lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30        
Tuesday, 01 September 2020
ಅಪರಾಧ ಘಟನೆಗಳು 01-09-20

ಶಿರಾ  ಪೊಲೀಸ್ ಠಾಣಾ ಮೊ ನಂ 305/2020 ಕಲಂ 279-337 ಐಪಿಸಿ

ದಿನಾಂಕ 31-08-2020 ರಂದು ಬೆಳಿಗ್ಗೆ 10-30 ಗಂಟೆಗೆ ಶಂಕರ್ ಗಂಗಾರಾಮ್ ಚೌಹಣ್ ಬಿನ್ ಗಂಗಾರಾಮ್, 54 ವರ್ಷ, ಲಂಭಾಣಿ ಜನಾಂಗ, ವಿವೇಕನಗರ, ಬಿಜಾಪುರ ಟೌನ್ ರವರು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಅಂಶವೇನೆಂದರೆ ನಾನು ನನ್ನ ಬಾಬ್ತು KA-28-P-8595 ನೇ ಮರಾಜೇ ಕಾರಿನಲ್ಲಿ ಬೆಂಗಳೂರಿಗೆ ನನ್ನ ತಂಗಿ ಮನೆಗೆ ಹೋಗಿದ್ದು ವಾಪಸ್ಸು ಬಿಜಾಪುರಕ್ಕೆ ಹೋಗಲು ದಿನಾಂಕ 31-08-2020 ರಂದು ಬೆಳಗಿನ ಜಾವ 05-30 ಗಂಟೆ ಸಮಯದಲ್ಲಿ ಬೆಂಗಳೂರು ಬಿಟ್ಟು ನನ್ನ ಬಾಬ್ತು ಕಾರಿನಲ್ಲಿ ನಾನು ಮತ್ತು ನನ್ನ ತಂಗಿ ಸರಿತಾ ರಾಮ್ ದೇವ್ ರಾಥೋಡ್ ಬರುತ್ತಿರುವಾಗ ನನ್ನ ಬಾಬ್ತು  KA- KA-28-P-8595 ನೇ ಮರಾಜೇ ಕಾರನ್ನು ಚಾಲಕ ರಾಜಕುಮಾರ್ ತೋಳುರ್ ಜಾಧವ್ ರವರು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ಶಿರಾ ಸಮೀಪ ಕರಿಯಮ್ಮ ದೇವಸ್ಥಾನದ ಬಳಿಯ ಎನ್.ಹೆಚ್-4 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಎಡಬದಿಯ ತಗ್ಗಿಗೆ ಬಿಳಿಸಿ ಅಪಘಾತವನ್ನುಂಟು ಮಾಡಿದ್ದು, ಇದರಿಂದ ನನ್ನ ಎದೆಗೆ ಎಡಗಾಲಿಗೆ, ಪೆಟ್ಟುಗಳು ಬಿದ್ದಿದ್ದು ನನ್ನ ತಂಗಿ ಸರತಿ ರವರಿಗೆ ಎರಡು ಭುಜಗಳಿಗೆ ಎರಡು ಮೊಣಕಾಲಿಗೆ ಪೆಟ್ಟುಗಳು ಬಿದ್ದಿದ್ದು ಚಾಲಕ ರಾಜಕುಮಾರನ ಎಡಮೋಣಕೈ, ಕುತ್ತಿಗೆಗೆ ಪೆಟ್ಟುಗಳು ಹಾಗಿದ್ದು, ಅಲ್ಲಿಗೆ ಬಂದ ಸಾರ್ವಜನಿಕರು ನಮ್ಮನ್ನು ಚಿಕಿತ್ಸೆಗೆ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ್ದಿದ್ದು, ನಾವು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈ ಅಪಘಾತವು ನಾವು ಬರುತ್ತಿದ್ದ KA-28-P-8595 ನೇ ಮರಾಜೇ ಕಾರಿನ ಚಾಲಕ ರಾಜಕುಮಾರ ತೋಳುರ್ ಜಾಧವ್ ರವರ ನಿರ್ಲಕ್ಷ್ಯತೆಯ ಚಾಲನೆಯಿಂದಲೇ ಹಾಗಿದ್ದು ಈತನ ಮೇಲೆ ಕಾನೂನು ರೀತಿ ಕ್ರಮಜರುಗಿಸಬೇಕೆಂದು ಈ ನನ್ನ ಹೇಳಿಕೆಯನ್ನು ನೀಡುತ್ತಿದ್ದೇನೆ ಎಂಬುದು ಪ್ರ.ವ.ವರದಿ ಆಂಶವಾಗಿರುತ್ತೆ.

ಶಿರಾ  ಪೊಲೀಸ್ ಠಾಣಾ ಮೊ ನಂ 306/2020 ಕಲಂ 279-337 ಐಪಿಸಿ 187 ಐ.ಎಂ.ವಿ ಆಕ್ಟ್

ದಿನಾಂಕ-31-08-2020 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಪಿರ್ಯಾದಿ  ಗಿರಿಜಮ್ಮ@ಗಿರಿಜಾಂಬ ಎಂ ಕೋಂ ನಾಗಭೂಷಣ್ ಸಿ, 53ವರ್ಷ, ಕುರುಬರು, ಅಂಗನವಾಡಿ ಕಾರ್ಯಕರ್ತೆ, ಸಪ್ತಗಿರಿ ಬಡಾವಣೆ, ಶಿರಾ ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ-29-08-2020 ರಂದು ನಾನು ನನ್ನ ಅತ್ತೆ ಲಕ್ಷ್ಮಮ್ಮ ರವರ ಮನೆಗೆ ಮಧುಗಿರಿಗೆ ಹೋಗಿದ್ದು, ನಂತರ ವಾಪಸ್ಸು ದಿನಾಂಕ-30-08-2020 ರಂದು ಬಸ್ಸಿನಲ್ಲಿ ಶಿರಾಕ್ಕೆ ಬಂದು  ಶಿರಾ ಬಸ್ ನಿಲ್ದಾಣದಿಂದ ಸಪ್ತಗಿರಿ ಬಡಾವಣೆಯ ನಮ್ಮ ಮನೆಗೆ ನಡೆದುಕೊಂಡು ಪುಡ್ ಉಗ್ರಾಣದ ಬಳಿ ಹಳೆ ಎನ್,ಹೆಚ್-4 ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ 7-30 ಗಂಟೆ ಸಮಯದಲ್ಲಿ ಐಬಿ ಸರ್ಕಲ್ ಕಡೆಯಿಂದ ಬರುತ್ತಿದ್ದ ಒಂದು ಬೈಕನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು, ಇದರಿಂದ ನನ್ನ ಎಡಗೈ, ಬಲಕೆನ್ನೆ, ಎಡಗಾಲು, ಬಲಗಾಲಿಗೆ ಹೆಚ್ಚಿನ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದು, ಅಪಘಾತವನ್ನುಂಟು ಮಾಡಿದ ಬೈಕಿನ ನಂಬರ್ ನೋಡಲಾಗಿ ಅದರ ನಂಬರ್ ಪ್ಲೇಟ್ ಮೇಲೆ KA-64-K-6667 ನೇ ನಂಬರ್ ಇತ್ತು. ಅಲ್ಲಿಗೆ ಬಂದ ಸಾರ್ವಜನಿಕರು ನನ್ನನ್ನು ಒಂದು ಆಟೋದಲ್ಲಿ ಚಿಕಿತ್ಸೆಗೆ ಶಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಗಾಬರಿಯಲ್ಲಿ ನಾನು ಅಪಘಾತವನ್ನುಂಟು ಮಾಡಿದ ಬೈಕಿನ ಚಾಲಕನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಲಿಲ್ಲ. ಹಾಗೂ ಅಪಘಾತವನ್ನುಂಟು ಮಾಡಿದ ಬೈಕಿನ ಚಾಲಕ ಇಲ್ಲಿಯವರೆಗೆ ನನಗೆ ಯಾವುದೇ ಚಿಕಿತ್ಸೆಯನ್ನು ನೋಡಿಕೊಳ್ಳದೆ ತಲೆ ಮರೆಸಿಕೊಂಡಿರುತ್ತಾನೆ. ನಾನು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವಾಗ್ಗೆ ಚಿಕಿತ್ಸೆ ನೀಡಿದ ವೈದ್ಯರು ನನ್ನ ಎಡಗೈ, ಬಲಗಾಲು ಮುರಿದಿರುವುದಾಗಿ ತಿಳಿಸಿ ಹೆಚ್ಚಿನ ಚಿಕಿತ್ಸೆ ಸಲಹೆ ಮಾಡಿದ್ದರಿಂದ ನಾನು ತುಮಕೂರಿಗೆ ಚಿಕಿತ್ಸೆಗೆ ಹೋಗಲು ಹೊರಟು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನನಗೆ ಅಪಘಾತವನ್ನುಂಟು ಮಾಡಿ ಹೊರಟು ಹೋದ KA-64-K-6667 ನೇ ನಂಬರ್ ಬೈಕಿನ ಚಾಲಕನನ್ನು ಪತ್ತೆ ಮಾಡಿ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಸಿ.ಅರ್ . ನಂ:118/2020 ಕಲಂ:379 IPC

ದಿನಾಂಕ:31/08/2020 ರಂದು ಮಧ್ಯಾಹ್ನ 02 ಗಂಟೆಗೆ ಫಿರ್ಯಾದಿ ಸಮೀಉಲ್ಲಾ ಖಾನ್ ಬಿನ್ ಅಹಮದ್ ಉಲ್ಲಾ ಖಾನ್,30 ವರ್ಷ, ಕಾವಾಡಿಗರ ಬೀದಿ, ಮಧುಗಿರಿ ಟೌನ್|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ ನಾನು ಸರ್ಕಾರಿ ಪ್ರೌಢಶಾಲೆ ಬಡವನಹಳ್ಳಿಯಲ್ಲಿ ಡಿ ದರ್ಜೆ ನೌಕರನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿ ಕೊಂಡಿರುತ್ತೇನೆ ನಾನು ದಿನಾಂಕ: 29/08/2020 ರಂದು ಸಂಜೆ 05-30 ಗಂಟೆಯಲ್ಲಿ ನನ್ನ ಬಾಬ್ತು KA-64, E-2667 ನೇ Hero Passion PRO ಬೈಕನಲ್ಲಿ ಕರ್ತವ್ಯ ಮುಗಿಸಿ ಕೊಂಡು ಮಧುಗಿರಿ ಟೌನ್, 01 ನೇ ಬ್ಲಾಕ್ ನಲ್ಲಿರುವ ನಾನು ವಾಸಗಿರುವ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿಕೊಂಡು ಒಳಕ್ಕೆ ಹೋದೆನು ಆ ಸಮಯದಲ್ಲಿ ಜೋರಾಗಿ ಮಳೆ ಬರುತ್ತಿತ್ತು ನಾನು ಮಳೆ ನಿಂತ ಮೇಲೆ ನಾನು ಸಂಜೆ 07-00 ಗಂಟೆಗೆ ನಾನು ನನ್ನ ಬಾಬ್ತು ಬೈಕನ್ನು ನೋಡಲಾಗಿ ನನ್ನ ಬಾಬ್ತು ಬೈಕ್ KA-64, E-2667 ನೇ Hero Passion PRO ಕಾಣಲಿಲ್ಲ ಇದರ 1] CHASSIS NO: MBLHA10A6EHA59514,  2] ENGINE NO : HA10ENEHA81250 ಅನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ, ಇದರ ಬೆಲೆ 25000/-ರೂಗಳಾಗ ಬಹುದು, ನಾನು ನನ್ನ ಸಂಬಂಧಿಕರು, ಸ್ನೇಹಿತರುಗಳಿಗೆ  ನನ್ನ ಬೈಕ್ ನಂಬರ್ ನ್ನು ವಾಟ್ಸ್ ಆಪ್ ನಲ್ಲಿ ಹಾಕಿ ಸಿಕ್ಕರೆ ನನಗೆ ತಕ್ಷಣ ತಿಳಿಸಿ ಎಂದು ಹೇಳಿ ನಾನು ಎಲ್ಲಾ ಸಹ ಹುಡುಕಾಡಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ಆದ್ದರಿಂದ ನನ್ನ ಬೈಕ್ ಕಳ್ಳತನಮಾಡಿರುವ ಆಸಾಮಿಯ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಮಧುಗಿರಿ ಪೊಲೀಸ್ ಠಾಣಾ ಮೊ.ನಂ 118/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-124/2020 ಕಲಂ 323,324,504,506 ರೆ/ವಿ 34 ಐಪಿಸಿ

ದಿನಾಂಕ-31/08/2020 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾದಿ ಸಿದ್ದಪ್ಪ ಬಿನ್ ಬೋರಯ್ಯ, 45 ವರ್ಷ, ಒಕ್ಕಲಿಗ ಜನಾಂಗ, ಹೊನ್ನೇನಹಳ್ಳಿ ಗ್ರಾಮದಲ್ಲಿ ವಾಟರ್‌ ಮೆನ್ ಕೆಲಸ, ಹೊನ್ನೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕ್ & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಸಂಸಾರ ಜೀವನದಲ್ಲಿ ಇಬ್ಬರು ಗಂಡು ಮಕ್ಕಳಿದ್ದು, ನಾನು ನನ್ನ ಹೆಂಡತಿ ವರಲಕ್ಷ್ಮೀ ಹಾಗೂ ನನ್ನ ಇಬ್ಬರು ಮಕ್ಕಳು ನಮ್ಮ ಮನೆಯಲ್ಲಿ ವಾಸವಾಗಿರುತ್ತೇವೆ. ದಿನಾಂಕ 31-08-2020 ರಂದು ಬೆಳಗ್ಗೆ ಹಾಲನ್ನು ಕರೆದು ಬೆಳಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಬಳಿ ಇರುವಾಗ್ಗೆ, ನನ್ನ 7 ವರ್ಷದ ಮಗನಾದ ಋತು ಎಂಬಾತನು ಶಾರದಮ್ಮ ರವರ ಮನೆಯ ಹಿಂಭಾಗದಲ್ಲಿರುವ ತಿಪ್ಪೆಯಲ್ಲಿ ಬೆಳಗಿನ ನೈಸರ್ಗಿಕ ಕ್ರಿಯೆಯನ್ನು ಮಾಡಿದ್ದರಿಂದ ಶಾರದಮ್ಮ ಹಾಗೂ ಆಕೆಯ ಗಂಡನಾದ ಜಯರಾಮಣ್ಣ ರವರು ನಮ್ಮ ಮನೆಯ ಬಳಿಗೆ ಬಂದು ನನಗೆ ಲೋಫರ್‌ ನನ್ನ ಮಗನೆ, ಸೂಳೆ ಮಗನೆ ನಿನ್ನ ಮಗನಿಗೆ ಸರಿಯಾಗಿ ಬುದ್ದಿ ಕಲಿಸು, ನಿನ್ನ ಮಗ ನಮ್ಮ ಮನೆಯ ಹಿಂಭಾಗಕ್ಕೆ ಬಂದು ಗಲೀಜು ಮಾಡಿ ಹೋಗಿರುತ್ತಾನೆ ಎಂದು ಬೈದಿದ್ದು, ಅದಕ್ಕೆ ನಾನು ಆತನಿಗೆ ತಿಳಿಯದೆ ಈ ರೀತಿ ಮಾಡಿರುತ್ತಾನೆ ನಾನು ಸ್ವಚ್ಛಗೊಳಿಸುತ್ತೇನೆ ಎಂದು ಹೇಳಿದರೂ ಸಹ ಜಯರಾಮಣ್ಣನು ಅಲ್ಲಿಯೇ ಇದ್ದ ಒಂದು ದೊಣ್ಣೆಯಿಂದ ನನ್ನ ಬಲಕಣ್ಣಿನ ಬಳಿ ಹಾಗೂ ಬಲಭುಜಕ್ಕೆ ಹೊಡೆದನು. ಹಾಗೂ ಪಕ್ಕದಲ್ಲಿಯೇ ಇರುವ ಅವರ ಮನೆಯಿಂದ ಒಂದು ಕುಡುಗೋಲನ್ನು ತಂದು ನನ್ನ ಬಲಗಾಲಿನ ಮಂಡಿಯ ಕೆಳಭಾಗ ಮತ್ತು ಬಲಗಾಲಿನ ಪಾದದ ಮೇಲ್ಭಾಗ ಹೊಡೆದನು. ಶಾರದಮ್ಮಳು ನನ್ನ ಮೈಕೈಗೆ ಕೈಗಳಿಂದ ಹೊಡೆದು ನೋವುಂಟು ಮಾಡಿದಳು. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಲಕ್ಷ್ಮಣ ರವರು ಬಂದು ಗಲಾಟೆಯನ್ನು ಬಿಡಿಸಿ ಇಬ್ಬರಿಗೂ ಸಮಾಧಾನ ಪಡಿಸಿದನು. ಜಯರಾಮಣ್ಣ ಹಾಗೂ ಶಾರದಮ್ಮ ಹೋಗುವಾಗ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದು ಹೇಳಿ ಪ್ರಾಣ ಬೆದರಿಕೆ ಹಾಕಿದರು. ನಂತರ ಗಾಯಗೊಂಡಿದ್ದ ನನ್ನನ್ನು ನನ್ನ ಭಾಮೈದನಾದ ವೆಂಕಟೇಶ್‌ ರವರು ಬೈಕಿನಲ್ಲಿ ಹೆಬ್ಬೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ನನಗೆ ಬೈದು ಗಲಾಟೆ ಮಾಡಿ ಹೊಡೆದು ಪ್ರಾಣಬೆದರಿಕೆ ಹಾಕಿರುವ ಜಯರಾಮಣ್ಣ ಹಾಗೂ ಶಾರದಮ್ಮ ರವರ ಮೇಲೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-125/2020 ಕಲಂ 323,324,504,506 ರೆ/ವಿ 34 ಐಪಿಸಿ

ದಿನಾಂಕ-31/08/2020 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ರತ್ನಮ್ಮ ಕೋಂ ರಾಜಣ್ಣ, 55 ವರ್ಷ, ಒಕ್ಕಲಿಗ ಜನಾಂಗ, ಗೃಹಿಣಿ, ಕಣಕುಪ್ಪೆ, ಹೆಬ್ಬೂರು  ಹೋಬಳಿ, ತುಮಕೂರು ತಾಲ್ಲೂಕ್ & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಮಾವನಾದ ಲೇಟ್‌‌ ಗಂಗಪ್ಪ ರವರ ಬಾಬ್ತು ಕಣಕುಪ್ಪೆ ಗ್ರಾಮದ ಸರ್ವೇ ನಂಬರ್‌ 2/2 ರಲ್ಲಿ ನನ್ನ ಮಾವನ ಮನೆಯಿದ್ದು, ನನ್ನ ಮಾವನ ಮರಣಾನಂತರ ನಾವು ಸದರಿ ಮನೆಯಲ್ಲಿ ವಾಸವಾಗಿರುತ್ತೇನೆ. ಸದರಿ ಮನೆಯು ಹಳೆಯದ್ದಾಗಿದ್ದರಿಂದ ಹಸುಗಳನ್ನು ಕಟ್ಟಿಕೊಂಡಿರುತ್ತೇವೆ. ಹಾಗೂ ಆ ಮನೆಯ ಪಕ್ಕದಲ್ಲಿಯೇ ಸರ್ಕಾರದಿಂದ ನನ್ನ ಹೆಸರಿಗೆ ಮನೆ ಗ್ರಾಂಟ್‌ ಆಗಿದ್ದು, ಮನೆಯನ್ನು ಕಟ್ಟಿಕೊಂಡು ಸುಮಾರು 10 ವರ್ಷಗಳಿಂದ ವಾಸವಾಗಿರುತ್ತೇವೆ. ನಾವು ವಾಸವಿರುವ ಎರಡೂ ಮನೆಯ ವಿಚಾರವಾಗಿ ನನ್ನ ಗಂಡನ ತಾತನ ತಮ್ಮನ ಮೊಮ್ಮಗನಾದ ಕಣಕುಪ್ಪೆ ಗ್ರಾಮದ ಗಂಗಾಧರಯ್ಯ ರವರಿಗೂ ನಮಗೂ ವಿವಾದವಿದ್ದು, ನನ್ನ ಗಂಡ ಒಂದು ತಿಂಗಳ ಹಿಂದೆ ತುಮಕೂರಿನ ಸಿವಿಲ್ ಕೋರ್ಟ್ ನಲ್ಲಿ ಕೇಸನ್ನು ಹಾಕಿಕೊಂಡಿರುತ್ತಾರೆ. ನನ್ನ ಗಂಡ ಕೇಸನ್ನು ಹಾಕಿದ್ದರಿಂದ ಕೋಪಗೊಂಡ ಗಂಗಾಧರಯ್ಯ ಹಾಗೂ ಆತನ ಹೆಂಡತಿ ಲಕ್ಷ್ಮಮ್ಮ ಮತ್ತು ಗಂಗಾಧರಯ್ಯನ ಮಗನಾದ ನಂದೀಶ ರವರುಗಳು ದಿನಾಂಕ 30-08-2020 ರಂದು ಬೆಳಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಬಳಿಗೆ ಬಂದು  ನಾನು ಒಬ್ಬಳೇ ಇದ್ದ ಸಮಯದಲ್ಲಿ ನನಗೆ ಸೂಳೆ ಮುಂಡೆ, ಲೋಫರ್‌ ಮುಂಡೆ ನೀವು ಕೇಸು ಹಾಕಿಕೊಂಡು ನಮ್ಮನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ನಂದಿಶನು ಎಲೆಗುದಲಿಯಿಂದ ನನ್ನ ಎಡಕೈಗೆ ಹೊಡೆದನು. ಗಂಗಾಧರಯ್ಯನು ಜಾಲಿಮರದ ದೊಣ್ಣೆಯಿಂದ ನನ್ನ ಬಲಗೈಗೆ ಹಾಗೂ ಬಲಭುಜಕ್ಕೆ ಹೊಡೆದನು. ಲಕ್ಷ್ಮಮ್ಮಳು ತಲೆಕೂದನ್ನು ಹಿಡಿದು ಎಳೆದಾಡಿದಳು. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ನಾರಸಯ್ಯನ ಮಗನಾದ ಪಟ್ಟಯ್ಯ ರವರು ಬಂದು ಗಲಾಟೆಯನ್ನು ಬಿಡಿಸಿ ಅವರನ್ನು ಕಳುಹಿಸಿದರು. ಎಲ್ಲರೂ ಹೋಗುವಾಗ ಮುಂಡೆ ನಿನ್ನ ಪ್ರಾಣ ತೆಗಿತಿವಿ ಎಂತಾ ಹೇಳಿದರು. ಆಗ ಹಸಕಟ್ಟಲು ಜಮೀನಿನ ಬಳಿಗೆ ಹೋಗಿದ್ದ ನನ್ನ ಗಂಡ ಮನೆಯ ಬಳಿ ಬಂದಾಗ ವಿಚಾರ ತಿಳಿಸಿದ್ದು, ನನ್ನನ್ನು ಉಪಚರಿಸಿ ಗಲಾಟೆಯ ವಿಚಾರವನ್ನು ನನ್ನ ಮಗನಾದ ಹರೀಶನಿಗೆ ತಿಳಿಸಿದ್ದು, ನನ್ನ ಮಗ ಬಂದು ನನ್ನನ್ನು ಯಾವುದೋ ಒಂದು ವಾಹನದಲ್ಲಿ ಕುಣಿಗಲ್‌‌ ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಬೆಳ್ಳೂರು ಕ್ರಾಸ್‌‌ ನ ಬಳಿ ಇರುವ ಬಿ.ಜಿ.ಎಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ನನಗೆ ಬೈದು ಹೊಡೆದು ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ   ಗಂಗಾಧರಯ್ಯ, ಲಕ್ಷ್ಮಮ್ಮ, ನಂದೀಶ ರವರುಗಳ ಮೇಲೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಚಿಕಿತ್ಸೆ ಪಡೆದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-125/2020 ಕಲಂ 323,324,504,506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣೆ ಮೊ ನಂ-80/2020 ಕಲಂ:279,337 ಐಪಿಸಿ

ದಿನಾಂಕ:31/08/2020 ರಂದು ಮಧ್ಯಾಹ್ನ 02-30 ಗಂಟೆಗೆ ಪಿರ್ಯಾದಿ ಎಸ್.ಪಿ.ವೀರಭದ್ರಪ್ಪ ಬಿನ್ ಎಸ್.ಪಿ.ಮುದ್ದಪ್ಪ,  42 ವರ್ಷ, ವಕ್ಕಲಿಗರು, ಗಾರ್ಮೆಂಟ್ಸ್‌‌‌‌ನಲ್ಲಿ ಕೆಲಸ. ಶಂಕರಗಲ್ಲು ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ದಿನಾಂಕ:25/08/2020 ರಂದು ಬೆಳಿಗ್ಗೆ ಚೀಲನಹಳ್ಳಿಗೆ ಬಂದಿದ್ದು. ಬೆಳಿಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಮಗ ಸುಮುಖ್ ಗೌಡ ಇಬ್ಬರೂ ನಮ್ಮ ಮಾವ ಮುರಳಿಧರ್ ರವರ ಮನೆಯ ಮುಂದೆ ಪುಟ್ಪಾತ್ ರಸ್ತೆಯಲ್ಲಿ ನಿಂತಿದ್ದಾಗ ಅದೇ ಸಮಯಕ್ಕೆ ಐ.ಡಿ.ಹಳ್ಳಿ ರಸ್ತೆಯಲ್ಲಿ ಹೊಸಕೆರೆ ಕಡೆಯಿಂದ ಬಂದ ಕೆಎ-64-ಎಸ್-5363 ನೇ ಬೈಕಿನ ಸವಾರ ಬೈಕನ್ನು ಅತೀ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ನನ್ನ ಜೊತೆಯಲ್ಲಿ ನಿಂತಿದ್ದ ನನ್ನ ಮಗನಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ್ದರಿಂದ ನನ್ನ ಮಗನ ಎಡಗೈ ರೆಟ್ಟೆಗೆ ಪೆಟ್ಟು ಬಿದ್ದು ಬಲಗಾಲಿನ ಪಾದದ ಹತ್ತಿರ ತರಚಿದ ಗಾಯವಾಯಿತು. ಕೂಡಲೇ ನನ್ನ ಮಗನನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ನನ್ನ ಮಗನನ್ನು ಮನೆಯಲ್ಲಿ ಬಿಟ್ಟು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡ ಬೈಕಿನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 139 guests online
Content View Hits : 899227
Hackguard Security Enabled