lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 3 4
5 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Tuesday, 06 October 2020
ಅಪರಾಧ ಘಟನೆಗಳು 06-10-20

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ. ಮೊ ನಂ-141/2020 ಕಲಂ 32,34 ಕೆ.ಇ.ಆಕ್ಟ್

ದಿನಾಂಕ;-05/10/2020 ರಂದು ಬೆಳಿಗ್ಗೆ 9-30 ಗಂಟೆಗೆ ಎಂ.ರಾಮಕೃಷ್ಣಪ್ಪ. ಪಿ.ಎಸ್.ಐ. ಹೆಬ್ಬೂರು ಪೊಲೀಸ್ ಠಾಣೆ ರವರು ಅಸಲು ಪಂಚನಾಮೆಯೊಂದಿಗೆ ಮಾಲುಗಳನ್ನು ಹಾಜರುಪಡಿಸಿ ಪ್ರಕರಣವನ್ನು ದಾಖಲಿಸಲು ನೀಡಿದ ವರದಿ ಏನೆಂದರೆ ನಾನು ಠಾಣಾ ಸಿ.ಪಿ.ಸಿ-988 ಯತೀಶ್ ಕುಮಾರ್ ಮತ್ತು ಸಿಪಿಸಿ-1050 ನಂದೀಶ್ ರವರೊಂದಿಗೆ ಹೊನ್ನುಡಿಕೆ ಗ್ರಾಮದ ರಸ್ತೆಯ ಕಡೆ ಬೆಳಿಗ್ಗೆ 06-15 ಗಂಟೆಯಲ್ಲಿ ಮುಂಜಾನೆ ಗಸ್ತಿನಲ್ಲಿದ್ದಾಗ  ನನಗೆ ಬಂದ ಮಾಹಿತಿ ಏನೆಂದರೆ, ಠಾಣಾ ಸರಹದ್ದಿನ ಸಿ.ಕೊರಟಗೆರೆ ಕಡೆಯಿಂದ ಯಾರೋ ಇಬ್ಬರು ಆಸಾಮಿಗಳು ಒಂದು ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಒಂದು ಬಿಳಿ ಚೀಲದಲ್ಲಿ ಎಲ್ಲಿಂದಲೋ ಮದ್ಯದ ಪಾಕೇಟ್ ಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ಹೊನ್ನುಡಿಕೆ ಕಡೆಯಿಂದ ಶಿವಗಂಗೆ ರಸ್ತೆಯಲ್ಲಿ ಮಸ್ಕಲ್ ಮಾರ್ಗವಾಗಿ ಬೆಳಿಗ್ಗೆ 06-30 ಗಂಟೆಯಲ್ಲಿ ಮಸ್ಕಲ್ ಗ್ರಾಮದ ಲಕ್ಷ್ಮೀಕುಮಾರ್ ಎಂಬುವರ ಮನೆಯ ನೇರದಲ್ಲಿ ಹೋದಾಗ ಎದುರುಗಡೆಯಿಂದ ಒಂದು ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಇಬ್ಬರು ಆಸಾಮಿಗಳು ಬರುತ್ತಿದ್ದುದನ್ನು ನೋಡಿ ನಮ್ಮ ಜೀಪನ್ನು ನಿಲ್ಲಿಸಿ ಸದರಿ ದ್ವಿಚಕ್ರ ವಾಹನವನ್ನು ನಿಲ್ಲಿಸಲಾಗಿ ಗಾಬರಿಯಿಂದ ನಿಲ್ಲಿಸಿದ್ದು, ಸದರಿ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವಿದ್ದು,  ಅದರಲ್ಲಿ ಪರಿಶೀಲಿಸಲಾಗಿ ಮದ್ಯದ ರಾಜಾ ವಿಸ್ಕಿ ಸ್ಯಾಚೆಟ್ ಗಳಿದ್ದು. ಇವುಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ವಿಚಾರ ಮಾಡಿ ಪರವಾನಗಿಯನ್ನು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲ, ಸದರಿ ಮದ್ಯದ ಪ್ಯಾಕೆಟ್ ಗಳನ್ನು ಕೌತಮಾರನಹಳ್ಳಿ ಬಳಿ ಇರುವ ಕೆಂಪಮ್ಮ ಯಲ್ಲಮ್ಮ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಕ್ಯಾಷಿಯರ್ ಆದಿನಾರಾಯಣ ರವರು ನಮಗೆ ಪ್ರತಿ ದಿನ ನಮ್ಮ ಅಂಗಡಿಯಿಂದ ಮದ್ಯದ ಪಾಕೇಟ್ ಗಳನ್ನು ತೆಗೆದುಕೊಂಡು ಹೋಗಿ ಎಲ್ಲಿಯಾದರೂ ಚಿಲ್ಲರೆ ಅಂಗಡಿಗಳಿಗೆ  ನಾನು ಕೊಡುವ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣವನ್ನು ಕೊಡುವಂತೆ ತಿಳಿಸಿ ನಮಗೆ ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಕಳಿದ್ದು ನಮಗೂ ಸಹ ಸ್ವಲ್ಪ ಹಣ ಸಿಗುತ್ತೆಂತ ಹೇಳಿ ಒಪ್ಪಿ ಮದ್ಯದ ಪಾಕೇಟ್ ಗಳನ್ನು ತಂದು ಮಾರಾಟಕ್ಕೆ ಕೊಡಲು ಹೋಗುತ್ತಿರುವುದಾಗಿ ತಿಳಿಸಿದಾಗ ಸ್ಥಳಕ್ಕೆ ಬೆಳಿಗ್ಗೆ 07-00 ಗಂಟೆಗೆ ಪಂಚರನ್ನು ಬರಮಾಡಿಕೊಂಡು ನಂತರ ಪಂಚರ ಸಮಕ್ಷಮ ನಮ್ಮ ಜೊತೆಯಲ್ಲಿದ್ದ ಆಸಾಮಿಗಳ ಹೆಸರು ವಿಳಾಸಗಳನ್ನು ಕೇಳಲಾಗಿ 1] ಗಂಗಾಧರ.ಎಂ.ಎಸ್. ಬಿನ್ ಶಿವರಾಮಯ್ಯ 27 ವರ್ಷ ಒಕ್ಕಲಿಗರು, ಕೌತಮಾರನಹಳ್ಳಿ ಬಳಿ ಇರುವ ಕೆಂಪಮ್ಮ-ಯಲ್ಲಮ್ಮ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಚಾಲಕ ಕೆಲಸ, ಮಣೆಚೆಂಡೂರು ಗ್ರಾಮ ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ, 2] ಕುಮಾರ್ ಬಿನ್ ಲೇಟ್.ಕಲ್ಲಪ್ಪ 55 ವರ್ಷ ಲಿಂಗಾಯಿತರು, ಕೌತಮಾರನಹಳ್ಳಿ ಬಳಿ ಇರುವ ಕೆಂಪಮ್ಮ-ಯಲ್ಲಮ್ಮ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಸ ಹೊಡೆಯುವ ಕೆಲಸ, ಹೊನ್ನವಳ್ಳಿ ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ, ಎಂತ ತಿಳಿಸಿದ್ದು,  ನಂತರ ಸದರಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಮದ್ಯದ ಪ್ಯಾಕೆಟ್ ಗಳನ್ನು ಸುರಿದು ನೋಡಲಾಗಿ 90 ಎಂ.ಎಲ್.ನ ಒಟ್ಟು 192 ರಾಜಾ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳಿದ್ದು, 01 ಪ್ಯಾಕೆಟ್ ನ ಬೆಲೆ 35.13 ರೂ ಒಟ್ಟು 6744.96 ರೂ ಗಳಾಗಿರುತ್ತೆ. ಹಾಗೂ ಸದರಿ ಟೆಟ್ರಾ ಪ್ಯಾಕೆಟ್ ಗಳನ್ನು ಇಟ್ಟುಕೊಂಡಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲವನ್ನು ವಶಕ್ಕೆ ಪಡೆದು ಸದರಿ ಪ್ಯಾಕೆಟ್ ಗಳ ಪೈಕಿ ಕ್ರಮ ಸಂಖ್ಯೆ 7205316769 ರಿಂದ 7205316798 ರವರೆಗೆ ಒಟ್ಟು 30 ಟೆಟ್ರಾ ಪ್ಯಾಕೆಟ್ ಗಳನ್ನು  ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಿ ವರದಿ ಪಡೆಯಲು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲಿದು “ಕೆ” ಎಂಬ ಇಂಗ್ಲೀಷ್ ಅಕ್ಷರದ ಶೀಲಿನಿಂದ ಶೀಲು ಮಾಡಿಕೊಂಡು ಉಳಿದ 162 ರಾಜ ಟೆಟ್ರಾ ಪ್ಯಾಕೆಟ್ ಗಳನ್ನು ಸಂಭಂಧಿಸಿದ ಅಬಕಾರಿ ಇಲಾಖೆಗೆ ನೀಡುವುದಾಗಿ ತಿಳಿಸಿ ವಶಕ್ಕೆ ಪಡೆದಿದ್ದು, ನಂತರ ಇಬ್ಬರು ಆಸಾಮಿಗಳು ಮದ್ಯವನ್ನು ತಂದಿದ್ದ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ಕೆಎ-06-ಹೆಚ್.ಡಿ-6078 ನೇ ಕೆಂಪು ಬಣ್ಣದ ಮ್ಯಾಸ್ಟ್ರೋ ದ್ವಿಚಕ್ರ ವಾಹನವಾಗಿದ್ದು, ಸ್ಥಳದಲ್ಲಿ ದೊರೆತ ಇಬ್ಬರು ಆಸಾಮಿಗಳಿಗೆ ಕಲಂ 41 ಸಿ.ಆರ್.ಪಿ.ಸಿ ರೀತ್ಯಾ ನೋಟೀಸ್ ಜಾರಿ ಮಾಡಿ ತನಿಖೆ ಕಾಲದಲ್ಲಿ ಕರೆದಾಗ ಹಾಜರಾಗಿ ತನಿಖೆಗೆ ಸಹಕರಿಸಲು ಸೂಚಿಸಿ ಅವರ ಬಳಿ ಸಹಿ ಪಡೆದು ದೊರೆತ ಮಾಲು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಬೆಳಿಗ್ಗೆ 07-00 ಗಂಟೆಯಿಂದ 09-00 ಗಂಟೆಯವರೆಗೆ  ಪಂಚನಾಮೆ ಬರೆದು ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು ದ್ವಿಚಕ್ರ ವಾಹನ ಹಾಗೂ ಅಸಲು ಪಂಚನಾಮೆಯೊಂದಿಗೆ ವಾಪಸ್ಸು ಬೆಳಿಗ್ಗೆ 09-30 ಗಂಟೆಗೆ ಠಾಣೆಗೆ ಬಂದು ಮೇಲ್ಕಂಡ ಇಬ್ಬರು ಆಸಾಮಿಗಳು ಹಾಗೂ ಕ್ಯಾಷಿಯರ್ ಆದಿನಾರಾಯಣ ರವರ ಮೇಲೆ ಕಲಂ 32, 34 ಕೆ.ಇ.ಆ್ಯಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದ್ದರ  ಮೇರೆಗೆ ಠಾಣಾ ಮೊ ನಂ-141/2020 ಕಲಂ 32,34 ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ:61/2020 ಕಲಂ:307,504 .ಪಿ.ಸಿ

ದಿನಾಂಕ:05/10/2020 ರಂದು ಬೆಳಗ್ಗೆ 10.30 ಗಂಟೆಯಲ್ಲಿ ಫಿರ್ಯಾದಿ ಶಿವನಗೆರೆ ವಾಸಿ ಮಣಿಕಂಠ ಬಿನ್ ಸುಬ್ಬರಾಯಪ್ಪ ರವರು ಠಾಣೆಗೆ ಹಾಜರಾಗಿ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಹಾಲಿನ ವಾಹನ ಓಡಿಸಿಕೊಂಡು ಜೀವನ ಸಾಗಿಸುತ್ತಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾನು ಮತ್ತು ನನ್ನ ಅಕ್ಕಂದಿರಾದ ಮಂಜುಳ, ಮಹಾಲಕ್ಷ್ಮಿ, ವರಲಕ್ಷ್ಮಿ ಎಂಬ ಒಟ್ಟು ನಾಲ್ಕು ಜನ ಮಕ್ಕಳು. ಮಂಜುಳ ರವರನ್ನು ನಮ್ಮೂರಿನ ಬಸವರಾಜು ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಮಹಾಲಕ್ಷ್ಮಿಯನ್ನು ಪುರುವರ ಹತ್ತಿರದ ಬ್ಯಾಲ್ಯಾ ಉಪ್ಪಾರಪಾಳ್ಯದ ರಮೇಶ ಎಂಬುವವರಿಗೆ ಈಗ್ಗೆ 8 ವರ್ಷದ ಹಿಂದೆ ಕೊಟ್ಟು ಮದುವೆ ಮಾಡಿದ್ದು, ವರಲಕ್ಷ್ಮಿಯನ್ನು ಮಲ್ಲೇನಹಳ್ಳಿ ರಾಜು ಎಂಬುವವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ಅಕ್ಕ ಮಹಾಲಕ್ಷ್ಮಿ ಮತ್ತು ಭಾವ ರಮೇಶ ರವರಿಗೆ ಸಮಂತಾ ಎಂಬ ಮಗಳಿರುತ್ತಾಳೆ. ನನ್ನ ಅಕ್ಕ ಮಹಾಲಕ್ಷ್ಮಿ ಮತ್ತು ಭಾವ ರಮೇಶ ಮದುವೆಯಾದ ಕೆಲವು ವರ್ಷಗಳ ಕಾಲ ಅನ್ನೋನ್ಯವಾಗಿ ಸಂಸಾರ ಮಾಡಿಕೊಂಡಿದ್ದರು. ಈಗ್ಗೆ 2 ವರ್ಷಗಳಿಂದ ನಮ್ಮ ಭಾವ ರಮೇಶ ಮನೆಯಲ್ಲಿ ಯಾವಾಗಲೂ ಕುಡಿದು ಬಂದು ನನ್ನ ಅಕ್ಕಳ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದುದ್ದರಿಂದ ಮಹಾಲಕ್ಷ್ಮಿ ನಮ್ಮೂರಿಗೆ ಬಂದು ನಮ್ಮ ಹಿರಿಯ ಅಕ್ಕ ಮಂಜುಳ ರವರ ಮನೆಯಲ್ಲಿ ವಾಸವಿದ್ದುಕೊಂಡು ಬಡವನಹಳ್ಳಿಯ ಪೂರ್ಣಿಮಾ ನರ್ಸ್ ರವರ ಮನೆಗೆ ಮನೆಕೆಲಸಕ್ಕೆ ಹೋಗುತ್ತಿದ್ದರು. ದಿನಾಂಕ:04/10/2020 ರಂದು ಸಂಜೆ ಸುಮಾರು 06-45 ಗಂಟೆಯಲ್ಲಿ ನಾನು ಹಾಲಿನ ವಾಹನದಲ್ಲಿ ಹಾಲನ್ನು ತಂದು ಬಡವನಹಳ್ಳಿ ಡೈರಿಗೆ ಹಾಕಿ ಪೂರ್ಣಿಮಾ ರವರ ಮನೆಯ ಹತ್ತಿರ ಹೋಗಿ ನಮ್ಮ ಅಕ್ಕನನ್ನು ಕರೆದುಕೊಂಡು ಬರಲೆಂದು ಬಡವನಹಳ್ಳಿ ಡಿ.ಸಿ.ಸಿ ಬ್ಯಾಂಕ್ ಹತ್ತಿರ ಹಾಲಿನ ವಾಹನ ತೆಗೆದುಕೊಂಡು ಹೋಗುತ್ತಿದ್ದಾಗ ನನ್ನನ್ನು ನೋಡಿದ ಬಡವನಹಳ್ಳಿಯ ನಮಗೆ ಪರಿಚಯವಿದ್ದ ಸುಧಾರಾಣಿ ಎಂಬುವವರು ನಿಮ್ಮ ಅಕ್ಕ ಮಹಾಲಕ್ಷ್ಮಿಯ ಗಂಡ ಆಕೆಯ ಮೇಲೆ ಗಲಾಟೆ ಮಾಡುತ್ತಿದ್ದಾನೆ ನೋಡು ಎಂದು  ಕೂಗಿ ಹೇಳಿದರು. ತಕ್ಷಣ ನಾನು ವಾಹನ ನಿಲ್ಲಿಸಿ ಡಿ.ಸಿ.ಸಿ ಬ್ಯಾಂಕ್ ಕಡೆಗೆ ಹೋಗುವಷ್ಟರಲ್ಲಿ, ನಮ್ಮ ಭಾವ ರಮೇಶ ರವರು ನನ್ನ ಅಕ್ಕ ಮಹಾಲಕ್ಷ್ಮಿಯನ್ನು ಹಿಡಿದುಕೊಂಡು ಸಾಯಿ ಸೂಳೆ ಮುಂಡೆ, ನೀನು ನನ್ನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಓಡಾಡುತಿದ್ದೀಯಾ ನೀನು ಇದ್ದು, ಇನ್ನೇನು ಆಗಬೇಕಾಗಿದೆ ಎಂದು ಬೈಯ್ಯುತ್ತಾ ತನ್ನ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಿದ್ದ ಚಾಕುವನ್ನು ತೆಗೆದುಕೊಂಡು ಮಹಾಲಕ್ಷ್ಮಿಯ ಮುಖಕ್ಕೆ, ಕುತ್ತಿಗೆಗೆ, ಎದೆಗೆ, ಮೈ,ಕೈಗೆ ಎಲ್ಲೆಂದರಲ್ಲಿ ಸಾಯಿ-ಸಾಯಿ ಸೂಳೆ ಮುಂಡೆ ಎಂತಾ ಮನಸ್ಸೋಇಚ್ಚೆ ತಿವಿದ. ಆಗ ನಾನು ಮತ್ತು ಡಿ.ಸಿ.ಸಿ ಬ್ಯಾಂಕ್ ಬಳಿ ಇದ್ದ ಸುಧಾರಾಣಿ ಮತ್ತು ನಾಗೇನಹಳ್ಳಿ ತಿಪ್ಪೇಶ ಮತ್ತಿತರರು ಜೋರಾಗಿ ಕೂಗಿಕೊಂಡಾಗ ಆತ ಮಹಾಲಕ್ಷ್ಮಿಯನ್ನು ಬಿಟ್ಟು ನಮ್ಮ ಭಾವ ಅಲ್ಲಿಂದ ಓಡಿಹೋದ. ಮಹಾಲಕ್ಷ್ಮಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಅಷ್ಟೊತ್ತಿಗೆ ಪೂರ್ಣಿಮಾ ರವರೂ ಸಹ ಅಲ್ಲಿಗೆ ಬಂದರು. ನಂತರ ನಾವು ಮಹಾಲಕ್ಷ್ಮಿಯನ್ನು ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆವು. ನಂತರ ವೈದ್ಯರ ಸಲಹೆ ಮೇರೆಗೆ ಆಕೆಯನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ರಾತ್ರಿ ಅವೇಳೆಯಾದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ಅಕ್ಕ ಮಹಾಲಕ್ಷ್ಮಿಯ ಶೀಲದ ಮೇಲೆ ಶಂಕಿಸಿ ಆಕೆಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆಕೆಯ ಗಂಡ ರಮೇಶನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಮೊ.ನಂ:61/2020 ಕಲಂ:307,504 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 120/2020, ಕಲಂ- 279, 337, 304(A) ಐಪಿಸಿ

ದಿನಾಂಕ: 05/10/2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಪಿರ್ಯಾದಿ ವಾಸು ಆರ್ ಬಿನ್ ಆರ್.ರಾಜಪ್ಪ, 27 ವರ್ಷ, ಆದಿಕರ್ನಾಟಕ ಜನಾಂಗ, ವೆಲ್ಡಿಂಗ್ ಕೆಲಸ, ಕ್ರೈಸ್ ಕೃಪನಿಧಿ ಸ್ಕೂಲ್ ಹತ್ತಿರ, ಕೆಂಪೇಗೌಡ ಆರ್ಚ್, ಚೌಡೇಶ್ವರಿ ನಗರ, ಲಗ್ಗೆರೆ, ಬೆಂಗಳೂರು-58, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆ ತಾಯಿಗೆ ಮೂರು ಜನ ಮಕ್ಕಳು, 1ನೇ ಯವರು ಆಶಾ, 2ನೇಯವರು ಬಾಬು, 3ನೇ ಯವನು ನಾನು ಆಗಿರುತ್ತೇವೆ.  ನನ್ನ ಅಕ್ಕ ಆಶಾ ರವರಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ.  ನನ್ನ ಅಣ್ಣ ಬಾಬು, 30 ವರ್ಷ, ರವರಿಗೆ ಮದುವೆಯಾಗಿದ್ದು, ಅವರ ಹೆಂಡತಿಯ ಹೆಸರು ಸುಗಂಧ ಆಗಿದ್ದು ಇವರಿಗೆ ಸಂದ್ಯ, ಗಗನ್, ಆಶಿನಿ ಎಂಬ ಮೂರು ಜನ ಮಕ್ಕಳಿರುತ್ತಾರೆ. ನನ್ನ ಅಣ್ಣ ಬೆಂಗಳೂರಿನ ಪೀಣ್ಯದ ಪ್ಯಾಕ್ಟರಿಯಲ್ಲಿ ಟರ್ನರ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ: 03/10/2020 ರಂದು ನನ್ನ ಅಣ್ಣ ಬಾಬು ಮತ್ತು ಅವರ ಸ್ನೆಹಿತರಾದ ಚಂದ್ರಶೇಖರ್, ಮನು ರವರು ಮತ್ತೊಬ್ಬ ಸ್ನೇಹಿತರಾದ ದೇವರಾಜು ರವರ ಊರಾದ ಶಿರಾದ ಹತ್ತಿರ ಇರುವ ರಂಗಾಪುರ ಗ್ರಾಮಕ್ಕೆ ಬೆಂಗಳೂರಿನಿಂದ ತಮ್ಮ ತಮ್ಮ ದ್ವಿಚಕ್ರವಾಹನಗಳಲ್ಲಿ ಹೋಗಿದ್ದರು. ನಂತರ  ನಿನ್ನೆ ದಿನಾಂಕ: 04/10/2020 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ನನ್ನ ಅಣ್ಣನ  ಸ್ನೇಹಿತ ಚಂದ್ರಶೇಖರ್ ರವರು ಪೋನ್ ಮಾಡಿ ಈದಿನ ನಾನು ನಿಮ್ಮ ಅಣ್ಣ ಬಾಬು ಮತ್ತು ಸ್ನೇಹಿತರಾದ ಮನು, ದೇವರಾಜು ಎಲ್ಲರೂ ದೇವರಾಜು ರವರ ಊರಾದ ರಂಗಾಪುರದಿಂದ ಬೆಂಗಳೂರಿಗೆ ಬರಲು ನಾನು ನನ್ನ ಅಪಾಚಿ ದ್ವಿಚಕ್ರವಾಹನದಲ್ಲಿ ಮತ್ತು ಮನು ಅವರ ದ್ವಿಚಕ್ರವಾಹನದಲ್ಲಿ ಹಾಗೂ ನಿನ್ನ ಅಣ್ಣ ಬಾಬು ಮತ್ತು ದೇವರಾಜು KA-02-KE-5094 ನೇ ಸುಜುಕಿ ಆಕ್ಸಿಸ್ ದ್ವಿಚಕ್ರವಾಹನದಲ್ಲಿ ಹೊರಟು, ಶಿರಾ ಮಾರ್ಗವಾಗಿ ಸಿರಾ-ತುಮಕೂರು ಎನ್.ಹೆಚ್.48 ರಸ್ತೆಯಲ್ಲಿ ರಾತ್ರಿ ಸುಮಾರು 7-30 ಗಂಟೆಯಲ್ಲಿ ಜೋಗಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿರುವಾಗ್ಗೆ,  ದೇವರಾಜು ರವರು KA-02-KE-5094 ನೇ ಸುಜುಕಿ ಆಕ್ಸಿಸ್ ದ್ವಿಚಕ್ರವಾಹನದ ಹಿಂಬದಿಯಲ್ಲಿ ನಿನ್ನ ಅಣ್ಣ ಬಾಬು ರವರನ್ನು ಕೂರಿಸಿಕೊಂಡು ನಮ್ಮ ದ್ವಿಚಕ್ರವಾಹನ ಮುಂದೆ ಸದರಿ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, ಜೋಗಿಹಳ್ಳಿ ಹತ್ತಿರ ಇರುವ ಒಂದು ಸೇತುವೆಗೆ ದೇವರಾಜು ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನವನ್ನು ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ, ದೇವರಾಜು ಮತ್ತು ಬಾಬು ದ್ವಿಚಕ್ರವಾಹನ ಸಮೇತ ರಸ್ತೆಯ ಮೇಲೆ ಬಿದ್ದರು.  ಇದನ್ನು ನೋಡಿದ ನಾನು ಮತ್ತು ನನ್ನ ಸ್ನೇಹಿತ ಮನು ಇಬ್ಬರೂ ಹತ್ತಿರ ಹೋಗಿ ನೋಡಲಾಗಿ ದೇವರಾಜುಗೆ ಎಡಭುಜ, ಎಡಕಾಲು ಮತ್ತು ತಲೆಗೆ ಹಾಗೂ ಬಾಬುಗೆ ತಲೆಗೆ ಮತ್ತು ಮೈಕೈ ಇತರೆಕಡೆ ಪೆಟ್ಟುಬಿದ್ದು ರಕ್ತಗಾಯವಾಗಿದ್ದು, ಇವರನ್ನು ಎತ್ತಿ ಉಪಚರಿಸಿದೆವು. ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಬಂದ ಹೈವೆ ಆಂಬ್ಯುಲೆನ್ಸ್ ನವರು ಗಾಯಾಳುಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಾವು ಜಿಲ್ಲಾ ಆಸ್ಪತ್ರೆಗೆ ಬಳಿಗೆ ಹೋಗುತ್ತಿರುತ್ತೇವೆ, ನೀನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಾ ಎಂದು ತಿಳಿಸಿದನು. ನಾನು ವಿಚಾರವನ್ನ ನಮ್ಮ ಮನೆಯವರಿಗೆ ತಿಳಿಸಿ ರಾತ್ರಿ ಸುಮಾರು 10-30 ಗಂಟೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ವಿಚಾರ ತಿಳಿಯಲಾಗಿ ಚಂದ್ರಶೇಖರ್ ತಿಳಿಸಿದ ವಿಚಾರ ನಿಜವಾಗಿತ್ತು. ನಮ್ಮ ಅಣ್ಣ ಬಾಬು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಮೃತಪಟ್ಟರಂತ, ಮತ್ತೊಬ್ಬ ಗಾಯಾಳು ದೇವರಾಜು ರವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿರುವುದಾಗಿ ವಿಚಾರ ತಿಳಿಯಿತು. ಈ ಅಪಘಾತವು KA-02-KE-5094 ನೇ ಸುಜುಕಿ ಆಕ್ಸಿಸ್ ದ್ವಿಚಕ್ರವಾಹನದ ಸವಾರ ದೇವರಾಜು ರವರ ಅತಿವೇಗ ಮತ್ತು ನಿರ್ಲಕ್ಷತನದಿಂದ ಸಂಭವಿಸಿರುತ್ತೆ. ನನ್ನ ಅಣ್ಣನ ಶವವು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ನಾನು ಈ ವಿಚಾರವನ್ನ ನಮ್ಮ ಮನೆಯವರಿಗೆ ಮತ್ತು ಸಂಬಂದಿಕರಿಗೆ ತಿಳಿಸಿ ಈದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಈ ಅಪಘಾತಕ್ಕೆ ಕಾರಣನಾದ  ಮೇಲ್ಕಂಡ ದ್ವಿಚಕ್ರವಾಹನದ ಸವಾರ ದೇವರಾಜು ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೊಂಡಿರುತ್ತೇನೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 30 guests online
Content View Hits : 948943
Hackguard Security Enabled