lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30        
September 2020

Monday, 21 September 2020

ಅಪರಾಧ ಘಟನೆಗಳು 21-09-20

ದಂಡಿನಶಿವರ ಠಾಣಾ ಸಿಆರ್ ನಂ 38/2020 ಕಲಂ 279,337 ಐಪಿಸಿ

ದಿನಾಂಕ:20-09-2020 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿ ತುರುವೇಕೆರೆ ತಾಲೋಕ್, ಕಸಬ ಹೋಬಳಿಯ ಅರಳೀಕೆರೆ ಗ್ರಾಮದ ಎ.ಎಸ್.ಚಂದ್ರಶೇಖರ್ ಬಿನ್ ಲೇ.ಶಿವಲಿಂಗಪ್ಪ, 43 ವರ್ಷ, ಲಿಂಗಾಯಿತರು, ಜಿರಾಯ್ತಿ ಆದ ನಾನು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ದಿನಾಂಕ:18-09-2020 ರಂದು ನಾನು ನಮ್ಮೂರಿನಿಂದ ದಂಡಿನಶಿವರ ಹೋಬಳಿಯ ಮಾಚೇನ ಹಳ್ಳಿ ಗ್ರಾಮದ ನನ್ನ ಚಿಕ್ಕಪ್ಪನಾದ ಜಯಶಂಕರಸ್ವಾಮಿ ಬಿನ್ ಲೇ.ಮರಿಬಸಪ್ಪ ಇವರ ಮನೆಗೆ ಹೋಗಿದ್ದೆನು.  ನಂತರ ಅದೇ ದಿನ ದಿನಾಂಕ:18-09-2020 ರಂದು ಸಾಯಂಕಾಲ ನನ್ನ ಚಿಕ್ಕಪ್ಪನ ತೋಟಕ್ಕೆ ಹೋಗಿ ಬರಲು ಅವರ ಬಾಬ್ತು ಕೆಎ-44-ಎಕ್ಸ್-1155ರ ಹೀರೊ ಪ್ಯಾಸನ್ ದ್ವಿಚಕ್ರ ವಾಹನದಲ್ಲಿ ನಾನು ಚಾಲಕನಾಗಿಯೂ, ಹಿಂಬದಿ ಸವಾರರಾಗಿ ನಮ್ಮ ಚಿಕ್ಕಪ್ಪ ಜಯಶಂಕರಸ್ವಾಮಿ ಇವರನ್ನು ಕುಳ್ಳಿರಿಸಿಕೊಂಡು ಮಾಚೇನಹಳ್ಳಿಯಿಂದ ಕೊಪ್ಪ ಗ್ರಾಮದ ಸಮೀಪ ಇರುವ ತೋಟದ ಬಳಿಗೆ ಹೋಗಲು ರಾಯಸಂದ್ರ ಗ್ರಾಮದಿಂದ ಸ್ವಲ್ಪ ಮುಂದೆ ಸುಮಾರು 500 ಮೀ.ಅಂತರದಲ್ಲಿ  ಸಾಯಂಕಾಲ 5-30 ಗಂಟೆ ಸಮಯದಲ್ಲಿ ರಸ್ತೆಯ ಎಡಪಕ್ಕ ನಾನು ಮತ್ತು ನಮ್ಮ ಚಿಕ್ಕಪ್ಪ ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಅಂದರೆ ಕೊಪ್ಪ ಕಡೆಯಿಂದ ಮಾಚೇನಹಳ್ಳಿ ಕಡೆಗೆ ಒಬ್ಬ ವ್ಯಕ್ತಿ ತನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾವು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಅಪಘಾತಪಡಿಸಿದ ವ್ಯಕ್ತಿಯು ಮಾಚೇನಹಳ್ಳಿಯ ಎಂ.ಜಿ.ವೆಂಕಟೇಶಯ್ಯ ಬಿನ್ ಗಿರಿಯಪ್ಪ ಆಗಿದ್ದರು. ಅಪಘಾತಪಡಿಸಿದ ದ್ವಿಚಕ್ರ ವಾಹನ ನೋಡಲಾಗಿ ಕೆಎ-44-ಕೆ-3556ನೇ ಹೀರೊಹೋಂಡ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವಾಗಿತ್ತು. ಅಪಘಾತದಲ್ಲಿ ನನ್ನ ಚಿಕ್ಕಪ್ಪನ ಬಲಗಾಲಿನ ಮಂಡಿಗೆ ಪೆಟ್ಟು ಬಿದ್ದು ನೋವಾಗಿರುತ್ತೆ. ಎಡಕಣಕಾಲು ಮತ್ತು ಬಲ ಮೊಣಕೈ ನಲ್ಲಿ ತರಚಿದ ಗಾಯವಾಗಿತ್ತು. ನನಗೂ ಸಹ ಮೂಗೇಟಾಗಿತ್ತು. ಇಬ್ಬರೂ ಯಾವುದೇ ಚಿಕಿತ್ಸೆ ಪಡೆಯದೆ ಮನೆಗೆ ವಾಪಸ್ ಬಂದೆವು.  ರಾತ್ರಿ ತುಂಬಾ ನೋವು ಜಾಸ್ತಿಯಾಗುತ್ತಿದೆ ಎಂದು ನನ್ನ ಚಿಕ್ಕಪ್ಪ ಹೇಳುತ್ತಿದ್ದು ಬೆಳಿಗ್ಗೆ ಹೊತ್ತಿಗೆ ಬಲಗಾಲು ತುಂಬಾ ಊತ ಬಂದಿದ್ದರಿಂದ ನನ್ನ ಚಿಕ್ಕಪ್ಪನಾದ ಜಯಶಂಕರಸ್ವಾಮಿ ರವರನ್ನು ಯಾವುದೋ ಒಂದು ಬಾಡಿಗೆ ಕಾರಿನಲ್ಲಿ ತುಮಕೂರಿನ ಎಂ.ಸಿ ಮೂಳೆ ಮತ್ತು ಕೀಲು ಆಸ್ಪತ್ರೆಗೆ ಸಾಗಿಸಿ ದಿನಾಂಕ:19-09-2020 ರಂದು ಚಿಕಿತ್ಸೆಗೆ ಸೇರಿಸಿರುತ್ತೇನೆ. ಈಗಲೂ ಸಹ ನನ್ನ ಚಿಕ್ಕಪ್ಪ ತುಮಕೂರಿನ ಎಂ.ಸಿ ಮೂಳೆ ಮತ್ತು ಕೀಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಮೂಗೇಟಾಗಿದ್ದು ನಾನು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ನನ್ನ ಚಿಕ್ಕಪ್ಪನನ್ನು ನೋಡಿಕೊಳ್ಳಲು ಯಾರೂ ಇಲ್ಲದ ಪ್ರಯುಕ್ತ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಈ ದಿನ ತಡವಾಗಿ ಬಂದು ದೂರು ಕೊಡುತ್ತಿದ್ದೇನೆ. ಈ ಅಪಘಾತಕ್ಕೆ ಕಾರಣವಾದ ತುರುವೇಕೆರೆ ತಾಲೋಕ್, ದಂಡಿನಶಿವರ ಹೋಬಳಿ, ಮಾಚೇನಹಳ್ಳಿ ಗ್ರಾಮದ ವೆಂಕಟೇಶಯ್ಯ ಬಿನ್ ಗಿರಿಯಪ್ಪ ಕೆಎ-44-ಕೆ-3556ರ ದ್ವಿಚಕ್ರ ವಾಹನದ ಚಾಲಕ ರವರ ಮೇಲೆ ಕಾನೂನೂ ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಮೊನಂ, 85/2020 ಕಲಂ.279.304(ಎ).ಐಪಿಸಿ.

ದಿನಾಂಕ-20-09-2020 ರಂದು ಬೆಳಿಗ್ಗೆ 09-30 ಗಂಟೆಗೆ ಲೋಕೇಶ ಬಿನ್ ಚಂದ್ರಶೇಖರಯ್ಯ. 44 ವರ್ಷ, ಜಿರಾಯ್ತಿ, ಲಿಂಗಾಯಿತ ಜನಾಂಗ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ, ನಮ್ಮ ಚಿಕ್ಕಪ್ಪ ಶಿವಕುಮಾರ ಸ್ವಾಮಿ ರವರಿಗೆ ಇಬ್ಬರು ಮಕ್ಕಳು ಮೊದಲೇಯವನು ದೇವರಾಜು ಎರಡನೇಯವರು ಕವಿತಾ  ಅವರನ್ನು ಮದುವೆ ಮಾಡಿ ಕೊಟ್ಟಿರುತ್ತಾರೆ ನಮ್ಮ ಚಿಕ್ಕಪ್ಪ ಶಿವಕುಮಾರಸ್ವಾಮಿರವರು ಸುಮಾರು 08 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ನಮ್ಮ ಚಿಕ್ಕಪ್ಪನ ಮಗ  ದೇವರಾಜುರವರು ವ್ಯವಸಾಯ ಮಾಡಿಕೊಂಡು ನಮ್ಮ ಚಿಕ್ಕಮ್ಮ ಸುವರ್ಣಮ್ಮ ರವರೊಂದಿಗೆ ಊರಿನಲ್ಲಿ ವಾಸವಾಗಿರುತ್ತಾರೆ, ನಾನು ನಮ್ಮ ಚಿಕ್ಕಪ್ಪರವರ  ಮನೆಯ ಪಕ್ಕದಲ್ಲಿಯೇ ನನ್ನ ಸಂಸಾರದೊಂದಿಗೆ ವಾಸವಾಗಿರುತ್ತೇನೆ, ದೇವರಾಜು ರವರು ದಿನಾಂಕ-19-09-2020 ರಂದು ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ ಬಿದರೆಗುಡಿಯಲ್ಲಿ ವಾಸವಾಗಿರುವ ಅವನ ಸ್ನೇಹಿತ ಮಂಜುನಾಥ ರವರನ್ನು ನೋಡಿಕೊಂಡು ವಾಪಸ್  ಬರುತ್ತೇನೆಂದು ಹೇಳಿ  ಅವನ ಬಾಬ್ತು ಕೆಎ-44-ಆರ್-9791 ನೇ ನಂಬರ್ ನ  ಟಿ,ವಿ,ಎಸ್  ಎಕ್ಸ್ ಎಲ್ ಸೂಪರ್ ಬೈಕಿನಲ್ಲಿ ಹೊರಟು ಹೋದ ಇದೇ ದಿನ ರಾತ್ರಿ ಸುಮಾರು 10-30  ಗಂಟೆ ಸಮಯದಲ್ಲಿ ನನ್ನ ಮೊಬೈಲ್ ಗೆ ಮಾದಿಹಳ್ಳಿ ಗ್ರಾಮದ ಸಿದ್ದರಾಮಯ್ಯ ರವರು ಪೋನ್ ಮಾಡಿ ನಿಮ್ಮ ಚಿಕ್ಕಪ್ಪನ ಮಗ ದೇವರಾಜು ರವರು ತನ್ನ ದ್ವಿ ಚಕ್ರ ವಾಹನದಲ್ಲಿ ಬೆಂಗಳೂರು-ಹೊನ್ನವರ  ಎನ್, ಹೆಚ್ -206 ರಸ್ತೆಯ ಮತ್ತಿಹಳ್ಳಿ ಗೊಲ್ಲರಹಟ್ಟಿ ಗೇಟ್ ಬಳಿ ಅರಸೀಕೆರೆ ಕಡೆಗೆ ರಸ್ತೆಯ ಎಡ ಬದಿಯಲ್ಲಿ  ಹೋಗುತ್ತಿರುವಾಗ   ಎದರುಗಡೆ ಅಂದರೇ ಅರಸೀಕೆರೆ ಕಡೆಯಿಂದ ಒಬ್ಬ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗವಾಗಿ  ಓಡಿಸಿಕೊಂಡು ಬಂದವನೇ  ನಿಮ್ಮ ತಮ್ಮನ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ನಿಂದ ನಿಮ್ಮ   ತಮ್ಮ  ದೇವರಾಜು ರಸ್ತೆಯ ಮೇಲೆ ಬಿದ್ದು ತಲೆಗೆ ಮತ್ತು ದೇಹದ ಮತ್ತಿತರ ಕಡೆಗೆ  ತೀವ್ರ ತರಹದ ಪೆಟ್ಟುಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಪಘಾತಪಡಿಸಿದ ಕಾರ್ ನಂಬರ್ ನೋಡಲಾಗಿ ಕೆಎ-22-ಪಿ-8431 ನೇ ನಂಬರ್ ಮಾರುತಿ ಸುಜುಕಿ ರಿಡ್ಜ್  ಕಾರ್   ಆಗಿದ್ದು ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ  ನಾವು ಮೃತ ದೇಹವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು  ಹೋಗುತ್ತಿದ್ದೇವೆಂದು ತಿಳಿಸಿದ್ದರು ನಂತರ ನಾನು ಗಾಬರಿಯಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮ ದೇವರಾಜರವರ  ಮೃತ ದೇಹವು ಶವಗಾರದಲ್ಲಿತ್ತು ಆದ್ದರಿಂದ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ನನ್ನ ತಮ್ಮ ಬೈಕಿಗೆ ಅಪಘಾತಪಡಿಸಿ ಅವನ ಸಾವಿಗೆ ಕಾರಣವಾಗಿರುವ  ಕೆಎ-22-ಪಿ-8431 ನೇ ನಂಬರ್ ಮಾರುತಿ ಸುಜುಕಿ ರಿಡ್ಜ್  ಕಾರಿನ ಚಾಲಕನ ವಿರುದ್ದ  ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ದೂರು ನೀಡಿರುತ್ತೇನೆ. ಮೃತದೇಹವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ, ನಾನು ನಮ್ಮ ಸಂಬಂಧಿಕರಿಗೆ ಈ ವಿಷಯವನ್ನು ತಿಳಿಸಿ ಈ ದಿನ ತಡವಾಗಿ ಬಂದು ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ಸಿ.ಎಸ್.ಪುರ  ಠಾಣಾ  ಮೊ.ನಂ: 85/2020, ಕಲಂ: 279.337 ಐಪಿಸಿ

ದಿ:20.09.2020 ರಂದು ಈ ಕೇಸಿನ  ಫಿರ್ಯಾದಿಯಾದ  ನಾಗರಾಜು ಬಿನ್  ಲೇಟ್ ಸಣ್ಣ ಬೆಟ್ಟಯ್ಯ, 35 ವರ್ಷ, ಹಳ್ಳಿಕಾರ  ಜನಾಂಗ, ಹರಿದೇವನಹಳ್ಳಿ ಗ್ರಾಮ, ಕಡಬಾ ಹೋಬಳಿ, ಗುಬ್ಬಿ ತಾಲ್ಲೂಕುರವರು  ನೀಡಿದ  ದೂರಿನ  ಸಾರಾಂಶವೆಂದರೆ, ದಿನಾಂಕ:16/09/2020 ರಂದು  ಸಂಜೆ 5.30 ಗಂಟೆ ಸಮಯದಲ್ಲಿ  ನನ್ನ ಮಗನಾದ  ಯಶಸ್ ರವರು  ಸೈಕಲ್ಲಿನಲ್ಲಿ  ತೋಟಕ್ಕೆ  ಹೋಗಿ ಜೋಳದ ಕಡ್ಡಿ ತರಲು  ಕಲ್ಲೂರು-ಕಲ್ಲೂರು ಕ್ರಾಸ್ ರಸ್ತೆಯ  ತಿಮ್ಮೇಗೌಡರವರ  ಜಮೀನಿನ  ಹತ್ತಿರ  ಹೋಗುವಾಗ  ವ್ಯಾಗನಾರ್  ಕಾರ್ ನಂ. ಕೆ.ಎ.44.ಎಂ.5937  ಚಾಲಕ   ಅತಿ ವೇಗ & ಅಜಾಗರುಕತೆಯಿಂದ ಬಂದು  ಸೈಕಲ್ಲಿನಲ್ಲಿ ಹೋಗುತಿದ್ದ  ನನ್ನ ಮಗನಿಗೆ ಡಿಕ್ಕಿ ಹೊಡೆಸಿದ , ಇದನ್ನು ಅಲ್ಲೆ  ಇದ್ದ  ಹೆಚ್,ಬಿ ರಾಜಣ್ಣ ರವರು ನೋಡಿ ನನಗೆ ಪೋನ್ ಮಾಡಿದರು,  ನನ್ನ ಮಗನಿಗೆ ಎಡಗಾಲಿಗೆ , ಎಡಕೈಗೆ  &  ತಲೆಗೆ ತೀರ್ವತರದ ರಕ್ತಗಾಯವಾಗಿರುತ್ತದೆ.  ನನ್ನ ಮಗನನ್ನು ಹೆಚ್.ಬಿ ರಾಜಣ್ಣರವರೇ ತುಮಕೂರಿನ ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂದು  ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಮೊ.ನಂ.58/2020 ಕಲಂ ಮನುಷ್ಯ ಕಾಣೆ.

ದಿನಾಂಕ:-20.09.2020 ರಂದು ಸಂಜೆ 05.00 ಗಂಟೆಗೆ ಪಿರ್ಯಾದಿಯಾದ ಅಬ್ದುಲ್ ಖಾದರ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ, ಪಿರ್ಯಾದಿಯ ತಮ್ಮನಾದ 25 ವರ್ಷದ ಅಬ್ದುಲ್ ಗಪಾರ್ @ ಶಾಬಾಜ್‌ ರವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ದಿನಾಂಕ:-22.08.2020 ರಂದು ಬೆಳಿಗ್ಗೆ 09.30 ಗಂಟೆ ಸುಮಾರಿನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೋದವನು ಈವರೆವಿಗೂ ಮನೆಗೆ ಬಂದಿರುವುದಿಲ್ಲ. ನಾವುಗಳು ಎಲ್ಲಾ ಕಡೆ ಹುಡುಕಾಡಿದೆವು ಎಲ್ಲಿಯೂ ಸಿಕ್ಕಿರುವುದಿಲ್ಲ. ಸದರಿಯವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಯುಡಿಆರ್ 18/2020 ಕಲಂ 174 (3) & (iv) ಸಿಆರ್ ಪಿಸಿ

ದಿನಾಂಕ:20/09/2020 ರಂದು ಮಧ್ಯಾಹ್ನ 12-15 ಗಂಟೆಯಲ್ಲಿ ಪಿರ್ಯಾದಿ ನರಸಮ್ಮ ಕೋಂ ಅನಂತ, 35 ವರ್ಷ, ಎ.ಕೆ ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ರೆಡ್ಡಿಹಳ್ಳಿ ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ಸುಮಾರು 16 ವರ್ಷಗಳ ಹಿಂದೆ ನನ್ನನ್ನು ಮಧುಗಿರಿ ತಾಲ್ಲೂಕ್, ಮಿಡಿಗೇಶಿ ಹೋಬಳಿ, ನೀರಕಲ್ಲು ಗ್ರಾಮದ ಸಿದ್ದನರಸಿಂಹಯ್ಯ ಮತ್ತು ಅಂಜಮ್ಮಳ ಮಗಳಾದ ನನ್ನನ್ನು ಮಧುಗಿರಿ ತಾಲ್ಲೂಕ್, ಕೊಡಿಗೇನಹಳ್ಳಿ ಹೋಬಳಿ, ರೆಡ್ಡಿಹಳ್ಳಿಯಲ್ಲಿರುವ ನಮ್ಮ ಜಾತಿಯ ಕಂಬಯ್ಯ ಮತ್ತು ನಿಂಗಮ್ಮನವರ ಮಗನಾದ ಅನಂತನಿಗೆ ಕೊಟ್ಟು ಮದುವೆ ಮಾಡಿದ್ದು, ಈಗ ನನಗೆ ಇಬ್ಬರು ಹೆಣ್ಣು ಮತ್ತು ಗಂಡು ಮಗನಿರುತ್ತಾನೆ. ಮದುವೆಯಾದಾಗಿನಿಂದ ನನ್ನ ಗಂಡ ಅನಂತನಿಗೆ ಮೂರ್ಛೆ ರೋಗ ಬರುತ್ತಿದ್ದು, ಸದರಿಯವರು ಎಲ್ಲಂದರಲ್ಲಿ ಮೂರ್ಛೆ ರೋಗದಿಂದ ಬಿದ್ದು ಹೋಗುತ್ತಿದ್ದು, ಯಾವುದೇ ಕೆಲಸ ಮಾಡುವುದಕ್ಕೆ ಆಗುತ್ತಿರುವುದಿಲ್ಲ. ನಾನು ನನ್ನ ಜೀವನೋಪಯಕ್ಕಾಗಿ ಸುಮಾರು 05 ವರ್ಷಗಳಿಂದ ಬೆಂಗಳೂರು ನಗರದ ಬಾಗಲುಕುಂಟೆಯಲ್ಲಿರುವ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ನಾನು ವಾರಕ್ಕೆ ಒಂದು ಸಾರಿ, ಹದಿನೈದು ದಿನಕ್ಕೆ ಒಂದು ಸಾರಿ ಬೆಂಗಳೂರು ನಗರದಿಂದ ರೆಡ್ಡಿಹಳ್ಳಿಗೆ ಬಂದು ನನ್ನ ಗಂಡ ಅನಂತನನ್ನು ನೋಡಿಕೊಂಡು ಬೆಂಗಳೂರು ನಗರಕ್ಕೆ ಹೋಗುತ್ತಿದ್ದೆನು. ದಿನಾಂಕ:19/09/2020 ರಂದು ಸಂಜೆ ಸುಮಾರು 06-00 ಗಂಟೆಯಲ್ಲಿ ನಾನು ರೂಂನಲ್ಲಿದ್ದಾಗ ಕೊಡಿಗೇನಹಳ್ಳಿ ಹೋಬಳಿ, ರೆಡ್ಡಿಹಳ್ಳಿ ಗ್ರಾಮದ ನಮ್ಮ ಜಾತಿಯ ನರಸಪ್ಪನು ನನಗೆ ಫೋನ್ ಮಾಡಿ ನಿನ್ನ ಗಂಡ ಅನಂತನು ಸತ್ತು ಹೋಗಿರುತ್ತಾನೆ ಎಂದು ತಿಳಿಸಿರುತ್ತಾನೆ. ದಿನಾಂಕ:20/09/2020 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ನಾನು ಬೆಂಗಳೂರು ನಗರದಿಂದ ರೆಡ್ಡಿಹಳ್ಳಿಗೆ ಹೋಗಿ, ನನ್ನ ಗಂಡನಾದ ಅನಂತನು ಸತ್ತು ಬಿದ್ದಿರುವ, ಕೊಡಿಗೇನಹಳ್ಳಿಯಲ್ಲಿರುವ ಹಿಂದೂಪುರ ರಸ್ತೆಯ ಪಕ್ಕದಲ್ಲಿರುವ ಡಿಷ್ ರೆಡ್ಡಿಯವರ ಸಮುದಾಯ ಭವನದ ಪಕ್ಕದಲ್ಲಿರುವ ಜೋಳದ ಸಪ್ಪೆಯಲ್ಲಿ ಹೊರಗಡೆಗೆ ಹೋಗಿದ್ದಾಗ, ಸದರಿ ಅನಂತನಿಗೆ ಬಂದಿದ್ದ ಮೂರ್ಛೇ ಖಾಯಿಲೆಯಿಂದ ಬಿದ್ದು, ಒದ್ದಾಡಿ ಸತ್ತು ಹೋಗಿರುತ್ತಾನೆ. ಸದರಿಯವನು ಸತ್ತು ಹೋಗಿರುವುದನ್ನು ಸದರಿ ಅನಂತನ ತಂಗಿಯಾದ ಪಾರ್ವತಮ್ಮಳು ನೋಡಿ ಬಂದು ನಮಗೆ ತಿಳಿಸಿರುತ್ತಾಳೆ. ನನ್ನ ಗಂಡ ಅನಂತನ ಸಾವಿನ ಬಗ್ಗೆ ಅನುಮಾನವಿರುವುದರಿಂದ ಮುಂದಿನ ಕಾನೂನು ಕೈಗೊಳ್ಳಬೇಕೆಂದು ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 86/2020 ಕಲಂ 279, 337 304(ಎ) ಐ.ಪಿ.ಸಿ

ದಿನಾಂಕ: 20/09/2020 ರಂದು ಸಂಜೆ-6-30 ಗಂಟೆಗೆ ಪಿರ್ಯಾದಿ ಎಂ.ಆರ್ ಮಂಜುನಾಥ್ ಬಿನ್ ರಾಮಯ್ಯ  41 ವರ್ಷ, ಉಪ್ಪಾರ ಜನಾಂಗ, ಕೆ.ಎಸ್.ಆರ್.ಟಿ.ಸಿ ಡ್ರೈವರ್, ತಿಪಟೂರು ಡಿಪೋ, ಸ್ವಂತ ಊರು: ಮಣಕಿಕೆರೆ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕಳೆದ 10 ವರ್ಷದಿಂದ  ತಿಪಟೂರು ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುತ್ತೇನೆ. ಈ ದಿನ ದಿನಾಂಕ: 20/09/2020 ರಂದು ನನ್ನನ್ನು ಮತ್ತು ನನ್ನ ಜೊತೆ ಕಂಡಕ್ಟರ್ ಆಗಿ ಪಿ.ಎಸ್ ಪರಮೇಶ್ವರಪ್ಪ ಬ್ಯಾಡ್ಜ್ ನಂ-129 ರವರನ್ನು KA-06 F-961ನೇ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಾರ್ಗ ಸಂಖ್ಯೆ: 82 ಕ್ಕೆ ಬೆಂಗಳೂರು-ತಿಪಟೂರು ಮಾರ್ಗದಲ್ಲಿ ನೇಮಕ ಮಾಡಿದ್ದರು. ಅದರಂತೆ ನಾವುಗಳು ಸದರಿ ಬಸ್ಸಿನಲ್ಲಿ ಬೆಳಿಗ್ಗೆ 8-00 ಗಂಟೆಗೆ ತಿಪಟೂರು ಬಸ್ ನಿಲ್ದಾಣ ಬಿಟ್ಟು ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿದ್ದೆವು. ನಂತರ ವಾಪಸ್ ಬೆಳಿಗ್ಗೆ 11-50 ಗಂಟೆಗೆ ಬೆಂಗಳೂರನ್ನು ಬಿಟ್ಟು,  ತುಮಕೂರು ಮಾರ್ಗವಾಗಿ ತಿಪಟೂರಿಗೆ ಎನ್.ಹೆಚ್-206 ರಸ್ತೆಯಲ್ಲಿ ಬರುತ್ತಿರುವಾಗ ಹುಚ್ಚಗೊಂಡನಹಳ್ಳಿ ಸಮೀಪ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 3-45 ಗಂಟೆಯ ಸಮಯದಲ್ಲಿ ಎದುರುಗಡೆ ತಿಪಟೂರು ಕಡೆಯಿಂದ KA-20 MA-3547 ನೇ ಮಹೇಂದ್ರ ಬುಲೆರೋ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ವಾಹನದ ಮುಂಭಾಗ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ರಸ್ತೆಯ ಎಡಗಡೆಯಿಂದ ಬಲಬದಿಗೆ ಬಂದು ನಮ್ಮ ಬಸ್ಸಿನ ಎಡಭಾಗಕ್ಕೆ ಡಿಕ್ಕಿ ಹೊಡೆಸಿ, ಅಪಘಾತಪಡಿಸಿದನು. ಇದರಿಂದ ನಮ್ಮ ಬಸ್ಸಿನ ಮುಂಭಾಗದ ಎಡಭಾಗದಲ್ಲಿ ಹಾಗೂ ಬುಲೆರೋ ವಾಹನ ಜಖಂಗೊಂಡು ನಮ್ಮ ಬಸ್ಸಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕಂಡಕ್ಟರ್  ಪರಮೇಶ್ವರಪ್ಪರವರಿಗೆ ಮುಖಕ್ಕೆ ಪೆಟ್ಟು ಬಿದ್ದು ಗಾಯವಾಗಿತು. ಬುಲೆರೋ ವಾಹನದಲ್ಲಿ ಮುಂದೆ ಡ್ರೈವರ್ ಪಕ್ಕದಲ್ಲಿ ಕುಳಿತಿದ್ದ ಬಸವರಾಜು ಮಾದಾರ ಹಾಗೂ ಮಧ್ಯದ ಸೀಟಿನ ಎಡಭಾಗದಲ್ಲಿ ಕುಳಿತಿದ್ದ ರಾಘವೇಂದ್ರ ಎಂಬುವರಿಗೆ  ತೆಲೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಬುಲೆರೋ ವಾಹನದಲ್ಲಿ ಕುಳಿತಿದ್ದ ಒಂದು ಹೆಂಗಸು ಗೌರಮ್ಮ ಹಾಗೂ ಒಂದು ಹುಡುಗಿ ಕುಮಾರಿ ಸುಮಾ 9 ವರ್ಷ ರವರಿಗೆ ಗಾಯಗಳಾಗಿದ್ದವು. ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಕೂಡಲೇ ಅಲ್ಲಿಗೆ ಬಂದ ಸಾರ್ವಜನಿಕರು ಮತ್ತು ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಾಳುಗಳನ್ನು ಉಪಚರಿಸಿ ಆಂಬುಲೆನ್ಸ್ ಗೆ ಫೋನ್ ಮಾಡಿ ಗಾಯಾಳುಗಳನ್ನು ಮತ್ತು ಮೃತರ ಶವಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು. ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ KA-20 MA-3547 ಮಹೇಂದ್ರ ಬುಲೆರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು  ಪಡೆದು  ಪ್ರಕರಣ  ದಾಖಲಿಸಿರುತ್ತೆ.

ಜಯನಗರ  ಪೊಲೀಸ್ ಠಾಣಾ ಯು ಡಿ ಆರ್ ನಂ. 24/2020 ಕಲಂ 174 ಸಿ ಆರ್ ಪಿ ಸಿ.

ದಿನಾಂಕ: 20/09/2020 ರಂದು ಬೆಳಿಗ್ಗೆ 11-15 ಗಂಟೆಯಲ್ಲಿ ತುಮಕುರು ಟೌನ್‍, ಗೂಡ್ ಶೆಡ್ ಕಾಲೋನಿ ವಾಸಿ ಸಲ್ಮಾಖಾನಂ ಕೋಂ. ಅಹಮ್ಮದ್‌‌‌ ಉಲ್ಲಾಖಾನ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಿನ್ನೆ ದಿನ ದಿನಾಂಕ: 19-09-2020 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ಮನೆಯಲ್ಲಿ ನಾನು ನನ್ನ ಗಂಡ ಹಾಗೂ ಮಕ್ಕಳೆಲ್ಲಾ ಊಟ ಮಾಡಿ, ಮನೆಯ ಹಾಲ್‌‌ನಲ್ಲಿ ಹಾಸಿಗೆ ಹಾಸಿಕೊಂಡು ಎಲ್ಲರೂ ಮಲಗಿದ್ದೆವು.   ಬೆಳಗ್ಗೆ ಸುಮಾರು 6-30 ಗಂಟೆಯಲ್ಲಿ ಎದ್ದು ನೋಡಲಾಗಿ ನನ್ನ ಗಂಡ ಕಾಣಲಿಲ್ಲ, ಎಲ್ಲೋ ಹೊರಗೆ ಹೋಗಿರಬಹುದೆಂದು ಸುಮ್ಮನಾಗಿದ್ದೆನು.  ಬೆಳಗ್ಗೆ ಸುಮಾರು 7-00 ಗಂಟೆಯಲ್ಲಿ ಮನೆಯಲ್ಲಿ ರೂಮಿನ ಬಳಿಗೆ ಹೋದಾಗ, ರೂಮಿನಲ್ಲಿ ನನ್ನ ಗಂಡ ಮೇಲ್ಬಾವಣಿಗೆ ಸಿಮೆಂಟ್‌‌ ಶೀಟ್‌‌ ಅಳವಡಿಸಲು ಹಾಕಿದ್ದ ಕಬ್ಬಿಣದ ಹ್ಯಾಂಗಲ್‌‌‌ಗೆ ಸೀರೆಯನ್ನು ಕಟ್ಟಿಕೊಂಡು ಮತ್ತೊಂದು ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದರು.  ನನಗೆ ಗಾಬರಿಯಾಗಿ ಹೊರಗೆ ಬಂದು ಕೂಗಾಡಿದಾಗ ಅಕ್ಕ-ಪಕ್ಕದವರೆಲ್ಲಾ ಬಂದು ನೋಡಿದ್ದು, ಅವರೆಲ್ಲಾ ನಿನ್ನ ಗಂಡ ತೀರಿ ಹೋಗಿರುತ್ತಾರೆಂತಾ ತಿಳಿಸಿದರು. ನಮ್ಮ ಯಜಮಾನರಿಗೆ ಮದ್ಯಪಾನ ಮಾಡುವ ಅಬ್ಯಾಸ ಇದ್ದು, ನಿನ್ನೆ ರಾತ್ರಿಯೂ ಸಹಾ ಅತಿಯಾಗಿ ಮದ್ಯಪಾನ ಮಾಡಿದ್ದರು.   ನಮ್ಮ ಯಜಮಾನರು ಎಲ್ಲಿಯೂ ಕೆಲಸವಿಲ್ಲ ಎಂಬ ಕಾರಣಕ್ಕಾಗಿಯೋ ಅಥವಾ ಇನ್ಯೂವುದೋ ಕಾರಣಕ್ಕಾಗಿ ಕುಡಿದ ಅಮಲಿನಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ರಾತ್ರಿ ನಾವೆಲ್ಲಾ ಮಲಗಿದ ಬಳಿಕ  ತನ್ಮೂಲಕ ತಾನೇ ಮನೆಯ ರೂಮಿನಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಈ ರೀತಿ ಮೃತಪಟ್ಟಿರುತ್ತಾರೆ.  ನಮ್ಮ ಯಜಮಾನರ ಸಾವಿನಲ್ಲಿ ನಮಗೆ ಯಾವುದೇ ಅನುಮಾನ ಇರುವುದಿಲ್ಲ.    ನಮ್ಮ ಯಜಮಾನರು ಮೃತಪಟ್ಟಿರುವ ವಿಚಾರವನ್ನು ನಾನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ, ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಆದ್ದರಿಂದ ತಾವು ಸ್ಥಳಕ್ಕೆ ಬಂದು ನನ್ನ ಗಂಡನ ಶವವನ್ನು ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸಿ ನನ್ನ ಗಂಡನ ಅಂತ್ಯ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ಮೊ.ನಂ:91/2020 ಕಲಂ 447,427 IPC.

ದಿನಾಂಕ:20/09/2020 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದಿ ನಾಗೇಂದ್ರ ಬಿನ್ ಪುಲ್ಲಾರೆಡ್ಡಿ, 42ವರ್ಷ, ಕಮ್ಮ ವಕ್ಕಲಿಗ ಜನಾಂಗ, ವ್ಯವಸಾಯದ ವೃತ್ತಿ ದೊಡ್ಡಹಳ್ಳಿ ಗ್ರಾಮ, ಪಾವಗಡ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ  ನಾನು ನಮ್ಮೂರಿನಲ್ಲಿ ನಮ್ಮಗೆ ಸೇರಿದ ಚಿಕ್ಕಹಳ್ಳಿ ಗ್ರಾಮ ಸ.ನಂ:70/2 ರಲ್ಲಿ ಒಂಬತ್ತು ಎಕರೆ 03 ಗುಂಟೆ ಜಮೀನು ಇರುತ್ತದೆ, ಈ ಜಮೀನಿನ ಪೈಕಿ 04 ಎಕರೆ ಜಮೀನಿನಲ್ಲಿ ಟಮೋಟೊ ಬೆಳೆ ಬೆಳೆದಿದ್ದೆನು, ಇದರಲ್ಲಿ  ಒಂದು ಬೆಳೆ ಬೆಳೆದಿದ್ದೆ, ಇದರಲ್ಲಿ ಒಂದು ಬೆಳೆ ಕಟಾವು ಮಾಡಿದ್ದೆನು, ಉಳಿದ ಬೆಳೆಯನ್ನು ಕಟಾವು ಮಾಡಲು ತಯಾರಾಗುತ್ತಿದ್ದೆವು, ಈ ದಿನ ದಿನಾಂಕ:20/09/2020 ರಂದು ನಾನು ಬೆಳಿಗ್ಗೆ 6:00 ಗಂಟೆಗೆ ನಮ್ಮ ಜಮೀನಿನ ಬಳಿ ಹೋಗಿ ನೋಡಿದಾಗ ನಮ್ಮ ಜಮೀನಿನಲ್ಲಿ  ಪಸಲಿಗೆ ಬಂದಿದ್ದ ಟಮೋಟೋ ಬೆಳೆಯನ್ನು  ದಿನಾಂಕ:19/09/2020 ರಂದು ರಾತ್ರಿ ವೇಳೆಯಲ್ಲಿ  ಯಾರೋ ಕಿಡಿಗೇಡಿಗಳು ಕತ್ತರಿಸಿ ಹಾಕಿ ಟಮೋಟೋ ಬೆಳೆಯನ್ನು ನಾಶ ಪಡಿಸಿರುತ್ತಾರೆ, ನಾನು ಸಾಲ ಮಾಡಿ ಬೆಳೆದಿದ್ದ ಬೆಳೆಯು ನಾಶವಾಗಿರುವುದರಿಂದ ನನಗೆ ದಿಕ್ಕು ತೋಚದಂತಾಗಿರುತ್ತದೆ, ನನಗೆ ನಮ್ಮೂರಿನ ಅಶೋಕ ಬಿನ್ ಗೋವಿಂದಪ್ಪರವರ ಮೇಲೆ ಅನುಮಾನ ಇರುತ್ತದೆ, ಏಕೆಂಧರೆ ನಮಗೂ ಮತ್ತು ಅಶೋಕ ಎಂಬುವವರ ನಡುವೆ ವೈಶಮ್ಯ ವಿರುತ್ತದೆ, ಆದ್ದರಿಂದ ಖಾವಂದರಾದ ತಾವುಗಳು ನನ್ನ ಜಮೀನಿನಲ್ಲಿ ಬೆಳೆದಿದ್ದ ಟಮೋಟೋ ಬೆಳೆಯನ್ನು ನಾಶ ಪಡಿಸಿ ನನಗೆ ಸುಮಾರು ಐದು ಲಕ್ಷರೂ ನಷ್ಟ ಉಂಟು ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ:91/2020 ಕಲಂ:447.427 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.



Saturday, 19 September 2020

ಅಪರಾಧ ಘಟನೆಗಳು 19-09-20

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 144/2020 ಕಲಂ-20(b) N.D.P.S Act

ದಿನಾಂಕ:19.09.2020 ರಂದು ಬೆಳಗ್ಗೆ 05:45 ಗಂಟೆ ಸಮಯದಲ್ಲಿ  ಮಾನ್ಯ ಚಿಕ್ಕನಾಯಕನಹಳ್ಳಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಮತಿ ಎಸ್.ಎಂ. ವೀಣಾ ರವರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:19.09.2020 ರಂದು  ಬೆಳಗಿನ ಜಾವ 05:00 ಗಂಟೆ ಸಮಯದಲ್ಲಿ ಹುಳಿಯಾರು ಪೊಲೀಸ್ ಠಾಣಾ ಸರಹದ್ದು ಯಾರೋ ಭಾತ್ಮೀದಾರರು ಖುದ್ದು ಭೇಟಿ ಮಾಡಿ ಹುಳಿಯಾರು ಹೋಬಳಿ, ಕಾರೇಹಳ್ಳಿ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಯಾರೋ ವ್ಯಕ್ತಿಗಳು ಕೆ.ಜಿ ಗಟ್ಟಲೇ ಮಾದಕ ವಸ್ತು ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿರುತ್ತಾರೆ ಎಂದು ಭಾತ್ಮೀಬಂದಿದ್ದು ಸದರಿಯವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿರುತ್ತೇನೆ ಎಂದು ನೀಡಿದ ಜ್ಞಾಪನವನ್ನು ಪಡೆದು ಠಾಣಾ ಮೊ.ನಂ.144/2020 ಕಲಂ 20(b) N.D.P.S Act  ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣೆ ಯು.ಡಿ.ಆರ್‌. ನಂ 09/2020 ಕಲಂ 174 ಸಿ.ಆರ್‌.ಪಿ.ಸಿ.

ಈ ದಿನ ದಿನಾಂಕ;-18-09-2020 ರಂದು ಬೆಳಿಗ್ಗೆ 11-20 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಗಂಡ ಮತ್ತು ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇನೆ, ಹಾಲನೂರಿನಲ್ಲಿ ನಮ್ಮದು ಕೃಷಿ ಜಮೀನು ಇದ್ದು ನನ್ನ ಗಂಡ ದೇವಾನಂದ ರವರ ಕೃಷಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ;-04-09-2020 ರಂದು ನಮ್ಮ ತಾಯಿ ರುದ್ರಾಣಮ್ಮ ರವರಿಗೆ ಅನಾರೋಗ್ಯದ ಸಂಬಂದ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ಹೋಗಿ ನಮ್ಮ ಸಂಬಂದಿಕರ ಮನೆಯಲ್ಲಿ ಇದ್ದೆವು. ನಾನು ಪ್ರತಿ ದಿನ ನನ್ನ ಗಂಡನಿಗೆ ಪೋನ್ ಮಾಡಿ ವಿಚಾರಿಸುತ್ತಿದ್ದೆನು ದಿನಾಂಕ;-15-09-2020 ರಂದು ರಾತ್ರಿ ಸುಮರು 9-30 ಗಂಟೆಗೆ ನನ್ನ ಪತಿಗೆ ಮೊಬೈಲ್ ಕರೆ ಮಾಡಿ ವಿಚಾರಿಸಿದ್ದು ಆರೋಗ್ಯವಾಗಿದ್ದೇನೆ ಮನೆಯಲ್ಲಿ ಊಟ ಮಾಡಿ ಮಲಗುತ್ತಿದ್ದೇನೆಂದು ತಿಳಿಸಿದರು ನಂತರ ದಿ;-16-09-20 ರಂದು ಬೆಳಿಗ್ಗೆ ಕರೆಮಾಡಿದೆನು ಪೋನ್ ರಿಸೀವ್ ಮಾಡಲಿಲ್ಲ ತೋಟಕ್ಕೆ ಹೋಗಿರಬಹುದೆಂದು ಸುಮ್ಮನಾದೆವು ನಂತರ ಮದ್ಯಾನ್ಹ ಸಂಜೆ ನಮ್ಮ ಅತ್ತೆಗೆ ಕರೆ ಮಾಡಿ ವಿಚಾರಿಸಿರುತ್ತೇನೆ. ಅವರು ಸಹಾ ಎಲ್ಲಿಯೋ ತೋಟಕ್ಕೆ ಹೋಗಿರಬಹುದು ನನ್ನ ಮೊಬೈಲ್ ನಂಬರ್ ಕೂಡ ಸ್ವೀಕರಿಸುತ್ತಿರುವುದಿಲ್ಲ ಎಂದು ಹೇಳಿದರು. ನಂತರ ನಮ್ಮ ಮನೆ ಮಾಲಿಕರಾದ ಶೇಖರಯ್ಯ ರವರಿಗೆ ಪೋನ್ ಮಾಡಿ ವಿಚಾರಿಸಿದಾಗ ಅವರು ವಿಚಾರಿಸಿ ನಿಮ್ಮ ಪತಿಯ ಬೈಕ್ ಮನೆಯ ಹತ್ತಿರ ಇದೆ ಮನೆಯ ಡೋರ್ಅನ್ನು ಒಳಗಡೆಯಿಂದ ಲಾಕ್ ಆಗಿರುತ್ತದೆ ನೀವು ಕೂಡಲೆ ಬನ್ನಿ ಮನೆಯ ಬಾಗಿಲು ತೆರೆಯಬೇಕು ಎಂದು ಹೇಳಿದರು ನಾವು ನೆನ್ನೆ ದಿನಾಂಕ;-17-09-2020 ರಂದು ರಾತ್ರಿ 11-45 ಗಂಟೆಗೆ ಬಂದು ಮನೆಯ ಬಾಗಿಲು ತೆಗೆದು ನೋಡಲಾಗಿ ನನ್ನ ಪತಿ ಮಂಚದ ಮೇಲೆ ಗೋಡೆಯ ಭಾಗಕ್ಕೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುತ್ತಾರೆ. ಮೈಮೇಲಿನ ಚರ್ಮ ಸುಲಿದ ಸ್ಥಿತಿಯಲ್ಲಿರುತ್ತದೆ. ನನ್ನ ಗಂಡ ದಿನಾಂಕ;-15-09-2020 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಯಾವುದೋ ಕಾರಣದಿಂದ ಮೃತ ಪಟ್ಟಿರುತ್ತಾರೆ. ಮನೆಯ ಕಿಟಕಿ ಬಾಗಿಲು ಮುಚ್ಚಿದ್ದರಿಂದಲೋ. ಹಾಗು ನನ್ನ ಪತಿ ದಪ್ಪಗಿದ್ದರಿಂದಲೋ ಏನೋ ಅಥವಾ ದೇಹ ಹೀಟ್ ಆಗಿದರಿಂದಲೋ ಏನೋ ನನ್ನ ಗಂಡನ ಮೃತ ದೇಹದ ಚರ್ಮದ ಪದರುಗಳು ಸುಲಿದ ಸ್ಥಿತಿಯಲ್ಲಿರುತ್ತದೆ. ನನ್ನ ಗಂಡನಿಗೆ ಸುಮಾರು 43 ವರ್ಷ ವಯಸ್ಸಾಗಿದ್ದು ಇವರಿಗೆ ಬಿ.ಪಿ. ಖಾಯಿಲೆ ಇದ್ದು ಇವರಿಗೆ ಬಿ.ಪಿ. ಜಾಸ್ತಿಯಾಗಿಯೋ ಅಥವಾ ಕಡಿಮೆಯಾಗಿಯೋ ಯಾವುದೋ ಕಾರಣದಿಂದ ಮೃತ ಪಟ್ಟಿರುತ್ತಾರೆ. ನನ್ನ ಗಂಡನ ಮರಣ ಕಾರಣದಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಆದರೂ ನಿಜವಾದ ಮರಣ ಕಾರಣವನ್ನು ತಿಳಿಯಲು ತಾವುಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೊಳ್ಳುತ್ತೇನೆಂದು ನೀಢಿದ ದೂರಿನ ಮೇರೆಗೆ ಠಾಣಾ ಯು.ಡಿ.ಆರ್‌. ನಂ 08/2020 ಕಲಂ 174 ಸಿ.ಆರ್‌.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣೆ ಮೊ.ಸಂ. 67/2020 ಕಲಂ 5. 11. ಕರ್ನಾಟಕ ಪ್ರಿವೇನ್‍ಷನ್‍ ಅಫ್‍ ಕೌವ ಸ್ಲಾಟರ್‍ ಆಕ್ಟ್‍ & ಕ್ಯಾಟಲ್‍ ಪ್ರಿವೆನ್ಷನ್‍ ಆಕ್ಟ್‍ 1964

ದಿನಾಂಕ:18/09/2020 ರಂದು ಬೆಳಗಿನ ಜಾವ  05-00 ಗಂಟೆಗೆ ಠಾಣಾ ಹೆಚ್,ಸಿ-187 ನಾರಾಯಣ ಸ್ವಾಮಿ ರವರು ನೀಡಿದ ಬೆರಳಚ್ಚು ಮುದ್ರಿತ ದೂರಿನ ಸಾರಾಂಶವೇನೆಂದರೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್,ಸಿ,-187 ನಾರಾಯಣ ಸ್ವಾಮಿ ಆದ ನಾನು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:17/09/2020 ರಂದು ನನ್ನನ್ನು 3 ನೇ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಢಿದ್ದು, ಅದರಂತೆ ನಾನು ಹೆಚ್,ಜಿ,-474 ರವರೊಂದಿಗೆ ಗಸ್ತಿನಲ್ಲಿರುವಾಗ್ಗೆ ರಾತ್ರಿ 04-30 ಗಂಟೆ ಸುಮಾರಿನಲ್ಲಿ ಬಿ,ಹೆಚ್ ರಸ್ತೆಯ ಕಡೆಯಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಒಂದು ಆಟೋ ಎಸ್,ಎಸ್, ಸರ್ಕಲ್ ಕಡೆಯಿಂದ ಬೆಂಗಳೂರು ಕಡೆಗೆ ಬಂದಿದ್ದು, ಅನುಮಾನಗೊಂಡ ನಾನು ಸದರಿ ಆಟೋ ವನ್ನು ನಿಲ್ಲಿಸಿ ನೋಡಲಾಗಿ KA-03 D-8169 ಆಟೋ ಆಗಿದ್ದು, ಸದರಿ ಆಟೋದಲ್ಲಿ ಯಾವುದೋ ಪ್ರಾಣಿಯ ಮಾಂಸವನ್ನು ತೆಗದುಕೊಂಡು ಹೋಗುತ್ತಿರುವುದಾಗಿ ಕಂಡು ಬಂದಿದ್ದು, ನಂತರ ಆಟೋದಲ್ಲಿದ್ದವರ ಹೆಸರು ವಿಳಾಸವನ್ನು ತಿಳಿಯಲಾಗಿ 1)ಮನ್ಸೂರ್ ಅಹಮದ್ ಬಿನ್ ಇರ್ಷಾದ್ ಅಹಮದ್ 29 ವರ್ಷ ಚಾಲಕ ಕೆಲಸ ಮುಸ್ಲಿಂ ಜನಾಂಗ 3 ನೇ ಕ್ರಾಸ್ ಬ್ರಾಡ್ ವೇ ರೋಡ್ ಶಿವಾಜಿನಗರ ಬೆಂಗಳೂರು-51 2)ಮಹಮ್ಮದ್ ಹಯಾಜ್ ಬಿನ್ ಮಹಮ್ಮದ್ ಅಲೀ 28 ವರ್ಷ ಮೆಕಾನಿಕ್ ಕೆಲಸ ಬಂಡೀಮಠ್ ಶಿವಾಜಿನಗರ ಬೆಂಗಳೂರು-51 ಎಂತಾ ತಿಳಿಸಿದ್ದು, ನಂತರ ಆಟೋದಲ್ಲಿದ್ದ ಮಾಂಸದ ಬಗ್ಗೆ ವಿಚಾರ ಮಾಡಲಾಗಿ ಸದರಿ ಮಾಂಸವು ಹಸುವಿನ ಮಾಂಸವಾಗಿದ್ದು ಮಾರಾಟ ಮಾಡಲು ತೆಗದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ತುಮಕೂರು ನಗರದ ಅಮೀರ್ ಎನ್ನುವವರಿಂದ ಬೆಂಗಳೂರಿನ ಶಿವಾಜಿ ನಗರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಸದರಿ ಮಾಂಸವು ಹಸುವಿನ ಮಾಂಸವಾಗಿರುತ್ತೆಂತಾ ತಿಳಿಸಿದ್ದು, ಸದರಿ ಆಟೋ ಅದರಲ್ಲಿದ್ದ ಹಸುವಿನ ಮಾಂಸ ಹಾಗೂ ಇಬ್ಬರು ಆಸಾಮಿಗಳನ್ನು ಮುಂದಿನ ನಡವಳಿಕೆಗಾಗಿ ಠಾಣೆಗೆ ತಂದು ಹಾಜರುಪಡಿಸಿರುತ್ತೇನೆ ಎಂತಾ ಇತ್ಯಾದಿಯಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಮೊನಂ:67/2020 ಕಲಂ:05 &11 ಕರ್ನಾಟಕ ಪ್ರಿವೆನ್ಷನ್ ಆಪ್ ಕೌ ಸ್ಲಾಟರ್ ಅಂಡ್ ಕ್ಯಾಟಲ್ ಪ್ರಿವೆನ್ಷನ್ ಆಕ್ಟ್, ರೀತ್ಯ  ಪ್ರಕರಣವನ್ನು ದಾಖಲಿಸಿರುತ್ತೇನೆ,.

 



Friday, 18 September 2020

ಪತ್ರಿಕಾ ಪ್ರಕಟಣೆ ದಿ:18/09/20

ಪತ್ರಿಕಾ ಪ್ರಕಟಣೆ

ದಿನಾಂಕ: 18-09-2020


ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ ಭರ್ತಿ ಮಾಡುವ ಸಲುವಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ: 20-09-2020 ರಂದು ತುಮಕೂರು ನಗರದಲ್ಲಿನ ಒಟ್ಟು 28 ವಿವಿಧ ಶಾಲಾ/ಕಾಲೇಜುಗಳಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-30 ರವರೆಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಅಭ್ಯರ್ಥಿಗಳು ಯಾವುದೇ ಪುಸ್ತಕಗಳನ್ನಾಗಲೀ, ಕೈಬರಹ ಚೀಟಿ, ಪೇಜರ್, ಕ್ಯಾಲ್ಕುಲೇಟರ್, ಇಯರ್ ಪೋನ್, ಮೊಬೈಲ್ ಪೋನ್, ಬೆಲೆ-ಬಾಳುವ ವಸ್ತುಗಳನ್ನು ಪರೀಕ್ಷೆಗೆ ತರುವುದನ್ನು ನಿಷೇದಿಸಲಾಗಿದೆ. ಪರೀಕ್ಷೆಗೆ ಒಂದು ಗಂಟೆ ಮುಂಚಿತವಾಗಿ ನಿಗಧಿಪಡಿಸಿರುವ ಕಾಲೇಜಿನಲ್ಲಿ ಹಾಜರಿರಬೇಕು ಎಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಪರಾಧ ಘಟನೆಗಳು 18-09-20

ಹೆಬ್ಬೂರು  ಪೊಲೀಸ್ ಠಾಣಾ ಠಾಣ ಮೊ ನಂ-132/2020 ಕಲಂ 279,337 ಐಪಿಸಿ

ದಿನಾಂಕ-17/09/2020 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಭೈರಣ್ಣ ಬಿನ್ ಲೇಟ್ ಗಂಗಣ್ಣ, 48 ವರ್ಷ, ಲಿಂಗಾಯಿತರು, ವ್ಯವಸಾಯ, ದೊಡ್ಡಸಾರಂಗಿ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ತಂದೆಯಾದ ಲೇಟ್ ಗಂಗಣ್ಣ ರವರಿಗೆ 04 ಜನ ಗಂಡು ಮಕ್ಕಳಿದ್ದು ಎಲ್ಲರೂ ಬೇರೆ ಬೇರೆ ವಾಸವಾಗಿದ್ದು, ನನ್ನ ಹಿರಿಯ ಅಣ್ಣನಾದ ನಂಜುಂಡಪ್ಪ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, ನನ್ನ ಅಣ್ಣನ ಚಿಕ್ಕ ಮಗನಾದ ಪ್ರಸಾದ್.ಡಿ.ಎನ್. ಬಿನ್ ನಂಜುಂಡಪ್ಪ, 30 ವರ್ಷ ಬೇಕರಿ ಕೆಲಸ, ದೊಡ್ಡಸಾರಂಗಿ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ದಿನಾಂಕ:-16-09-2020 ರಂದು  ಬೆಳಿಗ್ಗೆ ಸುಮಾರು 08-00 ಗಂಟೆಯಲ್ಲಿ ಅವರ ಮನೆಯಿಂದ ಆತನ ಬಾಬ್ತು ಕೆಎ-06-ಹೆಚ್ಇ-4365 ನೇ ಪಲ್ಸರ್ -150 ದ್ವಿಚಕ್ರ ವಾಹನದಲ್ಲಿ ಆತನ ಸೋದರ ಮಾವನಾದ ಪುಟ್ಟರಾಜು ಎಂಬುವರ ಮನೆಗೆ ಕುಣಿಗಲ್ ತಾಲ್ಲೂಕು ಹೊನ್ನೇನಹಳ್ಳಿ ಗ್ರಾಮಕ್ಕೆ ಹೋಗಿದ್ದು, ನಂತರ ವಾಪಸ್ ಅದೇ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮಕ್ಕೆ ಬರಲು ಹೊನ್ನೇನಹಳ್ಳಿಯಿಂದ ತುಮಕೂರು ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 2-30 ಗಂಟೆಯಲ್ಲಿ ಬಾಣವರ ಗೇಟ್ ಬಳಿ ಇರುವ ಕುಣಿಗಲ್ ತುಮಕೂರು ರಸ್ತೆಯ ಪಕ್ಕ ಇರುವ ಭೈರವೇಶ್ವರ ಹೋಟೆಲ್ ನೇರದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬರುತ್ತಿದ್ದ ಒಂದು ಕಾರಿನ ಚಾಲಕ ಅತಿವೇಗವಾಗಿ ಓಡಿಸಿಕೊಂಡು ಬಂದು ನನ್ನ ಅಣ್ಣನ ಮಗನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಕಾರಣ ದ್ವಿಚಕ್ರ ವಾಹನದ ಸಮೇತ ರಸ್ತೆಯ ಎಡಭಾಗಕ್ಕೆ ಹೋಗಿ ರಸ್ತೆಯ ಪಕ್ಕ ಇರುವ ಸೀಮೆಂಟ್ ಪಿಲ್ಲರ್ ಗೆ ತಗಲಿ ಬಿದ್ದ ಕೂಡಲೆ ಕಾರಿನ ಚಾಲಕ ಕಾರನ್ನು ನಿಲ್ಲಿಸಿ ಹೋಗಿ ನೋಡಲಾಗಿ ಬಲಗಾಲಿನ ತೊಡೆ ಮೂಳೆಗೆ ಪೆಟ್ಟಾಗಿದ್ದು  ಕೂಡಲೆ ಕಾರಿನವರು ನನ್ನ ಅಣ್ಣನ ಮಗನ ಮೊಬೈಲ್ ನಿಂದ ಆತನ ಸ್ನೇಹಿತನಾದ ಪರಮೇಶ ಎಂಬುವವರಿಗೆ ತಿಳಿಸಿದಾಗ ಅವರು ಅಪಘಾತದ ವಿಚಾರವನ್ನು ನನಗೆ ತಿಳಿಸಿದ್ದು ನಾನು ಪ್ರಸಾದ್ ಡಿ ಎನ್ ರವರಿಗೆ ಫೋನ್ ಮೂಲಕ ವಿಚಾರ ತಿಳಿಯಲಾಗಿ ಆತನ ಮೊಬೈಲ್ ನ್ನು ತೆಗೆದುಕೊಂಡು ಅವರ ಜೊತೆಯಲ್ಲಿದ್ದ ಯಾರೋ ಒಬ್ಬರು ಮಾತನಾಡಿ ಚಿಕಿತ್ಸೆಗಾಗಿ ತುಮಕೂರು ಸಿದ್ದಗಂಗ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದಾಗ ನಾನು ಮತ್ತು ನನ್ನ ಅತ್ತಿಗೆ ಸಾವಿತ್ರಮ್ಮ ರವರು ಸಿದ್ದಗಂಗ ಆಸ್ಪತ್ರೆಯ ಬಳಿಗೆ ಹೋಗಿ ನೋಡಲಾಗಿ ಪ್ರಸಾದ್ ಡಿ ಎನ್ ರವರಿಗೆ ಬಲಗಾಲಿನ ತೊಡೆ ಮೂಳೆ ಮುರಿದು ಎರಡು ಕೈಗಳ ಅಂಗೈಗಳ ಮೇಲೆ ತರಚಿದ ರಕ್ತಗಾಯಗಳಾಗಿದ್ದು ವಿಚಾರ ಮಾಡಲಾಗಿ ಕುಣಿಗಲ್ –ತುಮಕೂರು ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 2-30 ಗಂಟೆಯಲ್ಲಿ ಬೈರವೇಶ್ವರ ಹೋಟೆಲ್ ನೇರದಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಕೆಎ-30-ಎಂ-4223 ನೇ ಮಾರುತಿ ಕಾರು ಆಗಿದ್ದು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ದ್ವಿಚಕ್ರ ವಾಹನದ ಬಲಭಾಗದ ಹ್ಯಾಂಡಲ್‌ಗೆ ಕಾರು ತಗುಲಿದ ಪರಿಣಾಮ ನನಗೆ ವಾಹನ ಹಿಡಿತಕ್ಕೆ ಸಿಗದೇ ರಸ್ತೆಯ ಎಡಭಾಗದಲ್ಲಿ ಅಳವಡಿಸಿರುವ ಸೀಮೆಂಟ್ ಪಿಲ್ಲರ್ ಗೆ ತಗುಲಿ ಬಿದ್ದಾಗ ನನ್ನ ಬಲಕಾಲಿನ ತೊಡೆಯ ಮೂಳೆಗೆ ಹಾಗೂ ಎರಡು ಕೈಗಳ ಅಂಗೈಗಳಿಗೆ ತರಚಿದ ರಕ್ತಗಾಯವಾಗಿದ್ದು ಅಷ್ಟರಲ್ಲಿ ಅಪಘಾತಪಡಿಸಿದ ಕಾರಿನ ಚಾಲಕ ಹಾಗೂ ಸಾರ್ವಜನಿಕರು ಸ್ಥಳಕ್ಕೆ ಬಂದು 108 ಆಂಬುಲೆನ್ಸ್ ನಲ್ಲಿ ಕಾರಿನ ಚಾಲಕನೊಂದಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲಿಸಿರುವುದಾಗಿ ಚಾಲಕನ ಹೆಸರು ವಿಳಾಸ ತಿಳಿಯಲು ಆಗಲಿಲ್ಲ ಎಂತಾ  ತಿಳಿಸಿದರು. ಅಲ್ಲಿ ಚಿಕಿತ್ಸೆ ಪಡೆದು ಅದೇ ದಿನ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಅಲ್ಲಿ ನನ್ನ ಅಣ್ಣನ ಮಗನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇರುವುದರಿಂದ ನಾನು ಚಿಕಿತ್ಸೆ ಕೊಡಿಸಿ ಆತನ ಬಳಿ ಅವರ ತಾಯಿಯನ್ನು ಬಿಟ್ಟು ಈ ದಿನ ತಡವಾಗಿ ಠಾಣೆಗೆ ಬಂದು ನನ್ನ ಅಣ್ಣನ ಮಗನಿಗೆ ಅಪಘಾತಪಡಿಸಿದ  ಕೆಎ-30-ಎಂ-4223 ನೇ ಮಾರುತಿ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-132/2020 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಠಾಣ ಮೊ ನಂ-133/2020 ಕಲಂ 279,337 ಐಪಿಸಿ

ದಿನಾಂಕ-17/09/2020 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿ ನಾಗರಾಜು ಹೆಚ್.ಸಿ. ಬಿನ್ ಲೇಟ್ ಚಿಗರಪ್ಪ 39 ವರ್ಷ, ನಾಯಕರು, ಕೆಎ 04 ಡಿ 2979 ನೇ ಟಾಟಾ ಸುಮೊ ಚಾಲಕ, ಹೊಳವನಹಳ್ಳಿ ಗ್ರಾಮ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:13-09-2020 ರಂದು ನಾನು ನನ್ನ ತಮ್ಮನಾದ ಮಂಜುನಾಥ ರವರ ಬಾಬ್ತು ಕೆಎ 04 ಡಿ 2979 ನೇ ಟಾಟಾ ಸುಮೊ ವಾಹನವನ್ನು ಪಡೆದು ಸದರಿ ಕಾರಿಗೆ ನಾನು ಚಾಲಕನಾಗಿ ಸದರಿ ಕಾರಿನಲ್ಲಿ ನನ್ನ ಅಕ್ಕ ರಂಗಮ್ಮ,ಅವರ ಮಗ ವಿನೋದ, ನನ್ನ ಹೆಂಡತಿ ಶೈಲಜಾ, ನಮ್ಮ ಸಂಬಂಧಿಕ ಸೀತಕಲ್ಲು ಗ್ರಾಮದ ಹನುಮಂತರಾಯ ಅವರ ಹೆಂಡತಿ ಮಂಜಮ್ಮ ಹಾಗೂ ಹನುಮಂತರಾಯ ರವರ ಮಕ್ಕಳಾದ 9 ವರ್ಷದ ಕೀರ್ತನಾ, 10 ವರ್ಷದ ಚಿನ್ನು ಎಂಬುವರೊಂದಿಗೆ ಅದೇ ದಿನ ಮಧ್ಯಾಹ್ನ ಸುಮಾರು 4-00 ಗಂಟೆ ಸಮಯದಲ್ಲಿ ಹೊಳವನಹಳ್ಳಿ ಗ್ರಾಮದಿಂದ ಕೊರಟಗೆರೆ, ತುಮಕೂರು ಮಾರ್ಗವಾಗಿ ಚಿಕ್ಕಣ್ಣಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರಲು ಬರುತ್ತಿದ್ದಾಗ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ ಸರ್ಕಾರಿ ಪ್ರೌಢಶಾಲೆಯ ನೇರದಲ್ಲಿ ತುಮಕೂರು ಕುಣಿಗಲ್ ರಸ್ತೆಯ ಎಡಭಾಗದಲ್ಲಿ ಸಾಯಂಕಾಲ ಸುಮಾರು 5-30 ಗಂಟೆಯಲ್ಲಿ ನಮ್ಮ ಕಾರನ್ನು ನಿಲ್ಲಿಸಿ, ಕಾರಿನಲ್ಲಿ ಹೋಗಿದ್ದವರೆಲ್ಲರೂ ಮೂತ್ರ ವಿಸರ್ಜನೆಗಾಗಿ ಇಳಿದಿದ್ದಾಗ ಹನುಮಂತರಾಯರವರ 9 ವರ್ಷದ ಕೀರ್ತನಾ ರವರು ಚಾಲಕನ ಪಕ್ಕ ಇರುವ ಬಲಭಾಗದ ಡೋರ್ ಬಳಿ ಇಳಿದು ನಿಂತಿದ್ದಾಗ  ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಬಂದ ಒಂದು ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಕಾರಿನಿಂದ ಇಳಿದು ನಿಂತಿದ್ದ  ಕೀರ್ತನಾ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಕೀರ್ತನಾ ಸ್ಥಳದಿಂದ ಸುಮಾರು ದೂರಕ್ಕೆ ಹಳ್ಳಕ್ಕೆ ಬಿದ್ದಿದ್ದು ಅಷ್ಟರಲ್ಲಿ ಕಾರಿನಲ್ಲಿದ್ದ ನಾವುಗಳು ಕೂಗಿಕೊಂಡು ಕೆಳಗೆ ಇಳಿದು ಓಡಿ ಹೋಗಿ ನೋಡಲಾಗಿ ಕೀರ್ತನಾರವರಿಗೆ ಎಡಕಾಲಿನ ತೊಡೆಯ ಮೂಳೆಗೆ ಪೆಟ್ಟು ಬಿದ್ದಿದ್ದು, ಎಡಗಣ್ಣಿನ ಪಕ್ಕ ತರಚಿದ ಗಾಯವಾಗಿ, ಮೂಗಿನಲ್ಲಿ ಮತ್ತು ಬಾಯಲ್ಲಿ ರಕ್ತ ಬರುತ್ತಿತ್ತು. ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ 51 ಡಿ 9386 ನೇ ನಂಬರಿನ ಮಹೇಂದ್ರ ವೆರಿಟ  ಕಾರು ಆಗಿದ್ದು,  ಅಷ್ಟರಲ್ಲಿ ಅಪಘಾತ ಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸಿ ನಮ್ಮ ಬಳಿಗೆ ಬಂದು ಕೀರ್ತನಾ ರವರನ್ನು ನೋಡಿ, ಅವರ ಕಾರಿನಲ್ಲಿಯೇ ತುಮಕೂರು ನಗರದ ಸಿದ್ಧಗಂಗಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿ, ಅಂಬುಲೆನ್ಸ್‌ ನಲ್ಲಿ ಬೆಂಗಳೂರು ವಿಜಯನಗರದಲ್ಲಿರುವ ವಿಜಯನಗರ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದು, ಕೀರ್ತನಾ ರವರಿಗೆ ಎಡಗಾಲಿನ ತೊಡೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಕೀರ್ತನಾ ರವರ ಹಾರೈಕೆ ನೋಡಿಕೊಳ್ಳಲು ಯಾರು ಇಲ್ಲದೇ ಇರುವುದರಿಂದ ಕೀರ್ತನಾ ರವರ ತಂದೆ ಹನುಮಂತರಾಯ ರವರು ನನಗೆ ದೂರು  ನೀಡಲು ತಿಳಿಸಿ ಕಳುಹಿಸಿದ್ದರಿಂದ ದಿನಾಂಕ;13-09-2020 ರಂದು ಸಾಯಂಕಾಲ ಸುಮಾರು 5-30 ಗಂಟೆಯಲ್ಲಿ ಕೀರ್ತನಾರವರಿಗೆ ಅಪಘಾತಪಡಿಸಿದ ಕೆಎ 51 ಡಿ 9386 ನೇ ಮಹೇಂದ್ರ ವೆರಿಟ  ಕಾರು ಚಾಲಕನ ಮೇಲೆ ಕಾನೂನು ಕ್ರಮಕ್ಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 143/2020 ಕಲಂ-323.324.504.506 ರೆ/ವಿ 34 ಐಪಿಸಿ

ದಿನಾಂಕ;-17-09-2020 ರಂದು ರಾತ್ರಿ 7.00 ಗಂಟೆಗೆ ಪಿರ್ಯಾದಿ ಕೃಷ್ಣಮೂರ್ತಿ ಬಿನ್ ಯಲ್ಲಾಬೋವಿ, 25 ವರ್ಷ, ಬೋವಿ ಜನಾಂಗ, ಕೂಲಿ, ಬಡಕೆಗುಡ್ಲು ಬೋವಿ ಕಾಲೋನಿ, ಕಂದೀಕೆರೆ ಹೋಬಳಿ, ಚಿ ನಾ ಹಳ್ಳಿ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-16-09-2020 ರಂದು ಬೆಳಗ್ಗೆ 7.00 ಗಂಟೆ ಸಮಯದಲ್ಲಿ  ಮನೆಯ ಮುಂದೆ ನಮ್ಮ ತಾಯಿ ಸರೋಜಮ್ಮ ಈ ಹಿಂದೆ ನಮ್ಮ ಹುಲ್ಲಿನ ಬಣವೆಗೆ ಯಾರೋ ಬೆಂಕಿ ಇಟ್ಟಿದ್ದ ವಿಚಾರಕ್ಕೆ ಯಾರೋ ನಮ್ಮ ಹುಲ್ಲಿಗೆ ಬೆಂಕಿ ಇಟ್ಟರೆಂದು ಬೈಯ್ಯುತ್ತಿದ್ದಾಗ, ಎದುರು ಮನೆಯ ವಾಸಿಗಳಾದ  ಅರುಣ ಬಿನ್ ರಂಗಸ್ವಾಮಿ & ಯುವರಾಜು ಬಿನ್ ರಂಗಸ್ವಾಮಿ ರವರು ಸುಮ್ಮ ಸುಮ್ಮನೆ ಏಕೆ ಬೈಯ್ಯುತ್ತಿದ್ದೀಯ ಎಂದು ಜಗಳ ತೆಗೆದು ನಮ್ಮ ತಾಯಿಗೆ ಸೂಳೆಮುಂಡೆ, ನಿನ್ನನ್ನು ಸಾಯಿಸುತ್ತೇವೆಂದು ಬೈದರು, ನಂತರ ನಾನು ಮನೆಯಿಂದ ಹೊರಬಂದು ಇವರಿಗೆ ಏಕೆ ಬೈಯ್ಯುತ್ತೀರ ಎಂದು ಹೇಳಿದ್ದಕ್ಕೆ ಇಬ್ಬರೂ ನನಗೆ ಕಚಡನನ್ನ ಮಗನೆ, ಸೂಳೆ ಮಗನೆ ಎಂದು ಬೈದು ಇಬ್ಬರೂ ನನಗೆ ಕೈಗಳಿಂದ ಮುಖಕ್ಕೆ ಹೊಡೆದು ನಂತರ ಅರುಣನು ಸ್ಥಳದಲ್ಲಿ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ನನ್ನ ತಲೆಯ ಹಿಂಭಾಗಕ್ಕೆ ಹೊಡೆದನು ನಂತರ ಅದೇ ದೊಣ್ಣಯನ್ನು ಪಡೆದುಕೊಂಡು ಯುವರಾಜನು ನನ್ನ ಬೆನ್ನಿಗೆ ಹೊಡೆದನು ನಂತರ ಅರುಣನು ಕಲ್ಲಿನಲ್ಲಿ ನನ್ನ ಬೆನ್ನಿಗೆ ಹೊಡೆದನು ನಿಮ್ಮನ್ನ  ಇಷ್ಟಕ್ಕೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆಯನ್ನೂ ಸಹ ಹಾಕಿದರು, ನಂತರ ನಮ್ಮ ಗ್ರಾಮದ ಶಿವು ಬಿನ್ ಗಂಗಪ್ಪ & ಯಲ್ಲರಾಜು ಬಿನ್ ತಿಮ್ಮಾಬೋವಿ ಇವರುಗಳು ಜಗಳವನ್ನು ಬಿಡಿಸಿದರು, ನಂತರ ನಾನು ನಮ್ಮ ತಾಯಿಯೊಂದಿಗೆ & ನನ್ನ ಅಣ್ಣನಾದ ಮಂಜುನಾಥನೊಂದಿಗೆ  ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿ ನಾ ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಈ ದಿನ ಠಾಣೆಗೆ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಅರುಣ & ಯುವರಾಜರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಕೋರಿಕೊಳ್ಳುತ್ತೇನೆ. ಎಂತ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-143/2020 ಕಲಂ-323.324.504.506 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.



Thursday, 17 September 2020

ಅಪರಾಧ ಘಟನೆಗಳು 17-09-20

ಮಿಡಿಗೇಶಿ ಪೊಲೀಸ್ ಠಾಣೆ ಮೊ.ನಂ-86/2020 ಕಲಂ:143,147,148,323,324,504,506, ರೆ/ವಿ 149 ಐಪಿಸಿ

ದಿನಾಂಕ:16/09/2020 ರಂದು ಸಂಜೆ 6:30 ಗಂಟೆಗೆ ಪಿರ್ಯಾದಿ ಸುವರ್ಣಮ್ಮ ಕೋಂ ಮೂಡಲಗಿರಿಯಪ್ಪ, 40 ವರ್ಷ, ಕುರುಬರು, ಮನೆಕೆಲಸ, ತೋಂಡೋಟಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನ ಅಣ್ಣತಮ್ಮಂದಿರು ಒಟ್ಟು ಮೂರು ಜನರಿದ್ದು ನಮ್ಮೂರಿನಲ್ಲಿರುವ  ನಿವೇಶನದಲ್ಲಿ ಮೂರು ಜನರಿಗೂ ಸಮಭಾಗವಿರುತ್ತೆ. ನಾರಾಯಣಪ್ಪ ಎಂಬುವರು ಬಂಡೆಗಳನ್ನು ನಿಲ್ಲಿಸಿ ಶೆಡ್ ಮಾಡಿಕೊಂಡಿದ್ದಾರೆ. ನಮ್ಮ ಭಾಗದಲ್ಲಿ ನಾವು ಹುಲ್ಲು ಬಣವೆಯನ್ನು ಹಾಕಿಕೊಂಡಿರುತ್ತೇವೆ. ತಿಮ್ಮಯ್ಯ ಎಂಬುವರ ಭಾಗದ ನಿವೇಶನ ಖಾಲಿ ಇತ್ತು. ದಿನಾಂಕ:14/09/2020 ರಂದು ಸಂಜೆ ಸುಮಾರು 5:00 ಗಂಟೆ ಸಮಯದಲ್ಲಿ ತಿಮ್ಮಯ್ಯ ಎಂಬುವರು  ಅವರ ಭಾಗದ  ನಿವೇಶನದಲ್ಲಿ ಗುಡಿಸಲು ಹಾಕಲು ಮರದ ಗೂಟಗಳನ್ನು ನಿಲ್ಲಿಸುತ್ತಿದ್ದಾಗ ನಾರಾಯಣಪ್ಪ ಬಂದು ಇದು ನನ್ನ ಜಾಗ ಇನ್ನೂ ಸ್ವಲ್ಪ ಜಾಗ ಬಿಟ್ಟು ಗೂಟಗಳನ್ನು ನಿಲ್ಲಿಸಿಕೊ ಎಂತ ಹೇಳಿದರು. ಆಗ  ಅಲ್ಲಿಯೇ ಇದ್ದ ನನ್ನ ಗಂಡ ಮೂಡಲಗಿರಿಯಪ್ಪ  ಎಲ್ಲರಿಗೂ ಸಮಭಾಗವಿದೆ ಅದರಂತೆ ನಿಮ್ಮ ನಿಮ್ಮ ಜಾಗದಲ್ಲಿ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂತ ಹೇಳಿದ್ದಕ್ಕೆ  ನಾರಾಯಣಪ್ಪ ಬಿನ್ ದಾಸಪ್ಪ, ರತ್ನಮ್ಮ ಕೋಂ ನಾರಾಯಣಪ್ಪ, ದೇವರಾಜ ಬಿನ್ ನಾರಾಯಣಪ್ಪ, ರಾಘವೇಂದ್ರ ಬಿನ್ ನಾರಾಯಪ್ಪ, ನವೀನ ಬಿನ್ ನಾರಾಯಣಪ್ಪ, ಶಿವಣ್ಣ ಬಿನ್ ಗಿರಿಯಪ್ಪ, ರವರುಗಳು ಅಕ್ರಮ ಗುಂಪ್ಪು ಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ನನ್ನ ಗಂಡನ ಮೇಲೆ ಗಲಾಟೆ ಮಾಡಿ ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ ನವೀನ ಎಂಬುವನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಗಂಡ ಮೂಡಲಗಿರಿಯಪ್ಪನ ತಲೆಗೆಹೊಡೆದು ರಕ್ತಗಾಯಮಾಡಿದನು. ನಂತರ ರಾಘವೇಂದ್ರ ಎಂಬುವನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಗಂಡನ ಬಲಕಾಲಿಗೆ ಹೊಡೆದು ರಕ್ತಗಾಯಮಾಡಿದನು. ನಂತರ ದೇವರಾಜು ಎಂಬುವನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಗಂಡನ ಬೆನ್ನಿಗೆ ಹೊಡೆದನು.ಜಗಳ ಬಿಡಿಸಲು ಹೋದ ತಿಮ್ಮಯ್ಯ ರವರಿಗೆ ನಾರಾಯಣಪ್ಪನು ಸಿಮೆಂಟ್ ಇಟ್ಟಿಗೆ ಚೂರಿನಿಂದ ಬೆನ್ನಿಗೆ ಹೊಡೆದನು. ಗಲಾಟೆಯನ್ನು ಕೇಳಿಸಿಕೊಂಡು ಸ್ಥಳಕ್ಕೆ ಬಂದ ಮಂಜುನಾಥ ಮತ್ತು ನನ್ನ ಮಗ ಲೋಕೇಶ  ಹಾಗೂ ತಿಮ್ಮಯ್ಯನ ಹೆಂಡತಿ ರತ್ನಮ್ಮ ರವರು ಏಕೆ ಗಲಾಟೆ ಮಾಡುತ್ತಿದ್ದಾರಾ ಎಂತ ಕೇಳಿದ್ದಕ್ಕೆ ದೇವರಾಜನು ಆತನ ಕೈಯಲ್ಲಿದ್ದ ದೊಣ್ಣೆಯಿಂದ ಮಂಜುನಾಥನ ಬೆನ್ನಿಗೆ ಹೊಡೆದನು. ನಾರಾಯಣಪ್ಪನು ಕೈಗಳಿಂದ ಮಂಜುನಾಥನ ಮುಖಕ್ಕೆ ಹೊಡೆದನು. ಶಿವಣ್ಣನು ಕಲ್ಲಿನಿಂದ ಲೋಕೇಶನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ನಾರಾಯಣಪ್ಪನ ಹೆಂಡತಿ ರತ್ನಮ್ಮಳು  ತಿಮ್ಮಯ್ಯನ ಹೆಂಡತಿ ರತ್ನಮ್ಮಳನ್ನು ಕೆಳಕ್ಕೆ ಕೆಡವಿಕೊಂಡು  ಕೈಗಳಿಂದ ಗುದ್ದಿದಳು. ಅಷ್ಠರಲ್ಲಿ ಗಲಾಟೆ ಜಾಸ್ತಿಯಾಗಿ ಅಲ್ಲಿಯೇ ಇದ್ದ ನಮ್ಮೂರಿನ ಚಿಕ್ಕನರಸಿಂಹಪ್ಪ ಮತ್ತು ಕೃಷ್ಣಪ್ಪ ರವರುಗಳು ಜಗಳ ಬಿಡಿಸಿ ಸಮಾದಾನಪಡಿಸಿದರು.ಅಷ್ಠಕ್ಕೂ ಸುಮ್ಮನಾಗದ  ಮೇಲ್ಕಂಡ 06 ಜನರು ನಿಮ್ಮನ್ನು ಇಷ್ಠಕ್ಕೆ ಬಿಡುವುದಿಲ್ಲ ನಿಮಗೊಂದು ಗತಿ ಕಾಣಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿ ತಮ್ಮ ಕೈಗಳಲ್ಲಿದ್ದ ವಸ್ತುಗಳನ್ನು ಅಲ್ಲಿಯೇ ಎಸೆದು ಹೊರಟು ಹೋದರು. ನಂತರ ಸ್ಥಳಕ್ಕೆ ಆಂಬ್ಯೂಲೇನ್ಸ್ ಕರೆಸಿಕೊಂಡು ಗಲಾಟೆಯಲ್ಲಿ ಗಾಯಗೊಂಡಿದ್ದ ನನ್ನ ಗಂಡ ಮೂಡಲಗಿರಿಯಪ್ಪ, ರತ್ನಮ್ಮ, ಲೋಕೇಶ, ಮಂಜುನಾಥ ರವರುಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದೆನು. ನನ್ನ ಗಂಡನಿಗೆ ಜಾಸ್ತಿ ಗಾಯವಾಗಿದ್ದರಿಂದ ಅವರನ್ನು ತುಮಕೂರಿಗೆ ಕರೆದುಕೊಂಡು ಹೋಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿ ಇಲ್ಲಿಯವರೆಗೆ ಅವರ ಯೋಗಕ್ಷೇಮವನ್ನು ನೋಡಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡ 06 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡದ ದೂರಿನ ಅಂಶವಾಗಿರುತ್ತೆ.

ತುಮಕೂರು ಸಿಇಎನ್ ಪೊಲೀಸ್ ಠಾಣೆ ಮೊ.ನಂ 131/2020 ಕಲಂ 66(ಸಿ)(ಡಿ) ಐಟಿ ಆಕ್ಟ್ ಮತ್ತು ಕಲಂ 419, 420 ಐಪಿಸಿ

ದಿನಾಂಕ:16/09/2020 ರಂದು ಪಿರ್ಯಾದಿ  ಆಸ್ಮಾ ಕೌಸರ್  ಬಿನ್ ಸಮಿಲ್ಲಾ  ಗಾಂದಿ ನಗರ ತುಮಕೂರು  ರವರು ಠಾಣಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು www.onlinematchpoint.com ಗೆ 6,000/- ರೂ ಪಾವತಿಸಿದ್ದೆನು. ಆದರೆ ಈ ವೆಬ್ ಸೈಟ್ ನವರು ಮೋಸ ಮಾಡುತ್ತಿದ್ದಾರೆಂದು ನಾನು ಪಾವತಿಸಿದ ಹಣವನ್ನು ವಾಪಸ್ಸು ಪಡೆಯಬೇಕೆಂದಿದ್ದೆ.  ಆಗ ದಿನಾಂಕ:15/09/2020 ರಂದು  ಸಂಜೆ 4:35 ಗಂಟೆಯಿಂದ 9625949739, 8637304574, 7866047331 ಸಂಖ್ಯೆಯಿಂದ ನನ್ನ ನಂಬರ್ ಗೆ ರಾಕೇಶ್ ಎಂಬ ವ್ಯಕ್ತಿ ಗ್ರಾಹಕ್ ಸುರಕ್ಷಾ ಪೊರ್ಟಲ್ ನಿಂದ ಕರೆ ಮಾಡುತ್ತಿದ್ದೇವೆಂದು ತಿಳಿಸಿ ನನ್ನ ಮೊಬೈಲ್ ನಲ್ಲಿ Quicksupport App ಇನ್ಸ್ಟಾಲ್ ಮಾಡಿಸಿ ಕಸ್ಟಮರ್ ಐಡಿಯನ್ನು ಪಡೆದುಕೊಂಡರು. ಆಗ ನನ್ನ ಮೊಬೈಲ್ಗೆ ಬರುತ್ತಿದ್ದ OTP ಯನ್ನು ಪಡೆದುಕೊಂಡು ನನ್ನ ಖಾತೆಯಿಂದ 25,000/- ರೂ ಹಣವನ್ನು ಸಂಜೆ 6:32ರ ಸಮಯದಲ್ಲಿ ಖಾತೆಸಂಖ್ಯೆ 630901547098 IFSC code ICIC0006309 ಗೆ ವರ್ಗಾವಣೆ ಮಾಡಿಕೊಂಡನು. ಆದ್ದರಿಂದ ನನಗೆ ವಂಚಿಸಿರುವ ಅಪರಿಚಿತ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳ ಬೇಕೆಂದು ಪಿರ್ಯಾದು.

ಹೆಬ್ಬೂರು  ಪೊಲೀಸ್ ಠಾಣಾ ಠಾಣ ಮೊ ನಂ-131/2020 ಕಲಂ 279,337 ಐಪಿಸಿ ರೆ/ವಿ 187 ಐಎಂವಿ ಆ್ಯಕ್ಟ್

ದಿನಾಂಕ-16/09/2020 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಕೆಂಪಹನುಮಯ್ಯ ಬಿನ್ ಲೇಟ್ ಹನುಮಂತಯ್ಯ, 54 ವರ್ಷ. ವ್ಯವಸಾಯ, ನಾಯಕ ಜನಾಂಗ, ಚಿಕ್ಕ ಕೊರಟಗೆರೆ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:-06-09-2020 ರಂದು ಸಾಯಂಕಾಲ ಸುಮಾರು 6-00 ಗಂಟೆಯ ಸಮಯದಲ್ಲಿ ನನ್ನ ಮಗನಾದ 24 ವರ್ಷದ ದಯಾನಂದ.ಸಿ.ಕೆ. ಹಾಗೂ ನನ್ನ ದೊಡ್ಡಪ್ಪನ ಮೊಮ್ಮಗನಾದ 23 ವರ್ಷದ ಸಿ.ಹೆಚ್.ಶಶಿಕುಮಾರ್.ರವರು ಅವರ ಬಾಬ್ತು ದ್ವಿಚಕ್ರ ವಾಹನ ನಂಬರ್ ಕೆಎ-06-ಇ.ವೈ.-9544 ನೇ ಹೀರೋ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೊನ್ನುಡಿಕೆ ಗ್ರಾಮಕ್ಕೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಬರಲು ಚಾಲಕನಾಗಿ ನನ್ನ ಮಗ ದಯಾನಂದ.ಸಿ.ಕೆ ರವರು ಇದ್ದು, ಹಿಂಬದಿಯಲ್ಲಿ ಸಿ.ಹೆಚ್.ಶಶಿಕುಮಾರ್ ರವರು ಕುಳಿತುಕೊಂಡು ಹೊನ್ನುಡಿಕೆ-ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಕಡೆಗೆ ಹೋಗುತ್ತಿದ್ದಾಗ ಹೊನ್ನುಡಿಕೆ ಚಿಕ್ಕ ಕೆರೆಯ ಏರಿ ಹಿಂಭಾಗದ ರಸ್ತೆಯಲ್ಲಿ ಸಾಯಂಕಾಲ ಸುಮಾರು 7-15  ಗಂಟೆಯಲ್ಲಿ ಹೋಗುತ್ತಿದ್ದಾಗ  ಅದೇ ಸಮಯಕ್ಕೆ ಹೊನ್ನುಡಿಕೆ ಕಡೆಯಿಂದ ಹಿಂದಿನಿಂದ ಒಂದು ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಮಗ ಓಡಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಅಪಘಾತಪಡಿಸಿದ ಕಾರಣ ದ್ವಿಚಕ್ರ ವಾಹನದ ಸಮೇತ ರಸ್ತೆಯ ಬಲಭಾಗಕ್ಕೆ ಇಬ್ಬರೂ ಬಿದ್ದಾಗ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪೆಟ್ಟಿಗೆ ಅಂಗಡಿ ಬಳಿ ನಿಂತಿದ್ದ ಹೊನ್ನುಡಿಕೆ ವಾಸಿ ಗಂಗರಾಜು ರವರು ನೋಡಿ ಓಡಿ ಹೋಗಿ ಉಪಚರಿಸಿ ನೋಡಲಾಗಿ ನನ್ನ ಮಗ ಮತ್ತು ನನ್ನ ದೊಡ್ಡಪ್ಪನ ಮೊಮ್ಮಗನನ್ನು ಗುರ್ತಿಸಿ ನನಗೆ ಫೋನ್ ಮಾಡಿ ಅಪಘಾತವಾಗಿರುವ ವಿಚಾರ ತಿಳಿಸಿದಾಗ  ನಮ್ಮ ಗ್ರಾಮದಲ್ಲಿದ್ದ  ನಾನು ನನ್ನ ಕಾರಿನಲ್ಲಿ ಬಂದು ಸಾಯಂಕಾಲ 7-30 ಗಂಟೆಯಲ್ಲಿ ನೋಡಲಾಗಿ ನನ್ನ ಮಗನಿಗೆ ಬಲಕಾಲಿನ ತೊಡೆ ಮೂಳೆ ಮುರಿದು ಮಾಂಸ ಖಂಡದಿಂದ ಮೂಳೆ ಹೊರ ಬಂದಿದ್ದು, ರಕ್ತಗಾಯವಾಗಿತ್ತು, ಹಾಗೂ ಬಲಕಾಲಿನ ಇಮ್ಮಡಿ ಮೂಳೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು, ಬಲ ಮೊಣಕೈ ಬಳಿ ತರಚಿದ ರಕ್ತಗಾಯವಾಗಿತ್ತು, ಹಾಗೂ ಸಿ.ಹೆಚ್.ಶಶಿಕುಮಾರ್ ರವರನ್ನು ನೋಡಲಾಗಿ ಬಲಕಾಲಿನ ಮಂಡಿ ಚಿಪ್ಪು ಹೊಡೆದು ಹೋಗಿ ರಕ್ತ ಸೋರುತ್ತಿತ್ತು, ಹಾಗೂ ಬಲಕಾಲಿನ ತೊಡೆ ಮೂಳೆ ಮುರಿದು ಹೋಗಿತ್ತು, ಬಲ ಮೊಣಕೈ ತರಚಿದ ರಕ್ತಗಾಯವಾಗಿತ್ತು, ನಂತರ ನನ್ನ ಮಗನಿಗೆ ಅಪಘಾತಪಡಿಸಿದ ಕಾರಿನ ನಂಬರ್ ಕೇಳಲಾಗಿ ಕೆಎ-03-ಎಂ.ಡಿ-2613 ನೇ ನಂಬರಿನ ಇಂಡಿಕಾ ಕಾರು ಆಗಿದ್ದು ಚಾಲಕ ನಿಲ್ಲಿಸದೇ ಓಡಿಸಿಕೊಂಡು ಹೊರಟು ಹೋದನೆಂತ ತಿಳಿಸಿದ್ದು, ನನ್ನ ಮಗ ಓಡಿಸಿಕೊಂಡು ಬಂದಿದ್ದ ದ್ವಿಚಕ್ರ ವಾಹನವನ್ನು ನೋಡಲಾಗಿ ಜಖಂ ಆಗಿತ್ತು, ನಂತರ ನಾನು ಕೂಡಲೇ ಪ್ರೈವೇಟ್ ಆಂಬುಲೆನ್ಸ್ ಕರೆಸಿಕೊಂಡು ಇಬ್ಬರನ್ನು, ನಾನು, ಗಂಗರಾಜು, ಪುಲ್ಲಸಂದ್ರ ವಾಸಿ ನಾಗರಾಜು ರವರೊಂದಿಗೆ ಬೆಂಗಳೂರು ಪೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿ ನನ್ನ ಮಗ ದಯಾನಂದ.ಸಿ.ಕೆ ರವರಿಗೆ ದಿನಾಂಕ:-10-09-2020 ರಂದು ಹಾಗೂ ಸಿ.ಹೆಚ್.ಶಶಿಕುಮಾರ್ ರವರಿಗೆ ದಿನಾಂಕ:-15-09-2020 ರಂದು ಬಿಡುಗಡೆ ಮಾಡಿಸಿ ಮನೆಗೆ ಕರೆದುಕೊಂಡು ಬಂದಿರುತ್ತೇನೆ, ಆಸ್ಪತ್ರೆಯಲ್ಲಿ ಅವರ ಆರೈಕೆ ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ನಾನು ಇದುವರೆವಿಗೂ ಅವರ ಆರೈಕೆ ನೋಡಿಕೊಂಡಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ಅಪಘಾತಕ್ಕೆ ಕಾರಣನಾದ ಕೆಎ-03-ಎಂ.ಡಿ-2613 ನೇ ಇಂಡಿಕಾ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-131/2020 ಕಲಂ 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.



Wednesday, 16 September 2020

ಅಪರಾಧ ಘಟನೆಗಳು 16-09-20

ಚಿನಾಹಳ್ಳಿ ಪೊಲೀಸ್ ಠಾಣಾ ಮೊ.ನಂ. 94/2020 ಕಲಂ 323, 324, 504, 506 ಐಪಿಸಿ

ದಿನಾಂಕ:13/09/2020 ರಂದು ಬೆಳಿಗ್ಗೆ 11.00 ಗಂಟೆಗೆ ಅರ್ಜಿದಾರರಾದ ದಕ್ಷತ್ ಗೌಡ, ಜೆ,ಕೆ, ಬಿನ್ ಕಳಸೇಗೌಡ, 19 ವರ್ಷ ಕುರುಬ ಜನಾಂಗ ಜೋಗಿಹಳ್ಳಿ, ಬಿ.ಸಿ.ಎ. ವಿದ್ಯಾರ್ಥಿ ಚಿನಾ ಹಳ್ಳಿ ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಅತ್ತೆ ಲಕ್ಕಮ್ಮನವರನ್ನು ಇದೇ ಜೋಗಿಹಳ್ಳಿ ವಾಸಿ ಕೆಂಪಲಿಂಗಯ್ಯ ನವರಿಗೆ ಕೊಟ್ಟು ವಿವಾಹ ಮಾಡಿದ್ದು. ನನ್ನ ಮಾವ ಕೆಂಪಲಿಂಗಯ್ಯ ನವರು ಮದ್ಯಪಾನ ಜೂಜಾಟಕ್ಕೆ ಹಣ ಪೋಲು ಮಾಡುತಿದ್ದು. ಸಂಸಾರವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಾದ್ದರಿಂದ ನನ್ನ ಅತ್ತೆ ಲಕ್ಕಮ್ಮ ನವರು ಬೇಸತ್ತು ಈಗ ಐದು ವರ್ಷದ ಹಿಂದೆ ತನ್ನ ಮಗಳಾದ ಪ್ರೇಮ ರವರನ್ನು ಕೊಟ್ಟಿರುವ ಊರಾದ ದಾಸೀಹಳ್ಳಿಯಲ್ಲಿ ಹೋಗಿ ವಾಸವಿದ್ದರು. ಈಗ್ಗೆ ಒಂದು ವಾರದ ಹಿಂದೆ ನಮ್ಮ ತಂದೆ ನಮ್ಮ ಅತ್ತೆ ಮತ್ತು ಅವರ ಜೊತೆಯಲ್ಲಿ ಇದ್ದ ಮಗನಾದ ರಾಜು ರವರನ್ನು ಕರೆಸಿ ಜೋಗಿಹಳ್ಳಿಯಲ್ಲಿ ನಮ್ಮ ಮನೆಯ ಪಕ್ಕದ ನಮ್ಮ ಮನೆಯಲ್ಲಿಯೇ ಇರುವಂತೆ ನಮ್ಮ ತಂದೆ ಕರೆಸಿಕೊಂಡು ಬಂದು ಇರಿಸಿದ್ದರು. ಆದರೆ ಈ ದಿನ ಬೆಳಿಗ್ಗೆ 08.30 ರ ಸಮಯದಲ್ಲಿ ನಮ್ಮ ಮಾವ ಕೆಂಪಲಿಂಗಯ್ಯ ಬಿನ್ ಲಿಂಗದಾಳಯ್ಯ ರವರು ನಮ್ಮ ಅತ್ತೆ ವಾಸವಿರುವ ಮನೆಯ ಹತ್ತಿರ ಬಂದು ನಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು  ತಂದು ಇಲ್ಲಿ ಇದ್ದೀರಾ ಎಂದು ತನ್ನ ಹೆಂಡತಿ ಮಗ ಮತ್ತು ನಮ್ಮನ್ನು ಲೋಪರ್ ನನ್ನ ಮಕ್ಕಳು ಸೂಳೆ ಮಕ್ಕಳು ಇತ್ಯಾದಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ, ರಾಜು ನೀನು ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದಾಗ ಕೆಂಪಲಿಂಗಯ್ಯ ರಾಜುವಿಗೆ ಕೈಗಳಿಂದ ಹೊಡೆಯುತ್ತಿದ್ದರು. ಆಗ ನಮ್ಮ ಮನೆಯ ಬಳಿ ಇದ್ದ ನಾನು ಮತ್ತು ನಮ್ಮ ತಂದೆ ಏಕೆ ಈ ರೀತಿ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಲಾಗಿ ಕೆಂಪಲಿಂಗಯ್ಯ ನಮ್ಮನ್ನು ಲೋಪರ್ ನನ್ನ ಮಕ್ಕಳು ನೀವು ಬಂದಿರ ಎಂದು ಬೈಯುತ್ತಾ ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ನಮ್ಮ ತಂದೆ 48 ವರ್ಷದ ಕಳಸೇಗೌಡರ ಬಲ ಮೊಣಕೈಗೆ ಹೊಡೆದು ಪೆಟ್ಟು ಮಾಡಿ ನಿಮ್ಮೆಲ್ಲರನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆ. ತಕ್ಷಣ ನಾನು ನಮ್ಮ ತಂದೆಯವರಾದ ಕಳಸೇಗೌಡರನ್ನು ಸಾಯಿಗಂಗಾ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿರುತ್ತಾರೆ. ಆದ್ದರಿಂದ ನಮ್ಮ ಮೇಲೆ ಗಲಾಟೆ ಮಾಡಿದ ಕೆಂಪಲಿಂಗಯ್ಯ ನವರ ಮೇಲೆ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಂದು ಕೋರಿಕೊಳ್ಳುತ್ತೇನೆ ಎಂದು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಠಾಣಾ ಮೊ.ನಂ. 94/2020 ಕಲಂ 323, 324, 504, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ Cr  No 127/2020 ಕಲಂ  279, 337 IPC

ದಿನಾಂಕ:15-09-2020 ರಂದು ಮದ್ಯಾಹ್ನ 03-30 ಗಂಟೆಗೆ ಪಿರ್ಯಾದಿ ಶಂಕರಪ್ಪ ಬಿನ್ ಮಾಯಾಣ್ಣಗೌಡ, 67 ವರ್ಷ, ವಕ್ಕಲಿರು, ದೊಡ್ಡಗಾಳಿಹಳ್ಳಿ ಗ್ರಾಮ, ಪುರವಾರ ಹೋಬಳಿ ಮಧುಗಿರಿ ತಾ||  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ದಿನಾಂಕ;13.09.2020 ರಂದು ಭಾನುವಾರವಾದ ಕಾರಣ ಪಿರ್ಯಾದಿಯ ಮಗನಾದ ಶ್ರೀಕಂಠೇಗೌಡನು ಅತನ ಬೈಕ್ ನಲ್ಲಿ ಪಿರ್ಯಾದಿಯ ಸೊಸೆ ಗುಣಶ್ರೀ ಮತ್ತು ಮೊಮ್ಮಗಳಾದ  ಗಗನ ರವರೊಂದಿಗೆ ಬೆಂಗಳೂರಿನಿಂದ ತಮ್ಮ ಊರಿಗೆ ಬರುತ್ತಿದ್ದನು,ನಂತರ ತಿಳಿಯಲಾಗಿ ಮಧುಗಿರಿ ಬೈಪಾಸ್ ರಸ್ತೆಯಲ್ಲಿ ಅಪಘಾತವಾಗಿರುತ್ತೆಂದು ತಿಳಿದು ಮಧುಗಿರಿ ಅಸ್ಪತ್ರೆಗೆ ಪಿರ್ಯಾದಿಯು ಬಂದು ನೋಡಲಾಗಿ ಶ್ರೀಕಂಠೇಗೌಡ, ಗುಣಶ್ರೀ ಗಗನ ರವರಿಗೆ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರು,ನಂತರ ಈ ಅಪಘಾತದ ಬಗ್ಗೆ ಅಸ್ಪತ್ರೆಯಲ್ಲಿ ನಮ್ಮವರಿಗೆ ಚಿಕಿತ್ಸೆ ಕೊಡಿಸಲು ಸಹಕರಿಸುತ್ತಿದ್ದ ಹರಿಹರರೋಪ್ಪ ಗ್ರಾಮದ ರಾಜಣ್ಣ ಬಿನ್ ಲೇ|| ರಂಗಪ್ಪ ರವರನ್ನು ಕೇಳಲಾಗಿ ಇದೇ ದಿನ ದಿನಾಂಕ;13.09.2020 ರಂದು ಬೆಳಗ್ಗೆ;09.30 ಗಂಟೆಯ ಸುಮಾರಿನಲ್ಲಿ ನಾನು ಬೈಪಾಸ್ ಬಳಿ ಇರುವಾಗ್ಗೆ ಇದೇ ವೇಳೆಗೆ ಮಧುಗಿರಿ ಕೋರ್ಟ ಸಮೀಪವಿರುವ ಬೈಪಾಸ್ ರಸ್ತೆಯ ನಾಗಭೂಷಣ ರವರ ಜಮೀನು ಬಳಿ ಮಧುಗಿರಿ – ತುಮಕೂರು ರಸ್ತೆಯಲ್ಲಿ ತುಮಕೂರು ರಸ್ತೆ ಕಡೆಯಿಂದ ನಿನ್ನ ಮಗನಾದ ಶ್ರೀಕಂಠೇಗೌಡನು KA- 04-KC-2467 ನೇ ಬೈಕ್ ಅನ್ನು ಜೋರಾಗಿ ಸವಾರಿಕೊಂಡು ಬಂದು,ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡು  ರಸ್ತೆಯ ಪಕ್ಕದಲ್ಲಿರುವ ಬ್ಯಾರಕೇಟ್ಸ್ ಗೆ ಡಿಕ್ಕಿ ಹೊಡೆದನು ಇದರಿಂದಾಗಿ ಈ ಬೈಕ್ ನಲ್ಲಿದ್ದ ನಿನ್ನ ಮಗ ಶ್ರೀಕಂಠೇಗೌಡ,ನಿನ್ನ ಸೊಸೆಯಾದ ಗುಣಶ್ರೀ ಹಾಗು ನಿನ್ನ ಮೊಮ್ಮಗಳಾದ ಗಗನ ರವರಿಗೆ ಗಾಯಗಳಾಗಿದ್ದು, ನಂತರ ನಾನು ಹಾಗು ಇತರೆಯರು ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆಂದು ತಿಳಿಸಿದರು,ನಂತರ ವೈದ್ಯರ ಸಲಹೆಯಂತೆ ಗಾಯಾಳುಗಳನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಗಗನ ರವರನ್ನು ಬೆಂಗಳೂರಿನ ಪಕ್ರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿರುತ್ತೇವೆ,ಗಾಯಾಳುಗಳನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅದ್ದರಿಂದ ಈ ಅಪಘಾತ ಮಾಡಿರುವ KA-04-KC-2467 ನೇ ಬೈಕ್ ನ ಸವಾರನಾದ ಶ್ರೀಕಂಠೇಗೌಡನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಠಾಣ ಮೊ ನಂ-130/2020 ಕಲಂ 279,337 ಐಪಿಸಿ

ದಿನಾಂಕ-15/09/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಪುಟ್ಟರಾಜು ಬಿನ್ ಶೆಟ್ಟಳಯ್ಯ, 32 ವರ್ಷ, ಅದಿಕರ್ನಾಟಕ ಜನಾಂಗ, ವ್ಯವಸಾಯ, ಸಾಸಲು ಗ್ರಾಮ, ಗೂಳೂರು ಹೋಬಳಿ ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲಿನ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನ್ನ ಹೆಂಡತಿ ಚಿಕ್ಕಮ್ಮ ರವರ ತವರು ಮನೆಯಾದ ಹೆಬ್ಬೂರು ಹೋಬಳಿ ಗಂಗೋನಹಳ್ಳಿ ಗ್ರಾಮಕ್ಕೆ ಬಾಣಂತಿತನಕ್ಕೆ ಬಂದಿದ್ದು, ನನ್ನ 3 ತಿಂಗಳ ಹೆಣ್ಣು ಮಗುವಿಗೆ ಆರೋಗ್ಯ ಸರಿ ಇಲ್ಲದೇ ಇದ್ದುದ್ದರಿಂದ ದಿನಾಂಕ-13/09/2020 ರಂದು ಗಂಗೋನಹಳ್ಳಿ ಗ್ರಾಮದ ವಾಸಿ ರಾಮಚಂದ್ರ ರವರ ಬಾಬ್ತು ಕೆಎ-06-ಹೆಚ್‌ಜಿ-8051 ನೇ ಆಕ್ಟಿವಾ ದ್ವಿಚಕ್ರ ವಾಹನವನ್ನು ಪಡೆದು ನಾಗವಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ರಾತ್ರಿ 8-00 ಗಂಟೆಗೆ ನಾನು ಮತ್ತು ಮಗುವನ್ನು ನನ್ನ ಅತ್ತೆ ಹುಚ್ಚಮ್ಮ ಕೋಂ ದೊಡ್ಡಯ್ಯ, 40 ವರ್ಷ, ಆದಿಕರ್ನಾಟಕ, ಗೃಹಿಣಿ, ಗಂಗೋನಹಳ್ಳಿ , ಹೆಬ್ಬೂರು ಹೋಬಳಿ ರವರ ಜೊತೆ, ಸದರಿ ದ್ವಿಚಕ್ರ ವಾಹನದ ಹಿಂಬದಿ ಕುಳಿಸಿಕೊಂಡು ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ನಾಗವಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿ ನಂತರ ವಾಪಸ್ ಗಂಗೋನಹಳ್ಳಿ ಗ್ರಾಮಕ್ಕೆ ಸದರಿ ದ್ವಿಚಕ್ರ ವಾಹನದಲ್ಲಿ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಕುಣಿಗಲ್-ತುಮಕೂರು ರಸ್ತೆಯ ನಾಗವಲ್ಲಿ ಗ್ರಾಮದ ಸಿರಿವಾರ ಕ್ರಾಸ್ ಕಡೆ ನಾನು ಚಾಲನೆ ಮಾಡುತ್ತಿದ್ದ ಕೆಎ-06-ಹೆಚ್‌ಜಿ-8051 ನೇ ಆಕ್ಟಿವಾ ದ್ವಿಚಕ್ರ ವಾಹನವನ್ನು ತಿರುಗಿಸಿಕೊಳ್ಳುತ್ತಿದ್ದಾಗ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಒಂದು ಕಾರಿನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ನಾವು ವಾಹನದ ಸಮೇತ ರಸ್ತೆಯ ಮೇಲೆ ಬಿದ್ದೆವು, ನಮ್ಮ ಹಿಂದೇ ಬರುತ್ತಿದ್ದ ಗಂಗೋನಹಳ್ಳಿ ವಾಸಿ ನರಸಿಂಹಮೂರ್ತಿ ಬಿನ್ ನಂಜಯ್ಯ ರವರು ನಮ್ಮಗಳನ್ನು ಉಪಚರಿಸಿಲಾಗಿ ನನಗೆ ಯಾವುದೇ ಗಾಯಗಳಾಗಿಲಿಲ್ಲ, ನನ್ನ ಅತ್ತೆ ಹುಚ್ಚಮ್ಮರವರನ್ನು ನೋಡಲಾಗಿ ಎಡಗಾಲಿಗೆ ರಕ್ತಗಾಯವಾಗಿ ಕೈಗಳಿಗೆ ತರಚಿದ ಗಾಯಗಳಾಗಿದ್ದು, ಮತ್ತು ಮಗುವಿಗೆ ಯಾವುದೇ ಗಾಯಗಳಾಗಿರಲಿಲ್ಲ, ಅಲ್ಲೆ ಇದ್ದ ನಮಗೆ ಅಪಘಾತ ಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ-06-ಎನ್-6895 ನೇ ಇಂಡಿಕಾ ಕಾರಾಗಿದ್ದು, ನಂತರ ಗಾಯಾಳುವನ್ನು ಯಾವುದೋ ಒಂದು ಖಾಸಗಿ ವಾಹನದಲ್ಲಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯರಲ್ಲಿ ತೋರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಹೆಮಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈಧ್ಯರ ಸಲಹೇ ಮೇರೆಗೆ ಗಾಯಾಳು ಹುಚ್ಚಮ್ಮ ರವರಿಗೆ ಶಸ್ರ್ತ ಚಿಕಿತ್ಸೆ  ಮಾಡಿಸಿ, ಗಾಯಾಳುವನ್ನು ನೋಡಿಕೊಳ್ಳಲು ಯಾರು ಇಲ್ಲದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ನಮಗೆ ಅಪಘಾತ ಪಡಿಸಿದ  ಕೆಎ-06-ಎನ್-6895 ನೇ ಇಂಡಿಕಾ ಕಾರಿನ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿರುತ್ತೇನೆ, ಎರಡು ವಾಹನಗಳು ಅಪಘಾತವಾದ ಸ್ಥಳದಲ್ಲೆ ರಸ್ತೆಯ ಪಕ್ಕ ಇರುತ್ತೆ ಎಂತಾ ನೀಡಿದ ದೂರನ್ನು ಪಡೆದು ಠಾಣ ಮೊ ನಂ-130/2020 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಮೊನಂ, 84/2020 ಕಲಂ.279.337.ಐಪಿಸಿ

ದಿನಾಂಕ:15-09-2020 ರಂದು ಬೆಳಿಗ್ಗೆ 11-00 ಗಂಟೆಗೆ ಈರಪ್ಪ ಬಿನ್‌ ಮಾಸ್ತಪ್ಪ 50 ವರ್ಷ ಬೆಸ್ತರ ಜನಾಂಗ ಕೂಲಿಕೆಲಸ ಅಣ್ಣೇನಹಳ್ಳಿ ಕಸಬಾ ಹೋಬಳಿ ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ 13/09/2020 ರಂದು ಅಣ್ಣೇನಹಳ್ಳಿ ಶಶಿಧರ ರವನ ಮನೆಗೆ ಪೈಂಟ್‌ ತರಲು ತಿಪಟೂರಿಗೆ ಹೋಗಲು ಶಶಿಧರರವರ ಬಾಬ್ತು ಕೆ,ಎ-13 ಇ,ಅರ್- 2554 ನೇ ನಂಬರಿನ ಹೊಂಡಾ ಆಕ್ಟೀವಾ ಬೈಕಿನಲ್ಲಿ ಶಶಿಧರ ರವರು ಬೈಕ್ ಓಡಿಸುತ್ತಿದ್ದರು ನಾನು ಅವರ ಹಿಂದೆ ಕುಳಿತಿದ್ದೆ ಇದೇ ದಿನ ಸಂಜೆ ಸುಮಾರು 04.00 ಗಂಟೆ ಸಮಯದಲ್ಲಿ ಬೈರಾಪುರ ಗೇಟ್ ಸಮೀಪ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ನಮ್ಮ ಹಿಂದೆ ಅರಸೀಕೆರೆ ಕಡೆಯಿಂದ ಬಂದ ಒಬ್ಬ ಕಾರಿನ ಚಾಲಕ ತನ್ನ ಕಾರನ್ನು ಅತಿ ಜೋರಾಗಿ ಓಡಿಸಿಕೊಂಡು ಬಂದು ನಮ್ಮ ಬೈಕಿಗೆ ಓವರ್ ಟೇಕ್ ಮಾಡಲು ಹೋದಾಗ ನಾವು ಹೋಗುತ್ತಿದ್ದ ಬೈಕಿಗೆ ಕಾರು ತಗುಲಿದ್ದರಿಂದ ನಾವು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಶಶಿಧರ ರವರಿಗೆ ಎಡ ಬಂಡಿ ಮತ್ತು ಎಡಗೈ  ಮೊಣಕೈ ಹತ್ತಿರ ಹಾಗೂ ಮತ್ತಿತರ ಕಡೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ ನನಗೆ ಎಡಗೈ ಮೊಣಕೈ ಹತ್ತಿರ ತರಚು ಗಾಯವಾಗಿರುತ್ತೆ ಗಾಯಾಗೊಂಡಿದ್ದ ನಮ್ಮನ್ನು ನಮಗೆ ಅಪಘಾತ ಪಡಿಸಿದ ಕಾರಿನ ಚಾಲಕ ಅದೇ ಕಾರಿನಲ್ಲಿ ತಿಪಟರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಧಾಖಲಿಸಿರುತ್ತಾರೆ ನನಗೆ ಚಿಕಿತ್ಸೆ ಪಡೆಯುವಂತಹ ಯಾವುದೇ ಗಾಯಾಗಳು ಆಗದ ಕಾರಣ ಚಿಕಿತ್ಸೆ ಪಡೆದಿರುವುದಿಲ್ಲ ನಮಗೆ ಅಫಗಾತ ಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆ,ಎ-02 ಡಿ-5971 ಇನೋವಾ ಕಾರಾಗಿರುತ್ತೆ ಶಶಿಧರ ರೆವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹಾಸನದ ಹೇಮಾವತಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದರಿಂದ ಶಶಿಧರ ರವರನ್ನು ಹಾಸನದ ಹೇಮಾವತಿ ಆಸ್ಪತ್ರೆಗೆ ದಾಖಲು ಮಾಡಿರುತ್ತೆ ಶಶಿಧರ ರವರನ್ನು ಆಸ್ಪತ್ರೆಯಲ್ಲಿ ಯಾರೂ ನೋಡಿಕೊಳ್ಳಲು ಇಲ್ಲದ ಕಾರಣ ನಾನೇ ಆಸ್ಪತ್ರೆಯಲ್ಲಿದ್ದು ನೋಡಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ಆದ್ದರಿಂದ ನಮಗೆ ಡಿಕ್ಕಿ ಹೊಡೆಸಿಅಪಘಾತ ಪಡಿಸಿರುವ ಕೆ,ಎ-02 ಡಿ-5971 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊನಂ, 84/2020 ಕಲಂ.279.337.ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 84/2020 ಕಲಂ 279, 337 ಐ.ಪಿ.ಸಿ

ದಿನಾಂಕ:14-09-2020 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿ ಗಂಗರಾಜು ಬಿನ್ ತಿಪ್ಪಣ್ಣ, 40ವರ್ಷ,ಕುರುಬರು ಜನಾಂಗ,ಎ.ಪಿ.ಎಂ.ಸಿ ಯಲ್ಲಿ ಅಮಾಲಿ ಕೆಲಸ, ತಿಪ್ಪಣ್ಣನಪಾಳ್ಯ, ಶೆಟ್ಟಿಕೆರೆ ಹೋಬಳಿ, ಚಿ.ನಾ.ಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ ನಾನು ಮತ್ತು ನನ್ನ ಮಗನಾದ ಯೊಗೀಶ ರವರೊಂದಿಗೆ ನನ್ನ ಬಾಬ್ತು KA -44 H 9411 ನೇ ಹೀರೋ ಹೊಂಡಾ ದ್ವಿಚಕ್ರ ವಾಹನದಲ್ಲಿ ದಿನಾಂಕ 13-09-2020 ರಂದು ನಾನು ಎ.ಪಿ.ಎಂ ಸಿ ತಿಪಟೂರಿನಿಂದ ಕೆಲಸ ಮುಗಿಸಿಕೊಂಡು ನನ್ನ ಮಗ ಯೋಗೀಶರವರನ್ನು  ದ್ವಿಚಕ್ರ ವಾಹನದ ಹಿಂಭಾಗ ಕೂರಿಸಿಕೊಂಡು ಊರಿಗೆ ಹೋಗಲು ತಿಪಟೂರು -ಶೆಟ್ಟಿಕೆರೆ ರಸ್ತೆಯಲ್ಲಿ ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಈರಲಗೆರೆ ಗೇಟ್ ಹತ್ತಿರ ಹೋಗುತ್ತಿರುವಾಗ ಈರಲಗೆರೆ ಗ್ರಾಮದಿಂದ ಬರುವ ರಸ್ತೆಯಿಂದ KA 44 8915 ನೇ ಆಫೆ ಲಗೇಜು ಆಟೋ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಆಟೋ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ನಾವು ಬೈಕ್ ಸಮೇತ ಕೆಳಕ್ಕೆ ಬಿದ್ದೆವು ಆಗ ನನಗೆ ಎಡಭಾಗದ ಹಣೆಗೆ ಮತ್ತು ಎಡಭಾಗದ ಮುಖಕ್ಕೆ ಹಾಗೂ ಬಲ ಮಂಡಿಗೆ ಪೆಟ್ಟು ಬಿದ್ದು ಗಾಯವಾಗಿರುತ್ತದೆ. ನನ್ನ ಮಗನಾದ ಯೋಗೀಶ ರವರಿಗೆ ತಲೆಗೆ ಮತ್ತು ಮೈ ಕೈಗೆ ಪೆಟ್ಟು ಬಿದ್ದು ರಕ್ತ ಗಾಯವಾಗಿರುತ್ತದೆ. ಗಾಯಗೊಂಡಿದ್ದ ನಮ್ಮಗಳನ್ನು ಯಾರೋ ಉಪಚರಿಸಿ ತಿಪಟೂರು ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆಸ್ಪತ್ರೆಯಲ್ಲಿ ಉಪಚರಿಸಿ ಯೋಗೀಶ ರವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಶಿಫಾರಸ್ಸು ಮಾಡಿದ್ದರಿಂದ ತಕ್ಷಣ ಯೋಗೀಶ ರವರನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಈದಿನ ತಡವಾಗಿ ಬಂದು ಈ ಅಪಘಾತಕ್ಕೆ ಕಾರಣವಾಗಿರುವ  KA 44 8915 ನೇ ಆಫೆ ಲಗೇಜು ಆಟೋ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಸ್ವೀಕರಿಸಿ ಠಾಣಾ ಮೊ ನಂ 84/2020 ಕಲಂ 279, 337 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.



Monday, 14 September 2020

ಅಪರಾಧ ಘಟನೆಗಳು 14-09-20

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 127/2020 ಕಲಂ 279, 304() ಐಪಿಸಿ

ದಿನಾಂಕ 14-09-2020 ರಂದು   ಬೆಳಿಗ್ಗೆ 5-00 ಗಂಟೆಗೆ ಪಿರ್ಯಾದಿ    ಶಿವು ಎಂ ತಂದೆ ಮಹಾಲಿಂಗಪ್ಪ, 42 ವರ್ಷ, ಕ್ರಿಶ್ಚಿಯನ್,   ನಾಗಜ್ಜಿ ಗುಡ್ಲು ಬಡಾವಣೆ, ಶಿರಾ ಟೌನ್. ತುಮಕೂರು ಜಿಲ್ಲೆ ಇವರು ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ 13-09-2020 ರಂದು  ರಾತ್ರಿ 9-30 ಗಂಟೆ ಸಮಯದಲ್ಲಿ  ಕೆಎ.48.3334 ನೇ ಲಾರಿಯ ಚಾಲಕ ಲಾರಿಯನ್ನು ತುಮಕೂರು  ಕಡೆಯಿಂದ ಶಿರಾ ಕಡೆಗೆ  ಎನ್.ಹೆಚ್.48 ರಸ್ತೆಯಲ್ಲಿ  ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು   ತುಮಕೂರು  ಸತ್ಯಮಂಗಲ ಬ್ರಿಡ್ಜ್ ಸಮೀಪ   ಎನ್.ಹೆಚ್.48 ರಸ್ತೆಯಲ್ಲಿ  ಕೆಎ.41.ಎಲ್.1960 ನೇ  ದ್ವಿಚಕ್ರ ವಾಹನಕ್ಕೆ  ಡಿಕ್ಕಿ  ಹೊಡೆಸಿ ಅಪಘಾತಪಡಿಸಿದ್ದರಿಂದ  ಕೆಎ.41.ಎಲ್.1960 ನೇ  ದ್ವಿಚಕ್ರ ವಾಹನ ಸವಾರ ಕಲ್ಯಾಣ್ ಕುಮಾರ್ ಆರ್ ತಂದೆ ಲೇಟ್.ಕೋಡಪ್ಪ, 34 ವರ್ಷ, ಕ್ರಿಶ್ಚಿಯನ್, ಬಟವಾಡಿ ಯುನಿಲೆಟ್ ನಲ್ಲಿ ಸೇಲ್ಸ್ ಕೆಲಸ, ವಾಸ: ಮುದಿಗೆರೆ, ಶಿರಾ ತಾ,, ರವರ ತಲೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃಪಟ್ಟಿರುತ್ತಾನೆಂತ ದೂರು.

.

ಗುಬ್ಬಿ ಪೊಲೀಸ ಠಾಣಾ ಮೊ ನಂ 197/2020 ಕಲಂ 279 ಐಪಿಸಿ

ದಿನಾಂಕ;13/09/2020 ರಂದು ಮದ್ಯಾಹ್ನ 3-15 ಗಂಟೆಗೆ ಈ ಕೇಸಿನ ಪಿಯರ್ಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;06/09/2020 ರಂದು  ರಾತ್ರಿ  ಪಿರ್ಯಾದಿ ಬಾಬ್ತು ಕೆ.ಎ-06 ಡಿ-9295 ಟಯೋಟ ಇಟಿಯಾಸ್ ಕಾರಿನಲ್ಲಿ ತುಮಕೂರಿನಿಂದ ದರ್ಮಸ್ಥಳಕ್ಕೆ ಪ್ರವಾಸ ಮಾಡಿ  ದಿ;07/09/2020 ರಂದು ಬೆಳಿಗ್ಗೆ  ದೇವರ ದರ್ಶನ ಮಾಡಿಕೊಂಡು ಇದೇ ದಿನ ಸಂಜೆ  ಹಾಸನ ತಿಪಟೂರು ಮಾರ್ಗವಾಗಿ ಎನ್ ಹೆಚ್ 206 ರಸ್ತೆಯಲ್ಲಿ ಹೊರಟು ಬಿ ಹೆಚ್ ರಸ್ತೆ ಗುಬ್ಬಿ  ಪಟ್ಟಣದ  ಚಚರ್್ ಮುಂಬಾಗ ಅಂದರೆ ದಿ;08/09/2020 ರಂಧು ರಾತ್ರಿ 12-30 ಗಂಟೆ ಸಮಯದಲ್ಲಿ  ಹೋಗುತ್ತಿರುವಾಗ ನಮ್ಮ ಚಾಲಕ ಹನುಮಂತರಾಯ ಹಾಗೂ ಮೂರು ಜನ ಪ್ರಯಾಣಿಕರು  ಇದ್ದು ರಸ್ತೆಯಲ್ಲಿ  ಉಬ್ಬು ಇದ್ದುದ್ದರಿಂದ  ಚಾಲಕನು ವಾಹನವನ್ನು ನಿಯಂತ್ರಣ ಮಾಡಿ  ಮುಂದೆ ಚಲಿಸುತ್ತಿರುವಾಗ ಹಿಂಬಂದಿಯಿಂದ ಬಂದ ಕೆ.ಎ-03 ಎಇ-1208 ನೇ ಮಹೇಂದ್ರ ವೆರಿಟೋ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಬಾಬ್ತು ಕೆ.ಎ-06 ಡಿ-9295 ಟಯೋಟ ಇಟಿಯಾಸ್ ಕಾರಿಗೆ ಗುದ್ದಿನ ಪರಿಣಾಮ ನಮ್ಮ ಕಾರಿನ ಹಿಂಬಾಗ  ಮತ್ತು ಮುಂಬಾಗ ಜಖಂಗೊಂಡಿರುತ್ತೆ. ಅಪಘಾತ ಮಾಡಿದ ಕಾರಿನ ಚಾಲಕ ಉಮೇಶ ಎಂಬುದಾಗಿತ್ತು.  ನಮ್ಮ ಕಾರಿನಲ್ಲಿದ್ದ ಪ್ರಯಾಣಿಕರಿಗಾಗಲಿ ಅಥವಾ ಅಪಘಾತ ಮಾಡಿದ ಕಾರಿನ ಚಾಲಕನಿಗಾಗಲಿ ಯಾವುದೇ ಗಾಯಗಳು ಆಗಿರುವುದಿಲ್ಲ. ಸದರಿ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ದೂರಿನ ಅಂಶ

ಚಿನಾಹಳ್ಳಿ ಪೊಲೀಸ್ ಠಾಣಾ ಮೊ. ನಂ. 95/2020 ಕಲಂ 420 ಐಪಿಸಿ

ದಿನಾಂಕ:- 13/09/2020 ರಂದು ಸಂಜೆ 04.30 ಗಂಟೆಗೆ ಪಿರ್ಯಾದುದಾರರಾದ ವಿವೇಕಾನಂದಸ್ವಾಮಿ ಬಿನ್ ಲೇಟ್ ರಾಮೇಗೌಡ, ಸುಮಾರು 60 ವರ್ಷ, ಲಿಂಗಾಯಿತರು, ಅಡಿಕೆ ಮತ್ತು ಕೊಬ್ಬರಿ ವ್ಯಾಪಾರ, ನಡುವನಹಳ್ಳಿ, ಶೆಟ್ಟಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕೊಬ್ಬರಿ ವರ್ತಕನಾಗಿದ್ದು, ಕೊಬ್ಬರಿಯನ್ನು ನಮ್ಮಿಂದ ಹೊರರಾಜ್ಯಗಳಿಗೆ ರವಾನೆ ಮಾಡುವುದು ಮತ್ತು ವ್ಯವಹರಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಅದರಂತೆ ನಾನು ಮತ್ತು ಸ್ನೇಹಿತನಾದ ತಿಪಟೂರು ವಾಸಿ ಜಿತೇಂದ್ರ (ಹರಿಪ್ರಿಯ ಟ್ರೇಡರ್ಸ್ ಮಾಲೀಕ) ಇಬ್ಬರೂ ಸೇರಿ, ಸೂರತ್, ಗುಜರಾತ್ ರಾಜ್ಯದಲ್ಲಿರುವ ಜಗದಾಂಬ ಟ್ರೇಡಿಂಗ್ ಮಾಲೀಕನಾದ ಜಬರಾಮ್ ಪಂಚಾರಾಮ್ ಪ್ರಜಾಪತಿ @ ಜಗದೀಶ್ ಬಿನ್ ಪಂಚಾರಾಮ್ ಪ್ರಜಾಪತಿ ಮತ್ತು ಇವರ ಸಹೋದರರಾದ ಕುಂಬಾರಾಮ್ ಪಂಚಾರಾಮ್ ಪ್ರಜಾಪತಿ @ ಕಮಲೇಶ್ ಬಿನ್ ಪಂಚಾರಾಮ್ ಪ್ರಜಾಪತಿ, ಇನ್ನೊಬ್ಬ ಸಹೋದರರಾದ ಕಹನಾರಾಮ್ ಪಂಚಾರಾಮ್ ಪ್ರಜಾಪತಿ @ ಕಿಶನ್ ಬಿನ್ ಪಂಚಾರಾಮ್ ಪ್ರಜಾಪತಿ, ವಾಸಸ್ಥಳ: #18, ಪರೋಹಿತ್ ಕವಾಸ್, ವಟೇರ ಗ್ರಾಮ, ಬಗೋಡ ಪೆಶೀಲ, ಜಲೋರ್ ಜಿಲ್ಲೆ, ರಾಜಸ್ತಾನ ರಾಜ್ಯ - 343001 ಎಂಬುವವರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಶೆಟ್ಟಿಕೆರೆ ಹೋಬಳಿ, ನಡುವನಹಳ್ಳಿ ಗ್ರಾಮದಿಂದ ಕೊಬ್ಬರಿ ಕೊಡುವುದು ಮತ್ತು ಅವರಿಂದ ಹಣ ಪಡೆಯುವುದು, ವ್ಯವಹಾರ ನಡೆದಿದ್ದು, ದಿನಾಂಕ: 25/06/2020, 07/07/2020, 24/07/2020, 28/07/2020, 05/08/2020, 06/08/2020, 10/08/2020, 20/08/2020, 29/08/2020 ರಂದು ವ್ಯವಹಾರ ನಡೆಸಿದ್ದು, ಈ ಪೈಕಿ 94,23,566/- ರೂ. ಬೆಲೆಯ ಮಾಲನ್ನು ಪಡೆದಿದ್ದು, ಇದರಲ್ಲಿ 66,44,570/- ರೂ. ಗಳನ್ನು ನೀಡಿದ್ದು, ಉಳಿದ ಬಾಕಿ ಹಣ 27,76,989/- ರೂ. ಗಳನ್ನು ನನಗೆ ಹಾಗೂ ನನ್ನ ಸ್ನೇಹಿತನಾದ ಹರಿಪ್ರಿಯ ಟ್ರೇಡರ್ಸ್ ಮಾಲೀಕನಾದ ಜಿತೇಂದ್ರ ರವರಿಗೆ 13,62,000/- ರೂ. ಗಳನ್ನು ಕೊಡಬೇಕಾಗಿದ್ದು, ನಮಗೆ ಬರಬೇಕಾದ ಹಣವನ್ನು ಕೊಡದೇ ಈಗ್ಗೆ ಒಂದು ವಾರದಿಂದ ನಮಗೆ ಫೋನ್ ಮಾಡದೇ ನಾವು ಮಾಡಿದ ಫೋನ್ ಕರೆ ಸ್ವೀಕರಿಸದೇ ಸ್ವಿಚ್ ಆಫ್ ಮಾಡಿರುತ್ತಾರೆ. ಅವರ ಫೋನ್ ನಂಬರ್ 9998190640 ಆಗಿರುತ್ತದೆ. ಇದರಿಂದ ನಮ್ಮ ವ್ಯವಹಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಈ ರೀತಿ ನಮ್ಮನ್ನು ನಂಬಿಸಿ, ನಮ್ಮಿಂದ ಕೊಬ್ಬರಿಯನ್ನು ತೆಗೆದುಕೊಂಡು ಹೋಗಿ, ಹಣ ನೀಡದೇ ಇದ್ದು, ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ಬರಬೇಕಾದ ಹಣವನ್ನು ಕೊಡಿಸಿಕೊಡಬೇಕೆಂದು ಕೋರುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ಪಡೆದು ಠಾಣಾ ಮೊ. ನಂ. 95/2020 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ಘಟನೆಗಳು 13-09-20

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 128/2020 ಕಲಂ 66(ಸಿ)(ಡಿ) ಐ.ಟಿ ಆಕ್ಟ್ ಕಲಂ 419, 420 ಐಪಿಸಿ

ದಿನಾಂಕ: 12/09/2020 ರಂದು ಪಿರ್ಯಾದಿ ಪ್ರಜ್ವಲ್ ಕುಮಾರ್  ಬಿನ್ ರವಿಕುಮಾ್ 20 ವರ್ಷ ವಿಶ್ವಕರ್ಮ ಜನಾಂಗ, ದೇವನೂರು  ವಿಜಯನಗರ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿ:08/09/2020 ರಂದು ಬೆಳಗ್ಗೆ 10:52 ಗಂಟೆ ಸಮಯದಲ್ಲಿ ಬ್ಯಾಂಕ್ ಅಧಿಕಾರಿ, ಶಾಪ್ ಕ್ಲೂಸ್ ಶಾಪಿಂಗ್ PVT Ltd Mr Akash Y customer  representative ಎಂದು ಹೇಳಿಕೊಂಡು ನನ್ನ ಮೊಬೈಲ್ ಗೆ 919051857025 ನಿಂದ ಕರೆ ಬಂದಿರುತ್ತದೆ. ನಾನು ನಿಮಗೆ ಲಕ್ಕಿ ಡ್ರಾನಲ್ಲಿ 2nd prize Switt Drive ಕಾರು ಬಂದಿರುತ್ತದೆ. ನಿಮಗೆ ಕಾರು ಬೇಕೊ ಅಥವಾ ಹಣ ಬೇಕೊ ಎಂದು ಹೇಳಿರುತ್ತಾರೆ. ನಾನು ನನಗೆ ಹಣ ಬೇಕು ಎಂದು ಹೇಳಿದೆ ಅವರು ನೀವು Government Tax ಕಟ್ಟಬೇಕು ಎಂದು ಹೇಳಿದರು ನಾನು ಹಂತಹಂತವಾಗಿ 8,600/-, 10,000/-, 10,000/-, 8,000/-, 10,000/- ಕಟ್ಟಿದ ಮೇಲೆ  5,000/- ಕಟ್ಟಬೇಕು ಎಂದು ಹೇಳಿದರು ನಾನು ಅದೇ ದಿನ ಮೊಬೈಲ್ ಅಂಗಡಿಯಲ್ಲಿ 10,000/- ರೂ ಗಳನ್ನು ಕೂಡ ಅವರ ಅಕೌಂಟ್ ಗೆ ಹಾಕಿಸಿರುತ್ತೇನೆ. 46,000/- ರೂ ಗಳನ್ನು ನನ್ನ Kotak Mahindra Bank ಖಾತೆ ಸಂಖ್ಯೆ 2913140880 ನಿಂದ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 39567137811 ಗೆ ಹಣವನ್ನು ವರ್ಗಾವಣೆ ಮಾಡಿರುತ್ತೇನೆ. ನನಗೆ ಬಂದಿರುವ ದೂರವಾಣಿ ಕರೆಗಳ ಸಂಖ್ಯೆ 915051257025, 9432591407, 9635406542, 9830916460 ಗಳಿಂದ ನನ್ನ ಮೊಬೈಲ್ ಸಂಖ್ಯೆ 9663957306 ಗೆ ಕರೆ ಬಂದಿರುತ್ತದೆ. ನಾನು ಅವರಿಗೆ 8 ಲಕ್ಷದ 60 ಸಾವಿರ ರೂ ಹಣ ಕೊಡಿ ಎಂದು ಕೇಳಿದ್ದಕ್ಕೆ ಅವರು ನಿನ್ನ ಖಾತೆಗೆ ಹಣ ಬರಬೇಕೆಂದರೆ 8,600/- ರೂ ಗಳನ್ನು ಅಕೌಂಟ್ ನಲ್ಲಿ Deposit ಮಾಡಿಕೊಳ್ಳುವಂತೆ ತಿಳಿಸಿ ಪದೆ ಪದೆ ಕರೆ ಮಾಡುತ್ತಿರುತ್ತಾರೆ. ನಾನು ಅವರಿಗೆ ಕಳುಹಿಸಿರುವ ಒಟ್ಟು ಮೊತ್ತ 56,600/- ರೂಗಳು. ಆದ್ದರಿಂದ ನನಗೆ ವಂಚಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಪಿರ್ಯಾದು ಪಡೆದು  ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 128/2020 ಕಲಂ 66(ಸಿ)(ಡಿ) ಐ.ಟಿ ಆಕ್ಟ್ ಕಲಂ 419, 420  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 129/2020 ಕಲಂ 15(), 32(3) ಕೆ. ಆಕ್ಟ್

ಸಿಇಎನ್ ಪೊಲೀಸ್ ಠಾಣೆ ಗೆ ದಿನಾಂಕ: 12/09/2020 ರಂದು  ಸಂಜೆ6 -00 ಗಂಟೆಗೆ ಠಾಣಾ ಹೆಚ್.ಸಿ-317 ನಾಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 12/09/2020  ರಂದು ಪಿ.ಐ ಸಾಹೇಬರವರ ಆದೇಶದ ಮೇರೆಗೆ ನಾನು  ತುಮಕೂರು ತಾಲ್ಲೂಕ್ ಹೆಬ್ಬೂರು ಹೋಬಳಿ ದಾಸೇಗೌಡನಪಾಳ್ಯದಲ್ಲಿ  ಗಸ್ತು ಮಾಡಿಕೊಂಡಿದ್ದಾಗ, ಬಾತ್ಮೀದಾರರಿಂದ ಬಂದ ಮಾಹಿತಿಯ ಮೇರೆಗೆ ಸಂಜೆ 16-00 ಗಂಟೆಗೆ ದಾಸೇಗೌಡನ ಪಾಳ್ಯಕ್ಕೆ ಹೋಗಿ ನೋಡಿದಾಗ ನರಸಿಂಹಮೂರ್ತಿ ಬಿನ್ ಗಂಗಣ್ಣ 45 ವರ್ಷ, ವಕ್ಕಲಿಗರು, ಅಂಗಡಿ ಕೆಲಸ, ರವರ ಅಂಗಡಿ ಮುಂಬಾಗ ಮದ್ಯ ಕುಡಿಯುವವರಿಗೆ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು,ಅಂಗಡಿ ಮಾಲೀಕ ನರಸಿಂಹಮೂರ್ತಿ ಮತ್ತು  ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುದ್ದವರು ಓಡಿ ಹೋಗಿದ್ದು, ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಠಾಣೆಗೆ ಬಂದು ಪಂಚನಾಮೆ, ಮಾಲು ಹಾಗೂ ಆರೋಪಿಯೊಂದಿಗೆ ನೀಡಿದ ವರದಿಯನ್ನು ಪಡೆದು . ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 129/2020 ಕಲಂ 15(ಎ), 32(3)   ಕೆ.ಇ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 130/2020 ಕಲಂ 15(ಎ), 32(3) ಕೆ.ಇ ಆಕ್ಟ್

ಸಿಇಎನ್ ಪೊಲೀಸ್ ಠಾಣೆ ಗೆ ದಿನಾಂಕ: 12/09/2020 ರಂದು  ಸಂಜೆ6 -45 ಗಂಟೆಗೆ ಠಾಣಾ ಹೆಚ್.ಸಿ-317 ನಾಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 12/09/2020  ರಂದು ಪಿ.ಐ ಸಾಹೇಬರವರ ಆದೇಶದ ಮೇರೆಗೆ ನಾನು  ತುಮಕೂರು ತಾಲ್ಲೂಕ್ ಹೆಬ್ಬೂರು ಹೋಬಳಿ ಹನುಮಂತ ನಗರದಲ್ಲಿ  ಗಸ್ತು ಮಾಡಿಕೊಂಡಿದ್ದಾಗ, ಬಾತ್ಮೀದಾರರಿಂದ ಬಂದ ಮಾಹಿತಿಯ ಮೇರೆಗೆ ಸಂಜೆ 17-00 ಗಂಟೆಗೆ ದಾಸೇಗೌಡನ ಪಾಳ್ಯಕ್ಕೆ ಹೋಗಿ ನೋಡಿದಾಗ ಗುರುನಾಥ ಬಿನ್ ಬಿಜಿ ರಂಗನಾಥ, 38 ವರ್ಷ, ವಕ್ಕಲಿಗರು ಹನುಮಂತ ನಗರ ಹಬ್ಬೂರು ಹೋಬಳಿ ತುಮಕೂರು, ರವರು ಅವರ ಅಂಗಡಿ ಮುಂಬಾಗ ಮದ್ಯ ಕುಡಿಯುವವರಿಗೆ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು,ಅಂಗಡಿ ಮಾಲೀಕ ಗುರುನಾಥ ಮತ್ತು  ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುದ್ದವರು ಓಡಿ ಹೋಗಿದ್ದು, ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಠಾಣೆಗೆ ಬಂದು ಪಂಚನಾಮೆ, ಮಾಲು ಹಾಗೂ ಆರೋಪಿಯೊಂದಿಗೆ ನೀಡಿದ ವರದಿಯನ್ನು ಪಡೆದು . ತುಮಕೂರು ಸಿಇಎನ್ ಪೊಲೀಸ್ ಠಾಣಾ ಮೊ.ನಂ 130/2020 ಕಲಂ 15(ಎ), 32(3)   ಕೆ.ಇ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 

ಹಂದನಕೆರೆ ಪೊಲೀಸ್ ಠಾಣಾ ಮೊ.ನಂ:91/2020 ಕಲಂ:279,337 ಐಪಿಸಿ ರೆ/ವಿ 187 ಐಪಿಸಿ

ದಿನಾಂಕ:11/09/2020 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ಪಿರ್ಯಾದಿ ತಂದೆ ಬಸವರಾಜು ಎಂ ರವರು ತಮ್ಮ ಜಮೀನಿನ ಬಳಿ ಹೋಗಿ ವಾಪಸ್ ಊರಿಗೆ ಬರಲು ಕೆಮ್ಮಣ್ಣುಗುಂಡಿ ಮತ್ತು ಯಳ್ಳೇನಹಳ್ಳಿ ಮಾರ್ಗದ  ಮದ್ಯ ರಸ್ತೆಯಲ್ಲಿ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದವರು ಅದೇ ಮಾರ್ಗದ ಬರುವ ಯಳ್ಳೇನಹಳ್ಳಿ ಗೌರಮ್ಮ ರವರ ಜಮೀನಿನ ನೇರದ ರಸ್ತೆಯಲ್ಲಿ  ಎಡಬದಿಯಲ್ಲಿ ನಿಂತುಕೊಂಡು ಜಮೀನಿನ ಕಡೆಗೆ ನೋಡುತ್ತಿರುವಾಗ ಹಿಂದಿನಿಂದ ಬಂದ ಅಂದರೆ ಮತ್ತಿಘಟ್ಟ ಕಡೆಯಿಂದ ಬಂದ ಕೆಎ-06 ಹೆಚ್ಎಫ್-9795 ನೇ ಸ್ಕೂಟಿಯ ಚಾಲಕ ಅತಿವೇಗವಾಗಿ ಬಂದು ಅಪಘಾತಪಡಿಸಿ ಬಸವರಾಜು ಎಂ ರವರ ಬೆನ್ನುಮೂಳೆಗೆ ಏಟು ಮಾಡಿದ್ದರಿಂದ ಬಸವರಾಜು ಎಂ ರವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಹೇಮಾವತಿಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ದಾಖಲಿಸಿ ಈ ದಿನವರೆವಿಗೂ ಪಿರ್ಯಾದಿ ತಂದೆಯನ್ನು ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ  ಈ ದಿನ ತಡವಾಗಿ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ



Saturday, 12 September 2020

ಪತ್ರಿಕಾ ಪ್ರಕಟಣೆ ದಿ:11/09/20

ಪತ್ರಿಕಾ ಪ್ರಕಟಣೆ

ದಿ:11/09/20

ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ.

ದಿನಾಂಕ : 17-08-2020 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಸಿರಾ ಟೌನ್ ಮುಖ್ಯ ರಸ್ತೆಯಲ್ಲಿ    ಡಿ.ಸಿ.ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕೆಎ-06-ವೈ-703  ನಂಬರಿನ  ಹಿರೋಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶಿರಾ ಪೊಲೀಸ್ ಠಾಣಾ  ಮೊ.ನಂ. 316/2020, ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

 

ಸದರಿ ಪ್ರಕರಣದ ಆರೋಪಿ ಮತ್ತು ಕಳವು ವಾಹನವನ್ನು ಪತ್ತೆ ಹಚ್ಚಲು ಪೊಲೀಸ್ ಇನ್ಸ್‌‌ಪೆಕ್ಟರ್‌             ಶ್ರೀ.ಹನುಮಂತಪ್ಪ ಪಿ.ಬಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ದಿನಾಂಕ: 09-09-2020 ರಂದು ಬೆಳಿಗ್ಗೆ 7-00  ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ, ಶಿರಾ ನಗರದ ಪ್ರೆಸಿಡೆಸ್ಸಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಒಬ್ಬ ಆರೋಪಿಯು ಅನುಮಾನಸ್ವದವಾಗಿ ಕೆಎ-06-ವೈ-703  ನಂಬರಿನ  ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದು ಆತನನ್ನು ತಡೆದು ನಿಲ್ಲಿಸಿದಾಗ, ಮೋಟಾರ್ ಸೈಕಲ್ ನ್ನು ಬಿಟ್ಟು  ಓಡಿ ಹೋಗಲು ಪ್ರಯತ್ನಿಸಿದ್ದು, ಆಸಾಮಿಯನ್ನು ಹಿಡಿದು ಮುಂದಿನ ತನಿಖೆಗಾಗಿ ಠಾಣೆಗೆ ಕರೆ ತಂದು ವಿಚಾರಣೆ ಮಾಡಲಾಗಿ ಆರೋಪಿಯು ಸದರಿ ಮೇಲ್ಕಂಡ ಪ್ರಕರಣದ ಜೊತೆಗೆ ಉಳಿದಂತೆ ಶಿರಾ ತಾಲ್ಲೂಕ್ ತಿಮ್ಮಸಾಗರ, ತೊಗರುಗುಂಟೆ, ಅಮ್ಮಾಜಮ್ಮನ ದೇವಸ್ಥಾನದ ಬಳಿ, ಮತ್ತು ಶಿರಾ ನಗರದ ಡಿ.ಸಿ.ಸಿ ಬ್ಯಾಂಕ್ ಮುಂಬಾಗ, ತಾಲ್ಲೂಕ್ ಕಛೇರಿ ಬಳಿ, ರಂಗನಾಥ ಕಾಲೇಜ್ ಬಳಿ, ದ್ವಿ ಚಕ್ರ ವಾಹನಗಳನ್ನು ಕಳವು  ಮಾಡಿದ್ದ ಸುಮಾರು 2 ಲಕ್ಷ ರೂ ಬೆಲೆ ಬಾಳುವ 7 ದ್ವಿ ಚಕ್ರ ವಾಹನಗಳನ್ನು ಆರೋಪಿಯಿಂದ ಅಮಾನತ್ತು ಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

 

ಆರೋಪಿಯ ವಿವರ

ಮಂಜುನಾಥ ಕೆ ಜಿ  ಬಿನ್ ಗುರುಸಿದ್ದಪ್ಪ ಸುಮಾರು 35 ವರ್ಷ, ಕೂಲಿ ಕೆಲಸ, ಕುರುಡನಹಳ್ಳಿ, ಕಸಬಾ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶಿರಾ ಉಪ ವಿಭಾಗದ ಪೊಲೀಸ್ ಉಪಾದೀಕ್ಷಕರಾದ ಕುಮಾರಪ್ಪ ಎಲ್ ಕೆ.ಎಸ್.ಪಿ.ಎಸ್‌  ರವರ ಮಾರ್ಗದರ್ಶನದಲ್ಲಿ,  ಪೊಲೀಸ್ ಇನ್ಸ್‌‌ಪೆಕ್ಟರ್‌ ಶ್ರೀ.ಹನುಮಂತಪ್ಪ ಪಿ.ಬಿ ರವರ ನೇತೃತ್ವದಲ್ಲಿ ಪಿ.ಎಸ್.ಐ  ಭಾರತಿ  ಸಿಬ್ಬಂದಿಗಳಾದ ದುರ್ಗಯ್ಯ,  ಗೋಪಿನಾಥ, ಮತ್ತು ಶಿವಕುಮಾರ್, ನಾಗರಾಜು, ಮಂಜುನಾಥಸ್ವಾಮಿ ರವರುಗಳ ತಂಡವನ್ನು  ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 12-09-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ- 16/2020 ಕಲಂ; 174 ಸಿ.ಆರ್.ಪಿ.ಸಿ

ದಿನಾಂಕ:11/09/2020 ರಂದು ಬೆಳಿಗ್ಗೆ11-00 ಗಂಟೆಗೆ ಪಿರ್ಯಾದಿ ಶ್ರೀ ರೇಣುಕಪ್ಪ ಜಿ.ಎಸ್ ಬಿನ್ ಲೇಟ್ ಶಿವಣ್ಣ, 40 ವರ್ಷ, ಲಿಂಗಾಯಿತರು, ಜಿರಾಯ್ತಿ, ತೋಟದಮನೆ, ಗೊರಗೊಂಡನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾವು ಕೃಷಿಕರಾಗಿದ್ದು, ವ್ಯವಸಾಯ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ಈಗಿರುವಾಗ ದಿನಾಂಕ; 28/08/2020 ರಂದು ಮಧ್ಯಾಹ್ನ 3-15 ಗಂಟೆಯ ಸಮಯದಲ್ಲಿ ಗೊರಗೊಂಡನಹಳ್ಳಿ ಗ್ರಾಮದ ಸರ್ವೆ ನಂ- 106/1A ರ ಜಮೀನಿನಲ್ಲಿ ನಮ್ಮ ತಾಯಿಯಾದ ಲಲಿತಮ್ಮ (65 ವರ್ಷ) ರವರು ಜಾನುವಾರುಗಳನ್ನು ಮೇಯಿಸುತ್ತಿರುವಾಗ ಅವರ ಎಡಗಾಲಿಗೆ ಏನೋ ಕಚ್ಚಿದಂತಾಗಿದ್ದು, ರಕ್ತ ಬರುತ್ತಿದೆ ಎಂತ ತಿಳಿಸಿದರು. ನಾನು ನೋಡಲಾಗಿ  ಎಡಗಾಲಿನ ಗೆಣ್ಣಿನ ಹತ್ತಿರ ತರಚಿದಂತಾಗಿದ್ದು, ತಕ್ಷಣ ತಿಪಟೂರು ಕಲ್ಪತರು ಕ್ಲೀನಿಕ್ ಗೆ ತೋರಿಸಿ ಮನೆಗೆ ಕರೆದುಕೊಂಡು ಬಂದಿದ್ದು, ಮರುದಿನ ದಿನಾಂಕ: 29/08/2020 ರಂದು ಬೆಳಿಗ್ಗೆ ನಮ್ಮ ತಾಯಿಗೆ ನೋವು ಜಾಸ್ತಿಯಾಗಿದ್ದು, ಅವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ನಂತರ ಅಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದರಿಂದ ಅದೇ ದಿನ ಹಾಸನ ಸ್ಪರ್ಶ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ದಿನಾಂಕ: 02/09/2020 ರವರೆಗೆ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ: 09/09/2020 ರಂದು ಪುನಃ ನಮ್ಮ ತಾಯಿಗೆ ಕಾಲು ನೋವು ಜಾಸ್ತಿಯಾಗಿದ್ದು, ನಮ್ಮ ತಾಯಿ ಲಲಿತಮ್ಮರವರನ್ನು ತಿಪಟೂರು ನಗರದ ಶ್ರೀ ರಂಗ ನರ್ಸಿಂಗ್ ಹೋಂ ಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಈ ದಿನ ದಿನಾಂಕ: 11/09/2020 ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ನಮ್ಮ ತಾಯಿ ಲಲಿತಮ್ಮರವರ ಮೃತ ದೇಹವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ. ದಿನಾಂಕ: 28/08/2020 ರಂದು ಮಧ್ಯಾಹ್ನ 3-15 ಗಂಟೆಯಲ್ಲಿ ನಮ್ಮ ತಾಯಿ ಜಾನುವಾರುಗಳನ್ನು ಮೇಯಿಸುತ್ತಿರುವಾಗ ಯಾವುದೋ ವಿಷ ಜಂತು ಹಾವು ಅವರ ಎಡಗಾಲಿಗೆ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಆದ್ದರಿಂದ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ – 16/2020 ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 81/2020 ಕಲಂ; 324,504,506 ರೆ/ವಿ 34 ಐ.ಪಿ.ಸಿ

ದಿನಾಂಕ: 11/09/2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ರವಿ ಬಿನ್ ಶಿವಣ್ಣ, 35 ವರ್ಷ, ಗೊಲ್ಲರು ಜನಾಂಗ, ವ್ಯವಸಾಯ, ಚಿಕ್ಕರಂಗಾಪುರ ಗೊಲ್ಲರಹಟ್ಟಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಅಜ್ಜಿಯಾದ ಚಿಕ್ಕಮ್ಮರವರ ಹೆಸರಿನಲ್ಲಿರುವ ಚಿಕ್ಕರಂಗಾಪುರ ಸರ್ವೆ ನಂ- 38 ರಲ್ಲಿ 2 ಎಕರೆ 3 ಗುಂಟೆ ಜಮೀನನ್ನು ಈಗ್ಗೆ 4 ವರ್ಷಗಳ ಹಿಂದೆ ನನ್ನ ಚಿಕ್ಕಪ್ಪನ ಮಗನಾದ ಶಶಿ ಮತ್ತು ಮಹೇಶ್ ರವರು ದಾನಪತ್ರದ ಮೂಲಕ ಮಹೇಶ್ ರವರ ಹೆಸರಿಗೆ ಮೇಲ್ಕಂಡ ಜಮೀನನ್ನು ಮಾಡಿಸಿಕೊಂಡಿರುತ್ತಾರೆ. ಈ ವಿಚಾರವನ್ನು ಕೇಳಿದ್ದಕ್ಕೆ ಈ ದಿನ ದಿನಾಂಕ:11/09/2020 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿ ಇರುವಾಗ ಶಶಿ ಮತ್ತು ಮಹೇಶ್ ರವರು ಬಂದು ಬೋಳಿ ಮಗನೇ, ಸೂಳೆ ಮಗನೇ, ಎಂತ ಅವಾಚ್ಯ ಶಬ್ದಗಳಿಂದ ಬೈದು ಶಶಿಧರ್ ರವರು ಪ್ಲಾಸ್ಟಿಕ್ ಬಾಂಡ್ಲಿಯಿಂದ ಮತ್ತು ಮಹೇಶ್ ರವರು ಗುದ್ದಲಿಯ ಕಾವಿನಿಂದ ನನಗೆ ಮೈಕೈಗೆ ಹೊಡೆದು ರಕ್ತಗಾಯಪಡಿಸಿದರು. ಇದನ್ನು ನೋಡಿದ ನಮ್ಮ ತಂದೆ ಶಿವಣ್ಣರವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಶಶಿಧರ್ ರವರು ಪ್ಲಾಸ್ಟಿಕ್ ಬಾಂಡ್ಲಿಯಿಂದ ಮತ್ತು ಮಹೇಶ್ ರವರು ಗುದ್ದಲಿಯ ಕಾವಿನಿಂದ ಮೈಕೈಗೆ ಹೊಡೆದು ರಕ್ತಗಾಯಪಡಿಸಿದರು. ನಂತರ ನಮ್ಮ ತಂಟೆಗೆ ಬಂದರೆ ಒಂದುಗತಿ ಕಾಣಿಸುತ್ತೇವೆಂತಾ ಪ್ರಾಣ ಬೆದರಿಕೆಯನ್ನು ಹಾಕಿ ಹೋದರು. ಗಾಯಗೊಂಡಿದ್ದ ನಾವುಗಳು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಬಂದಿರುತ್ತೇವೆ. ನಮ್ಮ ಮೇಲೆ ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿ ರಕ್ತಗಾಯಪಡಿಸಿರುವ ಶಶಿಧರ್ ಮತ್ತು ಮಹೇಶ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ-81/2020 ಕಲಂ: 324,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

ಗುಬ್ಬಿ ಪೊಲೀಸ್ ಠಾಣಾ ಯು ಡಿ ಆರ್ ನಂ 36/2020 ಕಲಂ 174 ಸಿ ಆರ್ ಪಿ ಸಿ.

ದಿನಾಂಕ;11/09/2020 ರಂದು ಬೆಳಿಗ್ಗೆ 10-00 ಗಂಟೆಗೆ  ಈ ಕೇಸಿನ ಪಿರ್ಯಾದಿ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಈ ದಿನ ದಿ;11/09/2020 ಬೆಳಿಗ್ಗೆ  ಸುಮಾರು 7-30 ಗಂಟೆ ಸಮಯದಲ್ಲಿ  ಕೊಲ್ಲಾಪುರದಮ್ಮ ದೇವಾಲಯಕ್ಕೆ ಕೈ ಮುಗಿಯಲು ಹೋದಾಗ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶೆಡ್ ನಲ್ಲಿ ಯಾರೋ ಒಬ್ಬ ವ್ಯಕ್ತಿ  ಮಲಗಿದ್ದವರನ್ನು  ನೋಡಿ ಹತ್ತಿರ ಹೋಗಿ  ನೋಡಲಾಗಿ  ಶ್ರೀನಿವಾಸ  ಎಂತ ಹೆಸರು ತಿಳಿದಿದ್ದು  ಈತನ ವಿಳಾಸ ಗೊತ್ತಿಲ್ಲ ಸುಮಾರು 50 ರಿಂದ 55 ವರ್ಷ ವಯಸ್ಸಿನ  ವ್ಯಕ್ತಿಯಾಗಿದ್ದು  ಸುಮಾರು 5-8 ಅಡಿ  ಎತ್ತರ ಇದ್ದು ಸಾದರಣ ಮೈಕಟ್ಟು ಇರುತ್ತಾನೆ, ಎಣ್ಣೆ ಕೆಂಪು ಮೈಬಣ್ಣ,  ಹೆಸರು ವಿಳಾಸ ತಿಳಿದು ಬಂದಿಲ್ಲ. ಈತನು ಸುಮಾರು 4-5 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಆತನಗಿದ್ದ ಕಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಈತನು  ಮೃತಪಟ್ಟಿದ್ದು  ಯಾರೂ ನೋಡಿಕೊಂಡಿರುವುದಿಲ್ಲ. ಪಿರ್ಯಾದಿಯವರು ಅವರ ಗ್ರಾಮದಲ್ಲಿ ವಿಚಾರ ಮಾಡಲಾಗಿ ವಾರಸುದಾರರು ಯಾರೂ ಇರುವುದಿಲ್ಲ.  ತಾವು ಸ್ಥಳಕ್ಕೆ  ಬೇಟಿ ಮುಂದಿನ ಕ್ರಮ ಜರುಗಿಸಲು ಇತ್ಯಾದಿಯಾಗಿ ನೀಡಿದ ದೂರಿನ ಅಂಶ.

 

ಗುಬ್ಬಿ ಪೊಲೀಸ್ ಠಾಣಾ ಯು ಡಿ ಆರ್ ನಂ 37/2020 ಕಲಂ 174 ಸಿ ಆರ್ ಪಿ ಸಿ

ದಿನಾಂಕ;11/09/2020 ರಂದು ರಾತ್ರಿ 7-05 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ಪಿರ್ಯಾದಿ ತಂದೆಗೆ ಇಬ್ಬರು ಹೆಂಡತಿಯರು ಇದ್ದು ಹಿರಿಯ ಹೆಂಡತಿ ಮಂಜುಳರವರಿಗೆ ಪಿರ್ಯಾದಿ ಮತ್ತು ನನ್ನ ಅಕ್ಕ ಲೀಲಾವತಿ  ಎಂಬ ಇಬ್ಬರು ಮಕ್ಕಳಿರುತ್ತೇವೆ.  ಪಿರ್ಯಾದಿ ಅಕ್ಕ ಲೀಲಾವತಿಯವರಿಗೆ ಸಾಂಪ್ರಾದಾಯಿಕವಾಗಿ  ಈಗ್ಗೆ 10 ವರ್ಷಗಳ ಹಿಂದೆ ಗುಬ್ಬಿ ತಾಲ್ಲೂಕ್ ಕಸಬಾ ಹೋಬಳಿ ಜವರೇಗೌಡನ ಪಾಳ್ಯದ ವಾಸಿ ರಂಗಸ್ವಾಮಯ್ಯರವರ 2 ನೇ ಮಗ ಆರ್ ಲೋಕೇಶ್ ಎನ್ನುವವರಿಗೆ ಕೊಟ್ಟು ವಿವಾಹ ಮಾಡಿದ್ದೇವು ಪಿರ್ಯಾದಿ ಅಕ್ಕನಿಗೆ 8 ವರ್ಷದ ರಚನಾ ಎಂಬ ಹೆಣ್ಣು ಮಗಳು ಇರುತ್ತಾಳೆ. ಪಿರ್ಯಾದಿ ಅಕ್ಕ ಮತ್ತು ಬಾವ ಅನ್ಯೂನತೆಯಿಂತ ಸಂಸಾರ ಮಾಡಿಕೊಂಢಿದ್ದರು. ಈ ದಿನ ದಿನಾಂಕ;11/09/2020 ರಂದು ಸಾಯಂಕಾಲ 4-00 ಗಂಟೆಯಲ್ಲಿ  ನನ್ನ ಚಿಕ್ಕಮ್ಮನ ಮಗನಾಧ ಭರತ್ ಎನ್ನುವವನು ನನ್ನ ಮೊಬೈಲ್ ಪೋನಿಗೆ ಕರೆ ಮಾಡಿ  ಮದ್ಯಾಹ್ನ  ಸುಮಾರು 1-00 ಗಂಟೆ ಸಮಯದಲ್ಲಿ ಅಕ್ಕ ಲೀಲಾವತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂತ ವಿಚಾರವನ್ನು ತಿಳಿಸಿದನು.  ತಕ್ಷಣ ನಾನು ಹೊರಟು ಬಂದು ನೋಡಿ ವಿಚಾರ ತಿಳಿಯಲಾಗಿ ಪಿರ್ಯಾದಿ ಅಕ್ಕ ಲೀಲಾವತಿಗೆ ಮದುವೆಗಿಂತ ಮುನ್ನ ಮೊದಲಿನಿಂದಲೂ ಆಕೆಗೆ ಇದ್ದ ರುತು ಚಕ್ರ ಆದಾಗ ವಿಪರೀತ ರಕ್ತ ಸ್ರಾವದಿಂದ  ಹೊಟ್ಟೆನೋವು ಬರುತ್ತಿದ್ದು ವಿಪರೀತ ನೋವು ಅನುಭವಿಸುತ್ತಿರುವ ವಿಚಾರ ಪಿರ್ಯಾದಿಗೆ ಗೊತ್ತಿತ್ತು. ಇದೇ ಕಾರಣದಿಂದ ಪಿರ್ಯಾದಿ ಅಕ್ಕ ಲೀಲವಾತಿ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸವಿದ್ದ ಮನೆಯ ರೂಮಿನ ಕಬ್ಬಿಣದ ಪೈಪಿಗೆ ವೇಲಿನಿಂದ ತನ್ಮೂಲಕ ತಾನೇ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಪಿರ್ಯಾದಿ ಅಕ್ಕನ ಸಾವಿನಲ್ಲಿ ಯಾವುದೇ ಅನುಮಾನವು ಇರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ದೂರಿನ ಅಂಶ

 


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 34 guests online
Content View Hits : 899306
Hackguard Security Enabled