lowborn ಅಪರಾಧ ಘಟನೆಗಳು 02-10-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 02-10-19

ಜಯನಗರ ಪೊಲೀಸ್ ಠಾಣಾ  ಯು.ಡಿ.ಆರ್ ನಂ. 38/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ: 01/10/2019 ರಂದು ಮದ್ಯಾಹ್ನ 2-30 ಗಂಟೆಗೆ ತುಮಕೂರು ಟೌನ್, ಜಯನಗರ ಪೊಲೀಸ್ ಠಾಣಾ ಹೆಚ್.ಸಿ 12 ಅಂಜಿನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ: 01-10-2019 ರಂದು ಮದ್ಯಾಹ್ನ  ನಾನು ಠಾಣಾ ಸರಹದ್ದು, ಮರಳೂರು ದಿಣ್ಣೆ ಕಡೆ ಗಸ್ತಿನಲ್ಲಿದ್ದಾಗ, ಮರಳೂರು ಬಡಾವಣೆಯ ವಾಸಿಗಳು ನನಗೆ ಪೋನ್ ಮಾಡಿ, ಯಾರೋ ಒಬ್ಬ ಅಪರಿಚಿತ ಹೆಂಗಸು ಮರಳೂರಿನಲ್ಲಿರುವ ಶ್ರೀರಾಮ ದೇವಸ್ಥಾನದ ಮುಂಭಾಗ, ಮಲಗಿದ್ದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂತಾ ವಿಚಾರ ತಿಳಿಸಿದ್ದು, ನಾನು ಮದ್ಯಾಹ್ನ ಸುಮಾರು 1-30 ಗಂಟೆ ಸಮಯಕ್ಕೆ ಮರಳೂರು ಶ್ರೀರಾಮ ದೇವಸ್ಥಾನದ ಬಳಿಗೆ ಹೋದಾಗ ದೇವಸ್ಥಾನದ ಮುಂಭಾಗ ಜನರು ಗುಂಪು ಸೇರಿದ್ದರು.  ದೇವಸ್ಥಾನದ ಮುಂಭಾಗ ನೆಲದ ಮೇಲೆ ಯಾರೋ ಒಬ್ಬ ಸುಮಾರು 45 ವರ್ಷ ವಯಸ್ಸಿನ ಹೆಂಗಸು ಬಲಮಗ್ಗುಲಾಗಿ ಮಲಗಿರುವ ಸ್ಥಿತಿಯಲ್ಲಿ ಮೃತಪಟ್ಟಿರುತ್ತಾರೆ.   ಸ್ಥಳೀಯ ನಿವಾಸಿಗಳನ್ನು ವಿಚಾರ ಮಾಡಲಾಗಿ, ಸದರಿ ಹೆಂಗಸು ಈಗ್ಗೆ ಸುಮಾರು 3 ದಿನಗಳಿಂದ ಇದೇ ದೇವಸ್ಥಾನದ ಬಳಿ ಮಲಗುತ್ತಿದ್ದಳೆಂತಾ ಈಕೆಗೆ ಇದ್ದ ಯಾವುದೋ ಖಾಯಿಲೆಯಿಂದ ನರಳುತ್ತಿದ್ದಳೆಂತಾ ಈ ದಿನ ಯಾವಾಗಲೋ ದೇವಸ್ಥಾನದ ಮುಂಭಾಗದಲ್ಲಿ ಮಲಗಿದ್ದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂತಾ ವಿಚಾರ ತಿಳಿದು ಬಂದಿರುತ್ತೆ.  ಈಕೆಯ ಬಳಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಎರಡು ಚೀಟಿಗಳು ದೊರೆತಿದ್ದು, ಒಂದು ಚೀಟಿಯಲ್ಲಿ ಲಕ್ಷ್ಮಮ್ಮ ಕೋಂ. ಮಾರಣ್ಣ, 35 ವರ್ಷ, ಕೊತ್ತಗೆರೆ, ಕುಣಿಗಲ್, ತುಮಕೂರು, ಕರ್ನಾಟಕ ಎಂತಾ ನಮೂದಿದ್ದು, ಮತ್ತೊಂದರಲ್ಲಿ ಲಕ್ಷ್ಮಮ್ಮ, ಕಡಬಾ ಹೋಬಳಿ, ಗುಬ್ಬಿ ತಾಲ್ಲೂಕು ತುಮಕೂರು, ಕರ್ನಾಟಕ ಎಂತಾ ನಮೂದಾಗಿರುತ್ತೆ. ಮೃತಳು ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ.  ಮೃತಳ ವಾರಸುದಾರರು ಯಾರೂ ಸಹಾ ಪತ್ತೆಯಾಗಿರುವುದಿಲ್ಲ.  ಮೃತಳ ಮೈ ಮೇಲೆ ನೀಲಿ ಬಣ್ಣದ ಸೀರೆ, ಕೆಂಪು ಬಣ್ಣದ ಸ್ಪೆಟರ್‌‌, ಹಾಗೂ ಮಾಸಲು ಹಳದಿ ಬಣ್ಣದ ಒಳಲಂಗ ಧರಿಸಿರುತ್ತೆ. ಮುಖ ಹಾಗೂ ಕೈ ಕಾಲುಗಳು ಊತ ಬಂದಿರುತ್ತೆ.  ಮೃತಳ ಬಲ ಮೊಣಕೈ ಮೇಲೆ ಗೌರಂಗ ಎಂತಾ ಕನ್ನಡದಲ್ಲಿ ಹಚ್ಚೆ ಹಾಕಿಸಿರುತ್ತೆ. ಎಡಮೊಣಕೈಯ್ಯಲ್ಲಿ ಹೂವಿನ ಹಚ್ಚೆ ಹಾಕಿಸಿರುತ್ತೆ. ಆದ್ದರಿಂದ ತಾವು ಮೃತಳ ವಾರಸುದಾರರನ್ನು ಪತ್ತೆ ಮಾಡಿ, ಮುಂದಿನ ಕ್ರಮ ಜರುಗಿಸಬೇಕೆಂತಾ ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 212/2019 ಕಲಂ 279, 337, 304(ಎ) ಐ.ಪಿ.ಸಿ.

ದಿನಾಂಕ:- 01/09/2019 ರಂದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ ಗಾಯಳುವಾದ  ಶ್ರೀ ಲಕ್ಷ್ಮೀ ಬಿನ್ ಸತ್ಯನಾರಯಣ, ಸುಮಾರು 24 ವರ್ಷ, ಸಾಪ್ಟ್ ವೇರ್ ಇಂಜಿನಿಯರ್ ಕೆಲಸ, ಬ್ರಾಹ್ಮಣ ಜನಾಂಗ, ಸ್ವಂತ ಊರು ಕಟಾರಿಪಾಳ್ಯ ಕೋಲಾರ ಜಿಲ್ಲೆ, ಹಾಳಿ ವಾಸ ವಿನಾಯಕ ಸರ್ಕಲ್, ಮಲ್ಲೇಶ್ವರಂ, ಬೆಂಗಳೂರು. ರವರ ಹೇಳಿಕೆಯ ಅಂಶವೇನೆಂದರೆ ನಾನು ಬೆಂಗಳೂರಿನ ನ್ಯೂಬಲ್ ಟೆಕ್ನೋಲಜಿ ಕಂಪನಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ನಮ್ಮ ಜನಾಂಗದ ನಮ್ಮ ಸ್ನೇಹಿತ ಅಖಿಲ್ ಪುರಾನಿಕ್  ಎಂಬುವವರಿಗೆ ಮದುವೆ ಮಾಡಲು ಹುಬ್ಬಳಿಯಲ್ಲಿ ಹೆಣ್ಣು ನೋಡಿದ್ದರು ಹೆಣ್ಣನ್ನು ಮತ್ತು ಅವರ ತಂದೆ ತಾಯಿಯನ್ನು ನೋಡಿಕೊಂಡು ಬರಲು ಅಖಿಲ್ ಪುರಾನಿಕ್ ರವರು ನನ್ನನ್ನು ಮತ್ತು ಸ್ನೇಹಿತೆ ಮಾನಸ ಹಾಗೂ ಅಖಿಲ್ ರವರ ಸ್ನೇಹಿತನಾದ ಹಿತೇಶ್ ರವರನ್ನು ದಿನಾಂಕ:- 29/09/2019 ರಂದು ಅಖಿಲ್ ಪುರಾನಿಕ್ ರವರು ಅವರ ಸ್ನೇಹಿತನ ಬಾಬ್ತು KA-04-MS-2816 ನೇ ನಂಬರಿನ ಕಾರಿನಲ್ಲಿ ಹುಬ್ಬಳಿಗೆ ಕರೆದುಕೊಂಡು ಹೋಗಿದ್ದನ್ನು ಅಲ್ಲಿ ಒಂದು ದಿನ ಇದ್ದು ನಿನ್ನೆ ದಿನ ದಿನಾಂಕ:30/09/2019 ರಂದು ಸಂಜೆ ಸುಮಾರು 06:00 ಗಂಟೆಯ ಸಮಯದಲ್ಲಿ ನಾವೇಲ್ಲರು ವಾಪಸ್ ಬೆಂಗಳೂರಿಗೆ ಬರಲು ಹೊರಟು ಅದೆ ಕಾರಿನಲ್ಲಿ ಬರುವಾಗ ಅಖಿಲ್ ಪುರಾನಿಕ್ ರವರು ಕಾರನ್ನು ಚಾಲನೆ ಮಾಡಿಕೊಂಡು ರಾತ್ರಿ ಚಿರ್ತದುರ್ಗಕ್ಕೆ ಬಂದು ಅಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆದು ನಂತರ ಬೆಂಗಳೂರಿಗೆ ಶಿರಾ ಮಾರ್ಗವಾಗಿ ಎನ್ ಎಚ್ 48 ರಸ್ತೆಯಲ್ಲಿ 4 ಜನರು ಬರುವಾಗ ಕಾರನ್ನು ಚಾಲಕ ಅಖಿಲ್ ಪುರಾನಿಕ್ ರವರು ಚಾಲನೆ ಮಾಡಿಕೊಂಡು ಊರುಕೆರೆ ಗ್ರಾಮದ ಬಸ್ ನಿಲ್ದಾಣದ ಸಮೀಪ ಹೋಗುತ್ತಿರುವಾಗ ತನ್ನ ಮುಂದೆ ಹೋಗುತ್ತಿದ್ದ ಲಾರಿಯ ಹಿಂಭಾಗಕ್ಕೆ ನಿರ್ಲಕ್ಷತೆಯಿಂ ಓಡಿಸಿಕೊಂಡು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಕಂಗೊಂಡು ಕಾರಿನಲ್ಲಿದ್ದ ನನಗೆ ಬಲಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಆಯಿತು, ಎಡಭಾಗ ತಲೆಯ ಹಿಂಭಾಗ ಗಾಯ ಆಗಿರುತ್ತೆ, ಬಲಕೆನ್ನೆಗೆ ತರಚಿದ ಗಾಯ ಆಗಿರುತ್ತೆ, ಸೊಂಟಕ್ಕೆ ಮೂಗೇಟ್ ಆಗಿರುತ್ತೆ, ನಂತರ ಮಾನಸರವರಿಗೆ ಬಲಗೈ ತರಚಿತ್ತು ಕೆಳತುಟಿಗೆ ಹಾಗೂ ಸೊಂಟಕ್ಕೆ ಪಟ್ಟು ಬಿದ್ದಿತ್ತು ನಾನು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದೇನು ನನ್ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಹಿತೇಶ ರವರಿಗೆ ತಲೆ ಮುಖ ಹಾಗೂ ಇತರೆ ಕಡೆ ತೀವ್ರ ಪೆಟ್ಟು ಬಿದ್ದು ರಕ್ತಗಾಯ ಆಗಿತ್ತು ಚಾಲಕ   ಅಖಿಲ್ ಪುರಾನಿಕ್ ರವರಿಗೆ ತುಟಿಗೆ ಮೂಗೂ ಬಾಯಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿ ಎರಡು ಹುಲ್ಲು ಮುರಿದಿತ್ತೆ, ನಂತರ ದಾರಿ ಹೋಕರು ನಮ್ಮನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಂಬೂಲೆನ್ಸ್ ನಲ್ಲಿ ಕಳುಹಿಸಿ ಕೊಟ್ಟರು ಈ ಅಪಘಾತವು ದಿನಾಂಕ:01/10/2019 ರಂದು ಬೆಳಿಗ್ಗೆ ಸುಮಾರು 04:00 ಗಂಟೆಯ ಸಮಯದಲ್ಲಿ ನಡೆದಿರುತ್ತೆ ಗಾಯಗೊಂಡಿದ್ದ ನಾವೇಲ್ಲ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ್ಗೆ ಬೆಳ್ಳಿಗ್ಗೆ ಸುಮಾರು 05:30 ಗಂಟೆಯಲ್ಲಿ ಹಿತೇಶ ರವರಿಗೆ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಆದ್ದರಿಂದ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಮೇಲ್ಕಂಡ ಲಾರಿಗೆ ಅಪಘಾತ ಉಂಟುಮಾಡಿರುವ ಅಖಿಲ್ ಪುರಾನಿಕ್ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯನ್ನು ಪಡೆದು  ಹೆಚ್ ಸಿ 169 ರವರು ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ತಂಧು ಹೇಳಿಕೆಯನ್ನು  ಹಾಜರುಪಡಿಸಿದ್ದು ಪ್ರಕರಣ ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 36 guests online
Content View Hits : 562702
Hackguard Security Enabled