lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Saturday, 03 October 2020
ಪತ್ರಿಕಾ ಪ್ರಕಟಣೆ ದಿ:03/10/20


ಪತ್ರಿಕಾ ಪ್ರಕಟಣೆ

ದಿ:03/10/20

ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ ಇಬ್ಬರ ಬಂಧನ

3,78,156/- ರೂಗಳ ವಶ

* * * * * * *

ದಿನಾಂಕ: 01/10/2020 ರಂದು IPL T-20 ಕಿಂಗ್ಸ್ ಇಲೆವೆನ್ ಪಂಜಾಬ್ v/s ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ಗುಬ್ಬಿ ಟೌನ್ ಹೊಸಪೇಟೆ ಬೀದಿ ನಿವಾಸಿಗಳಾದ ವಿನಯ್ ಕುಮಾರ್ ಬಿನ್ ಲೇಟ್ ಪಿ.ಗುರುನಾಥ, 30 ವರ್ಷ ಹಾಗೂ ಆರ್ ಪ್ರಸಾದ್ ಬಿನ್ ಎಂ ರಾಮಸ್ವಾಮಿ, 37 ವರ್ಷ, ಇವರುಗಳು Lucky88 ಎಂಬ ಆ್ಯಪ್ ಅನ್ನು ಬಳಸಿಕೊಂಡು ಸಾರ್ವಜನಿಕರಿಂದ ಆನ್ ಲೈನ್ ನಲ್ಲಿ ಪೋನ್ ಪೇ ಹಾಗೂ ಗೂಗಲ್ ಫೇ ಖಾತೆ ಸಂಖ್ಯೆಯ ಮೂಲಕ ಎಸ್.ಬಿ.ಐ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಹಾಗೂ ಸಾರ್ವಜನಿಕರಿಂದ ನೇರವಾಗಿ ಹಣವನ್ನು ಪಡೆದುಕೊಂಡು ಆನ್ ಲೈನ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರನ್ನು ಬಂಧಿಸಿ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬೆಟ್ಟಿಂಗ್ ಗೆ ಬಳಸುತ್ತಿದ್ದ ಮೂರು ಮೊಬೈಲ್ ಗಳು, ಸ್ಯಾಮ್ ಸಂಗ್ ಕಂಪನಿಯ ಒಂದು ಟಿ.ವಿ, ನಗದು ಹಣ 23,580/- ಹಾಗೂ ಇವರಿಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ 3,54,576/- ಸೇರಿದಂತೆ ಒಟ್ಟು 3,78,156/- ರೂ ಹಣವನ್ನು ವಶಪಡಿಸಿಕೊಂಡಿರುತ್ತದೆ.

ಆರೋಪಿಗಳು ಪೋನ್ ಫೇ ಹಾಗೂ ಗೂಗಲ್ ಫೇಗಳಿಂದ ಬೆಟ್ಟಿಂಗ್ ಹಣವನ್ನು ತಮ್ಮ ಖಾತೆಗಳಿಗೆ ಆಟಗಾರರಿಂದ ಕಟ್ಟಿಸಿಕೊಂಡು ಹಾಗೂ ನಗದು ರೂಪದಲ್ಲಿ ಕಟ್ಟಿಸಿಕೊಂಡು Lucky88 ಎಂಬ ಆ್ಯಪ್ ಗೆ ಆಟಗಾರರನ್ನು ಸೇರಿಸಿಕೊಂಡು Username ಹಾಗೂ Password ನೀಡಿ ಅವರಿಂದ ಕ್ರಿಕೆಟ್ ನಡೆಯುವ ಸಮಯದಲ್ಲಿ ಬೆಟ್ಟಿಂಗ್ ಹಣವನ್ನು ಕಟ್ಟಿಸಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

Lucky88 ಆ್ಯಪ್ ಅನ್ನು ಗುಬ್ಬಿ ನಿವಾಸಿ ಜೆ.ಸಿ ಸಿದ್ದರಾಜು @ ಸಿದ್ದು ಈತನು ಈ ಆರೋಪಿಗಳಿಂದ ಹಣ ಪಡೆದು ಬೆಂಗಳೂರಿನಿಂದ ಸರಬರಾಜು ಮಾಡಿದ್ದಾನೆಂದು ತಿಳಿದು ಬಂದಿದ್ದು ಸಿದ್ದರಾಜು ತಲೆ ಮರೆಸಿಕೊಂಡಿದ್ದು ಈತನು ಹಾಗೂ ಇತರರ ಪತ್ತೆಗೆ ವಿಶೇಷ ತಂಡವನ್ನು ರಚಿಸಿದೆ.

ಶ್ರೀ ಡಾ. ಕೆ ವಂಸಿಕೃಷ್ಣ ಮಾನ್ಯ ಪೊಲೀಸ್ ಅಧೀಕ್ಷಕರು, ತುಮಕೂರು, ಶ್ರೀ ಉದೇಶ್ ಟಿ.ಜಿ ಮಾನ್ಯ ಎ.ಎಸ್.ಪಿ ಸಾಹೇಬರವರು, ಶ್ರೀ ಸೂರ್ಯನಾರಾಯಣ್ ರಾವ್ ವಿ. ಡಿಎಸ್.ಪಿ. ಡಿ.ಸಿ.ಆರ್‌.ಬಿ. ತುಮಕೂರು ರವರುಗಳ ಮಾರ್ಗದರ್ಶನದಲ್ಲಿ, ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಶ್ರೀ ಶೇಷಾದ್ರಿ ಎಂ.ವಿ.  ಗುಬ್ಬಿ ಠಾಣೆಯ ಪಿ.ಎಸ್‌.ಐ ಜ್ಞಾನಮೂರ್ತಿ ಮತ್ತು ಸಿಬ್ಬಂದಿಗಳಾದ ಮಲ್ಲೇಶ್‌, ಅಯ್ಯೂಬ್‌ ಜಾನ್‌, ನಾಗರಾಜು ಶಿವಶಂಕರ್‌ ಮಂಜುನಾಥ್‌ ಹರೀಶ್‌  ರವರುಗಳು ಈ ಬೆಟ್ಟಿಂಗ್ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಾರ್ವಜನಿಕರಲ್ಲಿ ಒಂದಕ್ಕೆ ಹತ್ತರಷ್ಟು ಹಣಗಳಿಸಬಹುದೆಂಬ ಆಸೆಯನ್ನು ಹುಟ್ಟಿಸಿ ಆನ್ ಲೈನ್ ನಲ್ಲಿ ಕ್ರಿಕೆಟ್ ಬೆಟಿಂಗ್ ಸಾರ್ವಜನಿಕರನ್ನು ವಂಚಿಸುತ್ತಿರುತ್ತಾರೆ. ಆದ್ದರಿಂದ ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ಬಂದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಸಂಖ್ಯೆ 0816-8871479, 0816-2272451, 0816-2278000 ಗೆ ತಿಳಿಸಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಕೆ ವಂಸಿ ಕೃಷ್ಣ ಐಪಿಎಸ್ ರವರು ತಿಳಿಸಿರುತ್ತಾರೆ.


ಅಪರಾಧ ಘಟನೆಗಳು 03-10-20

ಜಯನಗರ ಪೊಲೀಸ್ ಠಾಣಾ ಸಿ ಆರ್ ನಂ. 67/2020 ಕಲಂ 392 ಪಿ ಸಿ.

ದಿನಾಂಕ: 03/10/2020 ರಂದು ಬೆಳಿಗ್ಗೆ 10-15 ಗಂಟೆಯಲ್ಲಿ ತುಮಕೂರು ಟೌನ್‍, ಸಿದ್ದರಾಮೇಶ್ವರ ಪಶ್ಚಿಮ ಬಡಾವಣೆ ವಾಸಿ ಬಿ. ನಾಗರತ್ನಮ್ಮ ಕೋಂ. ಲೇ|| ಹೆಚ್.ವಿ. ಗುರುರಾಜರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ: 03-10-2020 ರಂದು ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಮುಸುರೆಯನ್ನು ಚೆಲ್ಲುವ ಸಲುವಾಗಿ ನಮ್ಮ ಮನೆಯ ಸಮೀಪದಲ್ಲಿ ಬಿ.ಎಸ್.ಎಸ್.ಮೈಕ್ರೋ ಪೈನಾನ್ಸ್‌‌‌‌ ಕಛೇರಿಯ ಮುಂಭಾಗದಲ್ಲಿರುವ ಖಾಲಿ ನಿವೇಶನದ ಬಳಿಗೆ ಹೋಗಿ, ಮುಸುರೆಯನ್ನು ಚೆಲ್ಲಿ ವಾಪಾಸ್ಸು ರಸ್ತೆಗೆ ಬಂದಾಗ, ನನ್ನ ಹಿಂದೆ ಒಂದು ಮೋಟಾರ್‌‌‌ ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದು, ಅವರ ಪೈಕಿ ಮೋಟಾರ್‌‌‌ ಬೈಕ್‌ನಲ್ಲಿ ಹಿಂದೆ ಕುಳಿತಿದ್ದವನು ಮೋಟಾರ್‌‌ ಬೈಕ್‌‌‌ನಿಂದ ಇಳಿದು ನನ್ನ ಬಳಿಗೆ ಬಂದವನೇ ನನ್ನ ಬಾಯಿಯನ್ನು ಆತನ ಕೈನಿಂದ ಬಿಗಿಯಾಗಿ ಮುಚ್ಚಿಹಿಡಿದು ನನ್ನ ಕೊರಳಲ್ಲಿದ್ದ ಎರಡು ಎಳೆಯಚಿನ್ನದ ಸರವನ್ನು ಕಿತ್ತುಕೊಂಡು ಸ್ವಲ್ಪ ಮುಂದೆ ರಸ್ತೆಯ ಬದಿಯಲ್ಲಿ ಮತ್ತೊಬ್ಬ ವ್ಯಕ್ತಿಯು ನಿಲ್ಲಿಸಿಕೊಂಡಿದ್ದ ಮೋಟಾರ್‌‌ ಬೈಕ್‌‌ ಬಳಿಗೆ ಓಡಿಹೋಗಿ, ಮೋಟಾರ್‌‌‌ ಬೈಕಿನಲ್ಲಿ ಕುಳಿತುಕೊಂಡು ಬಹಳ ವೇಗವಾಗಿ ಗೋಕುಲ 80 ಅಡಿ ರಸ್ತೆಯ ಕಡೆಗೆ ಹೊರಟು ಹೋದರು.  ನಂತರ ನಾನು ಕೂಗಾಡಿದಾಗ ಅಕ್ಕ-ಪಕ್ಕದವರು ಹಾಗೂ ನನ್ನ ಮಗ ಶ್ರೀನಿವಾಸರಾವ್‌‌ ಬಂದು ವಿಚಾರ ಮಾಡಿದ್ದು, ಅವರಿಗೆ ನಡೆದ ವಿಚಾರವನ್ನು ತಿಳಿಸಿರುತ್ತೇನೆ.  ಆರೋಪಿಗಳು ನನ್ನ ಕೊರಳಿನಿಂದ ಕಿತ್ತುಕೊಂಡು ಹೋಗಿರುವ ಚಿನ್ನದ ಸರವು ಎರಡು ಸರವಾಗಿದ್ದು, ಅದರಲ್ಲಿ ಕೆಂಪುಕಲ್ಲಿನ ಚಿಕ್ಕ ಡಾಲರ್‌‌ ಇರುತ್ತೆ  ಸರ ಹಾಗೂ ಡಾಲರ್‌‌ ಸೇರಿ ಸುಮಾರು 53 ಗ್ರಾಂ ತೂಕ ಇರುತ್ತೆ. ಈ ಚಿನ್ನದ ಸರವನ್ನು ನಾನು ಈಗ್ಗೆ 5-6 ವರ್ಷಗಳ ಹಿಂದೆ ಮಾಡಿಸಿದ್ದು  ಬೆಲೆ ಸುಮಾರು 106000/- ರೂಪಾಯಿಗಳಾಗುತ್ತೆ. ( ಒಂದು ಲಕ್ಷದ ಆರು ಸಾವಿರ ರೂಪಾಯಿಗಳು )  ನನ್ನಿಂದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆರೋಪಿಗಳಿಬ್ಬರೂ ಸುಮಾರು 25 ರಿಂದ 30 ವರ್ಷದವರಾಗಿದ್ದು, ಮುಖಕ್ಕೆ ಮಾಸ್ಕ್‌‌ ಧರಿಸಿದ್ದರು.  ಪ್ಯಾಂಟ್‌‌ ಹಾಗೂ ಷರಟನ್ನು ಧರಿಸಿದ್ದರು.  ಅವರು ಬಂದಿದ್ದ ಮೋಟಾರ್‌‌ ಬೈಕ್‌‌ ಯಾವುದೆಂದು ಅವರ ನಂಬರ್‌‌ ಏನೆಂದು ನೋಡಲು ಆಗಿರುವುದಿಲ್ಲ. ನನಗೆ ಗಾಬರಿಯಾಗಿದ್ದು, ನಾನು ಮನೆಯಲ್ಲಿ ವಿಶ್ರಾಂತಿ ಪಡೆದು ನಂತರ ನನ್ನ ಮಗ ಶ್ರೀನಿವಾಸರಾವ್‌‌ ರವರ ಜೊತೆಯಲ್ಲಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತಿದ್ದು, ತಾವು ದಯಮಾಡಿ ನನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು  ಹೋಗಿರುವ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ, ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಸರವನ್ನು ಕೊಡಿಸಿಕೊಡಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ತಿಲಕ್ ಪಾರ್ಕ್ ಪೊಲೀಸ್ ಠಾಣೆ ಯುಡಿಆರ್ ನಂಬರ್ 19/2020 ಕಲಂ 174 ಸಿಆರ್ ಪಿಸಿ

ದಿನಾಂಕ:- 02.10.2020 ರಂದು ಮಧ್ಯಾನ 02.00 ಗಂಟೆಗೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಎ.ಎಸ್.ಐ ರವರಾದ ಶ್ರೀ ಬಾಷಾ ಮೊಹಿದ್ದೀನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-23.09.2020 ರಂದು ಸಂಜೆ ಸುಮಾರು 04.30 ಗಂಟೆ ಸಮಯದಲ್ಲಿ ನಾನು ಎಸ್.ಹೆಚ್.ಓ ಕರ್ತವ್ಯದಲ್ಲಿ ಇದ್ದಾಗ, ಠಾಣೆಯ ದೂರವಾಣಿಗೆ ಯಾರೋ ಕರೆ ಮಾಡಿ ಬೀಮಸಂದ್ರದ ಎಂ.ಎಸ್.ಐ.ಎಲ್  ಪಕ್ಕದಲ್ಲಿ ಯಾರೋ ಒಬ್ಬ ಬಿಕ್ಷುಕನಂತೆ ಕಂಡು ಬರುವ ಸುಮಾರು 65 ವರ್ಷ ವಯಸ್ಸಿನ ವ್ಯಕ್ತಿಯು ಮಲಗಿರುತ್ತಾನೆ. ಎಷ್ಟು ಕೂಗಿದರೂ ಹೇಳುತ್ತಿಲ್ಲಾ ಎಂದು ತಿಳಿಸಿದ ಮೇರೆಗೆ ನಾನು, ಮತ್ತು ಸಿಬ್ಬಂದಿಯಾದ ಪಿ.ಸಿ-1029 ಕಿರಣ್ ರವರು ಸ್ಥಳಕ್ಕೆ ಬೇಟಿ ನೀಡಿ ಸದರಿ ವ್ಯಕ್ತಿಯನ್ನು ಎಬ್ಬಿಸಿ ನೋಡಲಾಗಿ ಸದರಿ ವ್ಯಕ್ತಿಯು ಏನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗೂ ಸದರಿ ವ್ಯಕ್ತಿಗೆ ತನ್ನ ಹೆಸರು ವಿಳಾಸ ತಿಳಿಸುವಂತೆ ಕೇಳಿದರೂ ಆತನು ಏನು ಮಾತನಾಡಲಿಲ್ಲ. ತಕ್ಷಣ 108 ಅಂಬುಲೆನ್ಸ್ ಗೆ ಕರೆ ಮಾಡಿ ಸದರಿ ವ್ಯಕ್ತಿಯನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ನಂತರ ಅದೇ ದಿನ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ, ಸದರಿ ಅಪರಿಚಿತ ವ್ಯಕ್ತಿಯು ಮಾತನಾಡುವ ಸ್ಥಿತಿಯಲ್ಲಿ ಇದ್ದಾರೆಯೇ.. ಅಥವಾ ಇಲ್ಲವೇ ಎಂಬ ಬಗ್ಗೆ ವರದಿಯನ್ನು ಕೇಳಿದ್ದು, ವೈಧ್ಯಾಧಿಕಾರಿಗಳು ಸದರಿ ಅಪರಿಚಿತ ವ್ಯಕ್ತಿಯು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿರುತ್ತಾರೆ. ನಂತರ ಸದರಿ ವ್ಯಕ್ತಿ ಭಾವ ಚಿತ್ರವನ್ನು ಪಡೆದು ಆತನ ವಾರಸುದಾರರ ಎಲ್ಲಾ ಕಡೆ ಪ್ರಚಾರ ಪಡಿಸಿ, ವಾರಸುದಾರರ ಪತ್ತೆಗೆ ಶ್ರಮಿಸಿರುತ್ತೆ. ಸದರಿ ಅಪರಿಚಿತ ವ್ಯಕ್ತಿಯ ವಾರಸುದಾರರ ಇದುವರೆವಿಗೂ ಪತ್ತೆಯಾಗಿರುವುದಿಲ್ಲ. ಈ ದಿನ ದಿನಾಂಕ:- 02.10.2020 ರಂದು ಮದ್ಯಾನ ಸುಮಾರು 11.50 ಗಂಟೆಗೆ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರೀಂ ಸಾಬ್  ಹೆಚ್.ಸಿ-679 ರವರು ತಿಳಿಸಿರುತ್ತಾರೆ. ಆದ್ದರಿಂದ ಸದರಿ ವ್ಯಕ್ತಿಯು ಬಿಕ್ಷೆ ಬೇಡುತ್ತಿದ್ದು, ಯಾರಾದರೂ ಏನಾದರೂ ಕೊಟ್ಟರೆ ತಿನ್ನುತ್ತಿದ್ದು, ಎಲ್ಲಿಯಂದರಲ್ಲಿ ಮಲಗುತ್ತಿದ್ದರು. ಸದರಿ ವ್ಯಕ್ತಿ ಯಾವಾಗಲೂ ಕೆಮ್ಮುತ್ತಿದ್ದರು. ಸದರಿ ವ್ಯಕ್ತಿಯು ಅನಾರೋಗ್ಯದಿಂದಲೋ ಅಥವಾ ಸರಿಯಾದ ಸಮಯಕ್ಕೆ ಅನ್ನ ಆಹಾರ ಸೇವಿಸದೇ  ಮೃತಪಟ್ಟಿರಬಹುದು. ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 22 guests online
Content View Hits : 948956
Hackguard Security Enabled