lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 4 5 6
7 8 9 11 12 13
14 15 16 17 18 19 20
21 22 23 24 25 26 27
28 29 30        
Thursday, 10 September 2020
ಅಪರಾಧ ಘಟನೆಗಳು 10-09-20

ಮಧುಗಿರಿ ಪೊಲೀಸ್ ಠಾಣಾ UDR No:19/2020 ಕಲಂ:174 CRPC

ದಿನಾಂಕ:09-09-2020 ರಂದು ಸಂಜೆ07-00 ಗಂಟೆಗೆ ಪಿರ್ಯಾದಿ ಲಕ್ಷ್ಮಣ ಬಿನ್ ಲೇ||ಪುಟ್ಟಕಾಮಯ್ಯ, 49 ವರ್ಷ, ಕೂಲಿ, ಕೆಲಸ, ವಕ್ಕಲಿಗರು, ಜನಾಂಗ, ಕರಡಿಪುರ ಮಧುಗಿರಿ ಟೌನ್ || ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ ಹೆಂಡತಿಯಾದ ಪದ್ಮ ರವರು 20 ವರ್ಷದಿಂದ ಮದ್ಯಪಾನ ಮಾಡುವುದನ್ನು ಕಲಿತ್ತಿದ್ದು ಕೂಲಿ ಕೆಲಸ ಮಾಡಿ ಬಂದ ಹಣದಿಂದ ಪ್ರತಿದಿನ ಮದ್ಯಾಪಾನ ಮಾಡುತ್ತಿದ್ದರು, ದಿನಾಂಕ:09-09-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿಯ ಜೊತೆಯಲ್ಲಿ ಕೆಲಸ ಮಾಡುವ ಬಾಬು ಎಂಬುವವರು ಪಿರ್ಯಾದಿಯ ಬಳಿ ಬಂದು ನಿಮ್ಮ ಹೆಂಡತಿ ನಿಮ್ಮ ಮನೆಯಲ್ಲಿ ಮಕ್ಕಳು ಮಲಗಲು ಕಟ್ಟಿರುವ  ಸೀರೆಯ ಜೋಕಾಲಿಯಲ್ಲಿ ಕತ್ತನ್ನು ಇಟ್ಟುಕೊಂಡು ತೀರಿಕೊಂಡಿರುತ್ತಾರೆಂದು ತಿಳಿಸಿದ್ದು, ಪಿರ್ಯಾದಿಯ ಹೆಂಡತಿ ಪದ್ಮ ರವರನ್ನು ಹಿರಿಯ ಅಳಿಯನಾದ ರಂಗನಾಥ ಮತ್ತು ಸ್ನೇಹಿತನಾದ ಶ್ರೀಧರ, ಮತ್ತು ಮಗಳಾದ ಕವಿತ ರವರು ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದು , ಪದ್ಮ ರವರನ್ನು ವೈದ್ಯರು ಪರಿಶೀಲಿಸಿದಾಗ ಅಸ್ಪತ್ರೆಗೆ ಕರೆದುಕೊಂಡು ಮುನ್ನವೇ ತೀರಿಕೊಂಡಿರುತ್ತಾರೆಂದು ತಿಳಿಸಿರುತ್ತಾರೆ, ನಂತರ ಪಿರ್ಯಾದಿಯು ತನ್ನ ಹೆಂಡತಿಯನ್ನು ನೋಡಲಾಗಿ ತೀರಿಕೊಂಡಿರುವ ವಿಚಾರವು ನಿಜವಾಗಿರುತ್ತೆ, ಮದ್ಯಪಾನದ ಅಮಾಲಿನಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಕ್ಕಳು ಮಲಗಲು ಕಟ್ಟಿದ ಸೀರೆಯ ಜೋಕಾಲಿಗೆ ಕತ್ತನ್ನು ಇಟ್ಟುಕೊಂಡು ಉಸಿರುಕಟ್ಟಿ ಮೃತಪಟ್ಟಿರುತ್ತಾರೆಂದು ತಿಳಿದು ಬಂದಿರುತ್ತೆ, ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಮೃತ ದೇಹವು ಮಧುಗಿರಿ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿರುತ್ತೆ, ಈ ಘಟನೆ ಸಂಜೆ ಸುಮಾರು 04-00 ರಿಂದ 04-30 ಗಂಟೆಯವರೆಗೆ ನಡೆದಿರುತ್ತೆ, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 141/2020, ಕಲಂ 279,304(A) IPC

ದಿನಾಂಕ:09-09-2020 ರಂದು ಬೆಳಗ್ಗೆ 10.30 ಗಂಟೆಗೆ ಪಿರ್ಯಾದಿ ಎಸ್.ಕೆ.ವೆಂಕಟೇಶ್ ಬಿನ್ ಎಸ್.ಕೃಷ್ಣಶೆಟ್ಟಿ, 73 ವರ್ಷ,ಆರ್ಯವೈಶ್ಯ ಜನಾಂಗ,ಸಿಂಗಾಪುರ ಗ್ರಾಮ,ಹುಳಿಯಾರು ಹೋಬಳಿ,ಚಿ.ನಾ ಹಳ್ಳಿ ತಾಲ್ಲೂಕು,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಮ್ಮನ ಮಗನಾದ ಎಸ್.ಎಮ್.ವಿನಯ್ ಇವನು ಯಳನಡುವಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಆಧಾರ್ ಕಾರ್ಡ್ ನೊಂದಣಿ ಮತ್ತು ತಿದ್ದುಪಡಿ ಕೆಲಸ ಮಾಡುತ್ತಿದ್ದು, ಅವನು ಆತನ ಸ್ನೇಹಿತನಾದ ಹುಳಿಯಾರು ಗ್ರಾಮದ ಇಂದಿರಾನಗರದಲ್ಲಿ ವಾಸವಾಗಿರುವ ಮಂಜುನಾಥ್ ರವರ ಮಗ ದರ್ಶನ್ ರವರ ಜೊತೆ ಮೋಟಾರ್ ಸೈಕಲ್ ನಂ:KA-44-S-3094 ರಲ್ಲಿ ಹಿಂಬದಿಯ ಸವಾರನಾಗಿ ಕುಳಿತುಕೊಂಡು ಹುಳಿಯಾರು-ಚಿ.ನಾ ಹಳ್ಳಿ ರಸ್ತೆಯಲ್ಲಿ ವಿದ್ಯಾವಾರಿಧಿ ಶಾಲೆಯ ಮುಂಭಾಗ ಮೇಲ್ಕಂಡ ಮೋಟಾರ್ ಸೈಕಲ್‍ನ ಚಾಲಕನಾದ ದರ್ಶನ್ ಇವನು ಸದರಿ ವಾಹನವನ್ನು ದಿನಾಂಕ:08-09-2020 ರಂದು ಮಧ್ಯಾಹ್ನ:2.15 ಗಂಟೆಯ ಸಮಯದಲ್ಲಿ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಪಕ್ಕಕ್ಕೆ ವಾಹನವನ್ನು ಏಕಾಏಕಿ ಕೆಳಗೆ ಇಳಿಸಿದ್ದರಿಂದ ಮೋಟಾರ್ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದು, ಹಿಂಬದಿಯ ಸವಾರನಾಗಿ ಕುಳಿತಿದ್ದ ನನ್ನ ತಮ್ಮನ ಮಗ ವಿನಯ್ ಇವನಿಗೆ ರಸ್ತೆಯ ಅಂಚಿನ ಭಾಗ ತಲೆಗೆ ಬಡಿದು ಹಣೆಯ ಭಾಗಕ್ಕೆ ತೀವ್ರ ಸ್ವರೂಪದ ರಕ್ತ ಗಾಯವಾಗಿ ಪ್ರಜ್ಞಾ ಹೀನನಾಗಿದ್ದು ತಕ್ಷಣ ಗಾಯಗೊಂಡಿದ್ದ ವಿನಯ್ ಇವನನ್ನು ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಯಾವುದೋ ಒಂದು ವಾಹನದಲ್ಲಿ ಚಿ.ನಾ ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸದರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ತಮ್ಮನ ಮಗ ವಿನಯ್ ಇವರು ಮೃತನಾಗಿರುತ್ತಾನೆಂದು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದ ನನ್ನ ತಮ್ಮ ಎಸ್.ಕೆ ಮೋಹನ್ ರವರು ವಿಷಯ ತಿಳಿಸಿ ಅಪಘಾತದ ವಿಚಾರವನ್ನು ತಿಳಿಸಿರುತ್ತಾರೆ.ಆದುದರಿಂದ ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಓಡಿಸಿಕೊಂಡು ಹೋಗಿ ಅಪಘಾತ ಪಡಿಸಿ,ವಿನಯ್ ರವರ ಸಾವಿಗೆ ಕಾರಣವಾದ  KA-44-S-3094  ರ  ಮೋಟಾರ್ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿಕೊಡಬೇಕೆಂದು ತಮ್ಮಲ್ಲಿ  ವಿನಂತಿಸಿಕೊಳ್ಳುತ್ತೇನೆ.ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ 141/2020 ಕಲಂ 279,304(A) IPC ರೀತ್ಯಾ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತೆ.

 

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಠಾಣಾ ಯುಡಿಆರ್ ನಂ 17/2020 ಕಲಂ 174 ಸಿಆರ್ ಪಿಸಿ.

ದಿನಾಂಕ:09-09-2020 ರಂದು ಮದ್ಯಾಹ್ನ 12-30 ಗಂಟೆಗೆ ಈ ಕೇಸಿನ ಪಿರ್ಯಾದಿ ಪ್ಯಾರಿಮಾ ಕೋಂ ಮಹಮದ್ ಹುಸೇನ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ ಗಂಡನಾದ ಮಹಮದ್ ಹುಸೇನ್  ರವರಿಗೆ ಸುಮಾರು 3 ತಿಂಗಳಿಂದ ಹೊಟ್ಟೆ ನೋವು ಬರುತ್ತಿದ್ದು ಔಷಧಿ ಕೊಡಿಸಿದ್ದರು ಸಹ ವಾಸಿಯಾಗಿರಲಿಲ್ಲ ಕಳೆದ 15 ದಿನಗಳಿಂದ ಕೋಡಿಗೇನಹಳ್ಳಿಯಲ್ಲಿ ವಾಸವಾಗಿರುವ ಪಿರ್ಯಾದಿಯ ಅಕ್ಕ ಹಸೀನ್ ತಾಜ್ ಮತ್ತು ಅವರ ಗಂಡ ನಯಾಜ್ ಖಾನ್ ರವರ ಚಪ್ಪಲಿ ಅಂಗಡಿಯಲ್ಲಿ ಮಹಮದ್ ಹುಸೇನ್ ರವರು ಕೆಲಸ ಮಾಡಿಕೊಂಡು ಆಗಾಗ ಮಧುಗಿರಿಗೆ ಬಂದು ಹೋಗುತ್ತಿದ್ದರು ದಿನಾಂಕ:08-09-2020 ರಂದು ಪಿರ್ಯಾದಿ ಮತ್ತು ಮಕ್ಕಳು ಸಹ ಕೋಡಿಗೇನಹಳ್ಳಿಗೆ ಪಿರ್ಯಾದಿಯ ಅಕ್ಕ ಹಸೀನ್ ತಾಜ್ ರವರ ಮನೆಗೆ ಹೋಗಿದ್ದು, ಎಲ್ಲಾರೂ ರಾತ್ರಿ 10-30 ಗಂಟೆಗೆ ಮನೆಯಲ್ಲಿ ಮಲಗಿದ್ದಾಗ ಪಿರ್ಯಾದಿ ಗಂಡ ಮಹಮದ್ ಹುಸೇನ್ ರವರು ಮನೆಯಲ್ಲಿದ್ದ ಪ್ಯಾನ್ ಗೆ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದನ್ನು ನಯಾಜ್ ಖಾನ್ ರವರು ದಿನಾಂಕ:09-09-2020 ರಂದು ಬೆಳಿಗಿನ ಜಾವ 03-30 ಗಂಟೆಗೆ ನೋಡಿ ಕಿರಿಚಿಕೊಂಡಾಗ ಮನೆಯಲ್ಲಿದ್ದವರೆಲ್ಲಾ ಸೇರಿ ಕೆಳಕ್ಕೆ ಇಳಿಸಿಕೊಂಡು ನೋಡಿದಾಗ ಸ್ವಲ್ಪ ಉಸಿರಾಡುತ್ತಿದ್ದರಿಂದ ಯಾವುದೋ ಟಾಟಾ ಸುಮೋ ವಾಹನದಲ್ಲಿ ಹಾಕಿಕೊಂಡು ಬೆಳಿಗ್ಗೆ 04-30 ಗಂಟೆಗೆಯಲ್ಲಿ ಮಧುಗಿರಿ ಟೌನ್ ಗೆ ಬಂದಾಗ ಮಹಮದ್ ಹುಸೇನ್ ರವರು ಮೃತಪಟ್ಟಿರುತ್ತಾರೆ, ಪೊಲೀಸ್ ಸ್ಟೇಷನ್ ನಲ್ಲಿ ಕೇಸು ಕೋಡುವ ಬಗ್ಗೆ ತಿಳಿಯದ ಕಾರಣ ಪಿರ್ಯಾದಿಯು ತಮ್ಮ ವಾಸದ ಮನೆಗೆ ತಂದಿರುತ್ತಾರೆ, ನಂತರ ವಿಚಾರವನ್ನು ಸಂಬಂದಿಕರಿಗೆ ತಿಳಿಸಿದ್ದರಿಂದ ಕೇಸುಕೊಡುವಂತೆ ಹೇಳಿದ್ದು ನಂತರ ಪಿರ್ಯಾದಿಯು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ, ಪಿರ್ಯಾದಿಯ ಗಂಡ ಮಹಮದ್ ಹುಸೇನ್ ರವರಿಗೆ ಹೊಟ್ಟೆ ನೋವಿನ ಬಾದೆ ತಾಳಲಾರದೆ ಅವರೇ ಸ್ವತಹ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲವೆಂದು ಪಿರ್ಯಾದಿಯು ನೀಡಿದ ಪಿರ್ಯಾದು ದೂರನ್ನು ಸ್ವೀಕರಿಸಿ ಠಾಣಾ ಯುಡಿಆರ್ ನಂ 17/2020 ಕಲಂ 174 ಸಿಆರ್ ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 899266
Hackguard Security Enabled