lowborn ಪತ್ರಿಕಾ ಪ್ರಕಟಣೆ ದಿ:10-09-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:10-09-19

ಪತ್ರಿಕಾ ಪ್ರಕಟಣೆ. ದಿನಾಂಕ:10-09-2019.

ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03 ಜನರ ಬಂಧನ,

ಸುಮಾರು 01 ಲಕ್ಷ ರೂ ಮೌಲ್ಯದ ಗಾಂಜಾ ಸೊಪ್ಪು ವಶ.

 

ಆಂಧ್ರಪ್ರದೇಶ ರಾಜ್ಯದಿಂದ ಅಕ್ರಮವಾಗಿ ಗಾಂಜಾಸೊಪ್ಪನ್ನು ತರಿಸಿ ತುಮಕೂರು ನಗರದಲ್ಲಿ  ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರುಗಳಿಗೆ ಮಾರಾಟ ಮಾಡಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದವರ ಬಗ್ಗೆ ಕ್ಯಾತ್ಸಂದ್ರ ಪೊಲೀಸರು ಮಾಹಿತಿ ಸಂಗ್ರಹಿಸಿ, ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನ ಸಂಜಯ ನಗರದ ಟ್ರಕ್ ಟರ್ಮಿನಲ್ ನ ಪಾರ್ಕಿನ ಬಳಿ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 03 ಜನ ಆಸಾಮಿಗಳನ್ನು ಮಾಲು ಸಮೇತವಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ:09-09-2019 ರಂದು ಮಧ್ಯಾನ: 01-15 ಗಂಟೆಯಲ್ಲಿ ದಸ್ತಗಿರಿ ಮಾಡಿದ್ದು, ಈ ಸಂಬಂಧವಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಮೊ.ನಂ. 165/2019 ಕಲಂ. 20(ಬಿ) ಎನ್.ಡಿ.ಪಿ.ಎಸ್. ಆಕ್ಟ್ ರೀತ್ಯಾ ಪ್ರಕರಣವು ದಾಖಲಾಗಿರುತ್ತೆ. ಸದರಿ 03 ಜನರಿಂದ ಒಟ್ಟು: 04 ಕೆ.ಜಿ. 265 ಗ್ರಾಂ ನಷ್ಟು ಗಾಂಜಾ ಸೊಪ್ಪನ್ನು ಮತ್ತು ಒಂದು ಮೋಟಾರ್ ಬೈಕನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳ ಹೆಸರು ವಿಳಾಸ.

A-1 ಸುಮನ್ ಸಿ. ಬಿನ್ ಲೇಟ್: ಚಿನ್ನಸ್ವಾಮಿ, 35 ವರ್ಷ, , ಕಾರು ಡ್ರೈವರ್ ಕೆಲಸ, ಸ್ವಂತ ಊರು: ನಂ: 38, 1ನೇ ಬೀದಿ, ಭಕ್ತವತ್ಸಲಂ ಕಾಲೋನಿ, ವ್ಯಾಸರ್ ಬಾಡಿ, ಪೆರಂಬೂರು ರೈಲ್ವೆ ನಿಲ್ದಾಣದ ಹತ್ತಿರ, ಚೆನ್ನೈ-39. ತಮಿಳುನಾಡು ರಾಜ್ಯ, ಹಾಲಿವಾಸ: ತಡಗು, ನಗರಿ ಮಂಡಲ್, ಚಿತ್ತೂರು ಜಿಲ್ಲೆ. .ಪಿ.ರಾಜ್ಯ. ಹಾಲಿವಾಸ: ಎಳ್ಳಾರೆ ಬಂಡೆ, ಕ್ಯಾತ್ಸಂದ್ರ, ತುಮಕೂರು ಟೌನ್.

A-2 ರಿಜ್ವಾನ್ @ ರಿಜ್ವಾನ್ ಖಾನ್ ಬಿನ್ ನೂರ್ ಖಾನ್, 33 ವರ್ಷ, , ಹಮಾಲಿ ಕೆಲಸ, ಗೂಡ್ಸ್ ಶೆಡ್ ಬಳಿ, ಕ್ಯಾತ್ಸಂದ್ರ, ತುಮಕೂರು ಟೌನ್. ಹಾಲಿ ವಾಸ: ಚೋಳಂಬಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು.

A-3 ಚಾಂದ್ ಪಾಷ @ ಮೊಹಮದ್ ಚಾಂದ್ ಪಾಷ ಬಿನ್ ಗಫೂರ್ ಸಾಬ್, 44 ವರ್ಷ, , ಟೀ ಅಂಗಡಿಯಲ್ಲಿ ಕೆಲಸ, ವಾಸ: ಡಿ.ಎಸ್.ಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು.

ಈ ಪ್ರಕರಣದಲ್ಲಿ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ಕೆ. ವಂಶಿಕೃಷ್ಣ, ಐ.ಪಿ.ಎಸ್. ರವರ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಉದೇಶ್ ಟಿ.ಜೆ. ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಹೆಚ್.ಜೆ.ತಿಪ್ಪೇಸ್ವಾಮಿ, ಕೆ.ಎಸ್.ಪಿ.ಎಸ್. ರವರ ಹಾಗೂ ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀ ಎಸ್. ಶ್ರೀಧರ್ ರವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಮಪ್ರಸಾದ ಮತ್ತು ಠಾಣೆಯ ಸಿಬ್ಬಂದಿಯವರುಗಳಾದ ಎ.ಎಸ್.ಐ. ಸಿದ್ದಪ್ಪ ಆರ್.ಎಸ್. ಎ.ಎಸ್.ಐ. ಗುರುಮಲ್ಲಾರಾಧ್ಯ. ಹೆಚ್.ಸಿ: ಮೋಹನ್ ಕುಮಾರ್, ಹೆಚ್.ಸಿ: ಲೋಕೇಶ್ ಬಾಬು, ಹೆಚ್.ಸಿ:ಮಂಜುನಾಥ್, ಪಿಸಿ ಗಳಾದ  ಕಿರಣ್,  ಮಂಜುನಾಥ್, ರಮೇಶ್, ಸೈಯದ್ ರಿಫತ್ ಅಲಿ, ಮನು ಹಾಗೂ ಚಾಲಕರುಗಳಾದ ದಿಲೀಪ್ ಮತ್ತು ರುದ್ರನಾಯ್ಕರವರುಗಳು ಪತ್ತೆಗೆ ಶ್ರಮಿಸಿರುತ್ತಾರೆ.

 

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ. ಸಾಹೇಬರವರು ಅಭಿನಂದಿಸಿರುತ್ತಾರೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 399778