lowborn ಅಪರಾಧ ಘಟನೆಗಳು 29-09-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ. 01-10-2019. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ... >> ಪ್ರತ್ರಿಕಾ ಪ್ರಕಟಣೆ ದಿನಾಂಕ 27-09-2019   ಕಳ್ಳತನ ಆರೋಪಿಗಳ ಬಂಧನ   ಶ್ರೀ ಅರುಣ್‍ಕುಮಾರ್... >>   ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 29-09-19

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 20/2019 ಕಲಂ: 174 CRPC

ಪಿರ್ಯಾದಿ ಕಾವ್ಯ ಕೋಂ ಶ್ರೀನಿವಾಸ್, 27ವರ್ಷ, ವಕ್ಕಲಿಗರು, ಗೃಹಿಣೆ, ಬಿ.ಸಿ ಪಾಳ್ಯ, ಕಸಬಾ ಹೋಬಳಿ,ಮಧುಗಿರಿ ತಾ|| ರವರು ಬೆಳಿಗ್ಗೆ 09-30 ಗಂಟೆಗೆ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ತನ್ನ ತಾಯಿಯ ತಮ್ಮ ನಾದ ಶ್ರೀನಿವಾಸ ರವರನ್ನು ಈಗ್ಗೆ 7 ವರ್ಷಗಳ ಹಿಂದೆ ಸಂಪ್ರದಾಯಕವಾಗಿ ಮಧುವೆಯಾಗಿದ್ದು, ಇವರಿಗೆ 6 ವರ್ಷದ ಲಕ್ಷತ್ ಎಂಬ  ಗಂಡು ಮಗುವಿರುತ್ತೆ, ಪಿರ್ಯಾದಿಯು ತನ್ನ ಗಂಡ  ಅತ್ತೆ ರವರೊಂದಿಗೆ ಅನ್ಯೂನ್ಯವಾಗಿ ಸಂಸಾರಮಾಡಿಕೊಂಡಿದ್ದು, ತನ್ನ ಗಂಡನಿಗೆ ಈಗ್ಗೆ ಸುಮಾರು ಒಂದು ವರ್ಷದಿಂಧ ಮೂರ್ಛೆ ರೋಗ ಬರುತ್ತಿದ್ದು, ಈ ಖಾಯಿಲೆಗೆ  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಆದರೂ ಸಹ ಮೂರ್ಛೆ ರೋಗ ಬಂದಾಗ ಬಿದ್ದು ಹೊದ್ದಾಡುತ್ತಿದ್ದರು ದಿನಾಂಕ 28-09-2019 ರಂದು ಊಟ ಮಾಡಿ ಮಲಗಿದ್ದು, ರಾತ್ರಿ ಸುಮಾರು 1-30 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಮಲಗಿದ್ದವರು ಎದ್ದು ನೀರು ಕೊಡು ಎಂದು ಕೇಳಿದರು ಆಗ  ಪಿರ್ಯಾದಿಯು ನೀರನ್ನು ಕೊಟ್ಟರು ನೀರು ಕುಡಿದು ಸ್ವಲ್ಪ ಸಮಯದ ನಂತರ ವಾಂತಿ ಮಾಡಿಕೊಂಡಿಕೊಂಡರು ತಾನು ಗಾಬರಿಯಾಗಿ ತನ್ನ ಭಾವನಾದ ಬಿ.ಸಿ ನಾರಾಯಣಪ್ಪರವರನ್ನು ಕೂಗಿ ಕರೆದರು ತಕ್ಷಣ ತನ್ನ ಭಾವ ಅಕ್ಕ ಎಲ್ಲರೂ ಸೇರಿ ಶ್ರೀನಿವಾಸ್ ರವರನ್ನು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು ನಂತರ  ವೈದ್ಯರಿಂಧ  ಪರಿಕ್ಷಿಸಿದಾಗ ಆಸ್ಪತ್ರೆಗೆ ಕರೆದುಕೊಂಡು ಬರುವ ಮುನ್ನವೇ ಮೃತ ಪಟ್ಟರುತ್ತಾರೆ ಎಂದು ತಿಳಿಸಿದರು, ಪಿರ್ಯಾದಿಯ ಗಂಡನಾದ ಶ್ರೀನಿವಾಸ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಮೃತ ದೇಹವನ್ನು ಮಧುಗಿರಿ ಸರ್ಕಾರಿ ಅಸ್ಪತ್ರೆ ಶವಗಾರದಲ್ಲಿ ಇಟ್ಟಿರುತ್ತೆ ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಚೇಳೂರು  ಪೊಲೀಸ್ ಠಾಣಾ  ಮೊ.ನಂ: 119/2019  ಕಲಂ;323.324.355 504 ಐ.ಪಿ.ಸಿ

ದಿನಾಂಕ : 28/09/2019 ರಂದು ಸಂಜೆ  5-00 ಗಂಟೆ ಸಮಯದಲ್ಲಿ ಪಿರ್ಯಾದಿ ಹಿತವಾಣಿ ಕೋಂ ಸೋಮಶೇಖರ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ ಮೇಲೆ ಇಲ್ಲಿಗೆ ಸುಮಾರು 6 ತಿಂಗಳಿಂದಲೂ ನೀರು ಸರಬರಾಜು ಸರಿಯಾಗಿ ಮಾಡಿಸುವುದಿಲ್ಲ ಹಾಗೂ ವಿದ್ಯುತ್  ದೀಪಗಳನ್ನು ಹಾಕಿಸಿರುವುದಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಮುಂದೆ ಬಂದು ನೀನು ಯಾವ ಸೀಮೆ ಮೆಂಬರ್ ಯೋಗ್ಯತೆ ಇಲ್ಲದವಳು, ಅಂತವಳು – ಇಂತವಳು  ಎಂದು ಪ್ರತಿ ದಿನ ನನ್ನನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಶ್ರೀಮತಿ ಸೌಮ್ಯ ಕೋಂ ದಯಾನಂದ ಟಿ.ಜಿ.  ತೆವಡೇಹಳ್ಳಿ  ( ಪ್ರಸ್ತುತ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಬಡಾವಣೆ, ನಿಟ್ಟೂರು ರಸ್ತೆಯಲ್ಲಿ ವಾಸ ) ರವರು  ನಮ್ಮ ನೆಮ್ಮದಿ ಆಳು ಮಾಡುತ್ತಿದ್ದರು. ಆದರೆ ದಿನಾಂಕ : 28/09/2019 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ ಅವರ ಮನೆಯ ಹತ್ತಿರ ಇರುವ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಕುರಿತು ಪರಿಶೀಲಿಸಲು ಹೋದಾಗ, ನನ್ನನ್ನು ಮುಂಡೆ, ರಂಡೆ ಎಂದು ಸಾರ್ವಜನಿಕವಾಗಿ ಹೀನಾ ಮಾನವಾಗಿ ಬೈಯ್ಯುತ್ತಾ, ನನ್ನ ಮೇಲೆ ದೈಹಿಕವಾಗಿ ಕುತ್ತಿಗೆಯ ಭಾಗದಲ್ಲಿ ಉಗುರಿನಿಂದ ಕಿತ್ತು ರಕ್ತಗಾಯ ಬರಿಸಿರುತ್ತಾರೆ ಹಾಗೂ ಕೈಗಳಿಂದ ಹಲ್ಲೆ ಮಾಡಿರುತ್ತಾರೆ. ಹಾಗೂ ನನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿ ಚಪ್ಪಲಿಯಿಂದ ಎಸೆದು ಹೊಡೆದು,  ರಕ್ತ ಬರುವಂತೆ ಹೊಡೆದು ಎಳೆದಾಡಿ ಹಲ್ಲೆ ಮಾಡಿರುತ್ತಾರೆ. ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ನನ್ನ ಮೈಕೈಗೆ ಹೊಡೆದಿರುತ್ತಾರೆ. ಇಷ್ಟೇ ಅಲ್ಲದೇ ನಮ್ಮ ಮನೆಯ ಮುಂದೆ ಬಂದು ಮತ್ತೊಮ್ಮೆ ಜಗಳವಾಡಿ ಬೈಯ್ದು ರಂಪಾಟ ಮಾಡಿ, ಸುಮಾರು ಎರಡು ಗಂಟೆಗಳಿಗೂ ಹೆಚ್ಚು  ಸಮಯ ಜಗಳವಾಡಿ ಮರ್ಯಾದೆ ಕಳೆದು ಹೋಗಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸಬೇಕೆಂದು ಕೋರಿ ನೀಡಿದ  ಪಿರ್ಯಾದು ಅಂಶವಾಗಿರುತ್ತೆ.

 

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ.178 /2019 ಕಲಂ: 279,304 (ಎ) ಐ.ಪಿ.ಸಿ ರೆ/ವಿ 134(ಎ&ಬಿ,187 ಐ.ಎಂ.ವಿ ಆಕ್ಟ್

ದಿನಾಂಕ: 28/09/2019 ರಂದು  ಬೆಳಿಗ್ಗೆ 9.30 ಗಂಟೆಗೆ  ಪಿರ್ಯಾದಿ ಎನ್,ಆರ್,ಸಂತೋಷ್ ಬಿನ್ ಲೇ||ರಾಮಾಂಜಿನಯ್ಯ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ;28/09/2019 ರಂದು ಬೆಳಗ್ಗೆ 6-45 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ   ಅಮ್ಮ ಮಂಗಳಮ್ಮ ( ಸುಮಾರು 65 ವರ್ಷ ) ತುಮಕೂರಿಗೆ ಹೋಗಲು ತುಮಕೂರು-ಬೆಂಗಳೂರು ರಸ್ತೆಯ ಪಕ್ಕ ರಸ್ತೆ ದಾಟಲು ಹೋಗುತ್ತಿರುವಾಗ್ಗೆ ನಾನು ಮುಂದೆ  ರಸ್ತೆದಾಟಿ ಮುಂದೆ ಹೋಗಿದ್ದು ನನ್ನ ಹಿಂದೆ ಬರುತ್ತಿದ್ದ ನಮ್ಮ   ಅಮ್ಮನಿಗೆ  ತುಮಕೂರು ಕಡೆಯಿಂದ  ಒಂದು ಲಾರಿ ಅದರ ಚಾಲಕ ಅತಿವೇಗ ಮತ್ತು ಆಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ನಮ್ಮ ತಾಯಿಗೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದು, ನಮ್ಮ ತಾಯಿಯು ರಸ್ತೆ  ಡಿವೈಡರ್ ಪಕ್ಕಕ್ಕೆ ಬಿದ್ದು ತಲೆ , ದೇಹ ಚಿದ್ರ ಚಿದ್ರ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತು, ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಬೆಂಗಳೂರು ಕಡೆಗೆ ಹೊರಟು ಹೋದನು, ನನಗೆ ಗಾಬರಿಯಲ್ಲಿ ಲಾರಿ ನಂಬರ್ ನೋಡಲು ಸಾದ್ಯವಾಗಲಿಲ್ಲ,  ನಮ್ಮ ತಾಯಿಗೆ ಡಿಕ್ಕಿಹೊಡೆಸಿ ನಮ್ಮ ತಾಯಿಯ ಸಾವಿಗೆ  ಕಾರಣರಾದ ಯಾವುದೋ ಲಾರಿಯನ್ನು ಮತ್ತು ಚಾಲಕನನ್ನು ಪತ್ತೆಮಾಡಿ ಈತನ  ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 46 guests online
Content View Hits : 417819
Hackguard Security Enabled