lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Thursday, 01 October 2020
ಪತ್ರಿಕಾ ಪ್ರಕಟಣೆ ದಿ:01/10/20

ಪತ್ರಿಕಾ ಪ್ರಕಟಣೆ

ದಿನಾಂಕ: 01-10-2020

ಸರಣಿ ಮನೆ ಕಳ್ಳರ ಬಂಧನ,

13 ಲಕ್ಷ 50 ಸಾವಿರ ಮೌಲ್ಯದ ಚಿನ್ನ-ಬೆಳ್ಳಿ ವಡವೆಗಳು ಮತ್ತು ಬೈಕ್ ವಶ

ಸುಮಾರು 04-05 ತಿಂಗಳುಗಳಿಂದ ಪಾವಗಡ ತಾಲ್ಲೂಕಿನ ಬಿ.ಹೊಸಳ್ಳಿ, ಪೋತಗಾನಹಳ್ಳಿ, ದೊಡ್ಡಹಳ್ಳಿ, ಲಿಂಗದಹಳ್ಳಿ, ದೊಮ್ಮತಮರಿ, ಗಂಗಸಾಗರ, ಕೋಡಿಗೆಹಳ್ಳಿ, ರಾಮಯ್ಯನಪಾಳ್ಯ, ತುಮಕುಂಟೆ, ಕನ್ನಮೇಡಿ, ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿ, ಚಿನ್ನ-ಬೆಳ್ಳಿ ವಡವೆಗಳು ಹಾಗೂ ಹಣವನ್ನು ದೋಚಿಕೊಂಡು ಹೋಗುತ್ತಿದ್ದು, ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ 4, ಅರಸೀಕೆರೆ ಪೊಲೀಸ್ ಠಾಣೆಯಲ್ಲಿ 4 ಹಾಗೂ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 6 ರಾತ್ರಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.

 

 

ಸದರಿ ಪ್ರಕರಣಗಳ ಪತ್ತೆಗಾಗಿ ಎಂ.ಪ್ರವೀಣ್, ಪೊಲೀಸ್ ಉಪಾಧೀಕ್ಷಕರು, ಮಧುಗಿರಿ ಉಪವಿಭಾಗ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಈ ಕೆಳಕಂಡ ಆರೋಪಿಗಳು ಮತ್ತು ಮನೆ ಕಳವು ಮಾಡಿದ್ದ 200 ಗ್ರಾ ಚಿನ್ನ 4ಕೆ.ಜಿ.750 ಗ್ರಾಂ ಬೆಳ್ಳಿ ಹಾಗೂ 3,93,000/-ರೂ ನಗದು ಹಣ ಸೇರಿದಂತೆ ಒಟ್ಟು 13,50,000/- ರೂ ಮೌಲ್ಯದ ಚಿನ್ನ-ಬೆಳ್ಳಿ ವಡವೆಗಳು ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್, ಕಬ್ಬಿಣದ ರಾಡು, ಆಕ್ಸಲ್‌ ಬ್ಲೇಡ್‌, ಸ್ಕ್ರೂ ಡ್ರೈವರ್ ಗಳನ್ನು ಅಮಾನತ್ತುಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

 

ಆರೋಪಿಗಳ ಹೆಸರು ಮತ್ತು ವಿಳಾಸ

 

1)     ಅರುಣ್ @ ಅರುಣ್ಕುಮಾರ್ ಬಿನ್ ಲೇ|| ರಂಗಸ್ವಾಮಿ, 19 ವರ್ಷ, ಕೂಲಿಕೆಲಸ, ಜಾಜೂರಾಯನಹಳ್ಳಿ, ಹಾಲಿ ವಾಸ:ಅರೆಕ್ಯಾತನಹಳ್ಳಿ, ಪಾವಗಡ ತಾಲ್ಲೂಕ್, ತುಮಕೂರು ಜಿಲ್ಲೆ.

 

2)     ಸಂಜು @ ಸಂಜೀವರಾಯಲು ಬಿನ್ ಲೇ|| ಮಾರಪ್ಪ, 20 ವರ್ಷ, ವ್ಯವಸಾಯ, ಕುಮಾರ್ಲಹಳ್ಳಿ, ಪಾವಗಡ ತಾಲ್ಲೂಕ್, ತುಮಕೂರು ಜಿಲ್ಲೆ.

 

ಸದರಿ ಪ್ರಕರಣದ ಆರೋಪಿಗಳು ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಶ್ರೀ ಉದೇಶ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಎಂ.ಪ್ರವೀಣ್, ಕೆ.ಎಸ್.ಪಿ.ಎಸ್. ಪೊಲೀಸ್ ಉಪಾಧೀಕ್ಷಕರು, ಮಧುಗಿರಿ ಉಪವಿಭಾಗ ರವರ ನೇತೃತ್ವದಲ್ಲಿ ಪಾವಗಡ ತಾಲ್ಲೂಕಿನ ಸಿ.ಪಿ.ಐ.ಗಳಾದ ಡಿ. ನಾಗರಾಜು, ಮತ್ತು ಸಿ.ವೆಂಕಟೇಶ್, ಪಿ.ಎಸ್.ಐ.ಗಳಾದ ಬಿ.ರಾಮಯ್ಯ, ಜೆ.ಆರ್.ನಾಗರಾಜು, ಹೆಚ್.ಶ್ರೀನಿವಾಸ್ ಮತ್ತು ಸಿಬ್ಬಂದಿಗಳಾದ ಸೋಮಶೇಖರ್, ಕೇಶವರಾಜು, ಶ್ರೀನಿವಾಸ್.ಜಿ.ಟಿ., ಗಂಗರಾಜು, ಮೋಹನ್, ಭರತ್, ಸಂತೋಷ್, ಹರೀಶ್, ಶ್ರೀರಂಗಪ್ಪ, ಶಿವರಾಜು, ಶೌಖತ್, ಸುಜಾತ, ವಸಂತ್, ಸಂತೋಷ್, ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ಮತ್ತು ರಮೇಶ್ ರವರುಗಳ ಪತ್ತೆ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 01-10-20

ಬೆಳ್ಳಾವಿ ಠಾಣಾ ಮೊ.ನಂ. 55/2020 ಕಲಂ 15(A) 32(3) KE ACT

ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುಪ್ತ ಮಾಹಿತಿ ಸಿಬ್ಬಂದಿ ಸಿ.ಪಿ.ಸಿ 156  ಜ್ಞಾನಾನಂದ ದಿನಾಂಕ-30/09/2020 ಮಧ್ಯಾಹ್ನ 03-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ಈ ದಿನ ಠಾಣಾ ಸರಹದ್ದು ಬೆಳ್ಳಾವಿ ಕ್ರಾಸ್, ಮಷಾಪುರ, ಹರಳಕಟ್ಟೆ ಕಡೆ ಹಗಲು ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಚನ್ನೇನಹಳ್ಳಿ ಗ್ರಾಮಕ್ಕೆ ಬಂದಿದ್ದಾಗ  ಯಾರೋ ಬಾತ್ಮೀದಾರರು ಪೋನ್ ಮಾಡಿ  ಬೆಳ್ಳಾವಿ - ಚೇಳೂರು ರಸ್ತೆಯಲ್ಲಿರುವ ಎಸ್.ಎಲ್.ಎನ್. ಡಾಬಾದಲ್ಲಿ ಯಾರೋ ಗಲಾಟೆ ಮಾಡಿಕೊಳ್ಳುತ್ತಿದ್ದಾರೆಂತ  ಪೋನ್ ಮಾಡಿ ತಿಳಿಸಿದ್ದರ ಮೇರೆಗೆ ನಾನು  ಡಾಬಾ ಹತ್ತಿರ ಹೋಗಿ ನೋಡಲಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರು ನನ್ನನ್ನು ನೋಡಿ ಓಡಿ ಹೋದರು. ನಂತರ ಎಸ್.ಎಲ್.ಎನ್ ಡಾಬಾ ಒಳಗೆ ಹೋಗಿ ನೀಡಲಾಗಿ ಡಾಬಾದ ರೂಂ ನಲ್ಲಿ ಸಾರ್ವಜನಿಕರಿಗೆ  ಮದ್ಯಪಾನ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವುದು ಕಂಡು ಬಂತು. ನಂತರ ನಾನು ಸದರಿ ಡಾಬಾ ಮಾಲೀಕರಾದ ರಾಜಣ್ಣನವರವನ್ನು ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶವನ್ನು ಮಾಡಿ ಕೊಟ್ಟಿರುವ ಬಗ್ಗ ವಿಚಾರ ಮಾಡಲಾಗಿ ಈ ರೀತಿಯಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಡಲು ನಿನಗೆ ಯಾವುದಾದರೂ ಪರವಾನಿಗಿ ಇದೆಯೇ ಎಂತ ಕೇಳಲಾಗಿ ರಾಜಣ್ಣನವರು ಈ ರೀತಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿ ಓಡಿ ಹೋದರು. ನಂತರ ಸ್ಥಳದಲ್ಲಿ ದೊರೆತ ಎರಡು ಕುಡಿದು ಖಾಲಿ ಮಾಡಿರುವ ಬ್ಲಾಕ್ ಡಿಲೇಕ್ಸ್ ವಿಸ್ಕಿ ಬಾಟಲ್ ಮತ್ತು ಒಂದು ಅರ್ದ ಮದ್ಯ ಖಾಲಿ ಮಾಡಿರುವ ಹೈವಾಡ್ಸ್ ಟೆಟ್ರಾ ಪ್ಯಾಕ್ ಕಂಡು ಬಂದಿದ್ದು, ಸದರಿ ಎರಡು ಕುಡಿದು ಖಾಲಿ ಮಾಡಿರುವ ಬ್ಲಾಕ್ ಡಿಲೇಕ್ಸ್ ವಿಸ್ಕಿ ಬಾಟಲ್ ಮತ್ತು ಒಂದು ಅರ್ದ ಮದ್ಯ ಖಾಲಿ ಮಾಡಿರುವ ಹೈವಾಡ್ಸ್ ಟೆಟ್ರಾನ್ನು ವಶಕ್ಕೆ ಪಡೆದು ಮಾಲನ್ನು ಮದ್ಯಾಹ್ನ  3-15 ಗಂಟೆಗೆ ಠಾಣೆಗೆ ತಂದು ಹಾಜರು ಪಡಿಸಿದ ವರದಿಯನ್ನು ಪಡೆದು ಠಾಣಾ ಮೊ ನಂ 55/2020 ಕಲಂ 15(ಎ), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಬೆಳ್ಳಾವಿ ಠಾಣಾ ಮೊ.ನಂ. 56/2020 ಕಲಂ 324, 504, 506, ರೆ/ವಿ 34 ಐಪಿಸಿ

ದಿನಾಂಕ-30/09/2020 ರಂದು ಪಿರ್ಯಾದಿ ಶಿವಾನಂದಯ್ಯ ಬಿನ್ ಲೇಟ್ ಮರಿಯಪ್ಪರವರು ಸಂಜೆ 04-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನಗೂ ಮತ್ತು ನನ್ನ ಬಾಮೈದನ ಹೆಂಡತಿ ವಿಜಯಲಕ್ಷ್ಮಿರವರಿಗೂ ಈಗ್ಗೆ ಸುಮಾರು 10 ವರ್ಷಗಳಿಂದ ಜಮೀನಿನ ಸಂಬಂಧ ವ್ಯಾಜ್ಯವಿದ್ದು, ಈ ಬಗ್ಗೆ ಅನೇಕ ಬಾರಿ ಮಾತುಕತೆಗಳಾಗಿ ಜಗಳವಾಗಿದ್ದವು. ಹಾಗೂ ಈ ಜಮೀನಿನ ಸಂಬಂಧ ನಾವುಗಳು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ. ಸಹ ದಿನಾಂಕ-25/09/2020 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ನಮ್ಮ ತೋಟದಲ್ಲಿ ಅಡಿಕೆ ಕಾಯಿಗಳನ್ನು ಕೀಳುಸುತ್ತಿರುವಾಗ ನಮ್ಮ ಮಾವನ ಮಗನಾದ ಶಂಕರಪ್ಪ ಹಾಗೂ ನನ್ನ ಭಾಮೈದನ ಹೆಂಡತಿಯ ತಮ್ಮಂದಿರಾದ ರಾಮಚಂದ್ರ ಮತ್ತು ಆನಂದರವರುಗಳು ನಮ್ಮ ತೋಟಕ್ಕೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಬಂದು ಶಂಕರಪ್ಪನು ನನ್ನನ್ನು ಕೆಳಕ್ಕೆ ಕೆಡವಿಕೊಂಡು ಎದೆಯ ಮೇಲೆ ಕಾಲಿಟ್ಟು ತೋಟದಲ್ಲಿ ಬಿದ್ದಿದ್ದ ತೆಂಗಿನ ಎಡೆಮಟ್ಟಿಯಿಂದ ಎಡಮೊಣಕೈಗೆ ರಕ್ತಗಾಯವಾಗುವಂತೆ ಹೊಡೆದಿರುತ್ತಾರೆ. ನಂತರ ರಾಮಚಂದ್ರ ಮತ್ತು ಆನಂದ ಇಬ್ಬರು ಈತನನ್ನು ಇಷ್ಟಕ್ಕೆ ಬಿಡುವುದು ಬೇಡ ಸಾಯಿಸಿಬಿಡುತ್ತೇವೆಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಗಲಾಟೆ ಬಿಡಿಸಿ ಚಿಕಿತ್ಸೆಗೆ ಬೆಳ್ಳಾವಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿ,ಅವಾಚ್ಯವಾಗಿ ಬೈದು, ರಕ್ತಗಾಯವಾಗುಂತೆ ಹೊಡೆದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಿಯಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ಯು.ಡಿ.ಆರ್ ನಂ:05/2020 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:30/09/2020 ರಂದು ಬೆಳಿಗ್ಗೆ 8:30ಗಂಟೆಗೆ ಪಿರ್ಯಾದಿ ಗಂಗಾಧರ ಬಿನ್ ಕೃಷ್ಣಮೂರ್ತಿ, 37 ವರ್ಷ, ಆದಿ ಕರ್ನಾಟಕ ಜನಾಂಗ ಕೂಲಿಕೆಲಸ, ಬೂದಿಬೆಟ್ಟ ಗ್ರಾಮ,ಪಾವಗಡ ತಾ|| ರವರು ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ:24/09/2020 ರಂದು ರಾತ್ರಿ 9:00 ಗಂಟೆ ಸಮಯದಲ್ಲಿ ನನ್ನ ತಂದೆ ಸೀಮೆ ಎಣ್ಣೆ ಬುಡ್ಡಿಗೆ ಸೀಮೆ ಎಣ್ಣೆ ಹಾಕಲು ಮನೆಯ ಅಡ್ಡ ಗೋಡೆಯ ಮೇಲೆ ಇಟ್ಟಿದ್ದ ಸೀಮೆ ಎಣ್ಣೆ ಕ್ಯಾನ್ ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕೈ-ತಗುಲಿ ಸೀಮೆಣ್ಣೆ ಕ್ಯಾನ್  ಮತ್ತು ಅದರ ಪಕ್ಕದಲ್ಲಿದ್ದ ಪೆಟ್ರೋಲ್ ಬಾಟಲ್ ನಮ್ಮ ತಂದೆಯ ಮೈ ಮೇಲೆ, ಮುಖಕ್ಕೆ ಕಣ್ಣಿಗೆ ಬಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಆ ಬೆಂಕಿ ನನ್ನ ತಂದೆಗೂ ತಗುಲಿ ನಮ್ಮ  ತಂದೆಯ ಮೈ ಕೈಗೆ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ನನ್ನ ತಂದೆ ದಿ:29/09/2020 ರಂದು ಸಂಜೆ 6:10 ಗಂಟೆಗೆ ಆಸ್ಪತ್ರೆಯಲ್ಲಿ ಸತ್ತು ಹೋಗಿರುತ್ತಾರೆ. ನನ್ನ ತಂದೆ ಶವ ಬೆಂಗಳೂರು ವಿಕ್ಟೊರಿಯಾ ಆಸ್ಪತ್ರೆ ಶವಾಗಾರದಲ್ಲಿರುತ್ತದೆ,  ನಾನು ಬೆಂಗಳೂರಿನಿಂದ ಈ ದಿನ ತಡವಾಗಿ ಬಂದು ತಾವು ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ:05/2020 ಕಲಂ:174 ಸಿ.ಆರ್ ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತದೆ

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 23 guests online
Content View Hits : 948990
Hackguard Security Enabled