lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 3 4
5 6 7 9 10 11
12 13 14 15 16 17 18
19 20 21 22 23 24 25
26 27 28 29 30 31  
Thursday, 08 October 2020
ಅಪರಾಧ ಘಟನೆಗಳು 08-10-20

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ:64/2020 ಕಲಂ:87 ಕೆ.ಪಿ ಆಕ್ಟ್

ದಿನಾಂಕ:07/10/2020 ರಂದು ಸಂಜೆ 04-00 ಗಂಟೆಯಲ್ಲಿ ಠಾಣಾ ಪಿ.ಐ ಹನುಮಂತರಾಯಪ್ಪ ಹೆಚ್.ಜಿ ರವರು ನೀಡಿದ ವರದಿ ಅಂಶವೇನೆಂದರೆ, ನಾನು ಈ ದಿನ ಮಧ್ಯಾಹ್ನ 03-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಾತ್ಮೀದಾರನೊಬ್ಬ ಠಾಣೆಯ ಬಳಿಗೆ ಬಂದು ಬೆಲ್ಲದಮಡಗು ಸಮೀಪ ಕೆರೆಯ ಅಂಗಳದಲ್ಲಿ ನಾಗರಾಜು ಮತ್ತು ಇತರರು ಗುಂಪು ಸೇರಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಬಾತ್ಮೀ ತಿಳಿಸಿದ ಮೇರೆಗೆ ನಾನು ಮತ್ತು ಠಾಣಾ ಹೆಚ್.ಸಿ-133 ರಂಗನಾಥ ಮತ್ತು ಪಿ.ಸಿ-700 ಸಿದ್ದಲಿಂಗಪ್ಪ ರವರೊಂದಿಗೆ ಬಾತ್ಮೀ ಬಂದ ಸ್ಥಳದ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, 8-10 ಜನರು ಗುಂಡಕಾರವಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ನೆಲಕ್ಕೆ ನ್ಯೂಸ್ ಪೇಪರ್ ಹಾಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್, ಒಳಗೆ-ಹೊರಗೆ ಎಂದು ಕೂಗಾಡುತ್ತಾ ಇಸ್ಪೀಟ್ ಜೂಜಾಟ ಆಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸ್ಥಳ ನಿಗಾವಣೆಗೆ ಹೆಚ್.ಸಿ-133 ರಂಗನಾಥ ಮತ್ತು ಪಿ.ಸಿ-700 ಸಿದ್ದಲಿಂಗಪ್ಪ ರವರನ್ನು ಬಿಟ್ಟು ಠಾಣೆಗೆ ವಾಪಾಸ್ಸಾಗಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ  ನೀಡಿದ ವರದಿ ಪಡೆದು ಠಾಣಾ ಜಿ.ಎಸ್.ಸಿ/ಎನ್.ಸಿ.ಆರ್/315/2020 ರಲ್ಲಿ ನಮೂದಿಸಿ, ಸದರಿ ಪ್ರಕರಣದ ಫಿರ್ಯಾದು ಅಂಶವು ಅಂಸಜ್ಞೇಯವಾದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದು ರಾತ್ರಿ 05-45 ಗಂಟೆಯಲ್ಲಿ ಠಾಣಾ ಮೊ.ನಂ:64/2020 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಹೊನ್ನವಳ್ಳಿ ಪೊಲೀಸ್‌  ಠಾಣೆ ಮೊ ನಂ 89/2020 ಕಲಂ:87 ಕೆ ಪಿ ಆಕ್ಟ್

ದಿನಾಂಕ:07-10-2020 ರಂದು ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಹೊನ್ನವಳ್ಳಿ ಪೊಲೀಸ್‌ ಠಾಣಾ ಪಿ.ಎಸ್.ಐ.ರವರಾದ ಶ್ರೀ ಶಂಕರಪ್ಪ  ರವರು ಪಿಸಿ 574 ದಯಾನಂದ ರವರೊಂದಿಗೆ ಠಾಣೆಗೆ ಕಳುಹಿಸಿಕೊಟ್ಟ ಜ್ಞಾಪನ ಪತ್ರವನ್ನು ಪರಿಶೀಲಿಸಲಾಗಿ ನನಗೆ  ಇದೇ ದಿನ  ಮದ್ಯಾಹ್ನ 02-00  ಗಂಟೆ ಸಮಯದಲ್ಲಿ ನನಗೆ ಬಂದ ಮಾಹಿತಿ ಮೇರೆಗೆ ನಾನು  ನಮ್ಮ ಠಾಣಾ ಸಿಬ್ಬಂದಿಯೊಂದಿಗೆ ಮಾಹಿತಿ ಬಂದ ಸ್ಥಳವಾದ ತಿಪಟೂರು ತಾಲ್ಲೂಕು ಹೊನ್ನವಳ್ಳಿ  ಹೋಬಳಿ, ಹಾಲ್ಕುರಿಕೆ  ಗ್ರಾಮದ  ಶ್ರೀ ಪ್ಲೇಗಮ್ಮ ದೇವಾಲಯದ ಬಳಿಯ ಸರ್ಕಾರಿ ಗೋಮಾಳದ ಸಾರ್ವಜನಿಕ ಸ್ಥಳದಲ್ಲಿ ಒಟ್ಟು ಸುಮಾರು 04 ರಿಂದ 05 ಜನರು ವೃತ್ತಾಕಾರವಾಗಿ ಕುಳಿತುಕೊಂಡು ಕೈಗಳಲ್ಲಿ ಇಸ್ಟೀಟ್‌ ಎಲೆಗಳನ್ನು ಹಿಡಿದುಕೊಂಡು ಒಳಗೆ ಹೊರಗೆ ಎಂದು ಜೋರಾಗಿ ಹೇಳಿಕೊಳ್ಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಇಸ್ಪೀಟ್‌ ಜೂಜಾಟ ಆಡುತ್ತಿರುವುದು ಕಂಡು ಬಂದಿರುತ್ತೆ,  ಆದ್ದರಿಂದ ಸದರಿ ಇಸ್ಪೀಟ್‌‌ ಜೂಜಾಟದ ಮೇಲೆ ಧಾಳಿ ಮಾಡಿ ಇಸ್ಪೀಟ್‌‌ ಜೂಜಾಟ ಆಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದರಿಂದ ನೀವು ಸದರಿ ಜ್ಞಾಪನವನ್ನು ಪಡೆದು ದೂರು ದಾಖಲಿಸಿ, ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಕೋರಿಕೊಳ್ಳಲು ನಿಮಗೆ ಸೂಚಿಸಲಾಗಿದೆ ಎಂಬುದಾಗಿ ಇದ್ದ ಮೇರೆಗೆ ಠಾಣಾ ಎನ್.ಸಿ.ಆರ್. ನಂ.204/2020 ದಿನಾಂಕ:07-10-2020 ರಲ್ಲಿ ನೊಂದಾಯಿಸಿಕೊಂಡಿರುತ್ತೆ. ಪಿ.ಎಸ್.ಐ.ರವರ ಕೋರಿಕೆಯಂತೆ ಅಕ್ರಮ ಇಸ್ಪೀಟ್‌‌ ಜೂಜಾಟ ಆಡುತ್ತಿರುವ 04 ರಿಂದ 06 ಜನರ ಮೇಲೆ ಕಲಂ.87 ಕೆ.ಪಿ.ಆಕ್ಟ್‌‌ ರೀತ್ಯ ಪ್ರಕರಣ ದಾಖಲಿಸಿ ನಂತರ ಧಾಳಿ ಮಾಡಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಅನುಮತಿ ಕೋರಿದ್ದು, ಘನ ನ್ಯಾಯಾಲಯವು ಅನುಮತಿ ನೀಡಿದ್ದ ಆದೇಶವನ್ನು ಮಪಿಸಿ 26 ಶೋಭಾ  ರವರು ಇಂದು ಸಂಜೆ 04-30 ಗಂಟೆಗೆ ತಂದು ಹಾಜರುಪಡಿಸಿದ್ದನ್ನು ಪಡೆದು ಠಾಣಾ ಮೊ ನಂ 89/2020 ಕಲಂ:87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 

ಮಿಡಿಗೇಶಿ ಪೊಲೀಸ್ ಠಾಣೆ .ಸಿ.ಆರ್.ನಂ:96/2020 ಕಲಂ:8(ಬಿ)8(ಸಿ)20(ಎ)(ಬಿ) ಎನ್‌.ಡಿ.ಪಿ.ಎಸ್‌. ಆಕ್ಟ್‌‌

ದಿನಾಂಕ:07/10/2020 ರಂದು ಬೆಳಿಗ್ಗೆ 10.30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಮಧುಗಿರಿ ತಾಲ್ಲೋಕು ಬಡಯ್ಯನಹಟ್ಟಿ ಗ್ರಾಮದ ವಾಸಿ ಪಾಪಣ್ಣ ಬಿನ್ ಲೇ||ನಾಗಣ್ಣ ರವರ ಬಾಬ್ತು ಗರಣಿ ಗ್ರಾಮದ ಸರ್ವೇ.ನಂ:39/2 ರ ಸಾಗುವಳಿ ಜಮೀನಿನಲ್ಲಿ ಯಾವುದೇ ಪರವಾನಗಿ ಇಲ್ಲದೆ  ಅಕ್ರಮವಾಗಿ ಗಾಂಜಾ ಸೊಪ್ಪಿನ ಗಿಡಗಳನ್ನು ಬೆಳೆದಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಕೂಡಲೇ ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಲಾಗಿ ಪಾಪಣ್ಣ ರವರು ತನ್ನ ಜಮೀನಿನಲ್ಲಿ ಕನಕಾಂಬರ ಹೂ ಗಿಡಗಳ ಮದ್ಯೆ ಅಲ್ಲಲ್ಲಿ ಗಾಂಜಾ ಸೊಪ್ಪಿನ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿರುತ್ತೆ.ಸದರಿ ಗಾಂಜಾ ಗಿಡಗಳ ರಕ್ಷಣೆಗೆ ಸಿಬ್ಬಂದಿಯನ್ನು ಸ್ಥಳದಲ್ಲಿ ನೇಮಕ ಮಾಡಿರುತ್ತೆ. ಆದ್ದರಿಂದ ಪಾಪಣ್ಣ ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಗಾಂಜಾ ಸೊಪ್ಪಿನ ಗಿಡಗಳನ್ನು ಪಂಚಾಯ್ತುದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲು ಮಾನ್ಯ ಮಧುಗಿರಿ ಡಿ.ವೈ.ಎಸ್.ಪಿ. ಸಾಹೇಬರವರಿಂದ ಅನುಮತಿ ಪಡೆದು ಮಧ್ಯಾಹ್ನ 12-30 ಗಂಟೆಗೆ ಠಾಣಾ ಮೊ.ನಂ:96/2020 ಕಲಂ:8(ಬಿ)8(ಸಿ),20(ಎ)&(ಬಿ) ಎನ್.ಡಿ.ಪಿ.ಎಸ್ ಆಕ್ಟ್ 1985 ರೀತ್ಯಾ ಸ್ವಯಂ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಕೋಳಾಲ ಪೊಲೀಸ್ ಠಾಣೆ ಮೊ.ಸಂ. 90/2020. ಕಲಂ.2790,337,304() ಐಪಿಸಿ.

ಈ ಕೇಸಿನ ಸಾರಾಂಶವೇನೆಂದರೆ, ಕೊರಟಗೆರೆ ತಾಲ್ಲೋಕು ಎಸ್.ಗೊಲ್ಲಹಳ್ಳಿ ವಾಸಿ ಹನುಮಂತರಾಯಪ್ಪ ಬಿನ್ ಲೇಟ್ ರಂಗಯ್ಯನವರು ತನ್ನ ಬಾಬ್ತು KA-06-EY-6350 ನೇ ಮೋಟಾರ್ ಸೈಕಲ್ ನಲ್ಲಿ ತನ್ನ ಇಬ್ಬರು ಮಕ್ಕಳನ್ನು ಬೈಕ್ ನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಎಲೆರಾಂಪುರಗ್ರಾಮದ ಕಡೆಯಿಂದ ಕುಂಚಿಟಿಗರ ಮಹಾಸಂಸ್ಥಾನ ಮಠದ ಬಳಿ ಇರುವ ರಸ್ತೆಯಲ್ಲಿ ಎಸ್ ಗೊಲ್ಲಹಳ್ಳಿ ಕಡೆ ಸಾಯಂಕಾಲ ಸುಮಾರು 5-40 ಗಂಟೆಯಲ್ಲಿ ಹೋಗುತ್ತಿರುವಾಗ ಇದೇ ಸಮಯಕ್ಕೆ ಎಸ್.ಗೊಲ್ಲಹಳ್ಳಿ ಕಡೆಯಿಂದ ಎಲೆರಾಂಪುರ ಕಡೆ ಹೋಗಲು ಬಂದ KA-64-E-1862 ನೇ MOTAR CYCLE ನೇ ಬೈಕ್ ಸವಾರ. ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದವನೇ ಹನುಮಂತರಾಯಪ್ಪರವರು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಮುಖಾಮುಖಿ ಡಿಕ್ಕಿಹೊಡೆಸಿದ ಪರಿಣಾಮ, ಹನುಮಂತರಾಯಪ್ಪರವರು ತನ್ನ ಇಬ್ಬರು ಮಕ್ಕಳೊಂದಿಗೆ ಮೋಟಾರ್ ಸೈಕಲ್  ಸಮೇತ ರಸ್ತೆಯ ಎಡಬದಿಗೆ ಬಿದ್ದಾಗ, ತಲೆಗೆ ಇತರೆ ಕಡೆಗಳಿಗೆ ಬಲವಾಗಿ ಪೆಟ್ಟುಬಿದ್ದು ಉಪಚರಿಸುವಾಗ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳಿಗೆ ಕಾಲು ಮತ್ತು ಕೈಗಳಿಗೆ ಪೆಟ್ಟುಗಳು ಬಿದ್ದಿರುತ್ತವೆ. ಈ ಅಪಘಾತಕ್ಕೆ ಮೇಲ್ಕಂಡ KA-64-E-1862 ನೇ MOTAR CYCLE ನೇ ಬೈಕ್ ಸವಾರನ ಅತಿವೇಗ ಮತ್ತು ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿರುತ್ತೆ. ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶ.

ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ ಯು.ಡಿ.ಆರ್-03/2020 ಕಲಂ 174 CRPC

 

ದಿನಾಂಕ 07.10.2020 ರಂದು ಮದ್ಯಾಹ್ನ 2-15 ಗಂಟೆಗೆ  ಬೀರಸಂದ್ರಪಾಳ್ಯ ಗ್ರಾಮದ ಸಿದ್ರಾಮಣ್ಣ ಬಿನ್ ಲೇಟ್ ರಾಮಯ್ಯ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಗ್ರಾಮ ಪಂಚಾಯ್ತಿಯಲ್ಲಿ ಸದಸ್ಯರಾಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಗ್ರಾಮ ಪಂಚಾಯ್ತಿ ಕಛೇರಿಯಲ್ಲಿದ್ದಾಗ ನಮ್ಮ PDO ರವರು ಬೀರಸಂದ್ರ ಗ್ರಾಮದ ಬಳಿ ಪಕ್ಕದ ಹಾದು ಹೋಗಿರುವ ಹೇಮಾವತಿ ಚಾನಲ್ ನೀರಿನಲ್ಲಿ ಒಂದು ಅಪರಿಚಿತ ಗಂಡಸಿನ ಶವವು ಸುಮಾರು 70 ರಿಂಧ 75 ವರ್ಷ ವಯಸ್ಸಿನವನ್ನಾಗಿದ್ದು ಬೀರಸಂದ್ರ ಗ್ರಾಮದ ವೆಂಕಟರಾಮಯ್ಯ ತೋಟದ ಪಕ್ಕ ಹಾದು ಹೋಗಿರುವ ಚಾನಲ್ ನೀರಿನಲ್ಲಿ ಒಂದು ಕಬ್ಬಿಣದ ಪೈಪಿಗೆ ಸಿಲುಕಿಕೊಂಡಿರುತ್ತೆ ಎಂತ ಯಾರೋ ಪೋನ್ ಮಾಡಿ ಮಾಹಿತಿ ತಿಳಿಸಿರುತ್ತಾರೆ,ಸ್ಥಳಕ್ಕೆ ಹೋಗಿ ನೋಡಿ ಹೇಳಿ ಎಂತ ಹೇಳಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಮಧ್ಯಾಹ್ನ 01.30 ಗಟೆಗೆ ಬಂದು ನೋಡಿದಾಗ ಅಪರಿಚಿತ ಗಂಡಸಿನ ಶವವು ತೇಲುತ್ತಿರುವುದು ಕಂಡು ಬಂದಿರುತ್ತೆ.ಮುಂದಿನ ಕಾನೂನು ಕ್ರಮಕ್ಕಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


ಅಪರಾಧ ಘಟನೆಗಳು 07-10-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ-18/2020 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 06/10/2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ಶ್ರೀ ಜಿ.ಆರ್ ರಮೇಶ್ ಬಿನ್ ಜಿ.ಎಸ್ ರಾಜಶೇಖರಯ್ಯ, 49 ವರ್ಷ, ಲಿಂಗಾಯಿತರು, ಜಿರಾಯ್ತಿ, ಗೊರಗೊಂಡನಹಳ್ಳಿ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 06/10/2020 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ನನ್ನ ಮಗನಾದ ಅಭಿಷೇಕ್ ಜಿ.ಆರ್ (24 ವರ್ಷ) ರವರು  ನಮ್ಮ ತೋಟಕ್ಕೆ ಹೋಗಿ ಬರುತ್ತೇನೆಂದು ಹೇಳಿ, ಕೊಪ್ಪ ಗೇಟ್ ಬಳಿ ಇರುವ ಸರ್ವೆ ನಂ- 73/1 ರ ಜಮೀನಿನ ತೋಟಕ್ಕೆ ಹೋಗಿದ್ದನು. ಅಭಿಷೇಕ್ ಜಿ.ಆರ್ ರವರು ಇಂಜಿನಯರಿಂಗ್ ವಿದ್ಯಾರ್ಥಿಯಾಗಿದ್ದು, ಆತನಿಗೆ ಆಗಾಗ್ಗೆ ವಿಪರೀತ ತಲೆನೋವು ಬರುತ್ತಿದ್ದು ಗುಣಮುಖವಾಗಿರಲಿಲ್ಲ. ಈಗಿರುವಾಗ ನಾನು ಸುಮಾರು ಸಂಜೆ 5-30 ಗಂಟೆಯಲ್ಲಿ ಆತನನ್ನು ಹುಡುಕಿಕೊಂಡು ಹೋದಾಗ ತೋಟದಲ್ಲಿರುವ ಮನೆಯಲ್ಲಿನ ಮೇಲ್ಚಾವಣಿಯಲ್ಲಿನ ತೀರಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದನು. ನಂತರ ಜೀವ ಇರಬಹುದೆಂದು ರಾಜುರವರೊಂದಿಗೆ ಕುಡುಗೋಲಿನಿಂದ ಹಗ್ಗವನ್ನು ಕುಯ್ದು ಕೆಳಗೆ ಇಳಿಸಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ತೋರಿಸಲಾಗಿ ವೈದ್ಯರು ನೋಡಿ ಅಭಿಷೇಕ್ ಜಿ.ಆರ್ ರವರು ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಮಗ ಅಭಿಷೇಕ್ ಜಿ.ಆರ್ ರವರಿಗೆ ವಿಪರೀತ ತಲೆನೋವು ಬರುತ್ತಿದ್ದು ಅದನ್ನು ಸಹಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಮೃತನ ಶವವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತೆ. ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ-18/2020 ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಚಿನಾ ಹಳ್ಳಿ ಠಾಣಾ ಯು.ಡಿ.ಆರ್ ನಂ 23/2020 ಕಲಂ-174 ಸಿ.ಆರ್.ಪಿ.ಸಿ

ದಿನಾಂಕ:- 06.10.2020 ರಂದು  ಸಂಜೆ 04.00 ಗಂಟೆಯ ಸಮಯದಲ್ಲಿ ಪಿರ್ಯಾದುದಾರರಾದ ಮೋಹನ್ ಕುಮಾರ್ ಎಮ್. ಎಸ್. ಬಿನ್ ಲೇಟ್ ಶಂಕರಪ್ಪ, ಸುಮಾರು 52 ವರ್ಷ, ಲಿಂಗಾಯಿತರು, ಜಿರಾಯ್ತಿ, ಮುದ್ದೇನಹಳ್ಳಿ, ಕಸಬಾ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಅಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಚಿಕ್ಕಪ್ಪನ ಮಗನಾದ ಮುದ್ದೇನಹಳ್ಳಿ ಗ್ರಾಮದ ವಾಸಿಯಾದ ಎಲ್. ದಯಾನಂದ, ಸುಮಾರು 48 ವರ್ಷ ವಯಸ್ಸುಳ್ಳ ಇವರು ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯದಲ್ಲಿ ತೋಟಕ್ಕೆ ಹೋಗಿ ಬರುತ್ತೇನೆಂದು ದಯಾನಂದ ಇವರು ಇವರ ಪತ್ನಿಯಾದ ಲತಾ ಇವರಿಗೆ ಹೇಳಿ ತೋಟಕ್ಕೆ ಹೋಗಿರುತ್ತಾರೆ. ಸುಮಾರು 11.00 ಗಂಟೆಯ ಸಮಯದಲ್ಲಿ ಈ ಲತಾರವರು ತಿಂಡಿಗೆ ಬಂದಿಲ್ಲವೆಂದು ದೂರವಾಣಿ ಮೂಲಕ ಕರೆ ಮಾಡಿದಾಗ ದಯಾನಂದ್ ಇವರ ಫೋನ್ ಸ್ವಿಚ್ ಆಫ್ ಬಂದಿರುತ್ತದೆ. ದಯಾನಂದ್ ಇವರಿಗೆ ಈಗ್ಗೆ ಮೂರು ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಆಸ್ಪತ್ರೆಗೆ ತೋರಿಸಿರುತ್ತಾರೆ. ಆದ್ದರಿಂದ ಲತಾರವರು ದಯಾನಂದ್ ಇವರನ್ನು ಹುಡುಕಿಕೊಂಡು ದಾರಿಯಲ್ಲಿ ಸಿಕ್ಕವರಿಗೆ ಕೇಳುತ್ತಾ, ತೋಟದ ಬಳಿಗೆ ಬಂದಿರುತ್ತಾರೆ. ಅಷ್ಟರಲ್ಲಿ ಇವರ ಜೊತೆ ನಮ್ಮ ಗ್ರಾಮದ ವಾಸಿಗಳಾದ ನಾಗರಾಜು  ಬಿನ್ ಕರಿಯಪ್ಪ, ರುದ್ರೇಶ್ ಬಿನ್ ರೇಣುಕಯ್ಯ ಇವರುಗಳ ಜೊತೆ ತೋಟಕ್ಕೆ ಹೋಗಿ ಹುಡುಕಿದಾಗ ತೋಟದ ಹಳ್ಳದಲ್ಲಿ ದಯಾನಂದ್ ಇವರ ದೇಹವು ಪತ್ತೆಯಾಗಿದ್ದು, ತಕ್ಷಣ ಹತ್ತಿರ ಹೋಗಿ ನೋಡಲಾಗಿ ಮೃತಪಟ್ಟಿರುವುದು ತಿಳಿದಿದ್ದು, ತಕ್ಷಣ ನನಗೆ ಕರೆ ಮಾಡಿದರು. ನಾನು ತೋಟಕ್ಕೆ ಬಂದು ಲತಾ ಅವರಿಂದ ಈ  ಮೇಲ್ಕಂಡ ವಿಷಯವನ್ನು ತಿಳಿದುಕೊಂಡು ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ತಾವುಗಳು ದಯಮಾಡಿ ಸ್ಥಳ ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ 23/2020 ಕಲಂ-174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಗುಬ್ಬಿ ಪೊಲೀಸ್ ಠಾಣೆ ಮೊ ನಂ 210 /2020 ಕಲಂ 279, 337 IPC

ದಿನಾಂಕ;06/10/2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;05/10/2020 ರಂದು ರಾತ್ರಿ 10-00 ಗಂಟೆ ಸಮಯಕ್ಕೆ ತಿಮ್ಮಪ್ಪ ಎಂಬುವರು ಕರೆ ಮಾಡಿ  ಈ ದಿನ  ನಾನು ಮತ್ತು  ಪಿರ್ಯಾದಿ ಮಗನಾದ  ಪ್ರದೀಪ್ ಸಿ ಎಲ್ ಆದ ನಾವು ಚಿಕ್ಕಹುಲ್ಕೂರು ಗ್ರಾಮದಿಂದ  ಟಮೋಟವನ್ನು  ಕೋಲಾರ ಮಾಕರ್ೆಟಿಗೆ  ಪಿರ್ಯಾದಿ ಬಾಬ್ತು ಕೆ.ಎ-18 ಬಿ-6684 ನೇ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ  ತುಂಬಿಕೊಂಡು ರಸ್ತೆಯ ಎಡಬದಿಯಲ್ಲಿ  ಪಿರ್ಯಾದಿ ಮಗ  ವಾಹನವನ್ನು ಓಡಿಸಿಕೊಂಡು ನಿಟ್ಟೂರು ಬಳಿ ತ್ಯಾಗಟೂರು ಗೇಟ್ ಬಳಿ ರಾತ್ರಿ 9-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಗುಬ್ಬಿ ಕಡೆಯಿಂದ ಬಂದ ಯಾವುದೋ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಟ್ಯಾಂಕರ್ ವಾಹನವನ್ನು  ಚಾಲನೆ ಮಾಡಿಕೊಂಡು ಬಂದ ಚಾಲಕ  ಪಿರ್ಯಾದಿ  ಮಗ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆ.ಎ-18 ಬಿ-6684 ನೇ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿ ಮಗ ಪ್ರದೀಪ್ ಎಲ್ ರವರಿಗೆ ದೇಹದ ವಿವಿದ ಕಡೆ ರಕ್ತಗಾಯಗಳಾಗಿರುತ್ತೆ. ಹಾಗೂ ವಾಹನದ ಮುಂಬಾಗ ಪೂರಾ ಜಖಂಗೊಂಡಿರುತ್ತೆ. ನಂತರ ಅಪಘಾತವನ್ನುಂಟು ಮಾಡಿದ ಟ್ಯಾಂಕರ್ ಲಾರಿ ನಂ ಕೆ.ಎ-19 ಎಎ-9529 ಆಗಿರುತ್ತೆ,  ನಂತರ ಪಿರ್ಯಾದಿ ಮಗ ಪ್ರದೀಪ್ ರವರಿಗೆ ಗುಬ್ಬಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ  ತುಮಕೂರು ಜಿಲ್ಲಾ ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿರುವ ವಿಚಾರವನ್ನು ತಿಳಿಸಿದರು. ಪಿರ್ಯಾದಿ ತಕ್ಷಣ ತುಮಕೂರು ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ಗಾಯಾಳು ಪ್ರದೀಪ್ ರವರನ್ನು ನೋಡಿದ್ದು ಅಪಘಾತದಲ್ಲಿ ದೇಹದ ವಿವಿದ ಬಾಗಗಳಿಗೆ ಪೆಟ್ಟು ಬಿದ್ದಿರುವುದು ನಿಜವಾಗಿರುತ್ತೆ, ನಂತರ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ವಾಹನ ಸಂಪೂರ್ಣ ಜಖಂ ಆಗಿರುತ್ತೆ, ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆ.ಎ-19 ಎಎ-9529 ನೇ ಟ್ಯಾಂಕರ್ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ.-143/2020 ಕಲಂ 323, 504, 506, 354(ಬಿ), ರೆ/ವಿ 34 ಐಪಿಸಿ ಜೊತೆಗೆ 3(1)(r),3(1)(s), 3(1)(w)(i), 3(2)(5)  ಎಸ್ ಸಿ/ಎಸ್ ಟಿ ಆಕ್ಟ್-1989

ದಿನಾಂಕ-06/10/2020 ರಂದು ರಾತ್ರಿ 7-45 ಗಂಟೆಗೆ ಪಿರ್ಯಾದಿ ರತ್ನಮ್ಮ ಕೋಂ ಚಿಕ್ಕರಾಜು, 45 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ. ಬನ್ನೀಕುಪ್ಪೆ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:-27-09-2020 ರಂದು ರಾತ್ರಿ ಸುಮಾರು 9-00 ಗಂಟೆಯ ಸಮಯದಲ್ಲಿ ನಾನು ನನ್ನ ಮಗ ಚಿಕ್ಕಣ್ಣಸ್ವಾಮಿ ಊಟ ಮಾಡಿ ನನ್ನ ಮಗ ನಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದಾಗ ನಮ್ಮ ಗ್ರಾಮದ ಮಡಿವಾಳರ ಜನಾಂಗದ ಕುಮಾರ ಬಿನ್ ಮುನಿಸ್ವಾಮಯ್ಯ ಎಂಬುವವರು ಹಾಲಿ ಬೆಂಗಳೂರಿನಲ್ಲಿದ್ದು ಮೇಲ್ಕಂಡ ದಿನಾಂಕದಂದು ನಮ್ಮ ಗ್ರಾಮಕ್ಕೆ ಬಂದು ವಿಪರೀತ ಮದ್ಯಪಾನ ಮಾಡಿ ನಮ್ಮ ಮನೆಯ ಕಡೆಗೆ ಬಂದು ರಸ್ತೆಯ ಮೇಲೆ ನಿಂತಿದ್ದ ನನ್ನ ಮಗನ ಮೇಲೆ ವಿನಾ ಕಾರಣ ಗಲಾಟೆ ತೆಗೆದು ಓಡಿಸಿಕೊಂಡು ಬರುತ್ತಿದ್ದಾಗ ನೋಡಿದ ನಾನು ಕುಮಾರನನ್ನು ಏಕೆ ಈರೀತಿ ನನ್ನ ಮಗನನ್ನು ಓಡಿಸಿಕೊಂಡು ಬರುತ್ತಿದ್ದೀಯಾ ಎಂತ ಕೇಳಿದ್ದಕ್ಕೆ ನನಗೆ ಏಕಾಏಕಿ ಏ ಮಾದಿಗ ಮುಂಡೆ  ನೀನು ಯಾವಳೇ ಕೇಳೋಕೆ ಮಾದಿಗ ಮುಂಡೆ ಎಂದು ನನ್ನ ಜುಟ್ಟು ಹಿಡಿದು ಎಳೆದಾಡಿದ, ಆಗ ನನ್ನ ಮಗ ಬಿಡಿಸಲು ಬಂದರೂ ಮಗನನ್ನು ಹೊಡೆದು ಕೈಗಳಿಂದ ತಳ್ಳಿದ ನಂತರ  ನನ್ನ ತಲೆ ಕೂದಲು ಹಿಡಿದು ಎಳೆದು, ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಸೂಳೆ  ಮಕ್ಕಳ,  ಮಾದಿಗ ನನ್ನ ಮಕ್ಕಳ, ಎಂದು ಬಾಯಿಗೆ ಬಂದ ಹಾಗೆ ಬೈದು ಮತ್ತೆ ನನ್ನ ಬ್ಲೌಸ್ ಹಿಡಿದು ಎಳೆದಾಡಿ ಹರಿದು ಹಾಕಿ ಎದೆಯ ಭಾಗಕ್ಕೆ ಜಾಡಿಸಿ ಕಾಲಿನಿಂದ ಒದ್ದಾಗ ನಾನು ಕೆಳಗೆ ಬಿದ್ದಾಗ, ಎದೆಯ ಮೇಲೆ ನಿಂತು ನನ್ನನ್ನು ಸಿಕ್ಕ ಸಿಕ್ಕ ಕಡೆ ತುಳಿದು ಅವರ ಮನೆಗೆ ಹೊರಟು ಹೋದನು, ನನಗೆ ಓಡಾಡಲು ಆಗದೆ ಉಸಿರು ಕಟ್ಟಿಕೊಳ್ಳುತ್ತಿದ್ದು, ಎದೆಯ ಭಾಗದಲ್ಲಿ ತುಂಬಾ ನೋವಾಯಿತು, ಆಗ ನನ್ನ ಮಾವನವರಾದ ಚಿಕ್ಕವೆಂಕಟಯ್ಯ, ನನ್ನ ನಾದಿನಿ ನಾಗರತ್ನಮ್ಮ ರವರು ಹಾಗೂ ನನ್ನ ಮಗ ಚಿಕ್ಕಣ್ಣಸ್ವಾಮಿ ರವರು ಉಪಚರಿಸಿ ರಾತ್ರಿ ಅವೇಳೆಯಾದ್ದರಿಂದ ಮನೆಯಲ್ಲಿಯೇ ಇದ್ದು, ಮರು ದಿನ ದಿನಾಂಕ:-28-09-2020 ರಂದು ಬೆಳಿಗ್ಗೆ ನಾವು ಏಳುವ ಮೊದಲೇ ಬೆಳಿಗ್ಗೆ ಸುಮಾರು 06-00 ಗಂಟೆಯಲ್ಲಿ  ಆತನ ಅಕ್ಕಂದಿರುಗಳಾದ   ಮಂಜಮ್ಮ ಕೋಂ ಲೋಕೇಶ್ ಭಗನಿಗೆರೆ,   ಸಾವಿತ್ರಮ್ಮ ಕೋಂ ಮೂರ್ತಿ ಕುರುಡಿಹಳ್ಳಿ ಕುಣಿಗಲ್ ತಾಲ್ಲೂಕು ರವರು ನಮ್ಮ ಮನೆಯ ಬಳಿಗೆ ಬಂದು ನನ್ನ ತಮ್ಮನ ಮೇಲೆ ಗಲಾಟೆ ಮಾಡುತ್ತಿರೇನೋ ಎಂತ ಕೂಗಾಡುತ್ತಿದ್ದಾಗ, ನಾನು ಅವರ ಬಳಿಗೆ ಹೋಗಿ ಕೇಳಿದ್ದಕ್ಕೆ ಇಬ್ಬರು  ನನ್ನ ಬಟ್ಟೆಯನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಬಾಯಿಗೆ ಬಂದ ಹಾಗೆ ಬೈದು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿದರು, ಹಾಗೂ  ನನ್ನ ತಮ್ಮನ ಮೇಲೆ ನೀವುಗಳು ಕಂಪ್ಲೆಂಟ್ ಕೊಟ್ಟರೆ, ನಿಮ್ಮ ಜೀವವನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿ ಹೋದರು, ಆಗ ನನ್ನ ನಾದಿನಿ ನಾಗರತ್ನಮ್ಮ ಬಂದು ಸಮಾಧಾನ ಪಡಿಸಿ ಕಳುಹಿಸಿದರು, ಆಗ ನಾನು ರಾತ್ರಿಯಿಂದ ನೋವಿನಲ್ಲಿದ್ದುದರಿಂದ ನಂತರ ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ ಹೆಬ್ಬೂರು ಸರ್ಕಾರಿ ಆಸ್ಪತ್ರೆಗೆ ಬಂದು  ಚಿಕಿತ್ಸೆ ಪಡೆದು ಇದುವರೆವಿಗೂ ಮನೆಯಲ್ಲಿದ್ದು ವಿಶ್ರಾಂತಿ ಪಡೆದು ನಡೆದ ವಿಚಾರವನ್ನು ನಮ್ಮ ಗ್ರಾಮಸ್ಥರಿಗೆ ತಿಳಿಸಿ ಈದಿನ ತಡವಾಗಿ ಠಾಣೆಗೆ ಬಂದು ಕುಮಾರ, ಮಂಜಮ್ಮ, ಸಾವಿತ್ರಮ್ಮ ರವರುಗಳ ಮೇಲೆ ಕಾನೂನು ಕ್ರಮಕ್ಕಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ.-143/2020 ಕಲಂ 323, 504, 506, 354(ಬಿ), ರೆ/ವಿ 34 ಐಪಿಸಿ ಜೊತೆಗೆ 3(1)(r),3(1)(s), 3(1)(w)(i), 3(2)(5)  ಎಸ್ ಸಿ/ಎಸ್ ಟಿ ಆಕ್ಟ್-1989 ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ:63/2020 ಕಲಂ:323,354,504 ರೆ/ವಿ 34 ಐ.ಪಿ.ಸಿ

ದಿ:06/10/2020 ರಂದು ಸಂಜೆ 05-30 ಗಂಟೆಯಲ್ಲಿ ಫಿರ್ಯಾದಿ ಮಧುಗಿರಿ ತಾಲ್ಲೂಕ್ ದಂಡಿದದಿಬ್ಬ ಗ್ರಾಮದ ಶಾಂತಮ್ಮ ಕೋಂ ರಂಗಶಾಮಣ್ಣ ಎಂಬುವವರು ಠಾಣೆಗೆ ಹಾಜರಾಗಿ, ನಮ್ಮ ಮನೆ ಪಕ್ಕ ನನ್ನ ಗಂಡನ ಚಿಕ್ಕಮ್ಮಳಾದ ನಾಗಮ್ಮ ರವರ ಮನೆ ಇದ್ದು, ಈ ಮನೆ ಸೋರುತ್ತಿದ್ದು, ನನ್ನ ಗಂಡನಿಗೆ ನಾಗಮ್ಮಳು ಮನೆ ಸೋರುತ್ತಿದ್ದೆ, ಒಂದು ಟಾರ್ಪಲ್ ಅನ್ನು ಮನೆ ಮೇಲೆ ಹಾಕಿಕೊಂಡು ಎಂದು ದಿ:04/10/2020 ರಂದು ರಾತ್ರಿ ಸುಮಾರು 10-00 ಗಂಟೆಗೆ ಕೇಳಿಕೊಂಡರು, ಇದನ್ನೆ ಒಂದು ನೆಪಮಾಡಿಕೊಂಡು ಇದೇ ದಂಡಿನದಿಬ್ಬ ಗ್ರಾಮದ ವಾಸಿಗಳಾದ ಸಿದ್ದಪ್ಪ, ಈತನ ಹೆಂಡತಿ ವೆಂಕಟಲಕ್ಷ್ಮಮ್ಮ ಹಾಗೂ ಮಂಜಮ್ಮ ಈಕೆಯ ಗಂಡ ವೆಂಕಟೇಶ ಈ ನಾಲ್ಕು ಜನ ಸೇರಿಕೊಂಡು ನನ್ನನ್ನು, ನನ್ನ ಗಂಡನನ್ನು ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ಬೈದು, ಕೈಯಿಂದ ನಮ್ಮನ್ನು ಹೊಡೆದು, ನನ್ನ ಜುಟ್ಟು ಹಿಡಿದುಕೊಂಡು ಎಳೆದಾಡಿ, ನನ್ನ ನೈಟಿಯನ್ನು ಹರಿದು ಹಾಕಿ, ನನ್ನ ಕೈಯನ್ನು ಉಗುರಿನಿಂದ ಪರಚಿ, ನನ್ನ ಗಂಡನನ್ನು ಕಾಲಿನಿಂದ ಒದ್ದು, ತುಳಿದು ಈ ಗಲಾಟೆಯಲ್ಲಿ 30 ಗ್ರಾಂ ಚಿನ್ನದ ಸರ ಕಳೆದುಹೋಗಿರುತ್ತದೆ. ಊರಿನ ಗ್ರಾಮಸ್ಥರ ಮುಖಾಂತರ ನ್ಯಾಯ ತಿರ್ಮಾನವಾಗುವುದಿಲ್ಲ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೆನೆ. ಆದ್ದರಿಂದ ತಾವುಗಳು ಇವರನ್ನು ಠಾಣೆಗೆ ಕರೆಯಿಸಿ ಮುಂದೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 25 guests online
Content View Hits : 948985
Hackguard Security Enabled