lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2020 >
Mo Tu We Th Fr Sa Su
          1 2
3 4 5 6 7 8 9
10 11 12 13 15 16
17 18 19 20 21 22 23
24 25 26 27 28 29 30
31            
August 2020

Friday, 14 August 2020

ಅಪರಾಧ ಘಟನೆಗಳು 14-08-20

ಹೆಬ್ಬೂರು  ಪೊಲೀಸ್ ಠಾಣಾ ಠಾಣಾ ಮೊ.ನಂ 116/2020 ಕಲಂ 279 ಐಪಿಸಿ

ದಿನಾಂಕ-13/08/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಹೆಚ್,ಎನ್,ಮನೋಜ್ ಬಿನ್ ಹೆಚ್.ಜಿ.ನಾರಾಯಣಸ್ವಾಮಿ, 22 ವರ್ಷ, ತಿಗಳ ಜನಾಂಗ, ವ್ಯವಸಾಯ, ಹೊನ್ನುಡಿಕೆ ಗ್ರಾಮ, ಗೂಳೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:-12-08-2020 ರಂದು ಹೊನ್ನುಡಿಕೆ ಯಿಂದ ನೆಲಮಂಗಲಕ್ಕೆ ನನ್ನ ಸ್ವಂತ ಕೆಲಸದ ಮೇಲೆ ಹೋಗಬೇಕಾಗಿದ್ದುದರಿಂದ ನನ್ನ ಹೆಸರಿನಲ್ಲಿರುವ ಕೆಎ-06-ಎಎ-8040 ನೇ ಟೊಯೋಟೋ ಇಟಿಯಾಸ್ ಕಾರಿನಲ್ಲಿ ಚಾಲಕನಾಗಿ ಪುರುಷೋತ್ತಮ.ಎನ್ ಬಿನ್ ನಾರಾಯಣಪ್ಪ, ಕಲ್ಲಯ್ಯನಪಾಳ್ಯ ಗ್ರಾಮ ರವರೊಂದಿಗೆ ಹೊನ್ನುಡಿಕೆ ನಮ್ಮ ಮನೆಯಿಂದ ಸಾಯಂಕಾಲ ಸುಮಾರು 6-15 ಗಂಟೆಗೆ ಬಿಟ್ಟು ಶಿವಗಂಗೆ ರಸ್ತೆ ಮೂಲಕ ಚಿಕ್ಕಹೊನ್ನುಡಿಕೆ ಗೇಟ್ ಬಳಿಗೆ ಸಾಯಂಕಾಲ ಸುಮಾರು 6-25 ಗಂಟೆಯಲ್ಲಿ ಹೋಗುತ್ತಿದ್ದಾಗ, ಚಾಲಕನು ಕಾರನ್ನು ನಿರ್ಲಕ್ಷತೆಯಿಂದ ಓಡಿಸಿದ ಪರಿಣಾಮ ಎಡಭಾಗದ ಮುಂಭಾಗದ ಚಕ್ರ ಬರೆಸ್ಟ್ ಆಗಿ ಕಾರು ಚಾಲಕನ ನಿಯಂತ್ರಕ್ಕೆ ಸಿಗದೆ ರಸ್ತೆಯ ಬಲಭಾಗಕ್ಕೆ ಎಳೆದುಕೊಂಡು ಹೋಗಿ ರಸ್ತೆಯ ಪಕ್ಕದ ಗುಂಡಿಯ ಬಳಿ ಪಲ್ಟಿ ಹೊಡೆದುಕೊಂಡಿದ್ದು, ನಾನು ಮತ್ತು ಚಾಲಕ ಕಾರಿನಿಂದ ಇಳಿದು ನೋಡಲಾಗಿ ನನಗಾಗಲಿ ನನ್ನ ಚಾಲಕನಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ, ನನ್ನ ಬಾಬ್ತು ಕಾರನ್ನು ನೋಡಲಾಗಿ ಪೂರಾ ಜಖಂ ಆಗಿದ್ದು, ಪೂರಾ ನಷ್ಟಉಂಟಾಗಿರುತ್ತೆ, ಸದರಿ ಘಟನೆಯು ಚಾಲಕನ ನಿರ್ಲಕ್ಷತೆಯಿಂದ ನಡೆದಿರುವುದರಿಂದ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಪುರುಷೋತ್ತಮ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರಿದೆ, ನನ್ನ ಬಾಬ್ತು ಕಾರು ಸ್ಥಳದಲ್ಲಿಯೇ ಇರುತ್ತೆ, ನಾನು ಸದರಿ ವಿಚಾರವನ್ನು ನಮ್ಮ ಮನೆಯಲ್ಲಿ ತಿಳಿಸಿ ಈದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-116/2020 ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ CR NO  93/2020  U/S 379 IPC

ದಿನಾಂಕ 13-08-2020 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಸಂತೋಷ ಬಿನ್ ಹೆಚ್ ಹೆಚ್ ಹೊನ್ನಮ್ಮ, 27 ವರ್ಷ, ಒಕ್ಕಲಿಗ ಜನಾಂಗ , ಶಾಂತಿನಗರ, ಹುಲಿಯೂರುದುರ್ಗ ಟೌನ್, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ದಿನಾಂಕ 10-08-2020 ರಂದು ರಾತ್ರಿ 08 ಗಂಟೆ ಸಮಯದಲ್ಲಿ ನನ್ನ ಬಾಬ್ತು KA-06-EL-4301 HONDA UNICRON CBF 150 MM ದ್ವಿಚಕ್ರ ವಾಹನ ಕಪ್ಪು ಬಣ್ಣದ್ದು ಆಗಿರುತ್ತದೆ ಈ ವಾಹನವನ್ನು ಮನೆಯ ಮುಂಭಾಗ ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದೆ ಬೆಳಿಗ್ಗೆ ದಿನಾಂಕ 11-08-2020  ರಂದು ಬೆಳಿಗ್ಗೆ 07-00 ಗಂಟೆಗೆ ಎದ್ದು ನೋಡಿದಾಗ ನಾನು ನಿಲ್ಲಿಸಿದ್ದ ನನ್ನ ಬಾಬ್ತು KA-06-EL-4301 ದ್ವಿಚಕ್ರ ವಾಹನವು ಕಳವಾಗಿದ್ದು ನಾನು ಎಲ್ಲಾ ಕಡೆ ಹುಡುಕಿದರು ನನ್ನ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ ಇದರ ಬೆಲೆ ಸುಮಾರು 48,000 ( ನಲವತ್ತೆಂಟು ಸಾವಿರ) ರೂ ಆಗಿರುತ್ತದೆ ಅದರಿಂದ ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ದೂರಿನಂಶವಾಗಿರುತ್ತದೆThursday, 13 August 2020

ಪತ್ರಿಕಾ ಪ್ರಕಟಣೆ ದಿ13-08-20

ಪತ್ರಿಕಾ ಪ್ರಕಟಣೆ

ದಿ:13-08-20

ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ ಬೆದರಿಕೆ ಕರೆ ಮಾಡಿ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ಬಂಧನ

 

ದಿನಾಂಕ: 08-08-2020 ರಂದು ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಿಪೇಟೆಯ ಆಯಿಲ್ ಉದ್ಯಮಿರವರ ಮೊಬೈಲ್‍ ಅಪರಿಚಿತ ವ್ಯಕ್ತಿಯೊಬ್ಬರು ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ ಬೆದರಿಕೆ ಕರೆ ಮಾಡಿ ಒಂದು ವಾರದ ಹಿಂದೆ ನಿಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನ್ನು ಮರೆತುಬಿಟ್ಟಿರಾ ಅದು ಕೇವಲ ಸ್ಯಾಂಪಲ್ ನಮ್ಮ ಬೇಡಿಕೆ ಈಡೇರಿಸುವಂತೆ ಧಮಕಿ ಹಾಕಿ ಬೆದರಿಕೆ ಹಾಕಿದ್ದು,    ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ನಂತರ ದಿನಾಂಕ: 10-08-2020 ರಂದು ಮಂಡಿಪೇಟೆಯ ಮತ್ತೊಬ್ಬ ಆಯಿಲ್ ಉದ್ಯಮಿರವರಿಗೂ ಸಹ ಇದೇ ರೀತಿ ಸಂದೇಶದ ಮೂಲಕ ಬೆದರಿಕೆ ಮಾಡಿ 50 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಈ ಸಂಬಂಧ ಪ್ರಕರಣಗಳು ದಾಖಲಾಗಿರುತ್ತವೆ.

ಸದರಿ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಲು ತುಮಕೂರು ನಗರ ವೃತ್ತ ನಿರೀಕ್ಷಕರಾದ ನವೀನ. ಬಿ. ರವರ ನೇತೃತ್ವದಲ್ಲಿ  ವಿಶೇಷ ತಂಡ ರಚಿಸಲಾಗಿದ್ದು, ಸದರಿ ತಂಡವು ದಿನಾಂಕ; 12-08-2020 ರಂದು ಈ ಕೆಳಕಂಡ ಆರೋಪಿಗಳಾದ

1) ಆಲಿ ಹುಸೇನ್ ಬಿನ್ ಲೇಟ್ ಅಬ್ದುಲ್, 40 ವರ್ಷ, ಸದಾಶಿವನಗರ, ತುಮಕೂರು.

2) ಶಾನ್ವಾಜ್ಪಾಷ ಬಿನ್ ಅಬ್ದುಲ್ ಸಮನ್, 40 ವರ್ಷ, ಸದಾಶಿವನಗರ, ತುಮಕೂರು.

3) ಮೆಹಬೂಬ್ಖಾನ್ ಲೇಟ್ ಮಹಮದ್ ಗೌಸ್, 40 ವರ್ಷ, ಯಶವಂತಪುರ ಬೆಂಗಳೂರು.

4) ಸೈಯದ್ಶವರ್ ಬಿನ್ ಲೇಟ್ ಸೈಯದ್ ಅಹಮದ್, 34 ವರ್ಷ, ಪಿ.ಹೆಚ್. ಕಾಲೋನಿ, ತುಮಕೂರು. ಇವರುಗಳನ್ನು ದಸ್ತಗಿರಿ ಮಾಡಿದ್ದು, ಮತ್ತೊಬ್ಬ ಆರೋಪಿ

5) ಸ್ಟೈಲ್ ಇಮ್ರಾನ್ ಈತನು ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಪತ್ತೆ ತಂಡ ರಚಿಸಿರುತ್ತೆ.

 

ಮೇಲ್ಕಂಡ 4 ಜನ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್ಗಳು ಮತ್ತು ಸಿಮ್‍ಗಳು, 1 ಆಟೋರಿಕ್ಷಾ, 1 ಮೊಪೆಡ್ ಬೈಕ್, 1 ಮಚ್ಚು,  ಪಿರ್ಯಾದಿಯ ಬಾಬ್ತು ಅಂಗಡಿಯ ಕೀಗಳು ಮತ್ತು ಬ್ಯಾಗ್‍ನಲ್ಲಿದ್ದ 1,000/-ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

 

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ತುಮಕೂರು ಪೊಲೀಸ್ ಉಪಾಧೀಕ್ಷಕರಾದ ತಿಪ್ಪೇಸ್ವಾಮಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ತುಮಕೂರು ನಗರ ವೃತ್ತ ನಿರೀಕ್ಷಕರಾದ ನವೀನ. ಬಿ. ರವರ ನೇತೃತ್ವದಲ್ಲಿ ಪಿ.ಎಸ್.ಐ. ಮಂಜುನಾಥ್ ಬಿ.ಸಿ. ಮತ್ತು ಸಿಬ್ಬಂದಿಗಳಾದ ರಮೇಶ್, ಎ.ಎಸ್.ಐ, ಮಂಜುನಾಥ, ರಾಮಚಂದ್ರಯ್ಯ, ನವೀನ್ಕುಮಾರ್,  ಪ್ರಸನ್ನಕುಮಾರ್, ಜಗದೀಶ್, ಈರಣ್ಣ, ಶಿವಶಂಕರ ಹೊಸಬಡಾವಣೆ ಪೊಲೀಸ್ ಠಾಣೆಯ ಅಪರಾಧ ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಹನುಮರಂಗಯ್ಯ, ಸಿದ್ದೇಶ್ವರ ದೇವರಾಜ ಜಿಲ್ಲಾ ಪೊಲೀಸ್ ಕಛೇರಿಯ ರಮೇಶ್ ಪಿ.ಸಿ., ನರಸಿಂಹರಾಜು ಎಸ್.ಎನ್.ರವರುಗಳ ಪತ್ತೆ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.Wednesday, 12 August 2020

ಅಪರಾಧ ಘಟನೆಗಳು 12-08-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 71/2020 ಕಲಂ; 324,504,506 ರೆ/ವಿ 34 ಐ.ಪಿ.ಸಿ

ದಿನಾಂಕ; 11/08/2020 ರಂದು ಸಂಜೆ 5-15 ಗಂಟೆಯಿಂದ 5-45 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಕೆ ರಾಜಣ್ಣ ಬಿನ್ ಲೇಟ್ ಕಾಡಯ್ಯ, 50 ವರ್ಷ, ಕರುಬರು ಜನಾಂಗ, ಜಿರಾಯ್ತಿ, ಹಾವೇನಹಳ್ಳಿ, ಕಸಬಾ ಹೋಬಳಿ ತಿಪಟೂರು ತಾಲ್ಲೂಕ್ ರವರಿಂದ ಪಡೆದ ಹೇಳಿಕೆಯ ಅಂಶವೇನೆಂದರೆ, ನಾನು ಈ ದಿನ ದಿನಾಂಕ: 11/08/2020 ರಂದು ಮಧ್ಯಾಹ್ನ 12-30 ಗಂಟೆಯಲ್ಲಿ ನಮ್ಮ ಬಾಬ್ತು ಜಮೀನಿಗೆ ಹೋಗಿದ್ದು, ಜಮೀನಿನಲ್ಲಿ ರಾಗಿ ಬೆಳೆಯನ್ನು ಹಾಕಿದ್ದು, ಸದರಿ ಬೆಳೆಯ ಮೇಲೆ ಯಾವುದೋ ಟ್ರಾಕ್ಟರ್ ಹೋಗಿ ಬೆಳೆ ಹಾಳಾಗಿತ್ತು. ಅದನ್ನು ಕಂಡ ನಾನು ಯಾರೋ ನನ್ನ ರಾಗಿಯ ಬೆಳೆಯ ಮೇಲೆ ಟ್ರಾಕ್ಟರ್ ಹೊಡೆದಿದ್ದಾರೆಂದು ಬೈದುಕೊಳ್ಳುತ್ತಿದ್ದೆ. ನಂತರ ನಮ್ಮ ಪಕ್ಕದ ಜಮೀನಿನವರಾದ ನಮ್ಮ ಗ್ರಾಮದ ಲೋಕೇಶ್ ರವರ ಜಮೀನಿನಲ್ಲಿ ಕನಕಾ ಎಂಬುವರು ಟ್ರಾಕ್ಟರ್ ಓಡಿಸುತ್ತಿದ್ದು, ನಾನು ಅಲ್ಲಿಗೆ ಹೋಗಿ ಕನಕನನ್ನು ನಮ್ಮ ರಾಗಿ ಬೆಳೆಯ ಮೇಲೆ ಏಕೆ ಟ್ರಾಕ್ಟರ್ ಹೊಡೆದೆ ಎಂದು ಕೇಳುತ್ತಿದ್ದಾಗ ಅದೇ ವೇಳೆಗೆ ಇದ್ದಕ್ಕಿದ್ದಂತೆ ಪಕ್ಕದಲ್ಲಿದ್ದ ಲೋಕೇಶ್ ರವರು ಹಿಂದಿನಿಂದ ಬಂದು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ನನ್ನ ಬಲ ಮೊಣಕೈಗೆ, ಎಡಗೈ ಮುಂಗೈಗೆ ಹೊಡೆದು ರಕ್ತಗಾಯಪಡಿಸಿದನು. ನಾನು ನೋವನ್ನು ತಡೆಯಲಾಗದೇ ಕೂಗಿಕೊಂಡಾಗ ಮತ್ತೆ ಲೋಕೇಶ್ ರವರು ಒಂದು ದೊಣ್ಣೆಯಿಂದ ನನ್ನ ತಲೆಯ ಮಧ್ಯಕ್ಕೆ ಹೊಡೆದು ರಕ್ತಗಾಯಪಡಿಸಿದನು ನಂತರ ಅವನ ಮಗನಾದ ಮಹಾಂತೇಶ್ ರವರು ಕೆಟ್ಟದಾಗಿ ಬೈಯುತ್ತಾ ಕೂಗಾಡಿಕೊಂಡು ಅಲ್ಲಿಗೆ ಬಂದನು. ಈ ಕೂಗಾಟವನ್ನು ಕೇಳಿದ ನಮ್ಮೂರಿನ ಸುರೇಶ ಬಿನ್ ಮೈಲಾರಪ್ಪ, ಪ್ರಜ್ವಲ್ ಬಿನ್ ಸುರೇಶ್ @ ಗುಡ್ಲು ಸುರೇಶ್ ರವರು ಅಲ್ಲಿಗೆ ಬಂದು ನನಗೆ ಹೊಡೆಯುತ್ತಿದ್ದವನನ್ನು ಬಿಡಿಸಿದರು, ಮತ್ತು ನನ್ನನ್ನು ಸುರೇಶ ಬಿನ್ ಮೈಲಾರಪ್ಪ ರವರು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಸೇರಿಸಿದರು. ನನಗೆ ಹೊಡೆಯುತ್ತಿದ್ದವರು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಬೋಳಿ ಮಗನೇ, ಸೂಳೆ ಮಕ್ಕಳಾ ನನ್ನ ತಂಟೆಗೆ ಬಂದರೆ ಅಷ್ಟೇ ಎಂತ ಬೆದರಿಕೆ ಹಾಕಿದರು. ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ ಏಕಾಏಕಿ ನನ್ನ ಮೇಲೆ ಗಲಾಟೆ ಮಾಡಿ ಹೊಡೆದು ರಕ್ತಗಾಯಪಡಿಸಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನನ್ನ ಹೇಳಿಕೆಯನ್ನು ನೀಡಿರುತ್ತೇನೆಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆಯನ್ನು ಪಡೆದು ವಾಪಸ್ 6-10 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ನಂ 71/2020 ಕಲಂ: 324,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ-14 ಕಲಂ; 174 ಸಿ,ಆರ್.ಪಿ.ಸಿ

ದಿನಾಂಕ:11/08/2020 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿ ಶಿವಕುಮಾರಯ್ಯ ಬಿನ್ ಶಂಕರಪ್ಪ, 47 ವರ್ಷ, ಕುರುಬರು, ವ್ಯವಸಾಯ, ಬ್ಯಾಟಗಾನಹಳ್ಳಿ, ತಡಸೂರು ಮಜರೆ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕೃಷಿ ಚಟುವಟಿಕೆ ಮಾಡಿಕೊಂಡು ನಾನು ನನ್ನ ಪತ್ನಿ ಶಾರದಮ್ಮ ಮತ್ತು ಮಕ್ಕಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿರುತ್ತೇನೆ. ದಿನಾಂಕ:28/07/2020 ರಂದು ರಾತ್ರಿ ಸುಮಾರು 7-45 ಗಂಟೆಯಲ್ಲಿ ನನ್ನ ಹೆಂಡತಿಯಾದ ಶಾರದಮ್ಮನವರು ತೋಟದಲ್ಲಿ ಕಟ್ಟಿದ್ದ ದನಗಳನ್ನು ಕೊಟ್ಟಿಗೆಗೆ ಕಟ್ಟಲು ಹಿಡಿದುಕೊಂಡು ಬರಲು ಹೋದಾಗ ಯಾವುದೋ ವಿಷಜಂತು (ಹಾವು) ಶಾರದಮ್ಮರವರ ಎಡಗಾಲು ಪಾದಕ್ಕೆ ಕಚ್ಚಿದಾಗ ಶಾರದಮ್ಮನವರು ಕೂಗಿಕೊಂಡರು. ನಾನು ತಕ್ಷಣ ಹೋಗಿ ನೋಡಲಾಗಿ ಎಡಗಾಲು ಪಾದದ ಹತ್ತಿರ ರಕ್ತ ಬರುತ್ತಿತ್ತು. ತಕ್ಷಣ ಚಿಕಿತ್ಸೆಗಾಗಿ ಶಾರದಮ್ಮನವರನ್ನು ಯಾವುದೋ ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತೇನೆ.ನಂತರ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಿದ್ದರಿಂದ ಹಾಸನದ ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಅದೇ ದಿನ ಕರೆದುಕೊಂಡು ಹೋಗಿ  ಚಿಕಿತ್ಸೆಗೆ ದಾಖಲಿಸಿ ಈ ದಿನದವರೆಗೂ ಚಿಕಿತ್ಸೆ ಕೊಡಿಸುತ್ತಿರುವಾಗ ಈ ದಿನ ದಿನಾಂಕ: 11/08/2020 ರಂದು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ನನ್ನ ಹೆಂಡತಿ ಶ್ರೀಮತಿ ಶಾರದಮ್ಮ ರವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮರಣ ಹೊಂದಿರುತ್ತಾರೆ. ಇವರ ಸಾವಿಗೆ ಯಾವುದೋ ವಿಷಜಂತು ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿರುತ್ತಾರೆ. ಶಾರದಮ್ಮನವರ ಮೃತ ದೇಹವನ್ನು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಟ್ಟಿರುತ್ತೆ. ಆದ್ದರಿಂದ ತಾವುಗಳು ಬಂದು ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ- 14/2020 ಕಲಂ; 174 ಸಿ,ಆರ್.ಪಿ.ಸಿ  ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 Tuesday, 11 August 2020

ಅಪರಾಧ ಘಟನೆಗಳು 11-08-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ. 80/2020 ಕಲಂ 457, 380 ಐಪಿಸಿ

ದಿನಾಂಕ:- 10/08/2020 ರಂದು ಸಂಜೆ 04.45 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ರತ್ನಮ್ಮ ಕೋಂ ನಿಂಗರಾಜು, 35 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ಹೊನ್ನೆ ಬಾಗಿ, ಕಸಬಾ ಹೋಬಳಿ, ಚಿ.ನಾ.ಹಳ್ಳಿ ತಾಲ್ಲೂಕು ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಏನೆಂದರೆ  ನನ್ನ ಗಂಡ ನಿಂಗರಾಜುರವರು ಅಂಗವಿಕಲಾರಾಗಿದ್ದು  ಇತ್ತಿಚಿಗೆ ಇವರೆಗೆ ಸುಮಾರು  20 ದಿನಗಳ ಹಿಂದೆ ಪಾಶ್ವವಾಯು ಹೊಡೆದಿದ್ದು ಅವರನ್ನು ಹಾರನಹಳ್ಳಿಯಲ್ಲಿ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿ ನನ್ನ ತವರು ಮನೆ ಹಂದನಕೆರೆಯಲ್ಲಿ ಬಿಟ್ಟಿದ್ದೆವು. ನಾನು  ದಿನಾಂಕ 08-08-2020 ಹೊನ್ನೆಬಾಗಿ ಮನೆಗೆ ಬಂದು ಮನೆಯನ್ನು ತೊಳೆದು ಮನೆಯಲ್ಲಿ ಪೂಜೆ ಮಾಡಿ ಮತ್ತೆ ವಾಪಸ್ಸು  ದಿನಾಂಕ 09-08-2020 ರಂದು ಸಂಜೆ   ಮನೆಗೆ ಬೀಗ ಹಾಕಿಕೊಂಡು ಹಂದನಕೆರೆಗೆ ಹೋದೆನು. ದಿನಾಂಕ 10-08-2020 ರಂದು ಬೆಳಿಗ್ಗೆ ಸುಮಾರು 10.00 ಗಂಟೆಯಲ್ಲಿ ನಮ್ಮ ಗ್ರಾಮದ ನಮ್ಮ ಸಂಬಂಧಿ ರೇವಣ್ಣ ಬಿನ್ ಪರ್ವತಯ್ಯ ರವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ತೆಗೆದಿದ್ದು ಯಾರೋ ಕಳ್ಳತನ ಮಾಡಿರಬಹುದು ಎಂದು ತಿಳಿಸಿದ್ದರಿಂದ ನಾನು ತಕ್ಷಣ ಹಂದನಕೆರೆಯಿಂದ ಹೊನ್ನೆಬಾಗಿಗೆ ಬಂದು ನೋಡಲಾಗಿ ದಿನಾಂಕ 09-08-2020 ರಾತ್ರಿ ಯಾವುದೋ ಸಮಯದಲ್ಲಿ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು  ಯಾರೋ ಕಳ್ಳರು ಮುರಿದು, ಒಳಗೆ ಹೋಗಿ ಬೀರುವಿನ ಡೋರ್ ಅನ್ನು ಯಾವುದೋ ಆಯುಧದಿಂದ  ಮೀಟಿ ತೆಗೆದಿದ್ದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿ  ಬಿದ್ದಿದ್ದವು . ನಾನು ಗಾಬರಿಯಿಂದ ಬೀರುವನ್ನು ಚೆಕ್ ಮಾಡಲಾಗಿ ಬಲಭಾಗದ ಲಾಕರ್ ನಲ್ಲಿ  ಇತ್ತೀಚಿಗೆ ಗ್ರಾಮೀಣ ಕೂಟದಿಂದ ಸಾಲವಾಗಿ ತಂದಿದ್ದ ಹಣದ ಪೈಕಿ  20000.00 ರೂ ಹಣ,  ಇದರ ಜೊತೆ ಸುಮಾರು 05 ಗ್ರಾಂ ಚಿನ್ನದ ಒಂದು ಜೊತೆ ಓಲೆ,  ಸುಮಾರು 02 ಗ್ರಾಂ ತೂಕದ ಚಿನ್ನದ ಕಿವಿಯ ಗುಂಡುಗಳು(ಇವುಗಳ ಸುಮಾರು ಬೆಲೆ 21000.00 ರೂಗಳು) ಹಾಗೂ ಹಳೆಯ ಒಂದು ಜೊತೆ ಕಾಲಂದಿಗೆ ಮತ್ತು ಒಂದು ಜೊತೆ ಕಾಲು ಚೈನ್  (ಇವುಗಳ ಅಂದಾಜು ಬೆಲೆ 3000.00 ರೂಗಳಾಗಿದ್ದು) ಎಲ್ಲವನ್ನು ಒಂದು ಪರ್ಸ್ ನಲ್ಲಿ ಇಟ್ಟಿದ್ದು ಇವುಗಳನ್ನು ಪರ್ಸ್ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆ.  ಮನೆಯಲ್ಲಿ ಕಳುವಾಗಿದ್ದ ಬಗ್ಗೆ ಪರಿಶೀಲಿಸಿ ಈಗ ಬಂದು ದೂರು ನೀಡುತ್ತಿದ್ದು  ಕಳುವು ಮಾಡಿರುವರನ್ನು ಪತ್ತೆ ಮಾಡಿ ಕಳುವಾಗಿರುವ ಮಾಲನ್ನು ಪತ್ತೆ ಮಾಡಿಕೊಂಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ಸ್ವೀಕರಿಸಿ ಠಾಣಾ ಮೊ.ನಂ. 80/2020 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲು ಮಾಡಿರುತ್ತೆ

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ- 13/2020 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 10/08/2020 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿ ಶ್ರೀಮತಿ ಎನ್.ಕಮಲಮ್ಮ ಕೋಂ ರೇಣುಕಾರಾಧ್ಯ ಕೆ.ಎಸ್ 45 ವರ್ಷ, ಗೃಹಿಣಿ, ಕಲ್ಲೇಗೌಡನಪಾಳ್ಯ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಪತಿಯವರಾದ ರೇಣುಕಯ್ಯನವರು ಚಿ,ನಾ ಹಳ್ಳಿ ತಾಲ್ಲೂಕ್ ತಿಮ್ಮನಹಳ್ಳಿ ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಮಗೆ ಇಬ್ಬರು ಗಂಡು ಮಕ್ಕಳು ಇದ್ದು, ದೊಡ್ಡಮಗ ಶಶಾಂಕ್ , ಹಾಗೂ ಎರಡನೆಯ ಮಗ ಶ್ರೇಯಸ್ ಆಗಿರುತ್ತಾರೆ. ಶ್ರೇಯಸ್ 10 ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ಈತನಿಗೆ ಸುಮಾರು 2 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು, ಅವನಿಗೆ ಹಲವಾರು ಕಡೆ ಚಿಕಿತ್ಸೆ ಕೊಡಿಸಿರುತ್ತೇವೆ. ಆದರೂ ಸಹ ಸರಿಯಾಗಿ ಗುಣಮುಖವಾಗಿರದೇ ಹೊಟ್ಟೆನೋವು ಬರುತ್ತಿದ್ದು, ಈ ಸಮಯದಲ್ಲಿ ಮಾತ್ರೆಗಳನ್ನು ನುಂಗಿ ಹೊಟ್ಟೆನೋವು ಗುಣಪಡಿಸಿಕೊಳ್ಳುತ್ತಿದ್ದನು. ಈಗಿರುವಾಗ ದಿನಾಂಕ: 10/08/2020 ರಂದು ಬೆಳಿಗ್ಗೆ ನಾನು ಮತ್ತು ನನ್ನ ದೊಡ್ಡ ಮಗ ಶಶಾಂಕ್ ತೋಟಕ್ಕೆ ಹೋಗಿದ್ದು, ನನ್ನ ಯಜಮಾನರಾದ ರೇಣುಕಯ್ಯನವರು ಬ್ಯಾಂಕಿಗೆ ಕೆಲಸಕ್ಕೆ ಹೋಗಿದ್ದರು. ನಂತರ ಮಧ್ಯಾಹ್ನ 12-15 ಗಂಟೆಯ ಸಮಯದಲ್ಲಿ ಮನೆಗೆ ವಾಪಸ್ ಬಂದು ನೋಡಲಾಗಿ ನನ್ನ ಮಗ ಶ್ರೇಯಸ್ ಮನೆಯಲ್ಲಿ ಹಟ್ಟದ ತೊಲೆಗೆ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡು ಬಂತು. ಅದನ್ನು ನೋಡಿ ನಾನು ಕೂಗಿ ಕೊಂಡಾಗ ನಮ್ಮ ಗ್ರಾಮದ ಮಂಜುನಾಥ್ ರವರು ಬಂದಿದ್ದು, ಅವರು ಮತ್ತು ನಾನು ಶ್ರೇಯಸ್ ಗೆ ಜೀವ ಇರಬಹುದೆಂದು ತಿಳಿದು ತಕ್ಷಣ ಹಗ್ಗವನ್ನು ಕಡಿದು ಯಾವುದೋ ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಇಲ್ಲಿನ  ವೈದ್ಯರು ಶ್ರೇಯಸ್ ಮರಣ ಹೊಂದಿರುತ್ತಾರೆಂತಾ ತಿಳಿಸಿದರು. ಅವನ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ನನ್ನ ಎರಡನೆಯ ಮಗ ಶ್ರೇಯಸ್ ರವರಿಗೆ ಬರುತ್ತಿದ್ದ ಹೊಟ್ಟೆನೋವು ಗುಣಮುಖವಾಗದೇ ಜೀವನದಲ್ಲಿ ಬೇಸರಗೊಂಡು ನಾನು ಬದುಕಿರಬಾರದು ಎಂತಾ  ತೀರ್ಮಾನ ತಂದುಕೊಂಡು ತನ್ಮೂಲಕ ತಾನೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇವನ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ- 13/2020 ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 Monday, 10 August 2020

ಅಪರಾಧ ಘಟನೆಗಳು 10-08-20

 

ದಂಡಿನಶಿವರ ಠಾಣಾ ಸಿ ಆರ್ ನಂ: 31/2020 ಕಲಂ 279,304(ಎ) ಐ ಪಿ ಸಿ

ದಿನಾಂಕ;-10/06/2020 ರಂದು ಬೆಳಗ್ಗೆ 9:15 ಗಂಟೆಗೆ ಪಿರ್ಯಾದಿಯಾದ ಗೌರಮ್ಮ ಕೋಂ ಲೇ ಗಿರೀಶ್ 34 ವರ್ಷ ಬೆಸ್ತರು ದೊಡ್ಡಗೊರಘಟ್ಟ ಗ್ರಾಮ ದಂಡಿನಶಿವರ ಹೋ/ ತುರುವೇಕೆರೆ ತಾ/ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ;-05/08/2020 ರಂದು ಸಂಜೆ 5-00 ಗಂಟೆಯಲ್ಲಿ ನನ್ನ ತಂದೆ ಹುಚ್ಚಪ್ಪ ಬಿನ್ ಲೇ ಭೈರಪ್ಪ ವರು ಕಲ್ಲೂರ್ ಕ್ರಾಸ್ ಗೆ ಕೆಎ-06-ವೈ-9766 ಎಕ್ಸೆ ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ವಾಪಾಸ್ ಬರುತ್ತಿರುವಾಗ ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ದೊಡ್ಡಗೊರಘಟ್ಟ ಗ್ರಾಮದ ಶನೇಶ್ವರ ಸ್ವಾಮಿ ದೇವಸ್ಥಾನದ ಪಕ್ಕ ಹಾದು ಹೋಗಿರುವ ಕಲ್ಲೂರು ಕ್ರಾಸ್ -ತುರುವೇಕೆರೆ ರಸ್ತೆಯ ಬಳಿ ಇರುವ ಸೇತುವೆಯ ಬಳಿ ಮೇಲ್ಕಂಡ ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರುಕತೆ ಇಂದ ಚಲಾಹಿಸಿಕೊಂಡು ಸ್ವಯಂ ದ್ವಿಚಕ್ರ ವಾಹನವನ್ನು ಕೆಡವಿಕೊಂಡು ಅಪಘಾತ ಪಡಸಿಕೊಂಡಿದ್ದು, ಈ ಅಪಘಾತದ ದೃಶ್ಯವನ್ನು ನಮ್ಮೂರಿನ ಶಂಕರಯ್ಯ ಬಿನ್ ಗಂಗಾಧರಯ್ಯ ರವರು ನೋಡಿದ್ದು,ನಂತರ ನಮಗೆ ತಿಳಿಸಿದ್ದು ಬಂದು ನೋಡಲಾಗಿ ಮೂಗಿಗೆ ಪೆಟ್ಟು ಬಿದ್ದಿದ್ದು ತಕ್ಷಣ 108 ಬುಲೇನ್ಸ್ ನಲ್ಲಿ ಕರೆದು ಕೊಂಡು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದು ನಂತರ ಮನೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಗುಣಮುಖರಾಗದೆ ದಿನಾಂಕ:08/08/2020 ರಂದು ಬೆಳಗ್ಗೆ 6:00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ಇತ್ಯಾದಿಯಾಗಿ ದೂರಿನ ಅಂಶವಾಗಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಠಾಣಾ ಮೊ ನಂ-113/2020 ಕಲಂ 279,337 ಐಪಿಸಿ

ದಿನಾಂಕ-09/08/2020 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ಮೋಹನ್ ಕುಮಾರ್.ಕೆ.ವಿ ಬಿನ್ ವೆಂಕಟಾಚಲಯ್ಯ, 29 ವರ್ಷ, ಕುರುಬರು, ಸೆಂಟ್ರಿಂಗ್ ಕೆಲಸ, ಕುಮ್ಮಂಜಿಪಾಳ್ಯ, ಕೆ.ಜಿ.ಹಳ್ಳಿ ಪೋಸ್ಟ್, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ತಂದೆಯಾದ ವೆಂಕಟಾಚಲಯ್ಯ ಬಿನ್ ಲೇಟ್ ಗಂಗಯ್ಯ, 60 ವರ್ಷ, ಕುರುಬರು, ವ್ಯವಸಾಯ, ಕುಮ್ಮಂಜಿಪಾಳ್ಯ, ಕೆ.ಜಿ.ಹಳ್ಳಿ ಪೋಸ್ಟ್, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಗೂಳೂರು ಬಳಿ ಇರುವ ಚಿಕ್ಕಹೊಸೂರು ಗ್ರಾಮದಲ್ಲಿ ಮುನಿಸ್ವಾಮಯ್ಯ ಎಂಬುವರಿಗೆ ನನ್ನ ತಂದೆಯವರ ತಂಗಿಯಾದ ತಿಮ್ಮಕ್ಕ ಎಂಬುವವರಿಗೆ ಕೊಟ್ಟು ಮದುವೆ ಮಾಡಿಸಿದ್ದು ಅಲ್ಲಿಗೆ ಹೋಗಿ ಬರುವುದಾಗಿ ದಿನಾಂಕ:-03-08-2020 ಸಾಯಂಕಾಲ ಸುಮಾರು 6-00 ಗಂಟೆಯಲ್ಲಿ  ನನ್ನ ತಾಯಿಯವರ ಬಳಿ ಹೇಳಿ  ನಮ್ಮ ಗ್ರಾಮದಿಂದ ನಡೆದುಕೊಂಡು ಹೊನ್ನುಡಿಕೆ ಕಡೆಯಿಂದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಕಡೆಗೆ ರಸ್ತೆಯ ಬಲಭಾಗದಲ್ಲಿ ಅನ್ನಪೂರ್ಣೆಶ್ವರಿ ವೈನ್ಸ್ ಮುಂಭಾಗ ರಾತ್ರಿ ಸುಮಾರು 7-30 ಗಂಟೆಯಲ್ಲಿ ಬರುತ್ತಿದ್ದಾಗ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಕಡೆಯಿಂದ ಒಂದು ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ನನ್ನ ತಂದೆಯವರು ರಸ್ತೆಯ ಪಕ್ಕ ಬಿದ್ದಿದ್ದು, ಅಪಘಾತಪಡಿಸಿದ ವಾಹನದ ಚಾಲಕ ಮತ್ತು ಅದರಲ್ಲಿದ್ದ ಒಬ್ಬರು ಹೆಂಗಸರು ಸಹ ವಾಹನದ ಸಮೇತ ಬಿದ್ದಿದ್ದು, ಅದೇ ಸಮಯಕ್ಕೆ ಚಿಕ್ಕಪ್ಪಯ್ಯನಪಾಳ್ಯ ವಾಸಿ ವೆಂಕಟಾಚಲಯ್ಯ ಎಂಬುವರು ತುಮಕೂರು ಕಡೆಯಿಂದ ಅವರ ದ್ವಿಚಕ್ರ ವಾಹನದಲ್ಲಿ ಬಂದಿದ್ದು ನಿಲ್ಲಿಸಿ ಅಪಘಾತವಾಗಿರುವುದನ್ನು ನೋಡಿ ಕೂಡಲೆ ನನಗೆ ವಿಚಾರ ತಿಳಿಸಿದಾಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಕೆಎ-30-ಜೆ-7096 ಫ್ಯಾಷನ್ ಪ್ರೋ ದ್ವಿಚಕ್ರ ವಾಹನ ಜಖಂ ಆಗಿ ನಿಂತಿದ್ದು ಅಲ್ಲಿನ ಸಾರ್ವಜನಿಕರಿಗೆ ಕೇಳಲಾಗಿ ಎಲ್ಲರಿಗೂ ಯಾರೋ ಸಾರ್ವಜನಿಕರು ಚಿಕಿತ್ಸೆಗಾಗಿ ತುಮಕೂರಿಗೆ ಕರೆದುಕೊಂಡು ಹೋದರೆಂತ ತಿಳಿಸಿದಾಗ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿಗೆ ಹೋಗಿ ನೋಡಿ ನನ್ನ ತಂದೆಯವರಿಗೆ ವಿಚಾರ ಮಾಡಲಾಗಿ ನಾನು ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ರಸ್ತೆಯ ಬಲಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ತುಮಕೂರು ಕಡೆಯಿಂದ ಒಬ್ಬ ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅಪಘಾತಪಡಿಸಿದ್ದು, ನನಗೆ ಬಲಕಾಲಿನ ಮಂಡಿಯ ಹಿಂಭಾಗದ ಮೀನಿನ ಖಂಡಕ್ಕೆ ಹಾಗೂ ಎಡಕಾಲಿನ ಸೊಂಟದ ಬಳಿ ಮೂಳೆಗೆ, ಹಾಗೂ ಎಡಗೈಗೆ ತರಚಿದ ರಕ್ತಗಾಯವಾಗಿ, ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಅಪಘಾತಪಡಿಸಿದ ದ್ವಿಚಕ್ರ ವಾಹನದಲ್ಲಿನ ಚಾಲಕನಿಗೂ ಸಹ ತರಚಿದ ರಕ್ತಗಾಯಗಳಾಗಿದ್ದು, ಅವರ ಜೊತೆಯಲ್ಲಿದ್ದವರಿಗೆ ಗಾಯಗಳಾಗಿರುವುದನ್ನು ನೋಡಲು ಆಗಲಿಲ್ಲ, ಅಷ್ಷರಲ್ಲಿ ಅಲ್ಲಿಗೆ ಬಂದ ಚಿಕ್ಕಪ್ಪಯ್ಯನಪಾಳ್ಯ ವಾಸಿ ವೆಂಕಟಾಚಲಯ್ಯ ಎಂಬುವವರು ಹಾಗೂ ಸಾರ್ವಜನಿಕರು ಕೂಡಲೆ ಎಲ್ಲರನ್ನು ಚಿಕಿತ್ಸೆಗಾಗಿ ಯಾವುದೋ ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಬಂದರೆಂತ ತಿಳಿಸಿದರು ನನ್ನ ತಂದೆಯವರಿಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ತುಮಕೂರು ಸಿದ್ದಾರ್ಥ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ನನ್ನ ತಂದೆಯವರ ಎಡಕಾಲಿನ ಸೊಂಟದ ಬಳಿಯ ಮೂಳೆಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿರುತ್ತೆಂತ ವೈದ್ಯರು ತಿಳಿಸಿರುತ್ತಾರೆ, ನಾನು ನನ್ನ ತಂದೆಯವರ ಬಳಿ ಇದ್ದು ಈದಿನ ತಡವಾಗಿ ಠಾಣೆಗೆ ಬಂದು ನನ್ನ ತಂದೆಯವರಿಗೆ ಅಪಘಾತಪಡಿಸಿದ ಕೆಎ-30-ಜೆ-7096 ಫ್ಯಾಷನ್ ಪ್ರೋ ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-113/2020 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಠಾಣಾ ಮೊ ನಂ-114/2020 ಕಲಂ 427,448,504,506,324 ರೆ/ವಿ 34 ಐಪಿಸಿ

ದಿನಾಂಕ-09/08/2020 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿ ಲಕ್ಷ್ಮಮ್ಮ ಕೋಂ ತಿಮ್ಮರಾಜು ವಯಸ್ಸು30 ವರ್ಷ, ವ್ಯವಸಾಯ, ಬೋವಿ, ಮಾಕನಹಳ್ಳಿ ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ತುಮಕೂರು ಜಿಲ್ಲೆ. ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ, ಮಾಕನಹಳ್ಳಿ ಗ್ರಾಮದ ವಾಸಿಗಳಾದ ಡಿ.ಚಂದ್ರಯ್ಯ ಬಿನ್ ಲೇಟ್ ದಾಸಬೊವಿ ಹಾಗೂ ವೆಂಕಟಾಚಲಯ್ಯ ಬಿನ್ ದಾಸಬೋವಿ ಮತ್ತು ದಿವಾಕರ ಬಿನ್ ಡಿ. ಚಂದ್ರಯ್ಯ ಭಾಗ್ಯಮ್ಮ ಕೋಂ ಡಿ.ಚಂದ್ರಯ್ಯ ಮತ್ತು ರಾಜಣ್ಣ ಬಿನ್ ದಾಸಬೋವಿ ಈತನ ಮಗನಾದ ಶ್ರೀನಿವಾಸ್ ಬಿನ್ ರಾಜಣ್ಣ ಈ ವ್ಯಕ್ತಿಗಳು ಸೇರಿಕೊಂಡು ನನ್ನ ಮನೆಯ ಹತ್ತಿರ ಬಂದು ದಿನಾಂಕ 8/08/2020 ಸುಮಾರು 6-30 ಗಂಟೆ ಮತ್ತು ದಿನಾಂಕ 09/08/2020 ರಂದು ಬೆಳಗ್ಗೆ 7-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಹತ್ತಿರ ಬಂದು ನನ್ನ ಮನೆಯ ಕಿಟಕಿ ಗಾಜುಗಳನ್ನು ಹೊಡೆದು ಒಳಗೆ ನೂಗ್ಗಲು ಪ್ರಯತ್ನಿಸಿ ನಮ್ಮ ಪ್ರಾಣ ಹತ್ಯೆಗೆ ಯತ್ನಿಸಿ ಹಾಗೂ ಈ ಮೇಲ್ಕಂಡ ವ್ಯಕ್ತಿಗಳು ಸೇರಿಕೊಂಡು ಪ್ರಾಣ ಬೆದರಿಕೆ ಹಾಕಿ ಮತ್ತು ದಿನವಿಡೀ ಮನೆ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಕೊಡುತ್ತಿರುತ್ತಾರೆ ಮತ್ತು ಮೇಲ್ಕಂಡ ವ್ಯಕ್ತಿಯಾದ ಡಿ.ಚಂದ್ರಯ್ಯ ಎಂಬುವವರು ಪೋಲೀಸ್ ಕಾರ್ಯ ನಿರ್ವಹಿಸುತ್ತಿರುವಾಗ ಬಾಕನಹಳ್ಳಿ ಗ್ರಾಮ ವಾಸಿಗಳಾದ ಗೋಪಾಲಯ್ಯ ಎಂಬ ವ್ಯಕ್ತಿಯನ್ನು ಸಿದ್ದಲಿಂಗಯ್ಯ ಗಿಡದಲ್ಲಿ ಕೊಲೆ ಮಾಡಿಸಿ ಮತ್ತೊಂದು ಹೆಣ್ಣು ಮಹಿಳೆಯಾದ ದೊಡ್ಡಮ್ಮ ಎಂಬುವವರನ್ನು ಕರೆಯಿಸಿಕೊಂಡು ಈತನ ತಮ್ಮನಾದ  ವೆಂಕಟಾಚಲಯ್ಯ ಬಿನ್ ಲೇಟ್ ದಾಸಬೋವಿ ಎಂಬುವವನ ಕೈಯಲ್ಲಿ ಮಾಡಿಸಿ ಈ ಕೇಸುಗಳನ್ನು ಪೋಲೀಸರಿಗೆ ಹಣ ನೀಡಿ ಕೇಸುಗಳನ್ನು ಮುಚ್ಚಿ ಹಾಕಿರುತ್ತಾನೆ. ಇದರ ಬಗ್ಗೆ ಪುನಃ ಗ್ರಾಮಕ್ಕೆ ಬಂದು ತನಿಖೆ ಮಾಡಿ ಮತ್ತು ನನ್ನ ದೂರು ಅರ್ಜಿಗೆ ನ್ಯಾಯ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಮತ್ತು ಸ್ವಾಮಿ ಈ ಮೇಲ್ಕಂಡ ವ್ಯಕ್ತಿಗಳು ನನ್ನ ಗಂಡನು ಮನೆಯಲ್ಲಿ ಇಲ್ಲದ ಸಮಯ ನೋಡಿ ನನ್ನ ಹೊಡೆದು ನನ್ನ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ಇವರುಗಳು ಕತ್ತಿ ಲಾಂಗ್ ದೊಣ್ಣೆ , ಮಚ್ಚುಗಳನ್ನು ತೆಗೆದುಕೊಂಡು ಬಂದು ನನ್ನ ಗಂಡನನ್ನು ಪ್ರಾಣ ಹತ್ಯೆ ಮಾಡಲು ಯತ್ನಿಸಿ ಮತ್ತು ತಿರುಗಾಡುವ ದಾರಿಯಲ್ಲಿ ಸಂಚು ಮಾಡುತ್ತಿದ್ದು ನನಗೆ ದಿನವಿಡಿ ಜಗಳ ಮಾಡಲು ಬರುತ್ತಿರುತ್ತಾರೆ. ಮತ್ತು ಮಾರಣಾಂತಿಕ ಹತ್ಯೆಗೆ ಯತ್ನಿಸಿರುತ್ತಾರೆ. .ಹಾಗೂ ನನ್ನ ಮಗಳಾದ ಕಾವ್ಯ ಎಂಬುವವಳಿಗೆ ಬಲಗಾಲ ಮಂಡಿಗೆ ದೊಣ್ಣೆಯಿಂದ ನೋವುಂಟು ಮಾಡಿರುತ್ತಾರೆ ಆದ್ದರಿಂದ ಈ ಮೇಲ್ಕಂಡ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ ನನಗೆ ಸೂಕ್ತ ಬಂದೋಬಸ್ತ್ ಹಾಗೂ ರಕ್ಷಣೆ ಕೊಡಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-114/2020 ಕಲಂ 427,448,504,506,324 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

 


ಅಪರಾಧ ಘಟನೆಗಳು 09-08-20

ತುಮಕೂರು ನಗರ ಠಾಣೆ ಮೊ.ಸಂ 107/2020 U/S 96(A) KP Act,

ದಿನಾಂಕ:08/08/2020 ರಂದು ಬೆಳಗ್ಗೆ ಸುಮಾರು 04-15 ಗಂಟೆಗೆ ಗಸ್ತಿಗೆ ಬಂದಾಗ ಸಿವಿಲ್ ಬಸ್ ನಿಲ್ದಾಣದ ಒಳಗೆ ಇರುವ ಕಲ್ಪನ ವೈನ್ಸ್ ಮುಂಭಾಗ ಯಾರೋ ಒಬ್ಬ ಆಸಾಮಿಯು ತನ್ನ ಕೈಯಲ್ಲಿ ಒಂದು ಕಬ್ಬಿಣದ ರಾಡನ್ನು ಹಿಡಿದುಕೊಂಡು ನಿಂತಿದ್ದು, ನಮ್ಮನ್ನು ಕಂಡು ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಬಿಸಾಡಿ ಮುಖ ಮರೆಮಾಚಿಕೊಂಡು ಕತ್ತಲಲ್ಲಿ ಮರೆಯಾಗಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆತನನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ಕೇಳಲಾಗಿ ಮುಭಾರಕ್ @ ಮುಬ್ಬು ಬಿನ್ ಅಸ್ರತ್ ಉಲ್ಲಾ @ ಸದರಿ ಆಸಾಮಿಯ ತಮ್ಮ ಇರುವಿಕೆಯ ಬಗ್ಗೆ ಮತ್ತು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಿಂತಿದ್ದರ ಬಗ್ಗೆ ಕೇಳಲಾಗಿ ತೊದಲಿಸುತ್ತ ಸಮಂಜಸ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಸಂಜ್ಞೇಯ ಅಪರಾಧ ಮಾಡಲು ಇಲ್ಲಿಗೆ ಬಂದಿರುವುದಾಗಿ ಅನುಮಾನಗೊಂಡು ಸದರಿ ಆಸಾಮಿಯನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಕರೆತಂದು ಎಸ್ ಹೆಚ್ ಓ ರವರ ಮುಂದೆ 04-45 ಗಂಟೆಗೆ ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಜಿ.ಎಸ್.ಸಿ ನಂ-390/2020 ರಲ್ಲಿ ದಾಖಲಿಸಿರುತ್ತದೆ.

 

ಹುಳಿಯಾರ್ ಪೊಲೀಸ್ ಠಾಣೆ ಮೊ.ನಂ.118/2020 ಕಲಂ 279, 304(ಎ) ಐ.ಪಿ.ಸಿ.

ದಿನಾಂಕ:08.08.2020 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ನರಸಿಂಹಯ್ಯ, 40 ವರ್ಷ, ನಾಯಕ ಜನಾಂಗ,  ವ್ಯವಸಾಯ, ಅರಿಶಿಣಗುಂಡಿ, ಜವನಗೊಂಡನಹಳ್ಳಿಹೋಬಳಿ,ಹಿರಿಯೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು, ನಮ್ಮ ಗ್ರಾಮದ ಮಾರಪ್ಪ ರವರ ಮಗಳಾದ ಕಣುಮವ್ವ ಎಂಬುವರನ್ನು ಮದುವೆಯಾಗಿದ್ದು, ಈಕೆಗೆ ಒಬ್ಬ ತಮ್ಮನಿದ್ದು ಈತನ ಹೆಸರು ತಿಪ್ಪೇಸ್ವಾಮಿ, 38 ವರ್ಷ ಆಗಿದ್ದು, ಈತನ ಹೆಂಡತಿ ರಮ್ಯ, ಇವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ತಿಪ್ಪೇಸ್ವಾಮಿ ರವರು ಈಗ್ಗೆ ಸುಮಾರು 1 ವರ್ಷದಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಲಕ್ಷ್ಮೀಪುರದಲ್ಲಿ ಬಿಳಿಕಲ್ಲು ಗೋರಿ ಕುಟ್ಟುವ ಕೆಲಸವನ್ನು ಮಾಡಿಕೊಂಡಿದ್ದನು. ದಿನಾಂಕ:08.08.2020 ರಂದು ಬೆಳಗ್ಗೆ ಸುಮಾರು 07:45 ಗಂಟೆ ಸಮಯದಲ್ಲಿ ನಾನು, ನನ್ನ ತಂಗಿಯ ಗಂಡ ಪೂಜಣ್ಣ ರವರು ಈರುಳ್ಳಿಗೆ ಔಷಧಿಯನ್ನು ತರಲು ಹುಳಿಯಾರಿಗೆ ಬರುತ್ತಿದ್ದಾಗ ನನ್ನ ಅಳಿಯ ತಿಪ್ಪೇಸ್ವಾಮಿ ರವರು ಸಹಾ ಲಕ್ಷ್ಮೀಪುರಕ್ಕೆ ಹೋಗಲು ಬರುತ್ತಿದ್ದರು ಇದೇ ದಿನ ಬೆಳಗ್ಗೆ ಸುಮಾರು 08:15 ಗಂಟೆ ಸಮಯದಲ್ಲಿ ಹುಳಿಯಾರು ಹೋಬಳಿ ಬಸವನಗುಡಿ ಸಮೀಪ ಹಿರಿಯೂರು – ಹುಳಿಯಾರು ರಸ್ತೆಯಲ್ಲಿ ನನ್ನ ಅಳಿಯ ತಿಪ್ಪೇಸ್ವಾಮಿ ರವರು ಅವರ KA 18 U 3784  ನೇ ಬೈಕಿನಲ್ಲಿ ರಸ್ತೆಯ ಎಡಬದಿಯಲ್ಲಿ ಹುಳಿಯಾರು ಕಡೆ ಹೋಗುತ್ತಿದ್ದಾಗ ನಾನು ನಮ್ಮ ಬೈಕಿನಲ್ಲಿ ಅವರ ಹಿಂಭಾಗ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದೆವು. ಆಗ ಎದುರುಗಡೆಯಿಂದ ಯಾವುದೋ ಬೋರ್ ವೆಲ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೆ ನಮ್ಮ ಮುಂಭಾಗದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ನನ್ನ ಅಳಿಯನ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ನನ್ನ ಅಳಿಯ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದನು. ನಾನು ಹಾಗೂ ನನ್ನ ತಂಗಿಯ ಗಂಡ ಪೂಜಣ್ಣ ರವರು ಹೋಗಿ ನೋಡಲಾಗಿ ತಿಪ್ಪೇಸ್ವಾಮಿಗೆ  ಬಲಗಾಲಿಗೆ, ಬಲಗೈ, ಹಾಗೂ ಇತರೆ ಕಡೆಗಳಲ್ಲಿ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದು, ಈತನನ್ನು ಉಪಚರಿಸಿ 108 ಅಂಬ್ಯುಲೆನ್ಸ್ ಗೆ ಪೋನ್ ಮಾಡಿದೆವು. ನಂತರ ಅಪಘಾತ ಪಡಿಸಿದ ಬೋರ್ ವೆಲ್ ಲಾರಿಯ ನಂಬರ್ ನೋಡಲಾಗಿ KA 01 MK 1288 ಆಗಿತ್ತು. ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ನಲ್ಲಿ ಗಾಯಗೊಂಡಿದ್ದ ತಿಪ್ಪೇಸ್ವಾಮಿ ರವರನ್ನು ನನ್ನ ತಂಗಿಯ ಗಂಡ ಪೂಜಣ್ಣ ಆಸ್ಪತ್ರೆಗೆ ತೋರಿಸಲು ಹೋದರು. ನಾನು ಊರಿಗೆ ಹೋಗಿ ಅಪಘಾತದ ವಿಚಾರವನ್ನು ಮನೆಯಲ್ಲಿ ತಿಳಿಸಿದೆನು. ಇದೇ ದಿನ ಮದ್ಯಾಹ್ನ 02:15 ಗಂಟೆಗೆ ಪೂಜಣ್ಣ ನನಗೆ ಪೋನ್ ಮಾಡಿ ತಿಪ್ಪೇಸ್ವಾಮಿ ರವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೋರಿಸಿ, ವೈದ್ಯರ ಸಲಹೆಯಂತೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಮದ್ಯಾಹ್ನ 01:45 ಗಂಟೆಗೆ ಮೃತಪಟ್ಟಿದ್ದು ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಈಗ ಠಾಣೆಗೆ ಬಂದು ನನ್ನ ಅಳಿಯ ತಿಪ್ಪೇಸ್ವಾಮಿ ರವರಿಗೆ ಅಪಘಾತ ಪಡಿಸಿದ KA 01 MK 1288 ನೇ ಬೋರ್ ವೆಲ್ ಲಾರಿ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ. ನಂ. 118/2020 ಕಲಂ 279, 304(ಎ) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 69/2020 ಕಲಂ: 279,304(A) ಐ.ಪಿ.ಸಿ ರೆ/ವಿ 187 ಐ.ಎಂ.ವಿ ಆಕ್ಟ್.

ದಿನಾಂಕ: 08/08/2020 ರಂದು ಬೆಳಿಗ್ಗೆ 10-45 ಗಂಟೆಗೆ ಪಿರ್ಯಾದಿ ಉಮೇಶ್ ಬಾಬು ಹೆಚ್.ಎನ್ ಬಿನ್ ನಂಜಪ್ಪ, 45 ವರ್ಷ, ಲಿಂಗಾಯ್ತರು, ಜಿರಾಯ್ತಿ, ಹುಲ್ಲುಕಟ್ಟೆ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 08.08.2020 ರಂದು ಬೆಳಿಗಿನ ಜಾವ ಸುಮಾರು 05-00 ಗಂಟೆ ಸಮಯದಲ್ಲಿ ನನ್ನ ತಂದೆಯಾದ ನಂಜಪ್ಪರವರು ಎಂದಿನಂತೆ ಕಾಯಿ ವ್ಯಾಪಾರ ಮಾಡಲು, ತಿಪಟೂರು ತರಕಾರಿ ಮಾರುಕಟ್ಟೆಗೆ  ಸೈಕಲ್ ನಲ್ಲಿ ಹೋಗಿದ್ದರು, ಈಗಿರುವಾಗ ನಮ್ಮ ಗ್ರಾಮದ ಸೋಮಶೇಖರ್ ರವರು ನನಗೆ ಪೋನ್ ಮಾಡಿ  ತಿಳಿಸಿದ ವಿಚಾರವೆನಂದರೆ ನಿಮ್ಮ ತಂದೆಯಾದ ನಂಜಪ್ಪರವರು ಬಸವಶ್ರೀ ಟ್ರೇಡರ್ ಅಂಗಡಿ ಮುಂಭಾಗ ತಿಪಟೂರು-ತುರುವೇಕೆರೆ ರಸ್ತೆಯಲ್ಲಿ ಸೈಕಲ್ ನಲ್ಲಿ ಹೋಗುತ್ತಿರುವಾಗ  ಹಿಂದಿನಿಂದ ಒಬ್ಬ ದ್ವಿಚಕ್ರ ವಾಹನದ ಸವಾರ  ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಸೈಕಲ್ ನಲ್ಲಿ ಹೋಗುತ್ತಿದ್ದ  ನಿಮ್ಮ ತಂದೆಯವರಿಗೆ ಡಿಕ್ಕಿಹೊಡಿಸಿ ಅಪಘಾತಪಡಿಸಿದರು, ಆಗ ಸೈಕಲ್ ಸಮೇತ ನಂಜಪ್ಪರವರು ಕೆಳಕ್ಕೆ ಬಿದ್ದರು ಮತ್ತು ದ್ವಿಚಕ್ರ ವಾಹನದ ಸವಾರನು ಸಹ ಕೆಳಕ್ಕೆ ಬಿದ್ದು, ನಂತರ ದ್ವಿಚಕ್ರವಾಹನದೊಂದಿಗೆ ಓಡಿ ಹೋಗಿರುತ್ತಾನೆ. ನಂತರ ನಾನು ಹೋಗಿ ನೋಡಲಾಗಿ ನಂಜಪ್ಪರವರಿಗೆ ತಲೆಯ ಹಿಂಭಾಗ ಮತ್ತು ಎಡ ಕಿವಿಯ ಹತ್ತಿರ ರಕ್ತಗಾಯವಾಗಿರುತ್ತೆ. ದ್ವಿಚಕ್ರವಾಹನ ಬಿದ್ದ ಸ್ಥಳದಲ್ಲಿ JIO ಕಂಪನಿಯ ಕೀಪ್ಯಾಡ್ ಮೋಬೈಲ್ ಬಿದ್ದಿರುತ್ತೆದೆ ಎಂತಾ ತಿಳಿದರು ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆಯಾದ ನಂಜಪ್ಪರವರಿಗೆ ತಲೆಯ ಹಿಂಭಾಗ ಮತ್ತು ಎಡ ಕಿವಿಯ ಹತ್ತಿರ ರಕ್ತಗಾಯವಾಗಿತ್ತು. ನಾವುಗಳು ಉಪಚರಿಸಿ ಚಿಕಿತ್ಸೆಗಾಗಿ  108 ಆಂಬುಲೆನ್ಸ್ ನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು,  ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ತುಮಕೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 09-15 ಗಂಟೆ ಸಮಯದಲ್ಲಿ ಗುಬ್ಬಿ ಹತ್ತಿರ ನಮ್ಮ ತಂದೆ ನಂಜಪ್ಪರವರು ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ. ನಂತರ ವಾಪಸು ನನ್ನ ತಂದೆ ನಂಜಪ್ಪರವರ ಮೃತ ದೇಹವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತಂದು ಹಾಕಿರುತ್ತೇವೆ.  ಈ ಅಪಘಾತಕ್ಕೆ ಕಾರಣನಾಗಿರುವ ಅಪರಿಚಿತ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ. ಹಾಗೂ ಅಪಘಾತ ಸ್ಥಳದಲ್ಲಿ ಬಿದ್ದಿದ JIO ಕಂಪನಿಯ ಕೀಪ್ಯಾಡ್ ಮೋಬೈಲ್ ನ್ನು ಹಾಜರುಪಡಿಸಿರುತ್ತೇನೆಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ- 69/2020 ಕಲಂ: 279,304(A) ಐ.ಪಿ.ಸಿ ರೆ/ವಿ 187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 Saturday, 08 August 2020

ಅಪರಾಧ ಘಟನೆಗಳು 08-08-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 68/2020 ಕಲಂ : 505 (1), (B) ಐ.ಪಿ.ಸಿ

ದಿನಾಂಕ: 07/08/2020 ರಂದು ಮಧ್ಯಾಹ್ನ 1-00 ಗಂಟೆಯಲ್ಲಿ ಠಾಣಾ ಪಿ.ಸಿ -678 ವೀರೇಶ್ ರವರು ತಿಪಟೂರು ಎಸ್.ಡಿ.ಪಿ.ಓ ಕಛೇರಿಯಿಂದ ಟಪಾಲು ಮೂಲಕ ಪಡೆದು ತಂದು ಹಾಜರುಪಡಿಸಿದ ದೂರು ಮತ್ತು ಅದರ ಜೊತೆಯಲ್ಲಿದ್ದ ಪುಟ -1 ರಿಂದ 7 ರ ವರದಿಯ ಅಂಶವೇನೆಂದರೆ,  ಶ್ರೀ ಚಂದನ್ ಕುಮಾರ್ ಎನ್ ಆರಕ್ಷಕ ಉಪಾಧೀಕ್ಷಕರು, ತಿಪಟೂರು ಉಪವಿಭಾಗ, ತಿಪಟೂರು ಆದ ನಾನು ಈ ದಿನ ದಿನಾಂಕ: 07/08/2020 ರಂದು ತಿಪಟೂರು ಬ್ರಿಗೇಡ್ ಗ್ರೂಪ್ ನಲ್ಲಿ ಮೆಸೇಜ್ ಬ್ರೌಸ್ (BROWSE) ಮಾಡುತ್ತಿರುವಾಗ NAMO ಎಂದು ಹೆಡ್ಡಿಂಗ್ ಬರೆದು ಉತ್ತರಪ್ರದೇಶದ ಮುಖ್ಯ ಮಂತ್ರಿಯವರ ಭಾವಚಿತ್ರದೊಂದಿಗೆ “ ಭೂಮಿ ಪೂಜೆ ದಿನ ಅಲ್ಲೇನಾದರೂ ಸಣ್ಣ ಅಹಿತಕರ ಘಟನೆ ನಡೆದರೆ ಪರಿಣಾಮವಾಗಿ ಭಾರತದಲ್ಲಿರುವ ಒಂದೇ ಒಂದು ಮಸೀದಿಯು ಇಲ್ಲದಂತೆ ಮಾಡ್ತೀವಿ ಎಚ್ಚರಿಕೆ – ಯೋಗಿ ಆದಿತ್ಯನಾಥ್ “ ಎಂಬ ಬರಹವನ್ನು ಆಗಷ್ಟ್ -2 ರಂದು ಮಧ್ಯಾಹ್ನ 02-17 ಗಂಟೆಗೆ ಮೊಬೈಲ್ ನಂ- 9743487243 ಈ ನಂಬರ್ ರವರು ಪೋಸ್ಟ್ ಮಾಡಿರುತ್ತಾರೆ. ಸದರಿ ಮೆಸೇಜ್ ಕಳುಹಿಸಿದವರ ವಾಟ್ಸಪ್ ಡೀಟೈಲ್ಸ್ ಚೆಕ್ ಮಾಡಲಾಗಿ ಗುರುಪ್ರಸಾದ್ ಹೆಚ್.ಜಿ ಎಂಬ ಹೆಸರುಳ್ಳ ವ್ಯಕ್ತಿಯ ಫೋಟೋ ಕಂಡುಬಂದಿರುತ್ತದೆ. ಈ ರೀತಿಯ ಮೆಸೇಜನ್ನು ಅನೇಕ ಜನರಿರುವ ಗ್ರೂಪ್ ನ ಸೋಷಿಯಲ್ ಮೀಡಿಯಾ ದಲ್ಲಿ ರವಾನೆ ಮಾಡಿರುವುದರಿಂದ ಸಮಾಜದಲ್ಲಿ ಶಾಂತಿಭಂಗ, ಮತೀಯ ಗಲಭೆ, ಧ್ವೇಷ ಉಂಟಾಗುವ ಸಾಧ್ಯತೆ ಇರುತ್ತೆ. ಆದ್ದರಿಂದ ಈ ಕೂಡಲೇ ಈ ರೀತಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಮತ್ತು ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವಂತಹ ಮೆಸೇಜನ್ನು ವಾಟ್ಸಪ್ ಗ್ರೂಪ್ ಕಳುಹಿಸಿರುವ ಮೇಲ್ಕಂಡ ಮೊಬೈಲ್ ನಂ- ಬಳಸುವ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿ ಇದರೊಂದಿಗೆ ವಾಟ್ಸ್  ಆಪ್ ಗ್ರೂಪ್ ನಲ್ಲಿ ರವಾನಿಸಿರುವ ಮೆಸೇಜ್ ನ ಪ್ರಿಂಟ್ ನ ಪ್ರತಿ, ಗ್ರೂಪ್ ಅಡ್ಮಿನ್ ಮಾಹಿತಿ ಪ್ರತಿ, ಇವೆಲ್ಲವುಗಳ ಸ್ನಾಪ್ ಶಾಟ್ (SNAP SHOT) ಪ್ರತಿಯನ್ನು ಹಾಗೂ ಇದರೊಂದಿಗೆ ಲಗತ್ತಿಸಿರುವ ಸ್ನಾಪ್ ಶಾಟ್ ಹಾಗೂ ಚಾಟ್ ಹಿಸ್ಟರಿ (CHAT HISTORY) ಗಳನ್ನು ಇ-ಮೇಲ್ ಮುಖಾಂತರ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಇ-ಮೇಲ್ ವಿಳಾಸಕ್ಕೆ ರವಾನಿಸಿಕೊಂಡಿರುತ್ತೆಂತ  ನೀಡಿರುವ ವರದಿಯನ್ನು ಪಡೆದು ಠಾಣಾ ಮೊ.ನಂ 68/2020 ಕಲಂ : 505 (1), (B) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಠಾಣಾ ಮೊ,ನಂ-112/2020 ಕಲಂ 15(ಎ), 32(3) ಕೆ.ಇ.ಆಕ್ಟ್

ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ. ನರಸಿಂಹರಾಜು.ಎಸ್.ಸಿ  ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:-07-08-2020 ರಂದು ನಾನು ಮತ್ತು ಠಾಣಾ ಸಿ,ಹೆಚ್‌,ಸಿ-463 ಮುನಿರಾಜು ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಹೆಬ್ಬೂರು, ನಾಗವಲ್ಲಿ, ಲಕ್ಕೇನಹಳ್ಳಿ ಕಡೆಗಳಲ್ಲಿ ಬೆಳಿಗ್ಗೆ 10-45 ಗಂಟೆಯ ಸಮಯದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ನನಗೆ ಬಂದ ಮಾಹಿತಿ ಏನೆಂದರೆ, ಹೊನ್ನೇನಹಳ್ಳಿ, ಗ್ರಾಮದ ರಾಜಶೇಖರಯ್ಯ ಎಂಬುವರು ಮದ್ಯದ ಪ್ಯಾಕೆಟ್ ಗಳನ್ನು ತಂದು ಅವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸಾರ್ವಜನಿಕರು ಅವರ ಚಿಲ್ಲರೆ ಅಂಗಡಿಯ ಬಳಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ನಾನು ಠಾಣಾ ಸಿಹೆಚ್‌ಸಿ-463 ಮುನಿರಾಜು  ರವರು ಬೆಳಿಗ್ಗೆ 11-00  ಗಂಟೆಯಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಂದು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಯಾರೋ 04 ಜನ ಆಸಾಮಿಗಳು ಮದ್ಯಪಾನ ಮಾಡುತ್ತಿದ್ದು ಖಾತ್ರಿಮಾಡಿಕೊಂಡು ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬೆಳಿಗ್ಗೆ11-15 ಗಂಟೆಯಲ್ಲಿ ಮದ್ಯಪಾನ ಮಾಡುತ್ತಿದ್ದವರನ್ನು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 03 ಖಾಲಿ ಪ್ಲಾಸ್ಟಿಕ್ ಲೋಟಗಳು, 01 ಖಾಲಿ ವಾಟರ್ ಬಾಟಲ್, 03 ಖಾಲಿಯಾಗಿರುವ  90 ಎಂ.ಎಲ್.ನ ರಾಜಾ ವಿಸ್ಕಿ ಸಾಚೆಟ್ ಗಳು ಇದ್ದು, ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿದ್ದ ಚಿಲ್ಲರೆ ಅಂಗಡಿಯವರು  ಅಂಗಡಿಯಲ್ಲಿದ್ದು, ಕರೆಸಿ ಪಂಚರ ಸಮಕ್ಷಮ ಹೆಸರು ವಿಳಾಸ ಕೇಳಲಾಗಿ ಹೆಚ್,ಎಸ್,ರಾಜಶೇಖರಯ್ಯ ಬಿನ್ ಲೇಟ್ ಸಂಜೀವಯ್ಯ, 37 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ಕುರುಬರು, ಹೊನ್ನೇನಹಳ್ಳಿ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ಎಂತಾ ತಿಳಿಸಿದ್ದು, ಸದರಿಯವರಿಗೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಬಗ್ಗೆ ಪರವಾನಗಿಯನ್ನು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದು, ಹೆಚ್,ಎಸ್,ರಾಜಶೇಖರಯ್ಯ ರವರು ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ತಂದು ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿಯವರ ಅಂಗಡಿಯ ಮುಂಭಾಗ ಜನರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ತಂದು ಕುಡಿಯಲು ಅನುವು ಮಾಡಿಕೊಟ್ಟಿರುವುದರಿಂದ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿಕೊಂಡು ಮಾಲು ಆಸಾಮಿ ಮತ್ತು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-45 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ,ನಂ-112/2020 ಕಲಂ 15(ಎ), 32(3) ಕೆ.ಇ.ಆಕ್ಟ್ ರೀತ್ಯಾ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತ

 

 Friday, 07 August 2020

ಅಪರಾಧ ಘಟನೆಗಳು 07-08-20

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಯು, ಡಿ, ಆರ್ ನಂ. 16/2020 ಕಲಂ 174 ಸಿ ಆರ್ ಪಿ ಸಿ

ದಿನಾಂಕ:-06.08.2020 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿಯಾದ ಶಿವ ಸುಮ್ರಮಣಿಂ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿನ ಸಾರಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ನನ್ನ ಅಣ್ಣನಾದ 42 ವರ್ಷದ  ಸಕ್ತಿವೇಲ್ ಪೊನ್ನಸಾಮಿ (Sakthivel ponnu samy)  ಎಂಬ ಇಬ್ಬರು ಮಕ್ಕಳಿರುತ್ತೇವೆ. ಈಗ್ಗೆ ಸುಮಾರು 06 ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ತೆಂಗಿನ ಕಾಯಿ ಸಿಪ್ಪೆಯನ್ನು ತೆಗೆಯುವ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು.  ದಿನಾಂಕ:- 05.08.2020 ರಂದು ಮದ್ಯಾನ ಸುಮಾರು 02.00 ಗಂಟೆಗೆ ನನ್ನ ಅಣ್ಣನಾದ ಸಕ್ತಿವೇಲ್ ಪೊನ್ನಸಾಮಿ ರವರು ಗುಬ್ಬಿ ಗೇಟ್‌ನಲ್ಲಿರುವ ಜಿ.ಸಿ.ಬಿ ಬಿಡಿ ಬಾಗದ ಅಂಗಡಿಗೆ ಬಂದು ಬಿಡಿ ಬಾಗಗಳನ್ನು ತೆಗೆದುಕೊಳ್ಳುತ್ತಿರುವಾಗ್ಗೆ, ಇದ್ದಕ್ಕಿದಂತೆ ನೆಲಕ್ಕೆ ಕುಸಿದು ಬಿದ್ದಿರುತ್ತಾರೆ. ನಂತರ ಕೂಡಲೇ ಅಲ್ಲಿನ ಜನರು 108 ಅಂಬುಲೆನ್ಸ್ ಮುಖಾಂತರ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು, ಪ್ರಥಮ ಚಿಕಿತ್ಸೆ ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ರಾತ್ರಿ ಸುಮಾರು 12.30 ಗಂಟೆಯಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ ಇ.ಸಿ.ಜಿ ಮಾಡಿಸಿದಾಗ ನನ್ನ ಅಣ್ಣನಾದ ಸಕ್ತಿವೇಲ್ ಪೊನ್ನಸಾಮಿ ರವರು ಮೃತಪಟ್ಟಿರುತ್ತಾರೆ. ಸಕ್ತಿವೇಲ್ ಪೊನ್ನಸಾಮಿ ರವರು ಇತ್ತೀಚಿಗೆ ಆರೋಗ್ಯ ಸರಿಯಿರಲಿಲ್ಲ. ಸದರಿಯವನು ಯಾವಗಲೂ ಎದೆ ನೋವು ಎದೆ ನೋವು ಎಂದು ಹೇಳುತ್ತಿದ್ದನು. ನನ್ನ ಅಣ್ಣನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನನ್ನ ಅಣ್ಣನು ಯಾವುದೋ ಖಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುತ್ತಾನೆ. ಹೆಣವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

ಹುಳಿಯಾರು ಪೊಲೀಸ್ ಠಾಣೆ ಮೊ. ನಂ. 115/2020 ಕಲಂ 15 (ಎ), 32(3) K E Act

ದಿನಾಂಕ:06.08.2020 ರಂದು ಸಂಜೆ 06:30 ಗಂಟೆಗೆ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಅಂಶವೇನೆಂದರೆ ಹುಳಿಯಾರು ಪೊಲೀಸ್ ಠಾಣಾ  ಪಿ.ಎಸ್.ಐ ಆಗಿ  ಕರ್ತವ್ಯ ನಿರ್ವಹಿಸುತ್ತಿರುವ  ರಮೇಶ್ ಕೆ.ಟಿ ಆದ ನನಗೆ ದಿನಾಂಕ:-06.08.2020 ರಂದು ಸಂಜೆ 4.00  ಗಂಟೆ ಸಮಯದಲ್ಲಿ ಭಾತ್ಮೀದಾರರು ಪೋನ್ ಮಾಡಿ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಯಾರು ಹೋಬಳಿ, ಕಂಪನಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ಲೇ ಹನುಮಂತಪ್ಪ, ಎಂಬುವವರ ಮನೆಯ ಮುಂದೆ ಸಾರ್ವಜನಿಕವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು  ಮಾಹಿತಿ ಬಂದಿದ್ದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮನೆಯ ಮುಂಭಾಗದಲ್ಲಿ ಇಬ್ಬರು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿದ ಇಬ್ಬರೂ ಆಸಾಮಿಗಳು ನಮ್ಮ ಕೈಗೆ ಸಿಗದೆ ಓಡಿಹೋಗಿದ್ದು ಪಂಚರ ಸಮಕ್ಷಮ ಪಂಚನಾಮೆಯನ್ನು ಕೈಗೊಂಡು ಮಾಲು ಮತ್ತು ಆರೋಪಿತನೊಂದಿಗೆ  ಠಾಣೆಗೆ ಬಂದು ಮುಂದಿನ ಕ್ರಮಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದು ಠಾಣಾ ಮೊ. ನಂ. 115/2020 ಕಲಂ 15 (ಎ), 32(3) K E Act  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 

ಜಯನಗರ ಪೊಲೀಸ್ ಠಾಣಾ ಮೊ.ನಂ. 53/2020 ಕಲಂ 448, 323, 324, 504, 506 ರೆ.ವಿ 34 ಐಪಿಸಿ

ದಿನಾಂಕ: 06/08/2020 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿ, ಕೆಸರಮಡು ವಾಸಿ ಕೆ.ವಿ. ಸುರೇಶ್ ಬಿನ್ ಲೇಟ್ ವೀರಭದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ಪಿರ್ಯಾದು ಅಂಶವೇನೆಂದರೆ, 2015 ನೇ ಇಸವಿಯಲ್ಲಿ ತುಮಕೂರು ಟೌನ್, ಮರಳೂರುದಿಣ್ಣೆ 7 ನೇ ಕ್ರಾಸ್‌‌ನಲ್ಲಿ  ಇರುವ ಜಯಮ್ಮ ಕೋಂ. ಶಂಕರಪ್ಪ ರವರ  ಮನೆಯನ್ನು ಕ್ರಯಕ್ಕೆ ಕೊಂಡು ಕೊಂಡಿದ್ದು, ನಂತರ ಜಯಮ್ಮ ಕೋಂ. ಶಂಕರಪ್ಪ ರವರಿಗೇ ಸದರಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದೆನು.  ಜಯಮ್ಮ ಕೋಂ. ಶಂಕರಪ್ಪರವರಿಗೆ ಸುಮಾರು ಸಾರಿ ಮನೆ ಖಾಲಿಮಾಡಿಸಲು ಪ್ರಯತ್ನಿಸಿದ್ದು, ಅವರು ನಮ್ಮ ಮನೆಯನ್ನು ಖಾಲಿ ಮಾಡದ ಕಾರಣ ನಾನು ನ್ಯಾಯಾಲಯಕ್ಕೆ ದೂರು ನೀಡಿ, ನ್ಯಾಯಾಲಯದ ಆದೇಶದ ಮೂಲಕ ಜಯಮ್ಮ ಕೋಂ. ಶಂಕರಪ್ಪ ರವರನ್ನು ಮನೆ ಖಾಲಿ ಮಾಡಿಸಿದ್ದೆವು. ಹೀಗಿರುವಲ್ಲಿ ಈ ದಿನ ದಿನಾಂಕ: 06-08-2020 ರಂದು ತುಮಕೂರು ಟೌನ್ ಮರಳೂರು ದಿಣ್ಣೆ 7 ನೇ ಕ್ರಾಸ್‌‌ನಲ್ಲಿರುವ ನಮ್ಮ ಮನೆಯನ್ನು ಕ್ಲೀನ್‌‌ಮಾಡಿಸಿ, ಮನೆಯ ಒಳಗೆ ಪ್ಲಾಸ್ಟಿಂಗ್‌‌‌ಮಾಡಿಸುತ್ತಿದ್ದಾಗ, ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಜಯಮ್ಮ ಕೋಂ.ಶಂಕರಪ್ಪ ಹಾಗೂ ಆಕೆಯ ಗಂಡ ಶಂಕರಪ್ಪ ಇಬ್ಬರೂ ಏಕಾಏಕಿ ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ, ಮನೆಯ ಒಳಗೆ ಪ್ಲಾಸ್ಟಿಂಗ್‌‌‌‌ಮಾಡಿಸುತ್ತಿದ್ದ ನನ್ನ ಮೇಲೆ ಜಗಳ ತೆಗೆದು ನನಗೆ ಬಾಯಿಗೆ ಬಂದಂತೆ ಸೂಳೇಮಗನೇ, ಲೋಪರ್‌‌ನನ್ನ ಮಗನೇ ನಮ್ಮನ್ನು ಮನೆಯಿಂದ ಖಾಲಿ ಮಾಡಿಸುತ್ತೀಯೇನೋ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂತಾ ಜಗಳ ತೆಗೆದು ಇಬ್ಬರೂ ಸೇರಿ ಕೈಗಳಿಂದ ನನ್ನ ಮೈ ಮೇಲೆಲ್ಲಾ ಹೊಡೆದರು. ಅಷ್ಟರಲ್ಲಿ ಶಂಕರಪ್ಪ ಅಲ್ಲೇ ಮನೆಯ ಹಾಲ್‌‌ನಲ್ಲಿ ಗಾರೆ ಕೆಲಸದವರು ಪ್ಲಾಸ್ಟಿಂಗ್‌ಮಾಡಲು ತಂದಿಟ್ಟಿದ್ದ  ಮಟ್‌‌ಕೋಲನ್ನು ತೆಗೆದುಕೊಂಡು  ನನ್ನ ತಲೆಯ ಮದ್ಯಭಾಗಕ್ಕೆ ಹೊಡೆದನು.  ನಂತರ ಅದೇ ಮಟ್‌‌ಕೋಲಿನಿಂದ ಪುನ: ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು.  ಅಷ್ಟರಲ್ಲಿ ಅಲ್ಲಿಯೇ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸುತ್ತಿದ್ದ ಗಾರೆ ಮೇಸ್ತ್ರಿ ಮೊಹಿದ್ದೀನ್‌‌ಪಾಷ ಬಿನ್. ಲೇ|| ಕರೀಂಸಾಬ್ , ಗಾರೆ ಕೆಲಸ ಮಾಡುವ ಗೌಸ್‌‌ಪಾಷ ಬಿನ್. ಲೇ|| ಮಹಮ್ಮದ್‌‌ಹುಸೇನ್‌,  ದಾದಾಪೀರ್‌‌‌ಬಿನ್. ಅಬ್ದುಲ್‌‌‌‌ಸಲಾಮ್‌‌ಸಾಬ್‌, ಹಾಗೂ ಗಲಾಟೆಯ ಶಬ್ದ ಕೇಳಿ ನಮ್ಮ ಮನೆಯ ಬಳಿಗೆ ಬಂದ ಸಲ್ಮಾನ್‌‌‌ಬಿನ್. ಅಪ್ಜಲ್‌‌‌‌ರವರುಗಳು ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರಿಗೆ ಬುದ್ದಿ ಹೇಳಿ ಶಂಕರಪ್ಪನ ಕೈಯ್ಯಲ್ಲಿದ್ದ ಮಟ್ಟಗೋಲನ್ನು ಕಿತ್ತು ನಮ್ಮ ಮನೆಯ ಹಾಲ್‌‌ನಲ್ಲಿಯೇ ಬಿಸಾಕಿದರು.  ಆದರೂ ಸಹಾ ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರುಗಳು ನನ್ನನ್ನು ಕುರಿತು ನಿನ್ನನ್ನು ಇಷ್ಟಕ್ಕೇ ಬಿಡುವುದಿಲ್ಲ ಕೊಲೆ ಮಾಡಿಸಿಯೇ ತೀರುತ್ತೇವೆಂತಾ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟುಹೋದರು.   ನಂತರ ಈ ಘಟನೆಯಲ್ಲಿ ಗಾಯಗೊಂಡಿದ್ದ ನನ್ನನ್ನು ಜಗಳ ಬಿಡಿಸಿದ ಸಲ್ಮಾನ್‌‌‌‌ಹಾಗೂ ನಮ್ಮ ಗಾರೆಮೇಸ್ತ್ರಿ ಮೊಹಿದ್ದೀನ್‌‌ಪಾಷ ರವರುಗಳು ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ.  ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ವಿಶ್ರಾಂತಿ ಪಡೆದು ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಸಿ.ಎಸ್.ಪುರ ಪೊಲೀಸ್ ಠಾಣೆ ಮೊ.ನಂ: 79/2020. ಕಲಂ: 279. 337 ಐಪಿಸಿ

ದಿನಾಂಕ:06.08.2020 ರಂದು ಸಂಜೆ 5.00 ಗಂಟೆಗೆ  ಈ ಕೇಸಿನ  ಫಿರ್ಯಾದಿಯಾದ  ಶಿವಮ್ಮ ಕೊಂ  ಲೊಕೇಶ, 30ವರ್ಷ, ಆದಿ ಕರ್ನಾಟಕ  ಜನಾಂಗ,  ಅಂಕಳ ಕೊಪ್ಪ ಗ್ರಾಮ, ಸಿ.ಎಸ್.ಪುರ  ಹೋಬಳಿ, ಗುಬ್ಬಿ  ತಾಲ್ಲೂಕು ರವರು ಠಾಣೆಗೆ   ಹಾಜರಾಗಿ  ನೀಡಿದ  ದೂರಿನ ಸಾರಾಂಶವೆಂದರೆ, ದಿನಾಂಕ:25.07.2020 ರಂದು  ಬೆಳಗ್ಗೆ 11.30 ಗಂಟೆ  ಸಮಯದಲ್ಲಿ  ನನ್ನ  ಮಗನಾದ   ನರಸಿಂಹ ಮೂರ್ತಿ  &  ಬೇರೆ ಹುಡುಗನೊಂದಿಗೆ ರಸ್ತೆ  ಪಕ್ಕ  ಕಾಲೋನಿಯ ಸಮೀಪ  ಆಟವಾಡುತ್ತಿರುವಾಗ್ಗೆ, ಬೋರಪ್ಪನಹಳ್ಳಿ  ಕಡೆಯಿಂದ  ಒಬ್ಬ ಆಸಾಮಿ ಅಂಕಳಕೊಪ್ಪದ ಕಡೆಗೆ  ದ್ವಿ ಚಕ್ರವಾಹನದಲ್ಲಿ  ಅತಿ ವೇಗ & ಅಜಾಗರುಕತೆಯಿಂದ  ತನ್ನ ದ್ವಿ ಚಕ್ರವಾಹನವನ್ನು  ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ  ಆಟವಾಡುತಿದ್ದ  ನನ್ನ  ಮಗ ನರಸಿಂಹ ಮೂರ್ತಿಯ  ಬಲಗಾಲಿಗೆ ಡಿಕ್ಕಿ ಹೊಡೆದು  ಅಪಘಾತಮಾಡಿ  ಕಾಲಿಗೆ  ಪೆಟ್ಟು   ಬಿದ್ದು ರಕ್ತಗಾಯವಾಗಿರುತ್ತದೆ. ಆಗ ನನ್ನ ಮಗ ಕಿರಾಡಿದಾಗ ಹೋಗಿ ನೋಡಲಾಗಿ  ಇಡಗೂರು  ವಾಸಿ ಚಂದ್ರ ಕುಮಾರ್  ಬಿನ್  ನರಸಿಂಹಯ್ಯ ಆಗಿದ್ದು, ವಾಹನ ನಂಬರ್ ನೋಡಲಾಗಿ ಕೆ.ಎ02-ಜೆಎಲ್-8140 ಹೊಂಡಾ  ಕಂಪನಿಯ ದ್ವಿ ಚಕ್ರವಾಹನವಾಗಿರುತ್ತೆ ಎಂದು   ಇತ್ಯಾದಿಯಾಗಿ  ನೀಡಿದ  ದೂರನ್ನು  ಪಡೆದು  ಸಿ.ಎಸ್.ಪುರ  ಠಾಣಾ  ಮೊ.ನಂ: 79/2020. ಕಲಂ: 279. 337 ಐಪಿಸಿ ರೀತ್ಯಾ   ಪ್ರಕರಣ  ದಾಖಲಿಸಿರುತ್ತೆThursday, 06 August 2020

ಅಪರಾಧ ಘಟನೆಗಳು 06-08-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 67/2020 ಕಲಂ: 279,304(ಎ) ಐ.ಪಿ.ಸಿ

ದಿನಾಂಕ: 06/08/2020 ರಂದು ಬೆಳಿಗ್ಗೆ 7-30 ಗಂಟೆಗೆ ಪಿರ್ಯಾದಿ ಆರ್ ಹನುಮಂತರಾಯ ಬಿನ್ ಲೇಟ್ ರಾಮಯ್ಯ, 37 ವರ್ಷ, ಆದಿ ಕರ್ನಾಟಕ ಜನಾಂಗ, ವಿ.ಆರ್.ಎಲ್ ನಲ್ಲಿ ಹಮಾಲಿ ಕೆಲಸ, ವಾಸ: KSRTC ಬಸ್ ನಿಲ್ದಾಣದ ಹಿಂಭಾಗ, ಸಂತೇ ಮೈದಾನ, ಹಿರಿಯೂರು ಟೌನ್, ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳಿದ್ದು, ನಾನು ದೊಡ್ಡಮಗನಾಗಿರುತ್ತೇನೆ. ಎರಡನೆಯವನು  ಆರ್ ಮಂಜುನಾಥ್ ಮೂರನೆಯವನು ಆರ್ ಮಲ್ಲೇಶ್ ಆಗಿರುತ್ತೇವೆ. ಎಲ್ಲರಿಗೂ ಮದುವೆಯಾಗಿದ್ದು, ಬೇರೆ ಬೇರೆ ವಾಸವಾಗಿರುತ್ತೇವೆ. ನನ್ನ ತಮ್ಮ ಆರ್ ಮಂಜುನಾಥ್ ರವರು ಡ್ರೈವಿಂಗ್ ಕೆಲಸ ಮಾಡುತ್ತಿದ್ದು, ನಮ್ಮ ಹಿರಿಯೂರು ಟೌನ್ ವಾಸಿ ತಾರಾಚಂದ್ @ ತರುಣ್ ಕೊಟಾರಿ ರವರ ಅಶೋಕಾ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದು, ವಾರದಲ್ಲಿ ಎರಡು-ಮೂರು ದಿನ ಬೆಲ್ಲದ ಲೋಡಿಗೆ ಕೆ.ಆರ್ ಪೇಟೆಗೆ ಹೋಗಿ ಬರುತ್ತಿದ್ದರು. ಅದರಂತೆ ತಮ್ಮ ಮಂಜುನಾಥ್ ರವರು ದಿನಾಂಕ: 05/08/2020 ರಂದು ಬೆಳಿಗ್ಗೆ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದನು. ರಾತ್ರಿ 11-30 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನನ್ನ ತಮ್ಮ ಆರ್ ಮಂಜುನಾಥ್ ರವರು ಹೋಗುತ್ತಿದ್ದ ಅಶೋಕಾ ಲೈಲ್ಯಾಂಡ್ ದೋಸ್ತ್ ಮಾಲೀಕರಾದ ತಾರಾಚಂದ್ @ ತರುಣ್ ಕೊಟಾರಿ ರವರು ನಮ್ಮ ಮನೆಯ ಬಳಿ ಬಂದು ನಿಮ್ಮ ತಮ್ಮ ಆರ್ ಮಂಜುನಾಥ್ ರವರು ತಿಪಟೂರು ಬಳಿ ನಮ್ಮ ವಾಹನದಲ್ಲಿ ಅಪಾಘಾತ ಮಾಡಿಕೊಂಡು ಮೃತಪಟ್ಟಿರುತ್ತಾರೆಂತ ರಾತ್ರಿ 11-25 ಗಂಟೆಯ ಸಮಯದಲ್ಲಿ ನಂ- 8150051081 ರಿಂದ ಫೋನ್ ಮಾಡಿರುತ್ತಾರೆ. ಬನ್ನಿ ಹೋಗಿ ಬರೋಣಾ ಎಂತ ಕರೆದರು. ತಕ್ಷಣ ನಾನು ಅವರ ಜೊತೆಯಲ್ಲಿ ತಿಪಟೂರಿಗೆ ಬಂದು ನೋಡಲಾಗಿ ತಿಪಟೂರು- ಚಿಕ್ಕನಾಯಕಹಳ್ಳಿ ರಸ್ತೆಯಲ್ಲಿ ಅಣ್ಣಾ ಮಲ್ಲೇನಹಳ್ಳಿ – ಈರಲಗೆರೆ ಮಧ್ಯೆ ತಿರುವಿನಲ್ಲಿ KA-16 C-9678  ಅಶೋಕಾ ಲೈಲ್ಯಾಂಡ್ ದೋಸ್ತ್ ವಾಹನ ಅಪಘಾತವಾಗಿ ನನ್ನ ತಮ್ಮ ಮೃತಪಟ್ಟಿರುವುದು ಕಂಡು ಬಂತು. ನನ್ನ ತಮ್ಮ ಆರ್ ಮಂಜುನಾಥ್ ರವರು ದಿನಾಂಕ: 05/08/2020 ರಂದು ಬೆಳಿಗ್ಗೆ KA-16 C- 9678  ಅಶೋಕಾ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ ಕೆ.ಆರ್ ಪೇಟ್ ಗೆ ಬೆಲ್ಲದ ಲೋಡ್ ತರಲು ಹೋಗಿದ್ದು, ವಾಪಸ್ ತಿಪಟೂರು ಮಾರ್ಗವಾಗಿ ಹಿರಿಯೂರಿಗೆ ಬರಲು ಸದರಿ ವಾಹನದಲ್ಲಿ ಬರುತ್ತಿದ್ದಾಗ ರಾತ್ರಿ 11-00 ಗಂಟೆಯಲ್ಲಿ ಮೇಲ್ಕಂಡ ಸ್ಥಳದಲ್ಲಿ ನನ್ನ ತಮ್ಮ ಆರ್ ಮಂಜುನಾಥ್ ರವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬಂದಿದ್ದರಿಂದ ವಾಹನ ಪಲ್ಟಿಯಾಗಿ ಅಪಘಾತವಾಗಿದ್ದು,  ಈ ಅಪಘಾತದಿಂದ ವಾಹನವು ಜಖಂಗೊಂಡಿದ್ದು, ನನ್ನ ತಮ್ಮ ಆರ್ ಮಂಜುನಾಥ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ನನ್ನ ತಮ್ಮ ಆರ್ ಮಂಜುನಾಥ್ ರವರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ನನ್ನ ತಮ್ಮ ಆರ್ ಮಂಜುನಾಥ್ ರವರ ಶವವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಆದ್ದರಿಂದ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ 67/2020 ಕಲಂ: 279,304(ಎ) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

 Wednesday, 05 August 2020

ಅಪರಾಧ ಘಟನೆಗಳು 05-08-20

ಬಡವನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ:16/2020 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:04/08/2020 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಕೊರಟಗೆರೆ ತಾಲ್ಲೂಕಿನ ಸಿ.ಎನ್ ದುರ್ಗ ಹೋಬಳಿಯ ಬಿಸಾಡಿಹಳ್ಳಿ ಗ್ರಾಮದ ಗಂಗೀರಯ್ಯ ಬಿನ್ ಲೇಟ್ ದುರ್ಗಯ್ಯ ರವರು ಠಾಣೆಗೆ ಹಾಜರಾಗಿ, ನನ್ನ ಮಗಳಾದ 20 ವರ್ಷದ ಚಂದ್ರಕಲಾ ಎಂಬುವವರನ್ನು ದೊಡ್ಡೇರಿ ಗೊಲ್ಲರಹಟ್ಟಿ ಗ್ರಾಮದ ಸಣ್ಣದಾಸಪ್ಪನ ಮಗನಾದ ಚಂದ್ರು ರವರಿಗೆ ಈಗ್ಗೆ ಸುಮಾರು ಒಂದೂವರೆ ವರ್ಷದ ಹಿಂದೆ ಕೊಟ್ಟು ವಿವಾಹ ಮಾಡಿದ್ದು, ನನ್ನ ಮಗಳಿಗೆ ಋತುಸ್ರಾವದ ವೇಳೆಯಲ್ಲಿ ವಿಪರೀತ ಹೊಟ್ಟೆನೋವು ಬರುತ್ತಿದ್ದು, ನಾವುಗಳು ಹಲವು ಬಾರಿ ಆಸ್ಪತೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಆದರೆ ಗುಣಮುಖವಾಗಿರಲಿಲ್ಲ. ಆಂದರೆ ದಿ:03/08/2020 ರಂದು ಮಧ್ಯಾಹ್ನ ಸುಮಾರು 03-00 ಗಂಟೆಯಲ್ಲಿ ನನಗೆ ಅತಿಯಾಗಿ ಹೊಟ್ಟೆನೋವು ಬಂದಿದೆ ಎಂದು ತಿಳಿಸಿದಳು. ನಂತರ ಇದೇ ದಿನ 06-00 ಗಂಟೆಯಲ್ಲಿ ನನ್ನ ಅಳಿಯ ಚಂದ್ರು ಪೋನ್ ಮಾಡಿ ಸಂಜೆ ಸುಮಾರು 05-30 ಗಂಟೆಯಲ್ಲಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಮನೆ ಪಕ್ಕದ ದೊಡ್ಡದಾಸಪ್ಪ ರವರು ನನಗೆ ಪೋನ್ ಮಾಡಿ ನಿನ್ನ ಹೆಂಡತಿ ಯಾವುದೋ ಕ್ರಿಮಿನಾಶಕ ಕುಡಿದು ಅಸ್ವಸ್ಥಳಾಗಿದ್ದಳು ಎಂದು ತಿಳಿಸಿದಾಗ ನಾನು ಹೆಂಡತಿಯನ್ನು ಮಧುಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಂಜೆ ಸುಮಾರು 07-00 ಪರೀಕ್ಷಿಸಿದ ವೈದ್ಯರು ಮೃತಳಾಗಿರುತಾಳೆಂದು ಎಂದು ತಿಳಿಸಿದರು ಎಂದು ನನ್ನ ಅಳಿಯ ಚಂದ್ರು ರವರು ತಿಳಿಸಿದರು, ಗಂಡ-ಹೆಂಡತಿ ಅನ್ಯೋನ್ಯವಾಗಿ ಇದ್ದರು ತಾವುಗಳು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ಅಜರ್ಿಯನ್ನು ಪಡೆದು ಪ್ರಕರಣ ದಾಖಲಿಸಿದೆ. ದಿನಾಂಕ:04/08/2020ಬಡವನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ:16/2020 ಕಲಂ:174 ಸಿ.ಆರ್.ಪಿ.ಸಿ


Page 1 of 2
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 29 guests online
Content View Hits : 833650
Hackguard Security Enabled