lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30        
Wednesday, 02 September 2020
ಅಪರಾಧ ಘಟನೆಗಳು 02-09-20

 

ಜಯನಗರ ಪೊಲೀಸ್ ಠಾಣಾ ಮೊ.ನಂ. 62/2020 ಕಲಂ 323, 324, 504, 506 ಐಪಿಸಿ

ದಿನಾಂಕ: 01/09/2020 ರಂದು ರಾತ್ರಿ 7-30 ಗಂಟೆಗೆ ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಹೊನ್ನೇನಹಳ್ಳಿ ವಾಸಿ ರವಿಕುಮಾರ @ ಹೊನ್ನೆನಹಳ್ಳಿ ರವಿ ಬಿನ್ ಲೇಟ್ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ,  ದಿನಾಂಕ: 30-08-2020 ರಂದು ರಾತ್ರಿ ಸುಮಾರು 8-15 ಗಂಟೆಯಲ್ಲಿ ನಾನು, ನನ್ನ ಸ್ನೇಹಿತರಾದ ಶಿವಪ್ರಸಾದ @ ದಪ್ಪಶಿವಣ್ಣ, ಹಾಗೂ ಶಿವಣ್ಣನ ಸ್ನೇಹಿತರಾದ ವೇದಮೂರ್ತಿ, ಮಂಜುನಾಥ ರವರುಗಳು ತುಮಕೂರು ಟೌನ್ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಗುರುವೈನ್ಸ್‌‌ ಗೆ ಎಣ್ಣೆ ಹೊಡೆಯಲು ಹೋಗಿದ್ದೆವು.  ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಗುರುವೈನ್ಸ್‌‌‌‌ನಲ್ಲಿ 1 ನೇ ಮಹಡಿಯಲ್ಲಿ ನಾವು ನಾಲ್ಕೂ ಜನರು ಎಣ್ಣೆ ಹೊಡೆಯುತ್ತಿದ್ದಾಗ ಅಲ್ಲಿಗೆ ಶಿವಣ್ಣನ ಸ್ನೇಹಿತರಾದ ಹೇಮಂತ ಹಾಗೂ ಹರೀಶ ರವರುಗಳು ಬಂದರು.  ನಾವು 6 ಜನರೂ ಸೇರಿ ಗುರು ವೈನ್ಸ್‌‌‌‌ ಮೇಲ್ಬಾಗದಲ್ಲಿ ಮದ್ಯಪಾನ ಮಾಡಿದೆವು. ರಾತ್ರಿ ಸುಮಾರು 9-15 ಗಂಟೆಗೆ ಶಿವಪ್ರಸಾದ  @ ದಪ್ಪಶಿವಣ್ಣನ ಸ್ನೇಹಿತ ಹರೀಶ್‌‌ ರವರೇ ಬಿಲ್‌‌ ಕೊಟ್ಟರು.  ನಂತರ ನಾವೆಲ್ಲಾ  ಮಹಡಿ ಮೇಲಿನಿಂದ ಕೆಳಕ್ಕೆ ಇಳಿದು ಗುರುವೈನ್ಸ್‌‌‌ ಪಕ್ಕದಲ್ಲಿರುವ ಕಬಾಬ್‌‌‌ ಅಂಗಡಿಯ ಮುಂದೆ ನಿಂತುಕೊಂಡಿದ್ದು, ಶಿವಣ್ಣ ನನಗೆ ವೇದಮೂರ್ತಿಯನ್ನು ಮನೆಗೆ ಬಿಟ್ಟು ಪೆಟ್ರೋಲ್‌‌‌ ಬಂಕ್‌‌‌ನಲ್ಲಿ ಬೈಕಿಗೆ ಪೆಟ್ರೋಲ್‌‌ ಹಾಕಿಸಿಕೊಂಡು ಬರುವಂತೆ ತಿಳಿಸಿದ್ದು, ಅದರಂತೆ ನಾನು ವೇದಮೂರ್ತಿಯನ್ನು ದೇವನೂರು ಬಳಿಗೆ ಬಿಟ್ಟು ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್‌‌‌ಬಂಕಿನಲ್ಲಿ ಪೆಟ್ರೋಲ್‌‌ ಹಾಕಿಸಿಕೊಂಡು ಗುರುವೈನ್ಸ್‌‌‌‌ ಬಳಿಗೆ ರಾತ್ರಿ ಸುಮಾರು 9-40 ಗಂಟೆಗೆ ಬಂದೆನು.  ಅಷ್ಟೊತ್ತಿಗೆ ಮಂಜುನಾಥ ಅಲ್ಲಿಂದ ಹೊರಟು ಹೋಗಿದ್ದನು.   ಕಬಾಬ್‌‌ ಅಂಗಡಿಯ ಮುಂದೆ ಶಿವಪ್ರಸಾದ @ ದಪ್ಪ ಶಿವಣ್ಣ, ಅವರ ಸ್ನೇಹಿತರಾದ ಹೇಮಂತ, ಹರೀಶ ರವರುಗಳು ಮಾತನಾಡುತ್ತಾ ನಿಂತಿದ್ದು, ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಕೆಂಪು ಬಣ್ಣದ ಮೋಟಾರ್‌‌ ಬೈಕಿನಲ್ಲಿ ಗುರುವೈನ್ಸ್‌‌ ಬಳಿಗೆ ಬಂದವರು, ಶಿವಪ್ರಸಾದ @ ದಪ್ಪ ಶಿವಣ್ಣನನ್ನು ಕುರಿತು ಏಕೋ ಶಿವ ಬಾರೋ ಇಲ್ಲಿ, ಯಾರೋ ನಮ್ ಜೊತೆ ಸೇರಲ್ಲಾ ಸೂಳೇ ಮಗನೇ ನಿನ್ನದು ಜಾಸ್ತಿಯಾಗಿದೆ ಕಣೋ ಎಂತಾ ಶಿವಣ್ಣನಿಗೆ ಏಕವಚನದಲ್ಲಿ ಮಾತನಾಡಿ ನಂತರ ಶಿವಪ್ರಸಾದ @ ದಪ್ಪ ಶಿವಣ್ಣನಿಗೆ ಬೋಳಿ ಮಗನೇ ಸೂಳೇ ಮಗನೇ ಎಂತಾ ಬಾಯಿಗೆ ಬಂದಂತೆ ಭೈದನು. ಆಗ ಶಿವಪ್ರಸಾದ @ ದಪ್ಪ ಶಿವಣ್ಣನ ಜೊತೆಯಲ್ಲಿ ಮಾತನಾಡುತ್ತಾ ನಿಂತಿದ್ದ ಹೇಮಂತ ಹಾಗೂ ಹರೀಶ ರವರುಗಳು ಹೆದರಿಕೊಂಡು ಅಲ್ಲಿಂದ ಓಡಿ ಹೋದರು.   ಆಗ ಶಿವಪ್ರಸಾದ @ ದಪ್ಪ ಶಿವಣ್ಣನಿಗೆ ಆ ವ್ಯಕ್ತಿ ಕೈನಿಂದ ಬೆನ್ನಿಗೆ ಗುದ್ದಿದನು ನಂತರ ಆತನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದ ಚಾಕುವನ್ನು ತೆಗೆದುಕೊಂಡು ಶಿವಣ್ಣನ ಎಡಕೆನ್ನೆಗೆ ಎಳೆದನು.  ಆಗ ಶಿವಣ್ಣ ಕೈ ಅಡ್ಡ ಹಿಡಿದಿದ್ದರಿಂದ ಎಡಕೈನ ಕಿರುಬೆರಳು ಹಾಗೂ ಉಂಗುರದ ಬೆರಳಿಗೆ ರಕ್ತಗಾಯವಾಯಿತು.  ನಂತರ ಅದೇ ಚಾಕುವಿನಿಂದ ಮತ್ತೆ ಶಿವಣ್ಣನ ಎಡಕಿವಿಯ ಕೆಳಗೆ ಕುತ್ತಿಗೆಗೆ ಚಾಕುವಿನಿಂದ ಜೋರಾಗಿ ಎಳೆದು ರಕ್ತಗಾಯ ಪಡಿಸಿದನು.  ಅಷ್ಟರಲ್ಲಿ ನಾನು ಶಿವಣ್ಣನನ್ನು ಬಿಡಿಸಿಕೊಳ್ಳಲು ಹೋದಾಗ ಆ ವ್ಯಕ್ತಿ ನನಗೆ ಯಾಕೋ ನಾನ್ಯಾರು ಎಂತಾ ಗೊತ್ತಿಲ್ಲವೇನೋ, ನಾನು ಸುಜೆಯ್‌‌‌ ಕೇಸಿನಲ್ಲಿ A-6  ಭಯಭಕ್ತಿ ಇರಲಿ ನಿಮಗೆಲ್ಲಾ, ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗುರು ಶಿವಣ್ಣನನ್ನು ಹಾಗೂ ನಿಮ್ಮನ್ನೆಲ್ಲಾ ಒಂದು ಗತಿ ಕಾಣಿಸುತ್ತೇನೆಂತಾ  ಹೇಳುತ್ತಾ  ಶೆಟ್ಟಿಹಳ್ಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಜನರು ಅವರ  ವಾಹನಗಳನ್ನು ನಿಲ್ಲಿಸಿ ನೋಡಲು ಅಲ್ಲಿಗೆ ಬರುತ್ತಿರುವುದನ್ನು ನೋಡಿ, ಆತನು ತಂದಿದ್ದ ಮೋಟಾರ್‌‌ ಬೈಕ್‌‌ ಅನ್ನು ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿರುತ್ತಾನೆ. ನಂತರ ಶಿವಪ್ರಸಾದ @ ದಪ್ಪ ಶಿವಣ್ಣನಿಗೆ ರಕ್ತಗಾಯಗಳಾಗಿದ್ದರಿಂದ ನಾನು, ಶಿವಣ್ಣನು ಮೋಟಾರ್‌‌‌‌ ಭೈಕಿನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ನಂತರ ನಡೆದ ಘಟನೆಯ ಬಗ್ಗೆ ವೇದಮೂರ್ತಿಗೆ ಪೋನ್ ಮಾಡಿ ವಿಚಾರ ತಿಳಿಸಿ, ಶಿವಣ್ಣನ ಹೆಂಡತಿಗೆ ವಿಚಾರ ತಿಳಿಸುವಂತೆ ಹೇಳಿದೆ.  ಸ್ವಲ್ಪ ಹೊತ್ತಿನಲ್ಲೇ ವೇದಮೂರ್ತಿ ಶಿವಣ್ಣನ ಹೆಂಡತಿ ವಸಂತನಾಗರತ್ನ ರವರನ್ನು ಹಾಗೂ ಅವರ ತಮ್ಮ ರಾಘವೇಂದ್ರ ರವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿಗೆ ಕರೆದುಕೊಂಡು ಬಂದನು.   ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಶಿವಣ್ಣನಿಗೆ ಜಾಸ್ತಿ ಪೆಟ್ಟುಗಳಾಗಿರುವುದಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ನಂತರ ನಾನು, ಶಿವಣ್ಣನ ಹೆಂಡತಿ ವಸಂತನಾಗರತ್ನ, ಶಿವಣ್ಣನ ತಮ್ಮ ರಾಘವೇಂದ್ರ ರವರುಗಳು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಂಬುಲೆನ್ಸ್‌‌ ವಾಹನದಲ್ಲಿ ಬೆಂಗಳೂರಿನ ನಂದಿನಿ ಲೇ ಔಟ್‌‌‌ನಲ್ಲಿರುವ ಕಣ್ವ ಶ್ರೀ ಸಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಅಲ್ಲಿ  ಶಿವಪ್ರಸಾದ @ ದಪ್ಪ ಶಿವಣ್ಣನಿಗೆ ಐ.ಸಿ.ಯು. ಘಟಕದಲ್ಲಿ ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಕೊಡುತ್ತಿರುತ್ತಾರೆ.  ನಮ್ಮ ಊರಿನಲ್ಲಿ ನಮ್ಮ ಮಾವ ಶಾಂತರಾಜು ರವರು ಮೃತಪಟ್ಟಿರುವುದರಿಂದ ಅವರ ಶವಸಂಸ್ಕಾರದಲ್ಲಿ ಪಾಲ್ಗೊಂಡು ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ನಡೆದ ಘಟನೆಯ ಬಗ್ಗೆ ದೂರು ನೀಡುತ್ತಿದ್ದೇನೆ.  ಆದ್ದರಿಂದ ತಾವು ಮೇಲ್ಕಂಡ ವ್ಯಕ್ತಿ ಯಾರೆಂದು ಪತ್ತೆ ಮಾಡಿ ಆತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಶಿರಾ  ಪೊಲೀಸ್ ಠಾಣಾ ಮೊ ನಂ 308/2020 ಕಲಂ  20(ಬಿ), 27  ಎನ್.ಡಿ.ಪಿ.ಎಸ್ ಆಕ್ಟ್

ದಿನಾಂಕ:01.09.2020ರ ಂದು ಮದ್ಯಾಹ್ನ 01.00 ಗಂಟೆಗೆ ಶಿರಾ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಶ್ರೀಮತಿ ಭಾರತಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಸಾರಾಂಶವೇನೆಂದರೆ, ಪಿಎಸ್‌ಐ ರವರು  ದಿನಾಂಕ-01-09-2020 ರಂದು ಶಿರಾ ಠಾಣೆಯ ಕಳವು ಪ್ರಕರಣಗಳಲ್ಲಿ ಶಿರಾ ನಗರದ ಬೆಗಾಂ ಮೊಹಲ್ಲಾ, ಪಾರ್ಕ ಮೊಹಲ್ಲಾ, ಮೆಹಬೂಬ್ ನಗರಗಳ ಕಡೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್ ಸಿ- 80 ದುರ್ಗಯ್ಯ ,ಪಿ,ಸಿ 995 ಗೋಪಿನಾಥ ಪಿ,ಸಿ 400 ನಾಗರಾಜು, ಪಿ,ಸಿ 682 ಶಿವಕುಮಾರ್ ರವರ ಜೊತೆಯಲ್ಲಿ  ಎಂ.ಓ.ಬಿ ಆಸಾಮಿಗಳನ್ನು ಚೆಕ್ ಮಾಡುತ್ತಿರುವಾಗ ಮದ್ಯಾನ ಸುಮಾರು 12.15 ಗಂಟೆಯಲ್ಲಿ ಸಿರಾ ಟೌನ್ ಜಾಮೀಯಾ ನಗರದ ದೀಪಶ್ರೀ ಸ್ಕೂಲ್ ಸಮೀಪ ನಾಲ್ಕು ಜನ ಆಸಾಮಿಗಳು ಗಾಂಜಾ ಸೇದುತ್ತಿದ್ದಾರೆಂತ ಬಂದ ಖಚಿತ ವರ್ತಮಾನದ ಮೇರೆಗೆ ಪಿ,ಎಸ್‌,ಐರವರು ಮೇಲ್ಕಂಡ ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 12.30 ಗಂಟೆಗೆ ಜಾಮೀಯಾ ನಗರದ ದೀಪಶ್ರೀ ಸ್ಕೂಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ 4 ಜನ ಆಸಾಮಿಗಳು ಉಕ್ಕಾಗಳ ಮೂಲಕ ಗಾಂಜಾ ಸೇದುತ್ತಿದ್ದರು, ಪಿಎಸ್.ಐ ರವರು  ಸದರಿ ಆಸಾಮಿಗಳ ಹೆಸರು ವಿಳಾಸವನ್ನು ಭಾತ್ಮಿದಾರರಿಂದ ತಿಳಿಯಲಾಗಿ 1) ಶಮೀರ್ ಅಹಮದ್ ಬಿನ್ ಅಹಮದ್ ಹುಸೇನ್, 29 ವರ್ಷ, ಮುಸ್ಲಿಂ ಜನಾಂಗ, ಏ.ಸಿ ಫಿಟ್ಟಿಂಗ್ ವರ್ಕ್, ಜಾಮಿಯಾ ನಗರ, ಶಿರಾ ಟೌನ್, 2) ನಿಜಾಂ ಬಿನ್ ರೆಹಮತ್ ಉಲ್ಲಾ, 22 ವರ್ಷ, ಮುಸ್ಲಿಂ ಜನಾಂಗ,ಆಟೋ ಮೆಕಾನಿಕ್ ಕೆಲಸ, ಬೇಗಂ ಮೊಹಲ್ಲಾ, ಶಿರಾ ಟೌನ್, 3)  ಆಲಂ ಖಾನ್ ಬಿನ್ ಅಫ್ರೋಜ್ ಖಾನ್, 19 ವರ್ಷ, ಮುಸ್ಲಿಂ ಜನಾಂಗ, ಬಾರ್ ಬೆಂಡಿಂಗ್ ಕೆಲಸ, ಬೇಗಂ ಮೊಹಲ್ಲ, ಶಿರಾ ಟೌನ್ 4) ಸುದೀಪ್ ಬಿನ್ ಕೃಷ್ಣಪ್ಪ, 29ವರ್ಷ, ವಕ್ಕಲಿಗರು, ಹೋಟೆಲ್ ಕೆಲಸ, ಕೃಷ್ಣಾ ನಗರ, ಶಿರಾ ಟೌನ್  ಎಂದು ತಿಳಿದು ಬಂದಿರುತ್ತೆ, ಸದರಿ ಆಸಾಮಿಗಳು ಶಾಲಾ ಆವರಣದಲ್ಲಿ ಗಾಂಜಾ ಸೇದುತ್ತಿರುವುದರಿಂದ ಆಸಾಮಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಶಿರಾ ಠಾಣಾ ಮೊನಂ 308/2020 ಕಲಂ 20(ಬಿ), 27 ಎನ್, ಡಿ, ಪಿ,ಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ,


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 54 guests online
Content View Hits : 899249
Hackguard Security Enabled