lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
October 2020

Saturday, 24 October 2020

ಅಪರಾಧ ಘಟನೆಗಳು24-10-20

ಚಿನಾ ಹಳ್ಳಿ ಠಾಣಾ ಮೊ.ನಂ. 107/2020 ಕಲಂ 87 ಕೆ.ಪಿ.ಆಕ್ಟ್

ದಿನಾಂಕ:- 23-10-2020 ರಂದು ಸಂಜೆ 06.30 ಗಂಟೆಗೆ ಚಿ.ನಾ.ಹಳ್ಳಿ ಪೊಲೀಸ್ ಉಪನಿರೀಕ್ಷಕರಾದ ಹರೀಶ್ ಎಸ್. ರವರು ಠಾಣೆಗೆ ಹಾಜರಾಗಿ ನೀಡಿದ  ಮಾಲುಗಳನ್ನು, ಪಂಚನಾಮೆ, ಆರೋಪಿತರುಗಳು ಹಾಗೂ ವರದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ನಾನು ಈ ದಿನ ದಿನಾಂಕ: 23-10-2020 ರಂದು ಸಂಜೆ 4.00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಜೀವನ್ ರವರೊಂದಿಗೆ ಟೌನ್ ಗಸ್ತಿನಲ್ಲಿದ್ದಾಗ, ಚಿ.ನಾ.ಹಳ್ಳಿ ಕೆರೆಯ ಸಾರ್ವಜನಿಕ ಸ್ಥಳದಲ್ಲಿ ಸುಮಾರು 6-7 ಜನರು ಕುಳಿತು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಠಾಣಾ ಗುಪ್ತಮಾಹಿತಿ ಸಿಬ್ಬಂದಿಯವರಾದ ಸಿಪಿಸಿ-832 ಗಿರೀಶ್ ಟಿ.ಜಿ. ಇವರಿಂದ ಖಚಿತ ಮಾಹಿತಿ ಬಂದಿದ್ದರಿಂದ ಇಸ್ಪೀಟು ಜೂಜಾಟದ ಮೇಲೆ ದಾಳಿ ನೆಡೆಸಿ, ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲು ಕೋರಿ ಘನ ನ್ಯಾಯಾಲಯದ ಅನುಮತಿ ಕೋರಿದ್ದು, ನ್ಯಾಯಾಲಯ ಅನುಮತಿ ನೀಡಿರುತ್ತೆ. ಆದ್ದರಿಂದ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಲು ಸಿಬ್ಬಂದಿ ಹಾಗೂ ಸಿಬ್ಬಂದಿಯೊಂದಿಗೆ ಇಲಾಖಾ ಜೀಪ್ ನಲ್ಲಿ ಹೋಗಿ ಚಿ.ನಾ.ಹಳ್ಳಿ ಕೆರೆಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ, 9 ಜನರು ದುಂಡಾಕಾರವಾಗಿ ಕುಳಿತು, ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್, ಒಳಗೆ-ಹೊರಗೆ ಅಂತ ಕೂಗುತ್ತಾ ಜೂಜಾಟವಾಡುತ್ತಿದ್ದು, ನಾವು ಅವರುಗಳನ್ನು ಹಿಡಿಯಲು ಹೋದಾಗ ಜೂಜಾಟವಾಡುತ್ತಿದ್ದವರು ತಮ್ಮ ಕೈಯಲ್ಲಿದ್ದ ಇಸ್ಪೀಟ್ ಎಲೆಗಳು ಮತ್ತು ಹಣವನ್ನು ಅಖಾಡದಲ್ಲಿ ಎಸೆದು ಓಡಿ ಹೋಗಲು ಪ್ರಯತ್ನ ಪಟ್ಟಿದ್ದು, ಅದರಲ್ಲಿ 05 ಜನರನ್ನು ಹಿಡಿದುಕೊಂಡಿದ್ದು, 4 ಜನರು ಓಡಿಹೋಗಿರುತ್ತಾರೆ. ಹಿಡಿದುಕೊಂಡವರ ಹೆಸರು ವಿಳಾಸ ಕೇಳಲಾಗಿ, 1). ಮಂಜುನಾಥ್ ಬಿನ್ ರಾಮಯ್ಯ,46 ವರ್ಷ, ಕುರುಬರು, ಜಿರಾಯ್ತಿ ಕೆಲಸ, ಜೋಗಿಹಳ್ಳಿ, ಚಿ.ನಾ.ಹಳ್ಳಿ ಟೌನ್. 2). ಬಸವರಾಜು ಬಿನ್ ಶಿವಣ್ಣ, 38 ವರ್ಷ, ಕುರುಬರು ಗಾರೆ ಕೆಲಸ, ಜೋಗಿಹಳ್ಳಿ, ಚಿ.ನಾ.ಹಳ್ಳಿ ಟೌನ್. 3). ಸುರೇಶ್ ಬಿನ್ ಲಕ್ಕಣ್ಣ, 35 ವರ್ಷ, ಕುರುಬರು, ವ್ಯವಸಾಯ ಜೋಗಿಹಳ್ಳಿ , ಚಿ.ನಾ.ಹಳ್ಳಿ ಟೌನ್. 4). ಲೋಕೇಶ್ ಬಿನ್ ನಿಂಗಣ್ಣ, 40 ವರ್ಷ, ಕುರುಬರು, ಜಿರಾಯ್ತಿ ಕೆಲಸ, ಜೋಗಿಹಳ್ಳಿ ಚಿ.ನಾ.ಹಳ್ಳಿ ಟೌನ್. 5). ಸ್ವಾಮಿ ಬಿನ್ ಈಶ್ವರಯ್ಯ, 30 ವರ್ಷ, ಕುರುಬರು, ವ್ಯವಸಾಯ, ಜೋಗಿಹಳ್ಳಿ  ಚಿ.ನಾ.ಹಳ್ಳಿ ತಾಲ್ಲೊಕು ಎಂದು ತಿಳಿಸಿದರು. ನಂತರ ಓಡಿ ಹೋದವರ ಹೆಸರು ವಿಳಾಸ ತಿಳಿಯಲಾಗಿ 6). ರಮೇಶ್ ಬಿನ್ ದಾಸಣ್ಣ,32 ವರ್ಷ, ಶೆಟ್ಟಿ ಬಣಜಿಗ ಜನಾಂಗ, ಜಿರಾಯ್ತಿ ಕೆಲಸ, 7). ಶಂಕರ್ ಬಿನ್ ಪಾಂಡುರಂಗಯ್ಯ, 30 ವರ್ಷ, ಕುರುಬರು, ಜಿರಾಯ್ತಿ ಕೆಲಸ, 8).ಶ್ರೀಧರ ಬಿನ್ ರಾಮಯ್ಯ, 35 ವರ್ಷ, ಕುರುಬರು, ಜಿರಾಯ್ತಿ ಕೆಲಸ, ಮತ್ತು 9). ನಂಜುಂಡ ಬಿನ್ ಲಕ್ಕಣ್ಣ, 35 ವರ್ಷ, ಕುರುಬರು, ಆಡಿಕೆ ಚೇಣಿ ವ್ಯಾಪಾರ, ಎಲ್ಲರೂ ಜೋಗಿಹಳ್ಳಿ, ಎಂದು ತಿಳಿಸಿದರು. ನಂತರ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟು ಎಲೆ ಹಾಗೂ ಹಣವನ್ನು ಜೋಡಿಸಿ ಏಣಿಸಲಾಗಿ, 1). 52 ಇಸ್ಪೀಟು ಎಲೆಗಳು 2). ರೂ 2,350/- ನಗದು ಹಣ 3). ಆಡಲು ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಗೂ ಸಿಕ್ಕ 5 ಜನ  ಆಸಾಮಿಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಬಂದಿರುತ್ತೆ.

ಆರೋಪಿತರು, ಮಾಲುಗಳು ಹಾಗೂ ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ನಂ. 107/2020 ಕಲಂ  87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ

 

ಕಳ್ಳಂಬೆಳ್ಳ ಪೊಲೀಸ್‌ ಠಾಣೆ 129/2020 392 ರೆ/ವಿ 34 ಐಪಿಸಿ

ದಿನಾಂಕ: 23-10-2020 ರಂದು ಬೆಳಿಗ್ಗೆ10-45 ಗಂಟೆಗೆ ಪಿರ್ಯಾದಿ ಪಾಂಡುರಂಗಯ್ಯ ಕೆ.ಆರ್ ಬಿನ್ ಲೇಟ್ ರಾಮಣ್ಣ,  48 ವರ್ಷ, ಕುಂಚಿಟಿಗ ಜನಾಂಗ, ಶಿಕ್ಷಕ ವೃತ್ತಿ, ಸ್ವಂತ ಊರು: ಕಳ್ಳಂಬೆಳ್ಳ ಗ್ರಾಮ, ಶಿರಾ ತಾಲ್ಲೂಕ್, ವಾಸ: ಕೇಶವ ನಗರ, ಶಿರಾ ಟೌನ್ ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ: 31-08-2020 ರಂದು ರಾತ್ರಿ ಸುಮಾರು 10-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮಗಳು ಶ್ವೇತಾ ಇಬ್ಬರು ನನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಕಳ್ಳಂಬೆಳ್ಳದಿಂದ ಸಿರಾಕ್ಕೆ ಹೋಗಲು ಮೈಸೂರು ರಸ್ತೆ ಮೂಲಕ ಕಡವಿಗೆರೆಗೆ ಬಂದು, ಕಡವಿಗೆರೆಯಿಂದ ಸರ್ವಿಸ್ ರಸ್ತೆಯ ಮೂಲಕ ಎನ್.ಹೆಚ್.48 ರಸ್ತೆಗೆ ಹೋಗುತ್ತಿದ್ದು, ರಾತ್ರಿ 10-40 ಗಂಟೆಗೆ ಕುಮಾರ್ ಡಾಬಾ ಮುಂಭಾಗ ಹಂಪ್ಸ್ ಹತ್ತಿರ ಹೋಗುತ್ತಿರುವಾಗ, ನಮ್ಮ ಹಿಂದಿನಿಂದ ಮೂರು ಜನ ಒಂದು ಮೋಟಾರ್ ಸೈಕಲ್ ನಲ್ಲಿ ಬಂದು ನನ್ನ ಬೈಕಿಗೆ ಅಡ್ಡಲಾಗಿ ಅವರ ಬೈಕ್ ತಂದು ನಿಲ್ಲಿಸಿ ನಮ್ಮನ್ನು ಹೆದರಿಸಿ, ನನ್ನ ಜೇಬಿನಲ್ಲಿದ್ದ VIVO-Y531 ಕಂಪನಿಯ ಒಂದು ಮೊಬೈಲ್ ಮತ್ತು ಸುಮಾರು 1,500/- ರೂ. ನಗದು ಹಣ ಮತ್ತು ನನ್ನ ಮಗಳ ಕೈಯಲ್ಲಿದ್ದ VIVO-Y91 ಕಂಪನಿಯ ಮತ್ತೊಂದು ಪೋನ್ ಕಿತ್ತುಕೊಂಡು ಶಿರಾ ಕಡೆಗೆ ಎನ್.ಹೆಚ್.48 ರಸ್ತೆಯ ಮೂಲಕ ಬೈಕನ್ನು ಜೋರಾಗಿ ಓಡಿಸಿಕೊಂಡು ಹೋದರು.  ಕತ್ತಲೆ ಇದ್ದುದ್ದರಿಂದ ಬೈಕ್ ನಂಬರ್ ಸರಿಯಾಗಿ ಕಾಣಲಿಲ್ಲ, ಅಪರಿಚಿತ ವ್ಯಕ್ತಿಗಳು ಸುಮಾರು 20 ರಿಂದ 25 ವರ್ಷದ ಹುಡುಗರಾಗಿದ್ದು, ಪ್ಯಾಂಟ್ ಶರ್ಟ್ ಧರಿಸಿದ್ದರು.  ಈ ಬಗ್ಗೆ ನಾನು ಪೊಲೀಸ್ ಠಾಣೆಗೆ ದೂರು ಕೊಟ್ಟಿರಲಿಲ್ಲ.  ನಿನ್ನೆ ದಿನಾಂಕ: 22-10-2020 ರಂದು ಶಿರಾ ಪೊಲೀಸರು ಮೊಬೈಲ್ ಕಳ್ಳರನ್ನು ಹಿಡಿದಿರುವ ವಿಚಾರ ತಿಳಿದು ರಾತ್ರಿ 07-30 ಗಂಟೆಗೆ ಸಿರಾ ಪೊಲೀಸ್ ಠಾಣೆಗೆ ಹೋಗಿ ನೋಡಲಾಗಿ ಠಾಣೆಯಲ್ಲಿ ಮೂರು ಜನ ಆಸಾಮಿಗಳು ಇದ್ದರು.  ಸದರಿ ಮೂರು ಜನ ಆಸಾಮಿಗಳು ದಿನಾಂಕ: 31-08-2020 ರಂದು ರಾತ್ರಿ ನಮ್ಮ ಬಳಿ ಮೊಬೈಲ್ ಗಳನ್ನು ಕಿತ್ತುಕೊಂಡು ಹೋಗಿದ್ದ ವ್ಯಕ್ತಿಗಳೇ ಆಗಿದ್ದರು.  ಇವರುಗಳು ಹೆಸರು ವಿಳಾಸ ತಿಳಿಯಲಾಗಿ 1) ಮನೋರಂಜನ್ ಹೆಚ್.ಆರ್ @ ಶೆಟ್ಟಿ ಬಿನ್ ಲೇಟ್ ರಾಘವೇಂದರ ಶೆಟ್ಟಿ, 20 ವರ್ಷ, ವೈಶ್ಯ ಜನಾಂಗ, ಹೆಂದೊರೆ, ಗೌಡಗೆರೆ ಹೋಬಳಿ, ಸಿರಾ ತಾಲ್ಲೋಕ್, 2) ರಾಜು ಆರ್ ಬಿನ್ ಕುಮಾರ, 20 ವರ್ಷ, ವಕ್ಕಲಿಗ ಜನಾಂಗ, ಕುದುರೆ ಸವಾರಿ ಕೆಲಸ, ಗಂಜಾಮ್, ಶ್ರೀರಂಗಪಟ್ಟಣ ತಾಲ್ಲೋಕ್, ಮಂಡ್ಯ ಜಿಲ್ಲೆ, 3) ಜಗದೀಶ @ ಜಗ್ಗ ಬಿನ್ ರಂಗನಾಥಪ್ಪ, 20 ವರ್ಷ, ಕುಂಚಿಟಿಗರು, ಕೂಲಿ ಕೆಲಸ, ಜ್ಯೋತಿ ನಗರ, ಶಿರಾ ಟೌನ್ ಎಂತ ತಿಳಿದುಬಂತು. ಈದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದೇನೆ, ಮೇಲ್ಕಂಡ ಎರಡೂ ಮೊಬೈಲ್ ಗಳ ಬೆಲೆ ಸುಮಾರು 17,000/- ರೂ.ಗಳು ಆಗಿರುತ್ತೆ. ಆದ್ದರಿಂದ ಸದರಿಯವರ ಮೇಲೆ ಮುಂದಿನ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ಈದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿರುತ್ತೇನೆಂದು ನೀಡಿದ ಟೈಪ್ ಮಾಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 Thursday, 22 October 2020

ಅಪರಾಧ ಘಟನೆಗಳು 22-10-20

ಚಿನಾ ಹಳ್ಳಿ ಠಾಣಾ ಮೊ.ನಂ. 105/2020 ಕಲಂ : 323, 325, 504, 506, ಐ.ಪಿ.ಸಿ.

ದಿನಾಂಕ: 21-10-2020 ರಂದು ಸಂಜೆ 5.30 ರಿಂದ 6.30 ಗಂಟೆಯಲ್ಲಿ ಪಿರ್ಯಾದಿಯವರಾದ ನಬಿ ಬಿನ್ ಜಮೀಲ್ ಸಾಬ್, 34 ವರ್ಷ, ಮುಸ್ಲಿಂ, ಜನಾಂಗ, ಲಾರಿ ಡ್ರೈವರ್ ಕೆಲಸ, ಹೊನ್ನೆಬಾಗಿ, ಕಸಬಾ ಹೋಬಳಿ, ಚಿನಾ ಹಳ್ಳಿ ತಾಲ್ಲೋಕ್ ರವರು ಸಾಯಿಗಂಗಾ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು. ದಿನಾಂಕ; 20-10-2020 ರಂದು ಮಧ್ಯಾಹ್ನ 01.30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಗ್ರಾಮದ ಬಸವರಾಜು ಬಿನ್ ಲೇಟ್ ಗುರುಸಿದ್ದಯ್ಯ, ಕುರುಬರು ಇಬ್ಬರೂ ನನ್ನ ಬೈಕಿನಲ್ಲಿ ಚಿ.ನಾ.ಹಳ್ಳಿಯಿಂದ ನಮ್ಮ ಊರಿಗೆ ಹೋಗುತ್ತಿದ್ದೆವು. ಬಸವರಾಜು ಬೈಕ್ ಚಲಾಯಿಸುತ್ತಿದ್ದು, ನಾನು ಹಿಂಭಾಗ ಕುಳಿತ್ತಿದ್ದೆ. ನಾವು ಹೊನ್ನೇಬಾಗಿ ರಸ್ತೆಯ ಸಾಲು ಹುಣಸೇಮರದ ಹತ್ತಿರ ನಮ್ಮ ಗ್ರಾಮದ ರಾಕೇಶ್ ಬಿನ್ ರಾಜಣ್ಣ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದು ಬೈಕಿನಲ್ಲಿ ಹೋಗುತ್ತಿದ್ದ ನಮ್ಮನ್ನು ನೋಡಿ ನಿನ್ನ ಅಮ್ಮನಕ್ಯಾಯ, ನಬಿ ದೊಳ್ಳ ನನ್ನ ಮಗನೇ, ದುಡ್ಡು ಕೇಳಿದರೆ ಕೊಡಲ್ಲಾ ಅಂತಿಯಾ. ಎಂದಾಗ ಬಸವರಾಜು ಬೈಕ್ ನಿಲ್ಲಿಸಿದರು. ನಾನು ನನಗೆ ಸರಿಯಾಗಿ ಕೆಲಸ ಇಲ್ಲಾ ನಿನಗೆ ಸಾಲ ಕೊಡಲು ನನ್ನ ಹತ್ತಿರ ಹಣ ಇಲ್ಲ. ಎಂದು ಹೇಳುತ್ತಿದ್ದಾಗ ರಾಕೇಶ್ ಬಿನ್ ರಾಜಣ್ಣ,  24 ವರ್ಷ, ಪರಿಶಿಷ್ಠ ಜಾತಿ (ಆದಿ ಕರ್ನಾಟಕ)  ಜನಾಂಗ, ಇವನು ನನ್ನ ಹತ್ತಿರ ಬಂದು ನನ್ನನ್ನು ಕೈಗಳಿಂದ ನೂಕಿ ಕೆಳಕ್ಕೆ ರಸ್ತೆಯ ಮೇಲೆ ಬೀಳಿಸಿ  ಹಲ್ಲೆ ಮಾಡಲು ಬಂದಾಗ ಬಸವರಾಜು ಆತನನ್ನು ತಡೆಯಲು ಬಂದಾಗ  ಅವರ ಮಾತನ್ನು ಕೇಳದೆ ಕೆಳಗೆ ಬಿದ್ದ ನನ್ನ ಬಲಗಾಲಿನ ಮೇಲೆ ಹತ್ತಿ ಕಾಲುಗಳಿಂದ ತುಳಿದನು. ಆಗ ಬಸವರಾಜು ಗಲಾಟೆ ಬಿಡಿಸಿದರು. ರಾಕೇಶ್ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋದನು. ರಾಕೇಶನು ನನಗೆ ಹಲ್ಲೆ ಮಾಡಿದಾಗ ನಾನು ತೊಟ್ಟಿದ್ದ ಟೀ ಶರ್ಟ್ ಹರಿದು ಹೋಗಿರುತ್ತೆ. ನಂತರ ನನ್ನನ್ನು ಬಸವರಾಜು ಯಾವುದೋ ಆಟೋದಲ್ಲಿ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ನಂತರ ಬಸವರಾಜು ನನ್ನ ಹೆಂಡತಿಗೆ ವಿಚಾರ ತಿಳಿಸಿದಾಗ ನನ್ನ ಹೆಂಡತಿ ಜಬೀರಾ ಬಾನು ಮತ್ತು ಮಾವ ಮುಕ್ತಿಯಾರ್ ಸಾಬ್ ಬಿನ್ ಲೇಟ್ ಜಾಫರ್ ಸಾಬ್ ಆಸ್ಪತ್ರೆಯ ಬಳಿ ಬಂದರು. ನನ್ನನ್ನು ಪರೀಕ್ಷಿಸಿದ ವೈದ್ಯರು  ನನ್ನ ಬಲಗಾಲಿನ ಮೂಳೆ ಮುರಿದಿದ್ದು. ಹೆಚ್ಚಿನ ಚಿಕಿತ್ಸೆಗೆ ತಿಳಿಸಿದ್ದರಿಂದ ನಮ್ಮ ಮನೆಯವರು ನನ್ನನ್ನು ಸಾಯಿಗಂಗಾ ಆಸ್ಪತ್ರೆಗೆ ದಾಖಲಿಸಿದರು. ನನ್ನ ಕಾಲಿನ ಎಕ್ಸ್ ರೇ ನೋಡಿದ ವೈದ್ಯರು ಬಲಗಾಲು ಮುರಿದಿರುವುದಾಗಿ ತಿಳಿಸಿದರು. ಆಗ ನಾನು ಈ ವಿಚಾರವನ್ನು ಪೊಲೀಸ್ ಠಾಣೆಗೆ ತಿಳಿಸಿ ಎಂದಾಗ ವೈದ್ಯರು ಪೊಲೀಸ್ ಠಾಣೆಗೆ  ವೈದ್ಯರು ಪೋನ್ ಮಾಡಿ ತಿಳಿಸಿದ್ದು. ಪೊಲೀಸರು ಆಸ್ಪತ್ರೆಗೆ ಬಂದು ನನ್ನನ್ನು ವಿಚಾರ ಮಾಡಿ  ಹೇಳಿಕೆ  ಪಡೆದಿದ್ದು ನನ್ನ ಮೇಲೆ ಹಲ್ಲೆ ಮಾಡಿದ ರಾಕೇಶನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನನ್ನ ಹೇಳಿಕೆ ನೀಡಿರುತ್ತೇನೆ. ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ. 105/2020 ಕಲಂ : 323, 325, 504, 506, ಐ.ಪಿ.ಸಿ.ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 97/2020 ಕಲಂ; 317 ಐ.ಪಿ.ಸಿ

ದಿನಾಂಕ: 21/10/2020 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿ ವಾಸಂತಿ ಉಪ್ಪಾರ್ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ರವರು ಅವರ ಕಛೇರಿಯ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕು|| ರಶ್ಮಿ ಆರ್ ರವರ ಮೂಲಕ ಕಳುಹಿಸಿಕೊಟ್ಟಿರುವ ದೂರಿನ ಅಂಶವೇನೆಂದರೆ, ತಿಪಟೂರು ತಾಲ್ಲೂಕ್ ಚಟ್ಟನಹಳ್ಳಿ ಗ್ರಾಮದ ಶ್ರೀಮತಿ ಲತಾ ಕೋಂ ಲಿಂಗರಾಜು ದಂಪತಿಗಳು ಯಾರದೋ ನವಜಾತ ಹೆಣ್ಣು ಮಗುವನ್ನು ಅನಧಿಕೃತವಾಗಿ ಸಾಕುತ್ತಿದ್ದಾರೆಂದು ತಿಪಟೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ದೂರು ಬಂದ ಮೇರೆಗೆ ಸದರಿ ಮಕ್ಕಳ ಸಹಾಯವಾಣಿ ಸಿಬ್ಬಂದಿಯಾದ ಮೋಹನ್, ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಹೇಮಾವತಿ, ಶಿಶು ಅಭಿವೃದ್ದಿ ಯೋಜನೆಯ ಮೇಲ್ವಿಚಾರಕಿಯಾದ ಪದ್ಮಾ, ತಡಸೂರು ಗ್ರಾಮ ಪಂಚಾಯ್ತಿ ಸಿಬ್ಬಂದಿಯಾದ ವಸಂತಕುಮಾರ್ ಹಾಗೂ ಆಶಾ ಕಾರ್ಯಕರ್ತೆಯಾದ ಶೋಭಾ ರವರುಗಳು ಸದರಿ ದಂಪತಿಗಳ ಮನೆಗೆ ದಿನಾಂಕ:19/10/2020 ರಂದು ಭೇಟಿ ನೀಡಿ ಪರಿಶೀಲಿಸಿದ್ದು, ಸದರಿ ದಂಪತಿಗಳು ನಮಗೆ ಮದುವೆಯಾಗಿ 13 ವರ್ಷಗಳಾಗಿದ್ದು, ಮಕ್ಕಳಾಗಿರಲಿಲ್ಲವೆಂದು ಹಾಗೂ ದಿನಾಂಕ:03/10/2020 ರಂದು ಹುಳಿಯಾರಿನ ನಂದಿಹಳ್ಳಿ ಗ್ರಾಮದ ಬಳಿ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ನಮಗೆ ನವಜಾತ ಹೆಣ್ಣು ಮಗು ಸಿಕ್ಕಿದ್ದು ತೆಗೆದುಕೊಂಡು ಬಂದು ಆರೈಕೆ ಮಾಡುತ್ತಿರುತ್ತೇವೆ. ಎಂದು ತಿಳಿಸಿರುತ್ತಾರೆ. ನಂತರ ಸಿಬ್ಬಂದಿಗಳು ನೀಡಿದ ತಿಳುವಳಿಕೆಯ ಮೇರೆಗೆ ಅವರು ಮಗುವನ್ನು ಸರ್ಕಾರದ ವಶಕ್ಕೆ ಹಸ್ತಾಂತರಿಸಿದ್ದು, ಮಗುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತದೆ.

ಆದರೆ ದಿನಾಂಕ:20/10/2020 ರಂದು ಮಾನಸ ಮತ್ತು ವೆಂಕಿ ದಂಪತಿಗಳು ಪತ್ರ ಮತ್ತು ದಾಖಲಾತಿಗಳನ್ನು ನೀಡಿ ತಮಗೆ ಹೊನ್ನೇನಹಳ್ಳಿ ಗ್ರಾಮದ ಲತಾ ಕೋಂ ಲಿಂಗರಾಜು ಇವರು ಸಂಬಂದಿಕರಾಗಿದ್ದು, ಮಾನಸ ರವರಿಗೆ ದಿನಾಂಕ:03/10/2020 ರಂದು ಬೆಂಗಳೂರು ಪೂರ್ವ ತಾಲ್ಲೂಕ್ ವರ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಜನಿಸಿದ್ದು, ಮಗುವಿನ ಆರೈಕೆಗಾಗಿ ಮಗುವನ್ನು ಲತಾ ಕೋಂ ಲಿಂಗರಾಜುರವರ ಹತ್ತಿರ ಬಿಟ್ಟಿದ್ದು, ಮಾನಸರವರಿಗೆ ಆನಾರೋಗ್ಯದ ಕಾರಣ ಅವರು ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ತೆರಳಿದ್ದಾಗ ತಮಗೆ ಆಗದವರು ದೂರು ನೀಡಿರುತ್ತಾರೆ. ಮಗುವನ್ನು ಹಿಂದಿರುಗಿಸಲು ಕೋರಿರುತ್ತಾರೆ. ಮಗುವಿನ ಜನನಕ್ಕೆ ಸಂಬಂದಿಸಿದಂತೆ ಆಸ್ಪತ್ರೆಯ ಡಿಶ್ಚಾರ್ಜ್ ಸ್ಲಿಪ್ ಅನ್ನು ದಾಖಲೆಗಾಗಿ ನೀಡಿರುತ್ತಾರೆ. ಅದನ್ನು ಪರಿಶೀಲಿಸಲಾಗಿ ಸದರಿ ಮಗುವನ್ನು ತಾಯಿಯೊಂದಿಗೆ ದಿನಾಂಕ:05/10/2020 ರಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿರುವುದು ಕಂಡುಬಂದಿರುತ್ತದೆ. ಈ ಎಲ್ಲಾ ಅಂಶಗಳಿಂದ ಸದರಿ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ಲತಾ ಕೋಂ ಲಿಂಗರಾಜು ದಂಪತಿಗಳು ಸಾಕುತ್ತಿದ್ದು, ಹಾಗೂ ಮಾನಸ ಮತ್ತು ವೆಂಕಿ ದಂಪತಿಗಳು ತಮ್ಮ ಹೇಳಿಕೆಯಲ್ಲಿ ಮಗುವನ್ನು ಹೊನ್ನೇನಹಳ್ಳಿ ಲತಾ ಕೋಂ ಲಿಂಗರಾಜು ದಂಪತಿಗಳ ಮನೆಯಲ್ಲಿ ಇದ್ದುಕೊಂಡು ಆರೈಕೆ ಮಾಡುತ್ತಿದ್ದೆವು ಎಂದು ತಿಳಿಸಿದ್ದು, ಸತ್ಯಕ್ಕೆ ದೂರವಾದ ವಿಷಯವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ಎರಡು ದಂಪತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಮೇರೆಗೆ ಠಾಣಾ ಮೊ.ನಂ-97/2020 ಕಲಂ: 317 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 98/2020 ಕಲಂ; 317 ಐ.ಪಿ.ಸಿ

ದಿನಾಂಕ: 21/10/2020 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿ ವಾಸಂತಿ ಉಪ್ಪಾರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ರವರು ಅವರ ಕಛೇರಿಯ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕು|| ರಶ್ಮಿ ಆರ್ ರವರ ಮೂಲಕ ಕಳುಹಿಸಿಕೊಟ್ಟಿರುವ ದೂರಿನ ಅಂಶವೇನೆಂದರೆ, ತಿಪಟೂರು ತಾಲ್ಲೂಕಿನ ಮಡೇನೂರು ಭೋವಿ ಕಾಲೋನಿಯ ಶ್ರೀಮತಿ ಸುಶೀಲಮ್ಮ ಹಾಗೂ ಶಿವಕುಮಾರ್ ಎಂಬ ದಂಪತಿಗಳು ಕಾನೂನು ಬಾಹಿರವಾಗಿ ಹೆಣ್ಣು ಮಗುವೊಂದನ್ನು ಸಾಕಿಕೊಂಡಿದ್ದಾರೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ,ತಿಪಟೂರು ಇವರಿಂದ ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ ದಿನಾಂಕ-20-10-2020 ರಂದು ಸದರಿ ದಂಪತಿಗಳ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತುಮಕೂರು,ಜಿಲ್ಲೆ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕರು ಹಾಗೂ  ಶಿಶು ಅಭಿವೃದ್ಧಿ ಯೋಜನಾ ಕಛೇರಿ ,ತಿಪಟೂರು  ಇಲ್ಲಿನ ಮೇಲ್ವಿಚಾರಿಕಿಯಾದ ಶ್ರೀಮತಿ ಪದ್ಮರವರು ಜಂಟಿ ಭೇಟಿ ಮಾಡಿ ಪರಿಶೀಲಿಸಲಾಗಿ ಶ್ರೀ ಶಿವಕುಮಾರ್ ಹಾಗೂ ಸುಶೀಲಮ್ಮ ದಂಪತಿಗಳು ತಮಗೆ ಮದುವೆಯಾಗಿ 6 ವರ್ಷವಾಗಿದ್ದು ತಮಗೆ ಮಕ್ಕಳಾಗಿಲ್ಲದ ಕಾರಣ ಸುಶೀಲಮ್ಮರವರ ಅಣ್ಣ ವಿಶ್ವನಾಥ್ ರವರ ಹೆಂಡತಿ ಪವಿತ್ರ ರವರ ಸಹಾಯದಿಂದ ಪವಿತ್ರರವರ ಸ್ನೇಹಿತರೊಬ್ಬರ ಮಗುವನ್ನು ಹಾಸನದಿಂದ ತಂದು ಸಾಕುತ್ತಿರುವುದಾಗಿಯು ಆದರೆ ತಮಗೆ ಮಗುವಿನ ತಂದೆ ತಾಯಿ ಯಾರೆಂದು ತಿಳಿದಿರುವುದಿಲ್ಲ ಮತ್ತು ತಾವು ಅವರನ್ನು ಬೇಟಿಯೂ ಆಗಿಲ್ಲ. ನೋಡಿಯೂ ಇಲ್ಲ ಎಂದು ತಿಳಿಸಿರುತ್ತಾರೆ.

ಸದರಿ ದಂಪತಿಗಳಿಗೆ ಕಾನೂನು ಬಾಹಿರವಾಗಿ ಮಕ್ಕಳನ್ನು ಸಾಕುವುದು ಅಪರಾದವೆಂದು ತಿಳುವಳಿಕೆ ನೀಡಲಾಗಿ ಅವರು ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ   ವಶಕ್ಕೆ ನೀಡಿದ್ದು  ಪ್ರಸ್ತುತ ಮಗುವು ತುಮಕೂರಿನ ಜಿಲ್ಲಾ ಆಸ್ವತ್ರೆಯಲ್ಲಿ  ದಾಖಲಿಸಲಾಗಿದೆ. ಮಗುವನ್ನು  ಅಕ್ರಮವಾಗಿ ಸಾಗಾಟ ಮಾಡಿ ಸುಶೀಲಮ್ಮ  ಹಾಗೂ ಶಿವಕುಮಾರ್ ದಂಪತಿಗಳಿಗೆ ಹಸ್ತಾಂತರಿಸಿದ ಪವಿತ್ರ ಎಂಬುವವರ ವಿರುದ್ದ ಹಾಗೂ  ತಮ್ಮ  ಮಗುವನ್ನು ಕಾನೂನು ಬಾಹಿರವಾಗಿ ಪವಿತ್ರರವರಿಗೆ ನೀಡಿದ ಮಗುವಿನ ಪೋಷಕರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತಾ, ದಿನಾಂಕ 20-10-2020ರ ಸ್ಥಳ ಪರಿಶೀಲನೆ ವರದಿಯನ್ನು  ಈ ಪತ್ರಕ್ಕೆ ಲಗತ್ತಿಸಿ ಸಲ್ಲಿಸಿರುತ್ತೆನೆಂತಾ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ -98/2020 ಕಲಂ: 317 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.Wednesday, 21 October 2020

ಪತ್ರಿಕಾ ಪ್ರಕಟಣೆ ದಿ:21/10/20

 

ಪತ್ರಿಕಾ ಪ್ರಕಟಣೆ

ದಿನಾಂಕ 21/10/2020

ಸಂಚು ರೂಪಿಸಿ ಕೊಲೆ ಮಾಡಿದ್ದ ಆರೋಪಿಗಳ ಬಂಧನ

* * * * *

ದಿನಾಂಕ :01-10-2020ರಂದು ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿ ಗೌಡತಿಮ್ಮನಹಳ್ಳಿ ಹೊರವಲಯದಲ್ಲಿ ಆಂದ್ರಪ್ರದೇಶದ ಕಂಬದೂರು ಮಂಡಲ್ನ ಜಗರೆಡ್ಡಿಪಲ್ಲಿ ವಾಸಿ ರವಿ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಬಗ್ಗೆ ಯು.ಡಿ.ಆರ್. ನಂ:06/2020, ಕಲಂ:174(ಸಿ) ಸಿ.ಆರ್.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿರುತ್ತೆ. ನಂತರ ಸದರಿ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ನಡೆಸಿದ ಶವಪರೀಕ್ಷೆ ಆಧರಿಸಿ ಯು.ಡಿ.ಆರ್. ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿ ಮೊನಂ 98/2020, ಕಲಂ:302,201 ಐ.ಪಿ.ಸಿ ರೀತ್ಯಾ ತನಿಖೆ ಕೈಗೊಂಡಿರುತ್ತೆ.

 

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಒಂದು ತಂಡವನ್ನು ರಚಿಸಿದ್ದು, ಸದರಿ ತಂಡವು ತನಿಖೆ ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿ ನವೀನ್ ಮೃತ ರವಿ ಹೆಂಡತಿಯ ಮೇಲೆ ಮೋಹಪಟ್ಟು, ಆಕೆಯ ಜೊತೆ ಸಂಬಂಧ ಹೊಂದಲು ರವಿ ಜೀವಂತವಾಗಿದ್ದರೆ ಅಡ್ಡಿಯಾಗುತ್ತಾನೆಂದು, ರವಿಯನ್ನು ಕೊಲೆಮಾಡುವ ಬಗ್ಗೆ ಉಳಿದ ಆರೋಪಿಗಳ ಜೊತೆ  ಸಂಚು ರೂಪಿಸಿ, ರವಿ ರವರಿಗೆ ಮದ್ಯಪಾನ ಮಾಡಿಸಿ, ಕುಡಿದ ಅಮಲಿನಲ್ಲಿದ್ದ ರವಿಯನ್ನು ಟವಲ್ನಿಂದ ಕುತ್ತಿಗೆಗೆ ಬಿಗಿದು, ಉಸಿರುಗಟ್ಟಿಸಿ ಕೊಲೆಮಾಡಿರುವುದಾಗಿ ತಿಳಿದು ಬಂದಿರುತ್ತೆ.

 

ಆರೊಪಿಗಳ ವಿವರ

1) ನವೀನ ಬಿನ್ ಕೆಂಚಪ್ಪ, 22 ವರ್ಷ, ಮೀನು ವ್ಯಾಪಾರ, ಕಂಬದೂರು ಮಂಡಲ್, ಕಲ್ಯಾಣದುರ್ಗ ತಾಲ್ಲೂಕ್, ಆಂದ್ರಪ್ರದೇಶ.

2) ಚಂಟಿ ಬಿನ್ ಮಾಹಲಿಂಗಪ್ಪ, 21 ವರ್ಷ ಕೂಲಿ ಕೆಲಸ, ಜಗರೆಡ್ಡಿಪಲ್ಲಿ, ಕಂಬದೂರು ಮಂಡಲ್, ಕಲ್ಯಾಣದುರ್ಗ ತಾಲ್ಲೂಕ್, ಆಂದ್ರಪ್ರದೇಶ.

3) ಮಂಜುನಾಥ್ ಬಿನ್ ಲೇಟ್ ಹೆಂಜಾರಪ್ಪ, 29 ವರ್ಷ, ಬಡವನಹಳ್ಳಿ ಮಧುಗಿರಿ ತಾಲ್ಲೂಕ್, ತುಮಕೂರು ಜಿಲ್ಲೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಶ್ರೀ ಉದೇಶ್ ಟಿ.ಜೆ. ಕೆ.ಎಸ್.ಪಿ.ಎಸ್.  ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರು ಹಾಗೂ ಮಧುಗಿರಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಂ. ಪ್ರವೀಣ್, ಕೆ.ಎಸ್.ಪಿ.ಎಸ್. ರವರ ನೇತೃತ್ವದಲ್ಲಿ ತಿರುಮಣಿ ವೃತ್ತದ ಸಿಪಿಐ ರವರಾದ ಶ್ರೀ ಸಿ.ವೆಂಕಟೇಶ್ ಮತ್ತು ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಬಿ.ರಾಮಯ್ಯ ರವರುಗಳ ನೇತೃತ್ವದಲ್ಲಿ ಎ.ಎಸ್.ಐ. ರಂಗಪ್ಪ, ಹನುಮಾನಾಯ್ಕ್, ಸಿಬ್ಬಂದಿಗಳಾದ ಮಹಾಂತೇಶ, ಶ್ರೀನಿವಾಸ್, ಪದ್ಮೇಗೌಡ, ಆನಂದ್ಕುಮಾರ್, ಸೋಮಶೇಖರ್, ಕೇಶವರಾಜು, ನಾಗೇಶ್, ಶೌಖತ್, ಶಿವರಾಜು, ಶ್ರೀನಿವಾಸ್, ವೆಂಕಟೇಶ್‌‌ನಾಯ್ಕ, ಸದ್ದಾಂ, ವಿನೋದ, ಹನುಮೇಶ್ ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ      ಡಾ. ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.Tuesday, 20 October 2020

ಅಪರಾಧ ಘಟನೆಗಳು 20-10-20

ಬಡವನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ:22/2020 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:19/10/2020 ರಂದು ಸಂಜೆ 05-00 ಗಂಟೆಯಲ್ಲಿ ಫಿರ್ಯಾದಿ ಕುರುಬರಹಳ್ಳಿ ವಾಸಿ ಸಿದ್ದರಾಜು ಸಿ.ಎಸ್ ಬಿನ್ ಸಿದ್ದಗಂಗಪ್ಪ ರವರು ಠಾಣೆಗೆ ಹಾಜರಾಗಿ, ನಮ್ಮ ತಂದೆ-ತಾಯಿಗೆ ನಾನು ಮತ್ತು ನನ್ನ ಅಕ್ಕ ಪುಷ್ಪಲತಾ ಇಬ್ಬರು ಮಕ್ಕಳಿರುತ್ತೇವೆ. ಇಬ್ಬರಿಗೂ ಮದುವೆಯಾಗಿದ್ದು, ಬೇರೆ-ಬೇರೆ ವಾಸವಿರುತ್ತೇವೆ. ನಾನು ಬೆಂಗಳೂರಿನ ಬೈರನಹಳ್ಳಿಯಲ್ಲಿ ಬಾಷ್ ಗೋಡನ್ ನಲ್ಲಿ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ಅಲ್ಲೇ ಮನೆ ಕಟ್ಟಿಕೊಂಡು ವಾಸವಿರುತ್ತೇನೆ. ನನ್ನ ತಂದೆ ಸಿದ್ದಗಂಗಪ್ಪ ನಮ್ಮೂರಿನಲ್ಲಿ ನನ್ನ ತಾಯಿ ಗಿರಿಜಮ್ಮಳೊಂದಿಗೆ ವಾಸವಿದ್ದರು. ನನ್ನ ತಂದೆಗೆ ಈಗ್ಗೆ ಸುಮಾರು 05 ತಿಂಗಳ ಶ್ವಾಸಕೋಶದ ಕ್ಯಾನ್ಸರ್ ಅಂದರೆ ಉಸಿರಾಟದ ಖಾಯಿಲೆ ಇದ್ದುದ್ದರಿಂದ ನನ್ನ ತಂದೆ-ತಾಯಿಯನ್ನು ಬೆಂಗಳೂರಿನ ನಮ್ಮ ಮನೆಗೆ ಕರೆದುಕೊಂಡು ಹೋಗಿ ನಮ್ಮ ತಂದೆಯವರನ್ನು ಬೆಂಗಳೂರಿನ ಇ.ಎಸ್.ಐ ಮತ್ತು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೂ ಗುಣವಾಗಿರಲಿಲ್ಲ. ಒಂದು ವಾರದ ಹಿಂದೆ ನನ್ನ ತಂದೆ ನನ್ನ ಸ್ವಂತ ಊರಾದ ಕುರುಬರಹಳ್ಳಿಗೆ ಹೋಗಿ ಬರುತ್ತೇನೆಂದು ಬಂದಿದ್ದರು. ಹೀಗಿರುವಾಗ್ಗೆ ಈ ದಿನ ದಿ:19/10/2020 ರಂದು ಮಧ್ಯಾಹ್ನ ಸುಮಾರು 02-00 ಗಂಟೆಯಲ್ಲಿ ನಮ್ಮ ಮಾವನವರಾದ ಚಂದ್ರಶೇಖರ್ ರವರು ನನಗೆ ಪೋನ್ ಮಾಡಿ ನಿಮ್ಮ ತಂದೆ ದಿನಾಂಕ:18/10/2020 ರಂದು ರಾತ್ರಿ ಯಾವುದೋ ಸಮಯದಲ್ಲಿ ನಮ್ಮ ಬಾಬ್ತು ಸ.ನಂ:54 ರ ಜಮೀನಿನಲ್ಲಿರುವ ಒಂದು ಮಾವಿನ ಮರಕ್ಕೆ ಪ್ಲಾಸ್ಟಿಕ್ ವೈರಿನ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಬನ್ನಿ ಎಂದು ತಿಳಿಸಿದರು. ನಾವು ಕೂಡಲೇ ಬಂದು ನೋಡಲಾಗಿ, ನಮ್ಮ ತಂದೆಯವರು ನೇಣು ಹಾಕಿಕೊಂಡು ಮೃತಪಟ್ಟಿದ್ದು ನಿಜವಾಗಿತ್ತು. ನಮ್ಮ ತಂದೆಯು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆಯೇ ವಿನಃ ಅವರ ಸಾವಿನಲ್ಲಿ ಬೇರೆ ಅನುಮಾನವಿರುವುದಿಲ್ಲ. ಆದ್ದರಿಂದ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 157/2020, ಕಲಂ 279,337, IPC

ದಿನಾಂಕ;19/10/2020 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಪಿರ್ಯಾದಿ ಮನೋಹರ್ ನಾಯ್ಕ್ ಬಿನ್ ಗೋವಿಂದನಾಯ್ಕ, 25 ವರ್ಷ, ಲಂಬಾಣಿಜನಾಂಗ, ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ, ಪೋಚಕಟ್ಟೆ ತಾಂಡ್ಯ, ಹುಳಿಯಾರು ಹೋಬಳಿ, ಚಿ ನಾ ಹಳ್ಳಿ ತಾಲೋಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದಿನಾಂಕ:-17-10-2020 ರಂದು ಬೆಂಗಳೂರಿನಿಂದ ಪಿಲಾಲಿ ಗ್ರಾಮಕ್ಕೆ ನಮ್ಮ ಅತ್ತೆಯವರನ್ನು ಕಂಚೀಪುರಕ್ಕೆ ಕರೆದುಕೊಂಡು ಹೋಗಲು ನನ್ನ ಬಾಬ್ತು KA-50-W-9449 ನೇ ಹೋಂಡಾ ಡಿಯೋ ಬೈಕಿನಲ್ಲಿ ಬಂದಿದ್ದು, ಪಿಲಾಲಿ  ಗ್ರಾಮದಿಂದ 11.30 ಗಂಟೆಗೆ ನಮ್ಮ ಅತ್ತೆ ರತ್ನಿಬಾಯಿ ಕೋಂ ಗೋವಿಂದನಾಯ್ಕ, 52 ವರ್ಷ, ಲಂಬಾಣಿ ಜನಾಂಗ,   ನಾಗಾನಾಯ್ಕನಕಟ್ಟೆ, ಕಂಚೀಪುರ ಪೋಸ್ಟ್, ಮತ್ತೋಡು ಹೋಬಳಿ, ಹೊಸದುರ್ಗ ತಾಲ್ಲೋಕು, ಇವರನ್ನು ಕರೆದುಕೊಂಡು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕನ್ನು ನಾನು ಚಲಾಯಿಸಿಕೊಂಡು ಕಂಚೀಪುರಕ್ಕೆ ಹೊಯ್ಸಳಕಟ್ಟೆ  ಮಾರ್ಗವಾಗಿ ಬರಬೇಕಾದರೆ ಬೆಳಗ್ಗೆ ಸುಮಾರು 11.45 ಗಂಟೆಯಲ್ಲಿ ನಾನು ತಿಮ್ಮಪ್ಪನಹಟ್ಟಿ ಗೇಟಿನ ಬಳಿ ಎದುರಿನಿಂದ ಅತಿವೇಗ & ಅಜಾಗರೂಕತೆಯಿಂದ ಬಂದ KA-44-R-3096 ನೇ ಹೀರೋ ಹೋಂಡಾ ಬೈಕಿನ ಚಾಲಕ ಹೆಸರು ವಿಳಾಸ ತಿಳಿದಿಲ್ಲ, ಈತನು ತನ್ನ ಬೈಕನ್ನು ಅತಿವೇಗವಾಗಿ ಓಡಿಸಿಕೊಂಡು ಬಂದವನೇ ನಮ್ಮ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನಾನು & ನಮ್ಮ ಅತ್ತೆ ಬೈಕಿನ ಸಮೇತ ಕೆಳಗೆ ಬಿದ್ದು ನನಗೆ ಹಣೆಗೆ & ಬಲಗಾಲಿನ ಹೆಬ್ಬೆರಳಿಗೆ ತೀವ್ರ ಪೆಟ್ಟು ಬಿದ್ದು, ನಂತರ ನಮ್ಮ ಅತ್ತೆ ರತ್ನಿಬಾಯಿ ರವರಿಗೆ ಹಣೆಗೆ ಹಾಗೂ ಎಡಭಾಗದ ಪಕ್ಕೆಯ ಮೇಲಿನ ಮೂಳೆಗೆ ಪೆಟ್ಟು ಬಿದ್ದಿದ್ದು ಬೈಕು ಸಹ ನಜ್ಜುಗುಜ್ಜಾಗಿದ್ದು, ನಂತರ ನಾವು ಸ್ಥಳೀಯರ ಸಹಾಯದಿಂದ ಕಾರೊಂದರಲ್ಲಿ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದು ನಂತರ ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿ ನಾ ಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ನಮ್ಮ ಅತ್ತೆಯವರಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಆದಿತ್ಯ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದು, ನಾನು ಈ ದಿನ ತಡವಾಗಿ ಠಾಣೆಗೆ ಬಂದಿದ್ದು, ನಮಗೆ ಅಪಘಾತವನ್ನುಂಟು ಮಾಡಿದ KA-44-R-3096 ನೇ ಹೀರೋ ಹೋಂಡಾ ಬೈಕಿನ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಂಡಿರುತ್ತೇನೆ, ಎಂತಾ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ 157/2020 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

 

 Monday, 19 October 2020

ಅಪರಾಧ ಘಟನೆಗಳು 19-10-20

 

ಸಿ.ಎಸ್.ಪುರ  ಠಾಣಾ  ಮೊ.ನಂ: 93/2020. ಕಲಂ: 279. 337 ಐಪಿಸಿ

ದಿನಾಂಕ:18.10.2020 ರಂದು ಈ ಕೇಸಿನ ಫಿರ್ಯಾದಿಯಾದ ಹುಚ್ಚೇಗೌಡ ಬಿನ್ ಮೂಡ್ಲಗಿರಯ್ಯ,30ವರ್ಷ,ತಿಗಳ ಜನಾಂಗ,ಮಲ್ಲಪ್ಪನಹಳ್ಳಿ ಪಾಳ್ಯ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:16.10.020 ರಂದು ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಪಕ್ಕದ ಗ್ರಾಮದ ವಾಸಿಯಾದ  ರಮೇಶ, ಮಲ್ಲಪ್ಪನಹಳ್ಳಿ  ರವರು  ದೂರವಾಣಿ ಮೂಲಕ   ಕರೆ ಮಾಡಿ ನಿಮ್ಮ ಅಣ್ಣನಾದ ಗೋವಿಂದಯ್ಯನಿಗೆ  ನಿಮ್ಮ  ಊರಿನ ಕಡೆಯಿಂದ  ಉಂಗ್ರದ  ಕಡೆಗೆ ರಸ್ತೆಯ ಎಡಭಾಗದಲ್ಲಿ ಅಂದರೆ  ಲಕ್ಷ್ಮಿ ದೇವರ  ಸಮೀಪ  ಇರುವ ಉಂಗ್ರದ  ಕಡೆ ತಿರುವಿನಲ್ಲಿ  ನಡೆದುಕೊಂಡು  ಹೋಗುತ್ತಿದ್ದಾಗ, ಅದೇ ಸಮಯಕ್ಕೆ  ನಿಮ್ಮ  ಊರಿನ ಕಡೆಯಿಂದ  ಕೆ.ಎ.06ಇವಿ-3192  ದ್ವಿ ಚಕ್ರವಾಹನದ  ಚಾಲಕ ತನ್ನ  ವಾಹನವನ್ನು  ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು  ಬಂದು  ನಿಮ್ಮಣ್ಣನಿಗೆ  ಹಿಂದಿನಿಂದ  ಅಪಘಾತಪಡಿಸಿದರು ಎಂದು ತಿಳಿಸಿದರು, ಬಂದುನೋಡಲಾಗಿ  ಅಪಘಾತವಾಗಿತ್ತು, ಕೆಳಗೆ  ಬಿದ್ದಿದ್ದ  ನಮ್ಮಣ್ಣ ನಿಗೆ  ಬಲಗೈ, ಬೆನ್ನಿಗೆ , ಕೈಕಾಲುಗಳಿಗೆ  ಪೆಟ್ಟು  ಬಿದ್ದಿತ್ತು, ನಂತರ  ವಾಹನ ನೋಡಲಾಗಿ  ಕೆ.ಎ.06ಇವಿ-3192  ದ್ವಿ ಚಕ್ರವಾಹನ  ಅಲ್ಲೆ  ಇತ್ತು, ನಂತರ ಗ್ರಾಮಸ್ಥರ ಸಹಾಯದಿಂದ  ತುಮಕೂರಿನ ಹೇಮಾವತಿ ಆಸ್ಪತ್ರೆಗೆ  ಬಂದು ದಾಖಲಿಸಿ ಈ ದಿನ ತಡವಾಗಿ ಬಂದು ದೂರು  ನೀಡಿತ್ತಿದ್ದೇನೆ ಎಂದು  ನೀಡಿದ  ದೂರನ್ನು ಪಡೆದು  ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣೆ .ಯು ಡಿ ಆರ್ .ನಂ:29/2020 ಕಲಂ: 174 Crpc

ದಿನಾಂಕ:18/10/2020 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿ ಹನುಮಂತರಾಯಪ್ಪ ಬಿನ್ ಲೇ|| ಈರಣ್ಣ 70 ವರ್ಷ,  ಆದಿದ್ರಾವಿಡ ಜನಾಂಗ, ಕೂಲಿಕೆಲಸ, ಹೊಸಕೆರೆ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ನೀಡಿದ ದೂರಿನ ಅಂಶವವೆನೆಂದರೆ ನಾನು ಮೇಲ್ಕಂಡ ವಾಸವಾಗಿರುತ್ತೇನೆ. ನನಗೆ ಇಬ್ಬರೂ ಹೆಣ್ಣುಮಕ್ಕಳಿದ್ದು  ನನ್ನ ಎರಡನೇ ಮಗಳಾದ ಕಾಂತಮ್ಮ 33 ವರ್ಷ, ಇವರುನ್ನು ಈಗ್ಗೆ 12 ವರ್ಷಗಳ ಹಿಂದೆ ರೆಡ್ಡಿಹಳ್ಳಿ ಗ್ರಾಮದ ವಾಸಿ ಚಿನ್ನಪ್ಪನ ಮಗನಾದ ರಮೇಶನಿಗೆ ಕೊಟ್ಟು ಮದುವೆ ಮಾಡಿದ್ದು ಇವರು ಅನ್ನೋನ್ಯವಾಗಿದ್ದರು. ಇವರಿಗೆ 10 ವರ್ಷದ ಸಂಪ್ರೀತ್‌ ಎಂಬ ಮಗ 8 ವರ್ಷದ ಮಗಳು ಕವನ ಎಂಬ ಮಕ್ಕಳಿದ್ದು ಹೀಗಿರುವಾಗ್ಗೆ ನನ್ನ ಮಗಳು ಕಾಂತಮ್ಮಳಿಗೆ ಈಗ್ಗೆ ಎರಡು ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು ಹಲವಾರು ಆಸ್ಪತ್ರೆಗಳಲ್ಲಿ ಮತ್ತು ನಾಟಿ ವೈಧ್ಯರಲ್ಲಿ ನಾವು ಮತ್ತು ಆಕೆಯ ಗಂಡ ಚಿಕಿತ್ಸೆ ಕೊಡಿಸಿದ್ದರು. ವಾಸಿಯಾಗಿರಲಿಲ್ಲ ಹೊಟ್ಟೆನೋವು ಬಂದಾಗ ನನ್ನ ಮಗಳು ಹೊಟ್ಟೆನೋವಿನ ಬಾದೆ ತಾಳಲಾರದೇ ನಾನು ಇರುವುದಕ್ಕಿಂದ ಸಾಯುವುದೇ ಮೇಲು ಎನ್ನುತ್ತಿದ್ದಳು. ಆಗ ನಾವು ಸಮಾದಾನಪಡಿಸುತ್ತಿದ್ದೆವು. ಈಗಿರುವಾಗ್ಗೆ ದಿನಾಂಕ:17/10/2020 ರಂದು ಸಂಜೆ 05-00 ಗಂಟೆಯಲ್ಲಿ ನನ್ನ ಮಗಳಿಗೆ ಹೊಟ್ಟೆನೋವು ಬಂದಿದ್ದು ಹೊಟ್ಟೆನೋವಿನ ಬಾದೆ ತಾಳಲಾರದೇ ರೆಡ್ಡಿಹಳ್ಳಿ ಗ್ರಾಮದ ಬ್ಯಾಂಕ್‌‌ ರಮೇಶರವರ ಜಮೀನಿನಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ ಎಂತಾ ನಮ್ಮ ಮೊಮ್ಮಗ ಸಂಜೆ ನನಗೆ ಫೋನ್ ಮಾಡಿ ತಿಳಿಸಿದನು. ನನ್ನ ಮಗಳು ಹೊಟ್ಟೆನೋವಿನ ಬಾದೆ ತಾಳಲಾರದೇ ಬಾವಿಯ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ ವಿನಃ ಇವಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ರಾತ್ರಿ ಅವೇಳೆಯಾದ್ದರಿಂದ ನಮ್ಮ ಸಂಬಂಧಿಕರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇವೆ ಎಂತಾ ತಾವು ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂತಾ ನೀಡಿದ ಪಿರ್ಯಾದು ಮೇರೆಗೆ ಠಾಣಾ ಯುಡಿಆರ್ ನಂ:29/2020 ಕಲಂ:174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಗುಬ್ಬಿ ಪೊಲೀಸ್ ಠಾಣೆ ಮೊ ನಂ 216/2020 ಕಲಂ 279, 337, 304(ಎ)

ದಿನಾಂಕ; 18.10.2020 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಪ್ರಸನ್ನ ಗಣೇಶ್ ಬಿನ್ ಲೇ// ನಾಗರಾಜು, 26 ವರ್ಷ, ಶ್ರೀರಾಂಪುರ, ಹೊಸದುರ್ಗ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದಿ ತಮ್ಮ ವಿಜಯ್ ಕುಮಾರ್ ರವರು ಮತ್ತು ಆತನ ಸ್ನೇಹಿತ ಪ್ರದೀಪ್ ಮತ್ತು ಅವರ ಅಕ್ಕನ ಕುಟುಂಬವನ್ನು ಬೆಂಗಳೂರಿಗೆ ಬಿಟ್ಟು ನಿನ್ನೆ ದಿನಾಂಕ; 17.10.2020 ರಂದು ವಾಪಸ್ಸು ತಮ್ಮ ಊರಾದ ಶ್ರೀರಾಂಪುರಕ್ಕೆ ಕೆಎ-05 ಎಂಎಲ್-4759 ನೇ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪಿರ್ಯಾದಿ ತಮ್ಮ ವಿಜಯ್ ಕುಮಾರ್ ಮತ್ತು ಪ್ರದೀಪ್ ಇಬ್ಬರೂ ಗುಬ್ಬಿ ತಾಲ್ಲೂಕು ದೊಡ್ಡಗುಣಿ ಕೆರೆಯ ಏರಿಯ ಮೇಲೆ ಎನ್.ಹೆಚ್. 206 ರಸ್ತೆಯಲ್ಲಿ ರಾತ್ರಿ 11.30 ಗಂಟೆ ಸಮಯದಲ್ಲಿ ಎಡಬದಿಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ದೊಡ್ಡಗುಣಿ ಕಡೆಯಿಂದ ಬಂದ ಕೆಎ-14 ಎ-5601 ನೇ ಈಚರ್ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿ ತಮ್ಮ ವಿಜಯ್ ಕುಮಾರ್ ಮತ್ತು ಪ್ರದೀಪ್ ರವರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದನು.  ಇದರಿಂದ ಕಾರಿನಲ್ಲಿದ್ದ ವಿಜಯ್ ಕುಮಾರ್ ಗೆ ಮೈಕೈಗೆ ಏಟುಗಳು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಪ್ರದೀಪ್ ರವರಿಗೆ ತಲೆಗೆ ಮೈಕೈಗೆ ಏಟುಗಳು ಬಿದ್ದಿದ್ದು, ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ.  ಈ ವಿಚಾರವನ್ನು ಪ್ರದೀಪ್ ರವರು ನಮಗೆ ತಿಳಿಸಿರುತ್ತಾರೆ.  ನಂತರ ಪಿರ್ಯಾದಿ ಅಪಘಾತ ಸ್ಥಳವನ್ನು ನೋಡಿಕೊಂಡು ಬಂದಿದ್ದು, ಅಪಘಾತವಾಗಿರುವುದು ನಿಜವಾಗಿರುತ್ತದೆ.  ಎರಡು ವಾಹನಗಳು ಜಖಂ ಗೊಂಡಿರುತ್ತದೆ. ಕಾರಿಗೆ ಅಪಘಾತ ಪಡಿಸಿದ  ಕೆಎ-14 ಎ-5601 ನೇ ಈಚರ್ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಗುಬ್ಬಿ ಠಾಣಾ ಮೊ ನಂ 216/2020 ಕಲಂ 279, 337, 304(ಎ) ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Sunday, 18 October 2020

ಅಪರಾಧ ಘಟನೆಗಳು 18-10-20

ತಿಲಕ್ ಪಾರ್ಕ್ ಪೊಲೀಸ್ ಠಾಣಾ ಯು.ಡಿ.ಆರ್.ನಂಬರ್;20/2020 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ:- 16.10.2020 ರಂದು ಬೆಳಿಗ್ಗೆ 10.30 ಗಂಟೆಗೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಎ.ಎಸ್.ಐ ಅಬ್ದುಲ್ ಖಯ್ಯುಂ-ಎ.ಎಸ್.ಐ ರವರು ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:-16.10.2020 ರಂದು ಬೆಳಿಗ್ಗೆ  ಸುಮಾರು 10.00 ಗಂಟೆ ಸಮಯದಲ್ಲಿ ನಾನು ಠಾಣಾ ಎಸ್.ಹೆಚ್.ಓ ಕರ್ತವ್ಯದಲ್ಲಿ ಇದ್ದಾಗ ಠಾಣೆಯ ದೂರವಾಣಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರೀಂ ಸಾಬ್  ಹೆಚ್.ಸಿ-679 ರವರು ಕರೆ ಮಾಡಿ ದಿನಾಂಕ:-10.10.2020 ರಂದು ಬನಶಂಕರಿಯ ಸೇವಾ ಆಸ್ಪತ್ರೆಯ ಮುಂಭಾಗದ ಸ್ಥಳದಲ್ಲಿ ಯಾರೋ ಒಬ್ಬ ಬಿಕ್ಷುಕಿ  ಹೆಂಗಸು ಅನ್ನ ಆಹಾರ ಸೇವಿಸದೇ ಹಾಗೂ ಯಾವುದೋ ಖಾಯಿಲೆಯಿಂದ ಬಿದ್ದು ಒದ್ದಾಡುತ್ತಿದ್ದವರನ್ನು 108 ಅಂಬುಲೆನ್ಸ್‌ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ:-15.10.2020 ಬೆಳಿಗ್ಗೆ 10.00 ಗಂಟೆಗೆ ಮೃತಪಟ್ಟಿರುತ್ತಾರೆಂದು ವೈಧ್ಯಾಧಿಕಾರಿಗಳು ಇಂಟಿಮೇಷನ್ ಅನ್ನು ನೀಡಿರುತ್ತಾರೆ. ಸದರಿ ಹೆಂಗಸು ಬಿಕ್ಷುಕಿಯಾಗಿದ್ದು ಸುಮಾರು 35 ವರ್ಷ ವಯಸ್ಸಾಗಿರುತ್ತೆ. ಸದರಿ ಹೆಂಗಸಿನ ಹೆಸರು ವಿಳಾಸ ಹಾಗೂ ವಾರಸುದಾರರ ತಿಳಿದಿರುವುದಿಲ್ಲ. ಹೆಣವು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರುತ್ತೆ.  ಆದ್ದರಿಂದ  ಮುಂದಿನ ಕ್ರಮ ಜರುಗಿಸಿ ಎಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 Friday, 16 October 2020

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ ಅಭಿಯಾನ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ ಅಭಿಯಾನ

 

 

 


ಪತ್ರಿಕಾ ಪ್ರಕಟಣೆ ದಿ:15/09/20

ಪತ್ರಿಕಾ ಪ್ರಕಟಣೆ

ದಿನಾಂಕ  15-10-20

ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನ

ದಿನಾಂಕ  13-10-20 ಮದ್ಯಾಹ್ನ 03-00 ಗಂಟೆಯಲ್ಲಿ ಮಧು.ಎಂ.ಎಲ್ ಬಿನ್ ಲಕ್ಷ್ಮಿನರಸಿಂಹಯ್ಯ ತುಮಕೂರು ಶಿರಾಗೇಟ್‌ ಕಡೆಗೆ ಹೋಗಲು ಕೋಡಿ ಬಸವಣ್ಣ ದೇವಸ್ಥಾನದಿಂದ ಶಿರಾಗೇಟ್ ಕಡೆ ಹೋಗುವ ಕೆರೆಏರಿ ನಾಗರಕಲ್ಲು ಮುಂಭಾಗ ಇರುವ ಎಡರಸ್ತೆಯಲ್ಲಿ ಸಂಜೆ 04-00 ಗಂಟೆಯ ಸಮಯದಲ್ಲಿ ಶಾಂತಿ @ ಶಾಂತಮ್ಮ ಎನ್ನುವ ಹೆಂಗಸು ಬೈಕನ್ನು ನಿಲ್ಲಿಸಿ ಶಿರಾಗೇಟ್ ಡ್ರಾಪ್ ಮಾಡಿ ಎಂದು ಕೇಳಿ ಬೈಕ್‌‌‌ನಲ್ಲಿ ಕುಳಿತು ಹೋಗುವಷ್ಟರಲ್ಲಿ ಹಿಂದಿನಿಂದ  ಮಂಜ @ ಆನಂದ ಎನ್ನುವನು ಬಂದು ಬೈಕ್‌ ಸವಾರನಿಗೆ ನೀನು ಈಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀದ್ದೀಯ ಎಂತ ಬೈಕ್‌‌ ಸವಾರನಿಗೆ ಭಯಪಡಿಸಿ, ಹೆದರಿಸಿ ಆತನ ಬಳಿ ಇದ್ದ 1800/-ರೂ ಹಣವನ್ನು ಮತ್ತು ಬೈಕ್ಅನ್ನು ಕಿತ್ತುಕೊಂಡು ಹೋದವರುಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್‌‌‌ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 137/2020 ಕಲಂ-384 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದೆ.

 

ಹಣ ಮತ್ತು ಬೈಕ್‌‌ ದೋಚಿದ್ದ  ಆರೋಪಿಗಳನ್ನು ಪತ್ತೆ ಮಾಡಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌‌ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್‌‌ ಅಧೀಕ್ಷಕರ ನಿರ್ದೇಶನದಂತೆ ತುಮಕೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ತುಮಕೂರು ನಗರ ವೃತ್ತದ ಸಿ.ಪಿ.ಐ. ನವೀನ್‌‌‌. ಬಿ ರವರ ಉಸ್ತುವಾರಿಯಲ್ಲಿ  ಅಪರಾಧ ಪತ್ತೆ ತಂಡ ರಚಿಸಲಾಗಿದ್ದು, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಮಂಜುನಾಥ ಮತ್ತು ಶ್ರೀಮತಿ ಗಂಗಮ್ಮ ರವರು ಮತ್ತು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಅಪರಾಧ ಪತ್ತೆ ತಂಡವು ಆರೋಪಿಗಳಾದ

(1) ಮಂಜ @ ಆನಂದ ಬಿನ್‌ ಬಸವರಾಜ, 24 ವರ್ಷ, ಪೇಟಿಂಗ್‌‌ ಕೆಲಸ, ವಾಸ ಹಳೆ ಪಾಳ್ಯ ಚೌಡೇಶ್ವರಿ ದೇವಸ್ಥಾನದ ಹತ್ತಿರ, ತಿಪಟೂರು, ತುಮಕೂರು ಜಿಲ್ಲೆ.

(2)ಶಾಂತಮ್ಮ @ ಶಾಂತಿ ಕೋಂ ಜಗದೀಶ, 32 ವರ್ಷ, ಕೂಲಿ ಕೆಲಸ, ನೇಕಾರರ ಬೀದಿ, ಹುಬ್ಬಳ್ಳಿ ಟೌನ್‌‌, ಹಾಲಿ ವಾಸ ಮಠದ ರಸ್ತೆ, ಕ್ಯಾತ್ಸಂದ್ರ, ತುಮಕೂರು

ಮೇಲ್ಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ಕಡೆಯಿಂದ ಕೆ.ಎ-06 ಇ.ವಿ-5419 ನೇ ಬೈಕ್‌‌ ಮತ್ತು 1000/- ರೂ.ಗಳನ್ನು ಅಮಾನತ್ತುಪಡಿಸಿಕೊಂಡಿದೆ ಸದರಿ ಪ್ರಕರಣದ ಅರೋಪಿಗಳನ್ನು ಪತ್ತೆ ಮಾಡವಲ್ಲಿ ಯಶಸ್ವಿಯಾದ ತುಮಕೂರು ನಗರ ವೃತ್ತದ ಮೇಲ್ಕಂಡ ಅಧೀಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲೆ ಪೊಲೀಸ್‍ ಅಧೀಕ್ಷಕರು ಅಭಿನಂದಿಸಿ ಅವರ ಕಾರ್ಯವನ್ನು ಶ್ಲಾಘಿಸಿರುತ್ತಾರೆ.


ಅಪರಾಧ ಘಟನೆಗಳು 16-10-20

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 150/2020 ಕಲಂ 279,337304(ಎ) ಐಪಿಸಿ

ದಿನಾಂಕ 16-10-2020 ರಂದು ಸಮಯ ಬೆಳಿಗ್ಗೆ  06-00 ಗಂಟೆ ಸಮಯದಲ್ಲಿ  ಪಿರ್ಯಾದಿ  ರಘುವೀರ್  ಚೌಹಣ್  ಬಿನ್  ಕೃಷ್ಣಾರಾಜಿ ರಾವ್  ಅಕ್ಷತ ನಿಲಯ , ಬೆಂಗಳೂರು ಇವರು ನೀಡಿದ ದೂರಿನ ಅಂಶವೆನೆಂದರೆ ದಿನಾಂಕ 16-10-2020 ರಂದು ಮದ್ಯರಾತ್ರಿ 12-15 ಗಂಟೆ ಸಮಯದಲ್ಲಿ  ಕೆಎ 01 ಎಂ ಎಂ 9808 ನೇ ಕಾರಿನ ಚಾಲಕ  ಸುರೇಶ್ ಬಾಬು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ  ಬಟವಾಡಿ ಬ್ರಿಡ್ಜ್  ಎನ್ ಹೆಚ್ 48 ರಸ್ತೆಯಲ್ಲಿ ಮುಂಬಾಗ ಹೋಗುತ್ತಿದ್ದ  ಯಾವುದೋ ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಪಘಾತ  ಪರಿಣಾಮ ಕಾರಿನಲ್ಲಿದ್ದ ಕೃಷ್ಣಾಜಿರಾವ್  ವೇಂಕೋಜಿ ರಾವ್,ಚೌಹಣ್ 64 ವರ್ಷ,  21 ನೇ ಕ್ರಾಸ್, ಅರ್ ಟಿ ನಗರ  ಬೆಂಗಳೂರು ರವರು ತೀವ್ರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ ಮತ್ತು ರವಿಶಂಕರ್  ಬಿನ್ ಎಂ ರಾಜು  ಸಿಂಗನಾಯಕನಹಳ್ಳಿ  ಯಲಹಂಕ  ಬೆಂಗಳೂರು ರವರಿಗೆ  ಹೊಟ್ಟೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ

ಕೆ.ಬಿ ಕ್ರಾಸ್ ಪೊಲೀಸ್ ಠಾಣಾ ಮೊ ನಂ 59/2020 ಕಲಂ 323,324,354(B),448,504,506 R.W 34 IPC

ದಿನಾಂಕ 15.10.2020 ರಂದು ರಾತ್ರಿ 11.00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮಗೆ ಸೇರಿದ ಕಿಬ್ಬನಹಳ್ಳಿ ಗ್ರಾಮದ ಸರ್ವೇ ನಂ 90 ರಲ್ಲಿ ಜಮೀನಿದ್ದು, ಸದರಿ ನಮ್ಮ ಜಮೀನಿನಲ್ಲಿ ನಮ್ಮ ಗ್ರಾಮದ ವಾಸಿಗಳಾದ ನಾಗೇಂದ್ರ ಬಿನ್ ಶಿವಣ್ಣ, ರೇಖಾ ಕೋಂ ನಾಗೇಂದ್ರ, ಯೋಗೀಶ ಬಿನ್ ಶಿವಣ್ಣ, ಸರ್ವಮಂಗಳ ಕೋಂ ಯೋಗೀಶ ರವರುಗಳಿಗೆ ಯಾವುದೇ ದಾರಿ ಇಲ್ಲದಿದ್ದಾಗ್ಯೂ ಸದರಿಯವರುಗಳು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿಕೊಂಡು ನಾವು ನಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಹಾಳುಮಾಡಿ ತಮಗೆ ಇಷ್ಠಬಂದಂತೆ ಓಡಾಡುತ್ತಿದ್ದು, ನಾನು ಸದರಿಯವರನ್ನು ನಿಮಗೆ ಇಲ್ಲಿ ದಾರಿ ಇಲ್ಲ ಏಕೆ ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡುತ್ತೀರಿ ಮತ್ತು ನಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಹಾಳು ಮಾಡುತ್ತೀರಿ ನೀವು ನಮ್ಮ ಜಮೀನಿನಲ್ಲಿ ಬರಬೇಡಿ ಎಂದು ತಿಳಿಸಿದ್ದು, ಸದರಿಯವರು ಮೇಲ್ಕಂಡ ವಿಚಾರದಲ್ಲಿ ನಮ್ಮ ಮೇಲೆ ದ್ವೇಷ ಇಟ್ಟುಕೊಂಡು ದಿನಾಂಕ 15.10.2020 ರಂದು ಸಂಜೆ 5.30 ರಲ್ಲಿ ನನ್ನ ತಂದೆ ಶಿವಲಿಂಗಪ್ಪ, ಮತ್ತು ನನ್ನ ತಾಯಿ ಸುಶೀಲಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ ಮೇಲ್ಕಂಡ ನಾಗೇಂದ್ರ, ರೇಖಾ, ಯೋಗೀಶ ಮತ್ತು ಸರ್ವಮಂಗಳ  ಇವರುಗಳು ಅಕ್ರಮ ಕೂಟ ಕಟ್ಟಿಕೊಂಡು ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿಕೊಂಡು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮನೆಯ ಬಳಿ ಬಂದು ನನ್ನನ್ನು ಕುರಿತು ಏನೋ ಬೋಳಿಮಗನೆ, ಸೂಳೆಮಗನೆ, ನಮ್ಮನ್ನು ಜಮೀನಿನಲ್ಲಿ ಬರಬೇಡ ಎಂದು ಹೇಳುತ್ತೀಯಾ ನಿನಗೆ ಒಂದು ಗತಿ ಕಾಣಿಸುತ್ತೇವೆ ತಾಕತ್ತಿದ್ದರೆ ಹೊರಗೆ ಬಾ ಎಂದು ಕೂಗಾಡಿಕೊಂಡು ಎಲ್ಲರೂ ಏಕಾಏಕಿ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ನನ್ನ ತಂದೆ ನನ್ನ ಮಗ ಮನೆಯಲ್ಲಿ ಇಲ್ಲ ಏಕೆ ಈ ರೀತಿ ನನ್ನ ಮಗನನ್ನು ಬೈಯ್ಯುತ್ತೀರಿ ಅವನೇನು ಮಾಡಿದ್ದಾನೆ ಎಂದು ಕೇಳಿದಕ್ಕೆ ನಾಗೇಂದ್ರ ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತಂದೆಯ ನೆತ್ತಿ ಭಾಗಕ್ಕೆ ಬಲವಾಗಿ ಹೊಡೆದಿದ್ದು, ನನ್ನ ತಂದೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತೆ. ತಕ್ಷಣ ಮನೆಯಲ್ಲಿದ್ದ ನನ್ನ ತಾಯಿ ಸುಶೀಲಮ್ಮ ನಮ್ಮ ತಂದೆಯನ್ನು ರಕ್ಷಿಸಲು ಬಂದಿದ್ದು, ಆಗ ಯೋಗೀಶ ನನ್ನ ತಾಯಿಯ ಜುಟ್ಟನ್ನು ಹಿಡಿದುಕೊಂಡು  ಕೈಯ್ಯಿಂದ ತಲೆಯ ಮತ್ತು ಎದೆಯ ಭಾಗಕ್ಕೆ ಗುದ್ದಿರುತ್ತಾನೆ ಮತ್ತು ನನ್ನ ತಾಯಿಯ ಬಟ್ಟೆ ಹಿಡಿದು ಎಳೆದಾಡಿ ಮಾನಭಂಗ ಮಾಡಿರುತ್ತಾನೆ. ರೇಖಾ ಮತ್ತು ಸರ್ವಮಂಗಳ ಇವರುಗಳು ನನ್ನನ್ನು, ನನ್ನ ತಂದೆಯನ್ನು ಹಾಗೂ ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದಿರುತ್ತಾರೆ. ತಕ್ಷಣ ಗಲಾಟೆ ಶಬ್ದ ಕೇಳಿದ ಊರಿನವರಾದ ಉಮೇಶ್ ಕೆ.ಸಿ ಬಿನ್ ಚಿಕ್ಕಬಸವಯ್ಯ ಮತ್ತು ಕಿಬ್ಬನಹಳ್ಳಿ ಗ್ರಾಮದ ಶಿವಸ್ವಾಮಿ ಬಿನ್ ಚನ್ನಬಸವಯ್ಯ ರವರುಗಳು ಗಲಾಟೆ ಬಿಡಿಸಿದ್ದು, ನಾನು ತಿಪಟೂರಿಗೆ ಹೋಗಿದ್ದು ಗಲಾಟೆ ಮುಗಿಯುವ ಸಂದರ್ಭಕ್ಕೆ ಸರಿಯಾಗಿ ನಾನೂ ಸಹ ಮನೆಗೆ ಬಂದಿದ್ದು ನನ್ನನ್ನು ನೋಡಿದ ನಾಗೇಂದ್ರ ಮತ್ತು ಯೋಗೀಶ ಇವರುಗಳು ಮನಗೆ ನೀನು ಇವತ್ತು ಬದುಕಿದ್ದೀಯ ನಿನಗೆ ಒಂದು ದಿನ ಒಂದು ಗತಿ ಕಾಣಿಸುತ್ತೇವೆ ಇನ್ನೊಂದು ಬಾರಿ ನೀನೇನಾದರೂ ನಿಮ್ಮ ಜಮೀನಿನಲ್ಲಿ ಓಡಾಡಬೇಡಿ ಎಂದು ಹೇಳಿದರೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ನನ್ನ ತಂದೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಅವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಆದ್ದರಿಂದ  ನನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಪೂರ್ವನಿಯೋಜಿತ ಸಂಚು ರೂಪಿಸಿಕೊಂಡು ಕಬ್ಬಿಣದ ರಾಡಿನಿಂದ ನನ್ನ ತಂದೆಯ ತಲೆಗೆ ಬಲವಾಗಿ ಹೊಡೆದು ತೀವ್ರಸ್ವರೂಪದ ಗಾಯಗೊಳಿಸಿ ನನ್ನ ತಾಯಿಯ ಖಾಸಗಿ ಅಂಗಾಂಗಗಳಿಗೆ ಕೈಹಾಕಿ ಎಳೆದಾಡಿ ಮಾನಹಾನಿ ಮಾಡಿರುವ ಮೇಲ್ಕಂಡವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೊನಂ 114/2020 ಕಲಂ 379, 504 ಐಪಿಸಿ.

ದಿನಾಂಕ:15/10/2020 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿ ತಿಪ್ಪೇರುದ್ರಯ್ಯ.ಆರ್ ಬಿನ್ ಲೇಟ್ ರಾಮಲಕ್ಷ್ಮಯ್ಯ, 70 ವರ್ಷ, ಹಿಂದೂ ಸಾದರ ಜನಾಂಗ, ವ್ಯವಸಾಯ ವೃತ್ತಿ, ದೊಡ್ಡಹೊಸಹಳ್ಳಿ ಗ್ರಾಮ, ಪುರವರ ಹೋಬಳಿ, ಮಧುಗಿರಿ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ದಿನಾಂಕ:24/04/2020 ರಂದು ನಮ್ಮ ಸ್ವಾದೀನಾನುಭವದಲ್ಲಿರುವ ಚಿಕ್ಕತಿಮ್ಮನಹಳ್ಳಿ ಗ್ರಾಮದ ಸರ್ವೇ ನಂಬರ್ 21/2 ರಲ್ಲಿ ಒಣಗಿರುವ ಹೊಂಗೆಮರ, ಸೀಮೆ ಜಾಲಿ, ಊದಗ ಇತ್ಯಾದಿ ಮರಗಳನ್ನು ಕೂಲಿ ಆಳುಗಳಾದ ರವಿ ಬಿನ್ ನಾಗರಾಜು.ಡಿ.ಎಂ, ಕುರುಬ ಜನಾಂಗ ಮತ್ತು ರಾಮಕೃಷ್ಣ ಬಿನ್ ರಾಮಣ್ಣ, ಲಕ್ಷ್ಮಯ್ಯನಪಾಳ್ಯ, ತಿಗಳ ಜಾತಿ ಇವರುಗಳನ್ನು ಇಟ್ಟುಕೊಂಡು ಕಡಿಸುತ್ತಿದ್ದಾಗ ಸದಾನಂದ.ಡಿ ಬಿನ್ ದಾಸಪ್ಪ.ಜಿ.ಎಲ್ ಎಂಬುವನು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಬಂದು ನನ್ನನ್ನು ಮತ್ತು ಕೂಲಿ ಆಳುಗಳನ್ನು ಅವಾಚ್ಯ ಶಬ್ದಗಳಿಂದ ಬೈದು ನಾವು ಮರಗಳನ್ನು ಕಡಿಯಲು ಬಳಸುತ್ತಿದ್ದ ಮಚ್ಚು, ಮಿಷನ್ ರಂಪಗಳನ್ನು ಕದ್ದು ತೆಗೆದುಕೊಂಡು ಹೋಗಿರುತ್ತಾನೆ. ಅವುಗಳನ್ನು ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಲಕ್ಷ್ಮೀನರಸಪ್ಪ ಬಿನ್ ಲೇಟ್ ಗೋವಿಂದಪ್ಪ ವಯಸ್ಸು 65, ಜಾತಿ ಸಾದರು ಇವರ ಮನೆಯಲ್ಲಿ ಅಂದು ಇಟ್ಟಿದ್ದು, ತದನಂತರ ಅದನ್ನು ಬೇರೆ ಕಡೆಗೆ ಸಾಗಿಸಿರುತ್ತಾನೆ. ಈ ಘಟನೆಯನ್ನು ಆಜುಬಾಜಿನ ರೈತರು ನೋಡಿರುತ್ತಾರೆ. ಮತ್ತು ಇದೇ ವಿಷಯವನ್ನು ಗ್ರಾಮದ ಪಂಚಾಯ್ತಿ ಸದಸ್ಯರಾದ ಆರ್. ರಾಮಯ್ಯ ಬಿನ್ ಲೇಟ್ ರಾಮಣ್ಣ ಮತ್ತು ಸಂಕಾಪುರದ ವೆಂಕಟೇಶಪ್ಪ ಎಂಬುವವರ ಮುಂದೆ ಪ್ರಸ್ತಾಪಿಸಿ ನ್ಯಾಯಮಾಡಿ ನಮ್ಮ ರಂಪ ಮತ್ತು ಮಚ್ಚನ್ನು ಕೊಡಲು ತಿಳಿಸಿದರೂ ಈತ ಕೊಡದೆ ಸುಳ್ಳು ಪ್ರಮಾಣ ಮಾಡಿ ಸತಾಯಿಸುತ್ತಿದ್ದಾನೆ ಇವುಗಳ ಒಟ್ಟು ಬೆಲೆ ಸುಮಾರು 10 ಸಾವಿರ ರೂಗಳಾಗಿರುತ್ತೆ. ದಯಮಾಡಿ ಈತನ ಮೇಲೆ ಎಫ್.ಐ.ಆರ್ ಮಾಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಠಾಣಾ ಮೊನಂ 114/2020 ಕಲಂ 379, 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಸಿ.ಎಸ್.ಪುರ  ಠಾಣಾ  ಮೊ.ನಂ: 92/2020. ಕಲಂ:323.324.504.506 ಐಪಿಸಿ

ದಿನಾಂಕ:15.10.2020 ರಂದು  ಈ ಕೇಸಿನ ಫಿರ್ಯಾದಿಯಾದ  ಕಾತ್ಯಾಯಿಣಿ ಕೊಂ ರಾಜಶೇಕರಯ್ಯ, 46 ವರ್ಷ, ಲಿಂಗಾಯ್ತರು, ನೀಲೇಗೌಡನ  ಪಾಳ್ಯ, ಕಡಬಾ  ಹೋಬಳಿ, ಗುಬ್ಬಿ ತಾಲ್ಲೂಕುರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:13.10.2020 ರಂಧು ಸಂಜೆ ಸುಮಾರು 6.00 ಗಂಟೆ  ಸಮಯದಲ್ಲಿ  ನಾನು ನಮ್ಮ ಗ್ರಾಮದಲ್ಲಿನ  ಸುಬ್ಬಣ್ಣನವರ  ಮನೆಯ  ಹತ್ತಿರ  ನಾನು ಅವರ ಮನೆಯವರಿಗೆ ಪಾಶ್ರ್ವ ವಾಯು ಆಗಿರುವುದನ್ನು ನೋಡುವುದಕ್ಕೆ  ನನ್ನ  ಮನೆಯ ಬಾಗಿಲನ್ನು  ಹಾಕಿಕೊಂಡು  ಹೋಗಿ ಬಂದಿದ್ದು, ಅಷ್ಟಕ್ಕೆ  ನನ್ನ  ಯಜಮಾನರಾದ  ರಾಜಶೇಖರಯ್ಯ  ಏಕಾಏಕಿ ನನ್ನನ್ನು   ಬಾಯಿಗೆ ಬಂದಂತೆ  ಕೆಟ್ಟ ಅವಾಚ್ಯ ಪದಗಳಿಂದ   ಬೈದು, ನೀನು ಎಲ್ಲಿಗೇ  ಹೋಗಿದ್ದೆ, ಯಾವನ ಹತ್ತಿರ ಹೋಗಿದ್ದೆ  ಎಂದು  ನನ್ನನ್ನು ಜುಟ್ಟು ಹಿಡಿದುಕೊಂಡು  ಎಳೆದಾಡಿ ಕೆಳಕ್ಕೆ  ಕೆಡವಿಕೊಂಡು  ಕಾಲಿನಲ್ಲಿ  ಚೆನ್ನಾಗಿ  ತುಳಿದು ದೊಣ್ಣೆಯಿಂದ  ನನ್ನನ್ನು  ಎಲ್ಲಿಗೋ ಬೇಕೋ ಅಲ್ಲಿಗೆ  ಚೆನ್ನಾಗಿ  ಹೊಡೆದರು, ನಂತರ ಏಕೆ ಹೊಡೆಯುತ್ತಿಯೋ ಅಂತ ಕೇಳಿದಕ್ಕೆ ನನ್ನನ್ನು ಚೆನ್ನಾಗಿ ಹೊಡೆದರು, ನನ್ನನ್ನು ಮನೆಯಲ್ಲಿಯೇ  ಕೂಡಿ ಹಾಕಿ ಹೊರಗಡೆ ಬಿಡದೇ ಹಾಗೂ  ನೀರು ಊಟ  ಕೊಡದೇ  ಕಿರುಕುಳ ಕೊಟ್ಟಿದ್ದು,, ನಾನು ಹೊರಗಡೆ ಹೋಗಬೇಕು ಅಂತ ಕೇಳಿದ್ದಕ್ಕೆ  ಅವರು ನೀನು ಈ ವಿಚಾರವನ್ನು   ಹೊರಗಡೆ ಎಲ್ಲಾದರೂ  ಅಥವಾ ನಿನ್ನ  ತವರು ಮನೆಯವರಾದ  ಅಣ್ಣ ತಮ್ಮಂದಿರುಗಳಿಗೆ  ಹೇಳಿದರೆ  ನಿನ್ನ  ಪ್ರಾಣ  ತೆಗೆಯುತ್ತೇನೆ ಎಂದು ಪ್ರಾಣ ಬೆದರಿಕೆ  ಹಾಕಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ  ದೂರಿನ  ಮೇರೆಗೆ  ಸಿ.ಎಸ್.ಪುರ  ಠಾಣಾ  ಪ್ರಕರಣ  ದಾಖಲಿಸಿರುತ್ತೆ.

 Thursday, 15 October 2020

ಅಪರಾಧ ಘಟನೆಗಳು 15-10-20

ಜಯನಗರ ಪೊಲೀಸ್ ಠಾಣಾ ಸಿ ಆರ್ ನಂ. 71/2020 ಕಲಂ 379 ಪಿ ಸಿ.

ದಿನಾಂಕ: 14/10/2020 ರಂದು ಬೆಳಿಗ್ಗೆ11-30 ಗಂಟೆ ಸಮಯದಲ್ಲಿ ತುಮಕೂರು ತಾಲ್ಲೂಕು, ಹೆಬ್ಬೂರು ಹೋಬಳಿ, ಕುಂಬಿ ಪಾಳ್ಯ  ವಾಸಿ ಅತೀಖ್ ಅಹಮದ್ ಖಾನ್ ಬಿನ್ ಖಾಸಿಂ ಖಾನ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಾನು ಪ್ರತಿ ದಿನ ನಮ್ಮೂರಿನಿಂದ ತುಮಕೂರು ಮಾರುತಿ ನಗರದಲ್ಲಿರುವ ಅಯ್ಯುಬ್ ಬ್ಯೂಟಿಕ್ ಅಂಗಡಿಗೆ ನನ್ನ ಬಾಬ್ತು KA-06-ET-2248 ನೇ ಹೋಂಡಾ ಶೈನ್ ಸಿಬಿಎಫ್-125 ಎಫ್ ದ್ವಿಚಕ್ರ ವಾಹನದಲ್ಲಿ ಬಂದು ಹೋಗುತ್ತಿರುತ್ತೇನೆ. ದಿನಾಂಕ: 29/09/2020 ರಂದು ಮಾಮೂಲಿನಂತೆ ನಾನು ಅಂಗಡಿಗೆ ಬೆಳಿಗ್ಗೆ 10-30 ಗಂಟೆಗೆ ಕೆಲಸಕ್ಕೆ ಬಂದಿದ್ದು ಅಂಗಡಿಯ ಮುಂಭಾಗ ರಸ್ತೆ ಬದಿಯಲ್ಲಿ ನನ್ನ ಮೋಟಾರ್ ಬೈಕ್‌ನ್ನು ನಿಲ್ಲಿಸಿ ನಾನು ಅಂಗಡಿಯ ಒಳಗೆ ಕೆಲಸ ಮಾಡುತ್ತಿದ್ದು, ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಕೆಲಸ ಮುಗಿಸಿ ವಾಪಸ್ ಊರಿಗೆ ಹೋಗಲೆಂದು ನಾನು ಮೊಟಾರ್ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೊಟಾರ್ ಬೈಕ್ ಸ್ಥಳದಲ್ಲಿ ಇರಲಿಲ್ಲ. ಅಂದಿನಿಂದ ಈ ದಿನದವರೆವಿಗೂ ಸಹ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ್ ಬೈಕ್ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ನನ್ನ ಮೋಟಾರ್ ಬೈಕ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ನನ್ನ ಮೋಟಾರ್ ಬೈಕ್‌ನ ವಿವರ ಈ ರೀತಿ ಇರುತ್ತೆ. ಮೋಟಾರ್ ಬೈಕ್‌ನ ಹಿಂದೆ ಮುಂದೆ ನಂಬರ್ ಪ್ಲೇಟ್ ಮೇಲೆ KA-06-ET-2248 ಎಂತ ರಿಜಿಸ್ಟ್ರೇಷನ್ ನಂಬರ್ ಬರೆದಿರುತ್ತೆ. ಕಪ್ಪು ಬಣ್ಣದ ಹೋಂಡಾ ಶೈನ್ ಸಿಬಿಎಫ್-125ಎಫ್ ಮೋಟಾರ್ ಬೈಕ್ ಆಗಿದ್ದು, ಇವರ ಚಾಸೀಸ್ ನಂ: ME4JC652CF7006970 ಹಾಗೂ ಇಂಜಿನ್ ನಂ: JC65E70021525 ಆಗಿರುತ್ತೆ. ಮೇಲ್ಕಂಡ ಕಳುವಾಗಿರುವ ನನ್ನ ಮೋಟಾರ್ ಬೈಕ್‌ನ ಬೆಲೆ ಸುಮಾರು 20,000/- ರೂಗಳಾಗಿರುತ್ತೆ. ಕಳುವಾಗಿರುವ ನನ್ನ ಮೋಟಾರ್ ಬೈಕ್‌ನ್ನು ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದೇ ಇರುವುದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತಾವು ದಯಮಾಡಿ ನನ್ನ ಮೋಟಾರ್ ಬೈಕ್‌ನ್ನು ಕಳವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಅವರಿಂದ ನನ್ನ ದ್ವಿ ಚಕ್ರ ವಾಹನವನ್ನು ಕೊಡಿಸಿಕೊಡಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

 


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 22 guests online
Content View Hits : 948972
Hackguard Security Enabled