lowborn ಅಪರಾಧ ಘಟನೆಗಳು 11-09-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-09-19

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ -82/2019 ಕಲಂ: 323,324,504,506 ಐ.ಪಿ.ಸಿ

ದಿನಾಂಕ:10-09-2019 ರಂದು ಮಧ್ಯಾಹ್ನ 02-15 ಗಂಟೆಗೆ ಪಿರ್ಯಾದಿ ಬಸವರಾಜು ಬಿನ್ ಶಿವೇಗೌಡ, 34ವರ್ಷ, ಕುರುಬರು, ವ್ಯವಸಾಯ, ವಿರುಪಾಕ್ಷಿಪುರ, ನೊಣವಿನಕೆರೆ ಹೋಬಳಿ, ತಿಪಟೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ನಮ್ಮ ಸಂಬಂಧಿಕಾರದ ದಿಲೀಪ್ ರವರ ಮನೆಯಲ್ಲಿ ಕೆಲಸಮಾಡಿಕೊಂಡಿರುತ್ತೇನೆ, ದಿನಾಂಕ:10-09-2019 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ಹೊಸಹಳ್ಳಿಯ ಶಂಕರ (ಮೇಷ್ಟ್ರಯ್ಯನವರ) ಮತ್ತು ಶಂಕರಲಿಂಗಯ್ಯರವರು ನಮ್ಮ ಸಂಬಂಧಿ ದಿಲೀಪ್ ರವರ ಮೇಲೆ ಶಂಕರಲಿಂಗಯ್ಯರವರ ಮನೆಯ ನೇರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಜಗಳ ತೆಗೆದು ಗಲಾಟೆ ಮಾಡುತ್ತಿದ್ದರು, ಕೆಟ್ಟಕೆಟ್ಟದಾಗಿ ದಿಲೀಪರವರನ್ನು ಬೈಯ್ಯುತ್ತಿದ್ದರು ಆಗ ನಾನು ಏಕೆ ಎಂದು ಕೇಳಲು ಹೋದಾಗ ಶಂಕರ ಮತ್ತು ಶಂಕರಲಿಂಗಯ್ಯರವರು  ಬಂದು ನೀನು ಯಾರು ಕೇಳಲು ಎಂದು ಲೋಫರ್‌ ನನ್ನ ಮಗನೆ ಎಂದು ದೊಣ್ಣೆಯಿಂದ ನನ್ನ ನನ್ನ ಬಲ ತಲೆಗೆ ಹೊಡೆದರು ಅಲ್ಲದೆ ನೀನು ಬೇರೆ ಊರಿಂದ ಬಂದಿದ್ದೀಯಾ ಎಂದು ಬೈಯ್ಯುತ್ತಾ ನಿಮ್ಮನ್ನು ಬಿಟ್ಟರೆ ತಾನೆ ಎಂದು ಭಯಪಡಿಸಿ ನಿಮ್ಮಿಬ್ಬರನ್ನು ನೋಡಿಕೊಳ್ಳುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆ ಸಮಯದಲ್ಲಿ ನಮ್ಮ ದೊಡ್ಡಪ್ಪ ಬಸವಲಿಂಗಪ್ಪರವರು ಬಂದು ಗಲಾಟೆ ಬಿಡಿಸಿದರು  ಹಾಗೂ ನಮ್ಮ ದಿಲೀಪಣ್ಣನಿಗೆ ಶಂಕರ ಮತ್ತು ಶಂಕರಲಿಂಗಯ್ಯ ರವರು ಕೈಗಳಿಂದ ಮೈ ಮತ್ತು ಬೆನ್ನಿಗೆ ಹೊಡೆದರು ತಾವು ದಯಮಾಡಿ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಠಾಣೆಗೆ ಬಂದು ದೂರು ನೀಡಿರುತ್ತೇಂತಾ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ -83/2019 ಕಲಂ: 323,324,504,506 ರೆ/ವಿ 34 ಐ.ಪಿ.ಸಿ

ದಿನಾಂಕ:10-09-2019 ರಂದು ಸಂಜೆ 06-30 ಗಂಟೆಗೆ ಪಿರ್ಯಾದಿ ಶಂಕರಲಿಂಗಯ್ಯ ಬಿನ್ ಸಿದ್ದರಾಮಯ್ಯ,48 ವರ್ಷ, ಜಿರಾಯ್ತಿ, ಕರುಬರು,ಹೊಸಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:10-09-2019 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಮ್ಮ ಮಾವನಾದ ಬಸವಲಿಂಗಯ್ಯರವರು ಬಂದು ನನಗೆ ನೋಟಿಸ್ ಕಳುಹಿಸುತ್ತಿಯಾ ಎಂತಾ ಜಗಳ ತೆಗೆದು ಬೋಳಿ ಮಗನೆ, ಸೂಳೇ ಮಗನೆ ಎಂತಾ ಅವ್ಯಾಚ ಶಬ್ದಗಳಿಂದ ಬೈದರು. ಅದೇ ವೇಳೆಗೆ ನನ್ನ ಬಾಮೈದ ದಿಲೀಪ್ ಹಾಗೂ ಅವರ ಸಂಬಂದಿ ವಿರುಪಾಕ್ಷಪುರದ ಬಸವರಾಜುರವರು ಸಹ ಬಂದು ಬೈದು ಮೈಕೈಗೆ ಹೊಡೆದರು. ನನ್ನ ಮಾವನಾದ ಬಸವಲಿಂಗಪ್ಪರವರು ದೊಣ್ಣೆಯಿಂದ  ನನ್ನ ತೆಲೆಗೆ ಹೊಡೆದು ರಕ್ತ ಗಾಯಪಡಿಸಿದರು. ನಂತರ ಅಲ್ಲಿಗೆ ಬಂದ ನಮ್ಮ ಅಣ್ಣ ರಾಮಲಿಂಗಯ್ಯರವರು ಜಗಳ ಬಿಡಿಸಿದರು  ಎಲ್ಲರು ನಮ್ಮ ತಂಟೆಗೆ ಬಂದರೆ ಒಂದು ಗತಿ ಕಾಣಿಸುತ್ತೇನೆಂತಾ ಪ್ರಾಣ ಬೆದರಿಕೆ ಹಾಕಿ ಹೋದರು, ಗಾಯಗೊಂಡಿದ್ದ ನಾನು  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನನ್ನ ಮೇಲೆ ಗಲಾಟೆ ಮಾಡಿ ಅವ್ಯಾಚ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ, ರಕ್ತಗಾಯಪಡಿಸಿರುವ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 81/2019 ಕಲಂ: 8, 9, 11 KARNTAKA PREVENTION OF COW SLANGHTER & CATTLE PREVENTION ACT-1964 ಮತ್ತು ಕಲಂ 11(1) (A) PREVENTION OF CRUELTY TO ANIMALS ACT, 1960 ಮತ್ತು ಕಲಂ 97, 98 Transportation of Animal Act 1978.

ದಿನಾಂಕ:10/09/2019 ರಂದು ಬೆಳಿಗ್ಗೆ 10-45 ಗಂಟೆಗೆ ಠಾಣಾ ಪಿ.ಎಸ್.ಐ ಶ್ರೀ ಕೃಷ್ಣಕುಮಾರ್ ರವರು ಕೆ.ಎ-44 -623 ನೇ ವಾಹನ ಮತ್ತು 05 ಕರುಗಳ ಜೊತೆಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ;10-09-2019 ರಂದು  ಠಾಣಾ ವ್ಯಾಪ್ತಿಯಲ್ಲಿ ಗಣೇಶ್ ವಿಸರ್ಜನ ಪ್ರಯುಕ್ತ ನಾನು ಮತ್ತು ಶ್ರೀ ಉಮೇಶ್  ಎ ಎಸ್ ಐ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ 298, ಶ್ರೀರವಿಕುಮಾರ, ಪಿ ಸಿ 439 ಶ್ರೀ ಹರೀಶ್ ಕುಮಾರ್  ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು  ತಿಪಟೂರು  ಕಡೆಯಿಂದ ಚಿಕ್ಕ ರಂಗಾಪುರ ರಸ್ತೆಯಲ್ಲಿ ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ  ಹೋಗುತ್ತಿರುವಾಗ   ಚಿಕ್ಕರಂಗಾಪುರ ಗೊಲ್ಲರಹಟ್ಟಿ ರಸ್ತೆ ಕಡೆಯಿಂದ   ಒಂದು ಸಣ್ಣ ಸರುಕು ವಾಹನ ಬರುತ್ತಿದ್ದು,  ನಮ್ಮ ಪೊಲೀಸ್ ಜೀಪ್ ನ್ನು ದೂರದಲ್ಲಿ ನೋಡಿ ಅದರ ಚಾಲಕ ರಸ್ತೆಯಲ್ಲಿ ವಾಹನ ನಿಲ್ಲಿಸಿ ಓಡಿ ಹೋದನು, ನಾವು ಸ್ಥಳಕ್ಕೆ ಹೋಗಿ ನೋಡಲಾಗಿ   ಮೊದಲು ವಾಹನದ ನಂಬರ್  ನೋಡಲಾಗಿ KA-44 623 ನೇ TATA ACE ವಾಹನವಾಗಿದ್ದು, ಅದರ ಹಿಂಭಾಗದ ಬಾಡಿಯಲ್ಲಿ  ಇಕ್ಕಟ್ಟಾಗಿ ಸುಮಾರು ಕರುಗಳನ್ನು ತುಂಬಿರುವುದು ಕಂಡು ಬಂದ ಮೇರೆಗೆ ಈ ವಾಹನದಲ್ಲಿ ಕರುಗಳನ್ನು ಸಾಗಾಣಿಕೆ ಮಾಡಲು ಯಾವುದಾದರು ಪರವಾಹನಿಗೆ ವಾಹನದಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗಿ ವಾಹನದಲ್ಲಿ ಯಾವುದೆ ಪರವಾಹನಿಗೆ ಕಂಡು ಬಂದಿರುವುದಿಲ್ಲ, ನಂತರ  ಲಘು ಸರುಕು ವಾಹನದಲ್ಲಿ ತುಂಬಿದ್ದ  ಪ್ರಾಣಿಗಳನ್ನು ನೋಡಲಾಗಿ ಒಟ್ಟು ಐದು ಕರುಗಳು ಇದ್ದು 1) ಎರಡು ಕಂದು ಬಣ್ಣದ ಸೀಮೆ ಹಸುವಿನ ಗಂಡು ಕರುಗಳು 2)  ಒಂದು ಕಪ್ಪು ಬಣ್ಣದ ಸೀಮೆ ಹಸುವಿನ  ಹೆಣ್ಣು ಕರು 3) ಒಂದು ಕಪ್ಪು ಬಣ್ಣದ ನಾಟಿ ಹಸುವಿನ  ಹೆಣ್ಣುಕರು 4) ಒಂದು ಕಪ್ಪು  ಮತ್ತು ಬಿಳಿ ಬಣ್ಣ ಮಿಶ್ರಿತ  ನಾಟಿ ಹಸುವಿನ ಗಂಡು ಕರು  ಕಂಡು ಬಂದಿರುತ್ತೆ. ಇವುಗಳನ್ನು ವಾಹನ  ಸಮೇತ ಮುಂದಿನ ಕ್ರಮಕ್ಕಾಗಿ ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಬಳಿ ಬೆಳಿಗ್ಗೆ 10-45 ಗಂಟೆಗೆ  ತಂದು ಹಾಜರುಪಡಿಸಿ KA-44 623 ನೇ TATA ACE ವಾಹನದಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಯಾವುದೇ ಪರವಾನಗಿ ಇಲ್ಲದೇ, ಜಾನುವಾರುಗಳಿಗೆ ಹಿಂಸೆ ಉಂಟಾಗುವ ರೀತಿಯಲ್ಲಿ ಕ್ರೂರವಾಗಿ ತುಂಬಿಕೊಂಡು, ಅವುಗಳಿಗೆ ಸರಿಯಾಗಿ ನೀರು, ಆಹಾರ ನೀಡದೆ ಸಾಗಾಣಿಕೆ ಮಾಡಲು ಪ್ರಯತ್ನಿಸಿ ಪ್ರಾಣಿ ಹಿಂಸೆ ನೀಡಿರುವುದು ಕಂಡು ಬಂದ ಮೇರೆಗೆ ಓಡಿಹೋಗಿರುವ ಆರೋಪಿಯ ವಿರುದ್ಧ ಮುಂದಿನ ಕ್ರಮ ಜರುಗಿಸಲು ನೀಡಿರುವ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 163/2019 ಕಲಂ:279,304(A) IPC, R/W 134(A),(B) 187.IMV

ಫಿರ್ಯಾದಿ ಯಶೋದಮ್ಮ ಕೋಂ ಮಲ್ಲೇಶಯ್ಯ 35 ವರ್ಷ ವಕ್ಕಲಿಗರು ಜಿರಾಯ್ತಿ, ಜಡಗೊಂಡನಹಳ್ಳಿ ಗ್ರಾಮ  ಕಸಬಾ(ಹೋ) ಮಧುಗಿರಿ ತಾ|| 9945603626 ಮೊ ನಂ: ರವರು ದಿನಾಂಕ:10-09-2019 ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ;02.09.2019 ಸಂಜೆ;07.00 ಗಂಟೆಯ ಸಮಯದಲ್ಲಿ  ಫಿರ್ಯದಿ ತನ್ನ  ಮನೆಯ ಮುಂಭಾಗ ಇರುವಾಗ್ಗೆ ಇದೇ ವೇಳೆಗೆ ಮಧುಗಿರಿ – ಪಾವಗಡ ಮುಖ್ಯ ರಸ್ತೆಯಲ್ಲಿ ಪಾವಗಡ ಕಡೆಯಿಂದ ಬರುತ್ತಿದ್ದ ಒಂದು ಕಾರಿನ ಚಾಲಕ ಕಾರನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಇದೇ ವೇಳೆಗೆ ನಮ್ಮ ಊರಿನ ರಾಜಣ್ಣ ರವರ ಮನೆಯ ಮುಂದೆ ಮಧುಗಿರಿ – ಪಾವಗಡ ಮುಖ್ಯ ರಸ್ತೆಯ ಎಡಭಾಗದಲ್ಲಿ ನಿಂತಿದ್ದ ಫಿರ್ಯದಿಯ ಗಂಡನಾದ ಮಲ್ಲೇಶಯ್ಯ ಬಿನ್ ಲೇ|| ಪುಟ್ಟಕಾಮಣ್ಣ 43 ವರ್ಷ ವಕ್ಕಲಿಗರು ಜಿರಾಯ್ತಿ ರವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಕಾರನ್ನು ನಿಲ್ಲಿಸದೇ ಮಧುಗಿರಿ ಕಡೆಗೆ ಹೊರಟು ಹೋದನು,ಈ ಅಪಘಾತದಿಂದ ತನ್ನ  ಗಂಡನ ಎರಡೂ ಕಾಲುಗಳ ಮೂಳೆ ಮುರಿದು,ತಲೆಗೆ ಗಾಯಗಳಾದವು ನಂತರ ನಮ್ಮ ಊರಿನ ಶ್ರೀರಂಗಪ್ಪ ಬಿನ್ ಅಶ್ವತ್ತಪ್ಪ ರವರು ಹಾಗು ಇತರೆಯರು ಫಿರ್ಯದಿಯ ಗಂಡನನ್ನು ಉಪಚರಿಸಿ ಯಾವುದೋ ಒಂದು ಅಟೋದಲ್ಲಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆ ಸಲುವಾಗಿ ಬೆಂಗಳೂರಿನ ಪಿಣ್ಯ ಇ,ಎಸ್,ಐ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ರಾಜಾಜೀನಗರದ ಇ,ಎಸ್,ಐ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲುಮಾಡಿಸಿ ಅಪರೇಷನ್ ಮಾಡಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ್ಗೆ ಫಿರ್ಯದಿಯ ಗಂಡನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;10.09.2019 ರಂದು ರಾತ್ರಿ;01.04 ಗಂಟೆಯ ಸಮಯದಲ್ಲಿ ಮೃತರಾದರು, ನಂತರ ಇ,ಎಸ್,ಐ ಅಸ್ಪತ್ರೆಯಿಂದ ತನ್ನ  ಗಂಡನ ಮೃತದೇಹವನ್ನು ನಮ್ಮ ಊರಾದ ಜಡಗೊಂಡನಹಳ್ಳಿಗೆ ತಂದಿರುತ್ತೇವೆ.ಅದ್ದರಿಂದ ಈ ಅಪಘಾತ ಮಾಡಿದ ಕಾರು ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 52 guests online
Content View Hits : 562755
Hackguard Security Enabled