lowborn ಅಪರಾಧ ಘಟನೆಗಳು 03-09-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 03-09-19

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.78/2019, ಕಲಂ:279,304(A) IPC R/W 187 IMV Act.

ದಿನಾಂಕ:02/09/2019 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿ ರಂಗಶಾಮಯ್ಯ ಬಿನ್ ಲೇ||ರಂಗಪ್ಪ, 65 ವರ್ಷ, ಎ.ಕೆ.ಜನಾಂಗ, ವ್ಯವಸಾಯ, ಕೊಟ್ಟ ಗ್ರಾಮ, ಕಸಬಾ ಹೋಬಳಿ, ಶಿರಾ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಕಿರಿಯ ಮಗನಾದ ಕೃಷ್ಣಕುಮಾರ್.ಆರ್. ಎಂಬುವನು ಶಿರಾ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ನಿಮಿತ್ತಾ ನಾನು ಮತ್ತು ನನ್ನ ಮಗ ಇಬ್ಬರು ದಿನಾಂಕ:01/09/2019 ರಂದು ಸಾಯಂಕಾಲ ಮಿಡಿಗೇಶಿ ಬಳಿ ಲಕ್ಲೀಹಟ್ಟಿ ಗ್ರಾಮದಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಆ ದಿನ ರಾತ್ರಿ ಅಲ್ಲಿಯೇ ಇದ್ದು ಕೆಲಸ ಮುಗಿಸಿಕೊಂಡು ಈ ದಿನ ಅಂದರೆ ದಿನಾಂಕ:02/09/2019 ರಂದು ವಾಪಸ್ಸ್ ಊರಿಗೆ ಹೋಗಲು ಬೆಳಿಗ್ಗೆ ಸುಮಾರು 08:45 ಗಂಟೆಯ ಸಮಯದಲ್ಲಿ ಲಕ್ಲೀಹಟ್ಟಿ ಗ್ರಾಮದ ಬಳಿಯಿರುವ ಗಜ್ಜಿ ರಂಗಣ್ಣನ ಜಮೀನಿನ ಹತ್ತಿರ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಮಿಡಿಗೇಶಿ ಬಸ್ಸ್ ನಿಲ್ದಾಣದ ಕಡೆ ಬರುತ್ತಿರಬೇಕಾದರೆ ಅದೇ ಸಮಯಕ್ಕೆ ಪಾವಗಡ ಕಡೆಯಿಂದ ಹಿಂದಿನಿಂದ ಬಂದ ಕೆಎ-02-ಎ-9819 ನೇ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನ್ನ ಜೊತೆಯಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ಮಗ ಕೃಷ್ಣಕುಮಾರ್ ಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಮಗನ ತಲೆಗೆ, ಎಡ ಭುಜಕ್ಕೆ, ಎದೆಗೆ ಬಲವಾದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಅಪಘಾತಪಡಿಸಿದ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದನು, ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-02-ಎ-9819 ನೇ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಠಾಣಾ ಮೊ.ಸಂ.78/2019, ಕಲಂ:279,304(ಎ) ಐಪಿಸಿ ರೆ/ವಿ 187 ಐ.ಎಂ.ವಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ಇಲಾಖಾ ಮೇಲಾಧಿಕಾರಿಯವರಿಗೆ ನಿವೇದಿಸಿಕೊಳ್ಳಲಾಯಿತು.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 78/2019 ಕಲಂ; 279,337 ಐ.ಪಿ.ಸಿ

ದಿನಾಂಕ: 02/09/2019 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿ ನರಸಿಂಹಮೂರ್ತಿ ಬಿನ್ ಓಂಕಾರಮೂರ್ತಿ, 29 ವರ್ಷ, ದೇವಾಂಗ ಜನಾಂಗ, ಕಾರು ಡ್ರೈವರ್, ಆದಿ ಲಕ್ಷ್ಮೀನಗರ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 18/08/2019 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಮ್ಮ ತಾಯಿ ರತ್ನಮ್ಮ ಮತ್ತು ನಮ್ಮ ಚಿಕ್ಕಮ್ಮ ಧನಲಕ್ಷ್ಮೀ ಇಬ್ಬರು ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಲು ಹುಚ್ಚನಹಟ್ಟಿ ರಸ್ತೆಯಲ್ಲಿ ಜಯಮ್ಮನವರ ಪೆಟ್ಟಿಗೆ ಅಂಗಡಿ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಅದೇ ಸಮಯಕ್ಕೆ ಹುಚ್ಚನಹಟ್ಟಿ ಕಡೆಯಿಂದ KA-44 W-2479 ಹೋಂಡಾ ಆಕ್ಟೀವಾ ಸವಾರ ಈಡೇನಹಳ್ಳಿ ಪಾಳ್ಯದ ರುದ್ರೇಶ್ ರವರು ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ನಡೆದುಕೊಂಡು ಹೋಗುತ್ತಿದ್ದ ನಮ್ಮ ತಾಯಿ ರತ್ನಮ್ಮನವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಮ್ಮ ತಾಯಿ ಕೆಳಗೆ ಬಿದ್ದು, ತಲೆಗೆ, ಎಡಗೈಗೆ ಹಾಗೂ ಮೂಗಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ಬಲಗೈಗೆ ತರಚಿದ ಗಾಯವಾಗಿರುತ್ತೆ. ನಮ್ಮ ಚಿಕ್ಕಮ್ಮ ಬೈಕ್ ಸವಾರನ ಸಹಾಯದಿಂದ ನಮ್ಮ ತಾಯಿಯನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಇಲ್ಲಿಯವರೆಗೆ ನಾನು ಆಸ್ಪತ್ರೆಯಲ್ಲಿ ನಮ್ಮ ತಾಯಿಗೆ ಚಿಕಿತ್ಸೆ ಕೊಡಿಸಿರುತ್ತೇನೆ. ಮತ್ತು ಈ ಅಪಘಾತ ಮಾಡಿದ ಬೈಕ್ ಸವಾರ ರುದ್ರೇಶ್ ರವರು ಚಿಕಿತ್ಸೆ ಕೊಡಿಸುತ್ತೇನೆ ರಾಜಿಯಾಗೋಣಾ ಎಂದು ತಿಳಿಸಿದ್ದು, ಇದುವರೆವಿಗೂ ರಾಜಿಗೆ ಬಾರದೆ ಇದ್ದು, ಈ ದಿನ  ತಡವಾಗಿ ಬಂದು ಈ ಅಪಘಾತಕ್ಕೆ ಕಾರಣವಾಗಿರುವ ಮೇಲ್ಕಂಡ KA-44 W-2479 ಹೋಂಡಾ ಆಕ್ಟೀವಾ ಸವಾರ ಈಡೇನಹಳ್ಳಿ ಪಾಳ್ಯದ ರುದ್ರೇಶ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಮೊ.ನಂ 78/2019 ಕಲಂ: 279,337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ : 132/2019 ಕಲಂ: 279,337 IPC

ದಿನಾಂಕ 01-09-2019 ರಂದು ರಾತ್ರಿ 07-30 ಗಂಟೆಗೆ ಪಿರ್ಯಾದಿ ನರಸಿಂಹಮೂರ್ತಿ ಬಿನ್ ನರಸಿಂಹಯ್ಯ, 36 ವರ್ಷ, ಈಚನೂರು, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 01-09-2019 ರಂದು ಗೌರಿ ಹಬ್ಬದ ಪೂಜೆ ಸಾಮಾನು ತರಲು ನನ್ನ ಮಾವನಾದ ರಂಗಸ್ವಾಮಿ ಬಿನ್ ಚಿಕ್ಕ ಹುರುಟಯ್ಯ, ಸುಮಾರು 42 ವರ್ಷ, ಕರಿಗೌಡನಹಳ್ಳಿ, ಗುಬ್ಬಿ ತಾಲ್ಲೋಕ್ ರವರೊಂದಿಗೆ ತಿಪಟೂರಿಗೆ ಬಂದು ಹಬ್ಬದ ಸಾಮಾನುಗಳನ್ನು ತೆಗೆದುಕೊಂಡು ಸಂಜೆ 05-30 ಗಂಟೆಗೆ ರಸ್ತೆ ದಾಟಿ ಗುರುಕುಲ ಸೂಪರ್ ಮಾರ್ಕೆಟ್ ಪಕ್ಕ ರಸ್ತೆ ಎಡಭಾಗ ಬದಿಯಲ್ಲಿ ನಾನು ನನ್ನ ಮಾವ ನಡೆದುಕೊಂಡು ಹೋಗುವಾಗ್ಗೆ ದ್ವಿ ಚಕ್ರ ವಾಹನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಪಕ್ಕದಲ್ಲಿದ್ದ ನನ್ನ ಮಾವನವರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಾವನವರಿಗೆ ತಲೆ, ಕೈ ಕಾಲು , ಮಂಡಿ, ಕೆನ್ನೆ, ಪಾದದ ಬೆರಳುಗಳು ರಕ್ತಗಾಯವಾಗಿರುತ್ತದೆ. ದ್ವಿ ಚಕ್ರ ವಾಹನ ಹಿಡಿದು ನೋಡಲಾಗಿ ಕೆಎ-02-ಇ-2835 ನಂಬರ್ ನ ದ್ವಿ ಚಕ್ರ ವಾಹನವಾಗಿರುತ್ತದೆ. ತಕ್ಷಣ ನಾನು ನನ್ನ ಮಾವನವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ಚಿಕಿತ್ಸೆ ಕೊಡಿಸಿರುತ್ತೇನೆ. ಆದ್ದರಿಂದ ನನ್ನ ಮಾವನವರಿಗೆ ಅಪಘಾತ ಉಂಟು ಮಾಡಿದ ಮೇಲ್ಕಂಡ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 66 guests online
Content View Hits : 399755