lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30        
Friday, 04 September 2020
ಅಪರಾಧ ಘಟನೆಗಳು 04-09-20

ಹೆಬ್ಬೂರು  ಪೊಲೀಸ್ ಠಾಣಾ ಯುಡಿಆರ್ ನಂ 25/2020 ಕಲಂ 174 ಸಿಆರ್‌ಪಿಸಿ

ದಿನಾಂಕ 03/09/2020 ರಂದು ಬೆಳಿಗ್ಗೆ 10:30 ಗಂಟೆಗೆ ಫಿರ್ಯಾದಿ ಗಿರಿಯಮ್ಮ ಕೋಂ ಲೇಟ್, ಚಿಕ್ಕಮಾರಯ್ಯ, ಸುಮಾರು 55 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ಸಾಸಲು ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ,ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ ನಾನು ತಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ, ನನಗೆ ಸಂಸಾರ ಜೀವನದಲ್ಲಿ ಇಬ್ಬರು ಗಂಡು ಮಕ್ಕಳಿದ್ದು, 01 ನೇ ಮಗ ನರಸಿಂಹಮೂರ್ತಿ, 02 ನೇ ರಂಗನಾಥ ಆಗಿದ್ದು, ನನ್ನ ಹಿರಯ ಮಗನಿಗೆ ಮದುವೆ ಮಾಡಿಸಿದ್ದು, ಅವರು ಸಂಸಾರ ಸಮೇತ ನಮ್ಮ ಗ್ರಾಮದಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿ  ವಾಸವಾಗಿರುತ್ತಾರೆ, ನನ್ನ 02 ನೇ ಮಗ ರಂಗನಾಥ ಬಿನ್ ಲೇಟ್, ಚಿಕ್ಕಮಾರಯ್ಯ, 35 ವರ್ಷ, ಆದಿ ಕರ್ನಾಟಕ ಜನಾಂಗ,  ಲಾರಿ ಡ್ರೈವರ್, ಸಾಸಲು ಗ್ರಾಮ, ಗೂಳೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು, ಈಗ್ಗೆ 2009-10 ನೇ ಸಾಲಿನಲ್ಲಿ ಗೂಳೂರು ಹೋಬಳಿ ಹೊಸಹಳ್ಳಿ ಗ್ರಾಮದ ಒಕ್ಕಲಿಗರ ಜನಾಂಗದ ಸುವರ್ಣ ಎಂಬುವರಿಗೆ ಪ್ರೀತಿಸಿ ಮದುವೆ ಆಗಿದ್ದು, ಆತನು ಮದುವೆ ನಂತರದಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಗೆ 01 ಅಂಕಿತ ಎಂಬುವ ಹೆಣ್ಣು ಮಗಳಿದ್ದು, ನಂತರ ಈಗ್ಗೆ ಸುಮಾರು 5-6 ವರ್ಷಗಳ ಹಿಂದೆ ಸುವರ್ಣ ರವರು ನನ್ನ ಮಗನ ಜೊತೆಯಲ್ಲಿ ಇರುವುದಿಲ್ಲ ನಾನು ಸಂಸಾರ ಮಾಡುವುದಿಲ್ಲವೆಂತ ಬಿಟ್ಟಿದ್ದು ನಂತರ ನನ್ನ ಮಗ ನಮ್ಮ ಮನೆಗೆ ಬಂದು ಇದ್ದು, ಹಾಲಿ ಕಾರು ಚಾಲಕನಾಗಿ ಸ್ವಲ್ಪ ದಿನ ಕುರುಗುಂದ ಗ್ರಾಮದ ಮೋಹನ ಎಂಬುವವರ ಬಳಿ ಕೆಲಸ ಮಾಡಿ ನಂತರ ಗೂಳೂರು ಬಳಿ ಇರುವ ಅನನ್ಯ ಇಂಟರ್ ನ್ಯಾಷನಲ್ ಶಾಲೆಯ ಬಸ್ಸಿನಲ್ಲಿ ಸುಮಾರು 01 ವರ್ಷ ಕೆಲಸ ಮಾಡಿದ್ದು, ನಂತರ ಕೌತಮಾರನಹಳ್ಳಿ ಬಳಿ ಯಾವುದೋ ಲಾರಿಗೆ ಚಾಲಕನಾಗಿ ಹೋಗಿ ಬರುತ್ತಿದ್ದ, ಈಸಮಯದಲ್ಲಿ ಸುವರ್ಣ ರವರು ಬಿಟ್ಟು ಹೋದ ವಿಚಾರದಲ್ಲಿ ಕುಡಿಯುವ ಚಟ ಇಟ್ಟುಕೊಂಡಿದ್ದು, ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದನು, ನಾನು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದು, ದಿನಾಂಕ:-01-09-2020 ರಂದು ಬೆಳಿಗ್ಗೆ ಮದ್ಯಾಹ್ನ ಸುಮಾರು 12 ಗಂಟೆಯಲ್ಲಿ ಮನೆಗೆ ಬಂದು ನೋಡಲಾಗಿ ಮನೆಯ ಬಳಿ ಇರಲಿಲ್ಲ, ನಮ್ಮ ಮನೆಯ ಅಕ್ಕ ಪಕ್ಕದವರನ್ನು ಕೇಳಲಾಗಿ  ಸ್ನಾನ ಮಾಡಿಕೊಂಡು ಎಲ್ಲಿಗೋ ಹೋದರೆಂತ ತಿಳಿಸಿದರು, ನಾನು ಎಂದಿನಂತೆ ಎಲ್ಲಿಗಾದರೂ ಕೆಲಸಕ್ಕೆ ಹೋಗಿರಬಹುದೆಂತ ತಿಳಿದು, ಸುಮ್ಮನಾಗಿದ್ದು ಆದಿನ ರಾತ್ರಿಯಾದರೂ ಮನೆಗೆ ಬರಲಿಲ್ಲ, ಆಗ ನಾನು ಅಲ್ಲಿ ಇಲ್ಲಿ ಕೇಳಿದರೂ ವಿಚಾರ ಗೊತ್ತಾಗಲಿಲ್ಲ, ನಾನು ಎಲ್ಲಿಗಾದರೂ ಹೋಗಿದ್ದರೆ ಬರುತ್ತಾನೆಂತ ಸುಮ್ಮನಾಗಿದ್ದು ಈದಿನ ದಿನಾಂಕ:-03-09-2020 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ನನ್ನ ಮಗ ನರಸಿಂಹಮೂರ್ತಿ ರವರು ನನ್ನ ಬಳಿಗೆ ಬಂದು ನರುಗನಹಳ್ಳಿ ಗ್ರಾಮದ ಮುನಿಯಪ್ಪ ಎಂಬುವವರು ನನಗೆ ಫೋನ್ ಮಾಡಿ ನಿನ್ನ ತಮ್ಮ ರಂಗನಾಥ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಶ್ರೀರಂಗ ಬಾರ್ ಅಂಡ್ ರೆಸ್ಟೋರೆಂಟ್ ಹಿಂಭಾಗ ಒಂದು ಮನೆಯ ಪಕ್ಕ ಮೃತಪಟ್ಟು ಬಿದ್ದಿರುವುದಾಗಿ ತಿಳಿಸಿರುತ್ತಾರೆಂತ ತಿಳಿಸಿದಾಗ ನಾನು ನನ್ನ ಮಗ ನರಸಿಂಹಮೂರ್ತಿರವರೊಂದಿಗೆ ಬೆಳಿಗ್ಗೆ 07-30 ಗಂಟೆಯಲ್ಲಿ ಬಂದು ನೋಡಲಾಗಿ ನನ್ನ ಮಗ ರಂಗನಾಥ ಒಂದು ಮನೆಯ ಪಕ್ಕ ಮೃತಪಟ್ಟು ಬಿದ್ದಿದ್ದು, ಸದರಿ ಮನೆಯ ಪಕ್ಕದಲ್ಲಿ ಒಂದು ಬೈಕ್ ನಿಲ್ಲಿಸಿತ್ತು, ನನ್ನ ಮಗನ ಜೋಬಿನಲ್ಲಿ ನೋಡಲಾಗಿ ನನ್ನ ಮಗನ ಬಳಿ ಪರ್ಸ್ ನಲ್ಲಿದ್ದ  ಡಿ.ಎಲ್. ಐ.ಡಿ.ಕಾರ್ಡ್, ಐಟೆಲ್ ಮೊಬೈಲ್ ನಂಬರ್ 9901780452, ಇವುಗಳು ಸಹ ಇರುವುದಿಲ್ಲ, ಆದರೆ ನನ್ನ ಮಗನಿಗೆ ಕುಡಿಯುವ ಚಟವಿದ್ದು, 2-3 ದಿನಗಳಿಂದ ಮನೆಗೆ ಬಾರದೆ ಯಾರ ಜೊತೆಯಲ್ಲಿಯೋ ಇದ್ದು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಇಲ್ಲದೆಯೋ ಮದ್ಯಪಾನ ಮಾಡಿ ದಿನಾಂಕ:-02-09-2020 ರಂದು ರಾತ್ರಿ ಯಾವಾಗಲೋ ಮೃತಪಟ್ಟಿರುತ್ತಾನೆ, ನನ್ನ ಮಗನ ಮೃತ ದೇಹವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು, ಸ್ಥಳಕ್ಕೆ ಬಂದು ಕಾನೂನು ರೀತಿ ಕ್ರಮ ಕೈಗೊಂಡು ನಿಜವಾದ ಮರಣದ ಕಾರಣವನ್ನು ತಿಳಿಯ ಬೇಕೆಂದು ನೀಡಿದ ದೂರನ್ನು ಪಡೆದು ಠಾಣ ಯುಡಿಆರ್ ನಂ 25/2020 ಕಲಂ 174 ಸಿಆರ್‌ಪಿಸಿ ರಿತ್ಯ ಪ್ರಕರಣ ದಾಖಲಿಸಿರುತ್ತೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೊನಂ 106/2020 ಕಲಂ 279, 304 (ಎ) ಐಪಿಸಿ.

ದಿನಾಂಕ:04/09/2020 ರಂದು ಬೆಳಿಗ್ಗೆ 07-30 ಗಂಟೆಗೆ ಪಿರ್ಯಾದಿ ಶಿವಕುಮಾರ್.ಕೆ.ಎನ್ ಬಿನ್ ನಾಗರಾಜಪ್ಪ, 28 ವರ್ಷ, ಕುರುಬ ಜನಾಂಗ, ಬಾರ್ ಕ್ಯಾಷಿಯರ್, ಕಲಿದೇವಪುರ ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ನಮ್ಮ ತಂದೆ ನಾಗರಾಜಪ್ಪ ಬಿನ್ ಲೇಟ್ ಅಂಜಿನಪ್ಪ (52 ವರ್ಷ) ರವರಿಗೆ 03 ಜನ ಮಕ್ಕಳಿದ್ದು, 01 ನೇ ಜಯಲಕ್ಷ್ಮೀ, 02 ನೇ ಲತಾಮಣಿ ಮತ್ತು 03 ನೇ ನಾನು ಆಗಿರುತ್ತೇನೆ. ನಮ್ಮ ತಂದೆ ಗ್ರಾಮದಲ್ಲಿ ವ್ಯವಸಾಯ ವೃತ್ತಿಯನ್ನು ಮಾಡಿಕೊಂಡಿರುತ್ತಾರೆ. ದಿನಾಂಕ:03/09/2020 ರಂದು ನಮ್ಮ ದೊಡ್ಡಪ್ಪನ ಮಗನಾದ ರಾಮಕೃಷ್ಣ ರವರಿಗೆ ಕೊರೊನಾ ಖಾಯಿಲೆ ಧೃಡಪಟ್ಟಿದ್ದರಿಂದ ಆಂಬುಲೆನ್ಸ್ ನಲ್ಲಿ ರಾಮಕೃಷ್ಣ ರವರನ್ನು ಕರೆದುಕೊಂಡು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಈ ವಿಚಾರ ನಮ್ಮ ತಂದೆ ನಾಗರಾಜಪ್ಪ ರವರಿಗೆ ತಿಳಿದು ಮನೆಯಲ್ಲಿ ನಾನೂ ಕೂಡ ಮಧುಗಿರಿಗೆ ಹೋಗಿ ಬರುತ್ತೇನೆಂದು ಹೇಳಿ ನಮ್ಮ ಗ್ರಾಮದಿಂದ ಮಧುಗಿರಿಗೆ ಹೋಗಲು ತೆರಳಿದ್ದು, ದಿನಾಂಕ:03/09/2020 ರಂದು ಸಂಜೆ ಸುಮಾರು 06-45 ಗಂಟೆಯಲ್ಲಿ ಕೊಡಿಗೇನಹಳ್ಳಿ-ಗೌರಿಬಿದನೂರು ರಸ್ತೆಯಲ್ಲಿ ದಂಡೀಪುರ ಗ್ರಾಮದ ವಿಜಯನಂದಿಕ್ರಾಸ್ ಬಳಿ ನಮ್ಮ ತಂದೆಯವರು ತಮ್ಮ ಬಾಬ್ತು KA-06 X-4076 ನೇ ದ್ವಿಚಕ್ರ ವಾಹನದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ತಮ್ಮ ಬಾಬ್ತು ಬೈಕ್ ಅನ್ನು ಓಡಿಸಿಕೊಂಡು ಹೋಗುತ್ತಿರುವಾಗ ಯಾವುದೋ ನಾಯಿ ಅಡ್ಡ ಬಂದಿದ್ದರಿಂದ ಅದರ ಪ್ರಾಣ ರಕ್ಷಿಸಲು ಹೋಗಿ ರಸ್ತೆಯ ಬಲಬದಿಯಲ್ಲಿ ಬಿದ್ದಿದ್ದರಿಂದ ನಮ್ಮ ತಂದೆ ನಾಗರಾಜಪ್ಪ ರವರ ತಲೆಗೆ, ಕಾಲಿಗೆ ಪೆಟ್ಟು ಬಿದ್ದು ರಕ್ತಗಾಯಗಳಿಂದ ನರಳಾಡುತ್ತಿರುವಾಗ ನಮ್ಮ ಗ್ರಾಮದ ವಾಸಿಯಾದ ವೆಂಕಟೇಶ್ ಬಿನ್ ಗಿರಿಯಪ್ಪ ಮತ್ತು ರಾಮಾಂಜಿ ಬಿನ್ ಲೇಟ್ ಹನುಮಂತರಾಯಪ್ಪ ರವರು ಕೊಡಿಗೇನಹಳ್ಳಿ ಗ್ರಾಮದ ಕಡೆಯಿಂದ ಬರುತ್ತಿದ್ದು, ನಾಗರಾಜಪ್ಪ ರವರನ್ನು ಉಪಚರಿಸಿ ಯಾವುದೋ ಆಟೋರಿಕ್ಷಾದಲ್ಲಿ ಸಂಜೆ ಸುಮಾರು 07-15 ಗಂಟೆಯಲ್ಲಿ ಕೊಡಿಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ನಮ್ಮ ತಂದೆ ನಾಗರಾಜಪ್ಪ ರವರು ಮೃತಪಟ್ಟಿರುತ್ತಾರೆಂತಾ ವೈದ್ಯರು ತಿಳಿಸಿರುತ್ತಾರೆ ಎಂದು ನನಗೆ ವೆಂಕಟೇಶ್ ರವರು ಫೋನ್ ಮಾಡಿ ವಿಚಾರ ತಿಳಿಸಿದ್ದು, ನಾನು ಕೂಡಲೇ ಕೊಡಿಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತೆ. ನಮ್ಮ ತಂದೆಯವರ ಮೃತದೇಹವು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಅವೇಳೆಯಾಗಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ದೂರನ್ನು ಸ್ವೀಕರಿಸಿ ಠಾಣಾ ಮೊನಂ 106/2020 ಕಲಂ 279, 304 (ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ಯು.ಡಿ.ಆರ್ ನಂ:04/2020 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:04/09/2020 ರಂದು ಬೆಳಿಗ್ಗೆ 6:15 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ಲೇ||ಸಿದ್ದಪ್ಪ, 42 ವರ್ಷ, ನಾಯಕ ಜನಾಂಗ, ಜಿರಾಯ್ತಿ ಕೆಲಸ ವೈ ಎನ್ ಹೊಸಕೋಟೆ ಟೌನ್ ಪಾವಗಡ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ ನಾನು ಬಲ್ಲೇನಹಳ್ಳಿ ಗ್ರಾಮದ ತಿಮ್ಮಪ್ಪ ರವರ ಮಗಳಾದ ಪ್ರಮೀಳಮ್ಮ ರವರನ್ನು ಈಗ್ಗೆ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ನಮಗೆ ಇಬ್ಬರು ಮಕ್ಕಳಿದ್ದು ,1ನೇ ದೀಕ್ಷಿತ್ ಸುಮಾರು ನಾಲ್ಕು ವರೆ ವರ್ಷ, 2ನೇ ಮಗಳಾದ ಧನ್ವಿ ಸುಮಾರು ಒಂದು ವರ್ಷದ ಹೆಣ್ಣು ಮಗಳಿರುತ್ತಾರೆ, ನಮ್ಮ ಪಕ್ಕದ ಮನೆಯಲ್ಲಿ ಜಯರಾಮಪ್ಪ ಮತ್ತು ಅವರ ಹೆಂಡತಿ ನರಸಮ್ಮ ವಾಸವಾಗಿದ್ದು,  , ನನ್ನ ಮಗ ದೀಕ್ಷಿತ್ ನಮ್ಮ ಅಣ್ಣ ಅಂದರೆ ಜಯರಾಮಪ್ಪರವರ ಮನೆಗೆ ಹೋಗುವುದು-ಬರುವುದು ಮಾಡುತ್ತಿದ್ದ ,ಹೀಗಿರುವಾಗ್ಗೆ ದಿನಾಂಕ:.03/09/2020 ರಮದು ಸಂಜೆ 4-15 ಗಂಟೆ ಸಮಯದಲ್ಲಿ ನಮ್ಮ ಅತ್ತಿಗೆ ನರಸಮ್ಮ ರವರು ಟೈಲರ್ ಹತ್ತಿರ ಬಟ್ಟೆ ಹೊಲೆಯಲು ಕೊಟ್ಟಿರುತ್ತೇನೆ, ದೀಕ್ಷಿತ್ ನನ್ನು ನನ್ನ ಜೊತೆಯಲ್ಲಿ ಕಳುಹಿಸಿ ಅಂತ ಕೇಳಿದರು ನಾನು ಕಳುಹಿಸಿಕೊಟ್ಟೆ, ಸುಮಾರು 5-00 ಗಂಟೆ ಸಮಯದಲ್ಲಿ ನರಸಮ್ಮ ರವರು ದೀಕ್ಷಿತ್ ಕಾಣುತ್ತಿಲ್ಲ, ಎಲ್ಲೋ ಹೋಗಿದ್ದಾನೆಂತ ಹೇಳಿದರು, ಆಗ ನಾವು ದೀಕ್ಷಿತ್ ನನ್ನು ಊರಿನಲ್ಲಿ ಹುಡುಕಾಡುತ್ತಿದ್ದು , ನಂತರ ದೀಕ್ಷಿತ್ ನಮ್ಮ ಚಿಕ್ಕಪ್ಪನಾದ ರಾಮಪ್ಪರವರ ಮನೆಯ ಒಳಗಡೆ ಇರುವ ನೀರಿನ ತೊಟ್ಟಿಗೆ ಬಿದ್ದಿರುವುದಾಗಿಯೋ ಹುಡುಕಾಡಿದಾಗ ಪಕ್ಕದ ಮನೆಯ ಹುಡುಗರು ನೀರಿನಿಂದ ಈಚೆಗೆ ದೀಕ್ಷಿತನನ್ನು ತೆಗೆದು ಖಾಸಗಿ ಆಸ್ಪತ್ರೆಗೆ ಹೋದಾಗ ದೀಕ್ಷಿತ್  ಮೃತಪಟ್ಟಿರುತ್ತಾನೆಂತ ವೈದ್ಯರು ತಿಳಿಸಿದ್ದು ,ದೀಕ್ಷಿತ್ ಹೆಣವನ್ನು ಮನೆಯ ಹತ್ತಿರ ತಂದು ಕೊಟ್ಟರು, ನಾವು ಈ ವಿಚಾರವನ್ನು ನಮ್ಮ ಸಂಬಂದಿಕರಿಗೆಲ್ಲಾ ತಿಳಿಸಿ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ, ನನ್ನ ಮಗ ದೀಕ್ಷೀತ್ ನ ವು ದೀಕ್ಷಿತ್ ಆಟ ಆಡಿಕೊಂಡು ನಮ್ಮ  ಚಿಕ್ಕಪ್ಪ ರಾಮಪ್ಪನ ಮನೆಗೆ ಹೋದಾಗ ಆಕಸ್ಮಿಕವಾಗಿ ನೀಡಿನ ತೊಟ್ಟಿಗೆ ಬಿದ್ದು ಮೃತಪಟ್ಟಿರುತ್ತಾನೆ,  ಸಂಜೆ ಸುಮಾರು 5:00 ಗಂಟೆ ಸಮಯದಲ್ಲಿ ಮೃತಪಟ್ಟಿರಬಹುದು ಆದ್ದರಿಂದ ನನ್ನ  ಮಗ ದೀಕ್ಷಿತ್  ಹೆಣವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ,ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿರುತ್ತೆ, ತಾವು ಸ್ಥಳಕ್ಕೆ ಬಂದು ಮುಂದಿನ ಮಗನ ಶವ ಸಂಸ್ಕಾರದ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ: 04/2020 ಕಲಂ:174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತದೆ

ಹೊನ್ನವಳ್ಳಿ ಪೊಲೀಸ್‌  ಠಾಣೆ ಯು,ಡಿ,ಆರ್ ನಂ-10/2020 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ;-04-09-2020 ರಂದು ಬೆಳಿಗ್ಗೆ 10-30 ಗಂಟೆಗೆ ಲೋಕೇಶ್ ಜಿ ಬಿನ್ ಲೇಟ್ ಗಂಗಾಧರಯ್ಯ, 37 ವರ್ಷ, ಬೆಸ್ತರು ಜನಾಂಗ, ಗಾರೆಕೆಲಸ, ರಟ್ಟೆನಹಳ್ಳಿ ವಾಸಿ ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್,  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ 03/09/2020 ರಂದು ನಾನು ಎಂದಿನಂತೆ ಗಾರೆಕೆಲಸಕ್ಕೆ ನಮ್ಮೂರಿನ ರಾಮಣ್ಣರವರ ಮಗ ಮಧು ಜೊತೆ ಹೊನ್ನವಳ್ಳಿಗೆ ಬಂದಿದ್ದು, ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಮಧುರವರ ಪೋನಿಗೆ ನಮ್ಮೂರಿನವರು ಯಾರೋ ಪೋನ್ ಮಾಡಿ ನಮ್ಮ ತಾಯಿ ಕಮಲಮ್ಮರವರಿಗೆ ಯಾವುದೋ ಕೆಟ್ಟ ಹಾವು ಕಡಿದಿದೆ ಲೋಕೇಶನನ್ನು ಬೇಗ ಊರಿಗೆ ಕರೆದುಕೊಂಡು ಬಾ ಎಂದು ಪೋನ್ ಮಾಡಿ ತಿಳಿಸಿದಾಗ, ನಾನು ಮತ್ತು ಮಧು ಕೂಡಲೇ ಊರಿಗೆ ಬಂದು ನಮ್ಮ ಮನೆಯ ಹತ್ತಿರ ಇದ್ದ ನಮ್ಮ ತಾಯಿ ಕಮಲಮ್ಮನನ್ನು ನಾನು ಏನಾಯಿತು ಎಂದು ಕೇಳಿದಾಗ ನಾನು ಈ ದಿವಸ ಮಧ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಮನೆಯಲ್ಲಿ ಊಟ ಮಾಡಿಕೊಂಡು ರಟ್ಟೇನಹಳ್ಳಿ ಸ. ನಂ 144 ರ ಹೊಲದಲ್ಲಿ ಎಳ್ಳು ಕೊಡವಲು ಒಬ್ಬಳೆ ಹೋಗಿದ್ದು, ಎಳ್ಳುಕಡ್ಡಿಯನ್ನು ಕೊಡವುತ್ತಿರುವಾಗ ಎಳ್ಳುಕಡ್ಡಿಯೊಳಗೆ ಇದ್ದ ಯಾವುದೋ ಕೆಟ್ಟ ಹಾವು ನನ್ನ ಎಡಗಾಲಿನ ಪಾದದ ಬಳಿ ಕಡಿಯಿತು, ನಾನು ಗಾಬರಿಯಿಂದ ಕೂಗಾಡಿದೆ ನಮ್ಮ ಹೊಲದ ಅಕ್ಕಪಕ್ಕ ಯಾರು ಇರಲಿಲ್ಲ, ನಾನು ಕೂಡಲೇ ಊರಿನೊಳಕ್ಕೆ  ಬಂದು ವಿಚಾರ ತಿಳಿಸಿದೆನು ಎಂದು ಹೇಳಿದರು, ಆಗ ಸಮಯ ಸುಮಾರು ಸಂಜೆ 6-30 ಗಂಟೆಯಾಗಿತ್ತು, ನಾನು ಕೂಡಲೇ ನಮ್ಮ ಅಣ್ಣತಮ್ಮಂದಿರಾದ ಶೇಖರಪ್ಪರವರ ಮಗ ಪವನನ ಬಾಬ್ತು ಕಾರಿನಲ್ಲಿ ನಮ್ಮ ತಾಯಿ ಕಮಲಮ್ಮರವರನ್ನು ನಾನು ಮತ್ತು ಮಲ್ಲಯ್ಯರವರ ಮಗ ರವಿಕುಮಾರ ಇಬ್ಬರೂ ಕೂರಿಸಿಕೊಂಡು ಚಿಕಿತ್ಸೆ ಕೊಡಿಸಲು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಭೈರನಾಯಕನಹಳ್ಳಿ ಸಮೀಪ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ನಮ್ಮ ತಾಯಿ ಮೃತಪಟ್ಟರು, ನಾನು ಮೃತಪಟ್ಟ ನಮ್ಮ ತಾಯಿಯ ಶವವನ್ನು ವಾಪಸ್ಸು ನಮ್ಮೂರಿಗೆ ತೆಗೆದುಕೊಂಡು ಕೆರೆಕೋಡಿಯ ಹತ್ತಿರ ಶವವನ್ನು ಮಲಗಿಸಿರುತ್ತೇವೆ, ನಮ್ಮ ತಾಯಿಯು ಹೊಲದ ಹತ್ತಿರ ಕೆಲಸ ಮಾಡುತ್ತಿರುವಾಗ ಯಾವುದೋ ಕೆಟ್ಟ ಹಾವು ಕಡಿದು ದೇಹಕ್ಕೆಲ್ಲ ವಿಷವೇರಿಮೃತಪಟ್ಟಿರುತ್ತಾರೆ ವಿನಃ ನಮ್ಮ ತಾಯಿಯ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ, ನಮ್ಮ ತಾಯಿಯು ಮೃತಪಟ್ಟ ಬಗ್ಗೆ ನಮ್ಮ ಸಂಭಂಧಿಕರಿಗೆಲ್ಲಾ ತಿಳಿಸಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ತಾವುಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡದ ಲಿಖಿತ ದೂರನ್ನು ಪಡೆದು ಠಾಣಾ ಯು,ಡಿ,ಆರ್ ನಂ-10/2020 ಕಲಂ 174 ಸಿ,ಆರ್,ಪಿ,ಸಿ ರಿತ್ಯಾ ಪ್ರಕರಣ ದಾಖಲಿಸಿರುತ್ತೇನೆ,

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 42 guests online
Content View Hits : 899310
Hackguard Security Enabled