಾಡಿಕೊಡಿ ಎಂದು ದೂರು ನೀಡಿರುತ್ತೇನೆ. ನನ್ನ ಮಗ ನಾಲ್ಕುವರೆ ಅಡಿ ಎತ್ತರ, ಕೊಲು ಮುಖ, ಕಪ್ಪು ಮೈ ಬಣ್ಣ ಉಳ್ಳವನಾಗಿದ್ದು, ಆದ್ದರಿಂದ ಕಾಣೆಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಆರ್ .ನಂ: 24/19 ಕಲಂ:174 CRPC

ಕೇಸಿನ ಪಿರ್ಯಾದಿ ಮಂಜುನಾಥ ಬಿನ್ ಲೇ|| ನಂಜುಂಡಪ್ಪ, 49 ವರ್ಷ, ವಕ್ಕಲಿಗರು,ವ್ಯಾಪಾರ, ಮರಬಳ್ಳಿ ಗ್ರಾಮ, ಕಸಬಾ ಹೋಬಳಿ,ಮಧುಗಿರಿ ತಾ|| ರವರು ದಿನಾಂಕ:23-10-2019 ರಂದು ಬೆಳಿಗ್ಗೆ 9-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ  ಮಗನಾದ ಮನೋಹರ ಎಂ 21 ವರ್ಷ ರವರು ಡಿಪ್ಲಮೋ ವಿದ್ಯಾಬ್ಯಾಸ ಮಾಡಿದ್ದು ಡಿಪ್ಲಮೋದಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದನು, ಮನೋಹರನು ಕಳೆದ ಕೆಲ ದಿನಗಳಿಂದ ನನಗೆ ಒಂದು ಲಕ್ಷದ ಅರವತ್ತು ಸಾವಿರದ ಬೈಕ್ ಬೇಕು,ಹಾಗು ಹತ್ತು ಸಾವಿರ ಹಣ ಬೇಕು ಎಂದು ಕೇಳುತ್ತಿದ್ದನು,ಆಗ ಪಿರ್ಯಾದಿಯು  ನನಗೆ ಕಷ್ಟವಿದೆ ನಾನು ಮನೆಯ ವಡೆವೆ ಅಡ ಇಟ್ಟು ನಿನಗೆ ಬೈಕ್ ಕೊಡಿಸುತ್ತೇನೆಂದು ಹೇಳುತ್ತಾ ಸಮಾದಾನ ಮಾಡುತ್ತಿದ್ದೇನು,ದಿನಾಂಕ;21.10.2019 ರಂದು ಮನೋಹರನು ನಮ್ಮ ಊರಿಗೆ ಬಂದಿದ್ದು ನಂತರ ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದನು, ನಂತರ ದಿನಾಂಕ;22.10.2019 ರಂದು ಮದ್ಯಾನ್ಹ;12.00 ಗಂಟೆಯ ಸಮಯದಲ್ಲಿ ನನ್ನ ಮಗನಾದ ಮನೋಹರ್  ಅತನ ಮೊಬೈಲ್ ನಂ;8970936446 ನಿಂದ ನನ್ನ ಮೊಬೈಲ್ ನಂ ಅದ 8884870598 ಗೆ ಕರೆ ಮಾಡಿ ನನಗೆ ಬೈಕ್ ಕೊಡಿಸು ಎಂದು ಕೇಳಿದನು ಅಗ ನಾನು ಅಯಿತು ಬಾರಪ್ಪ ನಿನಗೆ ಬೈಕ್ ಕೊಡಿಸುತ್ತೇನೆಂದು ಹೇಳಿದನು, ಆ ನಂತರ ಪಿರ್ಯಾದಿಯು ಹಲವಾರು ಬಾರಿ ತನ್ನ ಮಗನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಚ್ ಅಫ್ ಅಗಿತ್ತು,ನಂತರ ಈ ದಿನ ದಿನಾಂಕ;23.10.2019 ರಂದು ಬೆಳಗ್ಗೆ;08.30 ಗಂಟೆಯ ಸಮಯದಲ್ಲಿ ಮಧುಗಿರಿಯವರು ಪಿರ್ಯಾದಿಗೆ  ಕರೆ ಮಾಡಿ ನಿನ್ನ ಮಗ ಮನೋಹರನು ಮಧುಗಿರಿ ಟೌನ್|| ದಂಡಿನಮಾರಮ್ಮ ದೇವಸ್ಥಾನದ ಬಳಿಯ ಲಿಂಗಣ್ಣನ ಜಮೀನಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಮೃತರಾಗಿರುತ್ತಾರೆಂದು ತಿಳಿಸಿದ ಮೇರೆಗೆ ನಂತರ ನಾವು ಅಲ್ಲಿಗೆ ಬಂದು ನೋಡಲಾಗಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದವನು ಪಿರ್ಯಾದಿಯ  ಮನೋಹರನಾಗಿದ್ದನು, ಮನೋಹರನಿಗೆ ಬೈಕ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ತನ್ನ ಮೂಲಕ ತಾನೇ ನೇಣು ಬಿಗಿದುಕೊಂಡು ಮೃತರಾಗಿರುತ್ತಾರೆ. ಎಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 Wednesday, 23 October 2019

ಅಪರಾಧ ಘಟನೆಗಳು 23-10-19

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 92/2019 ಕಲಂ; 8, 9, 11 KARNTAKA PREVENTION OF COW SLANGHTER & CATTLE PREVENTION ACT-1964 ಮತ್ತು ಕಲಂ 11(1) (A) PREVENTION OF CRUELTY TO ANIMALS ACT, 1960 ಮತ್ತು ಕಲಂ 97, 98 Transportation of Animal Act 1978.

ದಿನಾಂಕ: 22/10/2019 ರಂದು ಬೆಳಿಗ್ಗೆ 11-15 ಗಂಟೆಗೆ ಠಾಣಾ ಪಿ.ಎಸ್.ಐ ರವರು ಒಂದು ಅಶೋಕ ಲೈಲ್ಯಾಂಡ್ ದೊಸ್ತ್ ವಾಹನ, ಅದರ ಚಾಲಕ, ಹಾಗೂ ಅದರಲ್ಲಿದ್ದ 6 ಕರುಗಳ ಸಮೇತ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ಈ ದಿನ ದಿನಾಂಕ;22-10-2019 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿರುವಾಗ  ನಾನು ಮತ್ತು ಶ್ರೀ ಸೋಮಣ್ಣ  ಎ.ಎಸ್.ಐ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 298- ಶ್ರೀರವಿಕುಮಾರ, ಹೆಚ್.ಸಿ 387- ಶ್ರೀ ಪಂಚಣ್ಣ  ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು  ತಿಪಟೂರು  ಕಡೆಯಿಂದ ಚಿಕ್ಕ ರಂಗಾಪುರ ರಸ್ತೆಯಲ್ಲಿ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ  ಹೋಗುತ್ತಿರುವಾಗ   ಚಿಕ್ಕರಂಗಾಪುರ ಗೊಲ್ಲರಹಟ್ಟಿ ರಸ್ತೆ ಕಡೆಯಿಂದ  ಒಂದು ಸಣ್ಣ ಸರುಕು ವಾಹನ ಬರುತ್ತಿದ್ದು,  ನಮ್ಮ ಪೊಲೀಸ್ ಜೀಪನ್ನು ದೂರದಲ್ಲಿ ನೋಡಿ ಅದರ ಚಾಲಕ ರಸ್ತೆಯಲ್ಲಿ ವಾಹನ ನಿಲ್ಲಿಸಿ, ಓಡಿ  ಹೊಗಲು ಪ್ರಯತ್ನಿಸಿದವನ್ನು  ಹಿಡಿದು  ಹೆಸರು ವಿಳಾಸ ಕೇಳಲಾಗಿ  ಜುಂಜಯ್ಯ ಬಿನ್ ಲೇಟ್ ದೊಡ್ಡಯ್ಯ, 40 ವರ್ಷ, ಗೊಲ್ಲರು, ಚಾಲಕ ಕೆಲಸ, ಹಾಲ್ಕುರಿಕೆ ಗೊಲ್ಲರಹಟ್ಟಿ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್ ಎಂತಾ ತಿಳಿಸಿದ ನಂತರ ವಾಹನದ ಬಳಿ ಹೋಗಿ ಅದರ ನಂಬರ್  ನೋಡಲಾಗಿ KA-44 4906 ನೇ ಅಶೋಕ ಲೈಲ್ಯಾಂಡ್ ದೊಸ್ತ್  ವಾಹನವಾಗಿದ್ದು, ಅದರ ಹಿಂಭಾಗದ ಬಾಡಿಯಲ್ಲಿ  ಇಕ್ಕಟಾಗಿ ಸುಮಾರು ಕರುಗಳನ್ನು ತುಂಬಿರುವುದು ಕಂಡು ಬಂದ ಮೇರೆಗೆ ಈ ವಾಹನದಲ್ಲಿ ಕರುಗಳನ್ನು ಸಾಗಾಣಿಕೆ ಮಾಡಲು ಯಾವುದಾದರು ಪರವಾನಗಿ ಇದೆ ಎಂದು ವಾಹನದ ಚಾಲಕ ಜುಂಜಯ್ಯರವರನ್ನು ಕೇಳಲಾಗಿ ನನ್ನ ಬಳಿ ಯಾವುದೇ ಪರವಾನಗಿ ಇಲ್ಲ  ಎಂತಾ ತಿಳಿಸಿದ, ನಂತರ  ಲಘು ಸರುಕು ವಾಹನದಲ್ಲಿ ತುಂಬಿದ್ದ  ಪ್ರಾಣಿಗಳನ್ನು ನೋಡಲಾಗಿ ಒಟ್ಟು ಆರು ಕರುಗಳು ಇದ್ದು 1) ಒಂದು ಕಂದು ಬಣ್ಣದ ಸೀಮೆ ಹಸುವಿನ ಹೆಣ್ಣು ಕರು 2)  ಒಂದು ಕಪ್ಪು ಬಣ್ಣದ ಕೋಣದ ಮರಿ 3) ಎರಡು  ಕಪ್ಪು ಮತ್ತು ಬಿಳಿ ಬಣ್ಣದ ನಾಟಿ ಹಸುವಿನ  ಗಂಡು ಕರುಗಳು 4) ಎರಡು  ಕಪ್ಪು ಮತ್ತು ಬಿಳಿ ಬಣ್ಣದ ನಾಟಿ ಹಸುವಿನ  ಹೆಣ್ಣು ಕರುಗಳು ಕಂಡು ಬಂದಿರುತ್ತೆ. ಇವುಗಳನ್ನು ವಾಹನ  ಸಮೇತ ಆರೋಪಿ  ವಾಹನದ ಚಾಲಕ  ಜುಂಜಯ್ಯ ರವರನ್ನು ಮುಂದಿನ ಕ್ರಮಕ್ಕಾಗಿ ತಿಪಟೂರು  ಗ್ರಾಮಾಂತರ ಪೊಲೀಸ್  ಠಾಣಾ ಬಳಿ ಬೆಳಿಗ್ಗೆ 11-15 ಗಂಟೆಗೆ  ತಂದು ಹಾಜರುಪಡಿಸಿದ್ದು,  KA-44 4906 ನೇ ಅಶೋಕ ಲೈಲ್ಯಾಂಡ್ ದೊಸ್ತ್ ವಾಹನದಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಯಾವುದೇ ಪರವಾನಗಿ ಇಲ್ಲದೇ, ಜಾನುವಾರುಗಳಿಗೆ ಹಿಂಸೆ ಉಂಟಾಗುವ ರೀತಿಯಲ್ಲಿ ಕ್ರೂರವಾಗಿ ತುಂಬಿಕೊಂಡು, ಅವುಗಳಿಗೆ ಸರಿಯಾಗಿ ನೀರು, ಆಹಾರ ನೀಡದೆ ಸಾಗಾಣಿಕೆ ಮಾಡಲು ಪ್ರಯತ್ನಿಸಿ ಪ್ರಾಣಿ ಹಿಂಸೆ ನೀಡಿರುವುದು ಕಂಡು ಬಂದ ಮೇರೆಗೆ  ಮೇಲ್ಕಂಡ ಆರೋಪಿಯ ವಿರುದ್ಧ  ಕಲಂ  8, 9, 11 KARNTAKA PREVENTION OF COW SLANGHTER & CATTLE PREVENTION ACT-1964 ಮತ್ತು ಕಲಂ 11(1) (A) PREVENTION OF CRUELTY TO ANIMALS ACT, 1960 ಮತ್ತು ಕಲಂ 97, 98 Transportation of Animal Act 1978  ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿ ಜ್ಞಾಪನವನ್ನು ನೀಡಿದ್ದು, ಸದರಿ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ವೈ.ಎನ್‍ ಹೊಸಕೊಟೆ  ಪೊಲೀಸ್‍ ಠಾಣೆ ಮೊ.ಸಂ 71/2019 ಕಲಂ 143, 147, 323, 324, 114, 504, 506 ರೆ/ವಿ149 ಐಪಿಸಿ

ದಿನಾಂಕ:22/10/2019 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ರಮಣಿ ಕೋಂ ಗೋವಿಂದರೆಡ್ಡಿ,40 ವರ್ಷ, ರೆಡ್ಡಿ ಜನಾಂಗ, ಗೃಹಿಣಿ, ಬಿ.ಹೊಸಹಳ್ಳಿ ಗ್ರಾಮ, ಪಾವಗಡ ತಾ|| ರವರು ನೀಡಿದ ದೂರಿನ ಅಂಶವೇನೆಂದರೆ  ನನ್ನ ಗಂಡನಿಗೂ ಮತ್ತು ನಮ್ಮ ಗ್ರಾಮದ ರೆಡ್ಡಿ ಜನಾಂಗಕ್ಕೆ ಸೇರಿದ ವೆಂಕಟರಂಗಾರೆಡ್ಡಿ.ಹೆಚ್,ಸಿ ರವರ ಮದ್ಯೆ ಹಣದ ವ್ಯವಹಾರವಿದ್ದು ,  ನಮ್ಮ ಮದ್ಯೆ ವೈಮನಸ್ಯ ಇರುತ್ತದೆ,  ದಿನಾಂಕ:17/10/2019 ರಂದು ಸಂಜೆ ಸುಮಾರು 7:00 ಗಂಟೆ ಯಲ್ಲಿ ನಾನು ಮನೆಯ  ಮುಂದೆ ಇರುವಾಗ್ಗೆ    1] ಹೆಚ್,.ಸಿ ವೆಂಕಟರಂಗಾರೆಡ್ಡಿ ಬಿನ್ ಲೇ||  ಹೆಚ್.ವಿ. ಚಿಂತಲರೆಡ್ಡಿ, 2] ಹೆಚ್,ಸಿ ರಾಮಲಿಂಗಾರೆಡ್ಡಿ ಬಿನ್   ಲೇ||  ಹೆಚ್.ವಿ. ಚಿಂತಲರೆಡ್ಡಿ , 3] ಹೆಚ್.ಸಿ ಸೋಮಸುಂದರರೆಡ್ಡಿ ಬಿನ್ ಲೇ||  ಹೆಚ್.ವಿ. ಚಿಂತಲರೆಡ್ಡಿ , 4] ಸುಲೇಖ ಕೋಂ  ಹೆಚ್,.ಸಿ ವೆಂಕಟರಂಗಾರೆಡ್ಡಿ, 5] ಸುಜಾತ ಕೋಂ ಹೆಚ್.ಸಿ .ರಾಮಲಿಂಗಾರೆಡ್ಡಿ, 6] ಆಶಾ ಕೋಂ ಸೋಮಸುಂದರರೆಡ್ಡಿ , 7] ಪಾರ್ವತಮ್ಮಕೋಂ ಹೆಚ್.ವಿ ಚಿಂತಲರೆಡ್ಡಿ ಇವರೆಲ್ಲರೂ ನಮ್ಮ ಮನೆಯ ಬಳಿ ಬಂದು    ಅವಾಚ್ಯಶಬ್ದಗಳಿಂದ ಬೈಯ್ದು   ನನ್ನ ಅತ್ತೆ ಸಣ್ಣೀರಮ್ಮರವರನ್ನು    ಸುಲೇಖ ಎಂಬುವವರನು ನನ್ನ ಅತ್ತೆಯನ್ನು ಹೋಗೆ ಬೋಳಿಮುಂಡೆ ಎಂತ ಕೈಗಳಿಂದ ಕೆನ್ನೆಗೆ ಹೊಡೆದು ನೋವುಂಟು ಮಾಡಿದ್ದು ನಾನು ಬಿಡಿಸಿಕೊಳ್ಳಲು ಹೋದಾಗ ವೆಂಕಟರಂಗಾರೆಡ್ಡಿ ಎಂಬುವವನು ತನ್ನ ಕೈಲಿದ್ದ  ದೊಣ್ಣೆಯಿಂದ ನನ್ನ ಬೆನ್ನಿಗೆ ಹೊಡೆದು ನೋವುಂಟು ಮಾಡಿದ್ದು ಸುಲೇಖ ಮತ್ತು ಪಾರ್ವತಮ್ಮ ರವರು ನನ್ನ ಅತ್ತೆಗೆ ಕಾಲಿನಿಂದ ಒದ್ದು ಮೈ ಕೈ ನೋವುಂಟು ಮಾಡಿದರು ,  ರಾಮಲಿಂಗಾರೆಡ್ಡಿ ಎಂಬುವವನು ತನ್ನ ಕೈಲಿದ್ದ ದೊಣ್ಣೆಯಿಂದ ನನ್ನ ಬಾವನವರಾದ  ಕೇಶವರೆಡ್ಡಿಗೂ ಹಾಗೂ ಗೋವಿಂದರೆಡ್ಡಿಗೂ ಹೊಡೆದು ನೋವುಂಟು ಮಾಡಿದ್ದು ಸೋಮಸುಂದರರೆಡ್ಡಿ ರವರು ಬೈಯ್ಯಪ್ಪರೆಡ್ಡಿಗೆ ದೋಣ್ಣೆ ಯಿಂದ ಕಾಲಿಗೆ ಹೊಡೆದು ನೋವುಂಟು ಮಾಡಿದನು, ಆಶಾ ಎಂಬುವವರು ಈ ನನ್ನ ಮಕ್ಕಳನ್ನು ಬಿಡಬೇಡಿ ಹೊಡೆಯಿರಿ ಎಂತ ಹೇಳಿದ್ದು ,ಇಷ್ಟಕ್ಕೂ ಸುಮ್ಮನಾಗದೇ ಮೇಲ್ಕಂಡವರೆಲ್ಲರೂ ನಮ್ಮಗಳನ್ನು ಕುರಿತು ಸೂಳೆಮಕ್ಕಳ ನೀವುಗಳು ನಮ್ಮ ಹಣ ಹಿಂದಿರುಗಿಸದೇ ಹೋದರೆ ನಿಮ್ಮನ್ನು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿ ದೊಣ್ಣೆಗಳನ್ನು ಅಲ್ಲಿಯೇ ಬಿಸಾಡಿ ಹೊರಟು ಹೋದರು, ಆಗ ಸ್ಥಳದಲ್ಲಿದ್ದ ಭೀಮಾರೆಡ್ಡಿ ಬಿನ್  ಬುಡ್ಡಣ್ಣ, ಬಲ್ಲೇನಹಳ್ಳಿ ಮತ್ತು ಮಂಜುನಾಥರೆಡ್ಡಿ ಹೆಚ್.ಇ ಬಿನ್ ಈರಪ್ಪ ರವರುಗಳು ನಮ್ಮ ಸಮಾಧಾನ ಪಡಿಸಿದರು, ಈ ವಿಚಾರವಾಗಿ ಗ್ರಾಮದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡೋಣ ಎಂತ ಹೇಳಿದ್ದ ಸದರಿಯವರು ರಾಜಿ ಪಂಚಾಯ್ತಿಗೆ ಬಾರದೇ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆಂತ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ:71/2019 ಕಲಂ:143.147.323.324.504.506.114 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 42 guests online
Content View Hits : 562769
Hackguard Security Enabled