lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 4 5 6
7 8 9 10 11 12 13
15 16 17 18 19 20
21 22 23 24 25 26 27
28 29 30        
Monday, 14 September 2020
ಅಪರಾಧ ಘಟನೆಗಳು 14-09-20

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 127/2020 ಕಲಂ 279, 304() ಐಪಿಸಿ

ದಿನಾಂಕ 14-09-2020 ರಂದು   ಬೆಳಿಗ್ಗೆ 5-00 ಗಂಟೆಗೆ ಪಿರ್ಯಾದಿ    ಶಿವು ಎಂ ತಂದೆ ಮಹಾಲಿಂಗಪ್ಪ, 42 ವರ್ಷ, ಕ್ರಿಶ್ಚಿಯನ್,   ನಾಗಜ್ಜಿ ಗುಡ್ಲು ಬಡಾವಣೆ, ಶಿರಾ ಟೌನ್. ತುಮಕೂರು ಜಿಲ್ಲೆ ಇವರು ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ 13-09-2020 ರಂದು  ರಾತ್ರಿ 9-30 ಗಂಟೆ ಸಮಯದಲ್ಲಿ  ಕೆಎ.48.3334 ನೇ ಲಾರಿಯ ಚಾಲಕ ಲಾರಿಯನ್ನು ತುಮಕೂರು  ಕಡೆಯಿಂದ ಶಿರಾ ಕಡೆಗೆ  ಎನ್.ಹೆಚ್.48 ರಸ್ತೆಯಲ್ಲಿ  ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು   ತುಮಕೂರು  ಸತ್ಯಮಂಗಲ ಬ್ರಿಡ್ಜ್ ಸಮೀಪ   ಎನ್.ಹೆಚ್.48 ರಸ್ತೆಯಲ್ಲಿ  ಕೆಎ.41.ಎಲ್.1960 ನೇ  ದ್ವಿಚಕ್ರ ವಾಹನಕ್ಕೆ  ಡಿಕ್ಕಿ  ಹೊಡೆಸಿ ಅಪಘಾತಪಡಿಸಿದ್ದರಿಂದ  ಕೆಎ.41.ಎಲ್.1960 ನೇ  ದ್ವಿಚಕ್ರ ವಾಹನ ಸವಾರ ಕಲ್ಯಾಣ್ ಕುಮಾರ್ ಆರ್ ತಂದೆ ಲೇಟ್.ಕೋಡಪ್ಪ, 34 ವರ್ಷ, ಕ್ರಿಶ್ಚಿಯನ್, ಬಟವಾಡಿ ಯುನಿಲೆಟ್ ನಲ್ಲಿ ಸೇಲ್ಸ್ ಕೆಲಸ, ವಾಸ: ಮುದಿಗೆರೆ, ಶಿರಾ ತಾ,, ರವರ ತಲೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃಪಟ್ಟಿರುತ್ತಾನೆಂತ ದೂರು.

.

ಗುಬ್ಬಿ ಪೊಲೀಸ ಠಾಣಾ ಮೊ ನಂ 197/2020 ಕಲಂ 279 ಐಪಿಸಿ

ದಿನಾಂಕ;13/09/2020 ರಂದು ಮದ್ಯಾಹ್ನ 3-15 ಗಂಟೆಗೆ ಈ ಕೇಸಿನ ಪಿಯರ್ಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;06/09/2020 ರಂದು  ರಾತ್ರಿ  ಪಿರ್ಯಾದಿ ಬಾಬ್ತು ಕೆ.ಎ-06 ಡಿ-9295 ಟಯೋಟ ಇಟಿಯಾಸ್ ಕಾರಿನಲ್ಲಿ ತುಮಕೂರಿನಿಂದ ದರ್ಮಸ್ಥಳಕ್ಕೆ ಪ್ರವಾಸ ಮಾಡಿ  ದಿ;07/09/2020 ರಂದು ಬೆಳಿಗ್ಗೆ  ದೇವರ ದರ್ಶನ ಮಾಡಿಕೊಂಡು ಇದೇ ದಿನ ಸಂಜೆ  ಹಾಸನ ತಿಪಟೂರು ಮಾರ್ಗವಾಗಿ ಎನ್ ಹೆಚ್ 206 ರಸ್ತೆಯಲ್ಲಿ ಹೊರಟು ಬಿ ಹೆಚ್ ರಸ್ತೆ ಗುಬ್ಬಿ  ಪಟ್ಟಣದ  ಚಚರ್್ ಮುಂಬಾಗ ಅಂದರೆ ದಿ;08/09/2020 ರಂಧು ರಾತ್ರಿ 12-30 ಗಂಟೆ ಸಮಯದಲ್ಲಿ  ಹೋಗುತ್ತಿರುವಾಗ ನಮ್ಮ ಚಾಲಕ ಹನುಮಂತರಾಯ ಹಾಗೂ ಮೂರು ಜನ ಪ್ರಯಾಣಿಕರು  ಇದ್ದು ರಸ್ತೆಯಲ್ಲಿ  ಉಬ್ಬು ಇದ್ದುದ್ದರಿಂದ  ಚಾಲಕನು ವಾಹನವನ್ನು ನಿಯಂತ್ರಣ ಮಾಡಿ  ಮುಂದೆ ಚಲಿಸುತ್ತಿರುವಾಗ ಹಿಂಬಂದಿಯಿಂದ ಬಂದ ಕೆ.ಎ-03 ಎಇ-1208 ನೇ ಮಹೇಂದ್ರ ವೆರಿಟೋ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಬಾಬ್ತು ಕೆ.ಎ-06 ಡಿ-9295 ಟಯೋಟ ಇಟಿಯಾಸ್ ಕಾರಿಗೆ ಗುದ್ದಿನ ಪರಿಣಾಮ ನಮ್ಮ ಕಾರಿನ ಹಿಂಬಾಗ  ಮತ್ತು ಮುಂಬಾಗ ಜಖಂಗೊಂಡಿರುತ್ತೆ. ಅಪಘಾತ ಮಾಡಿದ ಕಾರಿನ ಚಾಲಕ ಉಮೇಶ ಎಂಬುದಾಗಿತ್ತು.  ನಮ್ಮ ಕಾರಿನಲ್ಲಿದ್ದ ಪ್ರಯಾಣಿಕರಿಗಾಗಲಿ ಅಥವಾ ಅಪಘಾತ ಮಾಡಿದ ಕಾರಿನ ಚಾಲಕನಿಗಾಗಲಿ ಯಾವುದೇ ಗಾಯಗಳು ಆಗಿರುವುದಿಲ್ಲ. ಸದರಿ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ದೂರಿನ ಅಂಶ

ಚಿನಾಹಳ್ಳಿ ಪೊಲೀಸ್ ಠಾಣಾ ಮೊ. ನಂ. 95/2020 ಕಲಂ 420 ಐಪಿಸಿ

ದಿನಾಂಕ:- 13/09/2020 ರಂದು ಸಂಜೆ 04.30 ಗಂಟೆಗೆ ಪಿರ್ಯಾದುದಾರರಾದ ವಿವೇಕಾನಂದಸ್ವಾಮಿ ಬಿನ್ ಲೇಟ್ ರಾಮೇಗೌಡ, ಸುಮಾರು 60 ವರ್ಷ, ಲಿಂಗಾಯಿತರು, ಅಡಿಕೆ ಮತ್ತು ಕೊಬ್ಬರಿ ವ್ಯಾಪಾರ, ನಡುವನಹಳ್ಳಿ, ಶೆಟ್ಟಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕೊಬ್ಬರಿ ವರ್ತಕನಾಗಿದ್ದು, ಕೊಬ್ಬರಿಯನ್ನು ನಮ್ಮಿಂದ ಹೊರರಾಜ್ಯಗಳಿಗೆ ರವಾನೆ ಮಾಡುವುದು ಮತ್ತು ವ್ಯವಹರಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಅದರಂತೆ ನಾನು ಮತ್ತು ಸ್ನೇಹಿತನಾದ ತಿಪಟೂರು ವಾಸಿ ಜಿತೇಂದ್ರ (ಹರಿಪ್ರಿಯ ಟ್ರೇಡರ್ಸ್ ಮಾಲೀಕ) ಇಬ್ಬರೂ ಸೇರಿ, ಸೂರತ್, ಗುಜರಾತ್ ರಾಜ್ಯದಲ್ಲಿರುವ ಜಗದಾಂಬ ಟ್ರೇಡಿಂಗ್ ಮಾಲೀಕನಾದ ಜಬರಾಮ್ ಪಂಚಾರಾಮ್ ಪ್ರಜಾಪತಿ @ ಜಗದೀಶ್ ಬಿನ್ ಪಂಚಾರಾಮ್ ಪ್ರಜಾಪತಿ ಮತ್ತು ಇವರ ಸಹೋದರರಾದ ಕುಂಬಾರಾಮ್ ಪಂಚಾರಾಮ್ ಪ್ರಜಾಪತಿ @ ಕಮಲೇಶ್ ಬಿನ್ ಪಂಚಾರಾಮ್ ಪ್ರಜಾಪತಿ, ಇನ್ನೊಬ್ಬ ಸಹೋದರರಾದ ಕಹನಾರಾಮ್ ಪಂಚಾರಾಮ್ ಪ್ರಜಾಪತಿ @ ಕಿಶನ್ ಬಿನ್ ಪಂಚಾರಾಮ್ ಪ್ರಜಾಪತಿ, ವಾಸಸ್ಥಳ: #18, ಪರೋಹಿತ್ ಕವಾಸ್, ವಟೇರ ಗ್ರಾಮ, ಬಗೋಡ ಪೆಶೀಲ, ಜಲೋರ್ ಜಿಲ್ಲೆ, ರಾಜಸ್ತಾನ ರಾಜ್ಯ - 343001 ಎಂಬುವವರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಶೆಟ್ಟಿಕೆರೆ ಹೋಬಳಿ, ನಡುವನಹಳ್ಳಿ ಗ್ರಾಮದಿಂದ ಕೊಬ್ಬರಿ ಕೊಡುವುದು ಮತ್ತು ಅವರಿಂದ ಹಣ ಪಡೆಯುವುದು, ವ್ಯವಹಾರ ನಡೆದಿದ್ದು, ದಿನಾಂಕ: 25/06/2020, 07/07/2020, 24/07/2020, 28/07/2020, 05/08/2020, 06/08/2020, 10/08/2020, 20/08/2020, 29/08/2020 ರಂದು ವ್ಯವಹಾರ ನಡೆಸಿದ್ದು, ಈ ಪೈಕಿ 94,23,566/- ರೂ. ಬೆಲೆಯ ಮಾಲನ್ನು ಪಡೆದಿದ್ದು, ಇದರಲ್ಲಿ 66,44,570/- ರೂ. ಗಳನ್ನು ನೀಡಿದ್ದು, ಉಳಿದ ಬಾಕಿ ಹಣ 27,76,989/- ರೂ. ಗಳನ್ನು ನನಗೆ ಹಾಗೂ ನನ್ನ ಸ್ನೇಹಿತನಾದ ಹರಿಪ್ರಿಯ ಟ್ರೇಡರ್ಸ್ ಮಾಲೀಕನಾದ ಜಿತೇಂದ್ರ ರವರಿಗೆ 13,62,000/- ರೂ. ಗಳನ್ನು ಕೊಡಬೇಕಾಗಿದ್ದು, ನಮಗೆ ಬರಬೇಕಾದ ಹಣವನ್ನು ಕೊಡದೇ ಈಗ್ಗೆ ಒಂದು ವಾರದಿಂದ ನಮಗೆ ಫೋನ್ ಮಾಡದೇ ನಾವು ಮಾಡಿದ ಫೋನ್ ಕರೆ ಸ್ವೀಕರಿಸದೇ ಸ್ವಿಚ್ ಆಫ್ ಮಾಡಿರುತ್ತಾರೆ. ಅವರ ಫೋನ್ ನಂಬರ್ 9998190640 ಆಗಿರುತ್ತದೆ. ಇದರಿಂದ ನಮ್ಮ ವ್ಯವಹಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಈ ರೀತಿ ನಮ್ಮನ್ನು ನಂಬಿಸಿ, ನಮ್ಮಿಂದ ಕೊಬ್ಬರಿಯನ್ನು ತೆಗೆದುಕೊಂಡು ಹೋಗಿ, ಹಣ ನೀಡದೇ ಇದ್ದು, ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ಬರಬೇಕಾದ ಹಣವನ್ನು ಕೊಡಿಸಿಕೊಡಬೇಕೆಂದು ಕೋರುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ಪಡೆದು ಠಾಣಾ ಮೊ. ನಂ. 95/2020 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ಘಟನೆಗಳು 13-09-20

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 128/2020 ಕಲಂ 66(ಸಿ)(ಡಿ) ಐ.ಟಿ ಆಕ್ಟ್ ಕಲಂ 419, 420 ಐಪಿಸಿ

ದಿನಾಂಕ: 12/09/2020 ರಂದು ಪಿರ್ಯಾದಿ ಪ್ರಜ್ವಲ್ ಕುಮಾರ್  ಬಿನ್ ರವಿಕುಮಾ್ 20 ವರ್ಷ ವಿಶ್ವಕರ್ಮ ಜನಾಂಗ, ದೇವನೂರು  ವಿಜಯನಗರ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿ:08/09/2020 ರಂದು ಬೆಳಗ್ಗೆ 10:52 ಗಂಟೆ ಸಮಯದಲ್ಲಿ ಬ್ಯಾಂಕ್ ಅಧಿಕಾರಿ, ಶಾಪ್ ಕ್ಲೂಸ್ ಶಾಪಿಂಗ್ PVT Ltd Mr Akash Y customer  representative ಎಂದು ಹೇಳಿಕೊಂಡು ನನ್ನ ಮೊಬೈಲ್ ಗೆ 919051857025 ನಿಂದ ಕರೆ ಬಂದಿರುತ್ತದೆ. ನಾನು ನಿಮಗೆ ಲಕ್ಕಿ ಡ್ರಾನಲ್ಲಿ 2nd prize Switt Drive ಕಾರು ಬಂದಿರುತ್ತದೆ. ನಿಮಗೆ ಕಾರು ಬೇಕೊ ಅಥವಾ ಹಣ ಬೇಕೊ ಎಂದು ಹೇಳಿರುತ್ತಾರೆ. ನಾನು ನನಗೆ ಹಣ ಬೇಕು ಎಂದು ಹೇಳಿದೆ ಅವರು ನೀವು Government Tax ಕಟ್ಟಬೇಕು ಎಂದು ಹೇಳಿದರು ನಾನು ಹಂತಹಂತವಾಗಿ 8,600/-, 10,000/-, 10,000/-, 8,000/-, 10,000/- ಕಟ್ಟಿದ ಮೇಲೆ  5,000/- ಕಟ್ಟಬೇಕು ಎಂದು ಹೇಳಿದರು ನಾನು ಅದೇ ದಿನ ಮೊಬೈಲ್ ಅಂಗಡಿಯಲ್ಲಿ 10,000/- ರೂ ಗಳನ್ನು ಕೂಡ ಅವರ ಅಕೌಂಟ್ ಗೆ ಹಾಕಿಸಿರುತ್ತೇನೆ. 46,000/- ರೂ ಗಳನ್ನು ನನ್ನ Kotak Mahindra Bank ಖಾತೆ ಸಂಖ್ಯೆ 2913140880 ನಿಂದ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 39567137811 ಗೆ ಹಣವನ್ನು ವರ್ಗಾವಣೆ ಮಾಡಿರುತ್ತೇನೆ. ನನಗೆ ಬಂದಿರುವ ದೂರವಾಣಿ ಕರೆಗಳ ಸಂಖ್ಯೆ 915051257025, 9432591407, 9635406542, 9830916460 ಗಳಿಂದ ನನ್ನ ಮೊಬೈಲ್ ಸಂಖ್ಯೆ 9663957306 ಗೆ ಕರೆ ಬಂದಿರುತ್ತದೆ. ನಾನು ಅವರಿಗೆ 8 ಲಕ್ಷದ 60 ಸಾವಿರ ರೂ ಹಣ ಕೊಡಿ ಎಂದು ಕೇಳಿದ್ದಕ್ಕೆ ಅವರು ನಿನ್ನ ಖಾತೆಗೆ ಹಣ ಬರಬೇಕೆಂದರೆ 8,600/- ರೂ ಗಳನ್ನು ಅಕೌಂಟ್ ನಲ್ಲಿ Deposit ಮಾಡಿಕೊಳ್ಳುವಂತೆ ತಿಳಿಸಿ ಪದೆ ಪದೆ ಕರೆ ಮಾಡುತ್ತಿರುತ್ತಾರೆ. ನಾನು ಅವರಿಗೆ ಕಳುಹಿಸಿರುವ ಒಟ್ಟು ಮೊತ್ತ 56,600/- ರೂಗಳು. ಆದ್ದರಿಂದ ನನಗೆ ವಂಚಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಪಿರ್ಯಾದು ಪಡೆದು  ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 128/2020 ಕಲಂ 66(ಸಿ)(ಡಿ) ಐ.ಟಿ ಆಕ್ಟ್ ಕಲಂ 419, 420  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 129/2020 ಕಲಂ 15(), 32(3) ಕೆ. ಆಕ್ಟ್

ಸಿಇಎನ್ ಪೊಲೀಸ್ ಠಾಣೆ ಗೆ ದಿನಾಂಕ: 12/09/2020 ರಂದು  ಸಂಜೆ6 -00 ಗಂಟೆಗೆ ಠಾಣಾ ಹೆಚ್.ಸಿ-317 ನಾಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 12/09/2020  ರಂದು ಪಿ.ಐ ಸಾಹೇಬರವರ ಆದೇಶದ ಮೇರೆಗೆ ನಾನು  ತುಮಕೂರು ತಾಲ್ಲೂಕ್ ಹೆಬ್ಬೂರು ಹೋಬಳಿ ದಾಸೇಗೌಡನಪಾಳ್ಯದಲ್ಲಿ  ಗಸ್ತು ಮಾಡಿಕೊಂಡಿದ್ದಾಗ, ಬಾತ್ಮೀದಾರರಿಂದ ಬಂದ ಮಾಹಿತಿಯ ಮೇರೆಗೆ ಸಂಜೆ 16-00 ಗಂಟೆಗೆ ದಾಸೇಗೌಡನ ಪಾಳ್ಯಕ್ಕೆ ಹೋಗಿ ನೋಡಿದಾಗ ನರಸಿಂಹಮೂರ್ತಿ ಬಿನ್ ಗಂಗಣ್ಣ 45 ವರ್ಷ, ವಕ್ಕಲಿಗರು, ಅಂಗಡಿ ಕೆಲಸ, ರವರ ಅಂಗಡಿ ಮುಂಬಾಗ ಮದ್ಯ ಕುಡಿಯುವವರಿಗೆ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು,ಅಂಗಡಿ ಮಾಲೀಕ ನರಸಿಂಹಮೂರ್ತಿ ಮತ್ತು  ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುದ್ದವರು ಓಡಿ ಹೋಗಿದ್ದು, ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಠಾಣೆಗೆ ಬಂದು ಪಂಚನಾಮೆ, ಮಾಲು ಹಾಗೂ ಆರೋಪಿಯೊಂದಿಗೆ ನೀಡಿದ ವರದಿಯನ್ನು ಪಡೆದು . ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 129/2020 ಕಲಂ 15(ಎ), 32(3)   ಕೆ.ಇ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 130/2020 ಕಲಂ 15(ಎ), 32(3) ಕೆ.ಇ ಆಕ್ಟ್

ಸಿಇಎನ್ ಪೊಲೀಸ್ ಠಾಣೆ ಗೆ ದಿನಾಂಕ: 12/09/2020 ರಂದು  ಸಂಜೆ6 -45 ಗಂಟೆಗೆ ಠಾಣಾ ಹೆಚ್.ಸಿ-317 ನಾಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 12/09/2020  ರಂದು ಪಿ.ಐ ಸಾಹೇಬರವರ ಆದೇಶದ ಮೇರೆಗೆ ನಾನು  ತುಮಕೂರು ತಾಲ್ಲೂಕ್ ಹೆಬ್ಬೂರು ಹೋಬಳಿ ಹನುಮಂತ ನಗರದಲ್ಲಿ  ಗಸ್ತು ಮಾಡಿಕೊಂಡಿದ್ದಾಗ, ಬಾತ್ಮೀದಾರರಿಂದ ಬಂದ ಮಾಹಿತಿಯ ಮೇರೆಗೆ ಸಂಜೆ 17-00 ಗಂಟೆಗೆ ದಾಸೇಗೌಡನ ಪಾಳ್ಯಕ್ಕೆ ಹೋಗಿ ನೋಡಿದಾಗ ಗುರುನಾಥ ಬಿನ್ ಬಿಜಿ ರಂಗನಾಥ, 38 ವರ್ಷ, ವಕ್ಕಲಿಗರು ಹನುಮಂತ ನಗರ ಹಬ್ಬೂರು ಹೋಬಳಿ ತುಮಕೂರು, ರವರು ಅವರ ಅಂಗಡಿ ಮುಂಬಾಗ ಮದ್ಯ ಕುಡಿಯುವವರಿಗೆ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು,ಅಂಗಡಿ ಮಾಲೀಕ ಗುರುನಾಥ ಮತ್ತು  ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುದ್ದವರು ಓಡಿ ಹೋಗಿದ್ದು, ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಠಾಣೆಗೆ ಬಂದು ಪಂಚನಾಮೆ, ಮಾಲು ಹಾಗೂ ಆರೋಪಿಯೊಂದಿಗೆ ನೀಡಿದ ವರದಿಯನ್ನು ಪಡೆದು . ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 130/2020 ಕಲಂ 15(ಎ), 32(3)   ಕೆ.ಇ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 

ಹಂದನಕೆರೆ ಪೊಲೀಸ್ ಠಾಣಾ ಮೊ.ನಂ:91/2020 ಕಲಂ:279,337 ಐಪಿಸಿ ರೆ/ವಿ 187 ಐಪಿಸಿ

ದಿನಾಂಕ:11/09/2020 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ಪಿರ್ಯಾದಿ ತಂದೆ ಬಸವರಾಜು ಎಂ ರವರು ತಮ್ಮ ಜಮೀನಿನ ಬಳಿ ಹೋಗಿ ವಾಪಸ್ ಊರಿಗೆ ಬರಲು ಕೆಮ್ಮಣ್ಣುಗುಂಡಿ ಮತ್ತು ಯಳ್ಳೇನಹಳ್ಳಿ ಮಾರ್ಗದ  ಮದ್ಯ ರಸ್ತೆಯಲ್ಲಿ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದವರು ಅದೇ ಮಾರ್ಗದ ಬರುವ ಯಳ್ಳೇನಹಳ್ಳಿ ಗೌರಮ್ಮ ರವರ ಜಮೀನಿನ ನೇರದ ರಸ್ತೆಯಲ್ಲಿ  ಎಡಬದಿಯಲ್ಲಿ ನಿಂತುಕೊಂಡು ಜಮೀನಿನ ಕಡೆಗೆ ನೋಡುತ್ತಿರುವಾಗ ಹಿಂದಿನಿಂದ ಬಂದ ಅಂದರೆ ಮತ್ತಿಘಟ್ಟ ಕಡೆಯಿಂದ ಬಂದ ಕೆಎ-06 ಹೆಚ್ಎಫ್-9795 ನೇ ಸ್ಕೂಟಿಯ ಚಾಲಕ ಅತಿವೇಗವಾಗಿ ಬಂದು ಅಪಘಾತಪಡಿಸಿ ಬಸವರಾಜು ಎಂ ರವರ ಬೆನ್ನುಮೂಳೆಗೆ ಏಟು ಮಾಡಿದ್ದರಿಂದ ಬಸವರಾಜು ಎಂ ರವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಹೇಮಾವತಿಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ದಾಖಲಿಸಿ ಈ ದಿನವರೆವಿಗೂ ಪಿರ್ಯಾದಿ ತಂದೆಯನ್ನು ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ  ಈ ದಿನ ತಡವಾಗಿ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 44 guests online
Content View Hits : 899278
Hackguard Security Enabled