lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 4 5 6
7 8 9 10 11 13
14 15 16 17 18 19 20
21 22 23 24 25 26 27
28 29 30        
Saturday, 12 September 2020
ಪತ್ರಿಕಾ ಪ್ರಕಟಣೆ ದಿ:11/09/20

ಪತ್ರಿಕಾ ಪ್ರಕಟಣೆ

ದಿ:11/09/20

ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ.

ದಿನಾಂಕ : 17-08-2020 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಸಿರಾ ಟೌನ್ ಮುಖ್ಯ ರಸ್ತೆಯಲ್ಲಿ    ಡಿ.ಸಿ.ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕೆಎ-06-ವೈ-703  ನಂಬರಿನ  ಹಿರೋಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶಿರಾ ಪೊಲೀಸ್ ಠಾಣಾ  ಮೊ.ನಂ. 316/2020, ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

 

ಸದರಿ ಪ್ರಕರಣದ ಆರೋಪಿ ಮತ್ತು ಕಳವು ವಾಹನವನ್ನು ಪತ್ತೆ ಹಚ್ಚಲು ಪೊಲೀಸ್ ಇನ್ಸ್‌‌ಪೆಕ್ಟರ್‌             ಶ್ರೀ.ಹನುಮಂತಪ್ಪ ಪಿ.ಬಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ದಿನಾಂಕ: 09-09-2020 ರಂದು ಬೆಳಿಗ್ಗೆ 7-00  ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ, ಶಿರಾ ನಗರದ ಪ್ರೆಸಿಡೆಸ್ಸಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಒಬ್ಬ ಆರೋಪಿಯು ಅನುಮಾನಸ್ವದವಾಗಿ ಕೆಎ-06-ವೈ-703  ನಂಬರಿನ  ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದು ಆತನನ್ನು ತಡೆದು ನಿಲ್ಲಿಸಿದಾಗ, ಮೋಟಾರ್ ಸೈಕಲ್ ನ್ನು ಬಿಟ್ಟು  ಓಡಿ ಹೋಗಲು ಪ್ರಯತ್ನಿಸಿದ್ದು, ಆಸಾಮಿಯನ್ನು ಹಿಡಿದು ಮುಂದಿನ ತನಿಖೆಗಾಗಿ ಠಾಣೆಗೆ ಕರೆ ತಂದು ವಿಚಾರಣೆ ಮಾಡಲಾಗಿ ಆರೋಪಿಯು ಸದರಿ ಮೇಲ್ಕಂಡ ಪ್ರಕರಣದ ಜೊತೆಗೆ ಉಳಿದಂತೆ ಶಿರಾ ತಾಲ್ಲೂಕ್ ತಿಮ್ಮಸಾಗರ, ತೊಗರುಗುಂಟೆ, ಅಮ್ಮಾಜಮ್ಮನ ದೇವಸ್ಥಾನದ ಬಳಿ, ಮತ್ತು ಶಿರಾ ನಗರದ ಡಿ.ಸಿ.ಸಿ ಬ್ಯಾಂಕ್ ಮುಂಬಾಗ, ತಾಲ್ಲೂಕ್ ಕಛೇರಿ ಬಳಿ, ರಂಗನಾಥ ಕಾಲೇಜ್ ಬಳಿ, ದ್ವಿ ಚಕ್ರ ವಾಹನಗಳನ್ನು ಕಳವು  ಮಾಡಿದ್ದ ಸುಮಾರು 2 ಲಕ್ಷ ರೂ ಬೆಲೆ ಬಾಳುವ 7 ದ್ವಿ ಚಕ್ರ ವಾಹನಗಳನ್ನು ಆರೋಪಿಯಿಂದ ಅಮಾನತ್ತು ಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

 

ಆರೋಪಿಯ ವಿವರ

ಮಂಜುನಾಥ ಕೆ ಜಿ  ಬಿನ್ ಗುರುಸಿದ್ದಪ್ಪ ಸುಮಾರು 35 ವರ್ಷ, ಕೂಲಿ ಕೆಲಸ, ಕುರುಡನಹಳ್ಳಿ, ಕಸಬಾ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶಿರಾ ಉಪ ವಿಭಾಗದ ಪೊಲೀಸ್ ಉಪಾದೀಕ್ಷಕರಾದ ಕುಮಾರಪ್ಪ ಎಲ್ ಕೆ.ಎಸ್.ಪಿ.ಎಸ್‌  ರವರ ಮಾರ್ಗದರ್ಶನದಲ್ಲಿ,  ಪೊಲೀಸ್ ಇನ್ಸ್‌‌ಪೆಕ್ಟರ್‌ ಶ್ರೀ.ಹನುಮಂತಪ್ಪ ಪಿ.ಬಿ ರವರ ನೇತೃತ್ವದಲ್ಲಿ ಪಿ.ಎಸ್.ಐ  ಭಾರತಿ  ಸಿಬ್ಬಂದಿಗಳಾದ ದುರ್ಗಯ್ಯ,  ಗೋಪಿನಾಥ, ಮತ್ತು ಶಿವಕುಮಾರ್, ನಾಗರಾಜು, ಮಂಜುನಾಥಸ್ವಾಮಿ ರವರುಗಳ ತಂಡವನ್ನು  ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 12-09-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ- 16/2020 ಕಲಂ; 174 ಸಿ.ಆರ್.ಪಿ.ಸಿ

ದಿನಾಂಕ:11/09/2020 ರಂದು ಬೆಳಿಗ್ಗೆ11-00 ಗಂಟೆಗೆ ಪಿರ್ಯಾದಿ ಶ್ರೀ ರೇಣುಕಪ್ಪ ಜಿ.ಎಸ್ ಬಿನ್ ಲೇಟ್ ಶಿವಣ್ಣ, 40 ವರ್ಷ, ಲಿಂಗಾಯಿತರು, ಜಿರಾಯ್ತಿ, ತೋಟದಮನೆ, ಗೊರಗೊಂಡನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾವು ಕೃಷಿಕರಾಗಿದ್ದು, ವ್ಯವಸಾಯ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ಈಗಿರುವಾಗ ದಿನಾಂಕ; 28/08/2020 ರಂದು ಮಧ್ಯಾಹ್ನ 3-15 ಗಂಟೆಯ ಸಮಯದಲ್ಲಿ ಗೊರಗೊಂಡನಹಳ್ಳಿ ಗ್ರಾಮದ ಸರ್ವೆ ನಂ- 106/1A ರ ಜಮೀನಿನಲ್ಲಿ ನಮ್ಮ ತಾಯಿಯಾದ ಲಲಿತಮ್ಮ (65 ವರ್ಷ) ರವರು ಜಾನುವಾರುಗಳನ್ನು ಮೇಯಿಸುತ್ತಿರುವಾಗ ಅವರ ಎಡಗಾಲಿಗೆ ಏನೋ ಕಚ್ಚಿದಂತಾಗಿದ್ದು, ರಕ್ತ ಬರುತ್ತಿದೆ ಎಂತ ತಿಳಿಸಿದರು. ನಾನು ನೋಡಲಾಗಿ  ಎಡಗಾಲಿನ ಗೆಣ್ಣಿನ ಹತ್ತಿರ ತರಚಿದಂತಾಗಿದ್ದು, ತಕ್ಷಣ ತಿಪಟೂರು ಕಲ್ಪತರು ಕ್ಲೀನಿಕ್ ಗೆ ತೋರಿಸಿ ಮನೆಗೆ ಕರೆದುಕೊಂಡು ಬಂದಿದ್ದು, ಮರುದಿನ ದಿನಾಂಕ: 29/08/2020 ರಂದು ಬೆಳಿಗ್ಗೆ ನಮ್ಮ ತಾಯಿಗೆ ನೋವು ಜಾಸ್ತಿಯಾಗಿದ್ದು, ಅವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ನಂತರ ಅಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದರಿಂದ ಅದೇ ದಿನ ಹಾಸನ ಸ್ಪರ್ಶ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ದಿನಾಂಕ: 02/09/2020 ರವರೆಗೆ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ: 09/09/2020 ರಂದು ಪುನಃ ನಮ್ಮ ತಾಯಿಗೆ ಕಾಲು ನೋವು ಜಾಸ್ತಿಯಾಗಿದ್ದು, ನಮ್ಮ ತಾಯಿ ಲಲಿತಮ್ಮರವರನ್ನು ತಿಪಟೂರು ನಗರದ ಶ್ರೀ ರಂಗ ನರ್ಸಿಂಗ್ ಹೋಂ ಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಈ ದಿನ ದಿನಾಂಕ: 11/09/2020 ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ನಮ್ಮ ತಾಯಿ ಲಲಿತಮ್ಮರವರ ಮೃತ ದೇಹವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ. ದಿನಾಂಕ: 28/08/2020 ರಂದು ಮಧ್ಯಾಹ್ನ 3-15 ಗಂಟೆಯಲ್ಲಿ ನಮ್ಮ ತಾಯಿ ಜಾನುವಾರುಗಳನ್ನು ಮೇಯಿಸುತ್ತಿರುವಾಗ ಯಾವುದೋ ವಿಷ ಜಂತು ಹಾವು ಅವರ ಎಡಗಾಲಿಗೆ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಆದ್ದರಿಂದ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ – 16/2020 ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 81/2020 ಕಲಂ; 324,504,506 ರೆ/ವಿ 34 ಐ.ಪಿ.ಸಿ

ದಿನಾಂಕ: 11/09/2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ರವಿ ಬಿನ್ ಶಿವಣ್ಣ, 35 ವರ್ಷ, ಗೊಲ್ಲರು ಜನಾಂಗ, ವ್ಯವಸಾಯ, ಚಿಕ್ಕರಂಗಾಪುರ ಗೊಲ್ಲರಹಟ್ಟಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಅಜ್ಜಿಯಾದ ಚಿಕ್ಕಮ್ಮರವರ ಹೆಸರಿನಲ್ಲಿರುವ ಚಿಕ್ಕರಂಗಾಪುರ ಸರ್ವೆ ನಂ- 38 ರಲ್ಲಿ 2 ಎಕರೆ 3 ಗುಂಟೆ ಜಮೀನನ್ನು ಈಗ್ಗೆ 4 ವರ್ಷಗಳ ಹಿಂದೆ ನನ್ನ ಚಿಕ್ಕಪ್ಪನ ಮಗನಾದ ಶಶಿ ಮತ್ತು ಮಹೇಶ್ ರವರು ದಾನಪತ್ರದ ಮೂಲಕ ಮಹೇಶ್ ರವರ ಹೆಸರಿಗೆ ಮೇಲ್ಕಂಡ ಜಮೀನನ್ನು ಮಾಡಿಸಿಕೊಂಡಿರುತ್ತಾರೆ. ಈ ವಿಚಾರವನ್ನು ಕೇಳಿದ್ದಕ್ಕೆ ಈ ದಿನ ದಿನಾಂಕ:11/09/2020 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿ ಇರುವಾಗ ಶಶಿ ಮತ್ತು ಮಹೇಶ್ ರವರು ಬಂದು ಬೋಳಿ ಮಗನೇ, ಸೂಳೆ ಮಗನೇ, ಎಂತ ಅವಾಚ್ಯ ಶಬ್ದಗಳಿಂದ ಬೈದು ಶಶಿಧರ್ ರವರು ಪ್ಲಾಸ್ಟಿಕ್ ಬಾಂಡ್ಲಿಯಿಂದ ಮತ್ತು ಮಹೇಶ್ ರವರು ಗುದ್ದಲಿಯ ಕಾವಿನಿಂದ ನನಗೆ ಮೈಕೈಗೆ ಹೊಡೆದು ರಕ್ತಗಾಯಪಡಿಸಿದರು. ಇದನ್ನು ನೋಡಿದ ನಮ್ಮ ತಂದೆ ಶಿವಣ್ಣರವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಶಶಿಧರ್ ರವರು ಪ್ಲಾಸ್ಟಿಕ್ ಬಾಂಡ್ಲಿಯಿಂದ ಮತ್ತು ಮಹೇಶ್ ರವರು ಗುದ್ದಲಿಯ ಕಾವಿನಿಂದ ಮೈಕೈಗೆ ಹೊಡೆದು ರಕ್ತಗಾಯಪಡಿಸಿದರು. ನಂತರ ನಮ್ಮ ತಂಟೆಗೆ ಬಂದರೆ ಒಂದುಗತಿ ಕಾಣಿಸುತ್ತೇವೆಂತಾ ಪ್ರಾಣ ಬೆದರಿಕೆಯನ್ನು ಹಾಕಿ ಹೋದರು. ಗಾಯಗೊಂಡಿದ್ದ ನಾವುಗಳು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಬಂದಿರುತ್ತೇವೆ. ನಮ್ಮ ಮೇಲೆ ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿ ರಕ್ತಗಾಯಪಡಿಸಿರುವ ಶಶಿಧರ್ ಮತ್ತು ಮಹೇಶ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ-81/2020 ಕಲಂ: 324,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

ಗುಬ್ಬಿ ಪೊಲೀಸ್ ಠಾಣಾ ಯು ಡಿ ಆರ್ ನಂ 36/2020 ಕಲಂ 174 ಸಿ ಆರ್ ಪಿ ಸಿ.

ದಿನಾಂಕ;11/09/2020 ರಂದು ಬೆಳಿಗ್ಗೆ 10-00 ಗಂಟೆಗೆ  ಈ ಕೇಸಿನ ಪಿರ್ಯಾದಿ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಈ ದಿನ ದಿ;11/09/2020 ಬೆಳಿಗ್ಗೆ  ಸುಮಾರು 7-30 ಗಂಟೆ ಸಮಯದಲ್ಲಿ  ಕೊಲ್ಲಾಪುರದಮ್ಮ ದೇವಾಲಯಕ್ಕೆ ಕೈ ಮುಗಿಯಲು ಹೋದಾಗ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶೆಡ್ ನಲ್ಲಿ ಯಾರೋ ಒಬ್ಬ ವ್ಯಕ್ತಿ  ಮಲಗಿದ್ದವರನ್ನು  ನೋಡಿ ಹತ್ತಿರ ಹೋಗಿ  ನೋಡಲಾಗಿ  ಶ್ರೀನಿವಾಸ  ಎಂತ ಹೆಸರು ತಿಳಿದಿದ್ದು  ಈತನ ವಿಳಾಸ ಗೊತ್ತಿಲ್ಲ ಸುಮಾರು 50 ರಿಂದ 55 ವರ್ಷ ವಯಸ್ಸಿನ  ವ್ಯಕ್ತಿಯಾಗಿದ್ದು  ಸುಮಾರು 5-8 ಅಡಿ  ಎತ್ತರ ಇದ್ದು ಸಾದರಣ ಮೈಕಟ್ಟು ಇರುತ್ತಾನೆ, ಎಣ್ಣೆ ಕೆಂಪು ಮೈಬಣ್ಣ,  ಹೆಸರು ವಿಳಾಸ ತಿಳಿದು ಬಂದಿಲ್ಲ. ಈತನು ಸುಮಾರು 4-5 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಆತನಗಿದ್ದ ಕಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಈತನು  ಮೃತಪಟ್ಟಿದ್ದು  ಯಾರೂ ನೋಡಿಕೊಂಡಿರುವುದಿಲ್ಲ. ಪಿರ್ಯಾದಿಯವರು ಅವರ ಗ್ರಾಮದಲ್ಲಿ ವಿಚಾರ ಮಾಡಲಾಗಿ ವಾರಸುದಾರರು ಯಾರೂ ಇರುವುದಿಲ್ಲ.  ತಾವು ಸ್ಥಳಕ್ಕೆ  ಬೇಟಿ ಮುಂದಿನ ಕ್ರಮ ಜರುಗಿಸಲು ಇತ್ಯಾದಿಯಾಗಿ ನೀಡಿದ ದೂರಿನ ಅಂಶ.

 

ಗುಬ್ಬಿ ಪೊಲೀಸ್ ಠಾಣಾ ಯು ಡಿ ಆರ್ ನಂ 37/2020 ಕಲಂ 174 ಸಿ ಆರ್ ಪಿ ಸಿ

ದಿನಾಂಕ;11/09/2020 ರಂದು ರಾತ್ರಿ 7-05 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ಪಿರ್ಯಾದಿ ತಂದೆಗೆ ಇಬ್ಬರು ಹೆಂಡತಿಯರು ಇದ್ದು ಹಿರಿಯ ಹೆಂಡತಿ ಮಂಜುಳರವರಿಗೆ ಪಿರ್ಯಾದಿ ಮತ್ತು ನನ್ನ ಅಕ್ಕ ಲೀಲಾವತಿ  ಎಂಬ ಇಬ್ಬರು ಮಕ್ಕಳಿರುತ್ತೇವೆ.  ಪಿರ್ಯಾದಿ ಅಕ್ಕ ಲೀಲಾವತಿಯವರಿಗೆ ಸಾಂಪ್ರಾದಾಯಿಕವಾಗಿ  ಈಗ್ಗೆ 10 ವರ್ಷಗಳ ಹಿಂದೆ ಗುಬ್ಬಿ ತಾಲ್ಲೂಕ್ ಕಸಬಾ ಹೋಬಳಿ ಜವರೇಗೌಡನ ಪಾಳ್ಯದ ವಾಸಿ ರಂಗಸ್ವಾಮಯ್ಯರವರ 2 ನೇ ಮಗ ಆರ್ ಲೋಕೇಶ್ ಎನ್ನುವವರಿಗೆ ಕೊಟ್ಟು ವಿವಾಹ ಮಾಡಿದ್ದೇವು ಪಿರ್ಯಾದಿ ಅಕ್ಕನಿಗೆ 8 ವರ್ಷದ ರಚನಾ ಎಂಬ ಹೆಣ್ಣು ಮಗಳು ಇರುತ್ತಾಳೆ. ಪಿರ್ಯಾದಿ ಅಕ್ಕ ಮತ್ತು ಬಾವ ಅನ್ಯೂನತೆಯಿಂತ ಸಂಸಾರ ಮಾಡಿಕೊಂಢಿದ್ದರು. ಈ ದಿನ ದಿನಾಂಕ;11/09/2020 ರಂದು ಸಾಯಂಕಾಲ 4-00 ಗಂಟೆಯಲ್ಲಿ  ನನ್ನ ಚಿಕ್ಕಮ್ಮನ ಮಗನಾಧ ಭರತ್ ಎನ್ನುವವನು ನನ್ನ ಮೊಬೈಲ್ ಪೋನಿಗೆ ಕರೆ ಮಾಡಿ  ಮದ್ಯಾಹ್ನ  ಸುಮಾರು 1-00 ಗಂಟೆ ಸಮಯದಲ್ಲಿ ಅಕ್ಕ ಲೀಲಾವತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂತ ವಿಚಾರವನ್ನು ತಿಳಿಸಿದನು.  ತಕ್ಷಣ ನಾನು ಹೊರಟು ಬಂದು ನೋಡಿ ವಿಚಾರ ತಿಳಿಯಲಾಗಿ ಪಿರ್ಯಾದಿ ಅಕ್ಕ ಲೀಲಾವತಿಗೆ ಮದುವೆಗಿಂತ ಮುನ್ನ ಮೊದಲಿನಿಂದಲೂ ಆಕೆಗೆ ಇದ್ದ ರುತು ಚಕ್ರ ಆದಾಗ ವಿಪರೀತ ರಕ್ತ ಸ್ರಾವದಿಂದ  ಹೊಟ್ಟೆನೋವು ಬರುತ್ತಿದ್ದು ವಿಪರೀತ ನೋವು ಅನುಭವಿಸುತ್ತಿರುವ ವಿಚಾರ ಪಿರ್ಯಾದಿಗೆ ಗೊತ್ತಿತ್ತು. ಇದೇ ಕಾರಣದಿಂದ ಪಿರ್ಯಾದಿ ಅಕ್ಕ ಲೀಲವಾತಿ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸವಿದ್ದ ಮನೆಯ ರೂಮಿನ ಕಬ್ಬಿಣದ ಪೈಪಿಗೆ ವೇಲಿನಿಂದ ತನ್ಮೂಲಕ ತಾನೇ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಪಿರ್ಯಾದಿ ಅಕ್ಕನ ಸಾವಿನಲ್ಲಿ ಯಾವುದೇ ಅನುಮಾನವು ಇರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ದೂರಿನ ಅಂಶ

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 128 guests online
Content View Hits : 899202
Hackguard Security Enabled